ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 14, 2011

1

ಅಗೋಚರ….!

‍ನಿಲುಮೆ ಮೂಲಕ

– ಜಿ.ವಿ ಜಯಶ್ರೀ

ಹೆಚ್ಚಾಗಿ ಪವಾಡಗಳು… ಪುರುಷರು… ಮಾಯಾ-ಮಂತ್ರ, ಭವಿಷ್ಯ ಮನುಷ್ಯರಿಗೆ ಇಷ್ಟ. ಯಾವ ಭಾಷೆಯಲ್ಲಿ ನೋಡಿದರು ಇಂತಹ ವಿಷಯಗಳಿಗೆ ಸಂಬಂಧಿಸಿದ ಕಥೆಗಳು , ಧಾರಾವಾಹಿಗಳು ಇದ್ದೆ ಇರುತ್ತದೆ. ಅದೊಂತರ ಸೀರಿಯಸ್ ವಿಷಯದ ಚರ್ಚೆ ಮಧ್ಯೆ ಸಣ್ಣ ಜಾಹಿರಾತು ಇದ್ದಂತೆ. ಬೇಕಾದವರು ನೋಡಬಹುದು ಬೇಡದೆ ಇದ್ದವರು ಬಿಸಾಡ ಬಹುದು.

ಹೆಚ್ಚು ಜನಪ್ರಿಯ ವ್ಯಕ್ತಿಗಳಲ್ಲಿ ಸಾಧು ಸಂತರು, ಬಾಬಗಳು ಸೇರುತ್ತಾರೆ. ಕಳೆದವಾರ ಅಣ್ಣ ಹಜಾರೆ ಅವರ ವಿಷಯದ ಜೊತೆಗೆ ಹೆಚ್ಚು ಚಾಲ್ತಿಯಲ್ಲಿ ಕಂಡ ಸಂಗತಿ ಪುಟ್ಟಪರ್ತಿ ಸಾಯಿ ಬಾಬ. ಅತ್ಯಂತ ಜನಪ್ರಿಯ ಬಾಬ ಅವರು, ಜೊತೆಗೆ ಅತ್ಯಂತ ವಿವಾದಿತ ಬಾಬ.

ಬಹುಸಂಖ್ಯಾತ ಉತ್ತರ ಭಾರತೀಯರು ಅವರ ಮನೆಯಲ್ಲಿ  ಇರುವ ಒಂದು ಚಂಬು ಪಕ್ಕದ ಮನೆಗೆ ಕೊಡಬೇಕಾದ್ರೂ ಸಾಯಿ ಬಾಬ ಅನುಮತಿ ಕೇಳ್ತಾರೆ ,ತಮಾಷೆ ಅಲ್ಲ ಕಣ್ರೀ ಅಷ್ಟೊಂದು ನಂಬಿಕೆ .ಏನೇ ಸಂಗತಿಗಳು ಇರಲಿ ಅವರು ಅತ್ಯಂತ ಹೆಚ್ಚು ಗಮನ ಸೆಳೆಯುವುದು ಸಮಾಜಮುಖಿ ಕೆಲಸಗಳಿಂದ.ಭಜನ್ ಮಾಡುವಾಗ ಸದಾ ಶಾಂತ ಸ್ಥಿತಿಯಲ್ಲಿರುವ ವದನ, ಆ ಮೌನ ಎಲ್ಲವೂ ಹೆಚ್ಚು ಆಕರ್ಷಣೆಯ  ಅಂಶ. ಅವರ ಭಜನ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು ಸಂತೋಷದಿಂದ ಹೊರ ಬರುತ್ತಾರೆ.

ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಫೋಟೋ ಮನೆಗಳಲ್ಲಿ ರಾರಾಜಿಸ್ತಾ ಇರುತ್ತದೆ. ನಮ್ಮಲ್ಲಿ ತುಂಬಾ ಮನೆಗಳಲ್ಲಿ ಇವರ ಫೋಟೋ ಕಂಡಿದ್ದೇನೆ. ಕಾರಣ ಏನು ಗೊತ್ತ? ಇವರ ಫೋಟೋ ಇದ್ರೆ ಬೇಗ ಶ್ರೀಮಂತರಾಗ ಬಹುದು! ಸಾಕಷ್ಟು ಸಂಗತಿಗಳು ನಗು ಬರಿಸಿದ್ರೂ ನಂಬುವವರ ಸಂಖ್ಯೆ ಹೆಚ್ಚಾಗಿ ಇರುವಾಗ ಬಾಬ ತಾನೇ ಏನು ಮಾಡಲು ಸಾಧ್ಯ.

ಸಮಾಜ ಸೇವೆ ವಿಷಯದಲ್ಲಿ ಸಾಯಿ ಬಾಬ ಅವರ ರೀತಿ ಭಿನ್ನ. ಹೀಗೆ ಒಬ್ಬ ಸಂತರ ಬಗ್ಗೆ ಹೇಳ್ತಾ ಇದ್ರೂ ,ಅವರ ಆಶ್ರಮಕ್ಕೆ ಅದೆಷ್ಟೋ ದುಡ್ಡು ಕೊಟ್ರೆ ( ಬಡವರು  ಕಡಿಮೆ ದುಡ್ಡಲ್ಲಿ ಆ ಫೆಲಿಸಿಟಿ ಪಡೆಯ ಬಹುದು ) . ಆದ್ರೆ ಅಲ್ಲಿ ನೀಡುವ ಸರ್ವೀಸ್ ಏನು ಇಲ್ಲ. ಬರಿ ದುಡ್ಡು ಪಡೆಯುವುದಷ್ಟೇ ಅವರ ಕೆಲಸ.

ಪುಟ್ಟಪರ್ತಿ ಅಂತಹ ಕಡೆ ಕೆಲವು ಸಂಗತಿಗಳು ನನಗೆ ಗೊತ್ತಿಲ್ಲ, ಆದ್ರೆ ಅಲ್ಲಿಗೆ ಹೋದಾಗ ತುಂಬಾ ಆಕರ್ಷಿಸುವುದು ಒಂದೇ ರೀತಿಯ ಕಟ್ಟಡಗಳು, ವಾಲೆ೦ಟೀರ್ಸ್ ಶಿಸ್ತುಬದ್ಧತೆ, ಅವರ ಕಾರ್ಯ ವೈಖರಿ ಇಂತಹ ಸಂಗತಿಗಳು ತುಂಬಾ ಇಷ್ಟ ಆಗುತ್ತದೆ.

ಅಂತಹ ಕ್ರಮಬದ್ಧತೆ ನಾನು ಇಸ್ಕಾನ್ ಮಂದಿರಗಳಲ್ಲಿ ಕಂಡಿದ್ದೇನೆ. ಪ್ರಾಯಶಃ ಅದೇ ಅವರ ಮೊಟ್ಟಮೊದಲ ಪ್ಲಸ್ ಪಾಯಿಂಟ್. ಯಾರು ಅವರ ಬಗ್ಗೆ ಏನೇ ಹೇಳಲಿ ಬರೆಯಲಿ,ಆದ್ರ ಅವರ ಬಗ್ಗೆ ಅಪಾರ ಸಂಖ್ಯೆಯ ಭಕ್ತರು ಇದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಮಯ ವಾಹಿನಿ , ಜನಶ್ರೀ ಪಾಸಿಟಿವ್ ಆಗಿ ವಿಷಯ ಪ್ರಸಾರ ಮಾಡಿತು. ಚರ್ಚೆಯು ಸಹ ಭಕ್ತರ  ಭಾವನೆಗಳಿಗೆ ನೋವಾಗುವಂತೆ ಇರಲಿಲ್ಲ. ಯಾಕೆ ಅಂದ್ರೆ ಇಲ್ಲಿ ನಾನು,ನನ್ನಂಹವರು ಅಪಾರ ಸಂಖ್ಯೆಯ  ಜನರು ಬಾಬ ಅವರ ಪವಾಡ ನಂಬಲ್ಲ ಆದರೆ ಅವರ ಆಡಳಿತ ರೀತಿಯನ್ನು ಗೌರವಿಸುತ್ತೇವೆ. ಇಂತಹ ಸಂಗತಿಗಳನ್ನು ಹೆಚ್ಚು ಎಚ್ಚರಿಕೆಯಿಂದ ವಾಹಿನಿಗಳು ನಿಭಾಯಿಸಿದರೆ ಒಳಿತು.
@@  ಟೀವಿ ನೈನ್ ವಾಹಿನಿಯ ಜೀವನಾಡಿ ಕಾರ್ಯಕ್ರಮಗಳಲ್ಲಿ ಒಂದು ಹೀಗೂ ಉಂಟೆ! ನಾರಾಯಣ ಸ್ವಾಮಿ ಕಾರ್ಯಕ್ರಮದಲ್ಲಿ ವಿಸ್ಮಯಗಳನ್ನೂ ಸಾಕಷ್ಟು ಸರ್ತಿ ವಿಪರೀತ ಎನ್ನುವಂತೆ  ತಿಳಿಸುತ್ತಾರೆ. ಕಳೆದವಾರ ಈ ಕಾರ್ಯಕ್ರಮದಲ್ಲಿ ನವ ಬೃಂದಾವನದ ಬಗ್ಗೆ ಕಾರ್ಯಕ್ರಮ ಪ್ರಸಾರಿಸಿದರು ನ್ಯಾನ್ಸಿ. ತುಂಗಭದ್ರ ನದಿಯ ನಡುಗದ್ದೆಯೊಂದರಲ್ಲಿ ಈ ಸ್ಥಳವಿದೆ. ಪ್ರಕೃತಿ ಪ್ರಿಯರಿಗೆ, ಭಕ್ತರಿಗೆ ಅತ್ಯಂತ ಪ್ರಿಯ ಅನ್ನಿಸುವ ವಾತಾವರಣ ಇಲ್ಲಿದೆ. ಆನೆಗೊಂದಿ ಯಲ್ಲಿ ಇರುವ ಈ ನವ ಬೃಂದಾವನ ದಲ್ಲಿ ಯತಿಗಳು ತಮ್ಮ ಶರೀರತ್ಯಾಗದ ಬಳಿಕ ಜೀವಂತ ರಾಗಿರುತ್ತಾರೆ ಎನ್ನುವ ನಂಬಿಕೆ ಇಲ್ಲಿನ ಪ್ರಧಾನ ಆಕರ್ಷಣೆ.ಇದು ಹಂಪೆಯ ಸಮೀಪದಲ್ಲಿದೆ.

ಜನರಿಗೆ  ಸಕಾರಾತ್ಮಕ ಅನುಭವಗಳು  ಆಗಿದೆ ನವ ಬೃಂದಾವನದಿಂದ . ನ್ಯಾನ್ಸಿ ಪ್ರಕಾರ ( ಸ್ಥಳೀಯರ  ನಂಬಿಕೆ  ) ನಾನ ಆಕಾರದ ಬೆಳಕು  ಪ್ರಜ್ವಲಿಸುತ್ತದೆ ಆ ಬೆಳಕಿಗಾಗಿ ನಾವು ಟೀವಿ ನೈನ್ ಹೀಗೂ ಉಂಟೆ ಮಂದಿ ನಿರಂತರವಾಗಿ ಮೂರು ದಿನಗಳ ಕಾಲ ಹಗಲು ಇರುಳು ಎನ್ನದೆ ಕಾದಿದ್ದೆವು ಆದರೆ ನಮಗೆ ಆ ಬೆಳಕು ಕಾಣಲೇ ಇಲ್ಲ ಎನ್ನುವ ಅರ್ಥದಲ್ಲಿ ಕಾರ್ಯಕ್ರಮಕ್ಕೆ ಅಂತಿಮ ಹಾಡಿದರು.

ಇಲ್ಲಿ ಒಂಬತ್ತು ಮಹಾನ್ ಯತಿಗಳ ಬೃಂದಾವನ ಇದೆ.  ಅಲ್ಲಿರುವ ಯತಿಗಳು ಶ್ರೀ ಶ್ರೀ ಪದ್ಮನಾಭ ತೀರ್ಥರು. ಶ್ರೀ ಶ್ರೀ ಜಯತೀರ್ಥ / ರಘುವರ್ಯ ತೀರ್ಥರು , ಶ್ರೀ ಶ್ರೀಕವೀಂದ್ರ ತೀರ್ಥರು, ಶ್ರೀ ಶ್ರೀವಾಗೀಶ ತೀರ್ಥರು, ಶ್ರೀ ಶ್ರೀವ್ಯಾಸರಾಜ ತೀರ್ಥರು, ಶ್ರೀ ಶ್ರೀ ಶ್ರೀನಿವಾಸ ತೀರ್ಥರು, ಶ್ರೀ ಶ್ರೀರಾಮ ತೀರ್ಥರು, ಶ್ರೀ ಶ್ರೀಸುಧೀಂದ್ರ ತೀರ್ಥರು, ಶ್ರೀ ಶ್ರೀಗೋವಿಂದ ಒಡೆಯರು .
ಇವರನ್ನು ಅಪಾರ ಸಂಖ್ಯೆಯಲ್ಲಿ ನಂಬಿರುವವರು ತಮಿಳುನಾಡಿನ ಸ್ಥಳೀಯ ವರ್ಗ. ಅಲ್ಲಿಂದ ಅವರುಗಳು ಈ ಯತಿಗಳ ದರ್ಶನಕ್ಕೆ ಬರುತ್ತಾರೆ.ಅಲ್ಲಿನ ಸ್ಥಳೀಯರಿಯರಿಗೆ ತಮಿಳು ಭಾಷೆಯು ಚೆನ್ನಾಗಿ ಗೊತ್ತು.ತಮಿಳುನಾಡಿನ ಉದ್ಯಮಿ ಒಬ್ಬರಿಗೆ  ಬೃಂದಾವನದ ದರ್ಶನದಿಂದ ಒಳ್ಳೆಯದಾಯಿತಂತೆ. ಆ ಕಾರಣದಿಂದ ಅವರು ತಮ್ಮವರ  ಬಳಿ  ಅನುಭವ ಹಂಚಿಕೊಂಡ ಪರಿಣಾಮ ಅದು ಹೆಚ್ಚು ಜನಪ್ರಿಯ ಆಯಿತು ತಮಿಳುನಾಡಿನಲ್ಲಿ .
ಬೃಂದಾವನದ ಸುತ್ತಲು ಒಂದು ಹಳದಿ ಪಟ್ಟೆ ಹಾಕಿದ್ದಾರೆ. ಅದನ್ನು ದಾಟಬಾರದು ಎನ್ನುವ ನಿಯಮವಿದೆ. ಅಲ್ಲಿ ಒಂಬತ್ತು ತುಪ್ಪದ ದೀಪ ರಂಗನಾಥ ದೇಗುಲದಲ್ಲಿ  ಇಡ ಬೇಕು, ಎರಡು ಆಂಜನೇಯನ ಮುಂದೆ ಇಡ ಬೇಕು, ಬೃಂದಾವನಕ್ಕೆ ಒಂಬತ್ತು ಬಾರಿ ಪ್ರದಕ್ಷಿಣೆ  ಹಾಕಬೇಕು. ಈ ರೀತಿ ಅನೇಕ ಉತ್ತಮ ಅಂಶಗಳು ಇವೆ.
ಅವುಗಳ ಬಗ್ಗೆ ನ್ಯಾನ್ಸಿ ಹೇಳ ಬಹುದಿತ್ತು.

ಬೆಳಕಿಗೆ ಅವರು ಕಾಯುವುದರಲ್ಲಿ ತಪ್ಪಿಲ್ಲ ಬಿಡಿ,ಯಾಕೆ ಅಂದ್ರೆ ಕಾರ್ಯಕ್ರಮವೇ  ಹೀಗೂ ಉಂಟೆ ಅಲ್ವೇ. ಆದ್ರೆ ಅವರು ನಿರೀಕ್ಷಿಸಿದಂತೆ  ಕ್ಯಾಮರ ಕಣ್ಣಿಗೆ ಕಾಣಲು ಅದೇನು ಶಬರಿ ಮಲೆಯಲ್ಲಿ ಕಂಡ ಅಯ್ಯಪ್ಪ ಸ್ವಾಮಿ ಬೆಳಕಲ್ಲ. ಏನೋ ಅತೀತವನ್ನು ತೋರಿಸುವ ಪ್ರಯತ್ನದಲ್ಲಿ ಹುಂಬರಾಗುವ ಬದಲು ಆ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವೀಕ್ಷಕರು  ಹೋಗುವುದಕ್ಕೆ ಪುಟ್ಟ ಮಾಹಿತಿ ನೀಡಿದ್ದಿದ್ದರೆ ಚೆನ್ನಾಗಿತ್ತು . ಕೆಲವು ಸತ್ಯಗಳು ಅಗೋಚರ ನ್ಯಾನ್ಸಿ…!

1 ಟಿಪ್ಪಣಿ Post a comment
  1. ಏಪ್ರಿಲ್ 16 2011

    ಇಲ್ಲದ ವಸ್ತುವನ್ನು ಇದೆ ಎನ್ನುವ ರೀತಿಯಲ್ಲಿ ರೋಚಕವಾಗಿ ಬಿಂಬಿಸುವ, ಟಿಆರ್ಪಿಗೋಸ್ಕರ ಕಥೆಗಳನ್ನು ಹೇಳುವ, ಅದಕ್ಕೆ ಜನರ ನಂಬಿಕೆಯ ತೇಪೆ ಹಾಕಿ,ಮುಸುಕಿನಲ್ಲಿ ಮರೆಯಾಗುವ ಸೀರಿಯಲ್ಗಳ ಬಗ್ಗೆ ನಿಮಗೆ ಅದೆಷ್ಟು ನಂಬಿಕೆಯೇ ನಾ ಕಾಣೆ. ನವ ಬೃಂದಾವನದ ಬಗ್ಗೆ ನಿಮಗಿರುವ ಧಾಮರ್ಿಕ ಕಳಕಳಿ ಅರ್ಥವಾಗುತ್ತದೆ. ಅದರ ಪರಿಪೂರ್ಣತೆಯನ್ನು ವಾಹಿನಿಯಿಂದ ಬಯಸುವುದು ತಪ್ಪಾಗುತ್ತದೆ.
    ಪುಟಪತರ್ಿ ಬಾಬಾ ಅವರ ಬಗ್ಗೆ ನಿಮಗಿರುವ ನಂಬಿಕೆಯ ಬಗ್ಗೆ ನಮ್ಮದೂ ಸಹಮತವಿದೆ. ಅವರ ಪವಾಡ ಮತ್ತಿತರ ವಿಚಾರಗಳಲ್ಲಿ ಅಸ್ಪಷ್ಟತೆ ಇದ್ದರೂ ಬಾಬಾರ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು. ಈ ನಿಟ್ಟಿನಲ್ಲಿ ಅವರು ತೋರಿದ ದಾರಿ ಅನುಕರಣೀಯವಾದದ್ದು ಎಂದರೆ ಆಶ್ಚರ್ಯವಿಲ್ಲ.

    ಗೌರಿಪುರ ಚಂದ್ರು

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments