ಅಜಕ್ಕಳ ಗಿರೀಶ್ ಭಟ್
ಕನ್ನಡದ ಬಗ್ಗೆ ಚರ್ಚೆಯಾಗುತ್ತಿರುವುದು ಸಂತೋಷ. ಬನವಾಸಿ ಬಳಗ ಹಾಗೂ ಶುಭಶ್ರೀಯವರ ಲೇಖನಗಳನ್ನು ಓದಿದೆ. ಈಗಾಗಲೇ ನಾನು ಹಿಂದಿನ ಒಂದು ಪ್ರತಿಕ್ರಿಯೆಯಲ್ಲಿ ಬರೆದಿರುವಂತೆ, ಅಲ್ಲಿ ಎತ್ತಲಾಗಿರುವ ಹಲವು ಅಂಶಗಳು ನನ್ನ ಪುಸ್ತಕದಲ್ಲಿ ಪ್ರಸ್ತಾಪವಾಗಿವೆ. ಆದರೂ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ನಾನು ಇಲ್ಲಿ ಮತ್ತೆ ಎತ್ತಿಕೊಳ್ಳಬಯಸುತ್ತೇನೆ. ಶಂಕರ ಭಟ್ಟರ ಸಿದ್ಧಾಂತಗಳ ಬಗ್ಗೆ ನಾನು ಬರೆದುದನ್ನು ವೈಜ್ಞಾನಿಕವಲ್ಲ, ವೈಯಕ್ತಿಕ ದಾಳಿ ಅಂತೆಲ್ಲ ಕರೆಯಲಾಗಿದೆ. ವಾದದ ವಿಷಯಗಳ ಬಗ್ಗೆ ಹೇಳುವುದಕ್ಕಿಂತ, ಶಂಕರ ಭಟ್ಟರ ವಾದಗಳ ಕುರಿತು ನಾನು ಬರೆದ ಹೊತ್ತಗೆಯ ಶೀರ್ಷಿಕೆಯ ಬಗ್ಗೆಯೇ ಹೆಚ್ಚು ಒತ್ತು ಕೊಟ್ಟು ಬರೆದಿದ್ದಾರೆ. ಇರಲಿ. ಇದು ಅಷ್ಟು ಮುಖ್ಯ ಅಂತ ನನಗೆ ಅನ್ನಿಸದಿದ್ದರೂ ಈ ಶೀರ್ಷಿಕೆಯ ಬಗ್ಗೆ ಆರೋಪವನ್ನು ಮತ್ತೆ ಮತ್ತೆ ಮಾಡಲಾಗಿರುವುದರಿಂದ ಸಮರ್ಥನೆ ನೀಡುವೆ. ಮೊದಲೇ ಸ್ಪಷ್ಟಪಡಿಸುತ್ತೇನೆ,ನನಗೆ ಆ ಹಿರಿಯ ಭಾಷಾವಿದ್ವಾಂಸರ ಬಗ್ಗೆ ತುಂಬ ಗೌರವ ಉಂಟು. ವೈಯಕ್ತಿಕ ದ್ವೇಷವಾಗಲೀ ಅಸೂಯೆಯಾಗಲೀ ಇಲ್ಲ ! ಇನ್ನು, ಶೀರ್ಷಿಕೆಯಲ್ಲಿ ಅವರ ಹೆಸರು ಯಾಕೆ ತರಬೇಕಿತ್ತು? ಅವರು ಏಕಾಂಗಿ ಎಂದು ಬಿಂಬಿಸುವ ಯತ್ನವೇ? ಇತ್ಯಾದಿ ಪ್ರಶ್ನೆಗಳೂ ಬಂದಿವೆ.
ಮೊದಲನೆಯದಾಗಿ ತಾವು ಹೇಳಿದ ಹಾಗೆ ವ್ಯಾಪಕವಾಗಿ ಹೊತ್ತಗೆಗಳನ್ನು ಬರೆಯುತ್ತಿರುವವರು ಅವರೊಬ್ಬರೇ. ಅವರನ್ನು ಬೆಂಬಲಿಸಿದ ವಿವಿಧ ವಿ.ವಿ.ಗಳ ಮುಖ್ಯಸ್ಥರು ಅಥವಾ ಇನ್ನಾರಾದರೂ (ಶುಭಶ್ರೀಯವರೂ ಸೇರಿದಂತೆ) ಬರೆಯಲಾರಂಭಿಸಿಲ್ಲ. ಇನ್ನು ಆರಂಭಿಸಲೂಬಹುದು. ಆರಂಭಿಸಿದರೆ ನನ್ನ ಆಕ್ಷೇಪವಿಲ್ಲ, ದುಖವೂ ಇಲ್ಲ. ಯಾರಾದರೂ ಬರೆದರೆ ನಾನು ಓದುವುದಿಲ್ಲ ಅಂತ ಶಪಥ ಕೂಡ ಮಾಡೊಲ್ಲ. ಯಾಕೆಂದರೆ ಓದದಿದ್ದರೆ ಓದದವರಿಗೆ ನಷ್ಟ ಅಂತ ನನಗೊತ್ತು. ಒಟ್ಟಿನಲ್ಲಿ ಈಗ ಸದ್ಯಕ್ಕೆ ನಿಜವಾಗಿ ಕತ್ತರಿ ಪ್ರಯೋಗ ಮಾಡಿದವರು ಅವರೊಬ್ಬರೇ.
ಅದು ಕನ್ನಡದ ಆರೋಗ್ಯ ಕಾಪಾಡಲು ಮಾಡಿದ ಶಸ್ತ್ರ ಚಿಕಿತ್ಸೆ ಅಂತ ನೀವು ಹೇಳುತ್ತೀರಿ. ತಪ್ಪಲ್ಲ. ಸಮಸ್ಯೆ ಇದ್ದರೆ ಶಸ್ತ್ರಪ್ರಯೋಗ ಮಾಡಿ ಅಂಗಾಂಗ ಛೇದ ಮಾಡಿ, ಆಂಪ್ಯುಟೇಟ್ ಮಾಡುವಂತೆ ಕತ್ತರಿಸುವುದಕ್ಕಿಂತಲೂ ಸಾಧ್ಯವಿದ್ದರೆ ಔಷಧಿ ಮೂಲಕ ಗುಣಪಡಿಸುವುದು ಉತ್ತಮ ಅಂತ ನನ್ನ ನಿಲುವು ಅಷ್ಟೆ. ಮತ್ಯಾರಾದರೂ ಹಲವರು ಅವರ ಹಾಗೆ ಹೊಸ ಬರಹದಲ್ಲಿ ಬರೆಯುತ್ತಿದ್ದರೆ ಶಂಕರ ಭಟ್ಟರ ಹೆಸರು ಶೀರ್ಷಿಕೆಯಲ್ಲಿ ಬಹುಶಃ ಬರುತ್ತಿರಲಿಲ್ಲ. ಅಥವಾ ಜಾಗವಿರುತ್ತಿದ್ದರೆ ಎಲ್ಲರ ಹೆಸರೂ ಬರುತ್ತಿತ್ತೇನೋ?
ಶುಭಶ್ರೀಯವರೇ ಹೇಳುವಂತೆ,”ಶಂಕರ ಭಟ್ಟರು ತಾವು ಹೊಸ ಬರಹದಲ್ಲಿ ಬರೆಯುತ್ತೇನೆ ಎಂದಿದ್ದರೆಯೇ ಹೊರತುನೀವು ಬರೆಯಿರಿ ಎಂದಿದ್ದಾರೆಯೇ?” ಹಾಗಾಗಿ ಸದ್ಯಕ್ಕೆ ಆ ಹಾದಿಯಲ್ಲಿ ಅವರೊಬ್ಬರೇ ಹೋಗ್ಗುತ್ತಿದ್ದಾರೆ ಮತ್ತು ಹಾಗೆ ಏಕಾಂಗಿಯಾಗಿ ಹೋಗಲು ಅವರು ಯಾವುದೇ ಭಯವನ್ನು ಹೊಂದಿಲ್ಲ ಅಂತಲೂ ಆಯಿತು. ಹೀಗಾಗಿ ಶಂಕರ ಭಟ್ಟರಿಗೇ ಇಲ್ಲದ ಆತಂಕ ಇತರರಿಗೆ ಯಾಕೋ ಗೊತ್ತಾಗುತ್ತಿಲ್ಲ. ( ಒಂದು ಮಾತು: “ತಾನು ಬರೆವೆ, ನೀವು ಬರೆಯಬೇಕೆಂದು ಅವರು ಹೇಳಿಲ್ಲ” ಎಂದು ವಾದಿಸುವುದು ಅವರನ್ನು ಸಮರ್ಥಿಸುವ ಸರಿಯಾದ ಕ್ರಮವಲ್ಲ, ಬದಲಾಗಿ ಅವರನ್ನು ದುರ್ಬಲಗೊಳಿಸುವ ವಿತಂಡವಾದ ಅದು .“ಕನ್ನಡ ಬರಹವನ್ನು ಸರಿಪಡಿಸೋಣ” ಎಂದರೆ ಅದು ನಾನೊಬ್ಬ ಮಾತ್ರ ಹೀಗೆ ಮಾಡುತ್ತೇನೆ , ನೀವು ಮಾಡಬೇಕೆಂದಿಲ್ಲ ಅಂತ ಅರ್ಥ ನೀಡುತ್ತದೆಯೇ? ಹಾಗೆಯೇ ತಮಿಳರಿಗೆ ಬೇಕಾದದ್ದು ಅವರಲ್ಲಿದೆ, ಅವರಿಗೆ ಬೇಕಾದರೆ ಅವರು ಮಾಡಿಕೊಳ್ಳುತ್ತಾರೆ ,ಅವರಿಗೆ ಕೊರತೆ ಇದೆ ಅಂತ ನಾವು ಹೇಳುವ ಅಧಿಕಪ್ರಸಂಗ ಬೇಡ ಎಂದು ಶುಭಶ್ರೀಯವರು ಸೂಚಿಸಿದ್ದಾರೆ. ಅದು ವೈಜ್ಞಾನಿಕವಾಗಿ ವಾದಿಸುವ ರೀತಿಯೇ? ಶಂಕರ ಭಟ್ಟರು ಎಲ್ಲಾದರೂ ಹಾಗೆ ವಾದಿಸಿದ್ದುಂಟೇ? ನನಗೊತ್ತಿಲ್ಲ. ಆದ್ರೂ ಅವರು ಹೇಳಿದ್ದಕ್ಕೆ ಅಗ್ರೀಡ್ ,. ತಮಿಳರಿಗೆ ಕೊರತೆಯಿದ್ದರೆ ಅವರ ತಲೆಬಿಸಿ.ನಮ್ಮದಲ್ಲ. ಓಕೆ. ಅದು ಹಾಗಿರಲಿ.)
ಇಷ್ಟಾಗಿಯೂ ಅವ್ರ ಹೆಸರನ್ನು ಶೀರ್ಷಿಕೆಯಲ್ಲಿ ಸೇರಿಸಿದ್ದು ಕೃತ್ರಿಮತೆ, ವೈಯಕ್ತಿಕ ನಿಂದೆ ಇತ್ಯಾದಿಯಾಗಿ ಯಾರಿಗಾದರೂ ಅನ್ನಿಸಿದರೆ ಅಂಥವರ ಕ್ಷಮೆಯನ್ನು ನಾನು ಕೋರುತ್ತೇನೆ. ಆ ಬಗ್ಗೆ ಶಂಕರ ಭಟ್ಟರ ಕ್ಷಮೆ ಕೂಡ ಇರಲಿ. ಅಂದ ಹಾಗೆ ಶುಭಶ್ರೀಯವರು, ಶಂಕರ ಭಟ್ಟರ ಈಗಿನ ಶಂಕರ ಬಟ್ ಎಂಬ ಹೆಸರನ್ನು ತಪ್ಪಾಗಿ ಶಂಕರ ಭಟ್ ಅಂತ ಯಾಕೆ ಬರೀತಾರೆ? ಪುಸ್ತಕದ ಶೀರ್ಷಿಕೆಯ ಬಗ್ಗೆ ಇನ್ನಷ್ಟು ಚರ್ಚಿಸುವುದರಲ್ಲಿ ಅರ್ಥವಿಲ್ಲ ಅಂತ ನನ್ನ ಅನಿಸಿಕೆ.
ಶಂಕರ ಭಟ್ಟರು ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದಾರೆ ಎಂದಲ್ಲ, ರಾಜಕೀಯ ಸರಿತನಕ್ಕೆ ಸೂಕ್ತವಾದ ಪರಿಭಾಷೆಯಲ್ಲಿ ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ ಅಂತ ನಾನು ಹೇಳುವುದು. ವರ್ಗಪ್ರಜ್ಞೆ ಕುರಿತು ನನ್ನ ಪುಸ್ತಕದಲಿ ಬರೆದ ಭಾಗದಲ್ಲಿ ಇದನ್ನು ವಿವರಿಸಿದ್ದೇನೆ. ಕೆಳವರ್ಗ ಮೇಲುವರ್ಗ ,ದಲಿತ ಬಂಡಾಯದವರು ತಮ್ಮನ್ನು ಬೆಂಬಲಿಸಬೇಕು ಅನ್ನುವ ಮಾತುಗಳು(ಕ.ಬ.ಸ. ಪು.೧೪೯) ಇತ್ಯಾದಿ ಅಂಶಗಳನ್ನು ಆಧರಿಸಿ ಈ ರೀತಿ ನಾನು ಹೇಳಿದ್ದೇನೆ.
ತಮಿಳರಿಗೆ ಭಾಷಾಸಂಕುಚಿತತೆ ಇಲ್ಲ ಎಂಬ ನಿಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ನನಗೇನೂ ಬೇಸರವಿಲ್ಲ. ನೀವನ್ನುವಂತೆ ಅವರದು ಕೇವಲ ಶಾಸ್ತ್ರೀಯ ಭಾಷೆಗೆ ಸಿಗುವ ಹಣದಲ್ಲಿ ಪಾಲು ಹಂಚಿಕೊಳ್ಳುವ ಬಗೆಗಿನ ತಕರಾರು ಅಂತಾದರೆ ಸಂತೋಷವೇ. ಭಾಷಾಭಿಮಾನ ಭಾಷಾಂಧತೆ ಇತ್ಯಾದಿ ಬಗ್ಗೆ ಬೇರೆ ಅವಕಾಶಗಳಿದ್ದಾಗ ಅಭಿಪ್ರಾಯ ಹಂಚಿಕೊಳ್ಳೋಣ. ಸದ್ಯಕ್ಕೆ ಆ ಬಗ್ಗೆ ಚರ್ಚೆ ಮಾಡುತ್ತ ಇಲ್ಲಿಯ ಮುಖ್ಯ ವಿಷಯಗಳನ್ನು ಮರೆಯುವುದು ತರವಲ್ಲ.
ಶಂಕರ ಭಟ್ಟರ ವಾದಕ್ರಮ ತಮಿಳು ಮಾದರಿ , ದ್ರಾವಿಡ ಚಳುವಳಿಯಂಥದ್ದು ಎಂದು ಹೇಳಿದರೆ ಅದು ವೈಜ್ಞಾನಿಕವಲ್ಲದ್ದು, ವೈಯಕ್ತಿಕ ಅಂತೆಲ್ಲ ಹೇಗಾಗುತ್ತದೆ?ಅದನ್ನು ಒಂದು ನಿಂದೆ ಅಥವಾ ಆರೋಪ ಅಂತ ಶುಭಶ್ರೀಯವರು ಯಾಕೆ ಪರಿಗಣಿಸುತ್ತಾರೆ? ಅವರಿಗೆ ಇದರಿಂದ ಎಷ್ಟು ಕೋಪ ಬಂದಿದೆ ಅಂದರೆ ಅವರು ಶಂಕರ ಭಟ್ಟರ ವಾದವನ್ನು ತಮಿಳು ಮಾದರಿ ಎಂದು ಸೂಚಿಸಿದ್ದಕ್ಕಾಗಿ ಅವರ ಪರವಾಗಿ ನನ್ನ ವಿರುದ್ಧ ಎಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತಾರೋ ಅಂತ ಆತಂಕ ನನಗೆ. ತಮಿಳು ಮಾದರಿ ಎಂದರೆ ಅದು ನಿಂದೆ, ಆರೋಪ ಅಂತ ಯಾಕೆ ಅನಿಸಬೇಕು? ಎಷ್ಟಾದರೂ ತಮಿಳರು ಭಾಷಾಂಧರಲ್ಲ , ಸಂಕುಚಿತರಲ್ಲ ಅಂತಂದ ಅವರ ಮಾತನ್ನೂ ಈಗ ನಾನು ಒಪ್ಪಿಬಿಟ್ಟಿದ್ದೇನೆ ತಾನೇ? ಅಂದರೆ ತಮಿಳು ಮಾದರಿ ಬಗ್ಗೆ ಶುಭಶ್ರೀಯವರಿಗೆ ಏನೋ ಅಸಮಾಧಾನವಿದೆ ಅಂತಾಯಿತು. ಅಥವಾ ಅದು ನನ್ನ ತಪ್ಪು ತಿಳುವಳಿಕೆ ಇರಬಹುದು ,ಬಿಟ್ಟುಬಿಡೋಣ.
ತಮಿಳು ನಮಗೆ ಮಾದರಿಯಾಗಬೇಕು ಅಂತ ಸ್ಪಷ್ಟವಾದ ಮಾತುಗಳಲ್ಲಿ ಶಂಕರ ಭಟ್ಟರು ಹೇಳಿದ್ದಾರೋ ಇಲ್ಲವೋ ಅಂತ ನನಗೆ ಗೊತ್ತಿಲ್ಲ. ಅವರು ಅದೇ ಶಬ್ದಗಳಲ್ಲಿ ಹಾಗೆ ಹೇಳಿದ್ದಾರೆ ಅಂತ ನಾನುಕೂಡ ಹೇಳಿಲ್ಲ. ಆದರೆ ಅವರ ಮಾತುಗಳ ಧ್ವನಿ ಏನು ಅಂತ ಯಾರಾದರೂ ಗ್ರಹಿಸಬಹುದು;( ಕ.ಬ. ಸರಿಪಡಿಸೋಣ ಪು.೬೮,೬೯) ಬ್ರಾಹ್ಮೀ ಲಿಪಿಯನ್ನು ತಮಿಳಿಗೆ ಅಳವಡಿಸಿಕೊಳ್ಳುವ ಸಮಯದಲ್ಲಿ ತಮಿಳಿನ ಬರಹಗಾರರು ಆ ಭಾಷೆಗೆ ಬೇಕಾಗುವ ಅಕ್ಷರಗಳನ್ನು ಮಾತ್ರ ಆರಿಸಿಕೊಂಡರು…. ಮುಂತಾದ ಮಾತುಗಳನ್ನು ನೋಡಿ. ತಮಿಳಿನಲ್ಲಿ ಸಾಧ್ಯವಾಗಿರುವುದು ಕನ್ನಡದಲ್ಲಿ ಯಾಕೆ ಸಾಧ್ಯವಾಗುವುದಿಲ್ಲ ಅಂತ ಪದರಚನೆ ಬಗ್ಗೆ ಮಾತಾಡುತ್ತ ಬೇರೊಂದೆಡೆ ಕೇಳುತ್ತಾರೆ(ಪು. ೩೧ ಕ.ಬ.ಸ.)
ನಾನು ಹೇಳಬೇಕಾದ ಬಹಳ ಮುಖ್ಯವಾದ ಸಂಗತಿಯೆಂದರೆ , ಶಂಕರಭಟ್ಟರು ಹೇಳುವ ರೀತಿಯ ಸುಧಾರಣೆಗಳನ್ನು ತಮಿಳರು ಎಂದೋ ಮಾಡಿದ್ದಾರೆ ತಾನೆ? ಅಲ್ಲಿ ಆ ಭಾಷೆಯ ಸ್ಥಿತಿಗತಿ ಹೇಗಿದೆ? ಈ ಸುಧಾರಣೆಗಳ ಕಾರಣದಿಂದಾಗಿ ಯಾವ ಗುಣಾತ್ಮಕ ಪರಿಣಾಮಗಳಾಗಿವೆ? ಇದನ್ನು ನೋಡಬೇಡವೆ?
ಜುಟ್ಟಿಗೆ ಮಲ್ಲಿಗೆ ಹೂವು ಮತ್ತು ಹೊಟ್ಟೆಗೆ ಹಿಟ್ಟಿನ ಬಗ್ಗೆ ಮಾತು ಬಂದಿದೆ. “ಜಗತ್ತಿಗೆ ಬೇಕಾದ್ದನ್ನು ನೀಡುವ ಸಾಮರ್ಥ್ಯ ಬೇಕು ಕನ್ನಡಕ್ಕೆ” ಅನ್ನುವುದರಲ್ಲಿ ಎರಡು ಮಾತಿಲ್ಲ. ಬನವಾಸಿ ಬಳಗದವರು ಹೇಳಿದಂತೆ ಕನ್ನಡಿಗರಿಗೆ ನೊಬೆಲ್ ಪ್ರಶಸ್ತಿ ಸಿಗಬೇಕೆಂಬ ಆಸೆ ನನಗೂ ಇದೆ. ಶಂಕರ ಭಟ್ಟರು ಆಶಿಸುವ ರೀತಿಯ ಸುಧಾರಣೆ ಸ್ವಲ್ಪ ಮಟ್ಟಿಗಾದರೂ ಆಗಿರುವ ತಮಿಳಿನಲ್ಲಿ. (ಅಲ್ಲಿ ಅಕ್ಷರಗಳ ಸಂಖ್ಯೆ ಕಡಿಮೆ, ಸಂಸ್ಕೃತ ಪದಗಳು ತಮಿಳಿಕರಣಗೊಂಡಿವೆ ಇತ್ಯಾದಿ) ,ಆದರೆ ಜಗತ್ತಿಗೆ ಬೇಕಾದ ಜ್ಞಾನ ಅವರಿಂದ ಎಷ್ಟು ರಚನೆಯಾಗಿದೆ? ಎಷ್ಟು ನೊಬೆಲ್ ಪ್ರಶಸ್ತಿ ಅವರಿಗೆ ಬಂದಿದೆ? ಕನ್ನಡದಲ್ಲಿರುವಂಥ ಮಟ್ಟದ ಸಾಹಿತ್ಯ ಅಲ್ಲಿ ತಯಾರಾಗಿದೆಯೇ? ಅಲ್ಲಿ ಒಬ್ಬ ದೇವನೂರ ಮಾಹಾದೇವ, ಸಿದ್ದಲಿಂಗಯ್ಯ, ಅನಂತಮೂರ್ತಿ, , ಕುವೆಂಪು,ತೇಜಸ್ವಿ, ಬೆಂದ್ರೆ, ಕಾರಂತರ ಮಟ್ಟದ ಚಿಂತಕರು ಅಥವಾ ಬರಹಗಾರರು ಬಂದಿದ್ದಾರೆಯೇ? ಅದೆಲ್ಲ ಬೇಡ, ಡಿ .ಎನ್. ಶಂಕರ ಭಟ್ಟರಂಥ ವಿದ್ವಾಂಸರನ್ನು ತಮಿಳು ಈಚಿನ ವರ್ಷಗಳಲ್ಲಿ ಹುಟ್ಟಿಸಿದೆಯೇ? ತಮಿಳು ದೊಡ್ಡ ವಿಜ್ಞಾನಿಗಳನ್ನು ಎಷ್ಟು ತಯಾರಿಸಿದೆ? ಡಿ.ಆರ್. ನಾಗರಾಜ್ ಮಟ್ಟದ ಸಂಸ್ಕೃತಿ ಚಿಂತಕರನ್ನು ತಮಿಳು ತಯಾರಿಸಿದೆಯೆ? ಕನ್ನಡ ಮತ್ತು ಮಲಯಾಳ ಸಾಹಿತ್ಯಕ್ಕೆ ತಮಿಳನ್ನು ಹೋಲಿಸಿ ನೋಡಿ ದಯವಿಟ್ಟು..( ಮಲಯಾಳದಲ್ಲಿ ಕನ್ನಡಕ್ಕಿಂತ ಹೆಚ್ಚು ಅಕ್ಷರಗಳು.) ಇನ್ನೊಂದು ಅಂಶ ಗಮನಿಸಿ ,ಕನ್ನಡದ ದಲಿತ ಸಾಹಿತ್ಯಕ್ಕೆ ೪೦ ವರ್ಷಗಳಾದರೆ ತಮಿಳು ದಲಿತ ಸಾಹಿತ್ಯ ಈಗ ಉಸಿರಾಡಲಾರಂಭಿಸಿದೆ. ಅದಕ್ಕೆ ೨೦ ವರ್ಶಗಳ ಇತಿಹಾಸ ಇದೆಯಷ್ಟೆ.ಹಾಗಿದ್ದೂ ಅದಕ್ಕಿನ್ನೂ systematisc critical corpus establish ಆಗಿಲ್ಲ ಅಂತ ತಮಿಳು ವಿದ್ವಾಂಸರೇ ಹೇಳುತ್ತಾರೆ. ಇದನ್ನು ( ಹೆಚ್ಚು ಅಕ್ಷರಗಳಿರುವ ) ಕನ್ನಡ ,ಮರಾಠಿಗಳಲ್ಲಿ ಬಂದ ದಲಿತ ಸಾಹಿತ್ಯದ ಶ್ರೇಷ್ಟತೆಗೆ ಹೋಲಿಸಿ ನೋಡಿ. ಕೆಳವರ್ಗ-ಮೆಲುವರ್ಗದ ಪರಿಭಾಷೆಯನ್ನು ಡಿ. ಎನ್.ಎಸ್. ಬಳಸುವುದರಿಂದ ದಲಿತ ಸಾಹಿತ್ಯದ ಬಗ್ಗೆ ಇಷ್ಟು ಒತ್ತು ಕೊಟ್ಟಿದ್ದೇನೆ. ಕನ್ನಡದಲ್ಲಾದರೂ ಶಂಕರಭಟ್ಟರಿಗೆ ದಲಿತ ವಿದ್ವಾಂಸರು ಯಾಕೆ ವ್ಯಾಪಕ ಬೆಂಬಲ ನೀಡುತ್ತಿಲ್ಲ?
ತಮಿಳಿಗೆ ಏನು ಬೇಕು ಎಂಬ ಬಗ್ಗೆ ಒಬ್ಬರು( ಅವರು ತಮಿಳರೇ ಅಂತ ನನ್ನೆಣಿಕೆ) ಬರೆದದ್ದನ್ನು ನೋಡಿ- ಇದು ವೆಬ್ಬಲ್ಲಿ ಸಿಕ್ಕಿದ್ದು. ಹುಡುಕಿದರೆ ನಿಮಗೂ ಸಿಕ್ಕೀತು.ಕೆ.ಬಾಲಸುಬ್ರಮಣಿಯನ್ ಎಂಬವರು ಬರೆದದ್ದು- “It is obvious that tamil lacks a large number of sounds present in other languages. While every language suffers this problem to some extent there is no one to advocate increasing the number of letters in Tamil. Tamil people pronounce many foreign words wrongly because of this defect as yheir language is through written Tamil. Tamil purists will not agree to the introduction of new letters and they may be quite justified.I feel there is a need for Scientific Tamil meant only for writing scientific works in tamil.This can coexist with the accepted tamil.Even in magazines written in accepted tamil new scientific words can be given in brackets so that proper pronunciation can be propagated. But i dont think new symbols are needed.With the existing letters some new metho must be devised to impart proper pronunciation. This is quite challenging. But remember some half hearted attempts were made by using “aida” ezhuththu. I suggest some sort of solution like tex used for typesetting mathematics.Who will take the challange of developping scientific tamil?”
ಈ ಮೇಲಿನ ಮಾತುಗಳ ಬಗ್ಗೆ ನಾನು ಏನೂ ವಿವರಣೆ ನೀಡುವುದಿಲ್ಲ. ಒಂದು ಅಭಿಪ್ರಾಯವನ್ನು ಮಾತ್ರ ನಿಮ್ಮ ಮುಂದೆ ಇಟ್ಟಿದ್ದೇನೆ.
ದಿನನಿತ್ಯ ಬಳಸುವ ಪದಗಳಿಗೆ ಬದಲಾಗಿ ಕನ್ನಡ ಮೂಲದ್ದೆ ಆದ ಪದಗಳನ್ನು ಬಳಸಿದರೆ ಪರವಾಗಿಲ್ಲ. ಆದರೆ ಸಂವಹನ ಆಗದಂಥ ಪದಗಳನ್ನು ಬಳಸಿದರೆ ಅದು ಕಷ್ಟದ ಸಂಸ್ಕೃತದ ಪದಗಳನ್ನು ಬಳಸಿದಷ್ಟೇ ಆಗುತ್ತೆ. ಅಲ್ಲದೆ ಕೆಲವೆಡೆ ಕನ್ನಡದಲ್ಲಿ ಈಗಾಗಲೇ ಬೇರೆ ಅರ್ಥದಲ್ಲಿ ಕೆಲವು ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಪದಗಳನ್ನು ಹೊಸ ಅರ್ಥದಲ್ಲಿ ಬಳಸುವುದು ಸರಿ ಅನ್ನಿಸುವುದಿಲ್ಲ. ಉದಾ: ಕೆ.ವಿ.ಎನ್ ಅವರು “ಅರ್ಥ” ಎನ್ನುವುದಕ್ಕೆ ಬದಲಾಗಿ “ತಿರುಳು” ಎಂದು ಬಳಸುತ್ತಿದ್ದರು. ತಿರುಳು ಎನ್ನುವ ಪದ ಬೇರೆ ಅರ್ಥದಲ್ಲಿ ಮೊದಲೇ ಕನ್ನಡದಲ್ಲಿ ಬಳಕೆಯಲ್ಲಿದೆ. “ಸಾರ” ,”ಒಳಗಿನದು” , “ಸಾರಾಂಶ ” ಎಂದು ಮುಂತಾದ ಅರ್ಥದಲ್ಲಿ ಅದರ ಬಳಕೆಯಿದೆ.
ಭಾಷಾವಿಜ್ಞಾನ ಎಂದರೇನು , ಹಾಗೂ ಭಾಷೆ ಬಳಕೆಯಲ್ಲಿರುವ ಸಮಾಜದ ಬಗ್ಗೆ ಅಧ್ಯಯನವನ್ನೂ ಅದು ಒಳಗೊಂಡಿರುತ್ತದೆ ಎಂಬ ಮೂಲಪಾಠವನ್ನು ಕೂಡ ಶುಭಶ್ರೀಯವರು ತಿಳಿಸಿದ್ದಾರೆ. ಸಂತೋಷ.ಆದರೆ ೨೦ ವರ್ಷಗಳ ಹಿಂದಿನ, ಶಂಕರ ಭಟ್ಟರ ಪುಸ್ತಕಗಳು ಈ ನಿಟ್ಟಿನಲ್ಲಿ ಏನನ್ನದರೂ ಹೇಳಿವೆಯೆ? ಅವ್ರಿಗೆ ಭಾಷಾವಿಜ್ಞಾನ ಅಂದರೆ ಏನೆಂದು ಗೊತ್ತಿದೆ. ಆದರೆ ಆಗ ಅವರು ವಿವರಣಾತ್ಮಕ ಭಾ. ವಿ. ಕ್ಕೆ ಒತ್ತು ನೀಡುತ್ತಿದ್ದರು. ಈಗ ಸಮಾಜದ ಕಡೆಗೆ ಒತ್ತು ನೀಡುತ್ತಿದ್ದಾರೆ. ಆದರೆ ಆ ಸಾಮಾಜಿಕ ಉತ್ಸಾಹ ಸ್ವಲ್ಪ ದಾರಿ ತಪ್ಪಿದಂತಿದೆ ಅನ್ನೋದು ನನ್ನ ನಿಲುವು. ಈಗ ಅವರದು descriptive linguistics ಗಿಂತ ಹೆಚ್ಚಾಗಿ prescriptive ಆಗಿದೆ,
ಕೊನೆಯದಾಗಿ ಹೀಗೆ ಉಲಿಯೋದು ತಪ್ಪು ಹಾಗೆ ಉಲಿಯೋದು ಸರಿ ಅಂತ ನಾನೆಲ್ಲು ಹೇಳಿಲ್ಲ. ಎಲ್ಲ ಪ್ರಭೇದಗಳೂ ಸರಿಯೇ. ಬರೆವಾಗ ತಪ್ಪುಗಳಾಗುವುದು ಕೂಡ ತಪ್ಪಲ್ಲ. ಆದರೆ ತಪ್ಪು ಬರೆಯೋದೇ ಸರಿ ಅಂತ ನೀವು ವಾದಿಸುವುದಾದರೆ(ಇವೆರಡಕ್ಕೆ ವ್ಯತ್ಯಾಸವಿದೆ) ನಾನೇನೂ ಹೇಳಲಾರೆ. ಹಿಂದೆಯೇ ಹೇಳಿದಂತೆ ಕನ್ನಡದ ಸೃಜನಶೀಲ ಕತೆ ಕಾದಂಬರಿಗಳಲ್ಲಿ ಎಲ್ಲ ರೀತಿಯ ಸ್ಪೆಲ್ಲಿಂಗ್ ಗಳು ಸ್ವಾಗತಾರ್ಹವಾಗಿಯೇ ಬಂದಿವೆ.
*********
ಚಿತ್ರಕೃಪೆ: sutharsan.com
Like this:
Like ಲೋಡ್ ಆಗುತ್ತಿದೆ...
Related
ಡಾ. ಅಜಕ್ಕಳ ಗಿರೀಶ್ ಭಟ್ಟರಿಗೆ,
ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಗೆ ಉತ್ತರಿಸಲು ತುಸು ಸಮಯ ಬೇಕಾದೀತು (ಹಬ್ಬ! ಅಡುಗೆ ಮನೆ ಕೆಲಸ ಜಾಸ್ತಿ). ಆದರೂ ನೀವು ಕಾಳು ಹಿಡಿಯೋ ಬದಲು ಜೊಳ್ಳು ಹಿಡಿದು ವಾದ ಮಾಡಿದೀರಾ ಅಂತ ಮೊದಲಓದಿಗೆ ಅನ್ನಿಸಿದ್ದು ಮಾತ್ರಾ ನಿಜಾ. 😦
ಹಾಂ, ಹಲವಾರು ವಿಷಯಗಳಲ್ಲಿ ನೀವು ನನ್ನ ನಿಲುವನ್ನು ಒಪ್ಪಿರುವ ದೊಡ್ಡಗುಣವನ್ನೂ ಕಂಡಿದ್ದೇನೆ. ಅದಕ್ಕೆ ವಿಶೇಷ ವಂದನೆಗಳು. 🙂
ಡಾ. ಗಿರೀಶ್ ಭಟ್,
ನೋಡಿ, ಮೊದಲಿಗೇ ನಿಮ್ಮ ಲೇಖನದಲ್ಲಿ ನೀವು ಒಪ್ಪಿಕೊಂಡಿರುವ ಕೆಲ ಪಾಯಿಂಟ್ಸ್ ಬರೆದುಬಿಡುತ್ತೇನೆ.
>> ನನಗೆ ಆ ಹಿರಿಯ ಭಾಷಾವಿದ್ವಾಂಸರ ಬಗ್ಗೆ ತುಂಬ ಗೌರವ ಉಂಟು.ವೈಯಕ್ತಿಕ ದ್ವೇಷವಾಗಲೀ ಅಸೂಯೆಯಾಗಲೀ ಇಲ್ಲ.
>> ಅವರು ಹೇಳಿದ್ದಕ್ಕೆ ಅಗ್ರೀಡ್ ,. ತಮಿಳರಿಗೆ ಕೊರತೆಯಿದ್ದರೆ ಅವರ ತಲೆಬಿಸಿ.ನಮ್ಮದಲ್ಲ.ಓಕೆ.
>> ತಮಿಳರಿಗೆ ಭಾಷಾಸಂಕುಚಿತತೆ ಇಲ್ಲ ಎಂಬ ನಿಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ನನಗೇನೂ ಬೇಸರವಿಲ್ಲ
>> ತಮಿಳು ನಮಗೆ ಮಾದರಿಯಾಗಬೇಕು ಅಂತ ಸ್ಪಷ್ಟವಾದ ಮಾತುಗಳಲ್ಲಿ ಶಂಕರ ಭಟ್ಟರು ಹೇಳಿದ್ದಾರೋ ಇಲ್ಲವೋ ಅಂತ ನನಗೆ ಗೊತ್ತಿಲ್ಲ.
>> ಜಗತ್ತಿಗೆ ಬೇಕಾದ್ದನ್ನು ನೀಡುವ ಸಾಮರ್ಥ್ಯ ಬೇಕು ಕನ್ನಡಕ್ಕೆ” ಅನ್ನುವುದರಲ್ಲಿ ಎರಡು ಮಾತಿಲ್ಲ. ಬನವಾಸಿ ಬಳಗದವರು ಹೇಳಿದಂತೆ ಕನ್ನಡಿಗರಿಗೆ ನೊಬೆಲ್ ಪ್ರಶಸ್ತಿ ಸಿಗಬೇಕೆಂಬ ಆಸೆ ನನಗೂ ಇದೆ.
>> ಕೊನೆಯದಾಗಿ ಹೀಗೆ ಉಲಿಯೋದು ತಪ್ಪು ಹಾಗೆ ಉಲಿಯೋದು ಸರಿ ಅಂತ ನಾನೆಲ್ಲು ಹೇಳಿಲ್ಲ. ಎಲ್ಲ ಪ್ರಭೇದಗಳೂ ಸರಿಯೇ. ಬರೆವಾಗ ತಪ್ಪುಗಳಾಗುವುದು ಕೂಡ ತಪ್ಪಲ್ಲ.
ಸರೀ ತಾನೇ ಸಾರ್?
ತಲೆವಾಗು,
ಎಷ್ಟೋ ಜನ ನೀವೇ ಶುಭಶ್ರೀ ನಾ? ಅಂತ ನನಗೆ ಕರೆ ಮಾಡಿ ಕೇಳಿದವರಿದ್ದಾರೆ. ನಾನವರಲ್ಲ ನಾನವರಲ್ಲ ನಾನವರಲ್ಲ 🙂
ನನಗೆ ಕನ್ನಡದ ಬಗ್ಗೆ ಶುಭಶ್ರೀ ಯಷ್ಟು ಆಳವಾದ ಅರಿಮೆ ಇಲ್ಲ. ಬರತ್ ಮಾಯ್ಸ ರಂತಹ ಗೆಳೆಯರಿರುವುದು ನನಗೆ ಹೆಮ್ಮೆ. ಅವರ ಬರಹಗಳನ್ನು ಓದಿ ತಿಳಿಯುತ್ತಿರುತ್ತೇನೆ.
ಇತಿಹಾಸ, ಭಾಷಾವಿಜ್ಞಾನ ಇತ್ಯಾದಿ ಅರಿಯದ ಒಬ್ಬ ಸಾಮಾನ್ಯ ಕನ್ನಡಿಗನಾಗಿ ನನ್ನ ಕೆಲವು ನಿಲುವುಗಳನ್ನು ನನ್ನ ಬುದ್ದಿ ಮಟ್ಟದವರ ಪರವಾಗಿ ಹಂಚಿಕೊಳ್ಳಲು ಬಯಸುತ್ತೇನೆ.
೧. ಕನ್ನಡದ ಅಷ್ಟೂ ಅಕ್ಷರಗಳನ್ನು ಕಲಿಯಲು ನಾನಾಗಲೀ ನನ್ನ ಗೆಳೆಯರಾಗಲಿ ಅಷ್ಟು ಕಷ್ಟ ಪಟ್ಟಿಲ್ಲ. ಕಾಗುಣಿತಗಳು ಅಂತ ಕಷ್ಟದವು ಅಲ್ಲ ಎಂದು ನನ್ನ ಎಣಿಕೆ. ಹಾಗಾಗಿ ಅಕ್ಷರಗಳು ಈಗಿರುವಷ್ಟೇ ಇರಲಿ.
೨. ಎಡ ಹೃತ್ಕರ್ಣ, ಬಲ ಹೃತ್ಕುಕ್ಷಿ, ವ್ಯುತ್ಕ್ರಮ, ಪ್ರಮೇಯ, ಭಾಗಲಬ್ದ, ರೂಪಾಂತರ ಶಿಲೆಗಳು, ಕೃಷ್ಣ ರಂದ್ರ, ದ್ಯುತಿ ಸಂಸ್ಲೆಷಣ ಕ್ರಿಯೆ, ಪತ್ರ ಹರಿತ್ತು ಹರಿದ್ವರ್ಣ ವನಗಳು ಇತ್ಯಾದಿ ಪದ ಬಳಕೆ ನನಗೆ ತಲೆನೋವು ತಂದಿವೆ. ಇವುಗಳ ಬದಲು ಗುಂಡಿಗೆಯ ಎಡ ಮೇಲು ಕೋಣೆ, ಬಲ ಕೆಳ ಕೋಣೆ , ತಲೆಕೆಳಗು, ನೆಲಸೆಳೆತ, ಎಲೆ ಹಸಿರು ಇತ್ಯಾದಿಗಳು ಸುಲಭ. ಇವನ್ನು ಬಳಸಬೇಕು.
೩. ಮಹಾಪ್ರಾಣಗಳ ಬದಲು ಅಲ್ಪಪ್ರಾಣ ಬಳಸಿದರೆ, ಹ ಕಾರಕ್ಕೆ ಬದಲು ಅ ಕಾರ ಬಳಸಿದರೆ, ಋ ಬದಲು ರು ಬಳಸಿದರೆ ಅಂಕ ಕಡಿಯುವುದಾಗಲೀ ಅವಹೇಳನ ಮಾಡುವುದಾಗಲಿ ಮಾಡಬಾರದು.
೪. ಆಯಾ ಸ್ಥಳಗಳಲ್ಲಿ ಬಳಕೆಯಾಗುವ ಪದಗಳನ್ನು ಬಳಸಲು ಅನುಮತಿ ಇರಬೇಕು. ಉದಾ: ಪಟ್ಯದ ಒಂದೇ ಪ್ರಶ್ನೆಗೆ ನೀಡುವ ಉತ್ತರದಲ್ಲಿ ತೆಂಕಣ ಕರುನಾಡಿನವರು ಕದ ಎಂದು ಬಳಸಿದರೆ ಬದಗನದವರಿಗೆ ಬಾಗಿಲು ಎಂದು ಬಳಸಲು ಅವಕಾಶವಿರಬೇಕು. ಸಿಂಹಾಸನವೇರಿದನು ಎನ್ನುವ ಬದಲು ಪಟ್ಟಕ್ಕೆ ಬಂದನು ಎಂದು ಬೆರಯಲು ಅವಕಾಶವಿರಬೇಕು. ನನಗೆ ಒಮ್ಮೆ ಸೂರ್ಯ ಎಂದು ಬರೆಯುವ ಬದಲು ಸೂರಯ (ರ ಕ್ಕೆ ಯ ವತ್ತು ಕೊಟ್ಟು. ಯುನಿಕೋಡ್ ನಲ್ಲಿ ಬರೆಯಲಾಗುತ್ತಿಲ್ಲ) ಎಂದು ಬರೆದಿದ್ದಕ್ಕೆ ಅಂಕಗಳನ್ನು ಕತ್ತರಿಸಿದ್ದರು.
೫. ಗಜನಿ, ಮೌರ್ಯ, ಗುಪ್ತ, ಹೂಣ ಇವರಿಗಿಂತ ಮೊದಲು ನಾಯಕರು, ಗೌಡರು, ನಮ್ಮ ನಗರಗಳನ್ನು ಆಳಿದ ರಾಜರು ಪಾಳೆಯಗಾರರ ಬಗ್ಗೆ ಪಾಟಗಳು ಇರಬೇಕು.
ಶ್ರೀಹರ್ಶ ಅವರೇ,
ಕನ್ನಡದಲ್ಲಿರುವ ಈಗೆಯ ಅಶ್ಟೂ ಅಕ್ಕರಗಳು ಯಾಕೆ ಬೇಡ ಎಂದು ನಿಮ್ಮ ಮೂರ ಬೊಟ್ಟು ಹೇಳುವುದು.
ಕನ್ನಡದಲ್ಲಿ ಅಲ್ವಪ್ರಾಣ/ಮಹಾಪ್ರಾಣಗಳ ನಡುವೆ ವ್ಯತ್ಯಾಸವಿಲ್ಲವೆಂದು ಹೆಚ್ಚಿನ ನುಡಿಯರಿಗರಿಗೆ ಗೊತ್ತು.. ಆದುದರಿಂದ ಅಲ್ಪಪ್ರಾಣ, ಮಹಾಪ್ರಾಣಗಳಿಗೆ ಬೇರೆ ಬೇರೆ ಅಕ್ಕರಗಳು ಬೇಡ. ಆದುದರಿಂದ ೧೦ ಮಹಾಪ್ರಾಣಗಳಿಗಾಗೇ ಇರುವ ಅಕ್ಕರಗಳನ್ನು ಬಿಡಬಹುದು.
ಹಾಗೇ ಋ, ಷ, ಞ, ಙ, ಅಃ ಇವು ಕೂಡ ಕನ್ನಡದಲ್ಲಿ ಬೇಡ. ಇದನ್ನು ಶಂಕರಬಟ್ಟರು ಬಿಡಿಸಿ ಬರೆದಿದ್ದಾರೆ.
ನೋಡಿ.. ಒಂದೊಂದು ವ್ಯಂಜನಕ್ಕೂ ಕನ್ನಡದಲ್ಲಿ ಒಂದು ಒತ್ತಕ್ಕರ ಕಲಿಯಬೇಕು ಹಾಗೇ ಅದರ ಕಾಗುಣಿತ.
ಕ ದ ಕಾಗುಣಿತ ಕಲಿತ ಹಾಗೆ ಖ ಕ್ಕೂ ಧ ಕ್ಕೂ ಕಲಿಯಬಹುದು. ಹೆಚ್ಚಿನ ಶ್ರಮ ಬೇಕಾಗಿಲ್ಲ.
ಹಾಗೆಯೇ ಒತ್ತಕ್ಕರಗಳ ಬಳಕೆ ಎಲ್ಲೆಡೆ ಒಂದೇ ರೀತಿಯಾಗಿರುವುದರಿಂದ ಕಲಿಕೆಯಲ್ಲಿ ಹೆಚ್ಚಿನ ಆಯಾಸವಾಗಲಾರದು ಅಂತ ನನ್ನ ಅನಿಸಿಕೆ.
ಆದರೆ ಮಹಾಪ್ರಾಣ ಹಾಗು ಅಲ್ಪಪ್ರಾಣದ ಬಗ್ಗೆ ಉಲಿಕೆಯಲ್ಲೇ ಬೇದ ಮಾಡದೇ ಹೋದಾಗ, ಬರೆವಣಿಗೆಯಲ್ಲಿ ಮಕ್ಕಿಕಾಮಕ್ಕಿ ನೆನೆಪಿಡುವ ಸರ್ಕಸ್ ಮಾಡಬೇಕು.
ಅದಕ್ಕೆ ಧೀರ್ಘ, ಹಾರ್ಧಿಕ, ಶುಭಾಷಯ, ಕನಿಷ್ಟ, ಸ್ಪಷ್ಟ ಮುಂತಾದ ಸೋ-ಕಾಲ್ಡ್ ತಪ್ಪುಗಳು ಎಲ್ಲೆಡೆ ಕಾಣುವುದು.
ಅದಕ್ಕೆ ಮಹಾಪ್ರಾಣದ ಅಕ್ಕರಗಳನ್ನು ತೆಗೆಯಬೇಕು. ಹಾಗೇ ಇಂಗ್ಲೀಶೋ, ಇಂಗ್ಲೀಷೋ? 🙂
ಡಾ. ಗಿರೀಶ್ ಸಾರ್,
ಅಂದಂಗೆ ತಮಾಷೆಗೆ ಕೇಳ್ತೀನಿ, ನಿಮಗ್ಯಾಕೆ ತಮಿಳು ವ್ಯಾಮೋಹ? ಹಿಂದಿನ ಬರಹದ ತಲೆಬರಹದಲ್ಲೂ (ಅಕ್ಷರ ಕಡಿತಕ್ಕೆ ತಮಿಳು ಮಾದರಿ?) ಈ ಬಾರಿಯ ಬರಹದ ತಲೆಬರಹದಲ್ಲೂ (ಕನ್ನಡಕ್ಕಿಂತ ತಮಿಳು ಯಾವುದರಲ್ಲಿ ಮುಂದಿದೆ?)ತಮಿಳು ಅಂತಾ ಬರೆದಿರೋದು ಕಾಕತಾಳೀಯವೇ? ಯಾಕೆಂದರೆ ನೀವು ನಿಮ್ಮ ಬರಹದುದ್ದಕ್ಕೂ ಶಂಕರಬಟ್ಟರ (ಸಮಾಧಾನಾನಾ ?) “ಕನ್ನಡ ಬರಹವನ್ನು ಸರಿಪಡಿಸೋಣ” ಅನ್ನುವ ಹೊತ್ತಗೆಯಲ್ಲಿ ತಮಿಳಿನ ಮಾದರಿಯನ್ನು ಹೇಳಿದ್ದಾರೆ ಎಂದು ಪುಟ ೬೮, ೬೯ನ್ನು ಮೇಲೆತ್ತಿ ಹೇಳಿದ್ದೀರ. ನಾನು ಹಿಂದೆಯೇ ನಿಮಗೆ ಬೇಕಾದ್ದನ್ನು ಎತ್ತಿಕೊಂಡು ಬೇಡದ್ದನ್ನು ಬಿಟ್ಟು ವಾದ ಮಾಡ್ತೀರಾ ಅಂದಿದ್ದಕ್ಕೆ ಪುರಾವೆ ಒದಗಿಸಿದ್ದೀರಿ. ಕನ್ನಡದಲ್ಲಿ ಸ್ಪೆಲ್ಲಿಂಗ್ ಸಮಸ್ಯೆ ಎನ್ನುವ ಆ ಅಧ್ಯಾಯದಲ್ಲಿ ಶಂಕರಬಟ್ಟರು ೩.೩ ಬೇರೆ ಬರಹಗಳಲ್ಲಿ ಸಂಸ್ಕ್ರುತದ ಎರವಲುಗಳು ಎಂಬ ತಲೆಬರಹದಲ್ಲಿ ತಮಿಳು(ಪು.೭೫), ಮಲಯಾಳ(ಪು.೮೦), ಪಂಜಾಬಿ(ಪು.೮೧), ಸಿಂದಿ(ಪು.೮೫) ಬಾರತದ ಬೇರೆ ಬರಹಗಳು (ಪು.೮೫)ಇಂಗ್ಲೀಶ್ ನುಡಿಯ ಸ್ಪೆಲ್ಲಿಂಗ್ ಸಮಸ್ಯೆ(ಪು. ೮೯), ಅಸಮೀಸ್ ನುಡಿಯ ಸ್ಪೆಲ್ಲಿಂಗ್ ಸಮಸ್ಯೆ (ಪು. ೯೩) ಎಂದು ಬೇರೆ ಬೇರೆ ನುಡಿಗಳಲ್ಲಿ ಇರುವ ಬದಲಾವಣೆಗಳ ಬಗ್ಗೆಯೂ ಬರೆದಿರುವಾಗ ತಮಿಳನ್ನು ಮಾತ್ರಾ ಕೋಟ್ ಮಾಡಿದೀರಾ ಯಾಕೆ? ಬಂಗಾಳಿ – ಮಣಿಪುರಿ ಹೋಲಿಕೆಯ ಬಗ್ಗೆಯೂ ಬರೆದಿಲ್ಲವೆ? ಶಂಕರಬಟ್ಟರು ಅದೇ ಅಧ್ಯಾಯದ ತಿರುಳಲ್ಲಿ ಬರೆದಿರೋ ಮಾತುಗಳು : ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯದೆ ಅವನ್ನು ಓದುವ ಹಾಗೆ ಬರೆದರೆ ನಮ್ಮ ಸಂಸ್ಕ್ರುತಿಯೇ ನಶ್ಟವಾಗುದೆಂಬುದಾಗಿ ಬಾರತದಲ್ಲಿ ಕನ್ನಡ, ಮಲಯಾಳ, ತೆಲುಗು, ಮರಾಟಿ ಮೊದಲಾದ ಕೆಲವು ನುಡಿಗಳನ್ನಾಡುವ ಜನರು ಮಾತ್ರಾ ತಿಳಿಯುತ್ತಾರಲ್ಲದೆ ಎಲ್ಲಾ ನುಡಿಗಳನ್ನು ಆಡುವವರೂ ಹಾಗೆ ತಿಳಿಯುವುದಿಲ್ಲ. ಉದಾಹರಣೆಗಾಗಿ, ತಮಿಳು, ಪಂಜಾಬಿ, ಸಿಂದಿ, ಉರ್ದು, ಕಾಶ್ಮೀರಿ ಮೊದಲಾದ ನುಡಿಗಳಲ್ಲಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಓದುವ ಹಾಗೆ ಬರೆಯುತ್ತಾರಲ್ಲದೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯುವುದಿಲ್ಲ.
ಇಡೀ ಅಧ್ಯಾಯದ ಉದ್ದೇಶ ಹಾಗೂ ಅರ್ಥ ನಿಮಗಾಗಿದೆ ಎಂದುಕೊಳ್ಳುತ್ತೇನೆ.
ಡಾ. ಗಿರೀಶ್ ಅವರೇ,
>> ಶುಭಶ್ರೀಯವರೇ ಹೇಳುವಂತೆ,”ಶಂಕರ ಭಟ್ಟರು ತಾವು ಹೊಸ ಬರಹದಲ್ಲಿ ಬರೆಯುತ್ತೇನೆ ಎಂದಿದ್ದರೆಯೇ ಹೊರತುನೀವು ಬರೆಯಿರಿ ಎಂದಿದ್ದಾರೆಯೇ?”ಹಾಗಾಗಿ ಸದ್ಯಕ್ಕೆ ಆ ಹಾದಿಯಲ್ಲಿ ಅವರೊಬ್ಬರೇ ಹೋಗ್ಗುತ್ತಿದ್ದಾರೆ ಮತ್ತು ಹಾಗೆ ಏಕಾಂಗಿಯಾಗಿ ಹೋಗಲು ಅವರು ಯಾವುದೇ ಭಯವನ್ನು ಹೊಂದಿಲ್ಲ ಅಂತಲೂ ಆಯಿತು. ಹೀಗಾಗಿ ಶಂಕರ ಭಟ್ಟರಿಗೇ ಇಲ್ಲದ ಆತಂಕ ಇತರರಿಗೆ ಯಾಕೋ ಗೊತ್ತಾಗುತ್ತಿಲ್ಲ. ( ಒಂದು ಮಾತು: “ತಾನು ಬರೆವೆ, ನೀವು ಬರೆಯಬೇಕೆಂದು ಅವರು ಹೇಳಿಲ್ಲ” ಎಂದು ವಾದಿಸುವುದು ಅವರನ್ನು ಸಮರ್ಥಿಸುವ ಸರಿಯಾದ ಕ್ರಮವಲ್ಲ, ಬದಲಾಗಿ ಅವರನ್ನು ದುರ್ಬಲಗೊಳಿಸುವ ವಿತಂಡವಾದ ಅದು .“ಕನ್ನಡ ಬರಹವನ್ನು ಸರಿಪಡಿಸೋಣ” ಎಂದರೆ ಅದು ನಾನೊಬ್ಬ ಮಾತ್ರ ಹೀಗೆ ಮಾಡುತ್ತೇನೆ , ನೀವು ಮಾಡಬೇಕೆಂದಿಲ್ಲ ಅಂತ ಅರ್ಥ ನೀಡುತ್ತದೆಯೇ?
ಸಾರ್, ನನ್ನ ಆ ಕಮೆಂಟ್ ಯಾವ ಹಿನ್ನೆಲೆಯಲ್ಲಿದೆ ಎಂದು ನೋಡಿ. Context ಬಿಟ್ಟು, ಯಾವ ಉದ್ದೇಶಕ್ಕೆ ಹಾಗಂದೆ ಎನ್ನುವುದನ್ನು ಪಕ್ಕಕ್ಕಿಟ್ಟು ನೀವು ನನ್ನ ಹೇಳಿಕೆಯನ್ನು ತಪ್ಪಾಗಿ ಎತ್ತಿಹೇಳುತ್ತಾ ಅದರಿಂದ ಹೊಸದೊಂದು (ಅವರೊಬ್ಬರೆ ಬರೆಯುತ್ತಿದ್ದಾರೆ) conclusion ನೀಡಿದ್ದಾರೆ. ನಾನು ಹಾಗೆ ಬರೆದದ್ದು anti-democratic/ democratic ಬಗ್ಗೆ ಮಾತಾಡುವಾಗ.
“ಕನ್ನಡಿಗರು ಬರೆಯುತ್ತಿರುವ ರೀತಿಯನ್ನೇ ಬದಲಾಯಿಸಬೇಕು ಅನ್ನೋದು ಆಂಟಿ ಡೆಮಾಕ್ರಟಿಕ್ ಅಲ್ಲವೇ ಶುಭಶ್ರೀಯವರೆ? “
ಎಂದ ಪ್ರಶ್ನೆಯ ಹಿನ್ನೆಲೆಯಲ್ಲಿ, “ಕನ್ನಡವನ್ನು ಹೀಗೇ ಬರೆಯಬೇಕು, ಹೀಗೆ ಬರೆಯೋದು ತಪ್ಪು” ಎನ್ನುವ ನಿಲುವು ಆಂಟಿಡೆಮಾಕ್ರಟಿಕ್ ಆಗಿದೆಯೇ ಹೊರತು “ಕನ್ನಡವನ್ನು ಉಲಿದಂತೆ ಬರೆಯಬೇಕು ಅನ್ನುವುದಲ್ಲ” ಎನ್ನುವುದನ್ನು ಎತ್ತಿ ತೋರಿಸಲು ಹೇಳಿದ್ದೆ. ತಪ್ಪಾಗಿ ಅರ್ಥವಾಗುವಂತೆ ಬರೆದಿದ್ದರೆ ಮನ್ನಿಸಿ! ಈಗ ಹೇಳಿ ಶಂಕರಬಟ್ಟರು ಒಬ್ಬರೇ ಬರೆಯುತ್ತಿದ್ದಾರೆ, ಉಳಿದವರು ಬರೆಯುತ್ತಿಲ್ಲ ಎನ್ನುವುದು ಅಪ್ರಸ್ತುತವಾದ ವಾದವಲ್ಲವೇ? ಈಗ ವಿತಂಡವಾದ ಯಾವುದು ನೀವೇ ಹೇಳಿ.
Read as : ನೀವು ನನ್ನ ಹೇಳಿಕೆಯನ್ನು ತಪ್ಪಾಗಿ ಎತ್ತಿಹೇಳುತ್ತಾ ಅದರಿಂದ ಹೊಸದೊಂದು (ಅವರೊಬ್ಬರೆ ಬರೆಯುತ್ತಿದ್ದಾರೆ) conclusion ನೀಡಿದ್ದೀರಲ್ಲಾ..
ಡಾ. ಗಿರೀಶ್ ಅವರೇ,
’ಕನ್ನಡ ಬರಹವನ್ನು ಸರಿಪಡಿಸೋಣ” ಪುಸ್ತಕದ ೧೪೧ನೇ ಪುಟದಲ್ಲಿ ಶಂಕರಬಟ್ಟರು ಹೀಗಂದಿದ್ದಾರೆ:
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಹೆಚ್ಚುಕಡಿಮೆ ಸಮ್ಸ್ಕ್ರುತದಲ್ಲಿ ಇರುವ ಹಾಗೇ ಬರೆಯಬೇಕು’ ಎಂಬ ನಿರ್ಬಂದವನ್ನು ತೆಗೆದು ಹಾಕುವ ಮೂಲಕ ಮತ್ತು ಅಂತಹ ಪದಗಳನ್ನು ಹೇಗೆ ಓದುತ್ತೇವೆಯೋ ಹಾಗೆಯೇ ಬರೆಯುವ ಮೂಲಕ ‘ಹೊಸಬರಹ’ವನ್ನು ಉಂಟುಮಾಡಲಾಗಿದೆ. ಇದರಲ್ಲಿ ಒಟ್ಟು ೩೧ ಅಕ್ಶರಗಳು ಮಾತ್ರ ಕಡ್ಡಾಯವಾಗಿ ಬಳಕೆಯಾಗುತ್ತದೆ.
ಇಂಗ್ಲೀಶಿನ ಕಾಫಿ, ಸಂಸ್ಕ್ರುತದ ಭಯಂಕರ, ಉರ್ದುವಿನ ಜ಼ಮೀನ್ ಮೊದಲಾದ ಕೆಲವು ಎರವಲು ಪದಗಳನ್ನು ಓದ್ದುವ ಹಾಗೆಯೇ ಬರೆಯಲು ಕೆಲವು ಹೆಚ್ಚಿನ ಅಕ್ಶರಗಳು ಬೇಕಾಗಬಹುದು. ಆದರೆ ಇವುಗಳ ಬಳಕೆ ಕಡ್ಡಾಯವಲ್ಲ. ಯಾಕೆಂದರೆ, ಹಲವರು ಇವನ್ನು ಕಾಪಿ, ಬಯಂಕರ, ಜಮೀನು ಎಂಬುದಾಗಿಯೂ ಓದುವ ಕಾರಣ ಹಾಗೆಯೂ ಅವನ್ನು ಬರೆಯಬಹುದು.
ಮಾನ್ಯರಾದ ಶುಭಶ್ರೀ ಮೇಡಮ್ ಅವರೆ, ( ಮೇಡಮ್ ಅಂತ ಅಂದುಕೊಂಡಿದೀನಿ ನಿಮ್ಮ ನಿಜ ಹೆಸರು ಅದು ಅಂತ ನಂಬಿ, ಯಾಕೆಂದರೆ ಈಗ ಕಮೆಂಟು ಮಾಡುವವರು ಅನೇಕರು ನಿಜ ಹೆಸರನ್ನು ಹಾಕೊಲ್ಲ.)
ಮೊದಲನೆಯದಾಗಿ ಕಾಳು ಜೊಳ್ಳು ಬಗ್ಗೆ- ನಾನು ಯಾವುದರ ಬದಲು ಯಾವುದನ್ನು ಹಿಡಿದು ವಾದ ಮಾಡಿದ್ದೇನೆ ಅನ್ನೋದು ನಾನು ಯಾವ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸುತ್ತಿದ್ದೇನೆ ಅನ್ನೋದನ್ನೂ ಅವಲಂಬಿಸಿರುತ್ತೆ.
ಎರಡನೇದಾಗಿ ,ಮೇಲ್ನೋಟದ ಮೊದಲ ಓದಿನಿಂದ ತೀರ್ಮಾನಕ್ಕೆ ದಯವಿಟ್ಟು ಬರಬಾರದು.
ಮೂರನೇದಾಗಿ, ಒಂದೊಂದು ಕಾಂಟೆಕ್ಸ್ಟ್ ನಲ್ಲಿ ಒಂದೊಂದನ್ನು ಶಂಕರ ಭಟ್ಟರು ಹೇಳೊಲ್ಲ. ಆದರೆ ನೀವು ಬೇರೆ ಬೇರೆ ಕಾಂಟೆಕ್ಸ್ಟ್ ನಲ್ಲಿ ಬೇರೆ ಬೇರೆ ಯಾಕೆ ಹೇಳುವಿರಿ?
ನಾಲ್ಕನೇದಾಗಿ,ಕನ್ನಡವನ್ನು ಉಲಿದಂತೆ ಬರೆಯಬೇಕು ಅನ್ನೋದು ಕೂಡ ಒಂದು ಒತ್ತಾಯವೇ ಅಲ್ಲವೇ?
ಐದನೇದಾಗಿ,ದಯವಿಟ್ಟು ನಾನು ಹೇಳೋದನ್ನು ಅರ್ಥ ಮಾಡ್ಕೋಳಿ- ಶಂಕರಭಟ್ಟರು ಹಲವು ಭಾಷೆಗಳ ವಿದ್ವಾಂಸರು. ಅವರು ಹಲವು ಭಾಷೆಗಳ ಉದಾ ಕೊಡುತ್ತಾರೆ. ನಿಜ. ಆದರೆ ನಾನು ಯಾಕೆ ತಮಿಳನ್ನು ಮಾತ್ರ ಉದಾಹರಿಸುತ್ತೇನೆ ಅನ್ನೋದು ನನ್ನ ಬರಹದಲ್ಲಿ ಸ್ಪಷ್ಟವಾಗಿದೆ. ಅದನ್ನು ನೀವು ಅರ್ಥ ಮಾಡಿಕೊಳ್ಳದಿದ್ದರೆ ನಾನೇನೂ ಈ ವಿಷಯದಲ್ಲಿ ವಾದಿಸಲಾರೆ. ನಾನು ತಮಿಳನ್ನು ಉದ್ಧರಿಸಿದ್ದು ಅದು ಶಂಕರ ಭಟ್ಟರು ಹೇಳುವ ರೀತಿಯ ಸುಧಾರಣೆಗಳನ್ನು ಒಳಗೊಂಡ ಭಾಷೆ ಅಂತ. ಹಾಗಿದ್ದರೂ ಭಾಷಿಕವಾಗಿ ಅಥವಾ ಇನ್ನಿತರ ವಿಚಾರಗಳಲ್ಲಿ ಅದು ಮುಂದಿದೆಯೆ? ಯಾಕೆಂದರೆ ಡಿ.ಎನ್.ಎಸ್. ವಾದವನ್ನು ಬೆಂಬಲಿಸುವವರು ಕನ್ನಡ ಮುಂದುವರಿಯದೆ ಇರಲು, ಕೇಳಜಾತಿಗಳು ಹಿಂದಿರಲು, ಕನ್ನಡದಲ್ಲಿ ವಿಜ್ಞಾನದಂಥ ಕ್ಷೇತ್ರಗಳ ಬರಹಗಳು ಬರದೇ ಇರಲು ಇಲ್ಲಿಯ ಅಕ್ಷರಗಳು ಮತ್ತು ಪದರಚನೆಯ ಕ್ರಮವೇ ಕಾರಣ ಅಂತಾರೆ. ಅದು ನಿಜವಾದ ಕಾರಣವಾಗಿರಲಾರದು,ಅಕ್ಷರ- ಪದಗಳ ಸುಧಾರಣೆಯಾಗಿಯೂ ಪರಿಸ್ತಿತಿ ಇದೇ ರೀತಿಯಲ್ಲಿ ಇರುವ ಸಾಧ್ಯತೆಯ ಉದಾ ಆಗಿ ನಾನು ತಮಿಳನ್ನು ತಂದದ್ದು. ಹೀಗಾಗಿ ಪಂಜಾಬಿ, ಅಥವಾ ಇತರ ಭಾಷೆಗಳ ಉದಾ ಅಗತ್ಯ ಬರೊಲ್ಲ ಅಲ್ಲವೇ? ಬೇಕಾದ್ದನ್ನು ಹೆಕ್ಕುವ ಮಾತು ಹೇಗೆ ಬರುತ್ತೆ ಇಲ್ಲಿ? (ನಿಮ್ಮ ಈ ಪ್ರತಿಕ್ರಿಯೆಯಲ್ಲಿ ನಾನು ಬರೆದದ್ದರಲ್ಲಿರುವ ಬೇಕಾದ್ದನ್ನು ಯಾವುದನ್ನೂ ನೀವು ಹೆಕ್ಕಿ ಉತ್ತರಿಸಿಲ್ಲ). ಅಕ್ಷರ ಕಮ್ಮಿ ಇರುವ ಯಾವುದಾದರೂ ಭಾರತೀಯ ಭಾಷೆ ಆ ಕಾರಣದಿಂದಾಗಿಯೇ ಕನ್ನಡ ಅಥವಾ ಮಲಯಾಳ ಮರಾಠಿ ಇತ್ಯಾದಿ ಭಾಷೆಗಳಿಗಿಂತ ಮುಂದಿರುವ ಉದಾ ಇದ್ದರೆ ದಯವಿಟ್ಟು ಕೋಡಿ. ಶಂಕರ ಭಟ್ಟರು ಕೊಟ್ಟಿದ್ದರೆ ತಿಳಿಸಿ. ಭಾರತೀಯ ಸಂದರ್ಭದಲ್ಲಿ ನಮಗೆ ಇದನ್ನು ಪರಿಶೀಲಿಸಲು ತಮಿಳೇ ಉತ್ತಮ ಮಾನದಂಡ. ಹಾಗಾಗಿ ನನಗೆ ತಮಿಳು ಗೀಳು.
ಕೊನೇದಾಗಿ, ಶ್ರೀಹರ್ಷ ಅವರು ಹೇಳಿದ್ದಕ್ಕೆ ನನ್ನದು ಎಳ್ಳಷ್ಟೂ ವಿರೋಧವಿಲ್ಲ.
“.. ಅಕ್ಷರ ಕಮ್ಮಿ ಇರುವ ಯಾವುದಾದರೂ ಭಾರತೀಯ ಭಾಷೆ ಆ ಕಾರಣದಿಂದಾಗಿಯೇ ಕನ್ನಡ ಅಥವಾ ಮಲಯಾಳ ಮರಾಠಿ ಇತ್ಯಾದಿ ಭಾಷೆಗಳಿಗಿಂತ ಮುಂದಿರುವ ಉದಾ ಇದ್ದರೆ ದಯವಿಟ್ಟು ಕೋಡಿ. ಶಂಕರ ಭಟ್ಟರು ಕೊಟ್ಟಿದ್ದರೆ ತಿಳಿಸಿ..”
ಅಜಕ್ಕಳರೆ, ಬಾರತೀಯ ನುಡಿಯೇ ಯಾಕೆ ಬೇಕು? ಬೇರೆ ಉದಾ. ಕೊಟ್ಟರೆ ಆಗದೆ.
ಬಾರತೀಯ ಯಾವ ಬಾಶೆಯಲ್ಲೂ ನುಡಿಹಮ್ಮುಗೆ(Language Planning)(ಲಿಪಿ ಸುದಾರಣೆ) ಅರಿತು ಚೆನ್ನಾಗಿ ಮಾಡಿಲ್ಲ. ಹಾಗಾಗಿ ಬಾರತೀಯ ನುಡಿಯ ಉದಾಹರಣೆ ಕೊಡಲಾಗುವುದಿಲ್ಲ.
ಈಗಾಗಲೆ ಪಿನ್ನಿಶ್, ಕೊರಿಯನ್ ಮತ್ತು ಮಲಯ್ ನುಡಿಗಳ ಉದಾ ಕೊಟ್ಟಿದ್ದೇನೆ. ಇದರಿಂದ ಅವರು ಹೇಗೆ ಏಳಿಗೆ ಹೊಂದಿದ್ದಾರೆ ಎಂಬುದನ್ನ ಗಮನಿಸತಕ್ಕದ್ದು.
ಬಾರತದಲ್ಲಿ ನಾವು(ಕನ್ನಡಿಗರು) ಮಾಡಿದರೆ ’ಮೊದಲಿಗ’ ರಾಗುತ್ತೇವೆ. ಇತರ ಬಾರತೀಯ ನುಡಿಗಳಿಗೆ ನಾವೇ ಮಾದರಿಯಾಗುತ್ತೇವೆ.
ಸಂಸ್ಕ್ರುತದಲ್ಲೇ ಈ ಒಂದು ಸೊಲ್ಲು ಇದೆಯಲ್ಲವೆ?- “ಒಳ್ಳೆಯದು ಎಲ್ಲಿಂದ ಬಂದರೂ ಅದನ್ನ ತೆಗೆದುಕೊಳ್ಳಬೇಕು/ಸ್ವೀಕರಿಸಬೇಕು”
-ನನ್ನಿ
ಬರತ್
“.ಕೆ.ಬಾಲಸುಬ್ರಮಣಿಯನ್ ” ಇವರು ಯಾರು? ಇವರ ತಕ್ಕುಮೆ ಏನು? ತಮಿಳುನಾಡಿನ ಮಂದಿಎಣಿಕೆ ಸುಮಾರು ಏಳರಿಂದ-ಎಂಟು ಕೋಟಿ.. ಅಲ್ಲಿ ಯಾರೋ ಒಬ್ಬರು ಹೇಳಿದ ಮಾತನ್ನು ಸುಮ್ಮನೆ ಹೇಳಿಬಿಟ್ಟರೇ ಆಗುವುದೇ?
ಅದರಲ್ಲಿ .ಕೆ.ಬಾಲಸುಬ್ರಮಣಿಯನ್ ಅಂದ ಸಾವಿರಾರು ಮಂದಿ ಇದ್ದಾರೆ.
ಇನ್ನು ತಮಿಳು ಗ್ರಂಥ ಲಿಪಿ ಅಂತ ಇದೆ. ಅದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಆ ಲಿಪಿಯಲ್ಲಿ ಸಂಸ್ಕ್ರುತವನ್ನು ತಮಿಳುನಾಡಿನಲ್ಲಿ ಬರೆಯುವರು. ಆದರೆ ಬರೀ ತಮಿಳನ್ನು ಬರೆಯಲು ತಮಿಳು-ಲಿಪಿಯನ್ನು ಬಳಸುವರು.
“Tamil purists will not agree to the introduction of new letters ” ನನ್ನ ಅರಿವಿನಂತೆ ಇದು ತಪ್ಪು ಮಾತು.
ತಮಿಳಲ್ಲಿರುವ ಬಲು ಹಳೆಯ ನುಡಿಯರಿಮೆಯ ಹೊತ್ತಗೆ ತೋಲ್ಕಾಪ್ಪಿಯನ್.. ನನ್ನ ಅರಿವಿನಂತೆ ಅದರಲ್ಲಿ ತಮಿಳಿನ ಅಕ್ಕರಗಳೆಶ್ಟು ಎಂದು ತಿಳಿಸಿದೆ. ಅದರಲ್ಲಿಯೂ ಸಂಸ್ಕ್ರುತದ ಪದಗಳನ್ನು ತಮಿಳಲ್ಲಿ ಹೇಗೆ ಬರೆಯಬೇಕು ಎಂದಿದೆ.
ಇಡೀ ಬರಹ ತಮಿಳಿನ ಚರ್ಚೆ.!
ಕನ್ನಡದಲ್ಲಿ ಮಹಾಪ್ರಾಣಕ್ಕೂ ಅಲ್ಪಪ್ರಾಣಕ್ಕೂ ಯಾವ ವ್ಯತ್ಯಾಸವಿಲ್ಲ.. ಋ, ಅಃ, ಷ ಗಳಿರುವ ಒಂದು ಕನ್ನಡದ್ದೇ ಪದವಿಲ್ಲ ಹಾಗು ಕನ್ನಡಿಗರು ಅದನ್ನು ಉಲಿಯುವುದಿಲ್ಲ. ಇಶ್ಟೆಲ್ಲ ಒಪ್ಪಿದ ಮೇಲೆ ಇನ್ನೂ ಮಾತುಂಟೇ!
ಶಂಕರ ಬಟ್ಟರ ಹೊತ್ತಗೆಯಲ್ಲಿ ಮಣಿಪುರಿ, ಹವ್ಯಕ, ತೆಲುಗು, ತುಳು ಸಂಗತಿಗಳೂ ಬಂದಿದೆ. ಹಾಗೇ ತಮಿಳು ಕೂಡ. ಅವರೆಲ್ಲಿ ತಮಿಳಂತೆ ಮಾಡಿ ಎಂದೋ, ಇಲ್ಲವೇ ಮಣಿಪುರಿಯಂತೆ ಮಾಡಿ ಎಂದೋ ಹೇಳಿಲ್ಲ. ಅವರು ಹೇಳುತ್ತಿರುವುದು ಕನ್ನಡಕ್ಕೆ ಬೇಕಾದ/ಸಾಕಾದ/ಸಲೀಸಾದ ಹಾಗೆ ಮಾಡಿ ಎಂದು!
“ಉದಾ: ಕೆ.ವಿ.ಎನ್ ” ಇವರು ಯಾರು?
“ಅರ್ಥ ಎನ್ನುವುದಕ್ಕೆ ಬದಲಾಗಿ “ತಿರುಳು” ಎಂದು ಬಳಸುತ್ತಿದ್ದರು. ತಿರುಳು ಎನ್ನುವ ಪದ ಬೇರೆ ಅರ್ಥದಲ್ಲಿ ಮೊದಲೇ ಕನ್ನಡದಲ್ಲಿ ಬಳಕೆಯಲ್ಲಿದೆ. “ಸಾರ” ,”ಒಳಗಿನದು” , “ಸಾರಾಂಶ ” ಎಂದು ಮುಂತಾದ ಅರ್ಥದಲ್ಲಿ ಅದರ ಬಳಕೆಯಿದೆ.”
ಇರಲಿ.. ತಿರುಳು ಎಂದರೆ ಅರ್ತ ಎಂದೂ ಇದೆ. ಹಾಗು ಅವರು ಬಳಸಿರೋದು ‘ಅರ್ತ’ ಎಂಬ ತಿರುಳಿನಲ್ಲಿ ಈ ಬರಹಗಾರರಿಗೆ ತಿಳಿದೆ. ಅಂದ ಮೇಲೆ ಅವರು ಬರೆದುದು ‘ಅರ್ತವಾಗದ್ದು’ ಎಂದಲ್ಲವಲ್ಲ.
ಒಂದು ಕುಂಟುನೆಪ!
ಕೆ ವಿ ನಾರಾಯಣರು ಅರ್ಥಕ್ಕೆ ತಿರುಳು ಎಂದರು, ಶಂಕರ ಬಟ್ಟರು ಹುರುಳು ಅಂದರು, ಅನ್ನುವೊಂದು ಗೊಂದಲವಿದೆ ಎನ್ನುವುದು ದೊಡ್ಡ ಸಮಸ್ಯೆಯೇ? ಜನ ಯಾವುದನ್ನು ಅರ್ಥಕ್ಕೆ ಪರ್ಯಾಯವಾಗಿ ಬಳಕೆಗೆ ತರುವರೋ ಅದು ಉಳಿಯುತ್ತದೆ.
ಇನ್ನು ಹುರುಳು ಹಾಗು ತಿರುಳು ಎರಡೂ ಒಂದೇ..
ನೋಡಿ, ತುಂಬಾ ಹೆಸರುವಾಸಿಯಾದ ವೆಂಕಟಸುಬ್ಬಯ್ಯನವರ ಪದನೆರಿಕೆ/ನಿಗಂಟು ಏನು ಹೇಳುವುದು
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು
ಹುರುಳು ನಾಮಪದ
(<ದೇ. ಪುರುಳು) ೧ ವಸ್ತು, ಪದಾರ್ಥ ೨ ಸತ್ತ್ವ, ಸಾರ ೩ ಶಕ್ತಿ, ಸಾಮರ್ಥ್ಯ ೪ ಒಳಿತು, ಲೇಸು ೫ ಚೆಲವು, ಅಂದ ೬ ಫಲ, ಪ್ರಯೋಜನ ೭ ಅಪೇಕ್ಷೆ, ಆಶಯ ೮ ನೆಲೆ, ಆಶ್ರಯ ೯ ಮರ್ಮ, ರಹಸ್ಯ ೧೦ ನಾಯಕ, ಮುಂದಾಳು
ಪುರುಳ್(ಳು) ನಾಮಪದ
(ದೇ) ೧ ವಸ್ತು, ಪದಾರ್ಥ ೨ ಸತ್ತ್ವ, ಸಾರ, ತಿರುಳು ೩ ಕೆಚ್ಚು, ಸಾಮರ್ಥ್ಯ ೪ ಬೆಲೆ, ಮೌಲ್ಯ ೫ ಧನ, ದ್ರವ್ಯ, ಹಣ ೬ ಸಂಪತ್ತು, ಐಶ್ವರ್ಯ ೭ ಒಳಿತು, ಲೇಸು ೮ ಚೆಲುವು, ಅಂದ ೯ ಫಲ, ಪ್ರಯೋಜನ ೧೦ ಜ್ಞಾನ, ತಿಳಿವಳಿಕೆ ೧೧ ಜ್ಞಾನಿ, ತಿಳಿವಳಿಕೆಯುಳ್ಳವನು ೧೨ ಆಶಯ, ಅಪೇಕ್ಷೆ ೧೩ ಅರ್ಥ, ಅಭಿಪ್ರಾಯ
ವೆಂಕಟಸುಬ್ಬಯ್ಯನವರೇ ( ಈ ಸಲದ ಕನ್ನಡ ಸಾಹಿತ್ಯ ಸಮ್ಮೇಳನಾದ್ಯಕ್ಶರು ) ಹುರುಳು, ತಿರುಳು ಸಮಪದಗಳು ಹಾಗೂ ಅದು ಸಾರ, ಸಾರಾಂಶ, ಸತ್ವ, ಮುಖ್ಯಾಂಶ ಪದಕ್ಕೆ ಸಾಟಿ ಎಂದು ಹೇಳಿದ್ದಾರೆ.
ಡಾ. ಗಿರೀಶ್ ಅವರೇ,
ನನ್ನ ಅನಿಸಿಕೆಯಲ್ಲಿ ವಾದದಲ್ಲಿನ ವೈಜ್ಞಾನಿಕತೆಯೆಂದರೆ
>> ಹೆಚ್ಚಿನ ಕನ್ನಡಿಗರು ಮಾತಿನಲ್ಲಿ ಮಹಾಪ್ರಾಣಾಕ್ಷರಗಳನ್ನು ಬಳಸುವಲ್ಲಿ ಎಡವುವುದಿಲ್ಲ.
>> ಉಲಿದಂತೆ ಬರೆಯುವುದು ಸರಿಯಲ್ಲ. ಅದರಿಂದ ತೊಡಕುಗಳಾಗುತ್ತವೆ.
>> ಒಂದು ನುಡಿಯಲ್ಲಿ ಆಮದಾದ ಪದಗಳನ್ನು ಮೂಲದಲ್ಲಿದ್ದಂತೆಯೇ ಉಲಿಯಬೇಕು. ನಮ್ಮ ಜಾಯಮಾನಕ್ಕೆ ಒಗ್ಗಿಸಿಕೊಳ್ಳುವುದು ಸರಿಯಲ್ಲ.
>> ಕನ್ನಡದಲ್ಲಿಯೇ ಪದಗಳನ್ನು ಹುಟ್ಟುಹಾಕುವುದು ಸರಿಯಲ್ಲ. ಪರಭಾಷೆಯಿಂದಲೇ ಆಮದು ಮಾಡಿಕೊಳ್ಳಬೇಕು.
>> ಕನ್ನಡ ಬರಹಕ್ಕೆ ಷ, ಋ, ೠ, ಖ, ಘ, ಞ, ಙ, ಝ, ಢ, ಠ ಮೊದಲಾದ ಅಕ್ಷರಗಳು ಕನ್ನಡದ ಪದಗಳನ್ನು ಬರೆಯಲು ಬೇಕಾಗಿಲ್ಲ ಎನ್ನುವುದು ಕನ್ನಡವನ್ನು ಸೊರಗಿಸುತ್ತದೆ.
— ಇವುಗಳನ್ನು ಸಾಧಿಸಿ ತೋರಿಸುವುದು.
ನನ್ನ ಅನಿಸಿಕೆಯಲ್ಲಿ ವಾದದಲ್ಲಿನ ಅವೈಜ್ಞಾನಿಕತೆಯೆಂದರೆ
>> ತಮಿಳರು ಕನ್ನಡಕ್ಕೆ ಶಾಸ್ತ್ರೀಯ ಭಾಷಾಸ್ಥಾನಕ್ಕೆ ಅಡ್ಡಗಾಲು ಹಾಕುವಂತಹ ದುರಭಿಮಾನಿಗಳು, ಹಾಗಾಗಿ ಅಕ್ಷರ ಕಡಿತಕ್ಕೆ ಅವರು ಮಾದರಿಯಾಗಬಾರದು.
>> ತಮಿಳನ್ನು ಅನುಸರಿಸುವುದೇ ಕನ್ನಡದ ಸಂಸ್ಕೃತಿಯನ್ನು ಹಾಗೂ ಸೊಗಡನ್ನು ಉಳಿಸುವ ದಾರಿ ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ
>> ಕೆ.ವಿ.ತಿರುಮಲೇಶ್ ಅವರು ಕೂಡ ತಮಿಳರ ಈ ಮಾದರಿ ಕನ್ನಡಕ್ಕೆ ಅನುಸರಣಯೋಗ್ಯವಲ್ಲ ಎಂದು ತುಂಬ ಸ್ಪಷ್ಟವಾಗಿಯೇ ಹೇಳಿದ್ದಾರೆ. (ಯಾಕೆ ಅನುಸರಣ ಯೋಗ್ಯವಲ್ಲ ಎಂಬುದನ್ನು ತಿಳಿಸಿಕೊಡದಿದ್ದರೆ ಇದು ಅವೈಜ್ಞಾನಿಕ ಅನ್ನುವುದು ನನ್ನ ಅನಿಸಿಕೆ)
>> ಡಾ. ಡಿ.ಎನ್.ಎಸ್. ಯೋಜನೆಯು, “ಜನರನ್ನು ಬಡತನ ರೇಖೆಯಿಂದ ಮೇಲೆತ್ತುವ ಸುಲಭ ಉಪಾಯವೆಂದರೆ ಬಡತನ ರೇಖೆಯನ್ನೇ ಸ್ವಲ್ಪ ಕೆಳಗೆ ಮಾಡುವುದು” ಎನ್ನುವಂತಿದೆ.
— ಈ ರೀತಿ ಆರೋಪಿಸುವುದು.
+೧ 🙂 ನಾನೊಬ್ಬ ಕಂಪ್ಯೂಟರ್ ಅರಿಗ. ನಿಮ್ಮ ತರ್ಕ ತಕ್ಕುದ್ದು.
ಅಜಕ್ಕಳರೆ,
ತಮ್ಮ ಈ ಬರಹಕ್ಕೆ ಎದುದುಂಬಿದ ನನ್ನಿಗಳು. ನಿಮ್ಮ ಹಿಂದಿನ ಬರಹಕ್ಕೆ ಹೋಲಿಸಿದರೆ ನೀವು ಈ ಬರಹದಲ್ಲಿ ಹಲವು ವಿಶಯಗಳನ್ನು ಒಪ್ಪಿಕೊಂಡಿದ್ದೀರಿ( ಶುಬಶ್ರೀ ಅವರ ಮೇಲಿನ ಕಮೆಂಟಿನಂತೆ).
ಅದಲದೆ ತಾವು ಬೇಡದಿದ್ದರೂ ಆತಂಕ ಪಟ್ಟಿದ್ದೀರಿ ಅಂತ ನಿಮ್ಮ ಬರಹದಿಂದ ಗೊತ್ತಾಗುತ್ತಿದೆ.
೧. “ತಮಿಳು ಮಾದರಿ ಎಂದರೆ ಅದು ನಿಂದೆ, ಆರೋಪ ಅಂತ ಯಾಕೆ ಅನಿಸಬೇಕು? ಎಷ್ಟಾದರೂ ತಮಿಳರು ಭಾಷಾಂಧರಲ್ಲ , ಸಂಕುಚಿತರಲ್ಲ ಅಂತಂದ ಅವರ ಮಾತನ್ನೂ ಈಗ ನಾನು ಒಪ್ಪಿಬಿಟ್ಟಿದ್ದೇನೆ ತಾನೇ? ಅಂದರೆ ತಮಿಳು ಮಾದರಿ ಬಗ್ಗೆ ಶುಭಶ್ರೀಯವರಿಗೆ ಏನೋ ಅಸಮಾಧಾನವಿದೆ ಅಂತಾಯಿತು”
ತಾವು ಶಂಕರಬಟ್ಟರು ತಮಿಳನ್ನು ಮಾದರಿಯಾಗಿ ತಗೊಂಡಿದ್ದಾರೆ ಅನ್ನುವುದನ್ನ ಓದುಗರಿಗೆ ನಂಬಿಸಬೇಕು ಅನ್ನುವ ಹಟಕ್ಕೆ ಬಿದ್ದಿದ್ದೀರ ಅನ್ಸುತ್ತೆ.
ತಾವು ದಯ್ವಿಟ್ ’ಕನ್ನಡ ಬರಹ ಸರಿಪಡಿಸೋಣ’ ಹೊತ್ತಗೆಯ ಪುಟ ೯೧ ರಿಂದ ೧೧೦ ರ ವರೆಗೆ ಮತ್ತೆ (ಓದಿಲ್ಲದಿದ್ದರೆ) ಓದಿ, ಅದರಲ್ಲಿ ತಮಿಳು, ಮಲೆಯಾಳ, ಪಂಜಾಬಿ(ಬಾರತ), ಪಂಜಾಬಿ(ಪಾಕಿಸ್ತಾನ), ಬೆಂಗಾಲಿ, ಅಸ್ಸಾಮಿ, ಕಾಶ್ಮೀರಿ, ಸಿಂದಿ(ಗುಜರಾತಿ ಲಿಪಿ), ಸಿಂದಿ(ಸಿಂದಿ-ಅರಾಬಿಕ್) ಇವುಗಳ ಬಗ್ಗೆನೂ ಹೇಳಿದ್ದಾರೆ. ಅದಲ್ಲದೆ ಅದೆ ಹೊತ್ತಗೆ ಪುಟ ೧೦೩ ರಲ್ಲಿ
’(ಪಂಜಾಬಿಯಲ್ಲಿ)ಎರವಲಾಗಿ ಪಡೆದ ಸಂಸ್ಕ್ರುತ ಪದಗಳನ್ನು ತಮ್ಮ ಉಚ್ಚಾರಣೆಗನುಸಾರವಾಗಿ ಬರಹದಲ್ಲೂ ಬದಲಾಯಿಸುವುದರ ಮೂಲಕ ಪಂಜಾಬಿ ಜನರು ತಮ್ಮದೇ ಆದ ಸಂಸ್ಕ್ರುತಿಯನ್ನು ಉಳಿಸಿಕೊಂಡಿದ್ದಾರಲ್ಲದೆ ಏನನ್ನು ಕಳೆದುಕೊಂಡಿಲ್ಲ ಎಂಬುದು ಸ್ಪಶ್ಟ’[ ಓದುಗರಿಗೋಸ್ಕರ, ಪಂಜಾಬಿಯಲ್ಲಿ ಋ,ಷ ಮತ್ತು ಒತ್ತಕ್ಶರಗಳಿಲ್ಲ]
ಅಂದ್ಮೇಲೆ ನೀವು, ಶಂಕರಬಟ್ಟರದು ’ಪಂಜಾಬಿ ಮಾದರಿ’ ಅಂತ ಯಾಕೆ ಹೇಳಲಿಲ್ಲ. ನೀವು ನಿಮಗೆ ಬೇಕಾದ ಸೊಲ್ಲುಗಳನ್ನು ಎತ್ತಿ ತಮಗೆ ’ಅನುಕೂಲಕರ’(convinient) ವಾದ ಮಾಡುತ್ತಿದ್ದೀರಿ ಅಲ್ಲವೆ?
ಹೋಲಿಕೆ ನುಡಿಯೋದು(Comparative Linguistic Study), Sociolinguistics ಅನ್ನು ತಿಳಿಯುವುದರಲ್ಲಿ ನಾವು ಬಳಸಬಹುದಾದ ಒಂದು ಸಾದನ, ಅದನ್ನ ಬಳಸಿಕೊಂಡೇ ಶಂಕರಬಟ್ಟರು ಮೇಲೆ ತಿಳಿಸಿದ ಎಲ್ಲ ನುಡಿಗಳ ಮತ್ತು ಅದರ ಲಿಪಿ/ಬರಹಗಳ ಬಗ್ಗೆ ತಮ್ಮ ಹೊತ್ತಗೆಯಲ್ಲಿ ತಿಳಿಸಿದ್ದಾರೆ ಅಂತ ನಾನಾದರೂ ತಿಳಿದುಕೊಂಡಿದ್ದೇನೆ.
೨. ” ವರ್ಗಪ್ರಜ್ಞೆ ಕುರಿತು ನನ್ನ ಪುಸ್ತಕದಲಿ ಬರೆದ ಭಾಗದಲ್ಲಿ ಇದನ್ನು ವಿವರಿಸಿದ್ದೇನೆ. ಕೆಳವರ್ಗ ಮೇಲುವರ್ಗ ,ದಲಿತ ಬಂಡಾಯದವರು ತಮ್ಮನ್ನು ಬೆಂಬಲಿಸಬೇಕು ಅನ್ನುವ ಮಾತುಗಳು(ಕ.ಬ.ಸ. ಪು.೧೪೯) ಇತ್ಯಾದಿ ಅಂಶಗಳನ್ನು ಆಧರಿಸಿ ಈ ರೀತಿ ನಾನು ಹೇಳಿದ್ದೇನೆ.”
ಬರೀ descriptive Linguistics ನಲ್ಲಿ ಸಂಶೋದನೆಗಳನ್ನು ಮಾಡಿಕೊಂಡಿದ್ದರೆ ಅದರಿಂದ ಸಮಾಜಕ್ಕೆ ಯಾವ ಬಳಕೆಯೂ ಇಲ್ಲ. ಅದನ್ನು ಸಮಾಜದ ಇಟ್ಟಳದ ( social structure) ಕೋನದಿಂದ ನೋಡಿದರೆ ಇದರಿಂದ descriptive linguistics ನಿಂದಾಗುವ ಬಳಕೆಗಳು ಇರಬಹುದೇ? ಎಂಬ ಕೇಳ್ವಿ ಹಾಕಿಕೊಂಡಾಗ ಶಂಕರಬಟ್ಟರ ’ಬರಹವು ಕೆಳವರ್ಗದವರ ಸೊತ್ತಾಗಬೇಕು’ ಎಂಬ ವಾದವನ್ನು ಸರಿಯಾಗಿ/ಚೆನ್ನಾಗಿ ಅರಿತುಕೊಳ್ಳಬಹುದು. ಇದನ್ನೆ sociolinguistics ಅಂತ ಹೇಳಬಹುದು.
Sociolinguistics – Sociolinguistics is the study of the effect of any and all aspects of society, including cultural norms, expectations, and context, on the way language is used, and the effects of language use on society.[http://en.wikipedia.org/wiki/Sociolinguistics]
೩. “ಶಂಕರ ಭಟ್ಟರು ಆಶಿಸುವ ರೀತಿಯ ಸುಧಾರಣೆ ಸ್ವಲ್ಪ ಮಟ್ಟಿಗಾದರೂ ಆಗಿರುವ ತಮಿಳಿನಲ್ಲಿ. (ಅಲ್ಲಿ ಅಕ್ಷರಗಳ ಸಂಖ್ಯೆ ಕಡಿಮೆ, ಸಂಸ್ಕೃತ ಪದಗಳು ತಮಿಳಿಕರಣಗೊಂಡಿವೆ ಇತ್ಯಾದಿ) ,ಆದರೆ ಜಗತ್ತಿಗೆ ಬೇಕಾದ ಜ್ಞಾನ ಅವರಿಂದ ಎಷ್ಟು ರಚನೆಯಾಗಿದೆ? ಎಷ್ಟು ನೊಬೆಲ್ ಪ್ರಶಸ್ತಿ ಅವರಿಗೆ ಬಂದಿದೆ?”
ಶಂಕರಬಟ್ಟರ ವಾದಕ್ಕೆ ತಮಿಳು ಮಾದರಿಯಲ್ಲ ಎನ್ನುವುದನ್ನ ಬೊಟ್ಟು ೧ ರಲ್ಲಿ ತೋರಿಸಿಕೊಟ್ಟಾಯಿತು. ಹಾಗಾಗಿ ಇದಕ್ಕೆ ಉತ್ತರ ಕೊಡುಬೇಕಾಗಿಲ್ಲ ಅಂದುಕೊಂಡಿದ್ದೇನೆ. ಆದರೆ ಲಿಪಿ ಸುದಾರಣೆ/ಬದಲಾವಣೆ ಮಾಡಿಕೊಂಡಿರುವ ಪಿನ್ನಿಶ್, ಕೊರಿಯನ್, ಬಹಾಸ ಮಲಯ್ ಕನ್ನಡಕ್ಕಿಂತ ಹೆಚ್ಚಿನದನ್ನು ಸಾದಿಸಿದೆ.
ಎತ್ತುಗೆಗೆ ,
ಪಿನ್ನಿಶರು ಕಟ್ಟಿದ ಕಂಪನಿಗಳಲ್ಲಿ ಅತಿ ದೊಡ್ಡ ಕಂಪನಿ ’ನೊಕಿಯ’- ಎಲ್ಲರ ಕಯ್ಗೆ ನಡೆಯುಲಿ(ಮೊಬೈಲ್) ಕೊಟ್ಟಿದ್ದಾರೆ. ಇದಲ್ಲದೆ ಜಗತ್ತಿನಲ್ಲೇ ಓದು-ಬರಹದ ತಿಳಿವಿನ ಮಟ್ಟೀಗೆ ಪಿನ್ಲೆಂಡ್ ಮೊದಲನೆಯ ಜಾಗದಲ್ಲಿರಲು ಅದರ ಈ ತೊಡಕುಗಳಿಲ್ಲದ ಬರಹವೇ ಕಾರಣವೆಂದು ಹೇಳಲಾಗುತ್ತದೆ. ತಮ್ಮ ಅರಿಮೆಗೆ ಈ ಸಂದರ್ಶನವನ್ನು ಓದಬಹುದು[http://hechingerreport.org/content/an-interview-with-henna-virkkunen-finlands-minister-of-education_5458/]. ಇದಲ್ಲದೆ ಡಿ.ಎನ್.ಶಂಕರಬಟ್ಟರ ’ಕನ್ನಡ ವ್ಯಾಕರಣ ಯಾಕೆ ಬೇಕು?” ಎಂಬ ಹೊತ್ತಗೆಯ ಒಂಬತ್ತನೆಯ ಪಸುಗೆ ’ನುಡಿಹಮ್ಮುಗೆ’ಯನ್ನು ಓದಬಹುದು.
ಕೊರಿಯನ್ ಕಂಪೆನಿಗಳಾದ ಸಾಮ್ಸಂಗ್, LG ತಮ್ಮ ಸಾದನೆಯಿಂದ ಅಮೆರಿಕನ್ ಕಂಪೆನಿಗಳನ್ನ ಹಿಮ್ಮೆಟ್ಟಿಸಿದ್ದಾರೆ.
ಇದಲ್ಲದೆ ಬಹಾಸ ಮಲಯ್ ತೊಡಕಾದ ಅರೇಬಿಕ್ ಮೂಲದ ಲಿಪಿಯನ್ನು ಬಿಟ್ಟು ರೋಮನ್ ಲಿಪಿಯನ್ನು ಅಪ್ಪಿಕೊಂಡಿದ್ದಾರೆ. ಇದರಿಂದ ಆ ದೇಶದಲ್ಲಿ ಕಲಿಕೆಯ ಮಟ್ಟ ಏರಿದೆ ಎಂಬುದು ಸಾಬೀತಾಗಿದೆ.
೪. “ಈಗ ಅವರದು descriptive linguistics ಗಿಂತ ಹೆಚ್ಚಾಗಿ prescriptive ಆಗಿದೆ..”
ಇದು ತಪ್ಪು ತಿಳುವಳಿಕೆ. ಹಿಂದಿನವರು ಕನ್ನಡಕ್ಕೆ ಬರೆದ descriptive linguistics/grammar ಸಂಸ್ಕ್ರುತ ವ್ಯಾಕರಣವನ್ನು/ಸೊಲ್ಲರಿಮೆಯನ್ನು ಕನ್ನಡಕ್ಕೆ ಹೊಂದಿಸುವ ಕೆಲ್ಸವನ್ನ ಮಾಡಿದರು. ಆದರೆ ಶಂಕರಬಟ್ಟರು ಕನ್ನಡಕ್ಕೇ ಒಂದು ಸೊಲ್ಲರಿಮೆ ಇದೆ ಮತ್ತು ಅದು ಸಂಸ್ಕ್ರುತಕ್ಕಿಂತ ಬೇರೆಯಾಗಿದೆ ಎಂಬುದನ್ನ ಸೊಲ್ಲುಗಳ ರಚನೆ, ಲಿಂಗ ನಿರ್ದಾರ ಮತ್ತು ಜೋಡುಪದ(ಸಮಾಸ ಅಲ್ಲ) ಇವುಗಳ ಮೂಲಕ ತುಂಬ ವಯ್-ಗ್ನಾನಿಕವಾಗಿ ತಮ್ಮ ’ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಎಂಬ ಹೊತ್ತಗೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಹಿಂದಿನ ವ್ಯಾಕರಣವನ್ನು ಓದಿದವರಿಗೆ ಶಂಕರಬಟ್ಟರು ಹೊಸದಾಗಿ ವ್ಯಾಕರಣ prescribe ಮಾಡುತ್ತಿದ್ದಾರೆ ಎಂಬ ’ತಪ್ಪು ಅನಿಸಿಕೆ’ ಮೂಡುತ್ತದೆ. ಯಾಕಂದ್ರೆ ಶಂಕರಬಟ್ಟರು ಕನ್ನಡದ ’ಸ್ಪೆಲ್ಲಿಂಗ್’ ತೊಡಕಿನ ಬಗ್ಗೆ ಹೇಳಿರುವುದರಿಂದ. ಆದರೆ ಬರೀ ಶಂಕರಬಟ್ಟರು ಬರೆದಿರುವ ’ ಸೊಲ್ಲರಿಮೆ’ ಓದಿದವರಿಗೆ ಹಾಗೆ ಅನಿಸುವುದಿಲ್ಲ. ಹಾಗಾಗಿ ಶಂಕರಬಟ್ಟರ ಸೊಲ್ಲರಿಮೆ ಓದಿ ಅರಿತುಕೊಳ್ಳಬೇಕಾದರೆ ತೆರೆದ ಮನಸ್ಸಿರಬೇಕು ಎಂಬುದನ್ನ ಅಜಕ್ಕಳ ಅವರಿಗೆ ಹೇಳಬಯಸುತ್ತೇನೆ. ಹಿಂದೆ ಹೇಳಿದಂತೆ ಶಂಕರಬಟ್ಟರ ಸೊಲ್ಲರಿಮೆಗೆ ಹೆಚ್ಚು ಕನ್ನಡಿಗರ ಆಡುನುಡಿಯೇ ಮೂಲ. ಕನ್ನಡ ನುಡಿಯ ಬಳಕೆಗೆ ಬೇಕಾಗಿರುವುದು ಶಂಕರಬಟ್ಟರು ಹೇಳಿರುವ ಅಕ್ಶರ ಗುರುತುಗಳು ಸಾಕು ಎಂಬುದನ್ನ ಅಜಕ್ಕಳರು ಒಪ್ಪುತ್ತಾರೆ ಅಂತ ಅನ್ಕೊಂಡಿದ್ದಾನೆ.
-ನನ್ನಿ,
ಬರತ್
ಡಾ. ಗಿರೀಶ್ ಅಜಕ್ಕಳ ಸಾರ್,
ನಾನಿನ್ನೂ ಮುಗಿಸಿಲ್ಲ…
ಶುಭಶ್ರೀ…
ನಮಗೆ ತಮಿಳಲ್ಲಿ ಏನಿದೆ ಏನಿಲ್ಲ ಎಂಬುದಕ್ಕಿಂತ.. ಕನ್ನಡಕ್ಕೆ ಏನು ಬೇಕು, ಬೇಡ ಎಂಬುದು ಮುಕ್ಯ ತಾನೆ.!
ತಮಿಳನ್ನು ಶಂಕರಬಟ್ಟರು ಕೆಲ ಕಡೆ ಬರಿ ಮಾದರಿಯಾಗಿ ಬಳಸಿದ್ದಾರೆ, ಹಾಗೇ ಮಣಿಪುರಿ, ತುಳು, ಇಂಗ್ಲೀಶು ಮುಂತಾದವನ್ನೂ..
ಡಾ. ಅಜಕ್ಕಳ ಗಿರೀಶ್ ಭಟ್ ಅವ್ರೆ,
ಇದುವರ್ಗೂ ಆಗಿರುವ ಎಲ್ಲಾ ಚರ್ಚೆಗಳನ್ನು ಬಾಳ ಕುತೂಹಲದಿಂದ ಓದ್ತಾ ಬಂದಿದ್ದೀನಿ. ನೀವು, ಶುಭಶ್ರೀ, ಮಾಯ್ಸ, ಬರತ್, ಪ್ರಿಯಾಂಕ್, ನರೇಂದ್ರ, ವಸಂತ್ ಹೀಗೆ ಹಲವರು ಒಂದು ಒಳ್ಳೇ ಚರ್ಚೆ ಆಗಲು ಒಬ್ರಿಗೊಬ್ರು ಸಹಕಾರ ಕೊಟ್ಟಿದ್ದೀರಿ ಮತ್ತು ಬೇಕಾದಷ್ಟು ಹೊಸ ವಿಶ್ಯಗಳನ್ನ ಓದುಗರಿಗೆ ಪರಿಚಯಿಸಿದ್ದೀರಿ. ಇದಕ್ಕಾಗಿ ನಿಮ್ಮೆಲ್ರುಗೂ ನನ್ನ ವಂದನೆಗಳು.
ನಾನು ಯಾವ ಭಾಷಾ ವಿಜ್ನಾನಿಯೂ ಅಲ್ಲ, ಅಥವಾ ಬಹು ಭಾಷಾ ಪಂಡಿತನೂ ಅಲ್ಲ. ಆದರೆ, ಚಿಕ್ಕಂದಿನಿಂದಲೂ ಯಾವುದೇ ಹೊಸ ವಿಸ್ಯ ಕಲೀಬೇಕಾದ್ರು, ಅದರಲ್ಲೂ ಕಷ್ಟವಾದ ವಿಶ್ಯ ಕಲೀಬೇಕಾದಾಗೆಲ್ಲಾ ನನ್ನ ತಾಯ್ನುಡಿಯಾದ ಕನ್ನಡದ ಸರಳ ಪದಗಳನ್ನ (ನನಗೆ ತುಂಬಾ ಪರಿಚಯ ಇರೋ, ಉಲಿಯೋಕೆ ಸುಲಬ್ ವಾಗಿರೋ ಪದಗಳನ್ನ) ನನ್ನದೇ ಆದ ರೀತೀಲಿ ಬಳಸಿಕೊಂಡು ಕಲೀತಾ ಬಂದಿದ್ದೀನಿ. ಇದರಿಂದ ನಂಗೆ ಎಷ್ಟೋ ವಿಚಾರಗಳ ಬೇಸಿಕ್ಸ್ ತಲೇ ಒಳಕ್ಕೆ ಸಕ್ಕತ್ತಾಗಿ ಹೋಗಿವೆ. ಅದರಿಂದ ನಾನು ನನ್ನ ಜೀವನದಲ್ಲಿ ಚೆನ್ನಾಗಿ ಮುಂದೆ ಬಂದಿದ್ದೀನಿ, ಬರ್ತಿದ್ದೀನಿ. ಜೊತೆಗೆ, ಎಷ್ಟೋ ಸಲ ಬೇರೇಯವ್ರಿಗೆ ಓದಿನಲ್ಲಿ ಸಹಾಯ ಮಾಡ್ಬೇಕಾದ್ರೆ, ಅದೇ ತರದ ಉದಾರ್ಣೆಗಳನ್ನ ಕೊಟ್ಟು ಅವ್ರಿಗೆ ಚೆನ್ನಾಗಿ ಅರ್ತ ಮಾಡ್ಸಿದ್ದೀನಿ.
ಉದಾರ್ಣೆಗೆ: ಯಾರ್ಗಾದ್ರು ಒಂದು layered architecture ಬಗ್ಗೆ ಏಳ್ಬೇಕಾದ್ರೆ, ನಾನು ಒಂದು ಈರುಳ್ಳಿ ಉದಾರ್ಣೆ ತಗೋತೀನಿ. ಯಾಕಂದ್ರೆ ಈರುಳ್ಳಿಗೆ ತುಂಬಾ ಸಿಪ್ಪೇಗಳು ಒಂದಾದ ಮೇಲೆ ಒಂದು ಇರುತ್ತೆ.
ಈಗ ಮೇನ್ ಪಾಯಿಂಟ್ ಗೆ ಬರೋಣ. ನನಗೆ ಯಾವತ್ತೂ “ಉದಾರ್ಣೆ” ನ “ಉದಾಹರಣೆ” ಅಂತ, “ಹೇಳಬೇಕಾದ್ರೆ” ನ “ಏಳ್ಬೇಕಾದ್ರೆ” ಅಂತ ಬರೀಬೇಕಾ, ಬರಿಯೋದು ತಪ್ಪಾ ಅಂತ ಗೊಂದಲ ಆಗೇ ಇಲ್ಲ. ಹೌದು. ಪರೀಕ್ಷೆ ಮಾರ್ಕ್ಸ್ ಗೋಸ್ಕಾರ ಕಷ್ಟ ಪಟ್ಕಂಡು ಬರವಣಿಗೆ ಕನ್ನಡದ ತರಾ ಬರೀತಿದ್ನೆ ಹೊರ್ತು, ನಾನು ಕಲೀಬೇಕಾದ್ರೆ, ಬೇರೇಯೋರ್ಗೆ ಕಲಿಸ್ಬೇಕಾದ್ರೆ ಯಾವತ್ತು ಇವು ಮುಕ್ಯ ವಿಶ್ಯಗಳಾಗ್ಲಿಲ್ಲ. ಬಹುಷ್ಯ ಅವುಗಳ ಬಗ್ಗೆ ನಾನು ತಲೆ ಕೆಡಿಸ್ಕೊಂಡಿದ್ರೆ, ನಾನು ಕಲೀಬೇಕಾದ್ದನ್ನ ಬಿಟ್ಟು ಮಿಕ್ಕೆಲ್ಲ ಬಲವಂತವಾಗಿ ಕಲೀತಿದ್ನೋ ಏನೋ…
ಈಗ ಇತ್ತೀಚೆಗೆ ಶಂಕರ ಬಟ್ಟರ ಬಗ್ಗೆ ಗೊತ್ತಾದ ಮೇಲೆ, ಬನವಾಸಿ ಬಳಗದಲ್ಲಿ ಬಂದ ವಿಚಾರಗಳ್ನ ತಿಳಿದುಕೊಂಡಮೇಲೇ, ನಾನು ಅಶ್ಟು ವರ್ಶಗಳಿಂದ ಸರಿಯಾಗೇ ಮಾಡ್ಕಂಡು ಬಂದಿದ್ದೀನಿ ಅಂತ ಗ್ಯಾರಂಟಿ ಆಯ್ತು. ಇದರ ಬಗ್ಗೆ ಗಂಭೀರವಾಗಿ ಯೋಚಿಸಿದ್ಮೇಲೆ, ಶಂಕರ ಬಟ್ಟರು ಮಾಡ್ತಾ ಇರೋ ಕೆಲ್ಸದಿಂದ ಕನ್ನಡಿಗರಾದ ನಾವು ಯಾವ ಮಟ್ಟಕ್ಕೆ ಬೆಳೀಬೋದು ಅಂತ ದೊಡ್ಡ ಅರಿವು ನನ್ನಲ್ಲಿ ಮೂಡ್ತು. ನಾನು ಇದುವರ್ಗೂ ಅವ್ರ ಕೆಲ್ಸದ ಬಗ್ಗೆ ಗಮನಿಸಿರೋ ಪ್ರಕಾರ, ಶುಭಶ್ರೀ ಆಗಲಿ, ಬನವಾಸಿ ಬಳಗದೋರಾಗಲಿ ಹೇಳ್ತಿರೋ ಪ್ರಕಾರ, ಯಾವ್ದೇ ಒಂದು ಜನಾಂಗದಲ್ಲಿರೋ ಸಾವಿರಾರು… ಯಾಕೆ, ಲಕ್ಷಾಂತರ ವರ್ಶಗಳಿಂದ ಹೊಸ ಹೊಸ ವಿಚಾರಗಳನ್ನ, ವಿದ್ಯೆಗಳನ್ನ ಕಲೀತಾ ಬಂದಿರೋದು, ಇಂತ ರೀತಿಲೇ ಆಗ್ಬೇಕು ಅಂತ ಇರೋ ಬರವಣಿಗೆಯಿಂದಲ್ಲ…. ಎಲ್ರಿಗೂ ಅರ್ತ ಆಗೋ ಆಡು ನುಡಿಗಳಿಂದ, ಅವುಗಳನ್ನ ತನ್ನ ಪರಿಸರದೋರು ಬಳಸೋ ರೀತೀಲಿ ಉಲಿಯೋದ್ರಿಂದ ಅಂತ ಬಾಳ ಚೆನ್ನಾಗಿ ಗೊತ್ತಾಗುತ್ತೆ.
ಯಾವುದೇ ಒಂದು ಮಗು ಕಲಿಯೋದು ತನ್ನ ಪರಿಸರದೋರು ಬಳಸೋ ಪದಗಳಿಂದ. ಹೌದು “ಪರಿಸರ” ದ ನುಡಿಗಳಿಂದ. ಆ ಪರಿಸರ ಒಂದು ಮಗು ಉಟ್ಟಿದಾಗ, ಅದು ಮಲ್ಗಿರೋ ರೂಮಿಂದ, ಅಲ್ಲಿ ಆಗೋ ಸದ್ದುಗಳಿಂದ, ತನ್ನ ತಾಯಿ ಬಳಸೋ ಪದಗಳಿಂದ, ತನ್ನ ಮನೆಯೋರು ಬಳಸೋ ಪದಗಳಿಂದ, ತನ್ನ ಮನೆ ಇರೋ ಬೀದಿಯೋರು ಬಳಸೋ ಪದಗಳಿಂದ, ತನ್ನ ಮನೆ ಇರೋ ಕೇರಿಯೋರು ಬಲಸೋ ಪದಗಳಿಂದ, ತನ್ನ ಕೇರಿಯೋರೆಲ್ಲ ಸೇರಿ ಕಲಿಯೋ ಸ್ಕೂಲಲ್ಲಿ ಬಳಸೋ ಪದಗಳಿಂದ ತುಂಬಿರುತ್ತೆ. ಇಂತ ಒಂದು ವಿಧಾನದಿಂದ ಕಲಿಯೋ ಕಲಿಕೆ ಆ ಮಗು ಸಾಯೋವರ್ಗೂ ಗಟ್ಟಿಯಾಗಿ ನೆಲೆಯೂರುತ್ತೆ. ಇಲ್ಲಾಂದ್ರೆ, ಬರೀ ಜೊಳ್ಳು ತುಂಬ್ಕೊಂಡು ಬೆಳೆಯುತ್ತೆ ಆ ಮಗು.
ಈಗ ಎಲ್ರೂ ಇದು ಸರಿ, ಅದು ತಪ್ಪು ಅಂತ ಕಿತ್ತಾಡ್ತಿರೋ ಬರವಣಿಗೆ ಕನ್ನಡ ಕೇವಲ ಬೇರೇಯವ್ರು ಕಲ್ತಿರೋ ವಿಚಾರಗಳನ್ನು ಒಂದು ಮುದ್ರಣದ ರೂಪದಲ್ಲಿ, ಒಂದು ಸೂರಿನಲ್ಲಿ, ಅನೇಕ ಮಂದಿ ಕೂತು ಕಲಿಯೋಕೆ ಬೇಕು. ಆದ್ರೆ, ಶಂಕರ ಬಟ್ಟರಾಗಲಿ, ಬನವಾಸಿ ಬಳಗದೋರಾಗಲಿ ಎಲ್ರೂ ಹೇಳ್ತಿರೋದು ಆ ಬರವಣಿಗೆ ಕನ್ನಡದಲ್ಲಿ ಎಲ್ಲಾ ಕನ್ನಡಿಗ್ರಿಗೂ ಇಶ್ಟ ಹಾಗೋ, ಅನುಕೂಲ ಹಾಗೋ ಪದಗಳು ಇರ್ಲಿ ಅಂತ. ಯಾವುದೂ ಮೇಲೂ ಅಲ್ಲ, ಕೀಳೂ ಅಲ್ಲ ಅಂತ. ಕನ್ನಡಿಗ್ರಿಗೆ ತಮ್ಮ ತಮ್ಮ ಬಾಯಿ/ನಾಲ್ಗೆ ರಚನೆ ಪ್ರಕಾರ, ತಮ್ಮ ತಮ್ಮ ಪರಿಸರದಲ್ಲಿರೋ ನುಡಿಗಳ ಪ್ರಕಾರ, ತಮ್ಮ ತಮ್ಮ ಊರಿನ ಪರಿಸರದ ಪ್ರಕಾರ, ಅಲ್ಲಿರೋ ಜನರಿಗೆ ಅರ್ತ ಆಗೋ ಅಂತ ನುಡಿಗಳನ್ನು ಬಳಸ್ಕೋತಾರೆ. ಯಾವ ನುಡಿಗಳು ಎಲ್ರಿಗೂ (ಅಥವಾ ಜಾಸ್ತಿ ಜನಕ್ಕೆ ) ಕಶ್ಟ ಆಗುತ್ತೆ, ಅವು ಬಿದ್ದೋಗ್ತವೆ, ಮಿಕ್ಕವು ಉಳ್ಕೋತವೆ. ಈ ಪ್ರಕ್ರಿಯೆಯಿಂದ ಬನವಾಸಿ ಬಳಗದೋರು ಹೇಳಿರೋ “ಎಲ್ಲರ ಕನ್ನಡ” ಅಂತ ಉಟ್ಕೊಳ್ಳುತ್ತೆ. ಇಂತ ಒಂದು ಕನ್ನಡದಿಂದ ಆಗೋ ಕಲಿಕೆ (ಮಗು ಆಗಿದ್ದಾಗಿಂದ ಹಿಡಿದು, ಪಿ.ಎಚ್.ಡಿ. ಮಾಡೋವರೆಗೂ) ಕನ್ನಡಿಗರಲ್ಲಿ ನೊಬೆಲ್ ಅವಾರ್ಡ್ ತಗಳೋರನ್ನೂ ಉಟ್ಟಿಸುತ್ತೆ, ಕನ್ನಡಿಗರು R&D ಕೆಲ್ಸ ಮಾಡೋ ಹಾಗೂ ಮಾಡುತ್ತೆ, ಅದರಿಂದ ಇಂಡಿಯಾನೂ ಉದ್ದಾರ ಆಗುತ್ತೆ ಅನ್ನೋದ್ರಲ್ಲಿ ಎಳ್ಳಶ್ಟೂ ಅನುಮಾನ ಇಲ್ಲ. ಇದು ಸೈಂಟಿಫಿಕ್ ಹಾಗಿ ಈಗಾಗಲೇ ಜಗತ್ತಿನ ಹಲವೆಡೆ ರುಜುವಾತಾಗಿದೆ.
ಇದಕ್ಕೆ ಉದಾರ್ಣೆಯಾಗಿ ಜಪಾನ್, ಇಸ್ರೇಲ್, ಕೊರಿಯಾ, ನೆದರ್ ಲ್ಯಾಂಡ್ಸ್, ಚೀನಾ, ಜರ್ಮನಿ, ಫ್ರಾನ್ಸ್, ಹೀಗೇ ಹತ್ತಾರು ನಾಡುಗಳನ್ನ ನೋಡಬೂದು. ಅಲ್ಲಿನ ಕಲಿಕೇಲಿ ಜನರು ಬಳಸೋ ಬಾಶೇನ ನೋಡಬೋದು, ಅವರು ಮಾಡೋ “ಲ್ಯಾಂಗ್ ವೇಜ್ ಪ್ಲಾನಿಂಗ್” ನ ನೋಡಬೋದು, ಅದಕ್ಕೆ ಅವರು ಮಾಡೋ ಕರ್ಚನ್ನ ನೋಡಬೋದು, ಅದಕ್ಕೆ ಅವರು ಕೊಡೋ ಒತ್ತನ್ನ ಗಮನಿಸಬೋದು. ಅದನ್ನ ಬಿಟ್ಟು ಕೇವಲ ತಮಿಳುನಾಡು ಬೆಂಚ್ ಮಾರ್ಕ್ ಅನ್ನೋದು ಸರಿನೋ, ತಪ್ಪೋ ಅಂತ ಕಿತ್ತಾಡೋದ್ರಲ್ಲಿ ಯಾವ ಪ್ರಯೋಜ್ನಾನು ಇಲ್ಲಾ ಅಂತ ನನಗನ್ನಿಸುತ್ತೆ. ಅಸಲಿಗೆ, ತಮಿಳುನಾಡು ನಿಜವಾಗಲೂ ತಮ್ಮ ನುಡಿ ಬಳಸ್ಕೊಂಡು ಹೇಳ್ಕೊಳೋವಷ್ಟು ಸಾಧಿಸಿಲ್ಲ. ಅವ್ರ ಗಮನವೆಲ್ಲಾ ತಮ್ಮ ನುಡಿ ಉಳಿಸ್ಕೊಳ್ಳೋಕೆ ಹೋಗಿದೆ ಹೊರತು ನಮ್ಮ ನುಡಿನಾ ಬೆಳೆಸ್ಕೊಂಡು, ಅವರ ಕಲಿಕೆ ಗುಣಮಟ್ಟಾನ ಜಾಸ್ತಿ ಮಾಡ್ಕೊಳ್ಳೂ ಕಡೆಗೂ ಹೋಗಿಲ್ಲ. ಅಂಗೆ ಮಾಡಿದ್ರೆ, ಅದರ ಹೆಸರು ಮೇಲೆ ಹೇಳಿದ ನಾಡುಗಳ ಪಟ್ಟಿಯೊಂದಿಗೆ ಸರಾಗ್ ವಾಗಿ ಬರ್ತಿತ್ತು.
ಆದ್ದರಿಂದ ಅಜಕ್ಕಳ ಗಿರಿಶ್ ಅವರೆ, ತಾವು ದಯಮಾಡಿ, ಶಂಕರ ಬಟ್ಟರು ತಮಿಳನ್ನ ಮಾದರಿಯಾಗಿ ತಗೊಂಡ್ರೋ ಇಲ್ಲವೋ, ಕನ್ನಡ ತಮಿಳ್ಗಿಂತ ದೊಡ್ಡದೋ ಸಣ್ಣದೋ ಅಂತ ಸುಮ್ನೆ ನಿಮ್ಮ ಅಪಾರವಾದ ಜ್ನಾನ, ಸಮಯ ಮತ್ತು ಶಕ್ತೀನ ಕರ್ಚು ಮಾಡದೆ, ಹಾಗೂ ಕನ್ನಡದಲ್ಲಿ ಅಕ್ಷರಗಳನ್ನು ಬಿಟ್ಟರೆ ಬೆಳವಣಿಗೆ ಆಗುತ್ತೋ, ಹೆಚ್ಚು ಸೇರಿಸಿದ್ರೆ ಉದ್ದಾರ ಆಗ್ಬಿಡುತ್ತೋ ಅನ್ನೋದನ್ನ ತಲೆ ಕೆಡಿಸ್ಕೊಳ್ಳೋದು ಬಿಟ್ಟು, ಶಂಕ್ರ ಬಟ್ಟರು ಹೇಳಿರೋ ವಿಚಾರಗಳ ಮೂಲ ಉದ್ದೇಶ ಸರಿಯಾಗಿ ಅರ್ತ ಮಾಡ್ಕೊಂಡು, ಅವರು ಹೇಳಿರೋ ವಿಚಾರಗಳಿಗೂ ಕನ್ನಡಿಗರ ಕಲಿಕೆಗೂ ಏನು ಸಂಬಂಧ ಅಂತ ತಿಳ್ಕೊಂಡು, ಇದೇ ರೀತೀಲೀ ಉದ್ದಾರ ಆಗಿರೋ ನಾಡುಗಳು (ಮೇಲೆ ಉದಾರ್ಣೆಯಾಗಿ ತಿಳಿಸಿದ), ತಮ್ಮ ನುಡೀಲಿ ಮಾಡಿದ ಸುದಾರಣೆಗಳ ಬಗ್ಗೆ, ಅವರು ಮಾಡಿದ “ಲ್ಯಾಂಗ್ ವೇಜ್ ಪ್ಲಾನಿಂಗ್” ಬಗ್ಗೆ, ಅದನ್ನ ಉಪಯೋಗಿಸ್ಕೊಂಡು ಅವರು ಕಟ್ಕೊಂಡ ಕಲಿಕೆ ಏರ್ಪಾಡಿನ ಬಗ್ಗೆ ತಿಳಿಯಲು ತಮ್ಮ ಶ್ರಮವನ್ನು ಬಳಸಿ ಎಂದು ವಿನಯದಿಂದ ಕೇಳಿಕೊಳ್ಳುವೆ. ಬರೀ ತಿಳಿದುಕೊಳ್ಳೋದಕ್ಕೆ ನಿಲ್ಲಿಸದೆ, ಆ ಕಲಿಕೆಯನ್ನು ಬಳಸಿಕೊಂಡು, ಎಲ್ಲರೊಡಗೂಡಿ, ಶಂಕ್ರಬಟ್ಟರ ಜೊತೆಯೂ ಕೆಲ್ಸ ಮಾಡಿ, ನಮ್ಮ ನಾಡು ಕಟ್ಟೋ ಕೆಲ್ಸದ ಕಡೆ ಗಮನ ಹರಿಸೋಣ ಎಂಬುದು ನನ್ನ ಕಡೇ ಮನವಿ.
-ಇಂತಿ,
ಪ್ರಕಾಶ
ಗಿರೀಶ್ ಸಾರ್ ಎಲ್ಲಿದ್ದೀರಿ??
ಮತ್ತೊಂದು ಬರಹ ಬರೆದು, ಅದದೇ ಹೇಳಿ ತಮ್ಮ ಬರಹಗಳ ಎಣಿಕೆ ಹೆಚ್ಚಿಸಿಕೊಳ್ಳುವ ಹೊಂಚೋ ಏನೋ..
ಅವರು ಎಲ್ಲ ಟೀಕೆಗಳಿಗೆ ಉತ್ತರಕೊಡುವುದಿಲ್ಲ. ಇನ್ನು ಅವರ ಉತ್ತರದ ಬೇಕುತನದ ಬಗ್ಗೆ ಶುಬಶ್ರೀ ಎತ್ತಿರುವ ಕೋರೆಗಳನ್ನು ಗಮನಿಸಿರಿ.
ತರ್ಕದಿಂದ ಮಾತಾಡುವುದರ ಹೊರತು ಮಂದಿಯನ್ನು ಮರುಳು ಮಾಡಿ, ಎತ್ತಿಕೊಟ್ಟುವಂತಹ ಬರಹ ಎಂದು ಅವರು ಹೇಳಿದ್ದಾರೆ ( more emotionally provocative than logical )
“ಕನ್ನಡಕ್ಕಿಂತ ತಮಿಳು ಯಾವುದರಲ್ಲಿ ಮುಂದಿದೆ?”
ಏನಿದು.. ತಿರುಗಿ ಮುಂದು-ಹಿಂದು, ಮೇಲೆ-ಕೆಳಗೆಯ ಮಾತು?
ಈಗ ತಾನೆ ಬಿಸಿ ಬಿಸಿಯಾಗೆ ನಮ್ಮ ದೇಶ ಸೆನ್ಸಸ್ ಬಂದಿದೆ. ೬೦% ಕ್ಕೂ ಹೆಚ್ಚು ಹಿಂದುಳಿದ ವರ್ಗದವರಿರುವ ತಮಿಳುನಾಡು ಕರ್ನಾಟಕಕ್ಕಿಂತ ಅಕ್ಕರಕಲಿಕೆ/literacyಯಲ್ಲಿ, ಹೆಣ್ಣುಗಳಿಗೆ ಅಕ್ಕರಕಲಿಕೆಯಲ್ಲಿ ಹಾಗೂ ಆಳುಆಳಿನ ಗಳಿಕೆ/GDPಯಲ್ಲಿ ಮುಂದಿದೆ.
ಇನ್ನು ತಮಿಳುಮಂದಿಯಲ್ಲಿ ನುಡಿಎಚ್ಚರಿಕೆ/language awareness, ಚಳುವಳಿಗಳು/movements, ಹಾಗೇ ಅದರಿಂದ ನಾಡುಹದುಳಿಕೆ/social reforms ಬಲು ಚನ್ನಾಗಿ ನಡೆದಿದೆ. ಒಂದು ಹಿಂದುಳಿತ ತಮಿಳ ಇಂದು ನಮ್ಮ ಸರ್ವೊಚ್ಚ ನ್ಯಾಯಾಲಯದ ಮುಂದಾಳು. ಇದರಿಂದ ತಮಿಳುನಾಡು ಕರ್ನಾಟಕಕ್ಕಿಂತಲೂ ಮುಂದಿದೆ.
ತಮಿಳುನುಡಿಗೆ ಬರೆದಿರುವಶ್ಟು ನುಡಿಯರಿಮೆಯ ಒಳಹುಗಳ ಹೊತ್ತಗೆಗಳು ( ಹಲವಾರು ನುಡಿಗಳಲ್ಲಿ ) ಕನ್ನಡದಲ್ಲಿ ಇಲ್ಲ. ಸ್ವೀಡಿಶ್ ನುಡಿಯಲ್ಲೂ ತಮಿಳಿಗೆ ಸೊಲ್ಲರಿಮೆ ಬರೆದಿದ್ದಾರೆ, ಪದನೆರಿಕೆ ಇದೆ ಹಾಗೇ ಸ್ವೀಡನ್ ಅಲ್ಲೂ ತಮಿಳರು ಸರಕಾರಕ್ಕೆ ಕೋರಿಕೆಕೊಟ್ಟು ತಮ್ಮ ತಾಯ್ನುಡಿಯನ್ನು ಆ ದೇಶದಲ್ಲು ಕಲಿಯಲು ಅನುವು ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರ ನುಡಿಎಚ್ಚರ ಹೊಗಳತಕ್ಕದ್ದೇ ಹಾಗು ಸಾಟಿಯಿಲ್ಲದ್ದೇ.
ಇಡೀ ಬರಹ ಅವರನ್ನು, ಅವರ ನುಡಿಯನ್ನು ಏನೋ ಒಂದು ದೆವ್ವ ಎಂಬ ನಿಟ್ಟಿನಿಲ್ಲಿ ಹೇಳಿಕೊಂಡು, ಅವರೆಂದು ಯಾರಿಗೂ ಮಾದರಿ ಆಗರು ಎನ್ನುವಂತಿದೆ.
ಅಂದ ಹಾಗೆ ಸೆನ್ಸಸ್ ನ ಒಂದು ನೋಟ..ಸುಮ್ಮನೆ ಮಾಹಿತಿಗೆ
ಅಕ್ಕರ ಕಲಿಕೆ
2001 > ಕರ್ನಾಟಕ – 66.6 % ತಮಿಳುನಾಡು – 73.5%
2011 > ಕರ್ನಾಟಕ – 75.6% ತಮಿಳುನಾಡು – 80.3%
ಹತ್ತು ವರುಷಗಳಲ್ಲಿ ಕರ್ನಾಟಕದ್ದು 9% ಹೆಚ್ಚಳ, ತಮಿಳುನಾಡಿನದ್ದು 6.8% ಹೆಚ್ಚಳ!
ಇನ್ನು ಕೆಲವು ಸಣ್ಣ ರಾಜ್ಯಗಳ ಕತೆ
2001 > ಗೋವಾ – 82% ತ್ರಿಪುರ – 73.2% ಮಿಜೋರಾಮ್ – 86.8% ಹಿಮಾಚಲ್ – 76.5% ನಾಗಾಲ್ಯಾಂಡ್ -66.6% ಕೇರಳ – 90.9%
2011 > ಗೋವಾ – 87.4% ತ್ರಿಪುರ – 87.8% ಮಿಜೋರಾಮ್ – 93.5% ಹಿಮಾಚಲ್ – 83.8% ನಾಗಾಲ್ಯಾಂಡ್ -80.1% ಕೇರಳ – 93.9%
—
ನನ್ನ ತಲೆಗೆ ಹೊಳೆದಿದ್ದು
ಸಣ್ಣ ಜನಸಂಖ್ಯೆ – ಹೆಚ್ಚಿಗೆ ಸಂಪನ್ಮೂಲ – ಕಲಿಕೆಗೆ ಹೆಚ್ಚು ಗಮನ ನೀಡುವ ಅವಕಾಶ – ಶೆಕಡಾವಾರು ಅಕ್ಕರ ಕಲಿಕೆಯಲ್ಲಿ ಹೆಚ್ಚಳ
ಇದು 5.3 ಮಿಲಿಯನ್ ಜನಸಂಖ್ಯೆಯಿರುವ ಫಿನ್ಲ್ಯಾಂಡಿಗೂ ಸಲ್ಲುತ್ತೆ , ನಮ್ಮ ಕರ್ನಾಟಕದ ಜನಸಂಖ್ಯೆಯಲ್ಲಿ ಹತ್ತು ಫಿನ್ಲ್ಯಾಂಡ್ ಗಳಾಗುತ್ತವೆ ಎಂಬುವುದು ಇನ್ನೊಂದು ಪಾಯಿಂಟು.
ತಮಿಳು ಲಿಪಿ ಬಿಡಿ.. ನಾನು ಸ್ವೀಡಿಶ್ ನುಡಿ ಕಲಿಯುತ್ತಿದ್ದೀನಿ. ಇದು ಸ್ವೀಡನ್ ಹಾಗು ಪಿನ್‌ಲ್ಯಾಂಡಿನ ಆಡಳಿತ ನುಡಿ. ಇದರಲ್ಲಿ ದ ಮತ್ತು ಡ ನಡುವೆ, ತ ಮತ್ತು ಟ, ಚ ಮತ್ತು ಶ/ಷ ನಡುವೆ ಅಂತರವಿಲ್ಲ.
ಆದರಿಂದ ಸ್ವೀಡಿಶ್ ಮಂದಿ ‘ದಟ್’ ಅನ್ನು ‘ದಥ್’ ಹಾಗು ‘ಚಾಟಿಂಗ್’ ಅನ್ನು ‘ಶಾತಿಂಗ್’ ಎನ್ನುವರು.
ಇನ್ನು ಬರವಣಿಗೆಯಲ್ಲಿ ..
rs = ಶ ( ಮಾದರಿ : Anders = ಅಂದೆಶ್ )
rd = ದ ಮತ್ತು ಡ ನಡವೆಯ ಒಂದು ಸದ್ದು ( ಮಾದರಿ : gården = ಗೋrdಎನ್ )
rt = ತ ಮತ್ತು ಟ ನಡುವೆಯ ಒಂದು ಸದ್ದು ( ಮಾದರಿ : kort = ಖೊrt )
ಹೀಗೆ ಹಲವು…
ಇನ್ನು ಈ ನುಡಿಯಲ್ಲಿ ಕ, ತ, ಪ ಇವೆಲ್ಲ ೯೦% ಸಲ ಮಹಾಪ್ರಾಣಗಳು.
ಇಂಗ್ಲೀಶಲ್ಲೂ ಹೀಗೇ ತಾನೆ ಅಲ್ಪಪ್ರಾಣ ಕ, ಟ, ಪ ಇಲ್ಲ ಅದರಲ್ಲಿ.!
ಇನ್ನು ಈ ನುಡಿಯಲ್ಲಿ ಲ್ಯಾಟಿನ್ ಲಿಪಿಗೆ ಮೂರು ಹೆಚ್ಚುವರಿ ಅಕ್ಕರಗಳಿವೆ. Ö, Å, Ä. ಹಾಗು ಇವರು ಲ್ಯಾಟಿನ್ ಲಿಪಿಯ Z, Q, W ಬಳಸಲ್ಲ.. ಅದಕ್ಕೆ Quarter = KVARTAL, Water = Vatten ಹೀಗೆ.
ಇನ್ನೋ ಹೊಸಪದವಾದ, Mail = ಇಲ್ಲಿ mejl. J=ಯ್…
“ನಾನು ಹೇಳಬೇಕಾದ ಬಹಳ ಮುಖ್ಯವಾದ ಸಂಗತಿಯೆಂದರೆ , ಶಂಕರಭಟ್ಟರು ಹೇಳುವ ರೀತಿಯ ಸುಧಾರಣೆಗಳನ್ನು ತಮಿಳರು ಎಂದೋ ಮಾಡಿದ್ದಾರೆ ತಾನೆ? ಅಲ್ಲಿ ಆ ಭಾಷೆಯ ಸ್ಥಿತಿಗತಿ ಹೇಗಿದೆ? ಈ ಸುಧಾರಣೆಗಳ ಕಾರಣದಿಂದಾಗಿ ಯಾವ ಗುಣಾತ್ಮಕ ಪರಿಣಾಮಗಳಾಗಿವೆ? ಇದನ್ನು ನೋಡಬೇಡವೆ?”
ಹೌದು. ಆದರೆ… ಗುಣ್ಮಾತಕ :)/ಒಳ್ಳೆಯ ಪರಿಣಾಮಗಳನ್ನು ಆಗಿವೆ ಎನ್ನುವುದಕ್ಕೆ ತಮಿಳನಾಡಿನಲ್ಲಿ ನಮ್ಮ ನೆಲಕ್ಕಿಂತ ಹೆಚ್ಚು ಕಲಿಕೆ ಇರುವುದು ಒಂದು ಪುರಾವೆ ಆಗಬಹುದೇನೋ..
ಈ ವಿಶಯವಾಗಿ ಅಜಕ್ಕಳ ಗಿರೀಶ ಬಟ್ಟರು ಯಾರೋ ಹೆಸರೇ ಕೇಳದವರನ್ನು ಎತ್ತಿಹೇಳುವುದು ತಪ್ಪು.. ತಮಿಳು-ವಿದ್ವಾಂಸರೊಬ್ಬರನ್ನು ಹಿಡಿದು ಕೇಳೋಣ. ನೆನೆಪಿರಲಿ ತಿರುಮಲೇಶರಾಗಲೀ, ರಾ ಗಣೇಶರಾಗಲಿ ಕನ್ನಡ ವಿದ್ವಾಂಸರೂ ಅಲ್ಲ.. ತಮಿಳು ವಿದ್ವಾಂಸರೂ ಅಲ್ಲ. ಇನ್ನು ಗಿರೀಶ ಬಟ್ಟರ ತಮಿಳು ಅರಿವಿನ ಕೊರೆತೆಗೆ ಈ ಅವರ ಬರಹಗಳೇ ಪುರಾವೆ.
ಆದರೂ ತಮಿಳಿನ ಇಶ್ಟೊಂದು ಚರ್ಚೆ ಬೇಕಾಗಿಲ್ಲ ಎಂದು ನನ್ನ ಅನಿಸಿಕೆ.
ಕನ್ನಡಕ್ಕೇನು ಬೇಕು ಎಂಬು ಮುಕ್ಯ.!
>> ಶಂಕರ ಭಟ್ಟರ ವಾದಕ್ರಮ ತಮಿಳು ಮಾದರಿ , ದ್ರಾವಿಡ ಚಳುವಳಿಯಂಥದ್ದು ಎಂದು ಹೇಳಿದರೆ ಅದು ವೈಜ್ಞಾನಿಕವಲ್ಲದ್ದು, ವೈಯಕ್ತಿಕ ಅಂತೆಲ್ಲ ಹೇಗಾಗುತ್ತದೆ?ಅದನ್ನು ಒಂದು ನಿಂದೆ ಅಥವಾ ಆರೋಪ ಅಂತ ಶುಭಶ್ರೀಯವರು ಯಾಕೆ ಪರಿಗಣಿಸುತ್ತಾರೆ? ಅವರಿಗೆ ಇದರಿಂದ ಎಷ್ಟು ಕೋಪ ಬಂದಿದೆ ಅಂದರೆ ಅವರು ಶಂಕರ ಭಟ್ಟರ ವಾದವನ್ನು ತಮಿಳು ಮಾದರಿ ಎಂದು ಸೂಚಿಸಿದ್ದಕ್ಕಾಗಿ ಅವರ ಪರವಾಗಿ ನನ್ನ ವಿರುದ್ಧ ಎಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತಾರೋ ಅಂತ ಆತಂಕ ನನಗೆ. ತಮಿಳು ಮಾದರಿ ಎಂದರೆ ಅದು ನಿಂದೆ, ಆರೋಪ ಅಂತ ಯಾಕೆ ಅನಿಸಬೇಕು?
ಯಾಕೆಂದರೆ,
೧. ದ್ರಾವಿಡ ಚಳವಳಿ: ೧೯೨೫ರಲ್ಲಿ ಶ್ರೀ ರಾಮಸ್ವಾಮಿ ಪೆರಿಯಾರರು ಹುಟ್ಟು ಹಾಕಿದ “self respect movement” ಅನ್ನು ದ್ರಾವಿಡ ಚಳವಳಿ ಎನ್ನುತ್ತಾರೆ. ವಿಕಿಪೀಡಿಯಾದಲ್ಲಿನ ಮಾಹಿತಿಯಂತೆ ಈ ಚಳವಳಿ ಏನೆಂದರೆ…
The Self-Respect Movement was founded in 1925 by Periyar E. V. Ramasamy (also known as Periyar) in Tamil Nadu, India. The movement has the aim of achieving a society where backward castes have equal human rights,[1] and encouraging backward castes to have self-respect in the context of a caste based society that considered them to be a lower end of the hierarchy.[2] The movement was extremely influential not just in Tamil Nadu, but also overseas in countries with large Tamil populations, such as Malaysia and Singapore.
ಮುಂದೆ ಈ ಚಳವಳಿ ಬ್ರಾಹ್ಮಣ ವಿರೋಧಿಯಾಯ್ತು, ಸಂಪ್ರದಾಯ ವಿರೋಧಿಯಾಯ್ತು ಅನ್ನುವುದು ಕನ್ನಡ ಲಿಪಿ ಸುಧಾರಣೇಯನ್ನು ವಿರೋಧಿಸಲು ಕಾರಣವಾಗಬೇಕೆ?
ಈಗ ಶಂಕರಬಟ್ತರು “ಲಿಪಿಕ್ರಾಂತಿ” ಮತ್ತು “ಪದಕ್ರಾಂತಿ”ಗಳಲ್ಲಿ ಹೇಳುತ್ತಿರುವುದಕ್ಕೂ ದ್ರಾವಿಡ ಚಳವಳಿಗೂ ಸಂಬಂಧ ಇದೇ ಏನು? ಎತ್ತುಗೆಗೆ, “ಸಂಸ್ಕ್ರುತ ಕಲಿಕೆಗೆ ಜರ್ಮನಿಯ ಮಾದರಿ ಅನುಸರಿಸೋಣ ಅಂತಾ ಯಾರಾದರೂ ಅಂದಲ್ಲಿ ಬೇಡಾ ಅದರಿಂದ ಇಲ್ಲೂ ನಾಜ಼ಿಗಳು ನಡೆಸಿದಂತಹ ಹತ್ಯಾಕಾಂಡಗಳು ಮರುಕಳಿಸುತ್ತವೆ” ಎನ್ನುವ ವಾದ ವೈಜ್ಞಾನಿಕವೇ? ಅಲ್ಲದಿದ್ದರೆ ನೀವು ತಮಿಳುನಾಡಿನ ದ್ರಾವಿಡ ಚಳವಳಿಯನ್ನು ಇಲ್ಲಿ ತಂದದ್ದೂ ಅವೈಜ್ಞಾನಿಕ ಅನಿಸುವುದಿಲ್ಲವೇ?
ಮಾಯ್ಸಣ್ಣ,
ದಯಮಾಡಿ ಈ ಜಾತಿಗೆ ಸಂಬಂಧಿಸಿದ ಮಾತುಗಳನ್ನು ಇಲ್ಲಿಗೆ ನಿಲ್ಲಿಸೋಣ. ಇಲ್ಲದಿದ್ದರೆ ಅದೇ ದಿಕ್ಕಿಗೆ ವಾದವನ್ನು ಎಳೆದುಕೊಂಡು ಹೋಗಲು ಕಾದುಕೊಂಡವರು ಇಲ್ಲಿ ಬಂದುಬಿಡುತ್ತಾರೆ. ಕೊನೆಗೆ ನೀವು ಒಂದು ಧರ್ಮದ ವಿರೋಧಿ, ಒಮ್ದು ಜಾತಿಯ ವಿರೊಧಿ ಎನ್ನುವ ಹಣೆಪಟ್ತ ಕಟ್ಟಿಯಾರು.
ದ್ವಾವಿಡವಾದಿಗಳು ಅಲ್ಲ ದ್ರಾವಿಡವಾದಿಗಳು
ತಕ್ಕ ಸಮಯಕ್ಕೆ ತಕ್ಕುದಾದ ಮಾತುಗಳು.
>ಇಲ್ಲದಿದ್ದರೆ ಅದೇ ದಿಕ್ಕಿಗೆ ವಾದವನ್ನು ಎಳೆದುಕೊಂಡು ಹೋಗಲು ಕಾದುಕೊಂಡವರು ಇಲ್ಲಿ ಬಂದುಬಿಡುತ್ತಾರೆ. ಕೊನೆಗೆ ನೀವು ಒಂದು ಧರ್ಮದ ವಿರೋಧಿ, ಒಮ್ದು ಜಾತಿಯ ವಿರೊಧಿ ಎನ್ನುವ ಹಣೆಪಟ್ತ ಕಟ್ಟಿಯಾರು.>
ಹೌದು, ಅವರು ಅದಕ್ಕಾಗಿಯೇ ಕಾದು ಕುಳಿತಿರುತ್ತಾರೆ, ಬೇರೆ ಕೆಲಸವಿಲ್ಲದೆ. ಅವಕಾಶ ಸಿಕ್ಕ ಕೂಡಲೇ ಒಳನುಗ್ಗಿ ಕೆಸರೆರಚಿ ‘ವಿಶಾಲ ಮನಸ್ಸಿ’ನ, ‘ವಿಶಾಲ ಚಿಂತನೆ’ಯ ಮಾಯ್ಸಣ್ಣನ ತಿಳಿವಳಿಕೆಯ ತಿಳಿ ಮಾತುಗಳನ್ನು ತಪ್ಪು ಎಂಬಂತೆ ಬಿಂಬಿಸಿ, ಜಾತಿಯ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟುವರು!. ಮಾಯ್ಸಣ್ಣ ಈ ಎಲ್ಲ ಜನರಿಂದ ಹುಷಾರಾಗಿರಬೇಕು ಮತ್ತು ಎಚ್ಚರಿಕೆಯಿಂದ ಮೈಗೆಣ್ಣೆ ಹಚ್ಚಿಕೊಂಡು, ಇವರೆಲ್ಲರ ವಿರುದ್ಧ ಯುದ್ಧವನ್ನು ಬಿಡದೇ ಮುಂದುವರಿಸಬೇಕು:).
ಆಯ್ತಾಯ್ತು.. ನನ್ನಿ..
೨. ಕನ್ನಡ ಲಿಪಿಕ್ರಾಂತಿಯಲ್ಲಿ ಅಕ್ಷರಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾದರೆ ಅದು ತಮಿಳು ಮಾದರಿ ಎನಿಸುವುದು ಏಕೆ? ತಮಿಳಿನಲ್ಲಿ ಮಹಾಪ್ರಾಣಾಕ್ಷರಗಳು, ಋ ಕಾರಗಳು ಮೊದಲಿಗೆ ಇದ್ದು ನಂತರ ಕತ್ತರಿಸಲಾಗಿದೆಯೇ ಅಥವಾ ಮೊದಲಿನಿಂದಲೂ ತಮಿಳು ಬರವಣಿಗೆಯಲ್ಲಿ ಅವು ಇರಲೇ ಇಲ್ಲವೇ? ಎನ್ನುವುದು ತಮಿಳು ಮಾದರಿ ಎನ್ನುವುದಕ್ಕೆ ಮುನ್ನ ಲೆಕ್ಕಿಸಬೇಕಲ್ಲವೇ? ಬಟ್ಟರು ನೇರವಾಗಿ ಹಾಗೆ ಹೇಳಿರದಿದ್ದರೂ ನೀವೇ ಹಾಗೆ ಹೇಳಲು ಕಾರಣವೇನು?
ನೀವು ಹೇಳಿದ ಮಾತಿಗೆ ನೇರವಾಗಿ ಸಂಬಂಧವಿಲ್ಲದ ಒಂದು ಮಾತಿದೆ.
ಅಂತರ್ಜಾಲದ ಮತ್ತೊಂದು ತಾಣದಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ:
ಕನ್ನಡ ಲಿಪಿ ಸುಧಾರಣೆಯೆನ್ನುವುದು ತಮಿಳು ಮಾದರಿಯದ್ದು, ದ್ರಾವಿಡ ಚಳವಳಿಯಂಥದ್ದು, ಇದು ನಾಳೆ ಬ್ರಾಹ್ಮಣ ದ್ವೇಷಕ್ಕೆ, ಹಿಂದೂ ದ್ವೇಷಕ್ಕೆ ತಿರುಗುತ್ತದೆ. ಹಾಗಾಗಿ ಇದನ್ನು ಮೊಳಕೆಯಲ್ಲೇ ಚಿವುಟಬೇಕು.
ಸಾರ್, ಇಂಥಾ ಅನಿಸಿಕೆ ಕೆಲವರಲ್ಲಿ ಉಂಟಾಗಲು ತಮ್ಮ “ತಮಿಳು ಮಾದರಿಯದ್ದು, ದ್ರಾವಿಡ ಚಳವಳಿಯ ಮಾದರಿಯದ್ದು” ಎಂಬ ಮಾತುಗಳೂ, ರಾ ಗಣೇಶ್, ತಿರುಮಲೇಶ್ ಅವರ ಬರಹಗಳೂ ಕಾರಣವಲ್ಲವೇ?
ಹಾಗಾಗಿ ತಾವು ತಮಿಳಿನಂತೆ ಇದು ಎಂದದ್ದಕ್ಕೆ ನನ್ನ ಆಕ್ಷೇಪ ಎತ್ತಿದೆ. ಹೋಗಲೀ ಬಿಡಿ, ನೀವು ಹೇಗೂ ಕ್ಷಮೆ ಕೋರಿದ್ದಾಯ್ತಲ್ಲ!
ನಾನು ನಿಮ್ಮ ಮೇಲೆ ಕೇಸು ಹಾಕುವಷ್ಟು ಶಕ್ತಳೂ ಅಲ್ಲ, ಅಂತಹ ಉದ್ದೇಶ ಹೊಮ್ದಿದವಲೂ ಅಲ್ಲ. ತಾವು ನಿರಾಳವಾಗಿರಬಹುದು. ಇಷ್ಟಕ್ಕೂ ಶಂಕರಬಟ್ ಅವರೇ ಹಾಗೆ ಮಾಡಿಲ್ಲದಿರುವಾಗ ನಾನ್ಯಾಕೆ ಮಾಡಲಿ. ಹಾಂ! ಕನ್ನದಕ್ಕೆಕೆ ಶುಬಶ್ರೀಯವರ ಕತ್ತರಿ ಅಂತಾ ಮಾತ್ರಾ ಬರೀಬೇಡಿ ಅಷ್ಟೇ… ಹ ಹ್ಹಾ ಹ್ಹಾ!
“ಕನ್ನಡ ಲಿಪಿ ಸುಧಾರಣೆಯೆನ್ನುವುದು ತಮಿಳು ಮಾದರಿಯದ್ದು, ದ್ರಾವಿಡ ಚಳವಳಿಯಂಥದ್ದು, ಇದು ನಾಳೆ ಬ್ರಾಹ್ಮಣ ದ್ವೇಷಕ್ಕೆ, ಹಿಂದೂ ದ್ವೇಷಕ್ಕೆ ತಿರುಗುತ್ತದೆ. ಹಾಗಾಗಿ ಇದನ್ನು ಮೊಳಕೆಯಲ್ಲೇ ಚಿವುಟಬೇಕು.”
ನೋಡಿ.. ಜಾತಿ ಬಂತು.. ಈ ಮಡಿವಂತರ ( ಒಂದು ಬಗೆಯ ಬ್ರಾಹ್ಮಣೋತ್ತಮರು.. ಅವರು ಉತ್ತಮರು ಕೇವಲ ಏಕೆಂದರೆ ಅವರು ಹುಟ್ಟಿನಿಂದ ಬ್ರಾಹ್ಮಣರು 🙂 ) ಕಾಟ ಸಾಕಪ್ಪ ಸಾಕು..
ಇನ್ನು ತಮಿಳು ಅಕ್ಕರಗಳ ಬಗ್ಗೆ ತೋಲ್ಕಾಪ್ಪಿಯನ್ ಏನು ಹೇಳಿದೆಯೋ ಅದನ್ನೇ ಹೆಚ್ಚು ಕಾಲ, ಮಂದಿ ತಮಿಳರು ಅನುಸರಿಸಿರುವುದಂತೆ, ನನ್ನ ತಮಿಳು ಗೆಳೆಯ ತೋರಿದ ದಾಕಲೆಯ ಪ್ರಕಾರ. ಇನ್ನೂ ತೋಲ್ಕಾಪ್ಪಿಯನ್ನ ಕಾಲ ಏನು ಎಂದು ತಿಳಿಯದಿದ್ದರೂ, ಅದು ಕರಾಮಾಗಿಂತ ಹಳೆಯದಂತೆ.
ಹುರುಪಿದ್ದರೆ ತೋಲ್ಕಾಪ್ಪಿಯನ್ ನ ತಿರುಳಿನ ಬಗ್ಗೆ ಹೊರತು.. ಅದರಲ್ಲಿ ಯಾವ ಯಾವ ಸಂಸ್ಕ್ರುತದ ಹೊತ್ತಗೆಯ ಪ್ರಬಾವವಿದೆ ಎಂದು ಊಹಾಪೋಹ ಎಬ್ಬಿಸಿ.. ಅಲಾ ನಮ್ಮ ಸಂಸ್ಕ್ರುತ ಅಲ್ಲೂ ಇದೆ ಎಂದು ಬೀಗದೇ ಇರಬಹುದು.
ಮತ್ತೊಂದು ಮಾತು,
ನಿಮ್ಮ ಬರಹದಲ್ಲಿ ಅಂಗಚ್ಛೇಧ ಮಾಡುವುದು, ಕತ್ತರಿಸುವುದು ಮುಂತಾಗಿ ಬರೆದಿದ್ದೀರಾ. ಇತ್ತೀಚಿಗೆ ಒಂದು ದಿನಪತ್ರಿಕೆಯಲ್ಲಿ ಶ್ರೀ ತಿರುಮಲೇಶ್ ಅವರೂ ಕನ್ನಡ ವಿಶ್ವಕನ್ನಡವಾಗುವುದು ಹೇಗೆಂದು ನೀಡಿರುವ ಸಂದರ್ಶನದಲ್ಲಿ “ಕನ್ನಡದ ಕೈಕಾಲು ಕತ್ತರಿಸುವ…ಜನರಿದ್ದಾರೆ” ಇತ್ಯಾದಿ ಬರೆದಿದ್ದಾರೆ, ನಿಮ್ಮಂತೆಯೇ. ಅಜಕ್ಕಳರಿಗೇಕೆ ಈ ಅಸಹನೆ? ಎಂದು ನಾನು ಬರೆದದ್ದು ಯಾಕೆಂದು ಈಗ ತಿಳಿಯಿತೇ? ನೀವುಗಳು ಹೀಗೆ ಬರೆಯುವುದು ವಿಷಯವನ್ನು ಲಾಜಿಕಲ್ ನೆಲೆಯಿಂದ ಸೆನ್ಸೇಷನಲ್ ನೆಲೆಗೆ ಒಯ್ಯುವ ಪ್ರಯತ್ನವಲ್ಲವೇ? ಇದು ಸರಿಯೇ?
ತಮಿಳು ಕನ್ನಡಕ್ಕಿಂತಾ ಮುಂದಿದೆಯೇ?
ಈ ಪ್ರಶ್ನೆಗೆ ಹೌದೂ ಎನ್ನುವವರೂ ಇಲ್ಲಾ ಎನ್ನುವವರೂ ಸಿಗುತ್ತಾರೆ. ವಿಶ್ವದ ಇತರೆ ಮುಂದುವರೆದ ಭಾಷೆಗಳಿಗೆ ಹೋಲಿಸಿದರೆ ತಮಿಳು ಸಾಧಿಸಿರುವಂತದ್ದು ಕನ್ನಡಕ್ಕಿಂತಾ ಹೆಚ್ಚಿನದೇನಲ್ಲಾ ಎಂದು ನನಗೂ ಅನ್ನಿಸುತ್ತದೆ. ಆದರೆ ಲಿಪಿಕಡಿತ ಮಾಡಿದರೆ ಭಾಷೆ/ ಭಾಷಿಕರು ಏಳಿಗೆ ಹೊಂದುತ್ತಾರೆ ಅನ್ನುವುದು ಕನ್ನಡ ಲಿಪಿಕ್ರಾಂತಿಯ ಬಗ್ಗೆಗಿನ ಹಿಂದಿರುವ ನಿಲುವು ಎನ್ನುವುದು ಸರಿಯಾದ ಮಾತಲ್ಲ. ಈ ರೀತಿಯಾಗಿ ಕನ್ನಡ ಲಿಪಿಕ್ರಾಂತಿಯನ್ನು ಅರ್ತ ಮಾಡಿಕೊಳ್ಳುವುದು ತಪ್ಪಾಗುತ್ತದೆ. ಒಂದು ಭಾಷೆಯಲ್ಲಿನ ಸಂದಿಗ್ಧತೆಗಳನ್ನು/ ತೊಡಕುಗಳನ್ನು ಸರಳಗೊಳಿಸಿಕೊಂಡರೆ ಏಳಿಗೆಯತ್ತ ಮತ್ತೊಂದು ಹೆಜ್ಜೆ ಸಾಗುತ್ತೇವೆ ಎನ್ನುವುದು ಲಿಪಿಕ್ರಾಂತಿಯ ತತ್ವ ಎಂದು ನನಗನ್ನಿಸುತ್ತದೆ. ‘ಹೀಗೆ ಸರಳಗೊಳಿಸಿಕೊಳ್ಳುವಲ್ಲಿ ಹೊಸ ಅಕ್ಷರ ಸೇರುವುದೂ, ಬೇಡದ್ದನ್ನು ಬಿಡುವುದೂ ಸೇರಿರುತ್ತದೆ. ಕನ್ನಡದ ವಿಷಯಕ್ಕೆ ಬಂದರೆ ಬಿಡುವ ಸದ್ಯಕ್ಕೆ ಬಿಡುವುದರಿಂದ ಸಂದಿಗ್ಧತೆ ಕಮ್ಮಿಯಾಗುತ್ತದೆ. ಅದು ಮತ್ತೊಂದು ನುಡಿಯ ವಿಷಯದಲ್ಲಿ ಹೊಸ ಅಕ್ಷರ ಸೇರಿಸುವುದರಿಂದ ಆಗಬಹುದು’ ಎಂದು ಯೋಚಿಸಿದರೆ ನೀವಂದಂತೆ “ಹೆಚ್ಚು ಅಕ್ಷರಗಳನ್ನು ಹೊಂದಿರುವ ಕನ್ನಡ, ಮರಾಟಿ ಮೊದಲಾದ ಭಾಷೆಗಳಲ್ಲಿನ ಸಾಹಿತ್ಯ ಕಡಿಮೆ ಲಿಪಿಯ ತಮಿಳು ಸಾಹಿತ್ಯಕ್ಕಿಂತಾ ಶ್ರೀಮಂತ ಅನ್ನುವ ಮಾತೆ ಬರುವುದಿಲ್ಲ. ಯಾಕೆಂದರೆ ಅಕ್ಷರಗಳ ಸಂಖ್ಯೆ ಯಾವುದೇ ಭಾಷೆಯನ್ನೂ ಶ್ರೀಮಂತ ಅಥವಾ ಬಡವಾಗಿಸದು ಎನ್ನಿಸುತ್ತದೆ.
ಕನ್ನಡಕ್ಕೆ ಬೇಕಾದ ಹೊಸ ಅಕ್ಕರಗಳ ಬಗ್ಗೆ ಶಂಕರಬಟ್ಟರು ಅವರ ‘ಮಾತಿನ ಒಳಗುಟ್ಟು’ ಹೊತ್ತಗೆಯಲ್ಲಿ ಹೇಳಿದ್ದಾರೆ. ಬಡಗಗನ್ನಡದಲ್ಲಿರುವ ಮೂರು ‘ಎ’ಗಳನ್ನು, ಬಡುಗು-ಕರ್ನಾಟಕದ ಕನ್ನಡದಲ್ಲಿರುವ ಒಂದು ‘ಅ’ ಮತ್ತು ‘ಇ’ ( ಕತ್ತಿ, ಕತ್ತೆ ಎಂಬ ಅರ್ತದ್ದಲ್ಲಿನ ಅ ಮತ್ತು ಇ) ಹಾಗೇ
ಮಂಡ್ಯ ಹಾಸನದಲ್ಲಿ ಹಕಾರದ ಬದಲು ಬರುವ ಚೂಪುಮೂತಿಯ W ಸದ್ದು. ಅವನು wಓದ. ಹಾಗೇ.. ಮನೆ => ಮನಯ್, ಮಳೆ => ಮಳಯ್ ಎಂದು ಕೆಳತುಟಿ ಮಡಿಸಿ ಹೇಳುವ ಅಯ್/ಎ ಸದ್ದು.
ಇವೆಲ್ಲ ಯುರೋಪಿನ ನುಡಿಗಳಲ್ಲಿವೆ. ಇವೆಲ್ಲ ಕನ್ನಡ ಒಳಹನ್ನು ಅರಿಯಲು ಬೇಕೇ ಬೇಕು… ಆದರೆ ಕನ್ನಡದ ಯಾವ ಕವಲಲ್ಲೂ ಮಹಾಪ್ರಾಣ/ಅಲ್ಪಪ್ರಾಣದ ಅಂತರವಿಲ್ಲ ( ಮಾದರಿ:ದಾರವಾಡದವರು ಛಳಿ (ಉದ್ಗಾರದೊಂದಿಗೆ) ಎಂದು ಚಳಿ ಪದವನ್ನು ಹೇಳಿದರೂ, ಅದು ಹೆಚ್ಚಾಗಿ ಚಳಿ ಎಂದೇ ಇರುವುದು ), ಋಕಾರವಿಲ್ಲ, ಶ/ಷಗಳಿಗೆ ಅಂತರವಿಲ್ಲ.
ಶಂಕರಬಟ್ಟ ‘ಮಾತಿನ ಒಳಗುಟ್ಟು’ ಹೊತ್ತಗೆ ಗಮನಿಸಿರಿ.
ಅಜಕ್ಕಳ ಗಿರೀಶ್ ಭಟ್ಟರಿಗೆ ನನ್ನ ನಮಸ್ಕಾರಗಳು.
ನಿಮ್ಮ ಕಳೆದ ಬರಹಕ್ಕೆ ಬಂದ ಕಾಮೆಂಟುಗಳನ್ನು ಪೂರ್ತಿಯಾಗಿ ಓದಿ, ನಿಮ್ಮ ಆಲೋಚನೆಗಳನ್ನು ಉತ್ತರವಾಗಿಡಲು ನೀವು ಮುಂದೆ ಬಂದಿರೋದು ನೋಡಿ ಖುಷಿಯಾಯಿತು.
ನಿಮ್ಮ ಮೇಲಿನ ಗೌರವ ಹೆಚ್ಚಾಯಿತು. ಶಂಕರ ಭಟ್ಟರು ಕಂಡುಕೊಂಡು ಜನರ ಮುಂದಿಟ್ಟ ವಿಚಾರಗಳ ಬಗೆಗೆ ಮೊದ ಮೊದಲು ಬರೆಯುತ್ತಿದ್ದೋರು, ಚರ್ಚೆಗೆ ಬರುತ್ತಲೇ ಇರಲಿಲ್ಲ.
ನಿಮ್ಮ ಬರಹದಲ್ಲಿ ನೀವು ಶುಭಶ್ರೀ ಅವರನ್ನು ಕೇಳಿದ ಕೆಲವು ಪ್ರಶ್ನೆಗಳು, ‘ನನ್ನನ್ನೂ ಕೇಳಿದವು’ ಎನಿಸಿತು.
ಹಾಗಾಗಿ ಅವುಗಳಿಗೆ ನನ್ನ ಉತ್ತರ ಹೀಗಿದೆ:
೧. ಶಂಕರ ಭಟ್ಟರು ಹೇಳುವ ‘ಹೊಸಬರಹ’ವನ್ನು ನಾನು ಬಳಸುತ್ತಾ ಬಂದಿದ್ದೇನೆ. ನನ್ನಂತೆಯೇ ಇನ್ನೂ ಹಲವಾರು ಜನರು, ನಿಮಗೆ ಪರಿಚಯವಿಲ್ಲದವರು, ಬಳಸುತ್ತಿದ್ದಾರೆ. ಹಾಗಾಗಿ, ‘ಹೊಸಬರಹ’ವು ಶಂಕರ ಭಟ್ಟರ ಬಳಕೆಗೆ ಮಾತ್ರ ಎನ್ನುವಂತ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ.
೨. ತಮಿಳ್ನಾಡಿನಲ್ಲಿ ಬಂಡಾಯ ಸಾಹಿತ್ಯ ಇತರೆ ಭಾಷೆಗಳಿಗೆ ಹೋಲಿಸಿದರೆ ಕಡಿಮೆ ಎಂಬುದನ್ನು ನೀವು ಮುಂದೆ ಇಟ್ಟಿದ್ದೀರಾ. ಅಲ್ಲಿಯ ಲಿಪಿಕ್ರಾಂತಿಯು ನಿಜಕ್ಕೂ ಎಲ್ಲರಿಗೂ ಅನುಕೂಲವಾಗುವಂತಿದ್ದರೆ, ಇಷ್ಟೊತ್ತಿಗೆ ಬಂಡಾಯ ಸಾಹಿತ್ಯ ಸಾಕಷ್ಟು ಬೆಳೆದಿರಬೇಕಿತ್ತು ಎಂಬುದು ನಿಮ್ಮ ವಾದ.
ಈ ವಾದವನ್ನೇ ಗಮನಿಸಿದರೆ, ಇನ್ನೂ ಹಲವು ಪ್ರಶ್ನೆಗಳು ಏಳುತ್ತವೆ. ಬಂಡಾಯ ಸಾಹಿತ್ಯದ ಇರುವಿಕೆಯೇ, ‘ಜನರ ಏಳಿಗೆ’ಯ ನಿದರ್ಶನವೇ? ಬಂಡಾಯ ಸಾಹಿತ್ಯ ಹುಟ್ಟುವುದಕ್ಕೆ ‘ಕಲಿಕೆಯು’ ಎಲ್ಲರನ್ನೂ ತಲುಪುವುದೊಂದೇ ಕಾರಣವೇ? ಬಂಡಾಯ ಸಾಹಿತ್ಯ ಹುಟ್ಟುವಲ್ಲಿ ‘ಸಾಮಾಜಿಕ ಬೇಧ ಭಾವಗಳ’ ಇರುವಿಕೆ ಕಾರಣವಾಗುವುದಿಲ್ಲವೇ?
‘ಸಾಮಾಜಿಕ ನ್ಯಾಯ’ ಹೆಚ್ಚಾಗಿ ಇರುವುದರಿಂದಲೇ ತಮಿಳ್ನಾಡಿನಲ್ಲಿ ಬಂಡಾಯ ಸಾಹಿತ್ಯ ಬೇರೆಡೆಯಷ್ಟು ಜೋರಾಗಿಲ್ಲ ಎಂಬ ರೀತಿಯಲ್ಲೂ ಇದನ್ನ ನೋಡಬಹುದಲ್ಲವೇ!
೩. ಸ್ಪೆಲಿಂಗ್ ತೊಂದರೆ ಬೇರೆ ಬೇರೆ ಭಾಷೆಗಳಲ್ಲಿ ಇದ್ದರೂ, ತಮಿಳ್ನಾಡಿನಲ್ಲಿ ಮಾತ್ರ ಲಿಪಿಕ್ರಾಂತಿ ಆಗಿದೆ. ಹಾಗಾಗಿ, ಅಲ್ಲಿಯ ಬದಲಾವಣೆಗಳನ್ನು ಹೊಂದಿಸಿ ನೋಡಬಹುದು ಎಂಬುದು ನಿಮ್ಮ ವಾದ.
ಹೊಂದಿಸಿ ನೋಡುವುದು ಒಳ್ಳೆಯದೇ. ಹಾಗೆಯೇ, ಲಿಪಿ ಸುದಾರಣೆ ಮಾಡಿಕೊಂಡು, ಹೆಚ್ಚಿನ ಲಾಭ ಗಳಿಸಿದ ಇತರೆ ಭಾಷಿಕ ಸಮುದಾಯಗಳನ್ನೂ (ದೇಶದ ಹೊರಗಿನ) ನೋಡಬೇಕಾಗಿದೆ.
ಹಾಗೆ ನೋಡಿದಾಗ ತಿಳಿಯುವುದು ಏನಂದರೆ, ಲಿಪಿ ಸುದಾರಣೆ ಮಾಡಿದ ಮೇಲೆ, ಹಲವು ಸಮಾಜಗಳಿಗೆ ಒಳಿತಾಗಿದೆ. ‘ಲಿಪಿ ಸುದಾರಣೆ’ ಮಾಡಿ ನಾವು ಮಲಗಿಬಿಟ್ಟರೆ ಸಮಾಜಕ್ಕೆ ಒಳಿತಾಗದು ಎಂಬುದರ ಅರಿವೂ ಇರಬೇಕು.
‘ಲಿಪಿ ಸುದಾರಣೆ’ ಜೊತೆ ಜೊತೆಗೇ, ಕಲಿಕೆಯಲ್ಲಿ ಇತರೆ ಬದಲಾವಣೆಗಳ ಕಡೆಗೂ, ಸುದಾರಣೆ ಕಡೆಗೂ ಗಮನ ಕೊಡಲೇಬೇಕು.
ನನ್ನ ಒಂದು ಪ್ರಶ್ನೆ.
೧. ‘ಭಾಷೆ ಮುಂದಿರುವುದು’ ಎಂಬ ವಿಷಯ ಮುಂದಿಟ್ಟಿದ್ದೀರಿ. ‘ಭಾಷೆಯೊಂದು ಮುಂದಿದೆ’ ಎನ್ನಲು ಅದರಲ್ಲಿನ ಸಾಹಿತ್ಯವೊಂದೇ ಮಾನದಂಡವೇ? ಅಥವಾ, ಆ ಭಾಷಿಕರ ಜೀವನದಲ್ಲಿ ಎಲ್ಲೆಲ್ಲಿ ಆ ಭಾಷೆಯ ಬಳಕೆ ಆಗುತ್ತಿದೆ ಎಂಬುದೋ?
ಉದಾ: ಜನರ ಓದು, ಕಲಿಕೆ, ಉನ್ನತ ಕಲಿಕೆ, ಮನರಂಜನೆ, ದುಡಿಮೆ, ಇತ್ಯಾದಿ ಕಡೆಗಳಲ್ಲಿ ಬಳಕೆ.
ನಿಮ್ಮ,
ಪ್ರಿಯಾಂಕ್
ಇದು ಹೇಗೆಂದರೆ, ಕಾಲಿಗೆ ಹತ್ತು ಕೇಜಿ ತೂಕ ಕಟ್ಟಿಕೊಂಡರೆ ಓಟದ ಸ್ಪರ್ಧೆಯಲ್ಲಿ ಗೆಲ್ಲು ಆಗುವುದಿಲ್ಲ, ಹಾಗಾಗಿ ಬೇಡದ ಆ ಭಾರ ಕಳಿಚಿಕೋ ಎಂದರೆ “ನೋಡಿ, ಕಾಲಲ್ಲಿ ಹಾಗೆ ಬೇಡದ ತೂಕ ಕಟ್ಟಿಕೊಂಡವರೆಲ್ಲಾ ಓಟದ ಸ್ಪರ್ಶೆಯಲ್ಲಿ ಗೆದ್ದಿದ್ದಾರೆಯೇ?” ಎಂದು ಕೇಳಿದ ಹಾಗೆ. ಓಟದ ಸ್ಪರ್ಧೆಯಲ್ಲಿ ಓಡಲು ಸಂದಿಗ್ಧತೆಯ ತೂಕ ಕಟ್ಟಿಕೊಳ್ಳದಿರುವುದು ಸಹಕಾರಿ. ಇಂಥಾ ಸಂದಿಗ್ಧತೆಯ ತೂಕ ಕಾಲಿಗೆ ಕಟ್ಟಿಕೊಂಡವರೂ ಇಂದು ಓಡಿ ಗೆಲ್ಲುತ್ತಿಲ್ಲವೆ ಎನ್ನುವುದೂ ನಿಜವಾಗಿದ್ದರೂ ಆ ತೂಕ ಕಳಚಿಕೊಂಡರೆ ಮತ್ತಷ್ತು ವೇಗವಾಗಿ ಓಡಬಹುದು ಎನ್ನುವುದು ಸರಿಯಾದ ಮಾತಾಗುತ್ತದೆ.
ಮಾಯ್ಸ ಅವರೇ,
ಶುಭಶ್ರೀ ಅವರ ಕೋರಿಕೆಯಂತೆ, ಜಾತಿ ಸಂಬಂಧಪಟ್ಟ ವಿಷಯಗಳನ್ನ ಈ ಚರ್ಚೆಗೆ ತರೋದು ಬೇಡ.
ಪ್ರಿಯಾಂಕ್ ಹಾಗು ಶುಬಶ್ರೀ..
ಕೆಲವು ಸಂಗತಿಗಳನ್ನು ಗಮನಿಸೋಣ.
ಶುಬಶ್ರೀ ಹೇಳಿದ್ದು => “ಕನ್ನಡ ಲಿಪಿ ಸುಧಾರಣೆಯೆನ್ನುವುದು ತಮಿಳು ಮಾದರಿಯದ್ದು, ದ್ರಾವಿಡ ಚಳವಳಿಯಂಥದ್ದು, ಇದು ನಾಳೆ ಬ್ರಾಹ್ಮಣ ದ್ವೇಷಕ್ಕೆ, ಹಿಂದೂ ದ್ವೇಷಕ್ಕೆ ತಿರುಗುತ್ತದೆ. ಹಾಗಾಗಿ ಇದನ್ನು ಮೊಳಕೆಯಲ್ಲೇ ಚಿವುಟಬೇಕು.”
ಮಾಯ್ಸ ಹೇಳಿದ್ದು => ನೋಡಿ.. ಜಾತಿ ಬಂತು..
ಕನ್ನಡದಲ್ಲಿ ಸಂಸ್ಕ್ರುತ ಇರಲಿ ಅದು ಕನ್ನಡವನ್ನು ಶ್ರೇಶ್ಟತನಕ್ಕೆ ಒಯ್ಯವುದು ಎಂಬುವರಲ್ಲಿ ಒಂದು ಜಾತಿ ತನ್ನ ಪರಂಪರೆಯನ್ನು ಉಳಿಸುತ್ತಿದೆ ಎಂಬ ದೊಡ್ಡಸ್ತಿಕೆಯೂ ಕಾರಣ..
ಮಾಯ್ಸ ಅವರೇ,
ಕಾರಣಗಳು ಏನೇ ಇರಲಿ, ಎಷ್ಟೇ ಇರಲಿ, ಇಲ್ಲಿ ಎಲ್ಲವನ್ನೂ ಸೇರಿಸೋದು ಬೇಡ ಎನಿಸುತ್ತೆ.
ಚರ್ಚೆಯು ವಿಷಯದ ಸುತ್ತನೇ ಇರಲಿ, ಮತ್ತು ಒಳ್ಳೆಯ ವಿಷಯಗಳು ಹೊರಬರಲಿ ಎಂಬುದು ನನ್ನ ಆಸೆ.
ಅದಕ್ಕೆ, ಈ ಕೋರಿಕೆ.
ಆಯಿತು. ನಾನು ತೀರಾ candid ಆದೆ ಅನ್ನಿಸುತ್ತೆ. ಆ ಮಾತಿನ ಬುದುವನ್ನು ಈ ಹೊತ್ತು ಅತ್ತಲಾಗಾಗಿಸುವೆನು.
ಇದ್ಯಾವ ಭಾಷೆ? ಇಂತಹ ಕನ್ನಡ ನನಗಂತೂ ಬೇಡಪ್ಪ.
ಒಂದು ಭಾಷೆಯ ಅಭಿವೃದ್ದಿ ಅದರಲ್ಲಿರುವ ಅಕ್ಷರಗಳ ಸ೦ಖ್ಯೆ ಮೇಲೆ ಆಧಾರಿತ ಅನ್ನೋದು ಹಾಸ್ಯಾಸ್ಪದ !!!! ಆ ಅಕ್ಷರ ಬೇಡ ಈ ಅಕ್ಷರ ಬೇಡ ..ಅದು ಕಷ್ಟ ಹಾಗಾಗಿ ಬೇಡ ..ಇದು ಸುಲಭ ಇದು ಇರಲಿ ಎನ್ನೋದು ಕೂಡ ಮೀಸಲಾತಿ(ಜಾತಿಗೆ ಎಳೆಯಬೇಡಿ ಪ್ಲೀಸ್ ) ಇದ್ದಂತೆ. ಅದರಿಂದ ಉದ್ದಾರವಾದ caste ಖಂಡಿತಾ ಇಲ್ಲ !!! ಹಾಗೆಯೇ ನಿಮಗೇ ಉಲಿಯಲು ಕಷ್ಟ ಎಂಬ ಕಾರಣಕ್ಕೆ ಆ ಅಕ್ಷರಗಳನ್ನು ಕೈಬಿಡಬೇಕು ಅನ್ನೋದು ಕೂಡ ಹಾಸ್ಯಾಸ್ಪದ. ಯಾಕಂದ್ರೆ ನಿಮಗೇ ಕಷ್ಟ ಅನಿಸಿದ್ದು ನನಗೆ ಸುಲಭ ಅನ್ನಿಸಬಹುದು …ಹಾಗೆಯೇ ನಿಮಗೇ ಸುಲಭ ಅನ್ನಿಸಿದ್ದು ನನಗೆ ಕಷ್ಟ ಅನ್ನಿಸಬಹುದು ..ಹಾಗಂತ ಎಲ್ಲರನ್ನು ತೃಪ್ತಿಪಡಿಸ ಹೊರಟು ಕನ್ನಡದಲ್ಲಿ ಅಕ್ಷರಗಳೇ ಇಲ್ಲವಾಗಿ ಹೋಗೋ ಅಪಾಯ ಇದೆ !!!
ಅತ್ಯಂತ ಹೆಚ್ಚು ಅಕ್ಷರಗಳಿರೋ ಮಲಯಾಳಂ ಈ ವಾದದ ಪ್ರಕಾರ ಅತ್ಯಂತ ಹೀನಾಯ ಸ್ತಿತಿ ತಲುಪಬೇಕಿತ್ತು !!! ಹಾಗಾಗಿದೆಯೇ? ಇಲ್ಲವಲ್ಲ!..
ಹಾಗಾಗಿ ಇಂತಹ ವಾದವೇ ವ್ಯರ್ಥ !!!
ಆದರೂ ಈ ಚರ್ಚೆಯಲ್ಲಿ ನನ್ನಂತಹ ಕೆಲವರಿಗೆ ಲಾಭವಾಗಿದ್ದು ಹೇಗೆಂದರೆ ಚರ್ಚೆಯ ಮದ್ಯೆ ..ತಮ್ಮ ವಾದ ವನ್ನ ಸಮರ್ಥಿಸಲು ಕೆಲವರು ಹೊಸ ವಿಷಯಗಳನ್ನು ತಿಳಿಸಿದ್ದಾರೆ,ಅವರಿಗೆ ಅರಿವಿಲ್ಲದೆಯೇ …!!!!! ಅದಕ್ಕಾಗಿ ಅವರಿಗೆ ಧನ್ಯವಾದ …!!!
ಕೊನೆಯದಾಗಿ ಯಾರೋ ಒಬ್ಬಿಬ್ಬರಿಗೆ ಕಷ್ಟ ಆಗುತ್ತದೆ ಅಂತ ಕೆಲವು ಅಕ್ಷರಗಳನ್ನು ಕೈಬಿಡೋದು ಖಂಡಿತವಾಗಿ ಹಾಸ್ಯಾಸ್ಪದ ಮತ್ತು ಮೂರ್ಖತೆಯ ಪರಮಾವಧಿ !!!!!
+1
ಶಾಂತಿ ಅವರೇ,
ನೀವು ಈ ಚರ್ಚೆಯನ್ನು ಮುಂಚೆಯಿಂದ ಎಷ್ಟು ಹಿಂಬಾಲಿಸಿದಿರೋ ಗೊತ್ತಿಲ್ಲ.
ಆದರೆ, ಈ ಚರ್ಚೆಯ ಹಿಂದೆ ನುಡಿಯರಿಗರ ಅಪಾರ ಅಧ್ಯಯನವಿದೆ. ಅವರ ಅಧ್ಯಯನದ ಮಟ್ಟವನ್ನು ಅಜಕ್ಕಳ ಗಿರೀಶ್ ಭಟ್ಟರೂ ಬಲ್ಲರು.
ಅವರ ಅಧ್ಯಯನದ ಬಗ್ಗೆ ನೀವು ತಿಳಿದುಕೊಳ್ಳಲು ಪ್ರಯತ್ನಪಟ್ಟಿಲ್ಲ ಎಂಬುದಂತೂ ನಿಮ್ಮ ಮಾತಿನಿಂದ ಸ್ಪಷ್ಟವಾಗಿದೆ.
‘ಭೂಮಿ ಗುಂಡಗಿದೆ’ ಎಂದಾಗ, ‘ಭೂಮಿ ಗುಂಡಗಿದ್ರೇನು, ಸಮತಟ್ಟಾಗಿದ್ರೇನು, ಅದಕ್ಯಾಕೆ ಚರ್ಚ್ ಜೊತೆ ವಾದ ಮಾಡ್ತೀಯ, ಸುಮ್ನೆ ಟೈಮ್ ವೇಸ್ಟ್’ ಅಂತ ವಿಜ್ನ್ಯಾನಿಗೆ ಬುದ್ಧಿವಾದ ಹೇಳಿದವರು ಇದ್ದರು.
ನಿಮ್ಮ ಮಾತೂ ಹಾಗೆಯೇ ಇದೆ.
ಶಾಂತಿಯವರೆ,
ನೀವು ಹೇಳೋದ್ ನೋಡಿದರೆ ಯಾಕೆ ಡೆಸ್ಕ್ ಟಾಪ್ ಕಂಪೂಟರ್ ಇಲ್ವ ಅದನ್ನೆ ಎಲ್ಲ ಕಡೆ ತಲೆ ಮೇಲೆ ಹೊತ್ಕಂಡ್ ಓಡಾಡಿ, ಯಾರಾದರೂ ಕೇಳಿದ್ರ ಮೊಬೈಲ್ ಪೋನ್ ಬೇಕು ಅಂತ.. ಮೊಬೈಲ್ ಪೋನ್ ಯಾಕ್ ಬೇಕು ಅನ್ನೊ ಹಾಗಿದೆ.:)
ಡೆಸ್ಕ್ ಟಾಪ್ ಕಂಪ್ಯೂಟರಿಂದ ಮೊಬೈಲ್ ಟೆಕ್ನಾಲಿಜಿಯವರೆಗೆ ಎಶ್ಟೊ ಜನರ ದುಡಿಮೆ,ಸಂಶೋದನೆ, ಓದು/ಅದ್ಯಯನ ಇದೆ ಅನ್ನುವುದನ್ನ ತಿಳಿದುಕೊಳ್ಳಿ.
ನನ್ನಿ
ಬರತ್
“ಕೊನೆಯದಾಗಿ ಯಾರೋ ಒಬ್ಬಿಬ್ಬರಿಗೆ ಕಷ್ಟ ಆಗುತ್ತದೆ ಅಂತ ಕೆಲವು ಅಕ್ಷರಗಳನ್ನು ಕೈಬಿಡೋದು ಖಂಡಿತವಾಗಿ ಹಾಸ್ಯಾಸ್ಪದ ಮತ್ತು ಮೂರ್ಖತೆಯ ಪರಮಾವಧಿ !!!!”
ಬಾಯಿಬಂದಾಗ ಬರೆದಿರುವ ಈ ಕಮೆಂಟನ್ನ ಅಳಿಸಿ. ಇವರ ತಾಳಕ್ಕೆ ನಾವು ಕುಣಿದಿಲ್ಲ ಅಂತ ನಮ್ಮದು ಕುಣಿತವೇ ಅಲ್ಲ ಅನ್ನೋರು ಇವರು.
ಕನ್ನಡದಲ್ಲಿ ಸ್ವರೂಪಕ್ಕೆ ಕನ್ನಡದಲ್ಲಿ ಅಕ್ಕರ ಇರಬೇಕು. ಸಂಸ್ಕ್ರುತಕ್ಕೆ ತಕ್ಕಂತೆ ಅಲ್ಲ. ವಿಶಯದ ಗಂದ ಗಾಳಿಯಿರದ ಅಜ್ನಾನಿಗಳು ಬರೆದ ಅನಿಸಿಕೆ ಇದು.
(ವೈಯಕ್ತಿಕ ನಿಂದನೆ ಎಂದು ಆಳಬೇಕಾಗಿಲ್ಲ.. ಅಜ್ನಾನಿ.. ವಿಶಯ ಏನು ಎಂದು ಜ್ನಾನ ಇಲ್ಲದ ಪೆದ್ದ )
@Priyank ,
ಧನ್ಯವಾದ,
ಶಂಕರ ಭಟ್ಟರ ವಾದದ ಹಿಂದೆ ಅಪಾರ ಶ್ರಮ ಅಥವಾ ಅದ್ಯಯನ ಇರಬಹುದು ಹಾಗಂತ ಇಲ್ಲಿ ಕಾಮೆಂಟ್ ಬರೆದವರ ಹಿಂದೆ (ಎಲ್ಲರೂ ಅಲ್ಲ ) ಅದು ಇದೆ ಎಂದು ನನಗನ್ನಿಸೋದಿಲ್ಲ !!!!!
ನೀವು ಕೊಡುತ್ತಿರುವ ಉಪಮೆ ಎಲ್ಲೆಲ್ಲಿಗೋ ಹೋಗುತ್ತಿದೆ. ನನ್ನ ಅಭಿಮತ ಒಂದು ನುಡಿಯ ಏಳ್ಗೆ ಅದರಲ್ಲಿರುವ ಅಕ್ಷರಗಳ ಸಂಖ್ಯೆ ಮೇಲೆ ಅವಲಂಬಿತ ಅಲ್ಲ ಅಂತ ಅಸ್ಟೇ. ಅದು ಅದನ್ನು ಬಳಸುವರು ಹೇಗೆ ಬಳಸುತ್ತಾರೆ ಅನ್ನುವುದರ ಮೇಲೆ ನಿರ್ದರಿತವಾಗುತ್ತದೆ ಎಂದು .
ಇನ್ನು @Bharath ಕುಮಾರ್.
ನಗು ಬರುತ್ತಿದೆ ನಿಮ್ಮ ಪ್ರತಿಕ್ರಿಯೆ ಕಂಡು ……
ಕೊನೆಯದಾಗಿ @ಮಾಯ್ಸ,
ನನ್ನ ಕಾಮೆಂಟ್ ಲ್ಲಿ ಸಂಸ್ಕೃತ ಎಲ್ಲಿತ್ತೋ ? ಹುಡುಕಿದೆ ಸಿಗಲಿಲ್ಲ !!!!
ಬಹುಷಃ ನೀವು ಆ ರೀತಿಯ ಕನ್ನಡಕ ಧರಿಸಿ ನೋಡಿರಬಹುದು ಬಿಡಿ …
ಹೋಗಲಿ ನಿಮಗ್ಯಾಕೆ ಬೇಜಾರು ಮಾಡಲಿ? ನೀವೇ ಸರ್ವ ಜ್ಞಾನಿಗಳು …ನಾನು ಅಜ್ನಾನಿಯೇ ಸಮಾಧಾನವೇ !!??
ಆದರೆ ಇಲ್ಲೊಂದು ವಿಪರ್ಯಾಸ ಗಮನಿಸಿ.
“ಕನ್ನಡದಲ್ಲಿ ಸ್ವರೂಪಕ್ಕೆ ಕನ್ನಡದಲ್ಲಿ ಅಕ್ಕರ ಇರಬೇಕು. ಸಂಸ್ಕ್ರುತಕ್ಕೆ ತಕ್ಕಂತೆ ಅಲ್ಲ. ವಿಶಯದ ಗಂದ ಗಾಳಿಯಿರದ ಅಜ್ನಾನಿಗಳು ಬರೆದ ಅನಿಸಿಕೆ ಇದು. ” ಈ ನಿಮ್ಮ ಮಾತು ಇಲ್ಲಿ ಬೇರೆಯವರಿಗಿಂತ ನಿಮಗೇ ಹೆಚ್ಚು ಅನ್ವಯವಾಗುತ್ತದೆ !!!!
ಇಂತಿ ನಿಮ್ಮ ಅಜ್ಞಾನಿ ಶಾಂತಿ!
ಶಾಂತಿ ಅವರೇ,
ನಿಮ್ಮ ಅಭಿಮತ ತಿಳಿಸಿದ್ದಕ್ಕೆ ಧನ್ಯವಾದಗಳು.
ನುಡಿಯ ಏಳಿಗೆಯನ್ನು ನೀವು ಹೇಗೆ ಕಾಣುತ್ತಿರೋ ನನಗೆ ಗೊತ್ತಿಲ್ಲ.
ಆದರೆ, ‘ನುಡಿಯ ಮೂಲಕ ಜನರ ಏಳಿಗೆಯಾಗಬೇಕು’ ಎಂಬುದನ್ನು ಮನಸಿನಲ್ಲಿಟ್ಟು ಯೋಚಿಸಿ ನೋಡಿ.
ಬಹುಶ ಇಲ್ಲಿ ನಡೆದ ಚರ್ಚೆ ಬೇರೇನೆ ರೀತಿಯಲ್ಲಿ ಕಾಣಬಹುದು.
—
ಪ್ರಿಯಾಂಕ್
“ಮೊದಲನೆಯದಾಗಿ ತಾವು ಹೇಳಿದ ಹಾಗೆ ವ್ಯಾಪಕವಾಗಿ ಹೊತ್ತಗೆಗಳನ್ನು ಬರೆಯುತ್ತಿರುವವರು ಅವರೊಬ್ಬರೇ. ಅವರನ್ನು ಬೆಂಬಲಿಸಿದ ವಿವಿಧ ವಿ.ವಿ.ಗಳ ಮುಖ್ಯಸ್ಥರು ಅಥವಾ ಇನ್ನಾರಾದರೂ (ಶುಭಶ್ರೀಯವರೂ ಸೇರಿದಂತೆ) ಬರೆಯಲಾರಂಭಿಸಿಲ್ಲ”
ನಾನು ಈಗಾಗಲೆ ನನ್ನ ಬ್ಲಾಗನ್ನು ಶಂಕರಬಟ್ಟರ ಹೊಸ ಬರಹದಲ್ಲಿ ಬರೆಯುತ್ತಿದ್ದೇನೆ.
http://ybhava.blogspot.com
“”… ಎಲ್ಲ ಕೊಚ್ಕೊಂಡ್ ವೋಗ್ಲಿ! ಪರ್ಪಂಚ್ ಇರೋ ತನಕ ಮುಂದೆ ಕನ್ನಡ ಪದಗೊಳ್ ನುಗ್ಲಿ” – ರತ್ನನ ಪದಗಳು [ ಈ ಬ್ಲಾಗ್ ಡಾ|ಡಿ.ಎನ್.ಶಂಕರಬಟ್ಟರ ‘ಹೊಸಬರಹ’ದಲ್ಲಿದೆ. ಅಂದರೆ ಐ,ಔ,ಅಃ,ಋ,ಖ,ಘ,ಙ,ಛ,ಝ,ಞ,ಠ,ಢ,ಫ,ಭ,ಷ,ಕ್ಷ — ಈ ಅಕ್ಕರಗಳು ಈ ಬ್ಲಾಗಿನಲ್ಲಿರುವುದಿಲ್ಲ”
@Bharath Kumar,
ಒಳ್ಳೆ ಪ್ರಯತ್ನ ಶುಭವಾಗಲಿ …ಇದು ಕನ್ನಡಕ್ಕೆ ಪೂರಕವಾಗಿರಲಿ.!!! ಧನ್ಯವಾದ ..!!!
ಕನ್ನಡ , ಜಾತಿ-ವರ್ಗಪ್ರಜ್ಞೆ ಮತ್ತು ಜಾಗತೀಕರಣ
ಕನ್ನಡ ಭಾಷೆಯ ಬಗ್ಗೆ ಚರ್ಚೆ ಮಾಡುವಾಗ ತಮಿಳು ಭಾಷೆಯ ಸುದ್ದಿ ಯಾಕೆ ?ಎಂದು ಪ್ರಶ್ನಿಸಿದ್ದಕ್ಕೆ ಈಗಾಗಲೇ ಉತ್ತರಿಸಿಯಾಗಿದೆ. ಆದ್ರೂ ಮತ್ತದೇ ಪ್ರಶ್ನೆ ಕೇಳಲಾಗಿದೆ. ಅಲ್ಲದೆ ತಮಿಳರ ಸುದ್ದಿಗೆ ಹೋದರೆ ದ್ರಾವಿಡವಾದಿಗಳ ಮಾತಿನ ಹರಿತ ಕುರಿತು ಎಚ್ಚರಿಸುವ ಉಪಕಾರವನ್ನು ಕೂಡ ಮಾಡಿದ್ದಾರೆ ನಮ್ಮ ಮಿತ್ರರು. ಅದಕ್ಕಾಗಿ ಧನ್ಯವಾದಗಳು. ಆ ಎಚ್ಚರಿಕೆ ಯಾರು ವಿಮರ್ಶೆಗೆ ಒಳಗೊಳ್ಳಲು ಸಿದ್ಧರಿಲ್ಲ ಅಥವಾ ಇದ್ದಾರೆ; ಯಾರ, ಸಂಕುಚಿತವಲ್ಲದ ಒಳ್ಳೆ ಬುದ್ಧಿಯನ್ನು ತೋರಿಸುತ್ತೆ ಅಂತ ನಾನು ಹೇಳಬೇಕಾಗಿಲ್ಲ. ಅದು ಸ್ವಾಭಿಮಾನ ಅಂತಾದರೆ ಅದನ್ನೂ ನಾನು ಆಕ್ಷೇಪಿಸುವುದಿಲ್ಲ. ಅಂತೂ ತಮಿಳಿನ ಬಗ್ಗೆ ಇನ್ನು ನಾನು ಅಗತ್ಯವಿದ್ದರೂ ಹೆಚ್ಚು ಉಲ್ಲೇಖಿಸುವುದಿಲ್ಲ. ತಮಿಳು ಸ್ವಾಭಿಮಾನಿಗಳನ್ನು ಮುನಿಸುಗೊಳಿಸಲು , ನೋವುಗೊಳಿಸಲು ನನಗೆ ಆಸೆಯಿಲ್ಲ.
ನಿಲುಮೆಯಲ್ಲಿ ಬಂದ ಹಲವು ಪ್ರತಿಕ್ರಿಯೆಗಲು ಹಾಗೂ ಕೆಲವು ಲೇಖನಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಕೆಳಗಿನ ಮಾತುಗಳನ್ನು ಬರೆಯುತ್ತಿದ್ದೇನೆ.
೧. ತಮಿಳನ್ನೇ ಯಾಕೆ ಉದಾ ಆಗಿ ಕೊಡುತ್ತೀರಿ ಅಂತ ಆಕ್ಷೇಪಿಸುವಾಗಲೇ ಆ ಭಾಷೆ ಅಕ್ಷರ ಕಡಿಮೆ ಇರೋದರಿಂದ ಏನೂ ಹೆಚ್ಚಿನದನ್ನು ಸಾಧಿಸಿಲ್ಲ ಅಂತ ಒಪ್ಪಿದಂತಾಯಿತು. ಇದು ಮೊದಲ ಅಂಶ. ತಮಿಳು ಕನ್ನಡಕ್ಕಿಂತ ಮುಂದಿದೆ ಅನ್ನುವ ಮಾಯ್ಸ ಅವರ ವಾದವನ್ನು ಇತರ ಪ್ರತಿಕ್ರಿಯಗಾರರೇ ಈ ಮೂಲಕ ಅಲ್ಲಗಳೆದಿದ್ದಾರೆ. ಮುಂದೆ -ಹಿಂದೆ ಮೇಲೆ ಕೆಳಗೆ ಎಂಬ ಪರಿಭಾಷೆಯನ್ನು ನಾನು ತಂದದ್ದರ ಬಗ್ಗೆ ಪ್ರಶ್ನೆ ಬಂದಿದೆ. ಆದರೆ ಕನ್ನಡ ಹಿಂದೆ ಬಿದ್ದಿದೆ ಅನ್ನೋದು ತಾನೇ ನಿಮ್ಮ ಹಾಗು ನಮ್ಮೆಲ್ಲರ ಆತಂಕ? ಶಂಕರ ಭಟ್ಟರ ಇಡೀ ವಾದವೇ ಈ ವಿಚಾರದ ಸುತ್ತಲೇ ಇದೆ; ಕನ್ನಡವನ್ನು ಮುಂದೆ ತರಲಿಕ್ಕಾಗಿ ಇದೆ. ಅಂತಿರುವಾಗ ನಾನು ಬಳಸಿದ ಕೂಡಲೇ ಅದು ತಾರತಮ್ಯದ, ಮೇಲು-ಕೀಳು ಮಾಡಿದ ಹಾಗೆ ಆಗೋದು ಹೇಗೆ? ಮುಂದಿರೋದು ಅಂದರೆ ಕೇವಲ ಸಾಹಿತ್ಯ ಮಾತ್ರ ಅಂತ ನಾನೂ ಭಾವಿಸಿಲ್ಲ. ಅದು ಒಂದು ಮಾನದಂಡ ಅಷ್ಟೇ. ಬೇರೆ ಮಾನದಂಡಗಳನ್ನು ಪರಿಗಣಿಸಬಹುದು, ಮುಂದಿದೆ ಅಂತ ಯಾರಾದರೂ ತೋರಿಸಬಹುದು ,ಅಡ್ಡಿಯಿಲ್ಲ.
೨. ತಮಿಳಿನಲ್ಲಿ ಮೊದಲೇ ಹಾಗೆ ಇತ್ತು, ಲಿಪಿಕ್ರಾಂತಿ ಆದದ್ದಲ್ಲ ,ಆದ್ದರಿಂದ ಅದನ್ನು ಹೋಲಿಸಬಾರದು ಎಂಬ ಅಭಿಪ್ರಾಯ ಕೂಡ ಸರಿಯಲ್ಲ. ಎಂದು ಆದುದು ಎಂಬುದು ಮುಖ್ಯವಲ್ಲ. ಆ ಸೌಕರ್ಯ ಅದಕ್ಕುಂಟೋ ಇಲ್ಲವೋ ಎನ್ನೋದಷ್ಟೇ ಮುಖ್ಯ.
೩. ಕೊರಿಯಾ, ಫಿನ್ಲೆಂಡ್ ಚೀನಾ ಇತ್ಯಾದಿ ದೇಶಗಳ ಭಾಷೆಗಳ ಉದಾ. ಕೆಲವರುಕೊಟ್ಟು ಅದನ್ನು ಅಜಕ್ಕಳರು ಯಾಕೆ ಗಣಿಸುವುದಿಲ್ಲ ಅಂತ ಕೇಳಿದ್ದಾರೆ. ಭಾರತೀಯ ಭಾಷೆಯ ಉದಾ ಮಾತ್ರ ಯಾಕೆ ಬೇಕು? ಯಾಕೆಂದರೆ ,ಆ ಯಾವ ದೇಶಗಳಲ್ಲಿ ಸಾಮಾಜಿಕ ನೆಲೆಗಳಲ್ಲಿ ,ಜಾತಿ ಧರ್ಮದ ನೆಲೆಯಲ್ಲಿ ಅಸಮಾನತೆ ಇದೆ? ಆ ಅಸಮಾನತೆ ಇರೋದು ಭಾರತದಲ್ಲಿ. ಭಾರತ ಹಿಂದುಳಿಯಲು ಇದು ಮುಖ್ಯ ಕಾರಣವಲ್ಲವೇ? ಹೀಗಾಗಿ ಕೊರಿಯ ಮುಂತಾದ ದೇಶಗಳ ಕಂಪೆನಿಗಳ ಉದಾ ನೀಡೋದರಲ್ಲಿ ಅರ್ಥವಿಲ್ಲ. ಭಾಷೆಯ ಸುಧಾರಣೆಯಿಂದ ಚೀನಾ ಮುಂದೆ ಬಂದಿದೆ ಅಂದರೆ ನಗು ಬರುತ್ತೆ, ಯಾಕೆಂದರೆ,ಅಲ್ಲಿ ಬರಹದ ಭಾಷೆಯನ್ನು ಕಲಿಬೇಕಾದ್ರೆ ಎಷ್ಟು ಸಂಕೇತಗಳನ್ನು ಕಲಿಯಬೇಕು ಲೆಕ್ಕ ಮಾಡಿ ಪ್ಲೀಸ್. ಆ ದೇಶಗಳ ಮುಂದಿರುವಿಕೆಗೆ ಭಾಷೆಯೇ ಕಾರಣ ಎನ್ನಲಾಗದು. ಕನ್ನಡಿಗರು ಹಿಂದಿರಲು ಭಾಶೆ ಸ್ವಲ್ಪ ಕೂಡ ತೊಡಕಾಗಿಲ್ಲ ಅಂತ ನಾನು ಹೇಳಲಾರೆ.ಅದೇ ಪ್ರಧಾನ ಕಾರಣ ಅಲ್ಲ ಅಂತ ನನ್ನ ನಿಲುವು. ಕನ್ನಡ ಭಾಷೆಯ ಸರಳೀಕರಣದ ಯಾವ ಅಗತ್ಯವೂ ಇಲ್ಲ ಅಂತಲೂ ನಾನು ಹೇಳಿಲ್ಲ. ಹೇಳುವುದೂ ಇಲ್ಲ. ನಾನು ಮಾತಾಡುತ್ತಿರುವುದು ಕೂಡ ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೇ. ಶಂಕರ ಭಟ್ರಿಗೆ ಕನ್ನಡ ದಲಿತ ಚಿಂತಕರಿಂದ ನಿರೀಕ್ಷಿತ ಮಟ್ಟದ ವ್ಯಾಪಕ ಬೆಂಬಲ ಯಾಕೆ ಸಿಕ್ಕಿಲ್ಲ ಅಂತ ನನ್ನ ಪ್ರಶ್ನೆ ಈ ಹಿನ್ನೆಲೆಯದು .ಈಗ ಅಥವಾ ಇತ್ತೀಚೆಗೆ ಯಾರಾದರು ದಲಿತ ಚಿಂತಕರು ಬೆಂಬಲ ನೀಡಿದ್ದಾರೋ ನನಗೆ ಗೊತ್ತಿಲ್ಲ. ಇದ್ದರೆ ದಯವಿಟ್ಟು ತಿಳಿಸಿ.
೪. ತಮಿಳಲ್ಲಿ ಬಂಡಾಯ ಸಾಹಿತ್ಯ ಇಲ್ಲಿಯಷ್ಟು ಬರದೆ ಇರಲು ಅಲ್ಲಿ ಸಾಮಾಜಿಕ ನ್ಯಾಯ ಹೆಚ್ಚು ಇರುವುದೇ ಕಾರಣ ಇರ್ಬಹುದು ಅಂತ ಒಬ್ಬರು ಹೇಳಿದ್ದಾರೆ. ಇರಬಹುದು. ತಮಿಳಿಗರು ಕೆಲ ವಿಚಾರಗಳಲಿ ನಮಗಿಂತ ಮುಂದಿದ್ದರೆ ಅದಕ್ಕೆ ಕೂಡ ಭಾಷೆಯ ಸ್ವರೂಪದ ಬದಲಾಗಿ ಈ ಸಾಮಾಜಿಕ ನ್ಯಾಯ ಹೆಚ್ಚು ಇರುವುದು ಕಾರಣವಾಗಿರಬಹುದಲ್ಲವೇ?
೫. ಕೆ.ವಿ.ಎನ್. ಅವರು ತಿರುಳು ಅಂತ ಯಾವುದೋ ಒಂದು ಕಾಂಟೆಕ್ಸ್ಟ್ ನಲ್ಲಿ ಬಳಸಿದ್ದಲ್ಲ. ನಿಘಂಟುವಲ್ಲಿ ತಿರುಳು ಅಂತ ಮಾತ್ರ ಅಲ್ಲ ಹತ್ತಾರು ಪದಗಳಿರುತ್ತವೆ. ಅವೆಲ್ಲವನ್ನು ಸಂವಾದಿಯಾಗಿ ಬಳಸಲಾಗುತ್ತೆಯೇ? ಡಿ.ಎನ್.ಎಸ್. ಬರಹಗಳ ಚರ್ಚೆಯ ಸಂದರ್ಭದಲ್ಲಿ ಕೆ.ವಿ.ಎನ್. ಯಾರು ಅಂತ ಕೇಳುವುದರ ಅರ್ಥವೇನು ಎಂದು ನನಗೆ ಗೊತ್ತಾಗಿಲ್ಲ. ಅದು ವ್ಯಂಗ್ಯವೇ ಗೊತ್ತಿಲ್ಲ. ಅವರು ಕೆ.ವಿ.ಎನ್. ಗೊತ್ತಿಲ್ಲದೆ ಕೇಳಿದ್ದಾರಾದರೆ ಅವರ ಅರಿಮೆಗೆ ತಲೆಬಾಗುವೆ. ಹಾಗೆಯೇ ತಿರುಳು, ಹುರುಳು, ಅರ್ಥ ಇವೆಲ್ಲವುಗಳ ಅರ್ಥವೂ ಒಂದೆ ಎನ್ನುವವರ ಅರಿಮೆಗೆ ಮತ್ತೊಮ್ಮೆ ಎಂಟಂಗ ಬಾಗುವೆ. ಆದರೂ ಶಂಕರ ಭಟ್ಟರು ತಮ್ಮ ಅಧ್ಯಾಯಗಳ ಕೊನೆಯಲ್ಲಿ ತಿರುಳು ಎಂಬ ಪದವನ್ನು ಸಾರ ಎಂಬರ್ಥದಲ್ಲಿ ಸರಿಯಾಗಿಯೇ ಯಾಕೆ ಬಳಸಿದ್ದಾರೆ? ತಿರುಳು ಹುರುಳಿನ ಬಗ್ಗೆ ಮಾಯ್ಸರಲ್ಲಿ ಚರ್ಚೆಯಿಲ್ಲ ನನ್ನದು.
೬. ಕೆ.ಬಾಲಸುಬ್ರಮಣಿಯನ್ ಯಾರು? ಯಾರೆ ಇರಲಿ ,ಅದು ಒಬ್ಬನ ಅಭಿಪ್ರಾಯ. ಅದು ಪರಮ ಸತ್ಯವಾಗಬೇಕಿಲ್ಲ. ಆದರೆ ತಮಿಳಲ್ಲಿ ಗ್ರಂಥಲಿಪಿ ಯಾಕೆ ಬೇಕು? ಎಲ್ಲ ತಮಿಳರಿಗೂ ಗ್ರಂಥಲಿಪಿ ಗೊತ್ತುಂಟೋ? ಅದನ್ನು ತಿಳಿದವನು ಹೆಚ್ಚುವರಿ ಜ್ಞಾನಿ ಆಗೊಲ್ಲವೇ? ಕೆಲವರಿಗೆ ಮಾತ್ರ ಗ್ರಂಥಲಿಪಿ ಉಳಿದವರಿಗೆ ಸಾಮಾನ್ಯ ಲಿಪಿ ಅನ್ನುವ ತತ್ವಕ್ಕೂ ಕೆಲವರಿಗೆ ಮಾತ್ರ ಸಂಸ್ಕೃತ ಸಾಕು ಉಳಿದವರಿಗೆ ಸ್ಥಳೀಯ ಭಾಷೇ ಸಾಕು ಅಂತ ಹಿಂದಿನ ಸಂಸ್ಕೃತ ಬಲ್ಲವರು ಮಾಡಿದ ನೀತಿಗೂ ( ಇದು ಮಾಯ್ಸರದೇ ಆರೋಪ) ಅಂತಿಮವಾಗಿ ಏನು ವ್ಯತಾಸವಿದೆ? ಕನ್ನಡದಲ್ಲೂ ೫೦ ಅಕ್ಷರದವರ ಒಂದು ವರ್ಗ ಮತ್ತು ೩೧ ಅಕ್ಷರದವರ ಒಂದು ವರ್ಗ ಹುಟ್ಟುವುದಿಲ್ಲವೇ? ಸಾವಿರಾರು ವರ್ಷಗಳಿಂದ ಓದು ಬರಹ ,ಹಣಗಳೀಕೆಯಿಂದ ದೂರ ಇಡಲ್ಪಟ್ಟವರನ್ನು, ಅವರೀಗ ಹತ್ತಿರ ಬರುತ್ತಿದ್ದಾರೆ ಅಂತ ಆಗುವಾಗ ಮತ್ತೊಮ್ಮೆ ದೂರ ಇಡುವಂಥ ಕ್ರಮ ಇದಾಗಲಾರದೆನ್ನುವುದು ಹೇಗೆ?
೭. ಯಾವುದು ವೈಜ್ಞಾನಿಕ ಇತ್ಯಾದಿ ಹೇಳುವ ತಮ್ಮ ಕಮೆಂಟಿನಲ್ಲಿ ಶುಭಶ್ರೀಯವರು ಪಟ್ಟಿಮಾಡಿದ ಅಂಶಗಳನ್ನು ನೋಡಿದಾಗ ಶಂಕರ ಭಟ್ಟರ ವಾದವನ್ನು ಪೂರ್ತಿ ಒಪ್ಪಲಾಗುವುದಿಲ್ಲ ಅನ್ನುವವರೆಲ್ಲ ಅವರ ನಿಲುವಿಗೆ ಡಯಮೆಟ್ರಿಕಲೀ ಒಪ್ಪೋಸಿಟ್ ಆದದ್ದನ್ನು ಪ್ರೂವ್ ಮಾಡುವುದು ಮಾತ್ರ ವೈಜ್ಞಾನಿಕ ಅನ್ನುವಂತೆ ಕಾಣುತ್ತೆ . ನಾನಂತೂ ಅವರ ನಿಲುವಿಗೆ ಹಾಗೆ ಸರೀ ವಿರುದ್ಧ ಇಲ್ಲ.ಹಾಗಾಗಿ ಮಹಾಪ್ರಾಣ ಬಳಸುದರಲ್ಲಿ ಕನ್ನಡಿಗರು ಎಡವುದಿಲ್ಲ , ಉಲಿದಂತೆ ಬರೆವುದು ಸರಿಯಲ್ಲ ಎಂದೆಲ್ಲ ಇತ್ಯಾದಿ ಪ್ರೂವ್ ಮಾಡಬೇಕೆಂದು ಹೇಳುದರಲ್ಲಿ ಅರ್ಥವಿಲ್ಲ. ಯಾಕೆಂದರೆ ಉಲಿದಂತೆ ಬರೆವುದು ಸರಿಯಲ್ಲ ಎಂದು ನಾನು ಹೇಳೋಲ್ಲ. ಕನ್ನಡದಲ್ಲಿ ಪದಗಳನ್ನು ಹೊಸದಾಗಿ ಹುಟ್ಟುಹಾಕಬಾರದು ಅಂತಲೂ ನಾನು ಹೇಳೊಲ್ಲ. ಆದ್ದರಿಂದ ಆ ಕಮೆಂಟು ಅಷ್ಟು ಪರಿಗಣನಾರ್ಹವಲ್ಲ.
೮. ದ್ರಾವಿಡ ಚಳುವಳಿ ಬಗ್ಗೆ ಇಲ್ಲಿ ಚರ್ಚಿಸುವುದಿಲ್ಲ, ಅದರಿಂದ ಒಳ್ಳೆಯದೇ ಆಗಿರಬಹುದ . ಜಾತಿ ಚರ್ಚೆಗೂ ನಾನು ಇಳಿದಿಲ್ಲ. ಶುಭಶ್ರೀಯವರು, ಅಂತರ್ಜಾಲದ ಯಾವುದೋ ಅಭಿಪ್ರಾಯಕ್ಕೆ ( ಬ್ರಾಹ್ಮಣದ್ವೇಷ, ಹಿಂದೂ ದ್ವೇಷ ,ಮೊಳಕೆಯಲ್ಲಿ ಚಿವುಟಬೇಕು ಇತ್ಯಾದಿ) ನನ್ನ ಬರಹವೇ ಕಾರಣ ಎಂದು ಹೊಣೆ ಮಾಡಿರುವುದು ಅಚ್ಚರಿ. ನೋಡಿ ,ಜನರಿಗೆ ಈಗ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ,ಅದರಲ್ಲಿ ಅವಿವೇಕದ ಮಾತುಗಳನ್ನಾಡಲೂ ಸ್ವಾತಂತ್ರ್ಯವಿದೆ. ನಾಲಗೆ ತುರಿಸೋವವರು ಇದ್ದೇ ಇರುತ್ತಾರೆ. ಏನೂ ಮಾಡುವುದಕ್ಕಾಗೊಲ್ಲ. ಉದಾಹರಣೆಗೆ , ಈಗ “ಜಾತಿವಿಷಯ ಬೇಡ ಪ್ಲೀಸ್” ಅಂತ ಶುಭಶ್ರೀ ಹೇಳಿದ ನಂತರ ಕೂಡ ಮಾಯ್ಸರು ಆದನ್ನೇ ಎತ್ತಿ ಹಾಕಿಲ್ಲವೇ? ಅದಕ್ಕೆ ಶುಭಶ್ರೀ ಹೇಗೆ ಹೊಣೆಗಾರರಾಗುತ್ತಾರೆ ಪಾಪ ! ಮೇಲೆ ಹೇಳಿದ ರೀತಿಯ, ಮೊಳಕೆಯಲ್ಲಿ ಚಿವುಟುವ ಮಾತುಗಳಿಗೆ ನನ್ನ ಸಹಮತವಿಲ್ಲ. ಒಂದು ವಾದ ಸತ್ತುಹೋಗಬೇಕು ಅನ್ನುವವರು ಅದರ ಬಗ್ಗೆ (ವಿರೋಧಿಸುವಂಥದ್ದಾದರೂ) ಹೊತ್ತಗೆ ಬರೆದು ಪ್ರಚಾರ ಕೊಡೊಲ್ಲ .ಅಲಕ್ಷ್ಯ ಮಾಡಲು ಯತ್ನಿಸುತ್ತಾರೆ ಅನ್ನೋದನ್ನು ನೆನಪಿಡಿ. ಇನ್ ಫ್ಯಾಕ್ಟ್ , ಲಿಪಿಸುಧಾರಣೆಯ ವಾದವು ಬ್ರಾಹ್ಮಣ ವಿರೋಧಿ ಅನ್ನುವುದಕ್ಕಿಂತ ದಲಿತ ವಿರೋಧಿ, ಕೆಳವರ್ಗ ವಿರೋಧಿ ಆಗುವ ಸಂಭವವೇ ಜಾಸ್ತಿ ಅನ್ನುವುದು ನನ್ನ ಅನಿಸಿಕೆ. ಬಡತನರೇಖೆಯ ಸಾಮ್ಯವನ್ನು ನಾನು ಬಳಸಿಕೊಂಡದ್ದು ಅದಕ್ಕೆ ಹೊರತು ಆರೋಪಿಸಲು ಅಲ್ಲ.
೯. ಇಡೀ ಶಂಕರ ಭಟ್ಟರ ವಾದದಲ್ಲಿ ನನ್ನ ಮುಖ್ಯ ಭಿನ್ನಮತ ಇರೋದು ಕೇವಲ ಎರಡು ವಿಚಾರಗಳಿಗೆ. ಅದು ನನ್ನ ಹೊತ್ತಗೆಯನ್ನು ನೋಡಿದರೆ ಸ್ಪಷ್ಟವಾಗುತ್ತೆ. ಆ ಎರಡು ಅಂಶಗಳೆಂದರೆ, ಒಂದನೆಯದಾಗಿ , ಕನ್ನಡದ ೩೧ ಅಕ್ಷರಗಳನ್ನು ಮಾತ್ರ ಮಕ್ಕಳಿಗೆ ಕಲಿಸಿದರೆ ಸಾಕು ಎಂಬ ನಿಲುವನ್ನು ನಾನು ಒಪ್ಪೊಲ್ಲ. ಇದರರ್ಥ “ಸರಿಯಾಗಿ” ಬರೆಯದವರ ಅಂಕ ಕಳೆಯಬೇಕು ಎಂಬ ಒಪ್ಪೋಸಿಟ್ ನಿಲುವಲ್ಲ. ಎರಡನೇದಾಗಿ, ಸಂಸ್ಕೄತಮೂಲ ಅನ್ನುವ ಕಾರಣಕ್ಕಾಗಿ ಈಗಾಗಲೇ ಬಳಕೆಯಲ್ಲಿ ಬಂದಿರುವ ಸರಳ ಪದಗಳನ್ನು ಕಿತ್ತು ಹಾಕಬೇಕು ಎಂಬುದು ಸರಿಯಲ್ಲ. ಅರ್ಥ-ತಿರುಳು ಉದಾಹರಣೆಯನ್ನು ನಾನು ಅದಕ್ಕೆ ನೀಡಿದ್ದು. ಪುನಃ ಇದರರ್ಥ ಹೊಸ ಕನ್ನಡಮೂಲದ ಪದಗಳನ್ನು ಹುಟ್ಟಿಸಬಾರದು ಎಂದಲ್ಲ. ಎಷ್ಟು ಬೇಕಾದರೂ ಹೆಚ್ಚು ಹೆಚ್ಚು ಪದಗಳು ಕನ್ನಡಕ್ಕೆ ಬರಲಿ. ಇರೋದನ್ನೆಲ್ಲ ತೆಗೆಯಬೇಕಿಲ್ಲ. ವಿಜ್ಞಾನ ಗಣಿತ ಪಠ್ಯಪುಸ್ತಕದಂಥ ಸನ್ನಿವೇಶಗಳಲ್ಲಿ ಹೆಚ್ಚು ಕನ್ನಡೀಕರಣಕ್ಕೆ ಖಂಡಿತಾ ಅವಕಾಶವಿದೆ.
೧೦. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನನ್ನ ಮಾತುಗಳನ್ನು ಹೇಳಿದ್ದೇನೆ ಅಂತ ಆರಂಭದಲ್ಲಿ ಹೇಳಿದ್ದೆ . ಅದನ್ನು ನಾನು ಒಂದು ರೂಪಕದ ಮೂಲಕ ಮನದಟ್ಟು ಮಾಡಲು ಯತ್ನ ಮಾಡುತ್ತೇನೆ. ಬೇರೆ ಕೆಲವೆಡೆ ನಾನು ನೀಡಿದ ಉದಾಹರಣೆ ಕೂಡ ಹೌದು ಇದು. ದಯವಿಟ್ಟು ಮಹಾಭಾರತದ ಏಕಲವ್ಯನ ಕತೆ( ಅಥವಾ ಸಿದ್ದಲಿಂಗಯ್ಯನವರ ಪ್ರಸಿದ್ಧ ಏಕಲವ್ಯ ನಾಟಕ) ನೆನಪು ಮಾಡಿಕೊಳ್ಳಿ . ಬೆರಳು ಕತ್ತರಿಸುವ ಸನ್ನಿವೇಶದ ಬಗ್ಗೆ ಬೇಕಾದಷ್ಟು ಚರ್ಚೆಯಾಗಿದೆ. ಇಲ್ಲಿ ಮೊದಲ ಭಾಗ ಪರಿಗಣಿಸಿ. ಒಬ್ಬ ಬೇಡನಾಗಿದ್ದ ಏಕಲವ್ಯನಿಗೆ ಬಿಲ್ಲು ವಿದ್ಯೆ ಗೊತ್ತಿತ್ತು. ಬಾಲ್ಯದಿಂದಲೇ ಅದನ್ನು ಕರಗತ ಮಾಡಿಕೊಂಡು ಬೇಟೆಯಾಡಿ ಕಾಡಿನರಾಜನಾಗಿ ಮೆರೆದಿದ್ದ ಅವನು. ಅವನು ಆರಾಮವಾಗಿ ತನ್ನ ಕಾಡಿನೊಳಗೆ ಬಿಲ್ಲುವಿದ್ಯೆಯನ್ನು ಆನಂದಿಸುತ್ತಾ ಯಾಕೆ ಕೂರಲಾಗಲಿಲ್ಲ? ಯಾಕೆಂದರೆ , ಹೊರಜಗತ್ತಿನ ಜತೆಗಿನ ಅನಿವಾರ್ಯ ಮುಖಾಮುಖಿಯನ್ನು ಅವನು ತಪ್ಪಿಸಿಕೊಳ್ಳಲಾರ. ಅಗ ಬೇಟೆಯ ಬಿಲ್ಲುವಿದ್ಯೆ ಮಾತ್ರ ಸಾಕಾಗೊಲ್ಲ ಅಂತ ಅವನಿಗೆ ಗೊತ್ತಿತ್ತು.ಹೀಗಾಗಿ ದ್ರೋಣನಿಂದ ಯುದ್ಧವಿದ್ಯೆ ಕೂಡ ಕಲಿಯಲು ಅಪೇಕ್ಷಿಸಿದ. ಇಂದಿನ ಜಾಗತೀಕರಣದ ಜಗತ್ತಿನಲ್ಲಿ ತನಗೆ ಗೊತ್ತಿರುವುದೇ ಜ್ಞಾನ ಅಂತ ತನ್ನಷ್ಟಕ್ಕೇ ತಾನೇ ನೆಮ್ಮದಿಯಾಗಿ ಉಳಿಯುತ್ತೇನೆ ಎಂದುಕೊಂಡವನನ್ನು ಹೊರಜಗತ್ತು ಸ್ವಾಹಾ ಮಾಡುವ ಸಂಭವ ಹೆಚ್ಚು. ಹೊರಜಗತ್ತು ಎಂದರೆ ವಿದೇಶವೇ ಆಗಬೇಕಿಲ್ಲ. ಹೆಚ್ಚು ತಿಳಿದವರು ಅಂತ ಅರ್ಥ.
೧೧. ಕನ್ನಡಿಗರು ತೂಕ ಕಟ್ಟಿಕೊಂಡು ಓಡುವ ರೂಪಕವನ್ನು ಶುಭಶ್ರೀಯವರು ನೀಡಿದ್ದಾರೆ. ಅವರ ಆಶಯ ಒಪ್ಪತಕ್ಕದ್ದೇ ಆದರೂ ಸ್ಪಷ್ಟವಾಗಿ ಹೇಳೋದಾದರೆ ಇದು ಪೂರ್ತಿ ಸರಿಯಲ್ಲ, ಯಾಕೆಂದರೆ ಕನ್ನಡ ಬರಹ ಹುಟ್ಟುವಾಗಲೇ ಕನ್ನಡದ್ದೇ ಆದ ಒಂದು ಸ್ವರೂಪದಲ್ಲಿ ಹುಟ್ಟಿ ಆನಂತರ ಈ ತೂಕ ಅದಕ್ಕೆ ಕಟ್ಟಲ್ಪಟ್ಟದ್ದಲ್ಲ. ಹುಟ್ಟುವಾಗ ಇದಕ್ಕಿಂತಲೂ ಹೆಚ್ಚು ತೂಕವಿತ್ತು. ಹಾಗೆ ನೋಡಿದರೆ ಈಗಿರುವ ಕನ್ನಡ ಬರಹವೇ ಕನ್ನಡ ಬರಹದ ಪರಂಪರೆಗೆ ಹೆಚ್ಚು ಹತ್ತಿರ. ಹೀಗಾಗಿ ಲಿಪಿ ಕಡಿತದ ಬಗ್ಗೆ ಹೇಳುವಾಗ ಹೆಚ್ಚುವರಿ ತೂಕ ಇಳಿಸುವುದು ಅನ್ನುವುದಕ್ಕಿಂತಲೂ ಇರುವುದನ್ನು ಕಡಿತಗೊಳಿಸುವುದು ಎನ್ನುವುದೇ ಹೆಚ್ಚು ಸರಿ. ಕತ್ತರಿಸುವುದು ಎಂದರೆ ಸೆನ್ಸೇಶನಲ್ ಅಂತಾದರೆ ಆ ಪದ ಬಿಟ್ಟುಬಿಡಿ.
೧೨. ಹಿಂದಿನ ಒಂದು ಲೇಖನಕ್ಕೆ ಪ್ರತಿಕ್ರಿಯೆ ಬರೆಯುತ್ತ ಶಂಕರ ಭಟ್ಟರ ಹಾಗೂ ನನ್ನ ಡಿಗ್ರೀ ಹಾಗೂ ಬಯೋಡಾಟಾ ಗಳನ್ನು ನೀಡಿ ಹೋಲಿಸಿ , ನಾನು ನುಡಿಯರಿಗನೂ ಅಲ್ಲ, ನಾನು ಕನ್ನಡಕ್ಕೇನು ಬೇಕು ಅಂತ ಹೇಳುವ ಯೋಗ್ಯತೆ ಇಲ್ಲದವನು ಅಂತೆಲ್ಲ ಹೇಳಲಾಗಿದೆ. ಇದರಿಂದ ನನಗೇನೂ ಬೇಸರವಿಲ್ಲ. ಹೀಗೆ ಬರೆದವರು ಬಯಲಾದರಲ್ಲ ಅಂತ ಸಂತೋಷವಿದೆ!!! ಈ ಕಮೆಂಟನ್ನು ನಾನು ಈಗಷ್ಟೇ ನೋಡಿದ್ದು.( ನನ್ನ ಕಂಪ್ಯೂಟರ್ ನ ತಾಂತ್ರಿಕ ಸಮಸ್ಯೆಯಿಂದ ಲೇಟೆಸ್ಟ್ ಬರಹಗಳು ಓಪನ್ ಆಗ್ತಾ ಇರಲಿಲ್ಲ.). ಪ್ರತಿಕ್ರಿಯೆ ಬರೆದವರು ನನ್ನ ಬಗ್ಗೆ ಈ ತೀರ್ಮಾನಕ್ಕೆ ಬಂದಿದ್ದಾರೆ ಅಂತ ಗೊತ್ತಿದ್ದರೆ ಬಹುಶ ನಾನು ಉತ್ತರಿಸಲು ಹೋಗುತ್ತಿರಲಿಲ್ಲ. ಈಗಲೂ ಈ ಪ್ರತಿಕ್ರಿಯೆಯನ್ನು ಹಾಗೆ ಭಾವಿಸುವವರು ದಯವಿಟ್ಟು ಓದುವ ವ್ಯರ್ಥ ಶ್ರಮ ತೆಗೆದುಕೊಳ್ಳಬೇಡಿ. ಹಾಗೆ ನೋಡಿದರೆ , ಶಂಕರ ಭಟ್ಟರ ಪರವಾಗಿ ಬರೆಯಲು ಇವರಿಗೆ ಶಂಕರ ಭಟ್ಟರ ಡಿಗ್ರೀಗಳು ಇವೆಯೇ?!!! ಅಥವಾ ಅವರಿಂದ ಪವರ್ ಅಫ್ ಅಟಾರ್ನಿ ಪಡಕೊಂಡಿದ್ದಾರೆಯೆ?!!! ನನಗೇನೂ ನಾನೊಬ್ಬ ಭಾಷಾತಜ್ಞ ಅನ್ನುವ ಭಾವನೆಯಿಲ್ಲ. ಭಾಷವಿಷಯದಲ್ಲಿ ನನಗೆ ಬಹಳ ಅರಿಮೆಯಿದೆ ಅಂತ ನಾನು ಹೇಳಿಕೊಂಡು ತಿರುಗುತ್ತಲೂ ಇಲ್ಲ. ಆದರೆ ಈ ಭಾಷೆಯ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಒಬ್ಬ ಅನಕ್ಷರಸ್ಥನಿಗೂ ಅಧಿಕಾರವಿದೆ ಅಂತ ನಾನು ನಂಬಿದ್ದೇನೆ. ಅಂತಿರುವಾಗ ನಾನು ನನ್ನ ಡಿಗ್ರಿಯ ಆಧಾರದಲ್ಲಿ ಮಾತಾಡುತ್ತಿಲ್ಲ. ನನ್ನ ಲೇಖನದ ಬಗ್ಗೆ ತೀರ್ಮಾನಕ್ಕೆ ಬರುವಾಗ ಮೊದಲು ಡಿಗ್ರೀ ನೋಡಿ ತೀರ್ಮಾನಿಸಬೇಕು ಅಂತ ಅಂದುಕೊಂಡ ನುಡಿಯರಿಗರ ಬಗ್ಗೆ ನನಗೆ ಕನಿಕರವಿದೆ. ಇಂಥಿಂಥವರಿಗೆ ಮಾತ್ರ ಮಾತಾಡುವ ಅಧಿಕಾರ ಅಂತ ನಾಲ್ಕಕ್ಷರ ಕಲಿತವರ ಬಾಯಿಯನ್ನು ಕೂಡ ಮುಚ್ಚಿಸುವ ಯತ್ನ ಮಾಡುವವರು ಯಾವ ರೀತಿಯಲ್ಲಿ ಡೆಮಾಕ್ರಟಿಕ್ ಅಂತ ಗೊತ್ತಿಲ್ಲ. ಈ ಅಧಿಕಾರವನ್ನು ಇವರು ಪಡೆದದ್ದು ಶಂಕರ ಭಟ್ಟರ ಹೊತ್ತಗೆ ಓದಿಯಾದರೆ ಅದು ಶಂಕರ ಭಟ್ಟರ “ಸಾಮಾಜಿಕ ಭಾಷಾ ವಿಜ್ಞಾನ” ಕ್ಕೆ ಇವರು ಮಾಡುವ ಅವಮಾನ. ಪ್ರಿಸ್ಕ್ರಿಪ್ಟಿವ್ ಭಾಷಾವಿಜ್ಞಾನ ಮಾತ್ರ ಅಲ್ಲ ಇದು, ತಮಗೆ ಒಪ್ಪಿಗೆ ಆಗದ್ದನ್ನು ಹೇಳುವವರ ಬಾಯಿಗೆ ಬಟ್ಟೆ ತುರುಕುವ ಮನೋಭಾವ. ಇರಲಿ.
೧೩. ನಾವೆಲ್ಲ ಕನ್ನಡದ ಮುಂದಿನ ಬೆಳವಣಿಗೆ ಬಗ್ಗೆ ಮಾತಾಡುತ್ತಿದ್ದೇವೆ. ಭೂತ ಮತ್ತು ವರ್ತಮಾನದ ಅನುಭವದ ಆಧಾರದಲ್ಲಿ ನನ್ನ ಅಭಿಪ್ರಾಯ ಮೇಲಿನದು. ಇನ್ನೊಬ್ಬರದು ಬೇರೆ ಇರಬಹುದು .ಅದು ಸಹಜ. ಅದಕ್ಕಾಗಿ ಯಾರಿಗೂ ಬೇಸರವಿರಬಾರದು.
೧೪. ನಾನು ಕಂಪ್ಯೂಟರ್ ಬಳಕೆಯಲ್ಲಿ ತುಂಬ ನುರಿತವನಲ್ಲ. ನನ್ನ ಟೈಪು ವೇಗವಿಲ್ಲ. ಅಲ್ಲದೆ ದಿನದ ಇಡೀ ವೇಳೆ ಕಂಪ್ಯೂಟರ್ ಮುಂದೆ ಕೂರಲು ನನ್ನ ವೃತ್ತಿ ಸಹಕಾರಿಯಲ್ಲ. ಅದರೆಡೆಯಲ್ಲಿ ಕರೆಂಟು ಇತ್ಯಾದಿ ಸಮಸ್ಯೆಗಳು. ಹೀಗಾಗಿ ಕಮೆಂಟುಗಳಿಗೆ ತಕ್ಷಣ ಉತ್ತರ ಬರೆಯುವುದು ಸಾಧ್ಯವಾಗುತ್ತಿಲ್ಲ, ಕ್ಷಮೆಯಿರಲಿ.
೧೫. ನನ್ನ ಅಭಿಪ್ರಾಯಗಳನ್ನು ವಿರೋಧಿಸಿದವರಲ್ಲಿ “ಪ್ರಬಲ”ಮಂದಿ ನನಗೆ ನುಡಿಯರಿಮೆ ಹಾಗು ನುಡಿಯ ಬಗ್ಗೆ ಮಾತಾಡುವ ಕ್ವಾಲಿಫಿಕೇಶನ್ ಇಲ್ಲ ಅನ್ನುವ ತೀರ್ಮಾನಕ್ಕೆ ಬಂದಿರುವುದರಿಂದ ಈ ವಿಷಯದಲ್ಲಿ ನಾನು ಬಹುಷ ಮುಂದೆ ಪ್ರತಿಕ್ರಿಯೆ ನೀಡುವ ಅಗತ್ಯ ಬರಲಾರದು. ಇಷ್ಟು ಉದ್ದ ಬರೆದದ್ದೆ ಹೆಚ್ಚೆನಿಸಿದರೆ ಕ್ಷಮೆಯಿರಲಿ. ನಮಸ್ಕಾರಗಳು.
ಅಜಕ್ಕಳ ಗಿರೀಶ ಬಟ್ರೇ,
ನಿಮ್ಮ ಮಾರನಿಸಿಕೆಗೆ ನನ್ನಿ..
ಕೆಲವು ಕೇಳ್ವಿಗಳಿವೆ.. ಅವನ್ನೂ ಇನ್ನೊಂದು ಎಳೆಯಲ್ಲಿರುವ ಮಾತುಕತೆಯ ತರುವಾಯ ಕೇಳುವೆನು. ಮಂದಿ ಅಲ್ಲಿ ಸಿಲಿಕಿಸಿಕೊಂಡಿದ್ದಾರೆ.
ಒಳ್ಳೇದಾಗಲಿ.!
ಅಜಕ್ಕಳ ಗಿರೀಶರೆ,
ನೀವು ನಿಮ್ಮ ವಾದವನ್ನು ನುಡಿಯರಿಮೆಯ ನೆಲೆಯಲ್ಲಿ ಮಂಡಿಸಿದ್ದರೆ ಚೆನ್ನಾಗಿತ್ತು. ಇಲ್ಲವೆ ಬೇರೆ ನುಡಿಯರಿಗರ ಹೇಳಿಕೆಯನ್ನು/ಕೆಲಸವನ್ನ ಬಳಸಿಕೊಂಡು ನೀವು ಮಾತಾಡಿದ್ದರೆ ಒಪ್ಪಿಕೊಳ್ಳಬಹುದಿತ್ತು.
ನಿಮ್ಮ ಮಾತುಗಳಿಂದ ತಿಳಿಯುವುದೇನೆಂದರೆ ನುಡಿಯ ಮೇಲ್ಮೆಯ ಮತ್ತು ಅದರಿಂದ ಪಡೆಯಬಹುದಾದ ಕಲಿಕೆ ಮತ್ತು ಆ ನುಡಿಜನಾಂಗದ ಏಳಿಗೆ ಬಗ್ಗೆ ನಿಮಗೆ ತಿಳುವಳಿಕೆ ಕಡಿಮೆ ಇದೆ. ಒಮ್ಮೆಯಾದರೂ ತಾವು ಯೂರೋಪ್, ಕೊರಿಯ ಇಲ್ಲವೆ ಮಲೇಶಿಯ ಸುತ್ತಾಡಿದರೆ ನಿಮಗೆ ನುಡಿಯ ’ಮಹತ್ವ’ ತಿಳಿಯುತ್ತದೆ. ಸಾದ್ಯವಾದರೆ ಹೋಗಿ ಬನ್ನಿ ಎಂದು ಹೇಳಬಯಸುವೆ.
ಒಂದು ಜನಾಂಗದ ಏಳಿಗೆಗೆ, ಒಗ್ಗಟ್ಟಿಗೆ ಬಳಸಿಕೊಳ್ಳಬಹುದಾದ ಬಲು ಮುಕ್ಯ ಸಾದನ ’ನುಡಿ’ ಎಂಬ ಅರಿವು ತಮಗೆ ದೊರೆಯಲಿ.
ನಮ್ಮ ಮಾತು ನಿಮಗೆ ರುಚಿಸದೇ ಇರಬಹುದು. ಆದರೆ ಈ ಹೊತ್ತಗೆಯನ್ನು ಓದಿ ನೋಡಿ. ನಿಮಗೆ ಹೊಸ ಹೊಳಹುಗಳು ದೊರೆಯಬಹುದು.
Language Planning and Social Change by Robert Leon Cooper
http://books.google.com/books?id=-cOBzspgFNcC&printsec=frontcover&dq=Language+planning+and+social+change&hl=en&ei=2picTc_aMomusAOJrtWeBA&sa=X&oi=book_result&ct=result&resnum=1&ved=0CC0Q6AEwAA#v=onepage&q&f=false
ತಮ್ಮೆಲ್ಲ ಮಾರುಲಿಗಳಿಗೆ ಎದೆದುಂಬಿದ ನನ್ನಿಗಳು. ಒಳ್ಳೆದಾಗಲಿ
ಬರತ್
ವಿದೇಶಗಳ ಭಾಷೆಗಳ ಉದಾ ಅಷ್ಟು ಹೊಂಡ್ದುವುದಿಲ್ಲ ಅನ್ನಲು ಕಾರಣ ಅಲ್ಲಿ ವಿಜ್ಞಾನ ತಂತ್ರಜ್ಞಾನಗಳಿಂದಾಗಿ ಹಲವು ಬದಲಾವಣೆಗಳಗಿವೆ. ಅದಕ್ಕೆ ಕೇವಲ ಭಾಷೆ ಕಾರಣವಲ್ಲ ಅಂತ ಅಷ್ಟೆ.
ಎದೆಮಾಂಜುಗಾರ ಅನ್ನುವ ಪದ ಅಚ್ಚ ಕನ್ನಡ ಎಂದು ನೀವು ಬಳಸಿದ್ದೀರಿ .ಓಕೆ. ಆದರೆ ಈ ಪದ ಕನ್ನಡದ ಸಂವಹನ ಸಾಮರ್ಥ್ಯವನ್ನು ಹೇಗೆ ಕುಂಠಿಸಿದೆ ನೋಡಿ.-ಎದೆ ಎಂದರೆ ಹೃದಯ ಎಂದರ್ಥವಲ್ಲ ಕೆಲ ಸಂದರ್ಭಗಳಲ್ಲಿ ಮಾತ್ರ ಹಾಗೆ ಅರ್ಥ ಬರುವಂತೆ ತೋರುತ್ತೆ. ಉದಾ-ಎದೆಬೇನೆ. ಆದರೆ ಇಲ್ಲೂ ಅದು ಹಾರ್ಟ್ ನೋವೇ ಆಗಿರಬೇಕೆಂದಿಲ್ಲ. ಗ್ಯಾಸ್ಟಿಕ್ ಇತ್ಯಾದಿ ಅನ್ನುತ್ತಾರಲ್ಲ ಅಂಥದ್ದೂ ಇರಬಹುದು. ಎದೆ ಅನ್ನುವುದನ್ನು ಬಹಳ ಬಾರಿ ಬಳಸೋದು ಹೊರಭಾಗಕ್ಕೆ. “ಅವನ ಎದೆ ವಿಶಾಲವಾಗಿದೆ”-ಇತ್ಯಾದಿ. ಕನ್ನಡದ್ದೇ ಪದ ಬಳಸುವುದರಲ್ಲಿ ಇರುವ ಸಣ್ಣ ಹುಳುಕುಗಳನ್ನು ಹುಡುಕುತ್ತಿದ್ದೇನೆ ಅಂತ ಅಂದುಕೊಳ್ಳಬೇಡಿ. ಆದರೆ ಕೆಲವೊಮ್ಮೆ ಹೀಗೆ ಉತ್ಸಾಹದಿಂದ ಬಳಸುವಾಗ ಎರಡು ವಸ್ತುಗಳಿಗೆ ಒಂದೆ ಪದ ಬಳಕೆಗೆ ತಂದರೆ, ಅದಕ್ಕೆ ,ಎಲ್ಲವನ್ನೂ ಸಂದರ್ಭವೇ ಸ್ಪಷ್ಟಪಡಿಸುತ್ತೆ ಅಂತ ಸಮಜಾಯಿಶಿ ನೀಡಿ ವಾದಿಸಿದರೆ ಏನೂ ಮಾಡಕ್ಕಾಗಲ್ಲ. ತಿರುಳು ಬಗ್ಗೆ ನಾನು ಹೇಳಿದ್ದು ಇದೇ ಕಾರಣಕ್ಕೆ.ಹಾರ್ಟ್ ಸ್ಪೆಶಲಿಸ್ಟ್ ಅಂತ ಹೇಳಲು ಎದೆಮಾಂಜುಗಾರ ಅನ್ನುವಬದಲು “ಗುಂಡಿಗೆಯರಿಗ” ಅನ್ನುವ ಪದವೇ ಉತ್ತಮವಲ್ಲವೇ ? ಯಾಕೆಂದರೆ ಸ್ಪೆಶಲಿಸ್ಟ್ ಅಂದರೆ ಗುಣಪಡಿಸುವವನೇ ಆಗಬೇಕಿಲ್ಲ !! ಅರಿಗ ಅಂದರೆ ಸಾಕು. ಗುಂಡಿಗೆಯರಿಗ ಎಂಬ ಎಕ್ಸ್ ಟ್ರಾ ಪದ ಕನ್ನಡ ಕೋಶಕ್ಕೆ ಬರಲಿ, ಸಂತೋಷ.
ಇಲ್ಲಿ ನಿಮ್ಮ ಮಾತಿಗೆ ನನ್ನ ಒಪ್ಪಿಗೆ ಇದೆ.
ಗುಂಡಿಗೆಯರಿಗ ಅನ್ನೋದು ಒಳ್ಳೆಯ ಪದವೇ.
ಎದೆ/ಗುಂಡಿಗೆಮಾಂಜು = heart treatment
ಎದೆ/ಗುಂಡಿಗೆಮಾಂಜುಗಾರ = heart doctor
ಎದೆ/ಗುಂಡಿಗೆಯರಿಗೆ = heart specialist.
ಹಾಗು ನೀವು ಎದೆ ಮತ್ತು ಗುಂಡಿಗೆಯ ನಡುವಣದ ಅಂತರವನ್ನು ಚನ್ನಾಗಿ ತಿಳಿಸಿಕೊಟ್ಟಿರಿ.
ನಾನು ಶಂಕರಬಟ್ಟರ ಪದನೆರಿಕೆ/ನಿಗಂಟನ್ನು ಈ ಕುರಿತು ನೋಡಿದೆನು… ಅವರು ಹೀಗೆ ಹೇಳುವರು..
ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು
doctor ನಾಮಪದ
೧ ತಿಳಿವಿಗ ೨ ಬೇನೆಮಾಂಜುಗ, ಮಾಂಜುಗ
ನೋಡಿ.. ಅವರು ತಿಳಿವಿಗ(ಅರಿವಿಗ), ಮಾಂಜುಗ ಎರಡನ್ನು ನಿಮ್ಮ ಹಾಗೇ ತಿಳಿಸಿದ್ದಾರೆ.
ಎದೆಮಾಂಜುಗಾರ ಎಂಬುದು ಬರತ ಅವರ ಪದವುಟ್ಟು ಇರಬೇಕು. ಅವರ ಪ್ರಯತ್ನವನ್ನು ಹೊಗಳೋಣ. ಸಣ್ಣತಪ್ಪು ಆಗಿರಬಹುದು. ಅದನ್ನು ನಿಮ್ಮಂತಹ ಬಲ್ಲರು ಸರಿಪಡಿಸಿದ್ದೀರಿ.
ನನ್ನ ನಲಿವು ಏನೆಂದರೇ ನೀವು ಇಡೀ ಈ ಮಾತುಕತೆಯ ಹುರುಳನ್ನು ಅಪ್ಪಿಕೊಂಡು.. ನೀವೇ ‘ಗುಂಡಿಗೆಯರಿಗ’ ಎಂಬ ಕನ್ನಡದ್ದೇ ಪದವನ್ನು ‘ಹೃದಯತಜ್ಞ’ ಬದಲು ತಂದಿರಿ..
ನಾನೊಂದು ಪದನೆರಿಕೆಯ/ನಿಗಂಟಿನ ಅಂಕೆಗಾರ ನೀವು ಅಲ್ಲಿ ಬಂದು ಇಂತಹ ಕನ್ನಡದ್ದೇ ಆಣಿ ಪದಗಳನ್ನು ಕೊಡಬಹುದು. ಹಾಗೇ ಕನ್ನಡ wikitionary ಎಂಬ ಒಂದು ಲಕುಶ ಪದಗಳ ದೊಡ್ಡ ಪದನೆರಿಕೆ ಮಿಂಬಲೆಯಲ್ಲಿದೆ.
ತುಂಬಾ ನಲಿವು.
ಎದೆಮಾಂಜುಗಾರ ಮಾಯ್ಸ ಬಳಸಿದ್ದು. ನಾನಲ್ಲ
ಗುಂಡಿಗೆಯರಿಗ ಸರಿ. ನನ್ನಿಗಳು ನಿಮ್ಮ ಈ ಮಾರುಲಿ ನೋಡಿ ನಲಿವಾಯಿತು.
ಅಜಕ್ಕಳರೆ,
“ವಿಜ್ಞಾನ ತಂತ್ರಜ್ಞಾನಗಳಿಂದಾಗಿ ಹಲವು ಬದಲಾವಣೆಗಳಗಿವೆ”
ಅಲ್ಲ, ಅಯ ನುಡಿಯಿಂದಲೇ/ನುಡಿಯಲ್ಲೇ ಆ ವಿಗ್ನಾನ ಮತ್ತು ತಂತ್ರಗ್ನಾನವನ್ನು ಬೆಳೆಸಲಾಗಿದೆ.
ರಾಬರ್ಟ್ ಕೂಪರ್ (ಕಲಿಕೆ ಮತ್ತು ಸಮಾಜದರಿಮೆಯ ಹಿರಿಕಲಿಸುಗ)ಅವರ ಮಾತನ್ನು ಅವರ ಒಂದು ಹೊತ್ತಗೆಯಿಂದ ’ಎತ್ತಿ’ ಇಲ್ಲಿ ಹಾಕಬೇಕೆನಿಸಿತು
“೧. Language planning is typically carried out for the attainment
of nonlinguistic ends such as consumer protection, scientific
exchange, national integration, political control, economic development, the creation of new elites
೨. Inasmuch as language planning is directed ultimately toward the attainment of nonlinguistic ends, it is preferable, in my opinion, to define language planning not as efforts to solve language problems
but rather as efforts to influence language behavior.”
ಅಶ್ಟೆ.
-ಬರತ್
೧. ತಮಿಳನ್ನೇ ಯಾಕೆ ಉದಾ ಆಗಿ ಕೊಡುತ್ತೀರಿ ಅಂತ ಆಕ್ಷೇಪಿಸುವಾಗಲೇ ಆ ಭಾಷೆ ಅಕ್ಷರ ಕಡಿಮೆ ಇರೋದರಿಂದ ಏನೂ ಹೆಚ್ಚಿನದನ್ನು ಸಾಧಿಸಿಲ್ಲ ಅಂತ ಒಪ್ಪಿದಂತಾಯಿತು.
ನಿಮ್ಮ ಎದುರು ಮಾತಾಡಿದ ಒಬ್ಬರೂ ಒಪ್ಪಲಿಲ್ಲ. ಕಿರಣ್ ಬಾಟ್ನಿ ಅವರ ಬರಹದಲ್ಲಿ ಹೇಗೆ ಮುಂದಿದೆ ಎಂದು ಹೇಳಿದ್ದಾರೆ ಅದನ್ನೇ ನಾನು ಹೇಳಿರುವುದು
೨. ತಮಿಳು ಕನ್ನಡಕ್ಕಿಂತ ಮುಂದಿದೆ ಅನ್ನುವ ಮಾಯ್ಸ ಅವರ ವಾದವನ್ನು ಇತರ ಪ್ರತಿಕ್ರಿಯಗಾರರೇ ಈ ಮೂಲಕ ಅಲ್ಲಗಳೆದಿದ್ದಾರೆ.
ಮತ್ತೆ, ನಿಮ್ಮ ಎದುರು ಮಾತಾಡಿದ ಶುಬಶ್ರೀ, ಬರತ, ಪ್ರಿಯಾಂಕ ಯಾರೂ ಅಲ್ಲಗಳೆದಿಲ್ಲ. ನಾನು ತಮಿಳು ಕನ್ನಡಕ್ಕಿಂತ ಎಲ್ಲಾ ಕಡೆ ಮುಂದಿದೆ ಎಂದು ಹೇಳೇ ಇಲ್ಲ. ಸಾಮಾಜಿಕ ನ್ಯಾಯದ ಬಗ್ಗೆ ತಮಿಳು ನುಡಿಯ ಸರಳಿಕೆ ಹೆಚ್ಚು ಬಾಳಿಕೆ ಬಂದಿದೆ.
ನೀವು ನಿಮಗೆ ಬೇಕಾದ ಹಾಗೆ ನಮ್ಮ ಸಾಲುಗಳನ್ನು ಬರೆದುಕೊಳ್ಳುತ್ತಿದ್ದೀರಿ.!
ಸ್ವಾಮೀ,
೩೦ -೪೦ ವರ್ಷಗಳ ಕಾಲ ಭಾಷೆಯ ಬಗ್ಗೆ ಅಧ್ಯಯನ ಮಾಡಿದ ಅನುಭವ ನನಗಿಲ್ಲ. ಹಾಗೆ ಅಧ್ಯಯನ ಮಾದಿದವರ ಶಿಷ್ಯನಾಗುವ ಭಾಗ್ಯ ಕೂಡ ನನ್ನದಲ್ಲ. ಹಲವಾರು ವಿ.ವಿ.ಗಳಲ್ಲಿ ಬೋಧಿಸಿದ ,ಸಂಶೋಧಿಸಿದ ಅನುಭವ ಇಲ್ಲದವರು ತಪ್ಪು ತಪ್ಪಾಗಿ ಕೋಟ್ ಮಾಡಿದರೆ, ದೊಡ್ಡವರು ಹೊಟ್ಟೆಗೆ ಹಾಕ್ಕೊಂಡು ಸರಿಯಾದುದು ಏನಾದ್ರೂ ಇದ್ರೆ ಒಳಗೆಮಾಡ್ಕೊಳ್ಳಬೇಕು. ಪುಸ್ತಕ ಬರೆದು ,ಲೇಖನಗಳನ್ನು ಬರೆದು ಅನುಭವ ಇದ್ದವರು ಮಾತ್ರ ಪುಸ್ತಕ ಹಾಗು ಲೇಖನಗಳನ್ನು ಬರೆಯಲು ಅರ್ಹರಾದುದರಿಂದ ಕಮೆಂಟು ಬರೆಯಲು ಕೂಡ ಕಮೆಂಟು ಬರೆದು ಅನುಭವ ಇರುವವರೇ ಆಗಬೇಕಲ್ಲ. ಆ ಅನುಭವ ಇಲ್ಲದ್ದರಿಂದ ತಪ್ಪುಗಳಾಗುತ್ತವೆ.
ನಾನು ನೇರವಾಗಿ ಹೇಳುವೆನು..
ಕನ್ನಡದಲ್ಲಿ ಸಿಕ್ಕಾಪಟ್ಟೆ ಬೇಡವಾದೆಡೆಯಲ್ಲಿ ಸಂಸ್ಕ್ರುತದ ತುರುಕಾಟವಿದೆ ಎಂದು ನೀವೂ ಒಪ್ಪಿಕೊಂಡಿದ್ದೀರಿ, ನಾನು ಹೇಳಿಕೊಂಡಿದ್ದೀನಿ. ಈ ಒಪ್ಪಿಗೆಯನ್ನೇ ಇಟ್ಟುಕೊಂಡು, ನಮ್ಮ ನಡುವಣ ಒಪ್ಪದಿರುವಿಕೆಯನ್ನು ಅತ್ತಲಾಗೆಸೆಯೋಣ.
ನೀವು ಹಾಗು ನಾವು ಇಬ್ಬರೂ ಸೇರಿ, ಕನ್ನಡದಲ್ಲೇ ಸರಳವಾಗಿ ಪದಗಳನ್ನು ಹುಟ್ಟಿಸಿ ಸೇರಿಸೋಣ.
ಅಕ್ಕರಗಳ ಕಡಮೆ ಹೆಚ್ಚು ಈ ಬಿಟ್ಟು ಬಿಡೋಣ. ಅದನ್ನು ಮುಂದೆ ನೋಡಿದರಾಯಿತು.
ನನ್ನಿ…
ಡಾ. ಗಿರೀಶ್ ಸಾರ್,
ನಿಮ್ಮ ಮಾತಿಗೆ ನನ್ನ ಅನಿಸಿಕೆ ಇಂತಿವೆ:
೧. ತಮಿಳನ್ನು ಯಾಕೆ ಹೋಲಿಸುತ್ತೀರಿ ಅನ್ನುವ ಆಕ್ಷೇಪಕ್ಕೆ ನೀವು ಉತ್ತರ ಕೊಟ್ಟಾಗಿದೆ, ಸರಿ. ಅದಕ್ಕೆ ಯಾಕೆ ಆಕ್ಷೇಪ ಎಂದೂ ನಾನು ಬರೆದಿದ್ದಾಗಿದೆ. ಮತ್ತೇನೂ ಅದಕ್ಕೆ ಸೇರಿಸುವುದಕ್ಕೆ ಇಲ್ಲ. ನನ್ನ ಕಾಳಜಿ ಇಷ್ಟೆ. ಶಂಕರಬಟ್ಟರಂತಹ ಒಬ್ಬ ಹಿರಿಯ, ಹೆಸರಾಂತ, ಸಾಧಕ ಭಾಷಾವಿಜ್ಞಾನಿಯವರ ಲಿಪಿ ಸುಧಾರಣೆಯ ಮಾದರಿಯನ್ನು ನೀವು “ತಮಿಳಿನ ಮಾದರಿ” ಎಂದು ಸರಳಗೊಳಿಸಿ ಉಳಿದೆಲ್ಲಾ ಎತ್ತುಗೆಗಳನ್ನು ಪರಿಗಣಿಸದೆ ಹೋದಿರಿ ಎಂಬುದು.
೨. ಸರಿ. ನಿಮ್ಮ ಮಾತಿಗೆ ಒಪ್ಪಿಗೆ ಇದೆ.
೩. ಕನ್ನಡಿಗರು ಹಿಂದುಳಿಯಲು ಭಾಷೆಯೊಂದೇ ತೊಡಕಿನದ್ದಲ್ಲ ಅನ್ನುವುದು ಸರಿ. ಸಾಮಾಜಿಕ ಕಾರಣಗಳೂ ಇವೆ ಅನ್ನುವುದೂ ಸರಿ. ಅದರ ಜೊತೆ ಇಡೀ ಜಗತ್ತು ಅವಿಷ್ಕಾರಗಳಲ್ಲಿ ತೊಡಗಿದ್ದ ೨೦ನೇ ಶತಮಾನದ ಆರಂಭದ ದಿನಗಳಲ್ಲಿ ನಾವು ಗುಲಾಮಗಿರಿಯಲ್ಲಿ ಮುಳುಗಿದ್ದದ್ದು ಮತ್ತೊಂದು ಕಾರಣ ಅನಿಸುತ್ತದೆ. ಹೊರದೇಶಗಳಲ್ಲಿ ಭಾಷಾ ಸುಧಾರಣೆಯೆಂಬುದು, ಏಳಿಗೆಯತ್ತ ಸಾಗಲು ಒಯ್ಯಲು ಸಹಕಾರಿಯಾಗಿದೆ ಎನ್ನುವುದನ್ನಂತೂ ನೀವು ಒಪ್ಪುತ್ತೀರಷ್ಟೆ. ಭಾರತದಲ್ಲಿನ ಜಾತಿ, ಧರ್ಮದ ಕಟ್ಟುಪಾಡುಗಳಿಂದ ಆಗಿರುವ ಹಿಂದುಳಿವಿಕೆಯನ್ನೂ ನಿವಾರಿಸುವ ಪ್ರಯತ್ನಗಳಾಗುತ್ತಿವೆ. ಅದರೊಟ್ಟಿಗೆ ಭಾಷಾ ತೊಡುಕುಗಳನ್ನು ನಿವಾರಿಸುವ ಕೆಲಸವೂ ಆಗಬೇಕಿದೆ ತಾನೇ? ವಿದೇಶಗಳನ್ನು ಉದಾಹರಿಸಿರುವುದರ ಉದ್ದೇಶ ಇದೇ ಆಗಿದೆ. ನೀವೂ ಸುಧಾರಣೆಯಾಗಬಾರದೆಂದು ಹೇಳಿಲ್ಲ ಎನ್ನುವ ಮೂಲಕ ಸರಳೀಕರಣವಾಗಬೇಕು ಅನ್ನುವುದನ್ನು ಒಪ್ಪಿರುವುದು ನಮ್ಮಗಳ ನಿಲುವಿನಲ್ಲಿ ಸಮಾನತೆ ಇರುವುದನ್ನು ತೋರಿಸುತ್ತಿದೆ.
೪. ಹಾಗೂ ಇರಬಹುದು, ಹೀಗೂ ಇರಬಹುದು.
೫. ಜನ ಸರಿಯೆನ್ನಿದ್ದನ್ನು ಬಳಸುತ್ತಾರೆ, ಎರಡೂ ಇದ್ದರೆ ತಪ್ಪಿಲ್ಲ ಎನ್ನುವುದು ನನ್ನ ನಿಲುವು. ಮಾಯ್ಸರ ಜೊತೆ ವಾದ ನಿಮಗೆ ಬಿಟ್ಟಿದ್ದು.
೬. ಇಲ್ಲ. ಹಾಗೆ ದೂರ ಇಡುವುದಿಲ್ಲ ಎಂಬುದು ನನ್ನ ಖಚಿತವಾದ ಅಭಿಪ್ರಾಯ. ಇಂದು ೫೧ ಅಕ್ಷರ ಬಲ್ಲ ಕನ್ನಡಿಗರಿಗೂ ಹಿಂದಿದ್ದ ೫೪ ಅಕ್ಷರಗಳನ್ನು ( ’ಱ್’, ’ೞ್’) ಬಲ್ಲ ಕನ್ನಡಿಗರಿಗೂ ದುಡಿಮೆಯಲ್ಲಿ, ಸಾಮಾಜಿಕ ಸ್ಥಾನಮಾನದಲ್ಲಿ ಏನಾದರೂ ವ್ಯತ್ಯಾಸ ಇದೆಯೇ? ಇಲ್ಲವೆಂದ ಮೇಲೆ ಮುಂದೂ ಇರುವುದಿಲ್ಲ. ನಿಜಕ್ಕೂ ಈಗಿರುವ ಮೇಲುಕೀಳನ್ನು ಅದು ಅಳಿಸಲು ಸಹಕಾರಿ ಅನ್ನುವುದೇ ಸರಿ ಎನ್ನುವುದು ನನ್ನ ಅನಿಸಿಕೆ.
೭. ನಾನು ಉದಾಹರಣೆಯಾಗಿ ವೈಜ್ಞಾನಿಕವಾಗಿ ವಾದಿಸುವುದು ಎಂದರೆ ನನ್ನ ದೃಷ್ಟಿಯಲ್ಲಿ ಇಂತಹ ಪಾಯಿಂಟುಗಳನ್ನು ಸಾಧಿಸುವುದು, ಅಥವಾ ತಪ್ಪೆಂದು ತೋರಿಸಿಕೊಡುವುದು ಎಂದೆ… ಅದೂ ವೈಜ್ಞಾನಿಕ, ಅವೈಜ್ಞಾನಿಕ ಅಂದರೇನು ಎಂದು ವಿವರಿಸಲು. (ನೀವು ಈ ವಾದ ಅವೈಜ್ಞಾನಿಕವೇ? ಎಂದದ್ದಕ್ಕೆ ಆ ವಿವರಣೆ ಕೊಟ್ಟೆ). ಉಲಿದಂತೆ ಬರೆಯುವುದರ ಬಗ್ಗೆ, ಕನ್ನದದಲ್ಲಿ ಹೊಸಪದ ಹುಟ್ಟಿಸುವ ಬಗ್ಗೆ ನಿಮಗೆ ಸಹಮತ ಇರುವುದನ್ನು ಸ್ಪಷ್ಟಪಡಿಸಿದ್ದಕ್ಕೆ ಧನ್ಯವಾದಗಳು.
೮. ಮಾಯ್ಸ ಅವರು ನಾನು ಬೇಡೆಂದರೂ ಜಾತಿ ವಿಷಯ ಎತ್ತಿದ್ದಕ್ಕೂ, ರಾ.ಗಣೇಶರ ಶಿಷ್ಯೋತ್ತಮರು ಬ್ರಾಹ್ಮಣ ದ್ವೇಶ, ಹಿಂದೂ ದ್ವೇಷ ಎಂದು ನಿಮ್ಮಗಳ ಬರಹ ಆಧರಿಸಿ ಹೇಳಿರುವುದಕ್ಕೂ ಹೋಲಿಕೆ ಸಮಂಜಸ ಅನಿಸುತ್ತಿಲ್ಲ. ನಿಮ್ಮ ಅರಿವಿಲ್ಲದೆ ನೀವು ಎಂತಹ ಅಪಾಯಕಾರಿ ನಿರ್ಣಯಗಳಿಗೆ ಜನರು ಬರಲು ಕಾರಣರಾಗಿದ್ದೀರಿ ಎನ್ನುವುದನ್ನು ತಿಳಿಸಿಕೊಟ್ಟೆ ಅಷ್ಟೆ. ತಮಿಳು ಮಾದರಿ, ಅಂಗಚ್ಛೇಧ, ಕೈಕಾಲು ಕತ್ತರಿಸುವುದು, ಒಂದು ಶತಾಬ್ಧಿಗೂ ಮುನ್ನ ತಮಿಳುನಾಡಿನಲ್ಲಿ ವೀರ ತಮಿಳರು ನಡೆಸಿದ ಅವಿಚಾರಿತ ಸುಧಾರಣೆಯ ಸವಕಲು ಅನುಕರಣೆ…” ಇತ್ಯಾದಿಯಾಗಿ ಸೆನ್ಸೇಷನಲ್ ಆಗಿ ಬರೆದು ಈಗ ನನ್ನ ಹೊಣೆ ಅಲ್ಲ ಅನ್ನುವುದು ಸರಿಯೇ? ಹೀಗೆ ಬರೆಯುವುದು provoking ಅಲ್ಲವೇ?
೯. ಎರಡು ನಿಲುವುಗಳ ಬಗ್ಗೆ ಮಾತ್ರಾ ನಿಮ್ಮ ಒಪ್ಪಿಗೆ ಇಲ್ಲವೆಂದು ಹೇಳಿದ್ದೀರಾ, ಸಂತೋಷ. ಹಾಗೆ ನೀವು ಒಪ್ಪದಿರಲು ಸ್ವತಂತ್ರ ಹೊಂದಿದ್ದೀರ ಅನ್ನುವುದು ನನ್ನ ಅನಿಸಿಕೆ. ಸಂಸ್ಕೃತ ಮೂಲ ಅನ್ನುವುದಕ್ಕೆ ಕನ್ನಡಪದಗಳನ್ನು ಹುಟ್ಟುಹಾಕುವುದು ಸರಿಯಲ್ಲ ಎಂಬುದು ಕೂಡಾ ಸರಿಯೇ. ಕನ್ನಡದಲ್ಲಿ ಹೊಸಪದ ಹುಟ್ಟುಹಾಕುವುದು ಇನ್ನೊಂದರ ವಿರುದ್ಧ ಅನ್ನುವ ಮಾನಸಿಕತೆಯೇ ತಪ್ಪೆಂದು ನನ್ನ ನಿಲುವು. example ಎನ್ನುವುದಕ್ಕೆ ಈಗಾಗಲೇ ಉದಾಹರಣೆ ಅಂತಾ ಇದೆ. ಅದಕ್ಕೆ ಕನ್ನಡದಲ್ಲಿ ಎತ್ತುಗೆ ಎಂದು ಪದ ಕಟ್ಟುವುದು ಕನ್ನಡದ ಸಾಧ್ಯತೆಯ ವಿಸ್ತರಣೆಯೇ ಹೊರತು ಸಂಸ್ಕೃತ ದ್ವೇಷವಲ್ಲ. ಯಾಕೆಂದರೆ ಉದಾಹರಣೆ ಎಂಬುದನ್ನು ಬಳಸುವುದು ತಪ್ಪು, ಇನ್ಮುಂದೆ ಎತ್ತುಗೆ ಎಂದೆ ಬಳಸಿ ಎಂದೇನು ಹೇಳುತ್ತಿಲ್ಲವಲ್ಲ? ಡೆಮೊಕ್ರಾಟಿಕ್ ಅಂದರೆ ಈ ಮೂರರಲ್ಲಿ ಜನಕ್ಕೆ ಯಾವುದು ಬೇಕೋ ಅದನ್ನು ಬಳಸಲಿ ಎನ್ನುವುದೇ ಅಲ್ಲವೇ? ಹಾಗೆ ಸರಳ ಸಂಸ್ಕೃತ ಪದಕ್ಕೆ ತೊಡಕಿನ ಕನ್ನಡ ಪದ ಕಟ್ಟಿದರೆ ಯಾರೂ ಬಳಸುವುದಿಲ್ಲ ಎನ್ನುವುದೇ ಸತ್ಯ. ಹಾಗಾಗಿ ಈ ಬಗ್ಗೆ ಅಸಮ್ಮತಿ, ಅಸಹನೆ ಸರಿಯೇ ಯೋಚಿಸಿ.
೧೦. ಏಕಲವ್ಯನ ಉದಾಹರಣೆ ಸೊಗಸಾಗಿದೆ. ಇಲ್ಯಾರು ನೀವು ಕನ್ನಡವನ್ನು ಮಾತ್ರಾ ಕಲಿಯಿರಿ ಎನ್ನುತ್ತಿಲ್ಲ. ದ್ರೋಣರಿಂದ ಹೆಚ್ಚಿನ ವಿದ್ಯೆ ಕಲಿಯಲು ಸಹಾಯವಾಗುವಂತೆ ಏಕಲವ್ಯ ಸ್ವಯಂ ಕಲಿಯುತ್ತಿರುವ ಬಿಲ್ವಿದ್ಯೆಯನ್ನು ಸರಳವಾಗಿ ಕಲಿಯಪ್ಪಾ ಎನ್ನಲಾಗುತ್ತಿದೆ. ಹಾಗೆ ಕಲಿಯಲು ಬಿಲ್ಲನ್ನು ಕಾಲಲ್ಲಿ ಹಿಡಿದು, ಎಡಗೈಲಿ ಹಿಡಿದು, ತಿರುಗಾ ಮುರುಗಾ ಹಿಡಿದು ಕೊನೆಗೆ ಸರಿಯಾಗಿ ಹಿಡಿಯುವ ಸರ್ಕಸ್ ಮಾಡದೆ ನೇರವಾಗಿ, ಸರಳವಾಗಿ ಕಲಿಯಪ್ಪಾ ಎನ್ನುವ ಪ್ರಯತ್ನ ಈ ಲಿಪಿ ಕ್ರಾಂತಿ, ಪದಕ್ರಾಂತಿಗಳದ್ದು.
೧೧. ಕನ್ನಡದಲ್ಲಿ ಲಿಪಿ ಹುಟ್ಟಿದಾಗಲೇ ಬೇಡದ ಅಕ್ಷರಗಳನ್ನು ಸೇರಿಸಲಾಗಿದೆ, ಹಾಗಾಗಿ ಅವನ್ನು ಬಿಡುವುದು ಸರಿಯಾಗಿದೆ ಎಂದೆ ’ಱ್’, ’ೞ್’ ‘ೠ’ ಗಳನ್ನು ಬಿಟ್ಟಿರುವುದು. ಅಂತೆಯೇ ಮಹಾಪ್ರಾಣಗಳೂ ಷ, ಞ್, ಙ್ ಗಳೂ ಅಲ್ಲವೇ.
೧೨. ಆಗಲೇ ಇದಕ್ಕೆ ನನ್ನನಿಸಿಕೆ ಬರೆದಿದ್ದೇನೆ.
೧೩. ನಿಮ್ಮ ಅಭಿಪ್ರಾಯಕ್ಕೆ ಬೇಸರವಿಲ್ಲ. ಆದರೆ ಅದನ್ನು ಬರೆಯುವಾಗ ಮತ್ತೊಬ್ಬರ (ಶಂಕರಬಟ್ಟರ) ನಿಲುವಿನ ಬಗ್ಗೆ ಹೀಯಾಳಿಸಿ ಬರೆದಿರೇನೋ (ref pt. no. 8) ಎಂಬ ಆತಂಕ ನನ್ನದು. ಗೊತ್ತಿದ್ದೋ ಗೊತ್ತಿಲ್ಲದೆಯೋ ಶಂಕರಬಟ್ಟರ ವಾದ ಒಪ್ಪುವವರೆಲ್ಲರ ಬಗ್ಗೆ ಸಂಸ್ಕೃತ ದ್ವೇಷಿಗಳು ಎಂಬ ಹಣೆಪಟ್ಟಿ ಅಂಟಿಸಿದ ಪಾಪಕ್ಕೆ ತಾವೂ ಕಾರಣರಾದಿರಿ ಎಂಬ ಆಕ್ಷೇಪ ನನ್ನದು ಅಷ್ಟೇ.
ನಮಸ್ಕಾರಗಳು
ref point no.8
ಡಾ. ಅಜಕ್ಕಳ ಗಿರೀಶ್ ಭಟ್,
ನಿಮ್ಮ ಅರಿಮೆಯ ಬಗೆಗಿನ ಕಾಮೇಂಟಿನಿಂದ ನೀವು ನೊಂದಿರುವಂತೆ ತೋರುತ್ತಿದೆ. ಹಾಗೆ ಬರೆದ ಒಂದು ಕಮೆಂಟನ್ನು ಮಾತ್ರಾ ನೋಡಿ ನೀವು ಇನ್ನು ಬರೆಯಲಾರೆ ಎನ್ನುವ ತೀರ್ಮಾನಕ್ಕೆ ಬರುವುದು ಸರಿಯಾಗಲಾರದು. ಯಾರೊಬ್ಬರ integrity ಬಗ್ಗೆ ಕೆಟ್ಟದಾಗಿ ಮಾತಾಡುವುದು ಯಾರಿಗೂ ಒಳ್ಳೆಯದಲ್ಲ. ಹಾಗಾಗಿ ನೀವು ವಿದ್ಯಾರ್ಹತೆಯ ಹೋಲಿಕೆಯ ಕಮೆಂಟಿನ ಬಗ್ಗೆ ಅಷ್ಟೊಂದು ನೊಂದುಕೊಳ್ಳಬೇಡಿ. ಕನ್ನಡ ಲಿಪಿ ಸುಧಾರಣೆಯ ಪರವಾಗಿ ಇಲ್ಲಿ ಮಾತಾಡುತ್ತಿರುವವರೆಲ್ಲಾ ಭಾಷಾವಿಜ್ಞಾನಿಗಳಲ್ಲ. ಆದರೆ ಭಾಷಾವಿಜ್ಞಾನಿಯೊಬ್ಬರು ಹತ್ತಾರು ವರ್ಷ ಅಧ್ಯಯನದಿಂದ ಕಂಡುಕೊಂಡದ್ದನ್ನು reference ಆಗಿ ಬಳಸುತ್ತಿರುವವರು. ಇನ್ನು ಆ ವಾದವನ್ನು ಖಂಡಿಸುವ ಬರಹ ಬರೆದಿರುವ ನೀವು refer ಮಾಡುತ್ತಿರುವುದು ಭಾಷಾವಿಜ್ಞಾನಿಯೊಬ್ಬರು ಕಂಡುಕೊಂಡದ್ದನ್ನಲ್ಲಾ, ಬಹುಭಾಷಾ ಪಂಡಿತರು ಕಂಡುಕೊಂಡಿದ್ದನ್ನು… ಆದರೆ ನೀವು ಭಾಷಾ ವಿಜ್ಞಾನದ ನೆಲೆಯಲ್ಲಿ ವಾದ ಮಂಡಿಸಿಲ್ಲ ಎನ್ನುವ ಮಾತಿಗೆ ನಿಮ್ಮ ಕಲಿಕೆಯ ಬಗ್ಗೆ ಇಲ್ಲಿ ಮಾತುಗಳು ಬಂದದ್ದು. ಹಾಗೆ ನೋಡಿದರೆ ಆ ಕಮೆಂಟಿಗೆ ನಾನು ಬರೆದಿದ್ದ ಉತ್ತರವನ್ನು ಮತ್ತೆ ಹಾಕುತ್ತೇನೆ ನೋಡಿ.
ನರೇಂದ್ರ ಸಾರ್, ಮಂಜುನಾಥ್ ಸಾರ್,
ವಾದದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಹಾಗೆ ಭಾಗವಹಿಸುವವರು ಸ್ವತಃ ಭಾಷಾವಿಜ್ಞಾನಿ ಆಗಿರಬೇಕೆಂಬುದು ಇಲ್ಯಾರ ಆಶಯವೂ ಅಲ್ಲ. ಯಾಕೆಂದರೆ ನಾನಂತೂ ಬಿಕಾಂ ಪದವೀಧರೆ, ಭಾಷಾವಿಜ್ಞಾನದ ಪದವೀಧರೆ ಅಲ್ಲ. ಹಾಗೆಂದು ಡಾ.ಗಿರೀಶರು ಆ ಕಾರಣಕ್ಕೇ ನನಗೆ ಉತ್ತರಿಸಲಾರೆ ಎಂದರೆ ಹೇಗೆ ಸರಿಯಲ್ಲವೋ ಹಾಗೇ ಇದೂ ಕೂಡಾ.
ನನ್ನ ಎಣಿಕೆಯಂತೆ ಇಲ್ಲಿ ವಾದ ಮಂಡಿಸುವಾಗ ಅನಿಸಿಕೆಗಳನ್ನು, ಅನುಭವಗಳನ್ನೂ ಹೇಳಿಕೊಳ್ಳುತ್ತೇವೆ. ಅಂತೆಯೇ ಅದನ್ನು ಬೆಂಬಲಿಸುವ ವಿಜ್ಞಾನದ ಮೂಲತತ್ವವನ್ನೋ, ವಿಜ್ಞಾನಿಯ ಬರಹಗಳನ್ನೋ ಬಳಸುತ್ತೇವೆ. ಹಾಗೇ, ಸ್ವತಃ ಭಾಷಾತಜ್ಞರಲ್ಲದಿದ್ದವರು ಯಾವ ವೈಜ್ಞಾನಿಕ ಕಾರಣವಿಟ್ಟುಕೊಂಡು ವಾದಿಸುತ್ತಿದ್ದಾರೆ ಎನ್ನುವುದಷ್ಟೇ ಮುಖ್ಯವಾಗುತ್ತದೆ. ಆ ನೆಲೆಯಲ್ಲಿ ನೋಡಿದಾಗ ಶಂಕರ ಭಟ್ಟರ ನಿಲುವುಗಳನ್ನು ಡಾ. ರಾ ಗಣೇಶ್ ಅವರಾಗಲೀ, ಡಾ.ಗಿರೀಶ್ ಅವರಾಗಲೀ ವೈಜ್ಞಾನಿಕ ನೆಲೆಯಲ್ಲಿ ತಪ್ಪೆಂದು ತೋರಿಸಿಕೊಟ್ಟಿಲ್ಲ ಅಥವಾ… ಅವರು ತೋರಿಸಿಕೊಟ್ಟಿರುವ ಬಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮನವರಿಕೆ ಮಾಡಿಸುವಂತಿಲ್ಲ. ಅದಕ್ಕಾಗಿಯೇ ಅವರಿಗೆ ಹೀಗೆ ಸಾಲು ಸಾಲು ಪ್ರಶ್ನೆಗಳಿಟ್ಟಿದ್ದಾರೆ ಓದುಗರು.
ಇಷ್ಟಕ್ಕೂ… ತಮ್ಮ ಮನಸ್ಸಿಗೆ ನನ್ನ ಕಮೆಂಟಿನಿಂದ ನೋವಾಗಿದ್ದರೆ ಮನ್ನಿಸಿ.
ಸ್ಶುಭಶ್ರೀ ಮೇಡಮ್ ಅವರೆ,
ನಾನು ನೊಂದುಕೊಂಡು ಇನ್ನು ಬರೆಯುವುದಿಲ್ಲ ಅಂತ ಹೇಳಿಲ್ಲ. ನಾನು ಬರೆವ ಅಗತ್ಯವಿರಲಾರದು ಯಾಕೆ ಅಂದರೆ, ನಿಮ್ಮ ಪರವಾಗಿ ಮಾತನಾಡಿದವರ ಎಷ್ಟೋ ಮಾತುಗಳು ನನಗೆ ತೀರ ಬಾಲಿಶ ಹಾಗು ನೀವೇ ಪದೆ ಪದೇ ಹೇಳುವ “ಅವೈಜ್ಞಾನಿಕ”ವಾಗಿ ಕಾಣುತ್ತವೆ. ೧೦ ವರ್ಷ ಅನುಭವ ಇರಬೇಕು, ಇಂತಿಷ್ಟು ವರ್ಷ ಸಂಶೋಧನೆ ಮಾಡಿರಬೇಕು, ಹೊತ್ತಗೆ ಬರೆದಿರಬೇಕು ಇತ್ಯಾದಿ ಮಾತುಗಳು ಹೆದರುವವರನ್ನು ಹೆದರಿಸಲು ಬಳಕೆಯಾಗುವ ಬಾಲಿಶ ಮಾತುಗಳು. ಅವರನ್ನು ಬೆಂಬಲಿಸುವವರಿಗೆ ಯಾವ ಡಿಗ್ರಿಗಳು ಬೇಕಾಗಿಲ್ಲ ಅನಿಸುತ್ತೆ!!! ಅದನ್ನು ಶಂಕರ ಭಟ್ಟರು ಕೂಡ ಒಪ್ಪಲಾರರು ಅಂತ ನನ್ನ ಎಣಿಕೆ. ಇದೆಲ್ಲ ತುಂಬ ಚೀಪ್ ಅನ್ಸುತ್ತೆ. ಅಂಥ ಅನಿಸಿಕೆ ಇರೋವರ ಜತೆ ಮೀನಿಂಗ್ ಫುಲ್ ಡಯಲಾಗ್ ಸಾಧ್ಯವಿಲ್ಲ. ನಾನು ಶಂಕರ ಭಟ್ ಅವರಿಂದ ಮಾರ್ಗದರ್ಶನ ಪಡೆದದ್ದೇ ನನ್ನ ಅರ್ಹತೆ ಎಂದುಕೊಂಡಿದ್ದೇನೆ (ನನ್ನ ಪುಸ್ತಕದ ಮಾತುಗಳನ್ನು ಆಧರಿಸಿ) ಎಂಬರ್ಥದಲ್ಲಿ ಮಾತಾಡಿದ್ದಾರೆ. ಇದರಿಂದೆಲ್ಲ ನೊಂದುಕೊಂಡು ಬರೆಯುದನ್ನು ನಿಲ್ಲಿಸುವಷ್ಟು ತೆಳು ಚರ್ಮದವನು ನಾನಲ್ಲ ಬಿಡಿ!! ಆದರೆ, ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವವರಿಗೆ ಏನೆಂದು ಉತ್ತರಿಸುವುದು? ಇನ್ನೂರೈವತ್ತು ಕಮೆಂಟುಗಳಲ್ಲಿ ಮುಕ್ಕಾಲುವಾಸಿ ಕಮೆಂಟುಗಳಿಗೆ ಪ್ರತ್ಯೇಕ ಉತ್ತರ ಅಗತ್ಯವಿಲ್ಲ. ನಾವು ಚ್ಯಾಟ್ ಗೆ ಕುಳಿತಿದ್ದೇವೋ ಎಂಬಂತೆ ಬರೆದದ್ದಕ್ಕೆ ಕೂಡಲೇ ಉತ್ತರಿಸಬೇಕು ಅನ್ನುವನಿರೀಕ್ಷೆ ಮಾಡಿ ಓಡಿಹೋಗುವ ಲ್ಲೇಖಕರ ಲೇಖನ ಅಂತೆಲ್ಲ ಹೇಳುವುದನ್ನು ನೋಡಿದಾಗ ಈ ದೇಶದಲ್ಲಿ ಎಲ್ಲರೂ ಕಂಪ್ಯೂಟರ್ ಮುಂದೆ ಕೂತೇ ಕೆಲಸ ಮಾಡ್ತಾ ಇದ್ದಾರೆಂಬ ಭಾವನೆ ಕೆಲವರಲ್ಲಿ ಇರುವಂತಿದೆ.ಅವರಿಗೆ ವಾಸ್ತವದ ಅರಿವು ಇಲ್ಲ ಅನಿಸುತ್ತೆ.. ಹಾಗೆಯೆ ಇನ್ನು ನಾನು ಹೇಳುವುದಾದರೂ ನನ್ನ ಹೊತ್ತಗೆಯಲ್ಲಿ ಅಥವಾ ಇಲ್ಲಿಯ ನನ್ನ ಬರಹದಗಳಲ್ಲಿ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಕಾಗುತ್ತೆ. ಅದರಲಿ ಅರ್ಥವಿಲ್ಲ. ಹಾಗಾಗಿ ಬರೆವ ಅಗತ್ಯ ಬರಲಿಕ್ಕಿಲ್ಲ ಅಂದೆ. ಬರೆವುದಿಲ್ಲ ಅಂತ ಶಪಥವಿಲ್ಲ. ಅಗತ್ಯವೆನಿಸಿದರೆ ಖಂಡಿತ ಬರೆವೆ.
ನಿಮ್ಮ specification publish ಮಾಡಿ, please. ನಿಮಗೆ ಬೇಕಾದ ಹಾಗೇ ಕನ್ನಡದಲ್ಲಿ ಬರೆಯುವೆನು. ನಿಮ್ಮ specification ಕಾಯ್ತಾ ಇರುವೆನು with affection..
ಇಲ್ಲಿ ಎರಡು ಗುಂಪುಗಳಿವೆ ಒಂದು ಕನ್ನಡ ಗುಂಪು ಇನ್ನೊಂದು ಸಂಸ್ಕೃತ ಕನ್ನಡದ ಗುಂಪು 🙂 ಆದರೆ ಎರಡು ಗುಂಪುಗಳು ಕನ್ನಡಕ್ಕೋಸ್ಕರ ಬೈದಾಡಿಕೊಳ್ಳುತ್ತಿರುವುದು ಸಂತಸದ ವಿಚಾರ!
ಸಾಲಾಮ್ ಪ್ರಶಾಂತ್ ಸಾಹೇಬ್..
ನಂದು ರಾಜಭಾಷಾ ಹಿಂದಿ ಮತ್ತು ಅಂತರ್ರಾಷ್ಟ್ರಭಾಷಾ ಇಂಗ್ಲೀಶ್ ಗುಂಪು..
ತ್ಯಾಂಕ್ಸು
samskrtha beda ennuvavarige en es ef ithyadi english yaake kashta agadu?
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com