ವಿಷಯದ ವಿವರಗಳಿಗೆ ದಾಟಿರಿ

ಜೂನ್ 9, 2011

26

ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಲಿ

‍ನಿಲುಮೆ ಮೂಲಕ

– ಶ್ರೀ ಹರ್ಷ ಸಾಲಿಮಠ

ಇದೊಂದು ಮಾತನ್ನು ಅತ್ಯಂತ ತೀವ್ರ ಸಂಕಟದಿಂದ ಹೇಳುತ್ತಿದ್ದೇನೆ. ಕಾಲಿಗೆ ಗ್ಯಾಂಗ್ರಿನ್ ಆದಾಗ ಕಾಲನ್ನು ಕತ್ತರಿಸುತ್ತಾರಲ್ಲ ಹಾಗೆ.  ನೋವಾಗುತ್ತದೆ ಆದರೆ ಬದುಕಲು ಅದು ಅನಿವಾರ್ಯ. ಕನ್ನಡ/ಕರುನಾಡು ಉಳಿಯಬೇಕೆಂದರೆ ಈ ಕೆಲಸ ಆಗಬೇಕಾಗಿದೆ.

ಬೆಂಗಳೂರಲ್ಲಿ ಕನ್ನಡ ಸಿಗುವುದಿಲ್ಲ.ಕನ್ನಡಿಗರು ಕಾಣೆಯಾಗುತ್ತಿದ್ದಾರೆ ಎಂಬ ಮಾತನ್ನು ಅತಿಶಯೋಕ್ತಿ ಎಂದುಕೊಂಡಿದ್ದೆ.ಇತ್ತೀಚಿನ ನನ್ನ ಕೆಲ ಅನುಭವಗಳು ಇದು ಸತ್ಯವೆಂದು ಬಿಂಬಿಸಿವೆ. ನಾನು ಎರಡು ಕಂಪನಿಗಳಿಗೆ ಇಂಟರ್‍ ವ್ಯೂ ಪ್ಯಾನೆಲಿಸ್ಟ್ ಆಗಿದ್ದೇನೆ. ಎರಡು ಕಾಲೇಜುಗಳಿಗೆ ಅಕಡೆಮಿಕ್ ಕನ್ಸಲ್ಟಂಟ್ ಆಗಿದ್ದೇನೆ. ನನ್ನ ಅನುಭವ ಮತ್ತು ವಿಶ್ಲೇಷಣೆಯಿಂದ ಇದೊಂದು ಅಭಿಪ್ರಾಯವನ್ನು ಮುಂದಿಡುತ್ತಿದ್ದೇನೆ.

ಇಲ್ಲಿಯವರೆಗೆ ಕಂಪನಿಗಳಿಗಾಗಿ ಸುಮಾರು ಸೂರು ಜನರ ಸಂದರ್ಶನ ನಡೆಸಿದ್ದೇನೆ. ದಯವಿಟ್ಟು ನಂಬಿ. ಇಲ್ಲಿಯವರೆಗೆ ಒಬ್ಬನೇ ಒಬ್ಬ ಕನ್ನಡಿಗ ಸಂದರ್ಶನಕ್ಕಾಗಿ ಬಂದಿಲ್ಲ! ನಾನು ಮತ್ತು ಪ್ಯಾನೆಲ್ ನಲ್ಲಿರುವ ಕೆಲವರು ಕನ್ನಡಿಗ ಗೆಳೆಯರು ಕನ್ನಡದ ಹುಡುಗರು ಬಂದರೆ ಕೊಂಚ ದಡ್ಡರಿದ್ದರೂ ಸರಿ ಶತಾಯಗತಾಯ ಮುಂದಕ್ಕೆ ತಳ್ಳಬೇಕೆಂದು ಯೋಜಿಸಿಕೊಂಡಿದ್ದೆವು. ಆದರೆ ಕನ್ನಡದ ಒಬ್ಬ ಹುಡುಗನಾದರೂ ಬಂದರೆ ತಾನೆ? ಬಂದವರು ಬಹುತೇಕರು ತೆಲುಗರು ಮತ್ತು ಬಿಹಾರಿಗಳು! ಕೃಷ್ಣದೇವರಾಯ ವಿಶ್ವವಿದ್ಯಾಲಯದ ಲ್ಲಿ ಬಿಎಎಸ್ಸಿ  ಪದವಿ ಮುಗಿಸಿ ಎರಡು ವರುಷಗಳ ಸುಳ್ಳು ಅನುಭವ ಹಾಕಿಕೊಂಡು ಬರುತ್ತಾರೆ. ಕಂಪನಿಗಳಾದರೋ ಇವರು ಸುಳ್ಳರು ಎಂದು ತಿಳಿದೂ ತೆಗೆದುಕೊಳ್ಳುತ್ತವೆ. ಏಕೆಂದರೆ ಈಗ ಬಹುತೇಕ ಕಂಪನಿಗಳು ಸರ್ವಿಸ್ ಮತ್ತು ಮೇಂಟೆನೆನ್ಸ್ ಕೆಲಸಗಳನ್ನು ನಡೆಸುತ್ತಿವೆ. ಈ ಕೆಲಸಕ್ಕೆ ಹೆಚ್ಚಿನ ಕೌಶಲ್ಯ ಅಗತ್ಯವಿಲ್ಲ. ಒಂದೆರಡು ತಿಂಗಳಲ್ಲಿ ಯಾರಾದರೂ ಕಲಿಯಬಹುದು. ಗಿರಾಕಿಗಳಿಗೆ ತೋರಿಸಲು ಬಿಲ್ಲಿಂಗಿಗಾಗಿ ಕೆಲವು ನೌಕರರ ಅವಶ್ಯಕತೆ ಇರುತ್ತದೆ. ಹಾಗಾಗಿ ಕೌಶಲ್ಯದ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳದೇ ಕಂಪನಿಗಳು ಇವರನ್ನು ಕೊಳ್ಳುತ್ತವೆ. ಇವರು ಕಡಿಮೆ ಸಂಬಳಕ್ಕೆ ರಾತ್ರಿ ಪಾಳಿಗೂ ಕೆಲಸ ಮಾಡಲು ತಯಾರಿರುವುದರಿಂದ ಕಂಪನಿಗಳಿಗೂ ಲಾಭ!

ಬೆಂಗಳೂರಿನ ಬೀದಿ ಬೀದಿಗಳಲ್ಲಿ ಬಿಪಿಓಗಳು ತಲೆಯೆತ್ತಿವೆ.ಇತ್ತೀಚೆಗೆ ಬಹುತೇಕ ಎಲ್ಲ ದೇಶೀ ಮತ್ತು ವಿದೇಶೀಯ ಕಂಪನಿಗಳು ತಮ್ಮ ವಸ್ತುಗಳ ಜಾಹೀರಾತು ಮತ್ತು ಮಾರಾಟಕ್ಕಾಗಿ ಬಿಪಿಓಗಳ ಟೆಲಿಕಾಲಿಂಗ್ ಅನ್ನು ಅವಲಂಬಿಸಿವೆ. ಹಾಗಾಗಿ ಬಿಪಿಓ ನೌಕರರಿಗೆ ಎಲ್ಲಿಲ್ಲದ ಬೇಡಿಕೆ. ಎಷ್ಟು ಜನರು ಬಂದರೂ ತನ್ನ ತೆಕ್ಕೆಗಳಲ್ಲಿ ಒಳಗೊಳ್ಳಲು ಬಿಪಿಓ ಜಗತ್ತು ಸಿದ್ಧವಿದೆ. ಉತ್ತರ ಭಾರತೀಯರು ಕಡಿಮೆ ಸಂಬಳಕ್ಕೆ ದುಡಿಯಲು ಸಿದ್ಧರು ಸಿಗರೇಟ್ ಪ್ಯಾಕು ಮತ್ತು ಡ್ರಗ್ಗುಗಳ ಸಹಾಯದಿಂದ ರಾತ್ರಿಗಳನ್ನು ತಳ್ಳಬಲ್ಲರು. ಮನೆಗೆ ಹಣ ಕಳಿಸುವ ಒತ್ತಡ ಇಲ್ಲದಿರುವುದರಿಂದ ಸಿಗುವ ಸಂಬಳ ಸಾಕು. ಹಾಗಾಗಿ ಬಿಪಿಓಗಳು ಉತ್ತರ ಭಾರತೀಯರಿಗೆ ತಕ್ಕ ತಾಣಗಳು.

ಹೀಗಾಗಿ ಬೆಂಗಳೂರು ಎಲ್ಲರಿಗೂ ನೆಚ್ಚಿನ ವಲಸೆ ತಾಣ. ಬಿಹಾರಿಗಳಲ್ಲಿ ನಮ್ಮಂತೆ ಇನ್ನೂ ಕುಟುಂಬ ಯೋಜನೆಯ ಪ್ರಜ್ಞೆ ಬಂದಿಲ್ಲ. ಹಾಗಾಗಿ ಹಂದಿಗಳಂತೆ ಹಡೆದು ಬೀದಿಗೆ ಬಿಡುತ್ತಾರೆ ಅವರೆಲ್ಲ ಬಂದು ಬೆಂಗಳೂರಲ್ಲಿ ಕೂರುತ್ತಾರೆ. ಬಹುತೇಕ ಪಿಜಿ, ಬಾಡಿಗೆ ಮನೆಗಳಲ್ಲಿ, ಹಾಸ್ಟೆಲ್ ಗಳಲ್ಲಿ ಉತ್ತರದವರದ್ದೇ ಕಾರುಬಾರು. ಬೇರೆಯವರಿಗಿಂತ ಹೆಚ್ಚಿನ ಬಾಡಿಗೆ ಕೊಡುವುದರಿಂದ ಇವರು ಮನೆ ಮಾಲಿಕರಿಗೂ ಅಚ್ಚುಮೆಚ್ಚು.ತ್ರಿಭಾಷಾ ಸೂತ್ರವಿರುವುದರಿಂದ ಸಂವಹನಕ್ಕೆ ತೊಂದರೆ ಇಲ್ಲ. ಅದೆಷ್ಟೋ ವರ್ಷ ಬದುಕಿದರೂ ಇಲ್ಲಿಯ ಭಾಷೆ ಕಲಿಯಬೇಕೆಂಬ ಭಿಡೆಯಿಲ್ಲ. ನಮ್ಮ ಮನೆಯ ಎಡಕ್ಕೆ ಬಲಕ್ಕೆ ಕೆಳಗೆ ಇರುವವರು ತೆಲುಗರು. ಮೇಲಕ್ಕೆ ಬೆಂಗಾಳಿಗಳು!

ಇಂಜಿನಿಯರಿಂಗ್ ಕಾಲೇಜುಗಳು ಹಣಕ್ಕಾಗಿ ಉತ್ತರ ಭಾರತದವರನ್ನು ಸೆಳೆಯುತ್ತಿವೆ. ಲಕ್ಷಾಂತರ ಹಣ ತೆತ್ತು ಇಲ್ಲಿ ಇಂಜಿನಿರಿಂಗ್ ಓದುತ್ತಾರೆ.ಇವರನ್ನು ಸೆಳೆಯಲು ಇಂಜಿನಿಯರಿಂಗ್ ಕಾಲೇಜುಗಳು ಕಸರತ್ತು ನಡೆಸುತ್ತವೆ. ದಡ್ಡತನವೇ ಮೈವೆತ್ತಿರುವ ಈ ಹುಡುಗರನ್ನು ಪಾಸು ಮಾಡಿಸಲು ಈ ಕಾಲೇಜುಗಳು ಅಡ್ಡದಾರಿಗಳನ್ನು ಪ್ರೋತ್ಸಾಹಿಸುತ್ತವೆ.ಉದಾಹರಣೆಗೆ ಕಾಲೇಜಿಗೆ ಬರದವನಿಗೆ ಅಟೆಂಡೆನ್ಷ್ ಕೊಡುವುದು,ಪರೀಕ್ಷೆಗಳಲ್ಲಿ ಕಾಪಿಗೆ ಪ್ರೋತ್ಸಾಹಿಸುವುದು, ಪ್ರಾಯೋಗಿಕ ಪರೀಕ್ಷೆಗಳಲ್ಲಿ ಏನೂ ಇಲ್ಲದೆ ಉತ್ತಮ ಅಂಕಗಳನ್ನು ಕೊಡುವುದು ಇತ್ಯಾದಿ. ಇದಕ್ಕೆ ಪ್ರೋತ್ಸಾಹಿದಷ್ಟೂ ಉತ್ತರ ಭಾರತದಲ್ಲಿ ಹೆಚ್ಚಿನ ಪಾಪುಲಾರಿಟಿ ಸಿಗುತ್ತದೆ. ಹೆಚ್ಚು ವಿದ್ಯಾರ್ಥಿಗಳು ಹಣ ಕೊಟ್ಟು ಬರುತ್ತಾರೆ. ಕೇವಲ ಸಿಇಟಿಯ ಪ್ರಶ್ನೆಪತ್ರಿಕೆಗಳಿಗೇ ಲಕ್ಷಾಂತರ ರೂಪಾಯಿಯನ್ನು ತೆರುತ್ತಾರೆಂದರೆ ಉತ್ತರ ಭಾರತೀಯರ ಧನಬಲವನ್ನು ಲೆಕ್ಕ ಹಾಕಬಹುದು! ಇವೇ ಹುಡುಗರು ಬೆಂಗಳೂರಿನಲ್ಲಿಯೇ ಬಿಪಿವೋ, ಸಾಫ್ಟ್ವೇರ್‍ ಕೈಗಾರಿಕೆಗಳಲ್ಲಿ ಉಳಿಯುತ್ತಾರೆ.

ಇಷ್ಟಕ್ಕೂ ಬೆಂಗಳೂರು ಕರುನಾಡನ್ನು ನುಂಗುತ್ತಿದೆ.ಕರುನಾಡ ಜನರ ಮತ್ತು ರೈತರ ಹಕ್ಕಿನ ವಿದ್ಯುತ್ತು ಬೆಂಗಳೂರಿನ ಸಾಫ್ಟ್ ವೇರ್‍ ಕಂಪನಿಗಳು ಮತ್ತು ಶಾಪಿಂಗ್ ಮಾಲ್ ಗಳು ತಿಂದುಹಾಕುತ್ತಿವೆ. ಕಂಪನಿಗಳಿಗೆ ತೆರಿಗೆ ರಜೆ ಇರುವುದರಿಂದ ಸರಕಾರಕ್ಕೂ ಲಾಭವಿಲ್ಲ. ಟೆಕ್ಕಿಗಳ ದುಡಿಮೆಯ ಆದಾಯ ತೆರಿಗೆ ಕೇಂದ್ರ ಸರಕಾರಕ್ಕೆ ಹೋಗುತ್ತಿದೆ. ಕೇಂದ್ರಕ್ಕೆ ಹೋದ ಹಣದ ಬಹುಪಾಲು ಬಿಹಾರ ಉತ್ತರಪ್ರದೇಶಗಳಿಗೆ ಹಂಚಿಕೆಯಾಗುತ್ತಿದೆ. ನಮ್ಮ ಹಣ ಭೋಗಿಸುವ ಹಕ್ಕು ನಮಗಿಲ್ಲ. ನಮ್ಮ ಸಂಪನ್ಮೂಲಗಳನ್ನು ಸುಟ್ಟು ಬೇರೆಯವರನ್ನು ಸಾಕುವುದೇ ನಮ್ಮ ಭಾಗ್ಯ! ಇವರೆಲ್ಲ ಬರುತ್ತಿರುವುದರಿಂದ ಟ್ರಾಫಿಕ್, ಮಾಲಿನ್ಯಗಳ ಹೆಚ್ಚಳ. ಅದೆಷ್ಟೋ ವರುಷಗಳು ಇಲ್ಲಿದ್ದರೂ ನಮ್ಮ ನಾಡಿಗೆ ಇವರದು ನಯಾಪೈಸೆ ಕೊಡುಗೆಯಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಬಹುಪಾಲು ಕರುನಾಡನ್ನು ಬೆಂಗಳೂರು ಆಕ್ರಮಿಸಿಕೊಳ್ಲುವದರಲ್ಲಿ ಹೆಚ್ಚುಗಾರಿಕೆಯಿಲ್ಲ.

ಕತ್ತರಿಸಿ ತೆಗೆಯುವುದು ಪರಿಹಾರವಲ್ಲ ಎಂದರೆ ಬೇರೆ ಏನು ಪರಿಹಾರವಿದೆ? ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಛಾತಿ, ಛಲ ನಮ್ಮಲ್ಲಿದೆಯೇ? ದ್ರೋಹಿಗಳನ್ನು ಬಡಿದಟ್ಟುವ ಶೌರ್ಯ ಇದೇಯೇ? ಹೇಡಿತನಕ್ಕೆ ವಿಶಾಲ ಹೃದಯ ಎಂಬ ಹೆಸರನ್ನು ಕೊಟ್ಟ ಅಯೋಗ್ಯರು ನಾವು. ಕನ್ನಡ ಪರ ಎಂದು ಹೇಳಿಕೊಳ್ಳುವ ಸಂಘಟನೆಗಳು ರೋಲ್ ಕಾಲ್ ಗೆ ನಿಂತಿವೆ.

ಗ್ಯಾಂಗ್ರಿನ್ ಅನ್ನು ಕತ್ತರಿಸಿ ತೆಗೆಯದೇ ಬೇರೆ ಪರಿಹಾರವಿದೆಯೇ?

26 ಟಿಪ್ಪಣಿಗಳು Post a comment
 1. ರವಿ
  ಜೂನ್ 9 2011

  ಶ್ರೀಹರ್ಷ, ಬೆಂಗಳೂರು ಒಂಥರಾ ಗ್ಯಾಂಗ್ರೀನ್ ಥರನೆ ಆಗಿದೆ. ಅಲ್ಲದೆ ಕರುನಾಡಿಗೆಲ್ಲ ಹಬ್ಬುತ್ತಿದೆ. ಪೂರ್ತಿ ಹಬ್ಬುವ ಮೊದಲು ಕತ್ತರಿಸುವುದೇ ವಾಸಿ. ದಿನ ದಿನಕ್ಕೆ ಅಡ್ಡಡ್ಡ ಬೆಳೆಯುತ್ತಿದೆ ಬೆಂಗಳೂರು. ಮುಂಬೈ ಥರ ಉದ್ದುದ್ದ (ಬಹುಮಹಡಿ ಕಟ್ಟಡಗಳು ) ಅಲ್ಲ. ಇದರಿಂದ ಬೆಂಗಳೂರಿನ ಅಕ್ಕಪಕ್ಕದ ವ್ಯವಸಾಯದ ಭೂಮಿಯೆಲ್ಲ ನಗರದೊಳಗೆ ಸೇರುತ್ತಿದೆ. ಮೊದಲು ಇಷ್ಟು ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡಿದರೆ ಈ ಭೂ ನುಂಗಾಟ ತಡೆಯಬಹುದೇನೋ…

  ಉತ್ತರ
 2. ಜೂನ್ 9 2011

  what u are saying is right. but bangaloreans(of 70’s-80’s) are responsible for this state of affairs.

  ಉತ್ತರ
 3. ಜೂನ್ 9 2011

  ಹರ್ಶ,, ನಿಮ್ಮ ಕಳವಳ, ನೋವು ನನಗೆ ಅರ್ಥವಾಗುತ್ತೆ. ಆದರೆ ಎತ್ತಿಗೆ ಜ್ವರ ಬಂದ್ರೆ ಕೋಣಕ್ಕೆ ಬರೆ ಕೊಟ್ಟಂತೆ ನೀವು ಸೂಚಿಸಿದ ಪರಿಹಾರ ಆಗುತ್ತೆ. ಮೊದಲಿಗೆ, ಅನಿಯಂತ್ರಿತ ವಲಸೆ, ಮೂರು ಭಾಶೆ ಸೂತ್ರ ಅನ್ನುವ ನೇಣಿನ ಕುಣಿಕೆ, ಹಿಂದಿ ರಾಶ್ಟ್ರಿಯತೆ ಅನ್ನುವ ಪೊಳ್ಳು ರಾಶ್ಟ್ರವಾದಗಳ ಬಗ್ಗೆ ಕನ್ನಡಿಗರಲ್ಲಿ ಎಚ್ಚರಿಕೆ ಮೂಡಬೇಕಾಗಿದೆ. ಅದು ಬಿಟ್ಟು ೬೦೦ ವರ್ಶಗಳ ಕಾಲ ಕಟ್ಟಿ ಬೆಳೆಸಿದ ಕನ್ನಡಿಗರ ಊರೊಂದನ್ನು ಹಿಂದಿವಾದಿ ಸರ್ಕಾರದ ತೆಕ್ಕೆಗೆ ಕೊಡುವುದಲ್ಲ. ಬೆಂಗಳೂರು ಕೇಂದ್ರಾಡಳಿತಕ್ಕೆ ಹೋದ ತಕ್ಷಣ ಕೈಗಾ, ಇಲ್ಲವೇ ಲಿಂಗನಮಕ್ಕಿಯ ವಿದ್ಯುತ್ ಬೆಂಗಳೂರಿಗೆ ಬರದೇ ಬರೀ ಕರ್ನಾಟಕದ ಉಳಿದ ಭಾಗಕ್ಕೆ ದೊರಕುತ್ತೆ ಅಂದುಕೊಂಡಿರಾ? ಬೆಂಗಳೂರು ಕೇಂದ್ರಾಡಳಿತಕ್ಕೆ ಹೋದ ತಕ್ಷಣ ಕಾವೇರಿ ನೀರು ಬೆಂಗಳೂರಿಗೆ ಹರಿಯುವುದು ನಿಂತು ಬರೀ ಮಂಡ್ಯ, ಮೈಸೂರಿಗೆ ಸೀಮಿತವಾಗುತ್ತೆ ಅಂದುಕೊಂಡಿರಾ? ಬೆಂಗಳೂರು ಕೇಂದ್ರಾಡಳಿತಕ್ಕೆ ಹೋದ ತಕ್ಷಣ ಬೆಂಗಳೂರಿನ ಆಚೆಯ ಕರ್ನಾಟಕದ ಊರುಗಳಿಗೆ ಕನ್ನಡೇತರರ ವಲಸೆ ನಿಂತು ಹೋಗುತ್ತೆ ಅಂದುಕೊಂಡಿರಾ? ಇದಾವುದೂ ಆಗಲ್ಲ.

  ಕರ್ನಾಟಕದ 30 ಜಿಲ್ಲೆಗಳನ್ನು ಇವತ್ತು ಸಾಕುತ್ತಿರುವುದು ಬೆಂಗಳೂರು ಅನ್ನುವ ಊರು ಅನ್ನುವುದನ್ನು ಮರೆಯದಿರಿ. ಬೆಂಗಳೂರು ಕರ್ನಾಟಕದ ಕೈ ತಪ್ಪಿದ ತಕ್ಷಣ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಿ ಬಡ ಕನ್ನಡಿಗರು ಇನ್ನಷ್ಟು ಬಡವರಾಗುತ್ತಾರೆ ಅನ್ನುವುದನ್ನು ಮನಗಾಣಿರಿ.

  ಅಷ್ಟಕ್ಕೂ ನೀವು ಸಂದರ್ಶನ ಮಾಡಿದ ನೂರು ಜನರಲ್ಲಿ ಒಬ್ಬರು ಕನ್ನಡಿಗರು ಸಿಗಲಿಲ್ಲ ಅಂದ ತಕ್ಷಣ ಬೆಂಗಳೂರಲ್ಲಿ ಕನ್ನಡಿಗರಿಲ್ಲ ಅಂತಲ್ಲ. ಬೆಂಗಳೂರಲ್ಲಿ ಕನ್ನಡಿಗರು ಇಲ್ಲದೇ ಹೋದ ಪಕ್ಷದಲ್ಲಿ ಬೆಂಗಳೂರಿನ 8 ಎಫ್.ಎಮ್ ಕೇಂದ್ರಗಳಲ್ಲಿ 6 ಹೇಗೆ ಇವತ್ತಿಗೂ ಕನ್ನಡ ಹಾಡಿನ ಮೇಲೆ ಹಣ ಮಾಡುತ್ತಿವೆ? ಹೇಗೆ ಸರಿ ಸುಮಾರು 75%ಕ್ಕೂ ಹೆಚ್ಚು ಪತ್ರಿಕೆ ಓದುಗರು ಕನ್ನಡ ಪತ್ರಿಕೆ ಓದುತ್ತಿದ್ದಾರೆ? http://enguru.blogspot.com/2010/05/irs-varadi-horagedahida-satya.html? 28 MLA, 200 ಕಾರ್ಪೊರೇಟರ್ಸ್ ಗಳಲ್ಲಿ ಹೆಚ್ಚಿನವರು ಕನ್ನಡ ಭಾಶಿಕರು, ಇಲ್ಲವೇ ಕನ್ನಡ ಕಲಿತು ಇಲ್ಲಿಯವರೇ ಆಗಿರುವ ಕನ್ನಡೇತರ ನುಡಿಯಾಡುವ ಕನ್ನಡಿಗರು.

  ಅಷ್ಟು ನಿರಾಶರಾಗಬೇಡಿ.. ದಾಳಿ ನಡೆದಾಗ ಎದೆಯೊಡ್ಡಿ ನಮ್ಮ ನೆಲವನ್ನು ಕಾಪಾಡಿಕೊಳ್ಳಬೇಕಾಗಿದೆ,, ಬೆನ್ನು ತೋರಿಸಿ ತ್ಯಾಗ ಮಾಡಿ, ವಿಶಾಲ ಹ್ರುದಯದವರಾಗುವುದು ಬೇಡ.

  ನಿಮ್ಮವ,
  ವಸಂತ

  ಉತ್ತರ
 4. Nija
  ಜೂನ್ 9 2011

  ಶ್ರೀ ಹರ್ಷ ಅವ್ರೆ,
  ನಿಮಗೆ ಬೆಂಗಳೂರು ಮತ್ತು ಕರ್ನಾಟಕದ ಮಿಕ್ಕ ಭಾಗಗಳ ಕುರಿತು ಕಾಳಜಿಗಿಂತ ಭಯವೇ ಹೆಚ್ಚಾಗಿದೆಯೆಂದು ಇಡೀ ಬರಹ ಕೂಗಿ ಹೇಳ್ತಿದೆ. ಅಡ್ಡಿಯಿಲ್ಲ. ಹಾಗಂತ ಭಯದ ಮೋಡಿಯಲ್ಲಿ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದರ ಬಗ್ಗೆ ಯೋಚನೆ ಮಾಡುವುದು ಬಹಳ ದೊಡ್ಡ ತಪ್ಪಾಗುತ್ತೆ. ಬೇರೆ ಯಾವುದೇ ಭಾರತದಲ್ಲಿನ ಕೇಂದ್ರಾಡಳಿತ ಪ್ರದೇಶವನ್ನು ಕಂಡು, ಅದರ ಕುರಿತು ಓದಿ ನೋಡಿ. ನಿಮ್ಮ ನಮ್ಮ ಬೆಂಗಳೂರು ಕೂಡ ಹಾಗೆ ಆಗುವುದು ಬೇಕಾ, ಅದರಲ್ಲಿ ಹಿಂದಿಯನ್ನು ಹೇರಲು ನಾವೇ ಕೇಂದ್ರಕ್ಕೆ ದಾನ ಮಾಡುವುದು ಎಂತಹ ಮೂರ್ಖತನದ ಪರಮಾವಧಿಯಾಗುತ್ತೆ ಎಂದು ಗೊತ್ತಾಗತ್ತೆ.

  ಅಲ್ಲದೆ ಇವತ್ತು ಒಂದು ಪ್ರದೇಶ ಕೇಂದ್ರಾಡಳಿತ ಜಾಗವಾಗೋದ್ರೆ ಅಲ್ಲಿಂದ ಜನ ಮಿಕ್ಕ ಸಾಮಾನ್ಯ ಪ್ರದೇಶಗಳಿಗೆ ಬರಲಾಗೊಲ್ಲವೆಂದು ನೀವು ಭಾವಿಸಿರುವ ಹಾಗಿದೆ! ಅದು ನಿಜವೇ ಅಲ್ಲ ಸ್ವಾಮಿ. ಬೀದಿಯಲ್ಲಿರೋ ಭೂತವನ್ನು ಮನೆ ಒಳಗೆ ತಂದು ಇಟ್ಟುಕೊಂಡಂಗಾಗುತ್ತೆ ನೀವು ಹೇಳ್ತಿರೋ ಮಾತು ನಿಜವಾದರೆ!

  ಅಲ್ಲದೆ, ನೀವು ಒಂದೆರಡು ಕಹಿ ಸಂದರ್ಭಗಳನ್ನು ಕಂಡು ಈ ರೀತಿ ಪ್ರತಿಕ್ರಿಯಿಸಿರುವುದು ತಣ್ಣಗಾಗಿಸಿಕೊಳ್ಳಿ, ಬಳಿಕ ಕನ್ನಡ ಕನ್ನಡಿಗ ಕರ್ನಾಟಕಗಳ ಏಳಿಗೆಗೆ ಸಂಬಂಧಿಸಿದಂತೆ ಎಷ್ಟೊಂದು ಒಳ್ಳೆಯ ಕೆಲಸಗಳು ನಡೀತಿವೆ ಎಂದು ನಿಧಾನವಾಗಿ ಕೂತು ನೋಡಿ. ಅಲ್ಲಿ ಇಲ್ಲಿ ಬ್ಲಾಗುಗಳನ್ನು ಓದಿರಿ (ಉದಾ:http://enguru.blogspot.com).. ಈ ರೀತಿಯ ಚಿಂತನೆಗಳನ್ನು ಪರಿಹಾರವಾಗಿ ಯಾರೊಡನೆಯೂ ಮಾತಾಡಬೇಡಿ, ಸಧ್ಯ!

  ಉತ್ತರ
 5. manju787
  ಜೂನ್ 9 2011

  ಬೆ೦ಗಳೂರಿನಲ್ಲಿ ಅನ್ಯ ಭಾಷಿಗರು ಹೆಚ್ಚಾಗಿದ್ದಾರೆ ಅನ್ನುವುದು ಸತ್ಯ, ಬೆ೦ಗಳೂರಿನ ಬಗ್ಗೆ ಕರುನಾಡಿನ ಬಗ್ಗೆ ತೋರಿರುವ ಕಳಕಳಿಯೂ ಮೆಚ್ಚತಕ್ಕದ್ದೆ! ಆದರೆ ಖಾಯಿಲೆ ಬ೦ದ ಅಮ್ಮನನ್ನು ಮನೆಯಿ೦ದ ಹೊರಹಾಕಿದ೦ತೆ, ಮುದಿ ಗೊಡ್ಡು ದನವನ್ನು ಕಟುಕನಿಗೆ ಮಾರಿದ೦ತೆ, ಬೆ೦ಗಳೂರನ್ನು ಕೇ೦ದ್ರಕ್ಕೆ ಬಿಟ್ಟು ಕೊಟ್ಟರೆ ಆಗುವುದಿಲ್ಲವೇ? ಸ್ವಲ್ಪ ಯೋಚಿಸಿ, ಆವೇಶವನ್ನು ಬಿಟ್ಟು ಬುದ್ಧಿವ೦ತಿಕೆಯಿ೦ದ ಯಾವುದೇ ಸಮಸ್ಯೆಯನ್ನಾದರೂ ಪರಿಹರಿಸಬಹುದು. There is a solution for every problem under the sky………..!!

  ಉತ್ತರ
 6. ಜೂನ್ 9 2011

  ನಮ್ಮ ಗಾಯ ನಾವೇ ವಾಸಿ ಮಾಡಕೊಳ್ಳ ಬೇಕೆ ಹೊರತು, ಅದನ್ನು ಕೆರೆದು ಇನ್ನೂ ಜಾಸ್ತಿ ಮಾಡಿಕೊಳ್ಳಬಾರದು
  ನೀವು ಹೇಳಿದ ಅ೦ಶಗಳು ಸರಿಯಾಗಿದೆ. ನೀವು ಎಷ್ಟೆ ಬೇರೆ ಬಾಷೆ ಮಾತನಾಡುವವರನ್ನು ನೋಡಬಹುದು
  ಆದರೆ ಅವರಿಗೆ ಒ೦ದೆ ಒ೦ದು ಸರ್ಕಾರಿ ಕೆಲಸ ಹಾಗಬೇಕಾದರು ಅವರು ಕನ್ನಡದಲ್ಲೆ ಮು೦ದುವರಿಯಬೇಕು
  ಅಲ್ಲಿ ಹಿ೦ದಿ,ಇ೦ಗ್ಲಿಷ್ ಕೆಲಸಕ್ಕೆ ಬರುವುದಿಲ್ಲ , ಇದು ನಮ್ಮ ಕಾನೂನು ಕೂಡ, ನೀವು ಹೇಳಿದ ಹಾಗೆ ಕೇ೦ರ್ದಾಡಳಿತವೇನಾದರು ಆದರೆ ಅಷ್ತೆ ನಮ್ಮ ಕಥೆ. ನನ್ನ ಪ್ರಕಾರ ಒ೦ದು ಬಾಷೆಯನ್ನು ನಿರ್ನಾಮ ಮಾಡುವುದು ಅಷ್ಟು ಸುಲುಬವಲ್ಲ. ನೀವು ನಮ್ಮ ಬೇರೆ ಜಿಲ್ಲೆಗಳನ್ನೆ ತೊಗೊಳ್ಲಿ ಮೈಸೂರು, ಮ೦ಗಳೂರು, ಹಾಸನ ಅಲ್ಲಿ ಎಲ್ಲು ಬೇರೆ ಬಾಷೆ ಕಾಣ ಸಿಗುವುದಿಲ್ಲ. ನಾವು ಬೆ೦ಗಳೂರನ್ನೆ ಕರ್ನಾಟಕ ಅ೦ಥ ಅ೦ದುಕೊಳ್ಳುವುದಕ್ಕೆ ಹಾಗುವುದಿಲ್ಲ ಅಲ್ಲವೆ? ಇನ್ನೂ೦ದು ವಿಷಯ ಅ೦ದರೆ ನಮ್ಮ ಕನ್ನಡದಲ್ಲಿ ೪ ವಾರ್ತ ವಾಹಿನಿಗಳಿವೆ ಇಷ್ತೊ೦ದು ಬೇರೆ ಬಾಷೆಯಲ್ಲಿರುವುದು ಅತೀ ವಿರಳ (ನಮ್ಮ ಜನಸ೦ಖೆಗೆ ಅನುಗುಣವಾಗಿ)

  ಉತ್ತರ
 7. ಜೂನ್ 9 2011

  but adondu vishyakke, kendradalitha beku andre agalla, yakendre alli irodu kooda rajakaranigale, avri adu bittu bere enu gothilla, atleast mukhyamanthri chandru hatra hodre kanndadalli ashvasaneyannadru kodthare. allige hodre maloom nahi jao anthare.

  ಉತ್ತರ
 8. ಜೂನ್ 9 2011

  ನಿಮಗೆ ಎಲ್ಲೊ ತಲೆ ಕೆಟ್ಟಿರುವ ಸಾಧ್ಯತೆಗಳಿವೆ. ನಿಮ್ಮ ಮೆದುಳಿನ ಯಾವುದೋ ಒಂದು ಭಾಗವನ್ನ ‘ಹುಳಗಳು’ ತಿಂದು ಹಾಕಿರುವ ಸಾಧ್ಯತೆಗಳನ್ನ ತಳ್ಳಿ ಹಾಕುವಂತಿಲ್ಲ. ನೀವು ‘ಕನ್ನಡಿಗ’ ಎಂಬುದೇ ನನಗೆ ಅನುಮಾನ ಬರುತ್ತಿದೆ. ನೀನು ಹೇಳಿರುವುದೆಲ್ಲಾ ಸತ್ಯ. ‘ಕೇಂದ್ರಾಡಳಿತ ಪ್ರದೇಶ’ ಮಾಡಬೇಕು ಎನ್ನುವ ತಲೆಕೆಟ್ಟ ಅಭಿಪ್ರಾಯವೊಂದನ್ನ ಬಿಟ್ಟು. ತಾಕತ್ತಿದ್ದರೆ ‘ಕೇಂದ್ರಾಡಳಿತ ಪ್ರದೇಶ ಮಾಡಬೇಕು’ ಎಂದು ಹೊರಗೆ ಬಂದು ಕೆಂಪೇಗೌಡನ ಪ್ರತಿಮೆಯ ಎದುರು ಹೇಳಿ ನೋಡೋಣ.
  ಬೆಂಗಳೂರು ಕನ್ನಡಿಗರದ್ದಾಗಿತ್ತು, ಈಗಲೂ ಕನ್ನಡಿಗರದ್ದು, ಮುಂದೆಯೂ ಕನ್ನಡಿಗರದ್ದಾಗಿರುತ್ತದೆ.

  ಉತ್ತರ
 9. ಜೂನ್ 9 2011

  howdu sagar nimma maatannu opputtene.. Bengaluru Kendradalita pradeshavagabeku embudu ee narayana moorti’ya tara thale kettavara abipraaya.. Kempegowda kattida bengalooru yendendigu Kannadigaraddu..
  Mr.Harsha , idara bagge math yettidare USHAR!!!

  ಉತ್ತರ
 10. ಜೂನ್ 9 2011

  ಹರ್ಷ ಅವರೇ,
  ನಿಮ್ಮ ಮಾತು ನೂರಕ್ಕೆ ನೂರು ಸತ್ಯ,ಈ ಬಿಹಾರಿಗಳು ಅಲ್ಲದೆ ಉತ್ತರ ಭಾರತದ ಮತ್ತು ತಮಿಳು ನಾಡು,ಆಂಧ್ರ ದಿಂದ ಬರುವ ಭೂಪರು ಎಷ್ಟು ಬೇಕಾದರೂ ಮನೆ ಬಾಡಿಗೆ ಕೊಡಲು ತಯ್ಯಾರು,ಇದರಿಂದ ಬೇರೆ ಮಧ್ಯಮ ವರ್ಗದ ಜನರಿಗೆ ಮೈ ಮೇಲೆ ಬರೆ ಎಳೆದಂತೆ ಆಗಿದೆ..ಅಲ್ಲದೆ ರೈತರಿಗೆ ಸಿಗಬೇಕಾದ ವಿದ್ಯುತ್ ಈ ಕಂಪೆನಿಗಳ ಪಾಲಾಗುತ್ತಿದೆ..ಈ ಹೊರ ರಾಜ್ಯದ ಬಿಪಿಓ ಮತ್ತು ಸಾಫ್ಟ್ ವೇರ್ ಉದ್ಯೋಗಿಗಳಿಂದಾಗಿ ಬೆಂಗಳೂರಿನಲ್ಲಿ ಜೀವನ ಮಾಡುವುದು ಎಷ್ಟೋ ಜನರಿಗೆ ಕಷ್ಟವಾಗಿದೆ.. ಅಲ್ಲದೆ ಕನ್ನಡ ಭಾಷೆ ಮುಕ್ತಾಯದ ಅಂಚಿನಲ್ಲಿದೆ,

  ಉತ್ತರ
 11. ಜೂನ್ 9 2011

  Lolz… modalu e-titlennu badalayisi…

  ಉತ್ತರ
 12. ಜೂನ್ 9 2011

  ಇದು ಒಪ್ಪಲಾಗದ ಮಾತು!

  ಉತ್ತರ
 13. ರವಿಕುಮಾರ ಜಿ ಬಿ
  ಜೂನ್ 9 2011

  ಶ್ರೀ ಹರ್ಷ,
  ನೀವು ಹೇಳಿದಂತೆ ಬೆಂಗಳೂರಲ್ಲಿ ಕನ್ನಡ ಮಾತಾಡುವವರು ಕಡಿಮೆ ಆಗಿರುವುದು ಹೌದಾದರೂ, ಕೇಂದ್ರಾಡಳಿತ ಪ್ರದೇಶವಾಗಿ ಮಾಡುವುದರಿಂದ ಇದು ಪರಿಹಾರ ವಾಗುವುದಿಲ್ಲ ! ಕೋಪದಲ್ಲಿ ಅಥವಾ ಬೇಸರದಲ್ಲಿ ಕುಯ್ದು ಕೊ೦ಡ ಮೂಗು ವಾಪಸ್ ಸಿಗೋದಿಲ್ಲ ಕಣ್ರೀ !!!

  ಈ ಸ್ತಿತಿ ಬರಲು ನಾವೇ ನೇರವಾಗಿ ಮತ್ತು ಪರೋಕ್ಷವಾಗಿ ಕೂಡ ಕಾರಣ !! ಬೇಕಾದರೆ ನೋಡಿ ನಾವು (ಕನ್ನಡಿಗರು) ಕನ್ನಡೆತರರೊಂದಿಗೆ ಎಂದಿಗೂ ಕನ್ನಡದಲ್ಲಿ ಮಾತಾಡೋದಿಲ್ಲ !!!!! ಅದೇ ತಮಿಳರಾಗಲಿ ,ತೆಲುಗರಾಗಲಿ ಬೇರೆ ಭಾಶಿಗರೊಂದಿಗೆ ತಂತಮ್ಮ ಮಾತೃ ಬಾಷೆಯಲ್ಲೇ ಮಾತಾಡುತ್ತಾರೆ , ಇದರಿಂದಾಗಿ ಇತರ ಬಾಶಿಗರು ಕೂಡ ಕಷ್ಟ ಪಟ್ಟಾದರೂ ಆ ಭಾಷೆಯಲ್ಲೇ ಮಾತಾಡುತ್ತಾರೆ . ಅದೇ ಬೆಂಗಳೂರಲ್ಲಿ ನೋಡಿ ಉಲ್ಟಾ ಪಲ್ಟ . ನಮಗೆ ತಮಿಳ್ ಗೊತ್ತಿರದಿದ್ದರೂ ,ತಮಿಳರೊಂದಿಗೆ ಅರೆಬರೆ ತಮಿಳಿನಲ್ಲಿಯೇ ಮಾತಾಡಲು ಪ್ರಯತ್ನಿಸುತ್ತೇವೆ !!!!!!! ನಮ್ಮ ಮನಸ್ತಿತಿ ಹೀಗಿರಬೇಕಾದರೆ ನಾವು ಬೇರೆಯವರನ್ನು ದೂರಿ ಪ್ರಯೋಜನ ವೇನು? ಇದರಿಂದಾಗಿಯೇ ಕನ್ನಡಕ್ಕೆ ಈ ದುಸ್ತಿತಿ ಬಂದಿರೋದು !!!!
  ಹಾಗಾಗಿ ಕೋಪದಲ್ಲಿ ಅಥವಾ ಬೇಸರದಲ್ಲಿ ಕುಯ್ದು ಕೊ೦ಡ ಮೂಗು ವಾಪಸ್ ಸಿಗೋದಿಲ್ಲ ಕಣ್ರೀ !!! ಇದನ್ನು ನೆನಪಿಟ್ಟು ಕೊ೦ಡು ಮುಂದಿನ ಹೆಜ್ಜೆ ಇಡೋದು ಒಳ್ಳೇದು ಅಂತ ನನ್ನ ಅಭಿಪ್ರಾಯ !! ಮೊದಲು ನಮ್ಮನ್ನು ನಾವು ಬದಲಾಯಿಸಿಕೊಳ್ಳೋಣ ,ಆಮೇಲೆ ಉಳಿದದ್ದೆಲ್ಲವೂ ಸರಿ ಹೋಗುತ್ತದೆ. ಜಿಗುಪ್ಸೆ ಆಗಲಿ ಬೇಸರವಾಗಲಿ ಮಾಡಿಕೊಳ್ಳುವುದರಿಂದ ಸಮಸ್ಯೆ ಪರಿಹಾರವಾಗೋದಿಲ್ಲ .!!!!!

  ಉತ್ತರ
 14. ಅನಿಲ್
  ಜೂನ್ 9 2011

  ಹಿಂಗೆಲ್ಲಾ ಬೀದೀಲಿ ಮಾತಾಡುದ್ರೆ ಕೊಲೆ ಆಗಿಬುಡ್ತೀಯಾ ಗುರೂ! ಹುಶಾರು!!

  ಉತ್ತರ
 15. sriharsha
  ಜೂನ್ 9 2011

  ಕೀಬೋರ್ಡ್ ಕುಟ್ಟುಗ ವೀರರೇ,

  ಹಾಗಿದ್ದರೆ ಪರಿಹಾರ ಏನು ಸೂಚಿಸಿ… ತಾವೇನು ಮಾಡಬಲ್ಲಿರಿ ಸೂಚಿಸಿ. ನಾವೇನು ಮಾಡಬಲ್ಲೆವು ಸೂಚಿಸಿ
  ಒಟ್ಟಿಗೆ ದುಡಿಯೋಣ … ಬೆಂಗಳೂರು ಉಳಿಸಿಕೊಳ್ಳೋಣ.

  ಧನ್ಯವಾದಗಳು.

  ಉತ್ತರ
  • ವಿಜಯ್
   ಜೂನ್ 10 2011

   ಶ್ರೀ ಹರ್ಷ, ತಾವು ಕುಟ್ಟಿದ್ದೂ ಕೀ ಬೋರ್ಡನ್ನೇ ! ಬೇರೆ ಏನೂ ಮಾಡಿದ ಹಾಗೆ ಕಾಣೆ. 🙂

   ಉತ್ತರ
  • mmt
   ಜೂನ್ 10 2011

   ನಿಮ್ಮ ಆಲೋಚನಾ ವಿಧಾನಕ್ಕಿಂತ ಬಿನ್ನವಾಗಿ ಯೋಚಿಸಿ ಬೇರೆಯವರು ಬರೆದಾಗ ಸಹಿಸಿಕೊಳ್ಳ ಲಾಗದಿದ್ದರೆ ದಯವಿಟ್ಟು ಲೇಖನ ಬರೆಯಬೇಡಿ. ಎಲ್ಲರೂ ನೀವು ಹೇಳಿದ್ದನ್ನ ಒಪ್ಪಿಕೊಳ್ಳಬೇಕು ಅಂತ ನಿಮ್ಮ ಮನಸ್ಸಿನಲ್ಲಿದ್ದರೆ ನೀವು ಚರ್ಚೆ ಮಾಡಲು ಅನರ್ಹರು !!!!!

   ಉತ್ತರ
   • sriharsha
    ಜೂನ್ 11 2011

    ಮಹಾಮಹಿಮರೇ,

    ಏನು ಮಾಡಬಹುದು ಹೇಳಿ ಅಂತ ಕೇಳಿದ್ದೇನೆ. ಉತ್ತರ ಹೇಳಲಾಗದೇ ಎಲ್ಲೆಲ್ಲೋ ಕೆರೆದುಕೊಂಡು ನನ್ನ ಅರ್ಹತೆಯ ಬಗ್ಗೆ ಏಕೆ ಮಾತನಾಡುತ್ತೀರಿ? ತಾಕತ್ತಿದ್ದರೆ ಕೆಲಸ ಮಾಡಿ ಮಾತನಾಡಿ.

    ನಾನು ಏನು ಮಾಡಿದ್ದೇನೆ ಏನು ಮಾಡುತ್ತಿದ್ದೇನೆ ಎಂಬುದು ಬಹಳ ಜನರಿಗೆ ಗೊತ್ತು.

    ಉತ್ತರ
    • ವಿಜಯ್
     ಜೂನ್ 13 2011

     ಹಾಗೆಯೇ ಬೇರೆಯವರು ಏನು ಮಾಡುತ್ತಾರೆ, ಮಾಡಬೇಕು ಎಂಬುದು ಅವರಿಗೆ ಗೊತ್ತು. ನಿಮ್ಮ ಪಾಠ ಪ್ರವಚನ ಬೇಕಿಲ್ಲವಲ್ಲ.! ಕೆಲಸ ಮಾಡುವ ನಿಮಗೆ ಬೇರೆಯವರ ಉತ್ತರ ಏಕೆ ಬೇಕು ಮತ್ತು ಅವರಿಂದ ನಿಮ್ಮದ್ದನ್ನು ಕೆರೆಸಿಕೊಳ್ಳುವುದೇಕೆ ಬೇಕು.? ಸುಮ್ಮನೇ ಕೆಲಸ ಮಾಡಿ, ಎಲ್ಲರಿಗೂ ಗೊತ್ತಾಗುತ್ತದೆ.

     ಉತ್ತರ
 16. ಜೂನ್ 10 2011

  ಇದೂ ಒಪ್ಪಲಾಗದ ಮಾತು! 🙂

  ಉತ್ತರ
 17. ಜೂನ್ 10 2011

  Please join this page on Facebook 🙂
  https://www.facebook.com/kannadigarasene

  ಉತ್ತರ
 18. tumkur s prasd
  ಜೂನ್ 10 2011

  ಬೆ೦ಗಳೂರು ಕೇ೦ದ್ರಾಡಳಿತ ಪ್ರದೇಶವಾಗುತ್ತದೆ ಅನ್ನುವುದು ಒ೦ದು ಭ್ರಮೆಯಿ೦ದ ಇನ್ನೊ೦ದು ಭ್ರಮೆಗೆ ಚಲಿಸುವ ಸುಳ್ಳು .ಹಾಗೆ ಅ೦ದುಕೊಳ್ಳು ಕೆಟ್ಟ ಮನಸ್ಸು .

  ಉತ್ತರ
 19. yogesha
  ಜೂನ್ 11 2011

  nimma mathu sariyala bengalurunali KANNADA edhe ex:; kannada samsthe galu bengalurina thumba vyapisive aladhe helelu kannada para saghatanegalu mathu kannada dha baners galu filmgalu hechagi bengalurinali edhe; aladhe prathi area dhalu kadime andru 4 kannada sthambagalu edhe eruthe evelvanu nodi amele nirdhara madi……………………@y

  ಉತ್ತರ
 20. Sanjeev Mulagund
  ಜೂನ್ 12 2011

  Let all bangalorians should take initiation first regarding the same, then once unity is found then its easy to do the things mentioned in statement. bengalooru is the one which is initially built and developed by the great kannada legend Nadagouda Kempegouda, its very painfull to tell many of benglorians (who came from outside and residing from many years in banglore) doesn’t know this. Kannada should spread across the banglore completely. kannada language has to become first preference in all aspects, then only its possible to do anything mentioned in statement. Jai Karnataka.

  ಉತ್ತರ
 21. karibasavanagowda
  ಜನ 7 2018

  kannadada bagge matanaduttiruv nanna snehitaralliruva kannadada preeti shlaghaniyavadaddu. adare kannadada balake eke aguttilla annuvudannu navu kannadaigaradavaru prashne hakikollabekide. modlau dalita basheyagi kannadavu anustanagonda nantara karnatakavannu alalu baruttiruva kannadetara adhikarigalalli kannadada hitasakti illa kaliyuva avashyakateyu illa embantagide. nijavagiyu basheya bagegin abhi manavannu tamilu nadin janara hattira bashabimanada bagge kaliyabekide. basheya vicharadalli svarthigalagabeku. anisuttade.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments