ವಿಷಯದ ವಿವರಗಳಿಗೆ ದಾಟಿರಿ

ಜೂನ್ 27, 2011

14

ಜಾತಿ ವಿನಾಶವೋ? ಸಂಪ್ರದಾಯಗಳ ವಿನಾಶವೋ?

‍ನಿಲುಮೆ ಮೂಲಕ

– ಸಂತೋಷ್ ಕುಮಾರ್ ಪಿ.ಕೆ, ಶಂಕರಘಟ್ಟ

ಇತ್ತೀಚೆಗೆ ಶಿವಮೊಗ್ಗದಲ್ಲಿ ಜಾತಿ ವಿನಾಶ ಸಮಾವೇಶವೊಂದು ಜರುಗುತ್ತಿರುವುದು ಒಳ್ಳೆಯ ಸುದ್ದಿ. ಸಮಾಜದಲ್ಲಿರುವ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸಲು ಚಳುವಳಿಗಳು, ಸಮಾವೇಶಗಳು ಯಾವ ಸ್ವರೂಪದಲ್ಲಾದರೂ ನಡೆಯಲೇಬೆಕು. ಅದು ಭೌದ್ದಿಕ ಚಳುವಳಿಯಾಗಲಿ, ಸಾಮಾಜಿಕ ಚಳುವಳಿಯಾಗಲೀ ಎರಡೂ ಸಹ ಅಷ್ಟೇ ಪ್ರಮುಖವಾದವು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಮಾವೇಶ ಜಾತಿಯನ್ನು ನಾಶಮಾಡಲು ಅಂತರಜಾತಿವಿವಾಹಿತರನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಮಾನ ಮನಸ್ಕರನ್ನು ಒಟ್ಟಿಗೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿದೆ. ಅದರ ಜೊತೆ ಜೊತೆಗೆ ಭೌದ್ಧಿಕ ಚಳುವಳಿಯೂ ಸಹ ಆಗಿಂದಾಗ್ಗೆ ನಡೆಯುತ್ತಲೇ ಇದೆ. ಅಂತಹ ಚಳುವಳಿಯ ಕುರುಹಾಗಿ ಹಲವಾರು ಲೇಖನಗಳು ಮಾದ್ಯಮಗಳಲ್ಲಿ ಬರುತ್ತಿವೆ. ಹಾಗೆ ಬಂದಂತಹ ಒಂದು ಲೇಖನದ ವಿಮರ್ಶೆಯನ್ನು ಇಲ್ಲಿ ಮಾಡಲು ಪ್ರಯತ್ನಿಸಲಾಗುವುದು. ಇಂತಹ ಪ್ರಯತ್ನ ಏಕೆಂದರೆ ಕಳೆದ ೬೦, ೭೦ ವರ್ಷಗಳಿಂದಲೂ ಇಂತಹ ಚಳುವಳಿ ಸಮಾವೇಶ ನಡೆಯುತ್ತಿದ್ದರೂ ಜಾತಿ, ಶೋಷಣೆ, ಅನ್ಯಾಯ ದಿನೆದಿನೇ ಹೆಚ್ಚಾಗುತ್ತಿವೆ. ಕೇವಲ ಹಳೆಯ ಹಲಸಲು ವಿಚಾರಗಳನ್ನೇ ಪುನರಾವರ್ತಿಸುವ ಬದಲು ಸಮಸ್ಯೆ ಎಲ್ಲಿಂದ ಉಗಮವಾಗುತ್ತಿದೆ ಎಂಬುದನ್ನು ತುರ್ತಾಗಿ ಅರಿಯಬೇಕಾಗಿದೆ. ಆದ್ದರಿಂದ ಪ್ರಸಕ್ತ ಕಾಲಘಟ್ಟದಲ್ಲಿ ಇದುವರೆಗೂ ನಾವು ಕೇಳಿಕೊಂಡು ಬಂದಂತಹ ವಿಚಾರಗಳನ್ನು ಹಾಗೂ ಇಂದು ಹೇಳುತ್ತಿರು ವ ವಿಚಾರಗಳನ್ನು ಜೊತೆಗೆ ನಮ್ಮನ್ನು ನಾವೇ ಪುನರಾವಲೋಕಿಸುವ ಸಂದರ್ಭ ಇಂದು ನಮ್ಮ ಮುಂದಿದೆ.

ಎಸ್. ಕೆ ಭಗವಾನ್ ದಿನಾಂಕ 3 ಜೂನ್ 2011 ರಂದು ಪ್ರಜಾವಾಣಿಯಲ್ಲಿ  ಬರೆದ ಅವರ ಲೇಖನದ ಒಟ್ಟಾರೆ ವಾದ ಈ ರೀತಿಯಾಗಿತ್ತು,  ಜಾತಿಯನ್ನು ಇದುವರೆಗೂ ದೂರಿದ್ದು ಸಾಕು, ಇನ್ನು ಅದನ್ನು ನಾಶ ಮಾಡಲೇಬೇಕು. ಜಾತಿ ನಾಶವಾದರೆ ಹಲವಾರು ಸವಲತ್ತುಗಳು ಸಹ ಸುಮುದಾಯಗಳಿಗೆ ದೊರೆಯುತ್ತವೆ ಎಂದು ಲೇಖಕರು ಹೇಳುತ್ತಾರೆ. ಆದರೆ ಹಾಗೆ ಹೇಳುವ ಮುನ್ನ ಕೆಳಕಾಣಿಸಿರುವ ಪ್ರಶ್ನೆಗಳಿಗೆ ಯಾರಾದರೂ ಉತ್ತರಿಸಲೇಬೇಕು.

1.    ಜಾತಿ ವಿನಾಶ ಮಾಡುವುದು ಎಂದರೆ ಏನು? ಅದು ವಾಸ್ತವಿಕವಾಗಿ ಸಾಧ್ಯವೇ? ಜಾತಿ ವಿನಾಶವೆಂದರೆ ಈಗ ಅಸ್ತಿತ್ವದಲ್ಲಿರುವ ಜಾತಿ ಅಸ್ಮಿತೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕುವುದು. ಜಾತಿಯನ್ನು ಸಂಪೂರ್ಣವಾಗಿ ಏಕೆ ಅಳಿಸಿಹಾಕಬೇಕೆಂದರೆ ಅದು ಸಮಾಜದಲ್ಲಿ ಅನ್ಯಾಯ ಶೋಷಣೆಗಳಿಗೆ ದಾರಿ ಮಾಡಿಕೊಟ್ಟಿದೆ. ಇದು ಸತ್ಯವೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ. ಏಕೆಂದರೆ ಯಾವುದೋ ಭಾಗದಲ್ಲಿ ಯಾವುದೋ ಸಮುದಾಯಗಳು ಮತ್ತೊಂದು ಸಮುದಾಯಗಳ ಮೇಲೆ ಅಥವಾ ವೈಯುಕ್ತಿಕವಾಗಿ ತೊಂದರೆಯನ್ನುಂಟು ಮಾಡುತ್ತಿದ್ದರೆ ಅದನ್ನು ಖಂಡಿಸಿ ಅದನ್ನು ಹೋಗಲಾಡಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನಿಗೂ ಇದೆ. ಆದರೆ ಎಲ್ಲೋ ಆಗುವ ಘಟನೆಗಳಿಗೆ ಜಾತಿ ಕಾರಣವೆಂದು ಅದೂ ನಿರಾಧಾರವಾಗಿ ಅದನ್ನು ತೆಗಳುತ್ತಾ ಹಾಗೂ ಸಮಸ್ಯೆಯನ್ನು ಸಾರ್ವತ್ರಿಕರಣಗೊಳಿಸಿದರೆ ಶೋಷಣೆ ಎಂಬ ಕಾಯಿಲೆ ವಾಸಿಯಾಗಲಾರದು, ಅದಕ್ಕೆ ಸುಮಾರು ನೂರು ವರ್ಷಗಳಿಂದ ಜಾತಿವ್ಯವಸ್ಥೆಯ ವಿರುದ್ದ ನಡೆದ ಹೋರಾಟ ಹಾಗೂ ಬಂದಂತಹ ಸಾಹಿತ್ಯಗಳ ವಿಫಲ ಪ್ರಯತ್ನಗಳೇ ಸಾಕ್ಷಿ. ಜಾತಿಯನ್ನು ನಿರ್ದೇಶಿಸುವ ಯಾವುದಾದರೂ ತತ್ವವಿದೆಯೇ ಎಂದು ಹುಡುಕ ಹೊರಟರೆ ಆಗಲೂ ನಾವು ಸೋಲುತ್ತೇವೆ. ಹಾಗಾದರೆ ನಾಶ ಮಾಡುವುದು ಇನ್ನೇನನ್ನ? ಗೊತ್ತಿಲ್ಲ ಆದ್ದರಿಂದ ಮತ್ತೊಂದು ದಾರಿ ಹಿಡಿಯಲು ವಿದ್ವಾಂಸರು ಹಾಗೂ ಚಳುವಳಿಗಾರರು ಪ್ರಯತ್ನಿಸಿದ್ದಾರೆ ಅದೆಂದರೆ ಅಂತರ ಜಾತಿ ವಿವಾಹ. ಅಂತರ ಜಾತಿ ವಿವಾಹದಿಂದ ಹೇಗೆ ನೋಡಿದರೂ ಜಾತಿ ಗಟ್ಟಿಯಾಗಿ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತದೆಯೇ ಹೊರತು, ಜಾತಿ ವಿನಾಶ ಖಂಡಿತವಾಗುವುದಿಲ್ಲ. ನನ್ನ ಅನುಭವದಿಂದಲೇ ಹೇಳುವುದಾದರೆ ಬಂಟ ಮತ್ತು ಲಿಂಗಾಯತ ಜಾತಿಯವರು ಮದುವೆಯಾದರೆ ಒಂದೋ ಅವರು ಬಂಟರ ಜಾತಿಗೆ ಸೇರುತ್ತಾರೆ ಇಲ್ಲ ಲಿಂಗಾಯತರ ಕೋಮಿಗೆ ಸೇರುತ್ತಾರೆ. ಇವೆರಡೂ ಇಲ್ಲವಾದರೆ ಅಂದರೆ ಮದುವೆಯಾದ ನವವಿವಾಹಿತರನ್ನು ಎರಡೂ ಮನೆಯವರು ಸೇರಿಸದಿದ್ದರೆ ಮತ್ತೊಂದು ಇನ್ಯಾವುದೋ ಹೊಸ ಜಾತಿ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಅಂತರಜಾತಿ ವಿವಾಹವಾದರೂ ಸಹ ಇದುವರೆಗೂ ನಂಬಿರುವಂತೆ ಜಾತಿ ಸರ್ವನಾಶವಾಗದೇ ಮತ್ತೆ ಮತ್ತೆ ಅದು ಗಟ್ಟಿಗೊಳ್ಳುತ್ತಾ ಹೋಗುತ್ತದೆ.

2.    ಭಗವಾನ್ ರವರು ಅಂತರಜಾತಿ ವಿವಾಹವಾದವರಿಗೆ ಮಾತ್ರ ಸರಕಾರಿ ನೌಕರಿ ದೊರಕುವಂತೆ ತಾಕೀತು ಮಾಡಿದ್ದಾರೆ. ಅದನ್ನೂ ಒಂದು ಅತಿಗೆ ತೆಗೆದುಕೊಂಡು ಹೋದರೆ ಈ ಮುಂದಿನಂತೆ ಹೇಳಬಹುದು. ನೀವು ಸರಕಾರಿ ಉದ್ಯೋಗ ಪಡೆಯಬೇಕಾದರೆ ಬೇರೆಲ್ಲಾ ಅರ್ಹತೆಗಳಿಗಿಂತ ಅಂತರಜಾತಿ ವಿವಾಹವೇ ಮುಖ್ಯ. ಇದರ ಅರ್ಥ ಇನ್ನು ಮುಂದೆ ಮಕ್ಕಳು ಶಾಲೆಯಲ್ಲಿ ಉತ್ತಮ ವಾಗಿ ಓದಿ ಎಂದು ಹೇಳುವ ಪ್ರಮೇಯ ಬರುವುದಿಲ್ಲ ಎನಿಸುತ್ತದೆ, ಏಕೆಂದರೆ 21 ವರ್ಷದ ವರೆಗೆ ಹಾಗೂ ಹೀಗೋ ಕಾಲ ಹಾಕಿ ಅಂತರಜಾತಿ ವಿವಾಹವಾದರೆ ಸರಕಾರಿ ಕೆಲಸ ಖಾಯಂ. ಇದಕ್ಕೂ ಹೆಚ್ಚಿನದಾಗಿ ಶಿಕ್ಷಣವೂ ಬೇಡ, ವಿದ್ಯಾಸಂಸ್ಥೆಗಳೂ ಬೇಡ, ಎಲ್ಲರೂ ಹಾಯಾಗಿ ಮದುವೆಯಾಗಿ ಕಾಲ ಹಾಕಿದರೆ ಸಾಕು. ಇದರಿಂದ ಭಾರತದಲ್ಲಿರುವ ಎಲ್ಲಾ ಶೋಷಣೆಗಳು ತನ್ನಿಂತಾನೆ ಸರಿಯಾಗಿಬಿಡುತ್ತವೆ. ತಾರ್ಕಿಕವಾಗಿ ಭಗವಾನ್ ರವರ ವಾದವನ್ನು ಹೀಗೆಯೇ ಅರ್ಥಮಾಡಿಕೊಳ್ಳಲು ಸಾಧ್ಯ. ಇದರ ಇನ್ನೊಂದು ಸಾಧ್ಯತೆಯೂ ಇದೆ, 21 ವರ್ಷದವರೆಗೆ ಶಿಕ್ಷಣ ಮಾಡುವ ಅಗತ್ಯವಿಲ್ಲ, ಏಕೆಂದರೆ ವಿವಾಹವಾದರೆ ಹೇಗಿದ್ದರೂ ಕೆಲಸ ಸಿಗುತ್ತದೆ ಎಂದಾದ ಮೇಲೆ, ಬಹುತೇಕರು ಸಂವಿಧಾನದಲ್ಲಿರುವ ವಿವಾಹಕ್ಕೆ ನಿಗಧಿಪಡಿಸಿರುವ 21 ವರ್ಷವನ್ನು ಅದಕ್ಕೂ ಕಡಿಮೆಗೊಳಿಸಬೇಕೆಂದು ಒತ್ತಾಯಿಸಬಹುದು, ಏಕೆಂದರೆ ಬೇಗ ವಿವಾಹವಾದರೆ ಬೇಗ ಕೆಲಸ, ಇದರ ಅರ್ಥ ಬಾಲ್ಯವಿವಾಹವನ್ನು ಪುನರ್ಸ್ಥಾಪಿಸಲು ಇಂತಹ ನೀತಿಗಳು ಬುನಾದಿಯನ್ನು ಹಾಕಿಕೊಟ್ಟಹಾಗೆ ಆಗುತ್ತದೆ. ಇದೆಲ್ಲಾ ಎಷ್ಟು ಅವಾಸ್ತವಿಕ ಹಾಗೂ ಕಾಲ್ಪನಿಕವಾಗಿ ಗೋಚರಿಸುತ್ತದೆಯೋ ಅಷ್ಟೆ ಅವಾಸ್ತವಿಕವಾಗಿ ಅಂತರಜಾತಿ ವಿವಾಹದಿಂದ ಆಗುವ ಲಾಭಗಳೂ ಕಾಣುತ್ತವೆ.

3.    ಇನ್ನೂ ಜನರು ಅಂತರಜಾತಿ ವಿವಾಹವನ್ನು ಏಕೆ ವಿರೋಧಿಸುತ್ತಾರೆ? ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು, ಅದು ಕೇವಲ ಜಾತಿವ್ಯವಸ್ಥೆ ಎಂದರೆ ಮಾತ್ರ ಸಾಲದು. ಹಾಗೆ ಹೇಳಿ ಇದುವರೆಗೂ ನಮಗೆ ನಮ್ಮ ಸಮಾಜ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂಬುದನ್ನು ಮನಗಾಣಲೇಬೇಕು. ಇದನ್ನು ಸ್ವಲ್ಪ ನಮ್ಮ ನಮ್ಮ ಅನುಭವದಿಂದ ವಿಶ್ಲೇಷಿಸಲು ಪ್ರಯತ್ನಿಸುವ. ಯಾವುದೇ ಸಮುದಾಯವಾಗಲೀ ತನ್ನ ಸಂಪ್ರದಾಯದ ಅಥವಾ ತನ್ನ ಜಾತಿಯ ಒಳಗೆ ಹೆಣ್ಣು ಗಂಡುಗಳನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತವೆ. ಏಕೆಂದರೆ, ವಿವಾಹವಾಗಿ ಬರುವ ನವವಧುವಿಗೆ ತಮ್ಮ ಸಂಪ್ರದಾಯದ ಕುರಿತು ತಿಳಿದಿದ್ದರೆ ಬದುಕು ನಡೆಸುವುದು ಸುಲಭ. ಸಂಪ್ರದಾಯಗಳು ವ್ಯತ್ಯಾಸವಾಗಲಿಕ್ಕೆ ಹಲವಾರು ಸಂಗತಿಗಳು ಕಾರಣವಾಗುತ್ತವೆ, ಅದರಲ್ಲಿ ಮುಖ್ಯವಾದ ಒಂದನ್ನು ಇಲ್ಲಿ ನೋಡಬಹುದು, ಅದೆಂದರೆ ಉದ್ದ ನಾಮ ಧರಿಸುವ ಅಯ್ಯಂಗಾರಿ ಬ್ರಾಹ್ಮಣರು ಅಡ್ಡ ನಾಮ ಧರಿಸುವ ಸ್ಮಾರ್ಥರನ್ನು ವಿವಾಹವಾಗಲು ಹಿಂಜರಿಯುತ್ತಾರೆ, ಅದಕ್ಕೆ ಕಾರಣ ಅವೆರಡೂ ಸಮುದಾಯಗಳು ಪಾತ್ರ ಪಡಗವನ್ನು ತೊಳೆಯುವಲ್ಲಿ ವ್ಯತ್ಯಾಸವಾಗುತ್ತದೆ. ಅಡುಗೆ ಮಾಡುವಲ್ಲಿ ಆಹಾರ ಪದ್ದತಿಯಲ್ಲಿ, ಉಪನಯನ ಮಾಡುವ ಸಂದರ್ಭದಲ್ಲಿ, ದೇವರನ್ನು ಪೂಜಿಸುವ ಸಂದರ್ಭದಲ್ಲಿ ವ್ಯತ್ಯಾಸವಾಗುತ್ತದೆ. ಹಾಗೆಯೇ ಹತ್ತಿಕಂಕಣ ಮತ್ತು ಉಣ್ಣೆ ಕಂಕಣ ಕುರುಬರಲ್ಲಿಯೂ ಹಲವಾರು ವ್ಯತ್ಯಾಸಗಳಿವೆ, ಹೀಗೆ ಹಲವಾರು ಕಾರಣಗಳನ್ನು ನೀಡುವ ಮೂಲಕ ಇತರ ಸಂಪ್ರದಾಯಗಳೊಂದಿಗೆ ವ್ಯತ್ಯಾಸ ಮಾಡಿಕೊಳ್ಳುತ್ತಾರೆ. ಒಂದು ಸಂಪ್ರದಾಯ ಮತ್ತೊಂದು ಸಂಪ್ರದಾಯ ವ್ಯತ್ಯಾಸ ಮಾಡಿಕೊಂಡಾಕ್ಷಣ ಅವು ಒಂದನ್ನೊಂದು ತಿರಸ್ಕರಿಸುತ್ತವೆ ಎಂದರ್ಥವಲ್ಲ, ಬದಲಿಗೆ ನಮ್ಮದು ನಮಗೆ ಅವರದು ಅವರಿಗೆ ಎಂಬ ಮನೋಭಾವ ಇರುವುದರಿಂದ ಪ್ರತ್ಯೇಕತೆಯನ್ನು ಅವರು ಉಳಿಸಿಕೊಳ್ಳಲು ಇಚ್ಚಿಸುತ್ತಾರೆ. ಈ ರೀತಿಯಲ್ಲಿ ವ್ಯತ್ಯಾಸ ಮಾಡಿಕೊಂಡು ತಮ್ಮ ಸಂಪ್ರದಾಯದವರನ್ನೇ ಹುಡುಕುವದರ ಅರ್ಥ ಯಾವುದೋ ಸಾಮಾಜಿಕ ಅಂತಸ್ತನ್ನು ಪಡೆಯುವುದು ಅಲ್ಲ, ಬದಲಿಗೆ ನಾವು ಬದುಕುತ್ತಿರುವ ಪರಿಸರವನ್ನು ವಾಸಯೋಗ್ಯವನ್ನಾಗಿ ಮಾಡಿಕೊಳ್ಳಲು ಮಾತ್ರ. ಹಾಗಾಗಿ ವಿವಾಹವೆಂಬುದು ಆಯಾ ಸಮುದಾಯಗಳ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗಲು ಇರುವ ಹಲವಾರು ಸಾಧನಗಳಲ್ಲಿ ಒಂದಾಗಿದೆ.

4.    ಭಗವಾನ್ ರವರ ವಾದವನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡರೆ ಈ ಮುಂದಿನಂತೆ ವಿಶ್ಲೇಷಿಸಬಹುದು. ಎಲ್ಲರೂ ನಿಮ್ಮ ಜಾತಿ ತಿರಸ್ಕರಿಸಿ ಅಂತರಜಾತಿ ವಿವಾಹವಾಗಿ ಎಂಬುದರ ಅರ್ಥ ಇದುವರೆಗೂ ನೀವು ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ತಿರಸ್ಕರಿಸಿ ಎಂದೇ ಅರ್ಥ. ಹಾಗೆ ಸಂಪ್ರದಾಯಗಳನ್ನು ತಿರಸ್ಕರಿಸುವುದು ಅಷ್ಟು ಸುಲಭದ ಕೆಲಸವೂ ಅಲ್ಲ, ಜನರು ತಮ್ಮ ಸಂಪ್ರದಾಯಗಳನ್ನು ತಿರಸ್ಕರಿಸಬೇಕಾದರೆ ಅವರ ಸಂಪ್ರದಾಯದಿಂದ ಎಂತೆಂತಹ ಅಪಾಯವಾಗುತ್ತಿದೆ ಎಂಬುದನ್ನು ಅವರಿಗೆ ಮನದಟ್ಟಾಗುವಂತೆ ತೋರಿಸಬೇಕಾಗುತ್ತದೆ. ಕ್ರಿಯಾತ್ಮಕವಾಗಿರುವಂತಹ ಇಂತಹ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳದೆ ಎಲ್ಲರೂ ತಿರಸ್ಕರಿಸಿ ಎಂದರೆ ನಮ್ಮಂತ ಜನಸಾಮಾನ್ಯರಿಗೆ ಏಕೆ ಬಿಡಬೇಕು ಎಂಬುದೇ ಅರ್ಥವಾಗುವುದಿಲ್ಲ. ಹಾಗಾಗಿ ಅಷ್ಟೆಲ್ಲಾ ಸಮಾವೇಶ ಚಳುವಳಿಗಳು ನಡೆದರೂ ಜನರು ಅವುಗಳನ್ನು ಹಾಗೆಯೇ ಉಳಿಸಿಕೊಂಡು ಬರುತ್ತಿದ್ದಾರೆ. ಬರಿಯ ಜಾತಿವ್ಯವಸ್ಥೆಯ ತೊಂದರೆ ಎಂದು ಪರಿಕಲ್ಪನಾತ್ಮಕ ಮಟ್ಟದಲ್ಲಿ ಹೇಳುವುದಕ್ಕಿಂತಲೂ ಜನರು ಬದುಕುತ್ತಿರುವ ಅನುಭವದ ಹಿನ್ನೆಲೆಯಲ್ಲಿ ಅವರ ಸಂಪ್ರದಾಯಗಳಿಂದ ಇತತರಿಗೆ ಹೇಗೆ ತೊಂದರೆಯಾಗುತ್ತಿದೆ ಎಂದು ತೋರಿಸದ ಹೊರತು ಇನ್ನೂ ಲಕ್ಷ ಲಕ್ಷ ಸಮಾವೇಶ ನಡೆಸಿದರೂ ಯಾವುದೇ ಉಪಯೋಗವಾಗುವುದಿಲ್ಲ.

5.    ಸರಿ ಒಂದೊಮ್ಮೆ ಸುಸಂದರ್ಭ ಬಂದು ಎಲ್ಲಿಯೂ ಜಾತಿಯ ಅಸ್ಮಿತೆ ನಾಶವಾಯಿತು ಎಂದಿಟ್ಟುಕೊಳ್ಳುವ. ನಂತರ ಜನರು ಮತ್ಯಾವುದೋ ಅಸ್ಮಿತೆಯನ್ನು ಹುಟ್ಟಿಹಾಕಿಕೊಳ್ಳುತ್ತಾರೆ, ಅದು ಜಾತಿಯ ಬದಲಿಗೆ ಕಾತಿ, ಪಾತಿ, ವರ್ಗ ಹೀಗೆ ಯಾವುದಾದರೂ ಹೆಸರು ಜಾತಿಯನ್ನು ಬದಲಿಸಬಹುದು. ಆದರೆ ಅವಾಗಲೂ ಇಂತಹ ಶೋಷಣೆಗಳು ದಬ್ಬಾಳಿಕೆಗಳು ಮುಂದುವರೆದರೆ ಆ ಹೆಸರುಗಳನ್ನೂ ಬಿಡಿ ಎಂದು ಹೇಳಿದರೆ ಅನ್ಯಾಯ ಶೋಷಣೆಗಳು ಹೋಗುವುದಿಲ್ಲ. ಆದ್ದರಿಂದ ಜಾತಿಗಳನ್ನು ಬಿಡಿ, ನಿಮ್ಮ ಸಂಪ್ರದಾಯಗಳನ್ನು ಬಿಡಿ ಎಂದು ಹೇಳುವುದಕ್ಕಿಂತ ಸಮಸ್ಯೆಯ ಮೂಲ ಎಲ್ಲಿದೆ ಹಾಗು ಅದಕ್ಕೆ ಪರಿಹಾರ ಏನು ಎಂಬುದನ್ನು ಕಂಡುಹಿಡಿಯುವುದು ಸೂಕ್ತವಾದ ಕೆಲಸ ಎಂಬುದು ನನ್ನ ಅಭಿಪ್ರಾಯ.

*****************

ಚಿತ್ರ ಕ್ರುಪೆ :  theironcraft.blogspot.com

14 ಟಿಪ್ಪಣಿಗಳು Post a comment
 1. ರವಿ
  ಜೂನ್ 27 2011

  ನಮ್ಮ ವಿಚಾರಗಳು ಎಲ್ಲಿಯವರೆಗೆ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಮೇಲು-ಕೀಳು, ಅಸಮಾನತೆ ಇದ್ದೇ ಇರುತ್ತದೆ. ಅದನ್ನು ಸೃಷ್ಟಿಸಲು ಜಾತಿಯೇ ಬೇಕೆಂದೇನಿಲ್ಲ. ಜಾತಿ ಹೋದರೂ ಅದರ ಬದಲಿ ವ್ಯವಸ್ಥೆಯನ್ನು ನಾವೇ ಕಟ್ಟಿಕೊಳ್ಳುತ್ತೇವೆ. ಬಸವಣ್ಣ, ಬುದ್ಧರ ಚಳುವಳಿಗಳ ಪರಿಣಾಮಗಳನ್ನು ಗಮನಿಸಿದ್ದೇವೆ. ಬುದ್ಧ ದೇವರಾದ. ಲಿಂಗಾಯತ ಜಾತಿಯಾಯಿತು. ನಮ್ಮ ನಮ್ಮ ಯೋಚನೆಗಳು ಬದಲಾಗಲಿ ಮೊದಲು.

  ಉತ್ತರ
 2. ವಿಚಾರಪೂರ್ಣ ಲೇಖನ. ಶೋಷಣೆಗೆ ಕಾರಣ ಉಚ್ಛತೆ-ನೀಚತೆಯ ಪರಿಕಲ್ಪನೆಯೇ ಹೊರತು ಪ್ರತ್ಯೇಕತೆಯ ಪರಿಕಲ್ಪನೆಯಲ್ಲ. ಪ್ರತಿಯೊಂದು ಜೀವಿಯೂ, ಅಷ್ಟೇಕೆ ತದ್ರೂಪಿ ಅವಳಿ-ಜವಳಿಗಳೂ ವೈಯಕ್ತಿಕವಾಗಿ ಒಬ್ಬರಿಂದೊಬ್ಬರು ಬೇರೆಯೇ. ಹೀಗಾಗಿ ವಿವಿಧತೆ ಸೃಷ್ಟಿಯಲ್ಲೇ ಇರುವಾಗ ಎಲ್ಲಾ ಒಂದೇ ಎಂದು ಕೂಗುವುದಕ್ಕೆ ಅರ್ಥವೇನಿದೆ? ಇನ್ನು ಮೇಲು ಕೆಳಗಿನ ಪರಿಕಲ್ಪನೆ ಕೂಡ ಕಾರ್ಯವೊಂದರ ಸಂದರ್ಭದಲ್ಲಿ ವಾಸ್ತವವೇ. ಉದಾಹರಣೆಗೆ ಮೇಷ್ಟರು ಬಡಗಿಯ ಕೆಲಸವನ್ನಾಗಲೀ ಬಡಗಿ ಮೇಷ್ಟರ ಕೆಲಸವನ್ನಾಗಲಿ ಮಾಡಲಾಗುವುದಿಲ್ಲ. ಬಡಗಿ ಮೇಷ್ಟರ ಕೆಲಸವನ್ನು ಮಾಡಬೇಕಾದರೆ ಅವನು ಆ ಕೆಲಸವನ್ನು ಕಲಿಯಬೇಕು. ಈ ದೃಷ್ಟಿಯಲ್ಲಿ ಬಡಗಿ ಕೆಲಸಕ್ಕೆ ಬಡಗಿ ಮೇಷ್ಟರಿಗಿಂತ ಮೇಲು, ಮೇಷ್ಟರ ಕೆಲಸಕ್ಕೆ ಮೇಷ್ಟರು ಬಡಗಿಗಿಂತಾ ಮೇಲು. ಹೀಗೆ ಕುಶಲತೆಯನ್ನು ಅಪೇಕ್ಷಿಸುವ ವೃತ್ತಿಗಳು ಸಹಜವಾಗೇ ವಂಶಪಾರಂಪರ್ಯವಾಗಿ ಹರಿದುಬರುವುದರಿಂದ ಕಸುಬುದಾರಿಕೆಯನ್ನು ಬೇರೆಯವರಿಂದ ಕಾಯ್ದುಕೊಳ್ಳಲು ಒಂದುರೀತಿಯ monopoly ಶುರುವಾಯಿತು. ಜಾತಿಯನ್ನು ’ಕಾಪಾಡಿ’ಕೊಳ್ಳುವ ಪ್ರವೃತ್ತಿ ಬಂದದ್ದು ಇದರಿಂದ. ಸಹಜವಾಗಿಯೇ ಕೆಲವು ವೃತ್ತಿಗಳು ಮತ್ತೆ ಕೆಲವು ವೃತ್ತಿಗಳಿಗಿಂತಾ ಹೆಚ್ಚು ಲಾಭದಾಯಕವಾದ್ದರಿಂದ, ಆ ಜಾತಿಗಳವರು ಅದರ ಮೇಲಿನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸತೊಡಗಿದರು. ಹೀಗೆ otherwise ನಿರುಪದ್ರವಿಯಾದ ಜಾತಿಪದ್ಧತಿಗೆ ಆರ್ಥಿಕ ಆಯಾಮ ಸೇರಿಕೊಂಡು ಮೇಲು-ಕೀಳು ಶೋಷಣೆ ಶುರುವಾಯಿತು, ಮತ್ತು ಸಹಜವಾಗಿಯೇ ಇದಕ್ಕೆ ಜಾತಿಪದ್ಧತಿಯನ್ನು ದೂಷಿಸುವಂತಾಯಿತು. ಇದರಿಂದ ಏನು ಹೇಳಿದಂತಾಯಿತು? ನಿಜಕ್ಕೂ ಶೋಷಣೆಗೆ ಕಾರಣ ಜಾತಿಪದ್ಧತಿಯಲ್ಲ, ಆರ್ಥಿಕ/ರಾಜಕೀಯ ಬಲ/ದೌರ್ಬಲ್ಯ ಅಂತ ಅಲ್ಲವೇ?

  ಇನ್ನು ಇವತ್ತಿನ ಪರಿಸ್ಥಿತಿಗೆ ಬಂದರೆ, ಈ ಮೊದಲು ಆರ್ಥಿಕವಾಗಿ ಲಾಭದಾಯಕವಾಗಿದ್ದ ಯಾವ ಜಾತಿ-ವೃತ್ತಿಗಳು ಅಷ್ಟೇ ಲಾಭದಾಯಕವಾಗಿ ಉಳಿದಿವೆ? ಖಂಡಿತ ಇಲ್ಲ. ಇವತ್ತಿನ ಆರ್ಥಿಕ ಪರಿಸ್ಥಿತಿ, ಅದರ ಒಲುಮೆಗಳೇ ಬೇರೆ. ಜಾತಿ ಆಧಾರಿತ ಆರ್ಥಿಕತೆ ಸತ್ತು ಯಾವುದೋ ಕಾಲವಾಯಿತು. ಇವತ್ತು ಜಾತಿಯಲ್ಲಿ ಉಳಿದಿರುವುದು ಆ ಐತಿಹಾಸಿಕ ಹಮ್ಮು-ಬಿಮ್ಮು ಮಾತ್ರ. ಅದು ಬಂದಷ್ಟೇ ಸಹಜವಾಗಿ ಹೋಗುತ್ತದೆ. ಹಾಗಿದ್ದರೆ ವೈಷಮ್ಯ ಹೋಯಿತೇ? ಇಲ್ಲ. ಅದು ಜಾತಿಯ ಬಟ್ಟಲು ಬಿಟ್ಟು ವರ್ಗದ ಬಟ್ಟಲಿಗೆ ಸೇರಿದೆ. ನಾವು ಜಾತಿಯೆಂಬ ಹಲ್ಲು ಕಿತ್ತ ಹಾವನ್ನು ಬಡಿಯಲು ಪ್ರಯತ್ನಿಸುತ್ತಿದ್ದೇವೆ, ಆದರೆ ಆ ವಿಷದ ಹಲ್ಲು ಹೊಸ ಆರ್ಥಿಕ ವರ್ಗಗಳ ರೂಪದಲ್ಲಿ ನಮ್ಮಲ್ಲಿ ಈಗಾಗಲೇ ನಾಟಿಬಿಟ್ಟಿರುವುದನ್ನು ಅರಿಯುತ್ತಿಲ್ಲ. ಹೇಳಿ, ಶ್ರೀಮಂತ ಬ್ರಾಹ್ಮಣ ಬಡಬ್ರಾಹ್ಮಣನನ್ನು ಅಥವ ಶ್ರೀಮಂತ ಶೂದ್ರ ಬಡ ಶೂದ್ರನನ್ನು ಹತ್ತಿರ ಸೇರಿಸುತ್ತಾನೆಯೇ? ಸುಶಿಕ್ಷಿತ ಪಟ್ಟಣದ ಬ್ರಾಹ್ಮಣ/ಶೂದ್ರ ಅನಕ್ಷರಸ್ಥ ಹಳ್ಳಿಯ ಬ್ರಾಹ್ಮಣ/ಶೂದ್ರನೊಡನೆ ಬೆರೆಯುತ್ತಾನೆಯೇ? ಸಾಮಾನ್ಯವಾಗಿ, ಖಂಡಿತ ಇಲ್ಲ. ಹಾಗೊಂದುವೇಳೆ ಬೆರೆತರೆ ಅದೊಂದು exception ಅಷ್ಟೇ. ಜಾತಿಯ ವಿಷಯದಲ್ಲೂ ಅಂಥಾ exception (ಅಂತರಜಾತೀಯ ವಿವಾಹಗಳು) ಇವೆಯಲ್ಲ!

  ಜಾತಿಗಳು ನಮ್ಮ ಸಂಸ್ಕೃತಿಯ ಕೋಶಗಳು. ಪ್ರತಿಯೊಂದು ಜಾತಿಗೂ ಅದರದೇ ನುಡಿ, ನಡೆ, ಕಲ್ಪನೆ ಕಲಾವಂತಿಕೆಗಳಿವೆ. ಜಾಗತೀಕರಣದಿಂದ ನಮ್ಮ ಬೇರುಗಳನ್ನೇ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಜಾತಿಯನ್ನು ಉದ್ದೇಶಪೂರ್ವಕವಾಗಿ ನಾಶಮಾಡುವ ಮೂರ್ಖತನವೇಕೆ? ಇದು ಬರೀ “ಬುದ್ಧಿಜೀವಿ” ಹಣೆಪಟ್ಟಿ ಕಟ್ಟಿಕೊಳ್ಳುವ ಹಂಬಲ, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಚಪಲವಷ್ಟೇ.

  ಇದರರ್ಥ ಅಂತರಜಾತೀಯ ವಿವಾಹವನ್ನು ವಿರೋಧಿಸಬೇಕೆಂದಲ್ಲ; ವಿರೋಧ ವಿವಾಹಕ್ಕಲ್ಲ ಬದಲಿಗೆ ಹಟದ ಜಾತೀಯತೆ/ಅಂತರ್ಜಾತೀಯತೆಗೆ. ಮದುವೆಯೆನ್ನುವುದು ಮೊದಲಿಗೆ ಎರಡು ಮನಸ್ಸುಗಳ ಕೂಡಿಕೆ. ಅಲ್ಲಿ ಮುಖ್ಯವಾಗುವುದು ಮದುವೆಯಾಗುವವರ ಒಲವು, ಮತ್ತೆ ಅವರವರ ಪೋಶಕರ ಇಷ್ಟ. ಇದಿದ್ದರೆ ಜಾತಿಯೇನು ವಿಜಾತಿಯೇನು? ಈ ಮೊದಲಾದರೆ ಜಾತಿ-ಜಾತಿಗಳ ನಡುವಣ ಬಳಕೆ ತೀರ ಕಮ್ಮಿಯಿದ್ದ ಕಾಲದಲ್ಲಿ ಅದೇ ಜಾತಿಯಲ್ಲಿ ಗಂಡು-ಹೆಣ್ಣು ಹುಡುಕುವುದು ಚಾಲ್ತಿಯಲ್ಲಿತ್ತು. ಮದುವೆಯಾಗುವವರಿಗೂ ತಮ್ಮ ಸೀಮಿತ ವಲಯದಲ್ಲೇ ದೃಷ್ಟಿಯಿದ್ದುದರಿಂದ ಇದು ಅವರಿಗೂ ಸಹಜವಾಗೇ ಪ್ರಿಯವಾಗಿತ್ತು. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಜಾತಿ-ಜಾತಿಗಳ ನಡುವಣ ಬಳಕೆ ಹೆಚ್ಚಿದೆ, ಗಂಡು-ಹೆಣ್ಣುಗಳು ತಮ್ಮದೇ ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿ ಬೆಳೆದಿದೆ. ಹೀಗಿರುವಾಗ ಜಾತಿಯ ಕಟ್ಟನ್ನು ಮೀರುವುದು ಸಹಜ, ಮತ್ತು ಅದಕ್ಕೆ ಪೋಷಕರು ಸಮ್ಮತಿ ನೀಡುವುದೇ ಚೆನ್ನ. ಬದಲಾದ ಈ ಸಂದರ್ಭದಲ್ಲಿ ಜಾತಿಯ ಕಟ್ಟು ಹಾಕುವುದು ಮೊದಲಿದ್ದಷ್ಟು ಸಹಜವಾಗಿ ಕಾಣದು ಅಲ್ಲವೇ? ಹಾಗೆಯೇ “ಅಂತರ್ಜಾತೀಯ ವಿವಾಹವೇ ಆಗಬೇಕು” ಎಂದು “ಕಟ್ಟು” ಹಾಕುವುದೂ ಅಷ್ಟೇ ಅಸಹಜವಲ್ಲವೇ? ಗಂಡು ಹೆಣ್ಣು ಮದುವೆಯಾಗುವುದು ತಮ್ಮ ಒಲುಮೆಗೇ ಹೊರತು ಜಾತಿಯೊಂದರ ಉದ್ಧಾರಕ್ಕೋ ವಿನಾಶಕ್ಕೋ ಅಲ್ಲವಲ್ಲ.

  ಹರಳಯ್ಯ-ಶೀಲವಂತರ ಮಕ್ಕಳ ಮದುವೆ ಕ್ರಾಂತಿಗೋಸ್ಕರ ಆದದ್ದಲ್ಲ, ಬದಲಿಗೆ ಕ್ರಾಂತಿ ಆ ಮದುವೆಯಿಂದ ಆದದ್ದು. ಇದು ನಮ್ಮ ಹುಸಿ ಕ್ರಾಂತಿಕಾರಿಗಳಿಗೆ ಅರ್ಥವಾಗುವುದೆಂದೋ!

  ಉತ್ತರ
 3. maaysa
  ಜೂನ್ 27 2011

  The castes are also roots of many cultures in India. Hence to preserve one’s own culture, he needs to preserve the traditions of his caste.

  Toleration among castes, and religions is the need of this time.

  ———————–English – detected to Kannada translation — Alpha – Google——————

  ಜಾತಿಗಳು ಭಾರತದ ಅನೇಕ ಸಂಸ್ಕೃತಿಗಳ ಬೇರುಗಳು . ಆದ್ದರಿಂದ ಒಬ್ಬರ ಸ್ವಂತ ಸಂಸ್ಕೃತಿ ಸಂರಕ್ಷಿಸಲು ಸಹ, ತನ್ನ ಜಾತಿಯ ಸಂಪ್ರದಾಯಗಳು ಸಂರಕ್ಷಿಸಲು ಸಹ ಅಗತ್ಯವಿದೆ.

  ಜಾತಿಗಳು ಮತ್ತು ಧರ್ಮಗಳ ನಡುವೆ ಸಹಿಷ್ಣುತೆ ಈ ಸಮಯ ಅಗತ್ಯವಾಗುತ್ತದೆ.

  ———————–phonetically———————–

  Jāti bhāratada anēka sanskr̥tigaḷa bērugaḷu ive. Āddarinda obbara āda sanskr̥ti kāpāḍikoḷḷalu. Tanna jāti sampradāyagaḷu kāpāḍikoḷḷalu agatyavide.

  Jāti mattu dharmagaḷa naḍuve sahiṣṇuteya ī samaya agatyavāguttade.

  ಉತ್ತರ
  • ರವಿಕುಮಾರ ಜಿ ಬಿ
   ಜೂನ್ 28 2011

   ಮಾಯ್ಸಣ್ಣ ,
   ನಿಮ್ಮಿಂದ ಇಂತಹ (ತರ್ಕ ಬದ್ದ )ಕಾಮೆಂಟ್ ಗಳನ್ನ ಬಯಸುತ್ತೇವೆ ಅಥವಾ ನಿರೀಕ್ಷಿಸುತ್ತೇವೆ .
   – ನಿಮ್ಮ ಸ್ನೇಹಿತ . ರವಿ ಕುಮಾರ ಜಿ ಬಿ.

   ಉತ್ತರ
 4. ಬಸವಯ್ಯ
  ಜೂನ್ 27 2011

  ಎಂತಹ ತೂಕದ ಮಾತು……… ಅದೂ ಮಾಯ್ಸಣ್ಣನಿಂದ!! . ಅದೂ ಸರೀನೆ, ಜಾತಿ ಮೊದಲಾದವು ಇರದಿದ್ದರೆ ಮಾಯ್ಸಣ್ಣನಿಗೆ ನೆಟ್ಟಿನಲ್ಲಿ ಬೋರೊ ಬೋರು!. ರಾಡಿಯ ಬಕೆಟ್ ನ್ನು ಮನೆಯಲ್ಲೇ ಇಟ್ಟುಕೊಳ್ಳಬೇಕು 😉

  ಉತ್ತರ
  • maaysa
   ಜೂನ್ 27 2011

   Some spare time! Oh!

   I always think, that the existence of castes is never the problem. The problems are the intolerance and the superiority/inferiority attitude.

   Castes are major pillars of our great Indian culture. We need to repair them, not instead remove them.

   It is just like racism. We cannot eradicate the races. But, we must show toleration to other races.

   Now..

   What is that muddy thing in this?
   ————————–

   Google English to Kannada translation — Alpha

   ಕೆಲವು ಬಿಡುವಿನ ಸಮಯ! ಓಹ್!

   ನಾನು ಯಾವಾಗಲೂ ಜಾತಿಗಳ ಅಸ್ತಿತ್ವ ಸಮಸ್ಯೆ ಇಲ್ಲ ಎಂದು, ಭಾವಿಸುತ್ತೇನೆ. ಸಮಸ್ಯೆಗಳು ಅಸಹಿಷ್ಣುತೆ ಮತ್ತು ಶ್ರೇಷ್ಠತೆಯನ್ನು / ಕೆಳದರ್ಜೆ ಮನೋಭಾವ ಇವು.

   ಜಾತಿಗಳು ನಮ್ಮ ಮಹಾನ್ ಭಾರತೀಯ ಸಂಸ್ಕೃತಿಯ ಪ್ರಮುಖ ಕಂಬಗಳಿವೆ. ನಾವು ಅವುಗಳನ್ನು ದುರಸ್ತಿ ಮಾಡಬೇಕಾಗುತ್ತದೆ, ಬದಲಿಗೆ ಅವುಗಳನ್ನು ತೆಗೆಯುವುದಿಲ್ಲ.

   ಇದು ಸ್ವಲ್ಪ ವರ್ಣಭೇದ ನೀತಿಯ ಹಾಗೆ. ನಾವು ಜನಾಂಗಗಳ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ, ನಾವು ಇತರ ಜನಾಂಗಗಳ ಗೆ ಸಹಿಷ್ಣತೆಯನ್ನು ಪ್ರದರ್ಶನ ಮಾಡಬೇಕು.

   ಈಗ ..

   ಇದರ ಆ ಕೆಸರಿನ ವಿಷಯ ಏನು?

   —– phonetically

   Kelavu biḍuvina samaya! Ōh! Nānu yāvāgalū jātigaḷa astitva samasye illa endu, bhāvisuttēne. Samasyegaḷu asahiṣṇute mattu śrēṣṭhateyannu/ keḷadarje manōbhāva ivu. Jātigaḷu nam’ma mahān bhāratīya sanskr̥tiya pramukha kambagaḷive. Nāvu avugaḷannu durasti māḍabēkāguttade, badalige avugaḷannu tegeyuvudilla. Idu svalpa varṇabhēda nītiya hāge. Nāvu janāṅgagaḷa nirmūlane māḍalu sādhyavilla. Ādare, nāvu itara janāṅgagaḷa ge sahiṣṇateyannu pradarśana māḍabēku. Īga.. Idara ā kesarina viṣaya ēnu?

   ಉತ್ತರ
   • ರವಿ
    ಜೂನ್ 27 2011

    +1
    ಸಹಿಷ್ಣುತೆ ಮಾತ್ರವಲ್ಲ, ಪರಸ್ಪರ ಗೌರವವೂ ಮುಖ್ಯ.

    ಉತ್ತರ
    • maaysa
     ಜೂನ್ 27 2011

     The concept called respect is different in different cultures. Hence it is quite hard to define this concept.

     However, toleration is a very simple concept.

     Basavayya showed intolerance by trying to insult me. But I showed toleration by ignoring the insult.

     —Google – English – detected to Kannada translation — Alpha

     ಗೌರವ ಎಂಬ ಪರಿಕಲ್ಪನೆಯನ್ನು ವಿವಿಧ ಸಂಸ್ಕೃತಿಗಳಲ್ಲಿ ವಿಭಿನ್ನವಾಗಿದೆ. ಆದ್ದರಿಂದ ಈ ಪರಿಕಲ್ಪನೆಯನ್ನು ವ್ಯಾಖ್ಯಾನಿಸಲು ಸ್ವಲ್ಪ ಕಷ್ಟ.

     ಆದರೆ, ಸಹಿಷ್ಣತೆ ಒಂದು ಸರಳ ಪರಿಕಲ್ಪನೆಯಾಗಿದೆ.

     Basavayya ನನಗೆ ಅವಮಾನಗೊಳಿಸುವುದಕ್ಕಾಗಿ ಪ್ರಯತ್ನಿಸುತ್ತಿರುವ ಮೂಲಕ ಅಸಹಿಷ್ಣುತೆ ತೋರಿಸಿದರು. ಆದರೆ ನಾನು ಆ ಅವಮಾನ ಕಡೆಗಣಿಸಿದ್ದರಿಂದಾಗಿ ಸಹಿಷ್ಣತೆ ತೋರಿಸಿದೆ.

     —— phonetically
     Gaurava emba parikalpaneyannu vividha sanskr̥tigaḷalli vibhinnavāgide. Āddarinda ī parikalpaneyannu vyākhyānisalu svalpa kaṣṭa. Ādāgyū, sahiṣṇate ondu saraḷa parikalpaneyāgide. Basavayya nanage avamānagoḷisuvudakkāgi prayatnisuttiruva mūlaka asahiṣṇute tōrisidaru. Ādare nānu avamāna kaḍegaṇisiddarindāgi sahiṣṇate tōriside.

     ಉತ್ತರ
     • ರವಿ
      ಜೂನ್ 27 2011

      ಮತ್ತೆ +೧.
      ನಿಮ್ಮ ಸಹಿಷ್ಣುತೆ ಅರ್ಥವಾಗಿತ್ತು. ಅದಕ್ಕೇ +೧ ಎಂದು ಬೆಂಬಲಿಸಿದ್ದೆ.. ಈಗ ನೀವು ಬಸವಯ್ಯರ ಬಗ್ಗೆ ಹೇಳಲು ಹೋಗಿ ಸಹಿಷ್ಣುತೆಯನ್ನು ಕಳೆದುಕೊಂಡರೆ ಬಸವಯ್ಯ ಗೆಲ್ಲುತ್ತಾರೆ ವಿನಃ ನೀವಲ್ಲ 😉

      ಉತ್ತರ
      • maaysa
       ಜೂನ್ 27 2011

       Very funny. 😀 .

       I won’t be intolerant today. Because the article goes with my opinion.
       Intolerance is a type of protest.

       Moreover, I against people who preach impractical things.
       ———-Google Translation————
       ತುಂಬಾ ತಮಾಷೆ. :D.

       ನಾನು ಇಂದು ಅಸಹಿಷ್ಣು ಆಗುವುದಿಲ್ಲ. ಏಕೆಂದರೆ ಲೇಖನವು ನನ್ನ ಅಭಿಪ್ರಾಯ ಜೊತೆ ಹೋಗುತ್ತದೆ.

       ಅಸಹಿಷ್ಣುತೆ ಪ್ರತಿಭಟನೆಯ ಒಂದು ವಿಧ.

       ಇದಲ್ಲದೆ, ಕಾರ್ಯಸಾಧುವಾಗಿಲ್ಲದಿರುವ ವಿಷಯಗಳನ್ನು ಬೋಧಿಸುವ ಜನರ ವಿರುದ್ಧ ನಾನು.

       —————phonetically———————
       Tumbā tamāṣe. : Ḍi. Nānu indu asahiṣṇu āguvudilla. Ēkendare lēkhanavu nanna abhiprāya jote hōguttade. Asahiṣṇute pratibhaṭaneya ondu vidha. Idallade, kāryasādhuvāgilladiruva viṣayagaḷannu bōdhisuva janara virud’dha nānu.

       ಉತ್ತರ
      • maaysa
       ಜೂನ್ 28 2011

       One more thing.

       I think that we don’t need to create a secular society ( a society without castes or religions ).

       We must prevent selfish people from using our religions/castes as political tools.

       Religion is sacred because of its intellect and spirituality. But it becomes contentious when brought in the affairs of the state. And cunning pseudo-secularists ( similar to me? ) could misuse the situation.

       To safeguard our castes/religions, we must prevent their misuse.
       ————Google translation—–
       ಇನ್ನೊಂದು ವಿಷಯ.

       ನಾವು ಜಾತ್ಯತೀತವಾದ ಸಮಾಜ (ಜಾತಿ ಅಥವಾ ಧರ್ಮಗಳನ್ನು ಇಲ್ಲದ ಸಮಾಜದ) ಮಾಡಬೇಕಿಲ್ಲ ಎಂದು ಭಾವಿಸುತ್ತೇನೆ.

       ನಾವು ರಾಜಕೀಯ ಸಲಕರಣೆಗಳು ಎಂದು ನಮ್ಮ ಧರ್ಮಗಳನ್ನು / ಜಾತಿಗಳನ್ನು ಬಳಸುವುದರಿಂದ ಸ್ವಾರ್ಥಿ ಜನರನ್ನು ತಡೆಯ ಬೇಕು..

       ಧರ್ಮ ಅದರ ಬುದ್ಧಿಶಕ್ತಿ ಮತ್ತು ದೈವತ್ವದಲ್ಲಿ ಪವಿತ್ರವಾದದ್ದು. ಆದರೆ ರಾಜ್ಯದ ವ್ಯವಹಾರಗಳಲ್ಲಿ ತಂದಾಗ ಅದು ವಿವಾದಾಸ್ಪದ ಆಗುತ್ತದೆ. (ನನಗೆ ಹೋಲುವ?) ನಕಲಿ-ಜಾತ್ಯಾತೀತ ವ್ಯಕ್ತಿ ಚಾತುರ್ಯದ ಸನ್ನಿವೇಶವನ್ನು ತಪ್ಪುಬಳಕೆ ಮಾಡಬಹುದು.

       ನಮ್ಮ ಜಾತಿಗಳನ್ನು / ಧರ್ಮಗಳನ್ನು ರಕ್ಷಿಸಲು ನಾವು ಅವುಗಳ ತಪ್ಪುಬಳಕೆ ತಡೆಯ ಬೇಕು..
       ——————————–Phonetically
       Innondu viṣaya.

       Nāvu jātyatīta samāja (jāti athavā dharmada ondu samājada) racisalu māḍabēkilla endu bhāvisuttēne.

       Nāvu rājakīya upakaraṇagaḷu endu nam’ma dharmagaḷu/ jātigaḷa baḷasuvudannu svārthi janaru taḍeyalu māḍabēku.

       Dharma adara bud’dhiśakti mattu ādhyātmikateya pavitravādaddu. Ādare rājyada vyavahāragaḷalli tandāga adannu vivādāspada āguttade. (Nanage hōluva?) Nakali – jātyātīta cāturyada paristhiti durupayōgada sādhyavāyitu.

       Nam’ma jāti/ dharmagaḷa rakṣisalu nāvu avara durupayōgada taḍeyalu māḍabēku.

       ಉತ್ತರ
       • maaysa
        ಜೂನ್ 28 2011

        This is the reason to oppose the quotes of Bhagavad Gita in this forum.
        ———————–google translation
        ಇದು ಈ ವೇದಿಕೆಯಲ್ಲಿ ಭಗವದ್ಗೀತೆಯ ಉದ್ಧರಣ ವಿರೋಧಿಸಲು ಕಾರಣ.
        ——-phonetically
        Idu ī vēdikeyalli bhagavadgīteya āph ud’dharaṇa virōdhisalu kāraṇa.

        ಉತ್ತರ
 5. maaysa
  ಜೂನ್ 27 2011

  Unfortunately, today, I really don’t have time.
  Bye bye.
  ದುರದೃಷ್ಟವಶಾತ್, ಇಂದು, ನನಗೆ ಸಮಯ ಇಲ್ಲ.
  ಬೈ ಬೈ.
  Duradr̥ṣṭavaśāt, indu, nānu nanage samaya illa.
  Bai bai.

  (Google translation)

  ಉತ್ತರ

ನಿಮ್ಮದೊಂದು ಉತ್ತರ maaysa ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments