ಹೆಣ್ಣೆಂದರೆ ಹೀಗೇಕೆ…..?
-ಶ್ರೀದೇವಿ ಅಂಬೆಕಲ್ಲು॒॒
೩೭ ವರ್ಷಗಳ ಹಿಂದೆ ವಾರ್ಡ್ ಹುಡುಗನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಮಾನಸಿಕ ಯಾತನೆ ಅನುಭವಿಸುತ್ತಿರುವ ನರ್ಸ್ ಅರುಣಾ ಶಾನ್‌ಭಾಗ್ ಅವರ ನರಳುವಿಕೆ, ಮಾನಸಿಕ ನೋವು ಮತ್ತು ಆಕೆಯ ಗೆಳತಿ ಪಿಂಕಿ ವಿರಾನಿ ಅರುಣಾಗೆ ದಯಾಮರಣ ನೀಡಬೇಕೆಂದು ಅರ್ಜಿ ಸಲ್ಲಿಸಿರುವ ವರದಿ ಇತ್ತೀಚೆಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ, ಕೇಳಿದ್ದೇವೆ. ಹೀಗೆ ಹೆಣ್ಣು ಮಗಳೊಬ್ಬಳು ದೌರ್ಜನ್ಯಕ್ಕೊಳಗಾಗಿ ಅನುಭವಿಸುತ್ತಿರುವ ಯಾತನಾಮಯ ಜೀವನ ಇನ್ಯಾವ ಹೆಣ್ಣು ಮಗಳಿಗೂ ಬಾರದಿರಲಿ ಅನ್ನೋದು ಎಲ್ಲ ತಾಯಿ ಹೃದಯದವರ ಆಶಯ.
ಹೆಣ್ಣು ಹೆಣ್ಣೆಂದು ಹೆಣ್ಣನ್ನೇಕೆ ಹೀಗಳೆಯುವಿರಿ…?ಹೆಣಲ್ಲವೇ ನಮ್ಮನ್ನ ಹೆತ್ತ ತಾಯಿ…?
ಮಾರ್ಚ್ ೮ ಅಂತರರಾಷ್ಟ್ರೀಯ ಮಹಿಳಾ ದಿನ. ದಿನಾಚರಣೆಯ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷ ವಾಕ್ಯ ’ಶಿಕ್ಷಣ, ತರಬೇತಿ ಹಾಗೂ ವಿಜ್ಞಾನ, ತಂತ್ರಜ್ಞಾನಕ್ಕೆ ಸಮಾನ ಅವಕಾಶ-ಮಹಿಳೆಯರಿಗೆ ಒಳ್ಳೆಯ ಕೆಲಸಕ್ಕೆ ಹಾದಿ’.
ಒಬ್ಬ ಗಂಡಸಿನಷ್ಟೇ ಶ್ರಮ ವಹಿಸಿ ದುಡಿಯುವ ಹೆಣ್ಣು ಮಗಳಿಗೆ ನೀಡುವ ಸಂಬಳದಲ್ಲಿ ತಾರತಮ್ಯ ಮಾಡಲಾಗುತ್ತದೆ. ಗಂಡ ದಿನದ ೭ ಗಂಟೆ ದುಡಿದು ಬಂದು ತಾನೆ ಉತ್ಪಾದಕ ಎಂದು ಹೆಮ್ಮೆಯಿಂದ ಬೀಗಿಕೊಳ್ಳುತ್ತಾನೆ. ಇಡೀ ದಿನ ಮನೆಯಲ್ಲಿ ದುಡಿಯುವ ಹೆಂಡತಿಯ ಪರಿಶ್ರಮಕ್ಕೆ ಯಾವ ಬೆಲೆಯೂ ಇಲ್ಲ. ಒಂದು ಕಡೆ ವೇತನ ತಾರತಮ್ಯವಾದರೆ ಇನ್ನೊಂದೆಡೆ ಮಹಿಳಾ ದೌರ್ಜನ್ಯ ಪ್ರಕರಣಗಳು. ಮತ್ತೊಂದೆಡೆ ಕುಟುಂಬ ಜವಾಬ್ದಾರಿ ಹೊರಗಡೆಯೂ ದುಡಿಯಬೇಕು ಎಂಬ ಹೆಚ್ಚುವರಿ ಜವಾಬ್ದಾರಿ. ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಆದರೆ ಹೆಣ್ಣಿನ ಬದುಕು ಅಂದರೆ ಅದು ಕೇವಲ ನೋವುಗಳ ಸಂಕಲನ. ಬುದ್ಧಿವಂತಿಕೆ, ಪರಿಶ್ರಮ, ಕ್ರೀಯಾಶಿಲತೆ, ನೋವು ನುಂಗುವ ಶಕ್ತಿ ಮತ್ತು ಸಂಘಟನೆಯಲ್ಲಿ ತಾನು ಮುಂದು ಎಂದು ಹೆಣ್ಣು ತೋರಿಸಿಕೊಟ್ಟಿದ್ದಾಳೆ.
ಹೆಣ್ಣು ಉದ್ಯೋಗ ಕ್ಷೇತ್ರದಲ್ಲಿದ್ದುಕೊಂಡು ಗಂಡಿಗೆ ಸರಿ ಸಮಾನ ಎಂದು ತೋರಿಸಿಕೊಂಡಿದ್ದರೂ ಮನೆಗೆ ಬಂದು ಉಳಿದ ಕೆಲಸಗಳನ್ನು ತಾನೇ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಅವಳಿಗೆ ಹೊರೆಯಾಗಿದೆ. ಅನುಮಾನ, ಅವಮಾನ, ಅಸಮಾನತೆಯ ಕೂಪದೊಳಗಿದ್ದುಕೊಂಡು ಬದುಕು ಸವೆಸುತ್ತಿರುವ ಮಹಿಳೆಯರಿಗೆ ಮಹಿಳಾ ದಿನಾಚರಣೆ ಕೇವಲ ಆಚರಣೆ ಆಗುವುದರಲ್ಲಿ ಅರ್ಥವಿಲ್ಲ.
ಶಿಕ್ಷಣ, ಆರ್ಥಿಕ ಸಬಲೀಕರಣ ಸಾಧಿಸಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಮಹಿಳೆ ಇನ್ನೂ ಮೀಸಲಾತಿಯಡಿಯಲ್ಲಿ ದುಡಿಯಬೇಕಾದ ಅನಿವಾರ್ಯತೆ. ಕಾಲೇಜು ಮುಗಿಸಿ ನೇರ ಮನೆಗೆ ಬರಬೇಕು ಅಲ್ಲಿ ಇಲ್ಲಿ ಸುತ್ತಬೇಡ. ಎಂದು ಪ್ರತಿ ಮನೆಯಲ್ಲೂ ಅಮ್ಮ ಮಗಳಿಗೆ ಬುದ್ಧಿಮಾತು ಹೇಳಿ ಕಳುಹಿಸುವುದು ಸಾಮಾನ್ಯ. ಅದರೆ ಮನೆಯಲ್ಲಿದ್ದ ಗಂಡು ಮಕ್ಕಳಿಗೆ ಅದ್ಯಾವ ನಿರ್ಬಂಧಗಳೂ ಇಲ್ಲ. ಎಲ್ಲ ಕ್ಷೇತ್ರದಲ್ಲೂ ಸಫಲತೆ ಸಾಧಿಸಿದ್ದಾಳೆ. ಆದರೆ ಪುರುಷವರ್ಗದಿಂದಾಗುತ್ತಿರುವ ದೌರ್ಜನ್ಯದಿಂದ ಮಾತ್ರ ತಪ್ಪಿಸಿಕೊಳ್ಳುವುದಕ್ಕೆ ಆಕೆಗೆ ಸಾಧ್ಯ ಆಗಿಲ್ಲ.ಲಿಂಗ ತಾರತಮ್ಯ , ಹೆಣ್ಣು ಭ್ರೂಣ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಬೇಕು. ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಗಬೇಕು. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಆ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶವನ್ನು ಅರ್ಥಪೂರ್ಣವಾಗಿಸಬೇಕು. ಅದಕ್ಕೆ ಪುರುಷರ ನೈತಿಕ ಬೆಂಬಲ ಬೇಕು. ಅದೇ ನಿರೀಕ್ಷೆಯಲ್ಲಿ…… ಮಹಿಳಾ ಮಣಿಗಳು.
(ಚಿತ್ರ ಕೃಪೆ :notevena.com)
ಹೆಣ್ಣು ಮಕ್ಕಳು ಇಂದಿಗೂ ನಮ್ಮ ಕಣ್ಣಿಗೆ ಕಾಣದಂತೆ ಪಡಬಾರದ ಕಷ್ಟವನ್ನು ಪಡುತ್ತಿದ್ದಾರೆ. ಅದರಲ್ಲಿ ಕೆಲವು ಮಾತ್ರ ಅನಾವರಣಗೊಳ್ಲುತ್ತಿವೆ ಮತ್ತು ಮುಕ್ತಿ ಹೊಂದುತ್ತಿವೆ. ಸರಿಯಾಗಿ ಇನ್ನು ಹಳ್ಳಿಗಳಲ್ಲಿ ಇನ್ನೂ ಸಹ ಸ್ವತಂತ್ರ್ಯಕ್ಕೆ ತೆರೆದು ಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ಮತ್ತು ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಈ ಲೇಖನ ಬಹಳ ಅಗತ್ಯವೆನಿಸುತ್ತದೆ.
Well written.
good article.
rgds, sindhu
ಶ್ರೀದೇವಿ ಅಂಬೇಕಲ್ಲು ರವರೇ
ಆತ್ಮೀಯರೇ ಸಪ್ರೇಮ ನಮಸ್ತೆ
ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ಕಳೆದ ಹದಿಮೂರು ವರುಷಗಳಿಂದ ” ಸ್ವರ್ಗದ ಕಾವ್ಯ ನಕ್ಷತ್ರವಾದರೆ ವಿಶ್ವದ ಕಾವ್ಯ ಮಹಿಳೆ” ಎನ್ನುವ ಖ್ಯಾತ ಕವಿ ಹಾಗ್ರೇವ್ ರವರ ನುಡಿಗೆ ಅರ್ಥವಾಗಿ ಪೂರಕವಾಗಿ ಬರುತ್ತಿರುವ ಪತ್ರಿಕೆಯೇ ” ಸ್ತ್ರೀ ಜಾಗೃತಿ” ಮಾಸಪತ್ರಿಕೆ.
ಪ್ರತಿ ವರುಷದಂತೆ ಈ ವರುಷವೂ ಮಾಚ – ೮ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ಸಂಚಿಕೆಯನ್ನು ಹೊರತರುತ್ತಿದ್ದೇವೆ. ಅದಕ್ಕೆ ಸಂಬಂಧಪಟ್ಟಂತೆ ಈ ಕೆಳಗಿನ ಯಾವುದೇ ವಿಚಾರಗಳಲ್ಲಿ ತಮ್ಮಿಂದ ಬರಹಗಳನ್ನು ಅಪೇಕ್ಷಿಸುತ್ತಿದ್ದೇವೆ.
ಸಮಾಜದ ಓರೆ ಕೋರೆಗಳನ್ನು ಎತ್ತಿ ಹಿಡಿಯುವ ಹಾಗೂ ಸಮಾಜದಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಪ್ರತಿಭೆಗಳನ್ನು ಬಿಂಬಿಸುವ, ಕೌಟುಂಬಿಕ ಸಮಸ್ಯೆಗಳಲ್ಲಿ ಮಹಿಳೆಯರಿಗೊಂದು ಉತ್ತಮವಾದ, ಮಹಿಳಾ ಸಾಧಕಿಯರನ್ನು ಪರಿಚಯಿಸುವ ಸಾಮಾಜಿಕ ವಿರುದ್ಧ ದನಿಯೆತ್ತುವ ನಮ್ಮ ಪತ್ರಿಕೆಯು, ವಿಭಿನ್ನ ವಿಚಾರಗಳು, ರಾಷ್ಟ್ರದ ಉನ್ನತ ವಿಚಾರಗಳ ಬಗ್ಗೆ ಚಿಂತನೆ ಆಧ್ಯಾತ್ಮಿಕವಾಗಿ ಬರಹಗಳು ಇರಲಿ.
ಬರಹಗಳು ೩-೪ ಪುಟದಲ್ಲಿರಲಿ, ಸಂಬಂಧಪಟ್ಟ ಪೋಟೋಗಳೊಂದಿಗೆ ನಿಮ್ಮ ಭಾವಚಿತ್ತವೂ ಇರಲಿ. ಬರಹಗಳು ನಮಗೆ ತಲುಪಲು ಕೊನೆಯ ದಿನಾಂಕ 28 ಫೆಬ್ರವರಿ ೨೦೧೩.
shobha_hg@yahoo.com / shobha_hg@hotmail.com
ಶೋಭಾ.ಹೆಚ್.ಜಿ
ಸಂಪಾದಕಿ