ವಿಷಯದ ವಿವರಗಳಿಗೆ ದಾಟಿರಿ

ಜೂನ್ 15, 2011

8

ಹಣ ಕೊಟ್ಟು ಅತಿಥಿಯಾಗಿ..!

‍ನಿಲುಮೆ ಮೂಲಕ

ಅರೆಹೊಳೆ ಸದಾಶಿವ ರಾವ್

ಆಶ್ಚರ್ಯವಾಗಬಹುದು ನಿಮಗೆ ಈ ಲೇಖನದ ರ್ಶೀಕೆ ನೋಡಿ. ಇದು ಇತ್ತೀಚಿನ ಒಂದು ಹವ್ಯಾಸವಾಗಿ ಬಿಟ್ಟಿದೆ. ಇತ್ತೀಚೆಗೆ ನನಗೊಂದು ಸಭೆಗೆ ಅತಿಥಿಯಾಗಿ ಭಾಗವಹಿಸಲು ಕರೆ ಬಂತು. ಸಂತಸದಿಂದ ಒಪ್ಪಿಕೊಂಡೆ. ಅಂತಹಾ ವಿಶೇಷ ವ್ಯಕ್ತಿ ನಾನಲ್ಲ ಎಂಬ ಅರಿವಿದ್ದೂ ಒಪ್ಪಿಕೊಂಡೆ. ಒಂದು ವಾರ ಕಳೆದಿತ್ತು. ಆಯೋಜಕರಿಂದ ಮತ್ತೆ ಕರೆ ಬಂತು. ಅತಿಥಿಯಾಗಿ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು. ಮುಂದುವರಿದು ಕಾರ್ಯಕ್ರಮದ ಒಟ್ಟೂ ಖರ್ಚಿನ ಬಗ್ಗೆ ನಾನು ಕೇಳದೆಯೇ ಹೇಳುತ್ತಾ, ನಿಮ್ಮಿಂದ ನಾವು ಕನಿಷ್ಟ ಇಂತಿಷ್ಟು ನಿರೀಕ್ಷಿಸುತ್ತಿದ್ದೇವೆ ಎಂದರು. ಒಮ್ಮೆ ಆಶ್ಚರ್ಯವಾದರೂ, ನಾನು ಅತಿಥಿಯಾಗಿ ಬರುತ್ತಿದ್ದೂ, ನಾನೇ ವಂತಿಗೆ ನೀಡಬೇಕಾದ ಅನಿವಾರ್ಯತೆಯ ಬಗ್ಗೆ ಪ್ರಶ್ನಿಸಿದೆ. ನಾವು ಇದೇ ಸಂಪ್ರದಾಯ ಪಾಲಿಸುತ್ತಿದ್ದೇವೆ ಎಂಬ ಉತ್ತರ ಬಂತು. ಕ್ಷಮಿಸಿ, ನಾನು ಈ ಸಂಪ್ರದಾಯ ಪಾಲಿಸುವುದಿಲ್ಲ ಎಂದೆ. ಸರಿ, ಮತ್ತೆ ಸಂಪರ್ಕಿಸುತ್ತೇವೆ ಎಂದು ಫೋನ್ ಇಟ್ಟರು… ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ನಾಪತ್ತೆ!

ಇದು ಇತ್ತೀಚೆಗೆ ಬೆಳೆದು ಬಂದಿರುವ ಸಂಪ್ರದಾಯ. ಇತ್ತೀಚೆಗೆ ನಾವೂ ಒಂದು ಕಾರ್ಯಕ್ರಮ ಆಯೋಜಿಸಿದ್ದೆವು.  ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿದ್ದ   ಒಬ್ಬರಲ್ಲಿ ನಾವು ಅತಿಥಿಯಾಗಿ ಬರುವಂತೆ ವಿನಂತಿಸಿದೆವು. ನಿರ್ದಿಷ್ಠ ದಿನಾಂಕದಂದು ಅವರಿಗೆ ಬೇರಾವುದೋ ಕಾರ್ಯಕ್ರಮ ಇದ್ದುದಕ್ಕೆ ಬರಲಾಗುವುದಿಲ್ಲ ಎಂದರು. ಸರಿ, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾದರೂ ಬರುವಂತೆ ಅವರನ್ನು ವಿನಂತಿಸಿದೆವು. ಅದಕ್ಕೆ ಥಟ್ಟಂತ ಆ ವ್ಯಕ್ತಿ ಆಗದು, ಆ ದಿನ ನಾನು ಫ್ರೀ ಆಗಿದ್ದರೂ, ಬರಲಾಗದು, ನನ್ನ ‘ಸ್ಥಾನ ಮಾನ’ ನೋಡಬೇಕಲ್ಲವೇ ಎಂದು ಬಿಟ್ಟರು!!. ಕೊನೆಗೆ ಸರಿ ಎಂದು ನಾವು ಹೋದ ದಾರಿಗೆ ಸುಂಕವಿಲ್ಲದಂತೆ ಮರಳ ಹೊರಟಾಗ, ಮುಂದೆ ಏನಾದರೂ ಇಂತಾದ್ದೇ ‘ದೊಡ್ಡ’ ಮಟ್ಟದ  ಕಾರ್ಯಕ್ರಮ ಇದ್ದರೆ ಬನ್ನಿ, ಅತಿಥಿಯಾಗಿಯೂ ಬರುತ್ತೇನೆ ಮತ್ತು ಸ್ವಲ್ಪ ಧನ ಸಹಾಯವನ್ನೂ ಮಾಡುತ್ತೇನೆ ಎಂದರು. ಧನ್ಯೋಸ್ಮಿ ಎಂದುಕೊಂಡೆವು!!

ಇನ್ನೂ ಒಂದು ಅನುಭವ ಹೇಳುತ್ತೇನೆ ಕೇಳಿ. ಮತ್ತೋರ್ವ ಅತಿಥಿಯನ್ನು ಅದೇ ಕಾರ್ಯಕ್ರಮಕ್ಕೆ ಬರುವಂತೆ ವಿನಂತಿಸಿಕೊಳ್ಳಲು ಹೋದೆವು. ಕರೆದು ಕುಳ್ಳಿರಿಸಿದ ಆ ವ್ಯಕ್ತಿ, ಸಭೆಗೆ ಬರುವ ಎಲ್ಲಾ ಅತಿಥಿಗಳ ಬಗ್ಗೆ ಕೇಳಿ, ಒಂದೆರಡು ಬಹು ದೊಡ್ಡ ಹೆಸರುಗಳು ಇರುವುದನ್ನು ಖಚಿತಗೊಳಿಸಿಕೊಂಡು, ಕೊನೆಗೂ ಬರಲು ಒಪ್ಪಿದರು. ಆದರೆ ಒಂದು ಶರತ್ತನ್ನೂ ವಿಧಿಸಿದ್ದರು-ವೇದಿಕೆಯಲ್ಲಿ ಇಂತವರ ಪಕ್ಕದಲ್ಲಿ ಮಾತ್ರ ತನಗೆ ಆಸನ ಕಾರಿಸಿರಬೇಕೆಂದರು. ಗತ್ಯಂತರವಿಲ್ಲದೇ ಮರಳಿದೆವು.

ಈ ಅನುಭವಗಳು ಬಹುಶ: ಸಮಾರಂಭವನ್ನು ಆಯೋಜಿಸುವ ಅನೇಕರಿಗೆ ಆಗಿರಬಹುದು. ಸಂದೇಹವೇ ಇಲ್ಲ. ಒಬ್ಬ ಮಹಾಶಯರನ್ನಂತೂ ನಾವು ಸಮಾರೋಪ ಸಮಾರಂಭಕ್ಕೆ ಅತಿಥಿಯಾಗಿ ಕರೆದಿದ್ದೆವು. ಒಪ್ಪಿದ್ದರು ಸಹಾ. ಆದರೆ ಕಾರ್ಯಕ್ರಮಕ್ಕೆ ಎರಡು ದಿನ ಇರುವಾಗ ಫೋನಾಸಿ, ತಾನು ಉದ್ಘಾಟನೆಯ ಕಾರ್ಯಕ್ರಮಕ್ಕೇ ಬರುವುದು. ಯಾವುದೇ ಕಾರಣದಿಂದಲೂ ಸಮಾರೋಪಕ್ಕೆ ಬರಲು ತನಗೆ ಸಮಯವೇ ಇಲ್ಲವೆಂದರು. ಕಾರಣ ಉದ್ಘಾಟನಾ ಸಮಾರಂಭದಲ್ಲಿ ಓರ್ವ ಬಹು ಮುಖ್ಯ ವ್ಯಕ್ತಿ ಭಾಗವವಿಸುವವರಿದ್ದರು.!.ಕೊನೆಗೂ ಅವರು ಕೇಳಲೇ ಇಲ್ಲ… ಉದ್ಘಾಟನಾ ಸಮಾರಂಭಕ್ಕೇ ಬೇಡವೆಂದರೂ ಬರುವ ಅತಿಥಿಯಾಗಿ ಬಂದು, ಬಹುಮುಖ್ಯ ವ್ಯಕ್ತಿಯನ್ನು ತಾವೇ ಸಂಪರ್ಕಿಸಿ, ಅವರ ಪಕ್ಕದಲ್ಲಿಯೇ ವೇದಿಕೆಯಲ್ಲಿ ಸ್ಥಳ ಗಿಟ್ಟಿಸಿ, ಕುಳಿತೇ ಬಿಟ್ಟರು.

ಹೀಗಾಗಿ ಇತ್ತೀಚೆಗೆ ಸಭೆ ಸಮಾರಂಭಗಳು ಎಂದರೆ ಒಂದು ರೀತಿಯ ಅವ್ಯಕ್ತ ‘ಭಯ’ ಆಗಲಾರಂಭಿಸಿದೆ. ಹಾಗೆಂದು ಎಲ್ಲರೂ ಹಾಗೆ ಎಂದು ಹೇಳುತ್ತಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಇದೇ ಆಗುತ್ತಿರುತ್ತದೆ. ಬಹು ಮುಖ್ಯವಾಗಿ ಕೆಲವು ಪ್ರದೇಶಗಳಲ್ಲಿ, ಕೆಲವರು ಕೇವಲ ಕಾರ್ಯಕ್ರಮಗಳ ಅಧ್ಯಕ್ಷತೆ, ಅತಿಥಿಯಾಗಿ ಖಾಯಂ ಸ್ಥಾನ ಗಿಟ್ಟಿಸಿಕೊಂಡಿರುತ್ತಾರೆ. ಅದಕ್ಕೆಂದೇ ಇರುವವರಂತೆ, ತಮ್ಮ ಕಾರ್ಯಕ್ರಮ ಪಟ್ಟಿ ಸಿದ್ಧಪಡಿಸಿಕೊಂಡಿರುತ್ತಾರೆ. ಒಂದೇ ದಿನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕಾರಣದಿಂದ, ಅರ್ಧ ಕಾರ್ಯಕ್ರಮ ಆರಂಭವಾದ ನಂತರ ಓಡೋಡಿ ಬಂದು, ಇನ್ನೂ ಅರ್ಧ ಕಾರ್ಯಕ್ರಮ ಇರುವಂತೆ ವೇದಿಕೆ ಇಳಿದು ಹೋಗುವುದೂ ಇದೆ. ಇದನ್ನು ಕಂಡ ನನ್ನ ಸ್ನೇಹಿತರೋರ್ವರು ಇಂತವರಿಗೆ ‘ವೇದಿಕೆ ಬಳಕೆದಾರರು’ ಎಂದು ನಾಮಕರಣವನ್ನೇ ಮಾಡಿಬಿಟ್ಟಿದ್ದಾರೆ!.

ಪ್ರಚಾರ ವ್ಯಾಮೋಹ ಇಂದು ಈ ರೀತಿ ಪರಿಸ್ಥಿತಿಗಳನ್ನು ನಿಲ್ಲಿಸಿ ಬಿಟ್ಟಿದೆ. ಒಂದು ಪತ್ರಿಕೆಯಲ್ಲಿ ದಿನಾಲೂ ಎಲ್ಲಾದರೂ ಒಂದು ಹೆಸರು ಬಂದರೆ ಸಾಕೆಂಬವರ ಪಟ್ಟಿಯೇ ಬಹು ದೊಡ್ಡದಿದೆ. ಎಂದೆಂದಿಗೂ ಚಾಲ್ತಿಯಲ್ಲಿರಬೇಕೆಂಬ ಪ್ರಚಾರ ಪ್ರಿಯರ ದೆಸೆಂದ ಇಂದು ಈ ರೀತಿಯ ವಿಪರೀತಗಳು ಸಂಭವಿಸುತ್ತಿರುತ್ತಿವೆ.

ಇನ್ನು ಸನ್ಮಾನಗಳು. ಅವುಗಳನ್ನೂ ಹಣ ಕೊಟ್ಟೇ ಮಾಡಿಸಿಕೊಳ್ಳುವ ಪರಿಪಾಠ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಓರ್ವರಿಗೆ ರಾಜ್ಯ ಮಟ್ಟದ ಒಂದು ಪ್ರಶಸ್ತಿ ಬಂತು. ‘ಸಹಜ’ವಾಗಿ ಅವರಿಗಿಂತ ಎಷ್ಟೋ ಸಾಧನೆ ಮಾಡಿದ ಹಲವರು ಆ ಕ್ಷೇತ್ರದಲ್ಲಿದ್ದೂ, ಅವರು ತುಸು ‘ಪ್ರಭಾವಿ’ಆದ್ದರಿಂದ ಪ್ರಶಸ್ತಿ ಗಿಟ್ಟಿಸಿಕೊಂಡರು!. ಕೊನೆಗೆ ಅವರನ್ನು ಹಲವು ಸಂಘ ಸಂಸ್ಥೆಗಳಲ್ಲಿ ಸನ್ಮಾನಿಸಲಾತು. ನನಗೆ ತಿಳಿದ ಇಂತ ಸಂಸ್ಥೆಯೋರ್ವರು ತಮ್ಮ ಕಷ್ಟ ಹೇಳಿಕೊಳ್ಳುತ್ತಿದ್ದರು.ಯಾವುದಾದರೂ ಕಾರ್ಯಕ್ರಮ ಇದೆ ಎಂದು ತಿಳಿಯುತ್ತಲೇ, ಆ ಪ್ರಶಸ್ತಿ ವಿಜೇತರು ಸಂಘಟಕರನ್ನು ಸಂಪರ್ಕಿಸಿ, ತಮ್ಮನ್ನೂ ಪ್ರಶಸ್ತಿಯ ಹಿನ್ನೆಲೆಯಲ್ಲಿ ಗುರುತಿಸಿ, ಸನ್ಮಾನಿಸಲು ಕೇಳಿಕೊಳ್ಳುತ್ತಿದ್ದರು…….ಆಗದೆಂದರೆ ಸಾಧ್ಯವಾದ ಮೂಲದಿಂದ ಒತ್ತಡ ಹೇರುತ್ತಿದ್ದರು. ಮಾಧ್ಯಮ ವಲಯದಲ್ಲಿಯೂ ಅವರು ತುಸು ‘ಪ್ರಭಾವಿ’ಯಾದ್ದರಿಂದ, ಹಲವರು ಅನಿವಾರ್ಯವಾಗಿ ಅವರನ್ನು ಸಹಿಸಿಕೊಳ್ಳುತ್ತಿದ್ದರು. ಮರುದಿನ ಪತ್ರಿಕೆಗಳಲ್ಲಿ ಆ ಪ್ರಮುಖ ಕಾರ್ಯಕ್ರಮದ ಬಗ್ಗೆ ವರದಿ ಪ್ರಕಟವಾಗದಿದ್ದರೂ, ಈ ವ್ಯಕ್ತಿಯ ಸನ್ಮಾನದ ಫೋಟೋ ಮತ್ತು ಸುದ್ದಿ ಪ್ರಕಟವಾಗುತ್ತಿತ್ತು!!.

ಇಂತಹಾ ಅದೆಷ್ಟೋ ಘಟನೆಗಳು ಅನುಭವಕ್ಕೆ ಬರುತ್ತಲೇ ಇರುತ್ತವೆ. ಇಂದು ಕುರುಡು ಕಾಂಚಾಣ, ಪ್ರಶಸ್ತಿ, ಬಹುಮಾನಗಳಂತೆ ಸಭೆಸಮಾರಂಭಗಳಲ್ಲಿ ಅತಿಥಿಯಾಗಿ ಬರುವವರನ್ನೂ ಅನುಮಾನದಿಂದ ನೋಡುವಂತೆ ಮಾಡಿವೆ. ಕೆಲವೊಮ್ಮೆ ಪರಿಸ್ಥಿತಿ ತಿರುವು ಮುರುವು ಆಗುವುದೂ ಇದೆ. ಒಂದು ಸಮಾರಂಭಕ್ಕೆ ಒಬ್ಬ ಉದ್ಯಮಿಯನ್ನು ನಾನೂ ಆಹ್ವಾನಿಸಿದ್ದೆ. ಸತ್ಯ ವಿಷಯವೆಂದರೆ ಅವರಿಂದ ನಾವು ಒಂದು ಪೈಸೆಯೂ ಸಹಾಯವನ್ನು ಪಡೆದುಕೊಂಡಿರಲಿಲ್ಲ. ಮೇಲಿನ ಎಲ್ಲಾ ಕಥೆ ತಿಳಿದ ಅಥವಾ ಅನುಭವಿಸಿದ ಅನೇಕರು, ನನ್ನಲ್ಲಿ ಕೇಳುತ್ತಿದ್ದ ಪ್ರಶ್ನೆ ಎಂದರೆ, ಆ ಮಹನೀಯರು ಎಷ್ಟು ಕೊಟ್ಟಿದ್ದಾರೆ ಎಂದು! ಎಲ್ಲರೂ ಹೀಗೇಕೆ ಕೇಳುತ್ತಾರೆ ಎಂದರೆ ಅವರು ಶ್ರೀಮಂತ ಉದ್ಯಮಿ ಮತ್ತು ಎಲ್ಲರೂ ಅವರಿಂದ ಅದನ್ನೇ ನಿರೀಕ್ಷಿಸುತ್ತಾರೆ.  ಹಾಗಾದಾಗ, ನಿಜವಾಗಿಯೂ ಆ ನಿರೀಕ್ಷೆಯಲ್ಲಿರದವನನ್ನೂ ಜನ ಭಾವಿಸುವುದೇ ಬೇರೆ ರೀತಿಯಾಗುತ್ತದೆ.

ಇವತ್ತಿನ ಸಮಾಜ ಜನಪರ ಚಿಂತನೆಗಳಿಂದ ಹೊರಗುಳಿಯುತ್ತಿರುವುದಕ್ಕೆ ಇಂತಹ ಘಟನೆಗಳು ಕಾರಣವಾಗುತ್ತವೆ. ಯಾವುದು ದಿನ ದಿನಕ್ಕೆ ಮೌಲ್ಯವರ್ಧಿತವಾಗಿ, ಜನ ಮಾನಸದಲ್ಲಿ ಗೌರವವನ್ನು ಹೆಚ್ಚಿಸಿಕೊಳ್ಳಬೇಕೋ, ಅದೇ ಇಂದು ಒಂದು ರೀತಿಯ ಅನುಮಾನದ ದ್ರುಷ್ಟಿಯಲ್ಲಿ ನೋಡಬೇಕಾದ ಮಟ್ಟ ತಲುಪಿದೆ.ಹಾಗಾಗಿಯೇ ಇಂದು ಹೊಸ ನೀತಿ ಹುಟ್ಟಿಕೊಂಡಿದೆ-ಅದೇ ‘ಹಣ ಕೊಟ್ಟು ಅತಿಥಿಯಾಗಿ’!

******************

ಚಿತ್ರಕೃಪೆ: indiabuzzing.com

8 ಟಿಪ್ಪಣಿಗಳು Post a comment
 1. girisha
  ಜೂನ್ 15 2011

  ಅದು “ಪೇಯಿಂಗ್ ಗೆಸ್ಟ್ ” ವ್ಯವಸ್ಥೆ ಮಾರಾಯರೇ!!!!

  ಉತ್ತರ
 2. ಜೂನ್ 15 2011

  howdu neevu helidu sari… kastta

  ಉತ್ತರ
 3. ಜೂನ್ 15 2011

  ಇದೇನು ‘ವಿ’ ಮತ್ತು ‘ಮಿ’ ಜಾಗದಲ್ಲೆಲ್ಲಾ ” ಚಿನ್ಹೆ ಇದೆ !

  ಉತ್ತರ
 4. Kaa Vee Krishnadas
  ಜೂನ್ 16 2011

  Maanya Areholeyavare,

  Ondhu Olleya Lekhana.Neevu Heliddhella Sathya. Obba Sanghatakanaagi Intha Halavu anubhava matthu mujugaradha Sanniveshagalu Bandhive.

  Saamaanyavaagi Ondhastu Aarthika sahakaara Nireeksheyindhale Kelavarannu Samaarambhakke Athithigalannaagi Kareyalaagutthadhe.Aadhre yaaralli,hege kelabekemba Yochaneyanthu iralebeku.Aadhre athithige besaravesaguva kruthya aagabaaradhu.

  Nammalli Kottu baruvavaru matthu kodadhe vedhike eruvavaru antha eradu varga Idhe. Kelavarannu Kaaryakramakke athithiyaagi kareyadhiddhre phone maadi gadharisuva mahaneeyaroo iddhaare.Haagantha Athithigalu Dhana sahaaya Keladhiddharu Maadutthaare.

  Prashasthigala Bagge heluvudhaadhre Hanakendhe halavu prashasthigalive.Hana Kottu Ondhe Varshadhalli Hatthu Prashasthigalannu gittisikolluvavariddhaare.Inthaha Dhurantha Prashasthisanghatakarindha Beralenikeya Olleya Prashasthiyannu Sanghatisuvavarige Thale Etthi Nadeyadhanthaagidhe. Naavu Namma Samstheya Prashasthige Aayke Maaduva Sandharbhadhallella Ivarige Kodi Avarige Kodi Matthu Nanage Kodi Andhavaru Iddhaare. Aadhre Prashasthige Saadhakaralladhavarannu Soochisi Hana Galisuva Mandhigoo Illi Koratheyilla.

  Saadhaneyanne Maanadhandavaagi Pariganisi, Yaavudhe Apekshe illadhe Saadhakarannu guruthisuva namage bahalashtu baari Mujugara Aadhaddhiddhe.Yaavudhe Prashasthiyannu Thagonda Mele Adhannu yaavudhe mujugaravilladhe Ullekhisuvanthirabeku. Prashasthi Thegendu Nage paataligeeda baaradhu alve?

  Yaaro prashasthigala maana Kaledharendu sadhuddheshadindha nadesuvu Prashasthigalannu Ardhadhalli nillisidhre arthaviruvudhe.

  Krishnadas K V

  ಉತ್ತರ
 5. Ganesh Prasad
  ಜೂನ್ 16 2011

  ನೀವು ಹೇಳುವುದೂ ಸರಿ ಅನ್ಸುತ್ತೆ!

  ಉತ್ತರ
 6. Arehole
  ಜೂನ್ 17 2011

  ಕ್ರಷ್ಣದಾಸ್ ಅವರ ಅಭಿಪ್ರಾಯದ೦ತೆ ಇ೦ದು ಸ೦ಘಟಕ ಕಷ್ಟದಲ್ಲಿದ್ದಾನೆ. ಹಲವು ಬಾರಿ ಅವನು ಇ೦ಥ ಅತಿಥಿಗಳ ನಿರೀಕ್ಷೆಯಲ್ಲೇ ಇರಬೇಕಾದ ಅನಿವಾರ್ಯತೆಯಲ್ಲಿರುತ್ತಾನೆ. ಇ೦ದು ನಮ್ಮ ರಾಜಕೀಯ ವ್ಯವಸ್ಥೆಗಳು ಭ್ರಷ್ಟಾಚಾರವನ್ನು ಸಹಜವೆ೦ಬ೦ತೆ ಪಕ್ಷಾತೀತವಾಗಿ ಸ್ವೀಕರಿಸಿದ೦ತೆ, ಸ೦ಘಟಕನಿಗ ಈ ರೀತಿ ಹಣ ಪಡೆದು ಆತಿಥ್ಯ ನೀಡುವ ಅನಿವಾರ್ಯತೆಯೂ ಸ್ವೀಕಾರಾರ್ಹವಾಗಿದೆ. ಅದಕ್ಕೆ ಕಾರಣವೆ೦ದರೆ ಆರ್ಥಿಕ ಅವಲ೦ಬನೆ. ಇಲ್ಲಿ ಯಾರು ತಪ್ಪು ಮತ್ತು ಯಾರು ಸರಿ ಎ೦ಬುದಕ್ಕಿ೦ತಲೂ ಭಿನ್ನವಾಗಿ ನಡೆದ ಕಾರ್ಯಕ್ರಮದ ಗುಣ ಮಟ್ಟವನ್ನು ಗಮನಿಸಿ ಸುಮ್ಮನುಳಿಯಬೇಕಾಗುತ್ತದೆ. ಬೇರೆ ದಾರಿ ಇಲ್ಲ.
  ಹೌದು, ಓದುಗ ಮಿತ್ರರು ಒ೦ದೇ ವಾಕ್ಯದಲ್ಲಿ ಹೇಳಿರುವ೦ತೆ, ‘ಇದು ಪೇಯಿ೦ಗ್ ಗೆಸ್ಟ್’ ಮಾರಾಯ್ರೇ!!!

  ಉತ್ತರ
 7. Kaa Vee Krishnadas
  ಜೂನ್ 18 2011

  ಪೇಯಿ೦ಗ್ ಗೆಸ್ಟು ಹೌದು….
  ಪ್ಲೇಯಿ೦ಗ್ ಗೆಸ್ಟು ಹೌದು….

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments