ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 21, 2011

12

ಸಾವಯವ ಕೃಷಿ ಎಂಬ ಮೂರ್ಖತನ !

‍ನಿಲುಮೆ ಮೂಲಕ

– ಶ್ರೀ ಹರ್ಷ ಸಾಲಿಮಠ

ವ್ಯವಸಾಯ ಎಂಬುದು ಭಾರತ ದೇಶದ ಮಟ್ಟಿಗೆ ಉದ್ಯೋಗ ಮತ್ತು ಹೊಟ್ಟೆಪಾಡು ಮಾತ್ರವಲ್ಲ. ಅದೊಂದು ಸಂಸ್ಕೃತಿ, ಜೀವನಶೈಲಿ. ಅದೆಷ್ಟೋ ವರ್ಷಗಳಿಂದ ನಾಗರಿಕತೆಯನ್ನು ಸಲಹಿಕೊಂಡು ಬಂದ ದಾರಿ.ಮನುಷ್ಯ ಒಂದೆಡೆ ನಿಂತು ನೆಲೆಯೂರಿ ತನ್ನದೊಂದು ಬದುಕು ಕಟ್ಟಿ ಕೊಳ್ಳುವುದು ಸಾಧ್ಯವಾದದ್ದೇ ಅವನು ಬೇಸಾಯ ಮಾಡಲು ಆರಂಭಿಸಿದಾಗಿನಿಂದ.
ಇತ್ತೀಚೆಗೆ ಸಾವಯವ ಕೃಷಿ ಎಂಬುದು ಬಹಳವಾಗಿ ಕೇಳಿ ಬರುತ್ತಿರುವ ಸುದ್ದಿ. ಸರಕಾರವೂ ಸೇರಿದಂತೆ ಸಮೂಹ ಸನ್ನಿಗೊಳಗಾದಂತೆ ಸಾವಯವ ಕೃಷಿಯ ಕಡೆ ಜನ ಓಡುತ್ತಿದ್ದಾರೆ.  ಸುಭಾಶ್ ಪಾಳೇಕರ್ ರಂತಹ ಅನೇಕರು ಕೃಷಿ ಗುರುಗಳಾಗಿದ್ದಾರೆ.
ಅವರ ಬಳಿ ನೂರಾರು ರೈತರು ಸಾವಯವ ಕೃಷಿಯ ತರಬೇತಿ ಪಡೆದು ಬೇಸಾಯದಲ್ಲಿ ತೊಡಗಿದ್ದಾರೆ. ರಸಗೊಬ್ಬರ ಹಾಕಿ ಹಣ ಕಳೆದುಕೊಂಡವರಂತೆ ಸಾವಯವ ಕೃಷಿಗೆ ಮೊರೆ ಹೋದವರೂ ಹಣ ಕಳೆದುಕೊಂಡಿದ್ದಾರೆ. ಸಮಯ ಹಾಳು ಮಾಡಿಕೊಂಡಿದ್ದಾರೆ.ಅದೆಷ್ಟೇ ತರಬೇತಿ ಶಿಬಿರ ಪ್ರಚಾರ ನಡೆಯುತ್ತಿದ್ದರೂ ರೈತರ ಪರಿಸ್ಥಿತಿ ಸುಧಾರಿಸುತ್ತಿಲ್ಲ.
ನಮ್ಮ ದೇಶದಲ್ಲಿ ನೆಲ ಜಲ ಭಾಷೆ ಔಶಧಿ ನಲವತ್ತು ಕಿಲೋಮೀಟರು ಗಳಿಗೊಮ್ಮೆ ಬದಲಾಗುತ್ತದೆ. ಮಣ್ಣಿನ ಗುಣ ಪ್ರತಿ ನಲವತ್ತು ನಲವತ್ತು ಕಿಲೋಮೀಟರುಗಳಿಗೆ ಬದಲಾಗುತ್ತದೆ. ಗಾಳಿ ಬೀಸುವ ದಿಕ್ಕು, ಮಳೆಯ ಪ್ರಮಾಣ, ಭೂಮಿಯ ಗಟ್ಟಿತನ, ನೀರಿನ ಕ್ಷಾರತೆ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಅಲ್ಲಿನ ಪ್ರಾಣಿಸಂಪತ್ತು ಸಹ ಬದಲಾಗುತ್ತದೆ. ಅಸುಗಳ ಜಾತಿ ಮತ್ತು ಅವುಗಳ ಹೊಂದಿಕೊಳ್ಳುವಿಕೆ ಬದಲಾಗುತ್ತದೆ.  ಬೆಳೆಯುವ ಬೆಳೆ ಸಂಪೂರ್ಣವಾಗಿ ಈ ಎಲ್ಲ ಪ್ರಾಕೃತಿಕ ಗುಣಗಳ ಮೇಲೆ ಅವಲಂಬನೆಯಾಗಿರುತ್ತದೆ.

ಉದಾಹರಣೆಗೆ ಮಲೆನಾಡಿನಲ್ಲಿ ಬೇಸಿನ ಮರ ಜಾಲಿಯ ಮರಗಳು ಬೆಳೆಯುವದಿಲ್ಲ, ಅದೇ ಸಮಯಕ್ಕೆ ಬಯಲುಸೀಮೆಯಲ್ಲಿ ಜಾಲಿಯ ಮರ ಆಳದಷ್ಟು ದೊಡ್ಡದಾಗಿ ಬೆಳೆಯುತ್ತದೆ. ಮಲೆನಾಡಿನ ಔಷಧೀಯ ಸಸ್ಯಗಳು ಬಯಲು ಸೀಮೆಯ ಕಡೆ ಬೆಳೆಯಲು ಸಾಧ್ಯವೆ ಇಲ್ಲ. ಹೀಗಿರುವಾಗ ಆಯಾ ನೆಲದ ಪ್ರಾಕೃತಿಕ ಅಂಶಗಳಿಗೆ ಅನುಗುಣವಾಗಿ ಬೆಳೆ ಬರುವಂತೆ ಕೃಷಿ ಇರಬೇಕೆ ಹೊರತು ಎಲ್ಲೋ ನಡೆಸಿದ ಪ್ರಯೋಗಗಳಿಗೆ ಅನುಗುಣವಾಗಿ ಅಲ್ಲ. ಸುಭಾಶ್ ಪಾಳೇಕರ್ ಅವರ ಪ್ರಯೋಗ ನಡೆದಿರುವುದು ಮಹಾರಾಷ್ಟ್ರದ ಗದ್ದೆಗಳಲ್ಲಿ. ಅವರ ಪ್ರಯೋಗಗಳಲ್ಲಿ  ಅಲ್ಲಿಯ ಪರಿಸರಕ್ಕೆ ಸರಿ ಹೊಂದುವಂತೆ ಕೆಲವು ಯಶಸ್ಸುಗಳು ಕೆಲವು ಅಪಜಯಗಳೂ ಸಿಕ್ಕಿರುತ್ತವೆ. ಅಲ್ಲಿನ ಯಶಸ್ವಿ ಸೂತ್ರಗಳನ್ನು ಅವರು ಎಲ್ಲೆಡೆ ಬೋಧಿಸುತ್ತಿದ್ದಾರೆ. ಆ ಯಶಸ್ಸನ್ನು ಹಿಂಬಾಲಿಸಿ ಜನ ಬೇಸಾಯ ಕೈಗೊಂಡು ಕೈ ಸುಟ್ಟು ಕೊಳ್ಳುತ್ತಿದ್ದಾರೆ.

ಮಹಾರಾಷ್ಟ್ರ ಬಿಸಿಲು ಬಯಲಿನ ಒಣ ಪ್ರದೇಶ.  ಅಲ್ಲಿ ಯಶಸ್ವಿಯಾದ ಸೂತ್ರಗಳು ಸದಾ ತೆವದಿಂದಿರುವ ಕಾಡಿನಿಂದ ಸುತ್ತುವರಿದ ತೀರ್ಥಹಳ್ಳಿಯಲ್ಲಿ  ಹೇಗೆ ಯಶಸ್ವಿಯಾಗಲು ಸಾಧ್ಯ? ಯಶಸ್ವಿ ಪ್ರಯೋಗದ ಹಿಂದೆ ಬೀಳುವ ರೈತರು ಎಡವುವುದು ಇಲ್ಲಿಯೇ! ಹಾಗಾದರೆ ಸಾವಯವ ಕೃಷಿ ಒಳ್ಳೆಯದಲ್ಲವೇ? ಅದು ಒಳ್ಳೆಯದು. ಸಹಜ ಕೃಷಿ, ಜೈವಿಕ ಕೃಷಿ ಎಲ್ಲವೂ ಒಳ್ಳೆಯವು. ಮಾಡಬೇಕಾದ ರೀತಿಯಲ್ಲಿ ಮಾಡಬೇಕಷ್ಟೆ!  ಜೀವಾಮೃತ ತಯಾರಿಸುವಾಗ ಸಿದ್ಧ ಸೂತ್ರದ ಹಿಂದೆ ಹೋಗುವುದು ಒಳ್ಳೆಯದಲ್ಲ. ಅನೇಕ ಪ್ರಯೋಗಗಳನ್ನು  ಮಾಡಬೇಕಾಗುತ್ತದೆ. ಅಲ್ಲಿನ ಮಣ್ಣು ಮತ್ತು ಗಾಳಿಯ ತೇವಕ್ಕೆ ಅನುಗುಣವಾಗಿ ಗೋಮೂತ್ರ ಗೊಮಯಗಳನ್ನು ಬೇರೆಸಬೇಕಾಗುತ್ತದೆ. ಇದಕ್ಕಾಗಿ ಕೆಲವು ಪ್ರಯೋಗಗಳನ್ನು ಮಾಡಿ ಬೇಸಾಯದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಇಲ್ಲಿ ಇನ್ನೊಂದು ಶಾರ್ಟ್ ಕಟ್ ಇದೆ. ಸುಮಾರು ಐವತ್ತು ಅಥವಾ ನೂರು ವರುಷಗಳ ಹಿಂದೆ ಅಂದರೆ ರಾಸಾಯನಿಕ ಗೊಬ್ಬರಗಳು ಬರುವ ಮುಂಚೆ ನಮ್ಮ ಪ್ರದೇಶದಲ್ಲಿ ಬೇಸಾಯ ಹೇಗೆ ನಡೆಯುತ್ತಿತ್ತು ಎಂದು ಅಧ್ಯಯನ ನಡೆಸಬೇಕು. ಅದು ಸಾವಿರಾರು ವರುಷಗಳ ಪ್ರಯೋಗಗಳಿಂದ ಕೈಗೊಂಡ ಯಶಸ್ಸು. ಹಾಗಾಗಿ ಬಹುತೇಕ ಫೂಲ್ ಪ್ರೂಫ್!

ಈ ಹಳೆಯ ತಂತ್ರಕ್ಕೆ ಹೊಸ ವೈಜ್ಞಾನಿಕ ವಿಧಾನಗಳನ್ನು ಬೆರೆಸಿ ಬಹುಬೇಗ ಯಶಸ್ಸನ್ನು ಪಡೆಯಬಹುದು. ಹಾಗೆಯೇ ನಾವು ಯಾವ ಬೆಳೆ ಬೆಳೆಯುತ್ತೇವೆ ಹಾಗೂ ಯಾವ ಆಹಾರ ತಿನ್ನುತ್ತೇವೆ ಎಂಬುದೂ ಮುಖ್ಯ.
ರೈತರ ಯಶಸ್ಸಿನಲ್ಲಿ ನಮ್ಮಂತಹ ಬಳಕೆದಾರರ ಬಹುದೊಡ್ಡ ಪಾತ್ರವಿದೆ. ಆಯಾ ಪ್ರದೇಶಕ್ಕೆ ಅನುಗುಣವಾದ ಬೆಳೆಗಳನ್ನು ರೈತರು ಬೆಳೆಯಬೇಕಾಗಿರುವುದರಿಂದ ಆಯಾ ಪ್ರದೇಶದ ಬೆಳೆಗಳನ್ನೇ ಆಹಾರವಾಗಿ ತೆಗೆದುಕೊಳ್ಳುವುದು ನಾವು ರೈತರಿಗೆ ಮಾಡಬಹುದಾದ ಬಹುದೊಡ್ಡ ಉಪಕಾರ. ಉದಾಹರೆಣೆಗೆ ಉತ್ತರ ಕರುನಾಡಲ್ಲಿ ಜೋಳದ ರೊಟ್ಟಿ, ದಕ್ಷಿಣಕ್ಕೆ ರಾಗಿಯ ಮುದ್ದೆ, ಮಲೆನಾಡಲ್ಲಿ ಅಕ್ಕಿಯ ಅನ್ನ ಹೀಗೆ.  ನಾವೆಂಥ ಮೂರ್ಖರೆಂದರೆ, ಕರುನಾಡಲ್ಲಿ ಗೋಧಿ ಬೆಳೆಯುವುದೇ ಇಲ್ಲ; ಆದರೂ ಗೋಧಿಯಿಂದ ಮಾಡಿದ ಚಪಾತಿಯನ್ನು ಪಂಜಾಬಿನಿಂದ ತರಿಸಿಕೊಂಡು ತಿನ್ನುತ್ತೇವೆ. ಗೋಧಿ ಭಾರತ ದೇಶದ ಬೆಳೆಯಲ್ಲ. ಅದು ಮೆಡಿಟರೇನಿಯನ್ ಬೆಳೆ. ಚಳಿಗಾಲದಲ್ಲಿ ಮಾತ್ರ ಬೆಳೆಯುವಂತಹುದು.  ಚಳಿ ಪ್ರದೇಶದ ಜನರ ದೇಹಕ್ಕೆ ಒಗ್ಗುವಂತಹುದು. ಅದನ್ನು ಪಂಜಾಬಿನಿಂದ ತರಿಸಿಕೊಂಡು ತಿನ್ನುತ್ತೇವೆ. ಪಂಜಾಬ್ ನಿಂದ ಇಲ್ಲಿಗೆ ಲಕ್ಷಾಂತರ ಟನ್ ಗೋಧಿ ಆಮದು ಮಾಡಿಕೊಳ್ಳಲು ನಾವು ತೆರಬೇಕಾದ ಡೀಸೆಲ್ ಖರ್ಚು ಎಷ್ಟು? ಇದಕ್ಕಾಗಿ ನಾವು ಕಳೆದುಕೊಳ್ಳಬೇಕಾದ ವಿದೇಶಿ ವಿನಿಮಯವೆಷ್ಟು? ಇದರ ಬದಲು ನಮ್ಮಲ್ಲಿ ಬೆಳೆಯುವ ರಾಗಿ ಅಕ್ಕಿ ತಿಂದರೆ ಆರೋಗ್ಯಕರ ಹಾಗೂ ದೇಶಕ್ಕೂ ಹಣ ಉಳಿತಾಯ. ನಮ್ಮ ರೈತರೂ ಬದುಕುತ್ತಾರೆ. ಗುಜರಾತಿನಲ್ಲಿ ಬಾಜ್ರಾ, ಬಿಜಾಪುರ ಹುಬ್ಬಳ್ಳಿ ಕಡೆ ಜೋಳ, ಮಂಡ್ಯ ಮೈಸೂರು ಕಡೆ ರಾಗಿ ಹುಲುಸಾಗಿ ಸುಲಭವಾಗಿ ಬೆಳೆಯುತ್ತದೆ ವಿಶೇಷ ಪೋಷಣೆಯ ಅಗತ್ಯವಿಲ್ಲದೆ, ಹೆಚ್ಚಿನ ಖರ್ಚಿಲ್ಲದೆ! ಇವನ್ನು ತಿಂದು ನಾವು ಬದುಕಿ ರೈತರಿಗೆ ಉಪಯೋಗವಾಗಬಾರೆದೇಕೆ?
ಇನ್ನೊಂದು ವಿಷಯ. ಪ್ರಕೃತಿ ತಾಯಿಗೆ ಯಾವ ಯಾವ ನೆಲದಲ್ಲಿ ಯಾವ ಯಾವ ಬೆಳ ಬೆಳೆದು ಆಯಾ ಪರಿಸರಕ್ಕೆ ತಕ್ಕಂತೆ ಆರೋಗ್ಯಕ್ಕೆ ಹಾನಿಯಾಗದಂತೆ ಜನರಿಗೆ ಏನೇನು ತಿನ್ನಿಸಬೇಕೆಂದು ಗೊತ್ತಿದೆ. ಅದು ತಿನ್ನಿಸಿದ್ದನ್ನು ತಿಂದು ಆರೋಗ್ಯಕರವಾಗಿ ಇರುವುದು ಬಿಟ್ಟು ನಾವು ಅಧಿಕ ಪ್ರಸಂಗ ಮಾಡುವುದೇಕೆ? ಯಾವ ಕಾಲದಲ್ಲಿ ಯಾವುದನ್ನು ತಿನ್ನಿಸಬೇಕೆಂದೂ ಸಹ ತಾಯಿಗೆ ಗೊತ್ತು. ಆಯಾ ಕಾಲದಲ್ಲಿ ಬೆಳೆಯುವ ಹಣ್ಣು ಕಾಳು ತಿಂದು ಬದುಕಬಾರದೆ? ಇದು ಸ್ವದೇಶಿ, ಸ್ವಾವಲಂಬನೆ ಕಡೆ ಮೊದಲ ಹೆಜ್ಜೆ.

(ಚಿತ್ರ ಕೃಪೆ : timelessexcursions.com)

12 ಟಿಪ್ಪಣಿಗಳು Post a comment
 1. minchu
  ಮಾರ್ಚ್ 21 2011

  savayava krishi onde alla, yava krishi paddhatiyannu kurudadi acharisabaradu ….. adhunika krushiyu kuda idakke horatagilla

  ಉತ್ತರ
 2. ವಿಜಯ ಪೈ
  ಮಾರ್ಚ್ 21 2011

  ಶೀರ್ಷಿಕೆ ನೋಡಿ ಹರ್ಷ ಜೊತೆ ಸ್ವಲ್ಪ ವಾದ ಮಾಡಬಹುದು ಎನಿಸಿತ್ತು..ಆದರೆ ಒಳಗಿನ ವಿಷಯ ‘ವಾದ’ಕ್ಕೆ ಅರ್ಹವಲ್ಲ! :)..
  ಉತ್ತಮ ಲೇಖನ ಹರ್ಷ..ಆದರೆ ಶೀರ್ಷಿಕೆ ‘ಸಾವಯವ ಕೃಷಿ ಎಂಬ ಮೂರ್ಖತನ’ ನೊ ಅಥವಾ ‘ ಸಾವಯವ ಕೃಷಿ ಅರ್ಥಮಾಡಿಕೊಳ್ಳದ ಮೂರ್ಖರು’ ಆಗಬೇಕೊ?

  ನಿಜವಾಗಿ ಅನುಷ್ಠಾನಕ್ಕೆ ತಂದರೆ ಕೃಷಿಗೆ, ರೈತನ ಕೌಟುಂಬಿಕ ಆರೋಗ್ಯಕ್ಕೆ, ಆರ್ಥಿಕತೆಗೆ ವರವಾಗಬಹುದಾಗಿದ್ದ ಸರ್ಕಾರದ ಸಾವಯವ ಕೃಷಿ ಮಿಷನ್ ಎಂಬ ಯೋಜನೆ ವಾಸ್ತವದಲ್ಲಿ ಆ ಪಕ್ಷದ ಕಾರ್ಯಕರ್ತರಿಗೆ ಹಣ ಹಂಚಲು, ಪ್ಟವಾಸ (ಮನರಂಜನೆ) ಮಾಡಿಸಲು, ತಾಲೂಕಾ ಮಟ್ಟದ ಪುಢಾರಿಗಳಿಗೆ ಕಮಿಷನ್ ತಿನ್ನಲು ರೂಪಿಸಿದ ಹುಲ್ಲುಗಾವಲಾಗಿದೆ. ಕಾಗದದಲ್ಲೆ ಕೊಟಿಗೆ, ದನೆ, ಗೊಬ್ಬರ ..ಸ್ಟುಡಿಯೋದ ಫೋಟೊಶಾಫಿನಲ್ಲೇ ಫಲಾನುಭವಿಗಳು ಮಾಡಿದ ಕಾರ್ಯಗಳ ದಾಖಲೆ ತಯಾರು!. ಅತ್ತ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳದ್ದು ಪ್ರತ್ಯೇಕ ಕೃಷಿ ಮುಂಗಡ ಪತ್ರ, ಸಾವಯವ ಕೃಷಿಗೆ 100-200 ಕೋಟಿ ಎಂದು ಘೋಷಿಸಿ ಇಲ್ಲದ ಕಿರೀಟಕ್ಕೆ ಗರಿ ಸಿಗಿಸಿಕೊಳ್ಳುವ ತರಾತುರಿ. ಇಂತಹ ಎಲ್ಲ ಅಧ್ವಾನಗಳ ಮಧ್ಯೆಯೂ ನಿಜವಾದ ಪ್ರಯೋಗಶೀಲ, ಪ್ರಗತಿಪರ ಕೃಷಿಕರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ನಮ್ಮ ರಾಜ್ಯದಲ್ಲಿ ಇದ್ದಾರೆಂಬುದು ಖುಷಿ ಕೊಡುವ ವಿಷಯ.

  ಉತ್ತರ
 3. ಮಾರ್ಚ್ 21 2011

  >>ಇನ್ನೊಂದು ವಿಷಯ. ಪ್ರಕೃತಿ ತಾಯಿಗೆ ಯಾವ ಯಾವ ನೆಲದಲ್ಲಿ ಯಾವ ಯಾವ ಬೆಳ ಬೆಳೆದು ಆಯಾ ಪರಿಸರಕ್ಕೆ ತಕ್ಕಂತೆ ಆರೋಗ್ಯಕ್ಕೆ ಹಾನಿಯಾಗದಂತೆ ಜನರಿಗೆ ಏನೇನು ತಿನ್ನಿಸಬೇಕೆಂದು ಗೊತ್ತಿದೆ. ಅದು ತಿನ್ನಿಸಿದ್ದನ್ನು ತಿಂದು ಆರೋಗ್ಯಕರವಾಗಿ ಇರುವುದು ಬಿಟ್ಟು ನಾವು ಅಧಿಕ ಪ್ರಸಂಗ ಮಾಡುವುದೇಕೆ? ಯಾವ ಕಾಲದಲ್ಲಿ ಯಾವುದನ್ನು ತಿನ್ನಿಸಬೇಕೆಂದೂ ಸಹ ತಾಯಿಗೆ ಗೊತ್ತು. ಆಯಾ ಕಾಲದಲ್ಲಿ ಬೆಳೆಯುವ ಹಣ್ಣು ಕಾಳು ತಿಂದು ಬದುಕಬಾರದೆ? ಇದು ಸ್ವದೇಶಿ, ಸ್ವಾವಲಂಬನೆ ಕಡೆ ಮೊದಲ ಹೆಜ್ಜೆ.>>

  ಒಪ್ಪುವ೦ಥಹ ಮಾತು ಹಾಗೂ ಸ೦ಪೂರ್ಣ ಲೇಖನ ಇ೦ದು ನಮ್ಮ ರೈತರು ಕುರುಡಾಗಿ ಇಡುತ್ತಿರುವ ಸಾವಯವ ಕೃಷಿಯ ತಪ್ಪು ಹೆಜ್ಜೆಗಳತ್ತ ಬೆಳಕು ಚೆಲ್ಲಿದೆ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  ಉತ್ತರ
 4. basavaaj
  ಮಾರ್ಚ್ 21 2011

  very good article.

  ಉತ್ತರ
 5. ಮಹೇಶ ಪ್ರಸಾದ ನೀರ್ಕಜೆ
  ಮಾರ್ಚ್ 21 2011

  ರೈತರು ಕುರುಡಾಗಿ ಸಾವಯವಕ್ಕೆ ಇಳಿಯುತ್ತಿದ್ದಾರೆಂದು ನನಗೆ ಅನಿಸುವುದಿಲ್ಲ. ಆಧುನಿಕ ವ್ಯವಸಾಯಕ್ಕೆ ಇರುವಂತೆ ಕೋಷ್ಟಕಗಳು, ಗ್ರಾಫುಗಳು ಸಾವಯವದಲ್ಲಿ ಸದ್ಯಕ್ಕೆ ಇಲ್ಲ. ಇಂತಿಷ್ಟಿ ದಿವಸಕ್ಕೆ ಇಂತಿಂಥಾ ವಿಷ ಹೊಡೆಯಬೇಕು, ಇಷ್ಟಿಷ್ಟಿ ಗೊಬ್ಬರ ಸುರಿಯಬೇಕು ಎಂದು ಪೂರ್ವ ನಿರ್ಧಾರಿತ ಕ್ರಮಗಳಿದ್ದಿದ್ದರೆ ರೈತರು ಅವನ್ನು ಕುರುಡಾಗಿ ಅನುಸರಿಸುತ್ತಿದ್ದರೋ ಏನೋ. ಅದೃಷ್ಟವಶಾತ್ ಹಾಗಿಲ್ಲ. ನೈಸರ್ಗಿಕ ಕೃಷಿ ಪ್ರಚಾರ ಮಾಡಿದ ಪಾಳೇಕರ್, ಭಾಸ್ಕರ್ ಸಾವೆ ಮುಂತಾದವರು ಸ್ವತಹ ತಮ್ಮ ಪುಸ್ತಕದಲ್ಲಿ ಒಂದು ಪ್ರದೇಶದ ಪಧ್ಧತಿಗಳನ್ನು ಯಥಾವತ್ತಾಗಿ ಅನುಸರಿಸುವುದರ ಅಪಾಯಗಳ ಬಗ್ಗೆ ಬರೆದಿದ್ದಾರೆ. ಹಾಗಾಗಿ ಇಂಥವರಿಂದ ಪ್ರೇರಿತರಾದವರು ಕುರುಡಾಗಿ ಅನುಸರಿಸುತ್ತಾರೆ ಎಂದರೆ ನಂಬಲು ಕಷ್ಟ. ಆದರೆ ಕೃಷಿ ವಿವಿ ಗಳು ಪ್ರಚಾರ ಮಾಡುವ ಸಾವಯವದ ಬಗ್ಗೆ ಈ ರೀತಿ ಹೇಳಲಾಗದು. ಅವರಿಗೆ ಅದೇ ರಾಸಾಯನಿಕ ಪಧ್ಧತಿಯ ಚಾಳಿ ಮುಂದುವರೆಸುತ್ತಿದ್ದಾರೆ ಅನಿಸುತ್ತದೆ. ಅಲ್ಲದೆ ಕೃಷಿ ವಿವಿ ಗಳಲ್ಲಿ ಓದುವವರು ಅದೆಷ್ಟು ಮೂರ್ಖರಾಗಿರುತ್ತಾರೆಂದರೆ ನಾನು ಒಂದು ಬಾರಿ ಜಿಕೆವಿಕೆ ಗೆ ಹೋಗಿದ್ದಾಗ ಅಲ್ಲಿನ ಹೊಲದ ಪಕ್ಕ ನಿಂತಿದ್ದ ವಿದ್ಯಾರ್ಥಿಯೋರ್ವ “ಈ ಹೊಲದಲ್ಲಿರುವ ಬೆಳೆ ಯಾವುದು” ಅಂತ ನನ್ನನ್ನೇ ಕೇಳಹತ್ತಿದ್ದ! ಇಂತಹವರಿಂದ ರೈತರಿಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ.

  ಉತ್ತರ
 6. tumkur s.prasd
  ಮಾರ್ಚ್ 21 2011

  ಚಿ೦ತಿಸ ಬೇಕಾದ ಲೇಖನ, ವಂದನೆಗಳು

  ಉತ್ತರ
 7. ಮಾರ್ಚ್ 23 2011

  ಶೀರ್ಷಿಕೆ ಮೂರ್ಖತನದ್ದು ಅನ್ನಿಸುವುದರೊಳಗಾಗಿಯೇ ಒಳಗಿನ ವಿಷಯ ಸರಿಯೆನಿಸಿತು.

  ಉತ್ತರ
 8. Satish
  ಮಾರ್ಚ್ 23 2011

  Hi Harsh avare, Article tumba chanagide..
  adre, Onde mathenali savayava yambdu murkatana ando tapppallive ? neevu e vishya dali yestu parnitraru?
  yavadu visheya da bake mathaduvaga.. sambada pata visheya dali halvada gyan erabeku alve?
  rasaninkeka gobarekitan.. Savaya gobara bhoomi tayira Odalu seruvdu uttam alvave ?

  ಉತ್ತರ
 9. sriharsha
  ಮಾರ್ಚ್ 25 2011

  ಬರಹವನ್ನು ಮೆಚ್ಚಿದ ಎಲ್ಲರಿಗೂ ವಂದನೆಗಳು.

  ತಲೆ ಬರಹದ ಬಗ್ಗೆ ಬಹುತೇಕರಿಗೆ ಅಸಹನೆಯಿದೆ. ಆದರೆ ಈ ತಲೆಬರಹ ಅನೇಕರಲ್ಲಿ (ಟೀಕೆ ಮಾಡುವ ಸಲುವಾಗಿಯಾದರೂ ಸರಿ! 😉 ) ಓದುವ ಹಂಬಲ ಹುಟ್ಟಿಸಿದ್ದು ದಿಟ.
  ಓದಿ ಬೆಂಬಲಿಸಿದ ತಮ್ಮೆಲ್ಲರಿಗೆ ನಾನು ಋಣಿ.

  @ ಮಹೇಶ್,

  ಕುರುಡಾಗಿ ಅನುಸರಿಸಿ ಕೈ ಸುಟ್ಟು ಕೊಂಡವರಿದ್ದಾರೆ. ಅದಕ್ಕಾಗಿಯೇ ಈ ಲೇಖನ. ಇತ್ತೀಚಿಗೆ ವೇಗವಾಗಿ ಹಣ ಮಾಡುವ ಚಾಳಿಯಿಂದಾಗಿ ಈ ಅವಘಡಗಳು ನಡೆಯುತ್ತಿದೆ.
  ಕೃಷಿ ವಿವಿ ಗಳ ಬಗ್ಗೆ ತಾವು ಹೇಳಿದ್ದನ್ನು ನಾನು ಅನುಮೋದಿಸುತ್ತೇನೆ.

  @ಸತೀಶ್
  ಸಾವಯವ ಕೃಷಿಗೆ ನನ್ನ ಲೇಖನ ಪೂರಕವಾಗಿದೆ ಎಂಬುದು ತಮಗೆ ತಿಳಿದಿದೆ ಎಂದುಕೊಳ್ಳುತ್ತೇನೆ.
  ಸಾವಯವ ಕೃಷಿಯ ಹೆಸರಲ್ಲಿ ಇತ್ತೀಚಿಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮತ್ತು ನಾವು ಮಾಡುತ್ತಿರುವ ತಪ್ಪುಗಳ ಬಗ್ಗೆ ಇಲ್ಲಿ ಹಂಚಿಕೊಂಡಿದ್ದೇನೆ.

  ಉತ್ತರ
 10. murthy
  ನವೆಂ 2 2012

  There is no hard and false rules in agriculture. It is as good as going along with Nature and learn the behaviors of nature and adopt in our agriculture. Fertility of the soil is how much live the soil is. We must keep on increasing the microorganisms in the soil. Palekars Jeevamrutha is one of the culture media which increases the soil microorganisms but along with maintenance of moisture and mulching is very much necessary. So there is no necessary of blindly commenting any methods of cultivation practices. One spoon of the soil in our farm contains more number of microorganisms than the total number of human beings living on this earth. But our science knows only 1% of them and bifurcate among them pathogenic and non pathogenic and advice us to spray pesticides and fungicides and kill all the 99% unknown microorganisms who built and maintain life on this universe…
  It is just an advice to anybody not to come to any conclusions about these matters so suddenly as all these efforts are to save earth…..may it be organic cultivation or subhash palekar or bio dynamic agriculture or sustainable agriculture or natural farming.. The ultimate mission is to save earth and save ourselves..
  reply

  ಉತ್ತರ
 11. nagaraj
  ನವೆಂ 8 2012

  ಪ್ರಕೃತಿ ತಾಯಿಗೆ ಯಾವ ಯಾವ ನೆಲದಲ್ಲಿ ಯಾವ ಯಾವ ಬೆಳ ಬೆಳೆದು ಆಯಾ ಪರಿಸರಕ್ಕೆ ತಕ್ಕಂತೆ ಆರೋಗ್ಯಕ್ಕೆ ಹಾನಿಯಾಗದಂತೆ ಜನರಿಗೆ ಏನೇನು ತಿನ್ನಿಸಬೇಕೆಂದು ಗೊತ್ತಿದೆ. ನಮ್ಮ ಅಧಿಕ ಪ್ರಸಂಗ ಒಳ್ಳೆಯದಲ್ಲ.

  ಉತ್ತರ
 12. J.K.SALMAN
  ಡಿಸೆ 13 2016

  ಸೂಪರ್

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments