ವಿಷಯದ ವಿವರಗಳಿಗೆ ದಾಟಿರಿ

ಜೂನ್ 5, 2011

12

ಗಾಂಧಿ ಪಕ್ಷದೊಳಗಿನ ಬ್ರಿಟಿಷರು…!

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

ತಲೆಬರಹವನ್ನ ನಕಲಿ ಗಾಂಧಿಗಳ ಪಕ್ಷದೊಳಗಿನ ಬ್ರಿಟಿಷರು ಅಂತ ಓದಿಕೊಳ್ಳಿ.ಮಹಾತ್ಮರ ಹೆಸರನ್ನ ಬೇಡ ಬೇಡವೆಂದರೂ ಅನಿವಾರ್ಯವಾಗಿ ಅವರ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಕ್ಷದ/ಸರ್ಕಾರದ ದೌರ್ಜನ್ಯದ ವಿರುದ್ಧ ಮಾತನಾಡುವಾಗ ಬಳಸಿಕೊಳ್ಳಲೇಬೇಕಿದೆ.

ಪ್ರಾಮಾಣಿಕ ಪ್ರಧಾನಿಯ ಸರ್ಕಾರ ಅನೈತಿಕ ಕೆಲಸಕ್ಕೆ ಕಡೆಗೂ ಕೈ ಇಟ್ಟಿದೆ.ಮಧ್ಯರಾತ್ರಿ ಕಳ್ಳರಂತೆ-ದರೋಡೆಕೋರರಂತೆ ರಾಮ್ ಲೀಲಾ ಮೈದಾನಕ್ಕೆ ನುಗ್ಗಿ ಹೆಂಗಸರು-ಮಕ್ಕಳು ಅಂತ ನೋಡದೆಯೆ ರಾಕ್ಷಸರಂತೆ ವರ್ತಿಸಿದ ರೀತಿ ನೋಡಿದರೆ, ಮನಮೋಹನ್ ಸಿಂಗ್ ಅನ್ನುವ ಸೋ-ಕಾಲ್ಡ್ ಪ್ರಧಾನಿಯ ಪ್ರಾಮಾಣಿಕತೆ ಉಪ್ಪಿನಕಾಯಿ ಹಾಕಲಿಕ್ಕಾ ಅಂತ ಕೇಳಲೆಬೇಕಾಗುತ್ತದೆ.

ಹುಚ್ಚು ನಾಯಿ ಕಡಿತಕ್ಕೆ ಚುಚ್ಚು ಮದ್ದು ತೆಗೆದುಕೊಳ್ಳದಿದ್ದರೆ ಏನಾಗುತ್ತೆ ಅನ್ನೋದಕ್ಕೆ ದಿಗ್ವಿಜಯ್ ಸಿಂಗ್ ಆಗಾಗ ನೀಡೋ ಹೇಳಿಕೆಗಳೇ ಉದಾಹರಣೆ.ಇಂತ ದಿಗ್ಗಿ ನಿನ್ನೆ ಹೇಳಿದ ಮಾತು ನೆನಪಿದೆಯಾ? ‘ಸರ್ಕಾರ ರಾಮ್ದೇವ್ ಅವರಿಗೆ ಹೆದರಿಲ್ಲ, ಒಂದು ವೇಳೆ ಹೆದರಿದ್ದರೆ ರಾಮ್ ದೇವ್ ಅವರನ್ನ ಬಂಧಿಸುತಿತ್ತು!’.ಹಾಗೇ ಹೇಳಿದ ಮಧ್ಯರಾತ್ರಿಯೇ ಬ್ರಿಟಿಷರು ಜಲಿಯನ್ ವಾಲಾಬಾಗ್ಗೆ ನುಗ್ಗಿದ ರೀತಿಯಲ್ಲೆ ನುಗ್ಗಿ ಅದೇ ರಾಮ್ ದೇವ್ರನ್ನ ಬಂಧಿಸಿದ್ದಾರೆ.ಅಂದರೆ ಕಾಂಗ್ರೆಸ್ಸ್ ಸರ್ಕಾರದ ಬೆದರಿದೆ ಅಂತಲೇ ಅರ್ಥವಲ್ಲವಾ?

ಅಷ್ಟಕ್ಕೂ ಬಾಬಾ ರಾಮ್ದೇವ್ ಅವ್ರ ಬೇಡಿಕೆಗಳೇನು ಅಸಾಧ್ಯವಾಗಿದ್ದವಾ? ಮತ್ಯಾಕೆ ಸರ್ಕಾರ ಬೆದರಿದ್ದು? ಕಪ್ಪು ಹಣದ ಪಟ್ಟಿಯಲ್ಲಿರುವ ಹೆಸರುಗಳು ಭಯಪಡಿಸುವಂತವಾ? ’ಭ್ರಷ್ಟಚಾರದ ವಿರುದ್ದ ನನ್ನ ನಡೆಯಲ್ಲಿ ಯಾವುದೇ  ಅನುಮಾನಪಡಬೇಡಿ’ ಅಂತ ಅಣ್ಣಾ ಹಜ಼ಾರೆಯವರಿಗೆ ಹೇಳಿದ್ದ ಮೇಡಂ ಸೋನಿಯಾ ಸರ್ಕಾರ ನಿನ್ನೆ ಜನರಲ್ ಡಯರ್ ನಂತೆ ವರ್ತಿಸಿದ್ದಲ್ಲವಾ? ಡಯರ್ ಸಹ ಮಾಡಿದ್ದು ಇದನ್ನೆ ಶಾಂತಿಯುತವಾಗಿ ನಡೆಯುತಿದ್ದ ಸಭೆಯಲ್ಲಿ ನುಗ್ಗಿ ಗುಂಡಿನ ಮಳೆಗರೆದಿದ್ದು.ಈಗ ಬ್ರಿಟಿಷ್ ವೇಷಧಾರಿ ಮನಮೋಹನ್-ಸೋನಿಯಾ ಸರ್ಕಾರ ಮಾಡಿದ್ದು ಇದನ್ನೆ ಅಲ್ಲವೇ? ಮಧ್ಯರಾತ್ರಿಯಲ್ಲಿ ನುಗ್ಗಿ ಹೆಂಗಸರು,ಮಕ್ಕಳು-ವೃದ್ಧರು ಅಂತ ನೋಡದೆ ಅನಾಚಾರ ಮಾಡಿದ್ದು.ನಮ್ಮ್ ಪುಣ್ಯಕ್ಕೆ ಗುಂಡಿನ ದಾಳಿ ಮಾಡಿಲ್ಲ.ಬಹುಷಃ ಬ್ರಿಟಿಷರು ಸಹ ಹೀಗೆ ನಡು ರಾತ್ರಿಯಲ್ಲಿ ದಾಳಿ ಮಾಡಿರಲಿಲ್ಲವೇನೋ.

ಹಾಗೆ ನೋಡಿದರೆ ಬಾಬಾರ ಹೋರಾಟಕ್ಕೆ ಮೊದಲೆ ಅಪಸ್ವರ ಕೇಳಲಾರಂಭಿಸಿದ್ದವು.ಈ ದೇಶ ಉದ್ಧಾರ ಆಗೋದಿಲ್ಲ ಹಾಗೆ ಹೀಗೆ ಅಂತ ಕೊರಗುತಿದ್ದಾಗಲೇ ಅಣ್ಣಾ ಹಜ಼ಾರೆಯವ್ರ ಸತ್ಯಾಗ್ರಹ ಅಸಹಾಯಕ ಮನಸ್ಥಿತಿಯಲ್ಲಿದ್ದ ದೇಶವಾಸಿಗಳಿಗೆ ಹೊಸ ಹುರುಪನ್ನ ನೀಡಿತ್ತು.ಈ ಹೋರಾಟಕ್ಕೆ ಯೋಗ ಗುರು ಬಾಬಾ ರಾಮ್ ದೇವ ಸಹ ಬೆಂಬಲ ನೀಡಿದ್ದರು.ಕಡೆಗೆ ಅದ್ಯಾಕೋ ಬಾಬಾ ರಾಮ್ ದೇವ ಕಪ್ಪು ಹಣವನ್ನ ವಾಪಸ್ ತನ್ನಿ ಅನ್ನುವ ಬೇಡಿಕೆಯಿಟ್ಟು (ಈ ಬಗ್ಗೆ ವರ್ಷದ ಹಿಂದೆಯಿಂದ ಬಾಬಾ ಜನ ಜಾಗ್ರುತಿ ಮೂಡಿಸುತ್ತ ಬಂದಿದ್ದರು ಅನ್ನುವುದನ್ನ ಮರೆಯಬಾರದು) ಅಣ್ಣಾ ತಂಡವನ್ನ ಬಿಟ್ಟು ಏಕಾಂಗಿಯಾಗಿ ಹೊರಟು ನಿಂತರು.

ಇದನ್ನ ಈ ದೇಶದ ದೌರ್ಭಾಗ್ಯ ಅಂತಲಾದರೂ ಅನ್ನಿ, ಕರ್ಮ ಅಂತಲಾದರೂ ಅನ್ನಿ.ಇಲ್ಲಿ ಶುರುವಾಗುವ ಯಾವುದೇ ಜನಪರ ಹೋರಾಟಗಳನ್ನ ಹಳ್ಳ ಹಿಡಿಸಲು ಶತ್ರು ಪಾಳಯವೇನು ಮಾಡುವುದೇ ಬೇಕಿಲ್ಲ! ಅದನ್ನೆಲ್ಲ ಖುದ್ದು ಹೋರಾಟದ ಅಖಾಡಕ್ಕಿಳಿದವರೇ ಮಾಡುತ್ತಾರೆ. ಮೊನ್ನೆ ಮೊನ್ನೆಯಷ್ಟೆ ಬೆಂಗಳೂರಿಗೆ ಅಣ್ಣಾ ಮತ್ತು ಸಂಗಡಿಗರು ಬಂದು ಮಾತನಾಡಿದ ಮತ್ತು ಜನರು ಬಿರುಬಿಸಿಲಿನಲ್ಲೂ (ಅದರಲ್ಲೂ ಹಿರಿಯ ನಾಗರೀಕರು) ಸೇರಿದ ಪರಿಗೆ ಈ ದೇಶದಲ್ಲಿ ಬದಲಾವಣೆಯ ಕಾಲ ಶುರುವಾಯ್ತು ಅನ್ನಿಸುತಿತ್ತು. ಅಂದಿನ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಜನಲೋಕಪಾಲ ಮಸೂದೆಯ ವ್ಯಾಪ್ತಿಗೆ ಪ್ರಧಾನಿ ಹಾಗೂ ಸುಪ್ರೀಂ ಕೋರ್ಟ್ ಜಡ್ಜ್ರನ್ನು ಸೇರಿಸುವ ಬಗ್ಗೆ ವಿವರಿಸಿದಾಗ ನೆರೆದಿದ್ದ ಜನಸ್ತೋಮ ಬೆಂಬಲ ನೀಡಿತ್ತು.ಆ ಸಭೆ ನಡೆದ ಎರಡು-ಮೂರು ದಿನಗಳಲ್ಲೆ ಇದೇ ವಿಷಯದ ಬಗ್ಗೆ ಸರ್ಕಾರ ಮತ್ತು ಸಿವಿಲ್ ಸೊಸೈಟಿ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.

ಆದರೆ ವಾರದೊಳಗೆ ಮತ್ಯಾಕೋ ಈ ದೇಶದಲ್ಲಿ ಬದಲಾವಣೆಯೆ ನಿರೀಕ್ಷೆಯೆಲ್ಲ ಸುಳ್ಳಾ ಅನ್ನಿಸಲಾರಾಂಭಿಸಿದೆ. ಹೀಗನ್ನಿಸಲು ಕಾರಣ ಬಾಬಾ ರಾಮ್ ದೇವ್! ’ಪ್ರಧಾನಿ ಮತ್ತು ಸುಪ್ರೀಂ ಕೋರ್ಟ್ ಜಡ್ಜ್’ರನ್ನ ಜನ ಲೋಕಪಾಲ ಮಸೂದೆಯ ಕಾರ್ಯವ್ಯಾಪ್ತಿಯಿಂದ ಹೊರಗಿಡಬೇಕು ಅನ್ನುವ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ ಅನ್ನುವ ಸುದ್ದಿ ಪತ್ರಿಕೆಗಳಲ್ಲಿ ಬಂತು.ಅತ್ತ ಬಾಬಾ ಬೆಂಬಲಿಗರು ಇದು ಮಾಧ್ಯಮಗಳ ಸುಳ್ಳು ಹೇಳಿಕೆ, ಅವರು ಹೇಳಿದ್ದು ದೇಶ ವ್ಯಾಪ್ತಿ ಚರ್ಚೆಯಾಗಲಿ ಅಂತ ಅಂದರು. ಆದರೆ ಅಷ್ಟರಲ್ಲೆ ಇತ್ತ ಕಾಂಗ್ರೆಸ್ಸ್ ಸರ್ಕಾರ ಬ್ರಿಟಿಷರ ಒಡೆದು ಆಳುವ ಅಸ್ತ್ರ ಪ್ರಯೋಗ ಮಾಡಿಯಾಗಿತ್ತು. ಸಿವಿಲ್ ಸೊಸೈಟಿಯಲ್ಲೆ ಒಗ್ಗಟ್ಟಿಲ್ಲ ಅಂತ ಚಿದಂಬರಂ ಹೇಳಿಬಿಟ್ಟರು.

ಕಡೆಗೆ ಬಾಬಾ ಹೋರಾಟಕ್ಕೆ ಅಣ್ಣಾ ಹಜ಼ಾರೆ ಬೆಂಬಲ ಕೊಟ್ಟಾಗ ಹಲವರ ಬಾಯಿ ಮುಚ್ಚಿದಂತಾಗಿತ್ತು.ಎಲ್ಲ ಸುಮ್ಮನಿದ್ದರು ಸಿಕ್ಯುಲರ್ಗಳು ಸುಮ್ಮನಿರಬೇಕಲ್ಲ! ಅದರಲ್ಲೂ ಕೇಸರಿ ಬಟ್ಟೆ ತೊಟ್ಟ ಬಾಬಾ ಹೊರಟು ನಿಂತಾಗ ಸುಮ್ಮನಿರಲಾದೀತೆ? ಸಾದ್ವಿ ರಿತಿಂಬರಾ ಅವರನ್ನ ವೇದಿಕೆಯ ಮೇಲೆ ನೋಡಿದ ಬುರ್ಕಾ ದತ್ತ್ ಟ್ವಿಟರ್ನಲ್ಲಿ ಲಬೋ ಲಬೋ ಅಂತ ಬಾಯಿ ಬಡ್ಕೋಂಡಿದ್ದನ್ನ ನೋಡಿ, ಕಿರಣ್ ಬೇಡಿ ‘Color’ ಬಿಟ್ಟು ‘Cause’ ನೋಡಿ ಪುಣ್ಯ ಕಟ್ಕೋ ತಾಯಿ ಅಂತ ಸಮಾಧಾನ ಮಾಡಿದ್ರು.ಇತ್ತ ಬ್ಲಾಗುಗಳಲ್ಲೂ ಬಿಸಿ ಬಿಸಿ ಚರ್ಚೆಗಳು ನಡೆಯಲಾರಂಭಿಸಿದವು.

ಬೆಂಗಳೂರಿಗೆ ಬಂದ ಬಾಬಾ “ಮೈ ಯೇ ನಹೀ ಮಾನ್ತಾ ಹೂಂ ಕಿ ಭಾರತ್ ಏಕ್ ಸೆಕ್ಯುಲರ್ ದೇಶ್ ಹೈ. ಮೈ ಯೆ ಮಾನ್ತಾ ಹೂಂ ಕಿ ಭಾರತ್ ಆಧ್ಯಾತ್ಮಿಕ್ ದೇಶ್ ಹೈ. (ನಾನು ಈ ದೇಶವನ್ನು ಜಾತ್ಯತೀತ ರಾಷ್ಟ್ರ ಎಂದು ಒಪ್ಪುವುದಿಲ್ಲ, ಭಾರತವನ್ನು ಆಧ್ಯಾತ್ಮಿಕ ರಾಷ್ಟ್ರ ಎಂದು ಕರೆಯಲು ಬಯಸುತ್ತೇನೆ)” ಅಂದರಂತೆ.ಆಧ್ಯಾತ್ಮಿಕ ಅಂದ್ರೇನು ತಪ್ಪು? ಆಧ್ಯಾತ್ಮ ಅಂದ್ರೆ ಕೋಮುವಾದ ಅಂತ ಅರ್ಥನಾ? ಅಥವಾ ಈ ದೇಶದಲ್ಲಿ ನಾಸ್ತಿಕರೇ ಇರಬಾರದು ಅಂತ ಹೇಳಿದರಾ? ಇಲ್ಲವಲ್ಲ. ಇದೊಂದೆ ಮಾತನ್ನ ಹಿಡಿದು,ಈ ಪರಿಯ ತಲೆಬರಹ ಕೊಡುವ ಅವಶ್ಯಕತೆ ಏನಿತ್ತು? ನಮ್ಮ ದೇಶದಿಂದ ಲೂಟಿಯಾಗಿರುವ ಕಪ್ಪು ಹಣ ವಾಪಸು ತನ್ನಿ ಅನ್ನುವ ದೇಶದ ಪರ ಹೋರಾಟವನ್ನ ಬಾಬಾ ಶುರು ಮಾಡಿದ ದಿನ, ಸಾಮಾಜಿಕ ಕಳಕಳಿಯ ಮಾತನಾಡುವ ಸಂಪಾದಕೀಯ ರಾಷ್ಟ್ರಪರವಾದ ಹೋರಾಟವೊಂದರ ಬಗ್ಗೆ ಈ ರೀತಿ “ಸಂವಿಧಾನವನ್ನೇ ಒಪ್ಪದ ರಾಮದೇವ ಸತ್ಯಾಗ್ರಹಕ್ಕೆ ಇಳಿದಿದ್ದಾರೆ… ಜೈ ಹೋ! ” ಅನ್ನುವ ತಲೆ ಬರಹವನ್ನು ಕೊಟ್ಟು ಬರೆದಿದ್ದು ಸ್ವಲ್ಪ ಅತಿರೇಕ ಅನ್ನಿಸಿತ್ತು.

ಈ ರೀತಿಯ ಚರ್ಚೆ ಒಂದು ಕಡೆಯಾದರೆ, ಇನ್ನೊಂದು ಕಡೆ ರಾಮ್ ದೇವ್ ’ಹಿಂದಿ’ಯಲ್ಲೇ ಭಾರತಾದ್ಯಂತ ಶಿಕ್ಷಣ ಕೊಡಬೇಕು ಅಂದರು ಅನ್ನುವ ಹೇಳಿಕೆಯನ್ನ ಹಿಡಿದು ಕನ್ನಡಪರ ಮನಸ್ಸಿನ ಗೆಳೆಯರು ಕಿಡಿಕಿಡಿಯಾಗಿದ್ದಾರೆ. ರಾಮ್ ದೇವ್ ಆ ಮಾತನ್ನ ಹೇಳೀದ್ದರೆ ಅದನ್ನ ವಿರೋಧಿಸಬೇಕಾದದ್ದೆ. ಆದರೆ ಅದನ್ನ ಈ ಸಮಯದಲ್ಲಿ ವಿರೋಧಿಸಬೇಕಿತ್ತಾ ಅನ್ನುವುದು ಪ್ರಶ್ನೆ!? ನಾವ್ಯಾಕೆ ಸಮಸ್ಯೆಯ ಆಳ ಅಗಲಗಳು ಮತ್ತು ಹೋರಾಟದ ಮೂಲ ಉದ್ದೇಶವನ್ನ ಮರೆತು, ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳನ್ನು ಹಿಡಿದು ಜಗ್ಗಾಡುತಿದ್ದೇವೆ? ಹೀಗೆ ಜಗ್ಗಾಡುವುದು ಕೊಳಕು ರಾಜಕಾರಣಿಗಳ ಮತ್ತು ಟಿಆರ್ಪಿ ಹಿಂದೆ ಬಿದ್ದ ರೋಗಗ್ರಸ್ತ ಮಾಧ್ಯಮಗಳ ಲಕ್ಷಣ,ಅಂತ ಲಕ್ಷಣಗಳು ಕನ್ನಡ ಪರ ಮನಸ್ಸುಗಳಲ್ಲಿ ಕಾಣದಿರಲಿ.

ಇವೆಲ್ಲದರ ಮಧ್ಯೆ, ಅತ್ತ ಬಾಬಾ ರಾಮ್ ದೇವ್ ಉಪವಾಸ ಸತ್ಯಾಗ್ರಹವನ್ನ ನಿಲ್ಲಿಸುವುದಿಲ್ಲ ಅಂದಿದ್ದರೆ,ಇತ್ತ ಸಿವಿಲ್ ಸೊಸೈಟಿ ನಿನ್ನೆಯ ದಬ್ಬಾಳಿಕೆಯನ್ನ ಪ್ರತಿಭಟಿಸಲು ನಾಳೆಯ ಜನಲೋಕಪಾಲ ಸಮಿತಿಯ ಚರ್ಚೆಯನ್ನ ಬಹಿಷ್ಕರಿಸಿದೆ.ಮೊದಲೇ ಕುಂಭಕರ್ಣರ ದೇಶ ನಮ್ಮದು.ಇಂತ ದೇಶದಲ್ಲಿ ಶುರುವಾಗಿರುವ ಈ ಅಪರೂಪದ ಹೋರಾಟದಲ್ಲಿ ಎಲ್ಲರು ನಾಯಕರಾಗಲು ಹೊರಡದೆ ಅಣ್ಣಾ ಹಜ಼ಾರೆಯವರ ನೇತ್ರುತ್ವದಲ್ಲಿ ಮುಂದುವರೆದರೆ ಗುರಿ ಈಡೇರಬಹುದು ಅನ್ನುವುದು ನನ್ನ ಅನಿಸಿಕೆ.ಇಲ್ಲದಿದ್ದರೆ ಸರ್ಕಾರವೆಂಬ ಶಕುನಿ ಪಗಡೆಯಾಡದೆ ಇರದು.ಈ ಮಾತು ಬಾಬಾ ರಾಮ್ ದೇವ್, ಅಣ್ಣಾ ಹಜ಼ಾರೆ ಮತ್ತವರ ತಂಡಕ್ಕೆ ಬಹುಷಃ ಗೊತ್ತಿರಬೇಕು.

ಖುದ್ದು ಅಣ್ಣಾ ಹಜಾರೆ ನಾಡಿದ್ದು ಬುಧವಾರ ೮ನೇ ತಾರಿಖು ಸರ್ಕಾರದ ದೌರ್ಜನ್ಯವನ್ನ ಖಂಡಿಸಿ ಜಂತರ್ ಮಂಥರ್ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುತಿದ್ದಾರೆ.ದೇಶವ್ಯಾಪಿ ಈ ಹೋರಾಟಕ್ಕೆ ಕೈ ಜೋಡಿಸುವಂತೆ ಕರೆ ಕೊಟ್ಟಿದ್ದಾರೆ.ಶಾಂತಿಯುತವಾಗಿ ಪ್ರತಿಭಟಿಸುತಿದ್ದ ಬಾಬಾರನ್ನ ಬಂಧಿಸುವ ಮೂಲಕ ಸರ್ಕಾರ, ಕಪ್ಪು ಹಣವನ್ನ ಕಾಯುತ್ತಿರುವ ನಾಯಿಗಳು ನಾವೇ, ನಮ್ಮ ಹಣದ ಸುದ್ದಿಗೆ ಬಂದರೆ ನಿಮ್ಮನ್ನ ಕಚ್ಚದೆ ಬಿಡುವುದಿಲ್ಲ ಅಂತಲೇ ಜನತೆಗೆ ಸಂದೇಶ ಕೊಟ್ಟಿದೆ.ಹುಳಗಳಂತೆಯೆ ಹುಟ್ಟು ಹುಳಗಳಂತೆಯೇ ಸಾಯುವುದಾ? ಇಲ್ಲ ಪಕ್ಕದ ಮನೆಯಲ್ಲೊಬ್ಬ ಭಗತ್ ಸಿಂಗ್,ಸುಖ್ದೇವ್,ರಾಜ್ ಗುರು,ಸುಭಾಷ್ ಚಂದ್ರ ಬೋಸ್ ಹುಟ್ಟಿ ಬರಲಿ ಅಂತ ಹಾರೈಸುತ್ತ ಕುಳಿತು ಕೊಳ್ಳುವುದಾ? ಕುಳಿತು ಕೊಳ್ಳೋಣವೆಂದರೆ ಪಕ್ಕದ ಮನೆಯವರು ಸಹ ಹಾಗೆ ಬೇಡುತ್ತಲೇ ಇರುತ್ತಾರೆ ಅಂತ ದೇಶ ನಮ್ಮದು…! ಅಥವಾ ನಾಳೆ ನಮ್ಮ ಮಕ್ಕಳು ಸಹ ಇಂತ ಭ್ರಷ್ಟರ ನಡುವೇ ಬೆಂದು ಸಾಯಲಿ ಅಂತ ಹಾರೈಸಿಕೊಂಡು ಈ ದೇಶ ಉದ್ಧಾರ ಆಗೋದಿಲ್ಲ ಅಂತ ಕೊರಗಿ ಕೊರಗಿ ಸಾಯೋದಾ? ಮತ್ತೊಮ್ಮೆ ಸರ್ಕಾರಕ್ಕೆ ಜನರ ಸಿಟ್ಟಿನ ವಿಶ್ವ ರೂಪ ದರ್ಶನವನ್ನ ತೋರಿಸಬೇಕಿದೆ.ಈ ಹೋರಾಟದ ಅಂತಿಮ ತೀರ್ಪನ್ನ ನಿರ್ಧರಿಸಬೇಕಾದವ್ರು ನಾವು ಭಾರತದ ಜನ.

(ಚಿತ್ರ ಕೃಪೆ : divyabhaskar.co.in)

12 ಟಿಪ್ಪಣಿಗಳು Post a comment
 1. Thilak
  ಜೂನ್ 5 2011

  1.) Y baba kept the negotions secret?
  2)Y did he gave in writing and continued fast.?Stunt.?
  3) I will make a call to the govt and I have a good news for you all now…….Govt his slave.?
  4)He wants non british type of rulling.? PM shd be elected from public.? What does he know about constitution 4th standard school drop out !!!!!!
  4)Technical education in regional languages. I studied in kannada and I know the importance of english. Again is he a expert in education field,>?
  5)Y he did nt surrender when police came? Y did He hide himself in the crowd.?
  6)Y did he question about Sonia’s foreign origin.? RSS agenda.??
  7)Y babri convicted was on the stage ? Anna did nt allow uma bharathi like leaders to share the stage.?
  8)Pejavara joined this movement,funny……he appreciates Yeddi’s corruption because he gives money to his matha?
  8)People of india voted MP’s to make law. I feel insulted when the govt listens to someone like Baba/Anna. Please desolve the parliment and go home.

  ——–
  DONT THINK CIVIL ACTIVISTS ARE VERY GOOD PEOPLE. HOW COME NITTE EDUCATION TRUST(OWNED BY SANTHOSH HEGDE’S FAMILY) IS CHARGING CRORES OF RUPEES FOR MANAGEMENT SAETS IN MEDICAL.? THAS IS SHISHTACHAR.?
  ——–
  FRIENDS IN DEMOCRACY WHAT PEOPLE WANTS MATTERS NOT WHAT HAZARE/BABA/XYZ.?
  ANNA HIMSELF TELL THAT HE WILL LOOSE DEPOSIT IF HE CONTESTS.? THAT MEANS PEOPLE DOES NOT WANT HIM>?
  ——–
  THIS GOVT SHOWED CONCERN FOR BABA/ANNA. GOVT IS NOT HIS SLAVE HE SHOULD THINK THAT (baba).
  ——–
  ABOUT BRASHTACHAAR ,ADVANI’S CONCERN WAS VERY APPRECIATIVE. Y DONT HE COME TO KTAKA ONCE.??SPEAKER/CM STILL IN POWER.? FOOLED US BY USING RAMA, NW TRYING TO FOOLS US BY USING RAMADEV ? HE IS CVERY MUCH CONCEREND ABOUT MATHA’S BEHAN’S. WHAT ABOUT MANY WHO DIED IN SANJOTHA/BABRI MASJID ROITS ???
  ——-
  PEOPLE ARE STILL SUPREMO IN DEMOCRACY!! C WHAT HAPPENED IN TN??? I DO NOT WANT SOME XYZ TO MAKE LAW OTHER THAN SOME ONE ELECTED BY ME.
  ——-
  We are calling for a fast to death in my office for better hikes…. Please join me guys.
  ——-Republic of India or Republic of Fasts.——–

  ಉತ್ತರ
  • ತಿಲಕ್,

   ಬಾಬಾ ಸಿಕ್ರೆಟ್ ಮಾಡಿದ್ದು,ಪತ್ರ ಬರೆದು ನಾಟಕ ಮಾಡ್ತಿನಿ ಅಂದಾಗ ಕೇಂದ್ರ ಸರ್ಕಾರ ಯಾಕೆ ಒಪ್ಪಿದ್ದು? ಹಾಗಾದರೆ ಅವ್ರೂ ಈ ನಾಟಕದಲ್ಲಿ ಪಾಲುದಾರಾರ? ಇನ್ನ ಬಾಬಾ ೫ ಬೇಡಿಕೆಗಳಲ್ಲಿ ಪ್ರಧಾನಿಯ ನೇರ ಆಯ್ಕೆ ಮತ್ತು ಕಪ್ಪು ಹಣ ಸಂಗ್ರಹಣೆಗೆ ಕಾರಣವಾಗಿರುವ 500/ 1000 ನೋಟುಗಳನ್ನು ಹಿಂತೆಗೆದುಕೊಳ್ಳಬೇಕು ಅನ್ನುವುದನ್ನ ಬಿಟ್ಟರೆ ಅವರ ಉಳಿದ ೩ ಬೇಡಿಕೆಗಳು 1. ಕಪ್ಪು ಹಣ ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು.2.ಭ್ರಷ್ಟ ಕೋಟ್ಯಧಿಪತಿಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬೇಕು.3.ಭಾರತೀಯರು ವಿದೇಶಗಳಲ್ಲಿ ಹೊಂದಿರುವ ಖಾತೆ (ಅಕೌಂಟ್)ಗಳ ವಿವರ ನೀಡಬೇಕು.

   ಈ ೩ರ ಬಗ್ಗೆ ಯಾಕೆ ತಾವು ಮಾತಾನಡುವುದಿಲ್ಲ ತಿಲಕ್? ಪೋಲಿಸರಿಗ್ಯಾಕೆ ಅವರು ಇನ್ನ ಬಾಬಾ ಶರಣಾಗಬೇಕಿತ್ತು ಅಂದಿರಿ.ಯಾಕೆ? ಅವರೇನು ದೇಶ ದ್ರೋಹಿಯ? ಅರೆ, ಹವಾಲದ ಹಸನ್ ಅಲಿ ಅನ್ನುವ ಕಳ್ಳನನ್ನ ಬಂಧಿಸಲು ಈ ಕೇಂದ್ರ ಸರ್ಕಾರಕ್ಕೆ ಖುದ್ದು ಸುಪ್ರೀಂ ಕೋರ್ಟ್ ತಪರಾಕಿ ಹಾಕಬೇಕಾಗಿ ಬಂತು.ಬಾಬಾರ ಜೀವಕ್ಕೆ ಬೆದರಿಕೆಯಿತ್ತು ಅಂತ ಇಂಟೆಲಿಜೆನ್ಸ್ ಹೇಳಿದೆ ಅಂದ್ರಲ್ಲ,ಇವ್ರ ಇಂಟೆಲಿಜೆನ್ಸ್ ಸರಿ ಇದ್ದಿದ್ದರೆ ಮುಂಬೈ ದಾಳಿಯಾಗುತಿತ್ತಾ? ಸೋನಿಯಾ ಬಗ್ಗೆ ಮಾತನಾಡೋದು ಈ ದೇಶದಲ್ಲಿ ಅಪರಾಧವೇ?
   ಇನ್ನ ಸಾದ್ವಿ ರಿತಿಂಬರ ಬಗ್ಗೆ ಕಿರಣ್ ಬೇಡಿ, ಬುರ್ಖಾ ದತ್ತ್ ಅವರಿಗೆ ಕೊಟ್ಟ ಉತ್ತರವೇ ನನ್ನದೂ ಸಹ. ಕೇಸರಿ ಬಣ್ಣ ಬಿಟ್ಟು ಉದ್ದೇಶ ನೋಡಿ.

   ಯಡ್ಡಿ,ಪೇಜಾವರರ ಬಗ್ಗೆ ಕರ್ನಾಟಕದ ಜನತೆಗೆ ಗೊತ್ತಿದೆ.ಹಾರೋ ಬೂದಿ ಹೋರಾಟ ಹಳ್ಳ ಹಿಡಿದಿದ್ದು ಹೇಗೆ ಅನ್ನುವುದ ದಕ್ಷಿಣ ಕನ್ನಡದ ಮಂದಿಗೆ ಚೆನ್ನಾಗಿ ಗೊತ್ತಿದೆ.ಇಂತವರ ಬೆಂಬಲದಿಂದ ಹೋರಾಟದ ಬಲ ಕುಂದುತ್ತದೆ ಅಷ್ಟೆ!
   ಎಂ.ಪಿಗಳು ತಮ್ಮ ಕೆಲ್ಸವನ್ನ ನಿಯತ್ತಾಗಿ ಮಾಡಿದ್ದರೆ ಈ ಕರ್ಮ ನಮ್ಗ್ಯಾಕೆ ಬರುತಿತ್ತು.ಕಂಡೋರ ದುಡ್ಡು ಅಂದ್ರೆ ಬಿದ್ದು ಸಾಯೋ ಕಂತ್ರಿ ನಾಯಿಗಳಿಂದ ಯಾವ ಜನಪರ ಲೋಕಪಾಲ ಬಿಲ್ ಬರಲಾರದು. ಅಡ್ವಾಣಿಯವರ ಬಗ್ಗೆ ನಿಮಗೆ ಈ ಮೊದಲೇ ಹೇಳಿದ್ದೇನೆ.

   ನಿಮ್ಮ ಆಫ಼ೀಸಿನಲ್ಲಿ ಸತ್ಯಾಗ್ರಹ ಮಾಡಲು ನಾವ್ಯಾಕೆ ನಿಮ್ಮ ತಂದದವರನ್ನ ಕರೆಯಿರಿ ಸ್ವಾಮಿ.

   ಉತ್ತರ
 2. ಜೂನ್ 6 2011

  “ಕನ್ನಡಪರ ಮನಸ್ಸಿನ ಗೆಳೆಯರು ಕಿಡಿಕಿಡಿಯಾಗಿದ್ದಾರೆ. ರಾಮ್ ದೇವ್ ಆ ಮಾತನ್ನ ಹೇಳೀದ್ದರೆ ಅದನ್ನ ವಿರೋಧಿಸಬೇಕಾದದ್ದೆ. ಆದರೆ ಅದನ್ನ ಈ ಸಮಯದಲ್ಲಿ ವಿರೋಧಿಸಬೇಕಿತ್ತಾ ಅನ್ನುವುದು ಪ್ರಶ್ನೆ!?”

  ಅದಲ್ಲ ಪ್ರಶ್ನೆ. ಈ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಭಾಷೆಯ ಬಗ್ಗೆ ಬಾಬಾ ಹೇಳಿಕೆ ಬೇಕಿತ್ತಾ ಎನ್ನುವುದು ಪ್ರಶ್ನೆ ಆಗಿರಬೇಕಿತ್ತು. ಇರಲಿ ಬಿಡಿ. ಅವರು ಹಾಗೆ ಹೇಳಿಕೆ ಕೊಟ್ಟಿಲ್ಲ ಎಂದೂ, ಅದು ಇಂಗ್ಲೀಷ್ ಮೀಡಿಯಾಗಳ ಸುಳ್ಳು ಪ್ರಕಟಣೆ ಎನ್ನುವುದೂ ಗೊತ್ತಾಗಿದೆ. ಅಂದ ಮೇಲೆ ನಿಮ್ಮ ಬರಹದಲ್ಲಿ ಅದರ ಉಲ್ಲೇಖದ ಅಗತ್ಯವಿತ್ತಾ ಎನ್ನುವುದು ಇಲ್ಲಿ ಪ್ರಶ್ನೆ. ನೀವೇಕೆ ಭ್ರಷ್ಟಾಚಾರದ ವಿರುದ್ಧ ಹೋರಾಟದ ಆಳ ಅಗಲ ಮೂಲ ಉದ್ದೇಶ ಬಿಟ್ಟು ಇಂತಹ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಬರೆದಿದ್ದೀರಿ?

  ಉತ್ತರ
  • “ನಿಮ್ಮ ಬರಹದಲ್ಲಿ ಅದರ ಉಲ್ಲೇಖದ ಅಗತ್ಯವಿತ್ತಾ ಎನ್ನುವುದು ಇಲ್ಲಿ ಪ್ರಶ್ನೆ. ನೀವೇಕೆ ಭ್ರಷ್ಟಾಚಾರದ ವಿರುದ್ಧ ಹೋರಾಟದ ಆಳ ಅಗಲ ಮೂಲ ಉದ್ದೇಶ ಬಿಟ್ಟು ಇಂತಹ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಬರೆದಿದ್ದೀರಿ?”

   ಅಣ್ಣಾ ಹಜ಼ಾರೆ ಬೆಂಗಳುರಿಗೆ ಬರುವ ಕಾರ್ಯಕ್ರಮ ನಿಗದಿಯಾದಾಗ ಈ ಕನ್ನಡದ ಬಗ್ಗೆ ಕಾಳಜಿ ಬಹಿಸುವ ಜನರೇಕೆ ಈ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿ ನಿಲ್ಲಲಿಲ್ಲ? ಯಾಕೆ ಭ್ರಷ್ಟಚಾರದ ವಿರುದ್ಧ ಕನ್ನಡ ಪರ ಹೋರಾಟಗಾರರು ನಿಲ್ಲಲಿಲ್ಲ?ನಾನ್ಯಾಕೆ ಬರಹದಲ್ಲಿ ಸೇರಿಸಿದೆ ಅಂದರೆ ಖುದ್ದು ಅಂದಿನ ಕಾರ್ಯಕ್ರಮದಲ್ಲಿ ಅಸಮಾಧಾನದ ಹೊಗೆ ಕಂಡವನು,ಹಾಗೆ ಅಂತರ್ಜಾಲದಲ್ಲಿ ಬಾಬಾ ಹೋರಾಟದ ಬಗ್ಗೆ ಬಿಟ್ಟು ಅದರ ಬಾಲ ಹಿಡಿದು ಮಾತನಾಡುತಿದ್ದ ಜನರಿಗೆ ವಿಷಯ ಮುಟ್ಟಿಸಲು ಬರೆದೆ.ಅಷ್ಟಕ್ಕೂ ಪ್ರಿಯಾರಿಟಿಗಳನ್ನು ನಿರ್ಧರಿಸಲಾಗದವ್ರು ಎಂತ ಹೋರಾಟ ತಾನೆ ಮಾಡಿಯಾರು? ಅರ್ಥ ಮಾಡಿಕೊಳ್ಳುವವರು ಮಾಡಿಕೊಳ್ಳಲಿ

   ಉತ್ತರ
   • ಜೂನ್ 11 2011

    ಅವರೇನು ಮಾಡಿದರು ಇವರೇನು ಮಾಡಿದರು ಅವರ್ಯಾಕೆ ಅದು ಮಾಡಲಿಲ್ಲ ಅಂತ ಕೇಳುವುದಕ್ಕಿಂತ ನಾವೇನು ಮಾಡಿದಿವಿ ಎಂಬುದು ಮುಖ್ಯವಾಗಬೇಕಷ್ಟೆ. ಭ್ರಷ್ಟಾಚಾರದ ವಿಷಯ ಮಾತಾಡುವಾಗ ಇವೆಲ್ಲಾ ಅನಗತ್ಯ ವಿಷಯಗಳಾಗುತ್ತವೆ. ಅಷ್ಟಕ್ಕು ಕನ್ನಡ ಪ್ರೀತಿ ಇರುವವರು ಭ್ರಷ್ಟಾಚಾರ ವಿರೋಧ ಮಾಡುವುದಿಲ್ಲ ಅಂತ ಯಾಕೆ ಅಂದುಕೊಳ್ಳಬೇಕು!.. ಇಲ್ಲಿ ಬರಹ ಲೇಖನ ಬರೆದು ದೇಶಪ್ರೇಮ ತೋರಿಸುವವರು ಯಾಕೆ ಉಪವಾಸ ಸತ್ಯಾಗ್ರಹ ಮಾಡಲಿಲ್ಲ ಅಂತ ಕೇಳಿದರೆ ಎಶ್ಟು ಬಾಲಿಶವಲ್ಲವೇ?

    ನೋಡಿ ನಿತೀಶರಂತವರು ಅದಕ್ಕೆ ಇನ್ನೇನೋ ಅತಿಬುದ್ಧಿವಂತಿಕೆಯ ಪ್ರತಿಕ್ರಿಯೆ ಕೊಡುತ್ತಾರೆ. ಎಲ್ಲಿ ಹೇಗೆ ಮಾತಾಡಬೇಕು ಎಂಬುದೇ ಗೊತ್ತಿರದ ಇಂತವರಿಂದ ಸಾಮಾಜಿಕ ಜವಾಬ್ದಾರಿ ನಿರೀಕ್ಷಿಸುವುದು ಅಸಾಧ್ಯ. ಬಾಬಾ ಬೆಂಬಲಿಸುವುದು ಅಂದರೆ ಇದೇನಾ? ಇಂತಹ ಚಿಕ್ಕಪುಟ್ಟ ವಿಷಯಗಳು ಎಲ್ಲೆಲ್ಲೋ ಹೋಗುತ್ತವೆ. ವೈಮನಸ್ಯ ಹುಟ್ಟುಹಾಕತ್ತೆ. ಅದಕ್ಕೇ ಹೇಳಿದ್ದು ಅಷ್ಟೆ. ಧನ್ಯವಾದಗಳು.

    ಉತ್ತರ
  • ನಿತೀಶ್
   ಜೂನ್ 8 2011

   ವಿಕಾಸ್ ನಿಮಗೆ ಕನ್ನಡ ಪ್ರೇಮ ಇದೆ ಅಂತ ಎಲ್ಲರಿಗೂ ಗೊತ್ತು. ಹಾಗಂತ ಜಗತ್ತಿನಲ್ಲಿ ಎಲ್ಲರು ನಿಮ್ಮ ಹಾಗೆ ಯೋಚಿಸಬೇಕು ಅಂತೆನೂ ಇಲ್ಲ. ಬಾಬಾರ ಉದ್ದೇಶ ಒಳ್ಳೇದಿದೆ ಸುಮ್ಮನೆ ಬೆಂಬಲಿಸಿ. ಇಲ್ಲ ಸುಮ್ಮನಿರಿ. ನೀವೂ ಮಾಡಲ್ಲ ಮಾಡುವವರನ್ನು ಬಿಡುವುದಿಲ್ಲ. ಕನ್ನಡ ಅಂತೆ ಕನ್ನಡ. ಎಲ್ಲ ಕಡೆಗೂ ಬಂತು ಬಿಡ್ತಾರೆ

   ಉತ್ತರ
 3. adarsh bharateeya
  ಜೂನ್ 6 2011

  ಸರಕಾರ ಹೆದರಿದ್ದು ಬಾಬಾ ರಾಮದೆವ್ಗಲ್ಲ, ಈ ದೇಶದ ನಿಷ್ಟಾವಂತ ಪ್ರಜೆಗಳಿಗೆ ಹೆದರಿದೆ ಅಂತ ಹೇಳಬಹುದು, ಬಾಬಾ ರಾಮ್ದೇವ್ಗೆ ಹೆದರಿದರೆ ಮೊನ್ನೆ ರಾತ್ರೆ ಆ ಘಟನೆ ನಡೆಯುತಿದ್ದಿಲ್ಲ, ಬಾಬಾ ರಾಮ್ದೇವ್ ಸ್ಥಿತಿ ಹೀಗಾಗುತ್ತಿರಲಿಲ್ಲ, ಸರಕಾರ ಈ ದೇಶದ ಕಾನೂನು ಸುವ್ಯವಸ್ತೆ ಕಾಪಾಡಲು ಎಂತೆಂಥ ಕ್ರಮ ಕೈಗೊಲ್ಲುತ್ತದೆಯೋ ದೇವರೇ ಬಲ್ಲ.

  ಉತ್ತರ
 4. ಜೂನ್ 6 2011

  ತಿಲಕ್ ಹೇಳಿರುವ ಅ೦ಶಗಳು ಸರಿಯಾಗಿದೆ, ಯಾರೋ ೪ನೆ ತರಗತಿಯ ಹುಡುಗನ ಬೇಡಿಕೆ ತರಹ ಇದೆ
  ಆದರೂ ಒ೦ದು ಅ೦ಶವನ್ನು ನಾವು ಗಮನದಲ್ಲಿಟ್ಟು ಕೊಳ್ಳಬೇಕು, ಯಾರು ಎನಾದರು ಮಾಡಲಿ ಅದು ಸಾಮಾನ್ಯ ಜನತೆಗೆ ಉಪಯೋಗವಾಗಬೇಕು ಅಶ್ಟೆ. ಇದು ಒ೦ದು ಒಳ್ಲೆಯ ಸಮಯ ಕಬ್ಬಿಣ ಕಾದಗಲೆ ಅದನ್ನು ಬಡಿಯಬೇಕು
  ಸರ್ಕಾರದ ಮೇಲೆ ಒತ್ತಡ ಹೇರಬೇಕು ಯಾಕೆ೦ದರೆ ಪಾರ್ಲಿಮೆ೦ಟ್ ನಲ್ಲಿ ನಡೆಯೊ ಕಲಾಪಗಳಿಗಿ೦ತ ಇ ರೀತಿಯ ಹೊರಾಟಗಳೆ ವಾಸಿ ಅನ್ನಿಸುತ್ತಿದೆ ಅಲ್ಲಿ ಬರಿ ರಾಜಕೀಯ ಸ್ವಾರ್ತ ಹೋರಾಟಗಳೆ ಹೆಚ್ಚು (ಉದಾ: ಕರ್ನಾಟಕ) ಆದರೆ ಇಲ್ಲಿ ಎಲ್ಲೊ ಒ೦ದು ಕಡೆ ಸಾಮನ್ಯ ಜನರ ಬೆ೦ಬಲ ಕೂಡ ಇದೆ

  ತಿಲಕ್ ನೀವೆ ಹೇಳಿರುವ ಹಾಗೆ ನಿಮ್ಮ ಕಛೇರಿಯಲ್ಲಿ ನಿಮ್ಮ ಸ೦ಬಳದ ಎರಿಕೆಗೆ ಉಪವಾಸ ಮಾಡಬಹುದೆ ಹೊರತು ಜನ ಸಾಮನ್ಯರಿಗಾಗಿ ಮಾಡಲು ನೀವು ತಯಾರಾಗಿದ್ದೀರ? ಖ೦ಡಿತ ಅದು ನಿಮ್ಮಿ೦ದ ಸಾದ್ಯವಿಲ್ಲ

  ಉತ್ತರ
 5. ಬಾರ್ ನೌಕರಿ ಮಾಡಿಕೊಂಡಿದ್ದವರನ್ನು ಕರೆದು ತಂದು ವಿಶ್ವದ ಅತೀ ದೊಡ್ಡ ಪ್ರಜಸ್ತಾತ್ತಾತ್ಮಕ ರಾಷ್ಟ್ರದ ಆಡಳಿತ ನಡೆಸು ಎಂದು ಕೂರಿಸಿದರೆ, ಇಂಥ ಅನಾಹುತಗಳೇ ನಡೆಯುವುದು.
  ಒಂದು ಪ್ರತಿಷ್ಠಿತ ಕುಟುಂಬದ ಸುಂದರಾಂಗನ ಹಿಂದೆ ಬಿದ್ದು, ಬಲವಂತದಿಂದ ಆತನನ್ನು ವಿವಾಹ ಆದಕೂಡಲೇ, ಆ ಹೆಣ್ಣಿಗೆ ಅದ್ಯಾವ ಯೋಗ್ಯತೆಗಳು ಮೈಗೂಡುತ್ತವೋ ದೇವರೇ ಬಲ್ಲ.
  ತಪ್ಪು ಆಕೆಯದಲ್ಲ, ವಿದೇಶದಲ್ಲಿ ಶಿಕ್ಷಣ ಪಡೆದು ಬಂದಿರುವ, ಈಗ ಆಕೆಯ ಮುಂದೆ ಕೈಮುಗಿದು ನಿಲ್ಲುವ, ನಮ್ಮ ನರಸತ್ತ ದೇಶೀ ನಾಕರುಗಳದ್ದೇ ಮಹಾಪರಾಧ ಸ್ವಾಮೀ. ಮುಂದೊಂದು ದಿನ ಆ ಕುಟುಂಬದ ಸದಸ್ಯರಿಲ್ಲದೇ ಇದ್ದರೂ, ಆ ಮನೆಯ ಸಾಕುನಾಯಿಯನ್ನು ತಂದು, ಅದಕ್ಕೆ ಆ ಮನೆಯ ಅಡ್ಡ ಹೆಸರನ್ನು ನೀಡಿ, ಗದ್ದುಗೆಯೇರಿಸಿ, ಅದರೊಂದಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಿ, ಸರಕಾರ ನಡೆಸುವುದಕ್ಕೆ ಹೇಸದ ಮೂರ್ಖ ಶಿಖಾಮಣಿಗಳು, ಇವರು ನಮ್ಮವರು!

  ಉತ್ತರ
 6. Thilak
  ಜೂನ್ 6 2011

  Anna, made a mistake by going fr a fast on 8th. His moto shd have been lokpal lokpaal and lokpaal. That is it….
  He shd nt bother about any other actions . He is not opposition party. He gained popularity because of his recent movement.He will take decision without thinking much ,asuming that everyone are like him. Im scarred the entire issue will b diluted and politicised, by saffron people’s involvement…..

  ಉತ್ತರ
  • ಅಣ್ಣಾ ಹಜ಼ಾರೆ ಅವರಿಗೆ ಪಾಪ್ಯುಲಾರಿಟಿ ಈಗ ಬಂದಿದ್ದು ಅನ್ನುವ ನಿಮ್ಮ ಇತಿಹಾಸ/ಪ್ರಚಲಿತ ಜ್ನಾನಕ್ಕೆ ನನ್ನ ಮರುಕವಿದೆ.ಸಾಧ್ಯವಾದರೆ ಅಣ್ಣಾ ಹಜ಼ಾರೆ ಅಂತ ಗೂಗಲ್ ಮಾಡಿ ನೋಡಿ. ಅವರು ೮ನೇ ತಾರಿಖು ಕರೆ ಕೊಟ್ಟಿರುವುದು ತಪ್ಪಾ? ಹೆಂಗಸರು,ಮಕ್ಕಳು,ಮುದುಕರು ಅಂತ ನೋಡದೆ ಎಲ್ಲರ ಮೇಲೆ ಮುಗಿ ಬಿದ್ದ ಕೇಂದ್ರದ ರಾಕ್ಷಸರ ವಿರುದ್ಧ ದನಿಯೆತ್ತಲು ಕರೆ ಕೊಟ್ಟಿದ್ದು ನಿಮ್ಮ ದ್ರುಷ್ಟಿಯಲ್ಲಿ ತಪ್ಪು ಅನ್ನುವುದಾದರೆ ನಿಮ್ಮ ಬಗ್ಗೆ ನನಗೆ ಮರುಕವಿದೆ ತಿಲಕ್.

   ಉತ್ತರ
 7. ಬಾಬಾ ರಾಮದೆವ್ ಅವರು ಕೇವಲ ಹಿಂದಿಯಲ್ಲಿ ಉನ್ನತ ಶಿಕ್ಷಣ ಆಗಬೇಕಂತ ಹೇಳಿಲ್ಲ. ಪ್ರಾದೇಶಿಕ ಭಾಷಿಕ ಭಾಷೆಗಳಲ್ಲಿ ಆಗಬೇಕು ಅಂತ ಹೇಳಿದ್ದು. ಉತ್ತರ ಭಾರತದಲ್ಲಿ ಅದು ಹಿಂದಿ ಅಷ್ಟೆ. ಹಾಗೆಯೇ ಕನ್ನಡ ತೆಲುಗು ಇತ್ಯಾದಿಗಳಲ್ಲಿ ಆಗಬೇಕು ಅಂತ ಅವರ ನಿಲುವು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments