ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 4, 2011

24

ಇದು ಕನ್ನಡಕ್ಕಾದ ಅವಮಾನವಲ್ಲವೇ?

‍ರಾಕೇಶ್ ಶೆಟ್ಟಿ ಮೂಲಕ

ಕರ್ನಾಟಕದಲ್ಲಿ ಕನ್ನಡದ ಪರ ಕೆಲಸ ಮಾಡಿದವರಿಗೆ ಗೌರವ ಕೊಡೋದು ತಪ್ಪಾ? ತಪ್ಪು ಅನ್ನೋದಾದ್ರೆ ರಾಜ್ಯಪಾಲರು, ಡಾ|| ಎಂ. ಚಿದಾನಂದಮೂರ್ತಿ  ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನಿರಾಕರಿಸಿರುವುದು ಸರಿಯಾಗುತ್ತದೆ,ಅಲ್ವಾ? ಚಿಮೂ ಯಾರು? ಕನ್ನಡಕ್ಕೆ ಅವರ ಕೊಡುಗೆಯೇನು? ಎಲ್ಲ ಅರ್ಹತೆಯಿದ್ದರು ಅವರಿಗೆ ಗೌರವ ಡಾಕ್ಟರೇಟ್  ನಿರಾಕರಿಸಲು ನೀಡಿರುವ ಕಾರಣವಾದರು ಏನು ಅಂತ ನೋಡಿದರೆ ‘ಸಂಘ ಪರಿವಾರದ’ ಜೊತೆ ಅವರು ಗುರ್ತಿಸಿಕೊಂಡಿರುವ ಮಹಾಪರಾಧವನ್ನ ಮಾಡಿರುವುದಂತೆ!

ಅದ್ಯಾವ ಸೀಮೆಯ ಅಪರಾಧ ಅಂತ ನನಗೂ ಇನ್ನು ಕೆಲವರಿಗೂ ಅನ್ನಿಸಬಹುದು ಆದರೆ ಸಿಕ್ಯುಲರ್ ಮನಸ್ಸುಗಳಿಗೆ ಅದು ದೇಶ ದ್ರೋಹಕ್ಕೆ ಸಮ ಅನ್ನಿಸಲೂಬಹುದು.ಆದರೆ ಚಿಮೂ ಅವರನ್ನ ಕೇಸರಿ-ಹಸಿರಿನ ಪರದೆ ಸರಿಸಿ, ಕೆಂಪು-ಹಳದಿಯ ಕನ್ನಡದ ಪರದೆಯ ಮೂಲಕ ನೋಡಿದಾಗಲೂ ಅವರ ವಿರೋಧಿಗಳು ಅವರಿಗೆ ಗೌರವ ಡಾಕ್ಟರೇಟ್ ನೀಡುವುದನ್ನು ವಿರೋಧಿಸಬಲ್ಲರೆ?

ಯಾವುದೇ ರಾಜಕೀಯ ಪಕ್ಷ,ಸಂಘಟನೆ, ಪಂಥಕ್ಕೆ ಸೇರದ ಒಬ್ಬ ಸಾಮನ್ಯ ಕನ್ನಡಿಗನ ಕಣ್ಣಿಗೆ ಚಿಮೂ ಅವರು,ಕನ್ನಡದ ಪ್ರಖ್ಯಾತ ಸಂಶೋಧಕ,ವಿದ್ವಾಂಸ,ಇತಿಹಾಸಜ್ಞ ಹಾಗೂ ಲೇಖಕರಾಗಿ ಮಾತ್ರ ಕಾಣಬಲ್ಲರು.

ಇಂತ ಚಿಮೂ ಅವರಿಗೆ ಗೌರವ ಡಾಕ್ಟರೇಟ್ ನಿರಾಕರಿಸುವುದು ಕನ್ನಡ ಭಾಷೆಯ ಪ್ರಾಚೀನತೆ ಹಾಗೂ ಪ್ರಾಚೀನ ಕರ್ನಾಟಕದ ಬಗ್ಗೆ ಅವರ ಒಲವನ್ನ,ನಿಷ್ಠೆಯನ್ನ,ತುಡಿತವನ್ನ ಮತ್ತು ಕನ್ನಡಕ್ಕಾಗಿ ಅವರು ಮಾಡಿರುವ ಕೆಲಸವನ್ನ ಕಡೆಗಣಿಸಿದಂತೆ ಅವಮಾನಿಸಿದಂತಲ್ಲವೇ? ಕನ್ನಡಕ್ಕಾಗಿ ಕೆಲಸ ಮಾಡಿದವರನ್ನ ಕಡೆಗಣಿಸುವುದು ಕನ್ನಡಿಗರನ್ನ,ಕರ್ನಾಟಕವನ್ನ ಕಡೆಗಣಿಸಿದಂತೆ-ಅವಮಾನಿಸಿದಂತೆಯೇ ಸರಿ.

ವಿಕಿಯಲ್ಲಿರುವ, ಚಿಮೂ ಕನ್ನಡಕ್ಕೆ ಕೊಟ್ಟಿರೋ ಬರಹಗಳ ಪಟ್ಟಿ ಹೀಗಿದೆ.

ವೀರಶೈವ  ಧರ್ಮ, ವಾಗರ್ಥ ಬಪ್ಕೋ,ವಚನ ಸಾಹಿತ್ಯ,Sweetness and light Sahithigala Kalavidara Balaga,ಸಂಶೋಧನೆ.ಸಂಶೋಧನಾ ತರಂಗ ಸರಸ ಸಾಹಿತ್ಯ ಪ್ರಕಾಶನ,ಪುರಾಣ ಸೂರ್ಯಗ್ರಹಣ ಆಇಬಿಎಕ್ ಪ್ರಕಾಶನ,ಪಾಂಡಿತ್ಯ ರಸ,ಕನ್ನಡ ವಿಶ್ವವಿದ್ಯಾಲಯ,ಸೂನ್ಯ ಸಂಪಾದನೆಯನ್ನು ಕುರಿತು.ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪ್ರಸ್ಯತೆ ಪ್ರಸರಾಂಗ,ಲಿಂಗಾಯತ ಅಧ್ಯಯನಗಳು ವಾಗ್ದೇವಿ ಪುಸ್ತಕಗಳು, ಕವಿರಾಜಮಾರ್ಗ.ಕರ್ನಾಟಕ ಸಂಸ್ಕ್ರತಿ ಕನ್ನಡ ಸಾಹಿತ್ಯ ಪರಿಷತ್ತು,ಕರ್ನಾಟಕ-ನೇಪಾಳ ಪ್ರಸಾರಾಂಗ,ಕನ್ನಡಾಯಣ,ಕನ್ನಡ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ.ಚಿದಾನಂದ ಸಮಗ್ರ ಸಂಪುಟ,ಬಸವಣ್ಣ.

ಕನ್ನಡಿಗರೇ ಮರೆತು ಕುಳಿತಿರೋ ವೀರ ಕನ್ನಡತಿಯರಾದ ಬೆಳವಡಿ ಮಲ್ಲಮ್ಮ, ಉಲ್ಲಾಳದ ರಾಣಿ ಅಬ್ಬಕ್ಕರನ್ನ ಆಗಾಗ ನೆನಪಿಸುವುದು ಚಿಮೂ ಅವರೇ.ರಾಜಕೀಯದ ಫಲವಾಗಿ ಕೇವಲ ತಮಿಳಿಗೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿ, ಕನ್ನಡಕ್ಕೆ ಸಿಗದಂತೆ ಮಸಲತ್ತು ಮಾಡಿದಾಗ.ಕನ್ನಡದ ಪ್ರಾಚೀನತೆಯನ್ನ ಸಾಕ್ಷಿ ಪುರಾವೆ ಸಮೇತ ನೀಡಿದ್ದು ಯಾರು ಮಿ.ಹಂಸರಾಜ್ ಭಾರದ್ವಾಜ್?, ಇಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ದೊರೆಯುವಲ್ಲಿ ಚಿಮೂ ಅವರ ಕೊಡುಗೆಯನ್ನು ನೀವು ನಿರಾಕರಿಸಬಲ್ಲಿರಾ? ಹಣದಾಸೆಗೆ ಬಿದ್ದ ಸ್ಥಳೀಯ ಪುಂಡ ಪೋಕರಿಗಳ,ವಿದೇಶಿ ಪ್ರವಾಸಿಗರ ಅನೈತಿಕ ಚಟುವಟಿಕೆಗಳ ತಾಣವಾಗಿ ಕನ್ನಡದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ನಗರಿ ಹಂಪಿ ಮಾರ್ಪಾಡಾಗುವ ವಿಷಮ ಕಾಲದಲ್ಲಿ ಹಂಪಿ ಉಳಿಸಲು ಅವರು ಚಳುವಳಿ ಮಾಡಿದ  ತಪ್ಪಾ? ಒಬ್ಬ ಸಂಶೋಧಕನಾಗಿ ಹಂಪಿಯನ್ನು ನೋಡಿದ ಚಿಮೂ ಅವರಿಗೆ ಸಹಜವಾಗಿ ಅಲ್ಲಿನ ಸ್ಮಾರಕಗಳ ಮೇಲೆ ನಡೆದಿರುವ ದಾಳಿಯ ಸ್ವರೂಪ ಮತ್ತು ಹಾಗೆ ಮಾಡಿದವರ ಬಗ್ಗೆ ಮಾತನಾಡುವುದು ತಪ್ಪಾ? ಒಂದು ವೇಳೆ ಚಿಮೂ ಸಿಕ್ಯುಲರ್ ಆಗಿದ್ರೆ  ಇದು ಸಿಕ್ತ ಇತ್ತೋ ಏನೋ, ಆದ್ರೆ ಅವ್ರು ಹೇಳಬಾರದ ಸತ್ಯಗಳನ್ನೆಲ್ಲ ಸಂಶೋಧನೆಯ ನೆಪದಲ್ಲಿ ಹೇಳಿದ್ದೆ ತಪ್ಪಾ?

ಇತ್ತೀಚಿಗೆ ಅವರು ಮತಾಂತರ ನಿಷೇಧಿಸಿ ಅಂತಲೋ ಅಥವಾ ಇನ್ಯಾವುದೇ ಕಾರಣಗಳಿಗಾಗಿ ಅವರು ಬಲಪಂಥಿಯರು-ಸಂಘ ಪರಿವಾರದ ನಿಕಟವರ್ತಿ ಅನ್ನಿಸಿರಬಹುದು.ಆದರೆ ಇದು ಅವರ ಕನ್ನಡ ಪರ ಕೆಲಸವನ್ನ ಮಬ್ಬಾಗಿಸುತ್ತದೆಯೇ? ಸಾಂವಿಧಾನಿಕ ಹುದ್ದೆಯಲ್ಲಿ ಕೂತು ತಾನೊಬ್ಬ ಕಾಂಗ್ರೆಸ್ಸಿಗ ಅಂತ ಹೇಳಿಕೊಳ್ಳುವ ಹೆಮ್ಮೆ ಭಾರಧ್ವಜರಿಗೆ ಇರುವಂತೆಯೇ,ಈ ದೇಶದ ಪ್ರಜೆಯಾಗಿ ಚಿಮೂ ಅವರಿಗೂ ಅವರದೇ ಆದ ನಿಳುವುಗಳಿರುತ್ತವೆ.ಅದನ್ನೇ ನೆಪ ಮಾಡಿ ಈ ಮಟ್ಟಕ್ಕಿಳಿಯುವುದು ಎಷ್ಟು ಸರಿ? ಎಲ್ಲರೂ ನಿಮ್ಮ ತರವೇ ಇರಬೇಕೆಂದು ಏಕೆ ಅಂದುಕೊಳ್ಳುತ್ತಿರಿ?

ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂಧರ್ಭದಲ್ಲಿ ಕನ್ನಡದ ಹಿರಿಯ ವಿದ್ವಾಂಸರಿಗೆ ಗೌರವ ಡಾಕ್ಟರೇಟ್ ನಿರಾಕರಣೆ ಅನ್ನುವುದು ಬಹುಷಃ ಕನ್ನಡಪರ ಕೆಲಸ ಮಾಡುವವರಿಗೆ,ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಅವಮಾನವದಂತಲ್ಲವೇ?

ಈ ಬಗ್ಗೆ ಚರ್ಚೆಯಾಗಬಲ್ಲದೆ?

ಚಿತ್ರಕೃಪೆ: thatskannada.oneindia.in

24 ಟಿಪ್ಪಣಿಗಳು Post a comment
 1. ಫೆಬ್ರ 4 2011

  ರಾಜ್ಯಪಾಲರ ಈ ನಡವಳಿಕೆಗೆ ಅವರ ಆಪ್ತವಲಯದಲ್ಲಿರುವ ಸಲಹಾಗಾರೇ ಜವಾಬ್ದಾರಿ ಎಂದು ನನ್ನ ಅನಿಸಿಕೆ.
  ಯಾವನೇ ಉನ್ನತ ಉದ್ದೆಯಲ್ಲಿರುವಾತ, ತನಗೆ ಅರಿವಿದ್ದ, ಅರಿವಿರದ ಸಂಗತಿಗಳ ಬಗ್ಗೆ ಎಲ್ಲದಕ್ಕೂ ತನ್ನ ಕಾರ್ಯದರ್ಶಿಗಳು ಮತ್ತು ಆಪ್ತ ಸಲಹಾಗಾರರ. ಸಲಹೆ ಸೂಚನೆಗಳನ್ನು ಸ್ವೀಕರಿಸುವುದು ರೂಢಿ. ಹಾಗಿರುವಾಗ,ಈ ತಿರಸ್ಕಾರದ ಹಿಂದೆ ಕೆಲಸಮಾಡಿರುವುದು ಯಾವನೋ ಒಬ್ಬ ಕನ್ನಡದ ಅಧಿಕಾರಿಯದೇ ಕೈವಾಡ ಎಂದು ನನ್ನ ಅನಿಸಿಕೆ..

  ಉತ್ತರ
 2. Narendra Kumar.S.S
  ಫೆಬ್ರ 4 2011

  ಅಸು ಹೆಗ್ಡೆ> ರಾಜ್ಯಪಾಲರ ಈ ನಡವಳಿಕೆಗೆ ಅವರ ಆಪ್ತವಲಯದಲ್ಲಿರುವ ಸಲಹಾಗಾರೇ ಜವಾಬ್ದಾರಿ ಎಂದು ನನ್ನ ಅನಿಸಿಕೆ.
  ಅಧಿಕಾರದ ಸ್ಥಾನದಲ್ಲಿರುವವರು ತಮ್ಮ ಕಾರ್ಯದರ್ಶಿಗಳು ನೀಡಿದ ಸಲಹೆಗಳನ್ನು ಕಣ್ಣುಮುಚ್ಚಿಕೊಂಡು ತೆಗೆದುಕೊಳ್ಳುತ್ತಾರೆಂದರೆ ನಂಬುವುದು ಕಷ್ಟ. ಅದರಲ್ಲೂ ಭೂತಪೂರ್ವ ಕಾನೂನು ಮಂತ್ರಿಗಳಾಗಿ ಅನುಭವವಿರುವ ಹೆಚ್.ಆರ್.ಭರಧ್ವಾಜ್ ಅವರು ಈ ರೀತಿ ಮಾಡಿದ್ದಾರೆಂದರೆ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ.

  rakeshshetty1> ಅವರಿಗೆ ಗೌರವ ಡಾಕ್ಟರೇಟ್ ನಿರಾಕರಿಸಲು ನೀಡಿರುವ ಕಾರಣವಾದರು ಏನು ಅಂತ ನೋಡಿದರೆ ‘ಸಂಘ
  rakeshshetty1> ಪರಿವಾರದ’ ಜೊತೆ ಅವರು ಗುರ್ತಿಸಿಕೊಂಡಿರುವ ಮಹಾಪರಾಧವನ್ನ ಮಾಡಿರುವುದಂತೆ!
  ಗೌರವ ಡಾಕ್ಟರೇಟ್‍ಗೆ ಚಿಮೂ ಅವರ ಹೆಸರಿನ ಜೊತೆಗೆ ಹೋಗಿರುವ ಇನ್ನೆರಡು ಹೆಸರುಗಳೂ ಇವೆ – ಅವರುಗಳೂ ಸಹ ’ಸಂಘ ಪರಿವಾರದ’ ಜೊತೆ ಗುರುತಿಸಿಕೊಂಡಿರುವವರೇ!
  ಪ್ರಾಯಶಃ ಭರಧ್ವಾಜ್ ಅವರಿಗೆ ಈ ವಿಷಯ ಗೊತ್ತಿಲ್ಲದೇ ಹೋಗಿರಬೇಕು, ಪಾಪ!!

  ಒಟ್ಟಿನಲ್ಲಿ ನಮ್ಮ ರಾಜ್ಯಪಾಲರ ನಿಜವಾದ ಬಣ್ಣ, ಅರ್ಹತೆಗಳು ಜಗತ್ತಿಗೇ ಗೊತ್ತಾಗುತ್ತಿದೆ.
  ಸತ್ಯಮೇವ ಜಯತೇ.

  ಉತ್ತರ
  • ಫೆಬ್ರ 7 2011

   ರಾಜ್ಯಪಾಲರ ಕಾರ್ಯವನ್ನು ನಾನು ಸಮರ್ಥಿಸುತ್ತಿಲ್ಲ. ಆದರೆ, ಅವರ ಕಾರ್ಯಾಲಯದಲ್ಲಿ ಕನ್ನಡ ಮತ್ತು ಈ ನಾಡಿನ ವಿರೋಧಿಗಳು ತುಂಬಿಕೊಂಡು, ರಾಜ್ಯಪಾಲರ ಕಿವಿ ಊದುತ್ತಿದ್ದಾರೆ ಎಂಬುದು ನನ್ನ ಅನಿಸಿಕೆ. ಆಪ್ತರ ಸಲಹೆಗಳು ಪರಿಣಾಮ ಬೀರುತ್ತವೆ ಎನ್ನುವುದು ನನ್ನ ಒಟ್ಟಾರೆ ಅಭಿಪ್ರಾಯ.
   ರಾಜ್ಯಪಾಲರಿಗೆ ಸ್ವಂತ ಬುದ್ಧಿ ಇಲ್ಲ ಅನ್ನುವುದಕ್ಕೆ, ಯಡ್ಯೂರಪ್ಪನವರಿಂದ ಎರಡೆರಡು ಬಾರಿ ವಿಶ್ವಾಸಮತಯಾಚನೆ ಕಾರ್ಯ ನಡೆಸಿದ್ದೇ ಉದಾಹರಣೆ.

   ಉತ್ತರ
 3. Ravi
  ಫೆಬ್ರ 4 2011

  ವಂದೇ ಮಾತರಂ ಹಾಡಲು ಆಯ್ಕೆಯ ಸ್ವಾತಂತ್ರ್ಯ, ತ್ರಿವರ್ಣ ಧ್ವಜ ಕ್ಕೆ ಅವಮಾನ, ಕಾಮನ್ ವೆಲ್ತ್, ೨ ಜಿ, ಆದರ್ಶ ಅಪಾರ್ಟ್ಮೆಂಟ್ ಹಗರಣಗಳು, ಅರುಳು ಮರುಳಿನ ದಿಗ್ವಿಜಯ್ ಸಿಂಗ್, ಚಿದಂಬರಂ ಕಪಿಲ್ ಸಿಬಲ್ ರ ತಲೆ ಕೆಟ್ಟ ಭಾಷಣಗಳು, ಭಾರಧ್ವಾಜ ಎಂಬೋ ರಾಜ್ಯಪಾಲ… ಈಗ ಚಿಮೂ ಅವರಿಗೆ ಅನ್ಯಾಯ. ಶಿಶುಪಾಲ (ಕಾಂಗ್ರೆಸ್) ನ ಪಾಪದ ಕೊಡ ತುಂಬುತ್ತಾ ಇದೆ.

  ಉತ್ತರ
 4. ಮೋಹನ
  ಫೆಬ್ರ 4 2011

  ಕಾಂಗ್ರೆಸ್ಸಿನವರು ಏನ್ ಮಾಡಿದ್ರೂ ಸೈ, ನಾವಂತೂ ಅವರಿಗೆ ಜೈ.
  ಯಾಕೆಂದ್ರೆ ಈ ದೇಶ ಬೇಗ ಎಕ್ಕುಟ್ಟಿ ಹೋದಷ್ಟು ಅಷ್ಟೇ ಬೇಗ ಸರಿ ದಾರಿಗೆ ಬರುತ್ತೆ.

  ಉತ್ತರ
 5. ಫೆಬ್ರ 4 2011

  ಚಿದಾನಂದಮೂರ್ತಿಯವರಿಗೆ ಗೌರವ ಡಾಕ್ಟರೇಟ್ ಕೊಡದ ಬಗ್ಗೆ ನನಗೂ ಬೇಸರವಿದೆ, ಆದರೆ ಇದಕ್ಕೂ ಕಾಂಗ್ರೆಸ್ಸ್/ಬಿಜೆಪಿಯ ಪಕ್ಷಗಳಿಗೂ ಇರುವ ಸಂಬಂಧವೇನು ? ರಾಜಕೀಯ ವಿಷಯಗಳ ಅವಶ್ಯಕತೆ ಇದೆಯೇ ?

  ಅರವಿಂದ್

  ಉತ್ತರ
  • ಫೆಬ್ರ 4 2011

   ಅರವಿಂದ್,
   >>ಆದರೆ ಇದಕ್ಕೂ ಕಾಂಗ್ರೆಸ್ಸ್/ಬಿಜೆಪಿಯ ಪಕ್ಷಗಳಿಗೂ ಇರುವ ಸಂಬಂಧವೇನು ? ರಾಜಕೀಯ ವಿಷಯಗಳ ಅವಶ್ಯಕತೆ ಇದೆಯೇ ?
   ಇಲ್ಲ ಅನ್ನಿಸುತ್ತಾ?, ಪತ್ರಿಕೆಗಳಲ್ಲಿ ಬಂದಿರುವ ವರದಿಗಳು ಹೇಳುವುದು ’ಚಿಮೂ ಅವರು ಸಂಘಪರಿವಾರದ ನಿಕಟವರ್ತಿಯಾಗಿರುವುದರಿಂದ ಬಹುಷಃ ನಿರಾಕರಿಸಲಾಗಿದೆ’ ಅಂತಲೇ.ರಾಜ್ಯಪಾಲರ ಹಿಂದಿನ ಕತೆ ಗೊತ್ತಿದ್ದವರಿಗೆ ರಾಜಕೀಯದ ವಾಸನೆ ಬರದಿರದು

   ಉತ್ತರ
  • ಮೈನಾ
   ಫೆಬ್ರ 5 2011

   ಅರವಿ೦ದ್ ಅವರೇ,

   ಅವರೇ ಹೇಳಿಕೊ೦ಡಿರುವ ಹಾಗೆ ಅವರು ಕಾ೦ಗ್ರೆಸ್ಸಿನ ಹೆಮ್ಮೆಯ ಸದಸ್ಯರ೦ತೆ. ಅ೦ತಹವರು ಬಲಪ೦ಥೀಯರು ಎನಿಸಿಕೊ೦ಡವರಿಗೆ ಎಲ್ಲಾದರು ಗೌರವ ಕೊಡುವುದೆ. ರಾಜ್ಯಪಾಲರಿಗೂ ಪಕ್ಷಗಳಿಗೂ ಸ೦ಬ೦ಧವಿಲ್ಲ ಎನ್ನುವುದು ಬರೀ ಪುಸ್ತಕದ ಬದನೇಕಾಯಿ

   ಉತ್ತರ
  • ಮೋಹನ
   ಫೆಬ್ರ 7 2011

   ಅರಾಜಕೀಯವಾದ ಯಾವ ಕಾರಣ ಇತ್ತು ಆಯಪ್ಪನಿಗೆ ಡಾಕ್ಟರೇಟ್ ನಿರಾಕರಿಸಲಿಕ್ಕೆ?

   ಉತ್ತರ
 6. ಫೆಬ್ರ 5 2011

  ರಾಕೇಶ್ ನನ್ನ ಮಟ್ಟಿಗೆ ಕೇಳುವುದಾದರೆ,,,ಗೌರವ ಡಾಕ್ಟರೇಟ್ ನೀಡಲು ಬೇಕಾದ ಅರ್ಹತೆ ಮಾನದಂಡಗಳನ್ನು ವೀಕ್ಷಿಸಬೇಕೇ ಹೊರತು ಆ ವ್ಯಕ್ತಿಯ ವೈಯಕ್ತಿಕ ನಂಬಿಕೆ ಅಥವಾ ನಿಷ್ಠೆಗಳನ್ನು ನೋಡಿ ಅಲ್ಲ…ಇದನ್ನು ಸಂಬಂಧಪಟ್ಟ ಸಮಿತಿ ಮನದಟ್ಟು ಮಾಡಬೇಕು…ರಾಜ್ಯಪಾಲರ ಹಿಂಬಾಲಕ ಮುಂಬಾಲಕರ ಕರಾಮತ್ತು ಎನಿಸುತ್ತೆ,,,,ಅನ್ಯಾಯ ಅನ್ಯಾಯವೇ,,,ಅಲ್ಲವೇ…ಒಳ್ಲೆ ವಿಷಯ ಪ್ರಸ್ತಾವನೆ ಚಿಂತನೆಗೆ.

  ಉತ್ತರ
 7. Kumara S
  ಫೆಬ್ರ 5 2011

  …ತುಂಬ ಒಳ್ಳೆ ಸಮಯೋಚಿತವಾದ ಲೇಖನ…ಭರದ್ವಾಜ@ಕಾಂಗ್ರೆಸ್ ವ್ಯಕ್ತಿಯಿಂದ ಈತರಹದ ಕೆಲಸವನ್ನೇ ನೀರಿಕ್ಷಿಸಬಹುದು…ಚಿಮು ಮಾಡಿರುವ ಕೆಲಸಗಳ ಬಗ್ಗೆ ಇವರಿಗೇನು ಗೊತ್ತು…ಯಾಕೆ ಡಿಯನ್ ಬೆಳಿಗ್ಗೆ ಏನಾದ್ರು ಒಂದು ಕಾರಣ ಇಟ್ಕೊಂಡು ಜಗಳ ಆಡೋ ಈ ಕಾಂಗ್ರೆಸ್ ಪಾರ್ಟ್ ನವರಿಗೆ ಚಿಮು ಮಾಡಿರೋ ಕೆಲಸದ ಬಗ್ಗೆ ಗೊತ್ತಿಲ್ಲವ?…ಕನ್ನಡ ಭಾಷೆ ಎಲ್ಲ ತರಹದ ಸಹಾಯ ಮಾಡುತ್ತೇವೆ ಅಂತ ಹೇಳೋ ಈ ಕಾಂಗ್ರೆಸ್ ಪಾರ್ಟಿ ನವರು ಮಾಡೋ ಕೆಲಸನ ಇದು?……ನಾಚಿಕೆಗೇಡು…

  ಉತ್ತರ
 8. ಫೆಬ್ರ 5 2011

  This is too much from a Governor

  ಉತ್ತರ
 9. ಫೆಬ್ರ 5 2011

  Kutilateyalli yaava shakunigu kadime illa anisuttide iavarannu nodidare…

  ಉತ್ತರ
 10. ರವಿ ಕುಮಾರ್ ಜಿ ಬಿ
  ಫೆಬ್ರ 5 2011

  ಸ್ವಾಮೀ , ಅದು ರಾಜ್ಯಪಾಲರ ಹಿಂಬಾಲಕ ಮುಂಬಾಲಕರ ಕರಾಮತ್ತು ಎಂದುಕೊಳ್ಳುವುದು ಸರಿಯಲ್ಲ. ಅವರಿಗೆ ಬುದ್ದಿಯೇ ಇಲ್ಲವೇ? ಎಲ್ಲದರಲ್ಲೂ ಮೂಗು ತೂರಿಸೋ ರಾಜ್ಯಪಾಲರು ತಮ್ಮ ಕೆಲಸದಲ್ಲಿ ಮಾತ್ರ ಬೇರೆಯವರು ಹೇಳಿದಹಾಗೆ ಕೇಳಿದ್ದಾರೆ ಎಂದುಕೊಳ್ಳುವುದು ಹಾಸ್ಯಾಸ್ಪದ.
  ಹಿಂದಿನ ಉದಾಹರಣೆಯನ್ನೇ ನೋಡಿ ..ರಾಜ್ಯಪಾಲರಿಂದ ಹಿಡಿದು,,,ಎಲ್ಲಾ ಕಾಂಗ್ರೆಸ್ಸ್ ಮುಖಂಡರು ತಮ್ಮ ಕೆಲಸ ಯಾರು ಮಾಡುತ್ತಾರೋ (ಹೊಗಳುತ್ತಾರೋ) ಅವರಿಗೆಲ್ಲ ಒಂದಲ್ಲ ಒಂದು ಪ್ರಶಸ್ತಿ ಕೊಟ್ಟೆ ಕೊಡಿಸುತ್ತಾರೆ..
  ಉದಾಹರಣೆಗೆ: ಬುರ್ಖಾ ದತ್ತ್ , ಸರ್ದೇಶ್ ,,ಜಿ.ಕೆ.. ಕೆಲವು ಮಂತ್ರಿಗಳು ಇನ್ನೂ ಬೆಳೆಯುತ್ತೆ ಬಾಲ…(ಹೊಗಳು ಭಟರಿಗೆ ಒಂದಿಲ್ಲೊಂದು ಪ್ರಶಸ್ತಿ ಇದು ಕಾಂಗ್ರೆಸ್ಸ್(ಸೋನಿಯಾ ಮತ್ತು ಭಾರ”’ದ್ವಾಜ ) ನೀತಿ )
  ಇನ್ನು ರಾಜ್ಯಪಾಲರ ಹಿಂಬಾಲಕ ಮುಂಬಾಲಕರ ಕರಾಮತ್ತು ಇರಬಹದು ಎನ್ನುವುವವರಲ್ಲಿ ಕೇಳುತ್ತೇನೆ, ಹಾಗಾದರೆ ರಾಜ್ಯಪಾಲರು ಎಲ್ಲದಕ್ಕೂ ಕಣ್ಣು ಮುಚ್ಚಿ ಸಹಿ ಹಾಕುತ್ತಾರೆಯೋ? ಹಾಗಿದ್ದರೆ ಅವರನ್ನು ಕಾನೂನು ಮಂತ್ರಿಯಾಗಿ ಅನುಭವ ಇರೋವರು ಇತ್ಯಾದಿಯಾಗಿ ಯಾಕೆ ಹೊಗಳುತ್ತೀರಿ? ಇಲ್ಲಿ ಕೇವಲ ವಯಸ್ಸು ಅನುಭವ ಆಗೋದಿಲ್ಲ ಕಣ್ರೀ ….

  ” ಹಾಗಾದ್ರೆ ಯೆಡ್ಡಿ ಮಾಡಿದ್ದಕ್ಕೂ ಅವರ ಮಗ ಹೇಳಿಕೊಟ್ಟಿ ರಬಹುದು ,ಅಥವಾ ಅಧಿಕಾರಿಗಳು ಮಾಡಿರಬಹುದು ಅನ್ನುವುದನ್ನು ಒಪ್ಪುತ್ತೀರಾ? ಸಾದ್ಯವಿಲ್ಲ ತಾನೇ? “.

  ಮೊದಲು ಮಾನ್ಯ ರಾಜ್ಯಪಾಲರು ರಾಜಕಾರಣ ಮಾಡೋದನ್ನು ಬಿಡಬೇಕು. ಅವರು ಅವರ ಸ್ಥಾನದ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು ಅಸ್ಟೇ….

  ಎಲ್ಲರೂ ಗಮನಿಸಿ ….ಇಲ್ಲಿ ಯಾರು ಚಿ ಮೂ ಗೆ ಅನ್ಯಾಯ ವಾಗಿದೆ ಅಥವಾ ಕನ್ನಡಕ್ಕೆ ಅವಮಾನವಾಗಿದೆ ಅಂದವರನ್ನೆಲ್ಲ..ಕೇಸರಿ ಕಡೆ …ಸಂಘದ ಕಡೆ ….ಇವನು ಅವರ ಕಡೆಯವನು ಎಂದು ಬೆಟ್ಟು ಮಾಡಲಾಗುತ್ತದೆ.
  ಯಾವ ಕಡೆಯವರಾದರೇನು, ಚಿ ಮೂ ಗೆ ನಿರಾಕರಿಸಿದ್ದು ತಪ್ಪೇ ….ಧಿಕ್ಕಾರವಿರಲಿ ರಾಜ್ಯಪಾಲರಿಗೆ ಹಾಗೂ ಇನ್ನೂ ಅವರು ಮಾಡಿದ್ದೆ ಸರಿ ಅನ್ನೋವರಿಗೆ.

  ಉತ್ತರ
 11. Dr Prashant Basavanalamath
  ಫೆಬ್ರ 5 2011

  Hi Friends, I think Hon. Governor is acting too much these days.I think he has become upset being a Governor rather being a active politician. So by habit he is acting like a Congress agent. One more thing.. there must be hidden agenda behind this decision. What do you say friends?
  If again Hon.Doctorate is announced for Dr M Chi. Mu. He must refuse it. All Kannadiga’s GOURAVA is the only real respect rather receiving Doctorate from Bharadwaj. Am I Rt?

  ಉತ್ತರ
 12. bhaskar
  ಫೆಬ್ರ 5 2011

  Governor is acting as if he is the one who has all control in karnataka. Who is he to stop doctorate to Chi mu? if its Rahul gandhi or Sonia, did the same person would have been the same governor denied doctorate?

  ಉತ್ತರ
 13. ಫೆಬ್ರ 5 2011

  ಒಂದು ಪ್ರದೇಶದ, ಭಾಷೆಯ, ಸಂಸ್ಕೃತಿಯ ಪರಿಚಯವಿಲ್ಲದ ಹೊರಗಿನವರನ್ನು ರಾಜ್ಯಪಾಲನಾಗಿ ಮಾಡುವುದೇ ದೊಡ್ಡ ತಪ್ಪು.

  ಉತ್ತರ
 14. ರವಿ ಕುಮಾರ್ ಜಿ ಬಿ
  ಫೆಬ್ರ 7 2011

  ಒಂದು ಪ್ರದೇಶದ, ಭಾಷೆಯ, ಸಂಸ್ಕೃತಿಯ ಪರಿಚಯವಿಲ್ಲದ ಹೊರಗಿನವರನ್ನು ರಾಜ್ಯಪಾಲನಾಗಿ ಮಾಡುವುದೇ ದೊಡ್ಡ ತಪ್ಪು.
  @vikas,
  ಸರಿಯಾಗಿ ಹೇಳಿದಿರಿ, ಆದರೆ ರಾಜ್ಯಪಾಲರ ನೇಮಕ ಮಾಡೋದು ಕೇಂದ್ರ ಸರಕಾರ ಅಲ್ಲವೇ, ಬಹುಷಃ ಆ ಅಧಿಕಾರ ಕೊಟ್ಟಿರೋದು ಆಡಳಿತದಲ್ಲಿ ಅರಾಜಕತೆ ಆಗದಿರಲಿ ಅಥವಾ ಸ್ವಜನ ಪಕ್ಷಪಾಥವಾಗದಿರಲಿ ಎಂದಿರಬೇಕು. ಆದರೆ ಆಗಿರೋದು ನೋಡಿ ದುಷ್ಟರು ಅದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಏನು ಮಾಡೋಣ ಕಾಲಾಯ ತಸ್ಮೈ ನಮಃ. ದೇವರು ಹನ್ನೊಂದನೆಯ ಅವತಾರ ಎತ್ತಬೇಕಾಗುತ್ತದೆನು? ನಾವು ಕಾಡು ನೋಡಬೇಕಷ್ಟೇ …ಆದರೆ ಅದರಲ್ಲೂ (ಕಾದು ನೋಡುವುದರಲ್ಲೂ) ಒಂದು ಅಪಾಯ ವಿದೆ ಏನೆಂದರೆ ಈ ದುರುಳರು ಅದನ್ನೇ ನಮ್ಮ ದೌರ್ಬಲ್ಯ ವೆಂದು ತಿಳಿದುಕೊಳ್ಳಬಹುದು..!!!!!

  ಉತ್ತರ
 15. ಫೆಬ್ರ 7 2011

  ಕಾಮಾಲೆ ಕಣ್ಣಿಗೆ ಎಲ್ಲವುದೂ ಹಳದಿಯಾಗಿ ಕಾಣಿಸುವುದಂತೆ. ನಮ್ಮ ರಾಜ್ಯಪಾಲರಿಗೆ ತಾವು ಹೇಳಿದ್ದೇ ಸರಿ ಎನ್ನುವ ಅಹಂ ಎದ್ದು ಕಾಣಿಸುತ್ತೆ.
  ಮೈಸೂರು ವಿ ವಿದ್ಯಾಲಯದ ಉಪಕುಲಪತಿಗಳಿಗೆ ಛೀಮಾರಿ ಹಾಕಿದ ಘನ ವ್ಯಕ್ತಿ ಇವರಲ್ಲವೇ?
  ಹೇಗೆ ಇವರಿಗೆ ಅವರದೇ ಅಭಿಪ್ರಾಯ ಇರುವಂತೆ ಚಿಮೂ ರವರಿಗೇ ಅವರದೇ ಅಭಿಪ್ರಾಯವಿರುತ್ತದೆ. ಗೌ ಪದವಿ ನೀಡಿದ್ದು ಅವರು ಕನ್ನಡಕ್ಕಾಗಿ ಮಾಡಿದ ಕೆಲಸಕ್ಕೆ.
  ಬನ್ನಿ ರಾಜ್ಯಪಾಲರಿಗೆ ಇಮೈಲ್ ಕಳಿಸಿ rbblr@vsnl.com

  ಉತ್ತರ
 16. Indian
  ಫೆಬ್ರ 7 2011

  Rakesh ravare. Namma comments yavathu delete madthera.? I will scold congress next time , u can accept tht.

  ಉತ್ತರ
  • ಫೆಬ್ರ 10 2011

   Mr.Indian
   ನಿಮ್ಮ ಪ್ರತಿಕ್ರಿಯೆಯನ್ನ ತಡೆ ಹಿಡಿಯಲು ಎರಡೇ ಕಾರಣ
   ೧.Authentic ಆಗಿರೊ ಮೇಲ್ ವಿಳಾಸವನ್ನ ಬಳಸಿಲ್ಲ
   ೨.ತಮ್ಮ ಪ್ರತಿಕ್ರಿಯೆ ವಿಷಯದ ಮೇಲಷ್ಟೆ ಇರಲಿಲ್ಲ, ಚಮಚ,ಏಜೆಂಟ್ ಅನ್ನೋ ಭಾಷೆಯೆಲ್ಲ ನಿಲುಮೆಗೆ ಒಗ್ಗುವಂತದ್ದಲ್ಲ.ಹಾಗೆ ಪ್ರತಿಕ್ರಿಯೆ ಸಂವಾದದ ರೂಪದಲ್ಲಿದ್ದರೆ ಚೆನ್ನ.

   ಇದನ್ನ ಮನದಲ್ಲಿಟ್ಟು ಪ್ರತಿಕ್ರಿಯಿಸಿ,ಆಮೇಲೆ ಪಬ್ಲಿಶ್ ಆಗುವುದೋ ಇಲ್ವೋ,ನೀವೆ ನೋಡಿ

   ಉತ್ತರ
   • Narendra Kumar.S.S
    ಫೆಬ್ರ 11 2011

    ಹೆಸರನ್ನೂ ಮುಚ್ಚಿಡುವ ಈ “Indian” ಗೆ ಪ್ರತಿಕ್ರಿಯೆ ನೀಡುವುದೂ ವ್ಯರ್ಥವೆನಿಸುತ್ತದೆ.
    ನಿಜಕ್ಕೂ ಚರ್ಚಿಸುವ ಇಚ್ಚೆಯಿದ್ದರೆ, ಮುಂದೆ ನಿಂತು ಚರ್ಚಿಸಬೇಕು.
    ಬಚ್ಚಿಟ್ಟುಕೊಂಡು ಕಲ್ಲೆಸೆದು ಓಡಿ ಹೋಗುವವರೊಡನೆ ಚರ್ಚೆ ಸಾಧ್ಯವೇ!?

    ಉತ್ತರ
 17. Shivaraj Gowdra
  ಫೆಬ್ರ 8 2011

  Very nice article… Mr. Bardhwaj is unfit for a governor.. He must leave Karnataka asap…

  ಉತ್ತರ

Trackbacks & Pingbacks

 1. Tweets that mention ಇದು ಕನ್ನಡಕ್ಕಾದ ಅವಮಾನವಲ್ಲವೇ? « ನಿಲುಮೆ -- Topsy.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments