ವಿಷಯದ ವಿವರಗಳಿಗೆ ದಾಟಿರಿ

ಜೂನ್ 7, 2011

2

ಇಲ್ಲಿ ‘ನಿಮ್ಮ’ ಕಣ್ಣಿಗೆ ಸಣ್ಣವರಾದ ಸಾಮಾನ್ಯ ಜನರು ಇದ್ದರು…

‍ನಿಲುಮೆ ಮೂಲಕ

ಡಾ.ಅಜಕ್ಕಳ ಗಿರೀಶ್

ರಾಮದೇವ್ ಬಗ್ಗೆ ಬೇಕಾದದ್ದು ಮಾತಾಡಲಿ. ಆದರೆ ಹಾಗೆ ಹಿಡನ್ ಅಜೆಂಡಾ, ಕೋಮುವಾದಿಗಳು ಇತ್ಯಾದಿ ಬೈಯುವಾಗ ಕೂಡ ಯಾರೊಬ್ಬರೂ ಗಮನಿಸದ ವಿಚಾರ ಅಂದರೆ, ಅವರನ್ನು ಬೇಂಬಲಿಸಿ ರಾಮಲೀಲ ಮೈದಾನಕ್ಕೆ ಗಂಟುಮೂಟೆ ಕಟ್ಟಿಕೊಂಡು ಹೋದ ಸಾವಿರಾರು ಜನರು ಇದ್ದಾರಲ್ಲ ಅವರು ಯಾವ ಸ್ವಾರ್ಥದಿಂದ ಹೋದರು? ನಿಜ , ಅಲ್ಲಿ ಕಡುಬಡವರು ಇದ್ದಿರಲಾರರು. ಆದರೆ,ಅಲ್ಲಿ ಇದ್ದವರು ನಿಜವಾದ ದೇಶಭಕ್ತರು. ದೇಶಭಕ್ತಿ ಅಂದರೆ ಏನು ಅಂತ ವಿವರಿಸುವುದು ಯಾವಾಗಲೂ ಕಷ್ಜ್ಟ. ಆದರೆ ಇಂದು ಬಹುಶಃ ದೇಶಭಕ್ತಿ ಅಂದರೆ ಏನು ಅಂತ ಯಾರಿಗಾದರೂ ಪಾಠ ಹೇಳಬೇಕಾದರೆ ನಾವು ಇದು ಅಂತ ತೋರಿಸಬಹುದುದು. ಬೇರೆ ಅಂಥ ಉದಾಹರಣೆಗಳು ಬಹಳ ಸಿಗಲಿಕ್ಕಿಲ್ಲ. ಊಟದ ಆಸೆಯಿಂದ ಸೇರಿದ್ದಾರೆ ಅನ್ನಲು ಅಲ್ಲಿ ಊಟವಿಲ್ಲ,ಉಪವಾಸ. ಹಣದ ಆಸೆಗೆ ಹೋದರೇ? ಅವರು ತಮ್ಮ ಸ್ವಂತ ಹಣದಿಂದ ಹೋದರು ,ಅಷ್ಟೇ ಅಲ್ಲ ,ಬಹುಶ ಬಹಳ ಜನ ಪೆಂಡಲ್ ಇತ್ಯಾದಿ ಖರ್ಚಿಗೆ ದೇಣಿಗೆ ಕೂಡ ಕೊಟ್ಟಿರಬಹುದು(ದೇವಸ್ತಾನಗಳಿಗೆ ನಮ್ಮ ಖರ್ಚಲ್ಲಿ ಹೋಗಿ ಕಾಣಿಕೆ ಹಾಕಿದಂತೆ.ದೇವಸ್ತಾನದಲ್ಲಿ ಪುಣ್ಯವಾದರೂ ಸಿಗುತ್ತೆ ಸ್ವಂತಕ್ಕೆ ಅಂತ ಆಸೆ ಇರುತ್ತೆ, ಇಲ್ಲಿ ಸ್ವಂತಕ್ಕೆ ಅಂತ ಏನಿಲ್ಲ.)

ಟಿ.ವಿಯಲ್ಲಾದರೂ ಎಲ್ಲರ ಮುಖ ಕಾಣುವ ಮತ್ತು ಪ್ರಚಾರ ಸಿಗುವ ಆಸೆ ಕೂಡ ಇಲ್ಲ. ಹಾಗಿದ್ದರೂ ಬಂದರಲ್ಲ!!  ಅಷ್ಟೇ ಅಲ್ಲ, ಅವರಲ್ಲಿ ಬಹಳ ಜನ ತಮ್ಮ ಸ್ವಂತ ಕೆಲಸ ಬಿಟ್ಟು ಬಂದವರೇ ಆಗಿರಬೇಕು. ಹೀಗೆ ಆರ್ಥಿಕವಾಗಿ ಅಲ್ಲಿ ಬಂದವರಿಗೆ ನಷ್ಟವೇ. ಬಿಸಿ ಬಿಸಿ ಚಾ ಕುಡಿಯುತ್ತ  ಮೊನ್ನೆ ನಾಕನೇ ತಾರೀಕಿಗೆ ಬೆಳಿಗ್ಗೆ ಟಿ.ವಿ.ಯಲ್ಲಿ ರಾಮಲೀಲ ಮೈದಾನವನ್ನು ನೋಡುವಾಗ ನನಗೆ ನಿಜವಾಗಿ ನನ್ನ ಬಗ್ಗೆ ತುಂಬ ಖೇದವಾದುದು ಸುಳ್ಳಲ್ಲ.

ಎಲ್ಲಾದರೂ ಸರಕಾರಿ ಕೆಲಸಕ್ಕೆ ಪ್ರಯಾಣ ಮಾಡಿದರೆ ಟಿ.ಎ.ಗಾಗಿ ಜಗಳವಾಡುವ, ಅದಿಲ್ಲದಿದ್ದರೆ ಪ್ರಯಾಣವೇ ಮಾಡದ, ಅವರು ಅಷ್ಟು ದುಡ್ದು ತಿನ್ನುವಾಗ ನಾನು ಇಷ್ಟನ್ನಾದರೂ ಪಡೆಯಬಾರದೇ ಅಂದುಕೊಳ್ಳುವ ನನ್ನಂಥವರ ಬಗ್ಗೆ ನನಗೆ ನಿಜವಾಗಿ ಬೇಸರವಾಯಿತು. ಸರಕಾರದ  ಕೊನೇ ಪಕ್ಷ ಮಾನಸಿಕವಾಗಿಯಾದರೂ ಅವರಿಗೆ ಬೆಂಬಲ ನೀಡದಿದ್ದರೆ ನಿಜವಾಗಿ ಅಲ್ಲಿ ಕೇವಲ ದೇಶದ ಬಗ್ಗೆ ಅಭಿಮಾನದಿಂದ  ಭಾವುಕರಾಗಿ  ಸೇರಿದ್ದ ಸಾವಿರಾರು  ಜನರಿಗೆ ಮಾತ್ರ ಮಾಡುವ ದ್ರೋಹವಲ್ಲ ,ಇಡಿ ದೇಶಕ್ಕೆ ನಾನು  ಮಾಡುವ ದ್ರೋಹ ಅಂತ ಅನ್ನಿಸಿತ್ತು.

ಹೀಗೆ ಅಂದುಕೊಳ್ಳಬೇಕಾದರೆ ಆತ ರಾಮದೇವ್ ಅಭಿಮಾನಿಯಾಗಿರಬೇಕಾಗಿಲ್ಲ. ಮಾನವ ಸಹಜ ಸಂವೇದನೆ ಇದ್ದವನಾದರೆ ಸಾಕು. ರಾಮದೇವರ ಸಾಧನೆ ಏನೆಂದರೆ ಅಷ್ಟು ಜನರು ಬರುವಂತೆ ಮಾಡಿದ್ದು. ರಾಜಕೀಯ ನಾಯಕರು ಯಾರೇ ಆಗಲಿ ಸೋನಿಯಾ ಇರಲಿ ಅಡ್ವಾನಿ ಇರಲಿ ಬರುವುದಾದರೆ ಜನರನ್ನು ಬಸ್ಸು ಲಾರಿಗಳಲ್ಲಿ, ಕೆಲವೊಮ್ಮೆ ಹಣ ಕೊಟ್ಟು ಕರೆತರಬೇಕಾಗುವಾಗ, ಛೆ, ಇದನ್ನು ಹೇಗೆ ವರ್ಣಿಸಲಿ?
ಬಾಬಾ ಯೋಗ ಕಂ ಭಾಶಣ ಶಿಬಿರಗಳಲ್ಲು ಹಾಗೆ. ಬೆಳಗ್ಗೆ ನಾಕು ಗಂಟೆಗೆ ಐವತ್ತು-ಅರುವತ್ತು ಕಿಮಿ ದೂರದಿಂದ ತಾಲುಕ್ ಜಿಲ್ಲಾ ಕೇಂದ್ರಗಳಿಗೆ ಜನರು ಸ್ವಂತ ಖರ್ಚಲ್ಲಿ ಬರುತ್ತಾರೆ. ಅದು ಬೇರೆ ಸಂಗತಿ. ಅಲ್ಲಿ ಕೊನೆಪಕ್ಷ ತಮ್ಮ ಬಿ.ಪಿ.ಶುಗರ್ ಗುಣವಾಗುವ ಆಸೆಯಿಂದ ಅಂತಾದರೂ ಹೇಳಬಹುದು ಬೇಕಾದರೆ. ಆದರೆ ಇಲ್ಲಿ ಆ ಅವಕಾಶ ಕೂಡ ಇಲ್ಲ.
ಅಲ್ಲಿ ಸೇರಿದ್ದವರು ಬಾಬಾ ಮೇಲಿನ  “ಧಾರ್ಮಿಕ”ಭಕ್ತಿಯಿಂದ ಮಾತ್ರ ಸೇರಿರಲು ಸಾಧ್ಯವಿಲ್ಲ. ಯಾಕೆಂದರೆ ಇತರ ಅನೇಕ ಸ್ವಾಮಿಗಳಂತೆ ಬಾಬಾ ರಾಮದೇವ್ ಪೂಜೆ ಪುನಸ್ಕಾರ ಪುಣ್ಯ ಸಂಚಯನ ಗ್ರಹದೋಷನಿವಾರಣೆ ಇತ್ಯಾದಿಗಳಿಗೆ ಮಹತ್ವ ಕೊಡೊಲ್ಲ.
ಹಲವಾರು ಜನರು ರಾಮದೇವ್ ಅವರ ಈ ಉಪವಾಸದ ಬಗ್ಗೆ ಹೇಳುತ್ತ ಇದು ಬ್ಲಾಕ್ಮೇಲ್ ಅಂತೆಲ್ಲ ಹೇಳಿದರು. ಅಣ್ಣಾ ಹಜಾರೆ ಆದ ಬಳಿಕ ಪುನಃ ಯಾಕೆ? ಅಂದರು. ಒಂದು ವಿಷಯ ಅವರು ಗಮನಿಸಿಲ್ಲ, ರಾಮದೇವ್ ೮-೯ ತಿಂಗಳುಗಳ ಹಿಂದೆಯೇ ಈ ಒಂದು ಯಾತ್ರೆಯನ್ನು ಆರಂಭಿಸಿದ್ದರು. ಒಂದು ಲಕ್ಷ ಕಿಮಿ ಹೋಗುವ ಅವ್ರ ಉದ್ದೇಶ ಅಂದೇ ಇತ್ತು. ಈ ಅವಧಿಯಲ್ಲಿ ಅವರು ದೇಶಾದ್ಯಂತ ಮಾಡಿದ ನೂರಾರು ಭಾಷಣಗಳಲ್ಲಿ ಇದನ್ನು ಹೇಳೂತ್ತಿದ್ದರು. ಹೇಳಿದ್ದನ್ನೇ ಹೇಳಿದಂತೆ ಕಾಣುತ್ತಿತ್ತು. ಈ ಒಂಬತ್ತು ತಿಂಗಳಲ್ಲಿ ಸರಕಾರ ಇದನ್ನು ಗಮನಿಸಿಲ್ಲವೇ? ಅವರೇನು ಸಡನ್ನಾಗಿ ಉಪವಾಸ ಕೂತದ್ದೇ? ಗಮನಿಸಿ,  ಬಾಬಾ ಕಾರ್ಯಕ್ರಮಗಳು ತಿಂಗಳುಗಳ ಮೊದಲೇ ಫಿಕ್ಸ್ ಆಗುತ್ತವೆ ,ಆದರೆ ಜೂನ್ ತಿಂಗಳು ಇದಕ್ಕಾಗಿಯೇ ಮೊದಲೇ ಮೀಸಲಾಗಿತ್ತು.
ಸ್ವಿಸ್ ಹಣದ ಬಗ್ಗೆ ಎಲ್ಲ ಹೀಗೆ ಅರ್ಜೆಂಟ್ ಮಾಡಬಾರದು ಅಂತ ಕೆಲವು ದೊಡ್ಡ ಮಾಧ್ಯಮಮಿಂಚುಗರು   ಟಿ.ವಿ.ಯಲ್ಲಿ ಹೇಳುವಾಗ  ಅವರ ಮೂರ್ಖತನಕ್ಕೆ ನಗಬೇಕೋ ಅಳಬೇಕೋ ಗೊತ್ತಗೊಲ್ಲ. ಬಾಬಾ ಭಾಷಣ ಇಡೀ ದೇಶದಲ್ಲಿ ಆಸ್ಥಾ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು, ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗುತ್ತಿತ್ತು. ಅವರು ಈ ಉಪವಾಸದಲ್ಲಿ ಇಟ್ಟ ಇಶ್ಯೂಗಳನ್ನೆಲ್ಲ ಮತ್ತೆ ಮತ್ತೆ ಹೇಳುತ್ತ ಬಂದಿದ್ದರು.
ಎನ್. ಡಿ.ಏ. ಇದ್ದಾಗ ಯಾಕೆ ಸ್ವಿಸ್ ಬ್ಯಾಂಕಿನಿಂದ ಹಣ ತರಲಿಲ್ಲ ಅನ್ನೋದು ಕೂಡ ವಿಷಯಜ್ಞಾನ ಇಲ್ಲದವರ ಮೂರ್ಖ ಪ್ರಶ್ನೆ. ಆಗ ಜರ್ಮನಿ ಯವರ ಮೂಲಕ ಅದು ಎಕ್ಸ್ ಪೋಸ್ ಆಗಿರಲಿಲ್ಲ. ಸ್ವಿಸ್ ಬ್ಯಾಂಕ್ ಆ ವಿವರಗಳನ್ನು ನೀಡುವುದಕ್ಕೆ ತಯಾರಿರಲಿಲ್ಲ. ಈಚೆಗೆ ಅಂತಾರಾಷ್ಟ್ರೀಯ ಒತ್ತಡದಿಂದ ಅದು ಸಾಧ್ಯವಾಗಿರುವುದು . ಇದನ್ನು ನಾವು ಗಮನಿಸಬೇಕು.
ರಾಮ್ ದೇವ್ ಆಸ್ತಿ ಮೂಲ, ಅವರ ರಶೀದಿಗಳನ್ನು ಸರಕಾರ ಪರಿಶೀಲಿಸಲಿ ಎಂದು ಅವರೆ ಹೇಳಿದ್ದಾರೆ. ಅದನ್ನು ಸರಕಾರ ಪರಿಶೀಲನೆ ಮಾಡಬೇಕು. ಅದರಲ್ಲಿ ಕಾಳಧನದವರ ದೇಣಿಗೆ ಇದ್ದರೆ ಅಂಥವರನ್ನು ಸರಕಾರ ಹಿಡಿಯಬೇಕು.  ಕಳ್ಳ ಹಣದವರು ತೆರಿಗೆ ತಪ್ಪಿಸಲು ವಂತಿಗೆ ಕೊಟ್ಟರೆ ರಶೀದಿ ಇಲ್ಲದೆ ಕೊಡಲಾರರು. ರಶೀದಿ ಇದ್ದರೆ ಬಾಬಾ ಆದಾಯ ವಿವರ ಸಿಗಲೇಬೇಕಲ್ಲವೇ? ರಶೀದಿ ಇಲ್ಲದೆ ಕೊಟ್ತರೆ ಕಳ್ಳ ಹಣ ಬಿಳಿ ಆಗೊಲ್ಲ. ಕೇವಲ ಭಕ್ತಿಯಿಂದ ಗುಟ್ಟಾಗಿ ಬಾಬಾಗೆ  ಕೊಟ್ಟರೆ ಏನೂ ಮಾಡಕ್ಕಾಗಲ್ಲ. ಆದರೆ ಅದನ್ನು ಬಾಬ ರಾಮದೇವ್ ಸ್ವಂತಕ್ಕಲ್ಲದೆ ಜನೋಪಯೋಗಕ್ಕಾಗಿ ಉಪಯೋಗಿಸಿದರೆ ಅದೂ ಲಾಭವೇ!!
ಇನ್ನು ಯೋಗಕ್ಕೆ ಮಾತ್ರ ಅನುಮತಿ,ಉಪವಾಸಕ್ಕೆ ಅನುಮತಿಯಿಲ್ಲ ಅಂತೆಲ್ಲ ಮಾಡುವ ವಾದ ಮೂರ್ಖತನದ್ದು ಹೊರತು ಬೇರೇನಲ್ಲ. ಎಂದೋ ಪ್ರಚಾರವಾದ ಉಪವಾಸ ಒಂದು ದಿನ ನಡೆದ ಬಳಿಕ ಯಾವುದಕ್ಕೆ ಅನುಮತಿ ಅನ್ನುವ ಎಚ್ಚರ ಉಂಟಾದದ್ದೆ?
ಉಪವಾಸದ ನೆಪದಲ್ಲಿ ಬಾಬಾ ರಾಜಕೀಯ ಮಾಡುತ್ತಾರೆ ಅನ್ನುವ ಆರೋಪ ಕೆಲವರದು.ಇದುಯ್ ವಿಚಿತ್ರ ಆರೋಪ. ಜನಕ್ಕೆ ,ದೇಶಕ್ಕೆ ಉಪಕಾರವಾಗುವ ರಾಜಕೀಯ ಮಾಡಿದರೆ ತಪ್ಪೇನು? ಅದು ಯೋಗಿಗೆ ನಿಷಿದ್ಧವೇ? ಯೋಗಿಯಾದರೂ ಆತ ಈ ದೇಶದ ಒಬ್ಬ ಪ್ರಜೆಯಲ್ಲವೇ? ನಿಜ, ಬಿಜೆಪಿ ಇದರ ಲಾಭಕ್ಕಾಗಿ ಯತ್ನಿಸುತ್ತಿದೆ. ಕಾಂಗ್ರೆಸ್ ಕೂಡ ಬಾಬಾಗೆ ಬೆಂಬಲ ನೀಡುವ ಮೂಲಕ  ಈ ಉಪವಾಸದ ಲಾಭ ಪಡೆಯಲು ಯತ್ನಿಸಬಹುದಿತ್ತಲ್ಲ?? ಯಾಕೆ ಯತ್ನಿಸಲಿಲ್ಲ??
ಮೊದಲೇ ಬಾಬಾ ಪತ್ರ ನೀಡಿ ಉಪವಾಸ ನಿಲ್ಲಿಸಲು ಒಪ್ಪಿದ್ದರು ಅಂತ ಸರಕಾರ ಹೇಳುತ್ತಿದೆ. ಇರಲೂ ಬಹುದು, ಆದ್ರೆ ಸರಕಾರ ಯಾಕೆ ಅದನ್ನು ಮೊದಲೇ ಹೇಳಲಿಲ್ಲ? ನಾಳೆ ಬಾಬಾ ಉಪವಾಸ ನಿಲ್ಲಿಸುತ್ತಾರೆ ಅಂತ ಸರಕಾರಕ್ಕೆ ಪ್ರಾಮಾಣಿಕತೆಯಿದ್ದರೆ ಹೇಳಿಬಿಟ್ಟು ಉಪವಾಸವನ್ನು ೩ನೇ ತಾರೀಕಿಗೇ ಭಂಗಗೊಳಿಸಬಹುದಿತ್ತಲ್ಲ? ಯಾಕೆ ಹಾಗೆ ಸರಕಾರ ಮಾಡಲಿಲ್ಲ? ಯಾಕೆಂದರೆ, ಸರಕಾರ ಲಿಖಿತ ಭರವಸೆ ನೀಡಿದೆ ಅಂತ ಅಚಾರ್ಯ ಬಾಲಕೃಷನಿಂದ   ಕಪಿಲ್ ಸಿಬಲ್ ಬರೆಸಿಕೊಂಡರೂ ಅದು ಯಾವ ಲಿಖಿತ ಭರವಸೆಯನ್ನೂ ಅಮ್ದು ನೀಡಿರಲಿಲ್ಲ. ಹಣ ಪಡೆದಿದ್ದೇನೆ ಅಂತ ಸಹಿ ಮಾಡಿದ ಬಳಿಕವೇ ಬ್ಯಾಂಕಿನಲ್ಲಿ ಹಣವನ್ನು ನಮಗೆ ನೀಡುವಂತೆ ಇದೆ ಇದು. ಅಂತೂ ಈ ಪತ್ರದ ಒಳಗುಟ್ಟು ನಮಗೆ ಗೊತ್ತಿಲ್ಲ. ಆದರೆ, ಇದನ್ನು ಬಹಿರಂಗ ಮಾಡದೆ ಇರುವುದರಲ್ಲಿ ಬಾಬಾಗಿಂತಲೂ ಸರಕಾರದ್ದೆ ಹುನ್ನಾರ ದೊಡ್ದದು. ಯಾಕೆಂದರೆ ಸರಕಾರ ತುಂಬ ಸಹಕರಿಸುತ್ತಿದೆ, ಸಹಾನುಭೂತಿಯಿಂದ ನಮ್ಮ ಬೇಡಿಕೆಯನ್ನು ಪರಿಶೀಲಿಸುತ್ತಿದೆ ಅಂತ ನಾಕನೇ ತಾರೀಕು ಸಮ್ಜೆವರೆಗೆ ಬಾಬಾಬ್ಹೇಳುತ್ತಿದ್ದುದು ಬಹುಶ  ಹಿಂದಿನ ದಿನದ  ಇದೇ ಮೌಖಿಕ ಭರವಸೆಯ ಆಧಾರದಲ್ಲಿ ಇರಬೇಕು.
ಏನೇ ಇರಲಿ, ಮಹಾವೇದಿಕೆಯ ಹತ್ತಿರಕ್ಕೂ ಸುಳಿಯುವ ಆಸೆಯಿಲ್ಲದೆ, ಪ್ರಚಾರದ ಹಂಗಿಲ್ಲದೆ, ಅಲ್ಲಿ ಸೇರಿದ್ದ ಸಾವಿರಾರು ನಿಸ್ವಾರ್ಥಿ ಜನರಿಗೆ ನನ್ನ ಸಾಷ್ಟಾಂಗ ಪ್ರಮಾಣಗಳು. ಅದನ್ನು ಟಿ.ವಿ.ಯಲ್ಲಿ ನೋಡಿದ್ದೇ ನನ್ನ ಭಾಗ್ಯ.
ಇದೆಲ್ಲದಕ್ಕೆ ಕಾರಣರಾದ ಬಾಬಾ ರಾಮದೇವರಿಗೆ ಒಂದು ನಮಸ್ಕಾರ.

*************

ಚಿತ್ರಕೃಪೆ: indiavision.com

2 ಟಿಪ್ಪಣಿಗಳು Post a comment
  1. ಜೂನ್ 7 2011

    nijakku idu adbhuta lekhana.

    ಉತ್ತರ
  2. ಜೂನ್ 7 2011

    I support your views Kudoos.. let so called secularists answer.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments