ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 5, 2011

4

ಯಾವುದು ನಿಜವಾದ ದೇಶಪ್ರೇಮ ?

‍ನಿಲುಮೆ ಮೂಲಕ

– ವಸಂತ್ ಶೆಟ್ಟಿ  

ವಿಶ್ವ ಕಪ್ ಗೆದ್ದ ಭಾರತಕ್ಕೆ ಅಭಿನಂದನೆಗಳು. ಹಾಗೆಯೇ ಕೊನೆಯವರೆಗೂ ಅತ್ಯಂತ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ ಶ್ರೀಲಂಕೆಗೂ ಶುಭಾಶಯಗಳು. ಮೊನ್ನೆ ಮೊನ್ನೆಯ ಪಾಕಿಸ್ತಾನದ ಎದುರಿನ ಸೆಮಿ ಫೈನಲ್ ಬಗ್ಗೆ ಮಾಧ್ಯಮಗಳಲ್ಲಿ ಇದ್ದ ಕ್ರೇಜ್, ಇದೊಂದು ಯುದ್ಧ ಅನ್ನುವ ಮನಸ್ಥಿತಿ ಫೈನಲ್ ಪಂದ್ಯದಲ್ಲಿ ಅಷ್ಟಾಗಿ ಕಾಣಲಿಲ್ಲ. ಸೆಮಿ ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರೆ ಸಾಕು, ಫೈನಲ್ ಗೆಲ್ಲದಿದ್ದರೂ ಆದೀತು ಅನ್ನುವ ಅನಿಸಿಕೆಗಳನ್ನು ಅಲ್ಲಲ್ಲಿ ಕಂಡೆ. ಹಾಗೆಯೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ಈ ಕಪ್ಪು ಬೇಕೇ ಬೇಕು ಅನ್ನುವ ತರಹದ ಚರ್ಚೆಗಳನ್ನು ಅಲ್ಲಲ್ಲಿ ಕಂಡೆ. ಕೊನೆಯಲ್ಲಿ, ಕಪ್ ಗೆದ್ದ ತಂಡಕ್ಕೆ ಹೆಚ್ಚಿನ ಸರ್ಕಾರಗಳು (ನಮ್ಮ ರಾಜ್ಯ ಸರ್ಕಾರವು ಸೇರಿದಂತೆ ) ಬಹುಮಾನದ ಸುರಿಮಳೆ ಗೈದು ತಮ್ಮ ಅಸಂಖ್ಯ ಪಾಪುಲಿಸ್ಟ್ ಕ್ರಮಗಳಿಗೆ ಇನ್ನೊಂದು ಸೇರ್ಪಡೆ ಮಾಡಿದ್ದನ್ನು ಕಂಡೆ. ಒಂದು ಆಟಕ್ಕೆ ಈ ಮಟ್ಟದ ಗಮನ, ಆದ್ಯತೆ ಕೊಡುವಷ್ಟರಲ್ಲಿ ಅದರ ಅರ್ಧದಷ್ಟು ಗಮನ ಈ ದೇಶದ, ಅದರ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲೂ ಕೊಟ್ಟಿದ್ದಲ್ಲಿ ನಮ್ಮೆದುರು ಇರುವ ಸಮಸ್ಯೆಗಳಲ್ಲಿ ಕೆಲವಕ್ಕಾದರು ಪರಿಹಾರ ಸಿಕ್ಕಿರುತಿತ್ತೇನೋ ಅನ್ನಿಸಿತು.

ಯಾವುದು ದೇಶ ಪ್ರೇಮ ?

 ಮೈದಾನದಲ್ಲಿ ಇಂಡಿಯಾ ಇಂಡಿಯಾ ಎಂದು ಕೂಗುವುದೋ, ಮುಖಕ್ಕೆ ಬಣ್ಣ ಬಳಿದು ಕುಣಿದು ಕುಪ್ಪಳಿಸುವುದೋ, ಇಲ್ಲವೇ ಪಂದ್ಯ ಗೆದ್ದ ಮೇಲೆ ಬಾರಿಗೋಗಿ ಎಣ್ಣೆ ಹೊಡೆದು ರಸ್ತೆಯಲ್ಲಿ ಹೋ ಎಂದು ಕಿರಿಚುವುದೇ ದೇಶಪ್ರೇಮ ತೋರಿಸುವ ಮಾರ್ಗ ಅನಿಸುವಂತಹ ಸ್ಥಿತಿ ಇದೆ ನಮ್ಮ ಹಲವು ಯುವಕರಲ್ಲಿ.  ಹಾಗಿದ್ರೆ ಅದನ್ನು ಮಾಡಲೇಬಾರದಾ? ಮಾಡಲೇ ಬಾರದು ಎಂದು ಹೇಳುವ ಮಾರಲ್ ಪೋಲಿಸಿಂಗ್ ನಿಲುವು ನನ್ನದಲ್ಲ. ಯಾರಿಗೂ ತೊಂದರೆ ಆಗದಂತೆ ಖಂಡಿತ ಮಾಡಬಹುದು. ಯಾವ ತಪ್ಪು ಇಲ್ಲ. ಆದರೆ ಒಂದು ಆಟಕ್ಕೆ ಮೈ ಮೇಲೆ ಆವೇಶ ಬಂದಂತೆ ವರ್ತಿಸುವ ಇದೇ ಜನರು ನಿಜವಾದ ದೇಶಪ್ರೇಮ ತೋರಿಸುವಂತ ಚಿಕ್ಕ ಕೆಲಸಗಳಾದ “ಟ್ರಾಫಿಕ್ ರೂಲ್ಸ್ ಅನುಸರಿಸುವುದು”,”ಫೂಟ್ ಪಾತ್ ಮೇಲೆ ಬೈಕು ಓಡಿಸದಿರುವುದು”, “ಕಂಡ ಕಂಡಲ್ಲಿ ಕಸ ಎಸೆಯದೆ, ಉಚ್ಚೆ ಹೊಯ್ಯದೆ” ಸಿವಿಕ್ ಸೆನ್ಸ್ ಇಟ್ಟುಕೊಳ್ಳುವುದರಿಂದ ಹಿಡಿದು  “ಸಮಯಕ್ಕೆ ಸರಿಯಾಗಿ ತೆರಿಗೆ ಕಟ್ಟುವುದು”, “ಪ್ರತಿ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸುವುದು”,  ಇಂತಹ ನಾಗರಿಕ ಪ್ರಜ್ಞೆಯ ಜವಾಬ್ದಾರಿಯ ಕೆಲಸಗಳನ್ನು ಇದೇ ಶ್ರದ್ಧೆಯಿಂದ, ಇದೇ ಪ್ರೀತಿಯಿಂದ ಮಾಡುತ್ತಾರಾ? ದೇಶಪ್ರೇಮದ ನಿಜವಾದ ಮಾಪನಗಳಾದ ಇವುಗಳ ಬಗ್ಗೆ ದಿವ್ಯ ನಿರ್ಲಕ್ಷ ತಾಳುವ ಜನರು ಒಂದು ಮ್ಯಾಚ್, ಅದರಲ್ಲೂ ಒಂದು ದೇಶದ ವಿರುದ್ಧದ ಪಂದ್ಯಕ್ಕೆ ಕೊಡುವ ಗಮನ ಎಲ್ಲೋ ಒಂದು ಕಡೆ ನಿಜವಾದ ಸಮಸ್ಯೆಗಳಿಂದ, ಜವಾಬ್ದಾರಿಗಳಿಂದ ನುಣುಚಿಕೊಳ್ಳುವ, ಪಲಾಯನವಾದಿ ಮನಸ್ಥಿತಿಯೇ ಅನ್ನುವುದು ನನ್ನ ಅನಿಸಿಕೆ. ಇಂತಹ ಮನಸ್ಥಿತಿಯ ಪ್ರಜೆಗಳಿಂದಾಗಿಯೇ ಇವರನ್ನು ಆಳುವ ದೊರೆಗಳು ಗೆದ್ದ ಆಟಗಾರರಿಗೆ(ಅದು ಕೂಡಾ ವರ್ಷಕ್ಕೆ ನೂರಾರು ಕೋಟಿ ದುಡಿಯುವ ಆಟಗಾರರಿಗೆ) 50X80 ಸೈಟು ಕೊಡ್ತೀನಿ ಅನ್ನೋ ಮಟ್ಟದ ಚೀಪ್ ಪಾಪುಲಿಸ್ಟ್ ಕ್ರಮಗಳಿಗೆ ಜೋತು ಬೀಳೋದು. ದೇಶದ ಎಲ್ಲ ಅವ್ಯವಸ್ಥೆಗೂ ರಾಜಕಾರಣಿಗಳನ್ನು ಬೈಯುತ್ತ, ತಮ್ಮ ತಮ್ಮ ಜವಾಬ್ದಾರಿಯಿಂದ ಜಾರಿಕೊಂಡು, ಮ್ಯಾಚ್ ಇದ್ದಾಗ ಕ್ರಿಕೆಟ್ ಬಟ್ಟೆ ಹಾಕೊಂಡು, ಮುಖಕ್ಕೆ ಬಣ್ಣ ಬಳ್ಕೊಂಡು ಇಂಡಿಯಾ ಇಂಡಿಯಾ ಎಂದು ಕೂಗಿ, ಮ್ಯಾಚ್ ಮುಗಿಸಿ ಮನೆಗ್ ಬಂದು ಊಟ ಮಾಡಿ ಮಲಗಿ ಬೆಳಿಗ್ಗೆ ಎದ್ದು ಮತ್ತದೇ ಕೆಲಸ ಮಾಡಿಕೊಂಡು, “ಈ ದೇಶದ ಕತೆ ಇಷ್ಟೇ ” ಅಂತ ಬೈಕೊಂಡು, ವೀಸಾ ಸಿಕ್ಕ ತಕ್ಷಣ ಅಮೆರಿಕಕ್ಕೆ ಹಾರಿ ಹೋಗಿ ಡಾಲರ್ ಎಣಿಸೋ ಕನಸು ಕಾಣೋ ಜನರ ದೇಶಪ್ರೇಮ ಎಷ್ಟು shallow ಅನ್ನಿಸುತ್ತೆ .

(ಚಿತ್ರ ಕೃಪೆ: zimbio.com)

4 ಟಿಪ್ಪಣಿಗಳು Post a comment
  1. Narendra
    ಏಪ್ರಿಲ್ 5 2011

    ದೇಶದ ಗಡಿಗಳನ್ನು ಹಗಲಿರುಳೂ ಕಾಯುವ, ತನ್ನ ಜೀವವನ್ನೇ ಪಣಕ್ಕಿಟ್ಟಿರುವ ಸೈನಿಕನಿಗೆ ಯಾವ ಕಿಮ್ಮತ್ತೂ ಇಲ್ಲ.
    ಕಾರ್ಗಿಲ್ ಯುದ್ಧದಲ್ಲಿ ಸತ್ತ ಸೈನಿಕರ ಕುಟುಂಬಗಳು ತಮಗೆ ಸಿಗಬೇಕಾದ ಕನಿಷ್ಠ ಸವಲತ್ತುಗಳಿಗಾಗಿ ಸರಕಾರದೊಡನೆ ಹೊಡೆದಾಡಬೇಕು, ಸರಕಾರಿ ಕಛೇರಿಗಳಿಗೆ ಅಲೆದಾಡಬೇಕು.
    ಇಷ್ಟಾದ ಮೇಲೂ ಅವರಿಗೆ ಸಿಗುವ ಪರಿಹಾರ ಹೇಳಿಕೊಳ್ಳುವಂತಹದೇನೂ ಇರುವುದಿಲ್ಲ.
    ಅದೇ ಈ ಕ್ರಿಕೆಟಿಗರನ್ನು ನೋಡಿ. ಜಾಹಿರಾತುಗಳಿಂದಲೇ ಕೋಟ್ಯಂತರ ಗಳಿಸಿರುವ ಇವರಿಗೆ ಮತ್ತಷ್ಟು ಕೋಟಿಗಳ ಸುರಿಮಳೆ.
    ಇನ್ಯಾವ ಕ್ರೀಡೆಗೂ ಸಿಗದ ಮಹತ್ವ ಈ ಕ್ರೀಡೆಗೆ.
    ಇದೇನು ಜನರೇ ಈ ರೀತಿ ಇರುವರೋ ಅಥವಾ ಇದು ಮಾಧ್ಯಮಗಳ ಮೋಡಿಯೋ ಒಂದೂ ತಿಳಿಯದು!

    ಉತ್ತರ
  2. ವಿಜಯ
    ಏಪ್ರಿಲ್ 5 2011

    ವಸಂತ್..
    ಸಮಯೋಚಿತ, ಉತ್ತಮ ಲೇಖನ. ಜನರ ಉನ್ಮಾದ ನೋಡಿದರೆ ಗಾಬರಿ ಬಿಳುವಂತದ್ದು. ಪತ್ರಿಕಾ ವರದಿ/ವರ್ಣನೆಗಳು ಇಂತದ್ದಕ್ಕೆ ಇನ್ನೂ ಉತ್ತೇಜನ ನೀಡುವಂತವುಗಳು. ನ್ಯಾಯಾಧೀಶರು ಕ್ರಿಕೆಟ್ ಸ್ಕೋರ್ ಕೇಳಿದ್ದು, ವಕೀಲರ ಎಲ್.ಸಿ.ಡಿ ಖರೀದಿ, ಮೆರವಣಿಗೆ, ಉಪವಾಸ ಎಲ್ಲದರ ಬಗ್ಗೆಯೂ ಅವಶ್ಯಕತೆಗಿಂತ ಹೆಚ್ಚಿನ ಪ್ರಾಮುಖ್ಯ. ಇದು ಉನ್ಮಾದಿತರಿಗೆ ಸಮರ್ಥನೆಯಿದ್ದಂತೆ. ಕ್ರಿಕೆಟ್ ಹೊತ್ತಿಗೆ ಒಮ್ಮಿಂದೊಮ್ಮೆಲೆ ಜಾಗೃತವಾಗಿಬಿಡುವ, ನರನಾಡಿಗಳಲ್ಲಿ ತುಂಬಿ ತುಳುಕುವ ದೇಶಪ್ರೇಮ, ಉತ್ಸಾಹ ನಮಗೆ ಉಳಿದೆಲ್ಲ ವಿಷಯಗಳಲ್ಲಿ ಇದ್ದಿದ್ದರೆ ನಮ್ಮ ದೇಶ ಎಲ್ಲಿರುತ್ತಿತ್ತೊ ಏನೊ!.

    ನಮ್ಮ ಮುಖ್ಯಮಂತ್ರಿಗಳ ದಾನಶೂರತ್ವದ ವೈಖರಿ ನೋಡಿದ್ರೆ ಗಾಬರಿಯಾಗುತ್ತೆ. ಈ ಸೈಟುಗಳು ಏನು ಇವರ ಸ್ವಂತ ಆಸ್ತಿಯಾ? ಉಳಿದ ರಾಜ್ಯದವರು ತಮ್ಮ ರಾಜ್ಯದ ಆಟಗಾರರನ್ನಷ್ಟೇ ಸನ್ಮಾನಿಸಿದರೆ..ನಮ್ಮ ಮುಖ್ಯಮಂತ್ರಿಗಳು ಇಡಿ ತಂಡ..ಅದೂ ಹೋಗಲಿ ಕೋಚಗೆ ಕೂಡ ಆಫರ್ ಕೊಟ್ಟಿದ್ದಾರೆ. ನರೇಂದ್ರ ಹೇಳಿದ ಹಾಗೇ ಹುತಾತ್ಮರಾದ ಸೈನಿಕರ ಸಂಬಂದಿತರು, ಅಂಗವಿಕಲ ಸೈನಿಕರು ತಮಗೆ ಮಂಜೂರಿ ಮಾಡಲ್ಪಟ್ಟ ಸೈಟುಗಳನ್ನು ಪಡೆದುಕೊಳ್ಳಬೇಕೆಂದರೆ ಕಂಬದಿಂದ ಕಂಬ ಸುತ್ತಿಯೇ ಸುಸ್ತಾಗಬೇಕು. ಇಲ್ಲಿ ಅವಶ್ಯಕತೆಯಿರದ,ಹೊಟ್ಟೆ ತುಂಬಿದವರನ್ನೇ ಕರೆದು, ಸನ್ಮಾನ ಮಾಡಿ ಮಡಿಲಿಗೆ ಸೈಟನ್ನು ಹಾಕಿ ಪೋಸು ಕೊಡುವ ಹಂಬಲ. ಏನೇ ಇರಲಿ ಸರಳ ಯೋಚನೆಯ ಮಹಾನುಭಾವ ನಮ್ಮ ಮುಖ್ಯಮಂತ್ರಿಗಳು..ಕೆರೆಯ ನೀರನು ಕೆರೆಗೆ ಚೆಲ್ಲುವುದು ಮತ್ತು ಅದರಲ್ಲೂ ಒಂದೆರಡು ಟ್ಯಾಂಕರನ್ನು ತಮ್ಮ ಸ್ವಂತ ಮನೆ ಬಳಕೆಗೆ ಇಟ್ಟುಕೊಳ್ಳುವುದು ಎಂಬ ಸರಳ ಪಾಲಿಸಿಯೊಂದಿಗೆ ರಾಜ್ಯಭಾರ ಮಾಡುತ್ತಿದ್ದಾರೆ!..

    ಉತ್ತರ
  3. ವಸಂತ
    ಏಪ್ರಿಲ್ 6 2011

    ಹುಚ್ಮುಂಡೆ ಮದವೆಲಿ ಉಂಡವನೇ ಜಾಣ ಅನ್ನೋ ಹಾಗೆ ಈ ಉನ್ಮಾದದಲ್ಲಿ ಬಹುಮಾನ ಕೊಟ್ಟವನೇ ಜಾಣ ಅನ್ನೋ ನೀತಿ ನಮ್ಮ ಮುಖ್ಯಮಂತ್ರಿಗಳದ್ದು. 50×80 ಸೈಟ್ ಅಂದರೆ 4000 ಚದರ ಅಡಿ. ಒಂದು ಚದರ ಅಡಿಗೆ 5000 ರೂಪಾಯಿ ಹಿಡಿದ್ರೆ ಸುಮಾರು 2 ಕೋಟಿ ಪ್ರತಿ ಸೈಟಿಗೆ. 15 ಜನಕ್ಕೆ ಅಂದ್ರೆ 30 ಕೋಟಿ. ನಮ್ಮ ತೆರಿಗೆ ಹಣವನ್ನು ಹೀಗೆ ಪೋಲು ಮಾಡುವ ಅಧಿಕಾರ ಯಾರಿವರಿಗೆ ಕೊಟ್ಟಿದ್ದು?

    ಕಾಮನ್ ವೆಲ್ತ್ ಅಲ್ಲಿ ಗೆದ್ದು ಬಂದ ಅಶ್ವಿನಿಯಂತಹ ಬಡ ಹುಡುಗಿಗೆ ಹೀಗೆ ಸೈಟ್ ಕೊಟ್ರಾ? ಕರ್ನಾಟಕದಲ್ಲಿ ಆಟಗಾರರಿಗೆ ಬೇಕಿರುವ ವ್ಯವಸ್ಥೆ ಕಲ್ಪಿಸಲು ಹೀಗೆ ಹಣ ಕೊಟ್ರಾ? ಇದೇ ಅಲ್ವಾ misplaced priority ಅಂದ್ರೆ ?

    ರೋಮಿಗೆ ಬೆಂಕಿ ಹತ್ತಿದಾಗ ಪೀಟಿಲು ಕುಯ್ತಾ ಇದ್ದ ರಾಜನಂತಿದೆ ನಮ್ಮ ರಾಜರ ಆಳ್ವಿಕೆ.

    ಉತ್ತರ
  4. ಏಪ್ರಿಲ್ 6 2011

    ಪ್ರಜಾವಾಣಿಯಲ್ಲಿ ಬಂದಿರುವ (ಪಾಟೇಲ್ ಪುಟ್ಟಪ್ಪ)’ಪಾಪು’ ರವರ ಓಲೆ
    http://prajavani.net/web/include/story.php?news=759&section=31&menuid=14
    “ಪರರ ಸೇವೆಯೊಳು ದೇಹವನು ಸವೆಸುವ ವಾಮನರು ಕರ್ನಾಟಕದವರು’ ಎಂದು ಕವಿ ಜಿ.ಪಿ. ರಾಜರತ್ನಂ ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಬರೆದಿದ್ದರು. ಈ ಮಾತು ನಿನ್ನೆ ಮಾತ್ರವಲ್ಲ, ಇಂದಿಗೂ ಸತ್ಯವಾಗಿದೆ. ಕ್ರಿಕೆಟ್ಟಿನ ‘ವಿಶ್ವಕಪ್’ ತಂದುಕೊಟ್ಟ ಮಹೇಂದ್ರ ಸಿಂಗ್ ದೋನಿಯ ಗೌರವಾರ್ಥ ಬೆಂಗಳೂರಿನ ಒಂದು ಪ್ರಮುಖ ರಸ್ತೆಗೆ ಅವರ ಹೆಸರು ಬರಲಿದೆ. ವಿಶ್ವಕಪ್ ತಂದುಕೊಟ್ಟ ದೋನಿಯನ್ನು “

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments