ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 25, 2011

28

ಬನ್ನಿ ತುಳುವಿನಲ್ಲಿ ಮಾತಾಡುವ…!

by ನಿಲುಮೆ

– ನಿಲುಮೆ

ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳುವನ್ನ ಕರ್ನಾಟಕದ ಕರಾವಳಿಯಿಂದ ಹಿಡಿದು ನಮ್ಮ ಕಾಸರಗೋಡಿನಲ್ಲೂ ಮಾತಾಡುತ್ತಾರೆ.ಅಲ್ಲಷ್ಟೇ ಯಾಕೆ ಕರ್ನಾಟಕದ ಮೂಲೆ ಮೂಲೆಯಲ್ಲಿ ನೆಲೆ ನಿಂತ ತುಳುವರು,ಹೊರ ರಾಜ್ಯದಲ್ಲಿ,ಹೊರ ದೇಶದಲ್ಲೂ ಮಾತಾಡುತ್ತಾರೆ.

’ತುಳು ಮಹಾಭಾರತ’ದ ಕಾಲ ೧೩ನೇ ಶತಮಾನ,’ತುಳು ದೇವಿ ಮಹಾತ್ಮೆ’ಯ ಕಾಲ ೧೫ನೇ ಶತಮಾನ.ಹಾಗೆಯೇ ’ತುಳು ಭಾಗವತ’ ’ಕಾವೇರಿ’ ಬಂದಿದ್ದು ೧೭ನೇ ಶತಮಾನದಲ್ಲಿ!

‘A comparative Grammar of the Dravidian or South Indian Family of Languages’ ಅನ್ನು ಬರೆದ ರೆವ್.ಕ್ಲಾಡ್ವೆಲ್ ಅವರು ’ದ್ರಾವಿಡ ಭಾಷೆಗಳಲ್ಲಿ ಸದೃಡವಾಗಿ ಬೆಳೆದು ನಿಂತ ಭಾಷೆ ತುಳು’ ಅಂದಿದ್ರು.

ವಿದ್ವಾಂಸರಿಂದ ಹೀಗೆಲ್ಲ ಹೊಗಳಿಸಿಕೊಂಡ ತುಳುವಿಗೊಂಡು ಲಿಪಿ ಇರಲಿಲ್ವಾ? ಬಾಲ್ಯದಲ್ಲಿ ನಮಗೆ ಸಹಜವಾಗಿ ಮೂಡುತಿದ್ದ ಪ್ರಶ್ನೆಯದು.ಅಪ್ಪ-ಅಮ್ಮರನ್ನ ’ತುಳುವನ್ನ ಬರೆಯಲು ಸಾಧ್ಯವಿಲ್ವಾ?’ ಅಂತ ಕೇಳಿದರೆ.’ತುಳುವಿಗೆ ತನ್ನದೇ ಆದ ಲಿಪಿ ಇಲ್ಲ ಮಗ,ಆದರೆ ಮಲಯಾಳಂ ಲಿಪಿ ಬಳಸಿ ತುಳುವನ್ನ ಬರೆಯುತ್ತಾರೆ ಅಂತಿದ್ರು ಅಮ್ಮ.ಬೆಳೆಯುತ್ತ ಬೆಳೆಯುತ್ತ ಅರಿವಿಗೆ ಬಂದಿದ್ದೇನೆಂದರೆ ಅಸಲಿಗೆ ಮಲಯಾಳಂ ಅನ್ನು ತುಳು ಲಿಪಿ ಬಳಸಿ ಬರೆಯುತ್ತಾರೆ ಅನ್ನುವುದು!

ಅತ್ತ ತುಳುನಾಡಿನ ಬ್ರಾಹ್ಮಣರ ಮೂಲಕ ಕೇರಳ ಪ್ರವೇಶಿಸಿದ್ದ ತುಳು ಲಿಪಿ ಮಲಯಾಳಂ ಭಾಷೆಗೆ ಲಿಪಿಯಾದರೆ, ಇತ್ತ ಜರ್ಮನ್ ಮಿಷನರಿಗಳು ತುಳು ನಾಡಿಗೆ ಬಂದು ಮುದ್ರಣ ಕಾರ್ಯಕ್ಕೆ ಕನ್ನಡದ ಬಳಕೆ ಶುರು ಮಾಡಿ ತುಳು ಬರಹಕ್ಕೆ ಕೊಡಲಿ ಪೆಟ್ಟು ಕೊಟ್ಟರು.ಬಹುಷಃ ಆಗ ನಿಂತ ತುಳು ಲಿಪಿಯ ಬಳಕೆ ಮತ್ತೆ ಶುರುವಾಗಲಿಲ್ಲ.ಎಲ್ಲೋ ಕೆಲವರು ಬರೆಯುತ್ತಿರಬಹುದಾದರೂ ಹೆಚ್ಚು ಜನ ತುಳುವನ್ನ ಬರೆಯಲು ಈಗ ಬಳಸುವುದು ಕನ್ನಡ ಲಿಪಿಯನ್ನೆ.ಆದರೂ ತುಳುವಿನಲ್ಲಿ ಬರಹಗಳು ಬರಬಹುದಾಗಿದ್ದ ಮಟ್ಟದಲ್ಲಿ ಬಂದಿಲ್ಲ.ಅದಿನ್ನೂ ಜನಪದರೊಳಗೆ ಜೀವಂತವಾಗಿದೆ ಇರುತ್ತದೆ.

ಇನ್ನು ಮುಂದೆ ಭಾಷೆಗಳು ಉಳಿದು ಬೆಳೆವುದು ಅಂತರ್ಜಾಲದಲ್ಲಿದ್ದಾಗ ಮಾತ್ರ ಅನ್ನುವ ಮಾತುಗಳು ಕೇಳಿ ಬರುತ್ತಿರುವ ಈ ಕಾಲಘಟ್ಟದಲ್ಲಿ,ಇಷ್ಟೆಲ್ಲ ಹಿನ್ನೆಲೆ ಇರುವ ಕರ್ನಾಟಕ ಕರಾವಳಿಯ ಮಣ್ಣಿನ ಮಕ್ಕಳ ಭಾಷೆ ತುಳುವಿನ ಬರಹಗಳನ್ನ ಅಂತರ್ಜಾಲದಲ್ಲಿ ಪಸರಿಸುವುದು ಮತ್ತು ಇನ್ನು ಹೆಚ್ಚು ಹೆಚ್ಚು ತುಳುವರನ್ನ ತುಳು ಬರಹದೆಡೆಗೆ ಸೆಳೆಯುವಂತೆ ಮಾಡುವುದು ನಿಲುಮೆ ತಂಡದ ಪುಟ್ಟ ಪ್ರಯತ್ನ.

ಈ ನಮ್ಮ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ,ಪ್ರೀತಿ,ಪ್ರೋತ್ಸಾಹ ಅತ್ಯಗತ್ಯ.

ಅಂದ ಹಾಗೆ ನಮ್ಮ-ನಿಮ್ಮ ತುಳು ಬ್ಲಾಗಿನ ಹೆಸರು ಪುದುಮೆ. ಪುದುಮೆ ಅಂದರೆ ಹೊಸತು ಅಂತಲೂ ಇಲ್ಲವೇ ಕಾಣಿಕೆ ಅನ್ನುವ ಅರ್ಥದಲ್ಲೂ ನೋಡಬಹುದು.ನಮ್ಮ ಪುದುಮೆ ತುಳು ಬರಹಕ್ಕೆ ’ಹೊಸತನ’ದ ಸ್ಪರ್ಶ ನೀಡಲಿ ಹಾಗೆಯೆ ತುಳುವಿಗೊಂದು ನಮ್ಮ ಪ್ರೀತಿಯ ’ಕಾಣಿಕೆ’ಯಾಗಲಿ ಅನ್ನುವ ಆಶಯ ನಮ್ಮದು.

ಎಂತ ಮಾರಾಯ್ರೆ,ಪುದುಮೆ ತುಳುವಿನಲ್ಲಿ ಮಾತ್ರ ಇರ್ತದಾ? ಅನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ,ಅದಕ್ಕೆ ನಮ್ಮ ಉತ್ತರ.’ಹಾಗೆಂತ ಇಲ್ಲ ಮಾರಾಯ್ರೇ.ಪುದುಮೆ ತುಳು ಬರಹಗಳಿಗೊಸ್ಕರವೇ ಇರುವ ಬ್ಲಾಗ್ ಆದರೂ ತುಳು ಸಂಬಂಧಿ ಕನ್ನಡ ಬರಹಗಳನ್ನ ಸಹ ನಾವು ಪ್ರಕಟಿಸುತ್ತೇವೆ’ 🙂

ಬೊಕ್ಕ,ತಡ ದಾಯೆ.ಬಲೆ ತುಳುಟ್ ಪಾತೇರ್ಗ 🙂

(ಮತ್ತೆ, ತಡವೇಕೆ.ಬನ್ನಿ ತುಳುವಿನಲ್ಲಿ ಮಾತಾಡುವ)

(ಚಿತ್ರ ಕೃಪೆ : yakshagana.com)

28 ಟಿಪ್ಪಣಿಗಳು Post a comment
 1. sriharsha
  ಮಾರ್ಚ್ 25 2011

  ಬಹುಷಃ ತುಳು ಲಿಪಿ ಬಳಕೆಯಲ್ಲಿದ್ದರೆ ಉತ್ತಮ ಸಾಹಿತ್ಯ ಮೂಡಿ ಬರುತ್ತಿತ್ತೇನೋ..

  ಏಕೆಂದರೆ ಪಂಜೆ ಮಂಗೇಶರಾಯರು, ಕಯ್ಯಾರರು, ಬೋಳುವಾರರು, ಹೆಗ್ಗಡೆಯವರು, ಕಾರಂತರು ಇನ್ನೂ ಅನೇಕರು ತುಳು ಜನರಿಂದ ಸುತ್ತುವರಿದ ನಾಡಿನಿಂದ ಬಂದವರು,
  “ಪುರುಮೆ ” ಯಲ್ಲಿ ನಮಗೆ ತುಳು ಕಳಿಸಿಕೊಡಿ ಮಾರಾಯರೇ..
  ಕಲಿಕೆ ಇಲ್ಲಿಂದಲೇ ಆರಂಭವಾಗಲಿ
  ತುಳು ಬಲು ಪೋರ್ಲುಂಡ್ ಮಾರಾಯರೇ..

  ಉತ್ತರ
 2. ಮಾರ್ಚ್ 25 2011

  ’ಪಂಚ ದ್ರಾವಿಡ’ ಇದು ತಪ್ಪು….ದ್ರಾವಿಡ ಬಾಶೆಗಳು ಬರೀ ಅಯ್ದೇ ಅಲ್ಲ ..ಅದಕ್ಕಿಂತ ಹೆಚ್ಚಿವೆ. ಪಾಕಿಸ್ತಾನದಲ್ಲಿರುವ ಬಹ್ರೂಹಿ/ಬಹ್ರೂಯಿ ಕೂಡ ದ್ರಾವಿಡ ನುಡಿಯೇ.

  ದ್ರಾವಿಡದಲ್ಲಿ ಮೂರು ಬಗೆ ಇದೆ
  1. South dravidian – Kannada, Tamil, Tulu, Malayalam,Kodagu(Kodava), ಕೋಟ, ತೋಡ
  2. Central Dravidian – Telugu, Gadba
  3. North dravidian – Kurukh, malto, Bahruhui

  ಉತ್ತರ
  • ಮಾರ್ಚ್ 25 2011

   ಭರತ್,

   ನಿಜ ದ್ರಾವಿಡ ಭಾಷೆಗಳು ಐದೇ ಅಲ್ಲ.ಆದರೆ ಪಂಚ ದ್ರಾವಿಡ ಭಾಷೆ ಅನ್ನೋ ಪದ ಬಳಕೆ ಇದೆಯಲ್ವಾ? ಕನ್ನಡ,ತುಳು,ತಮಿಳು,ತೆಲುಗು,ಮಲಯಾಳಮ್ಗಲ್ನ್ನ ಪಂಚ ದ್ರಾವಿಡ ಭಾಷೆಗಳು ಅನ್ನುತಾರಲ್ವೆ? ಹಾಗಷ್ಟೇ ‘ಪಂಚ’ ಅಂತ ಬಳಸಿದ್ದೇವೆ.ಇರುವುದೇ ಪಂಚ ದ್ರಾವಿಡ ಭಾಷೆಗಳು ಅಂತ ಅರ್ಥ ಮಾಡಿಕೊಳ್ಳಬೇಡಿ 🙂

   ನಿಮ್ಮೊಲುಮೆಯ,
   ನಿಲುಮೆ

   ಉತ್ತರ
   • ಮಾರ್ಚ್ 25 2011

    ’ಪಂಚ ದ್ರಾವಿಡ’ ಪದಬಳಕೆನೆ ತಪ್ಪು ಅಂತ ನಾನು ಹೇಳುತ್ತಿರುವುದು. ಹಾಗೆ ಹೇಳುವುದು ಇತರ ದ್ರಾವಿಡ ನುಡಿಗಳಿಗೆ ಅನ್ಯಾಯ ಮಾಡಿದಂತೆ. ಅಲ್ಲವೆ?

    ಯಾರೊ ಮಾಡಿದ ತಪ್ಪನ್ನು ನಾವು ಮುಂದುವರೆಸಬಾರದು ಅಲ್ವೆ?

    ನನ್ನಿ,
    ಬರತ್

    ಉತ್ತರ
   • ಮಾರ್ಚ್ 26 2011

    ಹಾಗೆ ನೋಡ್ತಾ ಹೋದರೆ, ದ್ರಾವಿಡ ಅನ್ನೋದು ಬರೀ ತಮಿಳಿಗೆ ಮಾತ್ರ ಅನ್ವಯವಾಗುವ ಕಾಲವೂ ಇತ್ತು – ದ್ರಾವಿಡ ಕರ್ನಾಟಾಂಧ್ರ ಭಾಷೆ ಹೀಗೂ ಕರೆಯುತ್ತಿದ್ದಿದುಂಟು. ಹಾಗೇ ನೀವು ಹೇಳಿದಂತೆ ಐದು ಮುಖ್ಯವಾದುವನ್ನು ಒಟ್ಟಿಗೆ ಪಂಚದ್ರಾವಿಡವೆಂದೂ ಕರೆಯುತ್ತಿದ್ದಿದ್ದುಂಟು.

    ಉತ್ತರ
    • ಮಾಯ್ಸ
     ಮಾರ್ಚ್ 27 2011

     ಇಂದಿಗೂ ದ್ರಾವಿಡ ಅಂದರೇ ತಮಿಳೇ..

     ನಾವು ಕನ್ನಡಿಗರು ಎಂದೂ ದ್ರಾವಿಡರು ಎಂದು ಕರೆದುಕೊಂಡಿದ್ದೇ ಇಲ್ಲ.

     ಆದರೆ Cadwell ಭಾಷಾಸಾಮ್ಯತೆಗಳ ಆಧಾರದ ಮೇಲೆ ತಮಿಳು, ಕನ್ನಡ ಮುಂತಾದವು ಒಂದು ಕುಟುಂಬಕ್ಕೆ ಸೇರುವ ಭಾಷೆಗಳು ಎಂದು ಹೇಳುವಾಗ, ಅವರೇ ತಾವು ಮದ್ರಾಸಿನಲ್ಲಿರುವ ಕಾರಣ ದ್ರಾವಿಡ ಎಂಬ ಪದವೂ ಸೂಕ್ತವಲ್ಲದಿದ್ದರೂ ಬೇರೊಂದು ಪದ ತೋಚದೇ ಇಟ್ಟಿದ್ದೇನೆ ಎಂದು ಹೇಳಿದ್ದಾರೆ ಅವರ ಹೊತ್ತಗೆಯಲ್ಲಿ.

     ಅದಕ್ಕೇ ದ್ರಾವಿಡ ಪದದ ಬಗ್ಗೆ ಕನ್ನಡ, ತೆಲುಗು ವಿದ್ವಾಂಸರೂ ಇಂದಿಗೂ ತಗಾದೆ ತೆಗೆಯುವುದು ಹಾಗು ಅದು ಸಕಾರಣವಾದುದೇ.!

     ಇನ್ನು ಪಂಚದ್ರಾವಿಡ ವಿಷಯವೇ ಬೇರೆ, ಅದು ಮೂಲವಾಗಿ ದಕ್ಷಿಣಾತ್ಯ ಐದು ಬ್ರಾಹ್ಮಣ ಪಂಗಡಗಳಿಗೆ ಉಪಯೋಗಿಸಿಹ ಪದ. ಕರ್ನಾಟ, ಮಳಯಾಳ, ತಮಿಳ, ಆಂಧ್ಯ ಹಾಗು ಕೊಂಕಣಸ್ತ/ದೇಶಸ್ತ/ಮರಾಟಿ ಬ್ರಾಹ್ಮಣರನ್ನು ಪಂಚದ್ರಾವಿಡ ಬ್ರಾಹ್ಮಣರು ಎಂದು ಕರೆಯುವುದುಂಟು. ಅದನ್ನು ಗೊಂದಲವೆಬ್ಬಿಸಿ ಪಂಚದ್ರಾವಿಡಭಾಷೆ ಎಂಬುದು ಬರೀ ಇತ್ತೀಚೆಯ ಕುಚೇಷ್ಟೆ!

     ಉತ್ತರ
     • ಮಾಯ್ಸ
      ಮಾರ್ಚ್ 27 2011

      ಒಮ್ಮೇ ಗೂಗಲ್ಲಲ್ಲಿ “ಪಂಚ ದ್ರಾವಿಡ” ಎಂದು ಹುಡುಕಿ, ಆಗ ಅದು ಬರೀ ತುಳುವಿಗೆ ಸಂಬಂಧಪಟ್ಟ ಬರಹಗಳಲ್ಲಿ ಬರುವುದು ಅಚ್ಚರಿ ತರುವುದು.

      ಉತ್ತರ
     • ಮಾರ್ಚ್ 29 2011

      ಮಾಯ್ಸಣ್ಣ ನಮಸ್ತೆ.
      ಒಂಬತ್ತು ಲಿಂಗಗಳೂ ಇರುವ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲು ಸಮಯ ಬೇಕು. ಸಾಕಷ್ಟು ಸಿದ್ಧತೆ ಮಾಡಿ ಉತ್ತರ ನೀಡುವೆ. ಲಿಂಗಂ ಒಂಬತ್ತು ತೆರಂ ಎನ್ನುವ ಕೇಶಿರಾಜನ ಮಾತುಗಳನ್ನು ಗಮನಿಸಿ ಆ ಕಾಮೆಂಟ್ ಹಾಕಿದೆ. ಉತ್ತರ ನೀಡಿದ್ದೇನೆ. ನಾನು ಸುಳ್ಳನಲ್ಲ. ನಾನವನಲ್ಲ 🙂

      ಉತ್ತರ
      • ಮಾಯ್ಸ
       ಮಾರ್ಚ್ 29 2011

       ಶಬ್ದಮಣಿದರ್ಪಣ ಇಲ್ಲೇ Digital library of India ಅಲ್ಲಿದೆ ನೋಡಿ 🙂

       ಒಂಬತ್ತು ಲಿಂಗವೋ :- ನಾನು, ನಾವು, ನೀನು, ನೀವು, ಅವನು, ಅವಳು, ಅದು, ಅವರು, ಅವು!

       ಕುಡಿಯುವೆನು, ಕುಡಿಯುವೆವು, ಕುಡಿಯುವಿಯೆ, ಕುಡಿಯುವಿರಿ, ಕುಡಿಯುವನು, ಕುಡಿಯುವಳು, ಕುಡಿಯುವರು, ಕುಡಿಯುವುದು, ಕುಡಿಯುವುದು.

       ಹೀಗೆ ಒಂಬತ್ತು ಎಸಗುಪದರೂಪಗಳುಂಟು! ಇದೇನು ತಾವು ಹೇಳಿದ್ದು?

       ಉತ್ತರ
       • ಮಾಯ್ಸ
        ಮಾರ್ಚ್ 29 2011

        ತಪ್ಪು ತಿದ್ದು :-
        ಕುಡಿಯುವುದು, ಕುಡಿಯುವುವು

        ಉತ್ತರ
 3. ಮಾರ್ಚ್ 25 2011

  ಅನ್ಯಾಯ ಎಂದೇನೂ ಇಲ್ಲ ಭರತ್. ಅಂತಹ ಅನೇಕ ಸಂಗತಿಗಳು ನಮ್ಮ ಭಾಷೆಯಲ್ಲಿವೆ. ಕನ್ನಡದಲ್ಲಿ ಒಂಬತ್ತು ಲಿಂಗಗಳಿವೆ ಎಂದರೆ ನಂಬುವಿರಾ? ಆದರೆ ಪ್ರಸಿದ್ಧ್ಹವಾದುವು ಮೂರು ಮಾತ್ರ. ಸ್ತ್ರೀ, ಪುಂ, ನಪುಂಸಕ ಎಂದು. ಹಾಗೇಯೇ ದ್ರಾವಿಡ ಭಾಷೆಗಳು ಹಲವಿದ್ದರೂ ಪ್ರಸಿದ್ಧವಾದುವು ಐದು ಭಾಷೆಗಳು .ಅವೇ ಪಂಚದ್ರಾವಿಡ ಭಾಷೆಗಳು.
  ಸಾತ್ವಿಕ್ ಎನ್ ವಿ

  ಉತ್ತರ
  • ಮಾರ್ಚ್ 25 2011

   ಇಲ್ಲಿ ’ಪ್ರಸಿದ್ದ್’ ಎಂಬುದು ಯಾವ ನೆಲೆಯಲ್ಲಿ. ನಾನು ’ಎಣಿಕೆ’ ಅನ್ಕೊಂಡಿದ್ದೀನಿ. ಎತ್ತುಗೆಗೆ, ಎಣಿಕೆಯಲ್ಲಿ ತುಳುವಿಗಿಂತ(1.95 Million) ಹೆಚ್ಚು ಮಾತಾಡುವವರು ಬ್ರಹುಯಿ ಮಂದಿ (2.2 Million).

   ದ್ರಾವಿಡದಲ್ಲಿ ಇರುವುದೇ ಅಯ್ದು ನುಡಿಗಳು ಎಂಬ ತಿಳುವಳಿಕೆ ಬಹಳ ಹಿಂದೆ ಇತ್ತು. ಹಾಗಾಗಿ ’ಪಂಚ ದ್ರಾವಿಡ’ ಎಂಬ ಬಳಕೆ ಬಂತು. ಆದರೆ ಈಗ ನಮ್ಮ ತಿಳಿವು ಹೆಚ್ಚು ವಿಸ್ತಾರಗೊಂಡಿದೆ. ದ್ರಾವಿಡ ನುಡಿಯ ಬಗ್ಗೆ ಹಲವು ಅರಕೆ/ಸಂಶೋದನೆಗಳು ನಡೆದಿವೆ. ಎತ್ತುಗೆಗೆ, ಈ ಹಿಂದೆ ’ಬಡಗ’ವನ್ನು ಕನ್ನಡದ ಒಳನುಡಿ(dialect) ಎಂದು ಹೇಳುತ್ತಿದ್ದವರು ಈಗ ’ಬಡಗ’ ಬರೀ ಒಳನುಡಿಯಲ್ಲ ಒಂದು ಬೇರೆ ನುಡಿ(Language) ಎಂದು ನುಡಿಯರಿಗರು(linguists) ಹೇಳುತ್ತಿದ್ದಾರೆ.

   ಉತ್ತರ
  • ರವಿ ಕುಮಾರ್ ಜಿ ಬಿ
   ಮಾರ್ಚ್ 26 2011

   @ಸಾತ್ವಿಕ್ ಎನ್ ವಿ,

   ದಯವಿಟ್ಟು ಆ ಒ೦ಬತ್ತು ಲಿ೦ಗಗಳ ಬಗ್ಗೆ ವಿವರ ಇದ್ದಲ್ಲಿ ಪ್ರಕಟಿಸಿ ಇದರಿ೦ದ ನನ್ನ೦ತಹವರಿಗೆ ತು೦ಬಾ ಅನುಕೂಲ ಆಗುತ್ತದೆ. ದಯವಿಟ್ಟು ಶೀಘ್ರ ಪ್ರಕಟಿಸಿ ಎ೦ದು ವಿನ೦ತಿಸಿ ಕೊಳ್ಳುವೆ.

   ಉತ್ತರ
 4. sriharsha
  ಮಾರ್ಚ್ 25 2011

  ಭರತ್ ಹೇಳಿಕೆಯನ್ನು ನಾನು ಅನುಮೋದಿಸುತ್ತೇನೆ.
  ಹಿಂದೆ ಆದ ತಪ್ಪನ್ನು ಸರಿಪಡಿಸದೆ ಅದೇ ತಪ್ಪನ್ನು ಮುಂದುವರಿಸಿಕೊಂಡು ಸಮರ್ತಿಸಿಕೊಳ್ಳುವುದು ಸರಿಯಲ್ಲ.

  ಒಂಬತ್ತು ಲಿಂಗಗಳಿದ್ದರೆ ಹೇಳಿ ಬಳಸೋಣ. ಎಲ್ಲ ದ್ರಾವಿಡ ಭಾಷೆಗಳು ಬೆಳಕಿಗೆ ಬರಬೇಕು

  ಉತ್ತರ
 5. ಮಾರ್ಚ್ 26 2011

  ತುಳು ಲಿಪಿ ಮಲೆಯಾಳ ಲಿಪಿ ಲೆಕ್ಕಾನೇ ಉಂಡತ್ತಾ… ? ಪೂರಾ ಅಕ್ಷರಲಾ ಚೂರು ಚೂರು ವ್ಯತ್ಯಾಸ ಆತೇ… ಕನ್ನಡ ಬಕ್ಕ ತೆಲುಗು ಉತ್ತಿಲೆಕ್ಕ.. 😉

  ಉತ್ತರ
 6. ಮಾಯ್ಸ
  ಮಾರ್ಚ್ 26 2011

  ೧. ತುಳು ನುಡಿಗಿಂತ ಸುಮಾರು ಎರಡು ಪಟ್ಟು ಹೆಚ್ಚು ಮಾತಾಡುವ ಗೊಂಡ ಹಾಗು ಕುಡಕ್ ಎಂಬ ದ್ರಾವಿಡ ನುಡಿಗಳಿವೆ. ಪಂಡ ದ್ರಾವಿಡ ಎಂಬ ಬಳಕೆ ತಪ್ಪು. ಹಾಗು ಒಂದು ವೇಳೆ ಪ್ರಮುಖ ಪಂಚ ದ್ರಾವಿಡ ನುಡಿಗಳನ್ನು ತೆಗೆದುಕೊಂಡರೆ ಆ ಪಟ್ಟಿಯಲ್ಲಿ ತೆಲುಗು, ತಮಿಳು, ಕನ್ನಡ, ಮಳಯಾಳ ಮತ್ತು ಗೊಂಡ ಬರುವುವು.
  ೨. ತುಳು ಲಿಪಿಯ ಬಗ್ಗೆ ಬರಿಯ ಊಹಾಪೋಹಗಳು. ತುಳುಲಿಪಿ ಎಂದು ಕೆಲವು ಸಾರುತ್ತಿರುವ ಲಿಪಿ ಹಿಂದೆ ಸಂಸ್ಕೃತ ಬರೆಯಲು ತಮಿಳು-ಮಳಯಾಳದಲ್ಲಿ ಬಳಸುತ್ತಿದ್ದ ಗ್ರಂಥ ಲಿಪಿಯಷ್ಟೆ! ಇವೆಲ್ಲ ಇಚ್ಚೀಗೆ ಬರುತ್ತಿರುವ ಊಹೆಗಳು
  ೩. ತುಳು ಸದೃಡ ಭಾಷೆ ಎಂಬುದು ಅನುಮಾನ. ಏಕೆಂದರೆ ತುಳು ಶಿಲಾಶಾಸನಗಳ ಬೆರಳೆಣಿಕೆಯಷ್ಟೂ ಇಲ್ಲ. ಮತ್ತು ಸಾಹಿತ್ಯ ಗ್ರಂಥಗಳು ಬೆಳರೆಣಿಕೆಯಷ್ಟು.
  ೪. ತುಳು ಮಾತಾಡುವ ಪ್ರದೇಶಗಳನ್ನು ಎಂದೂ ಕನ್ನಡ ಅರಸರೇ ಆಳಿರುವುದು. ಹಾಗೂ ಅವು ಎಂದೂ ಕನ್ನಡದ ಆಳ್ವಿಕೆಯಲ್ಲೇ ಇದ್ದುದು. ಬ್ರಿಟೀಶರ ಕಾಲದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಭಾಷೆ ಕನ್ನಡವೇ!
  ೫. ಈ ಪ್ರದೇಶಲ್ಲಿ ತುಳು ಮಾತಾಡುವವರು ಬಹುಸಂಖ್ಯಾತರೂ ಅಲ್ಲ. ಅಲ್ಲಿ ಹೆಚ್ಚಿನವರು ಮಾತಾಡುವ ಭಾಷೆ ಕನ್ನಡವೇ. ಇದರ ಜತೆ ಕೊಂಕಣಿ, ಬ್ಯಾರಿ ಕೂಡು ಮಾತಾಡುವರು.

  ಇಷ್ಟೆಲ್ಲ ತಪ್ಪುಮಾಹಿತಿಗಳಿದ್ದರೂ… ತುಳು ಒಂದು nearly endangered language. ಅದನ್ನು ಕಾಪಡುವ ಹೊಣೆ ತುಳುಗರದ್ದು.

  ಕನ್ನಡದಲ್ಲಿರುವುದು ನಾಲ್ಕು ಲಿಂಗಳು. ಶಂಕರಬಟ್ಟರ ಹೊತ್ತಿಗೆಗಳಂತೆ.
  ೧. ಸಾಮಾನ್ಯ ಮಾನುಷ ಲಿಂಗ – ಅವರು, ಮಂದಿ, ಜನ, ಕನ್ನಡಿಗರು, ತುಳುಗರು
  ೨. ಗಂಡು ಮಾನುಷ ಲಿಂಗ – ಅವನು, ಕನ್ನಡಿಗ, ತುಳಗ
  ೩. ಹೆಣ್ಣು ಮಾನುಷ ಲಿಂಗ – ಅವಳು, ಕನ್ನಡತಿ, ತುಳುಗಿತ್ತಿ
  ೪. ಅಮಾನುಷ ಲಿಂಗ – ಅದು/ಅವು, ಕನ್ನಡ, ತುಳು

  ಒಂಬತ್ತು ಲಿಂಗಳಾವುವು.. ಕುತೂಹಲ!

  ಉತ್ತರ
  • ಮಾರ್ಚ್ 26 2011

   ಮಾಯ್ಸ,

   ತುಳು ಭಾಷೆಯೆಡೆಗೆ ತಮ್ಮ ವಿಶೇಷ ಪ್ರೀತಿಯ ಅರಿವಿದೆ ನಮಗೆ.

   ತುಳು ಲಿಪಿಯನ್ನ ಸಂಸ್ಕೃತ ಬರೆಯಲು ಬಳಸುತಿದ್ದರು ಅನ್ನುವುದು ದಿಟ.ಹಾಗೆ ತುಳುವಿನಲ್ಲಿ ಸಾಹಿತ್ಯ ಗ್ರಂಥಗಳು,ಶಿಲಾಶಾಸನಗಳು ಇಲ್ಲದಿರಬಹುದು, ಬಹುಷಃ ಪತ್ತೆಯಾಗಿಲ್ಲದಿರಬಹುದು.ತುಳು ಮಾತಾಡುವ ಪ್ರದೇಶಗಳನ್ನು ಕನ್ನಡ ಅರಸರೆ ಆಳಿರುವುದು ಅಂದಿರಿ.ಆದರೇನು? ಕನ್ನಡಿಗರು ಮೇಲು ಅಂತಲೇ? ಕನ್ನಡಿಗರು ಅಲ್ಲಿ ಬಹುಸಂಖ್ಯತರಾದರೆನಿಗಾ?

   ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯ ತುಳುವರಸ ಅಂತರಲ್ವಾ? ಅವನ್ಯಾರು? ಕನ್ನಡಿಗನಾ? ಅವನು ಕನ್ನಡ ನಾಡನ್ನು ಆಳಲಿಲ್ಲವೇ? ತಮಗೆ ಉಲ್ಲಾಳದ ರಾಣಿ ಅಬ್ಬಕ್ಕ,ಗೇರು ಸೋಪ್ಪ ಚೆನ್ನಮ್ಮ ಅವರು ಗೊತ್ತಿರಬೇಕಲ್ಲ?

   ತಮ್ಮೊಡನೆ ತುಳುವಿನ ಬಗ್ಗೆ ಚರ್ಚಿಸುವ ಆಸಕ್ತಿ ನನಗಿಲ್ಲ.ದ್ವೇಷದ, ಕಿಡಿ ಹೊತ್ತಿಸುವ,ಕೀಳರಿಮೆಯನ್ನ ತೋರಿಸುವ ಪ್ರತಿಕ್ರಿಯೆಗಳನ್ನ ಬರೆಯುವುದನ್ನ ಸಾಕು ಮಾಡಿ.

   ಕಡೆಯದಾಗಿ, “ತುಳು ಒಂದು nearly endangered language” ಅಂದಿರಿ. ಹಾಗಾಗಲು ನಾವ್ಯಾರು ಬಿಡುವುದಿಲ್ಲ.

   ನಮಸ್ಕಾರ
   ರಾಕೇಶ್ ಶೆಟ್ಟಿ

   ಉತ್ತರ
   • ಮಾಯ್ಸ
    ಮಾರ್ಚ್ 27 2011

    ವಿಜಯ ನಗರ ಅವಸಾನವಾಗಿದ್ದೇ ತುಳುವ ವಂಶ ಅಧಿಕಾರಕ್ಕೆ ಬಂದ ಮೇಲೆ. ಅದರ ಬಗ್ಗೆ ಎಂ.ಎಂ.ಕಲಬರ್ಗಿಯವರು ಪ್ರಬಂಧಗಳನ್ನು ಅವಲೋಕಿಸತಕ್ಕದ್ದು.

    ಕನ್ನಡಿಗರು ಮೇಲು ಎಂದಲ್ಲ. ಆದರೆ ಆ ಪ್ರದೇಶದಲ್ಲಿ ಕನ್ನಡಗರೂ ಕೂಡ ಮೂಲ-ನಿವಾಸಿಗಳು.

    ಒಂದು ಊಹೆಯಂತೆ ತುಳು ತೆಲುಗಿಗೆ ಹತ್ತಿರವಾಗಿದೆ. ಆದುದರಿಂದ ತುಳು ಮಂದಿ ತೆಲುಗು ಮಾತಾಡುವ ಪ್ರದೇಶದಿಂದ ವಲಸೆ ಬಂದಿರಬಹುದು ಎಂಬ ವಾದವೂ ಇದೆ.

    ಅದೆಲ್ಲ ಮುಖ್ಯವಲ್ಲ. ತುಳು ಅಳಿವಿಗೆ ಹತ್ತಿರವಾಗುತ್ತಿರುವುದು ವಿಷಾದನೀಯ. ಅದರ ಉಳಿವಿಗೆ ತಕ್ಕ ಸವಲತ್ತು ದೊರೆತಯಬೇಕು..

    ತುಳುವೊಂದೇ ಅಲ್ಲ ಕರ್ನಾಟಕದಲ್ಲಿ ಸೋಲಿಗ, ಕೊರಗ, ಕೊಡವ, ಹಾಲಕ್ಕಿ, ಲಂಬಾಣಿ, ಹೀಗೆ ಅನೇಕ ಕ್ಷೀಣಿಸುತ್ತಿರುವ ಭಾಷೆಗಳಿವೆ. ಅವೆಲ್ಲವಕ್ಕೂ ಸವಲತ್ತುಗಳು ದೊರೆಯಬೇಕು.. ಆದರೆ ಅದು ಕರ್ನಾಟಕ ಸರಕಾರದಿಂದ ಸಾಧ್ಯವಿಲ್ಲ. ಏಕೆಂದರೆ ನಮ್ಮ ದೇಶ ಭಾಷಾನೀತಿ ಇರುವುದು ಕೇಂದ್ರದ ಕೈಯಲ್ಲಿ.!

    ಉತ್ತರ
    • ಮಾಯ್ಸ
     ಮಾರ್ಚ್ 27 2011

     ಈ ಬರಹ ಬರೆದವರ ಅರಿವಿನ ಮಟ್ಟ ಸೀಮಿತವಾದುದು. ಅದಕ್ಕೆ ಅದೇ ಅದೇ ಹಳೆಯ ತಪ್ಪುಗಳನ್ನೇ ಮತ್ತೆ ಹೇಳಿದ್ದಾರೆ. ಆದುದರಿಂದ ಒಂದು ಗಂಭೀರ ವಿಷಯ ಚರ್ಚಾಸ್ಪದವಾಗಿ ಹೋಗಿದೆ.

     ಆದುದರಿಂತಲೇ ಹರ್ಷ ಹಾಗೂ ಭರತ ಅವರು ಸಕಾರಣವಾದ ಪ್ರಶ್ನೆಗಳನ್ನು ಎತ್ತಿರುವುದು.!

     ರಾಕೇಶ ಶೆಟ್ಟಿಯವರ ಮಾತು ಯಾವ ಹೊಸತನ್ನೂ ಹೇಳದೇ ಒತ್ತು ಕಳೆದುಕೊಂಡಿದೆ.

     ಉತ್ತರ
 7. ಮಾರ್ಚ್ 26 2011

  @ಹರ್ಷ,ಭರತ್
  ಲೇಖನದಲ್ಲಿ ಇರುವುದು ಐದೇ ದ್ರಾವಿಡ ಭಾಷೆಗಳು ಅಂತ ಎಲ್ಲೂ ಹೇಳಿಲ್ಲ ಅಲ್ವಾ? ಮತ್ಯಾಕೆ ಇಷ್ಟೊಂದು ಚರ್ಚೆ? ರಾಷ್ಟ್ರ ಭಾಷೆಯ ಬಗ್ಗೆ ನಾನು ಬರೆದ ಲೇಖನದಲ್ಲೂ ಪ್ರತಿಯೊಂದು ಭಾಷೆಯ ಅಸ್ತಿತ್ವ ಮುಖ್ಯ ಅಂತಲೇ ಹೇಳಿದ್ದೇನೆ.ಇಲ್ಲಿಗೆ ಈ ಚರ್ಚೆಯನ್ನ ನಿಲ್ಲಿಸೋಣವೇ?

  @ಉಮೇಶ್,
  ತುಳು ಲಿಪಿನೆ ಮಲಾಯಳ ಲಿಪಿ ಅತ್ತೆ,ಅಂಚ ವೊಂಜೆ ಲೆಕ ತೋಜುಂಡು 🙂

  ಉತ್ತರ
  • ಮಾರ್ಚ್ 28 2011

   ರಾಕೇಶ್,

   “..ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳುವನ್ನ..” ಈ ಪದಕಂತೆಯಲ್ಲಿ ತಪ್ಪಿದೆ, ಯಾಕೆ ತಪ್ಪು ಅಂತ ಈಗಾಗಲೇ ಹೇಳಲಾಗಿದೆ. ಇದನ್ನ ನೀವು ಈ ತರ ಹೇಳಿದ್ದರೆ ಒಪ್ಪಿಕೊಳ್ಳಬಹುದಿತ್ತು –
   “..ಹಿಂದೆ ಪಂಚ ದ್ರಾವಿಡ ಭಾಷೆಗಳು ಎಂದು ಹೇಳಲಾಗುತ್ತಿದ್ದುದರಲ್ಲಿ ತುಳುವೂ ಒಂದು ಆದರೆ ಈಗ ದ್ರಾವಿಡ ಅಯ್ದೇ ಅಲ್ಲ, ಇನ್ನು ಹೆಚ್ಚಿವೆ..”

   ಇದನ್ನ ಒಪ್ಪಿ ಸರಿಮಾಡಿಕೊಂಡರೆ ನಿಮಗೆ ದ್ರಾವಿಡ ನುಡಿಗಳ ಬಗ್ಗೆ ಹೆಚ್ಚಿನ ತಿಳಿವಿದೆ ಅನ್ನಬಹುದು. ಇಲ್ಲ ನೀವು ತಿದ್ದಿಕೊಳ್ಳದಿದ್ದರೆ ನಿಮಗೆ ಹೊಸ ಹೊಸ ಅರಿವನ್ನು ಒಪ್ಪಿಕೊಳ್ಳುವ ಮನಸ್ಸಿಲ್ಲ ಅಂತ ನಾವು ತಿಳಿದುಕೊಳ್ಳಬೇಕಾಗುತ್ತದೆ. ನಿಮ್ಮಿಶ್ಟ !!

   ಉತ್ತರ
   • ಮಾರ್ಚ್ 29 2011

    ಸತ್ಯವನ್ನ ಒಪ್ಪಿಕೊಳ್ಳಲು ಹಿಂಜರಿಕೆ ಯಾಕಿರಬೇಕು ಭರತ್. ಹೊಸ ಅರಿವನ್ನ ಒಪ್ಪಿಕೊಳ್ಳುವ ಮನಸಿಲ್ಲದಿದ್ದರೆ ಅಥವಾ ಸತ್ಯದ ಮೇಲೆ ಸಮಾಧಿ ಕಟ್ಟುವ ಮನಸಿದ್ದಿದ್ದರೆ ನಾನು ಭಾಷೆಗಳ ಬಗ್ಗೆ ಬರೆಯಲು ಹೋಗುತ್ತಿರಲಿಲ್ಲ ಭರತ್.ನನ್ನ
    ರಾಷ್ಟ್ರಭಾಷೆಯಿಲ್ಲದ ರಾಷ್ಟ್ರದಲ್ಲಿ ಲೇಖನದಲ್ಲಿ ನಾನೇಳಿರುವ ಒಂದು ಮಾತು ಹೀಗಿದೆ “ಈ ದೇಶದ ಪ್ರತಿ ಭಾಗದ ಜನರ ಭಾಷೆ,ಆಚಾರ,ವಿಚಾರ,ಸಂಸ್ಕ್ರುತಿಗಳೇ ಭವ್ಯ ಭಾರತದ ಭವಿಷ್ಯವಾಗಬೇಕು” ಅಂತ.

    ಒಂದು ಕಡೆ ಕನ್ನಡ ಕನ್ನಡ ಅನ್ನುತ್ತ ಇನ್ನೊಂದು ಕಡೆ ಇದೆ ಮಣ್ಣಿನ ಇನ್ನೊಂದು ಭಾಷೆ,ಜನಾಂಗದ ಬಗ್ಗೆ ಸದಾ ಸಮಯ ಸಿಕ್ಕಾಗಲೆಲ್ಲ ನಂಜು ಕಾರುವಜನರು ಇದ್ದಾರೆ.ಅವರ ಹೊಟ್ಟೆ ತಣ್ಣಗಿರಲಿ.ಸಂತೋಷ ಕೊಡಬಲ್ಲ ಸುಳ್ಳಿನ ಅಗತ್ಯ ನಂಗಂತೂ ಇಲ್ಲ.ಹಾಗೆ ಒಂದು ಭಾಷೆಯ ಮೇಲೆ ಇನ್ನೊಂದು ಭಾಷೆ/ಭಾಷಿಕರು ಮಾಡುವ ಸವಾರಿಯನ್ನ ನಾನು ಒಪ್ಪುವುದಿಲ್ಲ.

    ನಮಸ್ಕಾರ

    ಉತ್ತರ
    • ಮಾಯ್ಸ
     ಮಾರ್ಚ್ 29 2011

     ಶ್ರೀಮಾನ್ ರಾಕೇಶ ಶೆಟ್ಟರೇ,

     ಕನ್ನಡಿಗರಿಗೆ ತುಳು, ಬ್ಯಾರಿ, ಕೊಂಕಣೀ, ಸೋಲಿಗ, ಹಾಲಕ್ಕಿಗನ್ನಡ, ಕುರುಬಗನ್ನಡ , ಉರ್ದು, ಲಂಬಾಣಿ ಹೀಗೆ ಇರುವ ಹಲವಾರು ಕಿರುನುಡಿಗಳ ಮೇಲೆ ದಬ್ಬಾಳಿಕೆ ನಡೆಸಬೇಕು ಎಂಬು ಒಳಬಯಕೆ ಇದ್ದಿದ್ದರೆ, ಅಕ್ಕಪಕ್ಕದ ರಾಜ್ಯಗಳಂತೆ ಕನ್ನಡವೊಂದೇ ಕಡ್ಡಾಯವೆಂದು ಸರಕಾರಕ್ಕೆ ತಿವಿದು ಮಾಡಿಸುತ್ತಿದ್ದರು. ಹಾಗೇ ತುಳು ಅಕಾಡೆಮಿ, ಕೊಂಕಣಿ ಅಕಾಡೆಮಿ, ತುಳು ಹಾಗು ಕೊಂಕಣಿಯನ್ನು ಕಲಿಸುವುದನ್ನು ನಿಲ್ಲಿಸುವಲ್ಲಿ ಕೆಲಸ ಮಾಡುತ್ತಿದ್ದರು. ಇಂತಹ ಯಾವುದಾದರೂ ಒಂದು ಕೆಲಸವನ್ನು ನಾವು ಕನ್ನಡಿಗರು ಎಸಗಿರುವುದು ನಿಮಗೆ ತಿಳಿದಿದೆಯೇ? ಕನ್ನಡಿಗರಶ್ಟು ಇನ್ನೊಂದು ನುಡಿಯೊಟ್ಟಿಗೆ ಹೊಂದಿ ಬದುಕವವರು ನಮ್ಮ ಸುತ್ತಲ ನಾಡಿನಲ್ಲೇ ಇಲ್ಲ ಎಂದು ಎಲ್ಲರು ಕೊಂಡಾಡುವರು.

     ಇಲ್ಲಿ ದಿಟವಾಗಿ ಬರತ, ನಾನು ಮುಂತಾದವರು ಮಾಡುತ್ತಿರುವ ಬೊಟ್ಟು ಏನೆಂದರೆ, ತುಳು ಉಳಿಯಬೇಕೆ ಅದು ಎಲ್ಲರ ಹಂಬಲ ಆದರೆ ಅದಕ್ಕೆಂದು ಸುಳ್ಳುಗಳನ್ನು ಮುಂದಿಡುವುದು ತರವಲ್ಲ.!

     ಕನ್ನಡಿಗರು ಕನ್ನಡವೊಂದನ್ನೇ ಕಾಪಾಡುವರು ಹಾಗು ಬೇರೆಯನ್ನು ಕಾಪಾಡಿಕೊಳ್ಳಲು ಬಿಡುವರು. ನಮಗೆ ಕನ್ನಡವೊಂದೇ ಒತ್ತಿನದು.
     ಆದರೂ ತುಳುಗರು ತುಳು ಸಮ್ಮೇಳನ ಮಾಡಿದಾಗ ಸರಕಾರ ದುಡ್ಡುಕೊಟ್ಟಿದಕ್ಕೆ ಯಾವ ಕನ್ನಡಿಗ ಐಬು ತೋರಿದನು ಹೇಳಿ?

     ಉತ್ತರ
     • ಮಾರ್ಚ್ 29 2011

      ಮಾಯ್ಸ,

      ಒಬ್ಬ ಕನ್ನಡಿಗನೇ ಆಗಿ ಕನ್ನಡಿಗರ/ಕನ್ನಡದ ಬಗ್ಗೆ ನಾನಿಲ್ಲೆಲ್ಲೂ ತಪ್ಪಾಗಿ ಪ್ರತಿಕ್ರಿಯಿಸಿಲ್ಲ.ನೀವು ನನ್ನ ಮಾತುಗಳನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ ಅನ್ನಿಸುತ್ತದೆ.

      ಉತ್ತರ
      • ಮಾಯ್ಸ
       ಮಾರ್ಚ್ 29 2011

       ಓಹೋ. ಹಾಗಾ!. ಸರಿ.. ಒಬ್ಬರು adjust ಮಾಡಿಕೊಂಡು compromise ಆಗಿಬಿಡೋಣ 🙂

       ಉತ್ತರ
    • ಮಾರ್ಚ್ 29 2011

     ಸರಿ ಹಾಗಾದರೆ ನಾನು ಹೇಳಿರುವ ಆ ಪದಕಂತೆಯನ್ನು ತಿದ್ದಿ ಸರಿಮಾಡಿ ಬರೆದುಬಿಡಿ. ಅಲ್ಲಿಗೆ ಮುಗೀತು

     ಉತ್ತರ
 8. ಮಾಯ್ಸ
  ಮಾರ್ಚ್ 28 2011

  ಕನ್ನಡದ ಬಗ್ಗೆ ಸುಳ್ಳು ಹೇಳಿದ ಸಾತ್ವಿಕ್!

  ಎಲ್ಲಿ ಕನ್ನಡದಲ್ಲಿರುವ ಒಂಬತ್ತು ಲಿಂಗಗಳು? ಇದಕ್ಕೆ ಉತ್ತರ ಕೊಡುವವರೆಗೂ ತಾವು ಸುಳ್ಳು ಹೇಳಿದ್ದೀರಿ ಅಂತಲೇ!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments