ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 24, 2011

8

ಅತ್ಯಾಚಾರ ಮತ್ತು ಕಾರಣಗಳು

‍ನಿಲುಮೆ ಮೂಲಕ

ರೂಪಾ

ಇಂದು ಅಕಸ್ಮಾತ್ ಆಗಿ ಟೀನಾ ರವರ ಬ್ಲಾಗ್ಗೆ ಭೇಟಿ ನೀಡಿದೆ ಅಲ್ಲಿ ನಡೆಯುತಿದ್ದ ಕೆಲವು ಚರ್ಚೆಗಳು ಸ್ವಾರಸ್ಯ ಹಾಗು ಯೋಚಿಸಬೇಕಾದ ಗಂಭೀರ ವಿಚಾರಗಳೇ ಸರಿ.

ಹೆಣ್ಣಿನ ಮೇಲೆ ಅತ್ಯಾಚಾರ ಯಾಕೆ ನಡೆಯುತ್ತದೆ ಎಂಬುದನ್ನು ಮೊದಲು ವಿಶ್ಲೇಷಿಸಿದಾಗ ಈ ಕಾರಣಗಳು ನನಗೆ ಹೊಳೆದವು. ನನ್ನ ಜೀವನ ಯಾತ್ರೆಯಲ್ಲಿ ಕೆಲವು ಇಂತಹ ಸಂಗತಿಗಳೂ ನಡೆದಿವೆ. ಅದನ್ನೂ ಇಲ್ಲಿ ಬರೆದ್ದಿದ್ದೇನೆ.
ಸಂಧರ್ಭ:


ಗಂಡಸರು ಅನುಕೂಲಸಿಂಧುಗಳು.
ಇಂದು ಕ್ಲೋಸ್ ಫ್ರೆಂಡ್ ಆಗಿರುವುವನೇ ನಾಳೆ ರೇಪಿಸ್ಟ್ ಆಗಬಹುದು.
ನಾನು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿನ ಲೈಬ್ರರಿಯಲ್ಲಿ ಶನಿವಾರ (ಅಂದು ರಜಾ) ಭೇಟಿ ಕೊಟ್ಟಿದ್ದೆ.
ಯಾರು ಇರಲಿಲ್ಲ ವಾದ್ದರಿಂದ ಆತನ ಬುದ್ದಿಗೇನಾಯಿತೊ ಮೇಲೆ ಬೀಳಲು ಹವಣಿಸಿದ.
ಇಷ್ಟು ದಿನ ಕ್ಲೋಸ್ ಆಗಿ ಮಾತಾಡುತ್ತಿದ್ದೆಯಲ್ಲ . ಇಂದು ಇದಕ್ಕೂ ಒಪ್ಪಿಕೋ ಎಂದ./ ಹ್ಯಾಗೊ ಅವನಿಂದ ತಪ್ಪಿಸಿಕೊಂಡು ಬಂದಾಗಲಷ್ಟೆ ನೆಮ್ಮದಿಯ ಉಸಿರು ಬಿಟ್ಟೆ. ಯಾರಿಗೂ ಹೇಳಲಿಲ್ಲ . ಹೇಳಿದರೆ ನೀನ್ಯಾಕೆ ರಜಾದಿನದಲ್ಲಿ ಹೋದೆ . ನಿನ್ನದೇ ತಪ್ಪು ಅಂತಾರೆ.

ಹೆಣ್ಣಿನ ಸ್ಥಿತಿ

ಅಕಸ್ಮಾತ್ ಹೆಣ್ಣು ಗಂಡಿಗಿಂತ ಆರ್ಥಿಕವಾಗಿಯೋ ಅಥವ ದೈಹಿಕವಾಗಿಯೊ ದುರ್ಬಲಳಾಗಿದ್ದರೆ ಅವಳು ಗಂಡಿಗೆ ಬಡಿಸಿಟ್ಟ ಎಲೆ ಎಂದುಕೊಳ್ಳುತ್ತಾನೆ . ಸಾಮಾನ್ಯವಾಗಿ ಹುಡುಗಿಯರು ತಮ್ಮ ಕೆಲಸದಲ್ಲಿ ಅಥವ ಕಾಲೇಜಿನಲ್ಲಿ ಇಂತಹ ಸಂಧರ್ಭ ಎದುರಿಸಬೇಕಾಗುತ್ತದೆ.

ಗಂಡಿನ ಸ್ಥಿತಿ

ಗಂಡು ಕೆಲವೊಮ್ಮೆ ಇಲ್ಲೀವರೆಗೆ ಹೆಣ್ಣನ್ನೂ ಕಾಣದಿದ್ದಾಗ(ಬ್ರಹ್ಮಚಾರಿಗಳಾಗಿದ್ದವರು) ಮತ್ತು ತಮ್ಮ ಕಾಮ ತೀವ್ರತೆಯನ್ನು ಹತೋಟಿಯಲ್ಲಿಟ್ಟುಕೊಳ್ಳದೇ ಇದ್ದಾಗ ಅತ್ಯಾಚಾರಕ್ಕೆ ದಾರಿ ಯಾಗಬಹುದು.

ಹೆಣ್ಣಿನ ನಡತೆ

ಯಾರೇನೆ ಅಂದರೂ ಹೆಣ್ಣು ಯಾರೊಡನೆಯಾದರೂ ನಗುತ್ತಾ ಮಾತನಾಡಿದರೆ ಅವಳು ’ಅದಕ್ಕೆ ಕೊಡುವ ಇಂಡೈರೆಕ್ಟ್ ಇನ್ವಿಟೇಶನ್ ಅಂತ ಅಂದುಕೊಳ್ಳುವ ಸಮಾಜ ಇನ್ನೂ ಬದಲಾಗುವುದಿಲ್ಲ. ಆಗುವುದೂ ಇಲ್ಲ.

ಒಮ್ಮೆ ಒಂದು ಸಂಸ್ಥೆಯ ಅಧಿಕಾರಿಯಾಗಿ ನಾನು ಒಬ್ಬ ವಿದ್ಯಾರ್ಥಿಯೊಡನೆ ರಸ್ತೆಯಲ್ಲಿ ಸಿಕ್ಕನೆಂದು ಮಾತನಾಡಿ ಸ್ವಲ್ಪ ದೂರ ಬಂದೊಡನೆ ಯಾರೋ ” ಅವನ ಜೊತೇಲಿ ಮಾತ್ರ ಬರ್ತೀರ ನಮ್ಮ ಜೊತೆ ಬರಲ್ಲ್ವಾ ” ಅಂತ ಕೆಟ್ಟಾದಾಗಿ ಕೇಳಿದಾಗ ಇನ್ನೊಮ್ಮೆ ಯಾರೊಡನೆಯೂ ರಸ್ತೆಯಲ್ಲಿ ಮಾತನಾಡುತ್ತಾ ನಿಲ್ಲಬಾರದು ಎನಿಸಿತು.

ಹೆಣ್ಣಿನ ಉಡುಪು

ಖಂಡಿತಾ ಇದು ಸತ್ಯ.
ಈಗಿನ ಫ್ಯಾಶನ್ ಕಡಿಮೆ ಬಟ್ಟೆ ಹಾಕುವುದು. ಅದು ನಿಜ . ನಾನೂ ಒಪ್ಪುತ್ತೇನೆ. ಅದು ಎಲ್ಲಿವರೆಗೆ?
ನಾವು ಸಮಾಜದಲ್ಲಿ ಬದುಕುತ್ತಿದ್ದಾಗ ಸಮಾಜದ ಕಟ್ಟುಪಾಡುಗಳು ಅತಿ ಮುಖ್ಯ. ಅದನ್ನು ಮೀರಿದವಳು, ’ಅಂತಹವಳು’ ಎಂದು ಬ್ರಾಂಡ್ ಆಗುವುದು ನಿಜ. ಅಂತಹವರು ಗಂಡನ್ನು ಪ್ರಚೋದಿಸುವುದೂ ನಿಜ
ನಾನು ಚಿಕ್ಕವಳಿದ್ದಾಗ (೧೫ ವರ್ಷದವಳು)ಒಂದು ನಗರವಾಗುತ್ತಿರುವ ಹಳ್ಳಿಯಲ್ಲಿ ಕೆಲ ಕಾಲ ಇದ್ದೆವು . ಕೇವಲ ಪ್ಯಾಂಟ್ ಶರ್ಟ್ ಧರಿಸಿ ನಾನು ಆ ಹಳ್ಳಿಯಲ್ಲಿ ಬರುತ್ತಿದ್ದಾಗ ಸಭ್ಯತೆಯ ಎಲ್ಲೆ ಮೀರಿ ಅಲ್ಲಿನ ಗಂಡಸರು ಮಾತನಾಡಿದ್ದು ನೆನಪಿದೆ.. ಅಂದಿನಿಂದ ಆ ಹಳ್ಳಿಯಲ್ಲಿ ಇರುವಷ್ಟು ದಿನ ನಾನು ಚೂಡಿದಾರ ಹಾಕಿಯೇ ಒಡಾಡುತ್ತಿದೆ. ಅಂತಹ ಪ್ರಸಂಗ ನನಗೆ ಎದುರಾಗಲೇ ಇಲ್ಲ.
ಪಾಶ್ಚಾತ್ಯ ರಾಷ್ತ್ರಗಳಲ್ಲಿ ಹೇಗೊ ಗೊತ್ತಿಲ್ಲ .
ಆದರೆ ನಮ್ಮ ಸಮಾಜದ ಲಕ್ಶ್ಮಣ ರೇಖೆ ಯನ್ನೂ ದಾಟದೇ ಇರುವ ವರೆಗೂ ಹೆಣ್ಣು ಎಂದಿಗೂ ಈ ಅತ್ಯಾಚಾರಕ್ಕೆ ಬಲಿಯಾಗುವುದು ಕಡಿಮೆ

ಹೆಣ್ಣು ಇದಕ್ಕೆ ಏನು ಮಾಡಬಹುದು

ನನ್ನ ಅನಿಸಿಕೆಗಳು

ಆದಷ್ಟು ರಾತ್ರಿ ಒಬ್ಬಳೆ ಒಡಾಡುವುದನ್ನು ಕಡಿಮೆ ಮಾಡಬೇಕು ಇಲ್ಲವಾದರೆ ಜನರಿರುವ ರಸ್ತೆಯಲ್ಲಿ ಓಡಾಡಬೇಕು ಇಲ್ಲವಾದರೆ ಯಾರಾದರೂ ಗೊತ್ತಿರುವವರು ಜೊತೆ ಇರಬೇಕು
ಟೀನಾರವರು ಹೇಳಿದಂತೆ ಆತ್ಮರಕ್ಶಣೆಯ ಕಲೆಯನ್ನು ರೂಡಿಸಿಕೊಳ್ಳಬೇಕು, ಜೊತೆಯಲ್ಲಿ ಪೆಪ್ಪರ್ ಸ್ಪ್ರೇ ಆಥವ ಆ ಥರಹದ ಇನ್ನೇನಾದರೂ ಇಟ್ಟುಕೊಳ್ಳಾಬೇಕು
ನಾನು ಯಾವುದೇ ಸಮಯ್ದಲ್ಲೂ ಆಟೊನಲ್ಲಿ ಅಥವ ಟ್ಯಾಕ್ಸಿಯಲ್ಲಿ ಬರುತ್ತಿದ್ದಾಗಲೆಲ್ಲಾ . ಆ ಡ್ರೈವರ್‌ನ ಪೋಲಿಸ್ ನಂಬರನ್ನು ನನಗೆ ತಿಳಿದವರಿಗೆ ಎಸ್. ಎಮ್ .ಎಸ್ ಮಾಡುತ್ತೇನೆ. ದಾರಿಯಲ್ಲಿ ಫೋನನ್ನಲ್ಲಿ ಮಾತಾಡುತ್ತಾ ನನಗೆ ತಿಳಿದವರು ಈ ರಸ್ತೆಯಲ್ಲಿ ಸಿಕ್ಕಿ ಹತ್ತುತ್ತಾರೆ ಎಂಬುದನ್ನು ಅವನಿಗೆ ಸೂಚ್ಯವಾಗಿ ಹೇಳುತ್ತೇನೆ. ನಂತರ ಅವನ ಜೊತೆ ಮಾತನಾಡಲಾರಂಭಿಸುತ್ತೇನೆ. ಅವನ ಜೊತೆ ಮಾತಾನಾಡುತ್ತಾ ಒಂದು ರೀತಿಯ ಅತ್ಮೀಯ ವಾತವರಣ ನಿರ್ಮಿಸುತ್ತೇನೆ ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಜಾರಿಕೆಯ ಮಾತಾಗಲಿ , ವೈಯುಕ್ತಿಕ ವಿಷಯ ವಾಗಲಿ ನುಸುಳದಂತೆ ಎಚ್ಚರ ವಹಿಸುತ್ತೇನೆ.
ತನ್ನ ಬಟ್ಟೆ ಹಾಗೂ ತನ್ನ ನಡುವಳಿಕೆಯ ಮೇಲೆ ಗಮನ(ಎಚ್ಚರ ) ವಿರಬೇಕು. ಯಾವುದೇ ಕಾರಣಕೂ ತನ್ನ ಉಡುಪಿನಿಂದ ಅಂಗಾಂಗ ಪ್ರದರ್ಶನವಾಗಬಾರದು (ಯಾವುದೇ ಉಡುಪು ಧರಿಸಿದರೂ). ಹಾಗೂ ಎಷ್ಟೆ ಮಾತನಾಡಿದರೂ ದೈಹಿಕ ಸ್ಪರ್ಶವನ್ನು ಕಡಿಮೆ ಮಾಡಬೇಕು. (ಹೆಂಗಸರು ತಮ್ಮ ಗೆಳತಿಯರಂತೆ ತಮ್ಮ ಗೆಳೆಯರ ಮೇಲೂ ಕೈ ಹಾಕಿ ನಡೆಯುವುದನ್ನು ನಾನು ನೋಡಿದ್ದೇನೆ).
ಸಣ್ಣ ಪುಟ್ಟ ಸಹಾಯ ಡ್ರಾಪ್ ಮಾಡು ಕಾಫಿ ಕೊಡಿಸು. ತೆಗೆದುಕೊಂಡು ಬಾ ಎಂಬ ತಾವೆ ಮಾಡಬಹುದಾದಂತಹ ಕೆಲಸಗಳಿಗೆ ಗಂಡಸರ ಸಹಾಯ ಪಡೆಯುವುದು ತಪ್ಪು

ಇದನ್ನೆಲ್ಲಾ ಮಾಡಿದರೆ ಅತ್ಯಾಚಾರ ಎನ್ನುವುದೇ ಇಲ್ಲವಾಗುತ್ತವೆ ಎಂಬುದು ಸುಳ್ಳು
ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು. ಅದನ್ನು ಮೂಡಿಸುವ ಕೆಲಸ ಆಗಬೇಕು ಅದು ಹೆಂಗಸರಿಂದ (ನಮ್ಮಿಂದಲೇ) ಆಗುವ ಕೆಲಸ

ಚಿತ್ರ ಕೃಪೆ : ಫ್ರೀ ವೆಬ್ಸ್

8 ಟಿಪ್ಪಣಿಗಳು Post a comment
 1. ಫೆಬ್ರ 24 2011

  “ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು. ಅದನ್ನು ಮೂಡಿಸುವ ಕೆಲಸ ಆಗಬೇಕು ಅದು ಹೆಂಗಸರಿಂದ (ನಮ್ಮಿಂದಲೇ) ಆಗುವ ಕೆಲಸ”

  100% CORRECT.

  ಉತ್ತರ
 2. ಫೆಬ್ರ 24 2011

  nimma lekana a ritiya manasiruva ella purusarige heli madisidantide intavara bagge echharavirali

  ಉತ್ತರ
 3. ಫೆಬ್ರ 24 2011

  ರೂಪಾ ಮೇಡಂ ನಿಮ್ಮ ಲೇಖನದ ಕೆಲವು ಸಾಲುಗಳ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ.
  <<<<<<<
  ಹೆಣ್ಣಿನ ಉಡುಪು
  ಖಂಡಿತಾ ಇದು ಸತ್ಯ.
  ಈಗಿನ ಫ್ಯಾಶನ್ ಕಡಿಮೆ ಬಟ್ಟೆ ಹಾಕುವುದು. ಅದು ನಿಜ . ನಾನೂ ಒಪ್ಪುತ್ತೇನೆ. ಅದು ಎಲ್ಲಿವರೆಗೆ?
  ನಾವು ಸಮಾಜದಲ್ಲಿ ಬದುಕುತ್ತಿದ್ದಾಗ ಸಮಾಜದ ಕಟ್ಟುಪಾಡುಗಳು ಅತಿ ಮುಖ್ಯ. ಅದನ್ನು ಮೀರಿದವಳು, ’ಅಂತಹವಳು’ ಎಂದು ಬ್ರಾಂಡ್ ಆಗುವುದು ನಿಜ. ಅಂತಹವರು ಗಂಡನ್ನು ಪ್ರಚೋದಿಸುವುದೂ ನಿಜ >>>>>>>>

  ಈ ಮೇಲಿನ ಸಾಲುಗಳು ಸಾಮಾನ್ಯ ಎಂಬಂತೆ ಚಾಲ್ತಿಯಲ್ಲಿವೆ. ಆದರೆ ಇಂದು ಅತ್ಯಾಚಾರಕ್ಕೊಳಗಾಗುವವರು ಕೇವಲ್ ನೀವು ಹೇಳುವ ಮಾಡ್ ಗಲ್ಸ್ ಮಾತ್ರವಲ್ಲ. ನಾಕಾರು ವರ್ಷದ ಹಸುಳೆಗಳು, ೬೦ ಮೀರಿದ ವಯಸ್ಕರು ಸೇರಿದ್ದಾರೆ. ಇವರೆಲ್ಲ ನೀವು ಹೇಳುವ ಹಾಗೆ ಸಾಮಾನ್ಯ ವಸ್ತ್ರವನ್ನೇ ಧರಿಸುವವರು. ಆದರೆ ಅವರು ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಉಡುಪುಗಳು ಪ್ರಚೋದಕವಿರಬಹುದು. ಆದರೆ ಅತ್ಯಾಚಾರವನ್ನು ಪ್ರೊತ್ಸಾಹಿಸುವುದಿಲ್ಲ. ಹಾಗೆ ಹೇಳಿದರೆ ಇಂಥ ಉಡುಪುಗಳನ್ನು ನೋಡಿದ ಎಲ್ಲ ಗಂಡಸರು ಅತ್ಯಾಚಾರಿಗಳಾಗಿದರಬೇಕಿತ್ತು. ಇದರರ್ಥ ಇದೊಂದು ವ್ಯಕ್ತಿಯ ಮನೋ ದೌರ್ಬಲ್ಯಕ್ಕೆ ಸಂಬಂಧಿಸಿದ್ದು. ಯಾವಾಗ ಮನುಷ್ಯ ಅತ್ಯಂತ ದುರ್ಬಲನಾಗುತ್ತಾನೋ ಆಗ ಇಂಥ ಕೃತ್ಯಗಳ ಮೂಲಕ ತನ್ನ ದುರ್ಬಲತೆಯನ್ನು ಮುಚ್ಛಿಕೊಳ್ಳಬಯಸುತ್ತಾನೆ.
  ನಿಮ್ಮ ಈ ಮಾತು ಭಾರಿ ಜನಪ್ರಿಯವಾದ ಮಿಥ್.

  ಉತ್ತರ
 4. Narendra Kumar.S.S
  ಮಾರ್ಚ್ 2 2011

  > ಈ ಮೇಲಿನ ಸಾಲುಗಳು ಸಾಮಾನ್ಯ ಎಂಬಂತೆ ಚಾಲ್ತಿಯಲ್ಲಿವೆ. ಆದರೆ ಇಂದು ಅತ್ಯಾಚಾರಕ್ಕೊಳಗಾಗುವವರು ಕೇವಲ್ ನೀವು ಹೇಳುವ
  > ಮಾಡ್ ಗಲ್ಸ್ ಮಾತ್ರವಲ್ಲ. ನಾಕಾರು ವರ್ಷದ ಹಸುಳೆಗಳು, ೬೦ ಮೀರಿದ ವಯಸ್ಕರು ಸೇರಿದ್ದಾರೆ. ಇವರೆಲ್ಲ ನೀವು ಹೇಳುವ ಹಾಗೆ
  > ಸಾಮಾನ್ಯ ವಸ್ತ್ರವನ್ನೇ ಧರಿಸುವವರು.
  ಅಂಗಾಂಗ ಪ್ರದರ್ಶನ ತೋರುವಂತಿರುವ ವಸ್ತ್ರ ಧರಿಸುವವರೇ ಅತ್ಯಾಚಾರಕ್ಕೊಳಗಾಗದಿರಬಹುದು.
  ಆದರೆ, ಆ ರೀತಿಯ ವಸ್ತ್ರವನ್ನು ಧರಿಸುವುದರಿಂದ ಪುರುಷನು ಪ್ರಚೋದನೆಗೊಳಗಾಗುವುದಂತೂ ನಿಜ.
  ಈ ರೀತಿ ಪ್ರಚೋದನೆಗೊಳಗಾಗುವವನು ಅತ್ಯಾಚಾರಿಯಾಗಲೇಬೇಕು ಎಂದೇನಿಲ್ಲ ಅಥವಾ ಆ ಕೂಡಲೇ ಅತ್ಯಾಚಾರ ನಡೆಸಬೇಕೆಂದೇನಿಲ್ಲ.
  ಆದರೆ, ಈ ರೀತಿಯ ದೃಶ್ಯಗಳು ಪದೇಪದೇ ಕಣ್ಣಿಗೆ ಕಾಣುತ್ತಿದ್ದರೆ, ಕ್ರಮೇಣ ಅವನ ಉದ್ರೇಕ ಹೆಚ್ಚುತ್ತದೆ.
  ಮತ್ತು ಕಡೆಗೆ ಆತನು, ತನಗೆ ಸುಲಭದಲ್ಲಿ ಸಿಗುವ ದುರ್ಬಲ ವ್ಯಕ್ತಿಯನ್ನು ಆಕ್ರಮಿಸುತ್ತಾನೆ.
  ಆ ದುರ್ಬಲ ವ್ಯಕ್ತಿ ಒಂದು ಮಗುವೇ ಆಗಿರಬಹುದು ಅಥವಾ ೬೦ ವಯಸ್ಸು ಮೀರಿದವರೂ ಆಗಿರಬಹುದು.

  ನೀವು ಈ ಕಡೆಯ ಪರಿಣಾಮವನ್ನು ಮಾತ್ರ ನೋಡಿ, ಅದಕ್ಕೆ ಕಾರಣ ಹಿಂದೆ ಆದ ಪ್ರಚೋದನೆಗಳಲ್ಲ ಎಂಬ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ. ಪ್ರತಿಯೊಂದು ಪರಿಣಾಮಕ್ಕೂ ಕಾರಣವಿರಲೇಬೇಕು. ಅತ್ಯಾಚಾರಕ್ಕೆ ಅನೇಕ ಕಾರಣಗಳಿರಬಹುದು – ಅವುಗಳಲ್ಲಿ ಪ್ರಮುಖ ಕಾರಣ ಮಹಿಳೆಯರ ಸಾಮೀಪ್ಯ ಸಿಗುವುದು, ಅಂಗಾಂಗ ಪ್ರದರ್ಶನ ಮಾಡುವಂತಹ ಉಡುಗೆಯನ್ನು ಮಹಿಳೆಯರು ತೊಡುವುದು ಮುಖ್ಯವಾದವುಗಳು ಎಂದು ನನ್ನ ಅನಿಸಿಕೆ.

  ಉತ್ತರ
 5. Harsha
  ಮಾರ್ಚ್ 20 2011

  ನರೇಂದ್ರ, ನಿಮ್ಮ ವಾದದ ಪ್ರಕಾರ ಪಾಶ್ಚಾತ್ಯ ದೇಶಗಳಲ್ಲಿ ರೇಪ್-ಗೆ ಒಳಗಾಗೋ ಮಹಿಳೆಯರ ಸಂಖ್ಯೆ ತುಂಬಾ ಜಾಸ್ತಿ ಇರಬೇಕಿತ್ತು. ಒಮ್ಮೆ ಗೂಗಲ್ ಮಾಡಿ ನೋಡಿ. ಡ್ರೆಸ್ ಬಗ್ಗೆ ಪೂರ್ತಿ ಬಿಂದಾಸ್ ಆಗಿರೋ ಅಷ್ಟೂ ಪಾಶ್ಚಾತ್ಯ ದೇಶಗಳನ್ನ ಸೇರ್ಸಿ ಎಷ್ಟು ರೇಪ್ ಕೇಸ್-ಗಳು ಆಗುತ್ತೆ, ಬರೀ ಭಾರತದಲ್ಲಿ ಎಷ್ಟು ಆಗುತ್ತೆ ಅಂತ. ಇನ್ನೊಂದು ವಿಷಯ, ಪಾಶ್ಚಾತ್ಯ ದೇಶಗಳಲ್ಲಿ ಆಗುವ ಪ್ರತಿಯೋಂದ ಅತ್ಯಾಚಾರ ಪ್ರಕರಣಗಳು ರಿಪೋರ್ಟ್ ಆಗುತ್ತೆ. ನಮ್ಮ ದೇಶದಲ್ಲಿ ನನ್ನ ಅಂದಾಜಿನ ಪ್ರಕಾರ ಶೇಕಡಾ ೫೦-ರಷ್ಟು ಕೇಸ್-ಗಳು ಹಾಗೆ ಮುಚ್ಚಿ ಹೋಗುತ್ತೆ. ಸಾತ್ವಿಕ್ ಹೇಳಿದ ಪ್ರಕಾರ ಇದೊಂದು ಅತ್ಯಂತ ಜನಪ್ರಿಯ myth.

  ಉತ್ತರ
 6. ssnkumar
  ಮಾರ್ಚ್ 20 2011

  ಪಾಶ್ಚಾತ್ಯ ದೇಶಗಳಲ್ಲಿ ’ಡೇಟಿಂಗ್’ ಸಂಸ್ಕೃತಿ ಇದೆ. ಹದಿಹರೆಯದವರು ತಮಗಿಷ್ಟವಾದವರೊಡನೆ ಮುಕ್ತವಾಗಿ ಬೆರೆಯುತ್ತಾರೆ. (೧೬ ವರ್ಷಕ್ಕೆ ಮೊದಲೇ ತಾಯಂದಿರಾಗುವವರು ಬಹಳಷ್ಟು ಹೆಣ್ಣುಮಕ್ಕಳು ಅಲ್ಲಿದ್ದಾರೆ – ಅನೇಕ ಹೆಣ್ಣುಮಕ್ಕಳ ವಸತಿಶಾಲೆಗಳ ಜೊತೆ ಶಿಶುವಿಹಾರಗಳನ್ನೂ ತೆರೆಯುತ್ತಿದ್ದಾರೆ) ಅಲ್ಲಿ ಈ ರೀತಿ ’ಡೇಟಿಂಗ್’ಗೆ ಹೋಗದವರು ವಿರಳ. ಇದು ಅವರ ಕಾಮದ ಕುರಿತಾದ ಕುತೂಹಲವನ್ನು ತಣಿಸುತ್ತದೆ.
  ಕಾಮದ ಹಸಿವೆಯೂ ಕರಗುತ್ತದೆ. ೧೮ ವರ್ಷವಾಗದವರು ನಡೆಸುವ ಲೈಂಗಿಕ ಕ್ರಿಯೆಯನ್ನು ’ರೇಪ್’ ಎಂದೇ ಪರಿಗಣಿಸಬಹುದಲ್ಲವೇ?
  ಈ ಕಾರಣಗಳಿಂದ ಅವರಲ್ಲಿ ಅತ್ಯಾಚಾರ ಪ್ರಕರಣಗಳು ಕಡಿಮೆ. ಅವರಲ್ಲೂ ಹೊರಬರದಿರುವ ಪ್ರಕರಣಗಳು ಸಾಕಷ್ಟಿವೆ.
  ಅಲ್ಲಿನ ಸಮಾಜವೇ ಕಾಮದ ಈ ವಿಕೃತ ರೂಪಕ್ಕೆ ಸಮ್ಮತಿ ಸೂಚಿಸಿದ ಮೇಲೆ, ಅತ್ಯಾಚಾರದ ಆವಶ್ಯಕತೆಯೇ ಇರುವುದಿಲ್ಲವಲ್ಲ?

  ಉತ್ತರ
 7. ಮಹೇಶ ಪ್ರಸಾದ ನೀರ್ಕಜೆ
  ಮಾರ್ಚ್ 21 2011

  ಎಲ್ಲಕ್ಕಿಂತ ದೊಡ್ಡ ಕಾರಣ ಕಾನೂನಿನ ಭಯ ಇಲ್ಲದಿರುವುದು ಅನಿಸುತ್ತದೆ. ದುರುಳರು ದೇಶ ಆಳುತ್ತಿರುವಾಗ ಅಬಲೆ ಹೆಣ್ಣಿನ (ಹೆಣ್ಣು ಅಬಲೆ ಎಂದಿದ್ದಲ್ಲ) ಪರಿಸ್ಥಿತಿ ಶೋಚನೀಯವಾಗದೇ ಇರದು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments