ಶಿಕಾರಿ ಮಿಸ್ ಆಯ್ತು..!
- ಶ್ರೀಧರ್ ಜಿ.ಸಿ ಬನವಾಸಿ
ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಸಂಪೂರ್ಣನಾಯಕನಾಗಿ ಅಭಿನಯಿಸಿದ ಮಲಯಾಳಂ ಸೂಪರ್ ಸ್ಟಾರ್ ಮುಮ್ಮುಟ್ಟಿ ಅಭಿನಯದ `ಶಿಕಾರಿ’ ಬಿಡುಗಡೆಯ ಭಾಗ್ಯವನ್ನು ಕಂಡಿದೆ. ಪ್ರಶಸ್ತಿ ಪುರಸ್ಕೃತ`ಗುಬ್ಬಚ್ಚಿಗಳು’ಸಿನಿಮಾ ಖ್ಯಾತಿಯ ಅಭಯಸಿಂಹ ನಿರ್ದೇಶಕರು. ಚಿತ್ರ ನೋಡಿಬಂದ ಮೇಲೆ ನನಗೆ ಚಿತ್ರದ ಬಗ್ಗೆ ನನಗನಿಸಿದ ಅಂಶಗಳು:
ಕಹಾನಿ, ವಿದ್ಯಾಬಾಲನ್ ಮತ್ತೆ ಮಿಂಚಿಂಗ್
ಫಿಲ್ಮಿ ಪವನ್
ಈ ನಡುವೆ ಎಲ್ಲಾ ಕಡೆಯೂ ವಿದ್ಯಾಬಾಲನ್ ದೇ ದುನಿಯಾ, ಡರ್ಟಿ ಪಿಕ್ಚರ್ ಬಂದಮೇಲೇನೆ ವಿದ್ಯಾ ಬಾಲನ್ ಗೆ ಈ ಪಾಟಿ ಡಿಮ್ಯಾಂಡ್ ಬಂದಿದ್ದು. ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಸಹ ಬಾಚಿಕೊಂಡಿದ್ದರು ವಿದ್ಯಾ, ಅವರಿಗೆ ನಿಲುಮೆ ತಂಡದಿಂದ ಶುಭಾಶಯಗಳು. ಶನಿವಾರ ಭಾನುವಾರ ಐ.ಟಿ ಹುಡುಗರಿಗೆ ಹಬ್ಬ ಇದ್ದ ಹಾಗೆ, ಗುರುವಾರವೇ ಎಲ್ಲ ಪ್ಲಾನ್ ಆಗಿ ಬಿಡುತ್ತೆ ಶುಕ್ರವಾರ ಮತ್ತು ಶನಿವಾರದ ಪ್ರೋಗ್ರಾಮ್. ಹಾಗೇ ಪ್ಲಾನ್ ಮಾಡಿ ಶನಿವಾರ ಕಹಾನಿ ಚಿತ್ರ ನೋಡಲು ಹೋಗಿದ್ದೆವು, ಮೊದಲ ಬಾರಿ ನನ್ನ ಸಹೋದ್ಯೋಗಿಗಳೊಂದಿಗೆ ಸಿನಿಮಾ ಪಯಣ.
ಕೊಲ್ಕತ್ತಾದಂತಹ ಮಹಾನಗರದಲ್ಲಿ ತೆಗೆದುಕೊಳ್ಳುವ ಸಿನಿಮಾ ಕೊಲ್ಕತ್ತಾದ ದೈನಂದಿನ ಬದುಕನ್ನು ತೆರೆದುಕೊಳ್ಳುತ್ತಾ ನಾಯಕಿಯ ಎಂಟ್ರಿ ಕೊಡಿಸುತ್ತೆ. ನಾಯಕಿ ಕೊಲ್ಕತ್ತಾ ಬಂದೊಡನೆ ಪೋಲೀಸ್ ಠಾಣೆಗೆ ತೆರಳಿ ತನ್ನ ಗಂಡ ನಾಪತ್ತೆಯಾದ ಬಗ್ಗೆ ದೂರು ನೀಡುತ್ತಾಳೆ. ಆಗ ಪ್ರೇಕ್ಷಕನಿಗೂ ಸಹ ಟ್ಯಾಕ್ಸಿ ಚಾಲಕನಿಗೆ ಬಂದ ಅನುಮಾನವೆ ಬರುತ್ತೆ, ಯಾಕೆ ನೇರ ಪೋಲೀಸ್ ಠಾಣೆ ಅಂತ. ನಾಯಕಿ ತುಂಬು ಗರ್ಭಿಣಿ, ಲಂಡನ್ ಅಲ್ಲಿದ್ದ ಪತಿ ಕೊಲ್ಕತ್ತಾಗೆಂದು ಹೊರಟು ಬಂದವರು ಮತ್ತೆ ಕರೆ ಮಾಡಿಲ್ಲ, ಸಂದೇಶ ಕಳುಹಿಸಿಲ್ಲ, ಕಾಣೆಯಾಗಿದ್ದಾರೆ ಎಂದು ನೀಡುವ ದೂರನ್ನು ಪೋಲೀಸರು ಯುವ ಆಫೀಸರ್ ರಾಣಾಗೆ ವಹಿಸುತ್ತಾರೆ. ರಾಣಾ ಮತ್ತು ಪೋಲೀಸ್ ಅಲ್ಲದಿದ್ದರು ಪೋಲೀಸರಂತೆ ತನಿಖೆಯ ಎಲ್ಲ ಕಡೆಗಳಲ್ಲು ತನ್ನನ್ನು ತಾನು ತೊಡಗಿಸಿಕೊಳ್ಳುವ ವಿದ್ಯಾಬಾಲನ್ ಜೊತೆಯಾಗಿ ನಡೆಸುವ ಸಸ್ಪನ್ಸ್ ಥ್ರಿಲ್ಲರ್ ಕಹಾನಿ.
ವಿದ್ಯಾ ಬಾಲನ್ ಗೆ ಸಿನಿಮಾದಲ್ಲಿ ಸಹ ವಿದ್ಯಾ ಎಂಬ ಹೆಸರು, ತಮ್ಮ ಪತಿ ಕಳೆದು ಹೋದ ಎಂದು ದೂರು ನೀಡಿದ ದಿನದಿಂದ ಸಂಪೂರ್ಣ ತನಿಖೆ ಮುಗಿಯುವವರೆಗೂ ಪೋಲೋಸರೊಂದಿಗೇ ಇರುತ್ತಾರೆ. ವಿದ್ಯಾ ವೃತ್ತಿಯಲ್ಲಿ ನೆಟ್ವರ್ಕ್ ಸೆಕ್ಯೂರಿಟಿ ಇಂಜಿನಿಯರ್, ಈ ತನಿಖೆ ನಡೆಯುವಾಗ ಅವರ ಕಂಪ್ಯೂಟರ್ ತಲೆ ಬಹಳವಾಗಿ ಉಪಯೋಗವಾಗುತ್ತದೆ, ಅದೇ ಭರದಲ್ಲಿ ನಿರ್ದೇಶಕರು ಪೋಲೀಸರಿಗೆ ಕಂಪ್ಯೂಟರ್ ಬಗೆಗಿನ ಅಲ್ಪ ತಿಳುವಳಿಕೆಯನ್ನೂ ಸಹ ತೋರಿಸಿದ್ದಾರೆ. ಬರೀ ಫೋನಿನಲ್ಲಿ ಮಾತನಾಡಿದ್ದನ್ನೆ ಅರ್ಥ ಮಾಡಿಕೊಂಡು ನನ್ನ ಗಂಡ ಇದೇ ಲಾಡ್ಜಿನಲ್ಲಿ ಇರುತಿದ್ದರು, ಇದೇ ಅಂಗಡಿಯಲ್ಲಿ ಟೀ ಕುಡಿಯುತಿದ್ದರು ಎಂದೆಲ್ಲ ಗೆಸ್ ಮಾಡುವ ವಿದ್ಯಾ ಬುದ್ದಿವಂತಿಕೆ ನಂಬಲು ಸಾಧ್ಯವಾಗದಿದ್ದರು ಸಿನಿಮಾ ಆದ್ದರಿಂದ ನಂಬಿ ಬಿಡಬೇಕಾಗುತ್ತದೆ. Read more 
ಗುಡ್ಡದ ಭೂತ: ಪ್ರಯೋಗಶೀಲತೆಯೋ? ಅನಿವಾರ್ಯತೆಯೋ?
-ಕಾಲಂ ೯
ಜನಶ್ರೀ ಸುದ್ದಿವಾಹಿನಿ 90ರ ದಶಕದ ದೂರದರ್ಶನದ ಜನಪ್ರಿಯ ಧಾರಾವಾಹಿಯ ಮರುಪ್ರಸಾರ ಆರಂಭಿಸಿದೆ. ತಾಂತ್ರಿಕತೆ, ಅಭಿನಯ, ನಿರೂಪಣೆಯ ದೃಷ್ತಿಯಿಂದ ಅಸಾಧಾರಣವೆನಿಸಿದ ಧಾರಾವಾಹಿಗೆ ಮತ್ತೆ ಮನ್ನಣೆ ಸಿಕ್ಕಿದ್ದು ಸ್ವಾಗತಾರ್ಹವೇ. ಈಗ ೪೦ರ ಗಡಿಯಲ್ಲಿರುವ ಧಾರಾವಾಹಿ ನಿರ್ದೇಶಕ ಸದಾನಂದ ಸುವರ್ಣರಿಗೆ ಮತ್ತವರ ತಂಡಕ್ಕೆ ಈ ಮನ್ನಣೆ ಖುಷಿ ತಂದಿರಬೇಕು.
ಆದರೆ ಸುದ್ದಿ ವಾಹಿನಿಯೊಂದು ಧಾರಾವಾಹಿಯ ಪ್ರಸಾರಾಕ್ಕೆ ಅದೂ ಮರು ಪ್ರಸಾರಕ್ಕೆ ಹೊರಟಿರುವುದು ಪ್ರಯೋಗಶೀಲತೆಯೇ ಅಥವಾ ಅದರಾಚೆಯ ಅನಿವಾರ್ಯತೆಗಳೂ ಕೆಲಸ ಮಾಡುತ್ತಿದೆಯೇ?
‘ಸುದ್ದಿ’ಯ ಸೋಂಕಿಲ್ಲದ ಜ್ಯೋತಿಷ್ಯ, ಸೆಕ್ಸು, ಕ್ರೈಮು, ಸಿನೆಮಾ, ಕ್ರಿಕೆಟ್ಟು, ಹಾಸ್ಯಗಳ ‘ಶೋ’ಗೆ ಹತ್ತಿರ ಹತ್ತಿರ ಶೇ 50ರಷ್ಟು ಸಮಯ ವಿನಿಯೋಗಿಸುವ ಸುದ್ದಿ ವಾಹಿನಿಗಳೇ ನಮಗಿಂದು ಕಾಣುತ್ತಿವೆ. ಟಿವಿ9 ಹಾಕಿಕೊಟ್ಟ ಮಾದರಿಯಿಂದ ಹೊರ ಬರಲಾಗದ ಎಲ್ಲ ವಾಹಿನಿಗಳು ಅದೇ ಚರ್ವಿತಗಳಲ್ಲೇ ಸುತ್ತುತ್ತಿವೆ.
ಕರ್ನಾಟಕದಂತಹ ಸೀಮಿತ ಪರಿಧಿಯಲ್ಲಿ ದಿನವಿಡೀ ವಿದ್ಯಮಾನಗಳು ಘಟಿಸುತ್ತಲೇ ಇರಬೇಕೆಂಬುದು ಅಸಾಧ್ಯದ ಮಾತು. ಈ ಕೊರತೆ ದೇಶ ವ್ಯಾಪ್ತಿಯ ರಾಷ್ಟ್ರೀಯ ಚಾನೆಲ್‍ಗಳನ್ನೂ ಕಾಡುತ್ತಿರುತ್ತದೆ. ಹೀಗಿರುವಾಗ ನಮ್ಮ ಸುದ್ದಿವಾಹಿನಿಗಳಿಗೆ ದಿನವಿಡೀ ಉಣಬಡಿಸಲು ಸುದ್ದಿ ಖಾದ್ಯಗಳಾದರೂ ಏನು ಉಳಿದಿರುತ್ತದೆ? ಈ ಅನಿವಾರ್ಯತೆಯ ಹೊಸ ಫಸಲೆಂಬಂತೆ ಗುಡ್ಡದ ಭೂತ ಮತ್ತೆ ಅವತರಿಸಿದೆ.
ಧಾರಾವಾಹಿ ರಂಗದ ಸಾಮ್ರಾಟರೆಂದೇ ಖ್ಯಾತರಾಗಿರುವ ಟಿಎನ್ ಸೀತಾರಾಂ ಬಿಜೆಪಿ ಸರ್ಕಾರದ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಈ ಬಿಜೆಪಿ ಸರ್ಕಾರ ಬಂದ ಮೇಲೆ ನಮ್ಮ ಸೀರಿಯಲ್ ನೋಡೋರೇ ಇಲ್ಲದಂತಾಗಿದೆ. ಜನ ನ್ಯೂಸನ್ನೇ ಸೀರಿಯಲ್ ಅಂತ ಅಂದುಕೊಂಡಿದ್ದಾರೆ.’ ಅಂತ ಹೇಳಿಕೊಂಡಿದ್ದರು. Read more 
ಚಿಂಗಾರಿ
- ಫಿಲ್ಮಿ ಪವನ್
ಫೋರಂ ಮಾಲ್ ಅಲ್ಲಿ ಮಾಸ್ ಸಿನಿಮಾ ನೋಡೋದಂದ್ರೆ ಮಜಾನೆ ಇರಲ್ಲ ಬಿಡಿ, ಸುತ್ತ ಮುತ್ತ ಆಂಟಿಗಳು, ಅಂಕಲ್ಗಳು, ಲವರ್ಸ್ಗಳು. ಅದ್ರಲ್ಲು ದರ್ಶನ್ ಸಿನಿಮಾ ಅಂದ್ರೆ ಇನ್ನು ಉರ್ದೋಗುತ್ತೆ, ಪಂಚಿಂಗ್ ಡೈಲಾಗು ಬಂದ್ರೆ ಒಂದು ಶಿಲ್ಲೆ ಹೊಡ್ಯೋದು ಇಲ್ಲ ಯಾರುವೆ
ಆದ್ರೆ ಏನ್ ಮಾಡೋದು ಈ ಹುಡುಗೀರು ಬಿಡ್ಲಿಲ್ಲ. ಫೋರಂ ಪಿ.ವಿ.ಅರ್. ಅಂತ ಚಿಂಗಾರಿ ಗೆ ಕರ್ಕೊಂಡೋಗಿದ್ರು ಮೊದ್ಲೇ ಬಾಸ್ ಸಿನಿಮ, ಎಲ್ಲಾದ್ರು ಮಾಸ್ ಆಗಿರೋ ಚಿತ್ರಂದಿರದಲ್ಲಿ ಕೂತು ಮಾಸ್ ಆಗಿ ಅರ್ಧ ಕಿಲೋ ಚಿಪ್ಸ್ ಮತ್ತೆ ೨ ಲೀಟರ್ ಪೆಪ್ಸಿ ೧ ಪ್ಯಾಕ್ ಕಿಂಗ್ ಇಟ್ಕೊಂಡು ಸಿನಿಮಾ ನೋಡೊಣ ಒಳ್ಳೊಳ್ಳೆ ಪಂಚಿಂಗ್ ಡೈಲಾಗ್ ಹೊಡೆದಾಗ ಶಿಲ್ಲೆ ಹೊಡ್ಯಾಣ ಮಾಸ್ ಸಾಂಗ್ ಗೆ ಪರದೆ ಬಳಿ ಹೋಗಿ ಸ್ಟೆಪ್ ಹಾಕೋಣ ಅನ್ನೋ ಆಸೆಗೆಲ್ಲಾ ತಣ್ಣೀರು ಬಿದ್ದಿತ್ತು.ಇನ್ನೊಂದು ವಿಷಯ ಅಂದ್ರೆ ಟಿಕೆಟ್ ಬೆಲೆ ಬೇರೆ ಜಾಸ್ತಿ ಕಣ್ರಿ
ಈ ಸಿನಿಮಾದ ಒಪೆನಿಂಗೇ ವಿಶೇಷವಿತ್ತು, ಯಾಕಂದ್ರೆ ಯಾವುದೇ ಸಿನಿಮಾದ ಟೈಟಲ್ ಕಾರ್ಡಲ್ಲಿ ತಾಂತ್ರಿಕ ವರ್ಗದವರ ಹೆಸರು ಮಾತ್ರ ಹಾಕ್ತಿದ್ರು. ಆದ್ರೆ ಈ ಸಿನಿಮಾದಲ್ಲಿ ಅವರ ಫೋಟೊ ಸಹ ನೋಡಿ ಖುಶಿ ಆಯ್ತು.ಪ್ರತಿಯೊಬ್ಬ ತಾಂತ್ರಿಕ ವರ್ಗದವರ ಭಾವಚಿತ್ರ ಅವರ ಹೆಸರಿನೊಂದಿಗೆ ಬಂದಾಗ ಖುಶಿ ಆಯ್ತು. ತಾಂತ್ರಿಕ ವರ್ಗದವರಿಗೆ ಅಷ್ಟು ಪ್ರಾಮುಖ್ಯತೆ ಕೊಟ್ಟಿರುವ ನಿರ್ದೇಶಕ ಹರ್ಷ ಅವರಿಗೆ ಕುಡೋಸ್. Read more 
ಚಿತ್ರ ವಿಮರ್ಶೆ – ಪಿ ಎಸ್ ಐ ಲವ್ ಯು
-ಸಂದೀಪ್ ಎನ್
When youre all alone
I just want to catch you if I can
I just want to be there
When the morning light explodes
On your face it radiates
I cant escape
I love you till the end…” ಎಂಬ ಹಿನ್ನೆಲೆ ಗಾಯನದೊಂದಿಗೆ, ಇಬ್ಬರು ಯುವ ಜೋಡಿಗಳಾದ Holly ಮತ್ತು Gerryಯ ನಡುವಿನ ಸರಸ/ವಿರಸದ ಸಂಬಾಷಣೆಯೊಂದಿಗೆ ಚಿತ್ರವನ್ನು Richard Lagravenese ನಿರ್ದೇಶಿಸಿದ್ದಾರೆ. ಚಿತ್ರವೂ 2004 ನೇ ಇಸವಿಯಲ್ಲಿ Ceclia Ahern ಎಂಬ Irish ಕವಿ ಬರೆದ ಕಾದಂಬರಿ ಆಧಾರಿತವಾಗಿದೆ.
ಪತ್ರಕರ್ತರ ಕೊರಳಿಗೆ ಗಂಟೆ ಕಟ್ಟುವರು ಯಾರು?
ಬಡವರಿಗೆ ಬಣ್ಣದ ಟಿವಿ ಎಂದು ತಮಿಳುನಾಡಿನ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಘೋಷಿಸಿದಾಗ, ಪತ್ರಕರ್ತರು ಇದೊಂದು ಜನಪ್ರಿಯ ಘೋಷಣೆ ಎಂದು ಗೇಲಿ ಮಾಡಿದರು. ಸರಕಾರಗಳು ಘೋಷಿಸುವ ಜನಪ್ರಿಯ ಕಾರ್ಯಕ್ರಮಗಳನ್ನು ಗೇಲಿ ಮಾಡುವುದು, ವಿಶ್ಲೇಷಿಸುವುದು ಅವರ ಕರ್ತವ್ಯ ಅವರು ಮಾಡಿದರು. ಆದರೆ, ಅಂತಹ ಜನಪ್ರಿಯ ಘೋಷಣೆಯ ಫಲಾನುಭವಿಗಳೇ ತಾವೇ ಆಗಿಬಿಟ್ಟರೆ !
ಕರ್ನಾಟಕದ ಬಿಜೆಪಿ ಸರಕಾರ ರಾಜ್ಯದ ಎಲ್ಲ ಪತ್ರಕರ್ತರಿಗೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಪೂರ್ಣ ಉಚಿತವಾಗಿ ಪ್ರಯಾಣ ಮಾಡಬಹುದು ಎಂಬ ಆದೇಶವನ್ನು ಸದ್ಯದಲ್ಲಿಯೇ ಹೊರಡಿಸಲಿದೆಯಂತೆ. ಇದು ಕೂಡ ಜನಪ್ರಿಯ ಘೋಷಣೆಯೇ. ಆದರೆ, ಅದೇಕೋ ಹೆಚ್ಚು ಪತ್ರಕರ್ತರು ಈ ಬಗ್ಗೆ ಮಾತನಾಡುತ್ತಿಲ್ಲ.
ಈ ಬಗ್ಗೆ ಪೂರ್ಣಚಂದ್ರ ಬರೆದಿದ್ದಾರೆ.
ಬೀದರ್‌ನಿಂದ ಹಿಡಿದು ಚಾಮರಾಜನಗರ ಜಿಲ್ಲೆಯವರೆಗೆ ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿರುವ ಮಾನ್ಯತೆ ಪಡೆದ ಪತ್ರಕರ್ತರು ಈಗ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಪೂರ್ಣ ಉಚಿತವಾಗಿ ಎಲ್ಲಿ ಬೇಕಾದರಲ್ಲಿ ಓಡಾಡಬಹುದು !
ನಾನಾ ಆರೋಪಗಳನ್ನು ಹೊತ್ತು ಮನೆಗೆ ಹೋಗಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬೆಂಗಳೂರು ಪತ್ರಕರ್ತರಿಗಷ್ಟೇ ದಯಪಾಲಿಸಿದ್ದ ಈ ಕೊಡುಗೆಯನ್ನು, ನಗುಮೊಗದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು, ರಾಜ್ಯದ ಎಲ್ಲ ಪತ್ರಕರ್ತರಿಗೂ ವಿಸ್ತರಿಸಲಿದ್ದಾರೆ ಎಂಬ ವರ್ತಮಾನ ಬಂದಿದೆ.
ಅದೂ, ರಾಜಹಂಸ, ವೋಲ್ವೋ ಸಹಿತ ಎಲ್ಲ ಬಸ್‌ಗಳಲ್ಲೂ ! Read more 
ಕನ್ನಡಿಗರಿಗೆ ಮೋಸ ಮಾಡಿದ ಸಿಸಿಎಲ್ ಆಡಳಿತ ಮಂಡಳಿ !?
-ನಿತಿನ್ ರೈ ಕುಕ್ಕುವಳ್ಳಿ
ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿಗೆ ಸರಿಸಾಟಿಯಾಗೆ ಜನಪ್ರಿಯತೆ ಪಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕೊನೆಯ ಹಂತದಲ್ಲಿ ವಿವಾದದ ಗೂಡಾಗಿ ಪರಿವರ್ತನೆಗೊಂಡು ವಿವಾದದಲ್ಲೇ ಅಂತ್ಯಗೊಂಡಿತು.
ಫೈನಲ್ ತನಕ ಅತ್ಯಂತ ಶುದ್ಧವಾಗಿ ನಡೆದುಕೊಂಡು ಬಂದ ಸಿಸಿಎಲ್ ಪಂದ್ಯಾವಳಿ ಫೈನಲ್ ನಲ್ಲಿ ಮಾತ್ರ ಆಡಳಿತ ಮಂಡಳಿ ನಡೆದುಕೊಂಡ ರೀತಿ ಕನ್ನಡಿಗರನ್ನ ಸೋಲಿಸಲು ಪೂರ್ವ ತಯಾರಿ ಮಾಡಿದಂತಿತ್ತು. ಪಂದ್ಯ ಪ್ರಾರಂಭಗೊಳ್ಳುವುದಕ್ಕಿಂತ ಮುಂಚೆನೇ ಇದಕ್ಕೆಲ್ಲ ಸಿದ್ದತೆಗಳನ್ನ ಆಡಳಿತ ಮಂಡಳಿ ಮಾಡಿದಂತಿತ್ತು. ಪಂದ್ಯ ಸರಿಯಾದ ಸಮಯಕ್ಕಿಂತ ಸುಮಾರು ಎರಡು ತಾಸುಗಳಷ್ಟು ತಡವಾಗಿ ಪ್ರಾರಂಭಗೊಂಡದ್ದು, ಸುದೀಪ್ ಮತ್ತು ತಂಡ ಸರಿಯಾದ ಹೊತ್ತಿಗೆ ಬಂದು ಮೈದಾನದಲ್ಲಿ ಚೆನ್ನೈ ರೈನೋಸ್ ತಂಡದ ಆಟಗಾರರಿಗೆ ಕಾದು ಕುಳಿತು ಸುಸ್ತಾಗಿದ್ದರು. ಚೆನ್ನೈ ತಂಡ ಮೈದಾನ ಪ್ರವೇಶ ಮಾಡಿದ್ದು ಎರಡು ಗಂಟೆ ತಡವಾಗಿ ಇದರ ಬಗ್ಗೆ ಆಡಳಿತ ಮಂಡಳಿ ಕಿಂಚೀತು ಚಕಾರ ಎತ್ತಲಿಲ್ಲ ಯಾಕೆ ?, ಪಂದ್ಯ ಆರಂಭದ ನಂತರ ತಮಿಳು ನಟರ ತಂಡ ಪ್ರತಿ ಹಂತದಲ್ಲೂ ಕರ್ನಾಟಕದ ನಟರ ವಿರುದ್ದ ಜಿದ್ದಾಜಿದ್ದಿಗೆ ಬಿದ್ದಿತ್ತು. ಗುಂಪು ಸೇರಿ ಅಂಪೈರ್ ಗಳ ಮೇಲೆ ಒತ್ತಡ ತರುತ್ತಿದ್ದರು. ಸಕ್ರಮವಲ್ಲದ ರನೌಟ್ ತೀರ್ಪನ್ನು ಅಂಪೈರ್ ಗಳಿಂದ ಹೊರಡಿಸಿದ ನಂತರ, ಡೆಡ್ ಬಾಲ್ ಅನ್ನೋ ತೀರ್ಪಿಗೂ ಅವರು ಅವಕಾಶ ನೀಡಲಿಲ್ಲ. Read more 
ಮೀಡಿಯಾದಲ್ಲಿ ಮೌಢ್ಯ
-ದಿನೇಶ್ ಕುಮಾರ್ ಎಸ್.ಸಿ.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ಎಂಬ ವಿಷಯದ ಕುರಿತು ವಿಚಾರಸಂಕಿರಣದಲ್ಲಿ ಭಾಗವಹಿಸುತ್ತಿದ್ದೇನೆ ಎಂದಾಗ ನನ್ನ ಕವಿಮಿತ್ರರೊಬ್ಬರು ಹೇಳಿದ್ದು, ವಿದ್ಯುನ್ಮಾನ ಮಾಧ್ಯಮ ಎಂಬುದೇ ಈ ಯುಗದ ಅತಿ ದೊಡ್ಡ ಮೂಢನಂಬಿಕೆ ಎಂದು. ಹಲವರಿಗೆ ಒಪ್ಪಿಕೊಳ್ಳುವುದಕ್ಕೆ ತುಸು ಕಷ್ಟವಾದರೂ ಮೀಡಿಯಾ ಅನ್ನೋದೇ ಒಂದು ದೊಡ್ಡ ಮೌಢ್ಯವಾಗಿರುವುದು ಸತ್ಯದ ಮಾತು. ಈ ಮ…ಾತನ್ನು ಸಮರ್ಥಿಸುವುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ ಮೀಡಿಯಾದಲ್ಲಿ ಮೌಢ್ಯ ಎಂಬ ವಿಷಯ ಇವತ್ತಿನ ಚರ್ಚೆಯ ವಿಷಯವಾಗಿರುವುದರಿಂದ ಮೀಡಿಯಾ ಎಂಬ ಮೌಢ್ಯ ಎಂಬ ವಿಶಾಲ ವ್ಯಾಪ್ತಿಯ ವಿಷಯವನ್ನು ಸದ್ಯಕ್ಕೆ ಕೈಬಿಡುತ್ತಿದ್ದೇನೆ. ಎಲೆಕ್ಟ್ರಾನಿಕ್ ಮಾಧ್ಯಮವೆಂಬುದು ಆಧುನಿಕ ವಿಜ್ಞಾನ ತಂತ್ರಜ್ಞಾನದ ವಿಶಿಷ್ಠ ಕೊಡುಗೆ. ಆದರೆ ಅದು ಮೌಢ್ಯವನ್ನು ಬಿತ್ತರಿಸಲು ಬಳಕೆಯಾಗುತ್ತಿದೆ ಎಂಬುದೇ ಒಂದು ವ್ಯಂಗ್ಯ.
ಅಗ್ಗದ ಜನಪ್ರಿಯತೆಗಾಗಿ ಅವುಗಳಿಗೆ ಅಂಧಶ್ರದ್ಧೆಗಳು ಬೇಕು, ಸೆಕ್ಸ್ ಮತ್ತು ಕ್ರೈಂಗಳು ಬೇಕು. ಮೂವರು ಸಚಿವರು ಬ್ಲೂ ಫಿಲ್ಮ್ ನೋಡಿದ್ದನ್ನು ಈ ಚಾನಲ್‌ಗಳು ಬಹಿರಂಗಪಡಿಸಿ ಅವರ ಸಚಿವ ಸ್ಥಾನ ಕಳೆದವು. ಆದರೆ ಅದೇ ಸಮಯದಲ್ಲಿ ಕರ್ನಾಟಕದ ಜನತೆಗೆ ಬ್ಲೂ ಫಿಲ್ಮ್ ತೋರಿಸಿದವು, ಮಸುಕು ಕೂಡ ಮಾಡದೆ. ಎಲೆಕ್ಟ್ರಾನಿಕ್ ಮಾಧ್ಯಮ ಉತ್ತರದಾಯಿತ್ವವನ್ನು ಕಳೆದುಕೊಂಡಿದೆ. ಉತ್ತರದಾಯಿತ್ವ ಇಲ್ಲದ ಮಾಧ್ಯಮ ಯಾವತ್ತಿಗೂ ವಿನಾಶಕಾರಿಯಾಗಿರುತ್ತದೆ ಮಾತ್ರವಲ್ಲ, ಸಮಾಜದ್ರೋಹದ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿರುತ್ತದೆ. ನಮ್ಮ ಚಾನಲ್‌ಗಳು ಈಗ ಆ ಕೆಲಸವನ್ನು ಮಾಡುತ್ತಿವೆ. ಈ ತರಹದ ಗೋಷ್ಠಿಗಳಿಗೆ ಸಾಧಾರಣವಾಗಿ ಎಲೆಕ್ಟ್ರಾನಿಕ್ ಮೀಡಿಯಾದ ಪ್ರತಿನಿಧಿಗಳು ಬರುವುದು ಕಡಿಮೆ. ಬಂದರೂ ಇಲ್ಲಿನ ಚರ್ಚೆಯ ವಿಷಯಗಳು ಆ ಚಾನಲ್‌ಗಳಲ್ಲಿ ಪ್ರಸಾರವಾಗುವುದಿಲ್ಲ. ಹೀಗಾಗಿ ಇಲ್ಲಿ ಮಾತನಾಡುವ ವಿಷಯಗಳು ಯಾರನ್ನು ತಲುಪಬೇಕೋ ಅವರನ್ನು ತಲುಪುವುದೇ ಇಲ್ಲ. ಅದಕ್ಕೆ ಕಾರಣಗಳೂ ಇವೆ. ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ತಾವು ಮೌಢ್ಯವನ್ನು ಹರಡುತ್ತಿದ್ದೇವೆ ಎಂಬ ವಿಷಯ ಚೆನ್ನಾಗಿಯೇ ಗೊತ್ತು. ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸವನ್ನು ಅವು ಮಾಡುತ್ತಿವೆ. ಹೀಗಾಗಿ ಯಾವ ಸಲಹೆ-ಸೂಚನೆ-ನಿರ್ದೇಶನಗಳೂ ಅವುಗಳಿಗೆ ಬೇಕಾಗಿಲ್ಲ. ನಿದ್ದೆ ಮಾಡುತ್ತಿರುವವರನ್ನು ಎಚ್ಚರಿಸಬಹುದು, ನಿದ್ದೆಯ ನಾಟಕವಾಡುತ್ತಿರುವವರನ್ನು ಅಲ್ಲ. Read more 
ಟಿವಿ ಮಾಧ್ಯಮಗಳು: ಕಳ್ಳನನ್ನು ಹಿಡಿದ ಪೊಲೀಸರನ್ನೇ ಶಿಕ್ಷಿಸಿದ ಕತೆ…
-ಚಂದ್ರಶೇಖರ್ ಮಂಡೆಕೋಲು
ಕಳ್ಳನನ್ನು ಹಿಡಿದ ಪೊಲೀಸರನ್ನೇ ಕಿತ್ತು ಹಾಕುವ ಯೋಜನೆಗೆ ನಮ್ಮ ಆಳುವವರು ಮುಂದಾಗಿದ್ದಾರೆ. ಪ್ರಜಾಪ್ರಭುತ್ವದ ಗರ್ಭಗುಡಿಯಲ್ಲಿ ಹೇಸಿಗೆ ಮಾಡಿದ್ದನ್ನು ಯಾವ ನಾಚಿಕೆಯೂ ಇಲ್ಲದೆ ಸಮಥ್ರಿಸಿಕೊಳ್ಳುವವರು ನಮ್ಮೆದುರಿದ್ದಾರೆ ಎಂದರೆ ಏನೆನ್ನಲಿ? ಬಹುಶಃ ಇವೆಲ್ಲದಕ್ಕೂ ಹದಗೆಡುತ್ತಿರುವ ರಾಜಕಾರಣಿಗಳ ನೈತಿಕತೆಗಿಂತಲೂ, ಮಾಧ್ಯಮಗಳ ಕಟ್ಟೆಚ್ಚರವೇ ಕಾರಣ ಎಂದು ನಂಬಿದಂತಿದೆ ನಮ್ಮ ಸರಕಾರ. ಹೋದಲ್ಲೆಲ್ಲ ಹಿಂಬಾಲಿಸುತ್ತಲೇ, ತಮ್ಮ ಅನೈತಿಕತೆಯನ್ನು ಜಗತ್ತಿನೆದುರು ಸಾರಾಸಗಟಾಗಿ ಅನಾವರಣಗೊಳಿಸುತ್ತಿರುವ ಮಾಧ್ಯಮಗಳ ಗುಮ್ಮಕ್ಕೆ ಸರಕಾರ ಬೆದರಿದೆಯೇ? ಸದನ ಕಲಾಪವನ್ನು ಬಿತ್ತರಿಸಲು ಪ್ರತ್ಯೇಕ ಸರಕಾರಿ ಚಾನೆಲ್ ಪ್ರಸ್ತಾವ ಮುಂದಿಟ್ಟಿರುವುದು ಈ ಗುಮಾನಿ ಮೂಡಲು ಕಾರಣ.
ಲೋಕಸಭೆ, ರಾಜ್ಯ ಸಭೆಗಳ ಅಧಿವೇಶನವನ್ನು ಬಿತ್ತರಿಸಲು ಕೇಂದ್ರದಲ್ಲೊಂದು ಪ್ರತ್ಯೇಕ ಚಾನೆಲ್ ಇದೆ ಸರಿ. ಅಲ್ಲಿ ಅಂಥ ಚಾನೆಲ್ ಆರಂಭಿಸಿರುವುದಕ್ಕೂ ಒಂದು ಗಟ್ಟಿ ಕಾರಣ ಇದೆ. ದೇಶದ ಕೇಂದ್ರ ಬಿಂದುವಂತಿರುವ ಸಂಸತ್ತಿನಲ್ಲಿ ನಡೆಯುವ ಕಲಾಪವನ್ನು ದೇಶ ಬಾಂಧವರೆಲ್ಲಾ ನೋಡಬೇಕು. ಅವಷ್ಟನ್ನೂ ಪ್ರಸಾರಿಸಲು ನವದೆಹಲಿಯಲ್ಲಿರುವ ಚಾನೆಲ್ಗಳು, ಎಲ್ಲಾ ರಾಜ್ಯಗಳಲ್ಲಿರುವ ಸ್ಥಳೀಯ ಚಾನೆಲ್ ಪ್ರತಿನಿಧಿಗಳು ತಮ್ಮ ಕ್ಯಾಮರಾ ಸಮೇತ ಸಂಸತ್ತಿನಲ್ಲಿ ಸ್ಟ್ಯಾಂಡ್ ಊರಿದರೆ ಜಾಗ ಎಲ್ಲಿ ಸಾಕಾದೀತು? ಈ ಪ್ರಮುಖ ಉದ್ದೇಶದಿಂದ ಸಂಸತ್ ಕಲಾಪದ ಪ್ರಸಾರಕ್ಕೆಂದು ಪ್ರತ್ಯೇಕ ಚಾನೆಲನ್ನು ಕೇಂದ್ರ ಸರಕಾರ ಆರಂಭಿಸಿತ್ತು. ಅದಕ್ಕೆ ಬೇಕಾದಷ್ಟು ದುಡ್ಡೂ ಕೇಂದ್ರದಲ್ಲಿತ್ತು. ಯಶಸ್ವಿಯಾುತು ಕೂಡಾ. ಆದರೆ ರಾಜ್ಯದಲ್ಲಿ ಇಂಥ ದದ್ರು ಇದೆಯಾ? ನಮ್ಮಲ್ಲಿರುವ ಆರೇಳು ಚಾನೆಲ್ಗಳ ಕ್ಯಾಮರಾ ಸ್ಟ್ಯಾಂಡ್ ಊರುವುದಕ್ಕೆ ಕೆಂಪೇಗೌಡರು ಕಟ್ಟಿಸಿದ ನಮ್ಮ ಹೆಮ್ಮೆಯ, ಅಷ್ಟು ದೊಡ್ಡ ಸೌಧದಲ್ಲಿ ಜಾಗ ಸಾಕಾಗದಾ?
ವೊನ್ನೆ ಮಾಸ್ಟರ್ ಹಿರಣ್ಣಯ್ಯ ಅವರು ವಾಹಿನಿಯ ಕಾಯ್ರಕ್ರಮವೊಂದರಲ್ಲಿ ಹೇಳಿದ್ದರು- ಕಾಲ ಕೆಟ್ಟು ಹೋಗಿದೆ ಸ್ವಾಮೀ, ಸದನದಲ್ಲೇ ಹುಡುಗಿಯನ್ನು ರೇಪ್ ಮಾಡುವ ಕಾಲ ದೂರದಲ್ಲೇನೂ ಇಲ್ಲ, ನೋಡ್ತಿರಿ ಅಂತ. ಈಗ ಅಲ್ಲಿ ಬ್ಲೂ ಫಿಲಂ ನೋಡಿದ್ದಾರೆ, ಇನ್ನೇನೇನು ಮಾಡ್ತಾರೋ? ಇವೆಲ್ಲದರ ಅರಿವಿದ್ದೂ ನಮ್ಮ ಸರಕಾರ ಮಾಧ್ಯಮಗಳ ಕ್ಯಾಮರಾ ಲೆನ್್ಸಗೆ ಬೆದರಿ ಇಂಥ ನಿಧ್ರಾರಕ್ಕೆ ಬಂದಿದೆಯೇ? ಸರಕಾರಿ ಚಾನೆಲ್ ಎಂದ ಮೇಲೆ ಅವರು ಏನು ಮಾಡಿದ್ರೂ ನಮಗೆ ತೋರಿಸುತ್ತಾರಾ? Read more 
ಗೂಪಿ ಬಾಘ
-ನಟರಾಜು ಎಸ್ ಎಂ






