ವಿಷಯದ ವಿವರಗಳಿಗೆ ದಾಟಿರಿ
40

ಕನ್ನಡದಲ್ಲಿ ಬರೆಯಲು ಇಲ್ಲಿ ಕ್ಲಿಕ್ಕಿಸಿ

ನಿಮ್ಮ ಅಭಿಪ್ರಾಯಗಳು ಕನ್ನಡದಲ್ಲಿದ್ದರೆ ಚೆನ್ನ. ಸುಲಭವಾಗಿ ಕಾಮೆಂಟ್, ಲೇಖನ ಇತ್ಯಾದಿ ಬರೆಯಲು ಈ ಟೂಲ್ ಅನ್ನು ನೀವು ಬಳಸಬಹುದು.

ಅದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

 

40 ಟಿಪ್ಪಣಿಗಳು Post a comment
  1. -ಗೂಟ್ಟೀಕೆರೆ ಬೈರೇಶ್..
    ಜನ 24 2011

    ನಮ್ಮೂರಲ್ಲಿ….

    ಬೆಳ್ಳಿಗೆಜ್ಜೆ ಮತ್ತು ನಾಮಧಾರಿ ಎನ್ನುವ ರಾಸುಗಳ ಮೌಲ್ಯ ಲಕ್ಷದ ಮುವತ್ತೇಳು ಸಾವಿರ!

    ಲಕ್ಷಗಳ ಹಾರಾಜು ಕೇವಲ ಐಪಿಎಲ್ ಕ್ರೀಡಾಳುಗಳಿಗೆ ಎಂದು ಕುಳಿತಿದ್ದವರು ಈಗ ಬೆಚ್ಚಿಬಿದ್ದಿದ್ದಾರೆ. ಹಳ್ಳಿ ಹಸುಗಳಿಗೂ ಲಕ್ಷ ಕೂಡುವ ಕಾಲ ಇನ್ನೂ ಇದೆ ಎಂಬುದು ಸಾಬೀತಾದುದು ಅಜ್ಜಂಪುರ ಅಮೃತಮಹಲ್ ತಳಿ ಸಂವರ್ಧನಾ ಕ್ಷೇತ್ರದಿಂದ. ಹೌದು! ಮುಂಜಾನೆಯಿಂದ ಎಳೆಬಿಸಿಲ ಚುಮುಚುಮು ಚಳಿಯಲ್ಲಿ ಆರಂಭವಾದ ಹರಾಜು ಚಳಿ ಬಿಟ್ಟು ಬಿಸಿ ಮುಟ್ಟಿದ್ದು ಬೆಳ್ಳಿಗೆಜ್ಜೆ, ನಾಮದಾರಿಗಳು ಅಲ್ಲಿ ಬಂದಾಗ. ಸಾವಿರಗಳ ಲೆಕ್ಕ ಲಕ್ಷಕ್ಕೆ ಏರುತ್ತದೆ ಎಂಬುದು ಉಹಿಸಿದರೂ ಈಗಿನ ಕಾಲಕ್ಕೆ ಆಶ್ಚರ್ಯದ ಸಂಗತಿ. ಪ್ರತಿಷ್ಟೆಯ ಕಣವಾಗಿ ಅಂತಿಮವಾಗಿ ಎರಡುವರ್ಷದ ರಾಸುಗಳ ಜೋಡಿಯನ್ನು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಕಾಡಯ್ಯನಕೊಪ್ಪಲು ಗ್ರಾಮದ ಶಿವೇಗೌಡ ಎಂಬುವರು 1,37,115/- ಲಕ್ಷ ರೂ. ಗರಿಷ್ಠ ಮೊತ್ತಕ್ಕೆ ಖರೀದಿಸಿ ಸಾರ್ವಕಾಲಿಕ ದಾಖಲೆ ಬರೆದರು.

    ಹಾಸನ ಜಿಲ್ಲೆ ದುದ್ದ ಹೋಬಳಿ ಕೋಡಿಹಳ್ಳಿಯ ದೊರೆಸ್ವಾಮಿ ಎಂಬುವರು ಮತ್ತೊಂದು ಜೋಡಿಯನ್ನು 1,10,000/- ರೂ. ಎರಡನೇ ಗರಿಷ್ಠ ಬೆಲೆಗೆ ಪಡೆದು ಬೀಗಿದರು. ಚಿತ್ರದುರ್ಗ ಜಿಲ್ಲೆಯ ಮುದ್ದಾಪುರದ ಬಿ. ಹನುಮಯ್ಯ ಎಂಬವರು ಮೂರನೇ ಗರಿಷ್ಠ ಬೆಲೆ 90,250/- ರೂ.ಗೆ ಜೋಡಿ ಕರು ಕೊಂಡರು. ಉಳಿದ ಜೋಡಿಗಳ ಬೆಲೆ ಲಕ್ಷ ರೂಪಾಯಿಯ ಒಳಗೆ ಇಳಿದರೂ 39,900/- ರೂ. ಕನಿಷ್ಠ ಬೆಲೆ ದಾಖಲಾಯಿತು.ಅಜ್ಜಂಪುರ, ರಾಮಗಿರಿ, ಚಿಕ್ಕಹೆಮ್ಮಿಗನೂರು, ಬಾಸೂರು, ಲಿಂಗದಹಳ್ಳಿ, ಹಬ್ಬನಘಟ್ಟ ಅಮೃತಮಹಲ್ ಕಾವಲುಗಳಲ್ಲಿ ಸ್ವಾಭಾವಿಕವಾಗಿ ಬೆಳೆಸಿದ ಕರುಗಳನ್ನು ಪ್ರತಿ ವರ್ಷದಂತೆ ಇಲ್ಲಿ ಹರಾಜಿಗಿಡಲಾಗಿತ್ತು.ಬಲಶಾಲಿ ಕರುಗಳು ಕೆನೆದು ಅಪಾಯ ಮಾಡುವುದರಿಂದ ಮೂರು ವಿಭಾಗದ ವಿಶೇಷ ಹರಾಜು ಗ್ಯಾರಲಿ ಸ್ಥಾಪಿಸಿ ಕೂಡಲಾಗಿತ್ತು. ಪಳಗಿದ ಸಿಬ್ಬಂದಿ ತಂತ್ರ ಬಳಸಿ ನಿಗದಿತ ಕರುಗಳನ್ನು ಸಾಹಸದಿಂದ ಹರಾಜು ಗ್ಯಾರಲಿಗೆ ಬಿಡುತ್ತಿದ್ದರು. ಸರ್ಕಾರಿ ಸವಾಲ್ ಒಂದು ಲಕ್ಷ ಎಂದು ಬಿಡ್ ಕೂಗುತ್ತಿದ್ದಂತೆ ಹರಾಜು ಕೂಗುವವರ ಮೇಲಾಟ ಏರುತ್ತಿತ್ತು. ಕರು ಕೊಂಡವರ ಮುಖದಲ್ಲಿ ನಗೆ ಚೆಲ್ಲಿತ್ತು.ಒಟ್ಟು ೧೨೫ ಮಂದಿ ತಲಾ ೫೦೦೦ ರೂ. ಮುಂಗಡ ಕಟ್ಟಿ ಬಿಡ್‌ನಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಹಾಸನ, ಶಿವಮೊಗ್ಗ ಜಿಲ್ಲೆಯ ಹೆಚ್ಚು ಜನರಿದ್ದರು. ತುಮಕೂರು, ದಾವಣಗೆರೆ, ಹಾವೇರಿ, ಚಿತ್ರದುರ್ಗ ಮತ್ತಿತರರ ಜಿಲ್ಲೆಗಳ ರೈತರೂ ಪಾಲ್ಗೊಂಡಿದ್ದರು. ಈ ಹರಾಜು ಪ್ರಕ್ರಿಯೆ ಮತ್ತು ಕರುಗಳನ್ನು ನೋಡಲು ಸುಮಾರು ೩ ಸಾವಿರಕ್ಕೂ ಹೆಚ್ಚು ಜನ ನೆರೆದಿದ್ದರು. ಅಜ್ಜಂಪುರ ಕೇಂದ್ರದ ಉಪ ನಿರ್ದೇಶಕ ಡಾ. ಜಿ.ಎಂ. ಸುರೇಶ್ ನೇತೃತ್ವದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.ಪ್ರತಿಷ್ಠೆ: ಈ ವಿಶೇಷ ತಳಿಯ ಕರುಗಳನ್ನು ಹರಾಜಿನಲ್ಲಿ ಕೊಳ್ಳುವುದು ಮತ್ತು ಸಾಕುವುದೇ ರೈತರಿಗೆ ಪ್ರತಿಷ್ಠೆ ವಿಷಯ. ಕರು ಕೊಂಡು ಪಳಗಿಸಿ ಚೆನ್ನಾಗಿ ಸಾಕಿ ಲಾಭಕ್ಕೆ ಮಾರುವ ಪರಿಪಾಟವೂ ಇದೆ. ಪಳಗಿನ ಕರಗಳನ್ನು ಶಿವಮೊಗ್ಗ ಜಿಲ್ಲೆಯ ಹೋರಿ ಓಡಿಸುವ ಸ್ಪರ್ಧೆಗಳಲ್ಲಿ ತೊಡಗಿಸಲು ಹೆಚ್ಚು ಬೆಲೆಗೆ ಕೊಳ್ಳುವುದರ ಪರಿಣಾಮವೂ ಇದರಲ್ಲಿದೆ. ಕೃಷಿಗೆ ಯೋಗ್ಯವಾಗಿರುವ ಜತೆಗೆ ಬಹಳ ನಂಬಿಕಸ್ಥ ಎಂಬ ಗುಣವೇ ಈ ತಳಿಗೆ ವಿಶೇಷತೆ ತಂದುಕೊಟ್ಟಿದೆ.

    ಬೆಳೆಯುತ್ತಿರುವ ತಾಂತ್ರಿಕಯುಗಲ್ಲಿ ಯಂತ್ರಗಳ ಮಹಾತ್ಮೆ ಅರಿತ ಜನ ಕಾರು(ನ್ಯಾನೋ)ಗಳಿಗೆ, ಟ್ರಾಕ್ಟರ‍್ಗಳಿಗೆ ಮುಗಿಬಿದ್ದದ್ದಾರೆ. ಆದರೂ ಅಮೃತ ಮಹಲ್ ನಲ್ಲಿ ’ಯಂತ್ರಕ್ಕಿಂತ ರಾಸು ಮುಖ್ಯ’ ಎಂಬುವ ಮಾತು ನಿಜಾವಾಗಿದೆ.
    -ಗೂಟ್ಟೀಕೆರೆ ಬೈರೇಶ್..

    ಉತ್ತರ
  2. minchu
    ಮಾರ್ಚ್ 21 2011

    savayava krisi onde alla , yava krishi paddhatiyannu kurudagi acharanege tarabaradu, adhunika krushiyu idakke horatalla ………

    ಉತ್ತರ
  3. Raghu idkidu
    ಮೇ 6 2011

    ಅರೆಹೊಳೆಯವರೇ .. .. ಸರಿಯಾಗಿಯೇ ಹೇಳಿದ್ದೀರಿ.

    ಉತ್ತರ
  4. mcshetty
    ಮೇ 7 2011

    thumba chennagide nimma lekana heegeye munduvariyali nimage shubhavagali;

    ಉತ್ತರ
  5. Kaa Vee Krishnadas
    ಜೂನ್ 16 2011

    ಶುಭಾಶಯಗಳು

    ಉತ್ತರ
  6. Kaa Vee Krishnadas
    ಜೂನ್ 18 2011

    ಪೇಯಿ೦ಗ್ ಗೆಸ್ಟು ಹೌದು….
    ಪ್ಲೇಯಿ೦ಗ್ ಗೆಸ್ಟು ಹೌದು….

    ಉತ್ತರ
  7. ಜುಲೈ 28 2011

    mitrare, E taanaviruvudu nanage gottiralilla kannada beleyalu Uliyalu intaha taanagala sahaya beku maattu kannadigaru parspara artha maadikollalu tamma tamma anisikegallannu hanchikollalu olleya taana idaagide. dhanayavaadagalu.

    ಉತ್ತರ
  8. ಆಗಸ್ಟ್ 12 2011

    ಶ್ರೀ ರಾಕೇಶ್,
    ನಮಸ್ತೆ,
    ನನ್ನ ವೈಯಕ್ತಿಕ ಕೆಲಸಗಳ ಒತ್ತಡದಲ್ಲಿ “ವೇದಸುಧೆ” ಬಿಟ್ಟು ಬೇರೆಲ್ಲಿಯೂ ಕಣ್ಣಾಡಿಸಲು ಸಾಧ್ಯವಾಗಿಲ್ಲ.ನಿಮ್ಮ ಮಿಂಚಂಚೆಯನ್ನು ನೋಡಿ ಇಲ್ಲಿ ಬಂದೆ. ನಿಲುಮೆ ತಂಡದ ಪ್ರಯತ್ನ ಚೆನ್ನಾಗಿದೆ. ಸಮಾನ ವಿಚಾರಗಳಲ್ಲಿ ಒಟ್ಟಿಗೆ ಇರೋಣ.ಮನೆ ಕಟ್ಟಿಸುವ ಕೆಲಸದ ಒತ್ತಡದಲ್ಲಿರುವೆ. ನವಂಬರ್ ೧೩ ಗೃಹಪ್ರವೇಶ. ಆ ಸಮಯಕ್ಕೆ ಬ್ಲಾಗ್ ಮಿತ್ರರನ್ನು ಹಾಸನಕ್ಕೆ ಕರೆಯುವ ಆಸೆ ಇದೆ.ವೇದಸುಧೆಯು ನಿಲುಮೆಯೊಟ್ಟಿಗೆ ಯಾವಾಗಲೂ ಇರುತ್ತದೆ.
    ನಮಸ್ತೆ.
    ಹರಿಹರಪುರಶ್ರೀಧರ್
    ಸಂಪಾದಕ,
    ವೇದಸುಧೆ

    ಉತ್ತರ
  9. radhika
    ಸೆಪ್ಟೆಂ 8 2011

    chenagide…

    ಉತ್ತರ
  10. Gopi Lakshmikanth
    ಆಕ್ಟೋ 5 2011

    Chenagide sir

    ಉತ್ತರ
  11. ಆಕ್ಟೋ 7 2011

    ಮಾನ್ಯರೇ, ನಿಲುಮೆ ಶಿರೋನಾಮೆ ಚೆನ್ನಾಗಿದೆ. ಮೊದಲಿಗೆ ಎಲ್ಲಾ ತಾಣಗಳಂತೆ ನಿಲುಮೆ ತಾಣ ಎನ್ನುತ್ತಿದ್ದೆವು. ಅಂಬೆಕಾಲಿಡುತ್ತಿದ್ದ ತಾಣಕ್ಕೆ ಒಂದು ವರ್ಷಕ್ಕೆ ಕಾಲಿಟ್ಟು ಸಂತೋಷ ತಂದಿದೆ. ಕನ್ನಡ ಅಭಿವೃದ್ದಿಗೆ, ಸ೦ಪರ್ಕಕ್ಕೆ, ಪರಸ್ಪರ ಅರಿವಿಕೆ, ಕನ್ನಡ ಅಭಿವೃದ್ದಿಗೆ ನಿಲುವು ತಳೆದಿರುವ ನಿಲುಮೆ ತಾಣಕ್ಕೆ ತಾಣದ ಅಭಿವೃದ್ದಿಗೆ ಹಗಲು ರಾತ್ರಿ ಎನ್ನದೆ ದುಡಿಯುತ್ತಿರುವ ಎಲ್ಲರಿಗೂ ಅಭಿನಂದನೆಗಳು. ವಂದನೆಗಳೊಡನೆ.

    ಉತ್ತರ
  12. ramananda ainkai
    ನವೆಂ 19 2011

    ಧನ್ಯವಾದಗಳು.
    ನನ್ನ ಲೇಖನ ಅಪಾರ ಚರ್ಚೆಗೆ ಗ್ರಾಸವಾಗಿದೆ. ಈ ದೇಶದಲ್ಲಿ ಜಾತಿ ಮತ್ತು ಧರ್ಮಕ್ಕೆ ಸಂಬಂಧಪಟ್ಟಂತೆ ಎಲ್ಲರೂ ಹೊಡೆದಾಟಕ್ಕೆ ಸಿದ್ಧರಾಗಿರುತ್ತಾರೆ. ಏಕೆಂದರೆ ಕಳೆದ ಮೂರುನೂರು ವರ್ಷಗಳಿಂದ ನಮ್ಮ ಪರಂಪರೆಯ ಕುರಿತು ಅಂತಹ ಒಂದು ತಪ್ಪುತಿಳುವಳಿಕೆಯನ್ನು ಕಟ್ಟಿಕೊಂಡು ಬಂದಿದ್ದೇವೆ. ನಮ್ಮ ಸಮರ್ಥನೆಗಾಗಿ ಕಳೆದ ನೂರಾರು ವರ್ಷಗಳೀಚಿನ ಯಾವುದೇ ಆಕರಗಳು ಪ್ರಮಾಣ ಆಗಲಾರವು. ಏಕೆಂದರೆ ಅವೆಲ್ಲವೂ ವಸಾಹತುಶಾಹಿ ದೃಷ್ಠಿಯ ಪುನರುತ್ಪಾದನೆಗಳು. ನಮಗೆ ಗ್ರಂಥಗಳ ಪ್ರಮಾಣ ಬೇಡ. ಅನುಭವಗಳನ್ನ ಒರೆಗೆಹಚ್ಚುವಾ. ಅದಕ್ಕೆ ನಮ್ಮನ್ನ ಅನುಭವಕ್ಕೆ ತೆರೆದುಕೊಳ್ಳಬೇಕು. ಕೇವಲ ಚಿಂತನಾಪ್ರಪಂಚ ನಮ್ಮ ಅನುಭವ ಅಲ್ಲ. ಕೇವಲ ಕಣ್ಣಿಗೆ ಕಾಣುವುದು ಮಾತ್ರ ಸತ್ಯ ಅಲ್ಲ. ಅದರ ಹಿಂದೆ ಇನ್ನೂ ಅಸಂಖ್ಯಾತ ಸತ್ಯಗಳಿರುತ್ತವೆ. ಅದನ್ನೇ ಸಂಸ್ಕೃತಿ ಅನ್ನುವುದು. ಅವು ಹೃದಯಕ್ಕೆ ಕಾಣುವ ಸತ್ಯಗಳು. ಈ ದೇಶದಲ್ಲಿ ಬ್ರಾಹ್ಮಣರನ್ನು ಸಮರ್ಥಿಸಿ ಯಾರಿಗೆ ಏನೂ ಆಗಬೇಕಿಲ್ಲ. ಆದರೆ ಸತ್ಯವನ್ನು ಮರೆಮಾಚಿದರೆ ಹಲವು ತಲೆಮಾರುಗಳೇ ಅಶಾಂತಿ ಮತ್ತು ಹಿಂಸೆಯಲ್ಲಿ ನರಳಬೇಕಾಗುತ್ತದೆ. ವಿರೋಧಗಳನ್ನು ತಿರಸ್ಕರಿಸುತ್ತಿಲ್ಲ. ವಿರೋಧಗಳನ್ನು ಪುನರ‍್ಪರಿಶೀಲನೆಮಾಡಿ.ಮನುಷ್ಯರು ಕೂಡಿಬಾಳಿ ನೆಮ್ಮದಿ ಪಡೆಯುವ ಮಾರ್ಗ ಹುಡುಕೋಣ.

    ಉತ್ತರ
  13. nagesh
    ಡಿಸೆ 29 2011

    kannadada managalige kaavyada kampu harisida kuvempuravarige nana namanagalu

    ಉತ್ತರ
  14. nagesh
    ಡಿಸೆ 29 2011

    ಕನ್ನಡವಿದು ಬರಿ ನುಡಿಯಲ್ಲ
    ಅರಿತವರ ಬಾಯ್ ಸಕ್ಕರೆಯು
    ಮನಮನಗಳ ಭಾವಕೆ ಬೆಸುಗೆಯ ಹಾಕಿ
    ವಿಶ್ವಮಾನವತೆಯ ಸಾರಿದ ಯೋಗಿ
    ರಸಋಷಿಯೇ ನಿನಗಿದೋ ನನ್ನ ನಮನ!

    ಉತ್ತರ
  15. vishu
    ಮಾರ್ಚ್ 9 2012

    “ನಿಲುಮೆ” ತು೦ಬಾ ಚೆನ್ನಾಗಿದೆ!!!!

    ಉತ್ತರ
  16. yathindra.B.h
    ಮಾರ್ಚ್ 16 2012

    ನಮಸ್ಕಾರ,
    ನಿಮಗೆಲ್ಲ ತಿಳಿದಿರಬಹುದು ‘ಫೇಸ್ ಬುಕ್ ‘ ಜಾಲತಾಣ ಹೆಚ್ಚು ಜನರನ್ನು ತಲುಪಲು ತನ್ನ ಸೇವೆಯನ್ನು ಜಗತ್ತಿನ 75ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ.. ಇದರಲ್ಲಿ ಕನ್ನಡವೂ ಒಂದು… ಭಾಷೆಗಳ ಅನುವಾದವನ್ನು ಫೇಸ್ ಬುಕ್ ತನ್ನ ಬಳಕೆದಾರರಿಂದಲೇ ಮಾಡಿಸುತ್ತಿದೆ.

    ಬಳಕೆದಾರರು ತಮಗೆ ಆಸಕ್ತಿಇರುವ ಭಾಷೆ ಯನ್ನು ಬಳಸಿ ‘ಫೇಸ್ ಬುಕ್’ ಪಟ್ಟಿ ಮಾಡಿರುವ ಪದಗಳನ್ನು ಅನುವಾದಿಸಬಹುದು ಅಥವಾ ಈಗಾಗಲೇ ಅನುವಾದಗೊಂಡಿರುವ ಪದಗಳ ಬಗ್ಗೆ ತಮ್ಮ ಅಭಿಮತ ತಿಳಿಸಬಹುದು. ಜಾಲತಾಣದ ಒಳಗಿನ ತಂತ್ರಾಂಶ ಈ ಎಲ್ಲ ಅನುವಾದಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ವಿಮರ್ಶಿಸಿ ಸೂಕ್ತವಾದ ಅನುವಾದವನ್ನು ಆರಿಸುತ್ತದೆ. ಹೀಗೆ ಎಲ್ಲ ಫೇಸ್ ಬುಕ್ ಪದಗಳು ಅನುವಾದಗೊಂಡರೆ ‘ಸಂಪೂರ್ಣ ಕನ್ನಡಮಯ ಫೇಸ್ ಬುಕ್” ರೆಡಿ.

    ‘ಫೇಸ್ ಬುಕ್” ಪ್ರಚಾರ ಮಾಡುವುದಕ್ಕಾಗಲಿ ಅಥವಾ ಅದರಿಂದ ಕನ್ನಡಿಗರಿಗೆ ಉಪಯೋಗವಿದೆ ಅಥವಾ ಇನ್ನಾವುದೇ ಉದ್ದೇಶದಿಂದ ಇದನ್ನು ಬರೆದಿದ್ದಲ್ಲ. ಇದರ ಹಿಂದಿನ ಕಳಕಳಿ ಇಷ್ಟೇ …

    ಇಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬಲಾಡ್ಯವಾದ ಜಾಗತಿಕ ಜಾಲತಾಣಗಳು ತಮ್ಮ ಸೇವೆಗಳನ್ನು ಸಾದ್ಯವಾದಷ್ಟು ಭಾಷೆಗಳಲ್ಲಿ ನೀಡಿ ಹೆಚ್ಚು ಜನರನ್ನು ತಲುಪಲು ಪ್ರಯತ್ನಿಸುತ್ತಿವೆ. ಈ ಪ್ರಯತ್ನಕ್ಕೆ ಆ ಸಂಸ್ಥೆಗಳು ಪರಿಗಣಿಸುವುದು ‘ಎಷ್ಟು ಮಂದಿ ಆ ಭಾಷೆಯನ್ನು ಅಂತರ್ಜಾಲದಲ್ಲಿ ಬಳಸಬಹುದು’ ಎಂಬ ಅಂಶ. ಈ ಕೆಲಸದಲ್ಲಿ ನಾವು ಹಿಂದೆ ಬಿದ್ದರೆ ನಮ್ಮ ಅಕ್ಕ ಪಕ್ಕದ ಭಾಷೆಗಳು ಅಂತರ್ಜಾಲದಲ್ಲಿ ನಮ್ಮ ಕನ್ನಡಕ್ಕಿಂತ ಮೇಲುಗೈ ಸಾಧಿಸುತ್ತವೆ(ಸಾಧಿಸಿವೆ). ಹೀಗಾದಲ್ಲಿ ಜಾಗತಿಕವಾಗಿ ಬಲಾಡ್ಯವಾದ ಸಂಸ್ಥೆಗಳು ಸಹಜವಾಗಿ ಕನ್ನಡವನ್ನು ಅಂತರ್ಜಾಲದಲ್ಲಿ ಬೆಳೆಸುವುದರ ಬಗ್ಗೆ ನಿರ್ಲಕ್ಷ ತಾಳುತ್ತವೆ (ನಿರ್ಲಕ್ಷಿಸಿವೆ). ಏಕೆಂದರೆ ಎಲ್ಲ ಅಂತರ್ಜಾಲ ಅಭಿವೃದ್ಧಿ ಕೆಲಸಗಳು ‘ಎಷ್ಟು ಜನ ಬಳಸುತ್ತಾರೆ/ಬಳಸುತ್ತಿದ್ದಾರೆ ‘ ಎಂಬ ಅಂಕಿ ಅಂಶದ ಮೇಲೆ ನಿಂತಿವೆ. ಯಾವ ಭಾಷೆ ಅಂತರ್ಜಾಲದಲ್ಲಿ ಹೆಚ್ಚು ಉಪಯೋಗಿಸಲ್ಪಡುತ್ತದೋ ಆ ಭಾಷೆ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಇಲ್ಲವಾದಲ್ಲಿ, ಅಂತಹ ಯಾವುದೇ ಜಾಗತಿಕ ಜಾಲತಾಣಗಳು ಅದರ ಅಭಿವೃದ್ದಿಗೆ ಗಮನ ನೀಡದೆ ಅಂತರ್ಜಾಲದಲ್ಲಿ ನಶಿಸಿ ಹೋಗಬಹುದು. ಇದಕ್ಕೆ ಕೆಲವು ಉದಾಹರಣೆಗಳು

    ೧-ಗೂಗಲ್ ನ್ಯೂಸ್ , ದಕ್ಷಿಣ ಭಾರತದ ಎಲ್ಲ ಭಾಷೆ ಗಳಲ್ಲಿ ಲಬ್ಯವಿದೆ ಕನ್ನಡದಲ್ಲಿ ಇಲ್ಲ … ಕಾರಣ – ಕನ್ನಡ ವಾರ್ತೆ ಅನ್ನು ಅಂತರ್ಜಾಲದಲ್ಲಿ ಓದುವವರು ಕಡಿಮೆ.

    ೨- ‘ಫೇಸ್ ಬುಕ್ ‘ – ದಕ್ಷಿಣ ಭಾರತದ ಎಲ್ಲ ಭಾಷೆ ಗಳಳಲ್ಲಿ ಸಂಪೂರ್ಣ ಅನುವಾದಗೊಂಡಿದೆ ಹಾಗು ಉಪಯೋಗಕ್ಕೆ ಲಬ್ಯವಿದೆ. ಕನ್ನಡ ಕೇವಲ ೩೦% ಮಾತ್ರ ಅನುವಾದಗೊಂಡಿದೆ – ಕಾರಣ ಕನ್ನಡ ಫೇಸ್-ಬುಕ್ ಅನುವಾದಕರು ಮತ್ತು ಅಭಿಮತ ನೀಡಿರುವವರು ಕಡಿಮೆ.

    ೩- ದಕ್ಷಿಣ ಭಾರತದ ಪ್ರತಿಯೊಂದು ಭಾಷೆಯೂ ಸಾವಿರಾರು ಜಾಲತಾಣಗಳು/ಬ್ಲಾಗ್ /ಸಿನಿಮಾ/ಟೀವಿ/ವಾರ್ತೆ/ವ್ಯಾಪಾರ/ವಿದೇಶಿಸಂಘ ಗಳ ಜಾಲತಾಣಗಳನ್ನು ಗಳನ್ನೂ ಹೊಂದಿವೆ ಅವುಗಳಿಗೆ ಸಂಖ್ಯೆಗೆ ಹೋಲಿಸಿದರೆ ಕನ್ನಡ ಜಾಲತಾಣಗಳ ಸಂಖ್ಯೆ ಭಯ ಹುಟ್ಟಿಸುವಷ್ಟು ಕಡಿಮೆ. ಕಾರಣ ಅಂತರ್ಜಾಲದಲ್ಲಿ ಕನ್ನಡ ಬಳಸುವವರ ಸಂಖ್ಯೆ ಕಡಿಮೆ.

    ಹೀಗೆ ಹೇಳುತ್ತಾ ಹೋದರೆ ಹಲವಾರು . ಆದ್ದರಿಂದ ‘ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಗೆ’ ಇದು ಸೂಕ್ತ ಕಾಲ.

    ಸದ್ಯಕ್ಕೆ ಫೇಸ್ ಬುಕ್ ಕನ್ನಡ ಗೊಳಿಸುವುದರ ಮೂಲಕ ‘ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಯನ್ನು’ ಪ್ರಾರಂಬಿಸೋಣ.

    ಫೇಸ್ ಬುಕ್ ಪದಗಳ ಅನುವಾದ ಮಾಡಲು ಅಥವಾ ಅಬಿಮತ ನೀಡಲು …

    *ನಿಮ್ಮ ಫೇಸ್ ಬುಕ್ ಖಾತೆಗೆ ಸೈನ್ ಇನ್ ಮಾಡಿ. (ಖಾತೆ ಇಲ್ಲದಿದ್ದರೆ , ಹೊಸ ಖಾತೆ ತೆಗೆಯುವುದು ೧ ನಿಮಿಷದ ಕೆಲಸ)
    *ಈ ಕೆಳಗಿನ ಕೊಂಡಿಗೆ ಹೋಗಿ http://www.facebook.com/translations/?ref=ts
    ಇಲ್ಲಿ ಪುಟದ ಬಲಗಡೆ ಇರೋ Translation Links ಅನ್ನೋ ಭಾಗಕ್ಕೆ ಹೋಗಿ, ಅಲ್ಲಿ ಭಾಷೆ ಆಯ್ಕೆಯ ಅನುಕೂಲ ಬಳಸಿ “ಕನ್ನಡ” ಆಯ್ದುಕೊಳ್ಳಿ – (ಕೊನೆ ಇಂದ ಎರಡನೇ ಆಯ್ಕೆ)
    *ಅನುವಾದ ಶುರುಮಾಡಿ ( ಕನ್ನಡ ದಲ್ಲಿ ಬರೆಯಲು ಈ ಕೊಂಡಿ ಬಳಸಬಹುದು – http://www.google.com/transliterate/ )
    *ಅನುವಾದದಲ್ಲಿ ಆಸಕ್ತಿ ಇಲ್ಲದಿದ್ದರೆ – ಈಗಾಗಲೇ ಅನುವಾದಗೊಂಡಿರುವ ಪದಗಳಿಗೆ ನಿಮ್ಮ ಅಭಿಮತ (ಸರಿ/ತಪ್ಪು) ತಿಳಿಸಿ (vote up or vote down) ಮಾಡಬಹುದು.

    ಹೆಚ್ಹಿನ ವಿವರಗಳು ಬೇಕಿದ್ದರೆ ಮತ್ತು ಕನ್ನಡ ಅನುವಾದದಲ್ಲಿ ಆಸಕ್ತಿ ಇದ್ದರೆ ತಿಳಿಸಿ… ಹಲವಾರು ಜಾಲತಾಣಗಳು ಹವ್ಯಾಸಿ ಕನ್ನಡ ಅನುವಾದಕರಿಗಾಗಿ ಕಾಯುತ್ತಿದೆ. ನಿಮ್ಮ ಹವ್ಯಾಸ ಮತ್ತು ದಿನದ ಒಂದೆರಡು ನಿಮಿಷಗಳು ಕನ್ನಡವನ್ನು ಅಂತರ್ಜಾಲದಲ್ಲಿ ಬೆಳಗಲು ಸಹಕಾರಿಯಾಗಬಹುದು.. ನಿಮ್ಮ ಪ್ರತಿಯೊಂದು ಕನ್ನಡ ಕ್ಲಿಕ್ ‘ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಗೆ’ ಅಳಿಲುಸೇವೆ ಯಾಗಬಹುದು…. -ನಿಮ್ಮ ಯತೀಂದ್ರ ಕನ್ನಡಿಗ

    ಉತ್ತರ
    • ಮಾರ್ಚ್ 16 2012

      ಏನ್ ಕ್ರಾಂತಿನೋ ಏನೋ ಯತೀಂದ್ರ ಅವರೇ… ಅಲ್ಲಿರುವ ಕನ್ನದ ಪದಗಳಲ್ಲಿ ಬಹುತೇಕ ಕನ್ನಡ ಪಂಡಿತರಿಗೆ ಮಾತ್ರ ತಿಳಿಯಬೇಕು.ನನ್ನಂತಹ ಸಾಮಾನ್ಯ ಕನ್ನಡಿಗರಿಗಲ್ಲ… ಕನ್ನಡವನ್ನ ಕನ್ನಡಿಗರಿಂದಲೇ ದೂರ ಮಾಡುವಂತಗಾಬಾರದು ಅಲ್ಲವೇ?

      ಉತ್ತರ
  17. Deekshitha Vorkady
    ಮೇ 5 2012

    ನಿಲುಮೆಗೆ ಏನಾದ್ರೂ ಬರೀಬೇಕನಿಸ್ತಿದೆ.ಚೆನ್ನಾಗಿ ಮೂಡಿಬರ್ತಿದೆ.ಅಭಿನಂದನೆಗಳು

    ಉತ್ತರ
  18. Sahanapu
    ಜುಲೈ 16 2012

    ಚೆನ್ನಾಗಿ ಇದೆ.

    ಉತ್ತರ
  19. ಆಗಸ್ಟ್ 23 2012

    ಹಸುಗಳಿಗೂ ಈ ಕಾಲದಲ್ಲೂ ಬೆಲೆಯಿದೆ ಅಂತಾಯ್ತ್ತು, ಎಲ್ಲಿಯವರೆಗೆ ಮಕ್ಕಳು ಹಾಲು ಕುಡಿಯುತ್ತಾರೊ, ಅಲ್ಲಿಯವರೆಗೆ ಹಸುಗಳು ಬೇಕೇ ಬೇಕು ಅಲ್ಲವಾ? ಅದೆ ಹುಲಿ ನೋಡಿ ಪಾಪ, ಎಷ್ಟು ಕ್ರೂರ ಪ್ರಾಣಿಯಾದರೂ ಇಂದು ಅದರ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.

    ಸರಿ, ನಾವೂ ಹಸುವಿನಂತೆ ಮೆತ್ತಗಿದ್ದರೆ ಹೇಗೆ ಈಸುವುದು, ಈಸಿ ಜಯಿಸುವುದು, ಎಂದಿದ್ದೆ, ಆದರೆ, ಹಸು ಹಾಗೂ ಹುಲಿಯಲ್ಲಿ, ಹಸುವೇ ಉಳಿದಿದೆ ಎಂದರೆ, ಸತ್ಯಕ್ಕೇ ಜಯ ಎಂದಾಯಿತು.

    ಉತ್ತರ
  20. ಆಗಸ್ಟ್ 31 2012

    ಇಂದು ನಾನು ಈ ಜಾಗವನ್ನು ನೋಡಿದೆ,ನನಗೆ ಖುಷಿಯಾಯಿತು. ಹಾಗೇನೆ ನಾನು ಈ ಸ್ಯೆಟನ್ನು ನನ್ನ ಗಣಕ ಯಂತ್ರದಲ್ಲಿ ಒಂದು ಡಿಪಾಲ್ಟ್ ಕಿಡಕಿಯಾಗಿ ಮಾಡಿಕೊಂಡಿದ್ದೇನೆ, ಇದ್ರಿಂದ ನಾನು ಸುಲಭವಾಗಿ ನಾನು ಬೇಕಾದಾಗ ಪಡೆಯಬಹುದು.
    ಧನ್ಯವಾದಗಳು.

    ಉತ್ತರ
  21. murthy
    ನವೆಂ 2 2012

    There is no hard and false rules in agriculture. It is as good as going along with Nature and learn the behaviors of nature and adopt in our agriculture. Fertility of the soil is how much live the soil is. We must keep on increasing the microorganisms in the soil. Palekars Jeevamrutha is one of the culture media which increases the soil microorganisms but along with maintenance of moisture and mulching is very much necessary. So there is no necessary of blindly commenting any methods of cultivation practices. One spoon of the soil in our farm contains more number of microorganisms than the total number of human beings living on this earth. But our science knows only 1% of them and bifurcate among them pathogenic and non pathogenic and advice us to spray pesticides and fungicides and kill all the 99% unknown microorganisms who built and maintain life on this universe…
    It is just an advice to anybody not to come to any conclusions about these matters so suddenly as all these efforts are to save earth…..may it be organic cultivation or subhash palekar or bio dynamic agriculture or sustainable agriculture or natural farming.. The ultimate mission is to save earth and save ourselves..

    ಉತ್ತರ
  22. nagaraju
    ನವೆಂ 11 2012

    ಇಷ್ಟ ಆಯಿತು !
    ನಿಮಗೆ ದೀಪಾವಳಿ ಹಬ್ಬದ ಶುಭಾಷಯಗಳು !

    ಉತ್ತರ
  23. Nagaraj
    ಮಾರ್ಚ್ 29 2013

    Nimma abipraya chennagide.

    ಉತ್ತರ
  24. Basavanneppa.P.Kambar
    ಮೇ 10 2013

    ನಿಮ್ಮ್ ಪ್ರಯತ್ನ ಚನ್ನಾಗಿದೆ ಒಳ್ಳೆಯದಾಗಲಿ

    ಬಸವಣ್ಣೆಪ್ಪಾ.ಪ.ಕ೦ಬಾರ

    ಉತ್ತರ
  25. siddaiah
    ಡಿಸೆ 17 2013

    ತುಂಬಾ ಚನ್ನಾಗಿದೆ ಲೇಖನಗಳು, ಸೊಗಸಾಗಿ ಮೂಡಿ ಬಂದಿದೆ

    ಉತ್ತರ
  26. Vinayaka
    ಏಪ್ರಿಲ್ 15 2015

    ಒಳ್ಳೆಯ ಲೇಖನಗಳ ಸಂಗ್ರಹ ಈ ನಿಲುಮೆ ಆಗಿದೆ ನಿಮ್ಮ ಪ್ರಯತ್ನಕ್ಕೆ ನಮ್ಮ ಸಹಕಾರ ಎಂದಿಗೂ ಇರುತ್ತದೆ

    ಉತ್ತರ
  27. ನವೆಂ 17 2016

    ನಮ್ಮ ದೇಶದಲ್ಲಿ ನಡೆಯುವ ಪ್ರತಿಯೊಂದೂ ಕೆಲಸ ಕ್ಕೆ ಹಿನ್ನಡೆಯಾಗಲು ಈ ಕಪ್ಪು ಹಣ ಮತ್ತು ಭ್ರಷ್ಟಾಚಾರ ಮೂಲ ಕಾರಣ ಹಾಗಾಗಿ ನೋಟಿನ ಸಮೇತ ಕಿತ್ತೊಗಿದರೆ ನಮ್ಮ ದೇಶ ಮುಂದಿನ ವಿಶ್ವಗುರು ಆಗುವ ಕಾಲ ದೂರವಿಲ್ಲ

    ಉತ್ತರ
  28. ಏಪ್ರಿಲ್ 29 2017

    ಯಡಿಯೂರಪ್ಪನವರೇ ನಿಮ್ಮ ನಡೆಯ ಬಗ್ಗೆ ಒಂದಷ್ಟು ಸಲಹೆಗಳು :

    ಈ ಬರಹ ಕಟುವಾದರೂ ಕಹಿ ಸತ್ಯ.
    ಯಡಿಯೂರಪ್ಪನವರು ಬದಲಾಗದಿದ್ದರೆ, ರಾಜ್ಯದಲ್ಲಿ ಬಿಜಿಪಿ ಅಧಿಕಾರಕ್ಕೆ ಬರುವುದು ಕನಸು. ನಾನು ಎನ್ನುವ ಅಹಂ ನಿಂದ ತುಂಬಿ ತುಳುಕುತ್ತಿರುವ ಮನುಷ್ಯ ಮತ್ತೆಂದು ಏಳಲಾರದಂತೆ ಕೆಳಗೆ ಬೀಳುವುದು ಖಚಿತ. ದೇಶದಲ್ಲಿ ಬಿಜೆಪಿಯ ಬಗ್ಗೆ ಜನರಿಗೆ ಈಗ ಒಲವು ಹೆಚ್ಚಾಗುತ್ತಿದೆ. ಅದನ್ನು ರಾಜ್ಯದಲ್ಲಿ ತರಬೇಕಾಗಿದೆ. ಹಿಂದೆ ಒಂದು ಸಮಯದಲ್ಲಿ ದೇಶದಲ್ಲಿ ವಾಜಪೇಯಿಯವರು ಪ್ರಧಾನಮಂತ್ರಿಗಳಾಗಬೇಕು, ಹಾಗಾಗಿ ನನಗೆ ಓಟು ಕೊಡಿ ಎಂದು ಮತ ಕೇಳುತ್ತಿದ್ದ ಬಿಜೆಪಿ ನಾಯಕರನ್ನು ನಾನು ನೋಡಿದ್ದೇನೆ. ತಮ್ಮ ಸ್ವಂತ ಬಲದಿಂದ ಎಲ್ಲೂ ಮತ ಕೇಳದ ಕೆಲ ವ್ಯಕ್ತಿಗಳನ್ನು ನೋಡಿದ್ದೇನೆ. ಆದರೆ ನೀವು ಹಾಗೇ ಮೋದಿಯವರ ಹೆಸರಿನಿಂದ ಮತ ಕೇಳದೇ, (ನೀವೆಂದೂ ಮೋದಿಯಾಗಲು ಸಾಧ್ಯವಿಲ್ಲ) ನಿಮ್ಮ ಸ್ವಸಾಮಥ್ಯದಿಂದ ಕರ್ನಾಟಕದಲ್ಲಿ ಸಂಘಟನೆಯನ್ನು ಬೆಳೆಸಿ. ಆಗ ನೀವು ನಿಮ್ಮ ಬಗ್ಗೆ ಪ್ರಚಾರ ಮಾಡುವುದು ಬೇಡ, ಸಂಘಟನೆಯವರೇ ನಿಮ್ಮನ್ನು ಗೆಲ್ಲಿಸುತ್ತಾರೆ. ಆದರೇ ನೀವೇನಾದರೂ ನಾನು ನನ್ನ ಜಾತಿ ಅಥವಾ ದುಡ್ಡಿನ ಬಲದಿಂದ ಗೆಲ್ಲುತ್ತೇನೆ ಎಂದು ನಿಮ್ಮ ಸುತ್ತ ಇರುವ ಭಟ್ಟಂಗಿಗಳ ಜೊತೆ ಸೇರಿ ಹೊರಟರೆ, ನಿಮಗೆ ಸೋಲು ಕಟ್ಟಿಟ್ಟ ಬುತ್ತಿ. ಈಗಾಗಲೇ ನಂಜನಗೂಡು ಉಪಚುನಾವಣೆಯ ಅನುಭವವಾಗಿದೆ. ಆ ಚುನಾವಣೆಯಲ್ಲಿ ನಿಮಗಿದ್ದ oveಡಿ ಛಿoಟಿಜಿiಜeಟಿಛಿe ನಿಮ್ಮನ್ನು ಸೋಲಿಸಿದ್ದು. ಸರಿಯಾದ ಯೋಜನೆ ಮಾಡದೇ ಇದ್ದುದು, ಮೂಲ ಕಾರ್ಯಕರ್ತರನ್ನು ದೂರವಿಟ್ಟಿದ್ದು, ಆ ಕ್ಷೇತ್ರಗಳಲ್ಲಿ ಮತದಾರರನ ಮನಸ್ಥಿತಿಯನ್ನು ಅರಿಯದೇ ಅಂದಾಜು ತಪ್ಪಿದ್ದು. ಇದೆಲ್ಲ ನಿಮ್ಮ ರಾಜಕೀಯ ಅನುಭವಕ್ಕೆ ಕಳಂಕ.
    ಮುಖ್ಯವಾದ ಅಂಶ, ಪಕ್ಷ ಕಟ್ಟುವಲ್ಲಿ ಒದ್ದಾಡಿದ್ದ, ಹೋರಾಡಿದ್ದ, ತಮ್ಮನ್ನೆ ಅರ್ಪಿಸಿಕೊಂಡವರನ್ನು ದೂರವಿಟ್ಟು, ಅವರನ್ನು ಕಡೆಗಣಿಸಿ, ಬೇರೆ ಪಕ್ಷದವರಿಗೆ ಮಣೆ ಹಾಕುತ್ತಿರುವ ನಿಮಗೆ ಮತ್ತು ನಿಮ್ಮ ಗುಂಪಿಗೆ, ಮತ್ತೊಮ್ಮೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದೆನಿಸುತ್ತಿದೆ. ಕೇವಲ ಹಣಬಲ ಮತ್ತು ತೋಳ್ಬಲದಿಂದ ಗೆಲ್ಲುತ್ತೇನೆ ಎನ್ನುವ ಸಮಯ ಹಿಂದೆ ಸರಿಯುತ್ತಿದೆ. ಅಭಿವೃದ್ಧಿ ಪಥದತ್ತ ಯುವ ಸಮೂಹ ಹೆಜ್ಜೆ ಇಡುತ್ತಿದೆ. ಅಂತಹವರ ಬಲ ನಿಮಗೆ ಬೇಕಾಗಿದೆ. ಮೊನ್ನೆ ಮೊನ್ನೆ ನನ್ನ ಕಾಲೇಜಿನ ದಿನಗಳ ವಿದಾರ್ಥಿ ಸಂಘಟನೆಯ ನೆನಪು ಹಾಕುವ(ಎಬಿವಿಪಿ) ಸಖಿ-ಸಹಮಿಲನದಲ್ಲಿ ಬಂದಂತಹ ಒಬ್ಬ ಹಿರಿಯ ಕಾರ್ಯಕರ್ತೆ ತಾವು ಶಿವಮೊಗ್ಗದಲ್ಲಿ ಇದ್ದ ದಿನಗಳನ್ನು ಮೆಲುಕು ಹಾಕುವಾಗ ಹೇಳುತ್ತಿದ್ದರು, ಈಗ ಶಿವಮೊಗ್ಗ ಎಂದರೆ ಯಡಿಯೂರಪ್ಪ- ಈಶ್ವರಪ್ಪ ಎನ್ನುವ ತರಹ, ಈ ಕಡೆಗೆ ಯಡಿಯೂರಪ್ಪ ಒಂದು ಆಸ್ತಿ ಮಾಡಿದರೆ, ಆ ಕಡೆಗೆ ಈಶ್ವರಪ್ಪ ಒಂದು ಆಸ್ತಿ ಮಾಡಿದರು, ಅದರಂತೆ ಲೆಕ್ಕ ಹಾಕಿದರೆ ಶಿವಮೊಗ್ಗ ಅರ್ಧ ಅವರಿಬ್ಬರದೇ, ಅವರ ಸಂಬಂಧಿಕರದೇ ಎಂದು. ಸುಮ್ಮನೆ ಲೆಕ್ಕ ಹಾಕಿ ಇಪ್ಪತ್ತು ವರುಷದ ಹಿಂದೆ ಇದ್ದ ನಿಮ್ಮ ಆಸ್ತಿಗೂ ಈಗ ನಿಮ್ಮ ಬಳಿ ಇರುವ ಆಸ್ತಿಯನ್ನು ಲೆಕ್ಕ ಹಾಕಿ. ಇಂತಹ ಭ್ರಷ್ಟಾಚಾರ ಇರುವವರು ನಮಗೆ ಬೇಕೇ ಎನ್ನುವ ಅನುಮಾನ ಮೂಡುತ್ತದೆ. ನಾನು ಶಿಕಾರಿಪುರ ತಾಲೂಕಿನಲ್ಲಿ ಹುಟ್ಟಿ ಬೆಳೆದವಳು, ಅಲ್ಲಿ ನೀವು ಹಳ್ಳಿಗಳಲ್ಲಿ ಮನೆಗೆ ಮನೆಗೆ ಮತ ಹಾಕಲು ಕೊಟ್ಟ ಹಣದಿಂದ ತೆಗೆದುಕೊಂಡ ಪಾತ್ರೆ ಸಾಮಾನುಗಳು ಇತರೇ ವಸ್ತುಗಳನ್ನು ತೋರಿಸುತ್ತಾರೆ. ನಿಮ್ಮ ಸಾಮರ್ಥ್ಯ ಏನೆಂಬುದು ಇಲ್ಲಿ ಅರ್ಥವಾಗುತ್ತದೆ.
    ಶಿಕಾರಿಪುರ ತಾಲೂಕಿನ ಅಂಜನಾಪುರ ಕೆರೆಯ ನೀರನ್ನು ನೀವು ಮಾಡಿಕೊಂಡ(….?) ತೋಟಕ್ಕೆ ಬೇರೆ ನೀರಿನ ಯೋಜನೆಯ ಹೆಸರಿನಲ್ಲಿ ತೆಗೆದುಕೊಳ್ಳುವುದರ ಬಗ್ಗೆ ಅಲ್ಲಿನ ಯುವಕರು ಮಾತನಾಡುತ್ತಾರೆ, ಅದೇ ನಿಮ್ಮ ಮುಂದೆ ಬಂದಾಗ ಮತದಾರ ಮತ್ತೆ ಆ ಎಂಜಲಿನ ಹಣದಾಸೆಗೆ ತಲೆಯಾಡಿಸುತ್ತಾರೆ, ಅಥವಾ ನಿಮ್ಮ ಧ್ವೇಷದ ನಡೆಯ ಬಗ್ಗೆ ಹೆದರಿ ಹಿಂದೆ ಸರಿಯುತ್ತಾರೆ.
    ನನ್ನ ನಂತರ ನನ್ನ ಕ್ಷೇತ್ರದ ಒಬ್ಬ ಕಾರ್ಯಕರ್ತ ಚುನಾವಣೆಗೆ ನಿಂತು ಗೆಲ್ಲುವಷ್ಟು ನಾನು ಸಂಘಟನೆ ಮಾಡಿದ್ದೇನೆಂದು ಎದೆ ತಟ್ಟಿ ಹೇಳಿ ನೋಡೋಣ. ನೀವು ಬಿಟ್ಟರೆ ನಿಮ್ಮ ಮನೆಯವರೇ ಚುನಾವಣೆಗೆ ನಿಲ್ಲಬೇಕೆನ್ನುವುದಾದರೆ. ಕಾರ್ಯಕರ್ತರು ಯಾಕೆ ಬೇಕು. ಅದೇ ಮನೋಭಾವ ಈಗಿರುವ ಪ್ರತಿಯೊಬ್ಬ ನಾಯಕನಲ್ಲೂ ಇದೆ. ತಾವು ಇಲ್ಲವೇ ತನ್ನ ಮಗ, ಮಗಳು, ಸೊಸೆ, ಅಳಿಯ, ಯಾರು ಸಿಗದಿದ್ದರೆ ಮನೆ ಕೆಲಸದವರನ್ನಾದರೂ ಸರಿ ತಮ್ಮವರನ್ನೇ ನಿಲ್ಲಿಸಬೇಕು. ಅದಕ್ಕೆ ಉದಾಹರಣೆ, ತಾವು ಹಿಂದೆ ಜೈಲಿಗೆ ಹೋಗುವಾಗ, ಇಬ್ಬರು ಮುಖ್ಯಮಂತ್ರಿಗಳನ್ನು ಬದಲಿಸಿ ಬದಲಿಸಿ ಮಾಡಿದ್ದು. ಜನ ಇದನ್ನೆಲ್ಲ ಗಮನಿಸುತ್ತಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯನು ಇದರ ಬಗ್ಗೆ ಮಾತನಾಡುತ್ತಾನೆ.
    ಹಿಂದೆ ನೀವು ಮುಖ್ಯಮಂತ್ರಿಯಾದಾಗ ಮಾಡಿದ ಜಾತಿ ಲೆಕ್ಕಾಚಾರ, ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದಲ್ಲಿ ದುಪ್ಪಾಟ್ಟಾಯಿತು. ಅಸಲಿಗೆ ನೀವು ಅತ್ಯಂತ ಭ್ರಷ್ಟಾಚಾರಿಗಳಾಗಲು ನಿಮ್ಮ ಜೊತೆಯಲ್ಲಿದ್ದ ಜಾತಿಯವರೇ ಕಾರಣ ಎನ್ನುವ ಸತ್ಯ ಅರ್ಥ ಮಾಡಿಕೊಂಡರೆ ಸಾಕು, ನಿಮ್ಮ ಅವಧಿಯಲ್ಲಿ ಪತ್ರಕರ್ತರನ್ನು ಸಹ ಭ್ರಷ್ಟಾಚಾರಿಗಳನ್ನಾಗಿ ಮಾಡಿದ್ದನ್ನು ಮರೆಯುವುದೇ ಇಲ್ಲ.
    ಇನ್ನು ಯಾರಾದರೂ ನಿಮ್ಮಲ್ಲಿರುವ ಅವಗುಣಗಳನ್ನು ಹೇಳಿದರೆ, ನೀವು ಅವರನ್ನು ದ್ವೇಷಿಸುವ ರೀತಿ, ನಿಮ್ಮ ನಾಯಕತ್ವಕ್ಕೊಂದು ಪೆಟ್ಟು. ನಿಮ್ಮ ವೈಯಕ್ತಿಕವನ್ನು ರಾಜಕೀಯದಲ್ಲಿ ಸೇರಿಸದೇ, ತುಂಬಾ ಬೇಕಾದವರನ್ನು ಹೆಚ್ಚುಗಾರಿಕೆಯಲ್ಲಿ ಇಟ್ಟುಕೊಳ್ಳದೇ, ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಮಾಡಿ. ಯಾರಿಗೆ ಗೊತ್ತು ಇನ್ನು ಒಂದು ವರುಷದಲ್ಲಿ ರಾಜ್ಯ ರಾಜಕಾರಣದಲ್ಲಿ ಇನ್ನು ಏನೇನೂ ಬದಲಾವಣೆಗಳಾಗುತ್ತೋ. ಯಾರ ನಾಯಕತ್ವ ಎನ್ನುವುದಕ್ಕಿಂತ ಸಮೂಹ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತೋ ಗೊತ್ತಿಲ್ಲ. ಇಂತಹದ್ದೊಂದು ಸಣ್ಣ ಯೋಚನೆ ಅಮಿತ್ ಷಾ ಮತ್ತು ಮೋದಿಯ ತಲೆಗೆ ಬಂದರೆ ಬಹುಷಃ, ನಿನ್ನೆ ನಡೆದ ಈಶ್ವರಪ್ಪನವರ ಸಮಾವೇಶದ ಅರ್ಭಟವನ್ನು ನಿಲ್ಲಿಸಬಹುದು ಹಾಗೆ ನಿಮ್ಮ ಅಹಃ ನ್ನು ಕೂಡಾ. ನಿಮ್ಮ ಈ ಕ್ಷುಲ್ಲಕ ರಾಜಕಾರಣ ನೋಡಿ ಮೂಲ ಕಾರ್ಯಕರ್ತರು, ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರು ಇಂತಹವರನ್ನು ನಾವು ನಾಯಕರನ್ನಾಗಿ ಮಾಡಿದೆವ, ಎಂದು ನೊಂದುಕೊಳ್ಳದಿರಲಾರರು.
    ಹಾಗೆ ನೀವು ಮತ್ತು ನಿಮ್ಮ ಈಗಿನ ಗುಂಪು ಸಿದ್ಧಾರಾಮಯ್ಯನ ಮೇಲಿನ ಸಿಟ್ಟಿಗೋ ಅಥವಾ ಮುಂದಿನ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದೋ, ಕಾಂಗ್ರೆಸ್ – ಜೆಡಿಎಸ್ ಪಕ್ಷದ ಅತೃಪ್ತ ನಾಯಕರನ್ನು ಬಿಜೆಪಿಗೆ ಕರೆತರುತ್ತಿರುವ ರೀತಿಯಂತೂ ಅಸಹ್ಯ ಹುಟ್ಟಿಸುವಂತದ್ದು, ಒಬ್ಬ ಸಸ್ಯಹಾರಿ ಏನೂ ತಿನ್ನಲೂ ಸಿಗದಿದ್ದಾಗ ನೀರು ಕುಡಿದು ಸುಮ್ಮನಾಗುತ್ತಾನೆಯೇ ಹೊರತು …………. ತಿನ್ನುವುದಿಲ್ಲ. ಅಂತಹ ಕೆಲಸಕ್ಕೆ ಈಗಿನ ಬಿಜೆಪಿ ನಾಯಕರು ಕೈ ಹಾಕಿದ್ದಾರೆ. ಮುಂದಿನ ಚುನಾವಣೆ ಸಂದರ್ಭದಲ್ಲಿ ವಲಸೆ ಬಂದವರಿಗೆ ಅಥವಾ ಅವರ ಮನೆಯವರಿಗೆ ಸಂಬಂಧಿಕರಿಗೆ ಟಿಕೆಟ್ ಕೊಡಲೇಬೇಕಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಪಕ್ಷಕ್ಕಾಗಿ ದುಡಿದು ನಾಯಕ ಸ್ಥಾನ ಬಯಸಿದವರನ್ನು ಮೂಲೆಗುಂಪು ಮಾಡಬೇಕಾಗುತ್ತದೆ. ಇದರಿಂದ ಬಿಜೆಪಿಯಲ್ಲಿಯೇ ಅತೃಪ್ತರನ್ನು ಕಾಣುವ ಸಂದರ್ಭ ಎದುರಾಗುತ್ತದೆ.
    ನನಗೆ ಎಷ್ಟೋ ಸಲ ಅನ್ನಿಸಿದೆ, ಜಾತಿ ಮತ ಧರ್ಮ ಪಕ್ಷ ನೋಡದೇ, ಎಲ್ಲರಾಜಕಾರಣಿಗಳನ್ನು ಆಸ್ತಿ ಅಂತಸ್ತಿನ ವಿಚಾರದಲ್ಲಿ ಜನತಾ ನ್ಯಾಯಾಲಯದ ಮುಂದೆ ನಿಲ್ಲಿಸಿದರೆ ಅವರುಗಳಿಗೆ ಬೆತ್ತಲಾದಷ್ಟು ಅವಮಾನ ಖಚಿತ, ನ್ಯಾಯಾಲಯದ ವ್ಯವಸ್ಥೆಯನ್ನು ಭ್ರಷ್ಟ ಮಾಡಿದಂತಹವರನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲ ಎನ್ನುವಷ್ಟು ಮೇರೆ ಮೀರಿದವರನ್ನು ಸಹ ಹತ್ತಿಕ್ಕಲು, ಎಲ್ಲೊ ಒಂದು ಕಡೆ ಅಶಾಕಿರಣ ಮಿಂಚುತ್ತಿದೆ. ಯಾರೋ ಬರಬಹುದೆಂದು. ಕರ್ನಾಟಕಕ್ಕೆ ಒಬ್ಬ ಯೋಗಿ ಅದಿತ್ಯ ಬರಲೆಂದು.
    ನಾನು ಅನೇಕರನ್ನು ಭ್ರಷ್ಟತೆಯ ಬಗ್ಗೆ ಮಾತನಾಡಿಸಿದಾಗ ಹೇಳಿದ್ದು, ಭ್ರಷ್ಟತೆಯಿಲ್ಲದ ಸ್ಥಳವಿಲ್ಲ, ಅದರೆ ಅತೀ ಕಡಿಮೆ ಭ್ರಷ್ಟತೆ ಇರುವ ಭ್ರಷ್ಟರನ್ನು ಅಯ್ಕೆ ಮಾಡೋಣ ಎಂದು. ಅದು ನೀವು ಮತ್ತು ನಿಮ್ಮ ಗುಂಪು ಆಗಿರಲಿ ಎಂದು ಆಶಿಸುತ್ತೇನೆ.
    —————
    ಶೋಭಾ ಹೆಚ್.ಜಿ ಸಂಪಾದಕರು,
    ’ಸ್ತ್ರೀ ಜಾಗೃತಿ’ ಮಾಸಪತ್ರಿಕೆ, ಸಂ.೩೩, ಸುಮುಖ ರೆಸಿಡೆನ್ಸಿ,
    ೩ನೇ ಅಡ್ಡರಸ್ತೆ, ೧ನೇ ಮುಖ್ಯರಸ್ತೆ, ಗವೀಪುರಂ ಬಡಾವಣೆ,
    ಬೆಂಗಳೂರು-೫೬೦ ೦೧೯ ದೂ: ೦೮೦-೨೬೬೦೦೦೨೨/
    ಜಂಗಮವಾಣಿ : ೯೪೪೮೯೪೫೩೬೭
    Email:sthree.jagruthi@gmail.com

    ಉತ್ತರ
    • Naveen kumar
      ಮೇ 21 2017

      ನೀವು ಹೇಳಿದ್ದು ನಿಜ
      ಯಡಿಯೂರಪ್ಪನವರು ಸಂಘ ಮೂಲದಿಂದ ಬಂದವರು ಜಾತಿಯನ್ನು ಮೀರಿದ ವ್ಯಕ್ತಿಯೆನ್ನುವ ಕಾರಣಕ್ಕೆ ಅವರನ್ನು ಜನ ಬೆಂಬಲಿಸಿದ್ದರು. ಆದರೆ ಈ ಬಾರಿ ಅವರ ಸ್ವಜಾತಿ ಪ್ರೇಮ, ಅಹಂಕಾರ ಎಲ್ಲಿ ಪಕ್ಷದ ಹಿನ್ನಡೆಗೆ ಕಾರಣವಾಗುತ್ತೋ….

      ಉತ್ತರ
  29. Naveen kumar
    ಮೇ 21 2017

    ಸರಕಾರವೇನಾದರೂ ಬಂದು ಸ್ವರಾಜ್ಯ ತೆಗೆದುಕೊಳ್ಳಿ ಎಂದು ಹೇಳಿದರೆ ಧನ್ಯವಾದ ನಿಮಗೆ ಎನ್ನುವೆ. ಆದರೆ, ಸ್ವೀಕರಿಸುವುದಿಲ್ಲ. ಸ್ವರಾಜ್ಯ ಪಡೆಯುವುದು ನಮ್ಮ ಸಾಮರ್ಥ್ಯದಿಂದಲೇ ಹೊರತು ಬೇಡುವುದರಿಂದಲ್ಲ.
    -ಬಿಪಿನ್ ಚಂದ್ರಪಾಲ್

    ಇಂಥಹ ರಾಷ್ಟ್ರವಾದಿ ನಾಯಕ ಹೆಸರನ್ನು ಇಷ್ಟು ವರ್ಷ ನಮ್ಮನಾಳಿದ ಸರಕಾರ ಎಂದೂ ಪ್ರಚಾರ ಮಾಡಲಿಲ್ಲ, ಕೇವಲ ಹೋರಾಟದಲ್ಲಿ ನಾಮಕಾವಸ್ತೆಯಲ್ಲಿ ಭಾಗವಹಿಸಿ, ಶ್ರೀಮಂತಿಕೆಯನ್ನು ಅನುಭವಿಸಿಕೊಂಡು ಲಲನೆಯರೊಂದಿಗೆ ತಿರುಗುತ್ತಾ, ಮೋಹದಲ್ಲಿ ಒಳಗಾಗಿ ಭಾರತದ ವಿಭಜನೆಗೆ ಕಾರಣರಾದವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಿ ದೇಶದ ಅಧಿಕಾರ ಪಡೆದು ಹಲವು ಸಮಸ್ಯೆಗಳನ್ನು ಜೀವಂತವಾಗಿರಿಸಿ ದೇಶದ ಶಾಂತಿ ಇಲ್ಲವಾಗಿಸಿದ ನಾಯಕರನ್ನು ಪೂಜಿಸುವ ನಾವುಗಳು ಒಮ್ಮೆ ಸ್ವಾತಂತ್ರ ಹೋರಾಟದ ನೈಜ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಅದು ನಮ್ಮ ಜವಾಬ್ದಾರಿ ಕೂಡ. ಇಲ್ಲದಿದ್ದರೆ ನಾವು ನಿಜವಾದ ಹೋರಾಟಗಾರರಿಗೆ ದ್ರೋಹ ಬಗೆದಂತೆ. ಇದಕ್ಕೆ ನೀವೆನಂತಿರಿ…?
    ಜೈಹಿಂದ್

    ಉತ್ತರ
  30. ಜುಲೈ 6 2017

    I would like to contribute.

    ಉತ್ತರ
  31. ಮನಂಜೈ
    ಜನ 8 2018

    ನೀರಿನ ಭಾಗ್ಯ……

    ಇದು ಯಾರನ್ನೂ ಟೀಕೆ ಮಾಡಲು ಬರೆದ ಲೇಖನವಲ್ಲ, ಕೇವಲ ನನ್ನ ಪ್ರಶ್ನೆಗೆ ಉತ್ತರ ಹುಡುಕುವ ಹಂಬಲ.

    ನಾನು ಉದ್ಯಾನ ನಗರಿಯ ನಾघरವಾಸಿ, ಇತ್ತೀಚಿಗೆ ಒಂದು ದಿನ ಬೆಳಿಗ್ಗೆ ನಮ್ಮ ಮನೆಯ ಮುಂದೆ, JCB ರೌದ್ರ ನರ್ತನ ನಡೆಸುತ್ತಿತ್ತು… ರಸ್ತೆಯೆಂದು ಶತಮಾನಗಳಿಂದ ನಂಬಿ ಮಲಗಿದ್ದ ಸಮತಟ್ಟಾದ ವಾಹನ ಓಡಾಡ ಬಹುದಾದಂತಹ ಮಣ್ಣು ಕಲ್ಲುಗಳ ಮುದ್ದೆಯ ನಡು ಹೊಟ್ಟೆಯನ್ನು ರೋಷದಿಂದ ಸೀಳುತ್ತಿತ್ತು…
    ಇದು ಯಾವ ಭಾಗ್ಯವೆಂದು ಕಣ್ಣು ಉಜ್ಜುತ್ತಾ ನೋಡಿದಾಗ, ನೂರ ಹತ್ತು ಹಳ್ಳಿಗಳಿಗೆ ಕುಡಿಯುವ ನೀರೀನ ಯೋಜನೆ….

    ಅಂತು ನಮ್ಮ ಭಾಗ್ಯದ ಬಾಗಿಲು ತೆರೆಯಿತು ಎಂದು ಓಣಿಯವರೆಲ್ಲಾ ಭೀಗಿದೆವು…. ಆದರೆ ದುರ್ಭಾಗ್ಯ ಹಿತ್ತಲಿನ ಬಾಗಿಲಿಂದ ಸದ್ದು ಗದ್ದಲಿಲ್ಲದೆ ಹೊಳ ಹೊಕ್ಕಿತ್ತು…. ಏರಿಯಾದ ತುಂಬ ಎಲ್ಲೆಂದರಲ್ಲಿ ರಸ್ತೆ ಅಗೆದು …. ಶತಮಾನದ ಇತಿಹಾಸವಿದ್ದ ರಸ್ತೆಗಳ ನಾಮಾವ ಶೇಷ ಅಳಸಿ ಹೊಗಿತ್ತು… ನನ್ನ ಮೊದಲ ಪ್ರಶ್ನೆ ನಾನು ಕನ್ನಡಿಗರು ಪ್ರತಿ ವರ್ಷ ಕಾವೇರಿಗಾಗಿ ರಕ್ತ ಹರಿಸಿರುವುದು ಇನ್ನೂ ಹೆಪ್ಪುಗಟ್ಟಿಲ್ಲ….. ಬೆಂಗಳೂರಿಗೆ ತಾಯಿ ಕಾವೇರಿಯೇ ಕುಡಿಯುವ ನೀರಿಗೆ ಮೂಲ.. ಇರುವ ನೀರೆ ಸಾಕಾಗದಿರುವಾಗ ಇನ್ನು ಈ ನೂರಾ ಹತ್ತು ಹಳ್ಳಿಗಳಿಗೆ ಎಲ್ಲಿಂದ ನೀರು ಸರಬರಾಜು ಮಾಡುತ್ತೀರಿ?…. ಇದು ನನಗೆ ಚುನಾವಣೆಗೂ ಮುನ್ನ ಮತದಾರರ ಮೂಗಿಗೆ ಬೆಣ್ಣೆ ಸವರುವ ಕೆಲಸವಾಗಿ ಕಾಣುತ್ತಿದೆ.
    ಎರಡನೇ ಪ್ರಶ್ನೆ ಇನ್ನು ನೀರಿನ ಪೈಪನ್ನು ನಡು ರಸ್ತೆಯಲ್ಲಿ ಅಳವಡಿಸಿದ್ದು… ರಸ್ತೆಯ ಬದಿಯಲ್ಲಿ ಅಗೆದಿದ್ದರೆ ರಸ್ತೆ ಹಾಳಾಗುವುದನ್ನು ತಪ್ಪಿಸಬಹುದಿತ್ತು…. ಆದರೆ ಈಗ ನಡೆದ ಕಾಮಗಾರಿ ಹಗರಣದ ದುರ್ಗಂಧವನ್ನು ಸೂಸುತ್ತಿದೆ…. ಸರಿಯಾದ ರಸ್ತೆಗಳನ್ನು ಹಾಳು ಮಾಡಿ… ಮತ್ತೆ ರಸ್ತೆ ರಿಪೇರಿಗೆ ಟೆಂಡರ ಕರೆಯುವುದು… ಹೀಗೆ ಸಾರ್ವಜನಿಕರ ಹಣವನ್ನು ನಮ್ಮ ಮೂಗಿನ ಕೆಳಗೇ ಪೋಲು ಮಾಡುತ್ತಿರುವುದು ದುರಾದೃಷ್ಟಕರ…

    ಉತ್ತರ
  32. ಫೆಬ್ರ 18 2021

    ಎಲ್ಲರೂ ಕನಸು ಕಾಣುತ್ತಾರೆ.ಆದ್ರೆ ಎಷ್ಟು ಜನ ನಾವು ಅದನ್ನು ನನಸು ಮಾಡಲು ಏನೆಲ್ಲಾ ಪ್ರಯತ್ನ ಮಾಡುತ್ತೇವೆ ಎನ್ನುವುದು ಬದುಕಿನಲ್ಲಿ ತುಂಬಾ ಮುಖ್ಯವಾಗುತ್ತದೆ. ಹುಟ್ಟಿದ ಮಗು ತಕ್ಷಣ ನಡೆಯುವುದಿಲ್ಲ,ಹಲವಾರು ಬಿದ್ದು ಎದ್ದು ನಡೆಯುವುದನ್ನು ಕಲಿಯುವಂತೆ ವಿಫಲತೆ ಗಳ ನಡುವೆಯೇ ಸಫಲಾರಾಗುವ ಚಾಕಚಕ್ಯತೆ ಕಲಿಯಬೇಕು.

    ಉತ್ತರ
  33. Jyoti.R.Patil
    ಫೆಬ್ರ 18 2021

    ಬದುಕು ಎಂಬ ಪದಕ್ಕೆ ಅರ್ಥ ಹುಡುಕುತ್ತಾ ಹೋದರೆ, ಅದರ ಆಳ ತಿಳೀತಾ ನಮ್ಮ ವಯಸ್ಸು ಕ್ಷೀಣಿಸುತ್ತದೆ. ಆದರೆ ಅದರ ವ್ಯಾಖ್ಯಾನ ಮುಗಿಯುವುದೇ ಇಲ್ಲ.ತಲೆಮಾರುಗಳಿಂದ ತಲೆಮಾರುಗಳಿಗೆ ಭಿನ್ನವಾದ ಅಭಿವ್ಯಕ್ತಿ ಮೂಡಿಬರುತ್ತದೆ,ಸಹಜತೆ ಮೈಗೂಡಿಸಿ ಕೊಂಡರೆ ಮಾತ್ರ ಅದರ ಸಹಜರೂಪ ನಾವು ನೋಡಬಹುದು.ಸುಗಂಧ ದ್ರವ್ಯದ ಲ್ಲೀ ಅದ್ದಿದ ಕರವಸ್ತ್ರದಂತೆ ಬದುಕಿನ ಪಾಠಗಳು,ನೆನಪುಗಳು ಪರಿಣಾಮ ಬೀರು ತ್ತವೆ.

    ಉತ್ತರ
  34. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
    ಫೆಬ್ರ 19 2021

    ಕನ್ನಡವನ್ನು ಬಳಸಿ
    ಕನ್ನಡವನ್ನು ಬೆಳೆಸಿ
    ಕನ್ನಡವನ್ನು ಉಳಿಸಿ

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.

    ಉತ್ತರ
  35. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ಉತ್ತರ
    • ಜ್ಯೋತಿ. ಆರ್. ಪಾಟೀಲ್
      ಜುಲೈ 28 2021

      ಸುಂದರವಾದ ಕಥೆಯೊಂದಿದೆ ಸರ್ 🙏🙏:

      ಉತ್ತರ
  36. ಜ್ಯೋತಿ. ಆರ್. ಪಾಟೀಲ್
    ಜುಲೈ 28 2021

    ಸುಂದರವಾದ ಕಥೆಯೊಂದಿದೆ ಸರ್ 🙏🙏:

    ಉತ್ತರ
  37. ಅರ್ಜುನ ವಾಲೀಕಾರ
    ಆಕ್ಟೋ 6 2022

    ಭೂಮಿಯ ಮೇಲೆ ಮಾನವ ಇನ್ನೂ ಎಷ್ಟು ವರ್ಷ ಬದುಕಬಲ್ಲ ಎನ್ನುವದನ್ನು ನಾನು ನಿಖರವಾಗಿ ಹೇಳಬಲ್ಲೆ . ಅದಕ್ಕೆ ಸಂಬಂಧಪಟ್ಟ ಹಾಗೆ ಪುಸ್ತಕ ಬರೆಯುತ್ತಿದಗದೇನೆ ಇದು ಸತ್ಯ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments