ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 9, 2011

9

ಯಾರು ಅಪಾಯಕಾರಿ!?

‍ನಿಲುಮೆ ಮೂಲಕ

– ಸಚಿನ್

ನಮ್ಮ ನಿಮ್ಮ ಮಧ್ಯೆಯಿರುವ ಕೆಲ ಎಡಬಿಡಂಗಿ ಗಳು ನಿನ್ನೆ ದೆಹಲಿ ಹೈಕೋರ್ಟ್ ನಲ್ಲಿ ನಡೆದ ಬಾಂಬ್ ಸ್ಪೋಟದ ಕುರಿತು ಒಂದು ಹೇಳಿಕೆ ಕೊಟ್ಟರು. ” ಬಿಜೆಪಿಗೆ ಅವಮಾನ ಆಗುವ ಸಂಧರ್ಭ ಗಳಲ್ಲಿ ಬಾಂಬ್ ಸ್ಪೋಟ ನಡೆಯುತ್ತಿದೆ ಹಾಗಾಗಿ ರೆಡ್ಡಿಯ ಬಂಧನದ ಸಂಧರ್ಭ ದಲ್ಲಿ ಈ ಸ್ಪೋಟ ನಡೆದಿರುವುದು ಹಲವಾರು ಉಹಾಪೋಹಗಳಿಗೆ ಎಡೆ ಮಾಡಿಕೊಡುತ್ತಿದೆ. ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಯಾ ಸಿಂಗ್ ನಡೆಸಿದ ಬಾಂಬ್ ಸ್ಪೋಟಗಳೇ ಇದಕ್ಕೆ ಸಾಕ್ಷಿ. ಅಣ್ಣಾ ಹಜಾರೆ ಮತ್ತು ರೆಡ್ಡಿ ಬಂಧನದ ಅಬ್ಬರ ಗಳಿಗಿಂತ ಹೆಚ್ಚಿನರೀತಿಯಲ್ಲಿ ಬಿಜೆಪಿ ದೇಶ ಭಕ್ತರು ಕಿರುಚಾಟಗಳನ್ನು ಶುರುಮಾಡ್ತಾರೆ ನೋಡ್ತಾಯಿರಿ” ಎಂದು ಎರಡು ಲೈನ್ ಬರೆದು ತಮ್ಮ ಮನಸ್ಸಿನಲ್ಲಿರುವ ಅಸಹ್ಯವನ್ನು ಹೊರಹಾಕಿದರು.

ಸ್ನೇಹಿತರೇ ನಾವು ಗಮನಿಸ ಬೇಕಾದ ಮುಖ್ಯವಾದ ಅಂಶವೆಂದರೆ ಈಗ ನಡೆಯುತ್ತಿರುವುದು ಭಯೋತ್ಪಾದಕರು ಮತ್ತು ಭಾರತ ದೇಶದ ಮಧ್ಯೆ ಯುದ್ದ, ಈ ಯುದ್ದ ದಲ್ಲಿ  ಭಯೋತ್ಪಾದಕರು ವಿಜಯಿಯಾಗುತಿದ್ದಾರೆ. ಈ ಭಯೋತ್ಪಾದನೆ ಕೃತ್ಯಗಳನ್ನ ಯಾವುದೇ ದೇಶ ಸುಮ್ಮನೆ ಸಹಿಸಿ ಕೊಳ್ಳುವುದಿಲ್ಲ. ಹಾಗು ಕೃತ್ಯ ನಡೆಸಿದವರಿಗೆ ಸರಿಯಾದ ಶಿಕ್ಷೆ ಕೊಡುವ ವ್ಯವಸ್ಥೆ ಬೇರೆ ದೇಶಗಳಲ್ಲಿದೆ. ಒಂದು ಸಣ್ಣ ಪ್ರಮಾದ ದಿಂದ ಬೆಂಗಳೂರಿನ ವೈದ್ಯ ಹನೀಫ್ ಆಸ್ಟ್ರೇಲಿಯಾದಲ್ಲಿ ಹೇಗೆ ನರಳಿದ ಎಂದು ನಮಗೆ ಗೊತ್ತಿಲ್ಲವೆ.

ಪಕ್ಷಗಳನ್ನು ಸಮರ್ಥಿಸಿಕೊಂಡು ಜಗಳವಾಡುವ ಸಮಯ ಇದಲ್ಲ. ಸುಮ್ಮನೆ ವಿತಂಡವಾದ ಮಾಡಿ ಎಲ್ಲದಕ್ಕು ಒಂದೊಂದು ಸಂಭಂದ ಕಲ್ಪಿಸಿ ನಿಮ್ಮ ಹೊಲಸನ್ನು ಕಾರಬೇಡಿ. ನಿಮ್ಮ ಭಂಡತನದ ನಿಲುವುಗಳು ಏನೆಂದು ಅಣ್ಣಾ ಹಜಾರೆ ಹೋರಾಟದ ಸಂಧರ್ಭದಲ್ಲಿ ನಮ್ಮ ಭಾರತದ ಎಲ್ಲ ಸತ್ಪ್ರಜೆಗಳಿಗೆ ಗೊತ್ತಾಗಿವೆ.

 

ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಯಾ ಸಿಂಗ್ , ಎಲ್ಟಿಟಿಯಿ, ಎಲ್ ಇ ಟಿ ಅಥವ ಮತ್ತಿನ್ಯಾದೋ ಸಂಘಟನೆ ಇಂತಹ ಕೃತ್ಯ ಯಾರೇ ಮಾಡಿದರು ಸಮರ್ಥನೆ ಅದು ಸರಿಯಲ್ಲ. ಅವರು ಅಂತಹ ಕೃತ್ಯ ಮಾಡಿದ್ದಾರೆಂದು ಸಾಬೀತಾದರೆ ತಕ್ಕ ಶಿಕ್ಷೆ ಆಗಲೇಬೇಕು.

ದಿಲ್ಲಿ ಸ್ಫೋಟ ಪ್ರಕರಣದಲ್ಲಿ, ಗಾಯಗೊಂಡು ರಾಮ ಮನೋಹರ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳನ್ನು ನೋಡಲೆಂದು ರಾಹುಲ್ ಗಾಂಧಿ ಮಧ್ಯಾಹ್ನ ಅಲ್ಲಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿಡೀ ರಾಹುಲ್ ಗಾಂಧಿ ವಿರೋಧಿ ಘೋಷಣೆಗಳು, ಕಾಂಗ್ರೆಸ್ ವಿರೋಧೀ ಕೂಗಾಟಗಳು ಮತ್ತು ಯುಪಿಎ ವಿರೋಧಿ ಘೋಷಣೆಗಳೇ ಕೇಳಿಬರತೊಡಗಿದ್ದವು. “ರಾಹುಲ್ ಗಾಂಧಿ ವಾಪಸ್ ಜಾವೋ” “ರಾಹುಲ್ ಗಾಂಧಿ ಹೇಡಿ” ಮುಂತಾದ ಘೋಷಣೆಗಳೊಂದಿಗೆ ಯುಪಿಎ ಡೌನ್‌ಡೌನ್, ಕಾಂಗ್ರೆಸ್ ಡೌನ್‌ಡೌನ್ ಎಂಬ ಘೋಷಣೆಗಳೂ ಕೇಳಿಬಂದಿದ್ದವು.

ಈ ರೀತಿ ನಡೆದುಕೊಳ್ಳಿ ಎಂದು ಬಿಜೆಪಿ ಯವರು ಅಥವ ಸಂಘಪರಿವಾದವರು ಸಂತ್ರಸ್ತರಿಗೆ ಮಾರ್ಗ ದರ್ಶನ ಕೊಟ್ಟಿದ್ದರೆ? ಅದು ಅವರು ಅನುಭವಿಸಿದ ಕಷ್ಟ ನಷ್ಟ ನೋವುಗಳ ಆಕ್ರೋಶ ಅವರನ್ನು ಆ ರೀತಿ ನಡೆಸಿತ್ತು. ಈಗ ಅಧಿಕಾರ ಯಾರ ಕೈಯಲ್ಲಿ ಇದೆಯೊ ಅವರನ್ನೆ ಗುರಿ ಮಾಡುತ್ತಾರೆ ವಿನಹ ವಿರೋಧ ಪಕ್ಷದವರನ್ನು ಗುರಿ ಮಾಡಿ ಟೀಕೆ ಮಾಡುವುದಿಲ್ಲ. ಇಂದಿಗೂ ಮಾಜಿ ಪ್ರಧಾನಮಂತ್ರಿ ದಿ.ಇಂದಿರಗಾಂಧಿಯವರನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳುವುದು ದೇಶದ ಒಳಿತಿಗಾಗಿ ಅವರು ತೆಗೆದುಕೊಂಡ ಕೆಲ ಕಠಿಣ ನಿರ್ಧಾರಗಳಿಂದ. ಅಂತಹ ಗಂಡೆದೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಇಂದಿನವರು ಆಪೇಕ್ಷಿಸುತಿದ್ದಾರೆ ವಿನಹ ಬೇರೇನು ಅಲ್ಲ.

ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಯಾ ಸಿಂಗ್ ಬಗ್ಗೆ ಮಾತಾಡ್ತಾಯಿರ್ತೀರಲ್ಲ. ಅವರಿಗೂ ಅಷ್ಟೆ, ಪದೇ ಪದೇ ನಡೆದು ಹೋದ ಭಯೋತ್ಪಾದಕ ಕೃತ್ಯಗಳ ಬಗ್ಗೆ ರೋಸಿ ಹೋಗಿ ಕೈಗೊಂಡ ಸ್ವಯಂ ನಿರ್ಧಾರವೇ ಹೊರತು ಯಾವುದೇ ಪಕ್ಷ ಅಥವ ಸಂಘಟನೆ ಈ ರೀತಿ ಮಾಡಿ ಎಂದು ಅವರಿಗೆ ಮಾರ್ಗದರ್ಶನ ನೀಡಿರಲಿಲ್ಲ.

ಪ್ರತಿಯೊಬ್ಬ ಪ್ರಜೆ ತನ್ನ ಮನೆಯ ಪಕ್ಕದ ಅಥವ ಗಲ್ಲಿಯಲ್ಲಿರುವ ಯಾವುದೇ ಧರ್ಮ ಹಾಗೂ ಯಾವುದೇ ಜಾತಿಯ ಜನರನ್ನು ಸ್ನೇಹಿತರಂತೆ ಕಾಣುತ್ತಾನೆ ಹೊರತು ವೈರಿಯಂತೆ ಕಾಣುವುದಿಲ್ಲ.  ಎಲ್ಲರಿಗೂ ಬೇಕಾಗಿರುವುದು ಶಾಂತಿ ನೆಮ್ಮದಿ ಮತ್ತು ದೇಶದ ಪ್ರಜೆಗಳ ರಕ್ಷಣೆ ಹೊರತು ಬೇರೇನಲ್ಲ. ಆದರೆ ಇಂತಹ ಸೌಹಾರ್ದ ಸಂಭಂದಕ್ಕೆ ಧಕ್ಕೆ ತರುವುದು ನಿಮ್ಮಂತ ಎಡಬಿಡಂಗಿ, ಲದ್ದಿಜೀವಿಗಳ ಪ್ರಭಾವಳಿ ಗಳೇ ಕಾರಣ.

9 ಟಿಪ್ಪಣಿಗಳು Post a comment
 1. ಸೆಪ್ಟೆಂ 9 2011

  ತುಂಬಾನೇ ಚೆನ್ನಾಗಿದೆ ನೀವು ಬರೆದಿರೋದು. ಈಗಿರೋ ದರಿದ್ರ ಕಾಂಗ್ರೆಸ್ ಸರ್ಕಾರವೇ ಈ ಭಯೋತ್ಪಾದನೆಗಳಿಗೆ ಕಾರಣ. ಈ ಕಾಂಗ್ರೆಸ್ ಮಂದಿ ಈ ದೇಶ ಬಿಟ್ಟು ಹೋಗೋವರೆಗೂ ಇದೇ ಗೋಳು ಇರುತ್ತೆ. ಇವರನ್ನೆಲ್ಲಾ ಮುಂದೆ ಬರುವ ಚುನಾವಣೆಯಲ್ಲಿ ಸೋಲಿಸಲೇಬೇಕು.

  buzzjokes
  Posted: 07 Sep 2011 11:23 PM PDT
  One day Manmohan Singh will retire
  And
  His autobiography will be called:
  “3 Mistakes of My Life”

  2G,
  3G,
  Sonia G.

  ಉತ್ತರ
 2. keshava
  ಸೆಪ್ಟೆಂ 9 2011

  ಇಂತಹ ಪೂರ್ವಾಗೃಹ ಪೀಡಿತರಿಂದ ಇನ್ನೇನನ್ನು ತಾನೇ ನಿರೀಕ್ಷಿಸಲು ಸಾಧ್ಯ … ತಾನು ಕಳ್ಳ ಪರರನ್ನು ನಂಬ ಎಂಬಂತಿರುವ ಈ ತಥಾಕಥಿತ ಬುದ್ಧಿಜೀವಿಗಳಿಗೆ ಮಾನವಹಕ್ಕು ಪ್ರತಿಪಾದಿಸುವವರಿಗೆ ಯಾವತ್ತು ಬುದ್ಧಿ ಬರುತ್ತದೋ!!!!!!!!! ಆ ಭಾರತಿಯೇ ಬಲ್ಲಳು …..

  ಉತ್ತರ
 3. SATYPRIYA
  ಸೆಪ್ಟೆಂ 9 2011

  ಅಣ್ಣಾ ರೆಡ್ಡಿಗಿಂತ ಅಪಾಯಕಾರಿ ಎಂದು ದಿನಾಂಕ; ೮-೯-೨೦೧೧ ರಲ್ಲಿ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಹೇಳಿರುವ ವಿಷಯಕ್ಕಾಗಿ ಹೇಳುತಿದ್ದೇನೆ. ಜಿ. ಕೆ. ಗೋವಿಂದರಾವ್ ಎಂಬ ಸೋಗಲಾಡಿ ಮನುಷ್ಯನ ಬಗ್ಗೆ ಮಾತನಾಡುವುದು ಅಸಹ್ಯವೇ ಸರಿ. ಈ ಮನುಷ್ಯನಿಗೆ ಒಂಥರಾ ಪ್ರಚಾರ ಬೇಕು. ಅದಕ್ಕೆ ಬಾಯಿ ತೂರಿಸಿಕೊಂಡು ಬರುತ್ತಾರೆ. ಈತನ ಪ್ರಚಾರ ಪ್ರಿಯತೆ ಹೇಗಿದೆ ಅಂದರೆ, ಭಯೋತ್ಪಾದನೆಯಿಂದ ನರಳುತ್ತಿರುವ ದೇಶದ ಬಗ್ಗೆ, ಭಯೋತ್ಪಾದನೆ ಮಾಡುವ ಮತಾಂಧರ ಬಗ್ಗೆ ಏನು ಹೇಳುವುದಿಲ್ಲ. ಅಷ್ಟೇ ಏಕೆ ಹುಣುಸೂರಿನ ಇಬ್ಬರು ಅಮಾಯಕ ವಿಧ್ಯಾರ್ಥಿಗಳನ್ನು ಹಣಕ್ಕಾಗಿ ಬರ್ಬರವಾಗಿ ಕೋಲೆ ಮಾಡಿದ S D F ಎಂಬ ದೇಶ ದ್ರೋಹಿಗಳು ತುಂಬಿರುವ ಸಂಘಟನೆ ಬಗ್ಗೆ ಒಂದು ಚಕಾರ ಎತ್ತೋಲ್ಲ. ಅಷ್ಟೇ ಏಕೆ ಕೇರಳದಲ್ಲಿ ಉಪನ್ಯಾಸಕನ ಕೈ ಕತ್ತರಿಸಿದಾಗಲು ಇವರು ಕಣ್ಣು ಬಾಯಿ ಮುಚ್ಚಿ ಕುಳಿತಿದ್ದರು. ಇತ್ತೀಚಿಗೆ ಬಾಂಬೆಯಲ್ಲಿ ಬಾಂಬ್ ಬ್ಲಾಸ್ಟ್ ಆದಾಗಲು ಇವರ ಯಾವುದೇ ವೀರಾವೇಶದ ಖಂಡಿಸುವ ಮಾತುಗಳು ಬರಲಿಲ್ಲ. ಅದೇ ಹಿಂದೂ ಅನ್ನಿಸಿಕೊಂಡಿರುವ ವ್ಯಕ್ತಿ ಅಥವಾ ಸಂಘಟನೆ ಅಲ್ಪ ಸಂಖ್ಯಾತರಿಗೆ ವಿರೋದವಾಗುವ ರೀತಿಯಲ್ಲಿ ಏನಾದರು ಮಾಡಿದೆಯೆಂದು ಮೇಲ್ನೋಟಕ್ಕೆ ಅನ್ನಿಸಿದರೆ ಸಾಕು. ಅದರ ಪೂರ್ಣ ವಿಚಾರಣೆಯಲ್ಲವನ್ನು ಇವರೇ ಮಾಡಿ ಶಿಕ್ಷೆ ಕೊಡುವ ರೀತಿ ಮಾತನಾಡುತ್ತಾರೆ. ದೇಶದ ವಿರುದ್ಧವಾಗಿ ಮತೀಯವಾಗಿ ಅಥವಾ ಜನಾಂಗದ ವಿರುದ್ದ ದ್ರೋಹ ಎಸಗಿದರೆ ಅವರು ಯಾರೇ ಆಗಲಿ ಕಂಡಿತ ಖಂಡಿಸಲೇಬೇಕು. ಆದರೆ ಸೊ ಕಾಲ್ಡ್ ಕೆಲವು ಬುದ್ಧಿ ಜೀವಿಗಳು ಯಾವತ್ತಿಗೂ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಬಳಿದುಕೊಂಡಿರುತ್ತಾರೆ. ಅನ್ಯಾಯ ಅಕ್ರಮಗಳಿಗೆಲ್ಲ ಈ ದೇಶದ ಬಹು ಸಂಖ್ಯಾತರೆ ಹೊಣೆ ಎಂದು ಭಾಷ್ಯ ಬರೆದುಬಿಟ್ಟೀದ್ದಾರೆ ಇವರು. ಮಿಕ್ಕ ಅಲ್ಪ ಸಂಖ್ಯಾತರು ಏನು ಅರಿಯದ ಮುಗ್ಧರು. ನಿಮ್ಮಿಂದ ಅವರು ರೊಚ್ಚಿಗೇಳುತ್ತಾರೆ. ಅವರಿಗೆ ಹೆಚ್ಚಿನ ವಿಧ್ಯಾಭ್ಯಾಸವಿಲ್ಲದ ಕಾರಣ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಎಂಬ ಅವಿವೇಕದ ಷರವನ್ನು ಬರೆಯುತ್ತಾರೆ. ಕೆಟ್ಟದ್ದನ್ನು ಯಾರು ಮಾಡಿದರೆ ತಪ್ಪೇ.. ಕೆಟ್ಟದ್ದು ಒಳ್ಳೆಯದು ಜಾತಿ ಆಧಾರದ ಮೇಲೆ ನಿಲ್ಲುವುದಲ್ಲ ಎಂಬುದನ್ನು ಇವರು ಮನಗಾಣರು. ಜಾಮಾ ಮಸೀದಿಯ ಬುಖಾರಿ ಎಂಬ ಅವಿವೇಕಿ ವಂದೇ ಮಾತರಂ ಆಡಕೂಡದು ಜನಮನಗಣ ಆಡಕೂಡದು. ಅದು ನಮ್ಮ ಧರ್ಮಕ್ಕೆ ವಿರುದ್ಧ. ನಮಗೆ ಮೊದಲು ಧರ್ಮ ಆಮೇಲೆ ಮಿಕ್ಕದ್ದು ಎಂದು ಈ ಬಾರತದ ನೆಲದ ಮೇಲೆ ನಿಂತು ಕೂಗಿ ಕೂಗಿ ಹೇಳುತ್ತಾನೆ. ಆದರೆ ಅದನ್ನು ಖಂಡಿಸುವ ಗಂಡೆದೆಯವರಿಗೆ. ಇಂಥಹ ಅವಿವೇಕಿ ಜಿ.ಕೆ ಥರದವರು ಕೋಮುವಾದಿಗಳು RSS, BJP ಇರಬೇಕೆಂದು ಹಣೆ ಪಟ್ಟಿ ಕಟ್ಟುತ್ತಾರೆ. ಈ ವ್ಯಕ್ತಿ ” ಅಣ್ಣಾ ಹಜಾರೆ ಯವರನ್ನು ನಿರಂಕುಶ ಪ್ರಭುತ್ವದ , ನಿಷ್ಠ ಭ್ರಷ್ಟತನ ತುಂಬಿರುವ ಮನುಷ್ಯ ” ಎಂದು ನಿರ್ಲಜ್ಜ ತನದಿಂದ ಹೇಳುತಾರೆ. ಇಂಥವರನ್ನು ಸಹಿಸಿಕೊಂಡು ಸಭೆ ಸಮಾರಂಭಗಳಿಗೆ ಕರೆಯುವ ಅತೀ ಬುದ್ಧಿವಂಥರು ಒಂದು ಕಡೆ. ಈ ಮನುಷ್ಯ ಭ್ರಷ್ಟಾಚಾರದ ವಿರುದ್ಧ, ಬಡತನದ ವಿರುದ್ದ, ತುಳಿತಕ್ಕೊಳಗಾದ ಜನರ ವಿರುದ್ಧ ದನಿ ಎತ್ತಿ ಎಲ್ಲಿ ಎಷ್ಟು ಕಾಲ ಹೋರಾಡಿದ್ದಾರೆ. ಇವರು ಹೊರಗಡೆ ಬರೋದೆ ಈ ರೀತಿಯ ವಿಷಯಗಳು ಬಂದಾಗ. ಆಮೇಲೆ ಇವರನ್ನು ಭಾಷಣ ಮಾಡಿ ಬನ್ನಿ ಎಂದು ಕರೆಯುವುದು ಒಂದೂ ವಿಚಾರಕ್ಕಾದರೆ, ಈ ಮಾತಿನ ತೆವಲುಗಾರ ಅಲ್ಲಿ ಮಾತನಾಡುವುದೆಲ್ಲ ಕೋಮು ವಿಷಯದ ಬಗ್ಗೆಯೇ.. ಇಂಥವರನ್ನು ನಾವುಗಳು ಇನ್ನು ಸಹಿಸಿಕೊಂಡಿದ್ದೇವಲ್ಲ. ಜೈ ಭಾರತ ಮಾತೆ.

  ಉತ್ತರ
 4. ವಿಜಯ ಪೈ
  ಸೆಪ್ಟೆಂ 9 2011

  ನಮ್ಮ ಜಿ.ಕೆ.ಗೋವಿಂದರಾಯರು ಆಗಾಗ ನಿದ್ದೆಯಿಂದ ಏಳುತ್ತಾರೆ ಮತ್ತು ಎಚ್ಚರವಿರುವ ಕಾಲದಲ್ಲಿ ನಡೆದ ‘ಅನಾಗರಿಕ, ಅಮಾನವೀಯ, ಅಸಾಂಸ್ಕೃತಿಕ, ಪ್ರಜಾಪ್ರಭುತ್ವ ವಿರೋಧಿ’ ಘಟನೆಗಳಿಗೆ ಚಾಚೂತಪ್ಪದೆ ಸ್ಪಂದಿಸಿ, ಅವನ್ನು ತಮ್ಮ ಅಸಾಧಾರಣ ಬುದ್ಧಿಯಿಂದ ಪರಿಶೀಲಿಸಿ, ಚಿಕಿತ್ಸಕ ಒಳನೋಟಗಳನ್ನು ಅಸಡ್ಢಾಳ ಭಾರತೀಯರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ದಯಪಾಲಿಸುತ್ತಾರೆ. ಬಹುಕಾಲದಿಂದ ಈ ಕಾರ್ಯವನ್ನು ಅವರು ಅಂತಃಸಾಕ್ಷಿ ಯಿಂದ, ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡಿಕೊಂಡು ಬಂದಿರುತ್ತಾರೆ..ಇನ್ನು ಮುಂದೆಯೂ ಮುಂದುವರಿಸುತ್ತಾರೆ.

  ಮುಂಬೈ ಸ್ಪೋಟ, ಹುಣಸೂರು ಘಟನೆ, ಮೌಲ್ವಿ ಹೇಳಿದ್ದು ಇವೆಲ್ಲ ಅವರ ನಿದ್ರಾವಧಿಯಲ್ಲಿ ನಡೆದ ಘಟನೆಗಳು.
  ಅವರ ನಿದ್ರಾ ದಿನಗಳಲ್ಲಿ ನಡೆದ ಘಟನೆಗಳಿಗೆ ಅವರನ್ನು ಜವಾಬ್ದಾರಿ ಮಾಡುವುದು ನಮ್ಮ ನಿರ್ಲಜ್ಜತೆಯ ಪ್ರದರ್ಶನವಾದಿತು!

  ಉತ್ತರ
 5. Rudramuni
  ಸೆಪ್ಟೆಂ 9 2011

  ಸರಿಯಾಗಿ ಇನ್ನೂ ಉಗಿರಿ ಅವಿವೇಕಿ ಬುದ್ದಿಜಿವಿಗಳಿಗೆ

  ಉತ್ತರ
 6. Dr.Srikantappa.N
  ಸೆಪ್ಟೆಂ 12 2011

  ಈ ಬುದ್ದಿ ಜೀವಿಗಳಿಗೆ ಎಷ್ಟು ಉಗಿದರೂ ಸಾಲದು, ದಪ್ಪ ಚರ್ಮದವರು. ಈ ರೀತಿ ಹೇಳಿಕೆ ಕೊಡುವುದೇ ಇವರಿಗೆ ಒಂದು ಫ್ಯಾಷನ್, ಇದರ ಅರ್ಥ ಇವರೂ ಭ್ರ್ಷಷ್ಟರಲ್ಲಿ ಶಾಮೀಲು.

  ಉತ್ತರ
 7. ಸೆಪ್ಟೆಂ 14 2011

  Alla GK ge yaru ee statement kottaga chappalili hodeelilvalla ade dodda vishaya

  ಉತ್ತರ
 8. SUDEESH
  ಸೆಪ್ಟೆಂ 19 2011

  ಈ ಗೊವಿ0ದ ಯಲ್ಲರಿಗಿ0ತ ಅಪಾಯಕರಿ ಜನ ವಿಚಾರವಾದಿಗಳನನ್‌ ನ0ಬುವುದನ್ನಾ ಬಿಟ್ಟಾಗಿದೆ

  ಉತ್ತರ
 9. veeresh s
  ಜೂನ್ 7 2016

  ಈ ಲೇಖನ ಮತ್ತು
  ನಿಲುಮೆ ತುಂಬಾ ಇಷ್ಟವಾಯಿತು

  ಉತ್ತರ

ನಿಮ್ಮದೊಂದು ಉತ್ತರ maithri ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments