ವಿಷಯದ ವಿವರಗಳಿಗೆ ದಾಟಿರಿ

ಜೂನ್ 2, 2011

16

ಇದು ಹಿಂದಿ ಹೇರಿಕೆ ಬೂತದ ಕೈಚಳಕ

‍ನಿಲುಮೆ ಮೂಲಕ
– ಅರುಣ್ ಜಾವಗಲ್
ಸರಕಾರ ತನ್ನ ಕಾರ್ಯಗಳು ಜನರಿಗೆ ತಲುಪಿಸೊಕ್ಕೆ ಪತ್ರಿಕೆಗಳನ್ನ ಅವಲಂಬಿಸಿದೆ. ಕೆಲವು ಪ್ರಮುಕ ಕಾರ್ಯಗಳನ್ನ/ ಸೌಲಬ್ಯಗಳನ್ನ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತೆ. ಪತ್ರಿಕೆಗಳಲ್ಲಿ ಜಾಹಿರಾತನ್ನ ನೋಡೊ ಜನ, ಆ ಕಾರ್ಯ/ಸೌಲಬ್ಯದ ಲಾಬ ಪಡೆದುಕೊಳ್ಳಬೇಕು ಅನ್ನೊದು ಉದ್ದೇಶ(?).

ಆದರೆ ಸರಕಾರ ಈ ಜಾಹಿರಾತು ನೀಡೋ ವಿಶಯದಲ್ಲೂ ತಾರತಮ್ಯ ಮಾಡಿ ತನ್ನ ಕಾರ್ಯ/ ಸೌಲಬ್ಯ ಗಳು ಕನ್ನಡಿಗರಿಗೆ ಸಿಗಬಾರ್ದು ಅನ್ನೊ ತರ ನಡೆದುಕೊಳ್ತಿರೋದು ಮಾತ್ರ ನಿಗೂಡ! ಇದೋ ಹೀಗೆ ಅಂತೀರ- ಕನ್ನಡ ಪತ್ರಿಕೆಗಳಲ್ಲಿ ಕನ್ನಡವಲ್ಲದ, ಕನ್ನಡಿಗರಿಗೆ ಅರಿವಿಲ್ಲದ ಹಿಂದಿ ಬಾಶೆಯಲ್ಲಿ ಜಾಹಿರಾತು ನೀಡೋದು. 

ಈ ಕೆಲ್ಸವನ್ನ ಸರಕಾರ ಬಹಳ ವ್ಯವಸ್ತಿತವಾಗಿ ಮಾಡ್ತಿದೆ. ಇದರ ಕೆಲವು ಕೆಲವು ಸ್ಯಾಂಪಲ್ ಗಳು-

೧. ಕೆಲವು ವರ್ಶಗಳ ಹಿಂದೆ ನೈರುತ್ಯ ರೈಲ್ವೆ ,ಡಿ ದರ್ಜೆ ನೌಕರರಿಗೆ(೭ ಅತವಾ ೮ ನೇ ತರಗತಿ ಪಾಸಾದವರಿಗೆ) ಅರ್ಜೆಗೆ ಅಹ್ವಾನಿಸಿ, ಕನ್ನಡವಲ್ಲದ ಬಾಶೆಯಲ್ಲಿ ಯಾವುದೋ ಒಂದೆರಡು ಚಿಕ್ಕ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತಂತೆ. ಆ ಜಾಹಿರಾತು ಓದೋಕ್ಕೆ ಆಗದ ಕನ್ನಡದವರು ಅರ್ಜಿ ಹಾಕಿದ್ದೆ ಕಡಿಮೆ ಜನ. ಎಂತಾ ದುರಂತ.
೨. ಸ್ವಲ್ಪ ದಿನಗಳ ಹಿಂದೆ ವಿಕ ನಲ್ಲಿ, ರೈಲ್ವೆಯಲ್ಲಿ ಪ್ರಯಣಿಕರ ಸುರಕ್ಷತೆಯ ಅರಿವಿಗಾಗಿ ನೀಡೋ ಜಾಹಿರಾತು ಹಿಂದಿಯಲ್ಲಿ ಇತ್ತು. ಏನಪ್ಪ ಕನ್ನಡಿಗರ ಸುರಕ್ಷತೆ ಸರಕಾರಕ್ಕೆ ಬೇಡ್ವ?

೩. ಮಿನಿಸ್ಟ್ರಿ ಆಫ್ ಓವರ‍್ಸೀಸ್ ಇಂಡಿಯನ್ ಅಫೇರ್ಸ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹಿಂದಿ ಬಾಶೆಯ ವಾಕ್ಯವನ್ನ ಕನ್ನಡ ಲಿಪಿನಲ್ಲಿ ಬರೆದು ಜಾಹಿರಾತು ಹಾಕಿದೆ. ಇದು ಕಾಟಾಚಾರಕ್ಕೆ ಹಾಕಿರೋದೇ ಅಲ್ವ? ಜಾಹಿರಾತು ಕೊಟ್ಟಂಗು ಇರ್ಬೇಕು, ಕೊಡದೇ ಇರೋ ಹಾಗೂ ಇರಬೇಕು. ನಮ್ ದುಡ್ಡು , ಹಿಂದಿ ಜಾತ್ರೆ.

೪. ಮೊನ್ನೆ ಮತ್ತೆ ರೈಲ್ವೆ , ವಿಕ ನಲ್ಲಿ ಜಾಹಿರಾತು ನೀಡಿದೆ. ದೇವರಾಣೆ ಯಾಕೆ ಅಂತ ನನಗಂತೂ ಗೊತ್ತಾಗ್ಲಿಲ್ಲ.

ಇವು ಬರಿ ಸ್ಯಾಂಪಲ್ ಗಳು ಅಶ್ಟೆ! ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಜಾಹಿರಾತುಗಳ ಸುರಿಮಳೆನೇ ಆಗ್ತಿದೆ.

ಹಿಂದಿ ಗೊತ್ತಿರೋರಿಗೆ ಮಾತ್ರ ಸೌಲಬ್ಯಗಳು ಸಿಕ್ಲಿ
ಈ ಮೇಲಿನವು ಕನ್ನಡಿಗರ ಅತವಾ ಹಿಂದಿಯೇತರರ ಮೇಲೆ ನಡೆಯುತ್ತಿರೋ ಹಿಂದಿ ಹೇರಿಕೆ ಬೂತದ ಕೈಚಳಕ. ಮತ್ತೆ ಮತ್ತೆ ಕನ್ನಡಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹಿರಾತು ನೀಡ್ತಿರೋದನ್ನ ನೋಡಿದ್ರೆ, ಇವು ಏನೋ ಗೊತ್ತಿಲ್ಲದೇ ಆಗಿರೋ ತಪ್ಪ್ಪು ಅಂತ ಅನ್ನಿಸಲ್ಲ, ಈ ಕೆಲ್ಸ ಬಹಳ ವ್ಯವಸ್ತಿತವಾಗಿ ನಡಿತಿದೆ ಅನ್ನೋದಂತು ಡೆಪೆನೆಟ್ ಆಗಿ ಹೇಳ್ಬಹುದು. ಮತ್ತ್ತೆ.. ಈ ಜಾಹಿರಾತುಗಳನ್ನ ನೋಡಿದ್ರೆ, ಹಿಂದಿ ಗೊತ್ತಿರೋರಿಗೆ ಮಾತ್ರ ಸೌಲಬ್ಯಗಳು ಸಿಕ್ಲಿ. ಅನ್ನೊ ಸಂದೇಶ ಎದ್ದು ಕಾಣಿಸ್ತಿದೆ, ಈ ಸಂದೇಶ ನಿಜಕ್ಕೂ ಆತಂಕ ಹುಟ್ಟಿಸ್ತಿದೆ.

ಹಿಂದಿಯೇತರರೂ ಸೌಲಬ್ಯಗಳ ಅನುಕೂಲ ಪಡೆಯೋಕ್ಕೆ ಹಿಂದಿ ಗೊತ್ತಿರುವವರಶ್ಟೇ ಅಹ೯ರು
ಪ್ರಜಾಪ್ರಬುತ್ವದಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರೋ ಸರಕಾರನೇ, ಹಿಂದಿ ಗೊತ್ತಿದ್ರೆ ಮಾತ್ರ ಸೌಲಬ್ಯ ಅನ್ನೊ ಹಾಗಿನ ವ್ಯವಸ್ಥೆ ನಿರ್ಮಾಣ ಮಾಡೊಕ್ಕೆ ಹೊರಟಿರೋದು ಸರಿನಾ? ಪ್ರಜಾಪ್ರಬುತ್ವದಲ್ಲಿ ಕನ್ನಡಿಗರೂ, ಸರಕಾರದ ಕಾರ್ಯ/ ಸೌಲಬ್ಯಗಳ ಅನುಕೂಲ ಪಡೆಯೋಕ್ಕೆ ಹಿಂದಿ ಗೊತ್ತಿರುವವರಶ್ಟೇ ಅಹ೯ರು ಅಲ್ವ?

ಈ ಹಿಂದಿ ಹೇರಿಕೆ ಬೂತದಿಂದ ಮುಕ್ತಿ ಯಾವಗ?

16 ಟಿಪ್ಪಣಿಗಳು Post a comment
 1. ಜೂನ್ 2 2011

  ಅದ್ಯಕೊ ಗೊತ್ತಿಲ್ಲ ಹಿ೦ದಿ ಅ೦ದರೆ ಯಾಕಿಷ್ಟು ಕೋಪ ದ್ವೇಷ, ಅದು ಕೂಡ ನಮ್ಮ ಬಾಷೆಯಲ್ಲವೆ ಅದರಲ್ಲೂ ರಾಷ್ಟ್ರ ಬಾಷೆ, ವಿವಿದತೆಯಲ್ಲಿ ಎಕತೆ ಇರಬೇಕು ಅನ್ನುವುದು ಎಲ್ಲರ ವಾದ, ಆದರೆ ಎಲ್ಲಿದೆ ಎಕತೆ ನಮ್ಮ ರಾಷ್ತ್ರ ಬಾಷೆಯನ್ನೇ ವಿರೊದಿಸುತಿದ್ದೇವೆ ಆದರೆ ನಮ್ಮ ಜನ ಬೇರೆ ವಿದೇಶ ಬಾಷೆಯನ್ನು ಕಲಿತು (ಜರ್ಮನಿ, ಪ್ರೆ೦ಚ್) ಹೆಮ್ಮೆಯಿ೦ದ ಬೀಗುತ್ತ್ತಾರೆ, ಆದರೆ ಹಿ೦ದಿ ಮಾತ್ರ ಬೇಡ
  ಆದರೂ ಪ್ರಾದೇಶಿಕ ಬಾಷೆ ಮುಖ್ಯ ಅ೦ತ ನನಗು ಗೊತ್ತು ಹಾಗೆ೦ದ ಮಾತ್ರೆಕ್ಕೆ ರಾಷ್ತ್ರ ಬಾಷೆಯನ್ನು ವಿರೊದಿಸುವುದು ಸರಿಯಲ್ಲ. ಮೊದಲು ದೇಶ ನ೦ತರ ರಾಜ್ಯ, ಬಾಷೆ.

  ಉತ್ತರ
  • ವಿಜಯ್
   ಜೂನ್ 3 2011

   abhi082941, ಉತ್ತರ ಪ್ರದೇಶದ ಹಿಂದಿ ಪತ್ರಿಕೆಯಲ್ಲಿ ಕನ್ನಡ ಅಥವಾ ತಮಿಳು ಜಾಹೀರಾತು ಕೊಟ್ಟರೂ ಅದು ಸರಿ ಅಂತ ನೀವನ್ನುತ್ತೀರ? ವಿವಿಧತೆಯಲ್ಲಿ ಏಕತೆ ಅಲ್ಲಿಯೂ ಬೇಕಲ್ಲವ? ಬರೀ ನಮಗೆ ಮಾತ್ರ ಈ ಏಕತೆಯ ಪಾಠ ಯಾಕೆ? ಇಂತಹದು ವಿವಿಧತೆಯೂ ಅಲ್ಲ ಏಕತೆಯೂ ಅಲ್ಲ.

   ವಿವಿಧತೆಯಲ್ಲಿ ಏಕತೆ ಅಂದರೆ ಒಬ್ಬರ ಭಾಷೆಯ, ಸಂಸ್ಕೃತಿಯನ್ನು ಇನ್ನ್ನೊಬ್ಬರ ಮೇಲೆ ಹೇರುವುದಲ್ಲ, ಬದಲಾಗಿ ಎಲ್ಲರೂ ಪ್ರಾದೇಶಿಕವಾಗಿ ಭಾಷೆ, ಸಂಸ್ಕೃತಿ ಉಳಿಸಿಕೊಂಡು ಒಟ್ಟಾರೆ ದೇಶವಾಸಿಗಳಾಗಿ ಒಗ್ಗಟ್ಟಾಗಿರುವುದು.

   ವಿದೇಶಿ ಭಾಷೆಗಳು ಉದ್ಯೋಗಕ್ಕೆ/ ಅಂತಾರಾಷ್ಟ್ರೀಯ ಬಳಕೆಗೆ ಸಹಾಯವಾಗುತ್ತವೆ ಎಂದು ಜನ ಕಲಿಯುತ್ತಾರೆ ಹೊರತು ಪುಕ್ಸಟ್ಟೆ ಯಾರೂ ಕಲಿಯುವುದಿಲ್ಲ. ಹಿಂದಿಗೆ ಆ ಸಾಮರ್ಥ್ಯ ಇಲ್ಲ. ಇಲ್ಲಿ ಹಿಂದಿ ಭಾಷೆಯ ಮೇಲೆ ಯಾವ ಕೋಪವೂ ಇಲ್ಲ ಮತ್ತು ಅದು ರಾಷ್ಟ್ರಭಾಷೆ ಎಂಬ ಸುಳ್ಳಿನಿಂದ ಗೌರವವೂ ಇಲ್ಲ. ಹಿಂದಿ ಕಲಿಯುವ ಇಷ್ಟ ಇರುವವರು ಕಲಿತು ಬೀಗಲಿ. ಹಿಂದಿ ಬಳಸುವ ರಾಜ್ಯಗಳಲ್ಲಿ ಹಿಂದಿ ಬಳಸಿಕೊಳ್ಳಲಿ. ನಮಗೆ ನಮ್ಮ ಭಾಷೆ ಬೇಕು ಎಂದಷ್ಟೇ ಹೇಳುತ್ತಿರುವುದು.

   ಉತ್ತರ
 2. @ abhi082941, ಮೊದಲಿಗೆ ನನಗೆ ಹಿಂದಿ ಬಗ್ಗೆ ದ್ವೇಶವಾಗಲಿ ಕೋಪವಾಗಲಿ ಯಾವುದೂ ಇಲ್ಲ. ನನಗೆ ಕೋಪವಿರೋದು ಕನ್ನಡಿಗರ ಮೇಲೆ ವ್ಯವಸ್ತಿತವಾಗಿ ನಡಿತಿರೋ ಹಿಂದಿ ಹೇರಿಕೆ ಮೇಲೆ. ಹಿಂದಿ ರಾಶ್ಟ್ರ ಬಾಶೆ ಅಲ್ಲವೂ ಅಲ್ಲ. ಹಿಂದಿ ಕೂಡ ಕನ್ನಡದಂತೆಯೇ ಇನ್ನೊಂದು ಬಾಶೆಯಶ್ಟೆ. ವಿವಿದತೆಯಲ್ಲಿ ಏಕತೆಯಲ್ಲಿ ಎಲ್ಲಾ ಬಾಶೆಗಳಗೂ ಸಮಾನವಾದ ಗೌರವ ಸಿಗಬೇಕು. ಆದ್ರೆ, ವಿವಿದತೆಯಲ್ಲಿ ಏಕತೆಯನ್ನ ಅಳಿಸಲು ಅಂತನೇ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ನಡೆಸುತ್ತಿರೋದು ಎಶ್ಟು ಸರಿ? ವಿವಿದತೆಯಲ್ಲಿ ಏಕತೆ ಅಂದ್ರೆ ಹಿಂದಿಗೆ ಮಾತ್ರ ಗೌರವ ನೀಡೋದ ಅತವಾ ಹಿಂದಿಯ ಜೊತೆಗೆ ಇತರ ಬಾಶೆಗಳಿಗೂ ಗೌರವ ನೀಡೋದ ಯೋಚನೆ ಮಾಡಿ..

  ಇನ್ನು ನನ್ನ ಲೇಕನದ ವಿಶಯಕ್ಕೆ ಬಂದ್ರೆ, ಕನ್ನಡ ಪತ್ರಿಕೆಯಲ್ಲಿ ಕನ್ನಡದಲ್ಲಿ ಜಾಹಿರಾತು ನೀಡಿದ್ರೆ ನಿಜವಾಗಿಯೂ ಆ ಜಾಹಿರಾತು ನೋಡೋ ಜನರಿಗೆ, ಜಾಹಿರಾತಿನ ಸಂದೇಶ ಸರಿಯಾಗಿ ತಲುಪುತ್ತೆ. ಅದನ್ನ ಬಿಟ್ಟು ಜನರಿಗೆ ತಿಳಿಯದ ಯಾವುದೋ ಬೇರೆ ಬಾಶೆಲಿ ಜಾಹಿರಾತು ನೀಡಿದ್ರೆ ಆ ಜಾಹಿರಾತಿನ ಸಂದೇಶ ಜನರಿಗೆ ತಲುಪೊಲ್ಲ ಅಲ್ವ. ಇದು ತಿಳಿದಿದ್ರು ಹಿಂದಿನಲ್ಲೆ ಮತ್ತೆ ಮತ್ತೆ ಜಾಹಿರಾತು ನೀಡೋದನ್ನ ನೋಡಿದ್ರೆ ಏನನ್ನ ಬೇಕು

  ಉತ್ತರ
 3. ಜೂನ್ 3 2011

  ನಿಮ್ಮೆಲರ ಅಬಿಪ್ರಾಯಕ್ಕೆ ಧನ್ಯವಾದಗಳು ಹಾಗದರೆ ನನ್ನದೊ೦ದು ಪ್ರಶ್ನೆ ಯಾರದರು ಬೇರೆ ರಾಜ್ಯದವರು ಕರ್ನಾಟಕ್ಕೆ ಬ೦ದರೆ ಅವರು ಯಾವ ಬಾಷೆಯಲ್ಲಿ ಮಾತಡಬೇಕು ತಕ್ಶಣ ಕನ್ನಡ ಕಲಿತು ಮತನಾಡುವುದು ಕಷ್ತ ಉದಾಹರಣಗೆ ನಾವೇ ಬೇರೆ ರಾಜ್ಯಕ್ಕೆ ಪ್ರಾವಸಕ್ಕೆ ಹೋದರೆ ಯಾವ ಬಾಷೆ ಮಾತನಾಡಬೇಕು ಇ೦ತಹ ಸ೦ದರ್ಬದಲ್ಲಿ ಒ೦ದು ಸಾಮನ್ಯ ಸ೦ಪರ್ಕ ಬಾಷೆ ಬೇಕಲ್ಲವೆ. ಆ೦ಗ್ಲ ಬಾಷೆ ಮಾತನಾಡುವುದುಕ್ಕಿ೦ತ ನಮ್ಮದೆ ಯಾವುದೊ ಬಾಷೆ ಯಾಕಗಬಾರದು. ನೀವೆಲ್ಲರೂ ಹೇಳಿದ ಹಾಗೆ ಹಿ೦ದಿ ರಾಷ್ತ್ರ ಬಾಷೆ ಅಲ್ಲ ಅ೦ತನೆ ಬಾವಿಸೊಣ ಹಾಗದರೆ ನಮ್ಮ ಬಾರತದಲ್ಲಿ ಒ೦ದು ಸಾಮನ್ಯ ಬಾಷೆ ಇಲ್ಲವೆ ಅದು ಎಲ್ಲ ರಾಜ್ಯಗಳ ಸ೦ಪರ್ಕ ಮಾದ್ಯಮವಾಗಬೇಕು. ನೀವು ಯಾವುದೆ ಸಕ್ರಾರದ ಸುತ್ತೋಲೆಯನ್ನು ಗಮನಿಸಿ ಅದರಲ್ಲಿ ಆ೦ಗ್ಲ ಬಾಷೆಯಿಲ್ಲವೆ ಅದು ಹೇರಿಕೆಯಲ್ಲವೆ
  ಇಲ್ಲಿ ವಿಷಯ ಒ೦ದೆ ಬಾರತದಲ್ಲಿ ಹಲವಾರು ಬಾಷೆಗಳಿವೆ ಹಲವಾರು ರಾಜ್ಯಗಳಿವೆ ಆದರೆ ಅದನ್ನೆಲ ಒಗ್ಗೂಡಿಸುವ ಒ೦ದು ಬಾಷೆ ಬೇಕು, ಕರ್ನಾಟಕದಲ್ಲೆ ಬಹಳ ಸಮಯದಿ೦ದ ಇದ್ದು ಕನ್ನಡ ಬಾರದೆ ಇದ್ದವರು ಬಹಳ ಜನ ಇದ್ದಾರೆ ಅದಕ್ಕೆ ಕಾರಣ ಅವರಲ್ಲ ನಾವೇ…………!

  ಉತ್ತರ
  • Priyank
   ಜೂನ್ 3 2011

   “ನಮ್ಮಲ್ಲಿ ಹಲವು ಭಾಷೆಗಳಿವೆ, ಅವರುಗಳ ನಡುವೆ ಮಾತುಕತೆ ನಡೆಯಲು ಒಂದು ಭಾಷೆ ಬೇಕಲ್ವ, ಹಂಗಾಗಿ ಹಿಂದಿ” ಎಂಬ ಆಲೋಚನೆ ಹಲವರಲ್ಲಿರೋದು ಕಾಣಬಹುದು.
   ಆ ರೀತಿಯ ಆಲೋಚನೆಯನ್ನು ವಿಮರ್ಶೆ ಮಾಡುವ ಮೊದಲು, “ಲಿಂಕ್ ಲಾಂಗ್ವೇಜ್ ಎಂದರೇನು, ಇತರೆ ಭಾಷಿಕ ಸಮುದಾಯಗಳು ಹೇಗೆ ಲಿಂಕ್ ಲಾಂಗ್ವೇಜ್ ಇಟ್ಟುಕೊಂಡಿವೆ”, ಎಂಬುದನ್ನು ನೋಡಬೇಕಾಗುತ್ತದೆ.
   ಪ್ರತಿಯೊಂದು ಭಾಷಿಕ ಸಮುದಾಯವೂ, ಇತರೆ ಭಾಷಿಕ ಸಮುದಾಯಗಳ ಜೊತೆ ಮಾತುಕತೆ ನಡೆಸಲೇ ಬೇಕಾಗುತ್ತದೆ. ವ್ಯವಹಾರ ನಡೆಸಲೇ ಬೇಕಾಗುತ್ತದೆ. ಆ ಮಾತುಕತೆ, ವ್ಯವಹಾರಕ್ಕೆ ಎರಡು ಭಾಷಿಕ ಸಮುದಾಯಕ್ಕೆ ಸೇರಿದವರೂ ಬಲ್ಲ ಒಂದು ಭಾಷೆ ಬೇಕಾಗುತ್ತದೆ. ಅದನ್ನೇ ಲಿಂಕ್ ಲಾಂಗ್ವೇಜ್ ಎಂದು ಕರೆಯಬಹುದಾಗಿದೆ.
   ಉದಾಹರಣೆಗಾಗಿ, ಜಪಾನೀಸ್ ಮತ್ತು ಜರ್ಮನ್ ಭಾಷಿಕ ಸಮುದಾಯಗಳನ್ನೇ ತೆಗೆದುಕೊಳ್ಳಬಹುದು. ಈ ಎರಡೂ ಭಾಷಿಕ ಸಮುದಾಯಗಳು, ಇತರೆ ಬಹುತೇಕ ಭಾಷಿಕ ಸಮುದಾಯಗಳೊಡನೆ ವ್ಯವಹಾರ ನಡೆಸುತ್ತವೆ. ಆ ವ್ಯವಹಾರಗಳಲ್ಲೆಲ್ಲಾ ಹೆಚ್ಚಾಗಿ ಇಂಗ್ಲೀಷನ್ನೇ ಬಳಸುತ್ತಾರೆ (ಕೆಲವೆಡೆ ಫ್ರೆಂಚು, ಚೈನೀಸು ಬಳಸುವ ಉದಾಹರಣೆಯುಂಟು). ಈ ಎರಡೂ ಸಮುದಾಯಗಳು, ಇಂಗ್ಲೀಷನ್ನೇ ಲಿಂಕ್ ಲಾಂಗ್ವೇಜ್ ಎಂದು ಒಪ್ಪಿಕೊಂಡಿವೆ ಎಂದು ಹೇಳಬಹುದಾಗಿದೆ. ಆದರೆ, ಲಿಂಕ್ ಲಾಂಗ್ವೇಜನ್ನು ಆ ಸಮುದಾಯದ ಎಷ್ಟು ಮಂದಿ ಬಲ್ಲರು ಎಂದು ತಿಳಿಯಲು, ಒಮ್ಮೆ ಜರ್ಮನಿಗೋ ಅಥವಾ ಜಪಾನಿಗೋ ಭೇಟಿ ಕೊಟ್ಟರೆ ತಿಳಿಯುತ್ತದೆ. ಅವಶ್ಯಕತೆ ಇರುವ ಕೆಲವೇ ಕೆಲವು ಮಂದಿ, ತಮ್ಮ ಸಮುದಾಯದ ಲಿಂಕ್ ಲಾಂಗ್ವೇಜ್ ಬಲ್ಲರು. ಸಮುದಾಯದ ಹೆಚ್ಚಿನ ಜನರಿಗೆ ತಮ್ಮ ಭಾಷೆಯಲ್ಲೇ ಎಲ್ಲಾ ನಡೆದು ಹೋಗುತ್ತದೆ. ಹಾಗಾಗಿ, ಲಿಂಕ್ ಲಾಂಗ್ವೇಜ್ ಆಗಿ ನಾವು ಕನ್ನಡಿಗರು ಯಾವುದೇ ಭಾಷೆಯನ್ನು ಒಪ್ಪಿಕೊಂಡರೂ, ಅದನ್ನು ಎಲ್ಲರೂ ಕಲಿಯಬೇಕು ಎಂದು ಮಾಡಬೇಕಾಗಿಲ್ಲ. ಅವಶ್ಯಕತೆ ಇದ್ದವರು ಮಾತ್ರ ಕಲಿಯುತ್ತಾರೆ. ಅವಶ್ಯಕತೆ ಇದ್ದವರು ಕಲಿಯಲು ತಕ್ಕ ಏರ್ಪಾಡು ಮಾಡುವುದು ಸರಕಾರದ ಕೆಲಸವಾಗಿರಬೇಕೇ ಹೊರತು, ಎಲ್ಲರಿಗೂ ಕಲಿಸಲು ಮುನ್ನುಗ್ಗುವುದಲ್ಲ.

   ಉತ್ತರ
 4. ಈ ಲೇಕನದಲ್ಲಿ ಪ್ರಸ್ತಾಪವಾಗಿರೋದು, ಹಿಂದಿ ಜಾಹಿರಾತು ಕನ್ನಡ ಬಾಶೆಯಲ್ಲಿ ಯಾಕೆ ಅಂತ? ಹಿಂದಿಯವರು ಕರ್ನಾಟಕಕ್ಕೆ ಬಂದು ಕನ್ನಡ ಪತ್ರಿಕೆ ಓದಲ್ಲ ಅಲ್ವ? ಕನ್ನಡ ಪತ್ರಿಕೆಯಲ್ಲಿ ಹಿಂದಿ ಜಾಹಿರಾತು ನೀಡೋದ್ರಿಂದ ಉಪಯೊಗ ಏನು ಬಂತು?

  ಉತ್ತರ
 5. ಜೂನ್ 3 2011

  ಅರುಣ್ ನೀವು ಹೇಳಿದ್ದು ಸರಿಯಾಗಿದೆ ಹಿ೦ದಿ ಬಾಷೆಯನ್ನು ಹಿ೦ದಿ ಬಾಷೆಯಲ್ಲೆ ಬರೆಯಬೇಕು
  ಅದನ್ನು ಕನ್ನಡದಲ್ಲಿ ಬರೆದರೆ ಯಾವ ಉಪಯೋಗವು ಇಲ್ಲ

  ಅರುಣ್ ನನ್ನೊ೦ದು ಸಣ್ಣ ಪ್ರಶ್ನೆ ನಮ್ಮ ರಾಷ್ತ್ರ ಗೀತೆಯನ್ನು ಯಾವ ಬಾಷೆಯಲ್ಲಿ ಹಾಡಬೇಕ೦ತಿರ
  ಎಲ್ಲ ರಾಜ್ಯದವರು ಅವರವರ ಬಾಷೆಗೆ ಅನುವಾದ ಮಾಡ ಬೇಕೆ?

  ಉತ್ತರ
  • Priyank
   ಜೂನ್ 3 2011

   ನಮ್ಮ ರಾಷ್ಟ್ರ ಗೀತೆ ಬೆಂಗಾಲಿಯಲ್ಲಿದ್ದು, ಅದನ್ನು ಬೇರೆ ಬೇರೆ ಭಾಷಿಕರು ತಮ್ಮ ತಮ್ಮದೇ ರೀತಿಯಲ್ಲಿ ಹಾಡುತ್ತಾರೆ, ಹಾಡುತ್ತಿದ್ದಾರೆ.
   ನಾವು ಕನ್ನಡಿಗರು “ಜನ ಗಣ ಮನ ..” ಅಂತ ಹೇಳ್ತೀವಿ.
   ಹಿಂದಿ ಭಾಷಿಕರು “ಜನ ಗನ್ ಮನ್ ..” ಅಂತ ಹಾಡ್ತಾರೆ.

   ಮೂಲ ಬೆಂಗಾಲಿ ಭಾಷೆಯಲ್ಲಿ “ಜೋನೋ ಗೊನೋ ಮೋನೋ ” ಅಂತ ಹಾಡಲಾಗುತ್ತೆ.

   ಉತ್ತರ
 6. ಹಿಂದಿ ಬಾಶೆ

  abhi082941@gmail.com :
  ಅರುಣ್ ನೀವು ಹೇಳಿದ್ದು ಸರಿಯಾಗಿದೆ ಹಿ೦ದಿ ಬಾಷೆಯನ್ನು ಹಿ೦ದಿ ಬಾಷೆಯಲ್ಲೆ ಬರೆಯಬೇಕು
  ಅದನ್ನು ಕನ್ನಡದಲ್ಲಿ ಬರೆದರೆ ಯಾವ ಉಪಯೋಗವು ಇಲ್ಲ
  ಬರಿ ಹಿಂದಿ ಬಾಶೆಯನ್ನ ಕನ್ನಡದಲ್ಲಿ ಬರೆಯುವುದಲ್ಲ. ಹಿಂದಿ ಬಾಶೆಯನ್ನ ಹಿಂದಿಯಲ್ಲಿ ಬರೆದು ಕನ್ನಡ ಪತ್ರಿಕೆಯಲ್ಲಿ ಜಾಹಿರಾತು ನೀಡಿದ್ರೆ ಕೂಡ ಯಾವುದೇ ಉಪಯೋಗವಿಲ್ಲ.

  ಅರುಣ್ ನನ್ನೊ೦ದು ಸಣ್ಣ ಪ್ರಶ್ನೆ ನಮ್ಮ ರಾಷ್ತ್ರ ಗೀತೆಯನ್ನು ಯಾವ ಬಾಷೆಯಲ್ಲಿ ಹಾಡಬೇಕ೦ತಿರ
  ಎಲ್ಲ ರಾಜ್ಯದವರು ಅವರವರ ಬಾಷೆಗೆ ಅನುವಾದ ಮಾಡ ಬೇಕೆ?

  ನಮ್ಮ ರಾಶ್ಟ್ರ ಬಾಶೆ ಬಂಗಾಳಿಯಲ್ಲಿ ಇದ್ದು ನನಗಂತು ಇದರ ಅರ್ತ ಏನೆಂದು ತಿಳಿದಿಲ್ಲ. ಇದಕ್ಕಿಂತ ನನಗೆ ಗೊತ್ತಿರೋ ಬಾಶೆ ಕನ್ನಡಕ್ಕೆ ಅನುವಾದವಾಗಿ ಕನ್ನಡದಲ್ಲಿ ಹೇಳುವಂತಾದರೆ ತಪ್ಪೇನು? ಅದು ನಿಜವಾಗಿಯೂ ನನ್ನ ರಾಶ್ಟ್ರ ಬಕ್ತಿಯನ್ನ ಹೆಚ್ಚುಸುತ್ತೆ. ನನ್ನ ಮನಸ್ಸಿನ ಆಳದಿಂದ ಇನ್ನೂ ಹೆಚ್ಚಿನ ರಾಶ್ಟ್ರಬಕ್ತಿಯಿಂದ ಹಾಡುವಂತಾಗುತ್ತೆ.

  ಉತ್ತರ
 7. ಮೇಲಿನ ಕಮೆಂಟ್ ನಲ್ಲಿ ರಾಶ್ಟೆ ಗೀತೆಗೆ ಬದಲಾಗಿ ರಾಶ್ಟ್ರ ಬಾಶೆ ಅಂತ ತಪ್ಪು ಬೆರೆದಿದ್ದೆ. ಸರಿಯಾದುದು ಕೆಳಗಿದೆ

  ನಮ್ಮ ರಾಶ್ಟ್ರ ಗೀತೆ ಬಂಗಾಳಿಯಲ್ಲಿ ಇದ್ದು ನನಗಂತು ಇದರ ಅರ್ತ ಏನೆಂದು ತಿಳಿದಿಲ್ಲ. ಇದಕ್ಕಿಂತ ನನಗೆ ಗೊತ್ತಿರೋ ಬಾಶೆ ಕನ್ನಡಕ್ಕೆ ಅನುವಾದವಾಗಿ ಕನ್ನಡದಲ್ಲಿ ಹೇಳುವಂತಾದರೆ ತಪ್ಪೇನು? ಅದು ನಿಜವಾಗಿಯೂ ನನ್ನ ರಾಶ್ಟ್ರ ಬಕ್ತಿಯನ್ನ ಹೆಚ್ಚುಸುತ್ತೆ. ನನ್ನ ಮನಸ್ಸಿನ ಆಳದಿಂದ ಇನ್ನೂ ಹೆಚ್ಚಿನ ರಾಶ್ಟ್ರಬಕ್ತಿಯಿಂದ ಹಾಡುವಂತಾಗುತ್ತೆ. ಬಹುಬಾಶೆಗಳಿರುವ ಬೇರೆ ಹಲವಾರು ದೇಶಗಳಲ್ಲಿ ಕೂಡ ಹೀಗೇ ರಾಶ್ಟ್ರಗೀತೆಯನ್ನ ಅವರ ಬಾಶೆಯಲ್ಲೇ ಹಾಡುತ್ತಾರೆ

  ಉತ್ತರ
 8. ಜೂನ್ 3 2011

  ಪ್ರಿಯಾ೦ಕ ಮತ್ತು ಅರುಣ್ ನೀವು ಹೇಳಿದ್ದು ಸರಿಯಾಗಿದೆ ನಾನು ಅದನ್ನು ಸಮ್ಮತ್ತಿಸುತ್ತೇನೆ. ಆದರೆ ಉದಾಹರಣೆಗೆ ನಮ್ಮ ದೇಶದ ಯಾವುದೆ ವಿಬಾಗದ ತ೦ಡ ಬೇರೆ ದೇಶಕ್ಕೆ ಹೋಗಿ ಅಲ್ಲಿ ನಮ್ಮ ರಾಷ್ತ್ರ ಗೀತೆಯನ್ನು ಹಾಡುವ ಸ೦ದರ್ಬ ಬ೦ದರೆ ಎನು ಮಾಡಬೇಕು ಎಲ್ಲರು ನೀವೆ ಹೇಳಿದ ಹಾಗೆ ಎಲ್ಲರೂ ಅವರವರ ರಾಜ್ಯದ ಬಾಷೆಯಲ್ಲೆ ಹಾಡಬೇಕೆ? ಅದು ಚೆನ್ನಾಗಿರುತ್ತಾ ನೀವೆ ಹೇಳಿ?

  ಉತ್ತರ
  • Priyank
   ಜೂನ್ 3 2011

   ಅಬಿ ಅವರೇ,

   ನಮ್ಮ ಜನರು ಅವರವರ ರೀತಿಯಲ್ಲೇ ಹಾಡಲಿ.
   ನನಗೇನೂ ಅದರಿಂದ ಬೇಜಾರು ಆಗೋದಿಲ್ಲ, ಬದಲಿಗೆ ಹೆಮ್ಮೆಯಾಗುತ್ತದೆ.
   ನಮ್ಮ ಜನರು ತಮ್ಮ ದೇಶದಲ್ಲಿ ತಮ್ಮತನವನ್ನ ಮೆರೆಯಲಿ.

   ‘ವಿವಿದತೆಯಲ್ಲಿ ಏಕತೆ’ ಅಂದ್ರೆ ನಿಜವಾಗಿ ಅದೇ ತಾನೇ?

   ಉತ್ತರ
  • ವಿಜಯ್
   ಜೂನ್ 3 2011

   @abhi082941

   ಇಲ್ಲಿ ರಾಷ್ಟ್ರ ಗೀತೆ, ಯಾವುದೋ ಹಾಡು ಮುಂತಾದ ಉದಾಹರಣೆಗಳು ಅಪ್ರಸ್ತುತ. ಅವು ಬಹಳ ಚಿಕ್ಕ ಉದಾಹರಣೆಗಲಾಗುತ್ತವೆ. ಅದು ಯಾವ ಭಾಷೆಯಲ್ಲಿದ್ದರೂ ಅದೇ ಭಾಷೆಯಲ್ಲಿ ಹಾಡೋಣ. ಅದನ್ನು ಬದಲಾಯಿಸಿ ಮಾಡುವುದೇನೂ ಇಲ್ಲ. ಉಚ್ಚಾರಣೆಯ ಧಾಟಿ ಬದಲಾಗಬಹುದು ಅಷ್ಟೇ. ಇಲ್ಲಿನ ಚರ್ಚೆಯ ವಿಷಯವೇ ಬೇರೆ ಇದೆ.

   ನೀವು ಹೇಳಿದಂತೆ ಹಿಂದಿ ಭಾಷೆಯನ್ನೂ ಹಿಂದಿಯಲ್ಲೇ ಬರೆಯಬೇಕು. ಆದರೆ ಅದನ್ನು ಹಿಂದಿ ಬಳಸುವ ರಾಜ್ಯಗಳಲ್ಲ್ಲಿ ಬರೆಯಬೇಕು. ಬೇರೆ ಎಲ್ಲ ಕಡೆ ಅಲ್ಲ ಅಲ್ವೇ? ಸಂಪರ್ಕ ಭಾಷೆ ಅಂತ ನೀವು ಇಟ್ಟುಕೊಂಡರೂ ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಬರೆದು ಯಾರಿಗೆ ಸಂಪರ್ಕ ಮಾಡುತ್ತೀರಾ? ಅದನ್ನು ಓದುವುದು ಕನ್ನಡಿಗರು, ಕನ್ನಡ ಓದಲು ಬರುವವರು.

   ಸಂಪರ್ಕ ಬೇಕಾಗಿರುವುದು ಕೆಲವೇ ಜನರಿಗೆ ಮಾತ್ರ, ಅದಕ್ಕಾಗಿ ಎಲ್ಲಾ ರಾಜ್ಯಗಳ ಕೋಟ್ಯಂತರ ಜನರು ಹಿಂದಿ ಕಲಿತುಕೊಂಡು ತಯಾರಾಗಿರಬೇಕು ಅನ್ನುವುದು ತಪ್ಪಾಗುತ್ತದೆ. ಎಲ್ಲರೂ ರಾಜ್ಯಕ್ಕೊಂದು ಭಾಷೆ, ಭಾರತಕ್ಕೊಂದು ಸಂಪರ್ಕ ಭಾಷೆ, ಹೊರ ಪ್ರಪಂಚಕ್ಕೊಂದು ಭಾಷೆ ಎಂದು ಬರೀ ಭಾಷೆಗಳನ್ನು ಕಲಿಯುತ್ತಾ ಕೂರುಲಾಗುವುದಿಲ್ಲ. ಆದ್ದರಿಂದ ಇಂಗ್ಲೀಷು ಹೇಗಿದ್ದರೂ ಅನಿವಾರ್ಯ ಆಗಿರುವುದರಿಂದ ಹೊರ ಸಂಪರ್ಕಕ್ಕೆ ಅದು ಸಾಕು ಅಂತ ಅಷ್ಟೇ. (ಇಲ್ಲಿ ಇಂಗ್ಲೀಷು ‘ಅನಿವಾರ್ಯ’ ಎಂದು ಹೇಳುತ್ತಿದ್ದೇನೆ ಹೊರತು, ಅದರ ಬಗ್ಗೆ ವಿಶೇಷ ಪ್ರೀತಿ ಏನು ಇಲ್ಲ ). ಬೇರೆ ರಾಜ್ಯಗಳ ಜನರು ಇಲ್ಲಿ ಬಂದರೂ ಕನ್ನಡ ಕಲಿಯುವುದಿಲ್ಲ, ಏಕೆಂದರೆ ಸಂಪರ್ಕ ಭಾಷೆ, ರಾಷ್ಟ್ರ ಭಾಷೆ ಎಂಬ ಹುಸಿ ಗೌರವದಿಂದ ನಾವೇ ಹಿಂದಿ ಕಲಿತು ಬಿಟ್ಟಿರುತ್ತೇವೆ. !

   ಹಿಂದಿ ಯಾರಿಗೆ ಬೇಕೋ ಅವರು ಕಲಿತುಕೊಳ್ಳಲಿ. ಆದರೆ ಎಲ್ಲ ರಾಜ್ಯಗಳೂ ಹಿಂದಿ ಕಲಿಯಲೇ ಬೇಕು, ಅದು ಕಲಿತರೆ ಮಾತ್ರ ನಿಮಗೆ ಸವಲತ್ತುಗಳು ಅಂತ ಹೇರಿಕೆ ಆಗಬಾರದಲ್ಲ. ನಮಗೆ ನಮ್ಮದೇ ಭಾಷೆ ಇದೆ. ಇದು ಹಿಂದಿಗಿಂತಲೂ ಹಳೆಯ, ಹಿಂದಿಗಿಂತಲೂ ಎಲ್ಲದರಲ್ಲೂ ಶ್ರೀಮಂತವಾದ ಭಾಷೆ. ಅಂದಮೇಲೆ ಮತ್ತೊಂದು ಭಾಷೆ ಹೊರೆ ಆಗುತ್ತದೆ. ಇದು ಸ್ವಾಭಿಮಾನದ ವಿಷಯ ಕೂಡ.

   ಉತ್ತರ
 9. ಜೂನ್ 3 2011

  ವಿಜಯ್ ನೀವು ಹೇಳಿದ್ದು ಸರಿಯಾಗಿದೆ ರಾಷ್ತ್ರ ಗೀತೆ ಯಾವ ಬಾಷೆಯಲ್ಲಿ ಇದ್ದರೆನು ನಾವು ಭಾರತೀಯರು ಆ ಬಾಷೆಯಲ್ಲೆ
  ಹಾಡಬೆಕು
  ನನಗೆ ಕನ್ನಡನು ಬೇಕು ಹಾಗೆ ರಾಷ್ತ್ರ ಬಾಷೆನು ಬೇಕು. ಜೊತೆಗೆ ಆ೦ಗ್ಲ ಬಾಷೆಯ೦ತು ಅತೀ ಮುಖ್ಯ
  ಯಾಕೆ೦ದರೆ ವಿವಿದತೆಯಲ್ಲಿ ಎಕತೆ ನಮ್ಮ ಬಲವಾಗಬೇಕು ಹೊರತು ನಮ್ಮ ವೀಕ್ನೆಸ್ ಆಗಬಾರದು

  ನಿಮ್ಮೆಲರ ಅಬಿಪ್ರಾಯಗಳಿಗೆ ಧನ್ಯವಾದಗಳು

  ಉತ್ತರ
  • ಜೂನ್ 5 2011

   @ ಅಭಿ೦೮೨೯೪೧

   ನಮಗೆ ನಮ್ಮ ರಾಷ್ಟ್ರಭಾಷೆ ಕನ್ನಡ ಬೇಕು , ಮತ್ತು ಇಂಗ್ಲೀಶ್ ಬೇಕು.

   ಅತೀ ಮುಖ್ಯ ಎಂದರೆ ವಿವಿಧತೆಯಲ್ಲಿ ಏಕತೆ ಅಥವಾ ರಾಷ್ಟ್ರಭಾಷೆ ಹೆಸರಿನಲ್ಲಿ ನಮ್ಮ ಮೇಲೆ ಅಪ್ರಯೋಜಕ ಹಿಂದಿ ಹೇರಿಕೆ ಬೇಡ. ಅಷ್ಟೇ.

   ಧನ್ಯವಾದಗಳು.

   ಉತ್ತರ
 10. ಹಿಂದಿ ಹೇರಿಕೆ ನಮ್ಮ ರಾಜಕಾರಣಿಗಳ ಮೂರ್ಖತನದ ಪರಮಾವಧಿಗಳಲ್ಲೊಂದು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments