ಡಾಲರ್ ಲೆಕ್ಕಕ್ಕೆ : ಕನ್ನಡ ಪಕ್ಕಕ್ಕೆ
– ರಾಕೇಶ್ ಶೆಟ್ಟಿ
ಬೆಳಗಾವಿಯಲ್ಲಿ ನಡೆಯೋ ವಿಶ್ವ ಸಮ್ಮೇಳನದ ಉದ್ಘಾಟನೆಗಾಗಿ ಇನ್ಫೋಸಿಸ್ ನಾರಾಯಣ ಮೂರ್ತಿಯವರನ್ನ ಸರ್ಕಾರ ಆಹ್ವಾನಿಸಿದ್ದು, ಮತ್ತದಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಆಕ್ಷೇಪಿಸಿ ಪತ್ರ ಬರೆದಿದ್ದು ಈದೀಗ ಚರ್ಚೆಗೆ ಗ್ರಾಸವಾಗಿದೆ.ಯಾರೇ ಕೂಗಾಡಲಿ ಊರೇ ಹೊರಾಡಲಿ ’ಇನ್ಫಿ ನಾಣಿ’ಯವ್ರೆ ಉದ್ಘಾಟನೆ ಮಾಡ್ತಾರೆ ಅಂತ ಯಡ್ಯೂರಪ್ಪನವ್ರು ಹೇಳಿಯಾಗಿದೆ.ಅದು ಬದಿಗಿರಲಿ.ಬರಗೂರರ ಪತ್ರಕ್ಕೆ ಪ್ರತಿವಾದವಾಗಿ ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹ “ನಾರಾಯಣ ಮೂರ್ತಿ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟದ್ದು ಕನ್ನಡದ ಕೆಲಸವಲ್ಲವೇ?ಕೇವಲ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವೇ? ” ಅಂತ ಕೇಳಿದ್ದಾರೆ.ಮುಕ್ತ ಚರ್ಚೆಗೆ ಆಹ್ವಾನವನ್ನು ನೀಡಿದ್ದಾರೆ.ಅದನ್ನೆಲ್ಲ ಓದುವಾಗ ಬಹಳಷ್ಟು ಜನ ಬರಗೂರರಿಗೆನು ಹಕ್ಕಿದೆ?ಸಾಹಿತಿಗಳೇ ಏಕೆ ಬೇಕು ಅಂದಿದ್ದಾರೆ?
ನಿಜ.ಕೇವಲ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವಲ್ಲ ಅನ್ನುವ ಪ್ರತಾಪ್ ಮಾತು ಒಪ್ಪಲೆಬೇಕಾದದ್ದು.ಆದರೆ ಬೆಂಗಳೂರಿನ ಭಾಗ್ಯೋದಯಕ್ಕೂ ಇನ್ಫೋಸಿಸ್ ನಾರಾಯಣ ಮೂರ್ತಿಯವರೆ ಕಾರಣ ಅನ್ನುವ ರೀತಿಯ ಮಾತುಗಳು ಸಹ್ಯವೇ?ಸುಮ್ಮನೆ ಕನ್ನಡಿಗರಿಗೆ ಕೆಲಸ ಕೊಟ್ರೂ,ಜೀವನ ಕೊಟ್ರೂ ಅಂತ ಅಬ್ಬರಿಸಿದರಾಯಿತೆ.ಕನ್ನಡಿಗರಿಗೆ ಕೆಲಸ ಕೊಟ್ರೂ ಕೊಟ್ರೂ ಅನ್ನೋವ್ರು ಒಮ್ಮೆ ಹೋಗಿ ಮೂರ್ತಿಯವರ ಕಂಪೆನಿಯಲ್ಲಿ ಎಷ್ಟು ಪ್ರತಿಶತ ಜನ ಕನ್ನಡಿಗರಿದ್ದಾರೆ?ಅಲ್ಲಿರುವ ಕನ್ನಡಿಗರಾದರು ಯಾವ ಡೆಸಿಗ್ನೇಷನ್ ಹೊಂದಿದ್ದಾರೆ? ಅಸಲಿಗೆ ಅಲ್ಲಿನ ಕನ್ನಡಿಗ ಉದ್ಯೋಗಿಗಳ ಪಾಡೇನಿದೆ ಅನ್ನುವುದಾದ್ರು ಕೇಳಿ ನೋಡಿ.ಅಲ್ಲಿ ಯಾರ ಕಾರು-ಬಾರು ನಡೆಯುತ್ತಿದೆ ಅನ್ನುವುದು ತಿಳಿಯಬಹುದು. ಇವೆಲ್ಲದರ ಸತ್ಯ ದರ್ಶನವಾದರೆ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟರು ಅನ್ನುವಂತೆ ಮಾತಾಡಿರುವುದು ಸುಳ್ಳೇ ಸುಳ್ಳು ಅನ್ನುವುದು ಗೊತ್ತಾಗುತ್ತದೆ.
ಹಿಂದೊಮ್ಮೆ ಕನ್ನಡಿಗರಿಗೆ ಕೆಲಸದಲ್ಲಿ ಆದ್ಯತೆ ಕೊಡಿ ಅಂದಾಗ ನಮಗೊಂದು ಮಾನದಂಡವಿದೆ,ಪ್ರತಿಭಾವಂತರೇ (?) ಬೇಕು ಅಂದಿದ್ರು ಮೂರ್ತಿಯವರು,ಅದಿಕ್ಕೆ ದೇಶದ ಮೂಲೆ ಮೂಲೆಯಿಂದ ಜನ ಬೇಕು ಅಂದಿದ್ರು.ಐ.ಟಿ ಕಂಪೆನಿಯಲ್ಲಿರೋ ಜನರಿಗೆ ಬಹುಷಃ ಹೊರಗಿನಿಂದ ಬಂದವರ ಬುದ್ದಿ ಮತ್ತೆ ಎಂತದ್ದು ಅನ್ನುವುದು ಗೊತ್ತಿರುತ್ತದೆ.ಕಂಪೆನಿಯ ಕ್ಲೈಂಟ್ಗಳಿಗೆ ಅವರ ಕೆಲಸವಾದರೆ ಆಯಿತು,ಅವರೇನು ನಮಗೆ ಬರಿ ಕನ್ನಡಿಗರೇ ಇರುವ ಕಂಪೆನಿ ಬೇಡ ಅಂತಾರಾ? ಅಷ್ಟಕ್ಕೂ ಬರಿ ಕನ್ನಡಿಗರನ್ನೇ ತಗೊಳ್ಳಿ ಅಂತೇನು ಕೇಳಿರ್ಲಿಲ್ಲ ಅಲ್ವಾ? ಇನ್ನು ವಾಕ್-ಇನ್ಗಳನ್ನ ಮಾಡಲು ಹೊರ ರಾಜ್ಯಕ್ಕೆ ಹೋಗಬೇಕಾ? ನಮ್ಮ ರಾಜ್ಯದಲ್ಲೇ ನಾಯಿ ಕೊಡೆಗಳಂತೆ ಇಂಜಿನೀಯರಿಂಗ್ ಕಾಲೇಜುಗಳಿಲ್ವಾ? ನಮ್ಮ ಕಾಲೇಜುಗಳಲ್ಲಿ ಪ್ರತಿಭಾವಂತರಿಲ್ವಾ? ಇಲ್ಲೆ ಕೆಲಸಕ್ಕೊಸ್ಕರ ಅಲೆಯುವ ಜನರಿರೊವಾಗ ಅವರನ್ನೆಲ್ಲ ಬಿಟ್ಟು, ಅನ್ಯ ರಾಜ್ಯದಿಂದ ತುಂಬಿಕೊಂಡು ಬರೋದು ಯಾವ್ ಸೀಮೆ ಉದ್ಯೋಗ ನೀಡಿದ ಹಾಗೆ?
ಕಾಲೇಜಿನಿಂದ ಹೊರ ಬಂದು ಬೆಂಗಳೂರಿನಲ್ಲಿ ಐ.ಟಿ ಕಂಪೆನಿಯೊಂದರಲ್ಲಿ ಅನ್ಯಭಾಷಿಕರ ಪೈಪೋಟಿ ಮತ್ತೆ ಅವ್ರ networking ನಡುವೆ ನಿಂತು ಬಡಿದಾಡಿ ಕೆಲಸ ಪಡೆಯುವುದೆಷ್ಟು ಕಷ್ಟ ಅನ್ನುವುದು ಪಡೆದವರಿಗಷ್ಟೆ ಗೊತ್ತು.ಸುಖಾ ಸುಮ್ಮನೆ ಇಂದು ಎಲ್ಲ ಮಕ್ಕಳು ಬೆಂಗಳೂರಿಗೆ ಬರುತಿದ್ದಾರೆ ಅಂತೇಳಿದರೆ ಸಾಲದು, ಬಂದು ಅವರು ಇಲ್ಲಿ ಪಡಬಾರದ ಪಾಡು ಪಡುವಾಗಲೇ,ಬೇರೆ ರಾಜ್ಯದಿಂದ ಬಂದವ ಅಷ್ಟರಲ್ಲಾಗಲೇ ಯಾವ್ದೋ ಕನ್ನಡಿಗನ ಕಂಪೆನಿಯೊಳಗೆ ಸಲಿಸಾಗಿ ನುಗ್ಗಿರುತ್ತಾನೆ ಇವೆಲ್ಲ ಅರ್ಥ ಆಗುತ್ತಾ? ಬೆಂಗಳೂರಲ್ಲಿ ಅದು ಸರಿ ಇಲ್ಲ ಇದು ಸರಿ ಇಲ್ಲ ಬೆಂಗಳೂರಿಂದ ಗಂಟು ಮೂಟೆ ಕಟ್ತೀನಿ ಅನ್ನುವಂತೆ ಯಾರು ಮಾತಾಡಿದ್ದರು ಅನ್ನುವುದು ಮರೆತು ಹೋಗಿದೆಯೇ? ಹಾಗೆ ನೋಡ ಹೋದರೆ ಅವರು ಸಂಸ್ಥೆ ಕಟ್ಟಿದ್ದು ವ್ಯಾವಹಾರಿಕ ಉದ್ದೇಶಕ್ಕಾಗಿಯಲ್ಲದೇ? ಅದನ್ನ ಕನ್ನಡೀಗರ ಉದ್ದಾರಕ್ಕೆ ಅನ್ನುವ ಮಾತುಗಳೆಲ್ಲ ಕ್ಲೀಷೆಯಲ್ಲದೆ ಮತ್ತಿನ್ನೆನು? ಬೆಂಗಳೂರನ್ನ ಕೇಂದ್ರಾಡಳಿತ ಪ್ರದೇಶ ಮಾಡಿ ಅಂದವ್ರಲ್ಲಿ ತಮ್ಗೆ ಡಾಲರ ಲೆಕ್ಕ ಕಾಣುತ್ತೋ? ಇಲ್ಲ ಕನ್ನಡ ಪ್ರೇಮವೋ?
ಸಾಹಿತಿಗಳೀಗಷ್ಟೆ ಸೀಮಿತವಲ್ಲ ಈ ಸಮ್ಮೇಳನ ಅಂತ ಕೆಲವರು ಹೇಳುತಿದ್ದಾರೆ, ಅಸಲಿಗೆ ಬರಗೂರರ ಪತ್ರದಲ್ಲಿ ಆ ಅಂಶವಿತ್ತಾ? ಇಲ್ಲದಿದ್ದರೆ ಆ ಮಾತನ್ನ ಸೇರಿಸಿ ಏಕೆ ಚರ್ಚೆಯ ಹಾದಿ ತಪ್ಪಿಸುತಿದ್ದಿರಿ? ಅವರೇನು ಕತೆ,ಕವನ,ಪುಸ್ತಕ,ವಿಮರ್ಶೆ ಏನೇನು ಬರ್ಯೋದು ಬೇಡ ಸ್ವಾಮೀ, ಅವರಿಗೆ ಅರಿವಿದ್ದ,ಮಾಡಬಹುದಾಗಿದ್ದ ಕೆಲಸವೆಂದರೆ ಕನ್ನಡ ತಂತ್ರಾಂಶ. ಹೀಗೆ ಅವರ ಕಾರ್ಯವ್ಯಾಪ್ತಿಯೊಳಗೆ ಏನಾದ್ರು ಮಾಡ್ಬಹುದಿತ್ತಲ್ವಾ? ಅದನ್ನ ಮಾಡಿದ್ದಾರಾ? ಅಂತ ಐ.ಟಿ ದಿಗ್ಗಜರ ಕಂಪೆನಿಯಿಂದ ಕನ್ನಡ ತಂತ್ರಾಂಶ ಕ್ಷೇತ್ರಕ್ಕೆನಾದರು ಕೊಡುಗೆ ಸಿಕ್ಕಿದೆಯಾ? ಸಾಹಿತ್ಯ ಕೃಷಿ ಬೇಡ ಸರ್, ಒಂದು ಫಾಂಟು,ಅಥವ ಒಂದು ಉಪಯುಕ್ತ ತಂತ್ರಾಂಶ ಕೇಳೋದು ತಪ್ಪಾ?ಸಮಾಜ ಮುಖಿಯಾದ ಕೆಲಸವಾಗುತ್ತಿದೆ ಮಾಡುತಿದ್ದಾರೆ ಆ ಕಾರಣಕ್ಕೆ ಅವರೇ ಇರಲಿ ಅನ್ನುವವರಿಗೆ ತಿಳಿದಿರಲಿ.ಅದನ್ನ ಇಂದು ಎಲ್ಲ ಕಂಪೆನಿಗಳು ಮಾಡುತ್ತಿವೆ.ಪ್ರತಿ ವಾರಾಂತ್ಯ ಕೆಲವರು ಅದೇ ಕಾರ್ಯಕ್ಕಾಗಿ ಹೊರಟು ನಿಲ್ಲುತ್ತಾರೆ ಅನ್ನುವುದು ನೆನಪಿರಲಿ.ಅಂತದನ್ನ ಕೇವಲ ‘ಅವರ’ ಸಾಧನೆ ಅನ್ನುವಂತೆ ಬಿಂಬಿಸಬೇಡಿ.ಹಾಗೆ ನೋಡಿದ್ರೆ ಇನ್ಫೋಸಿಸ್ ನಾರಾಯಣ ಮೂರ್ತಿಯವರಿಗಿಂತ ಈ ವಿಷಯದಲ್ಲಿ ವಿಪ್ರೋ ಅಜೀಂ ಪ್ರೇಂಜಿ ಅವರ ಬಳಗವೇ ಹೆಚ್ಚು ಕೆಲಸ ಮಾಡಿದೆ.
ಯಾವುದೇ ಹಿನ್ನೆಲೆಯಿಲ್ಲದೆ ಬಂದು ತನ್ನ ಕರ್ತೃತ್ವಶಕ್ತಿಯ ಬಲದಿಂದ ಒಂದು ದೊಡ್ಡ ಸಂಸ್ಥೆಯೊದನ್ನ ಕಟ್ಟಿದ ನಾರಾಯಣ ಮೂರ್ತಿಯವರು ನಿಜಕ್ಕೂ ನಮಗೆ, ನಮ್ಮ ಮುಂದಿನ ಪೀಳಿಗೆಗೆ ಕೆಲವೊಂದು ವಿಷಯಗಳಲ್ಲಿ ಆದರ್ಶ ವ್ಯಕ್ತಿಯೇ.ಆದರೆ ಅವರ ನಿಜವಾದ ಸಾಧನೆಯ ಬಗ್ಗೆ ಮಾತಾಡುವುದನ್ನ ಬಿಟ್ಟು, ಬೆಂಗಳೂರಿನ ಭಾಗ್ಯದ ಬಾಗಿಲು ತೆಗೆಯಲು, ಒಬಾಮ ಬಾಯಿಯಲ್ಲಿ ಬೆಂಗಳೂರ್ಡ್ ಅನ್ನುವ ಮಾತು ಬರಲು, ಎಲ್ಲರೂ ಬೆಂಗಳೂರಿಗೆ ಬರಲು ಕೇವಲ ಅವರೇ ಕಾರಣ ಅನ್ನುವು ಅತಿರಂಜಿತ ಮಾತುಗಳು ಅವ್ರ ಸಾಧನೆಯನ್ನೇ ಪಕ್ಕಕ್ಕೆ ತಳ್ಳುತ್ತವಷ್ಟೇ!
ಅಸಲಿಗೆ ಬರಗೂರ ಆಕ್ಷೇಪಣೆಯಲ್ಲಿ ತಪ್ಪೇನಿದೆ?ತೆರಿಗೆ ವಂಚನೆ,ಸಾಹಿತ್ಯ ಕ್ಷೇತ್ರ ಎಲ್ಲ ಪಕ್ಕಕ್ಕಿಟ್ಟು ನೋಡಿದರು ಕನ್ನಡ ಭಾಷೆಗೆ,ಕರ್ನಾಟಕಕ್ಕೆ ನಾರಾಯಣ ಮೂರ್ತಿಯವರ ಕೊಡುಗೆಯೇನು? ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕನ್ನಡ ಮಾತಡುವುದಿಲ್ಲ ಅನ್ನುವವರಿಂದ ಯಾವ ಕನ್ನಡ ಪ್ರೇಮದ ನಿರೀಕ್ಷೆಯಿಟ್ಟುಕೊಳ್ಳೋಣ? ನಾಮೂ ಅವರ ಎಪಿಸೋಡ್ ಸಾಲಲಿಲ್ಲ ಅಂತ ಐಶ್ವರ್ಯ ರೈ ಬೇರೆ ಬೇಕಿತ್ತಾ?,ಅಲ್ಲ ಇವ್ರೆಲ್ಲ ಯಾರ್ರಿ? ಆಕೆಗೇನು ಗೊತ್ತು ಕನ್ನಡಿಗರ ಪಾಡು?ಆಕೆಗೆ ಕನ್ನಡವಾದ್ರು ಬರುತ್ತಾ?
ಇದೆಲ್ಲ ಹಾಳಾಗಿ ಹೋಗ್ಲಿ,ನಾರಾಯಣ ಮೂರ್ತಿಯವ್ರೆ ಬೇಕು ಅಂದ್ರೆ ಅವ್ರ ಕೈಯಲ್ಲೆ ಉದ್ಘಾಟನೆ ಮಾಡಿಸಿಕೊಳ್ಳಿ,ಐಶ್ವರ್ಯ ರೈನ ನೋಡ್ಲೆಬೇಕು ಅಂದ್ರೆ ನೋಡ್ಕೊಳ್ಳಿ.ಆದ್ರೆ ನೆನಪಿಡಿ, ವಿಶ್ವ ಕನ್ನಡ ಸಮ್ಮೇಳನ ಅನ್ನುವುದು ಕೇವಲ ಜಾತ್ರೆಯಲ್ಲ,ಕೋಟಿ ಕೋಟಿ ಹಣ ಸುರಿಯೋ ಅಂತ ಕಾರ್ಯಕ್ರಮಗಳಿಂದ ಕನ್ನಡದ ಮಕ್ಕಳಿಗೆ,ಕನ್ನಡ ಭಾಷೆಗೊಂದು ಹೊಸ ದಿಕ್ಕು,ಚೈತನ್ಯ ಮೂಡಿಸುವಂತಿರಬೇಕು.ನಂಜುಂಡಪ್ಪ ವರದಿ,ಸರೋಜಿನಿ ಮಹೀಷಿ ವರದಿಯ ಜಾರಿಯಾಗದೆ ಧೂಳು ತಿನ್ನುತ್ತಾ ಕೂತಿದೆ,ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಲಿ (ಈ ವಿಷಯದಲ್ಲಿ ನಾಣಿ ಅವ್ರ ನಿಲುವು ಗೊತ್ತಿದೆ ಅಲ್ವಾ?) ಅನ್ನೋ ಕೂಗು ಸತ್ತಿದೆ.ಸತ್ತಂತಿಹ ನಮ್ಮ ರಾಜಕಾರಣಿಗಳನ್ನ ಇಂತ ವಿಷಯಗಳ ಮೂಲಕ ಬಡಿದೆಬ್ಬಿಸುವ ಕೆಲಸಗಳು ಈ ಸಮ್ಮೇಳನದಲ್ಲಾಗಲಿ.
ನಾರಾಯಣ ಮೂರ್ತಿಯಾದರು ಗೆಲ್ಲಲಿ,ಬರಗೂರರೇ ಗೆಲ್ಲಲಿ,ಇಲ್ಲ ಯಡ್ಯೂರಪ್ಪನವ್ರೇ ಗೆಲ್ಲಲಿ,ಆದರೆ ಕನ್ನಡಿಗ ಪ್ರತಿ ಬಾರಿ ಸೋತಂತೆ ಈ ಬಾರಿ ಸೋಲದಿರಲಿ.ಹಾಗೆ ಕಡೆಯದಾಗಿ ಪತ್ರಿಕೆಗಳಿಗೊಂದು ಕಿವಿ ಮಾತು, ತೀರ ಇಂತ ಚರ್ಚೆಯ ಬದಲು ಧೂಳು ತಿನ್ನುತ್ತ ಕೂತಿರೋ ವರದಿಗಳ ಬಗ್ಗೆ ಕುಂಭಕರ್ಣ ನಿದ್ರೆಯಲ್ಲಿರೋ ಸರ್ಕಾರವನ್ನ ತಿವಿಯುವಂತ ಮತ್ತು ಆ ಮೂಲಕ ಕನ್ನಡಿಗರಿಗೆ ನ್ಯಾಯ ದೊರಕಿಸುವ ಕೆಲಸವನ್ನಾದ್ರು ಮಾಡಿ.
Bahala spashta, sookta uttara. 🙂
ಭ್ರಷ್ಟಾಚಾರದ ಆಟಾಟೋಪ ಮುಗಿಲೆತ್ತರಕ್ಕೆ ತಲುಪಲು ಕಾರಣವಾಗಿರುವ ಈಗಿನ ಕೇಂದ್ರ ಸರಕಾರದ ಪ್ರಧಾನಿಯವರಾಗಲೀ, ವಿದೇಶೀ ಸೋನಿಯಾಳನ್ನಾಗಲೀ ಕರೆದು ಉದ್ಘಾಟನೆ ಮಾಡಿ ಅನ್ನುವುದಕ್ಕಿಂತ ಇದು ಎಷ್ಟೊ ಮೇಲು ಎಂದು ನನ್ನ ಅನಿಸಿಕೆ.
ಓರ್ವ ವ್ಯಕ್ತಿಯನ್ನು ಹೊಗಳಲೂ ಕಾರಣಗಳಿರುತ್ತವೆ.
ಹಾಗೆಯೇ ತೆಗಳಲೂ ಕಾರಣಗಳಿರುತ್ತವೆ.
ಯಾಕೆಂದರೆ ಪರಿಪೂರ್ಣರಾದ ಮಾನವರು ಸಿಗುವುದು ಕಷ್ಟ.ಹಾಗಾಗಿ, ನಾರಾಯಣ ಮೂರ್ತಿಯವರು ವಿಶ್ವ ಕನ್ನಡಿಗರ ಸಮ್ಮೇಳನದ
ಉದ್ಘಾಟನೆ ಮಾಡುವುದನ್ನು ವಿರೋಧಿಸಲು ಯಾರೆಷ್ಟೇ ಕಾರಣ ನೀಡಿದರೂ ನನ್ನಿಂದ ಒಪ್ಪಲಾಗುತ್ತಿಲ್ಲ.
ನಾವು ವ್ಯಕ್ತಿಯನ್ನು ಅಳೆಯಲು, ಅಳೆದು ನಿವಾಳಿಸಿ, ತ್ಯಜಿಸಿಬಿಡಲು ಬಳಸುವ ಮಾನದಂಡ ಏನು ಅನ್ನುವುದು ಸ್ಪಷ್ಟವಾಗಿರಬೇಕು.
ಕನ್ನಡಿಗರ ಸಮ್ಮೇಳನವನ್ನು ಯಾವೊಬ್ಬ ಸಾಧಕನಾದ ಕನ್ನಡಿಗ ಉದ್ಘಾಟಿಸಿದರೂ ಸ್ವಾಗತಿಸುತ್ತೇನೆ.
ನಾನು ಈ ಸಮ್ಮೇಳನವನ್ನು ಕನ್ನಡಿಗರ ಸಮ್ಮೇಳನ ಎಂದೇ ಕರೆಯಲು ಇಚ್ಛಿಸುತ್ತೇನೆ.
ಏಕೆಂದರೆ ಇದು ಭಾಷೆಯ ಸಮ್ಮೇಳನ ಏಕಾಗಬೇಕು ಅನ್ನುವುದೇ ಅರ್ಥವಾಗುತ್ತಿಲ್ಲ, ನನಗೆ.
ಕನ್ನಡ ಭಾಷೆಯನ್ನು ಬಳಸುವವರ ಸಮ್ಮೇಳನ ಏಕಾಗಬಾರದು?
ಅಲ್ಲಿ ಕನ್ನಡಿಗರು ಮೇಳೈಸಬೇಕು.
ಇನ್ನು ಸಮ್ಮೇಳನದ ಉದ್ದೇಶ ಮತ್ತು ಪರಿಣಾಮಗಳ ಬಗ್ಗೆ ನನಗೆ ಅನುಮಾನ ಇದೆ.
ವಿದೇಶೀಯರನ್ನು ಮದುವೆಯಾದವರಿಗೆ ಹುಟ್ಟಿದವರು, ವಿದೇಶೀ ಪ್ರಜೆಯಾಗಿದ್ದು, ವಿದೇಶೀ ಸಂಸ್ಥೆಯಲ್ಲಿ ಕೆಲಸಮಾಡಿಕೊಂಡು, ಗಗನಕ್ಕೆ ಹಾರಿದವರು ನಮಗೆ ಆಪ್ತರಾಗುತ್ತಾರೆ. ಅವರನ್ನು ಕರೆದು ಸನ್ಮಾನ ಮಾಡಿ ಪ್ರಶಸ್ತಿ ನೀಡುವ ಹಂಬಲ ವ್ಯಕ್ತಪಡಿಸುತ್ತೇವೆ.
ಕನ್ನಡಿಗನೋರ್ವ ವಿದೇಶೀ ಪ್ರಜೆಯಾಗಿ, ವಿದೇಶೀ ನೆಲದಲ್ಲಿ ಮಹಾಪೌರನಾದಾಗ ಆತನನ್ನು ಕರೆಸಿ, ಸಾಹಿತ್ಯ ಸಮ್ಮೇಳನದಲ್ಲಿ ಆತನ ಆಂಗ್ಲ ಮಿಶ್ರಿತ ಕನ್ನಡಕ್ಕೆ ಶಾಂತಚಿತ್ತರಾಗಿ ಕಿವಿಯಾಗುತ್ತೇವೆ.
ಆದರೆ, ನಮ್ಮದೇ ನೆಲದಲ್ಲಿ ಹುಟ್ಟಿ ಸಾಧನೆಗೈದವನ ಕೈಯಿಂದ ಒಂದು ಕಾರ್ಯಕ್ರಮದ ಉದ್ಘಾಟನೆ ಮಾಡಲು ಸರಕಾರ ಮುಂದಾದರೆ, ಆತನ ಪೂರ್ವಾಪರವನ್ನು ಜಾಲಾಡುತ್ತೇವೆ, ಬಟ್ಟ ಬಯಲಿನಲ್ಲಿ ನಗ್ನನನ್ನಾಗಿ ನಿಲ್ಲಿಸುವ ಪ್ರಯತ್ನ ಮಾಡುತ್ತೇವೆ. ಇದೇಕೆ ಹೀಗೆಂದು ಅರ್ಥವೇ ಆಗುತ್ತಿಲ್ಲ!
“ಓರ್ವ ವ್ಯಕ್ತಿಯನ್ನು ಹೊಗಳಲೂ ಕಾರಣಗಳಿರುತ್ತವೆ.
ಹಾಗೆಯೇ ತೆಗಳಲೂ ಕಾರಣಗಳಿರುತ್ತವೆ.”
>> ಸರಿಯಾಗಿ ಹೇಳಿದ್ರಿ ಹೆಗಡೆಯವರೇ,
ಇಲ್ಲಿ ಒಂದು ವಿಷಯ ಗಮನಿಸಬಹುದು, ನಾವು ಯಾವುದೇ ಉಪಯುಕ್ತ ವಿಷಯದ ಬಗ್ಗೆ ಇಸ್ಟೊಂದು ತಲೆ ಕೆಡಿಸ್ಕೊಂಡು ಚರ್ಚೆ ಮಾಡೋದಿಲ್ಲ !!! ನಮಗೆ ಇಂತಹ ಕೆಲಸಕ್ಕೆ ಬಾರದ ವಿಷಯದ ಬಗ್ಗೆ ಚರ್ಚೆ ಮಾಡೋದಂದ್ರೆ ಒಂಥರಾ ಖುಷಿ !!!! ಮೂರ್ತಿ ಯವರು ಮಾಡಿದ್ರೆ ನಮಗಾಗೋ ನಷ್ಟವೇನು? ಇನ್-ಡೈರೆಕ್ಟ್ ಆಗಿ ಲಾಭವೇ ಆಗಬಹುದು !!!!
ನನ್ನ ಅಭಿಪ್ರಾಯಾನೂ ಇದೇ, ಮೂರ್ತಿ ಯವರು ಯಾಕೆ ಉದ್ಘಾಟಿಸಬಾರದು, ಯಾವನೋ ದರಿದ್ರ ಕನ್ನಡಿಗ ರಾಜಕಾರಣಿ ಅಥವಾ ಸಿನೆಮ ನಟ /ನಟಿ ಗಿಂತ ಎಸ್ಟೋ ಉತ್ತಮ ಅಲ್ಲವೇ?
ಇನ್ನು ಬರಗೂರು , ಆ ಮಹಾಶಯರಿಗೆ ಪ್ರಚಾರವೇ ಕಾಯಕ , ಅದಕ್ಕಾಗಿ ಎಂಥ ಹೊಲಸು ಬೇಕಾದರು ಮಾತಾಡುತ್ತಾರೆ!!!
ಇನ್ನು ಮೂರ್ತಿಯವರು ಕನ್ನಡ ತಂತ್ರಾಂಶ ಅಭಿವೃದ್ದಿ ಪಡಿಸಬೇಕಿತ್ತು ಅನ್ನೋದು, ಸತ್ಯ ,ಆದರೂ ಬಳಸುವವರು/ಬೇಕಾದವರು ಯಾರು? ನಮಗೇ ಅದು ಬೇಡ ,ಯಾಕಂದ್ರೆ ಎಷ್ಟು ಜನ ಈಗ ಇರುವ ತಂತ್ರಾಂಶ ಬಳಸುತ್ತಿದ್ದಾರೆ?
ಇಲ್ಲಿ ಗಮನಿಸಬೇಕಾದದ್ದು ಅಂದರೆ “ಇದು ಸುಖಾ ಸುಮ್ಮನೆ ವಿರೋಧ ಅಸ್ಟೇ” ಸೋನಿಯಾ ಅಥವಾ ರಾಹುಲ್ ಅಥವಾ ವೆಂಕೈಯ್ಯ ನಾಯ್ಡು ಅಥವಾ ಇನ್ಯಾರೋ ನಟ ನಟೀ ಮಣಿ ಗಳು ಉದ್ದ್ಘಾಟಿಸುತ್ತಿದ್ದರೆ ಸುಮ್ಮನೆ ಇರುತ್ತಿದ್ದೆವೇನೋ!!(ಇನ್ನೂ ಮುಂದೆ ಹೋಗಿ ಅವರ ಕಟೌಟ್ ಗಳಿಗೆ ಹಾಲೆರೆದು ಮಾಲೆ ಹಾಕಿ ಇತ್ಯಾದಿ ಇತ್ಯಾದಿ ).
ಕೊನೆಯದಾಗಿ ಇಂತಹ ವಿಷಯದ ಬಗ್ಗೆ ನಿರರ್ಥಕವಾಗಿ ಚರ್ಚಿಸಿ ಕಾಲ ಕಳೆಯೋ ಬದಲು ,ಇನ್ನಿತರ ಉಪಯುಕ್ತ ವಿಷಯದ ಬಗ್ಗೆ ಚರ್ಚಿಸಿ ಕಾರ್ಯರೂಪಕ್ಕೆ ತಂದು ಲಾಭ (ವ್ಯವಹಾರಸ್ತರಂತೆ) ಮಾಡೋದು ಎಲ್ಲರಿಗೂ ಕ್ಷೇಮ ಅಂತ ನನ್ನ ಭಾವನೆ !!!!
ಚೆನ್ನಾಗಿ ಹೇಳಿದ್ರಿ ರವಿ ಅವರೆ ಈ ನಮ್ಮ ರಾಕೇಶ್ ಗೆ ಮದುವೆ ಆಗದೆ ರಾತ್ರಿ ನಿದ್ದೆ ಬರಲ್ಲ ಅದಕೆ ಏನೇನೊ ಇಲ್ಲದ ವಿಷಯದ ಬಗ್ಗೆ ಬರೆದು ಬಿಸಕ್ತಾರೆ.ಒಂದು ಮದುವೆ ಮಾಡಿಸ್ದ್ರಿ ಸರಿ ಹೋಗಬಹುದು ಇವರು 🙂
ಶಾನುಭೋಗರೇ,
ನಮಸ್ತೆ.
<<<ಈ ನಮ್ಮ ರಾಕೇಶ್ ಗೆ ಮದುವೆ ಆಗದೆ ರಾತ್ರಿ ನಿದ್ದೆ ಬರಲ್ಲ ಅದಕೆ ಏನೇನೊ ಇಲ್ಲದ ವಿಷಯದ ಬಗ್ಗೆ ಬರೆದು ಬಿಸಕ್ತಾರೆ.ಒಂದು ಮದುವೆ ಮಾಡಿಸ್ದ್ರಿ ಸರಿ ಹೋಗಬಹುದು ಇವರು :)>>
ಅಂದ್ರಿ. ಮದುವೆ ಆದವರು ಸುಮ್ಮನೆ ಇರೋದಕ್ಕೆ ಅಲ್ವಾ ನಮ್ಮ ನಾಡು ನುಡಿಗೆ ಇಂಥ ಸಂಕಟ ಬಂದಿರೋದು? 🙂 ಅದಿರಲಿ, ರಾಕೇಶ್ ಬರೆದುದ್ದರಲ್ಲಿ ನಿಮಗೆ ಇಷ್ಟವಾಗದ ಯಾ ಒಪ್ಪಿತವಾಗದ ವಿಷಯ ಯಾವುದು ಅಂಥ ತಿಳಿಯಲಿಲ್ಲ. ಅಷ್ಟಕ್ಕೂ ಯಾವುದೇ ವಿಷಯಗಳ ಕುರಿತ ತಮ್ಮ ನಿಲುವುಗಳನ್ನು ಹೇಳಿಕೊಳ್ಳುವುದಕ್ಕೆ ಅಂತಲೇ ನಿಲುಮೆ ಹುಟ್ಟಿರುವುದು. ಇಲ್ಲಿ ಅಭಿಪ್ರಾಯ ಭಿನ್ನತೆ ಸಾಮಾನ್ಯ. ತಾವು ತಮ್ಮ ವಿಚಾರಗಳನ್ನು ಬರೆದು ಪ್ರಕಟಿಸಿ.
ಸಾತ್ವಿಕ್
@ಹೆಗ್ಡೆಯವರೆ,
ಕನ್ನಡ ಭಾಷೆ-ಕನ್ನಡೀಗ ಅನ್ನುವುದು ಒಂದನ್ನ ಬಿಟ್ಟು ಒಂದಿರಲಾಗದು ಅಲ್ಲವೇ?,ಇನ್ನ ನಾರಯಣ ಮೂರ್ತಿಗಳ ಬಗ್ಗೆ ಏಕಿಷ್ಟು ಮಾತು ಅಂದ್ರೆ,ಅದು ಅವರೇ ಮಾಡಿಕೊಂಡ ಎಡವಟ್ಟು ಅನ್ನಿಸುತ್ತದೆ.ಅವರೊಬ್ಬ ulitimate business man ಅನ್ನುವುದನ್ನ ಯಾರು ಅಲ್ಲಗಳೆಯಲಾರರು,ಆದರೆ ನಾಣಿ ಅವರ ಕಾರ್ಯ ಕ್ಷೇತ್ರವನ್ನ ಬಿಟ್ಟು,ಶಿಕ್ಷಣದ ಬಗ್ಗೆ,ಬೆಂಗಳೂರನ್ನ ಕೇಂದ್ರಾಡಳಿತ ಪ್ರದೇಶ ಮಾಡಿ ಅನ್ನುವುದರ ಬಗ್ಗೆ ಮಾತಾಡದೆ ಸುಧಾ ಮೂರ್ತಿಯವರಂತೆ ಇದ್ದಿದ್ದರೆ ಇಷ್ಟೆಲ್ಲಾ ಆಗುತಿತ್ತಾ?
ಹಾಗೆ ಇದಕ್ಕೆ ತುಪ್ಪ ಸುರಿದಿದ್ದು ಬಹುಷಃ ಪ್ರತಾಪ್ ಸಿಂಹರ ಅತಿರಂಜಿತ ಹೊಗಳಿಕೆಯೂ ಸಹ ಕಾರಣ.
ಇರಲಿಬಿಡಿ ಅವರಿಗೆ ಕನ್ನಡದ ಮೇಲೆ ಅಭಿಮಾನವಿಲ್ಲದಿದ್ದರೂ,ನಮಗವರು ಎಂದಿಗೂ ಹೆಮ್ಮೆಯ ಕನ್ನಡಿಗರೆ.ಅವರೇ ಉದ್ಘಾಟಿಸಲಿ 🙂
@ ಪ್ರಸನ್ನ
ಧನ್ಯವಾದಗಳು 🙂
ರಾಕೇಶ್,
ಮೂರ್ತಿಯವರು, ಕನ್ನಡ ವಿರೋಧಿಯಾಗಿ ಅಲ್ಲಲ್ಲಿ ಮಾತಾಡಿದ್ದನ್ನ, ಅಲ್ಲಲ್ಲಿಯೇ ಖಂಡಿಸಿ, ಅವನ್ನು ಕಾರ್ಯರೂಪಕ್ಕೆ ತರದಿದ್ದರಾಯ್ತು. ತಂದಿಲ್ಲ ಕೂಡ.
ತಮ್ಮ ನಗುಮುಖದ ಸಹಮತ ನನಗೂ ಖುಷಿ ನೀಡಿದೆ.
🙂
ಧನ್ಯವಾದಗಳು.
ಇ ಬರಗೂರರದು ಒಂದು ಪ್ರಚಾರಪ್ರಿಯ ಮನಸ್ಸು ಅನಿಸುತ್ತದೆ. ಎಲ್ಲ ವಿಷಯಗಳಲ್ಲಿ ನನ್ನದೊಂದು ಅನ್ನೋತರಹದ ಮನುಷ್ಯ.
ಯಾವಾಗಲು ತಮ್ಮ ಸಿದ್ದಾಂತದ ಪ್ರಭಾವಕ್ಕೆ ಒಳಗಾಗಿ ಬೇರೆಯಾವುದು ಚೆನ್ನಾಗಿಲ್ಲ ಅಂತ ಆಡ್ತಾರೆ.
ಇವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇ ವಿಷಯವನ್ನ ಇಲ್ಲಿಗೆ ಬಿಟ್ಟು ಸಮ್ಮೇಳನ ಹೇಗೆ ಇರಬೇಕು ಅನ್ನೋದನ್ನ ಚರ್ಚಿಸಿದರೆ ಒಳ್ಳೇದು ಅಂತ ನನ್ನ ಅನಿಸಿಕೆ.
@ಶಾನು ಬೋಗರೇ,
ತಮಿಗ್ ಮದ್ವೆ ಆಗಿದ್ರೆ,ಮನೇಲ್ ಮಲ್ಕೊಳ್ಳಿ,ವಿಷಯ ಇಲ್ಲ ಅಂದಮೇಲೆ ಕಮೆಂಟಿಸಬೇಡಿ… ಕಡೆಯ ಪ್ಯಾರ ಓದಿದರೆ ಅರ್ಥ ಆಗುತಿತ್ತು ವಿಷಯ ಮಾಡಿಕೊಳ್ಳುವ ಮನಸಿದ್ದಿದ್ದರೆ
@ ಪ್ರಶಾಂತ್,
ಬರಗೂರು ಹೇಳಿದ್ರಲ್ಲಿ ಏನು ತಪ್ಪಿಲ್ಲ ಬಿಡಿ,ಪ್ರತಾಪ್ ಸಿಂಹ ಅದಿಕ್ಕೆ ಉಪ್ಪುಖಾರ ಹಾಕಿ ಬರೆದರು ಅಷ್ಟೇ 🙂
ಕ್ಷಮಿಸಿ ರಾ ಶೆಟ್ರೆ ,
ನಾನು ನಿಲುಮೆಗೆ ಬೇಟಿ ಕೊಡೋದೇ ರಾಕೇಶ್ ಶೆಟ್ಟಿ ,ಕುಮಾರ್.ಎಸ್ .ಎಸ್, ಹೆಗ್ಡೆ, ವಸಂತ್ ಶೆಟ್ಟಿ ಅಂತಹವರ ಅರೋಗ್ಯ ಪೂರ್ಣ ಚರ್ಚೆ ಓದೋದಿಕ್ಕೆ ಅಸ್ಟೇ …ಇಲ್ಲಿ ನಡೆಯುವಂಥಹ ಕುಹಾಗ ಕೋಪ ತಾಪ ನೋಡಿ ಬೇಜಾರಾಗ್ತಿದೆ.
ದಯವಿಟ್ಟು ನಿಮ್ಮ ಆರೋಗ್ಯಕರ ಚರ್ಚೆ ಮುಂದುವರಿಯಲಿ ಎಂದು ಬಯಸುವೆ ,
ಇಂತಿ ನಿಮ್ಮ ಬೇಸರಗೊಂಡ ಅಭಿಮಾನಿ
ಇಂದಿನ ಚರ್ಚೆ ನನಗೂ ನಿಮ್ಮಷ್ಟೇ ಬೇಸರ ತಂದಿದೆ.ಬಹುಷಃ ಈ ಲೇಖನದ ಕಡೆಯ ಪ್ಯಾರ ಬರೆಯುವಾಗಲೇ ನನಗೆ ಕೊಚ್ಚೆಗೆ ಕಲ್ಲು ಹಾಕುವಂತೆ ಅನ್ನಿಸಿದ್ದು ನಿಜ,ಆದರೆ ಕೆಲಸಕ್ಕೆ ಬಾರದ ವಿಷಯಗಳಿಗೆ ಚರ್ಚೆ ಮಾಡಿಸುವ ಪತ್ರಿಕೆಗಳು,ಅತಿರಂಜಿತವಾಗಿ ಬರೆವ ಪತ್ರಕರ್ತರನ್ನ ನೋಡಿ ಬೇಸರವಾಗಿ ಬರೆಯಲೆಬೇಕಾಯಿತು
Your writing is very appropriate. Every time in Kannada sammelana kannadiga will be the loser and kannadatana become poorer from these so called Kannada frontiers.
I would appreciate if the VKS is celebrated by every kannadiga from all over the world.
Namaskara
ಕನ್ನಡ ಮಾತು ಬಂದಾಗ ಬರಗೂರು ಏನ್ಮಾಡಿದರೆ? ಅವ್ರು ಬರ್ದಿದರೆ ಸರಿ, ಎಷ್ಟು ಜನಕ್ಕೆ ತಲುಪಿದೆ? ಅದರಿಂದ ಕನ್ನಡಕ್ಕೇನು ಲಾಭ? ಬರಿ ಸಾಹಿತಿಗಳಿಂದ ಅಷ್ಟೆ ಕನ್ನಡ ಉಳಿದಿದ್ಯೆ? ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಎಷ್ಟು ಜನ ಕನ್ನಡಿಗರಿಗೆ ಯಾವ್ಯಾವ ಉದ್ದಿಮೆಯಲ್ಲಿ ಕನ್ನಡಿಗರಿಗೆ ಕೆಲ್ಸ ಕೊಡಿ ಅಂತ ಕೇಳಿದರೆ? ಕೊಡದವರನ್ನ ಪಟ್ಟಿ ತಯಾರಿಸಿ (ಸರೋಜಿನಿ ಮಹಿಷಿ ವರದಿಯನ್ವಯ) ಸರ್ಕಾರಕ್ಕೆ ಕೊಟ್ಟಿದರ? ಮೂರ್ತಿ ನೇರವಾಗಿ ಕನ್ನಡಿಗರಿಗೆ ಕೇವಲ ೧೦% ಜನರಿಗೆ ಕೆಲ್ಸ ಕೊಟ್ಟಿದ್ರೂ ಅದು ಒಳ್ಳೆಯದೇ ಅಲ್ವ? ಪರೋಕ್ಷವಾಗಿ ಎಷ್ಟು ಕನ್ನಡಿಗರು ಅವರ ಸಂಸ್ಥೆಯ ಲಾಭ ಪಡೆಯುತ್ತಿಲ್ವ? ಅವ್ರು ಕನ್ನಡ ಕಲೀಬೇಡಿ ಎಂದಿದ್ರ ಅಥವ ಇಂಗ್ಲೀಶ್ ಕಲಿರಿ ಅಂತ ಹೇಳಿದ್ರ?
ಅವ್ರು ವಿರೋಧಿಸ್ಲಿಕ್ಕೆ ಕಾರಣ ಅವರಿಗಿರುವ ಕಾಮಾಲೆ ಕಣ್ಣು ಅಷ್ಟೆ.
ಅಲ್ರೀ, ನಾರಾಯಣ ಮೂರ್ತಿ ಅವರು ಕನ್ನಡ ಮಾಧ್ಯಮ ಶಾಲೇಲಿ ಓದಿ ಉದ್ಧಾರ ಆದ ವ್ಯಕ್ತಿ, ಅವರ ತಂದೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಧ್ಯಾಪಕರಾಗಿದ್ದವರು… ಸರಿ ಅವರಿಗೆ ಇಂಗ್ಲಿಷ್ ಮಾಧ್ಯಮದಲ್ಲೂ ಶಾಲೆಗಳಿರಬೇಕು ಎನ್ನುವ ಧೋರಣೆ ಇದೆ, ಅದು ಚರ್ಚಾಸ್ಪದ. ಆದರೆ ಕನ್ನಡ ಮಾಧ್ಯಮವೊಂದೇ ಬೇಕೆನ್ನುವ ನಮ್ಮ ಸಾಹಿತಿ-ಬುದ್ಧಿ ಜೀವಿಗಳು ತಮ್ಮ ಮಕ್ಕಳು, ಮೊಮಕ್ಕಳನ್ನು ಮಾತ್ರ ಸೇರಿಸಿರುವುದು ಭರ್ಜರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ! ಹೇಳೊಂದೊಂದು ಮಾಡದೊಂದು.
ಈ ಬುದ್ಧಿ ಜೀವಿಗಳು ಯಾವುದೇ ತೊಡಗುವಿಕೆಯಲ್ಲಿ ಭಾಗವಹಿಸಲೂ ಮೊದಲು ಕೇಳೋದು ಖರ್ಚುವೆಚ್ಚಗಳು ಮತ್ತು ಸಂಚರಿಸಲು ಕಾರು, ಇವರು ತಾವೇ ತಾವಾಗಿ ನಮ್ಮ ಭಾಷೆ-ಸಂಸ್ಕೃತಿಗೆ ಮಾಡಿರುವೆ ಸೇವೆ ಬೆರೆಳೆಣಿಕೆ ಅಷ್ಟು. ಅವರು ಇರುವ ಉದ್ಯೋಗಕ್ಕೂ ನಿಷ್ಠೆ ಇಲ್ಲ, ತಮ್ಮ ಕರ್ಯಸ್ಥನಕಿಂತ ಹೆಚ್ಚು ಟೀವಿಲೇ ಕಾಣಿಸಿಕೊಳುತಾರೆ!
ಅದೇ ಇನ್ಫೋಸಿಸ್ ಪ್ರತಿಷ್ಠಾನ, ಅಕ್ಷರ ಪ್ರತಿಷ್ಠಾನ ಮತ್ತು ಅರ್ಘ್ಯಂ ಪ್ರತಿಷ್ಠಾನ(ಎಲ್ಲಾ ಇನ್ಫೋಸಿಸ್ ಶುರುಮಾಡಿದವರಿಗೆ ಸಂಬಂಧಪಟ್ಟಿದ ಸಂಸ್ಥೆಗಳು) ಮಾಡುತಿರುವ ಕೆಲಸದ ಬಗ್ಗೆ ಸ್ವಲ್ಪ ಹುಡುಕಿ ಓದಿ, ಬಿಲ್ ಗೇಟ್ಸ್ ಪ್ರತಿಷ್ಠಾನಕ್ಕೆ ಇರೋ ಥರ ವಿರುದ್ಧಾತ್ಮಕ ಪರಿಸ್ಥಿತಿ ಕೂಡ ಇವರಲ್ಲಿ ಇಲ್ಲ (ಬಿಲ್ ಗೇಟ್ಸ್ ಪ್ರತಿಷ್ಠಾನ ಮತ್ತು ಬಿಲ್ ಗೇಟ್ಸ್ ಕುಟುಂಬ “ಮರ್ಕ್” ಎಂಬ ಔಷಧಿ ಕಂಪನಿಯಲ್ಲಿ ಪಾಲಿದ್ದು, WHO ಕೈಯಲ್ಲಿ AIDS / HIV + ಗೆ ಈ ಕಂಪನಿ ಇಂದಲೇ ಔಷಧಿ ಖರೀದಿಸುತ್ತಾರೆ). ಇವರು ಕನ್ನಡ ಮಾಧ್ಯಮ ಶಾಲೆಗಳ ಗುಣಮಟ್ಟ, ಕಟ್ಟಡ ಹಾಗೂ ಮೂಲ ಸವಲತ್ತುಗಳನ್ನು ಕೊಡಿಸಲೂ ಬಹಳ ಸಹಾಯ ಮಾಡಿದ್ದಾರೆ!
ಈ ಬುದ್ಧಿ ಜೀವಿಗಳು ಹೇಳುತಾರೆ, ರಾಷ್ಟ್ರಪತಿಯನ್ನೋ ಪ್ರಧಾನಿಯನ್ನೋ ಕರೆಸಿದ್ದಾರೆ ಸುಮ್ಮನಿರುತಿದ್ದರಂತೆ!
ಆ ತಾಯಿ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು, ಸಾರ್ವಜನಿಕವಾಗಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವ ಧೋರಣೆಯನ್ನು ಸಮರ್ಥಿಸಿರುತ್ತಾರೆ, ಹಾಗೆ ಏನಾದರೂ ಈ ಸಮಾರಂಭಕ್ಕೆ ಬಂದರೆ ಮಹಾರಾಷ್ಟ್ರದಲ್ಲಿ ತಮ್ಮಗೆ ರಾಜಕೀಯವಾಗಿ ತೊಂದರೆ ಆಗುತದೆ ಎಂಬ ಕರಾಣಕ್ಕೆ ಬರಲು ನಿರಾಕರಿಸಿರುವ ಪ್ರಧಾನ ಮಂತ್ರಿಗಳ ನಿಲುವಿಗೆ ಯಾಕೆ ಈ ಬುದ್ಧಿ ಜೀವಿಗಳ ಆಕ್ಷೇಪ ಇಲ್ಲ!?
ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳಲ್ಲು ಯತ್ನಿಸುತಿದ್ದಾರೆ ಈ ದುರ್ಬುದ್ಧಿ ಜೀವಿಗಳು!
ಅಸಭ್ಯ ಭಾಷೆ ಬಳಸಿದ ಕಾರಣ, ಈ ಪ್ರತಿಕ್ರಿಯೇಯೆನ್ನ ಅಳಿಸಿ ಹಾಕಲಾಗಿದೆ – ನಿಲುಮೆ
ಮೂರ್ತಿಯವರಿಂದ ಇದುವರೆಗೂ ಕನ್ನಡ ನಾಡಿನ ಬಗ್ಗೆ ಒಂದು ಎರಡು ಮಾತು ಆಡಿಲ್ಲ ಆದರೆ ಅವರನ್ನು ವಿಶ್ವವೇ ಗುರುತಿಸುತ್ತೆ ಅನ್ನೋದು ನಿಜ
ಇದನ್ನ ಯಾರು ತಪ್ಪಿಸಲ್ಲೋಕೆ ಆಗೋಲ್ಲ
ನೋಡೋಣ ಅವರು ತಮ್ಮ ಭಾಷಣದಲ್ಲಿ ಏನು ಹೇಳುತ್ತಾರೆ. ತಂಗೆ ನೀಡಿದ ಗೌರವಕ್ಕೆ ಹೇಗೆ ಸ್ಪಂದಿಸುತ್ತಾರೆ ಅಂತ
ನಂತರ ಇದರ ಬಗ್ಗೆ ಚರ್ಚೆ ಮಾಡೋದು ಇನ್ನೂ ಉಚಿತ ಅಲ್ಲವೇ?