ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 15, 2011

2

ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ…!

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

ಇವತ್ತು ೬೫ನೇ ಸ್ವಾತಂತ್ರ್ಯ ಸಂಭ್ರಮ,ದೆಹಲಿಯ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿ ಭಾಷಣ ಮಾಡಲಿದ್ದಾರೆ ನಮ್ಮ ಪ್ರಾಮಾಣಿಕ ಪ್ರಧಾನಿ.ಮತ್ತೆ ನಾಳೆ ಇದೇ ಪ್ರಾಮಾಣಿಕ ಪ್ರಧಾನಿಯ ಸರ್ಕಾರದ ಅನೈತಿಕತೆಯ ವಿರುದ್ಧ ಅಣ್ಣಾ ಹಜ಼ಾರೆ ಮತ್ತೆ ಉಪವಾಸ ಕೂರುತಿದ್ದಾರೆ.ಅಣ್ಣಾ ಇದನ್ನ ಎರಡನೇ ಸ್ವಾತಂತ್ರ್ಯ ಹೋರಾಟ ಅನ್ನುತಿದ್ದಾರೆ.ಆದರೆ ಮೊದಲ ಸ್ವಾತಂತ್ರ್ಯ ಹೋರಾಟದ ಆಳ-ಅಗಲಗಳನ್ನ ಸರಿಯಾಗಿ ತಿಳಿಯಲಾಗದೇಯೆ ಶಾಲೆ-ಕಾಲೇಜು ಪಾಸಾಗಿ ಬಂದ ನಮ್ಮಲ್ಲಿ ಅದಿನ್ನೆಷ್ಟು ಜನಕ್ಕೆ ಈ ಎರಡನೇ ಹೋರಾಟ ಕಿಚ್ಚು ಹಚ್ಚಬಹುದು,ಅದನ್ನ ಕಾಲವೇ ಉತ್ತರಿಸಲಿದೆ.

ಅಣ್ಣಾ ಉಪವಾಸ ಹೋರಾಟಕ್ಕೆ ಜಯವಾಗಲಿ ಅಂತ ಹಾರೈಸುತ್ತ,ಅಣ್ಣಾ ಉಪವಾಸ ಸತ್ಯಾಗ್ರಹಕ್ಕೆ ಆರಂಭದಲ್ಲೆ ಕಲ್ಲು ಹಾಕಿ ತಲೆಕೆಟ್ಟವರಂತೆ ಮಾತನಾಡುತ್ತಿರುವ ಕಾಂಗ್ರೆಸ್ಸಿನ ಮಂದಿಗೂ ಮತ್ತು ಕೇಂದ್ರ ಗೃಹ ಸಚಿವರಿಗೂ ಮತ್ತು ಕನಿಷ್ಠ ದೆಹಲಿ ಪೋಲಿಸ್ ಪರ್ಮಿಷನ್ ಸಹ ಕೊಡಿಸಲಾಗದ ಅಸಾಹಯಕ ಆದರೆ At the same time ಪ್ರಾಮಾಣಿಕ ಪ್ರಧಾನಿಯ ಶೋಚನೀಯ ಸ್ಥಿತಿಗೆ ಕಂಬನಿ ಮಿಡಿಯುತ್ತ, ಉಪವಾಸ ಸತ್ಯಾಗ್ರಹದಂತ ಹೋರಾಟದ ಅಸ್ತ್ರ ಹಿಡಿದು ನಿಲ್ಲುವವರ ಮನಸ್ಥಿತಿಯ ಕುರಿತಾಗಿ ಮಹಮ್ಮದ್ ಅಲಿ ಜಿನ್ನಾ ಹೇಳಿರುವ ಮಾತುಗಳು ನೆನಪಿಸಿಕೊಳ್ಳುತಿದ್ದೇನೆ.

“ಯಾವ ಮನುಷ್ಯ ಉಪವಾಸ ಸತ್ಯಾಗ್ರಹಕ್ಕೆ ಇಳಿಯುತ್ತಾನೋ ಅಂತವನು ಅವನ ಮನಸಿನ ಮಾತಿನಂತೆ ನಡೆಯುತ್ತಾನೆ ಮತ್ತು ಅವನಿಗೆ ಅವನೇನು ಮಾಡುತ್ತಿದ್ದಾನೆ ಎಂಬುದರ ಸಂಪೂರ್ಣ ಅರಿವಿರುತ್ತದೆ.ಅವರನ್ನು ಹಾದಿ ತಪ್ಪಿದವರು ಅನ್ನುವ ಮೊದಲು ಅವರನ್ನು ಹಾದಿ ತಪ್ಪಿಸಿರುವುದು ಈ ವ್ಯವಸ್ತೆ ಅನ್ನುವುದನ್ನ ಮರೆಯಬಾರದು,ಮತ್ತು ಈ ವ್ಯವಸ್ತೆಯ ವಿರುದ್ಧ ಯುವಕರು ಸಿಡಿದಿದ್ದಾರೆ” . ಅವರು ಹಾಗೇ ಹೇಳಿದ್ದು ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಸಂಗಡಿಗರು ಬ್ರಿಟಿಶ್ ಕೈದಿಗಳಂತೆ ಭಾರತೀಯ ಕೈದಿಗಳಿಗೂ ಜೈಲಿನಲ್ಲಿ ಸಮಾನ ಹಕ್ಕು ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಹೋರಾಟವನ್ನ ಬಹಿರಂಗವಾಗಿ ಬೆಂಬಲಿಸಿ.ಆಗಲೂ ಸಹ ಕಾಂಗ್ರೆಸ್ಸ್ ಭಗತ್ ಸಿಂಗ್ ಅವರ ಉಪವಾಸದ ಹೋರಾಟದ ಬಗ್ಗೆ ಈಗ ಅಣ್ಣಾ ಅವರ ಹೋರಾಟದ ವಿರುದ್ಧ ಇರುವಂತೆಯೆ ಇತ್ತು. ಅದಿರಲಿ, ಈ ಹೋರಾಟ ನಡೆದಿದ್ದು ಬರೋಬ್ಬರಿ ೬೩ ದಿನಗಳ ಕಾಲ! ಕಡೆಗೂ ಭಗತ್ ಸಿಂಗ್ ಮತ್ತವರ ಗೆಳೆಯರ ಎದುರು ಬ್ರಿಟಿಷ್ ಸರ್ಕಾರ ಮಂಡಿಯೂರಲೇ ಬೇಕಾಯಿತು,ಆದರೆ ಅಷ್ಟರೊಳಗಾಗಲೇ ನಾವು ’ಜತೀನ್ ದಾ’ ಅವರನ್ನ ಕಳೆದುಕೊಂಡಾಗಿತ್ತು 😦

ಕ್ರಾಂತಿಕಾರಿಗಳೆಂದರೆ ಕೇವಲ ಬಾಂಬ್ ಎಸೆದವರಲ್ಲ, ಕೇವಲ ರಕ್ತ ಹರಿಸಿದವರಲ್ಲ.ಹಾಗೇಯೆ ’ಉಪವಾಸ ಸತ್ಯಾಗ್ರಹ’ ಅನ್ನುವುದು ಕೇವಲ ಶಾಂತಿ ದೂತರ ಆಯುಧವಲ್ಲ ಅದು ಕ್ರಾಂತಿಕಾರಿಗಳ ಅಸ್ತ್ರವೂ ಹೌದು ಅನ್ನುವುದನ್ನ ತೋರಿಸಿಕೊಟ್ಟವರು ಭಗತ್ ಸಿಂಗ್ ಮತ್ತವನ ಸಂಗಡಿಗರು…!

ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿಕೊಂಡ ಕ್ರಾಂತಿಕಾರಿಗಳ ಮತ್ತವರ ಕುಟುಂಬದವರ ಪಾಡೇನಾಗಿತ್ತು ಅನ್ನುವುದನ್ನ ಗಲ್ಲು ಶಿಕ್ಷೆಗೆ ಎರಡು ದಿನ ಮೊದಲು ಸುಖ್ ದೇವ್ ಗಾಂಧೀಜಿಗೆ ಬರೆದರು ಅನ್ನುವ ಪತ್ರ ಓದಿದಾಗ ತಿಳಿಯುತ್ತದೆ(ಅದು ಅವರಿಗೆ ತಲುಪಿದ್ದು ಅವನ ಮರಣದ ನಂತರ).ಪತ್ರದ ಒಕ್ಕಣೆ “ಅವರಲ್ಲಿ ಒಬ್ಬ”. ಆ ಪತ್ರದಲ್ಲಿ ಸುಖ್ ದೇವ್  ಹೀಗೆ ಬರೆಯುತ್ತಾರೆ

“ನೀವು ನಿಮ್ಮ ಚಳುವಳಿ ನಿಲ್ಲಿಸಿದಿರಿ.ಹಾಗಾಗಿ ನಿಮ್ಮವರೆಲ್ಲ ಬಿಡುಗಡೆಯಾಗಿದ್ದಾರೆ.ಆದರೆ ನಾವು ಕ್ರಾಂತಿಕಾರಿಗಳು ಏನು ಮಾಡಬೇಕು?ನಮ್ಮ ಗತಿ ಏನು?೧೯೧೫ ರಿಂದಲೂ ಗದರ್ ಪಾರ್ಟಿಯ ಜನ ಜೈಲಿನಲ್ಲಿ ಕೊಳೆಯುತಿದ್ದಾರೆ.ಬಬ್ಬರ್ ಅಖಾಲಿ,ಕಾಕೋರಿ,ಮಾಚುವ ಬಜಾರ್,ಲಾಹೋರ್ ಪೀತೂರಿ ಕೇಸಿನಲ್ಲಿ ಸಿಕ್ಕಿರುವ ಕ್ರಾಂತಿಕಾರಿಗಳೆಲ್ಲ ಕಂಬಿ ಎಣಿಸುತಿದ್ದಾರೆ.ಅವುಗಳೆಲ್ಲದರ ವಿಚಾರಣೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ.ಎಷ್ಟೋ ಜನ ಕ್ರಾಂತಿಕಾರಿಗಳ ಪತ್ತೆಯೇ ಇಲ್ಲ.ಅವರೆಲ್ಲ ಏನಾದರು ಯಾರಿಗೂ ಗೊತ್ತಿಲ್ಲ.ಹಾಗೆ ನಾಪತ್ತೆಯಾದವರಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ.ಜೈಲಿನಲ್ಲಿರುವ ಅರ್ಧದಷ್ಟು ಮಂದಿಗೆ ಮರಣದಂಡನೆಯಾಗುವುದು ಖಾತ್ರಿ.ಈ ಬಗ್ಗೆ ನಿಮಗೆ ಯಾಕೆ ಆಸಕ್ತಿ ಇಲ್ಲ?”

ಮಗ ಸ್ವಾತಂತ್ರ್ಯದ ಹುಚ್ಚು ಹತ್ತಿಸಿಕೊಳ್ಳದೇ ಐ.ಸಿ.ಎಸ್ ಆಫ಼ಿಸರ್ ಆಗಲಿ ಅನ್ನುವುದು ಆ ಪಾಲಕರ ಆಶಯವಾಗಿತ್ತು.ಆದರೆ ನೇತಾಜಿ ಕೇಳಬೇಕಲ್ಲ,ದೇಶದ ಸ್ವಾತಂತ್ರ್ಯಕ್ಕಾಗಿ ೧೯೪೧ರಲ್ಲಿ ಮನೆಬಿಟ್ಟು ಹೊರಟು ಆಜಾದ್-ಹಿಂದ್ ಫ಼ೌಜ್ ಕಟ್ಟಿದ ಆ ಪುಣ್ಯಾತ್ಮ ಮತ್ತೆ ಮರಳಲೇ ಇಲ್ಲ..! ಖುದ್ಧು ಭಗತ್ ಸಿಂಗ್ ನ ಚಿಕ್ಕಪ್ಪ ಅಜಿತ್ ಸಿಂಗ್ ಸಹ ದೇಶ ಬಿಟ್ಟಿದ್ದರು..! ಚಂದ್ರ ಶೇಖರ್ ಆಜಾದ್ರದ್ದೂ ಸಹ ಇದೇ ಕತೆ… ಇಂತ ಅದಿನ್ನಿಷ್ಟೋ ಮಹನೀಯರ ತ್ಯಾಗ-ಬಲಿದಾನ ಫ಼ಲವೇ ನಮ್ಮ ಈ ಸ್ವಾತಂತ್ರ್ಯ ದಿನ.ಇದನ್ನೆಲ್ಲ ನೆನಪಿಸಿಕೊಂಡಾಗ ಅನ್ನಿಸುವುದು ’ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ…!’

ಇಂತ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಿರುವ ದೇಶದಲ್ಲಿ ಅಣ್ಣಾ ಹಜ಼ಾರೆ ಮುಂದಾಳತ್ವದ ಜನಲೋಕಪಾಲ ಮಸೂದೆಯ ಹೋರಾಟ ಈ ಶಕುನಿ ಸರ್ಕಾರ/ರಾಜಕಾರಣಿಗಳನ್ನ ಮಂಡಿಯೂರುವಂತೆ ಮಾಡಿ ಮತ್ತೊಮ್ಮೆ ಭಾರತ ಸ್ವಾತಂತ್ರ್ಯ ಪಡೆಯಲಿ ಅಂತ ಹಾರೈಸುತ್ತ,ಬೆಂಗಳೂರಿನ ಫ಼್ರೀಡಂ ಪಾರ್ಕಿಗೆ ಮಂಗಳವಾರ ಅಣ್ಣಾ ಪರ ನಡೆಯಲಿರುವ ಹೋರಾಟಕ್ಕೆ ನಾನು ಹೋಗಲಿದ್ದೇನೆ.ನೀವು ಬರ್ತಿದ್ದೀರಾ!?

2 ಟಿಪ್ಪಣಿಗಳು Post a comment
 1. ಆಗಸ್ಟ್ 16 2011

  ಕಾಂಗ್ರೆಸ್ಸ್ ಆರ್ ಎಸ್ ಎಸ್ ಅನ್ನು ದೂರಲಿ .ಆರ್ ಎಸ್ ಎಸ್ ಕಾಂಗ್ರೆಸ್ಸ್ ಅನ್ನು ದೂರಲಿ , ಅಂತು ಇಂತೂ ನಮ್ಮ ಈ ರಾಜಕಾರಣಿಗಳ ಸ್ವಾರ್ಥ ಕ್ಕೆ ..ಇನ್ನೆಷ್ಟೂ ಅಣ್ಣ ಹಜಾರೆಯಂತಹ ಗಾಂಧಿ ವಾದಿಗಳನ್ನು ಹೀಗೆಯೇ ಬಂದನ ಮಾಡುತ್ತಾರೋ ಗೊತ್ತಿಲ್ಲಾ ,ನಮ್ಮ ದೇಶದ ಬಗ್ಗೆ ಯೋಚನೆ ಮಾಡುವವರು ಹೀಗೆ ಆರ್ .ಎಸ್ .ಎಸ್ ,.ಕಾಂಗ್ರೆಸ್ಸ್ ಅಂತ ಹೇಳುವುದು ಎಷ್ಟು ಸರಿಯೋ ಗೊತ್ತಿಲ್ಲ ,ಯಾರೇ ತಪ್ಪು ಮಾಡಿದರು ವಿರೋಧಿಸಬೇಕು ,ದೇಶದ ಬಗ್ಗೆ ಕಾಳಜಿ ಉಳ್ಳವರು ಅಣ್ಣಾ ಹಜಾರೆ ಅವರನ್ನು ಬೆಂಬಲಿಸಬೇಕು ಇಂತಹ ಸಮಯ ದಲ್ಲಿ ಆರ್ .ಎಸ್ .ಎಸ್ ಅಂತ ಹೇಳುವುದು ತುಂಬಾ ತಪ್ಪು .ಒಬ್ಬ ಆರ್ ಎಸ್ ಎಸ್ ಮಾಡುವ ತಪ್ಪಿಗೆ ಎಲ್ಲಾ ಆರ್ ಎಸ್ ಎಸ್ ಸದಸ್ಯರನ್ನು ದೂರುವುದು ತಪ್ಪು ,ಒಬ್ಬ ಮುಸ್ಲಿಂ ಮಾಡಿದ ತಪ್ಪಿಗೆ ನಿಷ್ಟಾವಂತ ಮುಸ್ಲಿಮರಿಗೆ ಭಯೋತ್ಪಾದಕ ಎಂದು ಕರೆಯುವ ಹಾಗೆ ಆಯಿತು .ಭ್ರಷ್ಟಾಚಾರದ ವಿರುದ್ದ ಕೈ ಜೋಡಿಸಿ ,ನನ್ನ ಮನೆಗೆ ಬೆಂಕಿ ಬೀಳುವಾಗ ಅಲ್ಲಿಗೆ ಆರ್ .ಎಸ್ .ಎಸ್ .ಬಂದು ಸಹಕಾರ ಮಾಡಿದರೆ ,ಬೇಡ ನೀನು ಬರಬೇಡ, ನನ್ನ ಮನೆ ಬೆಂಕಿಯಿಂದ ಸುಟ್ಟು ಹೋಗಲಿ ಅಂದಾಯಿತು ,ಯಾಕ್ರೀ ಸುಮ್ಮನೆ ನಮ್ಮ ಮನೆಗೆ ಬೆಂಕಿ ಬೀಳುವಾಗ ಅದಕ್ಕೆ ತುಪ್ಪ ಎರಚ್ತೀರಾ ,ರಾಜಕೀಯ ಪಕ್ಷಗಳು ಮಾಡುವ ತಪ್ಪನ್ನು ಸರಿ ಎಂದು ಸಮರ್ಥಿಸಿದರೆ ನಾವೂ ಭ್ರಷ್ಟರಾಗಬಹುದು , ನಮ್ಮ ದೇಶವನ್ನು ನಾವೇ ಹಾಳು ಮಾಡಿದ ಹಾಗೆ . ಕತ್ತೆ ಗಳಿಗೆ ಕಸ್ತೂರಿ ವಾಸನೆ ಯಾವತ್ತು ಗೊತ್ತಾಗದು

  ಉತ್ತರ
 2. Sreenivasa Prasad.K.V.
  ಆಗಸ್ಟ್ 22 2011

  Anna avara niluvu sariyaagudAfter our country is a democratic country and those who make legislation are our elected representatives. The MP’s must honour the peoples views and should take up the matter in parliament in right spirit and respect peoples views instead of condemning and arresting the people and putting them behind bars. After all the lokpal bill as sought for by anna is to curb corruption which is so deep rooted and several crores of Rupees have been swallowed bt corrupt people representatives. People have a right to demand the money back and punishment for the corrupt people and in that direction the Lokpal bill as sought by people represented by Anna is genuine. The Govt should act immediately to introduce the bill and to punsh the corrupt politicians rather than postponing the introduction of the bill. We, the citizens of this country should demand in one voice its introduction in the current session itself. After all it is the people who are th king in the country.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments