ವಿಷಯದ ವಿವರಗಳಿಗೆ ದಾಟಿರಿ

ಜೂನ್ 9, 2011

2

ಗತಂ ಗತಂ

‍parupattedara ಮೂಲಕ

ಪವನ್ ಪಾರುಪತ್ತೇದಾರ್

ನಮಮ್ಮನಿಗೆ ಇದ್ದಕ್ಕಿದ್ದ ಹಾಗೆ ಅಕ್ಕನ ನೆನಪಾಗಿ ನನ್ನ ಕೇಳಿದ್ರು ಕರೆದು ಕೊಂಡು ಹೋಗು ಅಂತ, ನನಗು ಮಾಡಕ್ ಏನು ಕೆಲಸ ಇಲ್ಲದ ಕಾರಣ electronic ಸಿಟಿ ಕಡೆ ಪ್ರಯಾಣ ಮಾಡಿದೆ. ನಾನು ಅವರ ಮನೆಗೆ ಹೋಗಿ ಸುಮಾರು ೪ ವರ್ಷ ಗಳಾಗಿತ್ತು. ಹೋಗಿ ಅವರ ಮನೆ ಸೇರಿದ ತಕ್ಷಣ ಉಭಯ ಕುಶಲೋಪರಿಗಳನ್ನು ಮುಗಿಸಿ ಚೌ ಚೌ ಬಿಸ್ಕತ್ತು ತಿನ್ನುತ್ತ ಮಾತನಾಡುತ್ತಿರುವಾಗ ನಮ್ಮ ಅಣ್ಣ ನಮ್ಮ ತಾಯಿಗೆ ಹೇ ನಿನ್ನ 2nd year BA ದು ಒಂದು ಪುಸ್ತಕ ಹಾಗೆ ಇಟ್ಟಿದಿನಿ ಕಣೆ ಅಂದ ( ಹೆಚ್ಹು ಸಲಿಗೆ ಚಿಕ್ಕಮ್ಮ ಆದರು ಹೋಗೆ ಬಾರೆ ಎಂದೆ ಮಾತನಾಡುತ್ತಾರೆ )

ನಮಮ್ಮ ಯಾವುದೊ ಅದು ಅಂದ್ರು ,ಅದಕ್ಕೆ ನಮ್ಮಣ್ಣ untouchable ಅಂತ ನೆನಪಿದ್ಯ ಅಂದ ಅಮ್ಮ ಹೌದು ಹೌದು ಇನ್ನು ಇತ್ತಿದ್ಯ good ಅಂದ್ರು. ಅದಕ್ಕವ, ನಾನು ಮಾತ್ರ ಯಾರಿಗೂ ಪುಸ್ತಕ ಕೊಡೋದಿಲ್ಲಪ ಅದನ್ನ ಯಾರಿಗದ್ರು ಕೊಟ್ರೆ ವಾಪಾಸ್ ಬರೋದೆ ಕಷ್ಟ ಅದಕ್ಕೆ ಜೋಪಾನವಾಗಿ ಜೋಡಿಸ್ತೀನಿ ಸಮಯ ಸಿಕ್ಕಾಗ ಓದ್ತಾ ಇರ್ತೀನಿ ಅಂದ. ಅಷ್ಟರಲ್ಲೇ ಅಲ್ಲೇ ಕೂತಿದ್ದ ನಮ್ಮ ದೊಡ್ಡಪ್ಪ ಕಣಗಾಲ್ ಶಂಕರ್ ನಾರಾಯಣ್ ( ಕನ್ನಡ ಚಿತ್ರ ರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ಮೊದಲನೇ ತಮ್ಮ ) ಒಂದು ಮಾತು ಹೇಳಿದರು, ” ಪುಸ್ತಕಂ ವನಿತಂ ವಿತ್ತಂ ಪರ ಹಸ್ತೇ ಗತಂ ಗತಂ ” ಆಹಾ ಎಷ್ಟು ಅರ್ಥ ಗರ್ಭಿತವಾಗಿದೆ. ಈ ಮಾತು, ಪುಸ್ತಕ ಅಗಲಿ ಹೆಣ್ಣಾಗಲಿ ಹಣ ಅಗಲಿ ಇನ್ನೊಬ್ಬರ ಕೈಗೆ ಹೋದರೆ ಅದು ಹೋದಂತಯೇ ತಿಳಿಯಬೇಕು. ಅಕಸ್ಮಾತ್ ಮತ್ತೆ ಬಂದರು ಅದು ಸರಿಯಾಗಿ ಬರುವುದು ಬಹಳ ಕಷ್ಟ , ಸರಿಯಾದ ಮಾತು. ನನ್ನ ಜೆವನದಲ್ಲೇ ಅಂತ ಸಂಗತಿಗಳು ನಡೆದಿವೆ, ನಾನು ೫ನೆ ತರಗತಿ ಓದೋವಾಗ ನನಗೆ ಬಹುಮಾನವಾಗಿ ಬಂದಿದ್ದ ಒಂದು ಜನರಲ್ knowledge ಪುಸ್ತಕವನ್ನ ತೆಗೆದುಕೊಂಡಿದ್ದ ಮೇಸ್ಟ್ರು ನಾನು ಪ್ರೌಢ ಶಾಲೆ ಸೇರುವರೆಗೂ ಕೇಳಿದ್ರು ವಾಪಾಸ್ ಕೊಡಲಿಲ್ಲ.

ಕೇಳಿದಾಗೆಲ್ಲ ಎಲ್ಲೋ ಇಟ್ಟು ಬಿಟ್ಟಿದ್ದೀನಿ, ನನ್ನ ಮಗಳು ಸ್ಕೂಲ್ ಗೆ ತೊಗೊಂಡು ಹೋಗಿದ್ದಾಳೆ, ನಮ್ಮಕ್ಕನ್ ಮಗ ಓದ್ತಾ ಇದಾನೆ, ಇವತ್ ತೆಗೆದು ಇಟ್ಟಿದ್ದೆ TV ಹತ್ರ ಮರ್ತು ಬಂದಿದೀನಿ, ಹೀಗೆ ಕಾರಣ ಕೊಟ್ಟು ಕೊಟ್ಟು ಕಡೆಗೆ ನಂಗೆ ಬೇಜಾರಾಗಿ ಕೇಳೋದು ನಿಲ್ಲಿಸಿಬಿಟ್ಟೆ . ಇನ್ನು ಹಣದ ವಿಷಯಕ್ಕೆ ಬಂದರೆ PUC ಅಲ್ಲಿ snooker ಆಡುವ ಹುಚ್ಚು ಆಗ JP ನಗರದ ಒಂದು snooker parlour ಅಲ್ಲಿ ನಾವೆಲ್ಲ ಸ್ನೇಹಿತರು ಅಡುತಿದ್ದೆವು ಅಲ್ಲಿ ನನ್ನ ಕೆಲವು ಗೆಳೆಯರು account ಇಟ್ಟು ಅಡುತಿದ್ದರು. ಅ parlour ಯಜಮಾನ ಅಲ್ಲಿ ಸ್ವಲ್ಪ ಹವಾ ಇಟ್ಟಿರೋ ಮನುಷ್ಯ. PU ಫೈನಲ್ exam ಹಾಲ್ ಟಿಕೆಟ್ ತೆಗೆದು ಕೊಂಡು ಕುಷಿಯಾಗಿ ಒಂದೆರಡು ಬೋರ್ಡ್ ಆಡೋಣ ಅಂತ ಹೋದರೆ ಆ parlour owner ಎಲ್ಲಿ ಮಗ ಹಾಲ್ ಟಿಕೆಟ್ ತೋರ್ಸಿ ಅಂತ ಒಂದಿಬ್ಬರದು ತೊಗೊಂಡು ಬ್ಯಾಲೆನ್ಸ್ settle ಮಾಡಿ ನಂತರ ಹಾಲ್ ಟಿಕೆಟ್ ಕೊಡ್ತೀನಿ ಅಂತ ಸತಾಯಿಸಿದ. ನಮ್ಮ ಹುಡುಗ್ರು ಎಷ್ಟು ಕೆಳ್ಕೊಂದ್ರು ಕೊಡಲಿಲ್ಲ, ಕಡೆಗೆ ನನ್ನ ಬಳಿ ಉಳಿಸಿದ್ದು ಪಳಿಸಿದ್ದು ಸುಮಾರು ಒಂದು ಸಾವಿರ ಇಟ್ಟು ಅದನ್ನ ಕೊಟ್ಟು ಬೇಗ ವಾಪಾಸ್ ಕೊಡಬೇಕು ಮಗ ಅಂದೆ ಸುಮಾರು 7 ವರ್ಷ ಆಯಿತು ಇನ್ನು ಹಣ ವಾಪಾಸ್ ಬಂದಿಲ್ಲ.

ಈಗ ಕೆಳಕ್ಕೂ ಆಗಲ್ಲ. ಇನ್ನು ಹುಡುಗಿ ವಿಷಯ ನನಗೆ ಅನುಭವಕ್ಕೆ ಬಂದಿಲ್ಲ ನಮ್ಮ ಸ್ನೇಹಿತರು ಹೇಳ್ತಾ ಇರ್ತಾರೆ ಮಗ ಸುಮ್ನೆ ಫ್ರೆಂಡ್ ಮಾಡಿ ಕೊಟ್ಟೆ ಪಟಯಿಸ್ಕೊಂಡು ಬಿಟ್ಟ ಅಂತ , ಅದಕ್ಕೆ ದಯವಿಟ್ಟು ಗೆಳೆಯರೇ ಈ ಮೂರರ ಬಗ್ಗೆ ಜೋಪಾನ, ಹುಷಾರಾಗಿ handle ಮಾಡಿ ……

**************

ಚಿತ್ರಕೃಪೆ: freelancez.blogspot.com

2 ಟಿಪ್ಪಣಿಗಳು Post a comment
  1. ತುಂಬಾ ಚೆನ್ನಾಗಿದೆ ನಿಮ್ಮ ಬರಹದ ಶೈಲಿ. ಅದನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ವಿಚಾರಗಳು ಇನ್ನಷ್ಟು ಮೊನಚುಗೊಳ್ಳಲಿ ಎಂದು ಹಾರೈಸುತ್ತೇನೆ.

    ಉತ್ತರ
  2. prakash shetty
    ಜೂನ್ 10 2011

    never give up ! bahala bahala arthagarbhitha chitraondanna haakiddiri. thanks.
    Prakash Shetty, cartoonist

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments