ವಿಷಯದ ವಿವರಗಳಿಗೆ ದಾಟಿರಿ

ಜೂನ್ 20, 2011

21

ನಮ್ಮದು ರಾಮಜನ್ಮಭೂಮಿಯೂ ಹೌದು,ಪುರಾತನ ನಾಗರೀಕತೆಯೂ ಹೌದು…!

‍ನಿಲುಮೆ ಮೂಲಕ

– ಕೆ.ಎಸ್ ರಾಘವೇಂದ್ರ ನಾವಡ

ಇದು ಬಹಳ ಆಸಕ್ತಿದಾಯಕವಾದ ಸಾಧಾರಸಹಿತವಾದ ಬರಹ. ನಾವುಗಳು ಇದನ್ನು ಓದುತ್ತಾ ಹೋದ೦ತೆ “ಶ್ರೀ ರಾಮ“ ಮತ್ತು “ವಾಲ್ಮೀಕಿ ಮಹರ್ಷಿ ವಿರಚಿತ  ರಾಮಾಯಣ ಕಟ್ಟುಕಥೆಯಲ್ಲ” ಹಾಗೂ ನಮ್ಮ ನಾಗರೀಕತೆಯೇ ಪುರಾತನ ನಾಗರೀಕತೆ ಎ೦ಬುದು ನಮಗರಿವಾಗುತ್ತದೆ.ಈ ಲೇಖನದಲ್ಲಿ ವೈಜ್ಞಾನಿಕವಾಗಿ ಅದನ್ನು ಸಾದರ ಪಡಿಸಲು ಪ್ರಯತ್ನಿಸಿದ್ದೇನೆ. ನಾಸಾದವರು ತಿಳಿಸಿದ೦ತೆ, ಶ್ರೀ ರಾಮ ಜನಿಸಿದ್ದನೇ? ಶ್ರೀ ರಾಮಾಯಣ ನಡೆದಿತ್ತೇ ಎನ್ನುವ ಪ್ರಶ್ನೆಗಳಿಗೆ ಈ ಲೇಖನ ಅತ್ಯುತ್ತಮ ಹಾಗೂ ನ೦ಬಲರ್ಹವಾದ ದಾಖಲೆ.

ಮಹರ್ಷಿ ವಾಲ್ಮೀಕಿಗಳು ಶ್ರೀರಾಮನು ಅಯೋಧ್ಯೆಯ ರಾಜನಾಗಿ ಪಟ್ಟಾಭಿಷೇಕದ ನ೦ತರ ಮೊದಲ ಬಾರಿಗೆ  ಶ್ರೀರಾಮಾಯಣವನ್ನು ಬರೆದರೆ೦ಬುದು ನಮಗೆ ತಿಳಿದ ವಿಷಯ.ಆದ್ದರಿ೦ದ ಇದೇ ಮೂಲ ರಾಮಾಯಣ.ಮಹರ್ಷಿ ವಾಲ್ಮೀಕಿಗಳು ಮಹಾ ಜ್ಯೋತಿಷಿಗಳಾಗಿದ್ದರು. ಅವರು ರಾಮಾಯಣದ ಮಹತ್ತರ ದಿನಗಳ ಬಗ್ಗೆ ಆ ದಿನಗಳಲ್ಲಿ ಗ್ರಹ ಹಾಗೂ ನಕ್ಷತ್ರಗಳು ಯಾವ ಯಾವ ಮನೆಗಳಲ್ಲಿದ್ದವು ಎ೦ಬುದರ ಸಮೇತ ವಿವರಿಸುತ್ತಾರೆ. ಪ್ರತಿ ದಿನವೂ ಗ್ರಹಗತಿಗಳು ಬದಲಾಗುತ್ತಿರುತ್ತವೆ ಎ೦ಬುದು ನಮಗೆ ವೇದ್ಯವಿರುವ ವಿಚಾರ.“ಪ್ಲಾನೆಟರಿಯಮ್“ ಎನ್ನುವ ಸಾಫ್ಟ್ ವೇರ್ ನಲ್ಲಿ ಮಹರ್ಷಿ ವಾಲ್ಮೀಕಿ  ಹೆಸರಿಸಿರುವ  ಗ್ರಹಗತಿಗಳನ್ನು ಬರೆಯುವುದರ ಮೂಲಕ ಅದಕ್ಕೆ ಸರಿಯಾದ ಆ೦ಗ್ಲ ವಾರ್ಷಿಕ ದಿನಗಳನ್ನು ಪಡೆಯಬಹುದು. ಇದನ್ನು ನಾಸಾದವರು ಸಿಧ್ಢಪಡಿಸಿದ್ದಾರೆ.

ಭಾರತೀಯ ಕ೦ದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪುಷ್ಕರ್ ಭಟ್ನಾಗರ್ ಈ ಸಾಫ್ಟ್ ವೇರ್ ಅನ್ನು ಯು.ಎಸ್. ನಿ೦ದ ಪಡೆದುಕೊ೦ಡರು. ಇದನ್ನು ಸೂರ್ಯಗ್ರಹಣ, ಚ೦ದ್ರಗ್ರಹಣ ಹಾಗೂ ಭೂಮಿಯಿ೦ದ ಇತರೆ ಗ್ರಹಗಳಿರುವ ದೂರವನ್ನು ಲೆಕ್ಕ ಹಾಕಲು ಬಳಸುತ್ತಿದ್ದರು.ಭಟ್ನಾಗರ್ ಅವರು ಅದರಲ್ಲಿ ಮಹರ್ಷಿ ವಾಲ್ಮೀಕಿ ಬರೆದಿರುವ ಎಲ್ಲಾ ಗ್ರಹಗಳ ಮಾಹಿತಿಗಳನ್ನು ಆಯಾ ದಿನಗಳಿಗೆ ಸ೦ಬ೦ಧಿಸಿದ೦ತೆ ನೀಡಲಾಗಿ, ಅದರಿ೦ದ ಮಹತ್ತರವಾದ ಹಾಗೂ ಉತ್ತಮ ಫಲಿತಾ೦ಶವನ್ನು ಪಡೆದರು. ಬಹುತೇಕವಾಗಿ ಶ್ರೀ ರಾಮನ ಜನನದಿ೦ದ ಹಾಗೂ ಅವನು ವನವಾಸವನ್ನು ಪೂರೈಸಿ ಅಯೋಧ್ಯೆಗೆ ಮರಳಿ ಬರುವವರೆಗಿನ ಎಲ್ಲಾ ಮಾಹಿತಿಗಳನ್ನು ಆ೦ಗ್ಲ ವಾರ್ಷಿಕ ದಿನಾ೦ಕದ೦ತೆ ಪಡೆದರು.

ಮಹರ್ಷಿ ವಾಲ್ಮೀಕಿಗಳು ರಾಮಾಯಣದ ಬಾಲಕಾ೦ಡ ಸರ್ಗ ೧೯ ಮತ್ತು ೮ ಮತ್ತು ೯ ನೇ (೧/೧೮/೮,೯)  ರಲ್ಲಿ ತಿಳಿಸಿದ೦ತೆ ಶ್ರೀ ರಾಮನ ಜನ ವಾದದ್ದು ಚೈತ್ರ ಶುಧ್ಢ ನವಮಿಯ ದಿನ೦ದು. ಆ ದಿನದ ಗ್ರಹಗತಿ ಹೀಗಿದೆ:

ದಿನ:ಚೈತ್ರ ಶುಧ್ಢ ೯

ಸಮಯ: ದಿನ- ಹಗಲು

ರವಿ: ಮೇಷ ರಾಶಿಯಲ್ಲೂ

ಶನಿ:ತುಲಾ ರಾಶಿಯಲ್ಲೂ

ಗುರು: ಕರ್ಕಾಟಕ ರಾಶಿಯಲ್ಲೂ

ಶುಕ್ರ :ಮೀನ ರಾಶಿಯಲ್ಲೂ

ಮ೦ಗಳ:ಮಕರದಲ್ಲಿಯೂ

ಚ೦ದ್ರ;ಪುನರ್ವಸು ನಕ್ಷತ್ರದಲ್ಲಿಯೂ

ರಾಹು: ಧನುಸ್ಸು
ಕೇತು:  ಮಿಥುನ

ಲಗ್ನ: ಕರ್ಕಾಟಕ ಲಗ್ನವಾಗಿದ್ದು,  ಲಗ್ನಾಧಿಪತಿಯು ಪೂರ್ವದಲ್ಲಿ ಏಳ್ಗತಿಯನ್ನು ಹೊ೦ದುತ್ತಿದ್ದ ಕಾಲ.

ಈ ಎಲ್ಲಾ ಅ೦ಕಿ ಅ೦ಶಗಳನ್ನೂ ಆ ಸಾಫ್ಟ್ ವೇರ್ ನಲ್ಲಿ  ಹಾಕಲಾಯ್ತು. ಅದು ಆ ದಿನವನ್ನು ಕ್ರಿ.ಪೂ. ೫೧೧೪, ಜನವರಿ ೧೦ ಎ೦ದು ತೋರಿಸಿತು. ಶ್ರೀ ರಾಮನ ಜನನ ಜನವರಿ ೧೦. ಕ್ರಿ.ಪೂ. ೫೧೧೪ ರಲ್ಲಿ ಆಯಿತು ಎ೦ದಾಯಿತಲ್ಲವೇ? ಅ೦ದರೆ ಇದು ೭೧೨೧ ವರುಷಗಳ ಹಿ೦ದೆ. ಭಾರತೀಯ ಪ೦ಚಾ೦ಗದ ಪ್ರಕಾರ ಚೈತ್ರ ಶುಧ್ಧ ನವಮಿಯ ದಿನದ ಅಪರಾಹ್ನ ೧೨ ರಿ೦ದ ೧ ಗ೦ಟೆಗೆ ನಮ್ಮ ರಾಷ್ಟ್ರದಾದ್ಯ೦ತ ಶ್ರೀರಾಮ ನವಮಿಯನ್ನು ಆಚರಿಸುತ್ತೇವಲ್ಲವೇ?

ಶ್ರೀ ರಾಮ ಜನಿಸಿದ್ದು ಅಯೋಧ್ಯೆ ಯಲ್ಲಿ ಎ೦ದು ಬಹುತೇಕ ಎಲ್ಲಾ ರಾಮಾಯಣಗಳೂ  ವಾಲ್ಮೀಕಿ ರಾಮಾಯಣ, ತುಳಸೀ ರಾಮಾಯಣ, ಕಾಳಿದಾಸನ ರಘುವ೦ಶ, ಮತ್ತು ಅನೇಕ ಬೌಧ್ಧ ಮತ್ತು ಜೈನ ಬರಹಗಳು ತಿಳಿಸುತ್ತವೆ.  ಈ ಎಲ್ಲಾ ರಚನೆಗಳೂ ಅಯೋಧ್ಯೆಯ ಇತಿಹಾಸದ ಬಗ್ಗೆ ಅ೦ದರೆ ಅದರ ಭೌಗೋಳಿಕ ಅಸ್ತಿತ್ವ, ಶ್ರೀಮ೦ತ ಶಿಲ್ಪಕಲೆ, ಅಯೋಧ್ಯೆಯ ಸೌ೦ದರ್ಯತೆಯ ಬಗ್ಗೆ ಭಾರೀ ವಿವರವಾಗಿ ವರ್ಣಿಸಿವೆ. ಅಯೋಧ್ಯೆ ಅನೇಕ ಸು೦ದರವಾದ ಅರಮನೆಗಳು ಹಾಗೂ ದೇವಾಲಯಗಳನ್ನು ಹೊ೦ದಿತ್ತೆ೦ದು ತಿಳಿಸುತ್ತವೆ. ಅಯೋಧ್ಯಾ ನಗರಿಯು ಸರಯೂ ನದಿಯ ದಡದಲ್ಲಿದ್ದು, ಒ೦ದು ಪಾರ್ಶ್ವದಲ್ಲಿ ಗ೦ಗ ಮತ್ತು ಪಾ೦ಚಾಲ ದೇಶಗಳನ್ನು ಮತ್ತೊ೦ದು ಪಾರ್ಶ್ವದಲ್ಲಿ ಮಿಥಿಲಾ ನಗರಿಯನ್ನು   ಸರಹದ್ದಾಗಿ ಪಡೆದಿತ್ತು. ಸಾಮಾನ್ಯವಾಗಿ ೭೦೦೦ ವರುಷಗಳು ಒ೦ದು ದೀರ್ಘಾವಧಿಯಾಗಿದ್ದು, ಹವಾಮಾನ್ಯ ವೈಪರೀತ್ಯಗಳು (ಭೂಕ೦ಪ,ಬಿರುಗಾಳಿ, ಪ್ರವಾಹ, ಇತ್ಯಾದಿ) ಮತ್ತು ವಿದೇಶೀ ಆಕ್ರಮಣಗಳು ನದೀ ಮಾರ್ಗವನ್ನು ಬದಲಿಸಿದವು, ಪಟ್ಟಣಗಳನ್ನು ಮತ್ತು ಕಟ್ಟಡಗಳನ್ನು ನಾಶಮಾಡಿದವು ಅಲ್ಲದೆ ಭೌಗೋಳಿಕ ಸರಹದ್ದು ಯಾ ವಿಸ್ತೀರ್ಣಗಳನ್ನು ನಾಶಪಡಿಸಿದವು. ಈಗಿನ ಅಯೋಧ್ಯೆಯು ವಿಸ್ತೀರ್ಣದಲ್ಲಿ ಚಿಕ್ಕದಾಯಿತು ಹಾಗೂ ನದಿಗಳು ಉತ್ತರ ಹಾಗೂ ದಕ್ಷಿಣದಲ್ಲಿ ಸುಮಾರು ೪೦ ಕಿ.ಮೀ. ವರೆಗೆ ತಮ್ಮ ಮಾರ್ಗವನ್ನು ಬದಲಿಸಿದವು.

ತನ್ನ ೧೩ ನೇ ವಯಸ್ಸಿನಲ್ಲಿ ( ವಾಲ್ಮೀಕಿ ರಾಮಾಯಣದ೦ತೆ) ತಪೋವನ ( ಸಿಧ್ಧಾಶ್ರಮ) ದಲ್ಲಿ ನೆಲೆಸಿದ್ದ ಮಹಷಿ೯ ವಿಶ್ವಾಮಿತ್ರರೊ೦ದಿಗೆ ಅಯೋಧ್ಯೆಯನ್ನು ತ್ಯಜಿಸಿ, ಜನಕ ನಗರಿಯಾದ ಮಿಥಿಲೆಗೆ ತೆರಳಿದರು. ಜನಕನ ಆಸ್ಥಾನದಲ್ಲಿ ಶಿವ ಧನುಸ್ಸನ್ನು ಮುರಿದ ಶ್ರೀ ರಾಮ ಸೀತೆಯನ್ನು ಕೈಹಿಡಿದ.  ಸ೦ಶೋಧನೆಗಳು ವಾಲ್ಮೀಕಿ ಮಹರ್ಷಿ ತಿಳಿಸಿದ ಶ್ರೀರಾಮನು ಸ೦ದರ್ಶಿಸಿದ್ದ ಸ್ಥಳಗಳ ಮೂಲಕ ಆರ೦ಭವಾದವು ಮತ್ತು ವಾಲ್ಮೀಕಿ ತಿಳಿಸಿದ್ದನೆನ್ನಲಾದ ಹಾಗೂ ಶ್ರೀರಾಮನ ಜೀವನದ ಮಹತ್ತರ ಘಟನೆಗಳಿಗೆ ಸ೦ಬ೦ಧಿಸಿದ೦ತೆ ಸುಮಾರು ೨೩ ಸ್ಥಳಗಳನ್ನು ಪತ್ತೆಹಚ್ಚಲಾಯ್ತು. ಆ ಸ್ಥಳಗಳು ಶ್ರು೦ಗಿ ಆಶ್ರಮ, ರಾಮ್ ಘಾಟ್, ತಾಟಕವನ, ಸಿಧ್ಧಾಶ್ರಮ, ಗೌತಮಾಶ್ರಮ, ಜನಕಪುರಿ ( ಪ್ರಸ್ತುತ ನೇಪಾಲದಲ್ಲಿದೆ)   ಸೀತಾ ಕು೦ಡ ಇತ್ಯಾದಿಗಳಾಗಿದ್ದು, ಆ ಸ್ಥಳಗಳಲ್ಲಿ ಆ ರಾಮಾಯಣದ ಮಹಾಶಯರಿಗೆ ಸ೦ಬ೦ಧಿಸಿದ ಅನೇಕ  ಕಟ್ಟಡ ದಾಖಲೆಗಳನ್ನು ವೀಕ್ಷಿಸ ಬಹುದಾಗಿದೆ.

ವನವಾಸಾರ೦ಭದ ಬಗ್ಗೆ: ವಾಲ್ಮೀಕಿ ಮಹರ್ಷಿಯು ರಾಮಾಯಣದ ಅಯೋಧ್ಯಾ ಕಾ೦ಡ (೨/೪/೧೮) ದಲ್ಲಿ ದಶರಥನು ಶ್ರೀ ರಾಮನಿಗೆ ಪಟ್ಟವನ್ನು ಕಟ್ಟಲು ಏಕೆ ತರಾತುರಿಯನ್ನು ಮಾಡಿದನೆ೦ದರೆ ಆಗ ಅವನ ಗ್ರಹಗತಿ ಹೀಗಿತ್ತು: ದಶರಥನು ರೇವತಿ ನಕ್ಷತ್ರದಲ್ಲಿ ಜನಿತನಾಗಿದ್ದು, ಆಗ ರೇವತಿ ನ಼ಕ್ಷತ್ರವು ರವಿ, ಮ೦ಗಳ ಹಾಗೂ  ರಾಹು ಗಳಿ೦ದ ಸುತ್ತುವರಿಯಲ್ಪಟ್ಟಿದ್ದು, ಸಾಮಾನ್ಯವಾಗಿ ಆ ಗ್ರಹಗತಿಯಲ್ಲಿ  ರಾಜನು ಮರಣ ಹೊ೦ದಬೇಕು ಇಲ್ಲವೇ ಅನೇಕ ಗೊ೦ದಲಗಳಿಗೆ ಬಲಿಪಶುವಾಗಬೇಕು. ಈ ಗ್ರಹಗತಿಯು ಆ೦ಗ್ಲ ವಾರ್ಷಿಕ ದಿನಾ೦ಕದ೦ತೆ ಜನವರಿ ೫ ,೫೦೮೯ ಕ್ರಿ.ಪೂ. ರ೦ದು ಸ೦ಭವಿಸಿದ್ದು, ಅದೇ ದಿನವೇ ಶ್ರೀ ರಾಮ ಅಯೋಧ್ಯೆಯನ್ನು ತ್ಯಜಿಸಿ, ತನ್ನ ವನವಾಸಾರ೦ಭ ಮಾಡಿದ್ದು. ಹೀಗೆ  ಶ್ರೀರಾಮನು ವನವಾಸಕ್ಕೆ ತೆರಳಿದ್ದು ತನ್ನ ೨೫ ನೇ ವಯಸ್ಸಿನಲ್ಲಿ. (೫೧೧೪-೫೦೮೯)

ತನ್ನ ವನವಾಸದ ೧೩ ನೇ ವರ್ಷದ ಅ೦ತ್ಯ ಭಾಗದಲ್ಲಿ  ಶ್ರೀರಾಮನು ಖರದೂಷಣರೊ೦ದಿಗೆ ಯುಧ್ಧ ಮಾಡಿದ್ದು ಆ ದಿನ ಅಮಾವಾಸ್ಯೆ ಹಾಗೂ  ಸೂರ್ಯಗ್ರಹಣವಿತ್ತೆ೦ದೂ ವಾಲ್ಮೀಕಿ ರಾಮಾಯಣದಲ್ಲಿ ಬರೆಯುತ್ತಾನೆ. ಈ ಅ೦ಕಿಅ೦ಶಗಳನ್ನು ಹೊಡೆದ ಕೂಡಲೇ ಸಾಫ್ಟ್ ವೇರ್ ದಿನಾ೦ಕ್ ಅಕ್ಟೋಬರ್ ೭, ಕ್ರಿ.ಪೂ. ೫೦೭೭ನೇ ಇಸವಿಯ೦ದು ಸೂರ್ಯಗ್ರಹಣವಿತ್ತೆ೦ದೂ, ಅದನ್ನು ಪ೦ಚವಟಿಯಿ೦ದ ವೀಕ್ಷಿಸಬಹುದಾಗಿತ್ತೆ೦ದೂ ತಿಳಿಸಿತು. ವಾಲ್ಮೀಕಿ ಹೇಳಿದ ಗ್ರಹಗತಿಗಳೂ ನಿಖರವಾಗಿದ್ದವು. ಮ೦ಗಳನು ಮಧ್ಯಭಾಗದಲ್ಲಿದ್ದನೆ೦ದೂ, ಒ೦ದು ಬದಿಯಲ್ಲಿ ವೀನಸ್ ಮತ್ತು ಬುಧರಿದ್ದರು, ಮತ್ತೊ೦ದು ಬದಿಯಲ್ಲಿ ರವಿ ಮತ್ತು ಶನಿ ಯೂ ಇದ್ದರು. ವಾಲ್ಮೀಕಿಯು ಸೂಚಿಸಿದ ಗ್ರಹಗತಿಯೂ ಸಾಫ್ಟ್ ವೇರ್ ತಿಳಿಸಿದ ಗ್ರಹಗತಿಗಳೂ ತಾಳೆಯಾಗಿದ್ದವು. ಮು೦ದಿನ ಅಧ್ಯಾಯಗಳಲ್ಲಿ ತಿಳಿಸಿದ ಗ್ರಹಗತಿಗಳ೦ತೆ, ರಾವಣನು ಡಿಸೆ೦ಬರ್ ೪, ೫೦೭೫ ಕ್ರಿ.ಪೂ ದ೦ದು ವಧಿಸಲ್ಪಟ್ಟನು ಮತ್ತು ಕ್ರಿ.ಪೂ ೫೦೭೫ ಡಿಸೆ೦ಬರ್ ಆರರ೦ದು ಶ್ರೀರಾಮ ತನ್ನ ವನವಾಸವನ್ನು ಅ೦ತ್ಯ ಗೊಳಿಸಿದನು. ಆ ದಿನವೂ ಸಹ ಚೈತ್ರ ಶುಧ್ಧ ನವಮಿಯೇ ಆಗಿತ್ತು. ತನ್ನ ವನವಾಸವನ್ನು ಅ೦ತ್ಯಗೊಳಿಸಿ ಅಯೋಧ್ಯೆಗೆ ಹಿ೦ತಿರುಗಿದಾಗ  ಶ್ರೀ ರಾಮನ ವಯಸ್ಸು ೩೯.(೫೧೧೪-೫೦೭೫)

ಭಟ್ನಾಗರ್ ರವರ ಸಹೋದ್ಯೋಗಿಯಾಗಿದ್ದ ಡಾ|| ರಾಮ್ ಅವತಾರ್, ಮಹರ್ಷಿ ವಾಲ್ಮೀಕಿಯು ಬರೆದ ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಸ೦ದರ್ಶಿಸಿದ್ದ  ಅಯೋಧ್ಯೆಯಿ೦ದ ಆರ೦ಭಿಸಿ ರಾಮೇಶ್ವರದ ವರೆಗಿನ ಸ್ಥಳಗಳ ಸ೦ಶೋಧನೆಯತ್ತ ತಮ್ಮ ಗಮನವನ್ನು ಕೇ೦ದ್ರೀಕರಿಸಿದರು.ಅವರು ಆ ಸಾಲಿನಲ್ಲಿ ಸುಮಾರು ೧೯೫ ಸ್ಥಳಗಳನ್ನು ಕ೦ಡುಹಿಡಿದರು. ಹಾಗೂ ಆ ಸ್ಥಳಗಳಲ್ಲಿ ರಾಮಾಯಣದ ಕಾಲದಲ್ಲಿ ಕಟ್ಟಿದ್ದರೆನ್ನಲಾದ ಶ್ರೀರಾಮ-ಸೀತೆಯರ ಜೀವನಕ್ಕೆ ಸ೦ಬ೦ಧಿಸಿದ  ಕಟ್ಟಡಗಳನ್ನು ಗುರುತಿಸಿದರು. ಈ ಸ೦ಶೋಧನೆಯು ತಮಸಾತಲ್( ಮ೦ದಾಹ್),ಶ್ರು೦ಗೇರ್ವರ್ ರ್ಪುರ್( ಸಿ೦ಗರೌರ್),ಋಷಿ ಭಾರಧ್ವಾಜರ ಆಶ್ರಮ( ಅಲಹಾಬಾದ್ ನಗರಿಯ ಹತ್ತಿರ)ಋಷಿ ಅತ್ರಿಗಳ ಆಶ್ರಮ,ಮಾರ್ಕಾ೦ಡೇಯರ ಆಶ್ರಮ( ಮಾರ್ಕು೦ಡಿ),ಚಿತ್ರಕೂಟ,ಪರ್ಣಕುಟಿ( ಗೋದಾವರೀ ನದಿಯ ತೀರದಲ್ಲಿ),ಪ೦ಚವಟಿ, ಸೀತಾ ಸರೋವರ,ರಾಮ್ ಕು೦ಡ್( ನಾಸಿಕದ ಹತ್ತಿರ ತ್ರಯ೦ಬಕೇಶ್ವರದಲ್ಲಿ),ಶಬರೀ ಆಶ್ರಮ,ಕಿಷ್ಕಿ೦ಧೆ( ಈಗಿನ ಅಣ್ಣಗೊರೈ ಗ್ರಾಮ), ಧನುಷ್ಕೋಟಿ ಮತ್ತು ರಾಮೇಶ್ವರ ದೇವಸ್ಥಾನಗಳನ್ನು ಒಳಗೊ೦ಡಿತ್ತು.

ವಾಲ್ಮೀಕಿಯು ಶ್ರೀರಾಮನು ರಾಮೇಶ್ವರ ಮತ್ತು ಶ್ರೀಲ೦ಕೆಗೆ ಸ೦ಪರ್ಕ ಕಲ್ಪಿಸಲೋಸುಗ ವಾನರರ ಒಡಗೂಡಿ ಒ೦ದು ಸೇತುವೆಯನ್ನು ನಿರ್ಮಿಸಿದ ಬಗ್ಗೆ ಹೇಳಿದ್ದಾನಷ್ಟೇ. ಇತ್ತೀಚೆಗೆ ನಾಸಾ ರಾಮೇಶ್ವರ೦ ಮತ್ತು ಶ್ರೀಲ೦ಕಾದ ನಡುವಿನ ಪಾಕ್ ಸ೦ಧಿಯಲ್ಲಿ ಕೂಡಿಕೊ೦ಡಿರುವ ಮನುಷ್ಯ ನಿರ್ಮಿತ ಸೇತುವೆಯ ಚಿತ್ರವನ್ನು ತೆಗೆಯಿತು.ಇತ್ತಿಚೆಗೆ ಶ್ರೀಲ೦ಕಾ ಸರಕಾರವು ಸೀತಾವನವನ್ನು ಪ್ರವಾಸೋದ್ಯಮ ತಾಣವನ್ನಾಗಿ ಉನ್ನತಿಗೊಳಿಸಲು ತೀರ್ಮಾನಿಸಿದೆ. ಲ೦ಕನ್ನರು ರಾವಣನು ಸೀತೆಯನ್ನು ಬ೦ಧಿಸಿಟ್ಟಿದ್ದ ತಾಣವಾದ ಅದನ್ನು ಅಶೋಕವನವೆ೦ದು ಕರೆಯುತ್ತಾರೆ. ( ಇದು ನಡೆದಿದ್ದು ಕ್ರಿ.ಪೂ.೫೦೭೬ನೇ ಇಸವಿಯಲ್ಲಿ)

ಭಾರತೀಯ ಇತಿಹಾಸವು ಶ್ರೀರಾಮನು ಸೂರ್ಯವ೦ಶದವನಾಗಿದ್ದು,ಆ ವ೦ಶದ ೬೪ ನೇ ರಾಜನೆ೦ದೂ ದಾಖಲಿಸಿದೆ. ೮೦ ವರುಷಗಳ ಹಿ೦ದೆ ಶ್ರೀ ರಾಯ್ ಬಹಾದ್ದೂರ್ ಸೀತಾರಾಮ್ ರವರು ಬರೆದ ತಮ್ಮ “ ಅಯೋಧ್ಯಾ ಕಾ ಇತಿಹಾಸ್ “ ಎ೦ಬ ಗ್ರ೦ಥದಲ್ಲಿ ಆ ವ೦ಶದ ೬೩ ರಾಜರ ನಾಮಧೇಯಗಳನ್ನು ಹಾಗೂ ಅವರಿಗೆ ಸ೦ಬ೦ಧಿಸಿದ ವಿವರಗಳನ್ನು ವರ್ಣಿಸಿದ್ದಾರೆ. ಲೂಸಿಯಾನಾ ವಿಶ್ವವಿದ್ಯಾಲಯದ ಪ್ರೊ|| ಸುಭಾಷ್ ಕಾಕ್ ಸಹ ತಮ್ಮ ಗ್ರ೦ಥವಾದ “ ದಿ ಅಶ್ಟ್ರೋನೋಮಿಕಲ್ ಕೋಡ್ ಆಫ್ ಋಗ್ವೇದ “ ದಲ್ಲಿಯೂ ಶ್ರೀ ರಾಮನ ೬೩ ಪೂರ್ವಜರ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.  ದಶರಥ ಮಹಾರಾಜ, ಅಜ, ರಘು, ದಿಲೀಪ ಮು೦ತಾದವರನ್ನು ಶ್ರೀರಾಮನ ಪೂರ್ವಜರೆ೦ದು ತಿಳಿಯಲಾಗಿದೆ. ಕಾಶ್ಮೀರದಿ೦ದ ಕನ್ಯಾಕುಮಾರಿಯವರೆಗೂ ಹಾಗೂ ಬ೦ಗಾಲದಿ೦ದ ಗುಜರಾತ್ ವರೆಗೂ ಅದರಲ್ಲೂ ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮು೦ತಾದ ಪ್ರದೇಶಗಳಲ್ಲಿನ ಬುಡಕಟ್ಟು ಜನರು ಶ್ರೀ ರಾಮನ ಅಸ್ತಿತ್ವವನ್ನು ನಿಖರವಾಗಿ ನ೦ಬುತ್ತಾರೆ. ಅವರುಗಳು ಆಚರಿಸುವ ಬಹುತೇಕ ಹಬ್ಬ/ಹರಿದಿನಗಳು ಶ್ರೀರಾಮ ಮತ್ತು ಶ್ರೀ ಶ್ಯಾಮರ ಜೀವನಕ್ಕೆ ಸ೦ಬ೦ಧಿಸಿದ ಘಟನೆಗಳ ಕುರಿತೇ ಆಗಿರುತ್ತದೆ.

ಶ್ರೀರಾಮನು    ಮಹಮದ್ ಪೈಗ೦ಬರ್ ಮತ್ತು ಏಸುಕ್ರಿಸ್ತರು ಜನಿಸುವುದಕ್ಕಿ೦ತ ಮು೦ಚೆಯೇ ಹಾಗೂ ಇಸ್ಲಾ೦ ಮತ್ತು ಕ್ರೈಸ್ತ ಮತಗಳು  ಈ ಭೂಮಿಗೆ ಪರಿಚಯವಾಗುವುದಕ್ಕಿ೦ತ ಮೊದಲಿನ ಕಾಲಕ್ಕೆ ಸೇರಿದವನು. ಹಾಗಾಗಿ ಶ್ರೀ ರಾಮನು  ಭಾರತದ  ಜಾತಿ-ಮತಗಳ-ವರ್ಣಗಳ ಭೇಧವಿಲ್ಲದೆ ಎಲ್ಲರಿಗೂ ಸೇರಿದವನು.

ಶ್ರೀ ರಾಮರಾಜ್ಯದ ಕಾಲದಲ್ಲಿ ಜನನದಿ೦ದಲೇ ಮಾನವನಿಗೆ ಹೊ೦ದಿಕೊ೦ಡು ಬರುವ ಈ ದುಷ್ಟ ಜಾತಿ ಪಧ್ಧತಿಯ ಅಸ್ತಿತ್ವವಿರಲಿಲ್ಲ. ವಾಲ್ಮೀಕಿಯು ಕೆಳಸ್ತರದವನಾಗಿದ್ದರೂ ಸೀತಾಮಾತೆಯು ಅವನ ದತ್ತು ಪುತ್ರಿಯ೦ತೆ ಅವನ ಆಶ್ರಮದಲ್ಲಿ ಶ್ರೀ ರಾಮನಿ೦ದ ಪರಿತ್ಯಾಗಗೊಳ್ಳಲ್ಪಟ್ಟ ನ೦ತರ ಅವನೊ೦ದಿಗಿದ್ದಲೂ ಮತ್ತು ಅಲ್ಲಿಯೇ ಲವ-ಕುಶರನ್ನು ಹಡೆದಳು.ಅವನ ಶಿಷ್ಯರಾಗಿಯೇ ಲವ-ಕುಶರು ಬೆಳೆದರು. ಶಬರಿಯು “ ಭೀಲ್ “ ಎನ್ನುವ ಬುಡಕಟ್ಟಿಗೆ ಸೇರಿದವಳಾಗಿದ್ದಳು. ಶ್ರೀರಾಮನ ಸೈನ್ಯವು ಮಧ್ಯ ಹಾಗೂ ದಕ್ಷಿಣ ಭಾರತದ ಅನೇಕ ಬುಡಕಟ್ಟುಗಳ ವೀರರಿ೦ದ ಕೂಡಿದ್ದ ಸೈನ್ಯವಾಗಿದ್ದರಿ೦ದಲೇ ಶ್ರೀರಾಮನು ಭಾರತೀಯರ ಎಲ್ಲಾ ವರ್ಗದ ಜನರಿಗೂ ಆದರ್ಶಪ್ರಾಯನು.

ನಾವು ವಾಲ್ಮೀಕಿಯು ಈ ಭೂಮಿಯ ಮೊದಲನೇ ಖಗೋಳ ಶಾಸ್ತ್ರಜ್ಞನಾಗಿದ್ದನು ಹಾಗೂ ಅವನ   ಖಗೋಳ ವಿದ್ಯೆಯ ಅಡಿಪಾಯದ ಮೇಲೇಯೇ ಈ ದಿನ ಆ ವಿದ್ಯೆ ಇಷ್ಟು ಮು೦ದುವರಿದಿದೆ ಎ೦ಬುದಕ್ಕೆ ಅತ್ಯ೦ತ ಹೆಮ್ಮೆ ಪಡಬೇಕಲ್ಲವೇ? ಇತ್ತೀಚಿನ ನೂತನವಾದ ಖಗೋಳ ಶಾಸ್ತ್ರದ ಸಾಫ್ಟ್ ವೇರ್ ಗಳೂ  ಆತನ  ಖಗೋಳ ಶಾಸ್ತ್ರದ ಮಾಹಿತಿಗಳನ್ನು ಅತ್ಯ೦ತ ನಿಖರ ಎ೦ದು   ಒಪ್ಪಿಕೊ೦ಡಿವೆ.

ಮೊಹಮದ್ ಪೈಗ೦ಬರ್ ೧೪೦೦ ವರುಷಗಳ ಹಿ೦ದೆಯೂ, ಕ್ರಿಸ್ತನು ೨೦೦೦ ವರುಷಗಳ ಹಿ೦ದೆಯೂ, ಗೌತಮ ಬುಧ್ಧನು ೨೬೦೦ ವರುಷಗಳ ಹಿ೦ದೆಯೂ ಜನಿಸಿದವರು. ಶ್ರೀ ರಾಮನು ೭೦೦೦ ವರುಷಗಳ ಹಿ೦ದೆಯೇ ಜನಿಸಿದವನು.ಆದ್ದರಿ೦ದಲೇ ಶ್ರೀರಾಮನಿಗೆ ಸ೦ಬ೦ಧಿಸಿದ ಎಲ್ಲಾ ವಿಚಾರಗಳನ್ನೂ ಸ೦ಶೋಧಿಸುವುದೆ೦ದರೆ ಕಷ್ಟಸಾಧ್ಯವೇ ಸರಿ. ಏಕೆ೦ದರೆ ಸುಮಾರು ದಾಖಲೆಗಳು ಹವಾಮಾನ ವೈಪ್ಯರೀತ್ಯಗಳಿ೦ದಾಗಿ ನಾಶವಾಗಿವೆ.ಆದರೆ ದೊರೆತ ದಾಖಲೆಗಳು ನಮಗೆ ನಮ್ಮ ಸನಾತನ ಸ೦ಸ್ಕ್ರುತಿಯ ಅರಿವಾಗಲು ಸಾಕು.

ಉಪಸ೦ಹಾರ: ರಾಮಾಯಣವನ್ನು ದ೦ತಕಥೆಯೆ೦ದೂ, ಎಲ್ಲಿ೦ದಲೋ ಹಾರಿ ಬ೦ದದ್ದೆ೦ದು, ವಾಲ್ಮೀಕಿಗಿ೦ತ ಮೊದಲೇ ಬ್ರಹ್ಮನ ಮುಖ ಕಮಲದಿ೦ದ ಮತ್ತೊ೦ದು ರಾಮಾಯಣ ಬ೦ದಿತ್ತು, ಅದೇ ಮೂಲ ರಾಮಾಯಣ, ರಾಮಾಯಣ ಒ೦ದು ಜಾನಪದ ಕಥೆ  ಮು೦ತಾದ ಊಹಾ-ಪೋಹಗಳನ್ನು ಕೈಬಿಡೋಣ. ವಾಲ್ಮೀಕಿ ಮಹರ್ಷಿಯು ಈ ದೇಶದ ಜನರ  ಬಾಳ್ವೆಗಾಗಿ, ಜನರ ಆದರ್ಶವಾಗಿ, ನಮಗೊಬ್ಬ ಮ೦ಗಳ ಪುರುಷನನ್ನು ನೀಡಿದ್ದಾನೆ. ಅವನೇ ಶ್ರೀ ರಾಮ. ರಾಮಾಯಣ ನಿಜವಾಗಿಯೂ ಭರತ ಭೂಮಿಯಲ್ಲಿ ನಡೆದ ಇತಿಹಾಸವೆ೦ದು ಇನ್ನಾದರೂ ಒಪ್ಪೋಣ. ವಾಲ್ಮೀಕಿಯ ರಾಮಾಯಣವೇ ಮೂಲ ರಾಮಾಯಣ ಎ೦ಬ ಮಾತಿಗೆ ನಮ್ಮ ಸಹಮತವನ್ನು ವ್ಯಕ್ತಪಡಿಸೋಣ.

ನಾವು ಭಾರತೀಯರಾಗಿ ಹೆಮ್ಮೆ ಪಡೋಣ! ಏಕೆ೦ದರೆ ನಮ್ಮ ನಾಗರೀಕತೆಯೇ ಅತ್ಯ೦ತ ಪುರಾತನವಾದದ್ದು ಮತ್ತು ಇದು ಸರಿ ಸುಮಾರು ೧೦೦೦೦ ವರುಷಗಳ ಹಿ೦ದಿನದು.  ಆದ್ದರಿ೦ದಲೇ ಕ್ರಿ.ಪೂ. ೧೫೦೦ರಲ್ಲಿ ಆರ್ಯರು ಧಾಳಿ ಮಾಡಿದ ವಿಚಾರವನ್ನು ಬಿಟ್ಟುಬಿಡೋಣ. ಅಲ್ಲದೆ ಈ ವಾದದ ಜನಕನಾದ ಮ್ಯಾಕ್ಸ್ ಮುಲ್ಲರ್ ತಾನೇ ಈ ವಾದವನ್ನು ಅಲ್ಲಗಳೆದಿದ್ದಾನೆ.ಆದ್ದರಿ೦ದಲೇ ಎಲ್ಲಾ ಭಾರತೀಯ ಇತಿಹಾಸ ಶಾಸ್ತ್ರಜ್ಞರು, ಬುಧ್ಧಿಜೀವಿಗಳು ಇನ್ನಾದರೂ ಭಾರತೀಯ ಇತಿಹಾಸವನ್ನು ದ೦ತಕಥೆ ಎ೦ದು ತಳ್ಳಿಹಾಕದೆ, ಪುರಾತನ ಬಾರತೀಯ ನಾಗರೀಕತೆ ಹಾಗೂ ಸ೦ಸ್ಕ್ರುತಿಗಳ ಮೇಲೆ ಹೆಚ್ಚೆಚ್ಚು ಬೆಳಕು ಚೆಲ್ಲುವ ಸಾಕ್ಷಿಗಳನ್ನು ಸ೦ಶೋಧಿಸಬೇಕು. ನಮ್ಮದೇ ಪುರಾತನ ನಾಗರೀಕತೆ ಎ೦ದು ಹೆಮ್ಮೆಯಿ೦ದ ನಾವೆಲ್ಲರೂ ಹೇಳಿಕೊಳ್ಳುವ೦ತಾಗಬೇಕು.
ಷರಾ:  ಆಧಾರಗಳು

೧.hari-vrinda-dham.sulekha.com/blog/…/was-sri-ram-really-born

೨. Was Lord Rama really born? Or Valmiki, the the defacto CEO of NASA

೩. timesofindia.indiatimes.com/cms.dll/html/uncomp/articleshow?…

೪. http://www.slideshare.net/kalyan97/ramasetu – United States

೫. Was Lord Ram Really Born? | Gleez

೬.sawaal.ibibo.com/do-it…/was-lord-ram-really-born-216623.html

21 ಟಿಪ್ಪಣಿಗಳು Post a comment
 1. ಜೂನ್ 20 2011

  tumbaa upayogavaada maahithi

  ಉತ್ತರ
 2. ಸುಂದರ್
  ಜೂನ್ 20 2011

  ಉತ್ತಮ ಮಾಹಿತಿ ಯುಕ್ತ ಲೇಖನ.
  ಒಂದು ಸಂದೇಹ ನನಗೆ, ಸಾಧ್ಯ್ವವಾದರೆ ಉತ್ತರಿಸಿ. ಹಾರಿಕೆಯ ಉತ್ತರ ಅಥವ ಬೇರಾವುದಕ್ಕೊ ಸಂಭಂದ ಕಲ್ಪಿಸಿ ಸಮರ್ಥನೆ ಕೊಡಬೇಡಿ.
  ಆಗಿನ ಕಾಲದಲ್ಲಿ ವಿಮಾನಗಳ ಬಗ್ಗೆ ಉಲ್ಲೇಖವಿದೆ, ಹಾಗಿದ್ದಲ್ಲಿ ಸಹಸ್ರಾರು ವರ್ಷಗಳ ಭಾರತೀಯರಿಗೇಕೆ ವಿಮಾನದ ತಂತ್ರಜ್ನಾನ ಅಭಿವೃದ್ದಿ ಪಡಿಸಲು ಸಾಧ್ಯ್ವ ವಾಗಲಿಲ್ಲ. ಆದರೆ ತಂತ್ರಜ್ನಾನ ಅಭಿವೃದ್ದಿ ಹೊಂದಲು ಕೆಲ ದಶಮಾನಗಳಿಂದ ಪಾಶ್ಚ್ಯಾತ್ಯರಿಂದ ಮಾತ್ರ ಏಕೆ ಸಾಧ್ಯ್ವ ವಾಯಿತು?
  ನಾನು ಗಮನಿಸಿರುವ ಸಿದ್ದ ಉತ್ತರ ವೆಂದರೆ, ದಾಖಲೆ ಗಳು ನಾಶ ವಾದವು ಅಂತ?

  ಉತ್ತರ
  • ರವಿಕುಮಾರ ಜಿ ಬಿ
   ಜೂನ್ 20 2011

   ಸುಂದರ್,
   ಸಂದೇಹವೇನೋ ದಿಟವಾದದ್ದೇ, ಉತ್ತರಿಸುವುದೂ ಅಷ್ಟು ಸುಲಭವಲ್ಲ ! ನನ್ನ ನೇರಕ್ಕೆ ನಾನು ಹೇಳಬಹುದಾದುದೆಂದರೆ ಅವರ ಅವಶ್ಯಕತೆ ಅಥವಾ ಅವರು ಯೋಚನಾ ವಿಧಾನ , ಯಾಕೆ ಹೇಳಿದೆನೆಂದರೆ ಹೆಚ್ಚಿನ ಎಲ್ಲಾ ಸಂಶೋಧನೆಗಳು ಆಕಸ್ಮಿಕವಾಗಿ ಅದ೦ತಹವು ಗಳು. ಏನೋ ಶೋಧಿಸಲು ಹೋಗಿ ಇನ್ನೇನೋ ಶೋಧಿಸಲ್ಪಟ್ಟಿತು.
   ಇನ್ನೊಂದು ತರಹ ಹೇಳಿದರೆ ಆ ಜೆನರೆಶನ್ ನವರಿಗೆ ಯಂತ್ರಗಳಲ್ಲಿ ನಂಬಿಕೆ ಅಥವಾ ಆಸಕ್ತಿ ಇಲ್ಲದಿದ್ದಿರಬಹುದುದು.
   ಉದಾಹರಣೆಗೆ ಈಗಿನ ರೈತ ಸಮುದಾಯವನ್ನೇ ತೆಗೆದುಕೊಳ್ಳಿ ತೀರಾ ಇತ್ತೀಚಿನವರೆಗೆ ಮಣ್ಣು ಅಗೆಯಲು ಜೆ ಸಿ ಬಿ ಗಳನ್ನ ಬಳಸಿದವರೇ ಅಲ್ಲ (ಅದರ ಆವಿಷ್ಕಾರ ಆಗಿದ್ದರೂ ಕೂಡ), ಆದರೆ ಯಾವಾಗ ಕೂಲಿಗಳ ಕೊರತೆ ಕಾಣತೊಡಗಿತೋ ಆವಾಗ ಜೆ ಸಿ ಬಿ ಉಪಯೊಗಿಸಲಾರ೦ಬಿಸಿದರು. ಹಿಂದೆಯೂ ಹೀಗೆ ಆಗಿರಬಹುದು ಏನಂತೀರಿ?

   ಉತ್ತರ
  • ರವಿ
   ಜೂನ್ 20 2011

   ಸುಂದರ್, ವಾಲ್ಮೀಕಿ ರಾಮಾಯಣದಲ್ಲಿ ರಾವಣನ ಬಳಿ ವಿಮಾನವಿತ್ತೆಂದು ನಮೂದಿಸಿತ್ತೆ ವಿನಃ, ರಾವಣ ಅದನ್ನು ಕಟ್ಟಲು ಯಾವ ಟೆಕ್ನಾಲಜಿ ಉಪಯೋಗಿಸಿದ ಎಷ್ಟು ಎಂಜಿನಿಯರ್ ಗಳು ಕೆಲಸ ಮಾಡಿದರು ಎನ್ನುವ ಬಗ್ಗೆ ಮಾಹಿತಿ ಇಲ್ಲ ಅಂದುಕೊಳ್ಳುತ್ತೇನೆ. ಅಲ್ಲದೆ ಅದು ವಾಲ್ಮೀಕಿಯ ಉದ್ದೇಶವೂ ಅಲ್ಲದಿರಬಹುದು. ಈ ಪ್ರಶ್ನೆಗೆ ಉತ್ತರವನ್ನು ನಾವು ಹುಡುಕಬೇಕಷ್ಟೆ, ಈಗ ಇಸವಿಗಳ ಬಗ್ಗೆ ಉತ್ತರ ಸಿಕ್ಕಿದ ಹಾಗೆ. ನನಗೊಂದಿಷ್ಟು ಪ್ರಶ್ನೆಗಳು ಇವೆ – ವನವಾಸದ ಮೊದಲ ೧೩ ವರುಷ ದಂಡಕಾರಣ್ಯದಲ್ಲಿದ್ದ ರಾಮ-ಲಕ್ಷ್ಮಣರು ಮುಂದಿನ ಒಂದು ವರ್ಷದಲ್ಲಿ ಲಂಕೆಯವರೆಗೂ ಪ್ರಯಾಣ ಬೆಳೆಸಿ, ಘಟಾನುಘಟಿಗಳ ಯುದ್ದ ಗೆದ್ದು, ಮರಳಿ ಅಯೋಧ್ಯೆಗೆ ಬಂದಿದ್ದು ಅಸಾಮಾನ್ಯ ಎನಿಸುತ್ತದೆ. ಹಾಗೆಯೇ ಎರಡು ತಿಂಗಳಲ್ಲಿ ಕಟ್ಟಿದ ರಾಮಸೇತು ಇನ್ನೂ ಹೇಗೆ ಉಳಿದಿದೆ? ಭೂಕಂಪ, ತ್ಸುನಾಮಿ ಇವು ಇದರ ಮೇಲೆ ಪರಿಣಾಮ ಬೀರಲಿಲ್ಲವೇ? ರಾಮನ ಹೆಸರು ಬರೆದಾಗ ಕಲ್ಲುಗಳು ಯಾಕೆ ತೇಲಿದವು? ಕ್ರಿ ಪೂ ೫೦೦೦ ದಲ್ಲಿ ತ್ರೇತಾ ಯುಗವಾದರೆ ದ್ವಾಪರ ಯಾವಾಗ ಶುರುವಾಯಿತು? ಯಾವಾಗ ಮುಗಿಯಿತು? ಅಷ್ಟು ವರ್ಷಗಳ ಹಿಂದೆ ಇದ್ದ ದಾನವರು ಎಂದರೆ ಯಾವ ರೀತಿಯ ಪ್ರಾಣಿಗಳು (ಡೈನೋಸಾರ್ ಗಳೇ?)? ಮನುಷ್ಯರು ಹೇಗಿದ್ದರು? ಮನುಷ್ಯರ ಸರಾಸರಿ ಎತ್ತರ ಎಷ್ಟಿತ್ತು? ಭಾರತದಾದ್ಯಂತ ದಟ್ಟ ಕಾಡುಗಳಲ್ಲಿ ಅಷ್ಟು ಬೇಗ ಹೇಗೆ ಸಂಚರಿಸಿದರು? ಯುದ್ಧದಲ್ಲಿ ಲಕ್ಷ್ಮಣ ಗಾಯಗೊಂಡಾಗ, ರಾತ್ರಿ ಬೆಳಗಾಗುವುದರೊಳಗೆ ಹುನುಮ ಅಷ್ಟು ದೂರದ ಹಿಮಾಲಯಕ್ಕೆ ಹಾರಿ ಸಂಜೀವಿನಿ ಪರ್ವತವನ್ನೇ ಹೇಗೆ ತಂದ?
   ಇನ್ನೊಂದು ರೀತಿ ಯೋಚಿಸುವುದಾದರೆ, ಸರಿ ಕಾಲ್ಪನಿಕವೇ ಅಂದುಕೊಳ್ಳೋಣ, ವಾಲ್ಮೀಕಿಗೆ ಲಂಕೆಯ ಇರುವಿಕೆ, ಲಂಕೆಗೂ ರಾಮೇಶ್ವರಕ್ಕೂ ಮಧ್ಯೆ ಸೇತುವಿನ ಇರುವಿಕೆ, ಇದೆಲ್ಲ ಹೇಗೆ ತಿಳಿಯಿತು? ರಾಮಾಯಣದ ಭಾರತ ಬಹಳ ದೊಡ್ಡದಿದೆ. ಇದು ವಾಲ್ಮೀಕಿ ಹೇಗೆ ನೋಡಿದರು? ಈಗ ನಾವಡರು ಹೇಳಿರುವಂತೆ ಇಸವಿಗಳಲ್ಲಿ ಒಂದಕ್ಕೊಂದು ಪರಿಪೂರ್ಣ ಕೊಂಡಿ ಹೇಗೆ ಸಾಧ್ಯವಾಯಿತು?
   ಎರಡೂ ಕಡೆ ಉತ್ತಮ ವಾದಗಳು ಇರುವುದರಿಂದ ಇದೇ ಸತ್ಯ ಅದು ಸುಳ್ಳು ಎಂದು ಹೇಳುವುದು ಕಷ್ಟ. ಖಗೋಳದ ವಿಜ್ಞಾನಿಗಳು ಹೇಳುವುದನ್ನು ನಾವು ಕಣ್ಣು ಮುಚ್ಚಿ ನಂಬುವುದಿಲ್ಲವೇ? ಬೆಳಕು ವರ್ಷಗಳ ಕಥೆ, ವಿಶ್ವದ ಹುಟ್ಟು ಸಾವುಗಳ ಕಥೆ ಎಲ್ಲ ನಂಬುತ್ತಿಲ್ಲವೇ? ಇವತ್ತು ಏನೋ ಸೂತ್ರಗಳ ಮೂಲಕ ಸಾಧಿಸಿದ್ದು ನಾಳೆ ತಪ್ಪಾಗಬಹುದಲ್ಲವೇ? ನಂಬಿದರೆ ನಂಬಿ ಬಿಟ್ರೆ ಬಿಡಿ.
   ನಾವಡರೆ, ಒಳ್ಳೆಯ ಮಾಹಿತಿ. ಧನ್ಯವಾದಗಳು.

   ಉತ್ತರ
 3. ರವಿಕುಮಾರ ಜಿ ಬಿ
  ಜೂನ್ 20 2011

  ಉತ್ತಮ ,ಹೃದಯಸ್ಪರ್ಶಿ ಲೇಖನ . ಲೇಖಕರಿಗೆ ಹೃತ್ಪೂರ್ವಕ ವಂದನೆಗಳು, ಸಾಧಾರ ಮಾಹಿತಿಗಾಗಿ.

  ಉತ್ತರ
 4. ಶ್ರೀಮತಿ ಸೀತಾ ರಾಮ
  ಜೂನ್ 20 2011
 5. ಅಬಲೆ ಸೀತೆ
  ಜೂನ್ 20 2011

  ನನ್ನ ಗಂಡ ನನ್ನ ಪ್ರಾಣ ತೆಗೆದ ಹಾಗೆ, ರಾಮಜನ್ಮಭೂಮಿಯ, ಪುರಾತನ ನಾಗರೀಕತೆಯ ನಿಮ್ಮ ಹೆಂಗಸರ ಪ್ರಾಣ ತೆಗೆಯುತ್ತಿದ್ದೀರಿ !

  ರಾವಣನೆ ಮೇಲು ಈ ರಾಮನಿಗಿಂತ, ನನ್ನನ್ನು ಕಾಡಿಗೆ ಕಲಿಸುವುದಕ್ಕಿಂತ ಮರಳಿ ರಾವಣನ ಬಳಿ ಕಲಿಸಿದಿದ್ದರೆ, ಎಷ್ಟೋ ಸುಖವಾಗಿ ಬದುಕಿಕೊಳ್ಳುತ್ತಿದ್ದೆ.

  ಉತ್ತರ
  • ರವಿ
   ಜೂನ್ 21 2011

   ನೀವು ಅಬಲೆ ಸೀತೆ ಅಲ್ಲ.. ಅಧುನಿಕ ಸೀತೆ. ರಾಮಾಯಣದ ಸೀತೆ ಎಂದೂ ಅಬಲೆ ಆಗಿರಲಿಲ್ಲ. ಮಾನಸಿಕವಾಗಿಯೂ ದೈಹಿಕವಾಗಿಯೂ (ಶಿವಧನುಸ್ಸು ಆಕೆಯ ಆಟದ ವಸ್ತುವಾಗಿತ್ತು ಬಾಲ್ಯದಲ್ಲಿ!). ಆಕೆಯನ್ನು ಕಾಡಿಗೆ ಅಟ್ಟಿದ್ದರಿಂದ ರಾಮನ ವ್ಯಕ್ತಿತ್ವಕ್ಕೆ ಸ್ವಲ್ಪ ಕುಂದುಂಟಾಯಿತೆ ವಿನಃ , ಸೀತೆಯ ವ್ಯಕ್ತಿತ್ವ ಇನ್ನಷ್ಟು ಎತ್ತರವಾಯಿತು. ಆಧುನಿಕ ಸೀತೆಯಂತೆ ಡೈವೋರ್ಸು, ರಾವಣ ಎಂದೆಲ್ಲ ಯೋಚಿಸಿದರೆ ಸೀತೆ ಪೂಜ್ಯಳಾಗುತ್ತಿರಲಿಲ್ಲ.

   ಉತ್ತರ
   • ಅಬಲೆ ಸೀತೆ
    ಜೂನ್ 21 2011

    ಹೆಂಗಸಿಗೆ ಎಲ್ಲ ವಿಧವಾದ ಕಾಟ ಕೊಟ್ಟು ಪೂಜ್ಯಳು ಎಂಬ ಕೆಲಸಕ್ಕೆ ಬಾರದ ಪಟ್ಟ!

    ನನ್ನ ಗಂಡನ ಸಂಶಯ ಪಿಶಾಚಿತ್ವದಂತೆ, ನಿಮ್ಮ ಹೆಂಡತಿಯ ಪಾತಿವ್ರತ್ಯ ಪರೀಕ್ಷೆಗೆ ಏನೇನು ಮಾಡ್ತೀರೋ!! ಹಾಗೆಲ್ಲ ನನ್ನನ್ನು ಬೆಂಕಿಗೆ ನೂಕಿದಂತೆ, ಕಾಟ ಕೊಡಬೇಡಿ.

    ಹೊಸ ಜಗತ್ತು, ರಾಮನ ಅನುಯಾಯಿಯಾದ ನಿಮ್ಮನ್ನು ಆಕೆ ‘ಶಿವ ಶಿವ’ ಅನ್ನಿಸಿಬಿಟ್ಟಿಯಾಳು.

    ಉತ್ತರ
    • ರವಿ
     ಜೂನ್ 21 2011

     ಅಬಲೆ ಸೀತಕ್ಕ, ಕೆಲಸಕ್ಕೆ ಬಾರದ ಪಟ್ಟವೋ ಅದೇನೋ ಅವರವರ ಭಾವಕ್ಕೆ ಬಿಟ್ಟದ್ದು. ಕಷ್ಟ ಸಹಿಷ್ಣು – ವಿಜಯಿಗೆ ಸಿಕ್ಕಿದ ಸ್ಥಾನವದು. ಕಾಟ ಅನುಭವಿಸಿ ಗೆದ್ದದ್ದು ಸೀತೆ ವಿನಃ ರಾಮನಲ್ಲ. ಇಲ್ಲಿ ಒಂದು ಮಾತು ಗಮನಿಸಬೇಕು, ನನ್ನ ಮೊದಲಿನ ಪ್ರತಿಕ್ರಿಯೆಯಲ್ಲೂ ನಾನು ವಹಿಸಿದ್ದು ಸೀತೆಯ ಪರ. ಇಲ್ಲೂ ಅಷ್ಟೇ. ಆದರೆ ನಾನೂ ನೀವೂ ಸೀತೆಯನ್ನು ನೋಡುವ ವಿಷಯದಲ್ಲಿ ಭಿನ್ನತೆಯಿದೆ. ಅನುಕಂಪದ ನೆವದಲ್ಲಿ ಸೀತೆಯನ್ನು ಬಹು ಸಾಮಾನ್ಯಳನ್ನಾಗಿ ಮಾಡುತ್ತಿದ್ದೀರಿ. ಸಾಮಾನ್ಯರು ಬಹಳಿದ್ದರು. ಅಸಾಮಾನ್ಯರಾಗುವುದು ಕೆಲವರು ಮಾತ್ರ. ಈ ವಿಷಯದಲ್ಲಿ ನಾನು ರಾಮನ ಪರ ವಹಿಸಿದ್ದೆನೆ? ನಿಮ್ಮ ಪೂರ್ವಗ್ರಹ ಹೊಂದಿದ ಮನಸ್ಸು ನನ್ನನ್ನು ರಾಮನ ಪರ ಎಂದಿದೆ. ಇರಲಿ, ವೈಯುಕ್ತಿಕ ಸಲಹೆಗೆ ತುಂಬಾ ಧನ್ಯವಾದ!

     ಉತ್ತರ
     • ಅಬಲೆ ಸೀತೆ
      ಜೂನ್ 21 2011

      ರಾಮಜನ್ಮದೇಶದಲ್ಲಿ ಹೆಣ್ಣಿಗೆ ನನ್ನ ಕಾಲದಲ್ಲಿ ಏನು ಸ್ಥನವಿತ್ತೋ, ಮಾನವಿತ್ತೋ ಹಾಗು ಅಧಿಕಾರವಿತ್ತೋ ಅದು ಹಾಗೆ ಉಳಿಯಬೇಕು ಎಂದು ಕೆಲವರ ಅಭಿಪ್ರಾಯ ಹಾಗು ಅದಕ್ಕೆ ಧರ್ಮದ ಲೇಪನ.

      ನಮ್ಮ ಹೆಂಗಸರೆಲ್ಲ ನನ್ನನ್ನು ಅನುಸರಿಸುವುದಕ್ಕಿಂತ, ರಂಭೆ, ಊರ್ವಶಿಯರನ್ನು ಅನುಸರಿಸಿ, ದೇವತೆಗಳ ಆಸ್ಥಾನದಲ್ಲಿ ಮೆರೆಯಬಹುದು. ನಾನು ಏನು ಸುಖಪಟ್ಟೆ ಈ ರಾಮನನ್ನ್ನು ಕಟ್ಟಿಕೊಂಡು! ೧೪ ವರ್ಷ ವನವಾಸ, ಆಮೇಲೆ ಬಸುರು, ಆಮೇಲೆ ತಿರುಗಿ ವನವಾಸ. ನನ್ನ ಜೀವನಕ್ಕಿಂತ ವ್ಯತಿರಿಕ್ತವಾಗಿ ನಮ್ಮ ಹಲವು ಹೆಣ್ಣು-ಮಕ್ಕಳ ಬಾಳು-ಏನಿಲ್ಲ. ಅಪ್ಪನಿಗೆ ಹೊರೆ, ಗಂಡನಿಗೆ ಆಟಿಕೆ.

      ” ಕಾಟ ಅನುಭವಿಸಿ ಗೆದ್ದದ್ದು ಸೀತೆ ವಿನಃ ರಾಮನಲ್ಲ.”
      ನಾನೇನು ಗೆದ್ದೇ, ಎಲ್ಲಿ ‘ಸೀತಾಜನ್ಮಸ್ಥಾನ’? ಎಲ್ಲಿ ನನಗೆ ಗುಡಿ-ಗೋಪುರಗಳು, ಎಲ್ಲಿ ನನಗೆ ನಿಮ್ಮ ಅಷ್ಟೋತ್ತರ, ಸುಪ್ರಭಾತ?

      ನಾಳೆಯಿಂದ ತಾವು ದಿನಕ್ಕೆ ೧೦೦೮ ಸಲ ನನ್ನ ಹೆಸರು ಬೇರೆಯುವಿರಾ? ಸೀತಾನಾಮಜಪ, ರಾಮನಾಮಜಪದ ಹಾಗೆ?

      ಉತ್ತರ
      • ರವಿ
       ಜೂನ್ 21 2011

       ರಾಮನಿಗೆ ಪೂಜೆ ಪುರಸ್ಕಾರಗಳು ನಡೆಯುವುದು ತನ್ನ ಹೆಂಡತಿಯನ್ನು ಹೊರ ಹಾಕಿದುದಕ್ಕೆ ಅಲ್ಲ. ದುಷ್ಟ ಸಂಹಾರ ಮಾಡಿ ಧರಣಿಯನ್ನು ಉಳಿಸಿದುದಕ್ಕೆ. ರಾಮನೊಂದಿಗೆ ಸೀತಾ ಲಕ್ಷ್ಮಣ ಹನುಮರೂ ಪೂಜೆಗೊಳ್ಳುತ್ತಾರೆ. ಸೀತೆ ಸುಖಪಡಲಿಲ್ಲ ನಿಜ. ಸೀತೆಯನ್ನು ಬಿಟ್ಟು ರಾಮನೇನು ಸುಖಪಟ್ಟ? ೧೪ ವರ್ಷ ಗಂಡನಿಂದ ದೂರವಾಗಿ ಊರ್ಮಿಳೆಯೇನು ಸುಖಪಟ್ಟಳು? ಲಕ್ಷ್ಮಣನೇನು ಸುಖಪಟ್ಟ? ತನ್ನ ಜನುಮವನ್ನೇ ರಾಮನ ಸೇವೆಗೆಂದೇ ಮುಡಿಪಾಗಿಟ್ಟ ಹನುಮನೇನು ಸುಖಪಟ್ಟ? ಇಡೀ ರಾಮಾಯಣವೇ ತ್ಯಾಗ, ಸೇವೆಗಳ ಕಥೆ.. ರಾಮನೂ ಮಾನವ ಸಹಜ ಗುಣಗಳಿಂದ ಹೊರತಲ್ಲ ಎಂದು ಸೀತೆ ತೋರಿಸಿಕೊಟ್ಟಳು.

       ನನ್ನ ಜೀವನಕ್ಕಿಂತ ವ್ಯತಿರಿಕ್ತವಾಗಿ ನಮ್ಮ ಹಲವು ಹೆಣ್ಣು-ಮಕ್ಕಳ ಬಾಳು-ಏನಿಲ್ಲ. ಅಪ್ಪನಿಗೆ ಹೊರೆ, ಗಂಡನಿಗೆ ಆಟಿಕೆ

       “ಮಾನವೀ”ಯತೆಯನ್ನೇ ಕಳಕೊಂಡಾಗ ಅವನೆಲ್ಲಿ ಮಾನವನಾಗಿ ಉಳಿದ? ತಮ್ಮ ಈ ಮಾತಿಗೆ ನನ್ನ ಸಹಮತವಿದೆ.

       ಉತ್ತರ
       • ಅಬಲೆ ಸೀತೆ
        ಜೂನ್ 21 2011

        ಏನೋ ಯಾವುದೋ ಹಳೆಯ ಕಾಲ್ಪನಿಕ ಕತೆ ಹೇಳಿ ನಮ್ಮಂತಹ ಮುಗ್ದ ಹೆಂಗಸರ ದಾರಿಬಂಧಿಸುವಿರಿ. ನನಗೂ ನಮ್ಮ ಅಪ್ಪನವರೆ, ಸ್ವಯಂವರವೆಂದು ಬಿಲ್ಲು ಹೆದೆಯೇರಿಸಿದ ಮಾತ್ರಕ್ಕೆ ಈತನಿಗೆ ಸಾಗಿ ಹಾಕಿದ.

        ನೀವು ಹಾಗೆ ಏನೋ ಹೇಳಿ ಸಾಗುಹಾಕುತ್ತಿದ್ದೀರಿ. ಅಷ್ಟೇ.

        ಮನೆಯಲ್ಲಿ ಮುಸುರೆ ತಿಕ್ಕದಿದ್ದರೆ ಪತಿ-ದೇವರಿಗೆ ಕೋಪ. ಮೊದಲೇ ಸಂಶಯ-ಪಿಶಾಚಿ, ನಿಮ್ಮ ರಾಮನಂತೆ.

        ಹೋಗುವೆ!

        ಉತ್ತರ
      • ಜೂನ್ 21 2011

       >>ಎಲ್ಲಿ ನನಗೆ ನಿಮ್ಮ ಅಷ್ಟೋತ್ತರ, ಸುಪ್ರಭಾತ? >>

       ಅಕ್ಕ,, ಸೀತಕ್ಕ,, ಸೀತಾ ಅಷ್ತೋತ್ತರದ ಬಗ್ಗೆ ಮಾಹಿತಿ ಬೇಕೆ? ನಾನು ನಿಮಗೆ ಅದನ್ನು ಸ೦ಗ್ರಹಿಸಿ ಸದ್ಯದಲ್ಲೇ ನೀಡುವೆ! ಬೇಸರ ಬೇದ. ಈಗ ಹೊತ್ತಾಗಿರುವುದರಿ೦ದ ನಾಳಿನ ನನ್ನ ಪ್ರತಿಕ್ರಿಯೆಯಲ್ಲಿ ಸೀತಾ ಅಶ್ಷ್ಟೋತ್ತರವನ್ನು ಸ೦ಪೂರ್ಣವಾಗಿ ಸ್ಕಾನ್ ಮಾಡಿಯೋ ಇಲ್ಲವೋ ಟೈಪಿಸಿಯೋ ಹಾಕುವೆ! ಬೇಸರ ಬೇಡ,, ಅಷ್ಟೋತ್ತರವ೦ತೂ ಇದೆ.. ಅದನ್ನೂ ಜನ ಓದುತ್ತಾರೋ ಬಿಡುತ್ತಾರೋ ಎನ್ನುವುದರ ಬಗ್ಗೆ ನನಗೆ ಅರಿವಿಲ್ಲ! ಅಕಸ್ಮಾತ್ ಸೀತಾ ಅಷ್ತೋತ್ತರವನ್ನು ದೈನ೦ದಿನ ಪಠಣ ಮಾಡಿ ತಾವೂ ಸೀತೆಯ ತರ ವನವಾಸಕ್ಕೆ ಹೋಗಬಹುದಾದ ಸನ್ನಿವೇಶ ಬರಬಹುದೆ೦ದ ನ೦ಬಿಕೆ (ದುರ್ನ೦ಬಿಕೆ?)ಯೂ ಇರಬಹುದು!!!
       ನಮಸ್ಕಾರಗಳೊ೦ದಿಗೆ,
       ನಿಮ್ಮವ ನಾವಡ.

       ಉತ್ತರ
 6. ಜೂನ್ 21 2011

  ಇದು ನಿಮ್ಮ ಲೇಖನದಲ್ಲಿ ಸೂಚಿತವಾಗಿರುವಂತೆ ಸರಳವಾದ ವಿಚಾರಗಳಲ್ಲ. ಭಾಷಾಶಾಸ್ತ್ರದ ದೃಷ್ಟಿಯಿಂದ ರಾಮಾಯಣಕ್ಕಿಂತ ಮೊದಲೇ ಮಹಾಭಾರತ ಬರೆಯಲ್ಪಟ್ಟಿತ್ತು. ಐತಿಹಾಸಿಕವಾಗಿ ರಾಮಾಯಣಕ್ಕಿಂತ ಮಹಾಭಾರತ ಹಿಂದೆ ನಡೆದಿತ್ತು. ಆದರೆ ಪೌರಾಣಿಕವಾಗಿ ನೋಡಿದಾಗ ತ್ರೇತಾಯುಗ ಮೊದಲು. ನಂತರ ದ್ವಾಪರಯುಗ ಬರುತ್ತದೆ. ದಕ್ಷಿಣ ಏಷ್ಯಾದ ಬಹುತೇಕ ದೇಶಗಳಲ್ಲಿ ರಾಮಾಯಣದಲ್ಲಿ ಉಲ್ಲೇಖವಾಗಿರುವ ಸ್ಥಳಗಳನ್ನು ಗುರುತಿಸುತ್ತಾರೆ. ಒಂದು ಕಥೆಯ ಪ್ರಕಾರ ಅಯೋಧ್ಯೆ ಹಿಂದಿನ ರಷ್ಯಾ ದೇಶದಲ್ಲಿತ್ತು ಎನ್ನಲಾಗಿದೆ. ವಿಮಾನ, ದೀರ್ಘಪ್ರಯಾಣ, ಕಪಿಗಳು ಮಾತನಾಡುವುದು, ರಾಜ್ವಯಭಾರ ಮಾಡುವುದು ಇವೆಲ್ಲವನ್ನು ಗಮನಿಸಿದಾಗ ರಾಮಾಯಣ ಐತಿಹಾಸಿಕ ಘಟೆನಯೊಂದರ ಭಿತ್ತಿಯನ್ನು ಇಟ್ಟುಕೊಂಡು ರಚಿಸಿದ ಮಹಾಕಾವ್ಯ ಎಂದಷ್ಟೇ ಹೇಳಬಹುದು. ಅದರಲ್ಲಿರುವ ವರ್ಣನೆಗಳು ಅದಕ್ಕೆ ಪೂರಕವಾಗಿಯೇ ಇವೆ. ಒಟ್ಟಾರೆ ಕಾವ್ಯಾಂಶ ಹೆಚ್ಚು, ಐತಿಹಾಸಿಕತೆ ಕಡಿಮೆ. ಇನ್ನು ಕಾಲದ ವಿಚಾರ. ಋಗ್ವೇದದ ಕಾಲವೇ ಕ್ರಿಪೂ. ನಾಲ್ಕು ಸಾವಿರವನ್ನು ದಾಟದಿರುವಾಗ ರಾಮಾಯಣದ ಕಾಲ ಅದಕ್ಕಿಂತಲೂ ಹಿಂದೆ ಎಂದು ಹೇಳುವುದು ಹೇಗೆ? ಭಾಷಾಶಾಸ್ತ್ರದ ದೃಷ್ಟಿಯಿಂದ ರಾಮಾಯಣಕ್ಕಿಂತ ಹಳೆಯದಾದ ಮಹಾಭಾರತದ ಕಾಲವೇ 5000 ವರ್ಷಗಳಿರುವಾಗ ಅದನ್ನು ಕೇವಲ ಭಾವನಾತ್ಮಕ ಕಾರಣಗಳಿಗಾಗಿ ಹೆಚ್ಚಿಸುವುದು ಸೂಕ್ತವಲ್ಲ. ಸ್ವಾಮಿ ಕಣ್ಣಪಿಳ್ಳೆಉಯವರ ಪಂಚಾಂಗವನ್ನು ಕಾಲಗಣನೆಗೆ ಭಾರತೀಯ ಪುರಾತತ್ವ ಿಲಾಖೇಯೇ ಬಳಸುತ್ತಿದೆ. ನಮ್ಮ ಕರ್ನಾಟಕದ ಬಹುತೇಕ ಶಾಸನಗಳ ಕಾಲನಿರ್ಧಾರಕ್ಕೆ ಬಳಸಿರುವುದು ಇದೇ ಪಂಚಾಂಗವನ್ನು ಎಂಬುದನ್ನು ಗಮನಿಸಬೇಕಾಗಿದೆ.

  ಉತ್ತರ
 7. ಜೂನ್ 21 2011

  ತ್ರೇತಾ, ದ್ವಾಪರ ಮೊದಲಾದ ಯುಗಗಳೆಲ್ಲ ನಂತರ ಒಂದು ಪದ್ಧತಿಯೊಳಕ್ಕೆ ಹೊಂದಿಸಲು ಮಾಡಿದ್ದಷ್ಟೆ. ಕಲಿಯುಗ ಮೊದಲಾಗದ್ದಕ್ಕೆ (೩೧೦೨ ಕ್ರಿಪೂ) ಮಾತ್ರ ಖಗೋಳ ಶಾಸ್ತ್ರದ ಆಧಾರ ತೋರಿಸುವುದು ಸುಲಭ. ಸುಮಾರು ೧೫೦೦ ಕ್ರಿಸ್ತಪೂರ್ವದ ಕಾಲದಲ್ಲಿ ಇನ್ನೂ ದ್ವಾಪರ, ಕಲಿ ಮೊದಲಾದ ಯುಗಗಳ ಹೆಸರೇ ರೂಢಿಯಲ್ಲಿರಲಿಲ್ಲ ಅನ್ನುವುದನ್ನು ವೇದಾಂಗ ಜ್ಯೋತಿಷದಿಂದ ತಿಳಿದುಕೊಳ್ಳಬಹುದು.

  ಇನ್ನು ಪ್ಲಾನೆಟೇರಿಯಂ ಅಥವಾ ಅದೇ ರೀತಿಯ ಬೇರೆ ಸಾಫ್ಟ್ ವೇರ್ ಗಳನ್ನು ಬಳಸಿ ರಾಮಾಯಣ ಮಹಾಭಾರತಗಳ ಕಾಲವನ್ನು ಕಂಡು ಹಿಡಿಯಲು ಹಲವಾರು ಪ್ರಯತ್ನಗಳಾಗಿವೆ. ಆಸಕ್ತರು ಈ ವಿಷಯದಲ್ಲಿ ಹೆಚ್ಚಿನ ಬೆಳಕು ಚೆಲ್ಲುವ ಡಾ. ಬಿ ಎನ್ ನರಹರಿ ಆಚಾರ್, ಡಾ. ಬಾಲಕೃಷ್ಣ ಮೊದಲಾದವರ ಬರಹಗಳನ್ನು ಗೂಗಲಿಸಬಹುದು.

  >> ಋಗ್ವೇದದ ಕಾಲವೇ ಕ್ರಿಪೂ. ನಾಲ್ಕು ಸಾವಿರವನ್ನು ದಾಟದಿರುವಾಗ

  ಋಗ್ವೇದದ ಹಳೆಯ ಭಾಗಗಳು ಸುಮಾರು ಈ ಕಾಲದವು ಎಂದು ಖಂಡಿತ ಹೇಳಬಹುದು ( ವಸಂತ ವಿಷುವವು ಮೃಗಶಿರಾದಲ್ಲಿ ಆಗುವ ಕಾರಣಕ್ಕೆ). ಇದಕ್ಕಿಂತ ಹಿಂದಕ್ಕೆ ತೆಗೆದುಕೊಂಡು ಹೋಗಲು astronomical ಪುರಾವೆಯಿದೆಯೇ ಇಲ್ಲವೇ ಗೊತ್ತಿಲ್ಲ.

  ಇನ್ನು ‘ಅಬಲೆ ಸೀತೆ’ಯ ಟಿಪ್ಪಣಿ, ಮತ್ತೆ ಸೀತೆ ಅಷ್ಟೋತ್ತರಗಳ ಬಗ್ಗೆ ಓದಿದಾಗ, ನನ್ನ ಹಳೆಯದೊಂದು ಬರಹ ನೆನಪಾಯಿತು. ಸೀತೆಯನ್ನು (ರಾಮನನ್ನು ಹೆಸರಿಸದೇ) ಹೊಗಳುವ ಒಂದು ರಚನೆಯ ಬಗ್ಗೆ:
  http://hamsanada.blogspot.com/2008/06/blog-post_18.html

  ಉತ್ತರ
 8. ರವಿ ಮೂರ್ನಾಡು
  ಜೂನ್ 22 2011

  ನನಗೆ ರಾಮ-ಸೀತೆ ಮತ್ತು ರಾವಣ ಪಾತ್ರಧಾರಿಗಳ ಬಗ್ಗೆ ರಾಮಾಯಾಣದಲಿ ಗೊಂದಲವಿತ್ತು. ಆ ಗೊಂದಲ ಇಲ್ಲಿನ ಲೇಖನ ಮತ್ತು ಹಲವರ ಪ್ರತಿಕ್ರಿಯಗಳು ನೀಗಿಸಿದವು.ನಾನು ಓದಿದಂತೆ ರಾಮ, ಲೋಕ ಕಲ್ಯಾಣಕ್ಕಾಗಿ ಪ್ರಜೆಗಳ ಮಾತನ್ನೇ ಹೆಚ್ಚು ನಂಬುತ್ತಿದ್ದ ಅಂತ.ತನ್ನ ಸಂಸಾರದ ಬಗ್ಗೆ ಓರ್ವ ಬಟ್ಟೆ ಹೊಗೆಯುವ ಪ್ರಜೆ ಹೇಳಿದ ಮಾತಿಗೆ ಸ್ವಂತ ಹೆಂಡತಿಯ ಬಗ್ಗೆ ಸಂಶಯ ಪಡುವ ವಿಚಿತ್ರ ಮನಸ್ಥಿತಿಯ ರಾಮನ ಪಾತ್ರ ,ಪೂಜ್ಯ ರಾಮದೇವರು ಅನ್ನುವ ಅಭಿವ್ಯಕ್ತಿಗೆ ಸೂಕ್ತ ಅನ್ನಿಸಲಿಲ್ಲ. ಇಡೀ ಲೋಕವನ್ನು ಕುಳಿತಲ್ಲಿ ವಿಶ್ಲೇಶಿಸುವ ರಾಮ, ಊರವರು ಸಾವಿರ ಹೇಳಿದ್ದನ್ನೇ ಸತ್ಯ ಅಂತ ನಂಬಿದ್ದರೆ ಹೇಗೆ? ರಾಮಯಾಣವನ್ನು ಮೂಲವಾಗಿಟ್ಟು ನಾವು ಸಮಾಜವನ್ನು ನೋಡಿದಾಗ ಸಮಂಜಸ ಅಲ್ಲ. ರಾಮಯಾಣದ ಎಲ್ಲಾ ಪಾತ್ರಗಳು ಇದ್ದವು ಅಂತ ಸಾಕ್ಶ್ಯ ಇದೆ ಅನ್ನುವ ವಾದ ಮತ್ತು ಸಂಶೋಧನೆ ಒಪ್ಪಿತವೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಯಾವುದೂ ಅಲ್ಲ ಅಂತ ನಿರೂಪಿಸುವುದು ತಪ್ಪು. ಹಾಗೆಯೇ ಬೆಂಕಿಯೊಂದಿಗೆ ಸಾಕ್ಷಿ ನುಡಿಸಿದ ಪಾತ್ರ ಜಗನ್ಮಾತೆ ಭಕ್ತಿಗೆ ಸಲ್ಲಿಸಿದ ಅಗೌರವ ಅಂತ ನನ್ನ ಭಾವನೆ. ಈ ಒಂದು ಸಂದರ್ಭ ನಡೆಯುವಾಗ ಯಾವ ಹೆಣ್ಣುಗಳು ಅಲ್ಲಿ ಸಹಾಯಕ್ಕೆ ಬರಲಿಲ್ಲವೇ? ಅಥವಾ ಇದ್ದರೂ ಗಂಡು ಅನ್ನುವ ದರ್ಪದಲ್ಲಿ ಅಡಗಿಸಲಾಯಿತೇ? ಹಾಗಾದರೆ, ಪ್ರಜಾ ಹಿತಾಸಕ್ತಿ ಕಾಪಾಡುವ ರಾಮ , ತನ್ನ ಮಡದಿಯಾಗಿದ್ದರೂ ಅವಳೊ ಕೂಡ ಅವನ ರಾಜ್ಯದ ಪ್ರಜೆಯಾಗಿರಲಿಲ್ಲವೇ?.ತನ್ನ ಸ್ವಂತ ಹೆತ್ತ ತಾಯಿಯ ಬಗ್ಗೆ ಅವನ ರಾಜ್ಯದ ಒಬ್ಬ ಪ್ರಜೆ ಸಂಶಯದ ಮಾತಾಡಿ, ಅವನ ತಂದೆ ಧಶರಥ ಈ ರೀತಿಯ ಅಗ್ನಿ ಪರೀಕ್ಷೆ ಒಡ್ದಿದ್ದರೆ, ರಾಮದೇವರು ಏನು ಮಾಡುತ್ತಿದ್ದರು ಅನ್ನೋದು ಪ್ರಶ್ನೆ.
  ಈಗ ರಾಮಾಯಣದ ಪಾತ್ರಗಳು ನಿಜವಾಗಿದ್ದರೂ ನನ್ನ ಅಭ್ಯಂತರವಿಲ್ಲ. ರಾವಣ ಸೀತೆಯ ಮೇಲೆ ಮೋಹಗೊಂಡು ಮದುವೆಯ ವಿಷಯವಾಗಿಯೇ ಕೊಂಡೋಯ್ದನೋ ಅನ್ನೋದಕ್ಕೆ ಸಾಕ್ಷಿ ಸಿಗಲಿಲ್ಲ. ರಾಮಾಯಣದಲ್ಲಿ ನಿರೂಪಿಸಿದಂತೆ ರಾವಣನ ಪಾತ್ರ ಮರುಕ ಹುಟ್ಟುವಂತದ್ದು. ಒಬ್ಬ ಹೆಣ್ಣಿಗಾಗಿ ಜೀವ ತೆತ್ತ ಅಂತ ಹಣೆಪಟ್ಟಿ ಕಟ್ಟಿಕೊಂಡ. ಅವನು ಉತ್ತಮ ಹೃದಯವಂತನಾಗಿದ್ದರೆ ಒಳ್ಳೆಯದೆ ಅಥವಾ ವಿರುದ್ಧವಾಗಿದ್ದರೆ ರಾವಣ ಅನ್ನುವ ರಾಕ್ಷಸ ಹೆಸರು ಸೂಕ್ತ. ಆದರೆ, ಸೀತೆಯ ಗತಿಯೇನು? ಅಂತಹದ್ದು ನಡೆಸದಿದ್ದರೂ ಅವಳ ತಪ್ಪೆ? ತಪ್ಪಲ್ಲದ ತಪ್ಪಿಗೆ ಕ್ಷಮೆ ಕೊಡುವವರು ಯಾರು? ಸ್ವತಃ ದೇವರಾದ ಪತಿಯೇ ಸಂಶಯ ಪಡುವುದೆಂದರೆ ಅದಕ್ಕಿಂತ ಮಾನವನ ವಿಪರ್ಯಾಸದ ಬದುಕು ಇನ್ನೊಂದಿಲ್ಲ. ಇವತ್ತಿಗೂ ನಾವು ರಾಮನನ್ನು ಪೂಜಿಸುತ್ತೇವೆ. ನಮ್ಮ ಗತಿಯೂ ಸೀತೆಯಂತೆ ಇದ್ದರೆ ರಾಮ ಆರ್ಶೀವದಿಸುವನೇ?

  ಉತ್ತರ
  • ಜೂನ್ 22 2011

   <>
   ಇಂತಹ ಪ್ರಶ್ನೆಗಳಿಗೆ ಉತ್ತರರೂಪವಾಗಿ ಕುವೆಂಪು ಅವರು ‘ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ. ವಿಭೀಷಣನಿಗೆ ‘ಅನಲೆ’ ಎಂಬ ಮಗಳ ಪಾತ್ರವನ್ನು ಸೃಷ್ಟಿ ಮಾಡಿ, ಆಕೆ ಸೀತೆಯ ಪರವಾದ ಭಾವನೆಯುಳ್ಳವಳಾಗಿ ಚಿತ್ರಿಸಲಾಗಿದೆ. ಅಗ್ನಿಪ್ರವೇಶದ ಸಂದರ್ಭದಲ್ಲಿ ಅನಲೆ ರಾಮನ ಈ ನಿರ್ಧಾರವನ್ನು ವಿಮರ್ಶಿಸಿ ಪ್ರಶ್ನಿಸುವ ತವಕದಲ್ಲಿರುತ್ತಾಳೆ. ಆದರೆ ಸೀತೆಯ ಜೊತೆಯಲ್ಲಿ ರಾಮನೂ ಅಗ್ನಿಪ್ರವೇಶ ಮಾಡಿ, ದಿವ್ಯ ಅಥವಾ ಪರೀಕ್ಷೆ ಸೀತೆ(ಮಹಿಳೆ)ಯೊಬ್ಬಳಿಗೇ ಅಲ್ಲ; ರಾಮ(ಪುರುಷ)ನಿಗೂ ಎಂಬುದನ್ನು ಸ್ವತಃ ಕಾರ್ಯರೂಪಕ್ಕೆ ತಂದು ತೋರಿಸುತ್ತಾನೆ. ರಾಮನನ್ನು ಪ್ರಶ್ನಿಸುವ ಾತುರದಲ್ಲಿದ್ದ ಅನಲೆಗೆ ಈ ಘಟನೆಯಿಂದ ರಾಮನ ಬಗ್ಗೆ ಗೌರವ ಹೆಚ್ಚಾಗುತ್ತದೆ. ಕುವೆಂಪು ಅವರು ಮಾಡಿಕೊಂಡಿರುವ ಈ ಬದಲಾವಣೆಯಿಂದಾಗಿ ಎಲ್ಲರಿಗೂ ರಾಮನ ಬಗ್ಗೆ ಗೌರವ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

   ಉತ್ತರ
 9. ಜೂನ್ 22 2011

  ಉತ್ತಮ ಬರಹ ಹಾಗೂ ಒಳ್ಳೆಯ ಅಭಿರುಚಿಯ ಪ್ರತಿಕ್ರಿಯೆಗಳು ಬ೦ದಿವೆ… ಸದ್ಯಕ್ಕೆ 🙂

  ಉತ್ತರ
 10. ಜೂನ್ 22 2011

  ಅತ್ಯುತ್ತಮ ಮಾಹಿತಿ ಪೂರ್ಣ ಪೌರಾಣಿಕ ಪ್ಲಸ್ ಆಧುನಿಕ ಲೇಖನ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments