ರಾಷ್ಟ್ರೀಯ ಪಕ್ಷಗಳ ಒಡೆದು ಆಳುವ ನೀತಿ…!
– ಚೇತನ್ ಜೀರಾಳ್
ಕಳೆದ ಎರಡು ವಾರಗಳಲ್ಲಿ ನಡೆದಿರುವ ಸುದ್ದಿಗಳ ಬಗ್ಗೆ ನಿಮ್ಮ ಗಮನ ಹರಿಸಲು ಇಷ್ಟಪಡುತ್ತೇನೆ. ಪತ್ರಿಕೆಗಳಲ್ಲಿ ಕೇವಲ ಸುದ್ದಿ ಎನ್ನುವಂತೆ ಇವುಗಳನ್ನು ಬಿತ್ತರಿಸಲಾಯಿತು, ಆದರೆ ಇವುಗಳ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ.
ಮರುಚುನಾವಣೆ ಹಾಗೂ ತೆಲುಗಿನಲ್ಲಿ ಭಾಷಣ:
ಮೊನ್ನೆ ನಡೆದ ಮರುಚುನಾವಣೆಯ ಪ್ರಚಾರಕ್ಕಾಗಿ ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡವು, ಅದಕ್ಕಾಗಿಯೇ ಹೊರರಾಜ್ಯದ ಚಲನಚಿತ್ರ ನಟ/ನಟಿಯರನ್ನು ಕರೆಸಿದ್ದವು. ಮತದಾರನನ್ನು ಓಲೈಸುವ ಭರದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮಾಡುತ್ತಿರುವ ತಪ್ಪುಗಳು ಮಾತ್ರ ಬಹಳ ದೊಡ್ಡದಾಗಿವೆ. ಬಂಗಾರ ಪೇಟೆಯಲ್ಲಿ ನಡೆದ ಉಪಚುನಾವಣೆಗಾಗಿ ನಡೆಸಿದ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ತೆಲಗು ಚಿತ್ರನಟ ಚಿರಂಜೀವಿಯನ್ನು ಬಳಸಿಕೊಂಡಿತ್ತು. ಅವರು ಸಹ ಭರ್ಜರಿಯಾಗಿ ತೆಲುಗಿನಲ್ಲಿ ಭಾಷಣ ಮಾಡಿ ಹೊರಟು ಹೋದರು. ಇದರಲ್ಲಿ ತಪ್ಪೇನು ಅಂತೀರಾ? ಮತದಾರನನ್ನು ಓಲೈಸುವ ಭರದಲ್ಲಿ ಕರ್ನಾಟಕದ ವಿವಿಧ ಭಾಷಿಕರಲ್ಲಿ ಒಡಕುಂಟು ಮಾಡಲಾಗುತ್ತಿದೆ. ಮೊನ್ನೆ ನಡೆದಿದ್ದು ಸಹ ಅದೇ, ಹಲವು ಶತಮಾನ ಅಥವಾ ಹಲವು ದಶಕಗಳಿಂದ ಇಲ್ಲಿ ನೆಲೆಸಿರುವ ತೆಲುಗು ಭಾಷಿಕರು ಕನ್ನಡದವರೇ ಆಗಿಹೋಗಿದ್ದಾರೆ. ಆದರೆ ನೀವು ತೆಲುಗರು ನೀವು ಕನ್ನಡಿಗರಲ್ಲಾ ಅಂತಾ ತೋರಿಸೋ ಪ್ರಯತ್ನಗಳೇ ಚಿರಂಜೀವಿ ಯಂತಹ ತೆಲುಗು ನಟರನ್ನು ಕರೆದುಕೊಂಡು ಬಂದು ಕರ್ನಾಟಕದಲ್ಲಿ ಭಾಷಣ ಮಾಡಿಸುವುದು. ಕರ್ನಾಟಕದ ಜನರನ್ನ ಓಲೈಸಲು ಆಂಧ್ರಪ್ರದೇಶದ ಕರಾವಳಿ ತೀರದ ಒಬ್ಬ ನಟ ಬಂದು ನೀವು ಕನ್ನಡಿಗರಲ್ಲಾ ಎಂದು ಸಂದೇಶ ನೀಡಿಸುವ ಕೆಲಸ ಮಾಡುತ್ತಿರುವ ಪಕ್ಷಗಳು ಮಾಡುತ್ತಿರುವುದಾದರು ಏನು ಅನ್ನೋದನ್ನ ತಾವೇ ಪ್ರಶ್ನಿಸಿಕೊಳ್ಳಲಿ.
ಹಾಗಂತ ಮತದಾರರೇನು ದಡ್ಡರಲ್ಲ, ಚಿರಂಜೀವಿ ಕೇವಲ ಒಬ್ಬ ನಟ ಅನ್ನೋ ಕಾರಣಕ್ಕೆ ಬಂದು ಸೇರುತ್ತಾರೆಯೇ ಹೊರತು, ಆವರು ಮಾಡುವ ತೆಲುಗು ಭಾಷಣ ಕೇಳಿ, ಕಾಂಗ್ರೆಸ್ ಪಕ್ಷಕ್ಕೆ ಓಟ್ ನೀಡುತ್ತಾರೆ ಅನ್ನೋದು ಹಾಸ್ಯಾಸ್ಪದ ಅನ್ನಿಸುತ್ತೆ. ನಮ್ಮ ರಾಜ್ಯದ ಏಳಿಗೆಯನ್ನೇ ಮರೆತಿರುವ ರಾಷ್ಟ್ರೀಯ ಪಕ್ಷಗಳು ಕನಿಷ್ಠ ಪಕ್ಷ ಸಾಮರಸ್ಯದಿಂದ ಬದುಕುತ್ತಿರುವ ಜನರನ್ನು ಭಾಷೆಯ ಹೆಸರಲ್ಲಿ ಒಡೆದು ಓಟ್ ಬ್ಯಾಂಕ್ ಗಳನ್ನಾಗಿ ಮಾಡದಿದ್ದರೆ ಅಷ್ಟರ ಮಟ್ಟಿಗೆ ಜನರಿಗೆ ಒಳಿತನ್ನ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳೋಣ.
ಕನ್ನಡಿಗ ಮೇಯರ್ ಗೆ ಚಪ್ಪಲಿ ತೋರಿಸಿದ್ದ ಮಹಿಳೆ ಈಗ ಬೆಳಗಾವಿ ಮೇಯರ್:
ಬಹುಷಃ ಇಂತಹ ಘಟನೆಗಳು ಕರ್ನಾಟಕದಲ್ಲಿ ಮಾತ್ರ ನಡೆಯುವುದಕ್ಕೆ ಸಾಧ್ಯ ಅನ್ನಿಸುತ್ತೆ. ಎಂಇಎಸ್ ನಂತಹ ಕೆಟ್ಟ ಸಂಘಟನೆ ಹಲವಾರು ದಶಕಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ತನ್ನ ಹಿತಾಸಕ್ತಿಗಾಗಿ ಕನ್ನಡ ಹಾಗೂ ಮರಾಠಿಗರಲ್ಲಿ ವಿಷದ ಬೀಜ ಬಿತ್ತುತ್ತಾ ಬಂದಿದೆ, ಇದರ ಜೊತೆ ಜೊತೆಗೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ತರಲೆ ಮಾಡುತ್ತಾ ತನ್ನ ಅಸ್ತಿತ್ವ ಕಾಪಾಡಿಕೊಂಡು ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರೇ ಸಂಘಟನೆಗಳು ನಡೆಸಿದ ನಿರಂತರ ಹೋರಾಟದಿಂದಾಗಿ ಎಂಇಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ. ಈ ಸಂಘಟನೆಗೆ ಸೇರಿದ ಕೆಲವು ಸದಸ್ಯರು ಈ ಸರ್ತಿಯ ಮಹಾನಗರ ಪಾಲಿಕೆಯಲ್ಲಿ ಗೆದ್ದು ಬಂದಿದೆ, ಗಮನಾರ್ಹ ಸಂಗತಿ ಎಂದರೆ ಈ ಸಂಖ್ಯೆ ತನ್ನ ಪಕ್ಷದ ಅಭ್ಯರ್ಥಿಯನ್ನು ಮೇಯರ್ ನನ್ನಾಗಿ ಮಾಡುವಷ್ಟು ದೊಡ್ಡದಲ್ಲ.
ಈ ಎಂಇಎಸ್ ಸಂಘಟನೆಯ ಮಹಿಳೆ ಈಗಾ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ವಿರೋಧವಿಲ್ಲದೆ ಆಯ್ಕೆಯಾಗಿದ್ದಾರೆ. ದುರಂತವೆಂದರೆ ಈ ಮಹಿಳೆ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ತಯಾರಿಯ ಸಭೆಯಲ್ಲಿ ಆಗಿನ ಮೇಯರ್ ಗೆ ಚಪ್ಪಲಿ ತೋರಿಸಿ, ಸಮ್ಮೇಳನ ನಡೆಸಬಾರದು ಎಂದು ತರಲೆ ಮಾಡಿದ್ದರು. ಎಂಇಎಸ್ ಸಂಘಟನೆಯ ಈ ಮಹಿಳೆ ಈಗ ಮೇಯರ್ ಆಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಾರಣ ಎಂಇಎಸ್ ಗೆ ತನ್ನ ಅಭ್ಯರ್ಥಿಯನ್ನು ಮೇಯರ್ ಮಾಡುವಷ್ಟು ಸಂಖ್ಯಾಬಲವಿಲ್ಲ, ಹಾಗಾಗಿ ನಮ್ಮ ರಾಜ್ಯದ ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಅಥವಾ ಅಲ್ಲಿನ ರಾಜಕೀಯ ನಾಯಕರ ಬೆಂಬಲವಿಲ್ಲದೆ ಮೇಯರ್ ಆಗೋದಕ್ಕೆ ಸಾಧ್ಯವಾ??? ಇದು ಬೆಳಗಾವಿ ಜಿಲ್ಲೆಯಲ್ಲಿ ಇರುವ ತಾಲುಕೂ ಹಾಗೂ ಜಿಲ್ಲಾ ಪಂಚಾಯತ್ ಗಳಲ್ಲಿ ಅಧಿಕಾರ ಸ್ಥಾಪಿಸಲು ರಾಜಕೀಯ ಪಕ್ಷಗಳು ಸಹಾಯ ಮಾಡಿರಬಹುದಾ ಅನ್ನೋದು ಪ್ರಶ್ನೆ?
ಇದೇ ಎಂಇಎಸ್ ಸಂಘಟನೆಯ ಬಗ್ಗೆ ಏಪ್ರಿಲ್ ೧೦ನೇ ತಾರೀಕು ವಿ.ಕ ದಲ್ಲಿ ಒಂದು ವರದಿ ಪ್ರಕಟವಾಗಿದೆ. ವರದಿಯ ಸಾರಾಂಶವೆಂದರೆ ಬೆಳಗಾವಿ ಜಿಲ್ಲೆಯಲ್ಲಿ ಮಾಡಲಾಗುತ್ತಿರುವ ಕಳಸಾ ನಾಲಾ ಯೋಜನೆಯ ಬಗ್ಗೆ ವರದಿ ತಯಾರಿಸಿ, ಗೋವಾ ಸರ್ಕಾರಕ್ಕೆ ನೀಡಿ ಯೋಜನೆ ಜಾರಿಗೆ ಬರದಂತೆ ತಡೆಯುವುದು. ಇಂತ ಹೀನ ಕೆಲಸಗಳಲ್ಲಿ ತೊಡಗಿರುವ ಎಂಇಎಸ್ ಸಂಘಟನೆಯಿಂದ ನಮ್ಮ ನಾಡಿಗೆ ಮಾರಕ. ಇಂತಹ ಸಂಘಟನೆಗಳೊಂದಿಗೆ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಹಾಗೂ ಮಹಾನಗರ ಪಾಲಿಕೆಯಲ್ಲಿ(??) ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ನಮ್ಮ ರಾಜ್ಯದ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥವನ್ನಲ್ಲದೇ ರಾಜ್ಯದ ಬಗ್ಗೆಯೂ ಒಂದಷ್ಟೂ ಕಾಳಜಿ ತೋರಿಸಬೇಕು. ಇಲ್ಲದಿದ್ದರೆ ಜನರೇ ಇವರಿಗೆಲ್ಲಾ ಸರಿಯಾಗಿ ಪಾಠ ಕಲಿಸುತ್ತಾರೆ ಅನ್ನೋದು ನಮ್ಮ ರಾಜಕೀಯ ಪಕ್ಷಗಳು ಅರಿತುಕೊಳ್ಳಬೇಕು.
Tumba chennagi barediddira chetan.
Neevu Helodu nija, nammanna aaluttiruva ee raajakeeya pakshagalinda adu raashtreeya pakshagalinda naavu enannau bayasodakke saadhyavilla. naadina hitavanna ee pakshagalu yaavagalo maretu bittive. eega bhaasheya hesaralli janara naduve odakanna untu maaduttive. idu kooda desha drohada kelasave annodu namma raajakeeya pakshagalige aarthavaagutilla.
ತುಂಬಾ ಚೆನ್ನಾಗಿ ಬರೆದಿದ್ದೀರಾ ಚೇತನ್,
ನೀವು ಹೇಳೋದು ನೂರಕ್ಕೆ ನೂರು ಸತ್ಯ. ನಮ್ಮ ರಾಷ್ಟ್ರೆಯಾ ಪಕ್ಷಗಳಿಂದ ನಮ್ಮ ನಾಡಿಗೆ ಆಗುತ್ತಿವ ಒಳಿತು ಅಷ್ಟರಲ್ಲೇ ಇದೆ. ಈಗ ಭಾಷೆಯ ಹೆಸರಿನಲ್ಲಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ನಾಡಿನ ಜನರಲ್ಲಿ ವೈಷಮ್ಯವನ್ನು ಬಿತ್ತುತ್ತಿದ್ದಾರೆ. ನಮ್ಮ ನಾಡಿಗೆ ನಮ್ಮದೇ ಆದ ಒಂದು ಪ್ರಾದೇಶಿಕ ಪಕ್ಷದ ಅವಶ್ಯಕತೆ ಎಂದಿಗಿಂತ ಇಂದು ಪ್ರಚಲಿತವಾಗಿ ಕಾಣುತ್ತಿದೆ.
ಪ್ರಾದೇಶಿಕ ಪಕ್ಷದಿಂದ ಯಾವುದೇ ಪ್ರಯೋಜನ ಇಲ್ಲ!!!!!! ಮೊದಲು ನಾವು ಮತದಾರರು ಎಚ್ಚೆತ್ತು ಕೊಳ್ಳಬೇಕಾಗಿದೆ !!!! ಪ್ರಾದೇಶಿಕ ಪಕ್ಷದಲ್ಲಿರೋರು ಏನು ನಿಸ್ವಾರ್ಥಿಗಳಾ? ಅವರೂ ರಾಜಕೀಯದ ಕೆಟ್ಟ ಹುಳುಗಳೇ ಹೊರತು ಬೇರೇನಲ್ಲ !!!! ಮಾಮೂಲಿ ರಾಷ್ಟ್ರೀಯ ಪಕ್ಷಗಳಂತೆ !!!!
ಅದಕ್ಕಿರೋದು ಒಂದೇ ಒಂದು ದಾರಿ ನಾವು ಮತದಾರರು ಜಾಗೃತರಾಗಿ ನಮ್ಮ ಮತದಾನದ ಹಕ್ಕನ್ನು ಸಮರ್ಥವಾಗಿ ಚಲಾಯಿಸೋದು ,ಯಾವುದೇ ಪ್ರಲೋಭನೆ ,ಮತ್ತು ಪಕ್ಷಪಾತಿಯಾಗಿ ಯೋಚಿಸದೆ.!!!!!
ರವಿ ಕುಮಾರ್ ಅವರೇ,
ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರೂ, ರಾಷ್ಟ್ರೀಯ ಪಕ್ಷಗಳೇ ಅಖಾಡದಲ್ಲಿ ಇದ್ದರೆ, ಕನ್ನಡಿಗರಿಗೆ ಇದೇ ರೀತಿ ಅನ್ಯಾಯ ಆಗುತ್ತೆ.
ಏನೇ ಮಾಡಿದರೂ, ರಾಷ್ಟ್ರೀಯ ಪಕ್ಷಗಳು ಕನ್ನಡಿಗರ ಹಿತವನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳದಿದ್ದಾಗ, ಪ್ರಾದೇಶಿಕ ಪಕ್ಷಗಳೊಂದೆ ದಾರಿ ಅನ್ಸುತ್ತೆ.
@ರವಿ ಕುಮಾರ್,
ಪ್ರಾದೇಶಿಕ ಪಕ್ಷಗಳಿಂದ ಯಾವುದೇ ಪ್ರಯೋಜನವಿಲ್ಲ ಅನ್ನುವ ನಿಮ್ಮ ಮಾತು ತಪ್ಪು, ಇವತ್ತು ತಮಿಳುನಾಡು, ಓಡಿಸಾ, ಬಿಹಾರ ಮುಂತಾದ ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳಿಂದ ಏಳಿಗೆ ಕಾಣುತ್ತಿವೆ. ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಬೇಸತ್ತ ಅಲ್ಲಿಯ ಜನರು ಈಗ ಪ್ರಾದೇಶಿಕ ಪಕ್ಷಗಳ ಮೊರೆಹೊಗುತಿದ್ದರೆ ಅನ್ನೋದಕ್ಕೆ ಕೇಂದ್ರದಲ್ಲಿ ಆಗುತ್ತಿರುವ ಸಂಯುಕ್ತ ಸರ್ಕಾರವೇ ಸಾಕ್ಷಿ. ನಿಜ ಮತದಾರರು ಎಚ್ಹ್ಹೆತ್ತುಕೊಲ್ಲಬೇಕಾಗಿದೆ.
>>ಪ್ರಾದೇಶಿಕ ಪಕ್ಷದಲ್ಲಿರೋರು ಏನು ನಿಸ್ವಾರ್ಥಿಗಳಾ?
ಹಾಗಾದರೆ ರಾಷ್ಟ್ರೀಯ ಪಕ್ಷದಲ್ಲಿರುವವರು ನಿಸ್ವಾರ್ಥಿಗಳಾ? ಇತ್ತೀಚಿಗೆ ಹೊರಬರುತ್ತಿರುವ ಕಾಂಗ್ರೆಸ್ಸ್ ಹಾಗು ಬಿಜೆಪಿಯ ಹಗರಣಗಳ ಬಗ್ಗೆ ಏನು ಹೇಳುತ್ತಿರಿ?
ಮೊದಲಿಗೆ ಬದಲಾಗಬೇಕಾದ್ದು ಮನಸ್ಸು. ಅದು ಬದಲಾದರೆ ಎಲ್ಲವೂ ಬದಲಾಗಬಲ್ಲುದು. ಸುಮ್ಮನೆ ರಾಜಕೀಯ ಪಕ್ಷಗಳನ್ನು (ರಾಷ್ಟ್ರೀಯ, ಪ್ರಾದೇಶಿಕ) ದೂರುವುದರಿನ್ದ ಪ್ರಯೋಜನವಾಗದು. ಕನ್ನಡಿಗರ ಮನಸ್ಸು ಒಟ್ಟಾಗಿ ಬದಲಾಗುವುದು ಸಾಧ್ಯವಾದರೆ ಕನ್ನಡಿಗರಲ್ಲದವರೂ ಕನ್ನಡದಲ್ಲಿ ಮಾತನಾಡುವನ್ತೆ ಆಗಬಲ್ಲುದು. ರಾಜಕೀಯ ಪಕ್ಷಗಳ ಸದಸ್ಯರೆಲ್ಲರಿಗೂ ಕನ್ನಡವನ್ನು ಒಳಗೊಳ್ಳುವುದು* ಸಾಧ್ಯವಾದರೆ ರಾಜಕೀಯ ಪಕ್ಷಗಳೂ ಕನ್ನಡವನ್ನು ಒಳಗೊಳ್ಳುವನ್ತೆ ಆಗಬಲ್ಲುದು.ಕನ್ನಡಿಗರಲ್ಲದವರನ್ನು ಕನ್ನಡದಲ್ಲಿ ಮಾತನಾಡಿಸಿದರೆ ತಪ್ಪೇನು? ಹಾಗೆ ಮಾತನಾಡಿಸದಿರುವ ಕಾರಣದಿನ್ದಲೇ ಕನ್ನಡಿಗರಲ್ಲದ ನಟ/ ರಾಜಕಾರಣಿಗಳು ಕನ್ನಡ ಕಲಿಯಲಿಲ್ಲ.
ಕರ್ನಾಟಕದ ರಾಜಕಾರಣಿಗಳು ಇತರ ರಾಜ್ಯಗಳಿಗೆ ಹೋದರೆ ಕನ್ನಡದಲ್ಲಿ ಮಾತನಾಡುವುದು ಕಾಸರಗೋಡಿನಲ್ಲಿ ಮಾತ್ರ. [ಕೞೆದ ವಾರ ಅಂಬರೀಷ್, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ ಮುನ್ತಾದವರು ನಮ್ಮಲ್ಲಿಗೆ ಬನ್ದಿದ್ದರು.] ಆದರೆ ಕಾಸರಗೋಡಿನಲ್ಲಿ ಕನ್ನಡ ಮಾತನಾಡುವುದು ಬಂಗಾರ ಪೇಟೆಯಲ್ಲಿ ತೆಲುಗು ಮಾತನಾಡಿದ ಹಾಗಲ್ಲ ಎಂಬುದರ ಅಱಿವು ನನಗಿದೆ.
ಯಣ್ಡಮೂರಿ (ಸಾಹಿತಿ), ಚಿರಂಜೀವಿ(ನಟ) ಮುನ್ತಾದವರಿಗೆ ಕರ್ನಾಟಕದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದರೂ ಅವರು ಕನ್ನಡ ಕಲಿಯದಿರುವುದು ಅವರ ಆಸಕ್ತಿಯ ಕೊಱತೆಯಿನ್ದಾಗಿ ಎನ್ದರೆ ನಾನು ಒಪ್ಪೆನು. ತಮಿೞುನಾಡಿನಲ್ಲಿ ಕನ್ನಡದ ನಟ/ ರಾಜಕಾರಣಿಗಳು ತಮಿೞು ಕಲಿಯುವುದು ತಮಿೞಿನ ಪ್ರೀತಿಯಿನ್ದಾಗಿ ಎನ್ದರೆ ಪೆರಮೆಯಾದೀತು. *(ಭ್ರಮೆ)
*ಇವೆರಡು ಹೊಸ ಪ್ರಯೋಗಗಳು.
ನನ್ನ ಅನುಭವದಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನವರು ಇತರ ರಾಜ್ಯದವರನ್ನು ಅವರ ಭಾಷೆಯಲ್ಲಿಯೇ ಮಾತನಾಡಿಸಲು ಪ್ರಯತ್ನಿಸುತ್ತಾರೆ. ಕರಾವಳಿಯಲ್ಲಿಯೂ ಈಚೆಗೆ ಬೆಂಗಳೂರಿನ ಅನುಕರಣೆ ನಡೆಯುತ್ತಿದೆ. [ಒಳ್ಳೆಯದೆನ್ದು ಅನಿಸಿದ ವಿಷಯಗಳ ಅನುಕರಣೆ ತಪ್ಪಾಗದು]. ಇದು ಮೇಲಱಿಮೆಯೋ ಕೀೞಱಿಮೆಯೋ ನನಗೆ ತಿಳಿದಿಲ್ಲ. ಆದರೆ “ಒಳಗೊಳ್ಳುವ” ಪ್ರಯತ್ನ ಎಡೆಬಿಡದೆ ಸಾಗುತ್ತಿರಲಿ.