ಕನ್ನಡದಲ್ಲಿ ಬರೆಯಲು ಇಲ್ಲಿ ಕ್ಲಿಕ್ಕಿಸಿ
ನಿಮ್ಮ ಅಭಿಪ್ರಾಯಗಳು ಕನ್ನಡದಲ್ಲಿದ್ದರೆ ಚೆನ್ನ. ಸುಲಭವಾಗಿ ಕಾಮೆಂಟ್, ಲೇಖನ ಇತ್ಯಾದಿ ಬರೆಯಲು ಈ ಟೂಲ್ ಅನ್ನು ನೀವು ಬಳಸಬಹುದು.
ಅದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.
ನಿಮ್ಮ ಅಭಿಪ್ರಾಯಗಳು ಕನ್ನಡದಲ್ಲಿದ್ದರೆ ಚೆನ್ನ. ಸುಲಭವಾಗಿ ಕಾಮೆಂಟ್, ಲೇಖನ ಇತ್ಯಾದಿ ಬರೆಯಲು ಈ ಟೂಲ್ ಅನ್ನು ನೀವು ಬಳಸಬಹುದು.
ಅದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.
ನಮ್ಮೂರಲ್ಲಿ….
ಬೆಳ್ಳಿಗೆಜ್ಜೆ ಮತ್ತು ನಾಮಧಾರಿ ಎನ್ನುವ ರಾಸುಗಳ ಮೌಲ್ಯ ಲಕ್ಷದ ಮುವತ್ತೇಳು ಸಾವಿರ!
ಲಕ್ಷಗಳ ಹಾರಾಜು ಕೇವಲ ಐಪಿಎಲ್ ಕ್ರೀಡಾಳುಗಳಿಗೆ ಎಂದು ಕುಳಿತಿದ್ದವರು ಈಗ ಬೆಚ್ಚಿಬಿದ್ದಿದ್ದಾರೆ. ಹಳ್ಳಿ ಹಸುಗಳಿಗೂ ಲಕ್ಷ ಕೂಡುವ ಕಾಲ ಇನ್ನೂ ಇದೆ ಎಂಬುದು ಸಾಬೀತಾದುದು ಅಜ್ಜಂಪುರ ಅಮೃತಮಹಲ್ ತಳಿ ಸಂವರ್ಧನಾ ಕ್ಷೇತ್ರದಿಂದ. ಹೌದು! ಮುಂಜಾನೆಯಿಂದ ಎಳೆಬಿಸಿಲ ಚುಮುಚುಮು ಚಳಿಯಲ್ಲಿ ಆರಂಭವಾದ ಹರಾಜು ಚಳಿ ಬಿಟ್ಟು ಬಿಸಿ ಮುಟ್ಟಿದ್ದು ಬೆಳ್ಳಿಗೆಜ್ಜೆ, ನಾಮದಾರಿಗಳು ಅಲ್ಲಿ ಬಂದಾಗ. ಸಾವಿರಗಳ ಲೆಕ್ಕ ಲಕ್ಷಕ್ಕೆ ಏರುತ್ತದೆ ಎಂಬುದು ಉಹಿಸಿದರೂ ಈಗಿನ ಕಾಲಕ್ಕೆ ಆಶ್ಚರ್ಯದ ಸಂಗತಿ. ಪ್ರತಿಷ್ಟೆಯ ಕಣವಾಗಿ ಅಂತಿಮವಾಗಿ ಎರಡುವರ್ಷದ ರಾಸುಗಳ ಜೋಡಿಯನ್ನು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಕಾಡಯ್ಯನಕೊಪ್ಪಲು ಗ್ರಾಮದ ಶಿವೇಗೌಡ ಎಂಬುವರು 1,37,115/- ಲಕ್ಷ ರೂ. ಗರಿಷ್ಠ ಮೊತ್ತಕ್ಕೆ ಖರೀದಿಸಿ ಸಾರ್ವಕಾಲಿಕ ದಾಖಲೆ ಬರೆದರು.
ಹಾಸನ ಜಿಲ್ಲೆ ದುದ್ದ ಹೋಬಳಿ ಕೋಡಿಹಳ್ಳಿಯ ದೊರೆಸ್ವಾಮಿ ಎಂಬುವರು ಮತ್ತೊಂದು ಜೋಡಿಯನ್ನು 1,10,000/- ರೂ. ಎರಡನೇ ಗರಿಷ್ಠ ಬೆಲೆಗೆ ಪಡೆದು ಬೀಗಿದರು. ಚಿತ್ರದುರ್ಗ ಜಿಲ್ಲೆಯ ಮುದ್ದಾಪುರದ ಬಿ. ಹನುಮಯ್ಯ ಎಂಬವರು ಮೂರನೇ ಗರಿಷ್ಠ ಬೆಲೆ 90,250/- ರೂ.ಗೆ ಜೋಡಿ ಕರು ಕೊಂಡರು. ಉಳಿದ ಜೋಡಿಗಳ ಬೆಲೆ ಲಕ್ಷ ರೂಪಾಯಿಯ ಒಳಗೆ ಇಳಿದರೂ 39,900/- ರೂ. ಕನಿಷ್ಠ ಬೆಲೆ ದಾಖಲಾಯಿತು.ಅಜ್ಜಂಪುರ, ರಾಮಗಿರಿ, ಚಿಕ್ಕಹೆಮ್ಮಿಗನೂರು, ಬಾಸೂರು, ಲಿಂಗದಹಳ್ಳಿ, ಹಬ್ಬನಘಟ್ಟ ಅಮೃತಮಹಲ್ ಕಾವಲುಗಳಲ್ಲಿ ಸ್ವಾಭಾವಿಕವಾಗಿ ಬೆಳೆಸಿದ ಕರುಗಳನ್ನು ಪ್ರತಿ ವರ್ಷದಂತೆ ಇಲ್ಲಿ ಹರಾಜಿಗಿಡಲಾಗಿತ್ತು.ಬಲಶಾಲಿ ಕರುಗಳು ಕೆನೆದು ಅಪಾಯ ಮಾಡುವುದರಿಂದ ಮೂರು ವಿಭಾಗದ ವಿಶೇಷ ಹರಾಜು ಗ್ಯಾರಲಿ ಸ್ಥಾಪಿಸಿ ಕೂಡಲಾಗಿತ್ತು. ಪಳಗಿದ ಸಿಬ್ಬಂದಿ ತಂತ್ರ ಬಳಸಿ ನಿಗದಿತ ಕರುಗಳನ್ನು ಸಾಹಸದಿಂದ ಹರಾಜು ಗ್ಯಾರಲಿಗೆ ಬಿಡುತ್ತಿದ್ದರು. ಸರ್ಕಾರಿ ಸವಾಲ್ ಒಂದು ಲಕ್ಷ ಎಂದು ಬಿಡ್ ಕೂಗುತ್ತಿದ್ದಂತೆ ಹರಾಜು ಕೂಗುವವರ ಮೇಲಾಟ ಏರುತ್ತಿತ್ತು. ಕರು ಕೊಂಡವರ ಮುಖದಲ್ಲಿ ನಗೆ ಚೆಲ್ಲಿತ್ತು.ಒಟ್ಟು ೧೨೫ ಮಂದಿ ತಲಾ ೫೦೦೦ ರೂ. ಮುಂಗಡ ಕಟ್ಟಿ ಬಿಡ್‌ನಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಹಾಸನ, ಶಿವಮೊಗ್ಗ ಜಿಲ್ಲೆಯ ಹೆಚ್ಚು ಜನರಿದ್ದರು. ತುಮಕೂರು, ದಾವಣಗೆರೆ, ಹಾವೇರಿ, ಚಿತ್ರದುರ್ಗ ಮತ್ತಿತರರ ಜಿಲ್ಲೆಗಳ ರೈತರೂ ಪಾಲ್ಗೊಂಡಿದ್ದರು. ಈ ಹರಾಜು ಪ್ರಕ್ರಿಯೆ ಮತ್ತು ಕರುಗಳನ್ನು ನೋಡಲು ಸುಮಾರು ೩ ಸಾವಿರಕ್ಕೂ ಹೆಚ್ಚು ಜನ ನೆರೆದಿದ್ದರು. ಅಜ್ಜಂಪುರ ಕೇಂದ್ರದ ಉಪ ನಿರ್ದೇಶಕ ಡಾ. ಜಿ.ಎಂ. ಸುರೇಶ್ ನೇತೃತ್ವದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.ಪ್ರತಿಷ್ಠೆ: ಈ ವಿಶೇಷ ತಳಿಯ ಕರುಗಳನ್ನು ಹರಾಜಿನಲ್ಲಿ ಕೊಳ್ಳುವುದು ಮತ್ತು ಸಾಕುವುದೇ ರೈತರಿಗೆ ಪ್ರತಿಷ್ಠೆ ವಿಷಯ. ಕರು ಕೊಂಡು ಪಳಗಿಸಿ ಚೆನ್ನಾಗಿ ಸಾಕಿ ಲಾಭಕ್ಕೆ ಮಾರುವ ಪರಿಪಾಟವೂ ಇದೆ. ಪಳಗಿನ ಕರಗಳನ್ನು ಶಿವಮೊಗ್ಗ ಜಿಲ್ಲೆಯ ಹೋರಿ ಓಡಿಸುವ ಸ್ಪರ್ಧೆಗಳಲ್ಲಿ ತೊಡಗಿಸಲು ಹೆಚ್ಚು ಬೆಲೆಗೆ ಕೊಳ್ಳುವುದರ ಪರಿಣಾಮವೂ ಇದರಲ್ಲಿದೆ. ಕೃಷಿಗೆ ಯೋಗ್ಯವಾಗಿರುವ ಜತೆಗೆ ಬಹಳ ನಂಬಿಕಸ್ಥ ಎಂಬ ಗುಣವೇ ಈ ತಳಿಗೆ ವಿಶೇಷತೆ ತಂದುಕೊಟ್ಟಿದೆ.
ಬೆಳೆಯುತ್ತಿರುವ ತಾಂತ್ರಿಕಯುಗಲ್ಲಿ ಯಂತ್ರಗಳ ಮಹಾತ್ಮೆ ಅರಿತ ಜನ ಕಾರು(ನ್ಯಾನೋ)ಗಳಿಗೆ, ಟ್ರಾಕ್ಟರ‍್ಗಳಿಗೆ ಮುಗಿಬಿದ್ದದ್ದಾರೆ. ಆದರೂ ಅಮೃತ ಮಹಲ್ ನಲ್ಲಿ ’ಯಂತ್ರಕ್ಕಿಂತ ರಾಸು ಮುಖ್ಯ’ ಎಂಬುವ ಮಾತು ನಿಜಾವಾಗಿದೆ.
-ಗೂಟ್ಟೀಕೆರೆ ಬೈರೇಶ್..
savayava krisi onde alla , yava krishi paddhatiyannu kurudagi acharanege tarabaradu, adhunika krushiyu idakke horatalla ………
ಅರೆಹೊಳೆಯವರೇ .. .. ಸರಿಯಾಗಿಯೇ ಹೇಳಿದ್ದೀರಿ.
thumba chennagide nimma lekana heegeye munduvariyali nimage shubhavagali;
ಶುಭಾಶಯಗಳು
ಪೇಯಿ೦ಗ್ ಗೆಸ್ಟು ಹೌದು….
ಪ್ಲೇಯಿ೦ಗ್ ಗೆಸ್ಟು ಹೌದು….
mitrare, E taanaviruvudu nanage gottiralilla kannada beleyalu Uliyalu intaha taanagala sahaya beku maattu kannadigaru parspara artha maadikollalu tamma tamma anisikegallannu hanchikollalu olleya taana idaagide. dhanayavaadagalu.
ಶ್ರೀ ರಾಕೇಶ್,
ನಮಸ್ತೆ,
ನನ್ನ ವೈಯಕ್ತಿಕ ಕೆಲಸಗಳ ಒತ್ತಡದಲ್ಲಿ “ವೇದಸುಧೆ” ಬಿಟ್ಟು ಬೇರೆಲ್ಲಿಯೂ ಕಣ್ಣಾಡಿಸಲು ಸಾಧ್ಯವಾಗಿಲ್ಲ.ನಿಮ್ಮ ಮಿಂಚಂಚೆಯನ್ನು ನೋಡಿ ಇಲ್ಲಿ ಬಂದೆ. ನಿಲುಮೆ ತಂಡದ ಪ್ರಯತ್ನ ಚೆನ್ನಾಗಿದೆ. ಸಮಾನ ವಿಚಾರಗಳಲ್ಲಿ ಒಟ್ಟಿಗೆ ಇರೋಣ.ಮನೆ ಕಟ್ಟಿಸುವ ಕೆಲಸದ ಒತ್ತಡದಲ್ಲಿರುವೆ. ನವಂಬರ್ ೧೩ ಗೃಹಪ್ರವೇಶ. ಆ ಸಮಯಕ್ಕೆ ಬ್ಲಾಗ್ ಮಿತ್ರರನ್ನು ಹಾಸನಕ್ಕೆ ಕರೆಯುವ ಆಸೆ ಇದೆ.ವೇದಸುಧೆಯು ನಿಲುಮೆಯೊಟ್ಟಿಗೆ ಯಾವಾಗಲೂ ಇರುತ್ತದೆ.
ನಮಸ್ತೆ.
ಹರಿಹರಪುರಶ್ರೀಧರ್
ಸಂಪಾದಕ,
ವೇದಸುಧೆ
chenagide…
Chenagide sir
ಮಾನ್ಯರೇ, ನಿಲುಮೆ ಶಿರೋನಾಮೆ ಚೆನ್ನಾಗಿದೆ. ಮೊದಲಿಗೆ ಎಲ್ಲಾ ತಾಣಗಳಂತೆ ನಿಲುಮೆ ತಾಣ ಎನ್ನುತ್ತಿದ್ದೆವು. ಅಂಬೆಕಾಲಿಡುತ್ತಿದ್ದ ತಾಣಕ್ಕೆ ಒಂದು ವರ್ಷಕ್ಕೆ ಕಾಲಿಟ್ಟು ಸಂತೋಷ ತಂದಿದೆ. ಕನ್ನಡ ಅಭಿವೃದ್ದಿಗೆ, ಸ೦ಪರ್ಕಕ್ಕೆ, ಪರಸ್ಪರ ಅರಿವಿಕೆ, ಕನ್ನಡ ಅಭಿವೃದ್ದಿಗೆ ನಿಲುವು ತಳೆದಿರುವ ನಿಲುಮೆ ತಾಣಕ್ಕೆ ತಾಣದ ಅಭಿವೃದ್ದಿಗೆ ಹಗಲು ರಾತ್ರಿ ಎನ್ನದೆ ದುಡಿಯುತ್ತಿರುವ ಎಲ್ಲರಿಗೂ ಅಭಿನಂದನೆಗಳು. ವಂದನೆಗಳೊಡನೆ.
ಧನ್ಯವಾದಗಳು.
ನನ್ನ ಲೇಖನ ಅಪಾರ ಚರ್ಚೆಗೆ ಗ್ರಾಸವಾಗಿದೆ. ಈ ದೇಶದಲ್ಲಿ ಜಾತಿ ಮತ್ತು ಧರ್ಮಕ್ಕೆ ಸಂಬಂಧಪಟ್ಟಂತೆ ಎಲ್ಲರೂ ಹೊಡೆದಾಟಕ್ಕೆ ಸಿದ್ಧರಾಗಿರುತ್ತಾರೆ. ಏಕೆಂದರೆ ಕಳೆದ ಮೂರುನೂರು ವರ್ಷಗಳಿಂದ ನಮ್ಮ ಪರಂಪರೆಯ ಕುರಿತು ಅಂತಹ ಒಂದು ತಪ್ಪುತಿಳುವಳಿಕೆಯನ್ನು ಕಟ್ಟಿಕೊಂಡು ಬಂದಿದ್ದೇವೆ. ನಮ್ಮ ಸಮರ್ಥನೆಗಾಗಿ ಕಳೆದ ನೂರಾರು ವರ್ಷಗಳೀಚಿನ ಯಾವುದೇ ಆಕರಗಳು ಪ್ರಮಾಣ ಆಗಲಾರವು. ಏಕೆಂದರೆ ಅವೆಲ್ಲವೂ ವಸಾಹತುಶಾಹಿ ದೃಷ್ಠಿಯ ಪುನರುತ್ಪಾದನೆಗಳು. ನಮಗೆ ಗ್ರಂಥಗಳ ಪ್ರಮಾಣ ಬೇಡ. ಅನುಭವಗಳನ್ನ ಒರೆಗೆಹಚ್ಚುವಾ. ಅದಕ್ಕೆ ನಮ್ಮನ್ನ ಅನುಭವಕ್ಕೆ ತೆರೆದುಕೊಳ್ಳಬೇಕು. ಕೇವಲ ಚಿಂತನಾಪ್ರಪಂಚ ನಮ್ಮ ಅನುಭವ ಅಲ್ಲ. ಕೇವಲ ಕಣ್ಣಿಗೆ ಕಾಣುವುದು ಮಾತ್ರ ಸತ್ಯ ಅಲ್ಲ. ಅದರ ಹಿಂದೆ ಇನ್ನೂ ಅಸಂಖ್ಯಾತ ಸತ್ಯಗಳಿರುತ್ತವೆ. ಅದನ್ನೇ ಸಂಸ್ಕೃತಿ ಅನ್ನುವುದು. ಅವು ಹೃದಯಕ್ಕೆ ಕಾಣುವ ಸತ್ಯಗಳು. ಈ ದೇಶದಲ್ಲಿ ಬ್ರಾಹ್ಮಣರನ್ನು ಸಮರ್ಥಿಸಿ ಯಾರಿಗೆ ಏನೂ ಆಗಬೇಕಿಲ್ಲ. ಆದರೆ ಸತ್ಯವನ್ನು ಮರೆಮಾಚಿದರೆ ಹಲವು ತಲೆಮಾರುಗಳೇ ಅಶಾಂತಿ ಮತ್ತು ಹಿಂಸೆಯಲ್ಲಿ ನರಳಬೇಕಾಗುತ್ತದೆ. ವಿರೋಧಗಳನ್ನು ತಿರಸ್ಕರಿಸುತ್ತಿಲ್ಲ. ವಿರೋಧಗಳನ್ನು ಪುನರ‍್ಪರಿಶೀಲನೆಮಾಡಿ.ಮನುಷ್ಯರು ಕೂಡಿಬಾಳಿ ನೆಮ್ಮದಿ ಪಡೆಯುವ ಮಾರ್ಗ ಹುಡುಕೋಣ.
kannadada managalige kaavyada kampu harisida kuvempuravarige nana namanagalu
ಕನ್ನಡವಿದು ಬರಿ ನುಡಿಯಲ್ಲ
ಅರಿತವರ ಬಾಯ್ ಸಕ್ಕರೆಯು
ಮನಮನಗಳ ಭಾವಕೆ ಬೆಸುಗೆಯ ಹಾಕಿ
ವಿಶ್ವಮಾನವತೆಯ ಸಾರಿದ ಯೋಗಿ
ರಸಋಷಿಯೇ ನಿನಗಿದೋ ನನ್ನ ನಮನ!
“ನಿಲುಮೆ” ತು೦ಬಾ ಚೆನ್ನಾಗಿದೆ!!!!
ನಮಸ್ಕಾರ,
ನಿಮಗೆಲ್ಲ ತಿಳಿದಿರಬಹುದು ‘ಫೇಸ್ ಬುಕ್ ‘ ಜಾಲತಾಣ ಹೆಚ್ಚು ಜನರನ್ನು ತಲುಪಲು ತನ್ನ ಸೇವೆಯನ್ನು ಜಗತ್ತಿನ 75ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ.. ಇದರಲ್ಲಿ ಕನ್ನಡವೂ ಒಂದು… ಭಾಷೆಗಳ ಅನುವಾದವನ್ನು ಫೇಸ್ ಬುಕ್ ತನ್ನ ಬಳಕೆದಾರರಿಂದಲೇ ಮಾಡಿಸುತ್ತಿದೆ.
ಬಳಕೆದಾರರು ತಮಗೆ ಆಸಕ್ತಿಇರುವ ಭಾಷೆ ಯನ್ನು ಬಳಸಿ ‘ಫೇಸ್ ಬುಕ್’ ಪಟ್ಟಿ ಮಾಡಿರುವ ಪದಗಳನ್ನು ಅನುವಾದಿಸಬಹುದು ಅಥವಾ ಈಗಾಗಲೇ ಅನುವಾದಗೊಂಡಿರುವ ಪದಗಳ ಬಗ್ಗೆ ತಮ್ಮ ಅಭಿಮತ ತಿಳಿಸಬಹುದು. ಜಾಲತಾಣದ ಒಳಗಿನ ತಂತ್ರಾಂಶ ಈ ಎಲ್ಲ ಅನುವಾದಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ವಿಮರ್ಶಿಸಿ ಸೂಕ್ತವಾದ ಅನುವಾದವನ್ನು ಆರಿಸುತ್ತದೆ. ಹೀಗೆ ಎಲ್ಲ ಫೇಸ್ ಬುಕ್ ಪದಗಳು ಅನುವಾದಗೊಂಡರೆ ‘ಸಂಪೂರ್ಣ ಕನ್ನಡಮಯ ಫೇಸ್ ಬುಕ್” ರೆಡಿ.
‘ಫೇಸ್ ಬುಕ್” ಪ್ರಚಾರ ಮಾಡುವುದಕ್ಕಾಗಲಿ ಅಥವಾ ಅದರಿಂದ ಕನ್ನಡಿಗರಿಗೆ ಉಪಯೋಗವಿದೆ ಅಥವಾ ಇನ್ನಾವುದೇ ಉದ್ದೇಶದಿಂದ ಇದನ್ನು ಬರೆದಿದ್ದಲ್ಲ. ಇದರ ಹಿಂದಿನ ಕಳಕಳಿ ಇಷ್ಟೇ …
ಇಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬಲಾಡ್ಯವಾದ ಜಾಗತಿಕ ಜಾಲತಾಣಗಳು ತಮ್ಮ ಸೇವೆಗಳನ್ನು ಸಾದ್ಯವಾದಷ್ಟು ಭಾಷೆಗಳಲ್ಲಿ ನೀಡಿ ಹೆಚ್ಚು ಜನರನ್ನು ತಲುಪಲು ಪ್ರಯತ್ನಿಸುತ್ತಿವೆ. ಈ ಪ್ರಯತ್ನಕ್ಕೆ ಆ ಸಂಸ್ಥೆಗಳು ಪರಿಗಣಿಸುವುದು ‘ಎಷ್ಟು ಮಂದಿ ಆ ಭಾಷೆಯನ್ನು ಅಂತರ್ಜಾಲದಲ್ಲಿ ಬಳಸಬಹುದು’ ಎಂಬ ಅಂಶ. ಈ ಕೆಲಸದಲ್ಲಿ ನಾವು ಹಿಂದೆ ಬಿದ್ದರೆ ನಮ್ಮ ಅಕ್ಕ ಪಕ್ಕದ ಭಾಷೆಗಳು ಅಂತರ್ಜಾಲದಲ್ಲಿ ನಮ್ಮ ಕನ್ನಡಕ್ಕಿಂತ ಮೇಲುಗೈ ಸಾಧಿಸುತ್ತವೆ(ಸಾಧಿಸಿವೆ). ಹೀಗಾದಲ್ಲಿ ಜಾಗತಿಕವಾಗಿ ಬಲಾಡ್ಯವಾದ ಸಂಸ್ಥೆಗಳು ಸಹಜವಾಗಿ ಕನ್ನಡವನ್ನು ಅಂತರ್ಜಾಲದಲ್ಲಿ ಬೆಳೆಸುವುದರ ಬಗ್ಗೆ ನಿರ್ಲಕ್ಷ ತಾಳುತ್ತವೆ (ನಿರ್ಲಕ್ಷಿಸಿವೆ). ಏಕೆಂದರೆ ಎಲ್ಲ ಅಂತರ್ಜಾಲ ಅಭಿವೃದ್ಧಿ ಕೆಲಸಗಳು ‘ಎಷ್ಟು ಜನ ಬಳಸುತ್ತಾರೆ/ಬಳಸುತ್ತಿದ್ದಾರೆ ‘ ಎಂಬ ಅಂಕಿ ಅಂಶದ ಮೇಲೆ ನಿಂತಿವೆ. ಯಾವ ಭಾಷೆ ಅಂತರ್ಜಾಲದಲ್ಲಿ ಹೆಚ್ಚು ಉಪಯೋಗಿಸಲ್ಪಡುತ್ತದೋ ಆ ಭಾಷೆ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಇಲ್ಲವಾದಲ್ಲಿ, ಅಂತಹ ಯಾವುದೇ ಜಾಗತಿಕ ಜಾಲತಾಣಗಳು ಅದರ ಅಭಿವೃದ್ದಿಗೆ ಗಮನ ನೀಡದೆ ಅಂತರ್ಜಾಲದಲ್ಲಿ ನಶಿಸಿ ಹೋಗಬಹುದು. ಇದಕ್ಕೆ ಕೆಲವು ಉದಾಹರಣೆಗಳು
೧-ಗೂಗಲ್ ನ್ಯೂಸ್ , ದಕ್ಷಿಣ ಭಾರತದ ಎಲ್ಲ ಭಾಷೆ ಗಳಲ್ಲಿ ಲಬ್ಯವಿದೆ ಕನ್ನಡದಲ್ಲಿ ಇಲ್ಲ … ಕಾರಣ – ಕನ್ನಡ ವಾರ್ತೆ ಅನ್ನು ಅಂತರ್ಜಾಲದಲ್ಲಿ ಓದುವವರು ಕಡಿಮೆ.
೨- ‘ಫೇಸ್ ಬುಕ್ ‘ – ದಕ್ಷಿಣ ಭಾರತದ ಎಲ್ಲ ಭಾಷೆ ಗಳಳಲ್ಲಿ ಸಂಪೂರ್ಣ ಅನುವಾದಗೊಂಡಿದೆ ಹಾಗು ಉಪಯೋಗಕ್ಕೆ ಲಬ್ಯವಿದೆ. ಕನ್ನಡ ಕೇವಲ ೩೦% ಮಾತ್ರ ಅನುವಾದಗೊಂಡಿದೆ – ಕಾರಣ ಕನ್ನಡ ಫೇಸ್-ಬುಕ್ ಅನುವಾದಕರು ಮತ್ತು ಅಭಿಮತ ನೀಡಿರುವವರು ಕಡಿಮೆ.
೩- ದಕ್ಷಿಣ ಭಾರತದ ಪ್ರತಿಯೊಂದು ಭಾಷೆಯೂ ಸಾವಿರಾರು ಜಾಲತಾಣಗಳು/ಬ್ಲಾಗ್ /ಸಿನಿಮಾ/ಟೀವಿ/ವಾರ್ತೆ/ವ್ಯಾಪಾರ/ವಿದೇಶಿಸಂಘ ಗಳ ಜಾಲತಾಣಗಳನ್ನು ಗಳನ್ನೂ ಹೊಂದಿವೆ ಅವುಗಳಿಗೆ ಸಂಖ್ಯೆಗೆ ಹೋಲಿಸಿದರೆ ಕನ್ನಡ ಜಾಲತಾಣಗಳ ಸಂಖ್ಯೆ ಭಯ ಹುಟ್ಟಿಸುವಷ್ಟು ಕಡಿಮೆ. ಕಾರಣ ಅಂತರ್ಜಾಲದಲ್ಲಿ ಕನ್ನಡ ಬಳಸುವವರ ಸಂಖ್ಯೆ ಕಡಿಮೆ.
ಹೀಗೆ ಹೇಳುತ್ತಾ ಹೋದರೆ ಹಲವಾರು . ಆದ್ದರಿಂದ ‘ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಗೆ’ ಇದು ಸೂಕ್ತ ಕಾಲ.
ಸದ್ಯಕ್ಕೆ ಫೇಸ್ ಬುಕ್ ಕನ್ನಡ ಗೊಳಿಸುವುದರ ಮೂಲಕ ‘ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಯನ್ನು’ ಪ್ರಾರಂಬಿಸೋಣ.
ಫೇಸ್ ಬುಕ್ ಪದಗಳ ಅನುವಾದ ಮಾಡಲು ಅಥವಾ ಅಬಿಮತ ನೀಡಲು …
*ನಿಮ್ಮ ಫೇಸ್ ಬುಕ್ ಖಾತೆಗೆ ಸೈನ್ ಇನ್ ಮಾಡಿ. (ಖಾತೆ ಇಲ್ಲದಿದ್ದರೆ , ಹೊಸ ಖಾತೆ ತೆಗೆಯುವುದು ೧ ನಿಮಿಷದ ಕೆಲಸ)
*ಈ ಕೆಳಗಿನ ಕೊಂಡಿಗೆ ಹೋಗಿ http://www.facebook.com/translations/?ref=ts
ಇಲ್ಲಿ ಪುಟದ ಬಲಗಡೆ ಇರೋ Translation Links ಅನ್ನೋ ಭಾಗಕ್ಕೆ ಹೋಗಿ, ಅಲ್ಲಿ ಭಾಷೆ ಆಯ್ಕೆಯ ಅನುಕೂಲ ಬಳಸಿ “ಕನ್ನಡ” ಆಯ್ದುಕೊಳ್ಳಿ – (ಕೊನೆ ಇಂದ ಎರಡನೇ ಆಯ್ಕೆ)
*ಅನುವಾದ ಶುರುಮಾಡಿ ( ಕನ್ನಡ ದಲ್ಲಿ ಬರೆಯಲು ಈ ಕೊಂಡಿ ಬಳಸಬಹುದು – http://www.google.com/transliterate/ )
*ಅನುವಾದದಲ್ಲಿ ಆಸಕ್ತಿ ಇಲ್ಲದಿದ್ದರೆ – ಈಗಾಗಲೇ ಅನುವಾದಗೊಂಡಿರುವ ಪದಗಳಿಗೆ ನಿಮ್ಮ ಅಭಿಮತ (ಸರಿ/ತಪ್ಪು) ತಿಳಿಸಿ (vote up or vote down) ಮಾಡಬಹುದು.
ಹೆಚ್ಹಿನ ವಿವರಗಳು ಬೇಕಿದ್ದರೆ ಮತ್ತು ಕನ್ನಡ ಅನುವಾದದಲ್ಲಿ ಆಸಕ್ತಿ ಇದ್ದರೆ ತಿಳಿಸಿ… ಹಲವಾರು ಜಾಲತಾಣಗಳು ಹವ್ಯಾಸಿ ಕನ್ನಡ ಅನುವಾದಕರಿಗಾಗಿ ಕಾಯುತ್ತಿದೆ. ನಿಮ್ಮ ಹವ್ಯಾಸ ಮತ್ತು ದಿನದ ಒಂದೆರಡು ನಿಮಿಷಗಳು ಕನ್ನಡವನ್ನು ಅಂತರ್ಜಾಲದಲ್ಲಿ ಬೆಳಗಲು ಸಹಕಾರಿಯಾಗಬಹುದು.. ನಿಮ್ಮ ಪ್ರತಿಯೊಂದು ಕನ್ನಡ ಕ್ಲಿಕ್ ‘ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಗೆ’ ಅಳಿಲುಸೇವೆ ಯಾಗಬಹುದು…. -ನಿಮ್ಮ ಯತೀಂದ್ರ ಕನ್ನಡಿಗ
ಏನ್ ಕ್ರಾಂತಿನೋ ಏನೋ ಯತೀಂದ್ರ ಅವರೇ… ಅಲ್ಲಿರುವ ಕನ್ನದ ಪದಗಳಲ್ಲಿ ಬಹುತೇಕ ಕನ್ನಡ ಪಂಡಿತರಿಗೆ ಮಾತ್ರ ತಿಳಿಯಬೇಕು.ನನ್ನಂತಹ ಸಾಮಾನ್ಯ ಕನ್ನಡಿಗರಿಗಲ್ಲ… ಕನ್ನಡವನ್ನ ಕನ್ನಡಿಗರಿಂದಲೇ ದೂರ ಮಾಡುವಂತಗಾಬಾರದು ಅಲ್ಲವೇ?
ನಿಲುಮೆಗೆ ಏನಾದ್ರೂ ಬರೀಬೇಕನಿಸ್ತಿದೆ.ಚೆನ್ನಾಗಿ ಮೂಡಿಬರ್ತಿದೆ.ಅಭಿನಂದನೆಗಳು
ಚೆನ್ನಾಗಿ ಇದೆ.
ಹಸುಗಳಿಗೂ ಈ ಕಾಲದಲ್ಲೂ ಬೆಲೆಯಿದೆ ಅಂತಾಯ್ತ್ತು, ಎಲ್ಲಿಯವರೆಗೆ ಮಕ್ಕಳು ಹಾಲು ಕುಡಿಯುತ್ತಾರೊ, ಅಲ್ಲಿಯವರೆಗೆ ಹಸುಗಳು ಬೇಕೇ ಬೇಕು ಅಲ್ಲವಾ? ಅದೆ ಹುಲಿ ನೋಡಿ ಪಾಪ, ಎಷ್ಟು ಕ್ರೂರ ಪ್ರಾಣಿಯಾದರೂ ಇಂದು ಅದರ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.
ಸರಿ, ನಾವೂ ಹಸುವಿನಂತೆ ಮೆತ್ತಗಿದ್ದರೆ ಹೇಗೆ ಈಸುವುದು, ಈಸಿ ಜಯಿಸುವುದು, ಎಂದಿದ್ದೆ, ಆದರೆ, ಹಸು ಹಾಗೂ ಹುಲಿಯಲ್ಲಿ, ಹಸುವೇ ಉಳಿದಿದೆ ಎಂದರೆ, ಸತ್ಯಕ್ಕೇ ಜಯ ಎಂದಾಯಿತು.
ಇಂದು ನಾನು ಈ ಜಾಗವನ್ನು ನೋಡಿದೆ,ನನಗೆ ಖುಷಿಯಾಯಿತು. ಹಾಗೇನೆ ನಾನು ಈ ಸ್ಯೆಟನ್ನು ನನ್ನ ಗಣಕ ಯಂತ್ರದಲ್ಲಿ ಒಂದು ಡಿಪಾಲ್ಟ್ ಕಿಡಕಿಯಾಗಿ ಮಾಡಿಕೊಂಡಿದ್ದೇನೆ, ಇದ್ರಿಂದ ನಾನು ಸುಲಭವಾಗಿ ನಾನು ಬೇಕಾದಾಗ ಪಡೆಯಬಹುದು.
ಧನ್ಯವಾದಗಳು.
There is no hard and false rules in agriculture. It is as good as going along with Nature and learn the behaviors of nature and adopt in our agriculture. Fertility of the soil is how much live the soil is. We must keep on increasing the microorganisms in the soil. Palekars Jeevamrutha is one of the culture media which increases the soil microorganisms but along with maintenance of moisture and mulching is very much necessary. So there is no necessary of blindly commenting any methods of cultivation practices. One spoon of the soil in our farm contains more number of microorganisms than the total number of human beings living on this earth. But our science knows only 1% of them and bifurcate among them pathogenic and non pathogenic and advice us to spray pesticides and fungicides and kill all the 99% unknown microorganisms who built and maintain life on this universe…
It is just an advice to anybody not to come to any conclusions about these matters so suddenly as all these efforts are to save earth…..may it be organic cultivation or subhash palekar or bio dynamic agriculture or sustainable agriculture or natural farming.. The ultimate mission is to save earth and save ourselves..
ಇಷ್ಟ ಆಯಿತು !
ನಿಮಗೆ ದೀಪಾವಳಿ ಹಬ್ಬದ ಶುಭಾಷಯಗಳು !
Nimma abipraya chennagide.
ನಿಮ್ಮ್ ಪ್ರಯತ್ನ ಚನ್ನಾಗಿದೆ ಒಳ್ಳೆಯದಾಗಲಿ
ಬಸವಣ್ಣೆಪ್ಪಾ.ಪ.ಕ೦ಬಾರ