ವಿಷಯದ ವಿವರಗಳಿಗೆ ದಾಟಿರಿ

ಜೂನ್ 25, 2011

10

ಅಲ್ಲಿ ಆಲ್ಫಾ ಅಂತಿದೆ ನೋಡಿ, ಮೊದಲ ಪ್ರಯತ್ನಕ್ಕೆ ಸಹಕಾರ ನೀಡಿ

‍ನಿಲುಮೆ ಮೂಲಕ

– ಕಾಲಂ 9

ಗೂಗಲ್ ಸಂಸ್ಥೆಯು ಇತ್ತೀಚಿಗೆ ತನ್ನ ಭಾಶಾಂತರ ಸೇವೆಯ ಕನ್ನಡ ಅವತರಣಿಕೆಯ ಆಲ್ಫಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ ಯಾಂತ್ರೀಕೃತ ಭಾಶಾಂತರಕ್ಕೆ ಇದು ಮೊದಲ ಪ್ರಯತ್ನ. ಆದರೆ ಇದು ಕನ್ನಡದ ಕೊಲೆ ಎಂದು ಉದಯವಾಣಿಯು ‘ವಾಷಿಂಗ್ಟನ್‍ನಿಂದ’ ವರದಿ ಮಾಡಿದ್ದಾರೆ.

ಉದಯವಾಣಿಯ ವಾಷಿಂಗ್ಟನ್ ವರದಿಗಾರರಲ್ಲಿ ನನ್ನ ಮನವಿ: ನೀವು ಪುಕ್ಕಟೆ ಪ್ರಯತ್ನಕ್ಕೆ ಸಿಟ್ಟಾಗುವ ಮೊದಲು ಸಾಧ್ಯವಾದರೆ ಮೌಂಟೆನ್ ವ್ಯೂ ನಲ್ಲಿರುವ ಗೂಗಲ್ ಕಛೇರಿಗೆ ಒಮ್ಮೆ ಹೋಗಿ ಭಾಷಾಂತರ ಪ್ರಾಜೆಕ್ಟ್ ಬಗ್ಗೆ ಸ್ವಲ್ಪ ಕೇಳಿ. ಅಥವಾ translate.google.com ಪುಟದ ಕೊನೆಗಿರುವ About Google Transate ಕೊಂಡಿಯನ್ನೊಮ್ಮೆ ಬಳಸಿ ಅದರ ಬಗ್ಗೆ ಸ್ವಲ್ಪ ಓದಿ. ಮೊದಲನೆಯದಾಗಿ ಇದೂ ಇನ್ನೂ ಆಲ್ಫಾ ಆವೃತ್ತಿ. ಇನ್ನೂ ಬೀಟ ಆವೃತ್ತಿಯ ನಂತರ ಸೇವೆಯು ಸಾಧಾರಣ ಬಳಕೆಗೆ ಲಭ್ಯವಾಗುತ್ತದೆ. ಆಲ್ಫಾ ಆವೃತ್ತಿಯ ಬಗ್ಗೆ ಗೂಗಲಿಸಿದರೆ ನಿಮಗೆ ಹಾಗೆಂದರೇನೆಂಬುದು ತಿಳಿಯುತ್ತದೆ.

ಇನ್ನು, ಈ ಭಾಷಾಂತರವು ಸಾರ್ವಜನಿಕ ಬಳಕೆದಾರರ ಸಹಯೋಗದೊಂದಿಗೆ ನಡೆಯುವ ಪ್ರಕ್ರಿಯೆ.

“You can also help improve translation quality by using Translator Toolkit for translating or by uploading your translation memories into Translator Toolkit.” ಎಂದು ಅವರೇ ಹೇಳಿದ್ದಾರೆ. ಪ್ರತಿ ಬಳಕೆದಾರರೂ ತಮಗೆ ದೊರೆತ ಅನುವಾದವನ್ನು ಉತ್ತಮಗೊಳಿಸಲು ಯಾವುದೇ ಶಬ್ದದ ಮೇಲೆ ಕ್ಲಿಕ್ಕಿಸಿ ಪರ್ಯಾಯ ಪದಗಳನ್ನು ಸೂಚಿಸಬಹುದು. ಈ ರೀತಿಯ ಸಾವಿರಾರು ಅನುವಾದಗಳು ಮತ್ತು ಅವುಗಳಿಗೆ ದೊರೆತ ಪರ್ಯಾಯ ಅನುವಾದಗಳನ್ನು artificial intelligence ಮೂಲಕ ಸಂಸ್ಕರಿಸುತ್ತಾ ಹೋದಂತೆ ಅನುವಾದದ ಗುಣಮಟ್ಟ ಹೆಚ್ಚುತ್ತಾ ಸಾಗುತ್ತದೆ.

ಹಿಂದಿ ಭಾಷೆಯ ಭಾಷಾಂತರವನ್ನು ಗೂಗಲ್ ಹಿಂದೆಯೇ ಬಿಡುಗಡೆ ಮಾಡಿದ್ದು, ಈಗ ಅದರ ಗುಣಮಟ್ಟ ಸಾಕಷ್ಟು ವೃದ್ಧಿಸಿರುವುದನ್ನು ನೀವು ಗಮನಿಸಬಹುದು. ಹೆಚ್ಚು ಕನ್ನಡಿಗರು ಕೈ ಜೋಡಿಸಿದಂತೆ ಈ ಸೇವೆಯಲ್ಲಿ ಹೆಚ್ಚು ಅಭಿವೃದ್ಧಿಯನ್ನು ಕಾಣಬಹುದಾಗಿದೆ.

ಯಾಂತ್ರೀಕೃತ ಅನುವಾದ ಪರಿಪೂರ್ಣವಾಗಲು ಸಾಧ್ಯವಿಲ್ಲ. ಆದರೆ ಇಂಗ್ಲೀಷ್ ಚೆನ್ನಾಗಿ ಅರ್ಥವಾಗದವರಿಗೆ ಅರ್ಥವಾಗುವಷ್ಟಾದರೂ ಆಗಲಿ, ಅದಕ್ಕೆ ಸಹಕಾರ ನೀಡೋಣ ಅಲ್ವೇ?

ಇನ್ನೊಂದು ವಿಷಯ, ನೀವು ಬಳಸಿದ ಚಿತ್ರ ಗೂಗಲ್‍ನವರ ಕ್ರೋಮ್ ಬ್ರೌಸರ್‍ ಗೆ ಸಂಬಂಧಿಸಿದ್ದು, ಭಾಷಾಂತರ ಎಂಬುದು ಬೇರೆಯೇ ಪ್ರಾಜೆಕ್ಟ್.

****************

10 ಟಿಪ್ಪಣಿಗಳು Post a comment
 1. maaysa
  ಜೂನ್ 25 2011

  A well written article. The automatic translation services and research must be provided our karnataka government. Instead the government has spent crores of rupees on meaningless project. Some Pavanaja has written many articles about that.

  Google is providing this automatic translation service for free. It is an experimental project. More people use the translation, it gets better. Our media must popularize and hence invite more and more people to use this service and make it better of us and Kannada.

  ———————————The google translation————————————–
  ಒಂದು ಚೆನ್ನಾಗಿ ಬರೆದ ಲೇಖನ. ಸ್ವಯಂಚಾಲಿತ ಅನುವಾದ ಸೇವೆಗಳು ಮತ್ತು ಸಂಶೋಧನಾ ನಮ್ಮ ಕರ್ನಾಟಕ ಸರ್ಕಾರ ಒದಗಿಸಬೇಕಾಗುತ್ತದೆ. ಬದಲಿಗೆ ಸರ್ಕಾರದ ಅರ್ಥಹೀನ ಯೋಜನೆಯಲ್ಲಿ ರೂಪಾಯಿಗಳ ಕೋಟಿ ಖರ್ಚು ಮಾಡಿದೆ. ಕೆಲವು Pavanaja ಆ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ.

  ಗೂಗಲ್ ಉಚಿತವಾಗಿ ಈ ಸ್ವಯಂಚಾಲಿತ ಅನುವಾದ ಸೇವೆ ಒದಗಿಸುತ್ತದೆ. ಇದು ಒಂದು ಪ್ರಾಯೋಗಿಕ ಯೋಜನೆಯಾಗಿದೆ. ಇನ್ನಷ್ಟು ಜನರು ಅನುವಾದ ಬಳಕೆ, ಇದು ಉತ್ತಮ ಪಡೆಯುತ್ತದೆ. ನಮ್ಮ ಮಾಧ್ಯಮ ಜನಪ್ರಿಯತೆಯನ್ನು ಆದ್ದರಿಂದ ಈ ಸೇವೆ ಬಳಕೆ ಮತ್ತು ನಮಗೆ ಮತ್ತು ಕನ್ನಡದ ಇದು ಉತ್ತಮ ಮಾಡಲು ಹೆಚ್ಚು ಹೆಚ್ಚು ಜನರನ್ನು ಆಮಂತ್ರಿಸಲು ಮಾಡಬೇಕು.

  —————————————-Phonetically————————————————–
  Ondu cennāgi bareda lēkhana. Svayan̄cālita anuvāda sēvegaḷu mattu sanśōdhanā nam’ma karnāṭaka sarkāra odagisabēkāguttade. Badalige sarkārada arthahīna yōjaneyalli rūpāyigaḷa kōṭi kharcu māḍide. Kelavu Pavanaja ā bagge anēka lēkhanagaḷannu barediddāre.

  Gūgal ucitavāgi ī svayan̄cālita anuvāda sēve odagisuttade. Idu ondu prāyōgika yōjaneyāgide. Innaṣṭu janaru anuvāda baḷake, idu uttama paḍeyuttade. Nam’ma mādhyama janapriyateyannu āddarinda ī sēve baḷake mattu namage mattu kannaḍada idu uttama māḍalu heccu heccu janarannu āmantrisalu māḍabēku.

  ಉತ್ತರ
 2. Narendra Shetty
  ಜೂನ್ 25 2011

  very good article, instead of criticizing let us join hands to assist them to improve the quality.

  ಉತ್ತರ
 3. ಜೂನ್ 25 2011

  maaysa and narendra, Thank you for your comments.
  ——-
  maaysa ಮತ್ತು ನರೇಂದ್ರ, ನಿಮ್ಮ ಅಭಿಪ್ರಾಯ ಧನ್ಯವಾದಗಳು.
  ——-
  Maaysa mattu narēndra, nim’ma abhiprāya dhan’yavādagaḷu.

  ಉತ್ತರ
 4. ಜೂನ್ 25 2011

  ಒಳ್ಳೆಯ ಬರಹ. ತಮ್ಮ ಜವಾಬ್ದಾರಿ ಬಿಟ್ಟು ಬರೀ ತಪ್ಪು ಹುಡುಕೋದ್ರಲ್ಲೇ ಇರ್ತಾರೆ ನಮ್ ಪತ್ರಿಕೆಗಳು.

  ಬೆರಳ ತುದಿಯಲ್ಲೇ ಮಾಹಿತಿ ಕೊಡುವ ಅಂತರಜಾಲದ ಬಗ್ಗೆ ಬರೆಯುವಾಗ ಅದೇ ಬೆರಳತುದಿ ಮತ್ತು ತಲೆಯನ್ನು ಬಳಸಿ ಸರಿಯಾದ ವಿಷಯ ತಿಳಿದುಕೊಳ್ಳಬಹುದಿತ್ತು. ಆಲ್ಫಾ ವರ್ಷನ್ ಬಗ್ಗೆ, ಒಂದು ತಂತ್ರಾಂಶದ ತಯಾರಿಕೆಯ, ಬಿಡುಗಡೆಯ ಹಿಂದೆ ಮುಂದೆ ಗೊತ್ತಿಲ್ಲದೇ ಅದರಲ್ಲಿರುವ ಅಧ್ವಾನಗಳನ್ನು ದೊಡ್ಡದಾಗಿ ಪ್ರಕಟಿಸಿರುವ ಉದಯವಾಣಿ ವರದಿಗಾರರು ಸ್ವಲ್ಪ ವ್ಯವಧಾನ ಇಟ್ಟುಕೊಂಡು ಅದೇ ಗೂಗಲ್ಲಿನಲ್ಲಿ ಒಮ್ಮೆ ’ಆಲ್ಫಾ’ ಅಂದರೆ ಏನು ಎಂದು ತಿಳಿದುಕೊಂಡು ಮುಂದುವರೆಯಬಹುದಿತ್ತಲ್ಲವೇ?

  ಅದೇ ಉದಯವಾಣಿಯ ಮತ್ತೊಂದು ಸುದ್ದಿ ನೋಡಿ. ಗೂಗಲ್ ಅನುವಾದಕ ಸೇವೆ ಈಗಾಗಲೇ ಹಿಂದಿ, ಮರಾಠಿ, ಮಲಯಾಳ, ಪಂಜಾಬಿ ಭಾಷೆಗಳಲ್ಲಿ ಲಭ್ಯವಿದೆ ಎಂದು ಬರೆಯಲಾಗಿದೆ. ಗೂಗಲ್ ನಲ್ಲಿರುವ ೬೩ ಭಾಷೆಗಳಲ್ಲಿ ಇನ್ನೂ ಈ ಮೇಲೆ ಹೇಳಿದ ಭಾಷೆಗಳಿಗೆ ತರ್ಜುಮೆ ಸೌಲಭ್ಯ ಇಲ್ಲ. Google Translateನಲ್ಲಿ ನೋಡಿದರೆ ಕಾಣುತ್ತಲೂ ಇಲ್ಲ. ಅಂದಮೇಲೆ ಇದು ಉದಯವಾಣಿಯವರಿಗೆ ಮಾತ್ರ ಕಂಡದ್ದೆಲ್ಲಿ?! ಗೊತ್ತಿಲ್ಲ.

  “ಬಾಯಿಗೆ ಬಂದಂತೆ ಯದ್ವಾತದ್ವಾ ಅನುವಾದ ಮಾಡುವ ಸೇವೆ ಇಟ್ಟುಕೊಂಡು ನಾವೇನು ಮಾಡುವುದು” ಎಂದು ಗೂಗ್ಲ್ ವಿಜ್ಞಾನಿಗಳಿಗೆ ಪ್ರಶ್ನೆ ಹಾಕುವ ಮೊದಲು ತಮ್ಮ ತಿಳುವಳಿಕೆ ಎಷ್ಟಿದೆ ಎಂಬುದನ್ನೂ ನೋಡಿಕೊಳ್ಳಲಿ.

  ಇದು ಕೇವಲ ಇಂಗ್ಲೀಷ್ನಿಂದ ಕನ್ನಡಕ್ಕೆ ತರ್ಜುಮೆ ಮಾತ್ರಕ್ಕಲ್ಲ. ಪೂರ್ತಿ ಅಭಿವೃದ್ಧಿ ಆದರೆ ಇಂಗ್ಲೀಷೂ ಸೇರಿದಂತೆ ಸದ್ಯಕ್ಕೆ ಅಲ್ಲಿ ಲಭ್ಯವಿರುವ ೬೩ ಭಾಷೆಗಳ ನಡುವೆ ಉಚಿತವಾಗಿ ಪರಸ್ಪರ ತರ್ಜುಮೆ ಸಾಧ್ಯವಾಗಿಸಬಲ್ಲ ಟೂಲ್ ಇದು.

  Thanks ಕಾಲಂ ೯ & ನಿಲುಮೆ.

  ಉತ್ತರ
  • ಜೂನ್ 26 2011

   ವಿಕಾಸ್ ಹೆಗಡೆ :
   ಅದೇ ಉದಯವಾಣಿಯ ಮತ್ತೊಂದು ಸುದ್ದಿ ನೋಡಿ. ಗೂಗಲ್ ಅನುವಾದಕ ಸೇವೆ ಈಗಾಗಲೇ ಹಿಂದಿ, ಮರಾಠಿ, ಮಲಯಾಳ, ಪಂಜಾಬಿ ಭಾಷೆಗಳಲ್ಲಿ ಲಭ್ಯವಿದೆ ಎಂದು ಬರೆಯಲಾಗಿದೆ. ಗೂಗಲ್ ನಲ್ಲಿರುವ ೬೩ ಭಾಷೆಗಳಲ್ಲಿ ಇನ್ನೂ ಈ ಮೇಲೆ ಹೇಳಿದ ಭಾಷೆಗಳಿಗೆ ತರ್ಜುಮೆ ಸೌಲಭ್ಯ ಇಲ್ಲ. Google Translateನಲ್ಲಿ ನೋಡಿದರೆ ಕಾಣುತ್ತಲೂ ಇಲ್ಲ. ಅಂದಮೇಲೆ ಇದು ಉದಯವಾಣಿಯವರಿಗೆ ಮಾತ್ರ ಕಂಡದ್ದೆಲ್ಲಿ?! ಗೊತ್ತಿಲ್ಲ.

   correction: ಮೇಲೆ ಬರೆದ ಭಾಷೆಗಳಲ್ಲಿ ಹಿಂದಿ ಹೊರತುಪಡಿಸಬೇಕು. ಗೂಗಲ್ ಅನುವಾದಕ ಸೇವೆ ಹಿಂದಿಗೆ ಇದೆ.

   ಉತ್ತರ
 5. maaysa
  ಜೂನ್ 25 2011

  Google translation is the first ever opportunity. English and Kannada are very different. A lot of research is required. Such a research is very expensive. Still, this service is free. The translation of small statements is quite efficient. The translation is not only between Kannada and English. Many other languages are also supported.

  ————————Google translation—————————
  ಗೂಗಲ್ ಭಾಷಾಂತರ ಮೊದಲ ಅವಕಾಶ. ಇಂಗ್ಲೀಷ್ ಮತ್ತು ಕನ್ನಡ ಬಹಳ ವಿಭಿನ್ನ. ಸಂಶೋಧನೆಯ ಬಹಳಷ್ಟು ಅಗತ್ಯವಿದೆ. ಇಂತಹ ಒಂದು ಸಂಶೋಧನೆ ಬಹಳ ದುಬಾರಿ. ಆದರೂ, ಈ ಸೇವೆ ಉಚಿತ. ಸಣ್ಣ ಹೇಳಿಕೆಗಳ ಅನುವಾದ ಸಾಕಷ್ಟು ಪರಿಣಾಮಕಾರಿಯಾಗಿದೆ. ಅನುವಾದ ಮಾತ್ರ ಕನ್ನಡ ಮತ್ತು ಇಂಗ್ಲೀಷ್ ನಡುವೆ ಅಲ್ಲ. ಅನೇಕ ಇತರ ಭಾಷೆಗಳು ಬೆಂಬಲಿತವಾಗಿದೆ.
  ———————— Phonetically——————————————
  Gūgal bhāṣāntara modala avakāśa. Iṅglīṣ mattu kannaḍa bahaḷa vibhinna. Sanśōdhaneya bahaḷaṣṭu agatyavide. Intaha ondu sanśōdhane bahaḷa dubāri. Ādarū, ī sēve ucita. Saṇṇa hēḷikegaḷa anuvāda sākaṣṭu pariṇāmakāriyāgide. Anuvāda mātra kannaḍa mattu iṅglīṣ naḍuve alla. Anēka itara bhāṣegaḷu bembalitavāgide.

  ಉತ್ತರ
 6. ಜೂನ್ 25 2011

  Very nice!!

  ಉತ್ತರ
 7. P.Ramachandra, Ras Laffan-Qatar
  ಜೂನ್ 26 2011

  (ಪ್ರಾಯಶಃ ) ಇದು ಸಮಗ್ರ ವಿಷಯವನ್ನು ಅರಿತು ಸಂಕ್ಷಿಪ್ತ ವಾಕ್ಯಗಳಲ್ಲಿ ನಾಡಿನ ಜನತೆಗೆ ತಿಳಿಸಲು ಇಂದಿನ ಪತ್ರಕರ್ತರಿಗೆ ಲಭ್ಯವಾದ ಆದುನಿಕ ಮಾಹಿತಿ ತಂತ್ರಜ್ಞಾನದ ಪ್ರಭಾವವೋ ಏನೋ ?

  -ಪ.ರಾಮಚಂದ್ರ,
  ರಾಸ್ ಲಫ್ಫಾನ್, ಕತಾರ್.

  ಉತ್ತರ
 8. Koodli
  ಜೂನ್ 26 2011

  Shankara bhattaru enu heltaro?? google ge CV kalasabahudu, avaranna tiddakke 😛

  ಉತ್ತರ
 9. ಜೂನ್ 27 2011

  ಕನ್ನಡ ಅಥವ ಬೇರಾವುದೆ ಭಾರತೀಯ ಭಾಷೆಯ ಸಂಕೀರ್ಣತೆಯಿಂದಾಗಿ ಯಾಂತ್ರಿಕ ಅನುವಾದ (ಮೆಶೀನ್ ಟ್ರಾನ್ಸಲೇಶನ್) ತಂತ್ರಜ್ಞಾನವನ್ನು ಹೊರತರುವುದು ಒಂದು ಸವಾಲೆ ಸರಿ. ಹೀಗಿರುವಾಗ ಉಚಿತವಾಗಿ ಗೂಗಲ್‌ನವರು ನೀಡಿರುವ ಈ ಸೇವೆಯನ್ನು ಹೀಗೆಳೆಯುವುದು ಎಷ್ಟು ತರ!? ಈ ಆಲ್ಫಾ ಆವೃತ್ತಿಯನ್ನು ‘ಬಳಸಿ ಹಾಗು ಬೆಳೆಸಲು ನೆರವಾಗಿ’ ಎಂದು ಕನ್ನಡಿಗರಿಗೆ ತಿಳಿಸುವ ಬದಲು ಅದನ್ನು ಟೀಕೆ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ, ಉದಯವಾಣಿ ಹೀಗೆ ಮಾಡಬಾರದಿತ್ತು!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments