ವಿಷಯದ ವಿವರಗಳಿಗೆ ದಾಟಿರಿ

ಜೂನ್ 8, 2011

5

ಐ ಹೇಟ್ ಕ್ರಿಕೆಟ್..!!!???

‍ನಿಲುಮೆ ಮೂಲಕ

ಅರೆಹೊಳೆ ಸದಾಶಿವರಾವ್

ಕ್ರಿಕೆಟಿಗರು ಮೈದಾನದಲ್ಲಿ ಆಡುತ್ತಿದ್ದರೆ ಮೈ ಎಲ್ಲಾ ಕಣ್ಣಾಗಿ, ದೇಶದ ಧ್ವಜವನ್ನು ಹಾರಿಸಿ ನೋಡುವ, ಮನೆಯೊಳಗೆ ಎಲ್ಲಾ ಕೆಲಸ ಬಿಟ್ಟು ಟಿ” ಮುಂದೆ ಕುಳಿತುಕೊಳ್ಳುವ ನಾವೆಲ್ಲರೂ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಬಹುಷ ನಾವೂ ಈ ಕ್ರಿಕೆಟಿಗರೆಂಬ ‘ದೇಶ ದ್ರೋ”‘ಗಳಿಗಿಂತ ಕಡಿಮೆ ಇಲ್ಲದಂತಾಗುತ್ತದೆ. ವ್ಯತ್ಯಾಸ ಎಂದರೆ ಅವರಿಗೆ ಕೈತುಂಬಾ ಹಣ ಸಿಗುತ್ತದೆ, ನಮ್ಮದು ಜೀವನದ ಅಪೂರ್ವಗಳಿಗೆಗಳು ವ್ಯರ್ಥವಾಗಿ ಕಳೆದುಹೋಗುತ್ತವೆ.

ಹಲವು “ಷಯಗಳ ಬಗ್ಗೆ ನಾ”ಲ್ಲಿ ಯೋಚಿಸಲೇ ಬೇಕು. ಇತ್ತೀಚಿನ ಐಪಿಎಲ್ ಪಂದ್ಯಾವಳಿಯ ವೇಳೆ, ರಾಯಲ್ ಚ್ಯಾಲೆಂಜರ್ಸ್, ಬೆಂಗಳೂರು ತಂಡವನ್ನು ಹಲವರು ನಮ್ಮ ತಂಡ ಎಂದೇ ಸಂಬೋಧಿಸುತ್ತಿದ್ದರು. ನಮ್ಮ ಕರ್ನಾಟಕದ ಆಟಗಾರರನ್ನೆಲ್ಲಾ ಕೈ ಬಿಟ್ಟು, ಕೇವಲ ಬೇರೆ ರಾಜ್ಯ ಮತ್ತು “ದೇಶಿ ಆಟಗಾರರನ್ನು ಮಾತ್ರ ‘ಖರೀದಿಸಿ’, ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನ ಹೆಸರಿಟ್ಟುಕೊಂಡು, ಬೆಂಗಳೂರಿನಲ್ಲಿ ಆದ ಪಂದ್ಯಗಳಲ್ಲೆಲ್ಲಾ ಕ್ರಿಕೆಟ್ ಪ್ರೇ”ಗಳ ಹಣ ದೋಚಿದ್ದು ಬಿಟ್ಟರೆ, ಬೇರಾವ ರೀತಿಯಲ್ಲೂ ಈ ಬೆಂಗಳೂರು ತಂಡ ನಮ್ಮzಲ್ಲವಾಗಿತ್ತು!. ಆದರೂ ಅದನ್ನು ನಮ್ಮದು ಎಂದು, ನಮ್ಮದೇ ರಾಜ್ಯದ ಕ್ರಿಕೆಟಿಗರು ಬೇರೆ ತಂಡದಲ್ಲಿ ಆಡುತ್ತಿದ್ದರೂ, ನಾವು ಮಾತ್ರ ಮರುಳರಂತೆ ‘ಅಭಿಮಾನ’ದ ಪರಾಕಾಷ್ಠೆ ಮೆರೆದದ್ದು. “ಜಯ ಮಲ್ಯರಿಗಂತೂ ಖುಯಾಗಿರಬಹುದು.

ಇನ್ನು ಈ ಐಪಿಎಲ್ ಎಂಬ ಮಹಾ ಜೂಜು. ಈ ಜೂಜು “ಲಿಯನ್‌ಗಟ್ಟಲೆ ಹಣದ ಲೆಕ್ಕಾಚಾರ. ಅಧಿಕ್ರತವಾಗಿ ಜಾ”ರಾತು, ಆಟಗಾರರ ಮೇಲೆ ಸುರಿಯುವ ಹಣದ್ದೊಂದು ಲೆಕ್ಕವಾದರೆ, ಅನಧಿಕೃತವಾಗಿ ಬೆಟ್ಟಿಂಗ್, ಫಿಕ್ಸಿಂಗ್‌ಗಳ ಮೇಲೆ ಸುರಿದು ಹೋಗುವುದು ಮತ್ತೊಂದು ಲೆಕ್ಕಕ್ಕೆ ಸಿಗದ ಲೆಕ್ಕ. ಇದಿಷ್ಟೇ ಅಲ್ಲದೇ, ದೇಶದ ಉನ್ನತ ಸಿನಿಮಾ, ಕೈಗಾರಿಕೋದ್ಯ” ಹಾಗೂ ಇತರ ಶ್ರೀಮಂತರಿಂದ “ಡಿದು, ಸಾಮಾನ್ಯ ಪ್ರಜೆಯೂ ತನ್ನ ದುಡಿಮೆ, ಸಮಯವನ್ನು ಪೋಲು ಮಾಡಿಕೊಂಡು ಕಳೆಯುವುದು ಯಾರ ಲೆಕ್ಕಕ್ಕೂ ಸಿಗದಾದರೆ, ಇದಕ್ಕಾಗಿ ನಮ್ಮ ತೆರಿಗೆ ಹಣದ ಸರಕಾರಿ ವ್ಯವಸ್ಥೆಗಳ ವ್ಯಯ! ಇದೆಲ್ಲವನ್ನೂ ಒಂದೆಡೆ ಸೇರಿಸಿ ನೋಡಿದರೆ, ಈ ಕ್ರಿಕೆಟ್ ಎಂಬ ಕ್ರೀಡೆ ದೇಶಕ್ಕಂಟಿಕೊಂಡ ಶಾಪದಂತೆ ಕಾಣದಿದ್ದರೆ ನನ್ನಾಣೆ!

ಇದೆಲ್ಲವೂ ನಾವು ಹೊರನೋಟದಲ್ಲಿ ಗಮನಿಸಬಹುದಾದದ್ದು. ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಯ್ಲ್, ಐಪಿಎಲ್‌ನಲ್ಲಿ ಆಡಿದ ರೀತಿ ಬೆರಗು  ಹುಟ್ಟಿಸಿತ್ತು. ಈ ಪುಣ್ಯಾತ್ಮ ಫೈನಲ್ ನಲ್ಲಿ ಕೈ ಕೊಟ್ಟದ್ದು ಬೇರೆ ಮಾತು. ಯಾವುದೋ ಒಂದು ಸಣ್ಣ ಕಿರಿಕ್ ಮಾಡಿಕೊಂಡು, ವೆಸ್ಟ್ ಇಂಡೀಸ್ ಕ್ರಿಕೆಟ್ಟ ಮಂಡಳಿ ಇವನನ್ನು ಭಾರತದ “ರುದ್ದದ ಪಂದ್ಯಗಳಿಂದ ಹೊರಗಿಟ್ಟಿತು. ಒಮ್ಮೆ ಇಂತಾದ್ದೆ ಕಿರಿಕ್ ನಮ್ಮಲ್ಲೇನಾದರೂ ನಮ್ಮ ಆಟಗಾರ ಮಾಡಿದ್ದರೆ, ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ಅವನ ಅಭಿಮಾನಿ ದೇವರುಗಳು ದೊಡ್ಡ ಗಲಾಟೆಯನ್ನೇ ಎಬ್ಬಿಸುತ್ತಿದ್ದರೇನೋ. ಆ “ಷಯ ಬದಿಗಿರಲಿ. ನಮ್ಮ ಅಭಿಮಾನದ ಕ್ರಿಕೆಟಿಗರು ಐಪಿಎಲ್ ನಲ್ಲಿ ಆಡಲೆಂದೇ “ಂದಿನ “ಶ್ವಕಪ್‌ಗಿಂತಲೂ ಅಧಿಕ ತಯಾರಿಯಲ್ಲಿದ್ದರು. ತಮ್ಮ ದೈ”ಕ ಅನರ್ಹತೆಯ “ಷಯವನ್ನು ಮುಚ್ಚಿಟ್ಟು, ಐಪಿಎಲ್‌ನಲ್ಲಿ ಆಡಿದರು. ವೆಸ್ಟ್ ಇಂಡೀಸ್‌ಗೆ ಭಾರತ ತಂಡದ ಪ್ರವಾಸದ ವೇಳೆಗೆ, ಇವರಿಗೆಲ್ಲಾ ತಮ್ಮ   ಕುಟುಂಬ ನೆನಪಾತು. ಕೆಲವರಿಗೆ ತಮ್ಮ ದೈ”ಕ ಅಸಾಮಾರ್ಥ್ಯ ನೆನಪಾತು. ತಮ್ಮನ್ನು ತಂಡದಿಂದ ಹೊರಗಿಡುವಂತೆ ಕೋರಿಕೊಂಡರು. ನಮ್ಮ ಬಿಸಿಸಿಐ, ಹೆಚ್ಚೇನೂ ತಲೆಕೆಡಿಸಿಕೊಳ್ಳದೇ ಅವರ “ನಂತಿಯನ್ನು ಮನ್ನಿಸಿತು.

“ಂಡೀಸ್ ಪ್ರವಾಸ ಅಥವಾ ದೇಶದ ಪರವಾಗಿ ಆಡುವ ಯಾವುದೇ ಪಂದ್ಯಕ್ಕಿಂತಲೂ ಈ ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಸಿಗುವ ಹಣದ ಗಂಟು ದೊಡ್ಡದು. ಕಪಿಲ್ ದೇವ್ ಅಂತವರೇ ಹೇಳಿದರು, ಕ್ರಿಕೆಟಿಗರಿಗೆ ಆಡುವಾಗ ದೇಶ ಅಥವಾ ಹಣದ ಆಯ್ಕೆಗೆ ಸ್ವಾತಂತ್ರ್ಯ ನೀಡಬೇಕು ಎಂದು. ಅವರು ಮುಂದುವರಿಯುತ್ತಾ ಆದರೆ ತಾನು ದೇಶವನ್ನು ಆಯ್ಕೆ ಮಾಡಿಕೊಂಡಿದ್ದೆ ಎಂದರು. ಆದರೆ ಅವರಾಡುವ ಸಮಯದಲ್ಲಿಯೂ ಐಪಿಎಲ್ ಏನಾದರೂ ಇದ್ದಿದ್ದರೆ, ಅಥವಾ ಅವರ ನೇತ್ರತ್ವದ ಐಸಿಎಲ್ (ಇಂಡಿಯನ್ ಕ್ರಿಕೆಟ ಲೀಗ್-ಹೇಳ ಹೆಸರಿಲ್ಲದೇ ಮಲಗಿರುವ ಸಂಸ್ಥೆ) ಸಫಲವಾಗಿದ್ದರೆ ಇವರು ತಮ್ಮ ಉತ್ತರಾರ್ಧದ ಹೇಳಿಕೆ ಬದಲಿಸಿಕೊಳ್ಳುತ್ತಿದ್ದರೇನೋ!.

ಅಂದರೆ ಈ ಕ್ರಿಕೆಟಿಗರ ಆಟವನ್ನು ಆಭಿಮಾನದಿಂದ ನಮ್ಮೆಲ್ಲಾ ಹಣ, ಸಮಯವನ್ನು ಪೋಲು ಮಾಡಿ ನೋಡುವ ನಾವು. ಇವರು ಕೇವಲ ಹಣಕ್ಕಾಗಿಯೇ ಆಡುತ್ತಿದ್ದಾರೆ ಎಂಬುದನ್ನು ಮರೆಯುತ್ತಿದ್ದೇವೆ. ದೇಶ ದ್ರೋಹಕ್ಕೆ ನಮ್ಮ ಕಾನೂನಿನಲ್ಲಿ ಬಹುದೊಡ್ಡ ಶಿಕ್ಷೆಗಳು ಕಾದಿವೆ. ಮೊದಲು ದೇಶ ಎಂಬುದು ಯಾವುದೇ ರಾಷ್ಟ್ರದ ಸಂ”ಧಾನವೂ ಒಪ್ಪಿಕೊಂಡು ಅನುಸರಿಸುವ ಕಾನೂನು. ಅದಕ್ಕೆ ವ್ಯತ್ಯಯವಾದಲ್ಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ. ಆದರೆ ಇಂದು ಈ ಕ್ರಿಕೆಟಿಗರು ಕೇವಲ ಹಣದ “ಂದೆ ಹೋಗಿ, ದೇಶಕ್ಕೆ ಕೊನೆಯ ಸ್ಥಾನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರನ್ನು ನಾವೇಕೆ ಶಿಕ್ಷಿಸಬಾರದು?

ಬಹುಶ: ನನ್ನ ಈ ಮಾತು ಅನೇಕ ಅಭಿಮಾನಿಗಳಿಗೆ ಸಮ್ಮತವಾಗದು. ಆದರೆ ಇದು ನಾವು “ಡಿದ ದುರಂತ. ಭಾರತ ತಂಡ “ಶ್ವಕಪ್ ಗೆದ್ದಾಗಲೂ ನಾವೇ ಸಂಭ್ರ”ಸಿದ್ದೇವೆ. ಆಟಗಾರನಿಗೆ ಕೋಟಿಗಟ್ಟಲೇ ಹಣವನ್ನು ನಮ್ಮದೇ ಜೋಳಿಗೆಂದ ಸರಕಾರ, ಬಿಸಿಸಿಐ ಎಂಬ ಹೆಸರಿನಲ್ಲಿ ನೀಡಿದಾಗಲೂ ಸಂಭ್ರ”ಸಿದ್ದೇವೆ. ದೇಶಕ್ಕಾಗಿ ಆಡಿದ ಈ ಕ್ರಿಕೆಟಿಗರಿಗೆ ನಮ್ಮ ಉತ್ತೇಜನ ಇದು ಎಂದೇ ಭಾ”ಸೋಣ. ಆದರೆ ಈ ಕ್ರಿಕೆಟಿಗರು ಎಂದಾದರೂ ಯಾವುದಾದರೂ ಮ್ಯಾಚ್ ಸೋತಾಗ, ಅಭಿಮಾನಿಗಳು ನೋ”ನಿಂದ ಇವರನ್ನು ಠೀಕಿಸಿದರೆ, ಧೋನಿಯಾದಿಯಾಗಿ ಎಲ್ಲಾ ಕ್ರಿಕೆಟಿಗರೂ ಸಿಟ್ಟಿನಿಂದ ಹರಿ ಹಾಯ್ದುದ್ದನ್ನು ನಾವು ನೋಡಿದ್ದೇವೆ. ನಾವು ಅಭಿಮಾನದಿಂದ ಇವರು ಗೆದ್ದಾಗ ಹಾರ ತುರಾ ಹಾಕಿ, ಹಣದ ಮಳೆಯನ್ನೇ ಇವರ ಮೇಲೆ ಸುರಿದು, ಇವರಿಗೊಂದು ಐಷಾರಾ” ಬದುಕು ಕೊಟ್ಟಾಗ, ಇವರು ನಮ್ಮ ಹೆಗಲನ್ನೇ ಏರಿಕೊಂಡು ಸಂಭ್ರ”ಸಿದರೆ, ಇವರು ಸೋತಾಗ ನಾವು ಠೀಕಿಸುವುದರಲ್ಲಿ ಏನು ತಪ್ಪು ಎನಿಸದಿರದೇ?(ವಾಸ್ತವದಲ್ಲಿ ನನ್ನದು ಈ ಎರಡಕ್ಕೂ “ರೋಧ”ದೆ. ಇವರೂ ಎಲ್ಲಾ ಕ್ರೀಡಾಳುಗಳಂತೇ ಎಂದು ನಾವು ಪರಿಗಣಿಸಬೇಕಾದ್ದು ಇಂದಿನ ಅನಿವಾರ್ಯತೆ). ಇದಾವುದನ್ನೂ ನಾವು ಅಭಿಮಾನಿಗಳೂ ಗಮನಿಸುವುದೇ ಇಲ್ಲ. ನಮ್ಮದು ಒಂದು ರೀತಿಯ ಭೀಮ ಪ್ರೀತಿ. ನಮಗೆ ಮನಸ್ಸಿಗೆ ಹತ್ತಿರವಾಯ್ತು ಎಂದರೆ “ಂದೆ ಮುಂದೆ ನೋಡದೇ ಸ್ವೀಕರಿಸಿ, ಪ್ರೀತಿಸಿ ಬಿಡುತ್ತೇವೆ. ಈ ಕ್ರಿಕೆಟ್‌ನ್ನೂ ಹಾಗೇ. ನಮ್ಮ ಬದುಕಿನ ಒಂದು ಭಾಗವನ್ನಾಗಿಸಿಕೊಂಡು, ಅತಿರೇಕದ ಪ್ರೀತಿ ತೋರುತ್ತಿದ್ದೇವೆ. ಇದು ಇಂದು ಕ್ರಿಕೆಟಿಗರಿಗೆ ಹಣದ ಹುಚ್ಚು “ಡಿಸಿದೆ.

ಇನ್ನು ಈ ಕ್ರಿಕೆಟಿಗರಿಗೆ ದೇಶಕ್ಕಾಗಿ ಆಡಬೇಕಾದ ಪಂದ್ಯಗಳ ನೆನಪಾದಾಗ ಬಿಡು”ರದ ಕ್ರಿಕೆಟ್‌ನ ನೆನಪಾಗುತ್ತದೆ, ಐಪಿಎಲ್ ನಲ್ಲಿ ಇವರು ಆಡಿದ ಪಂದ್ಯಗಳ ಲೆಕ್ಕಾಚಾರ ಸ್ವತ: ಅವರಿಗೇ ಗೊತ್ತಿಲ್ಲ!. ಆದರೂ ಅದು ಬಿಡು”ರದ ಕ್ರಿಕೆಟ್ ಎಂದು ಅವರಿಗೆ ಅನಿಸುವುದೇ ಇಲ್ಲ. ಒಬ್ಬಿಬ್ಬ ಬಿಟ್ಟರೆ, ಎಲ್ಲರೂ ಸಂಪೂರ್ಣ ಸಾಮರ್ಥ್ಯದಿಂದ ಪೂರ್ಣ ಸರಣಿಯಲ್ಲಿ ಆಡಿದರು. ಅದೇ ದೇಶಕ್ಕಾಗಿ ಆಡುವಾಗ…? ಗಮನಿಸಿ, ಒಂದು ಪಂದ್ಯದಲ್ಲಿ ಉತ್ತಮವಾಗಿ ಆಡಿದರೆ ಮುಂದಿನ ಪಂದ್ಯಕ್ಕೆ ಅವನಿಗೆ ಎಡಕಾಲೋ, ಮೊಣಕಾಲೋ ಮತ್ತೊಂದೋ ನೋವು ಆರಂಭವಾಗಿ “ಶ್ರಾಂತಿ ಬೇಕಾಗುತ್ತದೆ!. ಆದರೆ ಐಪಿಎಲ್‌ನಲ್ಲಿ ಯಾವ ಆಟಗಾರನಿಗೂ ಯಾವ ನೋವೂ ಬರದು.ಇದರ ಅರ್ಥ ಕ್ರಿಕೆಟಿಗರಿಗೆ ದೇಶಕ್ಕಾಗಿ ಆಡುವುದು ಎಂದರೆ ಒಂದು ರೀತಿಯ ಸರಕಾರಿ ನೌಕರಿ ಎಂಬಂತಾಗಿದೆ. ನಮ್ಮ ಸರಕಾರಿ ಕಛೇರಿಗಳಂತೆ ಹೇಗೋ ದಿನ ಹೋದರೆ ಆತು ಮತ್ತು ಸರಕಾರಿ ಕೆಲಸ ದೇವರ ಕೆಲಸ ಎಂಬ ಉದಾಸೀನ. ದೇವರ ಕೆಲಸ ಅವನೇ ಮಾಡಿಕೊಳ್ಳಲಿ ಎಂಬ ಔದಾರ್ಯ. ನಮ್ಮ ಕರ್ಮ.

ಇದೆಲ್ಲದರ “ಂದೆ ಈ ಸಲ ಐಪಿಎಲ್‌ನ ಟಿ” “ಕ್ಷಕರ ಸಂಖ್ಯೆ ಗಣನೀಯವಾಗಿ ಇಳಿದಿದೆಯಂತೆ! ಆ ಮಟ್ಟಿಗೆ ಇದೊಂದು ಖುಯ ಸುದ್ದಿ!. ಜನ ಈಗಲಾದರೂ ಕ್ರಿಕೆಟಿಗಿಂತ ಬೇರೆ ಕೆಲಸಕ್ಕೆ ಪ್ರಾಮುಖ್ಯತೆ ಕೊಡಲಾರಂಭಿಸಿದ್ದಾರೆ ಎಂಬುದರ ಸೂಚನೆಯೇ ಇದು????

ಕೊನೆಗೊಂದೇ ಮಾತು. ಇಂದು ಕ್ರಿಕೆಟ್ ಕ್ರೀಡೆಗಿಂತ ಹೆಚ್ಚಾಗಿ ಬೇರಾವುದೋ ದಾರಿ “ಡಿದಿದೆ. ಇದಕ್ಕೆ ಕಡಿವಾಣ ಖಂಡಿತಕ್ಕೂ ಬೇಕಾಗಿದೆ. ಮೊದಲು ಕ್ರಿಕೆಟಿಗರ ಮನೋಸ್ಥಿತಿಗೆ ಕಡಿವಾಣ, ನಂತರ ಪಂದ್ಯಗಳಲ್ಲಿ ಇತಿ”ತಿ, ತತ್ ಕ್ಷಣಕ್ಕೆ ಆಗಬೇಕಾದ ಕೆಲಸಗಳು.

ಈ ಸಲದ ಐಪಿಎಲ್ ಮತ್ತು ನಮ್ಮ ಕ್ರಿಕೆಟಿಗರ ಧನದಾಹ ಕಂಡ ನಂತರ,  “ಐ ಹೇಟ್ ಕ್ರಿಕೆಟ್!!. ನೀವು…,,?”.

***********

ಚಿತ್ರಕೃಪೆ: picsquare.com

5 ಟಿಪ್ಪಣಿಗಳು Post a comment
 1. ವಿಜಯ್
  ಜೂನ್ 8 2011

  Yes, I too hate Cricket and also hate plenty of spelling mistakes in this writeup.

  ಉತ್ತರ
 2. ಜೂನ್ 8 2011

  even i hate cricket.now it not a sport just money wending machine.We will see cricket and increase the trp of the chanels.First we have to stop watching cricket and stop buying products which cricketers will sell then we can hope some changes.

  ಉತ್ತರ
 3. ಜೂನ್ 8 2011

  ಒ೦ದು ಮು೦ದುವರಿಯುವ ದೇಶದಲ್ಲಿ ಹಣದ ಹರಿವು ಬಹಳ ಅಗತ್ಯ, ಇಲ್ಲದಿದ್ದರೆ ಅದು ನಿ೦ತ ನೀರಾಗುತ್ತದೆ
  ಅದು ಇ೦ದು ಕ್ರಿಕೆಟ್ ನ ಮುಖಾ೦ತರ ನಡೆಯುತ್ತಿದೆ ಅ೦ದರೆ ಅದರಲ್ಲಿ ತಪ್ಪೇನಿಲ್ಲ. ಇದರಿ೦ದ ಸಾವಿರಾರು ಮ೦ದಿಗೆ ಉದ್ಯೊಗ ಸಿಗುತ್ತಾ ಇದೆ. ಆದರೆ ಬರಿ ಕ್ರಿಕೆಟ್ ಗೆ ಯಾಕೆ ಇಷ್ತೊ೦ದು ಪ್ರಾಮುಖ್ಯ ಅನ್ನುವುದು ಸರಿಯಾಗಿದೆ
  ಆದರೆ ಇಲ್ಲಿ ಜನರ ಅಬಿಪ್ರಾಯ ಮುಖ್ಯ ಎನ್ನುವುದು ಮರೆಯಬಾರದು. ಹಲವು ದೇಶಗಳಲ್ಲಿ ಹಲವು ಕ್ರಿಡೆಗಳು ಪ್ರಸಿದ್ದಿಯಾಗಿದೆ ಅದಕ್ಕೆ ಜನರ ಒಲವು ಕಾರಣವೆ ಹೊರತು ಬೇರೆನು ಅಲ್ಲ ಆದರೂ ಬಿಸಿಸಿಐ ನ೦ತಹ ಶ್ರಿಮ೦ತ ಸ್೦ಸ್ಥೆ ಬೇರೆ ಕ್ರಿಡೆಗಳಿಗೆ ಪ್ರೊತ್ಸಾಹ ಕೊಡಬೆಕು. ಅದನ್ನ ಬಿಟ್ಟು ಕ್ರಿಕೆಟ್ ನ ದ್ವೇಶಿಸುವುದರಿ೦ದ ಎನು ಉಪಯೋಗವಿಲ್ಲ
  (ಪ್ರತಿ ವರ್ಷವು ಐಪಿಲ್ ನಡೆಯುವುದು ನನಗು ಕೂಡ ಇಷ್ತವಿಲ್ಲ, ಎರಡು ವರ್ಷಗಳಿಗೊಮ್ಮೆ ನಡೆಯುವುದು ಸೂಕ್ತವೆನಿಸುತ್ತದೆ ನನ್ನ ಅಬಿಪ್ರಾಯದಲ್ಲಿ)

  ಉತ್ತರ
 4. ರವಿ
  ಜೂನ್ 8 2011

  ಐಪಿಎಲ್‌ನಲ್ಲಿ ಯಾವ ಆಟಗಾರನಿಗೂ ಯಾವ ನೋವೂ ಬರದು

  ಈ ಮಾತು ಸರಿಯಲ್ಲ. ಬಿಡುವಿಲ್ಲದ ಕ್ರಿಕೆಟ್ ನೋವು ತರಿಸಿಯೇ ತರುತ್ತದೆ. ಕೋಟಿಗಟ್ಟಲೆ ಸುರಿದಿರುವಾತ ಆತನಿಗೆ ವಿರಮಿಸಲು ಬಿಡಲಾರ. ಆಗ ಉಳಿದಿರುವುದೊಂದೇ ದೇಶಕ್ಕಾಗಿ ಆಡದಿರುವುದು. ಇದರ ಬಗ್ಗೆ ತಪ್ಪು ಒಪ್ಪು ಚರ್ಚೆ ಸರಿಯಲ್ಲ. ಐಪಿಎಲ್ ನಲ್ಲಿ ಆಟ ಗಳಿಸಿದಷ್ಟೂ ದೇಶ ತೆರಿಗೆ ಪಡೆಯುತ್ತದೆ. ಜನ ಸಾಮಾನ್ಯರಾಗಿ ನಾವೆಷ್ಟು ದೇಶಕ್ಕೆ ಕೊಡುತ್ತೆವೋ ಅದಕ್ಕಿಂತ ಹೆಚ್ಚು ಐಪಿಎಲ್ ಆಟಗಾರ ಕೊಡುತ್ತಾನೆ. ಸುಮ್ಮನೆ ಕ್ರಿಕೆಟ್ಟಿಗರು ಹೀಗೇ ಇರಬೇಕು ದೇಶಕ್ಕಾಗಿ ಮಾತ್ರ ಆಡಬೇಕು ಇನ್ನುವ ಮನಸ್ತಿತಿ ಸರಿಯಲ್ಲ ಅಂತ ನನ್ನ ಅನಿಸಿಕೆ. ಒಬ್ಬ ಆಡದಿದ್ದರೆ ಇನ್ನೊಬ್ಬನಿಗೆ ಅವಕಾಶ. ಕ್ರಿಕೆಟ್ ಪ್ರತಿಭೆಗಳಿಗೆನೂ ಕೊರತೆಯಿಲ್ಲ. ಅಭಿ ಅವರ ಮಾತನ್ನು ನಾನೂ ಒಪ್ಪುತ್ತೇನೆ.

  ಉತ್ತರ
 5. ನಮಸ್ತೆ,

  ಕ್ರಿಕೆಟ್‍ನಂತಹ ಆಟದ ಬದಲು ನಮ್ಮ ಯುವಜನತೆಗೆ ಬೇರೆ ಯಾವುದಾದರೂ ಆಟದ ಮೇಲೆ ಒಲವು ಇದ್ದಿದ್ದರೆ ಒಳ್ಳೆಯದು ಎಂದು ನನಗೆ ಹಲವಾರು ಬಾರಿ ಕಾಣುತ್ತದೆ. ಮುಖ್ಯ ಕಾರಣ – ಆಟದ ಒಟ್ಟು ಅವಧಿ, ತೀರಾ ಜಾಸ್ತಿ ಆಯಿತು. ಅದೆಷ್ಟು ಜನ ತಮ್ಮ ಜೀವನದ ಮುಖ್ಯ ಕಾಲಘಟ್ಟದಲ್ಲಿದ್ದರೂ ಜವಾಬ್ದಾರಿಗಳನ್ನು ಮರೆತು ಈ ಆಟ ನೋಡುವ ನೆಪದಲ್ಲಿ ಸುಮ್ಮನೆ ಕೂರುತ್ತಾರೋ, ಆ ದೇವರೇ ಬಲ್ಲ.

  ಅದಿರಲಿ, ನೀವು ಹೇಳಿದ ಅಂಶ – ದುಡ್ಡು/ದೇಶಪ್ರೇಮ ಇತ್ಯಾದಿ… ಆಟಗಾರರಿಗೆ ಅದು ಒಂದು ವೃತ್ತಿ, ಈ ದಾರಿಯಲ್ಲಿ ನಡೆಯುವವರಲ್ಲಿ ಒಂದು ಸಣ್ಣ ಶೇಕಡಾ ಮಂದಿ ಮಾತ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ಬಂದು ಸಂಪಾದಿಸುತ್ತಾರೆ; ಉಳಿದವರ ಕಥೆ ಏನು? ಹಾಗಿದ್ದಲ್ಲಿ ಇವರು ಎಂಥಹ ಒಂದು ರಿಸ್ಕ್ ತೆಗೆದುಕೊಳ್ಳುತ್ತಾರೆ ತಮ್ಮ ಜೀವನದಲ್ಲಿ ಎಂದು ಒಂದು ಕ್ಷಣ ಆಲೋಚನೆ ಮಾಡೋಣ. ಮಾತ್ರವಲ್ಲ, ಅವರಿಗೆ ೬೨ ವರ್ಷದ ತನಕ ಆಡಲು ಸಾಧ್ಯವೇ? ಒಂದು ಹತ್ತು ವರ್ಷ ಆಡಲು ಸಿಕ್ಕಿದರೆ ಹೆಚ್ಚು, ಎಷ್ಟೋ ಜನಕ್ಕೆ. ಜೀವನ ಪೂರ್ತಿಗೆ ಸಾಕಾಗುವಷ್ಟು ದುಡ್ಡು ಸಂಪಾದಿಸಬೇಡವೇ?

  ಇನ್ನಿತರ ಹಲವಾರು ವೃತ್ತಿಗಳಲ್ಲಿ ದೇಶಪ್ರೇಮದ ಪ್ರಶ್ನೆ ಬರುತ್ತದೆಯೇ? ಇಲ್ಲಿ ಮಾತ್ರ ಯಾಕೆ ಬರಬೇಕು? ದೇಶವನ್ನು ಪ್ರತಿನಿಧಿಸುವಾಗ ಹೌದು, ಆದರೆ ದೇಶವನ್ನು ಪ್ರತಿನಿಧಿಸಿಯೇ ಅವರು ಹಣ ಮಾಡಬೇಕು ಎಂಬ ನಿರ್ಬಂಧ ಹೇರುವುದು ಎಷ್ಟು ಸರಿ?

  ಕೇವಲ ಇಪ್ಪತ್ತು ಓವರ್ ಪಂದ್ಯಗಳನ್ನು ಆಡುವಾಗ ದೇಹಕ್ಕೆ ಶ್ರಮ ಕಡಿಮೆ ಆಗುವುದು ಸಹಜ, ಅದರಲ್ಲಿ ಚೆನ್ನಾಗಿ ಆಡಿದ ಮಾತ್ರಕ್ಕೆ ಒಬ್ಬ ಕ್ರಿಕೆಟಿಗ ಏಕದಿನ ಪಂದ್ಯ ಆಡಲು ಸಂಪೂರ್ಣ ಸಿದ್ಧ ಎಂದು ಅಂದುಕೊಳ್ಳುವುದು ತಪ್ಪು ಎಂದು ನನ್ನ ಅಭಿಪ್ರಾಯ. ಹಾಂ, ಈ ತರ್ಕವನ್ನು ದುರುಪಯೋಗ ಮಾಡಿಕೊಂಡು ತುಸು ಆಶಾಪೀಡಿತರಾದ ಆಟಗಾರರು ಇರಬಹುದು, ಆದರೆ ಸ್ವಲ್ಪಮಟ್ಟಿನ ಸ್ವಾರ್ಥ ಇದ್ದರೆ ಅದರಲ್ಲಿ ನನಗೆ ದೊಡ್ಡ ವಿಷಯ ಕಾಣುವುದಿಲ್ಲ, ಅದು ಎಲ್ಲರಿಗೂ ಇದ್ದದ್ದೇ!

  ಸರಿ, ಈಗ ಕ್ರೀಡೆಯನ್ನು ಇಷ್ಟಪಡುವ ಅಥವಾ ಪಡದಿರುವ ವಿಷಯಕ್ಕೆ ಬರೋಣ. ಇದರಲ್ಲಿ ಮುಖ್ಯವಾದ ಅಂಶ ಯಾವುದಿರಬೇಕು? ಆಟ ಚೆನ್ನಾಗಿದೆಯೇ ಇಲ್ಲವೇ ಎಂಬುದು. ದೇಶಪ್ರೇಮವೂ ಸೇರಿದಂತೆ ಉಳಿದೆಲ್ಲವೂ ಗೌಣ, ನಿಜವಾದ ಕ್ರೀಡಾಪ್ರೇಮಿಗಳಿಗೆ. ಕ್ರೀಡಾಪಟು ಅದ್ಭುತವಾದ ದೇಶಪ್ರೇಮವನ್ನು ತೋರಿಸಿದರೆ ಅಥವಾ ಮಾನವೀಯತೆಯನ್ನು ಮೆರೆದರೆ ಅದೆಲ್ಲಾ ಬೋನಸ್. ಅದುವೇ ಆಟವನ್ನು ಅಥವಾ ಆಟಗಾರನನ್ನು ಮೆಚ್ಚಲು ಮೂಲಭೂತವಾದ ಕಾರಣವಾದರೆ ಅಲ್ಲಿ ನಾವು ಕಾಣುವುದು ನಿಜವಾದ ಕ್ರೀಡಾಪ್ರೇಮ ಅಲ್ಲ ಎಂದು ನನ್ನ ಅಭಿಮತ. ಹಾಗಂತ ಕೆಟ್ಟದಾಗಿ ಅಥವಾ ಅನೈತಿಕವಾಗಿ ವರ್ತಿಸಿದರೂ ಕೂಡ ಅದನ್ನು ಬದಿಗಿಟ್ಟು ಬರೀ ಆಟವನ್ನು ನೋಡಿ ಇಷ್ಟಪಡಬೇಕು ಎಂದಲ್ಲ, ಆದರೆ ಮೇಲೆ ಹೇಳಿದಂತೆ ನನಗೆ ಇದರಲ್ಲಿ ಅಂಥಾ ದೊಡ್ಡ ಅನೈತಿಕತೆ ಏನೂ ಕಾಣುವುದಿಲ್ಲ.

  ಇದರರ್ಥ ಎಲ್ಲಾ ಬಹಳ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ, ಯಾರಿಗೂ ದುಡ್ಡಿನ ಮದ ಇಲ್ಲ, ಎಲ್ಲರೂ ನೈತಿಕ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದೆಲ್ಲಾ ನಾನು ಹೇಳುತ್ತಿಲ್ಲ. ಆದರೆ ನಿಜವಾದ ಕ್ರೀಡಾಪ್ರೇಮಿಗಳು ಈ ವಾದ-ವಿವಾದಗಳನ್ನೆಲ್ಲಾ ಮಂಡೆಗೆ ಹಾಕಿಕೊಳ್ಳುವುದೇ ಇಲ್ಲ. ಅವರಿಗೆ ಮುಖ್ಯವಾದುದು ಒಂದೇ… ಆಟ ಹೇಗಿತ್ತು? ವಿವಿಧ ಆಟಗಾರರು ಹೇಗೆ ಆಡಿದರು? ಇತ್ಯಾದಿ. ಉಳಿದವರಿಗೆ ನಿಜಕ್ಕೂ ನೋಡಿದರೆ ಇದು ಕೆಲಸಗಳ್ಳತನಕ್ಕೆ ಅಥವಾ ಉದಾಸೀನತೆಗೆ ಒಂದು ನೆಪ 🙂

  ಕೊನೆಯಲ್ಲಿ ನಾನು ಮತ್ತೊಮ್ಮೆ ಹೇಳುವುದೇನೆಂದರೆ ನಮ್ಮೀ ಭಾರತೀಯರ ಹುಚ್ಚು ಬೇರೆ ಆಟದ ಮೇಲಿದ್ದರೆ ಬಹುಷಃ ಒಳ್ಳೆಯದಿತ್ತು! ಪುಣ್ಯಕ್ಕೆ ನನಗೆ (ಪೊಳ್ಳು ಕ್ರೀಡಾಪ್ರ್‍ಏಮಿಯಾದುದರಿಂದಲೋ ಏನೋ) ಬರೀ ಹಣಕ್ಕಾಗಿ ಆಡುವ ಈ ಸರಣಿಯ ಬಗ್ಗೆ ಹೆಚ್ಚು ಒಲವು ಮೂಡಲೇ ಇಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ತೆಂಡುಲ್ಕರ್ ಎಷ್ಟು ಬಾರಿಸಿದ ಎಂದು ನೋಡುತ್ತಿದ್ದೆ, ಅಷ್ಟೆ. ಬಚಾವ್ – ನನ್ನ ಸಮಯ ಉಳಿಯಿತು 🙂

  ಇತಿ,
  ಕೃಷ್ಣ ಶಾಸ್ತ್ರಿ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments