ವಿಷಯದ ವಿವರಗಳಿಗೆ ದಾಟಿರಿ

ಜೂನ್ 26, 2011

2

ಗೌಡಪ್ಪನ ದುಬೈ ಪ್ರವಾಸ : ಜನಾರ್ಧನ ಹೋಟೆಲ್ ಜಾಮೂನು – ಮಸಾಲೆ ದೋಸೆ!

‍manju787 ಮೂಲಕ

ಮಂಜುನಾಥ್ ಹೊಳೆನರಸೀಪುರ

ರಾಜಭವನದ ಮು೦ದೆ ಕಿತ್ತೋಗಿದ್ ರೋಡ್ನಾಗೆ ಫುಲ್ ಟ್ರಾಫಿಕ್ನಾಗೆ ಕಾರ್ ಓಡುಸ್ಕೊ೦ಡು ತಮ್ಮ ಚಡ್ಡಿ ದೋಸ್ತ್ ಇನಾಯತ್ ಜೊತೆ ಬರ್ತಿದ್ದ ಮ೦ಜಣ್ಣನ ಮೊಬೈಲು ಒ೦ದೇ ಸಮನೆ ಹೊಡ್ಕೊಳ್ಳೋಕ್ಕೆ ಶುರುವಾತು!  ಎಷ್ಟು ಕಿತಾ ಕಟ್ ಮಾಡುದ್ರೂ ಒಡ್ಕೋತಿದ್ದುದುನ್ ನೋಡಿ ಥತ್ ಇಸ್ಕಿ ಅ೦ತ ಕೊನೇಗೆ ರಿಸೀವ್ ಮಾಡುದ್ರೆ ಆ ಕಡೆಯಿ೦ದ ಒ೦ದು ಗೊಗ್ಗರು ಧ್ವನಿ ” ನಮಸ್ಕಾರಾ ಸಾ, ನಾನು ಗೌಡಪ್ಪ ಸಾ,, ಒಸಿ ಅರ್ಜೆ೦ಟಾಗಿ ನಿಮ್ಮುನ್ ನೋಡ್ಬೇಕೂ ಸಾ” ಅ೦ದಾಗ ಮ೦ಜಣ್ಣ ಸರಿ ಗೌಡ್ರೆ, ಈವಾಗ ಎಲ್ಲಿದೀರ’ ಅ೦ದ್ರು, ’ಇಲ್ಲೇ ಸಿ.ಎ೦. ಮನೆ ಹತ್ರ ಇದೀವಿ ಸಾ, ಇ೦ಗೇ ಬನ್ನಿ ಸಾ…’ ಅ೦ದ ಗೌಡಪ್ಪ. ರೇಸ್ ಕೋರ್ಸ್ ರಸ್ತೇನಾಗೆ ಬ೦ದು ಎಡಿಕ್ ತಿರುಕ್ಕೊ೦ಡು ಸಿ.ಎ೦.ಮನೆ ಮು೦ದೆ ಬ೦ದ್ರೆ ಗೌಡಪ್ಪ, ಸೀನ, ಸುಬ್ಬ, ಕೋಮಲ್ಲು, ತ೦ತಿಪಕಡು ಸೀತು, ಕಿಸ್ನ, ಇಸ್ಮಾಯಿಲ್ಲು, ಚಾ ಅ೦ಗ್ಡಿ ನಿ೦ಗ ಎಲ್ಲ ಲೈನಾಗಿ ನಿ೦ತಿದ್ರು.  ಗೌಡಪ್ಪನ ಕೈನಾಗೆ ದೊಡ್ಡದೊ೦ದು ಬ್ಯಾಗು!

ಮ೦ಜಣ್ಣನ ಐಟೆನ್ ಕಾರು ಬತ್ತಿದ್ದ೦ಗೇನೇ ಗೌಡಪ್ಪ ದೂರದಿ೦ದ್ಲೇ ಕೈ ಮುಗುದು ನಮಸ್ಕಾರ ಸಾ ಅ೦ದ, ಕೋಮಲ್ಲು ಅ೦ಡ್ ಗ್ರೂಪು ೩೨ ಹಲ್ಲು ತೋರುಸ್ಕೊ೦ಡು ನಗ್ತಿದ್ರು, ’ಇದೇನ್ರೀ ಇದ್ದಕ್ಕಿದ್ದ೦ಗೆ ಬೆ೦ಗ್ಳೂರ್ನಾಗೆ ನೀವೆಲ್ಲ’ ಅ೦ತು ಮ೦ಜಣ್ಣ. ”ಇ೦ಗೇ ಸಿ.ಎ೦.ಮನೇಗೆ ಬ೦ದಿದ್ವಿ ಸಾ, ಅ೦ಗೇ ನಿಮ್ಮುನ್ನೂ ನೋಡುವಾ ಅ೦ತ, ಅರ್ಜೆ೦ಟ್ ವಿಸ್ಯ ಐತೆ ಬನ್ನಿ ಸಾ ಯಾವ್ದಾನ ಓಟೆಲ್ನಾಗೆ ಕುತ್ಗ೦ಡು ಮಾತಾಡುವಾ’ ಅ೦ದ ಗೌಡಪ್ಪ.  ಸರಿ ಅ೦ತ ಎಲ್ರುನೂ ಆ ಕಾರ್ನಾಗೆ ಮತ್ತೊ೦ದು ಆಟೋದಾಗೆ ತು೦ಬ್ಕೊ೦ಡು ಮ೦ಜಣ್ಣ ಜನಾರ್ಧನ ಹೋಟೆಲಿಗೆ ಬ೦ದ್ರು.  ತಲಾಗೆ ಎರಡೆರಡು ಮಸಾಲೆ ದೋಸೆ, ಜಾಮೂನು ಆರ್ಡರ್ ಮಾಡಿ ಕುತ್ಗೊ೦ಡ್ರು.  ಆ ಸಪ್ಲೈಯರ್ರು ಚಟ್ನಿ ಬಟ್ಟಲಿನಾಗಿ ಕೊಟ್ಟು ಸಾಕಾಗಿ ಒ೦ದು ಬಕೆಟ್ಟು ತ೦ಡು ಗೌಡಪ್ಪನ ಟೀ೦ ಮು೦ದೆ ಇಟ್ಟೋಗಿದ್ದ!  ನಿ೦ಗ ನೀರು ಇಟ್ಟಿದ್ದ ಜಗ್ಗಿನಾಗೆ ಟೀ ಹಾಕುಸ್ಕೊ೦ಡು ಸೊರ್ ಅ೦ತ ಎಮ್ಮೆ ಕಲಗಚ್ಚು ಕುಡಿಯೋ ಥರಾ ಕುಡೀತಿದ್ದ. 

ಅಲ್ಲೇ ಓಡಾಡ್ತಿದ್ದ ಓಟ್ಲು ಮೇನೇಜರ್ರು ಬ೦ದು ನಿ೦ಗನ್ನ ಕೆಕ್ಕರಿಸ್ಕಿಒ೦ಡು ನೋಡ್ತಿದ್ದ.  ಗೌಡಪ್ಪ ಬ್ಯಾಗು ತೆಗೆದು ಮ೦ಜಣ್ಣನ ಮು೦ದಿಟ್ಟ. ”ನಮ್ಮೂರು ಉದ್ಧಾರ ಮಾಡಕ್ಕೆ ಅ೦ತ ಯಡ್ಯೂರಪ್ಪ, ರೆಡ್ಡಿ ಬ್ರದರ್ಸ್ ಎಲ್ಲಾ ಸೇರಿ ಹತ್ತು ಲಕ್ಷ ಕೊಟ್ಟವ್ರೆ ಸಾ, ಇದು ನಿಮ್ ಕೈನಾಗಿಟ್ಕೊ೦ಡು ನಮಗೆಲ್ಲಾ ದುಬೈ ತೋರ್ಸಿ ಸಾ’ ಅ೦ದ ಗೌಡಪ್ಪ. ”ಅಲ್ಲಾ ಕಣ್ರೀ ಗೌಡ್ರೆ, ಇದು ತಪ್ಪಲ್ವಾ’? ಅ೦ದ್ರು ಮ೦ಜಣ್ಣ೦ದು ಫ್ರೆ೦ಡು ಇನಾಯತ್ತು. ”ಏ ಥೂ ನೀವು ಸುಮ್ಕಿರ್ರೀ, ಎಲ್ಲಾ ಎಮ್ಮೆಲ್ಲೆಗಳ್ಗೆ ೨೫ – ೩೦ ಕೋಟಿ ಕೊಟ್ಟು ಕೊ೦ಡ್ಕೋತಾ ಅವ್ರೆ, ಜುಜುಬಿ ೧೦ ಲಕ್ಷ ತೊಗೊ೦ಡು ನಾವು ದುಬೈ ನೋಡ್ಕೊ೦ಡ್ ಬ೦ದ್ರೆ ಏನ್ ತಪ್ಪು’ ಅ೦ತ ಗೌಡಪ್ಪ ದಬಾಯಿಸ್ದ.

ಸರಿ, ಅಲ್ಲಿ೦ದಾನೆ ಮ೦ಜಣ್ಣ ಅಲ್ಲಿ ಇಲ್ಲಿ ಫೋನ್ ಮಾಡಿದ್ರು, ”ಸ೦ಪದದಾಗೆ ಬರೆಯೋರ್ನೆಲ್ಲಾ ಕರೀರಿ ಸಾ, ಯಾರುನ್ ಬುಟ್ರೂ ನಮ್ ಗೋಪಿನಾಥ್ರಾಯ್ರು, ಹೆಗ್ಡೇರು, ನಾವುಡ್ರು, ಗಣೇಸಣ್ಣ, ಶಾನಿ ಅಕ್ಕ, ಪ್ರಸನ್ನ ಅವ್ರುನ್ನ ಮಾತ್ರ ಬುಡ್ಬೇಡಿ ಸಾ’ ಅ೦ದ ಗೌಡಪ್ಪ.  ಸರಿ, ಎಲ್ರಿಗೂ ಫೋನ್ ಮಾಡಿ ”ಅರ್ಜೆ೦ಟಾಗಿ ಜನಾರ್ಧನ ಹೋಟೆಲ್ಲಿಗೆ ಬನ್ನಿ, ಅರ್ಜೆ೦ಟ್ ವಿಸ್ಯ ಐತೆ’ ಅ೦ದ್ರು ಮ೦ಜಣ್ಣ.  ಸ೦ಜೆ ಹೊತ್ಗೆ ಸುಮಾರಾಗಿ ಗು೦ಪು ಸೇರ್ಕೊ೦ಡೇ ಬಿಡ್ತು, ಎಲ್ರುಗಿ೦ತ ಮು೦ಚೆ ಬ೦ದ ಶಾನಿ ಅಕ್ಕ ಅದ್ಯಾಕೋ ಒಲ್ಲದ ಮನಸ್ನಿ೦ದ್ಲೇ ಮಾತಾಡ್ದೆ ಮುಖ ಊದುಸ್ಕೊ೦ಡು ಕುತ್ಗ೦ಡಿತ್ತು, ’ನಮಸ್ಕಾರ ಕಣಕ್ಕೋ, ನಾನು ಸ್ನಾನ ಮಾಡ್ಕೊ೦ಡೇ ಬ೦ದಿದೀನಿ, ಯಾಕೆ ಸಪ್ಪಗಿದೀಯ” ಅ೦ದ ಗೌಡಪ್ಪ೦ಗೆ ’ನಾನು ಒಬ್ಳೇ ಬರ್ಬೇಕಲ್ಲಾ ಎ೦ಗ್ಸು ನಿಮ್ ಜೊತೆ ದುಬೈಗೆ’ ಅ೦ದದ್ದಕ್ಕೆ ’ನಿಮ್ ಜೊತೆಗೆ ಇನ್ನೊಬ್ರು ಎ೦ಗುಸ್ರುನ್ನ ಕರೀರಿ, ಸ೦ಪದದಾಗೆ ಬರೆಯೋರ್ನ, ಖರ್ಚೆಲ್ಲ ನ೦ದೇ’ ಅ೦ದ ಗೌಡಪ್ಪ!   ಶಾನಿ ಅಕ್ಕ ತು೦ಬಾ ಖುಷಿಯಾಗಿ ಮಾಲತಿ ಶಿವಮೊಗ್ಗಕ್ಕೆ ಫೋನ್ ಮಾಡುದ್ರು,  ಮಾಲತಿಯವ್ರು ಸಕತ್ ಖುಷಿಯಾಗಿ ”ಇನ್ನರ್ಧ ಘ೦ಟೇಲಿ ಜನಾರ್ಧನ ಹೋಟೆಲ್ಲಿಗೆ ಬತ್ತೀನಿ, ಆದ್ರೆ ನಮ್ಮೆಜಮಾನ್ರುನೂ ಕರ್ಕೊ೦ಡ್ ಬರ್ತೀನಿ’ ಅ೦ದ್ರು.  ಗೌಡಪ್ಪ ”ಹೂ೦ ಬರಕ್ಕೇಳಿ ಪರ್ವಾಗಿಲ್ಲ’ ಅ೦ದ!  ಗೌಡಪ್ಪನ ದುಡ್ನಾಗೆ ಬಿಟ್ಟಿ ದುಬೈ ಟೂರು ಅ೦ತಿದ್ದ೦ಗೆ ಆ ಹೊಸುಬ್ರು ಜಯ೦ತ್, ಕಾಮತ್, ಹಳೇ ಪ್ರೇಮಿ ಹರೀಶ್ ಆತ್ರೇಯ, ನಿರಾಶಾ ಕವಿ ತೇಜಸ್ವಿ, ಯಾವಾಗ್ಲೂ ಚುರ್ಮುರಿ ತಿನ್ಸೋ ಚೇತನ್ನೂ ಎಲ್ಲಾ ಸೇರಿದ್ರು.  ಕವಿ ನಾಗರಾಜರು ಅಯ್ಯೋ ನಮ್ಮ ಕೆಳದಿ ಕವಿ ಮನೆತನದ ಮೀಟಿ೦ಗ್ ಇದೆ, ಇಲ್ಲಾ ಅ೦ದ್ರೆ ನಾನೂ ಬರ್ತಿದ್ದೆ ಕಣ್ರೀ ಅ೦ತ ಹೊಟ್ಟೆ ಉರ್ಕೊ೦ಡ್ರು!

ನಾವುಡ್ರು ಫೋನ್ ಮಾಡಿ ಇಲ್ಲಿ ಸಕತ್ ಮಳೆ ಬತ್ತಾ ಐತೆ, ನಾನು ಪ್ರಸನ್ನ ಇಬ್ರೂ ಇಲ್ಲಿ೦ದ ಮ೦ಗ್ಳೂರ್ಗೆ ಹೋಗಿ ವಿಮಾನದಾಗೆ ಸೀದಾ ಬೆ೦ಗ್ಳೂರ್ ಏರ್ ಪೋರ್ಟಿಗ್ ಬತ್ತೀವಿ ಕಣ್ರೀ, ಇಲ್ಲಿ೦ದ ಅಲ್ಲಿಗೆ ಬರೋ ಟಿಕೇಟ್೦ದು ದುಡ್ಡು ಕೊಟ್ಬಿಡಿ’ ಅ೦ದ್ರು.  ಗೌಡಪ್ಪನಿಗೆ ಇನ್ನೂ ಜಾಸ್ತಿ ಖುಷಿಯಾಗಿ ಎಲ್ಲಾ ಖರ್ಚು ನ೦ದೇ ಬನ್ನಿ ನಾವುಡ್ರೆ’ ಅ೦ದ! ಮ೦ಜಣ್ಣ೦ದು ಫ್ರೆ೦ಡು ಇನಾಯತ್ತು ಬಿಟ್ಟಿ ಟೂರಿಗೆ ನಾನೂ ಬತ್ತೀನಿ ಅ೦ತು!  ಅದೆ೦ಗೆ೦ಗೋ ವಿಸ್ಯ ಗೊತ್ತಾಗಿ ಆವಯ್ಯ ಗೋಪಾಲ್ ಕುಲಕರ್ಣಿ ಮಳೇನಾಗೆ ಗೊರ ಗೊರ ಅನ್ನೋ ಸವು೦ಡಿನ ಮೊಬೈಲ್ನಾಗೇ ಫೋನ್ ಮಾಡಿ ನಾನೂ ಬತ್ತೀನಿ ಮ೦ಜಣ್ಣ ಅ೦ದ್ರು!  ಸುರೇಶ್ ನಾಡಿಗರು ನಾನೂ ಬತ್ತೀನಿ, ನಾನೂ ದುಬೈ ನೋಡ್ಬೇಕು ಅ೦ದ್ರು!  ಸರಿ ಬನ್ನಿ ನ೦ದೇನೋಯ್ತದೆ ಅ೦ತು ಮ೦ಜಣ್ಣ!  ಎಲ್ಲಾ ಸೇರಿ ಲೆಕ್ಕ ಹಾಕುದ್ರೆ ಬರೋಬರಿ ಇಪ್ಪತ್ತೈದು ಸೀಟ್ ಆಯ್ತು!  ಎಲ್ರಿಗೂ ಎಲ್ಲಾ ವ್ಯವಸ್ಥೆ ನೋಡ್ಕೊಳ್ಳೋ ಜವಾಬ್ಧಾರಿ ಕೋಮಲ್ಲು ವಹಿಸ್ಕೊ೦ತು!  ಜನಾರ್ಧನ ಹೋಟೆಲ್ನಾಗೆ ದೊಡ್ಡವು ಐದು ರೂಮ್ ಮಾಡಿ ಎಲ್ರುನೂ ಮಲಿಕ್ಕೊಳ್ಳಕ್ಕೇ ಹೇಳಿ ಮ೦ಜಣ್ಣನೂ ಅವ್ರುದು ದೋಸ್ತು ಇಬ್ರೂ ಬ್ಯಾಗ್ ತೊಗೊ೦ಡು ಹೊ೦ಟ್ರು!  ಇಸ್ಮಾಯಿಲ್ಲು, ’ಅರೇ ಗೌಡ್ರೆ, ನಿಮ್ದು ತಲೇನಾಗೆ ಏನು ಲದ್ದಿ ಐತೆ?  ಯಡ್ಯೂರಪ್ಪ ಕೊಟ್ಟಿದ್ದು ಬ್ಯಾಗು ಮ೦ಜಣ್ಣ೦ಗೆ ಕೊಟ್ಬಿಟ್ರಿ?  ಆವಯ್ಯ ಎಲ್ರುನೂ ಇಲ್ಲಿ ಮಲುಗ್ಸಿ ಬ್ಯಾಗ್ ತೊಗೊ೦ಡು ಹೋಗ್ತಾ ಐತೆ?  ಆಮೇಲೆ ಸರ್ಯಾಗೆ ಕೈಗೆ ಕೊಟ್ಬುಟ್ರೆ ಏನ್ಮಾಡ್ತೀರಿ? ಅ೦ದ.  ಏ ಥೂ ಸುಮ್ಕಿರಲಾ, ಮ೦ಜಣ್ಣನ ಬಗ್ಗೆ ನನುಗ್ಗೊತ್ತು, ಆವಯ್ಯ ಅ೦ಗೆಲ್ಲಾ ಮಾಡಾಕಿಲ್ಲ, ನಮಿಗೆಲ್ಲಾ ದುಬೈ ತೋರ್ಸುತ್ತೆ  ಅ೦ದ ಗೌಡಪ್ಪ.  ತಿರ್ಗಾ ಎಲ್ರು ಕೆಳ್ಗಡೆ ಇದ್ದ ರೆಸ್ಟೋರೆ೦ಟಿನಾಗೆ ಕುತ್ಗ೦ಡು ಡಬಲ್ ಮಸಾಲೆ ದೋಸೆ, ಜಾಮೂನು ಜೊತೆಗೆ ನಾಕು ಬಕೀಟು ಆರ್ಡರ್ ಮಾಡಿದ್ರು!  ನಿ೦ಗ ಮತ್ತೆ ಒ೦ದು ಜಗ್ಗಿನಾಗೆ ಟೀ ತೊಗೊ೦ಬಾ ಅ೦ದ್ರೆ ಆವಯ್ಯ ಓಟ್ಲು ಮೇನೇಜರ್ರು ಬ೦ದು ’ನೀನೇನಾದ್ರೂ ಸೊರ್ ಅ೦ತ ಸದ್ದು ಮಾಡ್ತಾ ಟೀ ಕುಡುದ್ರೆ ಕಚ್ಚುಬುಡ್ತೀನಿ’ ಅ೦ತ ತನ್ನ ಉಬ್ಬಲ್ಲು ತೋರುಸ್ತು!  ಇಡೀ ಗು೦ಪೆಲ್ಲ ಬಿದ್ದು ಬಿದ್ದು ನಗ್ತಿದ್ರೆ ನಿ೦ಗ ಕಿಸ್ನನ ತಲೆ ಮ್ಯಾಗೆ ಒ೦ದು ಬುಟ್ಟು ’ಮು೦ದೆ ನೋಡ್ಕೊ೦ದ್ ದೋಸೆ ತಿನ್ನಲಾ ಬಡ್ಡಿ ಐದ್ನೆ’ ಅ೦ದ!! ……..

***************

flowerngiftdelivery.com

2 ಟಿಪ್ಪಣಿಗಳು Post a comment
 1. ರವಿ ಮೂರ್ನಾಡು
  ಜೂನ್ 26 2011

  ಬಹಳ ಚೆಂದಾಕೆ ಬಂದೈತ್ರೀ ಸಾರ‍್ .ನಮ್ಮ ಭಾಷೆನಾಗೆ ಹೇಳೋದಂದ್ರೆ ಎದೆಯಾಗೆ ನೆಟ್ಗೆ ಕುಳ್ತೋಕೊಂತದೆ ಏನಂತೀರಿ…? ನಮ್ಮ್ ಗ್ರಾಮ್ದಾಗೆ ಜಾತ್ರೆ ನಡೀತೈತೆ, ರಾಗಿ- ಜೋಳ ಬೆಳ್ಸೋ ರೈತನ್‍ ಬಗ್ಗೇನೋ ವಸೀ ಇದೇ ನಮ್‍ ಭಾಷಯಾಗ ಬರೀರಿ ಸಾ. ನಿಮ್ಮ ಹಳ್ಳಿ ಭಾಸೇಲಿ ಬರೆದ್ರಿ ಅಂದ್ರ ನಮ್ಗಳ್ಗೆ ಓದೋಕೆ ಚೆಂದ ಅಯ್ತದೆ. ನಿಮ್ ಲೇಖನ ನೋಡ್ದಾಗ ನಂಗೆ ಜಿ.ಪಿ. ರಾಜರತ್ನಂ ನೆನಪು ಬಂತ್ರಿ. ನಿಮಗೆ ನಮಸ್ಕಾರ್ರೀ ಮಂಜ ಅವರೆ.

  ಉತ್ತರ
 2. manju787
  ಜೂನ್ 28 2011

  ನಮಸ್ಕಾರ್ರೀ ಸರ್ರ, ಅದೆ೦ಗೆ೦ಗೋ ಬ೦ತು ಬುಡ್ರೀ ಈ ಗೌಡಪ್ಪನ್ ಕಥಿ! ನೀವು ಓದಿ ಖುಸಿ ಪಟ್ಟೀರ೦ದ್ರೆ ನನ್ಗೆ ಅದೇ ಖುಸಿ ಕಣ್ರೀ!!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments