ಕುಲಾಂತರಿ ಚರ್ಚೆ: ಇನ್ನೊಂದು ಮುಖ
- ಪ್ರಸನ್ನ ಆಡುವಳ್ಳಿ,ಧಾರವಾಡ
ಕುಲಾಂತರಿಗಳ ಬಗ್ಗೆ “ಕನ್ನಡಪ್ರಭ” ಪತ್ರಿಕೆಯಲ್ಲಿ ಶಾಂತು ಶಾಂತಾರಾಮ್ ಹಾಗೂ ಎಮ್ ಮಹದೇವಪ್ಪ ಅವರು ಬರೆದ ಬರಹ ಓದುಗರನ್ನು ದಾರಿತಪ್ಪಿಸುವಂತಿದೆಯೇ ವಿನಹಾ ಅವುಗಳ ಕುರಿತು ಸರಿಯಾದ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದೆ. ಕುಲಾಂತರಿಗಳನ್ನು ಅಭಿವೃದ್ದಿಯ ಹೆಸರಲ್ಲಿ, ಅಧಿಕ ಅಹಾರ ಉತ್ಪಾದನೆಯ ನೆಪದಲ್ಲಿ ರೈತರ ಹಾಗೂ ಗ್ರಾಹಕರ ಮೇಲೆ ಹೇರುವ ಪ್ರಯತ್ನದ ಒಂದು ಭಾಗವಾಗಿ ಈ ಬರಹಗಳು ಮೂಡಿಬಂದಿವೆಯಷ್ಟೇ.
ವಿಜ್ನಾನವು ಸತ್ಯ ಶೋಧನೆಯಿಂದ ರೂಪಗೊಳ್ಳುವುದೇ ವಿನಹ ಸಂಖ್ಯಾ ಬಲದಿಂದಲ್ಲ ಎಂಬ ಮಹದೇವಪ್ಪನವರ ಮಾತುಗಳು ಒಪ್ಪತಕ್ಕದ್ದೇ . ಆದರೆ ಬಿ.ಟಿ. ಬದನೆ ಕುರಿತ ಚರ್ಚೆ ಯಲ್ಲಿ ವಿಜ್ನಾನಿಗಳಿಗೆ ಸೂಕ್ತ ಕಾಲಾವಕಾಶ ಸಿಗಲಿಲ್ಲ ಎಂಬ ಮಾತು ಸತ್ಯಕ್ಕೆ ದೂರ. ತಾತ್ಕಾಲಿಕ ನಿಷೇಧ ಹೇರುವ ಮುನ್ನ ದೇಶದ ಹಲವೆಡೆಗಳಲ್ಲಿ ಪರ-ವಿರೋಧಗಳ ಬಗ್ಗೆ ಪರಿಸರ ಸಚಿವಾಲಯ ವಿಸ್ತೃತ ಚರ್ಚೆ ನಡೆಸಿತ್ತು. ಇಷ್ಟಲ್ಲದೇ ದೇಶದ ಪ್ರತಿಷ್ಟಿತ ಆರು ವಿಜ್ನಾನ ಅಕಾಡೆಮಿಗಳಿಂದ ಅಭಿಪ್ರಾಯ ಕೇಳಿತ್ತು. ಆದರೆ ಅಲ್ಲಿನ ವಿಜ್ನಾನಿಗಳು ಕೊಟ್ಟ ಬೇಜಾವಾಬ್ದಾರಿಯುತ ವರದಿ ಎಲ್ಲರಿಂದ ಟೀಕೆಗೆ ಒಳಗಾಗಿದ್ದು ನೆನಪಿರಬಹುದು. ಎಲ್ಲದಕ್ಕೂ ವೈಜ್ನಾನಿಕ ಆಧಾರ ಕೇಳುವವರು ತಮ್ಮ ವರದಿಯ ಬಗ್ಗೆ ಏಕೆ ಚಕಾರ ಎತ್ತುವುದಿಲ್ಲ? ಅಲ್ಲೇಕೆ ಯಾವುದೇ ವೈಜ್ನಾನಿಕ ಆಧಾರ ನೀಡದೇ ತೀರ ಕಳಪೆ ಗುಣಮಟ್ಟದ ವರದಿ ಕೊಟ್ಟರು?
ಬಿ.ಟಿ. ಹತ್ತಿ ಬಂದ ಮೇಲೆ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಹತ್ತಿ ರಫ್ತು ಮಾಡುವ ದೇಶವಾಯ್ತೆಂದು ಹೆಮ್ಮೆಯಿಂದ ಹೇಳುವವರು ಇತ್ತೀಚೆಗೆ ಹತ್ತಿಯ ಒಟ್ಟಾರೆ ಉತ್ಪಾದನೆ ಕಡಿಮೆಯಾಗಿದೆಯೆಂದು ಕೇಂದ್ರ ರಫ್ತು ನಿಷೇಧ ಮಾಡಲು ಹೊರಟಿದ್ದನ್ನೇಕೆ ಪ್ರಜ್ನಾಪೂರ್ವಕವಾಗಿ ಮರೆಮಾಚುತ್ತಾರೆ? ದೇಶದ ಶೇಕಡಾ 93ರಷ್ಟು ಭಾಗದಲ್ಲಿ ಬಿ.ಟಿ.ಹತ್ತಿಯನ್ನೇ ಬೆಳೆಯುತ್ತಿದ್ದರೂ ಹೀಗಾಗಿದ್ದೇಕೆ?!
ಆವೇಶಕ್ಕೆ ಬಲಿಯಾದ ಕಂದ
-ಸತೀಶ್ ರಾಮನಗರ
ಆಕೆ ತನ್ನ ಮಗನನ್ನೇ ಕೊಂದಿದ್ದಾಳೆ ಎಂಬುದನ್ನು ಕೇಳಿ ಒಂದು ಕ್ಷಣ ಆಶ್ಚರ್ಯಚಕಿತನಾದೆ. ಆಕೆ ತನ್ನ ಮಗನನ್ನು ಕೊಂದಿದ್ದಾಳೆ ಎಂದು ಆರೋಪಿಸಿ ಪೊಲೀಸ ಠಾಣೆಯಲ್ಲಿ ದೂರು ನೀಡಿರುವುದು ಆಕೆಯ ಪತಿಯೇ. ಈಗ ಆರೋಪಿತಳನ್ನು ಬೇರೆಯವರ ಮೂಲಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿರುವುದು ಕೂಡ ಆಕೆಯ ಪತಿಯೇ.
ಮಾದಣ್ಣ ಹಾಗು ಗೌರಮ್ಮನವರದು ಇಬ್ಬರು ಮಕ್ಕಳೊಂದಿಗಿನ ಮಧ್ಯಮ ವರ್ಗದ ಸಂತೃಪ್ತಿ ಸಂಸಾರ. ಮಗ ರಮೇಶನಿಗೆ 5 ವರ್ಷ. ಮಗಳು ಲಕ್ಷ್ಮಿಗೆ 7 ವರ್ಷ. ಇಬ್ಬರ ಮುಖ್ಯ ಕಸುಬು ವ್ಯವಸಾಯ.
ನಾಳೆಯ ಲಕ್ಷ್ಮಿ ಪೂಜೆಗೆ ಮನೆಯಲ್ಲವನ್ನು ಶುಚಿಗೊಳಿಸಿ, ಗೌರಮ್ಮ ಗಂಡನ ದಾರಿ ಕಾಯುತಿದ್ದಳು. ಮಾದಣ್ಣ ಮನೆಗೆ ಬಂದ ತಕ್ಷಣವೇ, ನಾಳೆ ಹಬ್ಬಕ್ಕೆ ನನಗೆ ಸೀರೆ, ಮಕ್ಕಳಿಗೆ ಹೊಸ ಬಟ್ಟೆ ಜೊತೆಗೆ ಗಿರವಿ ಅಂಗಡಿಯಲ್ಲಿಟ್ಟಿರುವ, ನನ್ನ ಓಲೆ ಜುಮುಕಿ, ಮಾಂಗಲ್ಯ ಸರವನ್ನು ನಾಳೆ ಬೆಳಿಗ್ಗೆ ಬಿಡಿಸಿಕೊಂಡು ತರಲೇ ಬೇಕು ಎಂದು ತಾಕೀತು ಮಾಡಿದಳು. ಮಾದಣ್ಣ ಸರಿ ಎಂದು ತಲೆಯಲ್ಲಾಡಿಸಿ ಊಟ ಮಾಡಿ ಮಲಗಿದ.
ಮಾದಣ್ಣ, ಬೆಳಿಗ್ಗೆ ತನ್ನ ಬಳಿಯಲ್ಲಿದ್ದ ಚೂರು ಪಾರು ಹಣವನ್ನೆಲ್ಲ ಒಟ್ಟುಗೂಡಿಸಿ, ಆ ಹಣದಲ್ಲಿ ಮಕ್ಕಳಿಗೆ ಬಟ್ಟೆ ಹಾಗು ಹೆಂಡತಿಗೆ ಸೀರೆಯನ್ನು ತರಲಷ್ಟೇ ಸಾಧ್ಯವಾಯಿತು. ತನ್ನ ಗಂಡ ವಡವೆಗಳನ್ನು ಬಿಡಿಸಿಕೊಂಡು ತರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಗೌರಮ್ಮ ನಿಗೆ ಬಟ್ಟೆಗಳನ್ನಷ್ಟೇ ನೋಡಿ ನಿರಾಶೆಯಾಯಿತು. ವಡವೆಗಳಿಲ್ಲದೆ ಲಕ್ಷ್ಮಿ ಪೂಜೆ ಹೇಗೆ ಮಾಡುವುದೆಂಬ ಚಿಂತಯಿಂದ ಮೌನವಾದಳು. ಅಕ್ಕ ಪಕ್ಕದ ಮನೆಯ ಹೆಂಗಸರನ್ನು ಸಂಜೆ ಮನೆಗೆ ಲಕ್ಷ್ಮಿ ಪೂಜೆಗೆ ಬರಲೇಬೇಕೆಂದು ಅದಾಗಲೇ ಹೇಳಿ ಬಂದಿದ್ದಳು. ಸಂಜೆ ಅವರುಗಳು ಮನೆಗೆ ಬಂದರೆ, ಯಾವ ಮುಖವನ್ನು ಹೊತ್ತುಕೊಂಡು ಪೂಜೆ ಮಾಡುತ್ತಿಲ್ಲ ಎಂದು ಹೇಳುವುದು ಎಂಬ ಪ್ರಶ್ನೆ ಅವಳನ್ನು ಕಾಡತೊಡಗಿತು. Read more 
ಸಂಸ್ಕೃತಿ ಸಂಕಥನ – 22 – ಭಾರತೀಯ ಸಂಸ್ಕೃತಿಗೆ ಗ್ರಹಣ ಹಿಡಿಸಿದ ವಸಾಹತು ಪ್ರಜ್ಞೆ
-ರಮಾನಂದ ಐನಕೈ
ಸುಮಾರು 35 ವರ್ಷಗಳ ಹಿಂದಿನ ನೆನಪು. ನಾವು ಹೈಸ್ಕೂಲಿಗೆ ಹೋಗುತ್ತಿರುವ ದಿನಗಳು. ಒಂದು ರೀತಿಯ ವಿಚಿತ್ರ ಸಭ್ಯತೆಯನ್ನು ಬೆನ್ನಟ್ಟಿ ಹೊರಟಿರುವ ಕಾಲ. ಮೇಸ್ಟ್ರಗಳು ಕ್ಲಾಸಿಗೆ ಬಂದರೆ ಜೀವನದ ‘ಗುರಿ’ಯ ಕುರಿತಾಗೆ ಮೊದಲ ಪ್ರಶ್ನೆ ಕೇಳುತ್ತಿದ್ದರು. ಯಾರು ಅತ್ಯುತ್ತಮ ಗುರಿಯನ್ನು ಹೇಳಿದರೋ ಅವರಿಗೆ ‘ವ್ಹೆರಿ ಗುಡ್’ ಅನ್ನುತ್ತಿದ್ದರು. ಮುಂದೆ ಜೀವನದಲ್ಲಿ ಮನುಷ್ಯ ಮಾಡಬಹು ದಾಂತಹುದು ಇಂತಿಂಥದಿದ್ದೆ ಎಂದು ನಮಗೆ ಗೊತ್ತಾಗಿದ್ದೇ ಈ ಪ್ರಶೆಗಳಿಗೆ ಉತ್ತರ ಹುಡುಕುವ ಮೂಲಕ. ನಾವು ಮಾಡುವ ಕಾರ್ಯಗಳಿಗೆ ಉದ್ದೇಶ ಇದ್ದರೆ ಮಾತ್ರ ಅದು ಗುರಿ ತಲುಪುತ್ತದೆ. ಕ್ರಿಯೆಗೂ ಉದ್ದೇಶಕ್ಕೂ ಸಂಬಂಧ ಇರಬೇಕು. ಆದ್ದರಿಂದ ಗುರಿ ಅಂದರೆ ಉದ್ದೇಶ. ಗುರಿಯ ದಾರಿ ಯಲ್ಲಿ ಹೋದರೆ ಗುರಿ ಸಿಗುತ್ತದೆ. ಈ ರೀತಿಯ ಚಿಂತನೆ ಇದ್ದ ಕಾಲ ಅದು.
ಇಂಥ ಚಿಂತನೆಗಳು ಎಲ್ಲಿಂದ ಬಂದವು? ಕೇಳಿದರೆ, ದಾರ್ಶನಿಕರಿಂದ, ಪುರಾಣಗಳಿಂದ, ಪ್ರಾಚೀನ ಜನರ ಜೀವನಾನುಭವದಿಂದ ಇತ್ಯಾದಿ ಯಾಗಿ ಮನಸ್ಸಿಗೆ ಕಂಡಂತೆ ಹೇಳುತ್ತೇವೆ. ಯಾರಿಂದಲೂ ಅಲ್ಲ. ನಾವು ಕಲ್ಪಿಸುತ್ತಿರುವ ಸೀಮಿತ ಅರ್ಥದ ಗುರಿ ನಮ್ಮಲ್ಲಿ ಹುಟ್ಟಿದ್ದೇ ಪಾಶ್ಚಾತ್ಯ ಪ್ರಭಾವದಿಂದ. ವಸಾಹತುಶಾಹಿ ಪ್ರಜ್ಞೆ ಯಿಂದ. ಏಕೆಂದರೆ ಅವರ ಅಷ್ಟೂ ಚಿಂತನೆಗಳು ಅರಳುವುದು ಕಾರಣ ಮತ್ತು ಉದ್ದೇಶಗಳ ಮೇಲೆ. ಏಕೆಂದರೆ ಪಾಶ್ಚಾತ್ಯ ಪುರಾಣ ಕಟ್ಟಲ್ಪಟ್ಟಿದ್ದೇ ಈ ಪರಿಕಲ್ಪನೆಯ ಮೇಲೆ. ಅನೇಕ ಸಂದರ್ಭಗಳಲ್ಲಿ ಅದು ನಮ್ಮಲ್ಲಿ ಅರ್ಥ ಕೊಡಲಾರದು.
ನೆನಪಿನ ಮೂಸೆಯಲಿ ‘ಕೋಲ್ಕಾತ್ತಾದ ಕಾಲೇಜಿನಲ್ಲಿ’
-ನಟರಾಜು
ಒಂದು ಬಾರಿ ಗೆಳೆಯನೊಬ್ಬನ ಜೊತೆ ಕೊಲ್ಕತ್ತಾದ ವೈದ್ಯ ವಿದ್ಯಾಲಯದ ಕ್ಯಾಂಪಸ್ ಗೆ ಹೋಗಿದ್ದೆ. ಅಂದು ಪ್ರಥಮ ವರ್ಷದ ಎಂಬಿಬಿಎಸ್ ಪದವಿಯ ಪ್ರವೇಶಕ್ಕಾಗಿ ಕೌಂಸಿಲಿಂಗ್ ನಡೆಯುತ್ತಿತ್ತು. ಆ ಜಾಗದಲ್ಲಿ ರಾಜಕೀಯ ಪಕ್ಷಗಳ ವತಿಯಿಂದ ಮೂರ್ನಾಲ್ಕು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ರಾಜಕೀಯ ಪಕ್ಷದ ಮಾಹಿತಿ ಇರುವ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ನೋಡಿ, ಕಾಲೇಜಿನ ಆವರಣದಲ್ಲಿ ರಾಜಕೀಯ ಪಕ್ಷದವರಿಗೇನು ಕೆಲಸ ಅಂತ ನಾನು ಕುತೂಹಲದಿಂದ ಆ ಮಳಿಗೆಯ ಬಳಿ ಹೋಗಿದ್ದೆ. ಆ ಮಳಿಗೆಯ ಒಬ್ಬ ವ್ಯಕ್ತಿ ನಾನು ಹೊಸ ವಿದ್ಯಾರ್ಥಿ ಇರಬೇಕು ಅಂತ ತಮ್ಮ ಸಂಘದ ಭಿತ್ತಿ ಪತ್ರವೊಂದನು ಕೈಗಿತ್ತಿದ್ದ. ಬೆಂಗಾಳಿ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿದ್ದ ಭಿತ್ತಿ ಪತ್ರವನು ಓದಿ ನನ್ನ ಗೆಳೆಯನೆಡೆಗೆ ತಿರುಗಿದ್ದೆ. ಆತ ಮುಗಳ್ನಕ್ಕಿದ್ದ. ಕಾಲೇಜಿಗೆ ಪ್ರವೇಶ ಪಡೆದ ಮೊದಲ ದಿನದಿಂದಲೇ ತಮ್ಮ ತಮ್ಮ ರಾಜಕೀಯ ಪಕ್ಷದ ಒಲವನ್ನು ವಿದ್ಯಾರ್ಥಿಗಳು ತಮಗಿಷ್ಟ ಬಂದ ಪಕ್ಷದ ವಿದ್ಯಾರ್ಥಿ ಸಂಘದಲಿ ನೋಂದಾಯಿಸುವುದರ ಮೂಲಕ ವ್ಯಕ್ತಪಡಿಸಬಹುದು ಅಂತ ನನ್ನ ಗೆಳೆಯ ಹೇಳಿದ್ದ.
ಕಲಸೆ (ನಾಡಕಲಸಿ) ದೇವಸ್ಥಾನ
-ಪ್ರಹಸ್ತಿ ಪಿ
ಸಾಗರ ತಾಲೂಕಿನ ಇತಿಹಾಸ ಪ್ರಸಿದ್ದ ದೇವಸ್ಥಾನಗಳಲ್ಲಿ ಕಲಸೆ, ನಾಡಕಲಸಿಯೂ ಒಂದು. ಸಾಗರದವನಾಗಿಯೂ ಅದನ್ನು ನೋಡಲಾಗಿರದ ಬಗ್ಗೆ ಸ್ವಲ್ಪ ಬೇಸರವಿತ್ತು. ಬೆಳಗ್ಗೆ ೮ಕ್ಕೆ, ಮಧ್ಯಾಹ್ನ ಒಂದಕ್ಕೆ ಮಾತ್ರ ಅಲ್ಲಿಗೆ ಬಸ್ಸಿನ ಸೌಕರ್ಯವಿದೆ ಎಂಬ ಗೆಳೆಯರ ಮಾತೂ ನೋಡದಿರುವುದಕ್ಕೊಂದು ಪಿಳ್ಳೆ ನೆವವಾಗಿತ್ತು. ಆದರೆ ಅಲ್ಲಿಗೆ ಹೋದ ಮೇಲೆಯೇ ತಿಳಿದಿದ್ದು. ಅದೆಷ್ಟು ಸುಂದರ ಎಂದು.
ಹೋಗುವ ಮಾರ್ಗ:
ಸಾಗರದಿಂದ ಸುಮಾರು ಎಂಟು ಕಿ.ಮೀ ದೂರವಷ್ಟೇ ನಾಡಕಲಸಿ ಅಥವಾ ಕಲಸಿಯ ದೇವಸ್ಥಾನ. ಸಾಗರದಿಂದ ಹೋಗುವುದಾದರೆ ಸೊರಬ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಹೋದ ಕೂಡಲೇ ಕಲಸಿ ರಾಮೇಶ್ವರ ದೇವಸ್ಥಾನಕ್ಕೆ ದಾರಿ ಅಂತ ಬೋರ್ಡೊಂದು ಸಿಗುತ್ತದೆ. ಅಲ್ಲಿಂದ ಸುಮಾರು ಮೂರು ಕಿ.ಮೀ ಬಲಕ್ಕೆ ಹೋದರೆ ಸಿಗುವುದು ಕಲಸಿ ಊರು. ಅಲ್ಲಿಂದ ಸ್ವಲ್ಪ ಒಳಗಡೆ ಇದೆ ದೇವಸ್ಥಾನ. ಸೊರಬಕ್ಕೆ ತುಂಬಾ ಬಸ್ಸುಗಳಿವೆ. ಹಾಗಾಗಿ ಸೊರಬ ಬಸ್ಸಿನಲ್ಲಿ ಕಲಸಿ ಬೋರ್ಡಿನಲ್ಲಿ ಇಳಿದುಕೊಂಡರೆ ಮೂರು ಕಿ.ಮೀ ನಡೆದು ಕಲಸಿ ದೇವಸ್ಥಾನಕ್ಕೆ ಯಾವಾಗಲಾದರೂ ಹೋಗಬಹುದು. ಸ್ವಂತ ವಾಹನವಿದ್ದರೆ ಇನ್ನೂ ಉತ್ತಮ.
ಇತಿಹಾಸ:
ಇಲ್ಲಿ ಶ್ರೀ ಮಲ್ಲಿಕಾರ್ಜುನ ಮತ್ತು ರಾಮೇಶ್ವರ ದೇವಸ್ಥಾನಗಳಿವೆ. ಈ ಜೋಡಿ ದೇಗುಲಗಳನ್ನು ಹೊಯ್ಸಳ ರಾಜ ಬಳೆಯಣ್ಣ ಹೆಗ್ಗಡೆ ಕ್ರಿ.ಶ ೧೨೧೮ ರಲ್ಲಿ ಕಟ್ಟಿಸಿದನೆಂದು ಸಂಶೋಧನಕಾರರು ಹೇಳುತ್ತಾರೆ.
ಮೊದಲಿಗೆ ಹೋಗುತ್ತಿದ್ದಂತೆಯೇ ನಿಮ್ಮನ್ನು ಸ್ವಾಗತಿಸುವುದು ದೇಗುಲದ ಎದುರಿಗೆ ಅಥವಾ ಹೋಗುವವರ ಬಲಗಡೆಗೆ ಇರುವ ನಾಗರ ಬನ.ಅದಕ್ಕೆ ನಮಸ್ಕರಿಸಿ ಮೊದಲು ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋದೆವು.
ಸೂರ್ಯಾಸ್ತ
-ನವನೀತ್ ಪೈ
ಆಗಸ ಕೆಂಪಾಗಿತ್ತು. ಕೆಂಪು ಎನ್ನುವುದು ಪ್ರೀತಿಯ ಸಂಕೇತವೂ ಹೌದು ಅಪಾಯದ ಸಂಕೇತವೂ ಹೌದು. ಸೂರ‍್ಯ ತನ್ನ ಕೆಲಸವನ್ನು ಮುಗಿಸಿ ಮನೆಗೆ ತೆರಳುವ ಸಂತಸದಲ್ಲಿ ಕೆಂಪಾಗಿದ್ದ ಮಾತ್ರವಲ್ಲ ಬಾನನ್ನು ಕೆಂಪಾಗಿಸಿದ್ದ. ಆ ಸುಂದರ ಸಂಜೆಯಲ್ಲಿ ಮಹಾನಗರದ ಮಧ್ಯದಲ್ಲಿ ರಂಗು ರಂಗಿನ ದೀಪಗಳಿಂದ ಅಲಂಕೃತವಾದ ಆಬಾಲವೃದ್ಧರನ್ನೂ ಕೈ ಬೀಸಿ ಕರೆಯುತ್ತಿರುವ ಸುಸಜ್ಜಿತ ವಸ್ತು ಪ್ರದರ್ಶನ. ತಾಜ್ ಮಹಲ್ ನ ಪ್ರತಿಕೃತಿಯನ್ನು ಸ್ವಾಗತ ಗೋಪುರವನ್ನಾಗಿಸಿ ಒಳಗೆ ಸ್ವರ್ಗವನ್ನೇ ಏರ್ಪಡಿಸಿದ್ದರು ಆ ಕಲಾವಿದರು. ಈ ಒಂದು ಪ್ರದರ್ಶನಕ್ಕೆ ಬಂದ ಸಾವಿರಾರು ಜನರ ಮಧ್ಯೆ ಇರುವ ಒಂದು ಪುಟ್ಟ ಸಂಸಾರ ನಮ್ಮ ಮುಮದಿನ ಕಥೆಯ ಮೂಲವಸ್ತು.
ಎಷ್ಟೋದಿನಗಳ ಸತತ ಹಠದ ನಂತರ ಐದಾರು ವರ್ಷದ ಮುಗ್ಧಬಾಲಕ ರವಿಯನ್ನು ಆತನ ತಂದೆ ತಾಯಿ ಆ ವಸ್ತು ಪ್ರದರ್ಶನಕ್ಕೆ ಕರೆತಂದಿದ್ದರು. ಸ್ವಾಗತ ಗೋಪುರದ ಪಕ್ಕದ ಟಿಕೆಟ್ ಕೌಂಟರಿನಲ್ಲಿ ಎರಡೂವರೆ ಟಿಕೆಟ್‌ನ್ನು(೬ ವರ್ಷದ ಮಗುವನ್ನು ೩ ವರ್ಷ ಎಂದು ಟಿಕೆಟ್ ನೀಡುವವನ ಬಳಿಯಲ್ಲಿ ವಾದಿಸಿ ಅರ್ಧ ಟಿಕೆಟ್ ಪಡೆದಿದ್ದರು.) ಪಡೆದು ಸ್ವಾಗತ ಗೋಪುರದ ಎದುರು ನಿಂತಾಗ ಮನದ ಆಯಾಸವೆಲ್ಲ ನಾಶವಾಗಿ ಮನಕ್ಕೆ ಆನಂದವಾಯಿತು. ವಸ್ತು ಪ್ರದರ್ಶನದ ಒಳಗೆ ಕಾಲಿಟ್ಟಾಗ ಮಿಠಾಯಿ ಅಂಗಡಿಗಳ ಸಾಲು ರವಿಯನ್ನು ಬಹುವಾಗಿ ಆಕರ್ಷಿಸಿದವು.
ಬಣ್ಣ ಬಣ್ಣದ ಘಮ ಘಮ ಸುವಾಸನೆಯ ಮಿಠಾಯಿಗಳು ರವಿಯ ಬಾಯಲ್ಲಿ ನೀರೂರಿಸಿದವು. ಅವರು ಮುಂದೆ ನಡೆಯುತ್ತಿದ್ದಂತೆ ಒಂದು ಅಂಗಡಿಯಲ್ಲಿ ಎಣ್ಣೆ ಬಾಂಡಲೆಯಲ್ಲಿ ಜಿಲೇಬಿಯನ್ನು ಬಿಡುತ್ತಿದ್ದರು. ಜಿಲೇಬಿಗಳ ಮೇಲಿಂದ ಇಳಿಯುತ್ತಿರುವ ಪಾಕವು ಆ ಜಿಲೇಬಿಗಳನ್ನೇ ನೋಡುತ್ತಾ ನಡೆಯುತ್ತಿರುವ ರವಿಯ ಜಿಲೇಬಿಯಂತಹ ನಾಲಗೆಯಿಂದ ಇಳಿಯುತ್ತಿರುವ ಲಾಲಾ ಪಾಕದಂತಿತ್ತು.
ಸ್ವಲ್ಪ ಮುಂದೆ ನಡೆದಾಗ ಇನ್ನೊಂದು ಅಂಗಡಿಯಲ್ಲಿ ಬೊಂಬಾಯಿ ಮಿಠಾಯಿ ತಯಾರಿಸುತ್ತಿದ್ದರು. ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುವ ಮೋಡಗಳಂತೆ ತೇಲುತ್ತಿರುವ ಬೊಂಬಾಯಿ ಮಿಠಾಯಿಯ ಎಳೆಗಳನ್ನು ಕಡ್ಡಿಯಿಂದ ಸುತ್ತುತ್ತಿದ್ದರು. Read more 
ಭಾವುಕರಾಗೋಣ ಬನ್ನಿ!
-ಸಂತೋಷ್

ಮನುಷ್ಯನ ಜೀವನಕ್ಕೆ ಭಾವನೆಗಳು ಎಷ್ಟು ಮುಖ್ಯ? ಎಂದು ಕೇಳಿದರೆ ನಾನು ಕೋಡುವ ಉತ್ತರ ಖಂಡಿತ ಅವು ಮನುಷ್ಯನ ಜೀವನದ ಅವಿಭಾಜ್ಯ ಅಂಗವೆಂದು.ಭಾವನೆಗಳಿಲ್ಲದ ಮನುಷ್ಯ ಏನನ್ನು ಸಾದಿಸಲಾರ.ನಿಜವಾಗಲು ಭಾವನೆಗಳೇ ಮನುಷ್ಯನ ಜೀವನದ ದಾರಿದೀಪಗಳು.ಇದಕ್ಕೆಲ್ಲ ಅಪವಾದವೆಂಬಂತೆ,ನಮ್ಮಲ್ಲಿ ಹುಟ್ಟುವ ಸೂರ್ಯನನ್ನ,ಅರಳುವ ಗುಲಾಭಿಯನ್ನು,ಸುರಿಯುವ ಮಳೆಯನ್ನು,ಆಕಾಶದಲ್ಲಿ ಮೂಡುವ ಬಣ್ಣ ಬಣ್ಣದ ಚಿತ್ತಾರವನ್ನು,ರಂಗು ರಂಗಾಗಿ ಕಾಣುವ ಕಾಮನ ಬಿಲ್ಲನು ನೋಡಿ ಮುದಗೋಳದ ಕುಂಬಕರ್ಣರು ಇದ್ದಾರೆ!ಇದರ ಬಗ್ಗೆ ಅವರದೆಲ್ಲ ದಿವ್ಯ ನಿರ್ಲಕ್ಷೆ.
ಆದರೇ ಹಾಗೇ ನಿದ್ದೆ ಮಾಡುವ ಅವರು ಭಾವುಕತೆಯ ಸುಂದರ ಅನುಭವವನ್ನು ಕಳೆದುಕೋಳುತಾರೆ ಎಂಬುದೇ ನನ್ನ ಭಾವನೆ.ಕಡೇ ಪಕ್ಷ ಈ ಪ್ರಬಂದವನ್ನು ಓದಿದ ನಂತರವಾದರು ಅಂತ ಕುಂಬಕರ್ಣರು ನಿದ್ದೆಯಿಂದ ಎಚ್ಚೆತ್ತುಕೊಂಡರೆ ಸಂತೋಷ ಇಲ್ಲದಿದ್ದರೆ ನಾವು ನೀವು ಏನು ಮಾಡಕ್ಕೆ ಆಗುತ್ತೆ ಅವರನ್ನು ಅವರ ಪಾಡಿಗೆ ಬಿಡುವುದೇ ಸೂಕ್ತ.
ಭಾವುಕನಾದವನು ಸದ ಹೊಸತ್ತನ್ನೆ ಅನ್ವೇಷಣೆ ಮಾಡುತ್ತ ಇರುತ್ತಾನೆ.ಅವನು ಪ್ರಕೃತಿಯೊಂದಿಗೆ ಒಂದು ರೀತಿಯ ಸಂವಾದವನ್ನು ಸಮಾನತೆಯನ್ನು ಸಾದಿಸುತ್ತಾನೆ.ನಿಮ್ಮ ಕಣ್ಣಿಗೆ ಒಂದು ಸುಂದರ ಹೂವು ಅರಳಿ ನಿಂತಾಗ ಭಾವುಕನಾದವನ್ನು ಅದರ ಅರಳುವಿಕೆಯನ್ನು ನೆನೆದು ನೆನೆದು ಪುಳಕಗೋಳ್ಳುತದತ್ತಾನೆ.ಅದg ಬಣ್ಣಗಳನ್ನು ತನ್ನ ಕೈಯಿಂದ ಒರೆಸಿ ನೋಡುತ್ತಾನೆ. ಅದರ ಸುವಾಸನೆಗಾಗಿ ತನ್ನ,ಮೂಗನ್ನು ಅದರ ಬಳಿ ಕೊಂಡಯ್ಯತ್ತಾನೆ.ಧೀರ್ಘವಾದ ಉಸಿರನ್ನು ಏಳೆದುಕೊಂಡು ಅದರ ಸುವಾಸನೆಯನ್ನು ಆಸ್ವಾದಿಸುತ್ತಾನೆ.ಕೊನೆಗೆ ಆ ಹೂವಿನಿಂದ ಬಿಳ್ಕೋಡುವಾಗ ಆ ಹೂವಿಗೆ ಒಂದು ಹೂ ಮುತ್ತನ್ನು ನೀಡಿದರೇ ಅವನು ಭಾವುಕ ಎನಿಸಿಕೊಳ್ಳುತ್ತಾನೆ.
ಹಾವು ಪುರಾಣ!
ನೀ ಹೀಂಗೆಲ್ಲ ಬಪ್ಪಕಾಗ..
ಮಕ್ಕಳ್ ಮರಿ ತಿರ್ಗು ಜಾಗ
ಜಾಗ ಖಾಲಿ ಮಾಡ ಬೇಗ …”
ಮನೆ ಕಡೆ ನಾಗರಹಾವು ಬಂದಾಗಲೆಲ್ಲಾ ಅದನ್ನು ಓಡಿಸೋವಾಗ “ಅದಕ್ಕೆ ನೋವು ಮಾಡಬೇಡಿ” ಅನ್ನೋ ದೊಡ್ಡವರ ರಾಗದ ಹಿನ್ನಲೆಯಲ್ಲಿ ನಮ್ಮ ಕುಂದಗನ್ನಡದ ಪ್ರಾಸ ಹೀಗಿತ್ತು
ನಮ್ಮ ಹಳ್ಳಿಗಳಲ್ಲಿ ಹಾವಿನ ಬಗ್ಗೆ ಭಯ ಮತ್ತು ಆಸಕ್ತಿ ಸ್ವಲ್ಪ ಕಮ್ಮಿನೇ ಜನರಲ್ಲಿ.ಆದರೆ ನಂಗೆ ಮಾತ್ರ ಇವತ್ತಿಗೂ ಅಷ್ಟೇ ಉತ್ಸಾಹ ಅವುಗಳ ಬಗ್ಗೆ.ಅದರಲ್ಲೂ ನಾಗರಹಾವು ಅಂದ್ರೆ ಸಕತ್ ಖುಷಿ..ಅದು ಮಾಡುವಷ್ಟು ಗೊಂದಲ ,ಖರ್ಚು,ಭಯ ಮತ್ಯಾವ ಹಾವುಗಳು ಮಾಡೋದಿಲ್ಲ.ಅಪರೂಪಕ್ಕೆ ಅವುಗಳು ಕೋಳಿ ಗೂಡಲ್ಲಿರೋ ಮೊಟ್ಟೆ ತಿನ್ನೋಕೆ ಬಂದರೆ ಈ ಅಕ್ಕ ಪಕ್ಕದ ಮನೇಲಿ ಎಲ್ಲ ಹೋ ದೇವ್ರ್ ಹಾವ್ ಬಂತ್ ..ಎಂದು ಪಡುವ ಸಂಭ್ರಮವೋ ಸಂಭ್ರಮ!ನಂತರ ಅದಕ್ಕಿಷ್ಟು ಹಾಲು ಇಟ್ಟು ,ಅಕ್ಕಿ ಚೆಲ್ಲಿ ಕೈ ಮುಗಿಯೋರು !ಆದರೆ ಅದು ಕುಡಿದದ್ದು ನಾ ನೋಡೇ ಇಲ್ಲ.ಪಾಪ !ಅದರ ಹೆದರಿಕೆ ಅದಕ್ಕೆ ಎಲ್ಲಿ ಹೊಡಿತಾರೋ ಅಂತ!ಯಾವ ಹಾವಿಗೂ ಇರದ ಮುಂಡು ಬಾಲ ಇದಕ್ಕೆ ಇರೋದರಿಂದ ಅದರ ನಿಕ್ ನೇಮ್ ಮುಂಡಪ್ಪ.
ಒಮ್ಮೆ ನಮ್ಮ ಪಕ್ಕದ ಕಾಡಿಗೆ ನವಿಲು ಹಿಡಿಯುವ ಗುಂಪೊಂದು ಬಂದಿತ್ತು.ಅವರ ಜೊತೆ ನಾವು ಕೂಡ ನೋಡಲು ಹೋಗಿದ್ದೆವು .ಚಂದದ ನವಿಲು ಗರಿ ಸಿಗುತ್ತಲ್ಲಾ ಅಂತ!ಸರಿ ಹೋಗ್ತಾನೆ ಒಂದು ದೊಡ್ಡ ನವಿಲು ಸಿಕ್ಕಿಬಿಟ್ಟಿತು.ಅವರು ಅದನ್ನು ಕೊಲ್ತಾರೆ ಅಂತ ಮಾತ್ರ ನಮಗೆ ಗೊತ್ತಿರಲಿಲ್ಲ.ಅವರು ಅದನ್ನ ಕೊಂದು ಹೊಟ್ಟೆ ಸೀಳಿದಾಗ ಅಲ್ಲೊಂದು ಪುಟ್ಟ ನಾಗರ ಮರಿ!ಆಮೇಲೆ ನಾಗರ ಹಾವಿನ ಹೆಣ ಕಂಡ ತಪ್ಪಿಗೆ (ಅಷ್ಟು ಚಂದದ ನವಿಲು ಕೊಂದಿದ್ದು ಮಾತ್ರ ಸರಿಯಂತೆ ಅವರ ಪ್ರಕಾರ ) ಸರ್ಪ ಸಂಸ್ಕಾರ ,ಅದೂ ಇದೂ ಪೂಜೆ ಮಾಡಬೇಕಾಯ್ತು ,ಆಮೇಲೆ ನವಿಲು ಹಿಡಿಯೋದು ಬಿಟ್ಟಿರಬೇಕು ಬಹುಶಃ
Read more 
ಅವತ್ತು ಎದೆ ನೋವೂ ಬಂದಿರಲಿಲ್ಲ, ಶರಣರೂ ಬರಲಿಲ್ಲ..!
-ಕಾಲಂ ೯
ನೂರು ವರ್ಷ ದಾಟಿದ ಸಿದ್ಧಗಂಗಾ ಸ್ವಾಮೀಜಿ ಜೈಲು-ಆಸ್ಪತ್ರೆ ಹುಡುಕಿಕೊಂಡು ಯಡಿಯೂರಪ್ಪನವರನ್ನು ನೋಡಲು ಹೋಗಿದ್ದಾರಲ್ಲ? ಏನಿದರ ಹಿಂದಿನ ಹಕೀಕತ್ತು? ಧರ್ಮಾಚರಣೆಗೂ ಪುರುಸೊತ್ತು ಇಲ್ಲದಷ್ಟು ಸಾಮ್ರಾಜ್ಯ ಕಟ್ಟಿಕೊಂಡು ಸ್ವಾಮೀಜಿಯೊ ಅಥವಾ JSS ಕಂಪೆನಿಯ CEO ನೋ ಎಂಬಂತಿರುವ ಜಗದ್ಗುರುಗಳು ಧಾವಿಸಿ ಬಂದರಲ್ಲ? ಅಂತಹದೇನು ಆಗಿತ್ತಲ್ಲಿ? ರಂಭಾಪುರಿಗಳು ಸೇರಿದಂತೆ ಅನೇಕ ಸಣ್ಣ-ಪುಟ್ಟ ವೀರಶೈವ ಸ್ವಾಮೀಜಿಗಳು ಯಡಿಯೂರಪ್ಪನವರನ್ನು ಸಂತೈಸಲು ಸಾಲುಗಟ್ಟಿದ್ದು ಮಾಧ್ಯಮಕ್ಕೆ ಆಶ್ಚರ್ಯವೆನಿಸಿರಲಿಲ್ಲ. ಆದರೆ ಈ ಹಿರಿತಲೆಗಳು ಹಾಗೇ ದೌಡಾಯಿಸಿದ್ದರ ಹಿಂದೇನು ನಡೆದಿದೆ? ಇದು ಮಾಧ್ಯಮದ ಒಳಗೂ-ಹೊರಗೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೋಮವಾರದ ತಮ್ಮ ಅಂಕಣದಲ್ಲಿ ಅಮೀನ್‌ಮಟ್ಟು ತುಂಬಾ ಆಪ್ತವಾಗಿಯೇ ಯಡಿಯೂರಪ್ಪನವರ ಪ್ಲಸ್ಸು-ಮೈನಸ್ಸುಗಳನ್ನು ಹೊರಹಾಕಿದ್ದನ್ನು ಓದಿದ ಅನೇಕರು ’ಈ ಮಠಾಧಿಪತಿಗಳನ್ನೇಕೆ ಬಿಟ್ಟಿರಿ’ ಎಂದು ಪ್ರತಿಕ್ರಿಯಿಸಿದ್ದಾರೆ. ಸರ್ವ ವೀರಶೈವ ಮಠಗಳಿಗೂ ಒಬ್ಬನೇ ಆಡಳಿತಾಧಿಕಾರಿ ಎಂಬಂತಿರುವ ಸಚಿವ ಸೋಮಣ್ಣ ಬೆನ್ನುಹತ್ತಿ ಇವರನ್ನೆಲ್ಲ ಹೊರಡಿಸಿಕೊಂಡು ಬರುತ್ತಿದ್ದಾರೆಯೇ? ಸರ್ಕಾರದಿಂದ ದೇಣಿಗೆಯಾಗಿ ಪಡೆದ ೩-೫ ಕೋಟ ರೂಗಳ ಹಂಗು ಹಿಂಗೆಲ್ಲ ಮಾಡುವಂತೆ ಮಾಡಿತೆ?
ಒಟ್ಟು ರಾಜ್ಯದ ನಾಯಕತ್ವದ ಎಲ್ಲ ಲಕ್ಷಣಗಳು ಕರಗಿ ಶುದ್ಧ ವೀರಶೈವ ಮುಖಂಡನಂತೆ ಗೋಚರಿಸುತ್ತಿರುವ ಯಡಿಯೂರಪ್ಪನವರ ಜೈಲು-ಆಸ್ಪತ್ರೆಗಳ ಹರಾಕಿರಿ ನಗೆಪಾಟಲಾಗಿ ಹೋಗಿರುವಾಗ ಈ ’ಗೌರವಾನ್ವಿತ’ರೇಕೆ ಹರಸಲು ಹೊರಟರು? Read more 






