ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 24, 2012

ಚಿಂಗಾರಿ

‍ನಿಲುಮೆ ಮೂಲಕ

– ಫಿಲ್ಮಿ ಪವನ್

ಫೋರಂ ಮಾಲ್ ಅಲ್ಲಿ ಮಾಸ್ ಸಿನಿಮಾ ನೋಡೋದಂದ್ರೆ ಮಜಾನೆ ಇರಲ್ಲ ಬಿಡಿ, ಸುತ್ತ ಮುತ್ತ ಆಂಟಿಗಳು, ಅಂಕಲ್ಗಳು, ಲವರ್ಸ್ಗಳು. ಅದ್ರಲ್ಲು ದರ್ಶನ್ ಸಿನಿಮಾ ಅಂದ್ರೆ ಇನ್ನು ಉರ್ದೋಗುತ್ತೆ, ಪಂಚಿಂಗ್ ಡೈಲಾಗು ಬಂದ್ರೆ ಒಂದು ಶಿಲ್ಲೆ ಹೊಡ್ಯೋದು ಇಲ್ಲ ಯಾರುವೆ 😦 ಆದ್ರೆ ಏನ್ ಮಾಡೋದು ಈ ಹುಡುಗೀರು ಬಿಡ್ಲಿಲ್ಲ. ಫೋರಂ ಪಿ.ವಿ.ಅರ್. ಅಂತ ಚಿಂಗಾರಿ ಗೆ ಕರ್ಕೊಂಡೋಗಿದ್ರು ಮೊದ್ಲೇ ಬಾಸ್ ಸಿನಿಮ, ಎಲ್ಲಾದ್ರು ಮಾಸ್ ಆಗಿರೋ ಚಿತ್ರಂದಿರದಲ್ಲಿ ಕೂತು ಮಾಸ್ ಆಗಿ ಅರ್ಧ ಕಿಲೋ ಚಿಪ್ಸ್ ಮತ್ತೆ ೨ ಲೀಟರ್ ಪೆಪ್ಸಿ ೧ ಪ್ಯಾಕ್ ಕಿಂಗ್ ಇಟ್ಕೊಂಡು ಸಿನಿಮಾ ನೋಡೊಣ ಒಳ್ಳೊಳ್ಳೆ ಪಂಚಿಂಗ್ ಡೈಲಾಗ್ ಹೊಡೆದಾಗ ಶಿಲ್ಲೆ ಹೊಡ್ಯಾಣ ಮಾಸ್ ಸಾಂಗ್ ಗೆ ಪರದೆ ಬಳಿ ಹೋಗಿ ಸ್ಟೆಪ್ ಹಾಕೋಣ ಅನ್ನೋ ಆಸೆಗೆಲ್ಲಾ ತಣ್ಣೀರು ಬಿದ್ದಿತ್ತು.ಇನ್ನೊಂದು ವಿಷಯ ಅಂದ್ರೆ ಟಿಕೆಟ್ ಬೆಲೆ ಬೇರೆ ಜಾಸ್ತಿ ಕಣ್ರಿ 😦

ಈ ಸಿನಿಮಾದ ಒಪೆನಿಂಗೇ ವಿಶೇಷವಿತ್ತು, ಯಾಕಂದ್ರೆ ಯಾವುದೇ ಸಿನಿಮಾದ ಟೈಟಲ್ ಕಾರ್ಡಲ್ಲಿ ತಾಂತ್ರಿಕ ವರ್ಗದವರ ಹೆಸರು ಮಾತ್ರ ಹಾಕ್ತಿದ್ರು. ಆದ್ರೆ ಈ ಸಿನಿಮಾದಲ್ಲಿ ಅವರ ಫೋಟೊ ಸಹ ನೋಡಿ ಖುಶಿ ಆಯ್ತು.ಪ್ರತಿಯೊಬ್ಬ ತಾಂತ್ರಿಕ ವರ್ಗದವರ ಭಾವಚಿತ್ರ ಅವರ ಹೆಸರಿನೊಂದಿಗೆ ಬಂದಾಗ ಖುಶಿ ಆಯ್ತು. ತಾಂತ್ರಿಕ ವರ್ಗದವರಿಗೆ ಅಷ್ಟು ಪ್ರಾಮುಖ್ಯತೆ ಕೊಟ್ಟಿರುವ ನಿರ್ದೇಶಕ ಹರ್ಷ ಅವರಿಗೆ ಕುಡೋಸ್.

ಚಿತ್ರ ತೆರೆದುಕೊಳ್ಳುವುದೇ ಅರ್ಧದಿಂದ, ಆಮೇಲೆ ಫ್ಲಾಶ್ ಬ್ಯಾಕ್. ಪೋಲೀಸ್ ಆಫೀಸರ್ ಒಬ್ಬನ ಪ್ರೀತಿಯ ಕಥೆಯೆ ಚಿಂಗಾರಿ. ನಾಯಕ ಒಬ್ಬ ನಿಷ್ಠಾವಂತ ಪೋಲೀಸ್ ಅಧಿಕಾರಿ, ದರ್ಶನ್ ಎಂಟ್ರಿಯಲ್ಲಿ ಆಡಂಬರ ಇಲ್ಲ, ಸೈಲಂಟ್ ಆಗಿ ಬರುವ ದರ್ಶನ್, ಬರ್ತಾ ಬರ್ತಾ ವೈಯೊಲೆಂಟ್ ಆಗ್ತಾರೆ. ನಾಯಕಿ ಸಂಗೀತದ ಶೋ ನಿಮಿತ್ತ ತನ್ನ ಗೆಳತಿಯೊಂದಿಗೆ ಸಿಸೆರ್ಲೆಂಡ್ ಗೆ ಹೋಗುತ್ತಾಳೆ, ಹೋಗುತ್ತ ಹೋಗುತ್ತ, ನಾಯಕನನ್ನು ಬೈದು ಇನ್ನು ನನ್ನ ತಂಟೆಗೆ ಬಾರದಿರು ಎಂದು ಹೇಳಿ ಹೋಗುತ್ತಾಳೆ.ಅದಕ್ಕೆ ಒಂದು ಸ್ಟ್ರಾಂಗ್ ಕಾರಣ ಸಹ ನಿರ್ದೇಶಕರು ನೀಡಿದ್ದಾರೆ. ಸಿಸ್ ಅಲ್ಲಿ ಏರ್ ಪೋರ್ಟ್ ಅಲ್ಲಿ ನಾಯಕಿಯ ಗೆಳತಿ ಒಬ್ಬನನ್ನು ಪರಿಚಯ ಮಾಡಿಕೊಳ್ಳುತ್ತಾಳೆ, ಅವನು ಇವರಿರುವ ವಿಳಾಸವನ್ನೆಲ್ಲ ತಿಳಿದು ವೇಶ್ಯಾವಾಟಿಕೆಯ ಜಾಲಕ್ಕೆ ಪತ್ತೆ ನೀಡಿ ಕಿಡ್ನಾಪ್ ಮಾಡಿಸುತ್ತಾನೆ. ನಾಯಕಿ ಕಿಡ್ನಾಪ್ ಆಗುವಾಗ ನಾಯಕನಿಗೆ ಫೋನ್ ಮೂಲಕ ಕಿಡ್ನಾಪ್ ಮಾಡುವವನ ಬಗ್ಗೆ ವಿವರಿಸಿರುತ್ತಾಳೆ. ಆ ವಿವರಣೆಯನ್ನೇ ತನ್ನ ಮನದಲ್ಲಿಟ್ಟುಕೊಂಡು ಸಿಸ್ ಗೆ ಹೊರಡುವ ನಾಯಕ ಅಲ್ಲಿನ ವೇಶ್ಯಾವಾಟಿಕೆ ಜಾಲದಿಂದ ನಾಯಕಿಯನ್ನು ಬಿಡಿಸಿಕೊಂಡು ಬರುತ್ತಾನಾ ಇಲ್ಲವಾ ಎಂಬುದನ್ನ ನೋಡಲು ಚಿತ್ರಮಂದಿರಕ್ಕೇ ಹೋಗಿ ನೋಡಬೇಕು.ಸಿಸ್ ಗೆ ಕಾಲಿಡುವ ಹೊತ್ತಿಗೆ ಚಿತ್ರ ಮಧ್ಯಂತರಕ್ಕೆ ಬಂದು ನಿಲ್ಲುತ್ತದೆ, ಮತ್ತು ನಾಯಕ ಮತ್ತು ನಾಯಕಿಯ ಮಧ್ಯೆ ವಿರಸಕ್ಕೆ ಕಾರಣ ಸಹ ತಿಳಿಯುತ್ತೆ.

ದಿತೀಯಾರ್ಧದಲ್ಲಿ ಎಂಟ್ರಿ ಕೊಡೊ ಹೊಸ ಪಾತ್ರ ನಿಜಕ್ಕೂ ಪ್ರೇಕ್ಷಕರಿಗೆ ಒಳ್ಳೆ ಮಜ ಕೊಡುತ್ತೆ, ಟ್ರಾನ್ಸಲೇಟರ್ ಆಗಿ ಬರುವ ಪಾತ್ರ ಬರ್ತ ಬರ್ತಾ ವೇಶ್ಯೆ ರೂಪ, ಪಬ್ ಡಾನ್ಸರ್ ರೂಪ ಎಲ್ಲ ಪಡ್ಕೋಳುತ್ತೆ. ಇವೆಲ್ಲ ವೇರಿಯೇಶನ್ ಮ್ಯಾನೇಜ್ ಮಾಡಲು ಸಮರ್ಥ ನಟಿಯೇ ಬೇಕಿತ್ತು. ಅದಕ್ಕೆ ಹರ್ಷ ಭಾವನ ಅವ್ರನ್ನು ತಂದು ನಿಜಕ್ಕೂ ಜಯಗಳಿಸಿದ್ದಾರೆ. ಭಾವನ ನಾಯಕನಿಗೆ ಸಹಾಯ ಮಾಡಿ ನಾಯಕಿಯ ಪತ್ತೆಗೆ ಸಹಾಯ ಮಾಡುತ್ತಾಳೆ. ಮುಂದೆ ಏನೆಲ್ಲಾ ತೊಂದ್ರೆ ಆಗುತ್ತೆ ನಾಯಕ ಹೇಗೆ ಅದನ್ನೆಲ್ಲ ಎದಿರಿಸುತ್ತಾನೆ ಅನ್ನೋದು ನಿಜಕ್ಕೂ ಮಸ್ತಾಗಿದೆ

ಚಿತ್ರದ ಹೆಚ್ಚು ಭಾಗ ವಿದೇಶದಲ್ಲೆ ಚಿತ್ರೀಕರಣ ಆಗಿರೋದು ನೋಡಕ್ಕೆ ಚೆನ್ನಾಗಿದೆ, ಈ ನಡುವೆ ಸಿನಿಮಾಗಳಲ್ಲಿ ಇಂಡಿಯಾದಲ್ಲಿರೋ ಪ್ರೇಮಿಗಳು ಹಾಡು ಬಂತು ಅಂದ್ರೆ ಡ್ರೀಮ್ಸ್ ಅಲ್ಲೆ ಎಲ್ಲಾ ದೇಶ ಸುತ್ಕೊಂಡ್ ಬಂದಿರ್ತಾರೆ. ದೊಡ್ಡ ಸ್ಟಾರ್ ಸಿನಿಮಾ ಅಂದ್ರೆ ಫಾರೀನು ಹಾಡು ಇರ್ಲೇ ಬೇಕು, ಆದ್ರೆ ಕಥೆಯನ್ನು ವಿದೇಶದಲ್ಲಿ ಚಿತ್ರಿಸಿರುವುದು ಸಂತೋಶದ ವಿಚಾರ. ದರ್ಶನ್ ಅವರ ಸ್ಲಮ್ ಏರಿಯಾ ಒಳಗಿನ ಎಂಟ್ರಿ ನಿಜಕ್ಕೂ ಸೂಪರ್, ಅದನ್ನೇ ಹೀರೋ ಎಂಟ್ರಿ ಆದಂತೆ ತೋರಿಸಿದ್ದಾರೆ. ಆ ದೃಶ್ಯದಲ್ಲಿ ಡೈಲಾಗ್ ಗಳು ಅಷ್ಟೆ ಚಾಲೆಂಜಿಂಗ್ ಸ್ಟಾರ್ ಲೆವೆಲ್ ಗೆ ಪೆರ್ಫೆಕ್ಟ್ ಮ್ಯಾಚಿಂಗ್.

ತಾಂತ್ರಿಕವಾಗಿ ಚಿತ್ರ ಬಹಳಾ ಚೆನ್ನಾಗಿದೆ, ಕೆಲವು ವಯಸ್ಕರ ದೃಶ್ಯಗಳಿರುವುದರಿಂದ ಚಿತ್ರಕ್ಕೆ ಎ ಸೆರ್ಟಿಫಿಕೇಟ್ ಕೊಟ್ಟಿದ್ದಾರೆ. ನಿರ್ಮಾಪಕರು ಖರ್ಚು ಮಾಡಕ್ಕೆ ಎಲ್ಲೂ ಹಿಂದೇಟು ಹಾಕಿಲ್ಲ, ಸಂಭಾಷಣೆ ತುಂಬ ಚೆನ್ನಾಗಿದೆ. ಹಾಡುಗಳು ಒಮ್ಮೆ ಕೇಳಬಹುದಷ್ಟೆ. ಚಿತ್ರದಿಂದ ಹೊರಗೆ ಬಂದಮೇಲೆ ಗುನುಗುವಂತಿಲ್ಲ. ಮೂಲತಃ ನೃತ್ಯ ನಿರ್ದೇಶಕರಾಗಿರೋ ಹರ್ಷ ದರ್ಶನ್ ಕೈಲಿ ಡಾನ್ಸ್ ತುಂಬ ಚೆನ್ನಾಗಿ ಮಾಡಿಸಿದ್ದಾರೆ. ನಿರ್ದೇಶನದ ಬಗ್ಗೆ ದೂಸರ ಮಾತಿಲ್ಲ, ಹರ್ಷ ಅಧ್ಬುತವಾಗಿ ಚಿತ್ರವನ್ನು ಮೂಡಿಸಿದ್ದಾರೆ.

ಚಿತ್ರದಲ್ಲಿ ಒಬ್ಬ ವಿಲ್ಲನ್ ಇಲ್ಲ, ಆದ್ರೆ ಬರುವ ವಿಲ್ಲನ್ ಗಳೆಲ್ಲ ಚೆನ್ನಾಗಿ ನಟಿಸಿದ್ದಾರೆ, ಸಲ್ಪವೇ ಹೊತ್ತು ಬಂದರು ಕಿಕ್ ಕೊಡೋದು ಅರುಣ್ ಸಾಗರ್ ಅಲಿಯಾಸ್ ಮಾರ್ಕೊ. ಭಾವನ ಚಿತ್ರಕ್ಕೆ ಪ್ಲಸ್ ಪಾಯಿಂಟ್, ಬಿನ್ನಾಣ, ವಯ್ಯಾರ, ಫೈಟ್ಸ್, ಡಾನ್ಸ್ , ತುಂಡುಡುಗೆ ಬಿಚ್ಚುಡುಗೆ ಎಲ್ಲ ಭಾವನ ಒಬ್ರೆ ಮಾಡಿದ್ದಾರೆ, ಚಂದ್ರಮುಖಿ ಪ್ರಾಣಸಖಿ ಇವ್ರೇನ ಅನ್ನೋ ಅಷ್ಟು ಚೇಂಜ್ ಲುಕ್ಸ್ ಇದೆ ಬಾವನಾದು ಇಲ್ಲಿ. ಹೀರೋಇನ್ ಬಗ್ಗೆ ಹೇಳಕ್ಕೆ ಮನ್ಸಿಲ್ಲ ಕಣ್ರಿ ದರ್ಶನ್ ಲೆವೆಲ್ ಗೆ ನಿಜಕ್ಕೂ ಲಾಯಕ್ಕಿಲ್ಲ. ನೋಡಕ್ಕು ಚೆನ್ನಾಗಿಲ್ಲ ಆದ್ರೆ ಏನ್ ಮಾಡಕ್ಕಾಗಲ್ಲ ವಿಧಿ ಇಲ್ಲ, ಕಣ್ ಮುಚ್ಕಂಡ್ ನೋಡ್ಬಿಡಿ. ದರ್ಶನ್ ಸೂಪರ್ರೋ ಸೂಪರ್ರು, ಸೃಜನ್, ರಮೇಶ್ ಭಟ್ ಮುಂತಾದವರು ಒಳ್ಳೆಯ ಸಾಥ್ ಕೊಟ್ಟಿದ್ದಾರೆ.

ಒಟ್ಟಾರೆ ಚಿತ್ರ ಎಲ್ಲೂ ಬೋರ್ ಹೊಡಿಸೋಲ್ಲ, ಎರಡೂವರೆ ಘಂಟೆ ಉತ್ತಮ ಪರಿಪೂರ್ಣ ಮನೋರಂಜನೆ. ಕುಟುಂಬ ಸಮೇತ ನೋಡಬೊಹುದು ಆದ್ರೆ ಮಕ್ಕಳ ಜೊತೆ ನೋಡೋದು ಬೇಡ.ನಂಗಂತು ಸಿನಿಮಾ ತುಂಬ ಹಿಡಿಸಿದೆ. ಬಿಡುವಾದ್ರೆ ನೀವು ನೋಡಿ ಬನ್ನಿ. ನೀವು ಕೊಡುವ ಹಣಕ್ಕೆ ಮೋಸ ಆಗಲ್ಲ. ನಂಗಂತೂ ಮೋಸ ಆಯ್ತು ಒಳ್ಳೆ ಚಿತ್ರ ನೋಡಿದೆ ಆದ್ರೆ ಜಾಗ ಹಿಡಿಸ್ಲಿಲ್ಲ. ಮತ್ತೆ ಇನ್ನೊಂದು ಸಲಿ ನಮ್ಮೂರಲ್ಲಿರೋ ದಬ್ಬ ಥಿಯೇಟರ್ ಅಲ್ಲಿ ನೋಡ್ತೀನಿ.ಕನ್ನಡ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿ.

ಲಾಸ್ಟ್ ಪಂಚ್ : ಚಿತ್ರದ ಮೂಲ ಕಥೆ ಆಂಗ್ಲ ಚಿತ್ರ ಟೇಕನ್ ದು ಅನ್ನೋದು ಮೊದಲರ್ಧ ನೋಡಿದಾಗಲೆ ಅನಿಸ್ತು.ತಮಿಳು ಚಿತ್ರ ಗಂಭೀರಂ ಸಹ ಇದೇ ರೀತಿಯ ಕಥೆ.

* * * * * * * *

ಚಿತ್ರ ಕೃಪೆ : ಒನ್.ಇಂಡಿಯಾ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments