ವಿಷಯದ ವಿವರಗಳಿಗೆ ದಾಟಿರಿ

ದ್ವೇಷಕಾರುವುದನ್ನೇ ವಿಚಾರವಾದ ಎನ್ನುವುದಾದರೆ…  

– ಅಜಿತ್ ಶೆಟ್ಟಿ ಹೆರಾಂಜೆ

ಗೌರಿ ಲಂಕೇಶ್ ಕೊಲೆಯಾದಾಗ ನಾನು ಮುಖಪುಟದಲ್ಲಿ ಒಂದು ಸ್ಟೇಟಸ್ ಹಾಕಿದ್ದೆ.. ಅಕಾಲಿಕ ಮರಣ ಯಾರದ್ದೇ ಆಗಿರಲಿ ಅದು ಘೋರ. ಅದು ಗೌರಿ ಲಂಕೇಶರಂತಾ ಖ್ಯಾತ ನಾಮರದ್ದೆ ಆಗಿರಲಿ ಅಥವಾ ಶರತ್, ರುದ್ರೇಶ್, ಕಟ್ಟಪ್ಪ, ರವಿಯರಂತ ಶ್ರೀ ಸಾಮಾನ್ಯರದ್ದೇ ಆಗಿರಿಲಿ..!!

ಸಾವಿನ ಸೂತಕ ಮನಸ್ಸನ್ನು ಬಹಳ ಘಾಸಿಗೊಳಿಸುತ್ತೆ. ನಮ್ಮ ಜೀವನವನ್ನು ಸುರಕ್ಷಿತವಾಗಿಡುವ ಜವಾಬ್ದಾರಿ ಹೊತ್ತಿರುವ ಸರ್ಕಾರದ ಮೇಲೆ ಸಿಟ್ಟು ಅಸಹನೆ ಆಕ್ರೋಶ ಬರುತ್ತದೆ. ಇಂತಹಾ ಸಾವುಗಳು ರಾಜ್ಯದ ಕಾನೂನು ಸುವ್ಯವಸ್ಥೆಗೆ ಹಿಡಿದ ಕನ್ನಡಿ. ರಾಜ್ಯ ಸರ್ಕಾರ ಆದಷ್ಟು ಬೇಗ ಈ ಪಾಪಿ ಹಂತಕರನ್ನ ಬಂಧಿಸಬೇಕು.

ಓಂ ಶಾಂತಿ…

ಇದರಲ್ಲಿ ಯಾವುದೇ ವ್ಯಂಗ್ಯ ವಿಡಂಬನೆ, ಅಪಹಾಸ್ಯ ಯಾವುದೂ ಇರಲಿಲ್ಲ, ಸಾಮಾನ್ಯವಾಗಿ ಯಾರೇ ಸತ್ತರು,ವೈರಿಯೇ ಆಗಿರಲಿ ಬೇಕಿದ್ದರೆ ಅವರೊಂದಿನ ನಮ್ಮೆಲ್ಲಾ ವೈರತ್ವ ಅವರು ಬದುಕಿರುವ ತನಕ ಅಷ್ಟೆ. ಅವರ ಸಾವಿನೊಂದಿಗೆ ಆ ವೈರತ್ವದ ಭಾವವೂ ಸತ್ತು ಸಮಾಧಿಯಾಗಿ ಬಿಡುತ್ತೆ. ನನಗ ಗೊತ್ತಿದ್ದ (ಸಾವಿನ ಮುಂಚಿನ ತನಕ) ಮಟ್ಟಿಗೆ ಗೌರಿ ಲಂಕೇಶ್ ಒಬ್ಬ ಎಡ ಪಂಥೀಯ ಪತ್ರಕರ್ತರು. ಸಾಮಾನ್ಯವಾಗಿ ಎಲ್ಲರಂತೆ ಇವ್ರು ಬಲಪಂಥೀ ಯರು ಅಂದ್ರೆ ಬಿಜೆಪಿ ಮತ್ತು ಸಂಘ ಪರಿವಾರದವರೊಡನೆ ವೈಚಾರಿಕ ಭಿನ್ನಾಭಿಪ್ರಾಯ ಹೊಂದಿರುತ್ತಾರೆ ಎಂದಷ್ಟೇ ಅಂದುಕೊಂಡಿದ್ದೆ. ಆದ್ರೆ ನನ್ನ ಮುಖ ಪುಟದ ನನ್ನ ಕೆಲ ಸ್ನೇಹಿತರ ಪೋಸ್ಟ್ ಗಳನ್ನ ನೋಡಿದಾಗ ನನಗೆ ಸ್ವಲ್ಪ ಕಸಿವಿಸಿ ಆಯಿತು, ಯಾಕೆಂದರೆ ನಾವು ವ್ಯಕ್ತಿಗಳನ್ನ ಅವರ ಸಾವಿನ ನಂತರವೂ ದ್ವೇಷಿಸುವುದು ಒಂದು ಆತ ಉಗ್ರಗಾಮಿಯಾಗಿರ್ಬೇಕು ಅಥವಾ ಆ ವ್ಯಕ್ತಿ ತನ್ನ ಜೀವನದುದ್ದಕ್ಕೂ ನಮ್ಮನ್ನ ಇನ್ನಿಲ್ಲದಂತೆ ನೋಯಿಸಿರಬೇಕು. ಆತನ ಜೀವನದುದ್ದಕ್ಕೂ ಆತನ ನಡೆಗಳು ನಮ್ಮ ಮನಸ್ಸಿಗೆ ಹಿಂಸೆ ಕೊಟ್ಟಿರಬೇಕು. ನನ್ನ ಕೆಲವು ಸ್ನೇಹಿತರು ತಮ್ಮ ಮುಖಪುಟದಲ್ಲಿ no tears no cheers ಎನ್ನುವ ಸ್ಟೇಟಸ್ ಹಾಕಿದ್ದರು.. ಯಾಕೆ ಆಕೆಯ ಮೇಲೆ ಅಷ್ಟು ಕೋಪ ಎಂದು ತಿಳಿದುಕೊಳ್ಳುವ ಚಿಕ್ಕ ಪ್ರಯತ್ನ ಮಾಡಲು ಅಂತರ್ಜಾಲದಲ್ಲಿ ಆಕೆಯ ಬಗ್ಗೆ ಮಾಹಿತಿಯನ್ನ ಹುಡುಕಲು ಪ್ರಾರಂಭಿಸಿದೆ..

ನನ್ನ ಜೀವ ಮಾನದಲ್ಲಿ ಯಾವತ್ತೂ “ಗೌರಿ ಲಂಕೇಶ್ ಪತ್ರಿಕೆ” ಯನ್ನು ಓದಿದವನಲ್ಲ. ಆದರೆ ಗೌರಿ ಲಂಕೇಶ್ ಬಗ್ಗೆ ತಿಳಿಯುವ ಹುಡುಕಾಟದಲ್ಲಿ ಆಕೆಯ ಈ ಪತ್ರಿಕೆಯ ಮುಖ ಪುಟಗಳನ್ನ ನೋಡುತ್ತಾ ಹೋದಾಗ ನನಗೆ ಅಸಹ್ಯ ಹುಟ್ಟಿತು. ಇದು ಸಾರ್ವಜನಿಕರು ಓದುವ ಪತ್ರಿಕೆಯೋ ಅಥವಾ ಕೆಲ ಪಡ್ಡೆ ಹುಡುಗರು ತಮ್ಮ ಮುಖಪುಟದಲ್ಲಿ ಹಾಕುತ್ತಿದ್ದ ಮೂರನೇ ದರ್ಜೆಯ ಪೋಸ್ಟ್ ಗಳೋ ಅನ್ನಿಸಿದವು, ಅದು ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧವೇ ಆಗಿರಲಿ ಅಥವಾ ಯಡಿಯೂರಪ್ಪನವರ ವಿರುದ್ಧವೇ ಆಗಿರಲಿ ಅಥವಾ ಸಂಘ ಪರಿವಾರದ ವಿರುದ್ಧವೇ ಆಗಿರಲಿ, ಥೂ! ಅಸಹ್ಯ, ಅವಾಚ್ಯ.. ಆದರೆ ಇದೇ ಮಾನದಂಡವನ್ನ ತನ್ನ ಬಳಗದವರನ್ನ ಟೀಕಿಸಲು ಬಳಸುವುದಿಲ್ಲ. ಇದೆಂತಾ ಪತ್ರಿಕಾ ಧರ್ಮ? ಒಮ್ಮೆ ಆಶ್ಚರ್ಯ ಆಯ್ತು, ಅಲ್ರಿ ಪಡ್ಡೆ ಹುಡುಗರು ತಮ್ಮ ಮುಖ ಪುಟದಲ್ಲಿ ಇಷ್ಟು ಕೆಳ ಮಟ್ಟದ ಪೋಸ್ಟ್ ಗಳನ್ನು ಹೆಂಡ ಕುಡಿದ ಮತ್ತಿನಲ್ಲಿಯೂ ಹಾಕುವುದಿಲ್ಲ. ನನಗೆ ನಿಜವಾಗಿಯೂ ಅವರ ಟ್ಯಾಬ್ಲಾಯ್ಡ್ ನೋಡಿ ವಾಕರಿಕೆ ಬಂತು. ಸದ್ಯ ನಾನು ಇಷ್ಟು ದಿನ ಆ ದರಿದ್ರ ಪತ್ರಿಕೆಯನ್ನ ಓದದಿದ್ದದ್ದು ಒಳ್ಳೆಯದೇ ಆಯ್ತು, ಇಂತಾ ತಲೆ ಕೆಟ್ಟ ತಲೆ ಬಡ ಇಲ್ಲದ ಬರಹಗಳಿಂದಾಗಿಯೇ ಆಕೆಯೇ ಮೇಲೆ ಪ್ರಹ್ಲಾದ್ ಜೋಶಿಯವರು ಮಾನನಷ್ಟ ಮೊಕದ್ದಮೆ ಹಾಕಿ ಗೆದ್ದಿದ್ದು. ಇಷ್ಟಾಗಿಯೂ ಬುದ್ದಿ ಬರದ ಬುದ್ದಿ ಕಲಿಯದ ಈಕೆಯ ಕಸುಬು ಮುಂದುವರೆದಿತ್ತು.

ಈಕೆಯ ಪತ್ರಿಕೆ ಹೀಗಿದ್ದರೆ ಈಕೆಯ ಮುಖಪುಟ ಹೇಗಿರಬಹುದು ಎಂಬ ಕುತೂಹಲ ಹುಟ್ಟಿತು. ಜೀವನದಲ್ಲಿ ಯಾವತ್ತೂ ಅತ್ತ ನೋಡದವನು ಅತ್ತ ಕಡೆ ನೋಡಿದೆ, ಅದೂ ಅವಾಚ್ಯಗಳಿಂದ ಹೊರತಾಗಿ ಇರಲಿಲ್ಲ. ಅಲ್ಲೂ ಅದೇ ದ್ವೇಷ, ಹೇಸಿಗೆ, ರೋದನೆ.. ನನಗೆ ಅರ್ಥ ಆಗದಿರೋದು ಯಾಕೆ ಇವರಿಗೆ ಇಷ್ಟು ದ್ವೇಷ ಅನ್ನೋದು. ಆಕೆಯ ಮುಖಪುಟ ಹೇಗಿದೆ ನೋಡಿ.. ಇವರು ಓಣಂ ಹಬ್ಬದ ಪ್ರಯುಕ್ತ ಹಾಕಿದ ಶುಭಾಷಯದ ಪೋಸ್ಟ್ ಹಾಕಿದ್ರು. ಬಲಿ ಚಕ್ರವರ್ತಿ ವಾಮನನ ಜನಿವಾರ ಹಿಡಿದು ಮೇಲೆ ಎತ್ತಿದ ಹಾಗಿರುವ ಒಂದು ವ್ಯಂಗ್ಯ ಚಿತ್ರ. ಇದು ಶುಭಾಶಯ ಹೇಳುವುದಕ್ಕಿಂತ ಬ್ರಾಹ್ಮಣರನ್ನು ಅಣಕಿಸಲೆಂದೇ ಹಾಕಿದ್ದು ಎನ್ನುವುದು ಹೆಚ್ಚು  ಸ್ಪಷ್ಟವಾಗಿ ಕಾಣುತ್ತದೆ. ಇಂತಹ ರೋಗಗ್ರಸ್ತ ಮನಸ್ಥಿತಿಯೇ ವೈಚಾರಿಕ ಮನಸ್ಥಿತಿಯೆಂದು ಕರೆಸಿಕೊಳ್ಳುತ್ತದೆಯೇ?ಇದೇ ಹೆಂಗಸು.. ರಂಜಾನ್ ಹಬ್ಬಕ್ಕೆ ಶುಭ ಕೋರಿದ ರೀತಿ ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಯಾವುದೇ ಅಣುಕು ಕುಯುಕ್ತಿ ಇಲ್ಲದೇ ನೇರ ಶುಭಾಶಯ. ಶುಭಾಶಯಗಳು ಕೋರಲಿ ಆದರೆ ಅದರ ನೆಪದಲ್ಲಿ ವಿಷಕಾರುವ ಗೌರಿಯ ಮಾನಸಿಕತೆಯನ್ನು ನೋಡಿ ಮರುಕ ಹುಟ್ಟುತ್ತದೆ. ಇಂತಹ ಮಾನಸಿಕ ವಿಕಲತೆಯೊಂದಿಗೆ ಅವರ ಪರಲೋಕದ ಪ್ರಯಾಣ ಸುಖಕರ ಆಗಲಿದೆಯೇ?? ನಿಮಗೆ ಅನ್ನಿಸಬಹುದು ಸತ್ತ ಮೇಲೂ ಅದೆಂತಾ ದ್ವೇಷದ ಮನಸ್ಥಿತಿ ಇವನದ್ದು ಅಂತ. ಖಂಡಿತವಾಗಿಯೂ ನನಗೆ ಆಕೆ ಸತ್ತಾಗ ಆಕೆಯ ಮೇಲೆ ಅಂತಹ ಯಾವುದೇ ಭಾವನೆ ಇರಲಿಲ್ಲ.

ಆದರೆ ಆಕೆಯ ಬಗ್ಗೆ, ಆಕೆಯ ವಿಚಾರಧಾರೆಯ ಬಗ್ಗೆ, ಆಕೆಯೇ ಪತ್ರಿಕೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದಾಗ ನನಗೆ ಬಹಳ ನೋವಾಗುತ್ತಿದೆ… ಯಾಕೆ ಈ ವಿಚಾರ ವ್ಯಾದಿಯ ಹಿಂದೆ ಬಿದ್ದೆ ಅನ್ನಿಸತೊಡಗಿತು. ಈಕೆ ನಡುರಾತ್ರಿ ದೇಶದ ಪ್ರಧಾನಿಗೆ ಬೈದು ಹಾಕಿದ ಪೋಸ್ಟ್ ನೋಡಿದರೆ ಒಂದೋ ಈಕೆಯ ಮನದಲ್ಲಿ ಎಷ್ಟು ದ್ವೇಷ ಮಡುಗಟ್ಟಿದ್ದಿರಬಹುದು ಎಂಬ ಅಂದಾಜು ಸಿಗುತ್ತದೆ. ಸ್ಥಿತಪ್ರಜ್ಞರು, ಸಾಮಾಜಿಕ ಜವಾಬ್ದಾರಿ ಇರುವ ಯಾವ ಹೆಣ್ಣುಮಗಳೂ ಅಂತಹ ಅಸಹ್ಯ, ಅಸಭ್ಯ ಪೋಸ್ಟ್ ಖಂಡಿತ ಹಾಕಲಾರರು. ಇಂತವುಗಳನ್ನ ನೋಡಿ ನನಗೆ ವಾಕರಿಕೆ ಬರಲು ಶುರುವಾಗಿ ಆ ಕೊಳೆತು ನಾರುತ್ತಿದ್ದ ಮನಸ್ಸುಗಳ ಸಮಾಧಿಯಾಗಿದ್ದ ಅವಳ ಮುಖಪುಟದಿಂದ ಹೊರ ಬಂದೆ.. ಅಬ್ಬಾ ಈಗ ಉಸಿರಾಡಲು ಸ್ವಚ್ಛ ಆಮ್ಲಜನಕ ದೊರೆಯಿತು.

ಇದೇ ಗುಂಗಿನಲ್ಲಿ, ಯುಟ್ಯೂಬ್ ನಲ್ಲಿ ಆಕೆಯ ಒಂದು ಅತ್ಯದ್ಭುತ ವೀಡಿಯೋ ದೊರಕಿತು. ಇದಂತೂ ಆಕೆಯವೃತ್ತಿ ಜೀವನದ ಮತ್ತು ಸೋ ಕಾಲ್ಡ್ ಸೆಕ್ಯುಲರ್ ಫಿಲಾಸಫಿಯ ಬ್ಲ್ಯಾಕ್ ಹೋಲ್ ನಂತೆ ಇತ್ತು. ಇದಕ್ಕಿಂತ ಕೆಟ್ಟದ್ದಾಗಿ ತನ್ನ ಧರ್ಮ ತನ್ನ ಸಮಾಜವನ್ನು ಯಾರಿಗೂ ನಿಂದಿಸಲು ಸಾಧ್ಯವಿಲ್ಲ.. ಅಪ್ಪ ಅಮ್ಮ ಇಲ್ಲದ ಧರ್ಮ. ಬ್ರಿಟೀಷರು ಬರುವ ತನಕ ಸ್ವಂತಕ್ಕೊಂದು ಹೆಸರಿಲ್ಲದ ಧರ್ಮ ಇದ್ದರೆಷ್ಟು ಹೋದರೆಷ್ಟು . ಇದಕ್ಕಿಂತ ಮುಸ್ಲಿಂ ಕ್ರೈಸ್ಥ ಧರ್ಮ ಸಾವಿರಪಾಲು ವಾಸಿ. ಸಂಘದ ಸರಸಂಘಚಾಲಕರಿಗೆ ಆಕೆ  ಬಳಸಿದ ಪದಗಳು ಅಬ್ಬಬ್ಬಾ ಅಸಹ್ಯ ಹುಟ್ಟುತ್ತದೆ ಆಕೆಯ ಮೇಲೆ.. ಇಷ್ಟು ಇದ್ದು ಆಕೆಯ ಹೆಸರು “ಗೌರಿ” ಆಕೆಯದ್ದು ಹಿಂದೂ ಧರ್ಮ..!!!

ಇವುಗಳನ್ನ ನೋಡಿದ ಮೇಲೆ ನೋ ಚಿಯರ್ಸ್, ನೋ ಟಿಯರ್ಸ್ ನ ಅರ್ಥವಾಯಿತು. ನಾನು ಈಕೆಯ ಸಾವನ್ನು ಯಾಕಾದರೂ ಸಮಾಜಕ್ಕೆ ದೇಶಕ್ಕಾಗಿ ಪ್ರಾಣದ ಆಹುತಿ ಮಾಡಿದ ನಮ್ಮ ಸಂಘದ ಕಾರ್ಯಕರ್ತರೊಂದಿಗೆ ಹೋಲಿಸಿದೆ ಎನ್ನುವ ಪಾಪ ಪ್ರಜ್ಞೆ ಕಾಡುತ್ತಿದೆ. ಇಂದು ನನಗೆ ಆಕೆಯ ಸಾವಿಗೆ ಯಾವ ಶೋಕವೂ ಇಲ್ಲ ಹಾಗೆಯೇ ಸಾವನ್ನು ಸಂಭ್ರಮಿವುದನ್ನು ನಮ್ಮ ಸಂಸ್ಕಾರವು ಹೇಳಿಕೊಟ್ಟಿಲ್ಲ. ಹಾಗಾಗಿ ಆಕೆಗೆ ಸದ್ಗತಿ ಕರುಣಿಸುವ ಜೊತೆಗೆ ಆಕೆಯ ವಿಚಾರಧಾರೆಗೂ ಸದ್ಗತಿ ಕರುಣಿಸಪ್ಪ. ಜೊತೆಗೆ ಆ ಹತ್ಯೆ ಮಾಡಿದವರ ಪತ್ತೆ ಶೀಘ್ರವಾಗಿ ಆಗಿ ಗೌರಿಯವರಿಗೆ ನ್ಯಾಯ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.

Advertisements