ಬೃಹತ್ ಬ್ರಹ್ಮಾಂಡದ ವಿರುದ್ಧ ಆಂದೋಲನದ ನೀಲನಕ್ಷೆ…

ವರ್ಷದ ತೊಡಕು ಮಾಡಬೇಡಿ, ಜೀವನವೆಲ್ಲ ತೊಡಕು ಆಗಿಬಿಡುತ್ತದೆ ಎಂದು ಈ ಸ್ವಾಮಿ ಮಾಂಸಾಹಾರಿಗಳನ್ನು ಹೆದರಿಸಿದರು. ಈತನ ಮಾತು ಕೇಳಿ ಎಷ್ಟು ಮಂದಿ ವರ್ಷದ ತೊಡಕು ಆಚರಿಸಿದರೋ, ಬಿಟ್ಟರೋ ಗೊತ್ತಿಲ್ಲ. ಆದರೆ ಬೀದಿಬೀದಿಯಲ್ಲಿ, ಮಾಂಸದಂಗಡಿಗಳಲ್ಲಿ ಈತನ ಸಹಸ್ರ ನಾಮಾರ್ಚನೆಯಂತೂ ನಡೆದ ಮಾಹಿತಿಯಿದೆ. ಮಾಂಸಾಹಾರ ಮಾಡಬೇಕೋ ಬೇಡವೋ ಎಂದು ಯುಗಾದಿ ಮರುದಿನ ಗಂಡಸರು-ಹೆಂಗಸರು ಮನೆಮನೆಯಲ್ಲಿ ಜಗಳವಾಡಿಕೊಂಡ ಮಾಹಿತಿಗಳೂ ಇವೆ.
ಬ್ರಹ್ಮಾಂಡ ಸ್ವಾಮಿಯೂ ಸೇರಿ ಎಲ್ಲ ಕಪಟ ಜ್ಯೋತಿಷಿಗಳನ್ನು ದೂರವಿಡಿ ಎಂದು ಎಲ್ಲ ಟಿವಿ ಚಾನಲ್ಗಳನ್ನೂ ಒತ್ತಾಯಿಸುವ, ಒತ್ತಡ ಹೇರುವ ಕೆಲಸಕ್ಕೆ ಇದು ಸಕಾಲ. ‘ಕಪಟ ಜ್ಯೋತಿಷಿಗಳನ್ನು ಟಿವಿ ಚಾನಲ್ಗಳಿಂದ ಓಡಿಸಿ ಎನ್ನುವ ಅಭಿಯಾನ ಆರಂಭಿಸೋಣ. ಏನೇನು ಮಾಡಬಹುದು ಎಂಬುದನ್ನು ನಿಮ್ಮ ಪ್ರತಿಕ್ರಿಯೆಗಳಿಂದಲೇ ಪಡೆದು ಇಲ್ಲಿ ಪಟ್ಟಿ ಮಾಡಿದ್ದೇವೆ. ಮತ್ತೆ ಮತ್ತೆ ನಿಮ್ಮ ಸಹಕಾರ ಯಾಚಿಸುತ್ತೇವೆ.
೧. ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿರುವ ನರೇಂದ್ರ ಸ್ವಾಮಿ ಈಗಾಗಲೇ ಲಕ್ಷಾಂತರ ಅಮಾಯಕ, ಮುಗ್ಧ ಜನರನ್ನು ದಾರಿ ತಪ್ಪಿಸಿದ್ದಾರೆ. ಹೆಣ್ಣು ಮಕ್ಕಳ ಉಡುಪು, ನಡವಳಿಕೆ, ಉದ್ಯೋಗ ಇತ್ಯಾದಿ ಎಲ್ಲ ವಿಷಯಗಳಲ್ಲೂ ಮೂಗು ತೂರಿಸಿ, ಅವರ ಆತ್ಮಸ್ಥೆರ್ಯವನ್ನು ಉಡುಗಿಸುವ ಯತ್ನ ನಡೆಸಿದ್ದಾರೆ. ಕೆಲವು ಹಿಂದುಳಿದ ಜಾತಿಗಳ ವಿಷಯದಲ್ಲೂ ಲಘುವಾಗಿ ಮಾತನಾಡಿ ಅವರ ಮನ ನೋಯಿಸಿದ್ದಾರೆ. ಈತ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದೆ, ಪ್ರಳಯ, ಸುನಾಮಿ, ಭೂಕಂಪ ಇತ್ಯಾದಿಗಳ ಕುರಿತು ಲಂಗು ಲಗಾಮಿಲ್ಲದಂತೆ ಮಾತನಾಡುತ್ತ ರಾಜ್ಯದ ಜನರನ್ನು ಮೌಢ್ಯದ ಅಂಧಕಾರಕ್ಕೆ ತಳ್ಳುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ದಯಮಾಡಿ ಈ ಕಾರ್ಯಕ್ರಮದ ಪ್ರಸಾರವನ್ನು ನಿಲ್ಲಿಸಿ ಎಂದು ನಾವು ಜೀ ಟಿವಿ ಸಂಸ್ಥೆಯವರಿಗೆ ಮನವಿ ಮಾಡೋಣ. ಎಷ್ಟು ಜನರು ಸಾಧ್ಯವೋ ಅಷ್ಟು ಜನರು ಈ ಪತ್ರ ಚಳವಳಿಯಲ್ಲಿ ಪಾಲ್ಗೊಳ್ಳಬಹುದು. ಬರೆಯುವಾಗ ನಮ್ಮ ಭಾಷೆ ಸಭ್ಯವಾಗಿರಲಿ, ಕನ್ವಿನ್ಸಿಂಗ್ ಆಗಿರಲಿ ಎಂಬುದು ವಿನಂತಿ.
ಜೀ ಟಿವಿಯ ಇಮೇಲ್ ವಿಳಾಸ ಈ ಕೆಳಕಂಡಂತಿದೆ.
feedbackzeekannada@zeenetwork.com
ಜೀ ಟಿವಿಯ ವಿಳಾಸ ಈ ಕೆಳಕಂಡಂತಿದೆ.
ZEE KANNADA
#39 United Mansions,
3rd Floor, M.G.Road,
Bengalooru – 560 001
Tel: +91 – 80 – 66109999
Fax: +91 – 80 – 2555 9432
೨. ಬ್ರಹ್ಮಾಂಡ ಕಾರ್ಯಕ್ರಮದಿಂದ ನಾಗರಿಕ ಸಮಾಜದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ವಿವರಿಸಿ ರಾಜ್ಯದ ಪ್ರಮುಖ ಸಂಘಟನೆಗಳಿಗೆ ಒಂದು ಪತ್ರ ಬರೆದು, ಈ ಬಗ್ಗೆ ವ್ಯಾಪಕ ಮಾಹಿತಿ ಹಂಚುವ ಕಾರ್ಯವನ್ನು ಮಾಡೋಣ. ಈ ಕೆಲಸವನ್ನು ಸಂಪಾದಕೀಯವೇ ಮಾಡುತ್ತದೆ. ಇತರರೂ ಸಹ ತಮಗೆ ಗೊತ್ತಿರುವ ಸಂಘಟನೆಗಳ ಮುಖಂಡರಿಗೆ ಈ ವಿಷಯವನ್ನು ಹರಡಿದರೆ ಅನುಕೂಲವಾಗುತ್ತದೆ.
೩. ನರೇಂದ್ರ ಶರ್ಮ ನಡೆಸುವ ಸಾರ್ವಜನಿಕ ಸಂವಾದ ಕಾರ್ಯಕ್ರಮಗಳಿಗೆ ತೆರಳಿ ಅಲ್ಲಿ ಪ್ರತಿಭಟಿಸುವ ಸಲಹೆಯನ್ನು ಹಲವರು ನೀಡಿದ್ದಾರೆ. ಇದು ಒಳ್ಳೆಯ ನಡೆಯಾಗಬಹುದು. ನರೇಂದ್ರ ಶರ್ಮ ಜತೆ ಬಹಿರಂಗ, ನೇರಪ್ರಸಾರ ಮುಕ್ತ ಸಂವಾದಕ್ಕಾಗಿ ನಾವು ಜೀ ಟಿವಿಯವರನ್ನು ಕೋರಬಹುದು. ಒಂದು ವೇಳೆ ಅಂಥ ಅವಕಾಶವನ್ನು ಅವರು ನೀಡಿದರೆ, ನರೇಂದ್ರ ಸ್ವಾಮಿಯವರ ನಿಜಬಣ್ಣವನ್ನು ಬಯಲು ಮಾಡಬಹುದು.
೪. ಈ ಕಾರ್ಯಕ್ರಮದಿಂದ ಆಗುತ್ತಿರುವ ಅನಾಹುತಗಳ ಕುರಿತು ವಿವರಿಸಿ, ಕಾರ್ಯಕ್ರಮ ಸ್ಥಗಿತಗೊಳಿಸಲು ರಾಜ್ಯ-ಕೇಂದ್ರ ಸರ್ಕಾರಗಳಿಗೆ, ಗೃಹ-ವಾರ್ತಾ ಇಲಾಖೆಗಳಿಗೆ, ಪ್ರಸಾರ ಭಾರತಿ, ಪ್ರೆಸ್ ಕೌನ್ಸಿಲ್ಗೆ ಮತ್ತು ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರ ಬರೆಯೋಣ.
೪. ಪತ್ರಿಕೆಗಳಲ್ಲಿ ಈ ಕುರಿತು ಲೇಖನಗಳನ್ನು ಬರೆಯುವ ಮೂಲಕ ಎಚ್ಚರ ಮೂಡಿಸಬಹುದು ಎಂಬುದು ಹಲವರ ಅಭಿಪ್ರಾಯ. ಆ ಕೆಲಸವನ್ನೂ ನಾವು ಮಾಡುತ್ತ ಹೋಗೋಣ. ಈಗಾಗಲೇ ಹಲವು ಪತ್ರಿಕೆಗಳಲ್ಲಿ ಈ ಕುರಿತು ಲೇಖನಗಳು ಬಂದಿವೆ. ಜತೆಗೆ ಬ್ಲಾಗರ್ಗಳೂ ಸಹ ಈ ಕುರಿತು ಲೇಖನಗಳನ್ನು ಬರೆಯಲು ವಿನಂತಿಸುತ್ತೇವೆ. ಈಗಾಗಲೇ ಬರೆದಿರುವವರು ತಮ್ಮ ಬ್ಲಾಗ್ಗಳ ಕೊಂಡಿಯನ್ನು ನೀಡಿದರೆ ಅನುಕೂಲವಾಗುತ್ತದೆ.
೫. ಈ ಅವೈಜ್ಞಾನಿಕ ಕಾರ್ಯಕ್ರಮಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ವಕೀಲರನ್ನು ಸಂಪರ್ಕಿಸುವ ಕೆಲಸವನ್ನೂ ಆರಂಭಿಸೋಣ.
೬. ಆನ್ಲೈನ್ ಪಿಟಿಷನ್ ಒಂದನ್ನು ಮಾಡುವ ಕುರಿತು ನಮ್ಮ ಓದುಗರು ಹೇಳಿದ್ದಾರೆ. ಇದೂ ಸಹ ಉಪಯುಕ್ತ ಸಲಹೆ. ಈ ಹಿಂದೆ ಇಂಥ ಆನ್ ಲೈನ್ ಪಿಟಿಷನ್ ಗಳನ್ನು ಮಾಡಿದವರು ಸಹಕಾರ ನೀಡಲು ಮನವಿ.
೭. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ದೂರು ದಾಖಲಿಸುವ ಸಲಹೆಯೂ ಬಂದಿದೆ. ಈತ ಪ್ರಳಯದ ಭೀತಿಯನ್ನು ಹರಡುತ್ತಿರುವ ಪ್ರವಚನಗಳಿರುವ ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಪಡೆದು ನಾವು ಸುಲಭವಾಗಿ ಈ ಕೆಲಸವನ್ನು ಮಾಡಬಹುದು.
೮. ಚಾನಲ್ ಮುಂಭಾಗ ಪ್ರತಿಭಟನೆ ಮಾಡುವ ಸಲಹೆಯೂ ಬಂದಿದೆ. ಇದು ಅತ್ಯಂತ ಅನಿವಾರ್ಯವಾದ ಕ್ರಿಯೆ. ಮೊದಲ ಹಂತದ ಎಲ್ಲ ಪ್ರಯತ್ನಗಳೂ ವಿಫಲವಾದರೆ ಇದನ್ನೇ ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ.
೯. ನಾವು ನಡೆಸುವ ಎಲ್ಲ ಚಟುವಟಿಕೆಗಳನ್ನು ಪರಸ್ಪರರ ಗಮನಕ್ಕೆ ತರುವ ದೃಷ್ಟಿಯಿಂದ ಫೇಸ್ಬುಕ್ ನಲ್ಲಿ ಒಂದು ಗುಂಪನ್ನು ಸೃಷ್ಟಿಸಿ, ಅದರಲ್ಲೇ ಈ ಸಂಬಂಧದ ಎಲ್ಲ ಮಾಹಿತಿಗಳನ್ನು ಶೇರ್ ಮಾಡೋಣ. ಕಪಟ ಜ್ಯೋತಿಷಿಗಳನ್ನು ಟಿವಿ ಚಾನಲ್ ಗಳಿಂದ ಓಡಿಸಿ ಎಂದು ಈ ಗುಂಪಿಗೆ ಹೆಸರಿಡಲು ಯೋಚಿಸಿದ್ದೇವೆ. ಇದಕ್ಕಿಂದ ಪರಿಣಾಮಕಾರಿಯಾದ ಹೆಸರನ್ನು ಯಾರಾದರೂ ಸೂಚಿಸಿದರೆ ಅದನ್ನು ಬಳಸಬಹುದು. ಈ ಗುಂಪಿಗೆ ಎಷ್ಟು ಸಾಧ್ಯವೋ ಅಷ್ಟು ಜನರನ್ನು, ತಮ್ಮ ಎಲ್ಲ ಗೆಳೆಯ-ಗೆಳತಿಯರನ್ನು ಸೇರಿಸಿದರೆ ಹೆಚ್ಚು ಮಂದಿಯನ್ನು ನಾವು ತಲುಪಬಹುದು.
೧೦. ಫೇಸ್ಬುಕ್ನ ಗೆಳೆಯರಿಗೆ ಒಂದು ವಿನಂತಿ. ಸಾಕಷ್ಟು ಮಂದಿ ನಮ್ಮ ಎಲ್ಲ ಪೋಸ್ಟ್ಗಳನ್ನು ಕಾಳಜಿಯಿಂದ ನಿಮ್ಮ ವಾಲ್ನಲ್ಲಿ, ವಿವಿಧ ಗ್ರೂಪ್ಗಳಲ್ಲಿ ಶೇರ್ ಮಾಡುತ್ತ ಬಂದಿರುವುದನ್ನು ನಾವು ಗಮನಿಸಿದ್ದೇವೆ. ನಾವು ವಿನಂತಿಸದೆಯೇ ನೀವು ಅದನ್ನು ಮಾಡುತ್ತಾ ಬಂದಿದ್ದೀರಿ. ಈ ಬಾರಿ ಈ ಪೋಸ್ಟ್ ಅನ್ನು ಹೆಚ್ಚು ಜನರಿಗೆ ತಲುಪಿಸುವ ದೃಷ್ಟಿಯಿಂದ ನಿಮ್ಮ ನಿಮ್ಮ ಫೇಸ್ಬುಕ್ ಮತ್ತು ನೀವು ಒಳಗೊಂಡಿರುವ ಗ್ರೂಪ್ ಗಳಲ್ಲಿ ಶೇರ್ ಮಾಡಿ ಎಂದು ವಿನಂತಿಸುತ್ತೇವೆ. ಹಾಗೆಯೇ ಇತರ ಸಾಮಾಜಿಕ ತಾಣಗಳನ್ನು ಬಳಸುವವರೂ ಸಹ ಈ ಲೇಖನವನ್ನು ಹೆಚ್ಚು ಜನರಿಗೆ ತಲುಪಿಸಬೇಕೆಂದು ವಿನಂತಿಸುತ್ತೇವೆ.
ಇದಿಷ್ಟು ಸದ್ಯದ ಆಲೋಚನೆಗಳು. ಇನ್ನಷ್ಟನ್ನು ನೀವು ಸೇರಿಸಬಹುದು. ಏನೇನು ಪ್ರಗತಿ ಆಗಿದೆ ಎಂಬುದನ್ನು ನಿರಂತರವಾಗಿ ನಿಮ್ಮ ಗಮನಕ್ಕೆ ತರುತ್ತಾ ಬರುತ್ತೇವೆ. ವಿಶ್ವಾಸವಿರಲಿ.
ನಿಲುಮೆಯ ಒಳ್ಳೆಯ “ನಿಲುಮೆ“ಗೆ ಸದಾ ನನ್ನ ಸ್ವಾಗತವಿದೆ…
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಕಳ್ಳ್ ಮುಂಡೇವು ನನ್ನ ಬಗ್ಗೆ ಏನೇನೋ ಮಾತಾಡ್ತವೆ.
ನಿಮ್ಮೆಲ್ಲರ ಜಾತಕ ನೋಡಿದ್ದೇನೆ. ನಿಲುಮೆಯ ಜಾತಕನೂ ನೋಡಿದ್ದೇನೆ. ನಿಮ್ಮ ವಿನಾಶ ಬಹಳ ಸನಿಹದಲ್ಲಿದೆ.
ನಾನು ದೇವಿಯ ಮಾನಸ ಪುತ್ರ. ದೇವಿ ತನ್ನೆಲ್ಲಾ ಅಪಾಯಿಂಟುಮೆಂಟುಗಳನ್ನು ಕ್ಯಾನ್ಸಲ್ ಮಾಡಿ ಬಂದು ನಿಮ್ಮ ಐಪಿ ಅಡ್ರೆಸ್ ಬ್ಲಾಕ್ ಮಾಡ್ತಾಳೆ.
ನಿಲುಮೆ ಓದುವ ಎಲ್ಲರ ಮನೇಲೂ ಇಂಟರ್ ನೆಟ್ಟು ಇದೇ ಮೇ ೨ ರಂದು ಬ್ಲಾಕ್ ಆಗಿ ಹೋಗ್ತವೆ.
ಯಾವ ಮುಂಡೇವು ಪ್ಯಾಂಟು ಹಾಕುವುದನ್ನು ಬಿಟ್ಟು ಪಂಜೆ ಹಾಕಿಕೊಂಡು ಅಡ್ಡಾಸುತ್ತವೋ ಅವುಗಳ ಐಪಿ ಅಡ್ರೆಸ್ಸು ಮಾತ್ರ ಬ್ಲಾಕ್ ಆಗುವುದಿಲ್ಲ,
ಇದು ಸತ್ಯ ಇದು ಸತ್ಯ ಇದು ಸತ್ಯ ಬರೆದಿಟ್ಟುಕೊಳ್ಳಿ!
ಹ್ಹ ಹ್ಹ
ಪ್ರಳಯ ಆದ್ರೆ ನಮ್ ಜೊತೆ ನೀವೂ ಸಹ ಬರ್ತಿರ ಅನ್ನೋದೆ ಸಂತೋಷದ ವಿಸ್ಯ ಅಲ್ವಾ ಸ್ವಾಮ್ಗಳೇ? 😉
nannadu saath ide………….
ಲಗಾಮಿಲ್ಲದ ನಾಲಗೆಯಲ್ಲಿ ಮಾತಾಡುವ ಈ ಜ್ಯೋತಿಷಿ(?) ವಿರುದ್ಧ ಬರೆದದ್ದು ಒಳ್ಳೇದಾಯಿತು. ಧನ್ಯವಾದಗಳು.
ನಿಮ್ಮ ಜೊತೆಯಲ್ಲಿ ಇಡಿ ಸಮಾಜ ಜೊತೆಯಲ್ಲಿದೆ .
ಯಾಕೆ ಸ್ವಾಮೀ ಕೊಚ್ಚೆ ಮೇಲೆ ಕಲ್ಲು ಹಾಕುತ್ತೀರಿ? ರಾಡಿ ನಮ್ಮ ಮೇಲೆ ತಾನೇ ಬೀಳೋದು! ಏನೋ ಕಥೆ ಹೇಳಿಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ. ಬಿಟ್ಟು ಬಿಡಿ. ಜನ ಇಷ್ಟರಲ್ಲೇ ಅವರ ಜ್ಞಾನದ ಮಟ್ಟ ಅಳೆದು ನೋಡಿರುತ್ತಾರೆ.
gud………..