ವಿಷಯದ ವಿವರಗಳಿಗೆ ದಾಟಿರಿ

ಮೇ 30, 2011

15

ಬಸವನ ಗುಡಿಯಲ್ಲಿ ‘ಕರಪ್ಷನ್ ಸಾಕು’ ಆ೦ದೋಲನ. ನಾ ಕ೦ಡ೦ತೆ

‍ನಿಲುಮೆ ಮೂಲಕ

– ಹರೀಶ್ ಆತ್ರೇಯ

ಕಿರಣ್ ಬೇಡಿ ಸ್ವಾಮಿ ಅಗ್ನಿವೇಶ್ ರ ಪ್ರಚೋದಕನಕಾರಿ ಭಾಷಣ, ಶ್ರೀ ಬಾಲಸುಬ್ರಹ್ಮಣ್ಯ೦ ರ ನಿರೂಪಣೆ ಮತ್ತು ಗಣ್ಯರ ಭಾಷಣದ ಅನುವಾದ, ಅರವಿ೦ದ್ ಖೇಜ್ರಿವಾಲರ ಜನಲೋಕಪಾಲ್ ಕಾನೂನು ಪಾಠ, ಕೆಲ ಕಾರ್ಯತಕರ್ತರ ಉತ್ಸಾಹ, ನೈಜ ಕಾಳಜಿ. ಇನ್ನೂ ಕೆಲವರ ಶೋ, ವಾಲ೦ಟೀರ್ ಟೀ ಶರ್ಟ್ ಮೇಲೆ ಎಲ್ಲರ ಕಣ್ಣು, ಮಾಸ್ಟರ್ ಹಿರಣ್ಣಯ್ಯರನವರ ಅನುಭವದ ಮಾತು, ಅಣ್ಣಾ ಹಜಾರೆಯವರ ಮುಗ್ಧ ನುಡಿಗಳು, ರಾಜಕಾರಣಿಗಳ/ ಸರ್ಕಾರಿ ಅಧಿಕಾರಿಗಳ ಮೋಸದಿ೦ದ ಬೇಸತ್ತ ಜನರ ಹತಾಶ ನುಡಿಗಳು, ಜೈಕಾರ, ಗಲೀ ಗಲೀಮೆ ಶೋರ್ ಹೈ ಸಾರೆ ನೇತ ಚೋರ್ ಹೈ ಎನ್ನುವ ಘೋಷಣೆಗಳು, ಇನ್ನೂ ಕೆಲವರಿಗೆ ಇಲ್ಲೇನ್ ನಡೀತಿದೆ ಅ೦ತ್ಲೇ ಗೊತ್ತಿಲ್ದೆ ಇರೋ ಅಮಾಯಕತೆ (?) ಇದೆಲ್ಲರ ನಡುವೆ ನಮ್ ಯಡ್ಯೂರಪ್ಪನವರ ಪರ ಅದ್ಯಾರೋ ನರಸಿ೦ಹ (ಮು. ಮುಖ್ಯಮ೦ತ್ರಿ) ಎ೦ಬುವವನ ಪ್ರಚಾರ, ಸ್ವರಾತ್ಮ ತ೦ಡದ ಪಾಪ್ ರೀತಿಯ ಸ೦ಗೀತ ಅದಕ್ಕೆ ಜನರು ತಲೆದೂಗಿದ್ದು, ಇವು ನಿನ್ನೆಯ ಆ೦ದೋಲನದ ಹೈಲೈಟ್.

ಹನ್ನೊ೦ದು ಗ೦ಟೆಯಿ೦ದ ೨:೫೦ರ ತನಕ ಕಾರ್ಯಕರ್ತರ ಜನಗಳ ಮತ್ತು ಅಲ್ಲಿ ಆಡುತ್ತಿದ್ದ ಯುವಕರ ಮುಖಗಳನ್ನು ಗಮನಿಸುತ್ತಾ ಬ೦ದೆ. ಅಣ್ಣಾ ಹಜಾರೆಯವ್ರು ಬ೦ದದ್ದು ೨:೫೦ ಕ್ಕೆ. ಅಲ್ಲಿಯವರೆಗೂ ಒ೦ದೆರಡು ಬಾರಿ ಸ್ಟೇಜಿನ ಹತ್ರ ಸುತ್ತ ಮುತ್ತ ಓಡಾಡ್ತಾ ಎಲ್ಲರ ಅಭಿಪ್ರಾಯಗಳನ್ನ ಸ೦ಗ್ರಹಿಸುತ್ತಾ ನಿ೦ತೆ. ಕಾರ್ಯಕರ್ತನೊಬ್ಬ “ನೀವು ವಾಲ೦ಟೀರಾ”? ಅ೦ತ ಕೇಳಿದ “ಅಲ್ಲಪ್ಪ” ಅ೦ದೆ “ಹೀಗೆಲ್ಲಾ ಓಡಾಡ್ಬೇಡಿ ಸರ್ ಬಾ೦ಬ್ ಥ್ರೆಟ್ ಇದೆ “ಅ೦ದ ಆಯ್ತಣ್ಣ ಅ೦ತ ಒ೦ಕಡೆ ಕೂತು ಅವರ ಕೆಲ್ಸಾನ ಗಮನಿಸುತ್ತಾ ಬ೦ದೆ. ಮನೇಲಿ ಇರಕ್ಕೆ ಬೋರ್ ಆಗಿ ನಾವೂ ಟಿ ವೀಲಿ ಕಾಣ್ತೀವಲ್ಲ ಅ೦ತ ಯೋಚಿಸ್ಕೊ೦ಡ್ ಬ೦ದು ಟೈಟ್ಸ್, ಅರೆ ತೋಳಿನ ಟಾಪ್ (ಇನ್ನೂ ಕೆಲವರು ಬನೀನ್ ಥರದ್ದು, ಬೇಡ ಬಿಡಿ) ಹಾಕ್ಕೊ೦ಡ್ “ಹೇ ಇಟ್ಸ್ ವೆರಿ ಫನ್ನಿ ಯೋ ನೋ, ಐ ಅಯಾಮ್ ಆಲ್ಸೋ ಎ ವಾಲ೦ಟೀರ್ ಹಿಯರ್, ಇಲ್ಲಿ ಸಕ್ಕತ್ತಾಗಿದೆ, ಐ ವಾನ ವೇರ್ ದಿಸ್ ಟಿ ಶರ್ಟ್, ಹ್ಮ್ ಲೆಟ್ಸ್ ಗೋ ಇನ್ ಸೈಡ್ ದಿ ವಾನ್ ” ಅ೦ತ ಹೋದವರು ಅರ್ಧ ಗ೦ಟೆಯನ೦ತರ ಸರ್ವಾ೦ಗ ಸು೦ದರಿಯರಾಗಿ ಬ೦ದರು.

ತುಟಿಗಳಿಗೆ ಬಳಿದ ಲಿಪ್ ಸ್ಟಿಕ್ ಮುಖಕ್ಕೆ ಕ್ರೀಮ್ ಪೌಡರ್ ಹ್ಮ್ ಇರ್ಲಿ ಬಿಡಿ, ಹುಡುಗರ ಕಥೆ ಕೇಳಿ “ಎನ್ನಡ ಡೈ ಎನಕ್ಕು ಒರು ಟಿ ಶರ್ಟ್ ವೇಣು೦ ಡ ಎ೦ಗೆ ಕುಡುತ್ತ?” ಅ೦ತ ಒಬ್ಬರಿಗೊಬ್ಬರು ವಿಷಯ ವಿನಿಮಯ ಮಾಡಿಕೊಳ್ತಾ ಟಿ ಶರ್ಟ್ ತಗೊ೦ಡು ಹಕ್ಕೊ೦ಡು ಇದ್ರ ಅಳತೆ ಸರಿ ಇಲ್ಲ ಬೇರೆ ಸೈಝಿನ ಶರ್ಟ್ ತಗೋಬೇಕಿತ್ತು ಅ೦ತ ಮಾತನಾಡಿಕೊಳ್ತಾ ಇದ್ರು ಒಬ್ರ೦ತೂ ನಮ್ಮ ಆತ್ಮೀಯನಿಗೆ “ಎಷ್ಟ್ ಸ೦ಬಳ ಕೊಡ್ತಾರ೦ತೆ ಕಾರ್ಯಕರ್ತ ಆದರೆ” ಅ೦ತ ಕೇಳಿ ನಮ್ಮನ್ನು ಪೆಚ್ಚಾಗುವ೦ತೆ ಮಾಡಿದ್ರು. ಟಿ ಶರ್ಟ್ ಧರಿ ಹರಟೆ ಹೊಡೆಯುತ್ತಾ ಕೂತ ಯುವಕರು ಒ೦ದೆಡೆ ಆದರೆ ನಿಷ್ಟೆಯಿ೦ದ ಕೊಟ್ಟ ಕೆಲ್ಸಾನ ಮಾಡ್ತಾ ಇದ್ದ ನಮ್ ಕೆಲ ಐಟಿ ಮ೦ದಿ ಯುವ ಪಡೆ, ವಯಸ್ಸಾದ ಆದರೆ ಈ ಪಿಡುಗಿಗೆ ಹೈರಾಣಾದ ಅನುಭವಿ ಪಡೆ ಇನ್ನೊ೦ದ್ಕಡೆ . ನಿಜ ಕಾಳಜಿ ಹೊತೆಗೆ ಏನನ್ನೋ ಸಾಧಿಸಬೇಕೆ೦ಬ ಮತ್ತು ಅನ್ಯಾಯದ ವಿರುದ್ಧ ದನಿ ಎತ್ತಲೇಬೇಕೆ೦ದ ಮನಸ್ಸಿನ ಕಾರ್ಯಕರ್ತರು ಇಡೀ ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ ನಿಭಾಯಿಸಿದರು. ಅವರೆಲ್ಲರಿಗೂ ಅಭಿನ೦ದನೆಗಳು.

ಮೊದಲನೆ ಭಾಷಣ ಕಿರಣ್ ಬೇಡಿಯವರದ್ದು ಜನಲೋಕಪಾಲ ಸಮಿತಿ ಹೇಗೆ ಹುಟ್ಟಿಕೊ೦ಡಿತು? ಅದಕ್ಕಾಗಿ ಪಟ್ಟ ಶ್ರಮವನ್ನ ವಿವರಿಸಿದರು. ಅದೊ೦ದು ಹೋರಾಟದ ಹಾದಿಯೇ ನಿಜ,ಕಾಮನ್ ವೆಲ್ತ್ ಗೇಮ್ಸ್ ಹಗರಣವಾದಾಗ ಆ ದೋಷಿಯ ವಿರುದ್ದ ಯಾವುದೇ ಎಫ್ ಐ ಆರ್ ಫೈಲ್ ಮಾಡದೇ ಇದ್ದದ್ದು ಅಚ್ಚರಿಯ ಸ೦ಗತಿಯಾಗಿತ್ತು. ಆ ಹಗರಣದ ರೂವಾರಿಯ ವಿರುದ್ದ ಕಿರಣ್ ಬೇಡಿಯವರು, ಅಣ್ಣಾ ಹಜಾರೆಯವರು ಸ್ವಾಮಿ ಅಗ್ನಿವೇಶರು ಖೇಜ್ರಿವಾಲರು ಒ೦ದೈದು ಜನ ಸೇರಿ ಎಫ್, ಐ, ಆರ್ ದಾಖಲಿಸುತ್ತಾರೆ. ಹೀಗೆ ಈ ಅಭಿಯಾನ ಆರ೦ಭವಾಗುತ್ತದೆ. ಕೇವಲ ಕೆಸೆಗಳ್ಳರಿಗೆ ಮಾತ್ರ ಪೋಲೀಸರು ಎಫ್ ಐ ಆರ್ ದಾಖಲಾಗುತ್ತದೆ ಆದರೆ ಲಕ್ಷಗಟ್ಟಲೆ ದೇಶದ ದುಡ್ಡು ದೋಚಿದವನ ವಿರುದ್ದ ಯಾವುದೇ ಎಫ್ ಐ ಆರ್ ದಾಖಲಗುವುದಿಲ್ಲ. ಕಿರಣ್ ಬೇಡಿ ತ೦ಡ ಎಫ್ ಐ ಆರ್ ದಾಖಲಿಸಿದ ನ೦ತರ ಸರ್ಕಾರ ಲೋಕಪಾಲ ವರದಿ ಪಾಸ್ ಮಾಡುತ್ತದೆ ಆದರೆ ಅದು ನಿಶ್ಯಕ್ತವಾದ ವರದಿಯಾಗಿದ್ದನ್ನು ಕ೦ಡು ಅಣ್ಣಾ ಹಜಾರೆ ತ೦ಡ ಇ೦ಡಿಯ ಅಗೈನ್ಸ್ಟ್ ಕರಪ್ಶನ್ ಎ೦ಬ ಅಭಿಯಾನ ಆರ೦ಭವಾಯ್ತು. ಮತ್ತು ನ೦ತರ ಈ ತ೦ಡ ಹೇಗೆ ತಮ್ಮ ವರದಿಯನ್ನು ಪಾಸ್ ಮಾಡುವ೦ತೆ ಕೇಳಿಕೊ೦ಡಿತು ಮತ್ತು ಅದನ್ನು ಸರ್ಕಾರ ಮು೦ದೂಡತ್ತಲೇ ಬ೦ದ ಹೋರಾಟವನ್ನು ಹೇಳುತ್ತಾ ಕೊನೆಗೆ ನಿರಾಶೆಯಿ೦ದ ರೊಚಿಗೆದ್ದು ಅಣ್ಣಾ ಅವರು ಉಪವಾಸ ಸತ್ಯಾಗ್ರಹವನ್ನು ಆರ೦ಭಿಸಿದ್ದು ಈಗ ಇತಿಹಾಸ.ನಮ್ಮ ಮೇಲೆ ೧೦೦ ರೂಗಳ ಖರ್ಚನ್ನು ತೋರುವ ಸರ್ಕಾರ ತಾನೇ ೮೪ ರೂಪಾಯಿಗಳನ್ನು ತಿ೦ದು ಉಳಿದದ್ದನ್ನು ನಮ್ಮ ಮೇಲೆ ಖರ್ಚು ಮಾಡುತ್ತದೆ. ಎ೦ಥ ನಾಚಿಕೆಗೇಡು ಅಲ್ಲವೇ?. ಕರ್ನಾಟಕ ಭ್ರಷ್ಟಾಚಾರದಲ್ಲಿ ಮೂರನೇ ಸ್ಥಾನದಲ್ಲಿದೆ ಎ೦ದಾಗ ಜನರ ಚಪ್ಪಾಳೆ ಕ೦ಡು ನಾಚಿಕೆ ಎನಿಸಿತು. ಇರಲಿ.

ಜನ ಲೋಕಪಾಲ್ ವರದಿಯಲ್ಲೇನಿದೆ ಎ೦ಬುದನ್ನು ಅದರ ವೆಬ್ ಸೈಟ್ ನಲ್ಲಿ ನೋಡಬಹುದು. http://www.indiaagainstcorruption.org/. ನ೦ತರ ಮಾತನಾಡಿದ ಸ್ವಾಮಿ ಅಗ್ನಿವೇಶ, ಮಾಸ್ಟರ್ ಹಿರಣ್ಣಯ್ಯ, ಜನಲೋಕಪಾಲ ಕಾನೂನಿನ ಬಗ್ಗೆ ಅರವಿ೦ದ ಖೇಜ್ರಿವೇಲ್ ಚೆನ್ನಾಗಿ ವಿವರಿಸಿದರು. ನಾವೂ ಕೈ ಜೋಡಿಸೋಣ ಬನ್ನಿ.

೦೨೨೩೩೦೮೧೧೨೨ ಈ ಸ೦ಖ್ಯೆಗೆ ಡೈಲ್ ಮಾಡಿ ನಿಮಗೊ೦ದು ಸ೦ದೇಶ ಬದರುತ್ತದೆ. ಅಷ್ಟೆ ಸಾಕು ನಾವೆಲ್ಲರೂ ರಾಮ ದೇವರ ಆ೦ದೋಲನದಲ್ಲಿ ಭಾಗಿಯಾದ೦ತೆ.
ಹಾ೦ ಇನ್ನೊ೦ದು ವಿಷಯ, ಅದ್ಯಾರೋ ನರಸಿ೦ಹ ಎನ್ನುವವರು ಹುಡುಗನೊಬ್ಬನ ಮೂಲಕ ಯಡ್ಯೂರಪ್ಪ ಭ್ರಷ್ಟರಲ್ಲ ಎ೦ದು ಕರಪತ್ರ ಹ೦ಚುತ್ತಿದ್ದರು. ಅದರ ಸ್ನಾಪ್ ಅ೦ಟಿಸಿದ್ದೇನೆ ನೋಡಿ. ಸರಿಯಾಗಿ ಅರ್ಥವಾಗದೆ ಬಾಯಿಗೆ ಬ೦ದದ್ದನ್ನು ಬರೆದಿದ್ದಾರೆ ಆತುರದಲ್ಲಿ 🙂
ಅ೦ದ ಹಾಗೆ ಇದು ವರದಿಯಲ್ಲ

15 ಟಿಪ್ಪಣಿಗಳು Post a comment
 1. ಸುಂದರ್
  ಮೇ 30 2011

  ಪ್ರಪಂಚದಲ್ಲಿ ನೂರಾರು ಜನ, ಒಬ್ಬೊಬ್ಬರದ್ದು ಒಂದೊಂದತರಹ ಆಲೋಚನೆ ಮತ್ತು ವರ್ತನೆಗಳು. ಅದು ಹೇಗಿದೆಯೊ ಹಾಗೆ ಸ್ವೀಕರಿಸಿ ಹೋಗೋ ಪ್ರವೃತ್ತಿ ಒಳ್ಳೆಯದು. ಕಾಮಾಲೆ ಕಣ್ಣಿನವನಿಗೆ ಎಲ್ಲವೂ ಹಳದಿಯಾಗೆ ಕಾಣುತ್ತೆ. ಹಾಗೆ ನಮ್ಮ ದೃಷ್ಟಿಕೋನದಲ್ಲಿ ಜಗತ್ತನ್ನು ನಾವು ನೋಡಿದರೆ ಕೆಲ ಸಂಗತಿಗಳು ಒಪ್ಪಿಗೆ ಯಾಗ್ತವೆ ಕೆಲವು ಒಪ್ಪಿಗೆಯಾಗಲ್ಲ. ಹಾಗೆ ಬೇರೆಯವರಿಗೂ ಸಹ. ಎಲ್ಲದನ್ನು ದಾಖಲಿಸುತ್ತ ಹೊರಟರೆ ಸಿನಿಕತನ ಜಾಸ್ತಿಯಾಗುತ್ತೆ. ಆ ದಿನದ ಸಮಾರಂಭದಲ್ಲಿ ಮುಖ್ಯ ಘಟನೆಗಳಿಗೆ ಮಾತ್ರ ಪ್ರಾಶಸ್ತ್ಯ ಕೊಟ್ಟರೆ ಸಾಕೇನೋ, ಬೇರೆಯದ್ದೂ ಅದು ಸಾಮಾನ್ಯ. ಅದು ಯಾರಿಗೆ ಪ್ರಿಯವಾಗುತ್ತೊ ಅವರಿಗೆ ಸಹ್ಯ. ಅವರು ಹೀಗಿದ್ದರು, ಹಾಗೆ ಮಾತಾಡ್ತಾಯಿದ್ದರು, ಇಂತಾ ಬಟ್ಟೆ ತೊಟ್ಟಿದ್ದರು ಅಂತ ಹೇಳ್ಬೇಕಂದರೆ ಒಂದು ಟಿವಿ ಕಾರ್ಯಕ್ರಮ ಮಾಡಿ ಜನರಿಗೆ ತೋರಿಸಿದರೆ ಟಿವಿಯವರ ಟಿ.ಆರ್.ಪಿ ಯಾದ್ರು ಜಾಸ್ತಿಯಾಗುತ್ತೆ.

  ಉತ್ತರ
  • harishathreya
   ಮೇ 30 2011

   ಆತ್ಮೀಯ
   ನಡೆದ ಅ೦ದೋಲನದ ಪೂರ್ತಿ ವರದಿಯನ್ನ ಟಿವಿಗಳಲ್ಲಿ ಪೇಪರ್ ಗಳಲ್ಲಿ ಓದಿರ್ತೀರಿ ಅಲ್ವಾ? ಆದರೆ ಅಲ್ಲಿನ ಕಾರ್ಯಕರ್ತರ, ಬ೦ದವರ ಮನಸ್ಸು ಹೇಗಿತ್ತು ಅನ್ನೋದು ಆಲ್ಲೆಲ್ಲೂ ಹಾಕಲ್ಲ. ಅದನ್ನ ಹೇಳೋ ಪ್ರಯತ್ನ ಇದು,ಅಷ್ಟೆ. ಇಲ್ಲಿ ಕಾಮಾಲೆ ಕಣ್ಣಿನ ಪ್ರಶ್ನೆ ಹೇಗೆ ಬ೦ತೋ ಗೊತ್ತಿಲ್ಲ. ಅಲ್ಲಿ ಇದ್ದದ್ದು ಹಾಗೆ. ಕೆಲ ಕಾರ್ಯಕರ್ತರಿಗೆ ಅಲ್ಲಿ ತಮ್ಮ ಕಾಳಜಿ(?)ಯನ್ನ ಶೋ ತೋರಿಸೋ ಹಪಹಪಿ ಇತ್ತು. ಇ೦ಥಾ ಬಟ್ಟೆ ತೊಟ್ಟಿದ್ರು ಅ೦ತೆಲ್ಲಾ ಬರೆಯಕ್ಕೆ ಕಾರಣ ಇದು. ಅವರಿಗೆ ನಿಜವಾದ ಕಾಳಜಿ ಅಥವಾ ತಾವು ಯಾವ ಮಹೋನ್ನತ ಕೆಲಸಕ್ಕೆ ಬ೦ದಿದೀವಿ ಅನ್ನೋದರ ಕಲ್ಪನೆಯೇ ಇಲ್ಲದೆ ಕೇವಲ ’ನಾನು ಅಣ್ಣಾ ಪ್ರೋಗ್ರಾಮ್ ಗೆ ಹೋಗಿದ್ದೆ’ ಅ೦ತ ಹೇಳ್ಕೊಳ್ಳೋ ಹುಚ್ಚಿತ್ತು. ಇದ್ದದ್ದನ್ನ ನೇರವಾಗಿ ಹೇಳಿದ್ರೆ ಯಾಕಣ್ಣ ಕೋಪ?
   ಹರಿ

   ಉತ್ತರ
   • ಸುಂದರ್
    ಜೂನ್ 1 2011

    ಆತ್ಮೀಯ, ಅಣ್ಣಾ ಅನ್ನುವ ನಿಮ್ಮ ಸೋಗಲಾಡಿತನದ ಮಾತುಗಳು ಬೇಡ, ಇನ್ನೂ ಕೋಪದ ಬಗ್ಗೆ!!!! ನಾನು ಸಹ ಇದ್ದದ್ದನ್ನು ನೇರವಾಗೆ ಹೇಳಿದ್ದು. ಹೀಗಿರುವಾಗ ಕೋಪ ಎಲ್ಲಿಯದು. ಚೇತನ್ ಜೀರಾಳ್ ರವರು ಸಹ ಲೇಖನ ಬರೆದಿದ್ದಾರೆ ಹಾಗೆ ಇರಬೇಕು ಅನ್ನೋದು ನನ್ನ ಭಾವನೆ. ನೀವು ಯಾವ ದೃಷ್ಟಿ ಕೋನ ಇಟ್ಟುಕೊಂಡು ಹೋಗಿದ್ದೀರೊಆದೃಷ್ಟಿ ಕೋನದಲ್ಲಿ ಬರೆದಿದ್ದೀರಿ. ನಿಷ್ಕಲ್ಮಶ ಮನಸ್ಸಿನಿಂದ ಭಾಗವಹಿಸಿದ್ದರೆ ಆ ದೃಷ್ಟಿಕೋನದಿಂದ ನೋಡುತ್ತಿರಲಿಲ್ಲ. ಟೀವಿನಲ್ಲಿ ಪೇಪರ್ ನಲ್ಲಿ ಹಾಕಲ್ವಲ್ಲ ಅಂತ ಹೇಳಿದ್ರಿ, ಅದಕ್ಕೆ ಮುಂಚೇನೆ ಹೇಳಿದ್ದು ಒಂದು ಕಾರ್ಯಕ್ರಮ್ ಮಾಡಿ ಹಾಕಬೇಕಿತ್ತು, ಟಿಆರ್ ಪಿ ಆದರು ಜಾಸ್ತಿಯಾಗ್ತಾಯಿತ್ತು.

    ಉತ್ತರ
    • harishathreya
     ಜೂನ್ 1 2011

     ಆತ್ಮೀಯ
     ಅಣ್ಣಾ ಅ೦ತ ಕರೆಯೋದು ಸೋಗಲಾಡಿತನ ಹ್ಮ್! ಗ್ರೇಟ್ ! ಇರ್ಲಿ ಬಿಡಿ. ನಾನು ಯಾವ ಮನಸ್ಥಿತಿಯಿ೦ದ ಹೋಗಿದ್ದೆ ಅನ್ನೋದು ನನಗೆ ಗೊತ್ತು. ಅಲ್ಲಿ ಹೇಗಿರುತ್ತೆ ಅನ್ನೋ ಕಲ್ಪನೇಲಿ ಹೋಗಿದ್ದೆ ಅನ್ನೋದನ್ನ ಲೇಖನ (ನಿಮ್ಮ ಪ್ರಕಾರ ?) ದಲ್ಲಿ ಅಪರೋಕ್ಷವಾಗಿ ಹೇಳಿದ್ದೀನಿ. ಧನಾತ್ಮಕತೆಯಿ೦ದ ಬರೆಯೋದು ಅ೦ದ್ರೆ ಋಣಾತ್ಮಕ ವಿಷಯಗಳನ್ನು ಕಡೆಗಣಿಸಿ ಬರೆಯೋದು ಅ೦ತಾದ್ರೆ ಎಲ್ಲಾ ತಪ್ಪುಗಳನ್ನೂ ಮುಚ್ಚಿ ಬರೆದುಬಿಡಬಹುದು. ಕಳ್ತನ ಮಾಡಿದ ಅನ್ನೋದನ್ನ ಮುಚ್ಚಿಟ್ಟು ಅವನು ತು೦ಬಾ ವೇಗವಾಗಿ ಓಡಿಹೋದ ಅ೦ತ ಬರೀಬಹುದು. ಇರ್ಲಿ ಬಿಡಿ.ನಿಶ್ಕಲ್ಮಶ ಮನಸ್ಸಿನಿ೦ದ ಅ೦ದ್ರಿ ನನ್ನ ಕಲ್ಪನೆಯಲ್ಲಿ ಅದೊ೦ದು ಹೋರಾಟ ಮತ್ತು ಅಲ್ಲಿನ ಜನತೆ ಅದನ್ನು ಸ್ವೀಕರಿಸುವ ರೀತಿಯ ಬಗ್ಗೆ ಒ೦ದು ಕೆಟ್ಟ ವ್ಯವಸ್ಥೆಯವಿರುದ್ಧ ಹೋರಾಟ ಎನ್ನುವ ಭಾವವಿರುವ೦ಥ ಕಲ್ಪನೆಯನ್ನಿಟ್ಟುಕೊ೦ಡು ಹೋದೆ. ಇದು ಕಲ್ಮಶವೋ ನಿಶ್ಕಲ್ಪಶವೋ ಹೇಳಿ?. ಅಲ್ಲಿ ಹೋಗುವಾಗ ಇರುವ ಮನಸ್ಸು ಇರಬೇಕಾದ ಮನಸ್ಸಿನ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಸುಮ್ನೆ ಫ೦ಕ್ಶನ್ ನಡ್ಯುತ್ತೆ ತೆಪ್ಗೆ ಹೋಗಿ ಕೂತ್ಕೊ೦ಡು ಸಿನಿಮಾ ನೋಡಿದ್ ಹಾಗೆ ನೋಡ್ಕೊ೦ಡು ಬರಕ್ಕೆ ಅದು ಮನರ೦ಜನೆ ಅಲ್ಲ ಅಲ್ವಾ. ಜಾಗೃತಿ ಮೂಡಿಸೋ ನಿಟ್ತಿನಲ್ಲಿ ಹಮ್ಮಿಕೊ೦ಡ ಸಮಾರ೦ಭ. ಅಲ್ಲಿನ ವಾತಾವರಣ ಹೇಗಿರ್ಬೇಕು? ಬಿಡಿ ಇದು ಸಾಮಾನ್ಯ ಅ೦ತ ಅನ್ದ್ಕೊಳ್ಳೋಣ. ಆದರೆ ಬ೦ದ೦ಥ ಅಥವಾ ಪಾಲ್ಗೊ೦ಡ೦ಥ ಕಾರ್ಯ ಕರ್ತರು ಜನಗಳು ಅವರ ಮನಸ್ಥಿತಿ ಹೇಗಿರ್ಬೇಕು? ಇದನ್ನೆಲ್ಲಾ ಹೇಳಿದ್ರೆ ಅದು ಪಾಪ! ಮತ್ತೆ ಟಿ ಆರ್ ಪಿ ರೇಟ್ ಜಾಸ್ತಿ ಮಾಡೋವ೦ಥ ಲೇಖನ! ಸರಿ ಸರ್.
     ಸಭೆಯ ಮುಖ್ಯಾ೦ಶಗಳನ್ನ ಬರೆಯೋದು ಒಪ್ಪತಕ್ಕ ಮಾತೇ ಜೊತೆಗೆ ಅಲ್ಲಿನ ಅನಾಚಾರಗಳನ್ನು ಹೇಳಿದ್ರೆ ತಪ್ಪೇನು? ಇರ್ಲಿ ಬಿಡಿ ಸರ್. ನನ್ನ ಉದ್ದೇಶ ಇಷ್ಟೇ ನಾವು ಬ೦ದ ಕೆಲ್ಸ ಏನು ಅ೦ತಾನೂ ಗೊತ್ತಿಲ್ದೆ ಬ೦ದು ಶೋ ತೋರಿಸ್ಬಾರ್ದು. ಇದ್ರಿ೦ದ ಆ ಸಭೆಯ ಮರ್ಯಾದೆ ಹಾಳಾಗಿ ಹೋಗುತ್ತೆ ಅಷ್ಟೆ.
     ಅರ್ಧ ಲೋಟ ತು೦ಬಿದೆ ಅ೦ತ ಹೇಳೋದು ಸರಿ ಅದರ ಜೊತೆಗೆ ಖಾಲಿ ಅಗಿದೆ ಅ೦ತ ಗೊತ್ತಾಗ್ತಿರುತ್ತಲ್ಲ ಅದನ್ನೂ ಹೇಳ್ಬೇಕಾಗುತ್ತೆ ಸರ್. ಯಾಕೆ ಖಾಲಿ ಆಯ್ತು ಅ೦ತ. ಹ್ಮ್!
     ಹರಿ

     ಉತ್ತರ
 2. ಹರೀಶ್,
  ಅನಿವಾರ್ಯ ಕಾರಣಗಳಿಂದ, ಅಲ್ಲಗೆ ಹೋಗಲಾಗದೇ ಉಳಿದವರ ಪ್ರಯೋಜನಕ್ಕಾಗಿ, ಕಣ್ಣಿಗೆ ಕಟ್ಟುವಂತೆ ಅಲ್ಲಿನ ಚಿತ್ರಣವನ್ನು ಈ ಬರಹದ ಮೂಲಕ ನೀಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು.
  ಆ ಭಿತ್ತಿಪತ್ರದಲ್ಲಿ…
  ಮೊದಲಿಗೆ “ಯಡ್ಯೂರಪ್ಪ ಭ್ರಷ್ಟರಲ್ಲ, ಇನ್ಯಾರೂ?” ಅನ್ನುವಾಗ… ಅವರು ಭ್ರಷ್ಟರಲ್ಲವೆಂದಾದರೆ ಇನ್ಯಾರು ಭ್ರಷ್ಟರು (ಹಾಗಾಗಿ ಅವರೇ ಭ್ರಷ್ಟರು) ಅನ್ನುವ ಅರ್ಥ ಬರುತ್ತದೆ,
  ಅದರ ಕೆಳಗೆ ಭ್ರಷ್ಟಾಚಾರಕ್ಕೆ ಏನೇನೋ ಕಾರಣಗಳು. ವಿರೋಧ ಪಕ್ಷದವರ ಮಾನಸಿಕ ಒತ್ತಡವೂ ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಅನ್ನುವುದು ಹಾಸ್ಯಾಸ್ಪದ!

  ಉತ್ತರ
  • harishathreya
   ಮೇ 30 2011

   ಆತ್ಮೀಯ
   ನಿಮ್ಮನ್ನ ತು೦ಬಾ ನೆನಪಿಸಿಕೊ೦ಡೆ. ಅಲ್ಲಿದ್ದ ಮತ್ತು ಆ ಕರಪತ್ರ ಹ೦ಚುತ್ತಿದ್ದ ಹುಡುಗ ಹುಡುಗನ್ನ ಹಿಡಿದು ಸ್ವಲ್ಪ ಮಾತನಾಡಿಸಲು ಯತ್ನಿಸಿದೆ. ಅಲ್ಲಿ೦ದ ಹಿ೦ದೆ ದೂರದಲ್ಲಿ ಒ೦ದು ಗು೦ಪು ಯಡ್ಯೂರಪ್ಪನವರ ಪರ ಮಾತನಾಡುತ್ತಿತ್ತು. “ಪಾಪ ಕಣ್ರಿ ಎಲ್ಲಾರೂ ಸೇರ್ಕೊ೦ಡು ಅವರನ್ನ ಕೆಡಿಸಿಬಿಟ್ರು. ನಿಜಕ್ಕೂ ಅವರೇನೂ ದುಡ್ಡು ತಿ೦ದಿಲ್ಲ” ಹೀಗೆ ಸಾಗಿತ್ತು ಅವರ ಲಹರಿ. ಕರ ಪತ್ರದಲ್ಲಿದ್ದ ಎಲ್ಲಾ ಅ೦ಶಗಳನ್ನು ಗಮನಿಸಿದಾಗ. ಮಾನಸಿಕ ಒತ್ತಡ (? :)) ಎಲ್ಲದರಿ೦ದ ಯಡ್ಯೂರಪ್ಪ ಹೀಗಾರ೦ತೆ ಎ೦ಬರ್ಥದ ಮಾತುಗಳಿವೆ. ಜೊತೆಗೆ ಕರಪತ್ರಗಳು ಎಲ್ಲಿ೦ದ ಬ೦ದವು ಎ೦ಬುದು ಇನ್ನೂ ಕುತೂಹಲಕಾರಿ ವಿಷಯ, ಬಸವನಗುಡಿಯಿ೦ದ ಶ್ರೀನಗರಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಒ೦ದು ಪ್ರಿ೦ಟಿ೦ಗ್ ಪ್ರೆಸ್ ನಲ್ಲಿ (ಅದರ ಹೆಸರು ಇಲ್ಲಿ ಬೇಡವೆನಿಸುತ್ತೆ) ಅದನ್ನ ಮುದ್ರಿಸಲಾಗಿತ್ತು ಮತ್ತು ಅದು ಯಡ್ಯೂರಪ್ಪನವರ ಪರವಾಗಿಯೇ ಬರೆಯಲು ವ್ಯಕ್ತಿಯೊಬ್ಬನಿಗೆ ಹೇಳಿತ್ತು. ಆತ ಆತುರದಲ್ಲಿ ಮತ್ತು ಕಾ೦ಟ್ರವರ್ಸಿ ಆಗದ೦ತೆ ಬರೆಯಲು ಹೋಗಿ ಆದ ಅಚಾತುರ್ಯ ಇದು. ಅದರ ಪೂರ್ತಿ ವಿವರಗಳು ನನ್ನ ಬಳಿ ಇದೆ. ನಾನೇ ಮುಖತಃ ಹೋಗಿ ನೋಡಿದ್ದೇನೆ.ಇರಲಿ ಆದರೆ ಬರೆದವನಿಗೂ ಸರಿಯಾಗಿ ಬರೆಯಲು ಬ೦ದಿಲ್ಲ ಪಾಪ! ಇರಲಿ ಬಿಡಿ ಒ೦ದೊಳ್ಳೆ ಮಾಹಿತಿಪೂರ್ಣ ಕಾರ್ಯಕ್ರಮ ಮತ್ತು ವಿನೋದ ತಪ್ಪಿಸಿಕೊ೦ಡ್ರಿ. ಹ್ಮ್!

   ಉತ್ತರ
 3. ಒಳ್ಳೆ ಬರಹ ಹರೀಶ್ ಅವ್ರೆ…… ಎಷ್ಟೋ ಸಲ ಮಾಧ್ಯಮಗಳಲ್ಲಿ ಬರುವ ವರದಿ ವಸ್ತು ನಿಷ್ಠ ಆಗಿರುವುದೇ ಇಲ್ಲ 😦 ಪರ ಇಲ್ಲವೇ ವಿರೋಧ 😦 ಪೂರ್ವಾಗ್ರಹ ಪೀಡಿತವಾಗಿರುತ್ತವೆ…… ಮನೇಲಿ ಇರೋಕ್ಕೆ ಬೋರ್ ಆಗಿ ಕಾರ್ಯಕ್ರಮಕ್ಕೆ ಬರುವ
  ಪುಣ್ಯಾತ್ಮ(ತ್ಮೆಯ)ರು ಎಷ್ಟೋ ಮಂದಿ ಖಂಡಿತಾ ಇದ್ದಾರೆ……. ಅಂಥವರಿಗೆ ಅಣ್ಣಾ ಹಜಾರೆ ಕಾರ್ಯಕ್ರಮ ಒಂದು “ವೀಕ್ ಎಂಡ್ ಇವೆಂಟ್” ಅಷ್ಟೇ…….

  ಉತ್ತರ
 4. ರವಿಕುಮಾರ ಜಿ ಬಿ
  ಮೇ 30 2011

  ಉತ್ತಮ ಲೇಖನ ಹರೀಶ್ ರವರೆ ,
  ಕಣ್ಣಿಗೆ ಕಟ್ಟಿದಂತಿತ್ತು !! ಸೇರಿದ ಜನರ ಒಳ ಮನಸ್ಸನ್ನು ಸರಿಯಾಗಿ ಬಿಡಿಸಿ ಹೇಳಿದ್ದೀರಿ…..
  ಇತ್ತೀಚಿಗೆ ಬಹಳ ಕಾರ್ಯಕ್ರಮಗಳಿಗೆ ಜನ ಸೇರೋದೇ ಇದೇ ಉದ್ದೇಶಕ್ಕೆ! ಅಪವಾದ ಇರಬಹುದು…..
  ಇನ್ನೂ ಒಂದು ಹೇಳ್ತೀನಿ ಕೇಳಿ …ಎಲ್ಲರೂ ಅಲ್ಲದಿದ್ದರೂ ಕೆಲವರಾದರೂ ಅಲ್ಲಿಂದ ವಾಪಸು ಬರುವಾಗ …ಏನಿಲ್ಲಾ ಅಂದರೂ ಕೊನೆ ಪಕ್ಷ ..ಟ್ರಾಫಿಕ್ ಪೋಲಿಸ್ ಕೈಗೆ ಸಿಕ್ಕಿ ಬಿದ್ದು ನೂರೋ ಇನ್ನೂರೋ “ಲಂಚ ಕೊಟ್ಟು” ಕೇಸ್ ತಪ್ಪಿಸಿಕೊಂಡು ಬಂದಿರುತ್ತಾರೆ !!!! ಅವರೇ ಅಲ್ಲಿ ಬ್ರಷ್ಟಾಚಾರ ತೊಲಗಲಿ …ಬ್ರಷ್ಟರಿಗೆ ಧಿಕ್ಕಾರ ಅನ್ನೋ ಧಿಕ್ಕಾರ ವನ್ನೂ ಎಲ್ಲರೊಂದಿಗೆ ದೊಡ್ಡ ದಾಗಿ ಕೂಗಿರುತ್ತಾರೆ ಕೂಡ !!!!!!!
  ಜನ ಸರಿ ಹೋಗೋವರೆಗೆ ಭ್ರಷ್ಟಾಚಾರ ನಿಲ್ಲೋದಿಲ್ಲಾ !!! ಅಣ್ಣಾ ಹಜಾರೆಯವರು ಒಬ್ಬರೇ ಏನು ಮಾಡಲಾದೀತು?

  ಉತ್ತರ
  • ರವಿ
   ಮೇ 30 2011

   ಲೋಟ ಅರ್ಧ ಖಾಲಿ ಎನ್ನಬೇಡಿ.. ಅರ್ಧ ತುಂಬಿದೆ ಎನ್ನಿ.. “ಕೆಲವರು” ಟ್ರಾಫಿಕ್ ಪೋಲಿಸ್ ಗೆ ಲಂಚ ಕೊಟ್ಟಿರುತ್ತಾರೆ ಎನ್ನುವಾಗ ಇನ್ನೂ ಕೆಲವು ಸಮಾರಂಭದಿಂದ ಪ್ರೇರಿತರಾಗಿ ಲಂಚ ಕೊಡುವುದನ್ನು ನಿಲ್ಲಿಸಿರಬಹುದಲ್ಲ. “ಕೆಲವರಿಗೆ” ತಾವು ಬಂದ ಸಮಾರಂಭದ ಉದ್ದೇಶ ತಿಳಿದಿರದೆ ಇದ್ದರೂ ಸಮಾರಂಭ ಮುಗಿದ ಮೇಲೆ ಅವರಲ್ಲಿ ಕೆಲವರು ಬದಲಾಗಿರಬಹುದಲ್ಲ.. ಬದಲಾವಣೆ ಒಮ್ಮಿಂದೊಮ್ಮೆಲೆ ಸಾಧ್ಯವಿಲ್ಲವಲ್ಲ 🙂

   ಉತ್ತರ
 5. ರವಿಕುಮಾರ ಜಿ ಬಿ
  ಮೇ 31 2011

  ರವಿ ಅವರೇ ,

  ಬ್ರಷ್ಟಾಚಾರದ ವಿಷಯದಲ್ಲಿ ” ಅರ್ದ ಖಾಲಿ” ಎನ್ನುವುದೇ ಸರಿಯಾದೀತು !!! ಯಾಕೆಂದರೆ ಭ್ರಷ್ಟರಿಗೆ ಮತ್ತು ಅವರನ್ನು ಪೋಷಿಸುವ (ವಿರೋಧಿಸುವ ನಾಟಕ ವಾಡುವ) ಜನರಿಗೆ ಧನಾತ್ಮಕ ಚಿಂತನೆ ಅರ್ಥ ಆಗೋದಿಲ್ಲ ಕಣ್ರೀ! ಅವರಿಗೆ ಅವರ ಧಾಟಿಯಲ್ಲೇ ಋಣಾತ್ಮಕವಾಗಿಯೇ ಹೇಳಬೇಕು, ಆಗಲೇ ಅರ್ಥವಾಗೋದು. ” ಬುದ್ದಿವಂತನಿಗೆ ಮಾತಿನ ಪೆಟ್ಟು ,ದಡ್ಡನಿಗೆ ದೊಣ್ಣೆ ಪೆಟ್ಟು ” (ದಡ್ದನಂತೆ ನತಿಸೋನಿಗೆ ಯಾವ ಪೆಟ್ಟೋ ಗೊತ್ತಿಲ್ಲ!!!! )

  ಉತ್ತರ
 6. ಮಿತ್ರ
  ಜೂನ್ 2 2011

  ಲೇಖನದಲ್ಲಿ ಸಿಕ್ಕಾಬಟ್ಟೆ ಕಾಗುಣಿತ ತಪ್ಪುಗಳು ಕಂಡಿವೆ, ನಿಮ್ಮ ಗುರುಗಳು ಸಾಸ್ಕೆನ್ ನಲ್ಲಿ ಕೆಲಸ ಮಾಡೊದು ಬಿಟ್ಟು ಊರವರ ತಪ್ಪು ಗಳನ್ನು ತೋರಿಸಿ ತಿದ್ದುವ ಕೆಲಸ ಮಾಡುತಿದ್ದರು. ಪಾಪ ನೀವು ಅವರ ಶಿಷ್ಯರು ಅಲ್ವ, ಅದಕ್ಕೆ ಹೋಗಲಿ ಅಂತ ಬಿಟ್ಟಿದ್ದಾರೆ ಅಂತ ಅನ್ನಿಸುತ್ತೆ. ಅವರಿಗೊಂದು ನ್ಯಾಯ ಊರವರಿಗೊಂದು ನ್ಯಾಯ.!!! 🙂 ಹೋಗಲಿ ಬಿಡಿ ಕಲಿಗಾಲ ಏನು ಮಾಡೋಕೆ ಆಗುತ್ತೆ.

  ಉತ್ತರ
  • harishathreya
   ಜೂನ್ 2 2011

   ಆತ್ಮೀಯ
   ಕಾಗುಣಿತ ತಪ್ಪುಗಳಿಗೆ ಅ೦ತ ನನಗೇ ಹೇಳಿ ಗುರು ಶಿಷ್ಯ ಅನ್ನೋ ಮಾತ್ಯಾಕೆ? ಅಲ್ವಾ ತಪ್ಪಾಯ್ತು ತಿದ್ಕೋತೀನಿ 🙂 ಸರಿ ಮಾಡ್ತೀನಿ ಸಮಯ ಬೇಕು ಮುಖ್ಯ. ಕೆಲ್ಸದ ನಡುವೆ ಬರ್ಯೋ ಅಭ್ಯಾಸ ಇರೋದ್ರಿ೦ದ ಹೀಗಾಗುತ್ತೆ. ಅದಕ್ಕೇ೦ತ ಕೂತು ಬರ್ಯಲ್ಲ ಸ್ವಾಮಿ.
   ಹರಿ

   ಉತ್ತರ
   • ಮಿತ್ರ
    ಜೂನ್ 2 2011

    ಎಲ್ಲಾ ಓಕೆ ಆದರೆ ಇದ್ಯಾಕೆ “ಕೆಲ್ಸದ ನಡುವೆ ಬರ್ಯೋ ಅಭ್ಯಾಸ ಇರೋದ್ರಿ೦ದ ಹೀಗಾಗುತ್ತೆ. ಅದಕ್ಕೇ೦ತ ಕೂತು ಬರ್ಯಲ್ಲ ಸ್ವಾಮಿ” ನಿಮ್ಮ ತಪ್ಪುಗಳಿಗೆ ಇದು ಸಮರ್ಥನೆಯೇ? ನಿಮ್ಮ ದಾಟಿ ನೋಡಿದ್ರೆ ಗುರುಗಳು ಹಾಕಿ ಕೊಟ್ಟ ಮಾರ್ಗದಲ್ಲೇ ನಡೆಯುತ್ತಿರುವ ಸೂಚನೆ ಗಳು ಗೊತ್ತಾಗ್ತ ಇವೆ. ನಿಮ್ಮ ವಯಸ್ಸು ತುಂಬಾ ಚಿಕ್ಕದು, ಕಲಿಯುವುದು ಬೇಕದಾಷ್ಟಿದೆ, ಪ್ರಪಂಚವನ್ನು ನೋಡುವುದು ಇನ್ನೂ ಬೇಕಾದಷ್ಟಿದೆ. ಈಗಲೇ ಅತಿಬುದ್ದಿವಂತರ ತರಹ ಆಡುವುದು ಒಳ್ಳೆಯದಲ್ವೇನೋ? ವಯಸ್ಸಿಗೆ ಮೀರಿದ ಪ್ರಬುದ್ದತೆ ಒಳ್ಳೆಯದು ಅದು ದುರಹಂಕಾರ ವಾಗಬಾರದು.

    ಉತ್ತರ
    • harishathreya
     ಜೂನ್ 2 2011

     ಆತ್ಮೀಯ
     ಶಬ್ಬಾಶ್ ಮಿತ್ರ. ನನ್ನ ತಪ್ಪುಗಳಿಗೆ ಸಮರ್ಥನೆ ಕೊಟ್ಟುಕೊಳ್ತಾ ಇದ್ದೀನಿ ಅನ್ನೋ ನಿಮ್ಮ ಮನೋಧಾಟಿ ಸೂಪರ್ರೋ ರ೦ಗ. ಮೊದಲನೆಯದಾಗಿ ಅವರು ನನ್ನ ಗುರುಗಳು ಅಲ್ಲ. ಅವರಿಗೂ ನನಗೂ ತು೦ಬಾ ಭಿನ್ನಾಭಿಪ್ರಾಯಗಳಿವೆ ಅದು ಕೇವಲ ವಿಷಯದಲ್ಲಿ. ಪ್ರಪ೦ಚಾನ ನೋಡೋದ್ ಬೇಕಾದಷ್ಟಿದೆ ಒಪ್ಕೋತೀನಣ್ಣ. ಅತೀ ಬುದ್ಧಿವ೦ತಿಕೆ, ಹ್ಮ್! ನನ್ ಮಾತಲ್ಲಿ ಅತೀ ಬುದ್ಧಿವ೦ತಿಕೆ ಏನಿದ್ಯೋ ನಾ ಕಾಣೆ! ದುರಹ೦ಕಾರದ ಮಾತು ಅದು ನೋಡುಗನ ಮತ್ತು ಬರಹದ ಮೂಲಕ ವ್ಯಕ್ತಿಯನ್ನು ತಿಳಿಯಲು ಪ್ರಯತ್ನಿಸುವವರ ಮೇಲೆ ಅವಲ೦ಬಿತ. ಚಿಕ್ಕೋನು ಅ೦ದಿದ್ ಸಖತ್ ಖುಷಿ ಆಯ್ತು 🙂
     ಒ೦ದು ಸೂಚನೆ ನಮ್ಮ ಜಗಳ ವ್ಯಕ್ತಿಗತ ಮಟ್ಟಕ್ಕಿಳಿತಾ ಇದೆ. ಟೀಕೆ ವ್ಯಕ್ತಿಗತವಾಗಿಬಿಟ್ರೆ ವಿಷಯದ ಮೇಲಿನ ಚರ್ಚೆ ಕಮ್ಮಿ ಆಗ್ಬಿಡುತ್ತೆ. ನನ್ನ ಮಾತು ಅತಿ ಅನ್ಸುತ್ತೆ ಕ್ಷಮಿಸಿ. ಯೋಚಿಸಿ.
     ಹರಿ

     ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments