Skip to content

Posts from the ‘ವಾಣಿಜ್ಯ’ Category

1
Mar

ಬಜೆಟ್ಟಿನ ಸಮಯ

- ರಾಘವೇಂದ್ರ ಗುಡಿ

ಇನ್ನೇನು ದೂರ ಇಲ್ಲ. ತುಂಬಾ ಸನಿಹದಲ್ಲಿದೆ. ಇನ್ನು ಕೆಲವು ದಿನಗಳು ಕಳೆದರೂ ಸಾಕು ಅನೇಕರಿಗೆ ನಗಲು, ಉಣ್ಣಲು, ಮಲಗಲು, ನೆಂಟರಿಷ್ಟರ ಮನೆಗೆ ಹೋಗಲು ಕೂಡ ಸಮಯವಿರುವುದಿಲ್ಲ! ಅನೇಕರಿಗೆ ರಾತ್ರಿ ನಿದ್ರೆ ಇರುವುದಿಲ್ಲ; ಕೆಲವರಿಗೆ ಇದ್ದಕ್ಕಿದ್ದಂತೆ ದಾನ ಮಾಡುವ ಗುಣ ಹುಟ್ಟುವುದು! ಹಲವರಿಗೆ ತಮಗೂ ಮನೆಯಿದೆ, ಮಡದಿ ಇದ್ದಾಳೆ, ಮಕ್ಕಳು ಇವೆ, ಹಾ ತನ್ನ ಮೇಲೆ ಇವರೆಲ್ಲರೂ ಅವಲಂಬಿಸಿದ್ದಾರೆ, ತನಗೂ ಜವಾಬ್ದಾರಿ ಇದೆ, ಆರೋಗ್ಯವಿದೆ ಅನಾರೋಗ್ಯವೂ ಬರಬಹುದು ಎಂಬುವುದೆಲ್ಲ ನೆನಪಾಗುವ ಸಮಯ!! ನೆನಪಾಗದಿದ್ದರೂ ಅಷ್ಟೇ ಹೋಯಿತು, ತೆರಿಗೆಯನ್ನು ಉಳಿಸಲು ಏನು ಮಾಡಬೇಕು ಎಂಬುವುದೊಂದೆ ಚಿಂತೆ. ಹಾ ಈಗ ಅರ್ಥವಾಗುತ್ತಿದೆಯಾ? ಹಾ ಹೌದು ಮಾರಾಯ್ರೆ ನಿಮ್ಮ ಊಹೆ ನಿಜ, ಮಾರ್ಚ ಬರುತ್ತಿದೆ, ಆದಾಯ ತೆರಿಗೆ ಕಟ್ಟಲು, ಉಳಿಸಲು ಕೊನೆ ಅವಕಾಶ! ಬಹುಷಃ ಈಗ ಅನೇಕರಿಗೆ ಸೆಕ್ಷನ್ ೮೦ಅ, ೮೦ಆ, ೮೦ಉ ಎಂಬವವು ಇವೆ ಎಂಬುವುದು ನೆನಪಾಗುತ್ತಿರುತ್ತೆ. ಇನ್ನು ಕೆಲವು ದಂಡಪಿಂಡ, ಧೂರ್ತ, ಪುಂಡ, ೪೨೦ಗಳು ಅನೇಕ ಇನ್ಸುರೆನ್ಸ್ ಎಜೆಂಟ್‌ಗಳನ್ನು, ಎನ್‌ಜಿಓಗಳನ್ನು ಸಂಪರ್ಕಿಸಿ ನಿಮಗೂ ಸ್ವಲ್ಪ ಹಣವನ್ನು ಕೊಡುತ್ತೇನೆ ನನಗೆ ದಯಮಾಡಿ ಖೊಟ್ಟಿ ರಸೀದಿಗಳನ್ನು ಕೊಡಿ (ಆದಾಯ ತೆರಿಗೆ ಇಲಾಖೆಗೆ ನೀಡಿ, ತೆರಿಗೆ ವಿಮುಕ್ತಿಯನ್ನು ಪಡೆಯಲು) ಎಂದು ಹಲ್ಲು ಗಿಂಜುತ್ತಾ ’ಸೆಟ್ಟಿಂಗ್’ ಮಾಡಲು ಎಡತಾಕಲೂ ಶುರುಮಾಡಬಹುದು. ಇದು ಕೇವಲ ಜನರಿಗೆ ಅಥವ ಸಂಸ್ಥೆಗಳಿಗೆ ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೂ ಸಂಧಿಕಾಲ, ಲವಲವಿಕೆಯ ಕಾಲ!

ಕಳೆದ ಬಾರಿಯ ಬಜೆಟ್ ಪುಸ್ತಕವನ್ನು ಜೋಪಾನವಾಗಿ ಎತ್ತಿ, ಹಿಡಿದಿರುವ ಧೂಳು, ಗೆದ್ದಲುಗಳನ್ನು ಮೃದುವಾಗಿ ಕೊಡವಿ, ಕೆಮ್ಮುತ್ತಾ ಅದನ್ನು ಮೊದಲ ಬಾರಿಗೆ ತೆರೆದು ಅದರಲ್ಲಿರುವ ಕಳೆದ ವರ್ಷದ ಹೊಸ ಯೋಜನೆಗಳ ಆಶ್ವಾಸನೆಗಳನ್ನು ನೆನಪು ಮಾಡಿಕೊಂಡು ಮತ್ತೊಮ್ಮೆ ಭವ್ಯ ಭಾರತದ ದಿವ್ಯ ಪ್ರಜೆಗಳಿಗೆ ಹಳೆ ಬಟ್ಟೆಯಿಂದ ತಯಾರಿಸಿದ ಹೊಸ ಟೊಪ್ಪಿಗೆಯನ್ನು ಹಾಕುವ ಬಗೆಯನ್ನು ಹುಡುಕುವ ಪರ್ವಕಾಲವಿದು!! Read more »

1
Feb

ಷೇರು ಮಾರುಕಟ್ಟೆ

-ಸಂದೀಪ್ ಬೆಂಗಳೂರು

ಸ್ಟಾಕುಗಳ ಖರೀದಿ ಮತ್ತು ಮಾರಾಟ ಮಾಡುವ ಸ್ಥಳವನ್ನು ”ಷೇರು ಮಾರುಕಟ್ಟೆ” ಎಂದು ಕರೆಯುತೇವೆ .  ಒಂದು  ದೇಶದ ಆರ್ಥಿಕ ಆರೋಗ್ಯ ನಿಕಟವಾಗಿ ಷೇರುಪೇಟೆಗಳ ಮೇಲೆ ಅವಲಂಬಿತವಾಗಿರುತ್ತದೆ. Stock  ಒಂದು  ಕಂಪನಿಯ ಭಾಗಶಃ ಮಾಲೀಕತ್ವವನ್ನು ಪ್ರತಿನಿಧಿಸುವ ಒಂದು ಸಣ್ಣ ಪಾಲು. ಒಂದು ಕಂಪನಿಯು ತನ್ನ ಅಭಿವೃಧಿಗಾಗಿ ಮತ್ತು ಹೆಚ್ಹು ಬಂಡವಾಳದ ಅವಶ್ಯಕತೆಗಾಗಿ ಹಣವನ್ನು ಹೂಡಿಕೆದಾರರಿಂದ ಸಂಗ್ರಹಿಸಿ ಅದನ್ನು ಷೇರುಗಳ ರೂಪದಲ್ಲಿ  ಪರಿವರ್ತಿಸುತ್ತಾರೆ. ಇದರಿಂದ ಬಂದ ಆದಾಯದಲ್ಲಿ  ವಾರ್ಷಿಕ/ಅರ್ಧ ವಾರ್ಷಿಕಕ್ಕೆ ಒಮ್ಮೆ ಲಾಭಾಂಶವನ್ನು ಹೂಡಿಕೆದಾರರಿಗೆ ನೀಡುತ್ತಾರೆ.ಹೂಡಿಕೆ ಮಾಡುವ ಮೊದಲು ಕಂಪನಿಯ ಮೌಲ್ಯ,ಗುಣಮಟ್ಟ , ಅದರ ಹಿಂದಿನ ಆದಾಯದ ಬಗ್ಗೆ ಪರೀಕ್ಷಿಸಿ ಕೊಂಡರೆ ಉತ್ತಮ. ಷೇರುಗಳನ್ನು ಕೊಳ್ಳಲು ಅಥವಾ ಮಾರಲು ಆಯಾ ದೇಶಗಳಲ್ಲಿ ಒಂದು ನಿರ್ದಿಷ್ಟ ಮಾರುಕಟ್ಟೆಗಳಿರುತ್ತವೆ. ಉದಾ: ಬಾರತದಲ್ಲಿ  ”ಬಿ.ಎಸ್.ಇ”(ಬಾಂಬೆ ಸ್ಟಾಕ್ ಎಕ್ಸ್ಚೇಂಜ್), “ಎನ್.ಎಸ್.ಇ” (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ಗಳು ಇವೆ. ಹೂಡಿಕೆದಾರರು ಅವನ ವ್ಯವಹಾರಗಳಿಗೆ  ಮಧ್ಯವರ್ತಿಯನ್ನು ನೇಮಿಸಿಕೊಳಬೇಕು. ಮದ್ಯವರ್ಥಿಯು ಆಯಾ ದೇಶದ ಮಾರುಕಟ್ಟೆಗಳಲ್ಲಿ ನೊಂದಾಯಿತನಾಗಿರುತ್ತಾನೆ.

Read more »

Follow

Get every new post delivered to your Inbox.

Join 265 other followers