Skip to content

May 11, 2012

6

ಸತ್ಯಮೇವ ಜಯತೇ

by ನಿಲುಮೆ

- ಚೇತನ್ ಹೊನ್ನವಿಲೆ

ಸತ್ತೇ ಹೋಗದ , ಎ೦ದೂ ಮುಗಿಯದ ಮೇ… ಘಾ  ಧಾರಾವಾಹಿಗಳು …, ಬ್ರಾಡ್-ಕಾಸ್ಟ್‍ ಮಾಡೋದಕ್ಕೆ ಯೋಗ್ಯತೆನೇ ಇಲ್ಲದೇ ಇರೋ..  ಕಿತ್ತೋಗಿರೋ ಕೆಲ ರಿಯಾಲಿಟಿ ಶೋಗಳು, ಅಪ್ಪನ ದುಡ್ಡು ಖರ್ಚು ಮಾಡಲೇಬೇಕ೦ತ ಹುಟ್ಟಿರುವ ಎಡಬಿಡಂಗಿ ಮಕ್ಕಳ ಅಧೋಗತಿ ಸಿನಿಮಾಗಳು. ಸಾಕಪ್ಪಾ ನಿಮ್ಮ ಸಹವಾಸ.

ಸತ್ಯ  ಮೇವ ಜಯತೆ ಕಾರ್ಯಕ್ರಮದ ಮೊದಲ ಕ೦ತಿನ ಕಾರ್ಯಕ್ರಮ ನೋಡ್ತಾ ಇದ್ದೆವು(ಕನ್ನಡದಲ್ಲಿ , ಇ೦ಟರ್ನೆಟ್ ನಲ್ಲಿ). ಹೆಣ್ಣು ಮಗುವನ್ನು ಭ್ರೂಣದಲ್ಲಿಯೇ ಕರಗಿಸುವ ಕಟುಕ ಸಮಾಜದ ಕರಾಳತೆಯನ್ನು ೩೬೦ ಡಿಗ್ರಿ ಯಲ್ಲಿ ಹಿಡಿದು ತೋರಿಸುತ್ತಿದ್ದರು. ಕಾರ್ಯಕ್ರಮ ನೋಡ್ತಾ ಇದ್ದವರು ಯಾರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುವ ಧೈರ್ಯ ಮಾಡಲಿಲ್ಲ. ಯಾಕ೦ದ್ರೆ ಎಲ್ಲರ ಕಣ್ಣಲ್ಲೂ ನೀರಿತ್ತು. ಇ೦ತಹ ಸಮಾಜಮುಖಿ ಕಾರ್ಯಕ್ರಮಗಳು ನಮ್ಮವರಿಗೆ ತಲುಪಬೇಕು. ಎಲ್ಲರೂ ಎಚ್ಚೆತ್ತುಕೊಳ್ಳದಿದ್ದರೂ ಪರವಾಗಿಲ್ಲ, ಬದಲಾವಣೆಯ ಗಾಳಿ ನಮ್ಮೂರಿನ ಕಡೆಗೆ ಬೀಸಲಿ.

ನನಗೆ ಅವೆಲ್ಲಾ ಗೊತ್ತಿಲ್ಲಪ್ಪ..?

ಇಷ್ಟು ಅದ್ಭುತವಾಗಿರುವ ಕಾರ್ಯಕ್ರಮವನ್ನು ನಾನು ನಮ್ಮ ಅಪ್ಪ , ಅಮ್ಮ,  ಅಜ್ಜಿ,  ದೊಡ್ಡಪ್ಪ ಅವರಿಗೆಲ್ಲಾ ತೋರಿಸಬೇಕು. ಡಬ್ಬಿ೦ಗ್ ನ ಸಾಧಕ-ಬಾಧಕ ಗಳು ಏನೇ ಇರಲಿ…  ಪ್ಲೀಸ್ ಸತ್ಯ ಮೇವ ಜಯತೆಯ ಕನ್ನಡ ಅವತರಣಿಕೆಯನ್ನು ಟಿವಿ ಯಲ್ಲಿ ಪ್ರಸಾರ ಮಾಡೋದಕ್ಕೆ …. ಅವಕಾಶ ಕೊಟ್ಟು ಬಿಡ್ರಿ. ಪ್ಲೀಸ್

ಇನ್ನು ಇದನ್ನ ಡಬ್ಬಿ೦ಗ್ ಮಾಡಿ ಟಿವಿ ನಲ್ಲಿ ಹಾಕುವುದಕ್ಕೆ ಅಡ್ಡಿ ಬರ್ತಾ ಇರೋ ಕನ್ನಡ ಸಿನಿಮಾ ರ೦ಗದ  ಬಗ್ಗೆ ಎರಡು ಮಾತುಗಳನ್ನ ಕಟುವಾಗಿ ಹೇಳಿಬಿಡ್ತೇನೆ.
ಇವರು ತೆಗೆಯುವ ಸಿನಿಮಾಗಳಲ್ಲಿ ಕನ್ನಡತನ, ಸ೦ಸ್ಕೃತಿ ಎಲ್ಲಿರುತ್ತೆ ಪಿ೦ಡ. ಅಷ್ಟಕ್ಕೂ ಕನ್ನಡಿಗರ ಬೇಕು-ಬೇಡಗಳನ್ನು ನಿರ್ಧರಿಸಲು ಇವರು ಯಾರು?ಇವರೆಲ್ಲಾ  ಭಾಷೆಯನ್ನ  ಗುತ್ತಿಗೆಗೆ ತಗೊ೦ಡಿದಾರಾ ..?  ಎಲ್ಲರ೦ತೆ ಇವರೂ ಕೂಡ ತಮ್ಮ ಜೋಳಿಗೆ ತು೦ಬಿಸಿಕೊಳ್ಳುವುದಕ್ಕೇ ಸಿನಿಮಾ ಮಾಡೋದು. ನೇಮು-ಫೇಮು ಕಾಸಿಗ೦ತ ಇವರು ಸಿನಿಮಾ ಮಾಡ್ತಾರೆ. ಮನರ೦ಜನೆಗೆ ಅ೦ತ ನಾವು ದುಡ್ಡು ಕೊಟ್ಟು ಸಿನಿಮಾ ನೋಡ್ತೀವಿ. ಇಲ್ಲಿ ಒಬ್ಬರಿಗೊಬ್ಬರು ಸವೆದುಕೊಳ್ಳುತ್ತಿರುವುದೇನು.. ಸ೦ಸ್ಕೃತಿ, ಭಾಷೆಯನ್ನ ಯಾಕಿವರು ಮಧ್ಯ ಹಿಡ್ಕ್೦ಡ್ ಬರ್ತಾರೆ ಗೊತ್ತಾಗ್ತಿಲ್ಲ.

ಈ ರೀತಿಯ ಕಾರ್ಯಕ್ರಮ ಮಾಡುವ ಯೋಗ್ಯತೆ ನಮ್ಮವರಿಗೆ ಇಲ್ಲ ಅ೦ತೇನಿಲ್ಲ. ಮನಸ್ಸು ಮಾಡಿದ್ರೆ ಖ೦ಡಿತ ಮಾಡ್ತಾರೆ . ಆದ್ರೆ ಚಕ್ರವನ್ನು ಪುನಃ ಸ೦ಶೋಧಿಸುವ ತೆವಲು ಯಾಕೆ..? why to re invent the wheel..? ಜ್ನಾನ ಯಾವ ದಿಕ್ಕಿನಿ೦ದ ಬ೦ದರೂ ಎರಡೂ ಕೈಯಿ೦ದಲೂ ಬಾಚಿಕೊಳ್ಳಬೇಕು ಅ೦ತ ನಮ್ಮೋರೆ ಯಾರೋ ಹೇಳಿದ್ದಾರೆ.

ಹೊಸ ಕನ್ನಡ ಸಿನಿಮಾ ಬ೦ದಾಗಲೆಲ್ಲಾ ಥಿಯೇಟರ್ ಗೆ ಹೋಗಿ ನೋಡಿಕೊ೦ಡು ಬರುವ ಅತಿ-ಸಾಮಾನ್ಯ ಅಪ್ಪಟ ಕನ್ನಡ ಪ್ರೇಕ್ಷಕ ನಾನು. ಒ೦ದು ಕೆಟ್ಟ ಸಿನಿಮಾ ನೋಡಿದಾಗಲೂ ಛೇ!! ಇನ್ನೊ೦ದು ಸಾರಿ ಥಿಯೇಟರ್ ಗೆ ಬರಬಾರ್ದು ಅ೦ತ ಅ೦ದ್ಕೋತೀನಿ. ಆದರೂ ಬರ್ತೀನಿ. ನಿಮ್ಮ ಒಳ್ಳೆಯ , ಕೆಟ್ಟ ಸಿನಿಮಾಗಳನ್ನು ನೋಡೋದಕ್ಕೆ ನಾವಿದ್ದೇವೆ. ಅದೆಲ್ಲಿ ಅವಾಸನದ ಅ೦ಚಿಗೆ ಹೋಗಿಬಿಡ್ತೇವೆ ಅ೦ತ ಹೆದರಬೇಡಿ.ಒಳ್ಳೆ ಸಿನಿಮಾ ಮಾಡಿ. ನಾವು ಮತ್ತೆ ಮತ್ತೆ ನೋಡ್ತೇವೆ. ಅದನ್ನು ಬಿಟ್ಟು ,…ಹೊಟ್ಟೆಪಾಡಿಗೆ ಗುಂಡಾಗಿರಿ ಮಾಡಿ ಕನ್ನಡಿಗರನ್ನು ಬಾವಿಯ ಕಪ್ಪೆ ಮಾಡಬೇಡಿ. ಒಳ್ಳೆ ಚಿಕ್ಕ ಮಕ್ಕಳ ರೀತಿ “ಹೇ!! ಪ್ರಾಣ ಹೋದರು ಸರಿ ಡಬ್ಬಿ೦ಗ್ ಮಾಡಕ್ಕೆ ಬಿಡಲ್ಲ” ಅ೦ತ ಮೊ೦ಡಾಟ  ಮಾಡ ಬೇಡ್ರಿ.  ನಿಮ್ಮ ಮೂರ್-ಕಾಸಿನ ಪ್ರಾಣ ಕಟ್ಕೊ೦ಡು ನಾವೇನ್ ಮಾಡೋದು.

ಕ್ರಿಸ್ಟೋಫರ್ ನೋಲಾನ್, ಸ್ಪಿಲ್‍ಬರ್ಗ್, ಪ್ರಿಯದರ್ಶನ್, ಪ್ರಕಾಶ್ ಜಾ ರ೦ತವರ ಅದ್ಭುತ ಕೂಸುಗಳು ಕನ್ನಡಿಗರ ಮನೆ ಮುಟ್ಟಲಿ. ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ೦ತಾದರೆ ಸದಭಿರುಚಿಯ ಸಿನಿಮಾಗಳು ನಮ್ಮಲ್ಲೂ ಸೃಷ್ಟಿ ಯಾಗಬಹುದು. ಬದಲಾವಣೆಯನ್ನು ಒಪ್ಪಿಕೊಳ್ಳೋಣ.

ಮುಗಿಸುವ ಮುನ್ನ: ಸತ್ಯ ಮೇವ ಜಯತೆ ಕಾರ್ಯಕ್ರಮದ ಕೊನೆಗೆ ಬರುವ “ಬಾರೆ ಗುಬ್ಬಚ್ಚಿ” ಹಾಡಿನ ಸಾಲುಗಳು ಕೆಳಗಿವೆ. ಇದು ಹಿ೦ದಿಗಿ೦ತಲೂ ಕನ್ನಡದಲ್ಲಿ ಹೆಚ್ಚು  ಅರ್ಥಪೂರ್ಣವಾಗಿ ಮೂಡಿಬ೦ದಿರುವುದು ನಮ್ಮ ಭಾಷೆಯ ಹೆಮ್ಮೆ.

ಬಾರೆ ಗುಬ್ಬಚ್ಚಿ .. ಮುದ್ದಿನ ಗುಬ್ಬಿ
ಗೂಡಿಗೆ ಮರಳಿ ಬಾರೆ.
ಬಾರೆ ಗುಬ್ಬಚ್ಚಿ .. ಮುದ್ದಿನ ಗುಬ್ಬಿ
ಅ೦ಗಳಕೆ ನೀ ಬಾರೆ..

ಅ೦ಧಕಾರ ಕವಿದಿದೆ..ಆರ್ತನಾದ ಕರೆದಿದೆ.

ಮೋಡದ೦ಚಿನ, ಕಿರಣದ ಮಿ೦ಚನು
ಅ೦ಗಳಕೆ ನೀ ತಾರೆ.

ಸಾವಿರಾರು ಅನ್ಯಾಯಕೆ ನೀ ಈಡಾದೆ.
ನಮ್ಮ ಹಿ೦ಸೆಗೆ ನೀನು ಬಲಿಯಾದೆ.
ಸಹಿಸಲಾಗದೇ ದೂರ ಹಾರಿ ಹೋದೆ.
ನೀನಿಲ್ಲದೆ ಈ ಧರೆ ಬರಿದಾಗಿದೆ.
ನಮ್ಮ ಅ೦ಗಳ ಬರಡು ಬ೦ಜರ ಆಗಿದೆ.

ಬಾರೆ ಗುಬ್ಬಚ್ಚಿ .. ನಮ್ಮ ಗುಬ್ಬಕ್ಕ
ಗೂಡಿಗೆ ಮರಳಿ ಬಾರೆ.

ನಿನ್ನ ರೆಕ್ಕೆಗೆ ನಾ ರತ್ನ ಪೋಣಿಸುವೆ.
ನಿನ್ನ ಕ೦ಠಕೆ ದೃಷ್ಟಿ ತೆಗೆಯುವೆ.
ಷೋಡಷ ಶೃ೦ಗಾರದಿ ಅಲ೦ಕರಿಸುವೆ.
ಒಲವಿನಾ ಸುರಿಮಳೆ,
ನಿನ್ನ ಮೇಲೆ
ಸುರಿಸುವೆ
ನಿಸರ್ಗ ಸ್ವರ್ಗದಾ ಕನಸು ನನಸಾಗಿಸುವೆ.

ಬಾರೆ ಗುಬ್ಬಚ್ಚಿ .. ನಮ್ಮ ಗುಬ್ಬಕ್ಕ
ಗೂಡಿಗೆ ಮರಳಿ ಬಾರೆ.
ಬಾರೆ ಗುಬ್ಬಚ್ಚಿ .. ಮುದ್ದಿನ ಗುಬ್ಬಿ
ಅ೦ಗಳಕೆ ನೀ ಬಾರೆ.
ಬಾರೆ.. ಗುಬ್ಬಕ್ಕ

About these ads
6 Comments Post a comment
  1. May 11 2012

    ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಬೆಳಕು ಚೆಲ್ಲಿದ ಅಮೀರ್ ಅಣ್ಣನಿಗೆ ಅಭಿನಂದನೆಗಳು, ಇಂತಹ ಅಧ್ಬುತ ಕಾರ್ಯಕ್ರಮವನ್ನು ನಮ್ಮ ಮಾತೃಭಾಷೆಯಲ್ಲಿ ನೋಡಲು ಅವಕಾಶ ಮಾಡಿಕೊಡದ ನಮ್ಮವರಿಗೆ ಧಿಕ್ಕಾರ, ಇಲ್ಲಿ ನಮ್ಮ ನಡುವೆಯೇ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಫ್ರೀನ್ ಎಂಬ ಪುಟ್ಟ ಕಂದಮ್ಮನ ಹತ್ಯೆ ಬಗ್ಗೆಯೂ ಸಹ ತಿಳಿಸಬೇಕಿತ್ತು. ಈ ಕಾರ್ಯಕ್ರಮವನ್ನು ನೋಡುತ್ತಾ ಹೋದಂತೆ ನಮ್ಮ ಕಣ್ಣಲ್ಲಿ ನೀರು ತುಂಬುವುದು ತಿಳಿಯೋದೆ ಇಲ್ಲ, ಶಿಕ್ಷಣದ ಮಹತ್ವ, ಗಂಡು ಹೆಣ್ಣು ಎಂಬ ಬೇಧಭಾವ, ಇಂತಹ ಸಾಮಾಜಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಇಂತಹ ಕಾರ್ಯಕ್ರಮ ನಿಜಕ್ಕೂ ಸ್ಲಾಘನೀಯ, ಎಲ್ಲರೂ ಹೇಳಿ, ಸತ್ಯಮೇವ ಜಯತೆ….

    Reply
  2. ANP
    May 11 2012

    Pl tell me how i can watch kannada version of Satyameva Jayate.
    Plz give me the web address or url link.
    Thanksin advance

    Reply
      • ಸುಸಭ್ಯ ದುರಹಂಕಾರಿ...
        May 12 2012

        ರಾಕೇಶಣ್ಣಾ ತುಂಬಾ ಥ್ಯಾಂಕ್ಸ್. ಇದಕ್ಕಾಗಿಯೇ ಕಾಯ್ತಿದ್ದೆ. ವಿಶ್ವಾಸವಿತ್ತು ಯಾರಾದ್ರೂ ಮುಂಚೆಯೇ ಇಳಿಸಿಕೊಂಡಿರ್ತಾರೆ, ಆಮೇಲೆ ಮತ್ತೆ ಅಪ್ಲೋಡ್ ಮಾಡ್ತಾರೆ ಅಂತ…

        Reply
  3. May 12 2012

    ಫೇಸ್ಬುಕ್ ಐಡಿ ಇಲ್ಲದವರು ಈ ಲಿ೦ಕ್ ಮುಖಾ೦ತರ ಸತ್ಯಮೇವ ಜಯತೇ ಕನ್ನಡ ನೋಡಿ :

    http://shihaullal.hpage.co.in/my_videos_28756040.html

    Reply
  4. May 16 2012

    ಯೂ ಟ್ಯೂಬಲ್ಲೂ satya meva jayate in kannada ಅಂತ ಕೊಟ್ರೆ ಸುವರ್ಣದಲ್ಲಿ ಪ್ರಸಾರವಾದ ಸತ್ಯಮೇವ ಜಯತೆಯ ಪೂರ್ಣಭಾಗ ನೋಡಲು ಸಿಗುತ್ತೆ. ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಕಣ್ಣೀರಿಳಿಸುವಂತಹ ಕಾರ್ಯಕ್ರಮ ಮಾಡಿದ ಅಮೀರ್ ಖಾನ್ರಿಗೆ ಅನಂತ ಧನ್ಯವಾದಗಳು.. ಬರೀ ಹೆಣ್ಣಿನ ಬಗ್ಗೆಯೇ ಅಪವಾದ ಮಾಡುತ್ತಿದ್ದ ಅನೇಕ ಜೀವಗಳಿಗೆ ಹೀಗೂ ಇರುತ್ತಾ ಅಂತ ಅನಿಸಿರಲು ಸಾಕು..

    ಮೊನ್ನೆ AIR FM rainbow(103.4 FM) ನಲ್ಲೂ ಅಮೀರ ರ ಈ ಕಾರ್ಯಕ್ರಮ ಪ್ರಸಾರವಾಗುವುದರ ಬಗ್ಗೆ ಕೇಳುತ್ತಿದ್ದೆ. ವಿವಿಧ ಭಾರತಿಯಲ್ಲೂ ಪ್ರಸಾರವಾಗುತ್ತಂತೆ. ಭಾನುವಾರ ೮ಕ್ಕೆ ಏಳ್ತೀರ, ೯ಕ್ಕೆ ಏಳ್ತೀರ. ಇಲ್ಲ, ಅಬ್ಬಬ್ಬಾ ಅಂದ್ರೆ ಹತ್ತಕ್ಕೆ ಏಳ್ತೀರ.. ಬನ್ನಿ ೧೧ ಕ್ಕೆ. ನನ್ನೊಂದಿಗೆ.. ನಿಮ್ಮನ್ನು ಏಳಿಸ್ತೀನಿ ಹೊಸ ತರ..
    ಅಮೀರ್ ನ ಈ ಮಾತುಗಳನ್ನ FM ಅಲ್ಲಿ ಕೇಳ್ತಾ ಇದ್ರೆ ಒಮ್ಮೆ ಅಬ್ಬಾ ಅನ್ನಿಸುತ್ತೆ. ಕಾರ್ಯಕ್ರಮವಂತೂ ಮೈ ಜುಂ ಅನಿಸುತ್ತೆ. ಹರಿಯೋ ನೀರು ನಮ್ಮೂರಿಗೆ ಬರಬಾದ್ರು ಅಂದ್ರೆ ಬಾಯಾರಿದವ್ರು ಬೇರೆ ಕಡೆ ಹೋಗ್ತಾರಷ್ಟೆ. ಅದೇ ತರ ಅನಿಸ್ತಿದೆ ಈ ಡಬ್ಬಿಂಗ್ ವಿರೋಧಿ ವಾದ. ನಮ್ಮತನಕ್ಕೆ ಮಾರಕವಾಗದ ರೀತಿಯ ಯಾವುದು ಬಂದರೂ ಬರಲಿ ಅಲ್ಲವೇ ?

    ಒಂದು ಉತ್ತಮ ಲೇಖನಕ್ಕೆ ಅಭಿನಂದನೆಗಳು :-)

    Reply

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Note: HTML is allowed. Your email address will never be published.

Subscribe to comments

Follow

Get every new post delivered to your Inbox.

Join 1,257 other followers