ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 19, 2010

ಶೌಚ ಪುರಾಣ

‍ನಿಲುಮೆ ಮೂಲಕ

ವಿನಯ


ಮೊದಲೇ ಹೇಳಿಬಿಡುತ್ತೇನೆ ಲೇಖನ ಓದಿ ಆದ ಮೇಲೆ ನೀವು ನನ್ನನ್ನ ಇವನೆಂತ ಗಲೀಜು , ಹೊಲಸು , ಭಂಡ , ನಾಚಿಕೆ ಇಲ್ಲದವ ಅಂತ ಏನಾದ್ರೂ ಬೈಕೊಳ್ಳಿ ಪರವಾಗಿಲ್ಲ ಯಾಕಂದ್ರೆ ಹೆತಿದ್ದನ್ನು ಇಲ್ಲ ಅನ್ನೋದು ಕಷ್ಟ.ಹಾಗೆ ಏನಾದರು ತಿನ್ನುತ್ತಾ ಇದ್ದರೆ ದಯಮಾಡಿ ಅದನ್ನ ಬದಿಗಿಟ್ಟು ಇದನ್ನ ಓದಿ.ಆಮೇಲೆ ನಾನು ಮುನ್ನೆಚ್ಚರಿಕೆಗಳನ್ನ ಹೇಳಿಲ್ಲ ಅಂತ ನೀವು ನನ್ನನ್ನ ದೂರುವ ಹಾಗೆ ಇಲ್ಲ.

ನೋಡಿ ಜಗತ್ತಿನಲ್ಲಿ ಸಾವು ಕೂಡ ಹೇಳಿಕೇಳಿ ಬರಬಹುದು ಆದರೆ ನಾನು ಹೇಳ ಹೊರಟಿರುವ ಆ ಹೇಲು ಮಾತ್ರ ಹಾಗಲ್ಲ , ಯಾವಾಗ ಬರುತ್ತೆ ಅಂತ ಹೇಳೋದು ಕಷ್ಟ.ಹೇಗೆ ದೇವರೊಬ್ಬ ನಾಮ ಹಲವು ಅಂತ ಹೇಳ್ತಾರೋ ಹೇಲಿನ ವಿಷಯದಲ್ಲೂ ಅದೇ ಮಾತು ಅನ್ವಯವಾಗುತ್ತೆ. ನಾಚಿಕೆ ಇಲ್ಲದ ನನ್ನೊಂತೋರು ಹೇಲು ಅಂತ ಕರೆದರೆ , ಕೆಲವರು ಕಕ್ಕಸ್ಸು ಅಂತಾಲು,ಉತ್ತರ ಕನ್ನಡ ಕಡೆಯವರು ಸಂಡಾಸ್ ಅಂತಲೂ , ಸ್ವಲ್ಪ ನಾಚಿಕೆ ಸ್ವಭಾವದವರು ನಂಬರ್ ೨ ಅಂತಾಲು ಮತ್ತು ಆಧುನಿಕ ಜಗತ್ತಿನ ಜನ ಅನ್ನಿಸಿಕೊಂಡೋರು ರೆಸ್ಟ್ ರೂಂ ಗೆ ಹೋಗೋದು ಅಂತಾಲು ಕರೆಯುತ್ತಾರೆ ( ಇಲ್ಲಿ ಯಾರಿಗೆ ರೆಸ್ಟ್ ಅಂತ ಮಾತ್ರ ಕೇಳಬೇಡಿ).ಇನ್ನು ನಮ್ಮ ಸರ್ಕಾರದವರು ಇದನ್ನ ಮಲ ಅಂತಾಲು ಕರೆಯುತ್ತಾರೆ.

ಈ ಹೇಲಿನ ಜೊತೆಗೆ ಹೊಂದಿಕೊಂಡಿರೋದು ಹುನ್ಸ್ , ಇವೆರಡದ್ದು ಸಕತ್ ಕಾಮ್ಬಿನಶನ್.ಅದರ ವಿಚಾರಕ್ಕೆ ಆಮೇಲೆ ಬರೋಣ ಮೊದಲು ಈ ಹೇಲಿನ ಪುರಾಣ ಮುಗಿಸೋಣ. ನಾ ಚಿಕ್ಕವನಾಗಿದ್ದಾಗ ನಮ್ಮ ಮನೆಯಲ್ಲಿ ಶೌಚಾಲಯ ಇರಲಿಲ್ಲ , ಈಗಲೂ ಊರಿನ ಕೆಲವರ ಮನೆಯಲ್ಲಿ ಶೌಚಾಲಯ ಇಲ್ಲ.ಅವಾಗ ಹೇಲು ಬಂದ್ರೆ ಸಾಕು ಹಳ್ಳದ ಕಡೆಗೋ ಅಥವಾ ದರ್ಕಸ್ಕೋ ಅಥವಾ ಗುಡ್ಡದ ಕಡೆಗೋ ನಮ್ಮ ಓಟ ಶುರುವಾಗುತ್ತಿತ್ತು. ನನ್ನ ಅಚ್ಚು ಮೆಚ್ಚಿನ ಜಾಗ ಗುಡ್ಡದ ಪಕ್ಕದಲ್ಲಿರುವ ಒಂದು ಸಣ್ಣ ಕಾಲುವೆಯಾಗಿತ್ತು.ಸಂಡಾಸ್ ಮಾಡಲಿಕ್ಕೆ ಪ್ರಸಕ್ತವಾದ ಸ್ಥಳ ಅಂತಾನೆ ಹೇಳಬಹುದು. ಪಕ್ಕದ ಕಾಲುವೆಯಲ್ಲಿ ಸಂಡಾಸ್ ಮಾಡಿ ಕಾಲುವೆಯಲ್ಲಿ ಸ್ವಚ್ಛ ಮಾಡಿಕೊಳ್ಳೋದು ಸಕತ್ ಮಜಾ ಕೊಡೊ ವಿಚಾರ.ಕೆಲವೊಮ್ಮೆ ಸೋಂಬೇರಿತನ ಬಂದು ಕುನ್ದೆಯನ್ನೆ ಕಾಲುವೆಗೆ ಆದ್ದಿದ್ದು ಉಂಟು.ಮಳೆಗಾಲ ಶುರುವಾಯಿತೆಂದರೆ ಇನ್ನು ಒಂದು ಮಜಾ ಕಾಲುವೆಯ ನಡುವೆ ಸೇತುವೆಯಂತೆ ಹರಡಿರುವ ಬಳ್ಳಿಗಳ ಮೇಲೆ ಕೂತು ನೇರವಾಗಿ ಕಾಲುವೆಗೆ ಪ್ರಸಾದ ಹಾಕ್ತ ಇದ್ದೆವು.ಅಷ್ಟೇ ಅಲ್ಲ ನಾನು ಅಣ್ಣ ಒಟ್ಟಿಗೆ ಸಂಡಾಸ್ ಗೆ ಹೋಗ್ತಾ ಇದ್ದಿದ್ದರಿಂದ ಯಾರದು ಮುಂದೆ ಹೋಗುತ್ತೆ ಅನ್ನೋ ಬೆಟ್ ಬೇರೆ , ಏನೇ ಹೇಳಿ ಅದರ ಮಜವೇ ಬೇರೆ.

ನಮ್ಮ ಮನೆಯಲ್ಲಿ ಪಾಯಿಖಾನೆ (ಹೇಲ್ಗುಂಡಿ) ಕಟ್ಟಿಸಿದ್ದು ನನಗೆ ೯ ವರ್ಷವಿದ್ದಾಗ ಅನ್ಸುತ್ತೆ. ಅದರ ಓಪನ್ ದಿನ ನಾನು ಅಕ್ಕ ಗುದ್ದಾಡಿ ಕೊನೆಗೆ ಅವಳೇ ಹೋಗಿ ಮೊದಲು ಉಚ್ಚೆ ಹೊಯ್ದು ಬಂದಿದ್ದಳು. ಆದರೇನಂತೆ ಮೊದಲು ಹೇತವನು ನಾನೇ.ಪಾಯಿಖಾನೆಗೆ ಹೋಗುವುದೇ ನಮಗೊಂದು ಆಟ , ಅವ ಹೋದ ಅಂತ ಇವ , ಇವ ಹೋದ ಅಂತ ಅವಳು ಹೀಗೆ. ಮೊದಮೊದಲು ಅಲ್ಲಿ ಒಳ್ಳೆ ಮಜವೇ ಸಿಗುತ್ತಿತ್ತು , ಆದರೆ ಬರುಬರುತ್ತಾ ನಮ್ಮ ಕಾಲುವೆಯ ತರ ಇಲ್ಲಿ ತೆಲಿಹೊಗೋದು ಇಲ್ಲವಾದ್ದರಿಂದ ನಿಂತಿದ್ದನ್ನೇ ನೋಡಿ ನೋಡಿ ವಾಕರಿಕೆ ಬರುತಿತ್ತು.ಇಷ್ಟೆಲ್ಲಾ ಸಾಲದು ಅಂತ ಅಣ್ಣ ಅದಕ್ಕೆ ಒಂದು ಪೈಪ್ ಇಟ್ಟಿರ್ತಾರೆ ನೋಡಿ ಅದಕ್ಕೂ ಮೂಗು ಕೊಟ್ಟಿದ್ದ.ಪಾಪ ಏನು ಕಂಡನೋ ಗೊತ್ತಿಲ್ಲ ೧ ವಾರ ಅವನ ಪರಿಸ್ಥಿತಿ ಸಕತ್ ಆಗಿತ್ತು.

ಸರ್ಕಾರದವರು ನಿರ್ಮಲ ಶೌಚಾಲಯ ಅನ್ನೋ ಯೋಜನೆಯಲ್ಲಿ ಶೌಚಾಲಯ ಕಟ್ಟಿಸಲು ಬಡವರಿಗೆ ಹಣ ಕೊಡುತಿದ್ದರು,ಅಂದ್ರೆ ಒಂದೇ ಒಂದು ಸಮಸ್ಯೆ ಅಂದ್ರೆ ಅವರು ಹಣ ಮಂಜೂರಾತಿ ಮಾಡ್ತಾ ಇದ್ದಿದ್ದು ಕಂತುಗಳಲ್ಲಿ (ನೀವೇ ಹೇಳಿ ಕಂತುಗಳಲ್ಲಿ ಹೆಲೋಕೆ ಆಗುತ್ತಾ).ಗುಂಡಿ ತೋಡಿ ಎಷ್ಟೋ ದಿನ ಆದ ಮೇಲೆ ರೂಂ ಕಟ್ಟಿಸಲು ಹಣ ಬರುತ್ತಿತ್ತು.ಒಮ್ಮೆ ಹೀಗೆ ಆದಾಗ ನಮ್ಮೂರಿನ ನಾಗ ತಲೆ ಓಡಿಸಿ ಹೇಗಿದ್ರು ಒಳಗೆ ಕೂತ ಹೆತ್ರು ಗುಂಡಿಗೆ ಬಿಳೋದು ಅಂತ ಯೋಚಿಸಿ ಬೆಳಿಗ್ಗೆ ಬೇಗ ಮನೆಯವರೆಲ್ಲ ಎದ್ದು ಗುಂಡಿಯ ಸುತ್ತಲು ಕೂತು ಪಚಕ್ , ಪಿಚಕ್ ಅಂತ ಸದ್ದು ಮಾಡಿ ಕೆಲಸ ಮುಗಿಸಿಬಿಡುತಿದ್ದರು.

ಜನ ಸೆಕ್ಸ್ ಗಿಂತ ಹೆಚ್ಚಾಗಿ ಇದರ ಬಗ್ಗೆ ಮಾತಾಡಲು ಹೆದರಿಕೊಳ್ತಾರೆ ಅಥವಾ ಅಸಹ್ಯ ಪಟ್ಕೊಲ್ತಾರೆ ಅನ್ಸುತ್ತೆ.ನೋಡಿ ಈ ಮಲವನ್ನು ಆಯುಧವಾಗಿಯು ಬಳಸಬಹುದು ಅಂತ ನಿಮಗೆ ಗೊತ್ತ , ಗೊತ್ತಿಲ್ಲದಿದ್ದರೆ ನಿಮಗೆ ಒಂದು ನೈಜ ಘಟನೆ ಹೇಳ್ತೆ ಕೇಳಿ “ನಮ್ಮನೆಯಿಂದ ಒಂದು ಸ್ವಲ್ಪ ದೂರದಲ್ಲಿ ಪಕ್ಕದ ಊರಿನ ಗೌಡರ ಅಡಿಕೆ ತೋಟ ಇದೆ , ನಾವೇ ಅವರ ತೋಟದ ಹೊಂಬಾಳೆ,ಗರಿಕೆ ಎಲ್ಲ ಉಪಯೋಗಿಸೋದು.ಅವರ ತೋಟಕ್ಕೆ ನೀರಿನ ಮೂಲ ಮೇಲ್ಗಡೆ ಇರೋ ಒಂದು ಸರಕ್ಲು.ಒಮ್ಮೆ ಏನಾಯಿತು ಅಂದ್ರೆ ಪಕ್ಕದ ತೋಟದ ಕಾಂತಯ್ಯ ಇವರ ತೋಟಕ್ಕೆ ಬರೋ ನಿರನ್ನ ಮದ್ಯರಾತ್ರಿ ಬಂದು ತನ್ನ ತೋಟಕ್ಕೆ ತಿರುಗಿಸಿಕೊಂಡು ಹೋಗ್ತಿದ್ದ.ಅಪ್ಪನೂ ಒಂದೆರಡು ಬಾರಿ ಸುಮ್ಮನಿದ್ದು ಅವ ತಿರುಗಿಸಿ ಹೋದ ಮೇಲೆ ಇವರು ಹೋಗಿ ಸರಿ ಮಾಡಿ ಬರ್ತಿದ್ದರು.ಸುಮ್ಮನೆ ಯಾಕೆ ಜಗಳ ಅಂತ ಎದಿರಕೇಳಿರಲಿಲ್ಲ.ಹೀಗೆ ಒಮ್ಮೆ ಹೋದಾಗ ನೋಡ್ತಾರೆ ಪಾಪಿ ಸೂಳೆಮಗ ಅಲ್ಲೇ ಹೇತು ಹೊಗಿರಬೇಕೆ,ಸಿಟ್ಟು ಬಂತಾದರೂ ಸುಮ್ಮನಿದ್ದು ಹಾರೆ ತೆಗೆದುಕೊಂಡು ಹೋಗಿ ಸ್ವಲ್ಪ ಆ ಕಡೆಗೆ ಇನ್ನೊಂದು ದಾರಿ ಮಾಡಿ ನೀರು ಕಟ್ಟಿ ಬಂದಿದ್ದರು.ಅದರ ಮಾರನೆಯ ದಿನ ನಾ ಎದ್ದಾಗ ಅಪ್ಪ ಫುಲ್ ಖುಷ್ ಅಲ್ಲಿ ಇದ್ದರು ,ನನ್ನ ನೋಡಿದ್ದೇ ತಡ ಮಾಣಿ ನಿನ್ನೆ ರಾತ್ರಿ ನಾನು ೪ ಕಡೆ ಹೇತು ಬಂದಿದ್ದೇನೆ ಈಗ ಏನು ಮಾಡ್ತಾನೆ ನೋಡೋಣ ಅಂದರು.ನನಗೆ ನಗು ಜೋರಾಗಿ ಬರುತಿದ್ದರು ಅಪ್ಪನ ಹೊಸ ವಿಧ್ಯೆಯಿಂದ ಜ್ಞಾನ ಹೆಚ್ಚಯಿತಲ್ಲ ಅನ್ನೋ ಖುಷಿ ಬೇರೆ ಆಯಿತು. ಸ್ವಲ್ಪ ದಿನ ಇವರ ಹೇಲು ಜಗಳ ಹಾಗೆ ನಡೆದು ಕೊನೆಗೆ ಆಮೇಲೆ ಯಾರಿಗೆ ಹೇಲು ಕಡಿಮೆ ಆಯಿತೋ ಗೊತ್ತಿಲ್ಲ ಹೆಲೋದಂತು ನಿಂತು ಹೋಯಿತು”.

ಇನ್ನು ಊರ ಜನರಿಗೆ ಇದರ ಬಗ್ಗೆ ಅರಿವೇ ಇರೋದಿಲ್ಲ , ಒಂದು ಉದಾಹರಣೆ ನೋಡಿ ಮಂಗ ಓಡಿಸುವ ಸುಧಾಕರ ಮನೆಕಡೆ ಬಂದಗಾಲೆಲ್ಲ ಹೇಳ್ತಾ ಇರ್ತಾನೆ ಮೊನ್ನೆ ಅಲ್ಲಿ ಮಲ ಹಿಡಿದೆ ಸ್ವಾಮಿ , ನಿನ್ನೆ ಅದರ ಕಿವಿ ಹಿಡಿದು ಸರಿಯಾಗಿ ಆಟಡಿಸಿದ್ದೆ(ಮಲಕ್ಕ ಕಣ್ಣು ,ಕಿವಿ , ಮೂಗು ಇರುತ್ತೆ ಅಂತ ಅವನಿನ್ದಾನೆ ನನಗೆ ಗೊತ್ತಾಗಿದ್ದು) ಇವತ್ತು ಅದರದ್ದೇ ಸಾರು , ನಾನು ಚಿ ಚಿ ಇವನೇನು ಮಲವನ್ನು ಬಿಡೋಲೊಲ್ಲ ಅಂತ ಅಮ್ಮನ ಬಳಿ ವಿಚಾರಿಸಿದರೆ ಅದು ಮಲ ಅಲ್ಲ ಮೊಲ ಅಂತ ಆಮೇಲೆ ತಿಳಿದಿದ್ದು.
ಇಷ್ಟಕ್ಕೆ ನಿಲ್ಲದೆ ‘ಮಂಗ ನನ್ನ ಮಗನೆ ಒಳ್ಳೆ ಹೇತ್ ಹಾಕಿದಹಾಗೆ ಕೆಲಸ ಮಾಡಿದ್ಯಲ್ಲೋ’ ಅಂತ ಬಯ್ಯೋವಾಗ ಕೂಡ ಈ ಹೇಲನ್ನು ಬಿಡೋಲ್ಲ.ಮಗನೆ ಹೊಡೆದರೆ ಅಲ್ಲೇ ಹೇತ್ ಕೊಳ್ಳಬೇಕು ಅಂತ ಕೂಡ ಬಳಸ್ತಾರೆ. ನಾವು ಚಿಕ್ಕವರಿದ್ದಾಗ ಚಡ್ಡಿ ಅಲ್ಲಿ ಹೇತ್ ಕೊಳ್ತಾ ಇದ್ದ ರವಿಯನ್ನು ಹೇಲಪ್ಪ ಅನ್ತಾಲೆ ಕರೆಯುತಿದ್ದಿದ್ದು.

ಹಾಗಂತ ಹೆಲೋದು ಸುಲಭ ಕೆಲಸ ಅನ್ಕೊಂದಿದ್ರೆ ಅದರಂತ ತಪ್ಪು ಕಲ್ಪನೆ ಇನ್ನೊಂದಿಲ್ಲ.ಮೊನ್ನೆ ಅಕ್ಕನ ಮನೆಗೆ ಹೋಗಿದ್ದೆ , ಅಕ್ಕ ತನ್ನ ೧ ವರ್ಷದ ಪಾಪುವನ್ನು ಮುಕಳಿ ಮೇಲೆ ಮಾಡಿ ಮಲಗಿಸಿ ಕೊಂಡು ಅದರ ಸುತ್ತ ತುಪ್ಪ ಹಚ್ಚುತ್ತ ಇದ್ದಳು.ನನಗೆ ಆಶ್ಚರ್ಯ ಕೊನೆಗೆ ವಿಷಯ ಏನು ಅಂತ ಕೇಳಿದರೆ ಅದು ೨ ದಿನದಿಂದ ಹೇತಿಲಂತೆ. ಆಮೇಲೆ ನಡೆದಿದ್ದೆ ಮಜಾ ಅಂತು ಇವಳಿಗೆ ಸೋತು ಅದು ಪಿಚಿಕ್ ಅಂತ ಕಿರುಬೆರಳಷ್ಟು ಅಷ್ಟು ದೊಡ್ಡ ಗಾತ್ರದ ಮಲ ಮಾಡಿತು.ಅಷ್ಟೇ ತಡ ಅಕ್ಕ ಮನೆಯವರಿಗೆಲ್ಲ ಕೇಳುವಂತೆ ಪುಟ್ಟ ಹೆತ , ಪುಟ್ಟ ಹೆತ ಅಂತ ಕೂಗಿಕೊಂಡಳು.ಎಲ್ಲರಿಗೂ ಖುಷಿಯೋ ಖುಷಿ,ಅದನ್ನೆಲ್ಲಾ ನೋಡುತ್ತಾ ಇದ್ದ ನಾನು ಹೇಳಿದೆ ಮುಂಚೆನೇ ಹೇಳಿದ್ರೆ ನಾನೇ ಮನೆತುಂಬ ಹೇತ್ ಹಾಕ್ತ ಇದ್ನಲ್ಲೇ ಅಂತ, ಮಗನೆ ಅದನ್ನ ನಿನಗೆ ತಿನ್ಸತಿದ್ದೆ ಅನ್ನೋತರ ದೃಷ್ಟಿ ಬೀರಿ ಅಕ್ಕ ಒಳಗೆ ಹೋದಳು.

ನೀವ್ ಏನೇ ಹೇಳಿ ಬಯಲಿನಲ್ಲಿ ಕೂತು ಹೆತಷ್ಟು ಮಜಾ ೪ ಗೋಡೆಗಳ ನಡುವೆ ಕೂತು ಹೆತರೆ ಬರೋದಿಲ್ಲ.ಅದರಲ್ಲೂ ಈ ವೆಸ್ಟನ್ ಬಾರಿ ಬೋರು.ಅಂದಹಾಗೆ ಮಲದ ಬಗ್ಗೆ ಮನುಷ್ಯರಿಗಷ್ಟೇ ಹೇಸಿಗೆ ಅಲ್ಲ ಪ್ರಾಣಿಗಳಿಗೂ ಇದೆ ಅನ್ನೋದಕ್ಕೆ ಕೆಳಗಿನ ನಗೆಹನಿ ಓದಿ.
“ಒಮ್ಮೆ ಒಂದು ತಾಯಿ ಮತ್ತು ಮಗು ಹಂದಿ ಮನುಷ್ಯರ ಮಲ ತಿನ್ನುತ್ತಾ ಇದ್ದವು , ಇದ್ದಕಿದ್ದಂತೆ ಮರಿ ಹಂದಿಗೆ ಒಂದು ಸಂದೇಹ ಬಂತು , ಅದು ಅಮ್ಮನಲ್ಲಿ ಕೇಳಿತು ಅಮ್ಮ ,ಅಮ್ಮ ನಾವು ಮನುಷ್ಯರ ಮಲ ತಿಂತೆವಲ್ಲ ಹಾಗಾದ್ರೆ ನಮ್ಮ ಮಲ ಯಾರು ತಿಂತಾರೆ.
ಅಷ್ಟರವರೆಗೂ ಸುಮ್ಮನೆ ತನ್ನ ಪಾಡಿಗೆ ಊಟ ಮಾಡುತ್ತಾ ಇದ್ದ ತಾಯಿ ಹಂದಿ ಹೇಳಿತು “ಚಿ ಚಿ , ಊಟ ಮಾಡ್ತಾ ಅಂತ ಹೊಲಸಿನ ಬಗ್ಗೆ ಮಾತನಾಡಬಾರದು ಪುಟ್ಟ ಅಂತ””. ಹೇಗೆ ?

ಹಾಗೆ ನ್ಯೂಟನ್ ೪ನೇ ಲಾ ಬೇರೆ ಇದೆ ಈದರ ಬಗ್ಗೆ ” loose motion cannot be done in slow motion”.

ಇಷ್ಟು ಹೊತ್ತು ನೆಮ್ಮದಿಯಾಗಿ ………..ಪುರಾಣ ಕೇಳಿದ ನಿಮ್ಮೆಲ್ಲರಿಗೂ ನನ್ನ ವಂದನೆಗಳು.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments