Skip to content

Posts from the ‘ಕರ್ನಾಟಕ,ಕನ್ನಡ’ Category

18
May

ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’

- ರಾಕೇಶ್ ಶೆಟ್ಟಿ

Sidduಮೇ೮ರಂದು ರಾಜ್ಯದ ರಾಜಕೀಯ ಪಂಡಿತರ ಲೆಕ್ಕಾಚಾರಗಳೆಲ್ಲ ತಲೆಕೆಳಕಾಗಿ ಖುದ್ದು ಕಾಂಗ್ರೆಸ್ಸಿಗರೇ ತಮ್ಮ “ಕೈ” ಚಿವುಟಿ ಚಿವುಟಿ ಕನಸೋ ನನಸೋ ಅನ್ನುವಷ್ಟರಲ್ಲಿ ಕಾಂಗ್ರೆಸ್ಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.ಪರಮೇಶ್ವರ್ ಸೋಲಿನಿಂದ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿಯೂ ಆಗಿಬಿಟ್ಟರು.

ಅತ್ತ ಕಾಂಗ್ರೆಸ್ಸ್ ಗೆದ್ದಿದ್ದೇ ತಡ,ಇತ್ತ ನಮ್ಮ ನಾಡಿನ ಪ್ರಗತಿಪರರು,ಬುದ್ದಿಜೀವಿಗಳು,ಸಾಕ್ಷಿಪ್ರಜ್ನೆಗಳು ಚುನಾವಣಾ ಫಲಿತಾಂಶದ ಬಗ್ಗೆ ಬರೆಯಲು ಕುಳಿತರು ನೋಡಿ. ಶುರುವಾಯ್ತು ಪದಪುಂಜಗಳ ಪಟ್ಟಿ.ಹೆಚ್ಚು ಕಡಿಮೆ ಆ ಎಲ್ಲಾ ಬರಹಗಳೂ ಈ ಧಾಟಿಯಲ್ಲಿದ್ದವು.

“ಸಂಘ ಪರಿವಾರದ ಪುಂಡಾಟಿಕೆಯಿಂದ,ವಿಷಮಯವಾದ ಹಿಂದುತ್ವದ ಅಜೆಂಡಾ,ಮತಾಂಧತೆ ಇತ್ಯಾದಿ ಇತ್ಯಾದಿಗಳಿಂದ ಅಲ್ಪಸಂಖ್ಯಾತರ ಜೀವನ ನರಕವಾಗಿದ್ದ ಕರ್ನಾಟಕ”ವನ್ನು ನೋಡಿ ಸಹಿಸಲಾಗದ ನಾಡಿನ ಪ್ರಜ್ಞಾವಂತ, ಪ್ರಗತಿಪರ,ಸಂವೇದನಾಶೀಲ,ಸಾಕ್ಷಿಪ್ರಜ್ನೆ ಕನ್ನಡಿಗರು ಕಾಂಗ್ರಸ್ ಪರ ನಿಂತರಂತೆ…!

ನಿಜವಾಗಿಯೂ ಕನ್ನಡಿಗರು ಕಾಂಗ್ರೆಸ್ಸ್ ಪರ ಮತ ಚಲಾಯಿಸದರೆ ಅಂತ ನೋಡ ಹೊರಟರೆ, ೬ ಸ್ಥಾನ ಗೆದ್ದ ಕೆ.ಜೆ.ಪಿ ೩೯ ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೆ,ಬಿ.ಜೆ.ಪಿ ಸುಮಾರು ೩೦ ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೆ,ಬಿ.ಆಸ್.ಆರ್ ಗೆದ್ದಿದ್ದು ೪ ಸೀಟುಗಳನ್ನು.ಅಂದರೆ ಬಿಜೆಪಿ+ಕೆಜೆಪಿ+ಬಿ.ಆಸ್.ಆರ್ ನಡುವೆ ಮತಗಳು ಚೆಲ್ಲಾಪಿಲ್ಲಿಯಾಗಿರುವುದರಿಂದ ಕಾಂಗ್ರೆಸ್ಸು ಗೆದ್ದಿದೆ.ಬಹುಷಃ ಬಿಜೆಪಿಯಿಂದ ಯಡ್ಯೂರಪ್ಪ ಹೊರಹೋಗದಿದ್ದರೆ ೮೦ರ ಹತ್ತಿರ ಬಂದು ತಲುಪುತಿತ್ತು.ಇನ್ನೂ ಸರಳವಾಗಿ ಹೇಳಬೇಕೆಂದರೆ ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ ಅಷ್ಟೆ.ಗೆಲ್ಲಲ್ಲಿಕ್ಕೆ ಕಾಂಗ್ರೆಸ್ಸ್ ಏನಾದರೂ ವಿರೋಧ ಪಕ್ಷ ಕೆಲಸವನ್ನಾದರೂ ಸರಿಯಾಗಿ ನಿಭಾಯಿಸಿತ್ತೇ? ಇದೊಂತರ ಕೋಗಿಲೆ ಗೂಡಲ್ಲಿ ಕಾಗೆ ಮೊಟ್ಟೆ ಇಟ್ಟ ಹಾಗೆ …!!! ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆದು ಸಮರ್ಥ ವಿರೋಧ ಪಕ್ಷದ ಕೆಲಸ ಮಾಡಿದ್ದು ಜೆಡಿಎಸ್,ಗೆದ್ದಿದ್ದು ಕಾಂಗ್ರೆಸ್ಸ್ …!!!

ಇನ್ನು ಬಿಜೆಪಿ ಸೋಲಿಗೆ ಕಾರಣಗಳನ್ನು ದುರ್ಬೀನು ಹಾಕಿಕೊಂಡೇನು ಹುಡುಕಬೇಕಿಲ್ಲ.ಸಾಲು ಸಾಲು ಡಿ-ನೋಟಿಫಿಕೇಷನ್,ಭ್ರಷ್ಟಾಚಾರದ ಹಗರಣಗಳು,ಬ್ಲೂ-ಫಿಲಂ ಕರ್ಮಕಾಂಡ ಅದು ಇದು ಅಂತಲೇ ಪಟ್ಟಿ ಮಾಡಿಬಿಡಬಹುದು.ಇವೆಲ್ಲಕ್ಕೂ ಕಳಶವಿಟ್ಟಂತೆ ಬಿಜೆಪಿಯ ಮಾಸ್ ನಾಯಕ ಯಡ್ಯೂರಪ್ಪರನ್ನು, ಬೆಂಗಳೂರಿನ ತನ್ನ ಕ್ಷೇತ್ರವೊಂದನ್ನು ಬಿಟ್ಟು ಇನ್ನೆಲ್ಲೂ ನಿಂತು ಒಂದು ಸಂಸದನ ಸ್ಥಾನ ಗೆಲ್ಲಲಾಗದ ರಾಷ್ಟ್ರೀಯ ನಾಯಕ(?)ರೊಬ್ಬರ ಕುತಂತ್ರದಿಂದ ಪಕ್ಷ ತೊರೆದು ಹೋಗುವಂತೆ ಮಾಡಿದ್ದು ಮುಖ್ಯ ಕಾರಣ.ಇನ್ನು ದಕ್ಷಿಣ ಕನ್ನಡದಲ್ಲಿ ಹಾಲಾಡಿ,ಯೋಗಿಶ್ ಭಟ್,ನಾಗರಾಜ್ ಶೆಟ್ಟಿ ಅಂತವರ ವಿಷಯದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ನಡೆದುಕೊಂಡ ರೀತಿಯಿಂದ ಮತ್ತು  ಸದಾನಂದ ಗೌಡರನ್ನ ವಿನಾಕಾರಣ ಕುರ್ಚಿಯಿಂದ ಇಳಿಸಿದ್ದು ಬಿಜೆಪಿಗೆ ಮುಳುವಾಯಿತು.

Read more »

1
May

ನಾಯಕರಿಗೊಂದು ದಿಕ್ಸೂಚಿ…

- ಮಧುಚಂದ್ರ ಭದ್ರಾವತಿ 

c39ಸ್ವತಂತ್ರ ಪೂರ್ವದ ಹಿಂದೆ ನಡೆದ ಘಟನೆ, 

ಮುಂಬೈ ನಗರದ ರೈಲ್ವೆ ನಿಲ್ದಾಣ, ಬೆಂಗಳೂರಿನಿಂದ ರೈಲು ಬಂದು ನಿಂತಿತ್ತು. ಮೈಸೂರಿನ ದಿವಾನರಾದ ಮಾಧವರಾಯರು ಕಾರ್ಯನಿಮಿತ್ತವಾಗಿ ದೆಹಲಿಗೆ ಹೊರಟಿದ್ದರು. ಮುಂಬೈ ರೈಲ್ವೆ ನಿಲ್ದಾಣದಲ್ಲಿ  ದೆಹಲಿಗೆ ಹೋಗಲು ರೈಲನ್ನು ಬದಲಿಸಬೇಕಿತ್ತು. ದೆಹಲಿಗೆ ಹೊರಡುವ ರೈಲು ಇನ್ನು ಬಂದಿರಲಿಲ್ಲ ಸುಮಾರು ೫ ಘಂಟೆ ರೈಲ್ವೆ ನಿಲ್ದಾಣದಲ್ಲಿ ಕಾಯಬೇಕಿತ್ತು. ಆಗ ಮೈಸೂರಿನ ದಿವಾನರು ಬದಲಿ ರೈಲು ಬರುವ ಒಳಗೆ ಪೇಟೆ ಸುತ್ತಿ ಬರುವ ಯೋಚನೆ ಮಾಡಿ ಹೊರಟು ಹೋದರು.

ಮೈಸೂರಿನ ದಿವಾನರ ಪ್ರಯಾಣವನ್ನು ಪತ್ರಿಕೆಯ ಮೂಲಕ ಅರಿತಿದ್ದ, ಸುಮಾರು ೮೨ ವರ್ಷದ ವ್ಯಕ್ತಿಯೊಬ್ಬರು ದಿವಾನರನ್ನು ಕಾಣಲು ಬಂದರು. ಅವರಿಗೆ ದಿವಾನರು ಇಲ್ಲದಿರುವುದು  ಅವರ ಆಪ್ತಕಾರ್ಯದರ್ಶಿಯಿಂದ ತಿಳಿಯಿತು.  ಅ ೮೨ ವರ್ಷದ ವ್ಯಕ್ತಿಯನ್ನು ಗುರುತಿಸಿದ  ದಿವಾನರ ಆಪ್ತಕಾರ್ಯದರ್ಶಿ ಅವರನ್ನು ದಿವಾನರ ಬೋಗಿಯೊಳಗೆ ಕುಳಿತು ಕೊಳ್ಳಲು ಮನವಿ ಮಾಡಿದರು. 

” ದಿವಾನರು ಇಲ್ಲದಾಗ ಅವರ ಕೋಣೆಯನ್ನು ಪ್ರವೇಶಿಸುವುದು ಉಚಿತವಲ್ಲ ” ಎಂದು ಹೇಳಿ  ನಯವಾಗಿ ತಿರಸ್ಕರಿಸಿದರು ಅ ಹಿರಿಯರು. 

ದಿವಾನರು ದೆಹಲಿಗೆ ಹೊರಡುವ ಮುನ್ನ ಆಂಗ್ಲರ ನೀತಿಯನ್ನು ದಿಕ್ಕರಿಸಿದ ಮೈಸೂರಿನ ಜನತೆ , ಅಂಗ್ಲರ ವಿರುದ್ದ ಪ್ರತಿಭಟನೆಗೆ ಇಳಿದಿದ್ದರು. ಟೆಲಿಫೋನ್ ತಂತಿಗಳನ್ನು ಕತ್ತರಿಸಿದರು, ಅಂಚೆ ಕಛೇರಿಗೆ ಬೆಂಕಿ ಹಚ್ಚಿದ್ದರು , ರೈಲ್ವೆ ಕಂಬಿ ಕಿತ್ತರು ,  ಪ್ರತಿಭಟನೆ ಇನ್ನಷ್ಟು  ಉಗ್ರವಾಯಿತು. ಅಗ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಗುಂಡು ಹಾರಿಸಿದರು, ಹಲವಾರು ನಾಗರೀಕರು ಪ್ರಾಣ ತೆತ್ತರು.   

15
Apr

ಸಾಹಿತ್ಯ ಪರಂಪರೆಯ ಅರಿವಿಲ್ಲದ ’ಎಲ್ಲರ ಕನ್ನಡ’

ಡಾ. ಮಾಧವ ಪೆರಾಜೆ ಅವರ ಲೇಖನಕ್ಕೊಂದು ಪೂರಕ ಪ್ರತಿಕ್ರಿಯೆ

- ಡಾ. ಮೋಹನ ಕುಂಟಾರ್

imagesಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣದ ಮೂಲಕ ಡಿ.ಎನ್.ಶಂಕರಭಟ್ಟರು ಕನ್ನಡ ಬರವಣಿಗೆಯಲ್ಲಿ ಹೊಸ ಕ್ರಾಂತಿಯನ್ನು ಮಾಡಲು ಮುಂದಾಗಿದ್ದಾರೆ. ಅವರ ಮಾರ್ಗದಲ್ಲೇ ಮುಂದುವರಿಯುವ ಅವರ ಶಿಷ್ಯವರ್ಗ ಅದನ್ನೇ ಸಮರ್ಥಿಸಿ ಕೃತಿರೂಪಕ್ಕೆ ಇಳಿಸುತ್ತಿದೆ. ಒಂದು ರೀತಿಯಲ್ಲಿ ಇದು ಅತಿಬುದ್ಧಿವಂತಿಕೆಯ ಪ್ರದರ್ಶನವಲ್ಲದೇ ಬೇರೇನೂ ಅಲ್ಲ.

ಕನ್ನಡಕ್ಕೆ ಭಾಷಿಕವಾಗಿಯೂ ಸಾಹಿತ್ಯಿಕವಾಗಿಯೂ ಗೌರವ ತರುವ ಸುದೀರ್ಘ ಪರಂಪರೆಯಿದೆ. ಅದರ ಮೂಲಕವೇ ಕನ್ನಡ ಪರಂಪರೆ ವಿಶಾಲವಾಗಿ ಅಷ್ಟೆ ಅಗಾಧ ಪ್ರಮಾಣದಲ್ಲಿ ಬೆಳೆದು ನಿಂತಿರುವುದನ್ನು ಗುರುತಿಸಲಾಗುತ್ತಿದೆ. ಪಂಪ, ಕುಮಾರವ್ಯಾಸಾದಿಗಳು ಬರೆಯುವ ಕಾಲಕ್ಕೆ ಮಾತನಾಡುವ ಭಾಷೆ ಬಳಕೆಯಲ್ಲಿತ್ತು. ಮಾಸ್ತಿ, ಕಾರಂತ, ಕುವೆಂಪು ಅವರ ಕಾಲದಲ್ಲಿಯೂ ಇತ್ತು. ಅವರೆಲ್ಲ ಬರವಣಿಗೆಯ ಭಾಷೆಯೊಂದನ್ನು ಕನ್ನಡದ ಮೂಲಕ ಕಟ್ಟಿಕೊಟ್ಟು ಕನ್ನಡ ಭಾಷೆಯ ಮಹತ್ವವನ್ನು ಹೆಚ್ಚಿಸಿದ್ದಾರೆ. ಇವರೆಲ್ಲರ ಗ್ರಾಂಥಿಕ ಭಾಷೆಗೆ ಆಡುನುಡಿಯ ಸೊಗಡೂ ಪೂರಕವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲಿ ಕನ್ನಡದ ಮಾತಿನ ಭಾಷೆಯಲ್ಲಿ ಮಹಾಪ್ರಾಣಾಕ್ಷರಗಳಿದ್ದುವು, ಋಕಾರಗಳೂ ಇದ್ದುವು. ಉಚ್ಚಾರದಲ್ಲಿ ಅದನ್ನು ಸ್ಪಷ್ಟವಾಗಿ ಬಳಸದೆ ಇದ್ದಾಗಲೂ ಆ ವ್ಯತ್ಯಾಸವನ್ನು ನಿರಂತರವಾಗಿ ಕನ್ನಡ ಪರಂಪರೆ ಗ್ರಹಿಸುತ್ತಾ ಬಂದಿದೆ. ಅದಕ್ಕಾಗಿ ಕನ್ನಡ ಭಾಷೆಯ ಲಿಖಿತ ಪರಂಪರೆಯ 1500 ವರ್ಷಗಳ ಸುದೀರ್ಘ ಇತಿಹಾಸದ ನಡುವೆ ಆ ಅಕ್ಷರಗಳೆಲ್ಲ ಉಳಿದುಕೊಂಡು ಬಂದಿವೆ. ಬರಹ ಭಾಷೆ ಎನ್ನುವುದು ಭಾಷಾಭಿವ್ಯಕ್ತಿಯ ಒಂದು ಸಾಧ್ಯತೆ ಮಾತ್ರ. ಅದೇ ಅಂತಿಮ ಅಲ್ಲ. ಬಳಕೆಯ ಉಚ್ಚಾರವೆಲ್ಲ ಬರಹದ ಭಾಷೆಯಲ್ಲಿ ಬರಬೇಕೆಂಬ ಹಟ ಸಲ್ಲದು. ಬರವಣಿಗೆಯ ಭಾಷೆಗೆ ಒಂದು ಮಿತಿ ಇದೆ. ಒಂದು ಶಿಸ್ತು ಇದೆ. ಆ ಶಿಸ್ತು ಮಾತಿನ ಭಾಷೆಯಿಂದಲೇ ರೂಪುಗೊಂಡುದು. ಮಾತಿನ ಭಾಷೆಯೇ ಅಂತಿಮ. ಅವುಗಳಲ್ಲಿ ವ್ಯತ್ಯಸ್ಥ ರೂಪಗಳನ್ನು ಅಂಗೀಕರಿಸಿದ ಕಾರಣಕ್ಕೆ ಬರಹದಲ್ಲಿ ವಿಭಿನ್ನ ಸಂಕೇತಗಳು ಬಳಕೆಯಾಗಿವೆ. ಈ ಸಂಕೇತಗಳೇ ಅಲ್ಪಪ್ರಾಣಗಳೆಂದೂ, ಮಹಾಪ್ರಾಣಗಳೆಂದೂ ದಾಖಲಾಗಿವೆ. ಈಗ ಅವು ಕನ್ನಡದ ಬರಹ ಭಾಷೆಯ ಅವಿಭಾಜ್ಯ ಸಂಕೇತಗಳು. ಆಗಾಗ ಕವಿಗಳು ಅಚ್ಚಕನ್ನಡದ ಬಳಕೆಗಾಗಿ ಶ್ರಮಿಸಿದ್ದುಂಟು. ಆಂಡಯ್ಯನಂತಹ ಪ್ರಾಚೀನರು ಹಾಗೂ ಕೊಳಂಬೆ ಪುಟ್ಟಣ್ಣಗೌಡರಂಥ ಆಧುನಿಕರನ್ನು ಇಲ್ಲಿ ಹೆಸರಿಸಬಹುದು. ಆದರೆ ಅವರ ಪ್ರಯೋಗಗಳು ವಿಫಲವಾಗಿ ಅದನ್ನು ಮೀರಿದ ಪ್ರಯೋಗಗಳೇ ಕನ್ನಡದಲ್ಲಿ ದಾಖಲಾದವು.

Read more »

10
Apr

ಶಂಕರ ಬಟ್ಟರದ್ದು “ಎಲ್ಲರ ಕನ್ನಡ”ವೇ?

- ಡಾ.ಮಾಧವ ಪೆರಾಜೆ

images

ಡಾ. ಆರ್. ಚಲಪತಿಯವರು ‘ತಂತಿ ಮೇಲಿನ ನಡಿಗೆ’ ಎನ್ನುವ ಪುಸ್ತಕವನ್ನು ಇದೀಗ ತಾನೇ ಪ್ರಕಟಿಸಿದ್ದಾರೆ. ‘ಕಲಿಕೆಯ ಕನ್ನಡದ ಬಗೆಗೆ ಬಲ್ಲವರೊಂದಿಗೆ ಮಾತು ಕತೆ’ ಎನ್ನುವ ಉಪಶೀರ್ಷಿಕೆಯೂ ಇದಕ್ಕಿದೆ. ಸಖಿ ಪ್ರಕಾಶನ ಹೊಸಪೇಟೆ ಇವರು ಇದನ್ನು ಪ್ರಕಟಿಸಿದ್ದಾರೆ. ಈ ಪುಸ್ತಕದಲ್ಲಿ ಬಳಕೆಯಾಗಿರುವ ಭಾಷೆಯ ಕುರಿತು ಒಟ್ಟಾರೆಯಾಗಿ ನಾನು ಮುಂದೆ ಚರ್ಚಿಸಲಿರುವುದರಿಂದ ಆರಂಭದಲ್ಲಿಯೇ ಒಂದು ಮಾತನ್ನು ವಿಶೇಷವಾಗಿ ಪ್ರಸ್ತಾಪಮಾಡಿ ಮುಂದುವರಿಯುತ್ತೇನೆ.ಈ ಪುಸ್ತಕದ ಮುಖಪುಟದ ಮೇಲಿನಿಂದ ಅದು ಸ್ವತಂತ್ರ ಪುಸ್ತಕದ ಹಾಗೆ ಕಾಣುತ್ತದೆ. ಆದರೆ ತೆರೆತೆರದಂತೆ ಅದು ಸಂಪಾದನೆ ಎನ್ನುವುದು ಸ್ಪಷ್ಟವಾಗುತ್ತದೆ.ಶಿಕ್ಷಣ ಕ್ಷೇತ್ರದಲ್ಲಿ ದಶಕಗಳಿಂದ ತೊಡಗಿಸಿಕೊಂಡಿರುವವರೊಂದಿಗೆ ಲೇಖಕರು ಮಾಡಿದ ಸಂದರ್ಶನಗಳಿರುವ ಪುಸ್ತಕವಿದು. ಹಾಗಿರುವಾಗ ಇಂತಹ ಪುಸ್ತಕವನ್ನು ಸಂಪಾದನೆ ಎಂದು ಸ್ಪಷ್ಟವಾಗಿ ಗುರುತಿಸಬೇಕು.ಅದುವೇ ಸರಿಯಾದ ವಿಧಾನ.

ಈ ಪುಸ್ತಕದಲ್ಲಿ ಪ್ರಯೋಗವಾಗಿರುವ ಭಾಷೆಯ ಕುರಿತು ಒಂದು ಉದಾಹರಣೆಯನ್ನು ನೀಡುತ್ತೇನೆ.

ಉದಾ: ೧:

“ಪದವಿ ತರಗತಿಗಳಲ್ಲಿ ಏನನ್ನು ಕಲಿಯುವುದು/ ಕಲಿಸುವುದಾಗಿರಬೇಕು?”

ಎಂ.ಜಿ.ಸಿ. ಯಾವುದೇ ಒಂದು ಮಾತ್ರುಬಾಶೆಯನ್ನು ತರಗತಿಯಲ್ಲಿ ಕಲಿಯುವ ವಿದ್ಯಾರ್‍ತಿಗೆ ಆ ಭಾಶೆಯಲ್ಲಿ ವ್ಯವಹರಿಸುವ ಸಾಮಾನ್ಯ ಜ್ನಾನವಿರುತ್ತದೆ. ತರಗತಿಗಳಲ್ಲಿ ಹೊಸ ಪಾರಿಬಾಶಿಕ ಪದಗಳು ಪರಿಚಯವಾಗುತ್ತವೆ. ಹಾಗೂ ಒಂದು ರೀತಿಯ ಆಲೋಚನಾ ಕ್ರಮಕ್ಕೆ ಆಡುಬಾಶೆಯಿಂದ ಶಿಶ್ಟಬಾಶೆಯ ಕಡೆಗೆ ಅವನ/ಳ ಗಮನ ಹರಿಯುತ್ತದೆ.

ಒಂದು ರೀತಿಯಲ್ಲಿ ಕಲಿಸುವವರು ಮತ್ತು ಕಲಿಯುವವರು ಅಸಹಾಯಕರು. ಪಟ್ಯಕ್ರಮ ಮತ್ತು ಪಟ್ಯವನ್ನು ಸಿದ್ದಪಡಿಸುವವರೇ ಬೇರೆಯವರಾಗಿರುತ್ತಾರೆ. ಈಗ ಪರಿಸ್ತಿತಿ ಸುದಾರಿಸುತ್ತಿದೆ ಎನಿಸಿದರೂ ವಿವಿಗಳ ಒಟ್ಟು ರಚನಾ ವಿನ್ಯಾಸವೇ ಪ್ಯೂಡಲ್ ಮಾದರಿಯದು- ವಸಾಹತು ಕಲ್ಪನೆಯದು. ಅವು ಇಂದಿಗೂ ಡೆಮಕ್ರೆಟಿಕ್ ಆಗಿಯೇ ಇಲ್ಲ.(ಪು.೧೨) Read more »

12
Mar

ASER ವರದಿ 2012 ಮತ್ತು ಕರ್ನಾಟಕದ ಕಲಿಕೆ ಒಳನೋಟ – 1

-ಪ್ರಶಾಂತ ಸೊರಟೂರ

aser 1ASER (Annual Status Education Report – ಕಲಿಕೆ ಗುಣಮಟ್ಟದ ವರುಶದ ವರದಿ)

ಇದು ಸರಕಾರೇತರ ಸಂಸ್ಥೆಯಾದ ’ಪ್ರಥಮ್’ನಿಂದ ಕಲಿಕೆಯ ಗುಣಮಟ್ಟ ತಿಳಿದುಕೊಳ್ಳಲು 2005ರಿಂದ ಪ್ರತಿ ವರುಶ, ಇಂಡಿಯಾದ ಸುಮಾರು 15,000 ಹಳ್ಳಿ ಪ್ರದೇಶದ ಶಾಲೆಗಳಲ್ಲಿ ಅರಸುವಿಕೆ (ಸಮೀಕ್ಷೆ) ನಡೆಸಿ ಹೊರತರಲಾಗುತ್ತಿರುವ ವರದಿ.

ASER ಕಲಿಕೆಮಟ್ಟವನ್ನು ಒರೆಗೆಹಚ್ಚುವ ಬಗೆ:

ಇಂಡಿಯಾದ ಪ್ರತಿ ಜಿಲ್ಲೆಯಲ್ಲಿ 30 ಹಳ್ಳಿಗಳನ್ನು ಆಯ್ಕೆ ಮಾಡಲಾಗುತ್ತದೆ. (ಹಿಂದಿನ ಎರಡು ವರುಶದ 20 ಮತ್ತು 10 ಹೊಸ ಹಳ್ಳಿಗಳು).
ಹಳ್ಳಿಗಳ ಗುಣಮಟ್ಟ (ರಸ್ತೆ, ಮನೆಗಳು ಇತ್ಯಾದಿ), ಕುಟುಂಬದ ಗುಣಮಟ್ಟ (ತಂದೆ-ತಾಯಿಯ ಕಲಿಕೆ, ಮನೆ ಇತ್ಯಾದಿ), ಶಾಲೆಯ ಗುಣಮಟ್ಟ (ಶಿಕ್ಶಕರು-ಮಕ್ಕಳ ಅನುಪಾತ, ಕಲಿಕೆಯ ಸಲಕರಣೆಗಳು, ಕುಡಿಯುವ ನೀರು, ಓದುಮನೆ) ಮುಂತಾದವುಗಳನ್ನು ಈ ಅರಸುವಿಕೆಯು (ಸಮೀಕ್ಶೆಯು) ಒಳಗೊಂಡಿರುತ್ತದೆ.
6 – 14 ವಯಸ್ಸಿನ (1 ರಿಂದ 7/8 ನೇ ತರಗತಿ) ಮಕ್ಕಳು ಈ ವರದಿಗೆ ಒಳಪಡುತ್ತಾರೆ.ಕಲಿಕೆಯ ಗುಣಮಟ್ಟವನ್ನು ASER ನ ಮೂರು ಸಲಕರಣೆಗಳಿಂದ ಅಳೆಯಲಾಗುತ್ತದೆ. 1) ತಾಯ್ನುಡಿಯಲ್ಲಿ ಓದುವಿಕೆಯ ಮಟ್ಟ 2) ಇಂಗ್ಲಿಶ ಓದುವಿಕೆಯ ಮಟ್ಟ 3) ಗಣಿತ ಕಲಿಕೆಯ ಮಟ್ಟ (ಕಳೆಯುವಿಕೆ ಮತ್ತು ಭಾಗಾಕಾರ)
ಜೊತೆಗೆ 2012ರ ವರದಿಯಲ್ಲಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣ, ಸರಕಾರ ಮತ್ತು ಖಾಸಗಿ ಶಾಲೆಗಳ ಪ್ರಮಾಣ, ಹೊರಕಲಿಕೆಗೆ (ಟ್ಯೂಶನ್) ಹೋಗುವವರ ಪ್ರಮಾಣ ಮುಂತಾದವುಗಳ ಕುರಿತು ತಿಳಿಸಲಾಗಿದೆ.
2012 ರಲ್ಲಿ ಕರ್ನಾಟಕದ 778 ಹಳ್ಳಿಗಳ, ಸುಮಾರು 18,000 ಸಾವಿರ ಮಕ್ಕಳು ಈ ಆರಸುವಿಕೆಗೆ (ಸಮೀಕ್ಷೆಗೆ) ಒಳಪಟ್ಟಿದ್ದರು.
Read more »

15
Jan

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ತಾಂತ್ರಿಕ ಗೋಷ್ಠಿಗಳನ್ನ ಸೇರಿಸುವಂತೆ ಆಗ್ರಹ

- ಗಣೇಶ್ ದಾವಣಗೆರೆ

Kannada Sahitya Sammelanaಫೆಬ್ರವರಿಯಲ್ಲಿ ನಡೆಯಲಿರುವ ಬಿಜಾಪುರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಕೆಳಕಂಡ ಕನ್ನಡ ತಾಂತ್ರಿಕ ಗೋಷ್ಠಿಗಳನ್ನ ಸೇರಿಸಿ. ಕನ್ನಡದ ಅಭಿವೃದ್ಧಿಯ ದೃಷ್ಟಿಯಿಂದ ಇದು ಅತ್ಯವಶ್ಯಕ.

ಸಧ್ಯದ ಮಾಹಿತಿಯ ಪ್ರಕಾರ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದೇ ಒಂದು ತಾಂತ್ರಿಕ ಗೋಷ್ಟಿಯನ್ನ ಹಾಕಿಲ್ಲ. ಕನ್ನಡವೆಂದರೆ ಬರೀ ಹಳೆಗನ್ನಡ, ನಡುಗನ್ನಡ, ಆಧುನಿಕ ಕನ್ನಡ, ನವೋದಯ, ನವ್ಯ, ನವ್ಯೋತ್ತಗಳಷ್ಟೇನಾ? ನಿಮ್ಮ ಮೊಬೈಲುಗಳಲ್ಲಿ ಕನ್ನಡ ಸಾಹಿತ್ಯವನ್ನ ಓದಲಿಕ್ಕೆ, ಬರೆಯಲಿಕ್ಕೆ ಕನ್ನಡದ ಸಾಫ್ಟ್‌ವೇರುಗಳು, ಆಂಡ್ರಾಯ್ಡ್ App ಗಳು, ಕಂಪ್ಯೂಟರಿನಲ್ಲಿ, ಲ್ಯಾಪ್‌ಟಾಪಿನಲ್ಲಿ , ಟ್ಯಾಬ್ಲೆಟ್‌ನಲ್ಲಿ ಕನ್ನಡ ಬೇಡವಾ? ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವ ಬಗ್ಗೆ ಜಾಗೃತಿ ಬೇಡವಾ? ಸ್ವತಃ ಕ.ಸಾ.ಪ ವೆಬ್ ಸೈಟೇ ಅಸ್ತಿತ್ವದಲ್ಲಿಲ್ಲ. ಯಾವುದೇ ಮಾಹಿತಿಯೂ ಇಲ್ಲ. ಕಂಪ್ಯೂಟರ್ ಯುಗದಲ್ಲಿರುವ ನಾವು ನಮ್ಮ ಭಾಷೆಗೆ ತಂತ್ರಜ್ಞಾನದ ನೆರವು ಪಡೆಯಬೇಕು.

ಕಸಾಪ ಅಧ್ಯಕ್ಷರಿಗೆ ಕೇಳಿದರೆ, ಈ ಬಾರಿ ಎಲ್ಲವೂ ಸಭೆಯಲ್ಲಿ ನಿರ್ಣಯಿಸಲಾಗಿದೆ ಸೇರಿಸಲಿಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೂ ಬಹಳ ದಿನಗಳ ಸಮಯವಿದೆ. ಕನ್ನಡದ, ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ ಆಸಕ್ತಿವಹಿಸಬೇಕಾದ ಕ.ಸಾ.ಪ.ಗೇಕೆ ತಂತ್ರಾಂಶ, ತಂತ್ರಜ್ಞಾನದ ಬಗ್ಗೆ ಇಷ್ಟು ಅಸಡ್ಡೇ?

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪುಂಡಲೀಕ ಹಾಲಂಬಿಯವರಿಗೆ ಒಂದು ಸವಿನಯ ಮನವಿ. ಕನ್ನಡದ ಅಂತರ್ಜಾಲ ಪ್ರಪಂಚದಲ್ಲಿ ಸಕ್ರಿಯವಾಗಿರುವ ಸಾವಿರಾರು ಬ್ಲಾಗಿಗರು,ಕನ್ನಡ ವೆಬ್ ಡೆವಲಪರ್‌ಗಳು,ಓಪನ್ ಸೋರ್ಸ್ ಆಸಕ್ತರು, ಸಾಫ್ಟ್‌ವೇರ್ ಎಂಜಿನಿಯರುಗಳು, ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳನ್ನ ಸೇರಿಸುವ ಪ್ರಯತ್ನವಾಗಿ ಕೆಳಕಂಡ ಗೋಷ್ಟಿಗಳನ್ನ ಸೇರಿಸಿ. ಕನ್ನಡದ ತಾಂತ್ರಿಕ ಅಭಿವೃದ್ಧಿಯ ದೃಷ್ಟಿಯಿಂದ ಇದು ಅತ್ಯಾವಶ್ಯಕ.

 

Read more »

5
Dec

ಪದ ತಂತ್ರಾಂಶ – Pada Software (Indic word processor & IME)

- ವಿಕಾಸ್ ಹೆಗ್ಡೆ
padaಕಂಪ್ಯೂಟರಲ್ಲಿ ಕನ್ನಡದ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತರಜಾಲದಲ್ಲಿ ಸದ್ಯಕ್ಕೆ ಕನ್ನಡ ವೆಬ್ ಸೈಟುಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ ಓದುಗರ ಸಂಖ್ಯೆ ಕಡಿಮೆ ಇಲ್ಲ. ಬಹಳಷ್ಟು ಜನ ಕಂಪ್ಯೂಟರ್ನಲ್ಲಿ ಕನ್ನಡದಲ್ಲಿ ಬರೆಯಲು ಬಯಸುತ್ತಿದ್ದಾರೆ. ಕೆಲವರು ಒತ್ತಕ್ಷರ, ದೀರ್ಘ, ಮಹಾಪ್ರಾಣ ಮುಂತಾದ ಟೈಪಿಂಗ್ ಸ್ವಲ್ಪ ಸಮಸ್ಯೆಯಾಗಿ ಹಿಂಜರಿಯುತ್ತಿದ್ದಾರೆ. ಆದರೂ ಕೂಡ ಉತ್ಸಾಹಿಗಳಿಗೇನೂ ಕಡಿಮೆ ಇಲ್ಲ. ಬಹಳ ಸುಲಭವಾಗಿ ನೇರವಾಗಿ ಎಲ್ಲಿ ಬೇಕಾದರೂ ಕನ್ನಡದಲ್ಲಿ ಬರೆಯಲು ಗೂಗಲ್, ಮೈಕ್ರೋಸಾಫ್ಟ್, ಪ್ರಮುಖ್ ಮುಂತಾದ ಹಲವು IME ಟೂಲ್ ಗಳಿವೆ.  ನುಡಿ, ಪದ, ಬರಹದ IME ಜೊತೆಗೆ ಪದ ಸಂಸ್ಕಾರಕಗಳೂ (Word Processors) ಇವೆ. ಆನ್ ಲೈನ್ ನಲ್ಲಿ ಬರೆಯಲು ಹಲವು ಟೂಲ್ ಗಳಿವೆ. ಸಾಮಾನ್ಯ ಬಳಕೆದಾರರಿಗೆ ಈಗ ಯಾವ ತಾಂತ್ರಿಕ ಸಮಸ್ಯೆ ಇಲ್ಲ. ಬೇಕಾಗಿರುವುದು ಸ್ವಲ್ಪ ಆಸಕ್ತಿ, ಅಭ್ಯಾಸ ಅಷ್ಟೆ.  ಈ ಮೊದಲು ವ್ಯಾಪಕವಾಗಿ ಬಳಕೆಯಲ್ಲಿದ್ದ ‘ಬರಹ’ ತಂತ್ರಾಂಶ ಆವೃತ್ತಿ ಹತ್ತರ ಬಳಿಕ ಉಚಿತವಾಗಿ ಲಭ್ಯವಿಲ್ಲ. ಅದರಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸಂಪನ್ಮೂಲ ಒಟ್ಟುಮಾಡಲು ಸದ್ಯಕ್ಕೆ ಬರಹ ತಂತ್ರಾಂಶಕ್ಕೆ ಶುಲ್ಕವಿಡಲಾಗಿದೆ ಎಂದು ಹೇಳಲಾಗಿದೆ. ಮತ್ತೊಂದು ಬಹುಬಳಕೆಯ ’ನುಡಿ’ ತಂತ್ರಾಂಶದಲ್ಲಿ ಕೆಲವು ಸೌಲಭ್ಯಗಳಿಲ್ಲ. (ಕನ್ನಡ ಬರೆಯಲು ಇರುವ ಹಲವು ತಂತ್ರಾಂಶ ಹಾಗೂ ಟೂಲ್ ಗಳ ಬಗ್ಗೆ ಹಿಂದೊಮ್ಮೆ ಬರೆದಿದ್ದೆ.  ಅದು ಇಲ್ಲಿದೆ: Kannada Typing in Computers).
4
Dec

ಮುಂದಿನ ಪೀಳಿಗೆಗೆ ನಾವು (ಕನ್ನಡ ಮಾಧ್ಯಮ) ಏನಂತ ಹೇಳಬಹುದು….

-ಅರವಿಂದ್

http://kannada.oneindia.in/img/2010/10/27-child-kannada-medium1.jpgಒಂದಾನೊಂದು ಕಾಲದಲ್ಲಿ ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಇತ್ತು. ಆಗ ನಾವುಗಳು ನಮ್ಮ ಗುರುಗಳನ್ನು ಬಹಳ ಗೌರವದಿಂದ, ಭಯಮಿಶ್ರಿತ ಪುಳಕದಿಂದ ಅವರು ನಮ್ಮೆದುರಿಗೆ ಬಂದರೆ ಭೂಮಿಯೇ ನಮ್ಮ ಮೇಲೆ ಬಿದ್ದಂತೆ ಭಾಸವಾಗಿ, ಅವರುಗಳು ಹೇಳಿದ ಪಾಠಗಳನ್ನು, ಪದ್ಯ-ಗದ್ಯಗಳನ್ನು, ಲೆಕ್ಕಗಳನ್ನು, ವ್ಯಾಕರಣವನ್ನು ಚಾಚೂ ತಪ್ಪದೆ ಓದಿಕೊಂಡು ಶಾಲೆಗೆ ಹೋಗುತ್ತಿದ್ದೆವು… ನಾವುಗಳೆಲ್ಲರೂ ಕನ್ನಡದಲ್ಲೇ ಪಾಠ ಕೇಳುತ್ತಿದ್ದೆವು ಮತ್ತು ನಾವುಗಳು ಅದ್ಯಾವುದೇ ಭಾಷೆಯವರಾಗಿದ್ರೂ ಕನ್ನಡದಲ್ಲೇ ಮಾತಾಡ್ತಿದ್ದೆವು.

ನಮ್ಮ ಗುರುಗಳು ತರಗತಿಗೆ ಬಂದ ಕೂಡಲೇ ಗೌರವ ಸೂಚಕವಾಗಿ ನಮಸ್ತೇ ಗುರುಗಳೇ… ಅಂತ ಒಕ್ಕೊರಲಾಗಿ ಹೇಳಿ, ಅವರೂ ಸೂಚಿಸಿದ ನಂತರವೇ ನಮ್ಮ ನಮ್ಮ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಮಾತೃಭಾಷೆಯಲ್ಲೇ ಪಾಠ ಕೇಳುತ್ತಿದ್ದ ನಾವು, ಜಗತ್ತಿನ ಅದೆಷ್ಟು ವಿಷಯಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳುತ್ತಿದ್ದೆವು ಗೊತ್ತಾ…

Read more »

23
Nov

ಕರ್ನಾಟಕದಲ್ಲಿ ಈ ಬಾರಿ ಪ್ರಾದೇಶಿಕ ಪಕ್ಷಗಳಿಗೆ ಕಾಲ ಕೂಡಿ ಬಂದಿದೆಯೇ?

-ವಸಂತ್  ಶೆಟ್ಟಿ
ಕರ್ನಾಟಕದಲ್ಲಿ ಬರುವ ವಿಧಾನಸಭೆ ಚುನಾವಣೆ ಹೊತ್ತಿಗೆ ಒಂದಕ್ಕಿಂತ ಹೆಚ್ಚು ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬರುವುದು ಖಚಿತವಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ಈ ಹಿಂದೆಯೂ ಪ್ರಾದೇಶಿಕ ಪಕ್ಷ ಗೆಲುವು ಕಂಡಿಲ್ಲ, ಈಗಲೂ ಕಾಣಲ್ಲ ಅಂತೆಲ್ಲ ಅಲ್ಲಲ್ಲಿ ದನಿ ಎಬ್ಬಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚುನಾವಣೆ ಹತ್ತಿರ ಬಂದಂತೆ ಅದು ತಾರಕಕ್ಕೆರಲಿದೆ. ಈ ಪಕ್ಷಗಳ ಭವಿಷ್ಯ ಜನತಾ ನ್ಯಾಯಲಯದಲ್ಲಿ ನಿರ್ಧಾರವಾಗುತ್ತೆ ಮತ್ತು ಆ ತೀರ್ಪೇ ಅಂತಿಮ ಅನ್ನುತ್ತಲೇ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೆಲೆ ಸಿಗುವ ಸಾಧ್ಯತೆ ಯಾಕೆ ಹೆಚ್ಚಿದೆ ಅನ್ನುವುದರ ಬಗ್ಗೆ ನನ್ನ ಅನಿಸಿಕೆ ಓದುಗ ಗೆಳೆಯರೊಡನೆ ಹಂಚಿಕೊಳ್ಳಲು ಈ ಬರಹ.

ಭಾರತ ಒಕ್ಕೂಟದ ಮೇಲೊಂದು ಹಿನ್ನೋಟ
ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದ ದಿನಗಳನ್ನು ಒಮ್ಮೆ ಸುಮ್ಮನೆ ನೆನೆಸಿಕೊಳ್ಳಿ. ವಿವಿಧ ನುಡಿಯಾಡುವ, ವಿವಿಧ ಆಚರಣೆ, ಆಹಾರ, ಜೀವನವಿಧಾನವನ್ನೇ ಹೊಂದಿರುವ ಭಾರತ ಒಕ್ಕೂಟದ ಜನರನ್ನು ಭಾವನಾತ್ಮಕವಾಗಿ ಬೆಸೆದಿದ್ದು ನಮ್ಮೆಲ್ಲಗಿಂತಲೂ ಆರ್ಥಿಕವಾಗಿ, ತಾಂತ್ರಿಕವಾಗಿ ಮುಂದುವರೆದಿದ್ದ ಬ್ರಿಟಿಷ್ ಎಂಬ ಸಾಮಾನ್ಯ ಶತ್ರು. ಈ ಶತ್ರುವಿನ ವಿರುದ್ದ ಭಾರತ ಒಕ್ಕೂಟದ ಜನರನ್ನು ಸಂಘಟಿತರನ್ನಾಗಿಸಿ ಹೋರಾಟಕ್ಕೆ ಮೊನಚು ತಂದ ನಾಯಕರಿದ್ದದ್ದು ಕಾಂಗ್ರೆಸ್ ಅನ್ನುವ ಅಂದಿನ ಪಕ್ಷದಲ್ಲಿ. ಬ್ರಿಟಿಷರು ಭಾರತ ಬಿಟ್ಟು ಹೋದಾಗ ಜನರ ಮನದಲ್ಲಿದ್ದ “ಕಾಂಗ್ರೆಸ್ಸಿನವರು ಸ್ವಾತಂತ್ರಕ್ಕೆ ಕಾರಣರಾದರು” ಅನ್ನುವ ಭಾವನೆಯನ್ನೇ ಬಂಡವಾಳವಾಗಿಸಿಕೊಂಡು ದೇಶಾದ್ಯಂತ ಕಾಂಗ್ರೆಸ್ ಪಕ್ಷ ರಾಜಕೀಯ ನೆಲೆ ಕಂಡುಕೊಂಡಿತು. ಈ ಭಾವನಾತ್ಮಕ ಬಂಡವಾಳ ಗಟ್ಟಿಯಾಗಿದ್ದರಿಂದ ಸ್ವಾತಂತ್ರ್ಯ ನಂತರದ ಮೊದಲೆರಡು ದಶಕ ದೇಶಕ್ಕೆ ಒಂದೇ ಪಕ್ಷ ಅನ್ನುವಂತೆ ಕಾಂಗ್ರೆಸಿನ ಪಾರುಪತ್ಯ ನಡೆದಿತ್ತು.

ಒಂದು ಪಕ್ಷ, ಒಬ್ಬ ವ್ಯಕ್ತಿ ಒಕ್ಕೂಟವನ್ನಾಳುವುದು ಅಸಹಜ !
ಹೀಗೆ ಬ್ರಿಟಿಷರನ್ನು ಹೊಡೆದೊಡಿಸಲು ರೂಪುಗೊಂಡಿದ್ದ ಹೋರಾಟದಿಂದಾಗಿ ನೆಲೆ ಕಂಡಿದ್ದ ಭಾವನಾತ್ಮಕ ಒಗ್ಗಟ್ಟು ಅನ್ನುವ ತೆಳು ಅಂಟು ಕೆಲ ಸಮಯದಲ್ಲಿ ಖಾಲಿಯಾಗುತ್ತಲೇ ನಮ್ಮ ನಮ್ಮಲ್ಲಿನ ಆಸೆ, ಆಶೋತ್ತರಗಳು, ಏಳಿಗೆಯ ಕಲ್ಪನೆಗಳಲ್ಲಿನ ವೈವಿಧ್ಯತೆಗಳು ಹಂತ ಹಂತವಾಗಿ ಹೊರ ಹೊಮ್ಮತೊಡಗಿದವು. ಇಷ್ಟು ವ್ಯಾಪಕವೂ, ವೈವಿಧ್ಯಮಯವೂ ಆದ ಒಕ್ಕೂಟವೊಂದನ್ನು ಒಂದು ಪಕ್ಷ, ಒಬ್ಬ ವ್ಯಕ್ತಿ ದೆಹಲಿಯಿಂದ ಆಳುವುದು ಅತ್ಯಂತ ಅಸಹಜವೂ, ಆಳಲಸಾಧ್ಯವಾದದ್ದು (unwieldy) ಅನ್ನುವುದು ಅರ್ಥವಾಗತೊಡಗಿತು. ನೂರು ಕೋಟಿಗೂ ಮಿಗಿಲಾದ ಜನರ ಆಶೋತ್ತರಗಳನ್ನು ಒಂದು ಪಕ್ಷ, ಒಬ್ಬ ವ್ಯಕ್ತಿಯಿಂದ ಎಂದಿಗೂ ಈಡೇರಿಸಲಾಗದು ಅನ್ನುವ ಪ್ರಾಕ್ಟಿಕಲ್ ಆದ ತಿಳಿವೇ ಮುಂದಿನ ದಿನಗಳಲ್ಲಿ ಕಾಂಗ್ರೆಸಿನ ಪಾರಮ್ಯವನ್ನು ಮುರಿದು ದೇಶದ ಹಲವೆಡೆ ಪ್ರಾದೇಶಿಕ ಶಕ್ತಿಗಳು ಉದಯಿಸುವಂತೆ ಮಾಡಿದ್ದು ಅನ್ನುವುದನ್ನು ಗಮನಿಸಬೇಕಿದೆ. 1990ರ ಈಚೆಗೆ ಆರ್ಥಿಕ, ಸಾಮಾಜಿಕ ನೆಲೆಗಟ್ಟಿನಲ್ಲಾದ ತುರ್ತಿನ ಬದಲಾವಣೆಗಳು ಈ ಪ್ರಕ್ರಿಯೆಗೆ ಇನ್ನಷ್ಟು ವೇಗ ಒದಗಿಸಿದೆ ಅಂದರೆ ತಪ್ಪಾಗಲಾರದು.  Read more »

18
Nov

ಸತ್ತ ನಂತರ ‘ಒಳ್ಳೆಯವರಾಗಿಬಿಡುವ’ ಪರಿಗೆ ಅಚ್ಚರಿಗೊಳ್ಳುತ್ತ….

ಡಾ ಅಶೋಕ್ ಕೆ ಆರ್

‘ಸತ್ತವರ ಬಗ್ಗೆ ಕೆಟ್ಟದ್ದಾಡಬಾರದಂತೆ’; ಅವರು ಬದುಕಿದ್ದಾಗ ಕೆಟ್ಟವರಾಗಿದ್ದಾಗಲೂ ಸಹ! ವ್ಯಕ್ತಿಯೇ ಸತ್ತು ಹೋದ ಮೇಲೆ ಆತನ ಹಳೆಯ ಪುರಾಣಗಳನ್ನು ಕೆದಕುವುದು ಬೇಡವೆಂಬ ಭಾವನೆಯನ್ನೇನೋ ಒಪ್ಪಬಹುದು ಆದರೆ ಇದ್ದ – ಇರದ – ಸೃಷ್ಟಿಸಲ್ಪಟ್ಟ ವಿಶೇಷಣಗಳನ್ನೆಲ್ಲ ಸತ್ತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಆರೋಪಿಸಿ ಸತ್ತವರಿಗೇ ಬೇಸರ ಬರಿಸುವಷ್ಟು ಹೊಗಳುವುದು ಎಷ್ಟರಮಟ್ಟಿಗೆ ಸರಿ?! ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆಯ ಮರಣದ ನಂತರ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಬಾಳ ಠಾಕ್ರೆಯ ಬಗ್ಗೆ ಬರುತ್ತಿರುವ ವರದಿಗಳನ್ನು ಓದಿದರೆ ನಮ್ಮ ಸಮಾಜದ ಅಧಃಪತನದ ಮನಸ್ಥಿತಿಯ ಪ್ರತಿಬಿಂಬದಂತೆಯೇ ಕಾಣಿಸುತ್ತಿದೆ.

‘ಮರಾಠಿ ಮಾನೂಸ್’ ಸೃಷ್ಟಿಸಿ ಅದರ ಬೆಂಕಿಯಲ್ಲೇ ರಾಜಕೀಯದಾಟವಾಡಿದ, ಹಿಂದೂ ಮುಸ್ಲಿಮರ ದ್ವೇಷ ಹೆಚ್ಚಳಕ್ಕೆ ತನ್ನ ಕೈಲಾದ ಸಹಾಯ ಮಾಡಿದ ವ್ಯಕ್ತಿಯೊಬ್ಬ ಇಂದು ರಾಷ್ಟ್ರನಾಯಕರಂತೆ, ದೇಶಭಕ್ತನಂತೆ ಚಿತ್ರಿಸಲ್ಪಡುತ್ತಿದ್ದಾರೆ. ಶಿವಸೇನೆಯ ಕಟ್ಟರ್ ಹಿಂದುತ್ವದ ಬೆಂಬಲಿಗರು ಠಾಕ್ರೆಯ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ಲಕ್ಷಾಂತರ ಜನರನ್ನು ತೋರಿಸುತ್ತ ಆತ ಒಬ್ಬ ಮಹಾನ್ ನಾಯಕನೇ ಹೌದು ಎಂದ್ಹೇಳಬಹುದು. ಹಿಟ್ಲರನಿಗೂ ಅಪಾರ ಸಂಖ್ಯೆಯ ಬೆಂಬಲಿಗರಿದ್ದರು ಮತ್ತು ಬಾಳ ಠಾಕ್ರೆ ಸಂದರ್ಶನಗಳಲ್ಲಿ ಹಿಟ್ಲರನನ್ನು ಹಾಡಿ ಹೊಗಳಿದ್ದೂ ಇದೆ! Read more »

Follow

Get every new post delivered to your Inbox.

Join 1,254 other followers