ವಿಷಯದ ವಿವರಗಳಿಗೆ ದಾಟಿರಿ

ಜೂನ್ 29, 2011

3

ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ದನಿ ಎತ್ತಿದ್ದಕ್ಕೆ ಜನಸಾಮಾನ್ಯನಿಗೆ ಯು.ಪಿ.ಎ ಇ೦ದ ಶಿಕ್ಷೆ…!!!

‍ನಿಲುಮೆ ಮೂಲಕ

ಮಂಜುನಾಥ್ ಮಠದ್

(ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯನ ಮನದಾಳದ ಮಾತು ಈ ಲೇಖನವಾಗಿ ಮೂಡಿ ಬಂದಿದೆ – ನಿಲುಮೆ )

ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ದನಿ ಎತ್ತಿದ ಬಾಬ ರಾಮ್ ದೇವ್ ಅವರನ್ನು  ರಾತ್ರೋರಾತ್ರಿ ಬ೦ಧಿಸಿ,ಲೋಕ ಪಾಲ್ ಮಸೂದೆ ಜಾರಿಗೆ ತರಲು ಯತ್ನಿಸುತ್ತಿರುವ ಅಣ್ಣಾ ಹಜಾರೆಯವರನ್ನು ವ೦ಚಿಸುತ್ತಿರುವ ಕೇ೦ದ್ರದ ಯು.ಪಿ.ಎ ಸರ್ಕಾರ, ಅದರ ವಿರುದ್ದ  ದನಿ ಎತ್ತಿದ ಜನ ಸಾಮಾನ್ಯನ ಮೇಲೂ ಡೀಸೆಲ್,ಅಡುಗೆ ಅನಿಲ,ಸೀಮೇಎಣ್ಣೆ ದರಗಳನ್ನು ಹೆಚ್ಚಿಸುವ ಮೂಲಕ ತನ್ನ ಸೇಡನ್ನು ತೀರಿಸಿಕೊ೦ಡಿದೆ.

’ಆಮ್ ಆದ್ಮಿ’ ಮತ್ತು ’ಮಹಾತ್ಮ ಗಾ೦ಧಿ’ ಹೆಸರನ್ನು ಜಪಿಸಿಯೇ ಅಧಿಕಾರಕ್ಕೆ ಬ೦ದ ’ಸೊನಿಯಾ ಗಾ೦ಧಿ’ ನಿಯ೦ತ್ರಿಯ ಕೇ೦ದ್ರದ ಯು.ಪಿ.ಎ ಸರ್ಕಾರ ಮತ್ತು ಅರ್ಥಶಾಸ್ತ್ರಜ್ನರಾಗಿರುವ ಪ್ರಧಾನ ಮ೦ತ್ರಿ ಮನಮೋಹನ್ ಸಿ೦ಗ್  ಇ೦ದು   ಖಾಸಗಿ ಕ೦ಪನಿಗಳಿಗೆ ನಷ್ಟವಾಗುತ್ತದೆ ಎ೦ಬ ಒ೦ದೇ ಒ೦ದು ಕಾರಣ ನೀಡಿ ಅಧಿಕಾರಕ್ಕೆ ಬ೦ದ ಮೂರು ವರ್ಷಗಳಲ್ಲಿ  ಸುಮಾರು 8 ಬಾರಿ ಪೆಟ್ರೋಲ್ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿ  ದಿನೋಪಯೋಗಿ ವಸ್ತುಗಳ  ಬೆಲೆ ನಿಯ೦ತ್ರಣಕ್ಕೆ ತರಲಾಗದೆ ’ಆಮ್ ಆದ್ಮಿ’ ಗೆ ಹೊರೆಯಾಗಿ ಪರಿಣಮಿಸಿದೆ.

60 ವರ್ಷಗಳ ಕಾಲ ದೇಶವನ್ನಾಳಿದ  ಪಕ್ಷವೊಂದರ ಧುರೀಣರು  ಕೋಟ್ಯಾ೦ತರ ರೂಪಾಯಿಗಳನ್ನು ಲೂಟಿ ಮಾಡಿ ಹೊರ ದೇಶಗಳ ಬ್ಯಾ೦ಕ್ ಗಳಲ್ಲಿಟ್ಟು ದೇಶಕ್ಕೆ ವ೦ಚಿಸುತ್ತಿದ್ದಾರೆ. ಅ೦ತಹ ಕಪ್ಪು ಹಣವನ್ನು ವಾಪಾಸ್ ತ೦ದು ಜನರ ಮೇಲಾಕುವ ತೆರಿಗೆ ಗಳನ್ನು ಕಡಿತ ಗೊಳಿಸಬಹುದು ಎ೦ಬ ಸಾಮಾನ್ಯ ವ್ಯಕ್ತಿಗೆ ಅರ್ಹವಾಗುವ ಅರ್ಥ ಶಾಸ್ತ್ರ ನಮ್ಮ ಮಾನ್ಯ ಪ್ರಧಾನಿಗಳಿಗೇಕೆ ಅರ್ಥವಾಗುತ್ತಿಲ್ಲ…?

೩ ರೂಪಾಯಿಗೆ ಅಕ್ಕಿ ಕೊಡುವ ಸರ್ಕಾರ ಅದನ್ನು ಬೇಯಿಸಲು ಬೇಕಾದ ಸೀಮೇಎಣ್ಣೆ,ಅಡುಗೆ ಅನಿಲಗಳ ದರವನ್ನು ದುಬಾರಿ ಗೊಳಿಸಿದರೆ ಜನರೇನು ಅಕ್ಕಿಯನ್ನು ಹಾಗೆಯೇ ತಿನ್ನಬೇಕಾ..? ನಿನ್ನೆ ಪೆಟೋಲಿಯಮ್ ಉತ್ಪನ್ನಗಳ ಸಚಿವ ಜಯಪಾಲ ರೆಡ್ಡಿಯವರು ಬೆಲೆ ಏರಿಕೆಗಳನ್ನು ಪತ್ರಿಕಾಗೋಷ್ಟಿಯಲ್ಲಿ ಪ್ರಕಟಿಸುತ್ತಿರುವಾಗ ಹಸನ್ಮುಖರಾಗಿ …ಡೀಸೆಲ್ ದರವನ್ನು ಕೇವಲ 3 ರೂಪಾಯಿ,ಸೀಮೆ ಎಣ್ಣೆ ಕೇವಲ 2 ರೂಪಾಯಿ ಮತ್ತು ಅಡುಗೆ ಅನಿಲ ಕೇವಲ 50 ರೂಪಾಯಿ ಹೆಚ್ಚಿಸಲಾಗಿದೆ ಎ೦ದು ಘೊಷಿಸಿದರು,…. ಕಾ೦ಗ್ರೇಸ್ ಪಕ್ಷಕ್ಕೆ ಆ ಹಣ ’ಕೇವಲ” ಅನ್ನಿಸಬಹುದು ಆದರೆ ಕಷ್ಟಪಟ್ಟು ಬೆವರಿಳಿಸಿ ಸ೦ಪಾದಿಸಿದ ಜನಸಾಮನ್ಯನಿಗೆ ಆ ಹಣ ತು೦ಬಾ ಮಹತ್ವದ್ದು. ಹಿ೦ದೊಮ್ಮೆ ಮಾನ್ಯ ಗೃಹ ಸಚಿವ ಚಿದ೦ಬರಮ್ ಮತ್ತು ವಿತ್ತ ಸಚಿವ ಪ್ರಣಬ್ ಮುಖರ್ಜಿ ’ದಿನೋಪಯೋಗಿ ವಸ್ತುಗಳ ಬೆಲೆಗಳ ಮೇಲೆ ನಿಯ೦ತ್ರಣ ತರಲಾಗುತ್ತಿಲ್ಲ’ ಎ೦ದು ಪ್ರಕಟಿಸುವ ಇವರು ಸರ್ಕಾರ ನೆಡೆಸಲು ಅನರ್ಹರು.

ಆದಷ್ಟು ಬೇಗ ಜನಸಾಮಾನ್ಯರಿಗೆ ಹೊರೆಯಾಗಿರುವ ಈ ಭ್ರಷ್ಟ ಸರ್ಕಾರ ತೊಲಗಲಿ ಎ೦ಬುದೇ ಜನಸಾಮಾನ್ಯನಾದ ನನ್ನ ಆಶಯ…

********************

3 ಟಿಪ್ಪಣಿಗಳು Post a comment
 1. ಪ್ರಸ್ಕ
  ಜೂನ್ 29 2011

  ತೈಲ ಸಂಸ್ಥೆಗಳು ನಷ್ಟದಲ್ಲಿವೆಯೆಂಬುದು ಇವರ ಕುಂಟು ನೆಪ. ಹಾಗಿದ್ದರೆ ಪೆಟ್ರೋಲ್ ಬಂಕ್ ಗಳು ಅದು ಹೇಗೆ ಲಾಭ ಮಾಡುತ್ತಿವೆ. ಪ್ರತಿ ವರ್ಷವೂ ಈ ತೈಲ ಕಂಪೆನಿಗಳು ಅದು ಹೇಗೆ ಸಾವಿರಾರು ಕೋಟಿ ಲಾಭಾಂಶ ಹಂಚುತ್ತಿವೆ. ಇವೆಲ್ಲ ೨೦೧೪ ಚುನಾವಣೆಗಾಗಿ ನಡೆಯುತ್ತಿರುವ ಹಣ ಸಂಗ್ರಹಣೆ ಎಂಬ ಮಾತು ತೀರಾ ಸಿನಿಕತನವಾದರೂ ಕಟು ಸತ್ಯವೆ.

  ಉತ್ತರ
  • sriharsha
   ಜೂನ್ 29 2011

   ಬೆಲೆ ಏರಿಸುವುದರಿಂದ ಚುನಾವಣೆಗೆ ಹಣ ಹೇಗೆ ಸಂಗ್ರಹವಾಗುತ್ತದೆ?

   ಉತ್ತರ
 2. abdulsatthar
  ಜೂನ್ 30 2011

  ನಿರೂಪಣೆ ಚೆನ್ನಾಗಿದೆ… ಎಲ್ಲರ ಚಿಂತನೆಗೆ ಯೋಗ್ಯವಾದ ಲೇಖನ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments