ವಿಷಯದ ವಿವರಗಳಿಗೆ ದಾಟಿರಿ

ಜೂನ್ 12, 2011

12

ಕನ್ನಡಿಗರು ಬಿಟ್ಟಿ ಬಿದ್ದಿಲ್ಲ ಅನ್ನುವುದು ನೆನಪಿರಲಿ…!

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಹೊಟ್ಟೆ ಪಾಡಿಗೆ ಅಂತ ಹುಟ್ಟಿದ ಊರು ಬಿಟ್ಟು ನಮ್ಮ ಬೆಂಗಳೂರಿಗೆ ಬಂದು, ಇಲ್ಲಿನ ಅನ್ನ,ನೀರು ಕುಡಿದು ’ಕನ್ನಡ ಕಲಿಯಿರಿ’ ಅಂದರೆ ನಮ್ಮ ವಿರುದ್ಧವೇ ತಿರುಗಿ ಬಿದ್ದು ಕನ್ನಡ/ಬೆಂಗಳೂರಿನ ಬಗ್ಗೆ ದ್ವೇಷಕಾರುವುದು ಒಂದು ರೀತಿಯ ಸುಲಭದ ತುತ್ತಾಗಿದೆ.

ಮೊನ್ನೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ “ಐಟಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪ್ರವಾಹದಲ್ಲಿ ಕರ್ನಾಟಕ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವವರು ಇನ್ನು ಮುಂದೆ ಪ್ರಾಥಮಿಕ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಲಿದೆ” ಅನ್ನುವ ಪ್ರಸ್ತಾವನೆಯೊಂದನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು.ಇದೇ ವಿಷಯವನ್ನ ಬೆಂಗಳೂರು ಮಿರರ್ ಅನ್ನುವ ಇಂಗ್ಲೀಷ್ ಪತ್ರಿಕೆ ಅನ್ಯ ಭಾಷಿಗರನ್ನ ಉದ್ರೇಕಿಸುವ ರೀತಿಯಲ್ಲಿ ಬರೆದಿದೆ.ಅಲ್ಲಿನ ಪ್ರತಿಕ್ರಿಯೆಗಳನ್ನ ನೋಡಿದರೆ ಬರೆದವರನ್ನ ಅಟ್ಟಾಡಿಸಿ ಬಡಿಯಬೇಕು ಅನ್ನಿಸುತ್ತದೆ.

ಈ ನೆಲದಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾದರೆ, ಈ ನೆಲದ ಭಾಷೆ,ಸಂಸ್ಕೃತಿ,ಆಚಾರಗಳಿಗೆ ಬೆಲೆ ಕೊಡಬೇಕು ಅನ್ನುವ ಕಾಮನ್ ಸೆನ್ಸ್ ಇವರಲ್ಲಿ ಇಲ್ಲ ಅನ್ನುವುದಕ್ಕಿಂತ, ಯಾವುದಕ್ಕೂ ಪ್ರತಿಕ್ರಿಯಿಸಿದ ಕನ್ನಡಿಗರ ಧೋರಣೆಯನ್ನೆ ಇಂತ ಜನಗಳು ನಮ್ಮ ದೌರ್ಬಲ್ಯ ಅಂದುಕೊಂಡಿದ್ದಾರೆ.ಇಲ್ಲದಿದ್ದರೆ ಫ಼ೇಸ್ಬುಕ್ಕಿನಲ್ಲಿ ಹಾಲಿಡೇಐಕ್ಯು ಕಂಪೆನಿಯ ಉದ್ಯೋಗಿ ರಾಬಿನ್ ಚುಗ್ ಅನ್ನುವ ಪರದೇಶಿ ಕನ್ನಡಿಗರಿಗೆ ಫ಼ಕ್ ಆಫ಼್ ಅನ್ನುತ್ತಿರಲಿಲ್ಲ ಅಲ್ಲವಾ? ಆ ಕಿಡಿಗೇಡಿ ಕೆಲಸ ಮಾಡುವ ಕಂಪೆನಿಯ ವಿಳಾಸವಿಲ್ಲಿದೆ. ಅವರಿಗೊಂದು ಮಿಂಚೆ ಬರೆದು (ಭಾಷೆ ವಿಷಯ ಮುಟ್ಟಿಸುವಂತಿರಲಿ,ಬೈಗುಳ ದಯವಿಟ್ಟು ಬೇಡ) ಈ ಮಣ್ಣಿನ ಭಾಷೆಯ ಬಗ್ಗೆ ಗೌರವ ಇಲ್ಲದ ಇಂತವರನ್ನ ನಿಮ್ಮ ಕಂಪೆನಿಯಲ್ಲಿ ಇಟ್ಟುಕೊಳ್ಳುವಿರಾ ಅಂತಲೇ ಕೇಳಬೇಕು.ಮೊದಲೆ ಅವನಿಗೆ ಇಲ್ಲಿನ ರೀತಿ ರಿವಾಜುಗಳ ಬಗ್ಗೆ ತಕರಾರುಗಳಿವೆ.ಇಂತ ಹುಡುಗನನ್ನ ವಾಪಸ್ ಅವನ ಮನೆಗೆ ಕಳಿಸೋದು ನಮ್ಮ ಕರ್ತವ್ಯವಲ್ಲವೇ ಗೆಳೆಯರೇ?

ಫ಼ೇಸ್ಬುಕ್ಕಿನಲ್ಲಿ,ಮಿಂಚೆಗಳ ಮೂಲಕ ಮತ್ತೆ ಕರೆ ಮಾಡಿ ಗದರಿಸಿದ ಮೇಲೆ, ನಂದು ತಪ್ಪಾಯ್ತು ಕ್ಷಮಿಸಿಬಿಡಿ ಅನ್ನುತಿದ್ದಾನೆ ಈತ. ನಾವುಗಳು ಕೇಳದೆ ಸುಮ್ಮನಿದ್ದಿದ್ದರೆ ಆತನಿಗೆ ಜ್ನಾನೋದಯವಾಗುತ್ತಿರಲಿಲ್ಲ.ಈಗ ಎಲ್ಲರೂ ದಬಾಯಿಸಿದ ಮೇಲೆ ಭಯಕ್ಕೆ ಕ್ಷಮೆ ಕೋರುತಿದ್ದಾನೆ ಹೊರತು ತಪ್ಪಿನ ಅರಿವಾಗಿಯಲ್ಲ.ಇವನ ಮೇಲಿನ ಕ್ರಮವೇ ಇಂತವರಿಗೊಂದು ಪಾಠವಾಗಲಿ.ನಾವು ಕನ್ನಡಿಗರು ಯಾವಗಲೂ ವಿಶಾಲ ಹೃದಯಿಗಳಾಗುವುದು ಬೇಡ ಅಂತ ನನ್ನಿಸಿಕೆ

ಇಷ್ಟಕ್ಕೂ, ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ. ಹಿಂದೊಮ್ಮೆ ‘ಸ್ಯಾನ್ ಮಿತ್ರ’ ಅನ್ನೋ ಕೊಲ್ಕತ್ತದವ ಅಮೇರಿಕನ್ ಮೂಲದ ಕಂಪೆನಿಯಿಂದ ಇಂತದ್ದೆ ಕೆಲ್ಸಕ್ಕೆ ಕೈ ಹಾಕಿ, ಬೆಂಗಳೂರಿಂದ ಹೊರದಬ್ಬಿಸಿಕೊಂಡಿದ್ದ, ಆಮೇಲೆ ಸಾಸ್ಕೇನ್ ಕಂಪೆನಿಯಲ್ಲಿ ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಉದ್ಯೋಗಿಯಿಂದಾಗಿ ಆ ಕಂಪೆನಿ ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ತುತ್ತಾಗಿತ್ತು.ಕಳೆದ ವರ್ಷ ಐಟಿಸಿ ಕಂಪೆನಿಯಲ್ಲಿ ಕೆಲಸ ಮಾಡುತಿದ್ದ ಪ್ರಶಾಂತ್ ಚುಬೇಯ್ ಕೊಬ್ಬು ಜಾಸ್ತಿಯಾಗಿ My Love for South Indians ಅನ್ನೋ ಥರ್ಡ್ ರೇಟ್ ಲೇಖನ ಬರೆದಿದ್ದು ಅಲ್ಲದೆ, ಪುಣ್ಯಾತ್ಮ ಅದನ್ನ ಕಂಪೆನಿಯ ಮಿಂಚೆ ವಿಳಾಸದಲ್ಲಿ ತಿರುಪತಿ ಪ್ರಸಾದದಂತೆ ಹಂಚಿ ಸಿಕ್ಕಿ ಬೀಳಬಾರದಿದ್ದವರ ಕೈಗೆ ಸಿಕ್ಕಿ ಬಿದ್ದು, ಅವನು ಮಾಡಿದ ತಪ್ಪಿಗೆ ಕೆಲಸ ಕಳೆದುಕೊಂಡ.

ಇವರೆಲ್ಲ ಸಾಲದು ಅಂತ ಮತ್ತೊಂದೆಡೆ ಇಂಗ್ಲೀಷ್ ಪತ್ರಿಕೆಗಳ ಕನ್ನಡ ವಿರೋಧಿ ನೀತಿ.ಯಾವಾಗಲೋ ಒಂದ್ ಸರಿ ಬಂದ್ರೆ ಎಲ್ಲೋ ಅಪ್ಪಿ ತಪ್ಪಿ ಹೀಗ್ ಬರ್ದಿರ್ಬೇಕು ಅನ್ಕೊಬಹುದಿತ್ತೇನೋ,ಆದ್ರೆ ಒಬ್ಬರಾದ ಮೇಲೆ ಒಬ್ರು ಸರದಿಯಲ್ಲೇನೋ ಅನ್ನುವಂತೆ ಈ ಆಂಗ್ಲ ಪತ್ರಿಕೆಗಳು ಕನ್ನಡಿಗರ ಹಕ್ಕು ಪ್ರತಿಪಾದನೆಯನ್ನ ಮಹಾಪರಾದವೇನೋ ಎಂಬಂತೆ ಚಿತ್ರಿಸಲು ಹೊರಟಿವೆಯೇ?

ಬೆಂಗಳೂರು ಮಹಾನಾಗರ ಪಾಲಿಕೆಯ ಚುನಾವಣೆಯ ಸಮಯದಲ್ಲಿ, ಮತ ಯಂತ್ರದಲ್ಲಿ ‘ಕನ್ನಡ’ಬಳಸಿದ್ದನ್ನು ಅಕ್ಷೇಪಿಸಿದ ಲೋಕಸತ್ತಾ ಪಕ್ಷದ ಕೆಲವರ ಮಾತುಗಳನ್ನ ಪ್ರಕಟಿಸಿ ಅದಕ್ಕೊಂದು ಇಂತ ಕಿತ್ತೋಗಿರೋ ಶೀರ್ಷಿಕೆ ಕೊಟ್ಟಿದ್ದು ಯಾಕೆ? ಯಾರ ಮಧ್ಯೆ ಬೆಂಕಿ ಹಚ್ಚೋಕೆ ಹೊರಟಿದ್ದಾರೆ ಇವ್ರು? ಒಂದು ಊರಿಗೆ ಬಂದ ಮೇಲೆ ಅಲ್ಲಿನ ಜನರ ರೀತಿ,ರಿವಾಜುಗಳನ್ನ ಕಲಿತು ಅವರೊಂದಿಗೆ ಬೆರೆತು ಬದುಕಬೇಕಾಗಿರುವುದು ಹೊರಗಿನಿಂದ ಬಂದವರ ಕರ್ತವ್ಯ.ಅವರಿಗೋಸ್ಕರ ಈ ನೆಲೆದಲ್ಲೇ ಹುಟ್ಟಿ ಬೆಳೆದು ಬಂದವರು ನಮ್ಮ ಭಾಷೆನ ಬಿಟ್ಟು ಇಂಗ್ಲಿಷ್ ಕಲಿಬೇಕಾ? ನಮ್ಮ್ ಕರ್ಮಕ್ಕೆ ಕೆಲ ಕನ್ನಡಿಗರು ಮನೆಗೆ ತರಿಸೋದು ಆಂಗ್ಲ ಪತ್ರಿಕೆಯನ್ನೇ.ಇನ್ನ ಅದ್ರಲ್ಲಿ ಇಂತ ವಿಷಯಗಳನ್ನ ಇಲ್ಲದ ರೂಪದಲ್ಲಿ ಪ್ರೆಸೆಂಟ್ ಮಾಡಿದ್ರೆ,ಅದನ್ನ ಓದಿದವರು ಹಾಗೆ ಅರ್ಥ ಮಾಡ್ಕೊತಾರೆ.ಆಮೇಲೆ ಈ ಕನ್ನಡ ಸಂಘಟನೆಗಳು ಜಾಸ್ತಿ ಆಡ್ತಾವೆ ಹಂಗೆ ಹಿಂಗೆ ಬಿಟ್ಟಿ ಮಾತುಗಳಿಗೇನು ಬರಾನ?

ನಮ್ಮ್  ಹಕ್ಕುಗಳನ್ನ ಕೊಡಿ ಸರ್ ಅಂದ್ರೆ ,ಅದು ಅಪರಾಧವೇನೋ ಅನ್ನೋ ರೀತಿಲಿ ಚಿತ್ರಿಸುವುದ್ಯಾಕೆ? ಒಂದು ನೆಲದ ಆಚಾರ,ವಿಚಾರ,ಸಂಸ್ಕೃತಿ,ಭಾಷೆ ಇವುಗಳನ್ನ ಅರ್ಥ ಮಾಡಿಕೊಳ್ಳುವ ಮನಸ್ಥಿತಿ ನಮ್ಮ ಆಂಗ್ಲ ಪತ್ರಿಕೆಗಳಿಗೆ ಬರುವುದು ಯಾವಾಗ?

ಇನ್ನೊಂದು ಕಡೆ ಜಾಹಿರಾತು ಫಲಕಗಳಲ್ಲಿ ದುರ್ಬಿನು ಹಾಕಿದರೂ ಕಾಣದ ಕನ್ನಡ. ಹಾಗೆ ಮಾಲ್,ರೆಸ್ಟೋರೆಂಟ್ಗಳಲ್ಲಿ ಕನ್ನಡ ವಾತಾವರಣಕ್ಕಾಗಿ ಬೇಡಿಕೊಳ್ಳುವ ದೈನೇಸಿ ಸ್ಥಿತಿಗೆ ಬಂದು ನಿಂತಿದ್ದೇವೆ.ನಮ್ಮ ನೆಲದಲ್ಲೇ ಪರದೇಶಿಗಳಂತೆ! ಒಂದೆಡೆ ಕಂಪೆನಿಗಳಿಗಾಗಿ ಭೂಮಿ ಕೊಟ್ಟ ಇಲ್ಲಿನ ಜನರ ಮಕ್ಕಳು ಅದೇ ಭೂಮಿಯಿಂದೇಳುವ ಕಂಪೆನಿ/ಮಾಲ್/ರೆಸ್ಟೋರೆಂಟ್ಗಳಲ್ಲಿ ‘ಸಿ’ ‘ಡಿ’ ದರ್ಜೆಯ ನೌಕರರಾದರೆ,ಅವರ ಮೇಲೆ ಬಂದು ಕೂರುವ ಅನ್ಯಭಾಷಿಕರು ಅವರ ತಲೆಯ ಮೇಲೆ ಕೂರುತ್ತಾರೆ.ಕಡೆಗೆ ಅಲ್ಲಿ ಅವರ ದರ್ಬಾರು ಶುರುವಾಗುತ್ತದೆ.ಹಾಗಂತ ನಾನು ಎಲ್ಲ ಅನ್ಯಭಾಷಿಕರನ್ನುದ್ದೇಶಿಸಿ ಹೀಗೆ ಬರೆಯುತ್ತಿಲ್ಲ.ಅಲ್ಲಿಂದ ಇಲ್ಲಿ ಬಂದು ನಮ್ಮ ನೆಲ,ಭಾಷೆಯ ಬಗ್ಗೆ ತುಚ್ಚವಾಗಿ ಮಾತನಾಡುವ ಕಿಡಿಗೇಡಿಗಳಿಗೆ ಮಾತ್ರ.

ಇನ್ಮುಂದೆ ಇಂತ ಕಿಡಿಗೇಡಿ ಕೃತ್ಯವನ್ನ ‘ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕ’ ಗುಂಪಿನಲ್ಲಿ ಹಂಚಿಕೊಳ್ಳೋಣ. ಮತ್ತು ಅಂತವರಿಗೆ ಶಾಂತಿ ಮಾರ್ಗದಲ್ಲಿಯೇ ಬುದ್ದಿ ಕಲಿಸೋಣ.

ಬನ್ನಿ,ಇಂತ ಅನಿಷ್ಟಗಳ ವಿರುದ್ಧ ಒಂದಾಗೋಣ.ಕನ್ನಡಿಗರು ಬಿಟ್ಟಿ ಬಿದ್ದಿಲ್ಲ ಅನ್ನುವುದು ನೆನಪಿಸುತ್ತಲೇ, ನಮ್ಮ ನಿರ್ಲಿಪ್ತತೆ ನಮ್ಮ ದೌರ್ಬಲ್ಯವಲ್ಲ ಅಂತ ಇಂತ ಕನ್ನಡ ದ್ವೇಷಿಗಳಿಗೆ ತೋರಿಸೋಣ.

12 ಟಿಪ್ಪಣಿಗಳು Post a comment
 1. P.Ramachandra, Ras Laffan- Qatar
  ಜೂನ್ 12 2011

  ಕನ್ನಡಮ್ಮನ ಮಾನಭಂಗ ಮಾಡಿ , ನಂತರ sorry ಅಂತ ಹೇಳಿದಕ್ಕೆ ಇವರನ್ನು ಹೀಗೆ ಬಿಟ್ಟರೆ ಮುಂದೆ ಇನ್ನೊಬ್ಬ ವಲಸೆಗಾರ ಮತ್ತೊಮ್ಮೆ ಇಂತಹ ಕೆಟ್ಟ ಚಾಳಿಯನ್ನು ಪುನಃ ಪ್ರಾರಂಭಿಸಬಹುದು.

  -ಪ.ರಾಮಚಂದ್ರ,
  ರಾಸ್ ಲಫ್ಫಾನ್, ಕತಾರ್.

  ಉತ್ತರ
 2. ಜೂನ್ 12 2011

  ರಾಬಿನ್ ಕಫ್ ಅನ್ನೋ ವ್ಯಕ್ತಿಯ ಜೊತೆ ನಾನು ಮೊಬೈಲಿನಲ್ಲಿ ಮಾತಾಡಿದೆ. ಅವನಿಗೆ ಅವನ ತಪ್ಪಿನ ಅರಿವಾಗಿದೆ ಅಂತ ಅನ್ನಿಸಿತು. ಆ ವ್ಯಕ್ತಿಗೆ ಕನ್ನಡ ನಾಡು, ಕನ್ನಡಿಗರ ಬಗ್ಗೆ ತಿಳಿಹೇಳಿದ್ದೇನೆ. ಅವನು ಕ್ಷಮೆ ಯಾಚಿಸಿದ್ದಾನೆ. “ಒಂದು ವರ್ಷದಲ್ಲಿ ವಲಸಿಗರು ಕನ್ನಡ ಕಲಿಯಲೇಬೇಕೆಂದು ಕಾನೂನು ತರುವುದನ್ನು ನಾನು ವಿರೋಧಿಸಿದೆ. ಆದರೆ ನಾನು ಉಪಯೋಗಿಸಿದ ಶಬ್ದದ ಬಗ್ಗೆ ನನಗೆ ಪಶ್ಚಾತ್ತಾಪವಿದೆ. ಅದಕ್ಕಾಗಿ ನಾನು ಕನ್ನಡಿಗರಲ್ಲಿ ಕ್ಷಮೆ ಯಾಚಿಸುತ್ತೇನೆ. ಈಗಾಗಲೇ ನನ್ನ ಫೇಸ್ಬುಕ್ ಪ್ರೊಫೈಲಿನಲ್ಲಿ ಕ್ಷಮೆ ಕೋರಿದ್ದೇನೆ” ಎಂದು ಅಲವತ್ತುಕೊಂಡ. ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ನೀನು ಕನ್ನಡ ಕಲಿಯದಿರುವುದು ನಾಚಿಕೆಯ ವಿಷಯವೇ ಸರಿ ಎಂದು ಆತನಿಗೆ ಹೇಳಿದ್ದೇನೆ. ಮುಖತಃ ಭೇಟಿ ಮಾಡಿ ಅಥವಾ ದೂರವಾಣಿಯ ಮುಖಾಂತರ ಕನ್ನಡ ಹೇಳಿಕೊಡುವುದಾಗಿಯೂ ತಿಳಿಸಿದ್ದೇನೆ. ಇದಕ್ಕೆ ಅವನೂ ಒಪ್ಪಿದ್ದಾನೆ. ಅಲ್ಪ ಸ್ವಲ್ಪ ಕನ್ನಡ ಮಾತಾಡುವ ಆತನಿಗೆ ಸಂಪೂರ್ಣ ಕನ್ನಡ ಕಲಿಸಿ “ಕನ್ನಡ ಕಸ್ತೂರಿ” ಎಂದು ಅದೇ ನಾಲಿಗೆಯಿಂದ ಹೇಳಿಸುವ ಪಣ ತೊಟ್ಟಿದ್ದೇನೆ.

  ಉತ್ತರ
 3. sriharsha
  ಜೂನ್ 12 2011

  ಹಿಂದೊಮ್ಮೆ ಒಬ್ಬ ಇದೇ ರೀತಿ ಮಾತನಾಡಿದ್ದ. ಅವನಿಗೆ ಕಳಿಸಿದ ಮೇಲ್ ಗೆ ರಿಪ್ಲೇ ಮಾಡಿ ಕ್ಷಮೆಯಾಚಿಸಿದ್ದ.
  ಅಲ್ಲದೇ ಮೇಲ್ ಮಾಡಿದ ಪ್ರತಿಯೊಬ್ಬರಿಗೂ ಕ್ಷಮೆಯಾಚಿಸಿದ್ದ.
  ಇವರಿಗೆ ಬಿದ್ದಿ ಕಲಿಸದಿದ್ದರೆ ನಮಗೆ ಉಳಿಗಾಲವಿಲ್ಲ.

  ವಿಜಯ್ ಅವರಿಗೆ ಅಭಿನಂದನೆಗಳು.

  ಉತ್ತರ
 4. ಜೂನ್ 12 2011

  ರಾಕೇಶ್ ಅವರೇ, ನಿಮ್ಮ ಮಾತು ನಿಜ… ಆಂಗ್ಲ ಪತ್ರಿಕೆಗಳನ್ನೋದಿದರೆ, ನಮ್ಮ ನಾಡಿನ ಭಾಷೆ, ಸಂಸ್ಕೃತಿಯನ್ನು ಹಾಳುಗೆಡವಲೆಂದೇ ಇರುವವೆಂದು ಅನಿಸುವುದು… ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಸಲ್ಲಬೇಕಾದ ಗೌರವವನ್ನು ಪಡೆಯಲು ಹೋರಾಟ ಬೇಕಾಗಿರುವುದು ಬೇಸರದ ಸಂಗತಿ.

  ಉತ್ತರ
 5. ಜೂನ್ 13 2011

  ನಾನ೦ತು ಅವರ ಕ೦ಪನಿಯ ಅ೦ತರ್ಜಾಲ ತಾಣಕ್ಕೆ ಬೇಟಿ ಕೊಟ್ಟು. ಅವರಿಗೆ ಒ೦ದು ಇ ಮೇಲ್ ಕಳಿಸಿದ್ದೇನೆ
  ಯಾರದರು ಅಷ್ತೆ ಸಾಮಾಜಿಕ ಜವಾಬ್ದಾರಿ ಇಲ್ಲದೆ ಸಾಮಾಜಿಕ ಸ೦ಪರ್ಕ ಮಾದ್ಯಮಗಳಲ್ಲಿ ಎನೊನೊ ಬರೆಯುವುದನ್ನು
  ನಾವು ಎ೦ದಿಗು ಸಹಿಸುವುದಿಲ್ಲ. ಅ೦ತವರನ್ನು ಕೆಲಸದಲ್ಲಿ ಇಡಬಾರದೆ೦ದು ಕೋರಿದ್ದೇನೆ
  ಯಾಕೆ೦ದರೆ ಅವನಿಗೆ ಇದು ಮನವರಿಕೆಯಾಗಬೇಕು ಹಾಗೂ ಅವನು ಬೇರೆಯವರಿಗು ಇದರ ಬಗ್ಗೆ ಹೇಳಬೇಕು.

  ಉತ್ತರ
 6. ಜೂನ್ 13 2011

  prabhakar@holidayiq.com
  Reply from HolidayIQ Company HR,

  Dear Sir/Madam,

  My name is Prabhakar Mysore and I am writing to you on behalf of HolidayIQ in connection with the objectionable post posted on Facebook by our employee Robin Chugh.

  At the outset, I would like to communicate to you that we condemn what Robin has done. Robin has posted the matter in her personal capacity and it does not in anyway reflect our organization’s view or attitude. However, as a responsible corporate citizen that has deep respect for the land we operate in and its language, our organization condemns Robin’s behaviour and attitude. We have taken exception to what he has done.

  We have issued a stern warning to Robin to not repeat this behaviour. In view of the fact that Robin has withdrawn his post, apologized publicly on Facebook and our warning to him, I request you too to accept his apologies and pardon him.

  Prabhakar Mysore
  Head – HR
  HolidayIQ

  ಉತ್ತರ
  • ಜೂನ್ 13 2011

   Please observe the bellow sentence which was mentioned in the above letter of Mr.Prabhakar Mysore
   Head – HR,HolidayIQ:
   1) Robin has posted the matter in her personal capacity …
   2) apologized publicly on Facebook and our warning to him,
   ( I AM CONFUSING ROBIN CHUGH MALE OR FEMALE)

   ಉತ್ತರ
 7. ಜೂನ್ 14 2011

  ಇದರಲ್ಲಿ ಅವನು ಅಥವಾ ಅವಳು ಮುಖ್ಯವಲ್ಲ. ಅವರು ಮಾಡಿದ ತಪ್ಪು ಅವರಿಗೆ ಮತ್ತು ಅವರ ಕ೦ಪನಿಯವರಿಗೆ ಅರ್ಥವಾದರೆ ಸಾಕು

  ಉತ್ತರ
 8. ನವೆಂ 11 2012

  ದಕ್ಷಿಣದ ವಲಸೆಗಾರರು ಬಹುಮಟ್ಟಿಗೆ ಕನ್ನಡವನ್ನು ಅವಹೇಳನ ಮಾಡುವುದಿಲ್ಲ. ಉತ್ತರದಿಂದ ಬಂದವರದೇ ಅಸಾಧ್ಯ ಪೊಗರು. ಉತ್ತರದವರು ಚೆನ್ನಯ್ನಲ್ಲಿ ಬಾಲ ಬಿಚ್ಚುವುದಿಲ್ಲ. ಬೆಂಗಳೂರಿನಲ್ಲಿ ಮಾತ್ರ ಅವರನ್ನು ಹಿಡಿಯುವವರೇ ಇಲ್ಲ. ಕನ್ನಡಿಗರಿಗೂ ತಮಿಳರಂತೆ ದ್ರಾವಿಡತನ ಬೇಕು. ಅಷ್ಟಕ್ಕೂ ಜನಾಂಗೀಯವಾಗಿ ಬಹುಮಟ್ಟಿಗೆ ನಾವೂ ದ್ರಾವಿಡರೆ. ನಮ್ಮ ಕನ್ನಡವಂತೂ ಒಂದು ಇಂಪಾದ ದ್ರಾವಿಡ ನುಡಿಯೆ.

  ಉತ್ತರ

Trackbacks & Pingbacks

 1. ದೇಶ – ಭಾಷೆಗಳ ನಡುವೆ | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments