ವಿಷಯದ ವಿವರಗಳಿಗೆ ದಾಟಿರಿ

ಜೂನ್ 30, 2011

ಟ್ರಾಪಿಕ್ ಸಮಸ್ಯೆ ಯ ಜಾಗ್ರುತಿ ಕನ್ನಡದಲ್ಲಿರಲಿ

‍ನಿಲುಮೆ ಮೂಲಕ
-ಅರುಣ್ ಜಾವಗಲ್

ಬೆಂಗಳೂರಿನ ಟ್ರಾಫಿಕ್ ನಿಯಂತ್ರಿಸುವಲ್ಲಿ ದೇಶದ ಹಲವಾರು ನಗರಗಳ ಪೋಲೀಸರಿಗೆ ಹೋಲಿಸಿದರೆ ನಮ್ಮ ಪೋಲೀಸರು ಬಹಳ ಮುಂದಿದ್ದಾರೆ. ತಂತ್ರಜ್ನಾನವನ್ನ ಬಳಸೋದರ ಮೂಲಕ ಟ್ರಾಫಿಕ್ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾಗಿದ್ದಾರೆ ಎನ್ನುವುದು ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುವಂತಹದ್ದು.

ಆದ್ರೆ, ಬೆಂಗಳೂರಿನ ಟ್ರಾಪಿಕ್ ಸಮಸ್ಯ್ತೆಯನ್ನು ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರು ಪೋಲೀಸರಿಗೆ ಸರಿಯಾಗಿ ಸಹಕರಿಸಿಲ್ಲ ಎಂದು ಬೆಂಗಳೂರಿನ ಪೋಲೀಸ್ ಕಮಿಶನರ್ ಆದ ಜ್ಯೋತಿ ಪ್ರಕಾಶ್ ಮಿರ್ಜಿಯವರು ಇಂದು ನಗರದ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.


ಟ್ರಾಪಿಕ್ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪೋಲೀಸಿನವರಶ್ಟೇ ಸಾರ್ವಜನಿಕರ ಪಾತ್ರವೂ ಇದೆ. ಟ್ರಾಫಿಕ್ ಸಮಸ್ಯೆ ಬಗ್ಗೆ ಸಾರ್ವಜನಿಕರಲ್ಲಿ ಜಾಗ್ರುತಿ ಅತ್ಯಗತ್ಯ. ಈ ಜಾಗ್ರುತಿ ಕೆಲಸವನ್ನು ಪೋಲೀಸಿನವರ ಮಾಡುತ್ತಿಲ್ಲವೆಂದೇನಿಲ್ಲ. ಸಾರ್ವಜನಿಕರಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಜಾಗ್ರುತಿ ಮೂಡಿಸೋ ಕೆಲ್ಸನೂ ಸಹ ಪೋಲೀಸಿನವರು ಮಾಡುತ್ತಿದ್ದಾರೆ. ಆದರೆ ಇದು ಪರಿಣಾಮಕಾರಿಯಾಗಿಲ್ಲ ಅನ್ನೊದು ನನ್ನ ಅನಿಸಿಕೆ.
ಟ್ರಾಪಿಕ್ ಸಮಸ್ಯೆಯ ಬಗ್ಗೆ ಜಾಗ್ರುತಿ ಕೆಲ್ಸದಲ್ಲಿ ಬಾಶೆ ಅತ್ಯಂತ ಮುಕ್ಯ. ಜನರಿಗೆ ಅರ್ತ ಆಗೋ ಬಾಶೆಲಿ ಈ ಕೆಲ್ಸ ನಡೆದ್ರೆ ಪರಿಣಾಮಕಾರಿಯಾಗಿರುತ್ತೆ. ಬೆಂಗಳೂರಿನ ಬಹುಸಂಕ್ಯಾತ ಜನರ ಬಾಶೆ ಕನ್ನಡದಲ್ಲಿ ಜಾಗ್ರುತಿ ಕಾರ್ಯಕ್ರಮ ನಡೆದ್ರೆ ಜಾಗ್ರುತಿಯ ಸಂದೇಶ ಜನರಿಗೆ ತಲುಪುತ್ತೆ. ವಿಶಾದದ ಸಂಗತಿಯೆಂದರೆ, ಪೋಲೀಸಿನವರು ಸಾರ್ವಜನಿಕರನ್ನ ಜಾಗ್ರುತಿ ಮಾಡೋ ಕಾರ್ಯದಲ್ಲಿ ವಲಸಿಗರನ್ನ ಮಾತ್ರ ಗಣನೆಗೆ ತೆಗೆದುಕೊಂಡು ಬಹುಸಂಖ್ಯಾತ ಕನ್ನಡಿಗರನ್ನ ಮರೆತಿರುವುದು ದುರದ್ರುಶ್ಟವೇ.
ಟ್ರಾಫಿಕ್ ಸಮಸ್ಯೆಯ ಬಗ್ಗೆ ನಗರದಲ್ಲಿ ಹಲವಾರು ಹೋರ್ಡಿಂಗ್ ಗಳನ್ನ ನೋಡಬಹುದು ಈ ಹೋರ್ಡಿಂಗ್ ಗಳನ್ನ ಪೋಲೀಸ್ ಇಲಾಕೆ ಜನರಿಗೆ ಜಾಗ್ರುತಿ ಮಾಡೊಕ್ಕೆ ಅಂತನೇ ಹಾಕಿರೋದು . ಆದ್ರೆ ಹೆಚ್ಚಿನ ಹೋರ್ಡಿಂಗ್ ಗಳಲ್ಲಿ ಬಹುಸಂಖ್ಯಾತ ಬೆಂಗಳೂರಿಗರಿಗೆ ಅರ್ತವಾಗದ ಇಂಗ್ಲೀಶ್ ಬಾಶೆಯಲ್ಲಿ ಮಾತ್ರ ಇದೆ. ಇನ್ನು ಇತ್ತೀಚೆಗೆ ಹಲವಾರು ಕಡೆ ಅಳವಡಿಸಲಾಗಿರೋ ಎಲೆಟ್ರಾನಿಕ್ ಡಿಸ್ಪ್ಲೆ ಕಡೆ ನೋಡಿದ್ರೆ, ಅಲ್ಲೂ ಸಹ ಇದೆ ರೀತಿ ಜನರಿಗೆ ಗೊತ್ತಿಲ್ಲದ ಬಾಶೆಯಲ್ಲಿ ಜಾಗ್ರುತಿ ಮಾಡೊ ಪ್ರಯತ್ನ ಮಾಡ್ತಿರೋದು ಎದ್ದು ಕಾಣಿಸುತ್ತಿದೆ.
ಇನ್ನು ಟ್ರಾಫಿಕ್ ಪೋಲೀಸಿನವರು ಕಳೆದ ಕೆಲವು ತಿಂಗಳ ಹಿಂದೆ ಜನರಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಜಾಗ್ರುತಿ ಮಾಡೊಕ್ಕೆ ಅಂತ ಒಂದು ವೀಡಿಯೋ ಮಾಡಿ ಬೆಂಗಳೂರಿನ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮೊದಲು ಪ್ರದರ್ಶನ ಮಾಡೊ ವ್ಯವಸ್ಥೆ ಮಾಡಿದ್ದಾರೆ. ಇದು ಒಂದು ಉತ್ತಮ ನಡೆಯೇ, ಆದ್ರೆ ಈ ವೀಡಿಯೋ ನಲ್ಲಿ ಜಾಗ್ರುತಿಗೆ ಅಂತ ಬಳಸಿರೋದು ಬೆಂಗಳೂರಿನ ಜನರಿಗೆ ಅರ್ತವಾಗದಿರೋ ಹಿಂದಿ ಬಾಶೆನ! ಜಾಗ್ರುತಿ ಮಾಡೊವಾಗ ಬಳಸಬೇಕಾದ್ದು ಜನರಿಗೆ ಗೊತ್ತಿರೋ ಕನ್ನಡ ಬಾಶೆನ ಹೊರೆತು, ಜನರಿಗೆ ತಿಳಿಯದ ಹಿಂದಿ ಬಾಶೆಯನ್ನಲ್ಲ ಅಲ್ವ?
ನಿಜವಾಗಿಯೂ ಪೋಲೀಸ್ ಇಲಾಕೆ ತನ್ನ ಜಾಗ್ರುತಿ ಮೂಡಿಸೋ ಕಾರ್ಯದಲ್ಲಿ ಕನ್ನಡವನ್ನ ಬಳಸಿದ್ರೆ, ಇಂದಿಗಿಂತ ಹೆಚ್ಹು ಪರಿಣಾಮಕಾರಿಯಾಗಿ ಜನರನ್ನ ಜಾಗ್ರುತರನ್ನಾಗಿ ಮಾಡೊಕ್ಕೆ ಸಾದ್ಯ ಅಲ್ವ?
ಟ್ರಾಪಿಕ್ ಸಮಸ್ಯೆಯನ್ನ ಜನರಲ್ಲಿ ಜಾಗ್ರುತಿ ಮಾಡೊದ್ರಿಂದ ಮಾತ್ರ ಕಡಿಮೆ ಮಾಡಬಹುದು, ಜಾಗ್ರುತಿಗೆ ಬಳಸೋ ಬಾಶೆ ಕೂಡ ಜನರಿಗೆ ಅರ್ತ ಆಗೋ ಬಾಶೆ, ಕನ್ನಡ ಆಗಿರಬೇಕು ಅಲ್ವ? ಏನಂತೀರ.
************

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments