ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 24, 2011

ಎಂಡೋಸಲ್ಫನ್ ತಯಾರಕರ ದೇಶ ಸೇವೆ ಮುಖವಾಡ

‍ನಿಲುಮೆ ಮೂಲಕ

– ಗೋವಿಂದ್ ಭಟ್

ಎಂಡೋಸಲ್ಫನ್   ತಯಾರಕರ  ಹೊಸ ವರಸೆ   ಗಾಬರಿಯಾಗುತ್ತದೆ.  ಅವರೀಗ  ಯುರೋಪಿನ   ವಿಷ ತಯಾರಕರು  ಎಂಡೋಸಲ್ಫನ್  ಬಹಿಷ್ಕಾರ  ಚಳುವಳಿಯ ಹಿಂದಿದ್ದಾರೆ ಎಂದು  ಆಪಾದಿಸುತ್ತಿದ್ದಾರೆ. ಬಾರತದ  ತಯಾರಕರು   ಜೀವ  ಉಳಿಸುವ  ಔಷದಿಯಲ್ಲಿ  ಮೂಲವಸ್ತುಗಳ  ಹೆಸರಿನಲ್ಲಿ ತಯಾರಿಸಿ  ಕಡಿಮೆ  ಬೆಲೆಯಲ್ಲಿ ಮಾರಿದ್ದು  ಹಾಗೂ   ಸಮಾಜ    ಇವರಿಗೆ  ಬೆಂಬಲಿಸಿದ್ದು   ಈಗ   ಇತಿಹಾಸ.     ಈಗ  ಈ  ಕೀಟನಾಶಕ ವನ್ನೂ     generic ಅನ್ನೋ  ಮುಖವಾಡದ    ಹವಣಿಕೆಯಲ್ಲಿದ್ದಾರೆ.   ನಾವು ಕಡಿಮೆ  ಬೆಲೆಯಲ್ಲಿ ಎಂಡೋಸಲ್ಫನ್   ತಯಾರು ಮಾಡಿ ಮಾರುವುದು  ಬಾರತದ  ರೈತರ  ಉದ್ದಾರ  ಮಾಡುವುದನ್ನು    ಯುರೊಪಿಯನರು    ಸಹಿಸುತ್ತಿಲ್ಲ.  ನಾವು    ಬಾಗಿಲು  ಹಾಕಿದರೆ  ಯುರೋಪಿನ  ತಯಾರಕರು  ಇದಕ್ಕಿಂತ  ಹಲವು ಪಾಲು ದುಬಾರಿಯ  ಮಾಲುಗಳನ್ನು  ಬಾರತದ  ರೈತರು  ಅವಲಂಬಿಸಬೇಕಾಗುತ್ತದೆ.
ನಾವಂತೂ  ಐವತ್ತೈದು ವರ್ಷಗಳಿಂದ  ಬಳಸುತ್ತಿರುವ  ಈ  ಕೀಟನಾಶಕವನ್ನು ತಿಂದರೆ  ಈಗಲೂ  ಕೀಟಗಳು  ಸಾಯುತ್ತವೆ  ಎನ್ನುವ  ಭ್ರಮೆಯನ್ನು  ಉಳಿಸಿಕೊಂಡಿದ್ದೇವೆ. ನಾನು  ವಾಸಿಸುವ  ಜಾಗದಿಂದ  ಕೇರಳದ  ಪಡ್ರೆ ಮತ್ತು  ಕರ್ನಾಟಕದ  ಕೊಕ್ಕಡ  ಎರಡೂ  ಮೂವತ್ತು ಕಿಮಿ ಒಳಗಿದೆ.  ಹಾಗಾಗಿ  ಇವರ ಮಾತಿಗೆ ಮರುಳಾಗುವುದು  ಕಷ್ಟವಾದರೂ  ಇದರಲ್ಲಿ ನಿಜ ಇರಬಹುದೋ  ಗೊಂದಲ  ಉಂಟುಮಾಡುತ್ತದೆ. ಹಾಗೆ  ಈ  ಎಂಡೊ ವಿರೋದಿಗಳು ಕೊಕ್ಕಡ  ಮತ್ತು   ಪಡ್ರೆ ಹಾಗೂ  ಸುತ್ತಲಿನ  ಗ್ರಾಮಸ್ಥರೋ  ಯುರೋಪಿನ   ಗುಮ್ಮನೋ ??   ದೂರ  ಇರುವವರಿಗೆ  ಆಫ್ರಿಕದಲ್ಲಿ  ಎಂಬಂತೆ  ಇದೊಂದು  ಸುದ್ದಿಯಷ್ಟೇ
ಈ  ದಿಕ್ಕು ತಪ್ಪಿಸುವ   ಆಂದೋಲನ  ಕೆಲವೊಮ್ಮೆ   ಪ್ರಯೋಜನ  ಕಾಣುತ್ತದೆ.  ಕೆಲವೊಮ್ಮೆ   ಪರಿಚಿತರೊಂದಿಗೆ   ಮಾತುಕತೆಯೇ  ನಮ್ಮ  ಆಲೋಚನಾಲಹರಿ   ಕೆಡಿಸುತ್ತದೆ.ಕಳೆದ ಇಪ್ಪತ್ತೈದು    ವರ್ಷಗಳಿಂದ  ಸಾವಯುವ  ಜಪಿಸುತ್ತಿರುವ  ನಾನು ಒಂದು  ವರ್ಷ   ಕಳೆನಾಶಕ    ಉಪಯೋಗಿದ್ದೇನೆ.  ಆಗ   ಕೆಲಸದವರ  ಕೊರತೆಯ  ಜತೆಗೆ  ಅಡಿಕೆ  ತೋಟದ  ಕಳೆಯ  ಅಡಿಯಲ್ಲಿ ಅಡಗಿ ಕುಳಿತಿತ್ತು.    ಕೂಡಲೇ  ಕಳೆ  ತೆಗೆಯುವುದು  ಅನಿವಾರ್ಯವಾಗಿತ್ತು.
ಹಲವು ವರ್ಷ  ಹಿಂದೆ    ಕೃಷಿಕರೊಬ್ಬರಿಗೆ  ಒಂದು ಹಳೆಯ  ಸಾಮಾನು ಒಂದರ ಮಾರಿದ್ದೆ.ಕೃಷಿ  ಬಗೆಗೆ  ಮಾತಾಡುವಾಗ  ಶೆಟ್ರು   ಕಳೆನಾಶಕ  ಒಂದರ  ಗುಣಗಾನ  ಮಾಡಿದರು.  ವಿದ್ಯಾವಂತರಾದ  ಅವರು ಮೊದಲು ಮಹಾಪಟ್ಟಣದಲ್ಲಿ  ಉನ್ನತ ಹುದ್ದೆಯಲ್ಲಿದ್ದರು.ಈ  ಹೊಸತಲೆಮಾರಿನ  ಕಳೆನಾಶಕದಲ್ಲಿ  ಬೇರೆ ಯಾವುದೇ  ಜೀವಿಗಳಿಗೆ  ತೊಂದರೆಯಿಲ್ಲವೆಂದು ಒತ್ತಿ ಹೇಳಿದರು. ಅದನ್ನು ತಯಾರಿಸುವ  ಎಕ್ಸಲ್     ಕಂಪೇನಿಯೊಂದು    ಪಟ್ಟಣ  ಕೊಳಚೆಗೆ  ಹಾಕಿದರೆ   ಅದನ್ನು  ಬೇಗನೆ  ಕೊಳೆಯುವಂತೆ  ಮಾಡುವ  ವೇಗವರ್ದಕ  ತಯಾರಿಸಿದ್ದೇವೆ  ಎಂದು  ಹೇಳಿಕೊಳ್ಳುತ್ತಿತ್ತು. ಈ  ಎಕ್ಸಲ್ ಕಂಪೇನಿ  ಎಂಡೊಸಲ್ಫನ್  ಸಹಾ  ತಯಾರಿಸುತ್ತದೆ.     ಹೀಗೆ  ಕಂಪೆನಿ   ಮತ್ತು  ಸಾಮುಗ್ರಿ  ಎರಡೂ  ಸೇರಿ   ನನ್ನ  ವಿವೇಚನೆಯಲ್ಲಿ   ಕಳೆನಾಶಕದ  ಬಗೆಗೆ   ಒಪ್ಪಿಗೆ  ಗಿಟ್ಟಿಸಿಕೊಂಡವು.  ನನ್ನಂತಹ  ವಿದ್ಯೆ  ಇದ್ದು  ಈ  ಕೃಷಿವ್ಯಾಪಾರಿ ಸಂಸ್ಥೆ  ಕುಯುಕ್ತಿ ಅರಿತವನೇ   ಹೊಂಡಕ್ಕೆ  ಬಿದ್ದರೆ,  ಅಮಾಯಕ  ಹಳ್ಳಿಗರು  ವರ್ಷಾನುಗಟ್ಟಲೆ   ಸುಲಭವಾಗಿ  ಮೋಸ ಹೊಂದುತ್ತಾರೆ.  ನಮ್ಮ  ವಿಜ್ನಾನಿಗಳು  ಅದಿಕಾರಿಗಳು  ರಾಜಕಾರಣಿಗಳು ಈ  ಕಂಪೇನಿಗಳ  ಬೆಂಬಲಕ್ಕೆ  ನಿಲ್ಲುತ್ತಾರೆ.

(ಚಿತ್ರ ಕೃಪೆ :endosulfanvictims.com)

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments