ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 29, 2011

9

ಭಾರತ-ಪಾಕ್ ಮಧ್ಯೆ ನಡೆಯುವುದು ಕೇವಲ ಪಂದ್ಯವಲ್ಲ!

by ರಾಕೇಶ್ ಶೆಟ್ಟಿ

– ರಾಕೇಶ್ ಶೆಟ್ಟಿ

ಅದನ್ನ ಕೇವಲ ಕ್ರಿಕೆಟ್ ಪಂದ್ಯ ಅಂತ ಹೇಳಲು ಸಾಧ್ಯವಾ? ನಾಳೆ ಬುಧವಾರ ಮಧ್ಯಾನ್ಹ ೨.೩೦ರ ನಂತರ ಬಹುತೇಕ ರಸ್ತೆಗಳು ಬಿಕೋ ಎನ್ನಲು ಶುರುವಾಗುತ್ತವೆ! ಎಂ.ಎನ್.ಸಿಗಳು ಸಹ ಉದ್ಯೊಗಿಗಳಿಗೆ ನಾಳೆ ವಿನಾಯಿತಿ ಕೊಡಲಿವೆ.(ಕೊಡದಿದ್ರೆ ಮಾಡೋ ಕೆಲ್ಸದಲ್ಲಿ ಯಡವಟ್ಟು ಮಾಡಿಬಿಡ್ತಾರೇನೋ ಅನ್ನೋ ಭಯಕ್ಕಾಗಿ 😉 ).ಜನ ಟೀವಿ ಮುಂದೆ ಕೂತ್ರೆ ಮುಗಿತು ಭಾರತ-ಪಾಕ್ ಕ್ರಿಕೆಟ್ ಸಮರದ ಫ಼ಲಿತಾಂಶ ಬರುವವರೆಗೂ ಅಲ್ಲಾಡಲಿಕ್ಕಿಲ್ಲ.

ಭಾರತ-ಪಾಕ್ ನಡುವೆ ನಡೆಯುವ ವಿಶ್ವಕಪ್ ಪಂದ್ಯ ಅಂದರೆ ಅದು ಸಮರವೇ ಸರಿ! ವಿಶ್ವಕಪ್ನಲ್ಲಿ ಭಾರತ-ಪಾಕ್ ಇದುವರೆಗು ೯೨,೯೬,೯೯ ಮತ್ತು ೨೦೦೩ ರಲ್ಲಿ ೪ ಬಾರಿ ಮುಖಾಮುಖಿಯಾಗಿವೆ.ಮತ್ತು ೪ ಬಾರಿಯು ಭಾರತ ಪಾಕಿಗಳಿಗೆ ಬಡಿದಿದೆ.ಅದರಲ್ಲೂ ವಿಶೇಷವಾಗಿ ಸಚಿನ್ನದ್ದು ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಆರ್ಭಟ ತುಸು ಹೆಚ್ಚು! ಅದರಲ್ಲೂ ೨೦೦೩ರಲ್ಲಿ ಸೌತ್ ಆಫ಼್ರೀಕಾದ ಲ್ಲಿ ನಡೆದ ಪಂದ್ಯದಲ್ಲಂತೂ, ’ಸಚಿನ್ನನ್ನ ಮೊದಲನೆ ಚೆಂಡಿನಲ್ಲೆ ಔಟ್ ಮಾಡಿ ಕಳಿಸುತ್ತೇನೆ’ ಅಂತ ಪಂದ್ಯದ ಮೊದಲೆ ಕಿರುಚಿದ್ದ ಶೋಯೆಬ್ ಅಖ್ತರ್ನನ್ನ ಅಟ್ಟಾಡಿಸಿ ಬಡಿದಿದ್ದ! ಬಹುಷಃ ಆ ಅನುಭವದಿಂದಾಗಿಯೋ ಏನೋ,ಈ ಭಾರಿ ಅಖ್ತರ್ ಬಾಯಿ ಬಿಟ್ಟಿಲ್ಲ. ಆದರೆ ಅಫ಼್ರಿದಿ ಮಾತ್ರ ಸಚಿನ್ ನೂರನೇ ಶತಕ ಬಾರಿಸಲು ಇನ್ನಷ್ಟು ಸಮಯ ಕಾಯಬೇಕು ಅಂದಿದ್ದಾನೆ.ಯಥಾ ಪ್ರಕಾರ ಬ್ಯಾಟಿನಲ್ಲೆ ಉತ್ತರ ಕೊಡೊ ಅಭ್ಯಾಸವಿರೋ ನಮ್ಮ ಲಿಟಲ್ ಮಾಸ್ಟರ್ ಪ್ರತಿಕ್ರಿಯಿಸಿಲ್ಲ!

ಆದರೆ ಭಾರತ-ಪಾಕ್ ಪಂದ್ಯ ಅಂದಾಗ ನನ್ಗೆ ನೆನಪಾಗುವುದು,ನಮ್ಮ ವೆಂಕಟೇಶ್ ಪ್ರಸಾದ್.ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಬೌಂಡರಿ ಬಾರಿಸಿ ಕೆಣಕಿದ ಅಮೀರ್ ಸೊಹೈಲ್ನನ್ನ ಮರು ಎಸೆತದಲ್ಲೆ ಬೋಲ್ಡ್ ಮಾಡಿ ಪೆವಿಲಿಯನ್ ದಾರಿ ತೋರಿಸಿದ್ದು ಯಾರು ತಾನೆ ಮರೆಯಲು ಸಾಧ್ಯ ಹೇಳಿ? ಸಿದ್ದು,ಜಡೇಜಾ,ದ್ರಾವಿಡ್ ಮತ್ತೆ ಯುವರಾಜ್ ಸಿಂಗ್ ಸಹ ಪಾಕ್ ವಿರುದ್ಧ ಪಂದ್ಯದಲ್ಲಿ ತೊಡೆತಟ್ಟಿ ನಿಂತವರಲ್ಲಿ ನೆನಪಿಗೆ ಬರುವಂತವರು.

ನ್ಯೂಸ್ ಚಾನೆಲ್ಗಳ ಪ್ರಕಾರ ಲಕ್ಷ ಕೋಟಿಗಳಷ್ಟು ಬೆಟ್ಟಿಂಗ್ ಆಗಿದೆಯಂತೆ.ನನಗೆ ನೆನಪಿದೆ, ೯೬ರ ಪಂದ್ಯದ ಸಮಯದಲ್ಲಿ ಒಬ್ಬರು ಭಾರತದ ಪರ ಬೆಟ್ಟಿಂಗ್ ಮಾಡಿದ್ರು.ಜೊತೆಗೆ ತಮ್ಮ ತಲೆಯ ಭಾರವನ್ನ ದೇವರಿಗು ಹೊರಿಸಿದ್ರು, ಅಂದ್ರೆ ಹರಕೆ ಹೊತ್ತು ಕೊಂಡಿದ್ರು.ಭಾರತ ಗೆದ್ರೆ ಕುರಿ ಬಲಿ ಕೊಡ್ತಿನಿ ಅಂತ.ಭಾರತ ಗೆದ್ದಿತು ಅವರು ಹರಕೆ ತೀರಿಸಿದ್ರು.ಒಂದ್ಸರಿ ಯೋಚ್ನೆ ಮಾಡಿ.ಈ ಮ್ಯಾಚ್ ಅಂದ್ರೆ ಕೇವಲ ಆಟಗಾರರಿಗೆ ಮಾತ್ರ ಟೆನ್ಷನ್ ಅಲ್ಲ.ನಮ್ಮ್ ಜನ ದೇವರನ್ನೂ ಬಿಡೋದಿಲ್ಲ.ಆ ಕಡೆಯವ್ರು ಹರಕೆ ಹಾಕಿ ಈ ಕಡೆಯವ್ರು ಹರಕೆ ಮಾಡಿ,ದೇವ್ರುಗಳು ಸಹ ಬಾರಿ ಚರ್ಚೆ ಮಾಡಿ ನಿರ್ಧಾರ ತಗೋತಾರೆ ಅನ್ನಿಸುತ್ತೆ 😉

ನಿರ್ಜನವಾಗುವ ರಸ್ತೆಗಳು ಮತ್ತೆ ರಂಗೇರುವುದು ಭಾರತ ಗೆದ್ದಾಗಲೇ.ಪಟಾಕಿಗಳು ಸದ್ದಿನೊಂದಿಗೆ.ಪಾಕಿಗಳು ಗೆದ್ದಾಗ ಪಟಾಕಿ ಹೊಡೆವ ಕಿಡಿಗೇಡಿಗಳೂ ಇಲ್ಲಿದ್ದಾರೆ ಅನ್ನುವುದು ಬೇರೆ ಮಾತು ಬಿಡಿ! ಕಡೆಗೆ ಅದೇ ದೊಡ್ಡ ರಂಪಾಟಕ್ಕೂ ಕಾರಣವಾಗಿದ್ದಿದೆ.ಅದೆಲ್ಲ ಬದಿಗಿರಲಿ.

ನಾಳಿನ ಪಂದ್ಯ ಹೇಗಿರುತ್ತೋ ಅನ್ನೋದೆ ಕುತೂಹಲ.ಈ ಬಾರಿಯ ತಂಡದ ಬಲಾ-ಬಲ ನೋಡಿದರೆ ಭಾರತದ ಬ್ಯಾಟಿಂಗ್ ಗಟ್ಟಿಯಿದೆ,ಆದರೆ ಬೌಲಿಂಗ್ ಅಷ್ಟಕಷ್ಟೆ.ಅತ್ತ ಪಾಕಿಗಳನ್ನ ನಿರ್ಲಕ್ಷಿಸುವಂತೆಯೆ ಇಲ್ಲ.ಖುದ್ದು ಅವರ ನಾಯಕ ಅಫ಼್ರಿದಿ ೨೧ ವಿಕೆಟ್ ಪಡೆದು ಫ಼ಾರ್ಮ್ನಲ್ಲಿದ್ದಾನೆ!

ಪ್ರಧಾನಿ ಮನಮೋಹನ್ ಸಿಂಗ್ ಪಾಕಿ ಪ್ರಧಾನಿಯವರನ್ನ ಆಹ್ವಾನಿಸಿದ್ದರೆ ಪಂದ್ಯ ವೀಕ್ಷಣೆಗೆ.ಆದರೆ ತೀರಾ ಕ್ರಿಕೆಟ್ ಪಂದ್ಯದಿಂದ ಎರಡು ದೇಶಗಳ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಮಾರ್ಗವಾಗಬಲ್ಲದು ಅನ್ನುವುದು ಅನುಮಾನ.

ಮೊದಲೆಲ್ಲ ಯಾವುದೇ ಪಂದ್ಯವಾದರು ನೋಡುತಿದ್ದ ನಾನು ಇತ್ತೀಚೆಗೆ ಯಾಕೋ ಕ್ರಿಕೆಟ್ ನೋಡುವುದನ್ನ ನಿಲ್ಲಿಸಿಯೆ ಬಿಟ್ಟಿದ್ದೇನೆ.ನಾ ನೋಡಿದ ಕಡೆಯೆ ಕ್ರಿಕೆಟ್ ಪಂದ್ಯ ಅದೇ ಭಾರತ-ಪಾಕ್ ನಡುವಿನ ೨೦-೨೦ ಫ಼ೈನಲ್! ಅದರ ನಂತರ ನೋಡ ಹೊರಟಿರುವುದು ಮತ್ತದೆ ನಾಳಿನ ಭಾರತ-ಪಾಕ್ ಪಂದ್ಯವನ್ನ! ನಾನಂತೂ ಭಾರತದ ಗೆಲುವಿಗಾಗಿ ಹಪಹಪಿಸುತಿದ್ದೇನೆ.ನೀವು?

ಭಾರತ ವಿಶ್ವಕಪ್ ಗೆಲ್ಲದಿದ್ದರೂ ಪರ್ವಾಗಿಲ್ಲ,ಆದರೆ ಪಾಕ್ ವಿರುದ್ಧ ಸೋಲಬಾರದು ಅನ್ನುವುದು ಪ್ರತಿಯೊಬ್ಬ ಭಾರತೀಯನ ಅಭಿಲಾಷೆ.ನಮ್ಮ ಭಾರತ ಗೆಲ್ಲಲಿ ಅಂತ ಹಾರೈಸೋಣ.

ಜೈ ಹೋ!

9 ಟಿಪ್ಪಣಿಗಳು Post a comment
 1. ssnkumar
  ಮಾರ್ಚ್ 29 2011

  > ಭಾರತ ವಿಶ್ವಕಪ್ ಗೆಲ್ಲದಿದ್ದರೂ ಪರ್ವಾಗಿಲ್ಲ,ಆದರೆ ಪಾಕ್ ವಿರುದ್ಧ ಸೋಲಬಾರದು ಅನ್ನುವುದು ಪ್ರತಿಯೊಬ್ಬ ಭಾರತೀಯನ
  > ಅಭಿಲಾಷೆ.ನಮ್ಮ ಭಾರತ ಗೆಲ್ಲಲಿ ಅಂತ ಹಾರೈಸೋಣ

  +1

  ಉತ್ತರ
 2. kannadiga
  ಮಾರ್ಚ್ 29 2011
 3. ಮಾರ್ಚ್ 29 2011

  ಯಾವಾಗಿನಿಂದ ಆಸ್ಟ್ರೇಲಿಯಾವನ್ನು ಭಾರತ ಸೋಲಿಸಿತೋ ಅಲ್ಲಿಂದ ಮಾಧ್ಯಮಗಳನ್ನು ನೋಡಿದ್ರಾ… ಟಿಆರ್ ಪಿಗಾಗಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ನೀಡುತ್ತಿರುವ ಹೈಪ್ ಯಾಕೋ ಅತಿಯಾಗುತ್ತಿದೆ ಎಂದೆನಿಸುತ್ತದೆ. ಅಭಿಮಾನ ಇರುವುದು ಸಹಜ ಆದರೆ ಅದನ್ನು ಬಿಂಬಿಸುವ ರೀತಿ ಮಾತ್ರ ಅಸಹ್ಯ ತರಿಸುತ್ತದೆ. ಆಜ್ ತಕ್ ಚಾನಲಿನಲ್ಲಂತೂ ನಾಳೆಯ ಪಂದ್ಯವನ್ನು ಮಹಾಯುದ್ಧ ಎಂದೇ ಕರೆಯಲಾಗುತ್ತಿದೆ. ಕೇವಲ ಮಾಧ್ಯಮಗಳನ್ನು ಹೊರತುಪಡಿಸಿ ಸೋಶಿಯಲ್ ನೆಟ್ವರ್ಕುಗಳಲ್ಲೂ ಇದು ಎರಡು ದೇಶಗಳ ನಡುವಿನ ಯುದ್ಧದ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ನಮಗೇಕೆ ಒಂದು ಪಂದ್ಯವನ್ನು ಪಂದ್ಯವೆಂದು ನೋಡಲು ಸಾಧ್ಯವಿಲ್ಲ, ಮಾಧ್ಯಮಗಳು ಏಕೆ ಸುದ್ದಿ ಸಿಕ್ಕಿದಾಕ್ಷಣ ಇಷ್ಟೊಂದು ಹಾರಾಡುತ್ತವೆ?

  ಉತ್ತರ
  • ಮಾರ್ಚ್ 29 2011

   ಮಾಧ್ಯಮಗಳ ಹೈಪ್ ಯಾವಾಗ ಇರೋದಿಲ್ಲ ಹೇಳಿ.ಅವರಿಗೆ ಹಬ್ಬದ ಸಮಯವಿದು ಮಜಾ ಮಾಡಲಿ ಬಿಡಿ 😉

   ಆದರೆ,ಭಾರತ-ಪಾಕ್ ಪಂದ್ಯವನ್ನ ಜನ ಕೇವಲ ಪಂದ್ಯವನ್ನಾಗಿ ನೋಡುವುದು ಕಡಿಮೆಯೇ ಅಲ್ವಾ?

   ಉತ್ತರ
  • ಮಾರ್ಚ್ 30 2011

   ಸಂತೋಷ್,
   ಮಾಧ್ಯಮಗಳಿಗೆ ಯಾವ ವಿಷಯವೂ ಆಗುತ್ತದೆ. ಅದು ಒತ್ತಟ್ಟಿಗಿರಲಿ.
   ಸಾಮಾನ್ಯ ಭಾರತೀಯನಿಗೆ ಈ ಪಂದ್ಯ ತೀರ ಹತ್ತಿರವಾಗಲು ಕಾರಣ, ಪಾಕಿಸ್ತಾನ ಮತ್ತು ಭಾರತದ ನಡುವಣ ಸಂಬಂಧ.
   ಈ ಸಂಬಂಧ ಎಷ್ಟೇ ಸುಧಾರಿಸಿದಂತೆ ಕಂಡುಬಂದರೂ, ಕೊನೆಗೆ ಹೋಗಿ ನಿಲ್ಲುವುದು ಮೊದಲಿದ್ದೆಡೆಯಲ್ಲಿಯೇ.

   ಉತ್ತರ
 4. Nataraj.H.K
  ಮಾರ್ಚ್ 29 2011

  Nijavaglu navu Pakisthanada virudda solale baradu idu Pratiyobba Bharatiyana tuditha

  ಉತ್ತರ
 5. ಮೋಹನ
  ಮಾರ್ಚ್ 29 2011

  ನಾನಂತೂ ನಾಳೆ ನನ್ ಕಾರಲ್ಲಿ ಬೆಂಗಳೂರಿನ (ಬಹುತೇಕ ಗಿಜಿಗುಡುವ) ರಸ್ತೆಗಳಲ್ಲಿ ೧೦೦ ಕಿ ಮಿ ವೇಗದಲ್ಲಿ ಓಡಿಸಬೇಕೆಂದಿದ್ದೇನೆ. 😉

  ಉತ್ತರ
 6. ಮಾರ್ಚ್ 30 2011

  ಜೈ ಹೋ!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments