ವಿಷಯದ ವಿವರಗಳಿಗೆ ದಾಟಿರಿ

ಜೂನ್ 9, 2011

2

ನೈಂಟಿ ಜತೆಗಿನ ನಂಟು!!!

‍ನಿಲುಮೆ ಮೂಲಕ

– ರಶ್ಮಿ.ಕಾಸರಗೋಡು

ನೈಂಟಿ! ಅದೊಂದು ಥರಾ ಕಿಕ್ ಕೊಡುವಂತದ್ದೇ. ಅರೇ..ನೀವು ಉದ್ದೇಶಿಸುತ್ತಿರುವ ‘ಬಾಟಲಿ’ ಬಗ್ಗೆ ನಾನು ಹೇಳುತ್ತಿಲ್ಲ. ನಾನು ಹೇಳೋಕೆ ಹೊರಟಿರುವುದು 90ರ ದಶಕದ ಟಿವಿ ಕಾರ್ಯಕ್ರಮಗಳ ಬಗ್ಗೆ. ದೂರದರ್ಶನ ಅದೊಂದೇ ಚಾನೆಲ್ ಸಾಕು…ಎಲ್ಲ ತಿಳಿಯೋಕೆ, ಕಲಿಯೋಕೆ. ಹಿಂದಿ ಅರ್ಥವಾಗುತ್ತಿಲ್ಲವಾದರೂ ಟಿವಿ ಮುಂದೆ ನಾವು ಹಾಜರು. ಆವಾಗನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ, ಆದರೂ ಒಂದು ಕಿಮೀ ನಡೆದು ಪಕ್ಕದ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆ. ಅದೂ ಮಹಾಭಾರತ ನೋಡಲು. ಮಹಾ….ಭಾರತ್ ಅಂತ ಅದರ ಹಾಡು ಶುರುವಾಗುವ ಹೊತ್ತಿಗೆ ನಾವು ಮೂವರು (ಜತೆಗೆ ಅಣ್ಣ, ಅಕ್ಕ) ಅಲ್ಲಿ ಹಾಜರು. ಅಲ್ಲಿ ಯುದ್ಧ ನಡೆಯುತ್ತಿದ್ದರೆ ಕಣ್ಣು ಮುಚ್ಚಿ ನೋಡುವುದು, ಮರಣ ಶಯ್ಯೆಯಲ್ಲಿರುವ ಬೀಷ್ಮನನ್ನು ನೋಡಿ ಅಳುವುದು ಹೀಗೆ ಸಾಗುತ್ತಿತ್ತು ನಮ್ಮ ‘ಮಹಾ’ ಭಾರತ. ಆಮೇಲೆ ನಮ್ಮ ಮನೆಗೂ ಬ್ಲಾಕ್ ಆ್ಯಂಡ್ ವೈಟ್ ಟಿವಿ ಬಂತು. ಟಿವಿ ಬಂದ ಮೊದಲ ದಿನ ಫುಲ್ ಚಾಲೂ. ಪ್ರೋಗ್ರಾಂ ಮುಗಿದು ಬಣ್ಣ ಬಣ್ಣದ ಸ್ಟೈಪ್ ಕಾಣಿಸಿಕೊಂಡರೂ ಅದನ್ನೇ ನೋಡುತ್ತಾ ಕುಳಿತಿರುತ್ತಿದ್ದೆವು. ರುಕಾವಟ್ ಕೆ ಲಿಯೆ ಕೇದ್ ಹೈ ಅಂದ್ರೆ ಏನೂ ಅಂತಾ ಗೊತ್ತಿಲ್ಲದಿದ್ದರೂ ಸ್ವಲ್ಪ ಸಮಯದ ನಂತರ ಪ್ರೋಗ್ರಾಂ ಬರುತ್ತೆ ಅಂತಾ ಗೊತ್ತಿತ್ತು. “ಟಿವಿ ಬಂತಾ…ಇನ್ನು ಮಕ್ಕಳು ಓದಲ್ಲ ಬಿಡಿ” ಅಂತಾ ಅಮ್ಮನಿಗೆ ಚಾಡಿ ಹೇಳುವ ನೆರೆಯವರು ಬೇರೆ. ಅಂತೂ ಟಿವಿಯ ಮೂಲಕ ಹಿಂದಿ ಬೇಗನೆ ಕಲಿತುಕೊಳ್ಳುವಂತಾಯಿತು.

ಭಾನುವಾರ ಬಂತೆಂದರೆ ಊಟ ತಿಂಡಿ ಎಲ್ಲವೂ ಟಿವಿ ಮುಂದೆಯೇ. ರಂಗೋಲಿ ಆರಂಭವಾಗುವ ಮುನ್ನವೇ ಅಂಗಳ ಗುಡಿಸಿ, ಪಾತ್ರ ತೊಳೆದು, ಸ್ನಾನ ಮಾಡಿ ಕುಳಿತುಕೊಳ್ಳುತ್ತಿದ್ದೆ. ‘ಚಾರ್ಲಿ ಚಾಪ್ಲಿನ್’ ಮುಗಿದ ನಂತರ ಬ್ರೇಕ್್ನ ಸಮಯದಲ್ಲಿ ಬೆಳಗ್ಗಿನ ತಿಂಡಿಯಾಗುತ್ತಿತ್ತು. ಇನ್ನು ಜಂಗಲ್ ಬುಕ್ ನ ಮೋಗ್ಲಿಯನ್ನು ಹೇಗೆ ತಾನೇ ಮರೆಯಲು ಸಾಧ್ಯ? ಟಾಮ್ ಆ್ಯಂಡ್ ಜೆರ್ರಿ, ಪೋಟಲಿ ಬಾಬಾ, ಆಲೀಸ್ ಇನ್ ವಂಡರ್ ಲ್ಯಾಂಡ್, ಡಕ್ ಟೇಲ್ಸ್ , ಸಿಂದಾಬಾದ್ ದ ಸೈಲರ್ ಮೊದಲಾದ ಮಕ್ಕಳ ಧಾರವಾಹಿಗಳು, 9 ಗಂಟೆಯ ವೇಳೆಗೆ ‘ಚಂದ್ರಕಾಂತ ಕಿ ಕಹಾನಿ ಯೇ ಮಾನಾ ಹೆ ಪುರಾನಿ…’ ಎಂಬ ಟೈಟಲ್ ಸಾಂಗ್್ನೊಂದಿಗೆ ಆರಂಭವಾಗುವ ಚಂದ್ರಕಾಂತ ಸೀರಿಯಲ್ ನಲ್ಲಿ ಯಕ್ಕ್…ಎಂದು ಹೇಳುವ ವಿಲನ್ ಕ್ರೂರ್ ಸಿಂಗ್, ಶಿವ್್ದತ್ ಕೋ ಕೋಯಿ ಶಕ್ ನಹೀ ಎನ್ನುವ ಪಂಕಜ್ ಧೀರ್ ನ ಅಭಿನಯ ಇನ್ನೂ ಮನಸ್ಸಿನಿಂದ ಮಾಸಿಲ್ಲ. ಅದೇ ವೇಳೆ ಚಾಣಕ್ಯ, ಶ್ರೀಕೃಷ್ಣ ಮೊದಲಾದ ಪುರಾಣ ಕಥೆಗಳ ಜತೆಗೆ ಚುಟ್ಟಿ ಚುಟ್ಟಿ, ತರಂಗ್, ಸ್ಕೂಲ್ ಡೇಸ್ ಕೂಡಾ ಪ್ರಿಯವಾದುದೇ. ನನ್ನ ನೆನಪಿನ ಪ್ರಕಾರ 11 ಗಂಟೆಗೆ ‘ದ ನ್ಯಾಷನಲ್ ಪ್ರೋಗ್ರಾಂ ಆಫ್ ಡ್ಯಾನ್ಸ್ ‘ಎಂಬ ಕಾರ್ಯಕ್ರಮವೂ ಪ್ರಸಾರವಾಗುತ್ತಿತ್ತು. ಹನ್ನೆರಡು ಗಂಟೆಯ ಹೊತ್ತಿಗೆ ‘ಶಕ್ತಿಮಾನ್ ‘ ಪ್ರತ್ಯಕ್ಷವಾಗುತ್ತಿದ್ದ. ಮಧ್ಯಾಹ್ನ ಮೂಕರಿಗಾಗಿರುವ ವಾರ್ತೆ, ಸಂಸ್ಕೃತ ವಾರ್ತೆ, ಹಿಂದಿ, ಇಂಗ್ಲಿಷ್ ಎಲ್ಲ ವಾರ್ತೆಯನ್ನೂ ನಾನು ನೋಡುತ್ತಿದ್ದೆ.

ಕೃಷಿ ದರ್ಶನ್, ನಾಪತ್ತೆಯಾದ ವ್ಯಕ್ತಿಗಳ ಬಗ್ಗೆ ಮಾಹಿತಿ, ಟಿವಿ ಕಾರ್ಯಕ್ರಮಕ್ಕೆ ಬಂದ ಪತ್ರಗಳನ್ನು ಓದುವುದು, ಪ್ರಾಯೋಜಿತ ಕಾರ್ಯಕ್ರಮ ಏನೇ ಬರಲಿ ಟಿವಿ ಮುಂದೆಯಿಂದ ಕದಲುತ್ತಿರಲಿಲ್ಲ ನಾನು.

ಇನ್ನು ಸೀರಿಯಲ್್ಗಳ ಸರದಿ. ವಿಕ್ರಮ್ ಬೇತಾಳ್ ಕಥೆಗಳನ್ನು ಚಂದಮಾಮದಲ್ಲಿ ಓದಿದ್ದರೂ, ಟಿವಿ ಮೂಲಕ ಬೇತಾಳ ಹೇಗಿರುತ್ತಾನೆ? ಎಂಬುದು ಗೊತ್ತಾಯ್ತು. ಅಪರಾಹ್ನ ಸೀರಿಯಲ್ ಗಳದ್ದೇ ಕಾರುಬಾರು. ಹಮ್್ಲೋಗ್ ಎಂಬ ಸೋಪ್ ಅದೆಷ್ಟು ಕಂತು ಓಡಿತ್ತೋ ನೆನಪಿಲ್ಲ. ಆದರೆ ಅಪರಾಜಿತ, ಔರತ್, ಸಮುಂದರ್, ಯುಗ್, ಜುನೂನ್, ಶಾಂತಿ, ಸ್ವಾಭಿಮಾನ್ ಮೊದಲಾದ ಸೀರಿಯಲ್ ಗಳು ಒಂದರ ನಂತರ ಒಂದರಂತೆ ಪ್ರಸಾರವಾಗುತ್ತಿತ್ತು. ಸಂಜೆಯ ವೇಳೆಗೆ ಬುಧವಾರ ಚಿತ್ರಹಾರ್, ಶುಕ್ರವಾರ ಚಿತ್ರಗೀತ್ ಯಾವುದೂ ಮಿಸ್ ಮಾಡಲ್ಲ.

ರಾತ್ರಿ ವೇಳೆ ಸರಳಾ ಮಹೇಶ್ವರಿ, ಶಮ್ಮೀ ನಾರಂಗ್ ಓದುವ ಹಿಂದೀ ವಾರ್ತೆ, ರಿನ್ನಿ ಕಣ್ಣನ್್ನ ಇಂಗ್ಲೀಷ್ ವಾರ್ತೆ ಅದೂ ಇಷ್ಟಾನೇ. ಇದಾದ ನಂತರ ರಾತ್ರಿ ವೇಳೆ ಸೀರಿಯಲ್್ಗಳ ಸುರಿಮಳೆ.. ಉಡಾನ್, ಅಲೀಫ್ ಲೈಲಾ, ಹಮ್್ರಾಹಿ, ಕಕ್ಕಾಜಿ ಕಹಿಯೆ, ಸಂಸಾರ್, ಅಮರಾವತಿ ಕಿ ಕಹಾನಿಯಾ, ಆನಂದಿ ಗೋಪಾಲ್, ಫುಲ್್ವಂತೀ, ರಿಪೋರ್ಟರ್,ಕಶೀಶ್, ಕೋಶಿಶ್, ಉಪಾಸನಾ, ವಿಲಾಯ್ತಿ ಬಾಬು, ಮುಂಗೇರಿ ಕೆ ಭಾಯಿ ನೌರಂಗಿ, ಪರಖ್,ಓಂ ನಮಃ ಶಿವಾಯ್, ಜೈ ಹನುಮಾನ್, ದ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್, ಕಯರ್, ಓಶಿಯಾನಾ ಮೊದಲಾದ ಸೀರಿಯಲ್್ಗಳು. ಅದರಲ್ಲಿಯೂ ಬ್ಯೋಮ್ ಕೇಶ್ ಭಕ್ಷಿ, ಸುರಾಗ್, ತೆಹೆತಿಕಾತ್ ಮೊದಲಾದ ಪತ್ತೆದಾರಿ ಧಾರವಾಹಿಗಳು ಇನ್ನೂ ಥ್ರಿಲ್ಲಿಂಗ್ ಆಗಿರುತ್ತಿತ್ತು. ಇದೆಲ್ಲದರ ಜತೆಗೆ ಭಾರತ್ ಏಕ್ ಕೋಜ್, ತಾನಾ ಬಾನಾ, ಸುರಭಿ, ದ ವರ್ಲ್ಡ್ ದಿಸ್ ವೀಕ್ ಮೊದಲಾದವುಗಳು ಜ್ಞಾನ ವರ್ಧನೆಯ ಕ್ಯಾಪ್ಸೂಲ್ ಗಳಂತಿದ್ದವು.
ವರ್ಲ್ಡ್ ಆಫ್ ಸ್ಪೋಟ್ಸ್ ಮೂಲಕ ಕ್ರೀಡೆ, ಆವಾಗಿನ ಕ್ರಿಕೆಟ್ ಟೆಸ್ಟ್ ಮ್ಯಾಚ್ ಗಳು…ಬಾಕ್ಸಿಂಗ್ ಗುದ್ದಾಟ ನೋಡುತ್ತಿದ್ದರೆ ಮೈ ನಡುಗುತ್ತಿತ್ತು!!

ಮೇರಿ ಆವಾಜ್ ಸುನೋ ಎಂಬ ರಿಯಾಲಿಟಿ ಶೋ, ಏಕ್ ಸೆ ಬಡ್ಕರ್ ಏಕ್ ಎಂಬ ಕಾಮಿಡಿ ಸೀರಿಯಲ್ ನಡುವೆ ಬರುವ ಟಾಪ್ 10 ಹಿಂದಿ ಚಿತ್ರಗೀತೆಗಳು, ಸುನೆಹರೇ ಪಲ್, ಪಾರ್ವತಿ ಖಾನ್ ನಡೆಸಿಕೊಡುತ್ತಿದ್ದ ಹಾಟ್ ಸ್ಪಾಟ್ ಮೊದಲಾದವುಗಳು ಬಾಲಿವುಡ್ ನ ಬಗ್ಗೆ ಹೆಚ್ಚು ಒಲವನ್ನುಂಟು ಮಾಡುವಂತಿತ್ತು.

ಮೂವಿಗಳ ಬಗ್ಗೆ ಹೇಳುವುದೇ ಬೇಡ. ಅಮಿತಾಬ್ ಬಚ್ಚನ್, ಜಿತೇಂದ್ರ, ಮಿಥುನ್ ಚಕ್ರವರ್ತಿ, ರಿಷಿ ಕಪೂರ್, ಅನಿಲ್ ಕಪೂರ್, ಸಲ್ಮಾನ್, ಜಯಾ ಬಚ್ಚನ್, ಮೀನಾಕ್ಷಿ ಶೇಷಾದ್ರಿ, ಶ್ರೀದೇವಿ, ಮಾಧುರಿ ಹೀಗೆ ಭಾಷೆ ಅರ್ಥವಾಗದಿದ್ದರೂ ಅವರ ನಟನೆಗೆ ಮನಸ್ಸು ಮಾರು ಹೋಗಿತ್ತು. ಹಿಂದಿ ಚಿತ್ರಗಳನ್ನು ನೋಡುವಾಗ ನನ್ನ ಅಪ್ಪ ಆ ಚಿತ್ರವನ್ನು ಎಲ್ಲಿ ನೋಡಿದ್ದರು? ನೋಡಬೇಕಾದರೆ ಏನೆಲ್ಲಾ ಸಾಹಸ ಮಾಡುತ್ತಿದ್ದರು ಎಂದೆಲ್ಲಾ ವಿವರಿಸುತ್ತಿದ್ದರು. ಭಾನುವಾರ ಮಧ್ಯಾಹ್ನ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಸಾರವಾಗುತ್ತಿದ್ದು, ಕನ್ನಡ, ಮಲಯಾಳಂ ಚಿತ್ರಗಳು ಬಂದರಂತೂ ಹಬ್ಬವೇ. ಕನ್ನಡ ಮೂವಿಯಲ್ಲಿನ ನಟರ ಬಗ್ಗೆ ಅಮ್ಮ ಹೇಳುತ್ತಿದ್ದರೆ, ಮಲಯಾಳಂ ನಟರ ಬಗ್ಗೆ ಅಪ್ಪ ವಿವರಿಸುತ್ತಿದ್ದರು. 😉 ಯಾವತ್ತೋ ಒಂದ್ಸಾರಿ ತುಳು ಚಿತ್ರ ‘ಬಂಗಾರ್ ಪಟ್ಲೇರ್ ‘ ನೋಡಿದ ನೆನಪು.

ಇಷ್ಟೆಲ್ಲಾ ಹೇಳಿದ ಮೇಲೆ ಕಮರ್ಷಿಯಲ್ ಬ್ರೇಕ್ ಇಲ್ಲದಿದ್ದರೆ ಹೇಗೆ? ಐ ಲವ್ ಯೂ ರಸ್ನಾ…ಐ ಆ್ಯಮ್ ಎ ಕಾಂಪ್ಲಾನ್ ಬಾಯ್, ಲಿಜ್ಜತ್ ಪಾಪ್ಪಡ್, ಘಡೀ ಡಿಟರ್ಜಂಟ್, ಎಂಡಿಚ್…ಎಂಡಿಚ್ ಎನ್ನುವ ಎಂಡಿಚ್ ಮಸಾಲೆ…ಸಿರ್ಫ್ ಏಕ್ ಸಾರಿಡಾನ್…ಸರ್ದದ್ ಸೆ ಆರಾಮ್ (ಸಾರಿಡಾನ್), ಉಹ್..ಆ..ಔಚ್ (ಐಯೋಡೆಕ್ಸ್), ಓಯೇ..ಓಯೇ ಕುಜಲೀ ಕರ್್ನೇ ವಾಲೇ (ಬೀಟೆಕ್ಸ್), ಗುಂಡು ಹಾರಿಸಿ ‘ಗೋಲಿಯೋಂಕಾ ಬಿ ಅಸರ್ ನಹೀ’ ಎನ್ನುವಾಗ ಸಾಧು ‘ಇಸ್್ಕಾ ಇಲಾಜ್ ಕಾಯಮ್ ಚೂರ್ಣ್ ‘ಅಂತಾನೆ..
“ಯೇ ಜಮೀ..ಯೇ ಆಸ್ ಮಾನ್…ಹಮಾರಾ ಕಲ್, ಹಮಾರಾ ಆಜ್…ಬುಲಂದ್ ಭಾರತ್ ಕೀ ಬುಲಂದ್ ತಸ್ವೀರ್..” (ಹಮಾರಾ ಬಜಾಜ್), ಯೇ ರಿಶ್ತೇ ಯೇ ನಾಥೆ…ಕಿತ್ ನೇ ಅಪ್ ನೇ ಅಪ್ ನೇ (ಎಸ್ ಕುಮಾರ್ಸ್), ಜಲೇಬಿ…. ಎಂದು ಕಣ್ಣರಳಿಸುವ ಬಾಲಕ (ಧಾರಾ ಎಣ್ಣೆ), ಸಂತೂರ್ ಸಂತೂರ್…, ಜಬ್ ಘರ್ ಕಿ ರೋನಕ್ ಬಡಾನಿ ಹೋ…(ಮ್ಯಾರೋಲಾಕ್ ಪೈಂಟ್ಸ್), ಡೂಂಡ್ ತೇ ರೆಹಜಾವೋಗೆ (ಸರ್ಫ್), ಸಬ್ ಕಿ ಪಸಂದ್ ‘ನಿರ್ಮಾ’, ಚುಪ್ಕೆ ಚುಪ್ಕೆ ಬೈಟಿ ಹೋ ಜೂರ್ ಕೋಯಿ ಬಾತ್ ಹೈ (ಕೇರ್ ಫ್ರೀ ), ಯೇ ಹೇ ಹಮಾರಾ ಸುರಕ್ಷಾ ಚಕ್ಕರ್ (ಕೋಲ್ಗೇಟ್), ಡಾಬರ್ ಲಾಲ್ ದಂತ್ ಮಂಜನ್, ವಿಕೋ ಟರ್ಮರಿಕ್ ಹೀಗೆ ನೆನಪಿನಲ್ಲಿ ಉಳಿಯುವ ಅದೆಷ್ಟು ಜಾಹೀರಾತುಗಳು!!

ಬ್ರೇಕ್ ನ ನಂತರ ಕಾರ್ಯಕ್ರಮ ಮುಂದುವರಿಯುತ್ತದೆ…

‘ಬಜೇ ಸರ್ ಗಂ ಹರ್ ತರಫ್ ಸೇ ಗೂಂಜ್ ಬನ್ ಕರ್ ದೇಶ್ ರಾಗ್’ …ಮೇಣದ ದೀಪಗಳನ್ನು ಉರಿಸುವ ಮಕ್ಕಳು…’ಸುನ್ ಸುನ್ ಸುನ್ ಮೇರೆ ಮುನ್ನೆ ಸುನ್’ ಎಂಬ ಹಾಡಿನಲ್ಲಿ ಬರುವ ಎಲ್ಲಾ ಪ್ರಮುಖ ನಟರು (ನಮ್ಮ ಮಮ್ಮುಟ್ಟಿಯೂ ಇರ್ತಿದ್ರು)…’ಭಾರತ್ ಭಾರತ್ ಹಮ್ ಇಸ್ ಕಿ ಸಂತಾನ್ ‘…, ‘ಹಮ್ ಹೋಂಗೆ ಕಾಮ್ ಯಾಬ್’, ‘ವಿಜಯಿ ವಿಶ್ವ ತಿರಂಗಾ ಪ್ಯಾರಾ’ ಮೊದಲಾದ ಭಾವೈಕ್ಯತೆಯ ಗೀತೆಗಳು.. ‘ಮಿಲೇ ಸುರ್ ಮೇರಾ ತುಮ್ಹಾರಾ ….’ ಈ ಹಾಡಿನ ಮೋಡಿಗೊಳಗಾಗದ ಜನರಿದ್ದಾರೆಯೇ?

ಡಿಡಿ ನ್ಯಾಷನಲ್ ನಲ್ಲಿ ಯಾವಾಗ ಡಿಡಿ ಮಲಯಾಳಂ ಕೂಡಾ ಲಭಿಸಿತೋ ಟಿವಿ ನೋಡುತ್ತಾ ಮಲಯಾಳಂ ಓದೋಕೆ ಕಲಿಯುವುದರ ಜತೆ ಶುದ್ಧ ಮಲಯಾಳಂನಲ್ಲಿ ಮಾತನಾಡಲು ಕೂಡಾ ಕಲಿತು ಬಿಟ್ಟೆ.
ಅಬ್ಬಾ ದೂರದರ್ಶನದ ಬಗ್ಗೆ ಹೇಳೋಕೆ ಹೋದರೆ ಅದೂ ಮೆಗಾ ಸೀರಿಯಲ್ ಆಗ್ಬಹುದು. ಸದ್ಯ ಇಷ್ಟು ಸಾಕು.

ಚಿತ್ರ ಕೃಪೆ : ವಿಕಿಪೀಡಿಯ

2 ಟಿಪ್ಪಣಿಗಳು Post a comment
 1. ಜೂನ್ 9 2011

  ಸುರಾಗ್ ಓಂ ನಮಃ ಶಿವಾಯ್, ಜೈ ಹನುಮಾನ್ shaktiman ivella mareyalagada serial galu, jotege javed jaffri nadesikodutidda truck dina din muntada entertainment programs ivattina dharavahigaliginta esto super

  ಉತ್ತರ
 2. ಜೂನ್ 13 2011

  ನಿಮ್ಮ ಪಟ್ಟಿಯಿಂದ ಬಿಟ್ಟು ಹೋದ ಇನ್ನು ಕೆಲವು ಕಾರ್ಯಕ್ರಮ ನಾ ಸೇರಿಸಲು ಇಚ್ಚಿಸುತ್ತೇನೆ….ಭಾನುವಾರ ೮ ರ ಸಬೀನ.. ೧೦ ಘಂಟೆಯ ರಾಜಕಹಾನಿ ,ಕೆಲದಿನ ಪ್ರಸಾರವಾದ ಭೈರಪ್ಪನವರ ಕಾದಂಬರಿ ದಾಟು…ಕಾದಂಬರಿಯ ಉಲ್ಲಂಘನ್ ಧಾರಾವಾಹಿ..ಸೋಮವಾರ ಇದ್ದ ಸುರಾಗ್,ಮಂಗಳವಾರ ತೆಹೆಕಿಕಾತ್ ,,,,,ಬುದುವಾರ್ ದಿಲ್ ಅಪನ ಪ್ರೀತ್ ಪರಾಯಿ….ಅನುಪಮ್ ಖೇರ್ ನಡೆಸಿ ಕೊಡುತ್ತಿದ್ದ ಏರಿಯಲ್ ಮಿಸ್ಟರ್ ಗೋಲ್ಡ್ ,ಮಧ್ಯನ್ನ ಪ್ರಸಾರ ಗೋಳ್ಳುತ್ತಿದ್ದ ಇನ್ತಜಾರ್ ಔರ್ ಸಹಿ..
  ಸ್ವಾಭಿಮಾನ್..ದೀವಾರ್ ….ಕನ್ನಡದ.ಜನನಿ ,ಮನೆತನ,ಸಾಧನೆ.ಸಂಜೆಯ ಡಿಸ್ಕೋ ರಾಗ ಅಡಿತಲ,ಮಲ್ಲಿಕಾ ಪರಿಣಯ,ಕಲಿಕರ್ಣ,ಗೂಡಿನಿಂದ ಬಾನಿಗೆ..,,ಬಾಳು ಬೆಳಗಿತು,ದ್ವಿತೀಯ ,ಕಾಲೇಜ್ ತರಂಗ,,ನಾವೆಲ್ಲರೂ ಒಂದೇ,,,ಜೀವನ ಚಕ್ರ,ಎಳೆಯ ಮನಸಿನ ಎಳೆಗಳು,..ಸೀತಾಪತಿ ಸಿಟಿ ಲೈಫ್ ,ಸಂಸಾರದಲ್ಲಿ ಸರಿಗಮ..,ಇನ್ನು…ಇವೆ…..ಆ ದಿನಗಳನ್ನು ನೆನಪಿಸಿದ್ದಕ್ಕೆ ಧನ್ಯವಾದ…ಖುಷಿ ಇಟ್ಟು ಆಗ..ಒಂದೇ ವಾಹಿನಿ..ಅವೆ ಒಳ್ಳೆ ಕಾರ್ಯಕ್ರಮಗಳು…ಚನ್ನಾಗಿತ್ತು…ಅಲ್ವಾ???ನೀವು ಟೀವಿ ನೋಡ್ತಾ ಮಲೆಯಾಳಿ ಕಲಿತಿರಿ ನಾನು ಮರಾಠಿ ಮತ್ತು ಹಿಂದಿ ಕಲಿತೆ…ಆ ದಿನ ಗಳಲ್ಲಿ ಟೀವಿ ಎಂಬುದು ಮೂರ್ಕರ ಪೆಟ್ಟಿಗೆ ಆಗಿರಲಿಲ್ಲ..ಇನ್ನೂ…..

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments