ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 27, 2011

22

‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು

by ನಿಲುಮೆ

ಅರೆಹೊಳೆ ಸದಾಶಿವರಾಯರು

ಫೇಸ್ ಬುಕ್‌ನಲ್ಲಿ ಒಂದು ಸಾಲು ಓದಿದೆ. ‘ಮ್ಯಾಜಿಷಿಯನ್’ ಸತ್ಯ ಸಾಯಿಬಾಬಾ ಇನ್ನಿಲ್ಲ ಎಂದು ಒಬ್ಬರು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಮುಂದುವರಿಯುತ್ತಾ, ಈ ಸತ್ಯಸಾಯಿಬಾಬಾ ಎಂಬ ಜಾದೂಗಾರನನ್ನು ಕೇವಲ ಮಾಧ್ಯಮಗಳು ಈ ಮಟ್ಟಿಗೆ ದೇವಮಾನವನನ್ನಾಗಿ ಮಾಡಿವೆ ಎಂದೂ ಸೇರಿಸಿಕೊಂಡಿದ್ದರು.
ಮೊದಲಾಗಿ ಮಾನವ ಎಂದರೆ ಏನು ಎಂಬತ್ತ ಗಮನ ಹರಿಸಬೇಕು. ಅದಕ್ಕೂ ಮೊದಲಾಗಿ ಒಂದು ವಿಷಯ ಸ್ಪಷ್ಟೀಕರಣದೊಂದಿಗೇ ಲೇಖನ ಆರಂಭಿಸಬೇಕು. ಅದೆಂದರೆ ನಾನು ಸಾಯಿ ಬಾಬಾ ಅವರ ಭಕ್ತನೂ ಅಲ್ಲ ಮತ್ತು ಅವರ ಪವಾಡಗಳ ಕುರಿತು ಪರ-ವಿರೋಧ ಎಂದು ಹೇಳಿಕೊಳ್ಳುವಷ್ಟು, ಜ್ಞಾನಿಯೂ ಅಲ್ಲ. ಆ ಮಟ್ಟಿಗೆ ಈ  ವಿಷಯದಲ್ಲಿ ನಾನು ತಟಸ್ಥ. ಇನ್ನು ಮಾನವ ಎಂದರೆ…..!. ಜೀವಂತ ಇರುವ ಎಲ್ಲವೂ ಮಾನವನಾಗುವುದಿಲ್ಲ ಅಥವಾ ಮನುಷ್ಯಗರ್ಭದಲ್ಲಿ ಜನಿಸಿದ ಎಲ್ಲರೂ ಮಾನವನಂತೆ ಬದುಕುವುದಿಲ್ಲ. ಪರಸ್ಪರರನ್ನು ಪ್ರೀತಿಸುತ್ತಾ ಸಾಧ್ಯವಾದಷ್ಟೂ ಜನರ ಬಳಿ, ಜನರನ್ನು ಗೌರವಿಸುತ್ತಾ ಬದುಕುವುದು ಮಾನವೀಯ ಧರ್ಮ ಎನಿಸುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜನಸೇವೆಯೇ ಜನಾರ್ದನ ಸೇವೆ ಎಂದುಕೊಂಡು, ಅಕ್ಷರಶ: ಅದನ್ನೇ ಪಾಲಿಸಿದರೆ ಆತ ಜನರ ಪಾಲಿಗೆ ಜನಾರ್ದನನಾಗುತ್ತಾನೆ;ದೇವತ್ವವನ್ನು ಪಡೆಯುತ್ತಾನೆ-ಸಾಯಿಬಾಬಾ ವಿಷಯದಲ್ಲಿಯೂ ಅದೇ ಆಗಿದೆ.
ಸಾಯಿಬಾಬಾ ಪವಾಡ ಮಾಡುತ್ತಾರೋ ಇಲ್ಲವೋ ಅದು ಬೇರೆ ವಿಷಯ. ಆದರೆ ಮಾನವೀಯತೆಯ ಮಾತು ಬಂದಾಗ ಬಹುಶ: ಅವರು ಲೋಕಕಲ್ಯಾಣದ ವಿಶೇಷ ಅವತಾರಿಯಂತೆ ಕಂಡು ಬಂದರೆ ಅಚ್ಚರಿಇ ಲ್ಲ. ಅವರ ಪ್ರಶಾಂತಿ ನಿಲಯ ಹಲವು ಕುತೂಹಲಕಾರಿ ಘಟನೆಗಳಿಂದ ಠೀಕೆಗಳಿಗೊಳಗಾಗಿದ್ದೂ ಸುಳ್ಳಲ್ಲ. ಅವೆಲ್ಲವೂ ಒಂದು ರೀತಿಯಲ್ಲಿ ಕಪ್ಪು ಚುಕ್ಕೆಗಳೇ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಪುಟ್ಟ ಪರ್ತಿಯಂತ ಹಳ್ಳಿಯನ್ನು ವಿಶ್ವ ವಿಖ್ಯಾತವಾಗುವಂತೆ ಮಾಡಿದ ಸಾಯಿ ಅವರ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಶಿಕ್ಷಣ ಕ್ಷೇತ್ರದಲ್ಲಿನ ಸೇವೆ ಇದೆಯಲ್ಲ, ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯನ್ನು ಯಾವ ಸರಕಾರವೂ ಒದಗಿಸದ ರೀತಿಯಲ್ಲಿ ಒದಗಿಸಿದ ಸತ್ಯ ಸಾಯಿಬಾಬಾ ಅವರ ಕೆಲಸವಿದೆಯಲ್ಲ, ಅದನ್ನು ಪವಾಡ ಎನ್ನಬಹುದು.
ನಮ್ಮಲ್ಲಿ ಒಂದು ಮಾತು ಮತ್ತು ನಂಬಿಕೆ ಬಲವಾಗಿದೆ. ಅದೆಂದರೆ, ಯಾವನೇ ಇರಲಿ, ಸತ್ತ ನಂತರ ಅವನ ಒಳ್ಳೆಯ ಕಲೆಸಗಳನ್ನು ಮಾತ್ರ ಗಮನಿಸಿ, ಒಳ್ಳೆಯ ಮಾತಾಡ ಬೇಕು ಎಂದು. ಅದು ಹೆಚ್ಚಿನ ಸಂದರ್ಭದಲ್ಲಿ ಅನುಸರಿಸಲ್ಪಡುತ್ತದೆ ಸಹಾ. ಆದರೆ ಸಾಯಿಬಾಬಾ ವಿಷಯದಲ್ಲಿ ಕೆಲವು ವ್ಯವಸ್ಥೆಗಳು ಅದನ್ನೂ ಮಾಡಗೊಡುತ್ತಿಲ್ಲ. ಮೊದಲೇ ಹೇಳಿದಂತೆ ಅವರ ಪವಾಡಗಳ ಬಗ್ಗೆ, ದೇವರ ಅವತಾರದ ಬಗ್ಗೆ ನನ್ನ ವಿರೋಧ ಇದ್ದರೂ, ಅವರು ಮಾಡಿದ ಸಾಧನೆಗಳನ್ನು ಪವಾಡದಂತೇ ಸ್ವೀಕರಿಸಿ ಗೌರವಿಸದಿರಲು ಯಾವುದೇ ಕಾರಣಗಳಿಲ್ಲ. ಅದೆಷ್ಟೋ ಬಡವರು ಅವರ ಸೇವೆಯ ಫಲವಾಗಿ ಶಿಕ್ಷಣ ಪಡೆದಿದ್ದರೆ, ಅದೆಷ್ಟೋ ಬಡ ರೋಗಿಗಳು ಅವರ ಆಸ್ಪತ್ರೆಯಲ್ಲಿ ಉಚಿತ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಹೊಸ ಹುಟ್ಟು ಪಡೆದಿದ್ದರೆ, ಅದೆಷ್ಟೋ ಜನ ಇವತ್ತಿಗೂ ಇವರ ಕೊಡುಗೆಯ ನೀರಾವರಿಯಿಂದ ಬದುಕು ಸಾಗಿಸುತ್ತಿದ್ದರೆ, ಅದೇನೂ ಸಣ್ಣ ಮಾತಲ್ಲ. ಗಣ್ಯಾತಿಗಣ್ಯ ರಾಜಕಾರಣಿಗಳ ಸಖ್ಯವಿದ್ದೂ, ಪಕ್ಷಾತೀತವಾಗಿ ‘ಭಕ್ತ’ರ ಸಂಖ್ಯೆ ಹೊಂದಿದ್ದೂ, ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಅಂಟಿಕೊಳ್ಳದೇ, ತಮ್ಮ ಕಾಯಕದಲ್ಲಿಯೇ ತಲ್ಲೀನರಾಗಿದ್ದೂ ಸಾಯಿಬಾಬಾ ಅವರ ಮಟ್ಟಿಗೆ ಹೆಗ್ಗಳಿಕೆಯೇ ಸರಿ.
ಇನ್ನು ಮಾಧ್ಯಮಗಳು. ಕೆಲವು ವಿಷಯಗಳನ್ನು ಹಿಗ್ಗಾ ಮುಗ್ಗಾ ಎಳೆಯುವುದು ಅಥವಾ ಇಲ್ಲದ್ದನ್ನು ಇದ್ದಂತೆ ಸೃಷ್ಟಿಸುವುದು  ಅವರ ಅಘೋಷಿತ ಪ್ರತಿಜ್ಞೆ. ವಿಶೇಷ ಎಂದರೆ ಸತ್ಯ ಸಾಯಿಬಾಬಾ ಅವರ ಸಾಧನೆಯ ಲೌಕಿಕ ಜಗತ್ತನ್ನು ಜನರೆದುರು ತೆರೆದಿಡುವುದಕ್ಕಿಂತಲೂ ಮಾಧ್ಯಮಗಳು ಅವರ ಬಗೆಗಿನ ಕಥೆಗಳನ್ನು ಸ್ವಾರಸ್ಯಕರವಾಗಿ ತೆರೆದಿಡುತ್ತಿರುವುದು ಅತಿಯಾಯಿತೇನೋ ಅನಿಸುತ್ತದೆ. ಅದರಲ್ಲೂ ದೃಶ್ಯ ಮಾಧ್ಯಮಗಳಂತೂ ಹಿಡಿದ ದಾರಿ ನಮ್ಮನ್ನು ಎತ್ತ ಕೊಂಡೊಯ್ಯುತ್ತಿವೆಯೋ ಅನಿಸುತ್ತದೆ.  ಇವರು ಒಮ್ಮೊಮ್ಮೆ ಸುದ್ದಿ ಬಿತ್ತರ ಮಾಡುವ ರೀತಿ ನೋಡಿದರೆ, ಎಲ್ಲಿ ಇಂತ ಸಾವುಗಳಿಗೆ ಅಥವಾ ದುರ್ಘಟನೆಗಳಿಗೆ ಹಪ ಹಪಿಯಿಂದ ಕಾಯುತ್ತಿರುತ್ತಾರೋ ಅನಿಸುತ್ತದೆ. ನಮ್ಮ ದೃಶ್ಯ ಮಾಧ್ಯಮಗಳನ್ನು ನೋಡಿದರೆ, ಆಧುನಿಕತೆಯ ತಂತ್ರಜ್ಞಾನದೊಂದಿಗೆ ಇವರು ನಮ್ಮನ್ನು ಹದಿನಾರನೆಯ ಶತಮಾನಕ್ಕೆ ಕೊಂಡೊಯ್ಯುತ್ತಿರುವಂತೆ ಭಾಸವಾಗುತ್ತದೆ.

ನಿನ್ನೆ ಸುದ್ದಿಯೊಂದನ್ನು ನೋಡುತ್ತಿದ್ದೆ. ಈಟsh ಓeತಿs ಅಡಿಯಲ್ಲಿ ಒಂದು ಖಾಸಗಿ ವಾಹಿನಿ, ಇದೇ ಮೇ ೨೧ರಂದು ಜಗತ್ ಪ್ರಳಯ ನಡೆಯಲಿದೆ ಎಂದು ಪ್ರಸಾರ ಮಾಡುತ್ತಿತ್ತು ಮತ್ತು ಹೆಚ್ಚಿನ ವಿವರಗಳಿಗೆ ರಾತ್ರಿಯ ಒಂದು ಸಮಯದಲ್ಲಿ ನೋಡಿ ಎಂದು ಪ್ರಸಾರ ಮಾಡುತ್ತಿತ್ತು. ಇವರು ಈ ಭೂಪ್ರಳಯ, ಮಾಟ ಮಂತ್ರದ ಸುತ್ತ ಸುತ್ತಿದಷ್ಟು, ಜಗತ್ತಿನ ಯಾವ ಆರೋಗ್ಯಕರ ವರ್ತಮಾನದ ಸುತ್ತ ಸುತ್ತುವುದೇ ಇಲ್ಲ. ಯಾಕೆ, ನಮ್ಮ ಪ್ರಪಂಚದಲ್ಲಿ ಸುಂದರವಾಗಿದ್ದು ಏನೇನೂ ಇಲ್ಲವೇ? ಅದೇ ಅಚ್ಚರಿ.
ಈವತ್ತು ಸಚಿನ್ ತೆಂಡುಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದು ಬಿಂಬಿಸಿದದ ಈ ಮಾಧ್ಯಮಗಳು ತೆಂಡುಲ್ಕರ್ ಸತ್ಯಸಾಯಿಬಾಬಾ ಅವರ ಪಾರ್ಥಿವ ಶರೀರದೆದುರು ಬಿಕ್ಕಳಿಸಿದ್ದನ್ನು ದೊಡ್ಡ ಸುದ್ದಿ ಮಾಡುತ್ತವೆ. ಮಾನವೀಯ ಅಂತ:ಕರಣದ ಎಲ್ಲರೂ ಈ ಸಾವಿಗೆ ಮರುಗಲೇಬೇಕು. ಈ ವಿಷಯವನ್ನು ದೇವ ಮಾನವನೆದುರು ಕ್ರಿಕೆಟ್ ದೇವರು ಕಣ್ಣೀರಿಟ್ಟರು ಎಂಬಂತೆ ವರದಿ ಮಾಡಲಾಗಿತ್ತು. ಸಚಿನ್ ಕ್ರಿಕೆಟ್ ಮಟ್ಟಿಗೆ ಚಿನ್ನವೇ ಇರಬಹುದು. ಆದರೆ ಅವರನ್ನೇ ಕ್ರಿಕೆಟ್ ದೇವರು ಎಂಬಂತೆ ಬಿಂಬಿಸಿದ್ದು ಈ ಮಾಧ್ಯಮಗಳು ಮತ್ತು ಅದು ಎಷ್ಟರ ಮಟ್ಟಿಗೇ ಸೂಕ್ತವೋ ಗೊತ್ತೇ ಇಲ್ಲ. ಇವರು ಕ್ರಿಕೆಟ್ ದೇವರಾದರೆ, ಇವರಿಗಿಂತಲೂ ಮೊದಲು ಮತ್ತು ಪ್ರಸ್ತುತ ಮತ್ತು ಮುಂದೆ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದರೆ ಅವರೆಲ್ಲರನ್ನೂ ದೆವ್ವಗಳಂತೆ ಕಾಣಲು ಸಾಧ್ಯವೇ? ಸಚಿನ್‌ರನ್ನು ಕ್ರಿಕೆಟ್‌ನ  ದಂತಕಥೆ ಎಂದು ಕರೆದರೆ ಸಾಕೇನೋ ಅನಿಸುತ್ತದೆ.
ಈ ಹಂತದಲ್ಲಿ ಮಾಧ್ಯಮಗಳ ಮತ್ತೂ ಒಂದೆರಡು ಅವಾಂತರಗಳು ನೆನಪಾಗುತ್ತದೆ. ವಿಶ್ವ ಕಪ್ ಕ್ರಿಕೆಟ್ ನಡೆಯುತ್ತಿದ್ದ ವೇಳಯಲ್ಲಿ ಕೆಲವು ಮಾಧ್ಯಮಗಳು ಇಡೀ ವಿಶ್ವವೇ ನಿಬ್ಬೆರಗಾಗಿ ಪಂದ್ಯದ ಫಲಿತಾಂಶಕ್ಕಾಗಿ ಕಾದಿವೆ ಎಂದು ಪ್ರಸಾರ ಮಾಡಿದುವು. ಎಲ್ಲರಿಗೂ ಗೊತ್ತಿರುವಂತೆ ಇಡೀ ವಿಶ್ವzಲ್ಲಿ ಕೇವಲ ಏಶ್ವನ್ ರಾಷ್ಟ್ರಗಳು ಮತ್ತು ಕೆಲವೇ ಕೆಲವು ಐರೋಪ್ಯ ರಾಷ್ಟ್ರಗಳು ಮಾತ್ರ ಕ್ರಿಕೆಟ್ ಬಗ್ಗೆ ಆಸಕ್ತವಾಗಿವೆ. ಜಗತ್ತಿನ ೦.೦೫% ಶೆಕಡಾ ಜನರೂ ಕ್ರಿಕೆಟ್ ನೋಡುತ್ತಿಲ್ಲ. ದೂರದ ಮಾತು ಬೇಡ, ಪಕ್ಕದ ಚೀನಾದಲ್ಲಿಯೂ ಅದೆಷ್ಟೋ ಜನರಿಗೆ ತೆಂಡುಲ್ಕರ್ ಎಂದರೆ ಯಾರೆಂದೇ ಗೊತ್ತಿಲ್ಲ!. ಅಂತಾದ್ದರಲ್ಲಿ ಇದನ್ನು ವೈಭವೀಕರಿಸುವ ಮಾಧ್ಯಮಗಳು ಹೇಳುವ ಹೇಳಿಕೆಗಳು ನಗು ತರಿಸುತ್ತವೆ. ಇವರಿಗೆ ಜಗತ್ತು ಎಷ್ಟು ದೊಡ್ಡದೊ ಎಂಬ ಅನುಮಾನವೂ ಕಾಡುತ್ತದೆ  ಮತ್ತು ಅವುಗಳ ಮೇಲೆ ನಮ್ಮ ವಿಶ್ವಾಸದ ಬಗ್ಗೆ ಪ್ರಶ್ನೆ ಹುಟ್ಟು ಹಾಕುತ್ತವೆ.
ಇನ್ನೂ ಒಂದು ಘಟನೆ. ಸತ್ಯ ಸಾಯಿಬಾಬಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಒಂದು ದಿನ, ಪ್ರಶಾಂತಿ ನಿಲಯದ ಮುಂಭಾಗದಲ್ಲಿ ಒಂದು ಹೂವಿನ ಲಾರಿ ಬಂದು ನಿಂತಿತಂತೆ. ಇದನ್ನು ಒಂದು ಟಿವಿ ವರದಿಗಾರ ನೋಡಿ ಬಿಟ್ಟ. ಕೂಡಲೇ ಅವನು ಸತ್ಯ ಸಾಯಿಬಾಬಾ ಅವರು ನಿಧನರಾಗಿದ್ದಾರೆ, ಅವರಿಗೆ ಗೌರವ ನೀಡಲು ಒಂದು ಲಾರಿ ಹೂ ಬಂದು ಈಗಲೇ ಪ್ರಶಾಂತಿ ನಿಲಯ ತಲುಪಿದೆ ಎಂದು ವರದಿ ಮಾಡಿಬಿಟ್ಟ. ಕೊನೆಗೆ ವಿಷಯ ತಿಳಿದ ಪೋಲಿಸರು ಅವನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು. ಅದಾಗಿ ಮತ್ತು ಸುಮಾರು ಹದಿನೈದು ದಿನ ಬಾಬಾ ಅವರು ಜೀವಂತವಾಗಿದ್ದರು.
ಇವೆಲ್ಲವೂ ಮಾಧ್ಯಮಗಳ ಪ್ರಚಾರ ಮತ್ತು ಟಿಆರ್‌ಪಿ ಮೋಹದ ಫಲಿತಾಂಶಗಳು. ಸತ್ಯ ಸಾಯಿಬಾಬಾ ವಿಷಯದಲ್ಲಿಯೂ ಅದೇ ಆಗುತ್ತಿದೆ. ಅದೇನೇ ಇರಲಿ, ಸಾಯಿ ಬಾಬಾ ಅವರ ಒಳ್ಳೆಯ ಕೊಡುಗೆಗಳು ಸಮಾಜಕ್ಕೆ ಮುಂದೆ ಅವರ ಹೆಸರನ್ನು ಚಿರಸ್ತಾಯಿಯಾಗಿಡುತ್ತವೆ. ವಿವಾದಗಳೇನೇ ಇರಲಿ, ಸಮಾಜ ಮುಖಿ ಚಿಂತನೆಗಳ ಓರ್ವ ವಿಶಿಸ್ಠ ಚೇತನವನ್ನು ನಾವು ಕಳೆದುಕೊಂಡಿರುದಂತೂ ಸತ್ಯ. ಅವರು ದೇವನೋ,  ಮಾನವನೋ  ಗೊತ್ತಿಲ್ಲ, ಈ ಮಾನವತಾವಾದಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ.

********

ಚಿತ್ರಕೃಪೆ: ಗೂಗಲ್ ಇಮೇಜ್

22 ಟಿಪ್ಪಣಿಗಳು Post a comment
 1. ಮಹೇಶ ಪ್ರಸಾದ ನೀರ್ಕಜೆ
  ಏಪ್ರಿಲ್ 27 2011

  ಸಾವಿನ ಸಮಯದಲ್ಲೂ ಸಾಯಿಯನ್ನು ಟೀಕಿಸುವವರಿಗೆ ಮನುಷ್ಯತ್ವದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಸಾವಿನಲ್ಲಿ ಶತ್ರುವನ್ನೂ ಕೂಡ ಗೌರವಿಸುವುದು ಮನುಷ್ಯತ್ವ. ಇದು ಭಾರತದ ಸಂಸ್ಕೃತಿಯೂ ಹೌದು. ಇದನ್ನು ತಿಳಿಯದೇ ಟೀಕಿಸುವವರು ಅತ್ತ ಭಾರತೀಯರೂ ಅಲ್ಲ, ಇತ್ತ ಮನುಷ್ಯರೂ ಅಲ್ಲ.

  ಉತ್ತರ
 2. Ravi
  ಏಪ್ರಿಲ್ 27 2011

  ಒಮ್ಮೊಮ್ಮೆ ಸುದ್ದಿ ಬಿತ್ತರ ಮಾಡುವ ರೀತಿ ನೋಡಿದರೆ, ಎಲ್ಲಿ ಇಂತ ಸಾವುಗಳಿಗೆ ಅಥವಾ ದುರ್ಘಟನೆಗಳಿಗೆ ಹಪ ಹಪಿಯಿಂದ ಕಾಯುತ್ತಿರುತ್ತಾರೋ ಅನಿಸುತ್ತದೆ

  ನೂರು ಪ್ರತಿಶತ ಸತ್ಯ.

  ಉತ್ತರ
  • ಮಹೇಶ ಪ್ರಸಾದ ನೀರ್ಕಜೆ
   ಏಪ್ರಿಲ್ 27 2011

   ನಿಜ.

   ಉತ್ತರ
 3. Karunakar Balkur
  ಏಪ್ರಿಲ್ 27 2011

  chenagi vishaya prasthapa madideri. madhyamagalu indu yavudannu bareya beku adnnu bittu odugannannu dari tappisuva kelasagalu alli nadeyuttiruvudu durantha.

  ಉತ್ತರ
 4. Nagashree
  ಏಪ್ರಿಲ್ 27 2011

  Thumba Chennagi Barediddiri! adu nija kuda saha! E Madhyamadavarind innu nale Sayibaga matte kelavarige Kanasigabahudeno!

  ಉತ್ತರ
 5. naada_swara
  ಏಪ್ರಿಲ್ 27 2011

  ಲೇಖನ ಬಾಬರ ಬಗ್ಗೆಯೋ, ಕ್ರಿಕೆಟ್ ಬಗ್ಗೆಯೋ, ಸಚಿನ್ ಬಗ್ಗೆಯೋ , ಮಾದ್ಯಮದ ಬಗ್ಗೆಯೋ ತಿಳಿಯದೆ ಸ್ವಲ್ಪ ಗೊಂದಲವಾದರೂ ಆಶಯ ಮಾತ್ರ ಚೆನ್ನಾಗಿ ತಿಳಿಯಲ್ಪಟ್ಟಿದೆ …….

  ಉತ್ತರ
 6. M.Sarvotham Anchan mulki
  ಏಪ್ರಿಲ್ 27 2011

  naanu kanda berlenikeya pavaada purusharalli sai baba atyantha shrestaru, avara koduge deshakke aparavagide.teeke manavan guna ,atha devarnnu bittilla. nimma lekana samayasadhuvadudu. naanu kandanthe teekege avara bhaktharu kelvru manaavaralla hagagi evaru doddavara guru endu thilidaddu kelavaru. adare avara kelasa apaara. gunakke mathsaravilla

  ಉತ್ತರ
 7. Dhanya
  ಏಪ್ರಿಲ್ 27 2011

  Lekhana tumba chennagide.

  ಉತ್ತರ
 8. ಏಪ್ರಿಲ್ 27 2011

  ಬರಹ ಚೆನ್ನಾಗಿದೆ ಮತ್ತು ಹೇಳಿರುವ ವಿಷಯಗಳು ಸರಿಯಾಗಿವೆ.

  ಧನ್ಯವಾದಗಳು

  ಉತ್ತರ
 9. ಡಾ/ ಕೇದಿಗೆ ಅರವಿಂದ ರಾವ್
  ಏಪ್ರಿಲ್ 27 2011

  ಅರೆಹೊಳೆ ಸದಾಶಿವ ರಾಯರಿಗೆ ಅಭಿನಂದನೆಗಳು.
  ಲೇಖನ ವಾಸ್ಥವ ವನ್ನು ಬಹಳ ಸಮರ್ಪಕವಾಗಿ ವಿಶ್ಲೇಶಿದೆ.
  ನಮ್ಮ ದೃಶ್ಯ ಮಾದ್ಯಮಗಳ ಬಾತ್ಮಿದಾರರು, ವರದಿಗಾರರು ಗಳಿಗೆ, ಮಾನವೀಯತೆಯ, ನೈತಿಕತೆಯ
  ಹಾಗೂ ತಮ್ಮ ಜವಾಬ್ದಾರಿಯ ಅರಿವು ಮೂಡಿಸುವ ಅಗತ್ಯತೆ… ನೀವಂದಂತೆ ಇತ್ತೀಚಿನ ದಿನಗಳಲ್ಲಿ.. ಪ್ರಾಮುಖ್ಯ ವಾಗಿದೆ.
  ಬ್ರೇಕಿಂಗ್ ನ್ಯೂಸ್ ಗಳ ಭರಾಟೆಯಲ್ಲಿ.. “ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
  ಡಾ/ ಕೇದಿಗೆ ಅರವಿಂದ ರಾವ್

  ಉತ್ತರ
 10. ಏಪ್ರಿಲ್ 27 2011

  ಹೌದು.. ಸಾಯಿಬಾಬ ಮತ್ತು ಸಮಾಜಮುಖಿ ಎರಡು ಮುಖಗಳು ಸಾಕು.ಮಿಕ್ಕೆಲ್ಲವೂ ಗಾಳಿಗೆ ಬಿಟ್ಟ ಸುದ್ಧಿ.ಅವರು ಏನು ಮಾಡಿದರು ಅನ್ನೋದಕ್ಕೆ ಅವರು ಹೋದ ನಂತರವೂ ನಮಗೆ ಸಾಕ್ಷಿಗಳು ಇವೆ. ಅದನ್ನು ಬಡವರು ಸಾಕ್ಷಿ ಸಹಿತ ಉಣ್ಣುತ್ತಿದ್ದಾರೆ.ಅಷ್ಟು ಸಮಾಜ ಕಾರ್ಯ ಒಬ್ಬ ಮನುಷ್ಯನಿಂದ ಆಗಿದ್ದು ಸಂತೋಷವಾಯಿತು.

  ಉತ್ತರ
 11. ಏಪ್ರಿಲ್ 28 2011

  All of the people who commented or others will be watching news all the time, people does need crime news, fake news to get a good sleep. We have created this society and now we are complaining on it. Why can’t people stop watching news channels and do yoga or some other works. Whatever Saibaba did is past. Past is past, lets move on, we and our kids have future, lets think about it. Why one should watch Neeghuda Rahasya, black magic shows, Crime or Fake news? Why everyone should laugh at when some one beaten up. Ridiculous. We support media more that it deserve and now we complaining on it. Stop watching them and forward this msg to all. Lets watch some good movies, will go out, roam out, build good nature in us.
  Sam

  ಉತ್ತರ
  • ಏಪ್ರಿಲ್ 28 2011

   Sam,
   the programs are telecast as long as they get sponsors.
   None bothers to find out the likes or dislikes of the viewers.

   Besides, if some people do critical analysis of the programs that are telecast, its no harm.
   Analysis could be done if only some one watches it.
   Whether or not your (this) comment is good, is decided only after I read it fully.
   So is for the programs.
   None watches any program till the end, if he or she doesn’t like it.

   ಉತ್ತರ
   • ಏಪ್ರಿಲ್ 29 2011

    When I was 15 or 16 year old, I used to watch Udaya News and DD1 news. What a professional they were? Now, our media does not recognize the difference between, saint, political leader or actors. Same irritating voice and a red round mark on videos of the subject’s head. Even in movies, rowdyism, love, lust etc. Most people watching their shows, so they got sponsors and got popularity. New generation is busy with mobiles, internet and computer and old generation is busy with fighting to save culture and people who have no work are busy watching such shows. Totally misuse of freedom. Do we really need a channel which is busy with screwing someones history or future?

    ಉತ್ತರ
 12. Vilas Desai
  ಏಪ್ರಿಲ್ 28 2011

  nammalliya patrikegalu yarige yavaga ebbastaro yavaga beelastaro, yavaga devarannagi maduttaro, yavaga rakshasarannagi maduttaro gotte aagodilla…………..

  ಉತ್ತರ
 13. ಏಪ್ರಿಲ್ 28 2011

  lekana thumba chennagide…..danyavadagalusadasivarayare……nimma mathalli noorakku nooru sathya edeeeeeeeeee

  ಉತ್ತರ
 14. ಏಪ್ರಿಲ್ 29 2011

  Are hole Sadashiva rao

  Vishaya pratutha hagoo Vycharikathe inda koodide. Pavadakku vycharikathe ge besuge agide. Baba Lakshanthara koti bhaktarannu aste mothavannu janarige kotta janatha Janardhana!Agalidavara bagge thilididdeve. Eega iruva swamy galu, A,C car vajra , chinna, medical college, nadesuvavara bagge bareyabeku. Baba adarsha swalpavadaru anusarisidare sari.M.B.Sadashiv. Sullia.

  ಉತ್ತರ
  • Arehole
   ಏಪ್ರಿಲ್ 30 2011

   ನನ್ನ ಸತ್ಯಸಾಯಿ ಮತ್ತು ಸತ್ಯಸಾಯಿಸುವ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು. ಸಾಯಿ ಬಾಬಾ ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳು ಮು೦ದುವರಿಯಲಿ. ಕೊನೆಗೆ ಎ೦ ಬಿ ಸದಾಶಿವ್ ಅವರು ಹೇಳಿದ೦ತೆ, ಜನ್ ಸೇವೆ ಮಾಡುವವನೇ ಜನಾರ್ದನ ನಾಗುತ್ತಾನೆ. ಸಾಯಿ ಬಾಬಾರನ್ನು ಪವಾಡಗಳಿಗಿ೦ತ ಪ್ರತ್ಯೇಕಿಸಿ ನೋಡಿದರೆ, ಅವರು ನಿಜಾರ್ಥದ ಜನಾರ್ದನರೇ ಎ೦ಬುದರಲ್ಲಿ ಅನುಮಾನವೇ ಇಲ್ಲ.
   ಏನೇ ಇರಲಿ, ನಿಲುಮೆಯ ಈ ವೇದಿಕೆಯ ಮೂಲಕ, ಒ೦ದಾದ ಎಲ್ಲರಿಗೂ ಮತ್ತೊಮ್ಮೆ ಅಭಿನ೦ದನೆಗಳು.

   ಉತ್ತರ
 15. pruthviraja pande s
  ಏಪ್ರಿಲ್ 30 2011

  Dear readers,
  it is true that sri. sathya sai established himself as “pavaada purusha’ and a magic man, which was his initial entry to his today’s mighty sri sathya sai movement? but there are many things beyond commenting him as homo sexual, magic man etc., it is truly commendable and great to talk about his achievements too, how many of us are today using the best out of the resources and utilities? his service to the mankind especially in the field of education, medicine and providing water and other possible resources to the common and poor is solutable, let him not be a god which he can never be but surely he is the “purushoththama” today? [purusharalli uththama = purushoththama]

  ಉತ್ತರ
 16. Raghu idkidu
  ಏಪ್ರಿಲ್ 30 2011

  Lekhana chennaagide.

  ಉತ್ತರ
 17. Kaa. Vee. Krishnadas
  ಮೇ 3 2011

  Dear Arehole Sadhaashiva Rao,

  The Article ‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು is good. Actually Satya Saayibaaba Did Good work but Our People Enlightened His Miracles only. But one thing His Death is not a death but planned Murder.Media Should force for Brain Maping Of Mr Satyajith and other related pupils.

  Thanks for writing this article.regards to editors of Nilume.

  Kaa. Vee. Krishnadas
  Mangalore

  ಉತ್ತರ

Trackbacks & Pingbacks

 1. ಬ್ಲಾಗು ಕದಿಯುವ ಪತ್ರಿಕೆಗಳಿವೆ ಎಚ್ಚರ…! « ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments