Skip to content
26

ನಿಲುಮೆಯ ನಿಲುವು

ಪ್ರೀತಿಯ ಗೆಳೆಯರೇ,

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…

ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ.ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ.ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ.ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು.

ಇಲ್ಲಿ ಒಂದಿಷ್ಟು ಹಾಸ್ಯ,ಹತಾಶೆ,ನೋವು,ಸಿಟ್ಟು,ಸೆಡವು,ಪ್ರಚಲಿತ ವಿದ್ಯಮಾನಗಳು,ಕಥೆ-ವ್ಯಥೆಗಳು,ಇತಿಹಾಸ, ದೇಶ, ಭಾಷೆ,ಧರ್ಮ,ಸಿನೆಮ,ಪುಸ್ತಕ ಪರಿಚಯ ಎಲ್ಲ ಸಿಗುತ್ತದೆ.

ನಮ್ಮ ನಮ್ಮ ಅಭಿಪ್ರಾಯಗಳನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಬೇಕೆಂಬ ಆಶಯವೆ ಈ ನಿಲುಮೆ.ನಿಲುಮೆಯೊಳಗೆ ಒಂದು ಸುತ್ತು ಹೊಡೆದು ಬನ್ನಿ,ನಿಮ್ಮ ಅಭಿಪ್ರಾಯ ತಿಳಿಸಿ.ಸಾಧ್ಯವಾದಲ್ಲಿ ನಿಮ್ಮ ಒಂದು ಲೇಖನ ಯಾ ಕವನಗಳನ್ನು ನಮಗೆ ಕಳುಹಿಸಿದರೆ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೂ ಸೇರಿದಂತಾಗುತ್ತದೆ. ನಿಮ್ಮ ಲೇಖನಗಳನ್ನು nilume@sify.com  ಅಥವಾ

baraha@nilume.netಇ-ಮೇಲ್ ವಿಳಾಸಕ್ಕೆ ಕಳುಹಿಸಿ.ಹನಿಹನಿ ಸೇರಿದರೆ ಹಳ್ಳ- ತೆನೆತೆನೆಗೂಡಿದರೆ ಬಳ್ಳ ಅನ್ನೋ ಮಾತಿದೆಯಲ್ಲ ಹಾಗೆಯೇ,

‘ನಿಲುಮೆ’ಯನ್ನ ಕನ್ನಡ ಸಾಹಿತ್ಯ ಪ್ರಪಂಚದ ಮನೆ ಮಾತಾಗಿಸುವ ಬನ್ನಿ.ಈ ನಿಲುಮೆ ಬರಿ ನಮ್ಮದಲ್ಲ ಇದು ನಿಮ್ಮದು,ಪ್ರತಿಯೊಬ್ಬ ಕನ್ನಡಿಗನದು.

ನಿಮ್ಮ ಅಭಿಪ್ರಾಯಗಳು ಕನ್ನಡದಲ್ಲಿದ್ದರೆ ಚೆನ್ನ.ಸುಲಭವಾಗಿ ಕನ್ನಡದಲ್ಲಿ ಬರೆಯಲು ಇಲ್ಲಿ ಕ್ಲಿಕ್ಕಿಸಿ.

ನಿಮ್ಮೊಲುಮೆಯ
ನಿಲುಮೆ


(ಲೇಖನದ ಅಭಿಪ್ರಾಯಗಳು ಆಯಾ ಲೇಖಕರಿಗೆ ಸಂಬಂದಿಸಿದ್ದು.’ನಿಲುಮೆ’ ನಿರ್ವಹಣೆ ತಂಡ ಜವಾಬ್ದಾರರಾಗಿರುವುದಿಲ್ಲ)

26 Comments Post a comment
  1. Prathibha Kudthadka
    Oct 28 2010

    good… all the best…..

    Reply
  2. Oct 28 2010

    ಧನ್ಯವಾದಗಳು ಮೇಡಮ್

    Reply
  3. kv
    Jan 10 2011

    good effort.. best wishes for nilume team… lay out innu chennagi madbahuditthu… innastu olleya article prakatisi..

    Reply
    • Jan 10 2011

      ನಿಮ್ಮ ಸಲಹೆಯ ಬಗ್ಗೆ ಖಂಡಿತ ಗಮನಹರಿಸುತ್ತೇವೆ.
      ಧನ್ಯವಾದಗಳು,

      ನಿಮ್ಮೊಲುಮೆಯ,
      ನಿಲುಮೆ

      Reply
  4. Karthik
    Jan 11 2011

    Thumba chennagide nimma uddhesha nilume beleyali……..

    Reply
  5. ಪ್ರಯತ್ನ ಎಂಬ ಕಡಲಲ್ಲಿ ಗುರಿಯ ಬೆಂಬತ್ತಿ ಈಜಿದರೆ…..ನಿಲುಮೆ ತಾಣದ ಆಳದ ಮಹಿಮೆ ಜಗತ್ತಿಗೇ ತಿಳಿಯುವುದು…
    ಒಳ್ಳೆಯ ಪ್ರಯತ್ನ..
    ಶುಭವಾಗಲಿ…

    Reply
  6. Arjun
    Feb 18 2011

    ನಿಮ್ಮ ಅಂಕಣಗಳು ತುಂಬಾ ಚೆನ್ನಾಗಿದೆ. ಮುಂದುವರೆಸಿ, ನಿಮ್ಮಿಂದ ಪ್ರೆರಿತರಾಗಿದ್ದೇವೆ

    Reply
  7. Feb 22 2011

    ನಿಲುಮೆ 20 ಸಾವಿರ ಹಿಟ್ಸ್ ದಾಟಿದೆ; ಕಂಗ್ರಾಟ್ಸ್

    Reply
  8. Vinod Phadke
    Mar 8 2011

    ನಿಲುಮೆಯನ್ನು ಪ್ರಥಮ ಬಾರಿಗೆ ನೋಡಿದೆ/ಓದಿದೆ. ತುಂಬಾ ಚೆನ್ನಾಗಿದೆ. ನಿಮಗೆ ಅಭಿನಂದನೆಗಳು.

    Reply
    • Mar 13 2011

      ಮೆಚ್ಚಿ ಪ್ರತಿಕ್ರಿಯಿಸಿದ ಕಾರ್ತಿಕ್,ಲೋಕು,ಅರ್ಜುನ್,ಚುಕ್ಕಿ ಚಂದಿರ ಮತ್ತು ವಿನೋದ್ ಪಡ್ಕೆ ಅವರಿಗೆ ವಂದನೆಗಳು
      ಪ್ರೋತ್ಸಾಹ ಹೀಗೆ ಇರಲಿ :)

      ನಿಮ್ಮೊಲುಮೆಯ,
      ನಿಲುಮೆ

      Reply
  9. ಕನ್ನಡ ವೆಬ್ ಸೈಟ್ ನೀಡಿದ್ದಕ್ಕೆ ಧನ್ಯವಾದಗಳು!!

    Reply
  10. mudradi surendra
    May 12 2011

    ನಿಲುಮೆಯ ಲೋಕಕ್ಕೆ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.

    Reply
  11. anand prasad
    May 27 2011

    ಉತ್ತಮ ಪ್ರಯತ್ನ. ಶುಭವಾಗಲಿ.

    Reply
  12. ravins
    Jun 19 2011

    ತುಂಬಾ ಖುಷಿಯಾಗ್ತಿದೆ.. ಒಳ್ಳೆಯ ಪ್ರಯತ್ನ…

    Reply
  13. ದೊಡ್ಡಿಪಾಳ್ಯ ನರಸಿಂಹಮೂರ್ತಿ.
    Aug 7 2011

    ಆಗು ನೀ ಅನಿಕೇತನ….. ನಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ. ಧನ್ಯವಾದಗಳು.
    —- dmnmurthy@gmail.com

    Reply
  14. Oct 29 2011

    Nimma website darushana ivattu aayithu. Chennagide odalu.
    All the best
    Umesh Nagasandra
    Vice President,
    Adelaide kannada Sangh Inc
    Australia

    Reply
  15. suchupachu
    Dec 15 2011

    ಕಾದಂಬರಿ ಲೋಕ ಇಲ್ಲಿದೆ ನೋಡಿ ಓದಿ ಆನಂದಿಸಿ ಅಂತ ಇದಿಯಲ್ಲ… ಅದುನ್ನ ನೀವು ಸೆಪ್ಟೆಂಬರ್ ನಲ್ಲಿ ಅಪ್ಡೇಟ್ ಮಾಡಿದ್ದು ಮತ್ತೆ ಮಾಡಿಲ್ಲ ಮತ್ತೆ ಅಪ್ಡೇಟ್ ಮಾಡ್ತಿರಾ….ಕಾದಂಬರಿ ತುಂಬ ಚೆನ್ನಾಗಿದೆ ಎಲ್ಲವು……

    Reply
  16. krishna
    Dec 30 2011

    ಅರೆ,ಇದೆನು ನಮ್ಮ ಕನ್ನದ ಅಕ್ಷರಗಳನು ಇಲ್ಲಿ ಬರೆಯಬಹುದು ಇದು ನಿಜವಾಗಿಯು ಸುಂದರ ಮತ್ತು ಅದ್ಬುತ ತ್ಯಾಂಕ್ಸ್ ಟು ಸ್ಲೇಟು

    Reply
  17. Sangamesh P H
    Jan 20 2012

    ನಿಮ್ಮ ವೆಬ್ ಸೈಟ್ ನೋಡಿ ತುಂಬಾ ಖುಷಿಯಾಯಿತು. ಕನ್ನಡಕ್ಕಾಗಿ ನೀವು ಮಾಡ್ತಾ ಇರುವ ಸೇವೆಗೆ ನನ್ನ ಹೆಗಲನ್ನು ಕೊಡ್ತೇನೆ.
    ಶುಭವಾಗಲಿ.

    Reply
  18. Mar 17 2012

    good powerfull

    Reply
  19. Mar 19 2012

    ನಿಲುಮೆಯ ಪ್ರಯತ್ನಕ್ಕೆ ಹಾರ್ಧಿಕ ಅಭಿನಂದನೆಗಳು! ಆದರೆ, ವೆಬ್ ಸೈಟ್ ನ ವಿನ್ಯಾಸ ಇನ್ನಷ್ಟು ಉತ್ತಮಗೊಳಿಸುವ ಕಡೆ ಗಮನ ಹರಿಸಬೇಕಾದ ಅಗತ್ಯತೆ ಇದೆ ಅನ್ನಿಸುತ್ತಿದೆ. ನಿಮ್ಮ ಡೆವಲಪರ್ WordPressನಲ್ಲಿ Traction theme ಮಾತ್ರ ಇನ್ಸ್ಟಾಲ್ ಮಾಡಿ ಕೈ ತೊಳೆದುಬಿಟ್ಟಿದ್ದಾರೇನೋ?

    ನನ್ನ ವೈಯಕ್ತಿಕ ಸಲಹೆ:
    ನೀವು http://janathe.com ವೆಬ್ ಸೈಟ್ ಒಂದು ಸಲ ನೋಡಲೇಬೇಕು ಅಥವಾ ಅದರ ಡೆವಲಪರ್ ಜತೆ ಮಾತನಾಡಲೇಬೇಕು. ಖಂಡಿತಾ ನಿಮ್ಮ http://nilume.net ಅನ್ನು ಇನ್ನೂ ಉತ್ತಮವಾಗಿ ಅಭಿವೃದ್ಧಿಪಡಿಸಬಹುದು.

    Reply
  20. Apr 15 2012

    @ ನಿಲುಮೆ : ನಿಮ್ಮಲ್ಲಿ ಯಾವುದೇ ಗುಪ್ತ ಕಾರ್ಯಸೂಚಿಗಳು ಇರಲಿ ಬಿಡಲಿ, ಮೇಲೇ ವಿವರಿಸಿದ ನಿಲುವುಗಳಂತೂ ಒಪ್ಪುವಂತಿವೆ. :) ನಿಮ್ಮೀ ಪ್ರಯತ್ನ ಈವರೆಗೂ ಅಭಿನಂದನಾರ್ಹವಾಗಿಯೇ ಇದೆ. :)

    ಆದರೆ ತಾವು ತಮ್ಮ ನಿಲುವುಗಳನ್ನು ಮತ್ತಷ್ಟು ಸ್ಪಷ್ಟಪಡಿಸುವ ಅಗತ್ಯ ‘ಅಭಿಗಾರ’ ಸರಣಿಯ ಇತ್ತೀಚಿನ ಲೇಖನಗಳಿಂದ ಎದುರಾಗಿದೆ. ತಾವು ದಯಮಾಡಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಿರೆಂದು ಭಾವಿಸಿದ್ದೇನೆ.

    ೧) ನಿಮ್ಮಲ್ಲಿ ಯಾರು ಯಾವ ಲೇಖನವನ್ನು ಹೇಗೆ ಬರೆದು ಕಳಿಸಿದರೂ ಹಾಕುತ್ತೀರೇನು? ಪ್ರಕಟಣೆಗೆ ಲೇಖನ ಯೋಗ್ಯವೋ ಅಲ್ಲವೋ, ಸರಣಿ ಮುಂದುವರಿಕೆಗೆ ಲೇಖಕ ಯೋಗ್ಯನೋ ಅಲ್ಲವೋ ಎಂದು ನಿರ್ಧರಿಸುವ ಯಾವ ಮಾನದಂಡಗಳೂ ನಿಮ್ಮಲ್ಲಿ ಇರುವುದಿಲ್ಲವೇ?

    ೨) ‘ಲೇಖನಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆ ಆಯಾ ಲೇಖಕರೇ ಹೊಣೆ’ ಎಂದರೇನೋ ಸರಿ, ಆದರೆ ಲೇಖನಗಳ ಮತ್ತು ಅವುಗಳಲ್ಲಿನ ಭಾಷೆಯ ಗುಣಮಟ್ಟದ ಕುರಿತೂ ನಿಲುಮೆ ತಂಡಕ್ಕೆ ಬದ್ಧತೆ-ಜವಾಬ್ದಾರಿ ಇರುವುದಿಲ್ಲವೇ?

    ೩) ‘ಅಂತರ್ಜಾಲ-ಅನಾಮಿಕತ್ವ’ದ ಬಗ್ಗೆ, ಮತ್ತು ಓದುಗರ ಬಗ್ಗೆ ‘ನಿಲುಮೆ’ ತಂಡಕ್ಕೆ ಗೌರವವಿರುವುದಿಲ್ಲವೇ? ಇರುವುದಿಲ್ಲವೆಂದಾದರೆ ತಂಡದ ಸದಸ್ಯರು ತಮ್ಮ ತಮ್ಮ ಇತ್ಯೋಪರಿಗಳನ್ನೂ ಬಹಿರಂಗಪಡಿಸುವಿರೇ?

    ವೇದಿಕೆಯೊದಗಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. :)

    Reply
    • Apr 15 2012

      ಓದುಗರೇ,

      ನಿಲುಮೆ ತನ್ನ ನಿಲುವಿಗೆ ಇದುವರೆಗೂ ಮತ್ತು ಮುಂದಕ್ಕೂ ಬದ್ಧವಾಗಿಯೇ ಇರುತ್ತದೆ.ನಿಲುಮೆ ತಂಡದ ಎಲ್ಲರೂ ತಮ್ಮ ಕೆಲಸ-ಕಾರ್ಯಗಳ ನಡುವೆ ನಿಲುಮೆಯನ್ನ ನಿರ್ವಹಿಸುವುದರಿಂದ ಕೆಲವೊಮ್ಮೆ ನಮ್ಮ ಕಣ್ತಪ್ಪಿ ಇಂತ ಪ್ರಮಾದಗಳು ಆಗುತ್ತವೆ.ಹಾಗಂತ ನಾವು ಅದನ್ನೇ ಮುಂದಿಟ್ಟುಕೊಂಡು ಎಲ್ಲ ತಪ್ಪುಗಳಿಗೂ ಸಮಜಾಯಿಷಿ ನೀಡಿ ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ’ಅಭಿಗಾರ’ ಸರಣಿಯ ಈ ಬಾರಿಯ ಲೇಖನದ ಬಗ್ಗೆ ನಮ್ಮ ನಿಲುವೇನು ಅನ್ನುವುದು ಲೇಖಕರಿಗೆ ತಿಳಿಸಲಾಗಿದೆ.ಇನ್ನು ಮುಂದೆ ಇಂತ ’ಧಾಟಿ’ಯ ಲೇಖನಗಳು ಪ್ರಕಟವಾಗುವುದಿಲ್ಲ.

      ಇನ್ನ ನಿಲುಮೆಯಲ್ಲಿ ಯಾರ್ಯಾರು ಇದ್ದಾರೆ ಅನ್ನುವ ಪ್ರಶ್ನೆಗೆ ಉತ್ತರವಾಗಿ “ನಾವ್ಯಾರು?” ಅನ್ನುವುದರಲ್ಲೇ ನಾವೇಕೆ ನಮ್ಮ ಹೆಸರನ್ನ ಹೇಳಿಕೊಳ್ಳಲು ಬಯಸುವುದಿಲ್ಲ ಅಂತ ಹೇಳಿದ್ದೇವೆ.

      “ನಿಲುಮೆ ತಂಡದಲ್ಲಿ ಯಾರು ಯಾರು ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು. ಯಾವುದೇ ಹಿಡನ್ ಅಜೆಂಡಾವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ, ಅದಕ್ಕೆ ಕಾರಣ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು. ಇವರೇ ಮುಖ್ಯವಾದಾಗ ನಾವು ನಮ್ಮ ಹೆಸರು ಹೇಳಿಕೊಂಡು ಓಡಾಡುವುದು ತೋರಿಕೆಯಾಗಬಹುದು ಅನ್ನುವ ಕಾರಣಕ್ಕಾಗಿ ಮಾತ್ರ. ನಾವು ಮಾಡುತ್ತಿರುವ ಚಿಕ್ಕ ಕೆಲಸಕ್ಕೆ ದೊಡ್ಡ ಪ್ರಚಾರ ಬೇಡ ಎಂಬ ಕಾರಣಕ್ಕಾಗಿಯಷ್ಟೆ… ”

      ನಿಮ್ಮೊಲುಮೆಯ,
      ನಿಲುಮೆ

      Reply
      • Apr 21 2012

        ಪ್ರಿಯ ನಿಲುಮೆ,
        ಹಿಂದಿನಿಂದಲೂ ಇದರಲ್ಲಿ ಬರುತ್ತಿದ್ದ ಚೆನ್ನು ಚೆನ್ನಾದ ಲೇಖನಗಳನ್ನು ಓದುತ್ತಾ ಪ್ರಭಾವಿತನಾದವನು ನಾನು. :)
        ಈಗೀಗ ಬಹುಶಃ comment ಹಾಕುವಾಗಿನ ಭಾಶೆಯಮೇಲೂ ‘ನಿಲುಮೆ ತಂಡ’ ಕತ್ತರಿ ಪ್ರಯೋಗ ಮಾಡಿದರೆ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಕೆಟ್ಟ ಪ್ರಭಾವ ಆಗದೆಂದು ಭಾವಿಸುತ್ತೇನೆ. (ದನಾನ್ ಬೇಕಿದ್ರೆ ತಿಂದ್ಕೊಳ್ಳಿ ಲೇಖನ)

        ಮುಂದೆಯೂ ನಿಮ್ಮಲ್ಲಿ ಒಳ್ಳೊಳ್ಳೆ ಲೇಖನಗಳು ಬರುತ್ತಿರಲಿ ಎಂಬುದೇ ಆಶಯ.

        Reply
        • Apr 22 2012

          ಪ್ರತಿಕ್ರಿಯೆಗಳನ್ನ ಮಾಡರೇಟ್ ಮಾಡುವ ಮನಸ್ಸು ನಮಗಿಲ್ಲ.ವಾಕ್ ಸ್ವಾತಂತ್ರ್ಯದ ಬಗ್ಗೆ ಭಾಷಣ ಬಿಗಿದು ಹಾಗೆ ಮಾಡುವುದು ಸರಿಯೂ ಆಗಲಿಕ್ಕಿಲ್ಲ ಅನ್ನುವ ಕಾರಣಕ್ಕಾಗಿ.ಎಲ್ಲೋ ಇಬ್ಬರು-ಮೂವರು ಕೊಟ್ಟ ಸ್ವಾತಂತ್ರ್ಯವನ್ನ ಸ್ವೇಚ್ಚೇಯಾಗಿ ಬಳಸಿಕೊಂಡಾಗ ಬೇಸರವಾಗುತ್ತದೆ.

          ಪ್ರತಿನಿತ್ಯ ಬರುವ ಕಮೆಂಟುಗಳನ್ನ ನೋಡುತ್ತ ಕೂರುವುದು ತ್ರಾಸದಾಯಕ.ಓದುಗರು ನಮ್ಮ ಗಮನಕ್ಕೆ ತಂದರೆ ಅಂತ ಕಮೆಂಟುಗಳನ್ನ ಅಳಿಸಿ ಹಾಕುತ್ತೇವೆ. ಮತ್ತು ಪ್ರತಿಕ್ರಿಯಿಸುವವರು ಅದೇ ರೀತಿ ಅಶ್ಲೀಲ ಭಾಷೆಯಲ್ಲಿ ಮುಂದುವರೆದರೆ ಅಂತವರ ಕಮೆಂಟುಗಳಿಗೆ ಸೀದಾ ಕಸದ ಬುಟ್ಟಿಯ ಹಾದಿ ತೋರುತ್ತೇವೆ.

          ವಿದ್ಯಾವಂತರಾದವರೇ ಹೀಗೆ ಬೀದಿ ಜಗಳಕ್ಕೆ ನಿಂತಂತೆ ಪ್ರತಿಕ್ರಿಯುಸುವುದೂ ನೋಡಿದರೆ ಇವರೆಲ್ಲ ಓದಿಕೊಂಡವರ ಅನ್ನಿಸುತ್ತದೆ

          Reply
  21. ಕಮೆಂಟುಗಳನ್ನು ಬರೆಯುವ ವ್ಯಕ್ತಿಗಳ ‘ಭಾಷೆ’ಗೆ ಇತಿ-ಮಿತಿಯನ್ನು ನಿಗದಿಪಡಿಸಲು ಅಸಾಧ್ಯವಾದ ಸಂಗತಿ. ಅವುಗಳನ್ನು ಕೂಲಂಕುಶವಾಗಿ ಪರಿಶೀಲಿಸಲು ಕಷ್ಟಸಾಧ್ಯವಾದರೂ, ಕನಿಷ್ಟ ಕಣ್ಣಾಡಿಸಿದರೂ, ಬರವಣಿಗೆಯ ಸ್ವಾಸ್ಥ್ಯ ಕಾಯ್ದುಕೊಳ್ಳಬಹುದಲ್ಲದೇ, ಇತರ ಸಂಭಾವಿತ ಓದುಗರಿಗೆ ಆಗುವ ಕಿರಿಕಿರಿಯನ್ನು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದು.. ಇದರ ಬಗ್ಗೆ ನಿಲುಮೆ ತಂಡ ಚಿಂತನೆ ನಡೆಸಬೇಕಾಗಿದೆ..?

    Reply

Leave a comment

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Note: HTML is allowed. Your email address will never be published.

Subscribe to comments

Follow

Get every new post delivered to your Inbox.

Join 265 other followers