ಷೇರು ಮಾರುಕಟ್ಟೆ
-ಸಂದೀಪ್ ಬೆಂಗಳೂರು
ಸ್ಟಾಕುಗಳ ಖರೀದಿ ಮತ್ತು ಮಾರಾಟ ಮಾಡುವ ಸ್ಥಳವನ್ನು ”ಷೇರು ಮಾರುಕಟ್ಟೆ” ಎಂದು ಕರೆಯುತೇವೆ . ಒಂದು ದೇಶದ ಆರ್ಥಿಕ ಆರೋಗ್ಯ ನಿಕಟವಾಗಿ ಷೇರುಪೇಟೆಗಳ ಮೇಲೆ ಅವಲಂಬಿತವಾಗಿರುತ್ತದೆ. Stock ಒಂದು ಕಂಪನಿಯ ಭಾಗಶಃ ಮಾಲೀಕತ್ವವನ್ನು ಪ್ರತಿನಿಧಿಸುವ ಒಂದು ಸಣ್ಣ ಪಾಲು. ಒಂದು ಕಂಪನಿಯು ತನ್ನ ಅಭಿವೃಧಿಗಾಗಿ ಮತ್ತು ಹೆಚ್ಹು ಬಂಡವಾಳದ ಅವಶ್ಯಕತೆಗಾಗಿ ಹಣವನ್ನು ಹೂಡಿಕೆದಾರರಿಂದ ಸಂಗ್ರಹಿಸಿ ಅದನ್ನು ಷೇರುಗಳ ರೂಪದಲ್ಲಿ ಪರಿವರ್ತಿಸುತ್ತಾರೆ. ಇದರಿಂದ ಬಂದ ಆದಾಯದಲ್ಲಿ ವಾರ್ಷಿಕ/ಅರ್ಧ ವಾರ್ಷಿಕಕ್ಕೆ ಒಮ್ಮೆ ಲಾಭಾಂಶವನ್ನು ಹೂಡಿಕೆದಾರರಿಗೆ ನೀಡುತ್ತಾರೆ.ಹೂಡಿಕೆ ಮಾಡುವ ಮೊದಲು ಕಂಪನಿಯ ಮೌಲ್ಯ,ಗುಣಮಟ್ಟ , ಅದರ ಹಿಂದಿನ ಆದಾಯದ ಬಗ್ಗೆ ಪರೀಕ್ಷಿಸಿ ಕೊಂಡರೆ ಉತ್ತಮ. ಷೇರುಗಳನ್ನು ಕೊಳ್ಳಲು ಅಥವಾ ಮಾರಲು ಆಯಾ ದೇಶಗಳಲ್ಲಿ ಒಂದು ನಿರ್ದಿಷ್ಟ ಮಾರುಕಟ್ಟೆಗಳಿರುತ್ತವೆ. ಉದಾ: ಬಾರತದಲ್ಲಿ ”ಬಿ.ಎಸ್.ಇ”(ಬಾಂಬೆ ಸ್ಟಾಕ್ ಎಕ್ಸ್ಚೇಂಜ್), “ಎನ್.ಎಸ್.ಇ” (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ಗಳು ಇವೆ. ಹೂಡಿಕೆದಾರರು ಅವನ ವ್ಯವಹಾರಗಳಿಗೆ ಮಧ್ಯವರ್ತಿಯನ್ನು ನೇಮಿಸಿಕೊಳಬೇಕು. ಮದ್ಯವರ್ಥಿಯು ಆಯಾ ದೇಶದ ಮಾರುಕಟ್ಟೆಗಳಲ್ಲಿ ನೊಂದಾಯಿತನಾಗಿರುತ್ತಾನೆ.





