ದೀಪ ಭಾಗ -೩
-ವಿಜಯ ಹೂಗಾರ್
ಸೂರ್ಯ ನೆತ್ತಿಯಿಂದ ಇನ್ನೊಂದೆಡೆಗೆ ವಾಲುತ್ತಿದ್ದ.ಮನೆಯೊಳಗಿನ ಪೂಜೆ ಮುಗಿಸಿ ಎಂದಿನಂತೆ ಬೆಟ್ಟದ ಮೇಲಿರುವ ಲಕ್ಷ್ಮಿ ದೇವರ ಕಡೆಗೆ ಹೋಗಲು ನೈವಿದ್ಯದ ತಟ್ಟೆ ಸಿದ್ಧಪದಿಸುತ್ತಿದ್ದಳು.ಇಷ್ಟೊತ್ತಿಗೆ ಮೈದುನ ಸೂರಪ್ಪನ ಹೆಂಡತಿ ಗಿರಿಜಕ್ಕ ಪೂಜೆ ಮಾಡಿ ದೀಪ ಹಚ್ಚಿ ಬಂದಿರುತ್ತಾಳೆ ಅಂತ ಬೆಟ್ಟದ ಮೇಲಿರುವ ದೇವಸ್ಥಾನದ ಕಡೆ ಉರಿಬಿಸಿಲಲ್ಲಿ ಹೆಜ್ಜೆ ಹಾಕತೊಡಗಿದಳು.ನೂರಾಹನ್ನೊಂದು ಮೆಟ್ಟಿಲು ಏರಿದ ಮೇಲೆ ತುಂಡಿನಂತೆ ಬರುವ ಮಟ್ಟಸ ನೆಲದ ಮೇಲೆ ದೇವಸ್ಥಾನ ಕಟ್ಟಲಾಗಿತ್ತು.ಶಾಂತವಾಗಿ ತಂಗಾಳಿ ಸುಸುತ್ತಿರುವ ದೇವಸ್ಥಾನದಲ್ಲಿ ಊರ ಗೌಡರು ಮತ್ತು ಗಿರಿಜಕ್ಕ ಗುಸು ಗುಸು ಮಾತಾಡುವದು ಕೇಳಿ ಕಮಲಜ್ಜಿ ಬೆಚ್ಚಿದಳು.ಇವಳು ಒಳ ನಡೆದಳು.ಅವರು ಸುಮ್ಮನಾದರು.ಗರ್ಭ ಗುಡಿಯೊಳಗೆ ಸೇರಿದಳು .ಗಾಳಿಯ ಆಟಕ್ಕೆ ಆಡುವಂತೆ ನೀಲಾಂಜನ ಕುಣಿಯುತಿತ್ತು,ನಿನ್ನ ಕೈಗೆ ಸಿಗೋದಿಲ್ಲ ಅಂತ ಅಣುಕಿಸಿದಂತೆ.”ಸರದಿಯ ಪ್ರಕಾರ ನಿನಗೆ ದೀಪ ಹಚ್ಚುವ ಅವಕಾಶ ನಮಗೆ ಮಾಡಿ ಕೊಡು” ಅಂತ ದೇವರಿಗೆ ಅಧಿಕೃತವಾಗಿ ಬೇಡಿಕೊಂಡು ಹೊರಗೆ ಬಂದಳು.ಇನ್ನೇನು ಹೋಗಬೇಕು ಅನ್ನೋಷ್ಟರಲ್ಲಿ ಭೂಮಂಡಲದಂತಿರುವ ಹೊಟ್ಟೆಯ ಮೇಲೆ ಕೈ ಆಡಿಸುತ್ತ ಊರ ಗೌಡ ‘ಕಮಲಜ್ಜಿ ನಿಮ್ ಮಗ ರಾಮಪ್ಪನಿಗೆ ಊರಿಂದ ಕರೆಸು,ಅವನ ಜೊತೆ ಮಾತಾಡೋದಿದೆ’ ಅಂತ ಗೌಡರ ಉಗ್ಗಂಡ ಧ್ವನಿಯಲ್ಲೇ ಹೇಳಿದ.ಪರಕಿವಿಯಿಂದ ಆಲಿಸುವಂತೆ ಕೇಳಿ ಮನೆಕಡೆಗೆ ಧಾವಿಸಿದಳು.ಗಿರಿಜಕ್ಕ ಮಾಡುತ್ತಿರುವ ಹುನ್ನಾರ ಕಮಲಜ್ಜಿಗೆ ತುಸು ಅರ್ಥವಾಗತೊಡಗಿತು.ಸರದಿಯ ಪ್ರಕಾರ ನಾವು ಮಾಡಬೇಕಿದ್ದ ಪೂಜೆ ಹೇಗೋ ಗೌಡರನ್ನ ತನ್ನ ಬಲೆಗೆ ಸಿಲುಕಿಸಿ ಲಪಟಾಯಿಸಬೇಕೆನ್ನುವದು ಸ್ಪಷ್ಟವಾಗತೊಡಗಿತು.
ಅವಿವೇಕಿ ಮಿತ್ರನಿಗಿಂತ ವಿವೇಕಿ ಶತ್ರು ಮೇಲು
ಪ್ರವೀಣ ಓದೋ ವಿಷಯದಲ್ಲಿ ಯಾವಾಗ್ಲೂ ಸೋಂಬೇರಿ,ಅಪ್ಪ ಅಮ್ಮ ಎಷ್ಟು ಬೈದರೂ ತನ್ನ ಲೋಕದಲ್ಲೇ ಮಗ್ನ, ಸ್ನೇಹಿತರ ಜೊತೆ ಯಾವಾಗ್ಲೂ ತಿರುಗಾಡೋದು, ಅಪ್ಪ ಅಮ್ಮನ ಹತ್ರ ಹಣ ತೆಗೆದುಕೊಂಡು ಸಿನಿಮಾ ನೋಡೋದು, ಭಾನುವಾರ ಬಂದ್ರೆ ಸಾಕು ಬೆಳಿಗ್ಗೆ ಇಂದ ಸಂಜೆಯವರೆಗೂ ಬೆಟ್ಟಿಂಗ್ನಲ್ಲಿ ಕ್ರಿಕೆಟ್ ಆಡೋದು ಇದೇ ಕೆಲಸ, ಅಪ್ಪ ಅಮ್ಮನಿಗೂ ಬುದ್ಧಿ ಹೇಳಿ ಹೇಳಿ ಸುಸ್ತಾಗಿತ್ತು. ಹುಡುಗ್ರ ಸಹವಾಸ ಬರೀ ಆಡುವುದಕ್ಕೆ ಸೀಮಿತವಾಗದೆ ದುಶ್ಚಟಗಳ ಕಡೆಯೂ ಸಹ ವಾಲಿತ್ತು. ಮನೆಗೆ ಬಂದಾಗ ಒಮ್ಮೆ ಧೂಮಪಾನದ ಘಮಲು ಅಮ್ಮನ ಮೂಗು ಬಡಿದಿತ್ತು. ಆಗಾಗ ಅಪ್ಪನ ಜೇಬಿನಿಂದ ನೋಟುಗಳು ಸಹ ಕಾಣೆಯಾಗುತಿದ್ದವು. ಅಪ್ಪ ಅಮ್ಮ ಇಬ್ಬರು ಚರ್ಚಿಸಿ ಏನು ಮಾಡುವುದು ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು.
ಮರುದಿನ ಭಾನುವಾರ ಪ್ರವೀಣ ಎಂದಿನಂತೆ ಹೇಳದೆ ಕೇಳದೆ ಕ್ರಿಕೆಟ್ ಆಡಲು ಹೊರಟು ಬಿಟ್ಟ, ಅಪ್ಪ ಅಮ್ಮ ಸೀದ ಅವರಪ್ಪನ ಮನೆಗೆ ಹೋಗಿ ಪ್ರವೀಣನ ತಾತನನ್ನು ಕರೆ ತಂದರು. ತಾತನಿಗೆ ವಯಸ್ಸು ಸುಮಾರು ೭೦ ಆಗಿದ್ದರು ಬಹಳ ಚುರುಕು, ಕಾಲ ಕಾಲಕ್ಕೆ ತಾನು ಸಹ ಬದಲಾಗಿದ್ದಂತಹ ಘಾಟಿ ಮುದುಕ. ಕಂಪ್ಯೂಟರ್, ಕ್ರಿಕೆಟ್, ಸಿನಿಮಾ ಎಲ್ಲಾದ್ರಲ್ಲು ಎತ್ತಿದ ಕೈ. ಕ್ರಿಕೆಟ್ ಆಡಲು ಹೋಗಿದ್ದ ಪ್ರವೀಣ ಎಂದಿನಂತೆ ಮನೆಗೆ ಬಂದ, ಬಂದೊಡನೆ ತಾತನನ್ನು ನೋಡಿ ಆಶ್ಚರ್ಯ ಚಕಿತನಾದ, ತಾತನ ಕಾಲಿಗೆ ನಮಸ್ಕಾರ ಮಾಡೋ ಅಂತ ಅಪ್ಪ ಹೇಳೋ ತನಕ ಇವ್ನಿಗೆ ತೋಚಲಿಲ್ಲ, ಮಾಡ್ತೀನಿ ಕೈ ಕಾಲು ತೊಳ್ಕೊಂದು ಬಂದೆ ಅಂತ ಸ್ನಾನದ ಮನೆಗೆ ಹೋಗಿ ಟೂತ್ ಪೇಸ್ಟ್ ನ ಒಂದಷ್ಟು ಬಾಯಿಗೆ ಹಾಕಿಕೊಂಡು ಮುಕ್ಕಳಿಸಿ ಬಂದ, ಬಂದೊಡನೆ ನಮಸ್ಕಾರ ಮಾಡಿದಾಗ ತಾತನಿಗೆ ಧೂಮಪಾನದ ಘಮಲು ತಿಳಿದು ಬಿಡ್ತು. ಅದೂ ಅಲ್ದೆ ಮೊದಲೇ ಪ್ರವೀಣನ ಅಪ್ಪ ಅಮ್ಮ ತಮ್ಮ ಮಗ ದಾರಿ ತಪ್ತಾ ಇದ್ದಾನೆ ಅನ್ನೋ ವಿಷಯ ಬೇರೆ ಮೊದಲೇ ಹೇಳಿದ್ರು. ವಿಷಯ ಗೊತ್ತಾದ್ರು ತಾತ ಮುಗುಮ್ಮನೆ ಇದ್ದರು.
ಮಾರನೆ ದಿನ ಪ್ರವೀಣ ಕಾಲೇಜಿಗೆ ಅಂತ ಹೊರಟಾಗ, ತಾತ ಸಹ ತಯಾರಾಗಿ ಮೊಮ್ಮಗನೊಂದಿಗೆ ಹೊರಡಲು ಸಿದ್ದರಾಗಿದ್ದರು, ಪ್ರವೀಣ ತಾತ ಹಾಗೆಲ್ಲ ನಿಮ್ಮನ್ನ ಕಾಲೇಜಿಗೆ ಬಿಡಲ್ಲ, ಬಹಳಾ ಶಿಸ್ತು ಅಲ್ಲಿ ಅಂತೆಲ್ಲ ಹೇಳ್ದ, ಅದಕ್ಕೆ ತಾತ ನಾ ನೋಡದೇ ಇರೋ ಕಾಲೇಜೇನೋ ಅದು, ನೀನ್ ಓದ್ತಾ ಇರೋ ಕಾಲೇಜು ನನ್ನ ಫೇಸ್ಬುಕ್ ಗೆಳೆಯ ಪ್ರಕಾಶ್ ರಾಜು ದು, ಅವರು ನಾನು ಇಲ್ಲಿಗೆ ಬಂದಿರೋ ಸ್ಟೇಟಸ್ ನೋಡಿದ್ರಂತೆ, ಫೋನ್ ಮಾಡಿದ್ರು ಅದಕ್ಕೆ ಬರ್ತಾ ಇದ್ದೀನಿ ಅಂತ ಪ್ರವೀಣಂಗೆ ಒಳ್ಳೆ ಟಾಂಗ್ ಕೊಟ್ಟ್ರು. ಪ್ರವೀಣನ ಮೊಬೈಲ್ ಗೆ ಅವನ ಗೆಳೆಯನ ಫೋನ್ ಬಂತು, ಏನ್ ಮಗಾ ಸಿನಿಮಾಗೆ ಟಿಕೆಟ್ ತೊಗೊಂಡು ಕಾಯ್ತಾ ಇದ್ದೀವಿ ಎಲ್ಲಿದ್ಯ ಇನ್ನ?? ಪ್ರವೀಣ,ತಾತನ ಜೊತೆ ಇದ್ದೀನಿ ಮಗಾ ಆಮೇಲೆ ಫೋನ್ ಮಾಡ್ತೀನಿ ಅಂದ. ಫೋನ್ ಕಟ್ ಆದ ಮೇಲೆ ತಾತ ಕೇಳಿದ್ರು ಏನು ಸಿನಿಮಾಗೆ ಹೋಗ್ಬೇಕ ಅಂತ, ಅದಕ್ಕೆ ಪ್ರವೀಣ ಹೌದು ನಿಮಗೆ ಹೇಗೆ ಗೊತ್ತಾಯ್ತು ತಾತ ಅಂದ, ಅದಕ್ಕೆ ರಾತ್ರಿ ನೀನು ನಿನ್ನ ಗೆಳೆಯನ ಜೊತೆ ಫೋನಲ್ಲಿ ಮಾತಾಡ್ತಾ ಇದ್ದಲ್ಲ ಆಗ ಕೇಳಿಸ್ತು ನಂಗೆ ಅಂದ್ರು. ಆದ್ರೆ ಕಾಲೇಜಿಗೆ ಚಕ್ಕರ್ ಹೊಡೆದು ಸಿನಿಮಾ ನೋಡೋದು ತಪ್ಪಲ್ವ ಅಂದ್ರು. ಪ್ರವೀಣನಿಗೆ ಉತ್ತರ ಕೊಡಲು ಆಗ್ಲಿಲ್ಲ, ಕಡೆಗೆ ತಾತ, ನಿನ್ ಸ್ನೇಹಿತನಿಗೆ ಫೋನ್ ಮಾಡಿ ಹೇಳು ನನಗೂ ಒಂದು ಟಿಕೆಟ್ ತೊಗೊ ಅಂತ ನಾನು ಬರ್ತೀನಿ ಅಂದ್ರು. ಪ್ರವೀಣನಿಗೆ ಒಂದು ಕಡೇ ಖುಷಿ ಆಯ್ತು ಮತ್ತೆ ಭಯ ಸಹ ಆಯ್ತು ಮನೇಲಿ ಹೇಳಿಬಿಟ್ರೆ ಅಂತ ಅಷ್ಟ್ರಲ್ಲಿ ತಾತ, ನೀನೇನು ಯೋಚಿಸ ಬೇಡ ಮನೇಲಿ ನಾ ಏನು ಈ ವಿಷಯ ತಿಳಿಸಲ್ಲ ಅಂದಾಗ ಸ್ವಲ್ಪ ಸಮಾಧಾನ ಆಯ್ತು.
ದೀಪ ಭಾಗ ೨
- ವಿಜಯ್ ಹೂಗಾರ್
ಬೆಳಕಿಂಡಿಯಿಂದ ಮೂಡುವ ಹಿಡಿ ಬಿಸಿಲುಗರಿಗಳು ಇಣುಕುವ ಮುಂಚೆ ದೇವಕಿ ಅಡುಗೆ ಮನೆ ಸೇರಿದ್ದಳು.ಒಲೆ ಹತ್ತಿಸಿದ ಮೇಲೆ ಅಡುಗೆ ಮನೆ ಹೊಗೆಯಿಂದ ತುಂಬಿ ತುಳುಕುತ್ತಿತ್ತು.ಅಡುಗೆಮನೆಯಿಂದ ಹೊರಮನೆ,ಹೊರಮನೆಯಿಂದ ಕೇರಿಯಲ್ಲ ಹರಡುತಿತ್ತು.ಅಮಾವಾಸ್ಸೆಯ ಕತ್ತಲೆಯಂತೆ ಗೋಚರಿಸುತ್ತಿರುವ ಗೋಡೆಗಳ ಮಧ್ಯೆ ಖೆಮ್ಮುತ್ತ,ಬೆಂಕಿ ಆರುವಂತಿದ್ದರೆ ಊದುತ್ತ,ಮೈಯಲ್ಲ ಬೆವತು,ಸುರಿಯುವ ಬೆವರ ಧಾರೆಗೆ ಸೆರಗಿನಿಂದ ಒರೆಸುತ್ತಾ ರುಚಿ ರುಚಿಯಾದ ಅಡುಗೆ ಮಾಡುತ್ತಿದ್ದಳು.
ಅಷ್ಟೊತ್ತಿಗೆ ”ಏ ಇನ್ಯಾ…! ಹೋಗಿ ಆ ಭುರೆಗೊಳ್ ಮನ್ಯಾಗಿಂದು ಪಾವ್ ಲೀಟರ್ ಹಾಲ ಸಿಗ್ತದೆನು ತೊಗೊಂಬಾ,ಚಾ ಮಾಡಕ್ಕ ಹಾಲಿಲ್ಲ” ಅಂತ ದೇವರ ಮನೆಯಿಂದ ತರಕಸ್ವಾರದಲ್ಲಿ ಕಮಲಜ್ಜಿಯ ಅವಾಜ್ ಕೇಳಿ, ಪಡಸಾಲೆಲ್ಲಿ ಟಿವಿ ನೋಡುತ್ತಾ ಕುಳಿತ ಮೊಮ್ಮಗ ಇನ್ಯಾ ತನ್ನ ಸಂಗಡಿಗರ ಸಮೇತ ಪುರ್ರ್ ಅಂತ ಹಾರಿಹೋದ.ಮನೆಯೆಲ್ಲ ಊದಿನ ನುರುಹೊಗೆಯ ಪರಿಮಳ ಸೂಸುತ್ತ ದೇವರ ಮನೆಯಿಂದ ಬಂದ ಕಮಲಜ್ಜಿ ಹಠತ್ತಾನೆ ಖಾಲಿಯಾದ ಪಡಸಾಲೆಯನ್ನು ನೋಡಿ,”ಅಯಿ…!ಹಾಟ್ಯಗಳ ತೊಗೊಂಬಂದು…!ಕೆಲಸ ಮಾಡಕ್ಕ ಏನ್ ಬ್ಯಾನಿ ಬರ್ತದ…?ತಿಲ್ಲಕ್ ಹ್ಯಾಂಗ್ ಬರ್ತದ,ಎರಡೂ ದವಡಿಯಲ್ಲಿ …!”ಅಂತ ಕೈಯಲ್ಲಿರುವ ನೈವಿದ್ಯದ ತಟ್ಟೆ ಹಿಡಿದು ಖಾಲಿ ಪಡಸಾಲೆಯ ಮೇಲೆ ತನ್ನ ಕೋಪ ತೋರಿಸುತ್ತ ನಿಂತಳು.’ಇನ್ಯಾರಿಗೆ ತೋರಿಸಬೇಕು…..?’ ಅಂತ ಪ್ರಶ್ನಾರ್ಥಕ ಮುಖದಿಂದ ಟಿವಿಯ ಪರದೆ ಕಮಲಜ್ಜಿಯ ಕಡೆ ಹೆದರಿ ಮುಜುಗುರದಿಂದ ನೋಡತೊಡಗಿತು.ಹಾಗೆ ಕೋಪದಿಂದ ಗಲಿಬಿಲಿಗೊಂಡ ಮುಖದಿಂದ ಮನೆಯ ಹೊರಗಡೆಯ ಇರುವ ಚಿಕ್ಕ ಕಟ್ಟೆಯಮೇಲೆ ಆಸಿನಳಾದ ತುಳಸಿಗೆ ಭುಸುಗುಟುತ್ತಲೇ ನೈವಿದ್ಯ ಅರ್ಪಿಸತೊಡಗಿದಳು.
Read more 
ದೀಪ. ಭಾಗ-೧
- ವಿಜಯ್ ಹೂಗಾರ್
ಸುಳಿಗಾಳಿಯಿಂದ ಹಗುರಾಗಿ ತೇಲಿದ ಮಣ್ಣು ಬಿಸಿಲಿನ ಪ್ರಭೆಗೆ ಮೊನಚಾಗಿ ಇಡೀ ಊರನ್ನ ಸಿಂಪಡಿಸಿದಂತೆ ಆವರಿಸಿತ್ತು.ಅಲ್ಲಲ್ಲಿ ತಲೆಯೆತ್ತಿದ ಮರಗಳು ತುಂಡು ತುಂಡಾಗಿ ನೆಲವನ್ನು ನೇವರಿಸುವಂತೆ ಬೇರುರಿದ್ದವು.ಊರ ಮಧ್ಯ ನಡುಗಡ್ದೆಯಂತೆ ಇರುವ ದೈತ್ಯ ಬೆಟ್ಟದ ಸುತ್ತಲೂ ಹರಿಯದ ನೀರಿನಂತೆ ಹರಿದ ಮನೆಗಳು ಕಲಸುಮೇಲೋಗರವಾಗಿ ಹರಡಿಕೊಂಡಿದ್ದವು.ಬೆಟ್ಟದ ಮೇಲೆ ಊರ ಕಾಯೋ ಪಹರೆದಾರನಂತೆ ಲಕ್ಷ್ಮಿ ದೇವತೆ ಭಕ್ತರ ಸೇವೆ ಸ್ವೀಕರಿಸುತ್ತಾ ವಾಸವಾಗಿದ್ದಳು.ಬೆಟ್ಟದ ಅಪರಭಾಗದಲ್ಲಿ ಬೀಕೋ ಅನ್ನುತ್ತಿರುವ ಬತ್ತಿ ಹಗುರಾದ ಕೆರೆ, ಆಡಿ ಹೋದ ಪುಟ್ಟ ಮಕ್ಕಳ ಹೆಜ್ಜೆಯ ಬರೆದಿಡುವ ಕಾಗದದಂತಿತ್ತು.ಬಿಸಿಲಿನ ಹೊಳೆಗೆ ತಟಸ್ಥವಾಗಿ ನಿಂತಿರುವ ಬೆವತ ಮನೆಗಳು ಶೋಕಸಾಗರದಲ್ಲಿ ಕಳೆದುಹೋದಂತೆ ಶಾಂತವಾಗಿದ್ದವು.
ಕಮಲಜ್ಜಿಗೆ ವಯಸ್ಸಾದರೂ ಈಗಲೂ ಚೂಟಿಯಾಗಿ ವಯಸ್ಸಿನ ಹುಡುಗಿಯರು ನಾಚುವಂತೆ ಕೆಲಸ ಮಾಡುತಿದ್ದಳು. ಮಗಳಮಗ ಹನುಮಂತನ ಮದುವೆಯಾಗಿ ಐದು ಸಂವತ್ಸರ ಕಳೆದರು ಮಕ್ಕಳಾಗಲಿಲ್ಲ ಅಂತ ತುಂಬಾ ಬೇಸರಿಸಿದ್ದಳು. ಮುತ್ತಜ್ಜಿಯಾಗಿ ಮರಿ ಮೊಮ್ಮಗನನ್ನು ಆಡಿಸಬೇಕೆಂದು ಬಲು ಆಸೆಯಿಂದ ಹನುಮಂತನ ಮದುವೆಯಾದ ಹೊಸತರಲ್ಲಿ ನವದಂಪತಿಗಳಿಗೆ ಖಾಸಗಿ ಕೋಣೆಯಲ್ಲಿ ಖಾಸಗಿಯಾಗಿ ಬಿಟ್ಟು ಕೊಟ್ಟಿಗೆಯಲ್ಲಿ ಇರುವ ಚಿಕ್ಕ ಕೋಣೆಯಲ್ಲಿ ಎಷ್ಟೋ ದಿವಸ ಒಬ್ಬಳೇ ಮಲಗಿದ್ದಳು.ಅದರಿಂದ ಫಲ ಕಾಣದೆ ಹೋದಾಗ ಪ್ಯಾಟೆಯಲ್ಲಿರುವ ದೊಡ್ಡ ಮಗ ರಾಮಪ್ಪನ ಹತ್ತಿರ ‘ಸೊಸೆಯನ್ನ ನೋಡಬೇಕೆನಿಸಿತು’ ಅಂತ ಹೇಳಿ ಪದೇ ಪದೇ ಹೋಗಿ ಬರುತ್ತಿದ್ದಳು.’ಈ ಕೈಯ್ಯಾಗ ಎಷ್ಟು ಬಾಣಂತನ ಮಾಡಿಲ್ಲ ಲಕ್ಷ್ಮಿಯಕ್ಕ,ಆದರ ನಮ್ಮ ದೇವಕಿಯ (ಹನುಮಂತನ ಹೆಂಡತಿ) ಬಾಣಂತನ ನನ್ನ ಕೈಯಾರ ಮಾಡಬೇಕೆಂಬುದು ಬಕ್ಕುಳ್ ಆಸೆ ಆಗ್ಯದ ನೋಡು’ ಅಂತ ತನ್ನ ಸಂಕಟದ ಆಶಯ ಲಕ್ಷ್ಮಿಯಕ್ಕನ ಮುಂದೆ ತೋಡಿಕೊಳ್ಳುತ್ತಿದ್ದಳು.ಪರಾಗಸ್ಪರ್ಷದ ಅಮೃತ ಘಳಿಗೆಯ ಕಾಯುವ ಹೂವಾಡಗಿತ್ತಿಯಂತೆ ದೇವಕಿಯಿಂದ ಹೂವಿನಂಥ ಮಗು ಬಯಸುತ್ತಿದ್ದಳು.ಇವಳ ಕೊನೆಗಾಣದ ಕೊರಗು ಕಂಡು ಕಮಲಜ್ಜಿಯ ಗಂಡ ಪೂಜಾರಪ್ಪ ಮಾತ್ರ “ಸ್ವಲ್ಪ ದಮ್ ತಿನು,ಬಿತ್ತಿದ ಪ್ರತಿವರ್ಷ ಬೆಳೆ ಚನ್ನಾಗಿ ಬರಬೇಕು ಅಂತೇನಿಲ್ಲ….ಕೆಲವೊಂದುಸಲ ಮಳೆ ಬಿದ್ದಿಲ್ಲ ಅಂದ್ರೆ ಬಿತ್ತಿದೆಲ್ಲ ಲುಕ್ಸಾನು ಆಗ್ತದ” ಅಂತ ಸಮಾಧಾನ ಮಾಡ್ತಿದ್ದ.ಅದಕ್ಕೆ ಕಮಲಜ್ಜಿ “ಹು ಲುಕ್ಸಾನ ಯಾಕ ಆಗ್ತದ,ಮಳಿ ಬರಾದ ನೋಡೇ ಬಿತ್ತೊಕೆನಾಗ್ತದ” ಅಂತ ಹೌಹಾರುತ್ತಿದ್ದಳು.
ತುಂಬೆ ನಿನ್ನ ಮಹಿಮೆ ಏನೆಂಬೆ …
-ಅನಿತಾ ನರೇಶ್ ಮಂಚಿ
ವಾಮನನಲ್ಲಿ ಬಲಿ ಚಕ್ರವರ್ತಿ ‘ ನಾನಿನ್ನು ಭೂಮಿಗೆ ಬರುವ ದಿನ ಯಾವುದು ‘ಎಂದು ಕೇಳಿದಾಗ ವಾಮನನ ಉತ್ತರದಲ್ಲಿ’ ತುಂಬೆಯ ಮರದಡಿ ಮಕ್ಕಳು
267 ನೇ ನಂಬರಿನ ಕೋಣೆ
-ವಸಂತ್ ಕುಮಾರ್ ಆರ್ ಕೋಡಿಹಳ್ಳಿ
ಅದೊಂದು ಕಿರಿದಾದಕೋಣೆ, ಕೋಣೆಯ ಸುತ್ತಲೂ ಗಾಡಕತ್ತಲು ಕವಿದಿದೆ,. ಮಧ್ಯ ಭಾಗದಲ್ಲೊಂದು ಬೆಳಕು ನಿಧಾನವಾಗಿ ಅತ್ತಿಂದಿತ್ತ ಇತ್ತಿಂದತ್ತ ತೂಗಾಡುತ್ತಿದೆ. ಕೋಣೆಯ ನಾಲ್ಕೂ ಮೂಲೆಗಳಲ್ಲಿ ಯಾವುದೇ ಧನಿಯಿಲ್ಲ ತುಂಬಾ ನಿಶ್ಚಬ್ಧ ನಿಶ್ಚಲತೆ ಆವರಿಸಿದೆ. ಏನನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ?. ಗೋಡೆಗೆ ಕೈ ತಾಗಿಸುತ್ತೇನೆ, ತುಂಬಾ ಒರಟಾಗಿದೆ, ಅಲ್ಲಲ್ಲಿ ಕೆಂಪು ಕಲೆಗಳ ಗುರುತುಗಳಿವೆ. ಆ ಮಂದ ಬೆಳಕಿನಲ್ಲಿ ಗಾಯದ ಗುರುತುಗಳಂತೆ ಕಾಣುತ್ತವೆ. ಅವು ಕೆಂಪು ಕಲೆಯ ಗುರುತುಗಳೇ ಆದರೆ ಅವು ಇನ್ನೂ ಅಸಿಯಾಗಿ ಕೈಗೆ ಅಂಟುವ ಸ್ಥತಿಯಲ್ಲಿವೆ. ಬಹುಷಃ ಯಾರದೋ ರಕ್ತದ ಕಲೆಗಳಿರಬೇಕು. ಮುಂದೊಂದು ಭಾಗದ ಅಡಿಯಲ್ಲಿ ಎಂಥದ್ದೋ ಕಾಗದದ ಚೂರುಗಳು ಕೈತಾಗುತ್ತಿವೆ. ಇನ್ನೂ ಸ್ವಲ್ಪ ಹುಡುಕಿದಾಗ ಕಬ್ಬಿಣದ ಬಾಗಿಲೊಂದು ಸ್ವರ್ಷಿಸುತ್ತದೆ. ತುಂಬಾ ಉದ್ದವಾಗಿದೆ ಅದರ ಸರಳುಗಳುಗಳು. ಬಲಿಷ್ಟವಾದ ಕಬ್ಬಿಣದ ಬಾಗಿಲು. ಏನೂ ಅರ್ಥವಾದ ಸ್ಥತಿಯಿಂದ ನೋಡುತ್ತಿದ್ದೇನೆ. ಇಲ್ಲಿ ಕಬ್ಬಿಣದ ಬಾಗಿಲಾಕಿದೆ ಯಾವುದೀ ಕೋಣೆ ?
ಇಂಥ ಕೋಣೆಯನ್ನು ನನ್ನ ಜೀವಮಾನದಲ್ಲೇ ಎಲ್ಲೂ ನೋಡಲಿಲ್ಲವಲ್ಲ. ಇದಕ್ಕೆ ಉತ್ತರಿಸಲು ನನ್ನೊಬ್ಬನನ್ನು ಬಿಟ್ಟು ಬೇರೆ ಯಾರೂ ಕಾಣುತ್ತಿಲ್ಲ. ನನ್ನ ಕೋಣೆಯ ತುಂಬಾ ಪುಸ್ತಕಗಳು ತುಂಬಿರುತ್ತಿದ್ದವು, ಕಬ್ಬಿಣದ ಕುರ್ಚಿಯೊಂದಿರಬೇಕಿತ್ತು. ಅದರ ಪಕ್ಕದಲ್ಲಿ ಮರದ ಪೆಟ್ಟಿಗೆ. ಅದರ ಕೊನೆಯಲ್ಲೊಂದು ಗಾಜಿನ ಶೀಷೆ, ಅಂದರೆ ನನ್ನ ಲೇಖನಿಗೆ ಮಸಿಯನ್ನು ತುಂಬಿಸುತ್ತಿದ್ದ ಶೀಷೆ. ಮೇಲೊಂದು ಸೀಮೆ ಎಣ್ಣೆಯ ದೀಪ. ಕರೆಂಟ್ ಇಲ್ಲಾದಾಗ ಅಚ್ಚುತ್ತಿದ್ದ ದೀಪ. ಗೋಡೆಗೆ ತಗುಲಿಸಿದ್ದ ಕ್ಯಾಲೆಂಡರ್ರು. ಮಧ್ಯಭಾಗದಲ್ಲಿ ಹಳೆಯ ಎರಡು ಮಣ್ಣಿನ ಕಪಾಟುಗಳು, ಅದರೊಳಗೆ ಮುಚ್ಚಿಟ್ಟಿದ್ದ ಚಿಲ್ಲರೆ ನಾಣ್ಯಗಳು. ಕಥೆ ಕವನ ಬರೆದಿಡುತ್ತಿದ್ದ ಹಾಳೆಗಳು. ಯಾವೂದೂ ಸಹ ಕಾಣುತ್ತಿಲ್ಲ. ನನ್ನ ಕೋಣೆಯಲ್ಲಿ ಮಂದವಾಗಿ ಬೆಳಗುತ್ತಿದ್ದ ಹೈಮಾಸ್ ದೀಪ, ರೋಸ್ ಹುಡ್ ಮರದಿಂದ ತಯಾರಿಸಿದ್ದ ಮರದ ಬಾಗಿಲು ಯಾವುದೂ ಇಲ್ಲ.ಈ ಸ್ಥಳ ನನಗೆ ತೀರ ಹೊಸದಂತಿದೆ. ಅಂದರೆ ನಾನು ಓದುತ್ತಿದ್ದ (julius fuchik) “ಜ್ಯೂಲಿಯಸ್ ಫ್ಯೂಚಿಕ್ ”ರ ಕಥೆಯನ್ನು ನೆನಪಿಸುವ ಕೋಣೆಯ ಹಾಗೆ. ಅವರ 267 ನೇ ನಂಬರಿನ ಖಾರಾಗೃಹದ ಕೋಣೆಯಯಂತೆ. ಹೌದು ಅದು ತುಂಬಾ ಭಯಾನಕ ಕೋಣೆ. ಜೂಲಿಯಸ್ಸರನ್ನು ಕ್ಷಣ ಕ್ಷಣವೂ ಹಿಂಸಿಸಿ ವಧೆಮಾಡಿದ ಕೋಣೆ. ಖಂಡಿತ ಅದು ಸಾವಿನ ಕೋಣೆ. ಅವರ ಪುಸ್ತಕದಲ್ಲೇ ಓದಿದ್ದೇನೆ. ಅದು 267 ನೇ ನಂಬರಿನ ಕೋಣೆ. ಜೂಲಿಯಸ್ಸರು ತಮ್ಮ ಜೀವನದ ಕಟ್ಟ ಕಡೆಯ ಕ್ಷಣಗಳನ್ನು ಆ ಕೋಣೆಯಲ್ಲೇ ಕಳೆದಿದ್ದರು. ತುಂಬಾ ದಯಾನೀಯ ಸ್ಥಿತಿಯಲ್ಲೂ. ಅವರು ಸಾವನ್ನೂ ಸಹ ಸರಳವಾಗಿ ತೆಗೆದುಕೊಂಡಂತ ಮಹಾತ್ಮರು. ಅವರ ನೋವು – ಕಷ್ಟಗಳು ಯಾವುದನ್ನೂ ಲೆಕ್ಕಿಸದೆ. ಪಾನ್ ಕ್ರಾಟ್ ಜೈಲಿನಲ್ಲಿ “ಕೊನ್ ಲಿಕ್ಸಿ” ಎಂಬ ಕಾವಲುಗಾರನ ಸಹಾಯದೊಂದಿಗೆ ರಹಸ್ಯವಾಗಿ ತರಿಸಿಕೊಂಡ “ಪೆನ್ಸಿಲ್ ಮತ್ತು ಕಾಗದ”ದ ಚೂರುಗಳಿಂದ ನಾಜಿ ಜೈಲೆಂಬ ಪಿಶಾಚ ಗೃಹದಲ್ಲಿನ ಕಂಡುಂಡ ಪ್ರತ್ಯಕ್ಷ ಅನುಭವದ ದಾಖಲು. ತನ್ನ ಕಟ್ಟ ಕಡೆಯ ದಿನಗಳ ಯಾತನಾ ದಿನಚರಿಯ ಟಿಪ್ಪಣಿಗಳ ಸಂಗ್ರಹ. ತನ್ನ ಪತ್ನಿಯಾದ ಆಗಸ್ಟಿನಾ ಫ್ಯೂಚಿಕ್ ಪ್ರಕಟಿಸಿದ್ದ ಪುಸ್ತಕ. ಹೌದು ಅದೇ ಪುಸ್ತಕದಲ್ಲಿ ಬರುವಂತ ಕೋಣೆ. ಅದರಲ್ಲಿ ಕೆಲವು ಘಟನೆಗಳು ನನ್ನ ಕಣ್ಣಮುಂದೆ ಸುಳಿದಾಡಿತ್ತವೆ ಜೂಲಿಯಸ್ ಫ್ಯೂಚಿಕ್ ರು ತಮ್ಮ ಸಮಗ್ರ ಬದುಕನ್ನೇ ಸಮರ್ಪಿಸಿಕೊಂಡ ಮಹಾ ಕೃತಿಯ ಕೊನೆಯ ಭಾಗದ ಅಧ್ಯಾಯವದು. ಆ ಪುಸ್ತಕವನ್ನು ಓದುತ್ತಿದ್ದ ಪ್ರತಿ ಬಾರಿಯೂ ನನ್ನ ಕಣ್ಣುಗಳು ಹನಿಗೂಡುತ್ತವೆ. ಕಾರಣ ಅವರನ್ನು ಅಷ್ಟೊಂದು ದಾರುಣ ಹಿಂಸೆಗೆ ಗುರಿಪಡಿಸಿ, ಪ್ರತಿಬಾರಿಯೂ ಚಿತ್ರ ವಧೆಮಾಡಿ, ಪ್ರಜ್ಞಾಶೂನ್ಯ ಸ್ಥಿತಿಯ ತನಕ ಬಡಿದು, ಕೊನೆಗೆ ಸಾಯಿಸಿಯೇ ಬಿಟ್ಟದ್ದು. ಆ ಘನ ಘೋರ ಚಿತ್ರವಧೆಯನ್ನು ನೆನೆಪಿಸಿಕೊಂಡರೆ ಹೃದಯ ತುಂಬಿಬರುತ್ತದೆ. ಯಾವುದೇ ಎದುರಾಳಿಗಳಿಗೂ ಅಂಥ ಗತಿ ಬರಬಾರದೆಂದುಕೊಳ್ಳುತ್ತೇನೆ. ನಿಮಗೆ ಗೊತ್ತಿಲ್ಲವೇನೋ!.
ಶರಣಾಗತ..!!
ಪ್ರದೀಪ್ ಬಹಳ ದಿನಗಳಾದ ಮೇಲೆ ಪ್ರೀತಂ ನ ಭೇಟಿ ಆಗಿದ್ದ. ಆದರು ಭೇಟಿಯಾಗಿದ್ದ ಜಾಗವಾದರೂ ಯಾವುದು, ಚಾರ್ಮಡಿ ಘಾಟ್. ಘಟ್ಟ ಪ್ರದೇಶದ ತುತ್ತ ತುದಿಯಲ್ಲಿ ಚಾರಣ ಮಾಡುತಿದ್ದ ಪ್ರೀತಂ ಗೆ ಪ್ರದೀಪ್ ಇದ್ದಕಿದ್ದಂತೆ ಕಾಣಿಸಿಕೊಂಡಿದ್ದ. ನೋಡಿದೊಡನೆ ಪ್ರದೀಪ್ ಮತ್ತು ಪ್ರೀತಂ ಇಬ್ಬರು ಸ್ವಲ್ಪ ಗಾಬರಿಯದರು, ಪ್ರದೀಪ್ ಮಗಾ ಪ್ರೀತಂ ಅಂತ ಒಮ್ಮೆಲೇ ಅಪ್ಪಿ ಕೆನ್ನೆಗೊಂದು ಮುತ್ತು ಕೊಟ್ಟಿದ್ದ. ಇಬ್ಬರ ಆನಂದಕ್ಕು ಪಾರವೇ ಇರಲಿಲ್ಲ. ಪ್ರೀತಂ ಇನ್ನೇನು, ಏನು ಮಗಾ ಇಲ್ಲಿ ಅಂತ ಕೇಳಬೇಕು, ಅಷ್ಟರಲ್ಲಿ ಅದೇ ಪ್ರಶ್ನೆಯನ್ನ ಪ್ರದೀಪ್ ಪ್ರೀತಂ ಗೆ ಕೇಳ್ದ. ಚಾರಣ ಮಾಡ್ಕೊಂಡು ತಂಡದ ಜೊತೆ ಬಂದಿದ್ದೆ ದಾರಿ ತಪ್ಪಿ ಬಿಟ್ಟೆ ಮಗಾ ಅಂದ ಪ್ರದೀಪನ ಮಾತು ಕೇಳಿ ನಂದೂ ಅದೇ ಕಥೆ ದಾರಿ ತಪ್ಪಿದ್ದಿನಿ. ಬಾ ಒಟ್ಟಿಗೆ ದಾರಿ ಹುಡುಕೋಣ ಎಂದು ಹೇಳುತ್ತಾ, ಹಳೆಯ ಕಾಲೇಜು ದಿನಗಳನ್ನು ಮೆಲುಕು ಹಾಕುತ್ತ ಕಾಡಿನಲ್ಲಿ ನಡೆದರು.ಪ್ರೀತಂ ಮತ್ತು ಪ್ರದೀಪ್ ಒಂದೇ ಕಾಲೇಜ್ ಒಂದೇ ಕ್ಲಾಸ್ ಒಂದೇ ಬೆಂಚ್, ಹಾಸ್ಟೆಲ್ನಲ್ಲಿ ಸಹ ಒಂದೇ ರೂಂ. ಒಬ್ಬರ ಮಧ್ಯೆ ಒಬ್ಬರಿಗೆ ಗಾಢವಾದ ಸ್ನೇಹವಿತ್ತು, ಪ್ರೀತಂ ನ ತಂದೆ ಒಬ್ಬ ಸರ್ಕಾರೀ ಅಧಿಕಾರಿ. ಮಗನಿಗೆ ದೂರದ ಕಾಲೇಜಿಗೆ ಸೀಟ್ ಸಿಕ್ಕಾಗ ಮಗನ್ನ ಹಾಸ್ಟೆಲ್ ಅಲ್ಲಿ ಇದ್ದು ಓದಲಿ ಅಂತ ಆಸೆಯಿಂದ ಸೇರಿಸಿದ್ದರು. ಹಾಸ್ಟೆಲ್ ಅಲ್ಲಿದ್ದರೆ ಎಲ್ಲ ಜನರ ಮಧ್ಯೆಯೂ ಬೆರೆಯಬಹುದು ಎಲ್ಲರ ಕಷ್ಟ ಸುಖಗಳನ್ನು ತಿಳಿಯಬಹುದು ಎಂಬುದೇ ಅವರ ಅಭಿಪ್ರಾಯ. ಓದಿನಲ್ಲೂ ಪ್ರೀತಂ ಮತ್ತು ಪ್ರದೀಪ್ ಯಾವಾಗಲು ಮುಂದೆ ಇರುತಿದ್ದರು. ಪ್ರೀತಂ ತಂದೆಗೆ ಒಂದು ಆಸೆ, ಮಗ ತನ್ನ ಹೆಸರನ್ನು ಎಲ್ಲು ಬಳಸಿಕೊಳ್ಳಬಾರದೆಂದು. ಅದಕ್ಕೆ ಪ್ರೀತಂ ಬಳಿ ಮಾತು ಸಹ ತೆಗೆದುಕೊಂಡಿದ್ದರು, ಎಂದಿಗೂ ನನ್ನ ಹೆಸರನ್ನು ಕಾಲೇಜ್ ನಲ್ಲಿ ಯಾರಿಗೂ ಹೇಳಬೇಡ ಎಂದು. ಪ್ರೀತಂ ಸಹ ಹಾಗೆ ಇದ್ದ. ಪ್ರೀತಂ ಮತ್ತು ಪ್ರದೀಪ್ ಓದಿನಲ್ಲಿ ಆಟದಲ್ಲಿ ಎಲ್ಲ ಕಡೆಯೂ ಮುಂದುವರೆಯುತ್ತಾ 4ನೆ ಸೆಮಿಸ್ಟರ್ ಮುಗಿಸಿದರು. ಅಷ್ಟರಲ್ಲಿ ಪ್ರದೀಪ್ ನ ತಂದೆ ವಿಧಿಯಾಟಕ್ಕೆ ಸಿಕ್ಕಿ ಅಪಘಾತದಲ್ಲಿ ಮೃತ ಪಟ್ಟಿದ್ದರು. Read more 
ಕುರಿ ಮತ್ತು ನಾನು
-ಸತೀಶ್ ರಾಮನಗರ
ಮನೆಯ ಕಾಂಪೌಂಡ್ ಇಷ್ಟೊಂದು ದೊಡ್ಡದಾಗಿದೆ. ಒಂದು ಚಿಕ್ಕ ಕುರಿಮರಿ ತನ್ನಿ ಸಾಕೋಣ. ಸುತ್ತಾ ಮುತ್ತಾ ಇರುವ ಹುಲ್ಲನ್ನು ತಿಂದುಕೊಂಡು ಬೆಳೆಯುತ್ತೆ. ಮೇಯಿಸಲು ಹೊರಗಡೆ ಹೋಗುವ ಅವಶ್ಯಕತೆಯಿರುವುದಿಲ್ಲ. ನನಗು ಮನೆಯಲ್ಲಿ ಸುಮ್ಮನೆ ಕೂತು ಕಾಲ ಕಳೆಯುವುದು ತಪ್ಪುತ್ತದೆ ಎಂಬ ಅಮ್ಮನ ಮಾತಿಗೆ ಬೆಲೆ ಕೊಟ್ಟು ಅಪ್ಪಾ ಒಂದು ಸಣ್ಣನೆಯ ಕುರಿಮರಿಯನ್ನು ಮಾರನೆಯ ದಿನವೇ ತಂದರು. ನಾನು ಶಾಲೆಯಲ್ಲಿ ಕುಳಿತಿದ್ದರು ಕುರಿಮರಿಯದೆ ಧ್ಯಾನ. ಬೆಲ್ಲು ಎಷ್ಟು ಬೇಗ ಹೊಡೆಯುವುದೋ ಎಂಬ ನಿರೀಕ್ಷೆಯಲ್ಲಿ ಮೇಷ್ಟ್ರು ಹೇಳಿಕೊಟ್ಟ ಪಾಠ ತಲೆಗೆ ಸೇರುತ್ತಿರಲಿಲ್ಲ.
ಶಾಲೆ ಬಿಟ್ಟ ತಕ್ಷಣ ಓಡುವುದಕ್ಕೆ ಶುರುಮಾಡಿದರೆ ಮನೆಯ ಬಳಿ ಬಂದಾಗಲೇ ನನ್ನ ಕಾಲಿಗೆ ಬ್ರೇಕ್ ಬೀಳುತಿದ್ದುದ್ದು. ಕುರಿಮರಿಯನ್ನು ಒಮ್ಮೆ ಮುದ್ದಾಡಿ, ಅದರ ಪಿಳಿ ಪಿಳಿ ಕಣ್ಣುಗಳನ್ನು ನೋಡುತ್ತಾ ಮತ್ತೊಮ್ಮೆ ಅದರ ಮೈದಡವಿದರೆ ಸಾಕು, ಕುರಿಮರಿ ಚಂಗನೆ ಮೇಲಕ್ಕೆಗರಿ ಸುತ್ತಲು ಕುಣಿದು ಕುಪ್ಪಳಿಸುತಿತ್ತು. ನನ್ನಷ್ಟೇ ಆಸಕ್ತಿಯಿಂದ ಕುರಿಮರಿಯ ಬಾಲಲೀಲೆಯನ್ನು ನೋಡಲು ಕಣ್ಣರಳಿಸಿಕೊಂಡು ಬರುತ್ತಿದ್ದಳು ನನ್ನ ಚಿಕ್ಕ ಮುದ್ದು ತಂಗಿ. ಹೀಗೊಂದು ದಿನ ಕಾಣದ ಹಾಗೆ ಅಪ್ಪನ ಜೇಬಿನಿಂದ ಕದ್ದ ಕಾಸಿನಿಂದ ಒಂದು ಚಿಕ್ಕ ಗಂಟೆಯನ್ನು ಕೊಂಡು ತಂದು ಕುರಿಮರಿಯ ಕೊರಳಿಗೆ ಕಟ್ಟಿದೆ. ಅದು ಚಂಗನೆ ನೆಗೆದಾಗ ಹೊಮ್ಮುತಿದ್ದ ಗಂಟೆಯ ಕಿಣಿ ಕಿಣಿ ಶಬ್ದ ಕೇಳಿದಾಗ ಎಂತಹುದೋ ಸಾರ್ಥಕ ಭಾವ ನನ್ನ ಮನದಲ್ಲಿ.
ಮರಳಿ ಬಂದವಳು….!!!!
-ಸಂತೋಷ್ ಎನ್ ಆಚಾರ್ಯ
ನಾನು ನೋಡುತ್ತಿರುವುದು ನಿಜವಾಗಿಯೂ ಅವಳನ್ನಾ! ಕಣ್ಣುಗಳನ್ನು ಮತ್ತೆ ಮತ್ತೆ ಉಜ್ಜಿ ನೋಡಿದೆ. ನಿಜಕ್ಕೂ ಅವಳೇ, ಸಂದೇಹವೇ ಇಲ್ಲ. ಸ್ವಲ್ಪ ದಪ್ಪವಾಗಿದ್ದಾಳೆ. ಮುಖದ ಕಾಂತಿ ಈಗಲೂ ಹಾಗೆಯೇ ಇದೆ.
‘ಏನೋ ಹಾಗೆ ನೋಡ್ತಾ ಇದ್ದೀಯಾ?’ ಎಂದಳು.
‘ನೀನು… ಇಲ್ಲಿ…?’ ಮಾತುಗಳ ಪ್ರಶ್ನೆಗಳಿಗಿಂತ ಮುಖದ ಪ್ರಶ್ನೆಗಳೇ ಎದ್ದು ತೋರುತ್ತಿದ್ದವು.
‘ಯಾಕೆ ಬರಬಾರದಾ?’ ಎಂದಳು . ನನಗೆ ಏನು ಉತ್ತರಿಸಬೇಕೆಂದೇ ಗೊತ್ತಾಗಲಿಲ್ಲ.
‘ಏನಾಯ್ತೋ ನಿಂಗೆ, ಓಕೆ, ಕಣ್ತುಂಬಾ ನೋಡೋ ಆಸೆ ನಾ! ನೋಡು ನೋಡು! ಮುಗಿದ ನಂತರ ಹೇಳು ‘ ಎಂದು ಪುನಃ ನಕ್ಕಳು. ಎಷ್ಟೆಂದರೂ ನಗಲೆಂದೇ ಹುಟ್ಟಿದವಳಲ್ಲವೇ? ಆದರೆ ಇವಳೇಕೆ ಇಲ್ಲಿಗೆ ಬಂದಳು? ಮುಗಿದೇ ಹೋದಂತಿದ್ದ ಕಥೆಯನ್ನು ಪುನಃ ಬರೆಯಲು.
‘ಇಲ್ಲ ಹಾಗೇನಿಲ್ಲ ಅವತ್ತು ಹೇಳಿದೆಯಲ್ಲ, ಬರುವುದಾದರೆ ಮತ್ತೆ ಬರುತ್ತೇನೆ ನಿನ್ನ ಬದುಕಿಗೆ ಗೆಳತಿಯಾಗಿ. ಸತ್ಯವಾಗುತ್ತದೆ ಎಂದೆನಿಸಲಿಲ್ಲ’ ಎಂದೆ. ಅವಳ ಸುಂದರ ಮೊಗವನ್ನು ನೋಡುತ್ತಿರುವಾಗ ಎಂದಿನಂತೆ ಹೊಡೆದಿತ್ತು ಮಿಂಚು !
ಅವಳು ಮುಗುಳ್ನಕ್ಕು ,’ಅವತ್ತು ತುಂಬಾ ನೊಂದಿದ್ದೆ ನೋಡು! ಯಾರೂ ಬೇಕೆನಿಸಲಿಲ್ಲ. ಮತ್ತೆ ಯಾಕೋ ಗೊತ್ತಿಲ್ಲ, ನೀನು ಬೇಕು ಅನಿಸತೊಡಗಿತು. ನಿನ್ನ ಜೊತೆ ಕಳೆದ ಕ್ಷಣಗಳು ಎಲ್ಲಾ ನೆನಪಾಗತೊಡಗಿದವು’ ನಾನು ಸುಮ್ಮನಿದ್ದೆ, ‘ನಿನ್ನ ಜೊತೆ ಯಾವುದೇ ಹಂಗು ಇರಲಿಲ್ಲ ನೋಡು. ಯಾವತ್ತೂ ಹೀಗೆ ಮಾಡು ಹಾಗೆ ಮಾಡು ಎಂದು ಆರ್ಡರ್ ಮಾಡಿದವನೇ ಅಲ್ಲ! ನಿನ್ನೊಂದಿಗೆ ಇರೋವಾಗ ನಾನು ನಾನಾಗಿದ್ದೆ’
‘ಆದ್ರೆ ನಾನಂದ್ಕೊಂಡಿದ್ದೆ ಹುಡುಗಿಯರಿಗೆ ಆರ್ಡರ್ ಮಾಡುವವರು ಇಷ್ಟ, ಅವರ ಹಿಂದೂ ಮುಂದೂ ತಿರುಗೋರು ಇಷ್ಟ ಅಂತ’ Read more 
ಈ ಪ್ರೀತಿ…!!
- ಸುಷ್ಮಾ ಮೂಡಬಿದ್ರಿ
ಇಬ್ಬರ ಮದ್ಯದಲ್ಲೂ ನೀರವ ಮೌನ…ಆಗತಾನೆ ಹೊರಗೆ ಮಳೆ ತಣ್ಣಗೆ ಆರಂಭವಾಗಿ, ಭೋರ್ಗರೆಯುತ್ತಾ ಸುರಿಯಲಾರಂಭಿಸಿತು. ಬೀಸಿ ಬಂದ ಗಾಳಿಗೆ ಕಿಟಕಿ ಪರದೆಗಳೆಲ್ಲಾ ನೃತ್ಯವಾಡುತ್ತಿತ್ತು…ಕಿಟಕಿಯಿಂದ ಹೊರಗೆ ದೂರದ ಅದ್ಯಾವ ಬಿಂದುಗೋ ದೃಷ್ಟಿ ಹಾಯಿಸುತ್ತಾ ನಿಂತಿದ್ದ..ಮೆಲ್ಲಗೆ “ಸುಂಜೂ….”ಎಂದೆ..ರಭಸದ ಮಳೆ ಸದ್ದಿಗೋ ಏನೋ ಕೇಳಿಸಿಲ್ಲವೆಂಬಂತೆ ನಿಂತೇ ಇದ್ದ ಅಂವ..ಮೌನ ಮುರಿಯಲಾಗಲಿಲ್ಲ ನನ್ನಿಂದ..ಶೂನ್ಯದೆಡೆಗಿನ ಅವನ ನೋಟ ಕದಲಿಸಲಾಗಲಿಲ್ಲ..ಹತ್ತಿರ ಬಂದು ನಿಂತೆ..ಈಗ ನೋಡಿದ..ಕಂಗಳು ಕಾಂತಿಹೀನ ಅನಿಸಿತು.
“ಮಾತಡೋಲ್ಲವಾ….”ಎಂದೆ..
ಮತ್ತೇ ದೃಷ್ಟಿ ಬದಲಿಸಿದ…ಈ ಬಗೆಯ ಮೌನ ಸಹಿಸಲಾಗಲಿಲ್ಲ…
“ಪ್ಲೀಸ್..”ಎಂದ ನನ್ನ ಕಣ್ಣಲ್ಲಿ ನೀರಾಡಿತ್ತು…
ಅದೇನನಿಸಿತೋ..”ಸುಶೀ..”ಕರೆದ…ಹ್ಞು0 ಗುಟ್ಟಿದೆ…






