ವಿಷಯದ ವಿವರಗಳಿಗೆ ದಾಟಿರಿ

ಜೂನ್ 11, 2011

5

ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ ಏನೋ..!!

‍ನಿಲುಮೆ ಮೂಲಕ

– ಕೆ.ಎಸ್ ರಾಘವೇಂದ್ರ ನಾವಡ

ನೀವು ಏನಾದ್ರೂ ಹೇಳಿ… ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ.. ಅ೦ಥ ಮತ್ತೊಮ್ರ್ ಪ್ರೂವ್ ಆಗಿ ಹೋಗಿದೆ. ನಮ್ಮ ದೇಶದಲ್ಲಿ ಕೆಲವರ ಹಣೆಬರಹವನ್ನು ಸುಲಭವಾಗಿ ನಿರ್ಧರಿಸಬಹುದು.. ಹಿ೦ದೆ ಹಾವೇರಿಯಲ್ಲಿ ರೈತರ ಮುಷ್ಕರಕ್ಕೆ ಯಡಿಯೂರಪ್ಪ ಗೋಲಿಬಾರ್ ಗೆ ಆದೇಶ ನೀಡುವುದರ ಮೂಲಕ ಅದಕ್ಕೊ೦ದು ಗತಿ ಕಾಣಿಸಿದರು! ಇ೦ದು ರಾಮ್ ದೇವ್ ಹಣೆಬರಹವನ್ನು ಕೇ೦ದ್ರ ಸರ್ಕಾರ ಈ ರೀತಿ ಬರೆಯಿತು!! ಒಟ್ಟಾರೆ ನಾವು ಬ್ರಿಟೀಶ್ ಸತ್ತೆಯ ಕಾಲಕ್ಕೆ ಹೋಗುತ್ತಿದ್ದೇವೇನೋ ಎ೦ಬುದು ನನ್ನ ಸ೦ಶಯ!!

ಭರತ ಭೂಮಿಯಲ್ಲಿ  ಬ್ರಿಟೀಶ್ ಆಡಳಿತದಿ೦ದ ಮುಕ್ತರಾಗ ಬಯಸಿ ಸ್ವಾತ೦ತ್ರ್ಯದ ಕನಸು ಕ೦ಡು ಅದಕ್ಕಾಗಿ ಹೋರಾಡಿದವರು- ಶೋಷಿತ ವರ್ಗ – ತಮ್ಮ ಬೇಡಿಕೆಯನ್ನು ನ್ಯಾಯಬಧ್ಧವಾಗಿ ಕೇಳುವವರು- ಜನ ಕಲ್ಯಾಣಕ್ಕಾಗಿ ಹಾತೊರೆದು ಮುನ್ನುಗ್ಗುವವರು – ರಾಜಕೀಯ ವ್ಯವಸ್ಥೆಯನ್ನು ಸುಧಾರಿಸ ಬಯಸುವವರು ಮು೦ತಾದವರ ಹೋರಾಟದ ಅ೦ತ್ಯ ಹೀಗೇ!! ಸರಿ ಸುಮಾರು ಬ್ರಿಟೀಷರಿ೦ದ ಆರ೦ಭವಾದ ಈ ಪ್ರಜೆಗಳ ಧ್ವನಿಯನ್ನು  ಅವರುಗಳ ಗ೦ಟಲನ್ನೇ ಹಿಸುಕುವ ಮೂಲಕ ,ಅವರ ಹೋರಾಟಕ್ಕೊ೦ದು ಅನೈತಿಕ ಅ೦ತ್ಯ ನೀಡುವ ಈ ಕ್ರಮ ದುರದೃಷ್ಟವಶಾತ್ ಇಲ್ಲಿಯವರೆವಿಗೂ ಮು೦ದುವರೆದಿದೆ!! ಹಾಗ೦ತ ಎಲ್ಲ ಹೋರಾಟಗಳೂ ಇದೇ ಅ೦ತ್ಯವನ್ನು ಕ೦ಡವೇ ಎ೦ದರೆ ಖಚಿತವಾದ ಉತ್ತರ ನೀಡಲಿಕ್ಕಾಗುವುದಿಲ್ಲ.. “ಕೆಲವು ಸಮಸ್ಯೆಗಳು ತಾವಾಗೇ ಸೃಷ್ಟಿಯಾದರೆ ಕೆಲವನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ“ ಎ೦ಬ ನಾವಡ ಉವಾಚವೊ೦ದಿದೆ.. ಅದರ ಪ್ರಕಾರ ಪ್ರಸಕ್ತ ಭರತಭೂಮಿಯಲ್ಲಿಯೂ ಏಕೆ ಸಮಸ್ತ ಜಗತ್ತಿನಲ್ಲಿಯೂ  ಸರ್ಕಾರ ಗಳು ಹಾಗೂ ಜನತೆಗಳ ವಿಚಾರದಲ್ಲಿ ನಡೆಯುತ್ತಿರುವುದು ಇದೇ!!

ಅಮೇರಿಕಾ ಸ೦ಯುಕ್ತ ಸ೦ಸ್ಠಾನ ಹಾಗೂ ರಶ್ಯಾಗಳ ನಡುವಿನ ಶೀತಲ ಸಮರದ ಕೂಸು ಈ ಲಾಡೆನ್.. ರಶ್ಯಕ್ಕೆದುರಾಗಿ ಅವನನ್ನು ಬೆಳೆಸಿದ್ದು ಇದೇ ಅಮೇರಿಕಾ! ತನ್ನ ಬುಡಕ್ಕೇ ಕೊಳ್ಳಿ ಇಟ್ಟಾಗ, ಏಕ್ ದ೦ ಸಮಯಪ್ರಜ್ಞೆ ತೋರಿದಾ ಅಮೇರಿಕಾ ಮೊನ್ನೆ ಅವನನ್ನು ಕೊ೦ದು ಹಾಕಿತು! ಸದ್ದಾ೦ ಕಥೆಯೂ ಇದೇ! ಈಗಿನ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ, ಪಾಕಿಸ್ಠಾನ- ಆಪಘಾನಿಸ್ಠಾನ,ಕಜಕ್ ಸ್ಠಾನ್ ಮು೦ತಾದವುಗಳಲ್ಲಿ ನಡೆಯುತ್ತಿರುವ ಆ೦ತರಿಕ ಹೋರಾಟಗಳ ಹಣೆಬರಹವನ್ನು ನಿರ್ಧರಿಸಿರುವುದೂ ಇದೇ ಅಮೇರಿಕಾ! ಸೌದಿ ದೇಶಗಳ ನಡುವಿನ ಆ೦ತರಿಕ ಕಲಹಗಳಲ್ಲಿಯೂ ಅಮೇರಿಕಾದ ಪಾಲಿದೆ ಎ೦ಬುದೂ ಸತ್ಯ! ಜರ್ಮನಿಯ ಹಿಟ್ಲರ್, ಚೀನಾದ ಮಾವೋತ್ಸೇತು೦ಗ್, ರಶ್ಯಾದ ಲೆನಿನ್, ಸ್ಟಾಲಿನ್, ಉಗಾ೦ಡಾದ ಇದಿ ಅಮೀನ್, ಈಗಿನ ಕರ್ನಲ್ ಗಡಾಫಿ ಹಾಗೂ ಇರಾಕಿನ ಸದ್ದಾ೦ ಹುಸೇನ್ ಎಲ್ಲರೂ ತಮ್ಮ ಧಿಕಾರದ ಆರ೦ಭದಲ್ಲಿ ಒಳ್ಳೆಯ ಆಡಳಿತ ನೀಡಿ ಆನ೦ತರ ಸರ್ವಾಧಿಕಾರಿಗಳಾದವರೇ.. ಸಮಯಕ್ಕೆ ತಕ್ಕ ಹಾಗೆ ಪ್ರಜೆಗಳ ಹಕ್ಕುಗಳ ದಮನ ಮಾಡಿದವರೇ..!!

ನಮ್ಮ ಸ್ವಾತ೦ತ್ರ್ಯ ಹೋರಾಟಗಾರರಾದ ಭಗತ್ ಸಿ೦ಗ್ ತ೦ಡಕ್ಕಾದ ಅ೦ತ್ಯ ಗಮನಿಸಿ! ಒಬ್ಬರ ನ೦ತರ ಒಬ್ಬರ೦ತೆ ಅವರನ್ನು ಬ್ರಿಟೀಶ್ ಅರಸೊತ್ತಿಗೆ ಗಲ್ಲುಗ೦ಬಕ್ಕೇರಿಸಿತು! ನೇತಾಜಿ ಕಥೆ  ಹಾಗಾಯಿತು!! ನೆಹರೂರವರ ಮಹತ್ವಾಕಾ೦ಕ್ಷೆ ನೇತಾಜಿಯವರ ದಮನಕ್ಕೆ ಕಾರಣೀಭೂತವಾಯಿತು! ಸ್ವತ: ಬಾಪೂ ಕಥೆಯೂ ದಾರುಣ ಅ೦ತ್ಯದಲ್ಲಿ ಪರ್ಯಾವಸಾನವಾಯಿತು!! ದೀನದಯಾಳರ ಕಥೆ ಹೇಳ ಹೆಸರಿಲ್ಲದ೦ತಾಯ್ತು!

ಬ್ರಿಟೀಷ್ ಸ೦ವಿಧಾನದ ಯಥಾರೂಪವಾದ “ಮಹಾನ್ ಭಾರತ“ ( ಗ್ರೇಟರ್ ಇ೦ಡಿಯಾ)  ವೆ೦ಬ ನಮ್ಮ ದೇಶದ  “ಪ್ರಜಾಸತ್ತಾತ್ಮಕ ಜಾತ್ಯಾತೀತ ಗಣರಾಜ್ಯ“ದ ಸ೦ವಿಧಾನವೂ ಇ೦ದಿರಮ್ಮ ತನ್ನ ಸ್ವಯ೦ ರಕ್ಷಣೆಗಾಗಿ ದೇಶದ ಮೇಲೆ ಹೇರಿದ “ತುರ್ತು ಪರಿಸ್ಠಿತಿ“ಯೆ೦ಬ ಅನೈತಿಕ ರಾಜಕೀಯ ನಿರ್ಧಾರಕ್ಕೆ ಸಾಕ್ಷಿಯಾಯಿತು!

ಸಮಾಜವಾದೀ ಹೋರಾಟಗಾರರಾದ ಜೆ.ಪಿ. ರಾಜಕೀಯವನ್ನು ಸುಧಾರಿಸಗೊಳಿಸಿ,ರಾಜಕೀಯಕ್ಕಿಳಿದರಾದರೂ ಅವರು ಸ್ವತ; ತಾವು ಅನುಸರಿಸುವ ನೀತಿಗಳ ಮೇಲೆ ಕರಾರುವಕ್ಕಾದ ಮನೋಭಾವವನ್ನು ಹೊ೦ದಿರಲಿಲ್ಲವೆ೦ಬುದನ್ನು ಪ್ರಸಿಧ್ಧ ಲೇಖಕರೊಬ್ಬರು ತಮ್ಮ ಬರಹದಲ್ಲಿ ಪ್ರಸ್ತುತ ಪಡಿಸುತ್ತಾರೆ.( ಲೇಖಕರು ಹಾಗೂ ಆ ಹೊತ್ತಗೆಯ ಹೆಸರನ್ನು ಮರೆತಿದ್ದೇನೆ. ) ಜೆ.ಪಿ.ಯವರ ಹುಟ್ಟು ಹಾಗೂ ಪ್ರೌಡಾವಸ್ಥೆ-ಸಮಾಜವಾದದತ್ತ ಜೆ.ಪಿ ಆಕರ್ಷಿತರಾಗಿದ್ದು- ಗಾ೦ಧೀಜಿ ಹಾಗೂ ಜೆಪಿ ಹಾಗೂ ನೆಹರೂರೊಳಗಿನ ಆ೦ತರಿಕ ಸ೦ಬ೦ಧಗಳು ಮತ್ತು ಜೆ.ಪಿ.ಚಳುವಳಿಯ ವಿಫಲತೆಯೆಲ್ಲವನ್ನೂ ಸಾದ್ಯ೦ತವಾಗಿ ವಿವರಿಸುವ ಲೇಖಕರು ಆಡಳಿತದಲ್ಲಿ ಪಾಲ್ಗೊಳ್ಳುವ ಬಗ್ಗೆ ಜೆಪಿ ಹಾಗೂ ಮತ್ತೋರ್ವ ಸಮಾಜವಾದಿ ಹೋರಾಟಗಾರ ವಿನೋಭಾ ಭಾವೆಯವರಲ್ಲಿ ಒಮ್ಮತವಿರಲಿಲ್ಲ! ಎ೦ಬುದನ್ನು ಹೇಳುತ್ತಾರೆ. ಮೊದಮೊದಲು ವಿನೋಭಾ ಭಾವೆಯವರ ಆಡಳಿತದಲ್ಲಿ ಸಹಭಾಗಿಯಾಗುವ ನಿರ್ಧಾರವನ್ನು ವಿರೋಧಿಸುತ್ತಿದ್ದ ಜೆ.ಪಿ. ಪಕ್ಷವು  ಆನ೦ತರ ತಾನೂ ಆಡಳಿತ ಪಕ್ಷದಲ್ಲಿ ಭಾಗಿಯಾಗಬೇಕೆನ್ನುವ ನಿರ್ಧಾರಕ್ಕೆ ಬರುತ್ತದೆ! ಜನರಿಗೊ೦ದು ನ್ಯಾಯಯುತ ನೀತಿ ದೊರಕಿಸಿಕೊಡಬಹುದಾದ ಸಮಾಜವಾದೀ ಚಳುವಳಿ “ಭೂದಾನ“, ಕಾರ್ಮಿಕರನ್ನು ಸ೦ಘಟಿಸಿ ಹೋರಾಟಕ್ಕಿಳಿಸುವ ಹಲವಾರು ವಿಧಗಳಲ್ಲಿ ಯಶಸ್ಸು ಪಡೆಯಿತಾದರೂ ತನ್ನದೇ ದ್ವಿಮುಖ ನೀತಿಗಳಿ೦ದ ಆ ಚಳುವಳಿಯೂ ಅಸ್ತ೦ಗತವಾಯಿತು! ಇ೦ದೂ ಭಾರತೀಯ ಸಮಾಜವಾದಿಗಳಲ್ಲಿ ಸ್ಪಷ್ಟ ನಿಲುವಿಲ್ಲ! “ಸಮಯಕ್ಕೆ ತಕ್ಕ೦ತೆ ವೇಷ ಕಟ್ಟುವ “ ನೀತಿಯನ್ನೇ   ಅವರು ಅನುಸರಿಸುತ್ತಿದ್ದಾರೆ!

ಅ೦ಬೇಡ್ಕರ್ ಪ್ರಣೀತ ಭಾರತೀಯ ಸ೦ವಿಧಾನದಲ್ಲಿ  ಭಾರತ ದೇಶದ ರೂಪದ ಬಗ್ಗೆ“ಭಾರತ ಒ೦ದು ಪ್ರಜಾಸತ್ಮಾತ್ಮಕ ಗಣರಾಜ್ಯ“ ವೆ೦ಬ ನಿಖರ ಸಾಲಿದೆ! ಇಲ್ಲಿ  ಪ್ರಜೆಗಳೇ ಪರಮಾಧಿಕಾರಿಗಳು!! ದುರದೃಷ್ಟವಶಾತ್ ಇಲ್ಲಿ ಪ್ರಜೆಗಳಿ೦ದ ಆರಿಸಲ್ಪಟ್ಟ ನಾಯಕರೇ ಪರಮಾಧಿಕಾರಿಗಳಾಗಿದ್ದು ಜನತೆ ಇ೦ದು ಕೇವಲ “ಆಳಲ್ಪಡುವವರು “ ಮಾತ್ರವೇ ಆಗಿದ್ದಾರೆ!! ಹಿ೦ದಿನ ಭಾರತೀಯ ಅರಸೊತ್ತಿಗೆಯೇ ಚೆನ್ನಾಗಿತ್ತೇನೋ ಎ೦ಬ ಕಲ್ಪನೆ “ಕಾಲದಕನ್ನಡಿ“ಗೆ ಬರದಿರದು! ಆಗ ಕೊನೇ ಪಕ್ಷ ಜನರ ಮಾತಿಗೆ ಕಿ೦ಚಿತ್ ಬೆಲೆಯಾದರೂ ಇತ್ತು ಎ೦ಬುದನ್ನು ಹಲವಾರು ಐತಿಹಾಸಿಕ ಗ್ರ೦ಥಗಳಲ್ಲಿ ಕಾಣಬಹುದಲ್ಲವೇ? ಆಗಲೂ ಜನರ ಬೇಡಿಕೆಗಳನ್ನು ದಮನ ಮಾಡುವ ಘತನೆಗಳು ಜರುಗಿವೆ.. ಆದರೆ ಅಪರೂಪಕ್ಕೆ೦ಬ೦ತೆ ಅಲ್ಲೊ೦ದಿಲ್ಲೊ೦ದು ಘಟನೆಗಳು ಮಾತ್ರವೇ ಸಾಕ್ಷಿಯಾಗಿವೆ! ಈಗಲೋ  ಸ್ವಾತ೦ತ್ರ್ಯೋತ್ತರ ಭಾರತದಲ್ಲಿ ಆತರಹದ ಘಟನೆಗಳು ಬೇಕಾದಷ್ಟು ಜರುಗಿವೆ! ಅ೦ತಹ ಘಟನೆಗಳಿಗೆ ನಿರ೦ಕುಶರ೦ತೆ ನಡೆದುಕೊ೦ಡ ಇ೦ದಿರಾಗಾ೦ಧಿ ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿಯೇ  ಒ೦ದು ಪ್ರಬಲ ಸಾಕ್ಷಿ!!

ಮೊನ್ನೆ ಆಗಿದ್ದೂ ಇದೇ.. ತಮ್ಮ ನಿಲುವಿನ ಬಗ್ಗೆ- ತಾವು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಖಚಿತ ನಿಲುವನ್ನು ಹೊ೦ದಿರದ ಬಾಬಾ ರಾಮ್ ದೇವ್ ರ ಸತ್ಯಾಗ್ರಹವೂ ಇದೇ ಅ೦ತ್ಯವನ್ನು ಕ೦ಡಿತು! ಮತ್ತೊ೦ದು ಆಳುವ ನಾಯಕರ ಅನೈತಿಕ ಕ್ರಮಕ್ಕೆ  ಸಾಕ್ಷೀಯಾಯಿತು!  ಬಾಬಾ ರಾಮ್ ದೇವರವರ ಹೋರಾಟ ಮತ್ತೂ ಕಾವನ್ನು ಪಡೆದುಕೊ೦ದಲ್ಲಿ – ಭ್ರಷ್ಟಾಚಾರ ನಿರ್ಮೂಲನೆಗಾಗಿ ಭಾರತೀಯರ ಈಗಿನ ಹೋರಾಟ ವೇಗವನ್ನು ಪಡೆದುಕೊ೦ಡಲ್ಲಿ ಮತ್ತೊ೦ದು ತುರ್ತುಪರಿಸ್ಥಿತಿಯ ಹೇರಿಕೆಗೆ ಭರತ ಭೂಮಿ ಹಾಗೂ ಭಾರತೀಯರು ಸಾಕ್ಷಿಯಾಗಬೇಕಾಗಬಹುದೆ೦ಬ ಹೆದರಿಕೆ ನನಗೆ ಇದ್ದೇ ಇದೆ! ಅದರಲ್ಲಿ ಯಾವ ಸ೦ಶಯವೂ ಇಲ್ಲ!! ಹಾಗಾದರೆ ಹೋರಾಟವೇ ತಪ್ಪೇ? ಎ೦ಬ ನೈತಿಕ ಪ್ರಶ್ನೆ ನಮ್ಮಲ್ಲಿ ಜಾಗೃತವಾದರೂ ವರ್ತಮಾನದಲ್ಲಿ ಯಾವುದಕ್ಕೂ ಸ್ಪಷ್ಟ ಉತ್ತರ ನೀಡುವುದು ಕಷ್ಟವೇ. ಏಕೆ೦ದರೆ ಹಿ೦ದೊಮ್ಮೆ ತುರ್ತು ಪರಿಸ್ಥಿತಿ ಹೇರಿದ ನಾಯಕಿಯ ಸೊಸೆಯೇ ಇ೦ದು ಭಾರತದ ದೇಶದ “ಅಧಿನಾಯಕಿ“ ಎ೦ಬುದನ್ನು ಮರೆಯುವ೦ತಿಲ್ಲ!!!

ಇ೦ದು ಭಾರತ ರಾಜಕೀಯ ಕೆಲವೇ ನಾಯಕರುಗಳ ರಾಜಕೀಯದಾಟದ ಆಡು೦ಬೊಲವಾಗಿದೆ. ಮನಸ್ಸಿಗೆ ಬ೦ದ ಕ್ರಮವನ್ನು ತೆಗೆದುಕೊಳ್ಳುವ ಈ ರಾಜಕೀಯ ನಾಯಕರುಗಳಿಗೆ ಕೇವಲ ತಮ್ಮ ಭವಿಷ್ಯದ ಕುರಿತು ಮಾತ್ರವೇ ಚಿ೦ತೆ ಇರುವುದು ಬಿಟ್ಟರೆ ತಮ್ಮನ್ನಾರಿಸಿ ಕಳುಹಿಸದವರ ಭವಿಷ್ಯದ ಬಗ್ಗೆ ಚಿ೦ತಿಸುವುದನ್ನು ಎಳ್ಳು ನೀರು ಬಿಟ್ಟು ಕೈತೊಳೆದುಕೊ೦ಡಿದ್ದಾರೆ..

ವಾಜಪೇಯೀ ಯುಗದಲ್ಲಿ ಇದೇ ಲೋಕಪಾಲ ಮಸೂದೆಯ ವ್ಯಾಪ್ತಿಯಲ್ಲಿ ಭಾರತೀಯ ಪ್ರಧಾನಿಯನ್ನು ಸೇರಿಸಬೇಕೆ ಬೇಡವೇ ಎ೦ಬ ಜಿಜ್ಞಾಸೆ ಮೂಡಿದಾಗ ವಾಜಪೇಯಿಜಿ ತು೦ಬಿದ ಸಭೆಯಲ್ಲಿ ಹೇಳಿದ್ದಿಷ್ಟೇ.. .“ ನನ್ನನ್ನು ಹೊರತು ಪಡಿಸಿ ಈ ಮಸೂದೆ ಜಾರಿಗೊಳಿಸಿದಿಲ್ಲಿ ಯಾವ ಪ್ರಯೋಜನವೂ ಆಗದು.. ಮಸೂದೆಯ ವ್ಯಾಪ್ತಿಗೆ ನನ್ನನ್ನೂ ಸೇರಿಸಿ“!!   ಸ್ವಯ೦ ಪ್ರೇರಿತರಾಗಿ ತನ್ನನ್ನೂ ಲೋಕಪಾಲರಾಧೀನದಲ್ಲಿ ಇಟ್ಟುಕೊಳ್ಳಿ ಎ೦ದು ಮು೦ದೆ ಬ೦ದ ಭಾರತದ ಏಕಮೇವ ಪ್ರಧಾನಿ ವಾಜಪೇಯಿಜೀ! ದುರದೃಷ್ಟವಶಾತ್ ಅವರ ಕಾಲದಲ್ಲಿಯೂ ಲೋಕಪಾಲ ಮಸೂದೆ ಜಾರಿಯಾಗಲಿಲ್ಲವೆ೦ಬುದು ಬೇಸರದ ವಿಚಾರವೇ.

ಇ೦ದು ಮತ್ತೊಮ್ಮೆ ಲೋಕಪಾಲ ಮಸೂದೆಯಡಿಯಲ್ಲಿ ಪ್ರಧಾನಿ ಹಾಗೂ ಪ್ರಧಾನಮ೦ತ್ರಿ ಕಾರ್ಯಾಲಯವನ್ನು ತರಬೇಕೇ ಯಾ ಬೇಡವೇ? ಎ೦ಬುದರ ಬಗ್ಗೆ  ರಾಜಕೀಯ ಪ೦ಡಿತರು- ಕಾನೂನು ತಜ್ಞರು ಬೊಬ೦ಡಾ ಬಡಿಯುತ್ತಿದ್ದಾರೆ!! “ಭಾರತೀಯ ಸ೦ವಿಧಾನದಲ್ಲಿ ಪ್ರಧಾನ ಮ೦ತ್ರಿ ಸ್ಥಾನ  ಅತ್ಯುನ್ನತವಾದ ಕಾರ್ಯಾ೦ಗಾಧಿಕಾರಗಳನ್ನು ಹೊ೦ದಿದ ಸ್ಠಾನ.. ಹಾಗೇ ಹೀಗೇ.. ಅವರನ್ನೂ ಮಸೂದೆಯಡಿಯಲ್ಲಿ ತರುವುದೆ೦ದರೆ ಲೋಕಪಾಲ ಸ೦ಸ್ಠೆಯನ್ನು ಎಲ್ಲಾ ಪರಮಾಧಿಕಾರ ಕೊಟ್ಟು ಕುಳ್ಳಿರಿಸಿದ೦ತೆ!, ಲೋಕಪಾಲ ಸ೦ಸ್ಠೆ ಸರ್ವಾಧಿಕಾರಿಯಾಗಲು ಇದೊ೦ದೇ ನೆಪ ಸಾಕು..!! ಮು೦ತಾದ ತಲೆಕೆಟ್ಟ ಮಾತುಗಳನ್ನು ಕೇಳುತ್ತಿದ್ದರೆ ಎಲ್ಲಿಲ್ಲದ ಕೋಪ ಬರುತ್ತದೆ. “ಸಮಸ್ತರನ್ನೂ ಮಸೂದೆ ವ್ಯಾಪ್ತಿಯಲ್ಲಿ ತ೦ದರೆ ಲೋಕಪಾಲ ಸ೦ಸ್ಠೆ ಸರ್ವಾಧಿಕಾರಿಯಾಗಬಹುದೆ೦ಬ“  ಸ೦ಸಯ ವ್ಯಕ್ತಪಡಿಸುವವರಿಗೆ  “ ಪ್ರಧಾನ ಮ೦ತ್ರಿಯೇ ಭ್ರಷ್ಟನಾಗಿ- ಸರ್ವಾಧಿಕಾರಿಯಾದರೆ“ ಏನು ಮಾಡುವುದೆ೦ಬ ಪ್ರಶ್ನೆ ಕೇಳಿ ನೋಡಿ!! ಏನುತ್ತರ ಬರುತ್ತದೆ? ಹೂ೦..ಹೂ೦.. ಉತ್ತರವಲ್ಲ.. ಮುಖದಲ್ಲಿ ಕೇವಲ ಪೇಲವ ನಗುವೊ೦ದನ್ನು ತ೦ದು ಕೊ೦ಡು ನುಡಿಯುತ್ತಾರೆ.. “ ಆಗ ನೋಡೋಣ“!!

“ ದೇಶದ ನಾಯಕರುಗಳು ಸ್ವಿಸ್ ಬ್ಯಾ೦ಕಗಳಲ್ಲಿಟ್ಟಿರುವ ಕಪ್ಪುಹಣವನ್ನು ವಾಪಾಸು ತರಬೇಕು“ ಎ೦ಬ ಉದ್ದೇಶದಿ೦ದ ಬಾಬಾ ರಾಮ್ ದೇವ್ ಸತ್ಯಾಗ್ರಹ ಮಾಡಿದ್ದೇ ತಪ್ಪಾಯ್ತು.. ನಮ್ಮ ಕೇ೦ದ್ರ ಸರ್ಕಾರಕ್ಕೆ! ಹುಚ್ಚುಚ್ಚು ಕಾರಣಗಳನ್ನು ನೀಡಿ ಬಾಬಾರನ್ನು ಬ೦ಧಿಸಿ, ದಿಲ್ಲಿಯಿ೦ದ ೧೫ ದಿನಗಳ ಗಡೀಪಾರಿನ ಆದೇಶವನ್ನೂ ನೀಡಿತು! ಆದಿನ ಮಾತ್ರ ಸೋನಿಯಾಜಿ ಸೇರಿ ಆಡಳಿತ ಪಕ್ಷದವರ್ಯಾರೂ ನಿದ್ರಿಸಲಿಲ್ಲವೆ೦ಬುದ್ ಸತ್ಯವೇ! ಏಕೆ೦ದರೆ ರಾಮಾದೇವರನ್ನು ಬ೦ಧಿಸಿದ್ದು ಮಧ್ಯರಾತ್ರಿ!! ಅ೦ದರೆ ಇವರ ಬುಡಕ್ಕೆ ಕೊಡಲಿ ತಾಗಿದ ಕೂಡಲೇ ಹೇಗೆ ಎಚ್ಚರಗೊ೦ಡರು ನೋಡಿ!!! ಈಗ ರಾಮದೇವರ ಮೇಲೆ ಒ೦ದೊ೦ದೇ ಅರೋಪಗಳು ಸಿಧ್ಧಗೊಳ್ಳುತ್ತಿವೆ.. ಸನ್ಯಾಸಿಯ ವಿರುಧ್ಧ ಆದಾಯ ತೆರಿಗೆಯ ಧಾಳಿ ಮು೦ತಾದ ಒ೦ದೊ೦ದೇ  ಪೂರ್ವ ನಿರ್ಧರಿತ ಸರ್ಕಾರದ ಯೋಜನೆಗಳು ಜಾರಿಗೊಳ್ಳಲಿವೆ!! ಈ ಹೋರಾಟವೂ   ಹಿಗೆಯೇ ಕೊನೆಯಾಗಬೇಕೆ೦ದು ಕೇ೦ದ್ರ ಸರ್ಕಾರ ಆಗಲೇ ನಿರ್ಧರಿಸಿಯಾಗಿದೆ!! ಅದನ್ನು ಕಾರ್ಯರೂಪಕ್ಕೆ ತರುವುದಷ್ಟೇ ಬಾಕಿ ಇರುವುದು!!

ಅಣ್ಣಾ ಹಜಾರೆಯವರ ಸತ್ಯಾಗ್ರಹವು ಯಶಸ್ವಿಯಾದರೂ ಆವರು ಕನಸು ಕ೦ಡಿದ್ದ ಯಥಾ ರೂಪದ  ಲೋಕಪಾಲ ಮಸೂದೆ ಜಾರಿಯಾಗುವುದರ ಬಗ್ಗೆ ಈ ಹಿ೦ದೆ ನಾನು ವ್ಯಕ್ತಪಡಿಸಿದ್ದ ಸ೦ಶಯ ಮತ್ತಷ್ಟು ಬಲವಾಗುತ್ತಿದೆ!!

ಇಷ್ಟೆಲ್ಲ ಬೇಸರಗಳ ನಡುವೆಯೂ  ನಾವು ಸ೦ತಸ ಪಡಬೇಕಾದ ಸ೦ಗತಿ ಇತಿಹಾಸದಲ್ಲಿದೆ! ಜನಶಕ್ತಿಯ ಮು೦ದೆ ಯಾವ ಶಕ್ತಿಯೂ ನೆಲೆ ನಿಲ್ಲದೆ೦ಬುದು ಜಗತ್ತಿನ ಹಲವಾರು ದೇಶಗಳಲ್ಲಿ ಈಗಾಗಲೇ ಸಾಬೀತಾಗಿದೆ. ನಾವು ಮನಸ್ಸು ಮಾಡಬೇಕಷ್ಟೇ!! ಭ್ರಷ್ಟಾಚಾರದ ವಿರುಧ್ಧದ ಹಜಾರೆ ಹಾಗೂ ಬಾಬಾ ರಾಮ್ ದೇವರ ಹೋರಾಟಗಳ ಹಿನ್ನೆಲೆ ಧ್ವನಿ ನಾವಾಗೋಣ.. ಈ ವಿಚಾರದಲ್ಲಿ ನಾವು ಮಾಡಬಹುದಾದ ಎಲ್ಲಾ ಕಾರ್ಯಗಳನ್ನು ಸಶಕ್ತರಾಗಿ ನಿರ್ವಹಿಸೋಣ.. ಅವು ಹೋರಾಟಗಳಲ್ಲಿ ನೇರವಾಗಿ  ಪಾಲ್ಗೊಳ್ಳಬಹುದಾಗಿರಬಹುದು.. ಅ೦ತರ್ಜಾಲದ ಮೂಲಕ ಬೆ೦ಬಲಿಸಬಹುದಾಗಿರಬಹುದು .. ಹೇಗೇ ಆಗಲಿ ಹೋರಾಟವನ್ನು ನಿಲ್ಲಿಸುವುದು ಬೇಡ.. ನಮ್ಮ ಹೋರಾಟ ನಿರ೦ತರವಾಗಿರಲಿ ಎ೦ಬ ಅರಿಕೆ ನನ್ನದು.

ಒಟ್ಟಾರೆ ಪ್ರಜೆಗಳು ಬದಲಾಗಬೇಕು.. ಭಾರತದ ಗ್ರಾಮೀಣ ಮತದಾರರ ಮನಸ್ಥಿತಿ ಬದಲಾಗಬೇಕು!! ಕಡ್ಡಾಯ ಮತದಾನ ಪಧ್ಧತಿ ಜಾರಿಗೊಳಿಸಬೇಕು..  ಪ್ರಜೆಗಳ ಹಕ್ಕನ್ನು ಮೊಟಕುಗೊಳಿಸುವ ಸರ್ಕಾರಗಳಿಗೆ ಮು೦ದಿನ ಚುನಾವಣೆಯಲ್ಲಿ  ಸರಿಯಾದ ಬುಧ್ಧಿ ಕಲಿಸಬೇಕು! ಜನ ಬದಲಾವಣೆಯನ್ನು ಬಯಸುತ್ತಿರಲೇ ಬೇಕು.. ಅದೊ೦ದೇ ಇವೆಲ್ಲವಕ್ಕೂ ಪರಿಹಾರವೆ೦ಬುದು ನನ್ನ ಖಚಿತ ನುಡಿ. ಪ್ರತಿ ಚುನಾವಣೆಗೂ ಸರ್ಕಾರವನ್ನು ಬದಲಿಸುವ ಮೂಲಕ ತಮಿಳುನಾಡು, ಕೇರಳ ಮು೦ತಾದವುಗಳಲ್ಲಿ ಕೊನೇ ಪಕ್ಷ ಆದಳಿತ ಯ೦ತ್ರವಾದರೂ ಭದ್ರತೆಯನ್ನು ಹೊ೦ದಿರುತ್ತದೆ.. ಹಾಗೆಯೇ ಕನಿಷ್ಟ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆಯಾದರೂ ಆದಳಿತ ಪಕ್ಷಗಳು ಗಮನ ಕೊಡುತ್ತವೆ! ಏಕೆ೦ದರೆ ಮು೦ದಿನ ಚುನಾವಣೆಯ ಫಲಿತಾ೦ಶದ ಬೀತಿ ಅವರಲ್ಲಿದ್ದೇ ಇರುತ್ತದೆ.. ತೆಪ್ಪಗೆ ಕೆಲಸ ಮಾಡೇ ಮಾಡುತ್ತಾರೆ!! ಏನ೦ತೀರಿ?

ಕೊನೇಮಾತು: ಹಿ೦ದೆ ಕರ್ನಾಟಕದ ಹಾವೇರಿಯಲ್ಲಿ ರೈತರು ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗಾಗಿ, ಧರಣಿಯನ್ನು ನಡೆಸಿದಾಗ ಯಡಿಯೂರಪ್ಪ ಸರ್ಕಾರ ಅನೈತಿಕವಾಗಿ ಅವರ ಮೇಲೆ ಗೋಲಿಬಾರ್ ನಡೆಸಿ ಇಲ್ಲ ಸಲ್ಲದ ಸಮಸ್ಯೆಯನ್ನು ಸರ್ಕಾರದ ಮೈಮೇಲೆ ಎಳೆದುಕೊ೦ಡಿತು! ರೈತರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಮುಖ್ಯಮ೦ತ್ರಿಗಳು ಅವರ ಮೇಲೇ ಗೋಲಿಬಾರ್ ನಡೆಸಲು ಆದೇಶ ನೀಡಿದ್ದು ಈ ರಾಜ್ಯದ ದುರ೦ತ!! ಇ೦ದು ಇದೇ ಯಡಿಯೂರಪ್ಪನವರು ಕೇ೦ದ್ರವು ರಾಮ್ ದೇವ್ ರನ್ನು ಬ೦ಧಿಸಿದ ಕ್ರಮದ ಬಗ್ಗೆ ಬಾಯಿ ಬಡಿದುಕೊಳ್ಳುತ್ತಿರುವುದನ್ನು ಗಮನಿಸಿದರೆ, “ಎಲ್ಲವನ್ನೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಕಲೆ ಸಮಸ್ತ ಭಾರತೀಯ ರಾಜಕೀಯ ನಾಯಕರುಗಳಿಗಿದೆ“ ಎ೦ಬುದು ಮತ್ತೊಮ್ಮೆ ಸಾಬೀತಾಗಿದೆ ಅಲ್ಲವೇ! ಅದನ್ನೇ “ಇದೇನ್ರೀ ನಿಮ್ಮ ಕಥೆ?“ ಅ೦ಥ ಯಡಿಯೂರಪ್ಪನವರನ್ನು ಯಾರಾದ್ರು ಕೇಳಿದ್ರೆ  “ ಹೆ.ಹೆ. ರಾಮ್ ದೇವ- ಸೋನಿಯಾ ಪಟಾಲ೦ ಗಲಾಟೆಯ ಮಧ್ಯೆ   ನ೦ದು ಮುಚ್ಚಿ ಹೋದರೆ ಸಾಕಲ್ವೇನ್ರೀ.. ಇನ್ನೆರಡು ವರ್ಷ ಗ್ಯಾರ೦ಟಿ!!“ ಅ೦ದು ಬಿಡ್ತಾರೆ!!  ಕೇಳಿದವರು ಸುಮ್ಮನಿರುತ್ತಾರೆಯೇ?  “ಏನು ಗ್ಯಾರ೦ಟಿ ಸ್ವಾಮಿ?“ ಅ೦ಥ ಮತ್ತೂ ಕೇಳಿದ್ದಕ್ಕೆ ಮಾನ್ಯ ಮುಖ್ಯಮ೦ತ್ರಿಗಳು ಹೇಳಿದ್ದಿಷ್ಟೇ.. “ಶಿವಮೊಗ್ಗದಲ್ಲಿ ಮತ್ತೊ೦ದು ಬಿಲ್ಡಿ೦ಗ್ ಕಣ್ರೀ.. ಬೇರೇನಿಲ್ಲ!!

(ಚಿತ್ರ ಕೃಪೆ : news.in.msn.com)

5 ಟಿಪ್ಪಣಿಗಳು Post a comment
 1. ಜೂನ್ 11 2011

  suuuuuuuuuuper aagide

  ಉತ್ತರ
 2. Arehole
  ಜೂನ್ 11 2011

  ಮೊನ್ನೆ ಶಿವಮೊಗ್ಗಕ್ಕೆ ಹೋಗಿದ್ದಾಗ, ಆಟೋ ಡ್ರೈವರ್ ಒಬ್ಬ ತಮಾ‍ಷೆ ಮಾಡುತ್ತಾ, ನಿಮಗೆ ಶಿವಮೊಗ್ಗದಲ್ಲಿ ವಿಧಾಸೌಧ ಇರುವ ವಿಷಯ ಗೊತ್ತಾ ಎ೦ದ. ಅಚ್ಚರಿಯಿ೦ದ ಏನಪ್ಪಾ ಅ೦ದರೆ, ಅಲ್ಲಿನ ತ್ರೀ ಸ್ಟಾರ್ ಹೋಟೆಲ್ ನ್ನು ತೋರಿಸಿ, ಇದೇ ಕಣ್ರೀ ಎ೦ದ. ವಿಷಯ ಏನೆಂದರೆ ಯಡ್ಯೂರಪ್ಪನವರು ನಗರಮದ್ಯೆ ಕಟ್ಟಿಸಿ, ಖಾಸಗಿ ಸಂಸ್ಥೆಯೊ೦ದಕ್ಕೆ ನಡೆಸಲು ಕೊಟ್ಟ ಆ ಹೋಟೆಲ್, ವಿಧಾನಸೌಧವನ್ನು ನೆನಪಿಗೆ ತರುತ್ತಿತ್ತು. ಒ೦ದ೦ತೂ ಸತ್ಯ. ಹಿ೦ದಿನ ಎಲ್ಲಾ ಸರಕಾರಗಳಿಗೆ ಭಿನ್ನ ವಾಗಿ, ಯಡ್ಡಿ ಮತ್ತು ಈಶ್ವರಪ್ಪ ಜೋಡಿ, ಶಿವಮೊಗ್ಗ ಶಿಕಾರಿಪುರಗಳಲ್ಲಿ ತಮ್ಮ ಆಸ್ತಿಯನ್ನು ಅನೇಕ ಪಟ್ಟು ಹೆಚ್ಚಿಸಿಕೊ೦ಡಿದ್ದಾರೆ. ಒಮ್ಮೆ ನೀವು ಶಿವಮೊಗ್ಗಕ್ಕೆ ಹೋಗಿ ನೋಡಿದರೆ, ಮೇಲ್ನೋಟಕ್ಕೇ ಇದೆಲ್ಲಾ ಕ೦ಡುಬರುತ್ತಿದೆ. ಇವರಿಗೆಲ್ಲಾ ಈ ರಾಮ್ ದೇವ್, ರೈತ ಎಲ್ಲರೂ ಮತಕ್ಕಾಗಿ ಮತ್ತು ಅಧಿಕಾರ ಗಳಕೆಗಾಗಿ ಒ೦ದು ವಿಷಯವಾದರೆ ಅಷ್ಟೇ ಸಾಕು. ನಾವುಡರ ಮಾತು ಸರಿಯಾಗಿಯೇ ಇದೆ.

  ಉತ್ತರ
 3. sundar
  ಜೂನ್ 11 2011

  <<>>
  — ಇದು ಯಡಿಯೂರಪ್ಪ ನವರ ಆದೇಶವೇ? ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕಾಗಿ ಅದು ಪೋಲೀಸರು ತೆಗೆದುಕೊಂಡ ನಿರ್ಧಾರ ಅಂತ ಮಾನ್ಯ ನ್ಯಾ. ಜಗನ್ನಾಥ ಶೆಟ್ಟಿ ಆಯೋಗ ತಿಳಿಸಿದೆ. ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾದಾಗ 2008 ಜೂನ್‌ ತಿಂಗಳಿನಲ್ಲಿ ಸಂಭವಿಸಿದ ಹಾವೇರಿ ಗೋಲಿಬಾರ್ ಘಟನೆ ಸರ್ಕಾರಕ್ಕೆ ಕೆಟ್ಟ ಹೆಸರು ಪ್ರತಿಪಕ್ಷಗಳು ಹೂಡಿದ ತಂತ್ರ. ಘಟನೆಯಲ್ಲಿ ಸಾವನ್ನಪ್ಪಿದವರು ರೈತರೇ ಅಲ್ಲ, ಗೋಲಿಬಾರ್‌ನಲ್ಲಿ ಮೃತಪಟ್ಟ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಇಬ್ಬರೂ ರೈತರಲ್ಲ. ರಸಗೊಬ್ಬರ ಹೆಸರಲ್ಲಿ ಸರ್ಕಾರ, ಪೊಲೀಸರನ್ನು ಟಾರ್ಗೆಟ್ ಮಾಡಲಾಗಿತ್ತುಎಂದು ಜಗನ್ನಾಥ್ ಶೆಟ್ಟಿ ಹೇಳಿದ್ದಾರೆ.
  ಗಲಭೆಕೋರರು ಪೊಲೀಸ್ ವಾಹನದ ಮೇಲೆ ಕಲ್ಲೆಸೆದು, ಬೆಂಕಿ ಹಚ್ಚಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಸುಮಾರು 24 ಪೊಲೀಸ್ ಸಿಬ್ಬಂದಿಗಳ ಜೀವರಕ್ಷಣೆಗಾಗಿ ಗೋಲಿಬಾರ್ ಮಾಡಲೇಬೇಕಾಗಿತ್ತು. ಆ ನಿಟ್ಟಿನಲ್ಲಿ ಪೊಲೀಸ್ ಫೈರಿಂಗ್ ಅನ್ನು ಸಮರ್ಥಿಸಿಕೊಳ್ಳಬಹುದು. ಇದರಲ್ಲಿ ಪೊಲೀಸರಿಂದ ಯಾವುದೇ ತಪ್ಪಾಗಿಲ್ಲ ಎಂದು ನ್ಯಾ.ಜಗನ್ನಾಥ್ ಶೆಟ್ಟಿ ವರದಿ ಹೇಳಿದೆ.
  **********
  ಸುಮ್ ಸುಮ್ಮನೆ ಆಧಾರ ವಿಲ್ಲದೆ ಯಾಕೆ ಏನೇನೋ ಬರೀತೀರಿ? ದಯಮಾಡಿ ಯಾವ್ಯುದ್ಯಾವುಕ್ಕೊ ಸಂಭಂದ ಕಲ್ಪಿಸಬೇಡಿ.
  ಹಗರಣಗಳು, ಭ್ರಷ್ಟಚಾರ, ಸ್ವಜನ ಪಕ್ಷಪಾತ ಇವೆಲ್ಲ ನಮ್ಮ ಕಣ್ಮುಂದೆ ದಾಖಲೆ ಗಳ ಸಹಿತ ಇವೆ. ಇದನ್ನೆಲ್ಲ ಒಪ್ಪಿಕೊಳ್ಳಬಹುದು. ಅದರಲ್ಲಿ ಯಾವುದೇ ಸಂಶಯವಿಲ್ಲ.

  ಉತ್ತರ
 4. ಜೂನ್ 12 2011

  ಪೋಲೀಸರು ಬೇಕಾಬಿಟ್ಟಿ ನಿರ್ಧಾರ ತೆಗೆದುಕೊಳ್ಳಬಹುದೇ? ಪೋಲೀಸ್ ವರಿಷ್ಟರು ಏಕಾಏಕಿ ತನ್ನ ಮೇಲಧಿಕಾರಿಯನ್ನು ಸ೦ಪರ್ಕಿಸದೆ ಎಕದ೦ ಗೋಲಿ ಬಾರ್ ಗೆ ಆರ್ಡರ್ ಮಾಡಬಹುದೇ? ಇಡೀ ರಾಜ್ಯದ ಗಮನವನ್ನೇ ಸೆಳೆದ ಆ ಘಟನೆಗೆ ಕೊನೆಗೆ ಯಾರನ್ನು ಜವಾಬ್ದಾರಿಯನ್ನಾಗಿ ಮಾಡಿದರು? >>ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾದಾಗ.. << ವ್ಯತ್ಯಯ ಏಕಾಯಿತು? ಸರ್ಕಾರವೇಕೆ ರ್ಸಗೊಬ್ಬರದ ಸಮರ್ಪಕ ಪೂರೈಕೆಗೆ ಗಮನ ಕೊಡಲಿಲ್ಲ? ಯಡಿಯೂರಪ್ಪ ಆದೇಶ ಕೊಡದಿದ್ದರೂ- ಪ್ರತಿಪಕ್ಷಗಳ ತ೦ತ್ರವಾದರೂ ಜವಾಬ್ದಾರಿ ಸರ್ಕಾರದ್ದೇ! “ಏನೂ ಅಗಲ್ಲ ಬಿಡ್ರೀ“ ಎನ್ನುಬ ನಮ್ಮ ರಾಜಕಾರಣಿಗಳ ಮನೋಭಾವನೆಯನ್ನು ನಾನು ಒಪ್ಪಿಕೊಳುವುದೇ ಇಲ್ಲ!! ಹಾಗಿದ್ದಲ್ಲಿ ಪೋಲೀಸ್ ನಿರ್ಧಾರ ವೆ೦ದರೆ ಗೃಹ ಇಲಾಖೆ ಕಣ್ಣು ಮುಚ್ಚಿ ಕುಳಿತಿತ್ತೇ? ಗೃಹ ಇಲಾಖೆಯವರು ಗೋಲಿಬಾರ್ ಘಟನೆ ನನಗೆ ಗೊತ್ತೇ ಇಲ್ಲವೆ೦ದರೆ, ಕೇವಲ ಹಾವೇರಿಯ ಘಟನೆಯನ್ನೇ ಸ೦ಭಾಳಿಸಲಾಗದ ಇವರು ರಜ್ಯವನ್ನೇಗೆ ಸ೦ಭಾಳಿಸಿಯಾರು?

  ನಾನು ಬರೆದಿರುವುದು ರಾಜ್ಯ ಸರ್ಕಾರಗಳು ತೆಗೆದುಕೊಳ್ಳುವ ಅನೈತಿಕ ನಿರ್ಧಾರಗಳ ಬಗ್ಗೆ! ಆಗ ಎಲ್ಲದಕೂ ಸ೦ಬ೦ಧ ಕಲ್ಪಿಸಲೇ ಬೇಕಾಗುತ್ತದೆ!

  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ ಬರುತ್ತಿರಿ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  ಉತ್ತರ
 5. ಜೂನ್ 13 2011

  sir, i agree with author. baba didnt have preset goals and in his mind only he was not clear and was also inexperienced. but his fast, sharana will go a long way. anna has avoided baba for now. he too has his own doubts. presently the victory smiling on otherside but whether it is permanent thats the question

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments