ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 29, 2011

ಸಂಸ್ಕೃತಿ ಸಂಕಥನ – ೭

‍ನಿಲುಮೆ ಮೂಲಕ

– ರಮಾನಂದ ಐನಕೈ
ಕ್ರಿಯಾ ಜ್ಞಾನವೇ ಬದುಕಿನ ಶಿಕ್ಷಣ

ನಮ್ಮೂರಿನಲ್ಲೊಬ್ಬ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕರಿದ್ದಾರೆ. ಎಂ.ಎಸ್.ಸಿ.ಯಲ್ಲಿ ಬಂಗಾ ರದ ಪದಕ ಪಡೆದವರು. ನಿವೃತ್ತಿಯ ನಂತರ ಊರಿಗೆ ಬಂದು ಕೃಷಿಕರಾಗಿದ್ದಾರೆ. ಅವರಿಗೆ ಗೊತ್ತಿ ಲ್ಲದ ವಿಷಯವಿಲ್ಲ. ಯಾವ ಕ್ಷೇತ್ರದ ಬಗ್ಗಾದರೂ ಘಂಟೆಗಟ್ಟಲೇ ಮಾತನಾಡುತ್ತಾರೆ. ತಮಗೆ ಸಿಕ್ಕಾ ಪಟ್ಟೆ ಜ್ಞಾನವಿದೆಯೆಂಬ ಅಹಂಕಾರವೂ ಇದೆ. ಆದರೆ ಒಂದು ತೊಂದರೆ ಅಂದರೆ ಅವರು ಅಂದು ಕೊಂಡಂತೆ ಒಂದೂ ಆಗುವುದಿಲ್ಲ. ಅವರ ಮಾತಿ ನಲ್ಲಿ ತೋರುವ ಚಾಕಚಕ್ಯತೆ ಕೃತಿಯಲ್ಲಿ ಕಾಣುವು ದಿಲ್ಲ. ಉದಾಹರಣೆಗೆ ಅವರು ಶಕ್ತಿಯ ಮೂಲದ ಬಗ್ಗೆ ಅಮೂಲಾಗ್ರ ತಿಳುವಳಿಕೆ ಹೊಂದಿದ್ದಾರೆ. ವಿದ್ಯುತ್ ಅನ್ವೇಷಣೆಯ ಕುರಿತು ಸವಿವರವಾದ ಮಾಹಿತಿ ನೀಡುತ್ತಾರೆ. ವಿದ್ಯುತ್ ಕಂಡು ಹಿಡಿದ ವರು, ವಿದ್ಯುತ್ ಹೇಗೆ ಉತ್ಪಾದಿಸಲ್ಪಡುತ್ತದೆ; ತಂತಿ ಹೇಗೆ ವಿದ್ಯುತ್ ವಾಹಕವಾಗುತ್ತದೆ; ಬಲ್ಪಿನ ಒಳ ಗಡೆಯಿಂದ ಹೇಗೆ ಪ್ರಕಾಶ ನೀಡುತ್ತದೆ ಇತ್ಯಾದಿ. ಅವರ ನೆಚ್ಚಿನ ಆಳು ಶಂಕರ. ಆತ ಅಕ್ಷರ ಜ್ಞಾನಿಯಲ್ಲ. ಅವನಿಗೆ ಈ ಪ್ರಪಂಚದ ಬಗ್ಗೆ ಕಡಿಮೆ ತಿಳುವಳಿಕೆ ಇದೆ. ಮೇಸ್ಟ್ರು ಹೇಳಿದಷ್ಟು ಮಾಡುವುದು ಅವನ ಕಾಯಕ. ವಿದ್ಯುತ್ತಿನ ಬಗ್ಗೆ ಇಷ್ಟೆಲ್ಲ ಮಾಹಿತಿ ನೀಡುವ ಪ್ರಾಧ್ಯಾಪಕರಿಗೆ ಮನೆಯಲ್ಲಿ ಫ್ಯೂಸ್ ಹೋದರೆ, ಹೋಲ್ಡರಿನಲ್ಲಿ ವಯರ್ ಬಿಟ್ಟರೆ ಹಾಕಲು ಬರುವುದಿಲ್ಲ. ಆ ಕೆಲಸ ಮಾಡುವವನು ಶಂಕರ. ವಿದ್ಯುತ್ತಿಗೆ ಸಂಬಂಧಿಸಿದ ಅಷ್ಟೂ ರಿಪೇರಿ ಕೆಲಸವನ್ನು ಶಂಕರ ಮಾಡುತ್ತಾನೆ. ಆತನನ್ನು ಕೇಳಿ ದರೆ ತನಗೆ ಇದರ ಬಗ್ಗೆ ತಿಳುವಳಿಕೆಯೇನಿಲ್ಲ. ಹೀಗೆ ಮಾಡಿ ಮಾಡಿ ಕಲಿತೆ ಅನ್ನುತ್ತಾನೆ. ಜೀವನದ ಚಿಕ್ಕ ಕೆಲಸಕ್ಕೆ ನೆರವಿಗೆ ಬಾರದ ಪ್ರಾಧ್ಯಾಪಕರ ಪಾಂಡಿತ್ಯವನ್ನು ಏನನ್ನೋಣ? ಪ್ರಾಧ್ಯಾಪಕರದ್ದು ಲೋಕಜ್ಞಾನ, ಶಂಕರನದ್ದು ಕ್ರಿಯಾಜ್ಞಾನ ಅನ್ನೋಣವೇ? ಉತ್ತರ ಗೊತ್ತಿಲ್ಲ. ಹುಡುಕಲು ಪ್ರಯತ್ನಿಸೋಣ.
ಭಾರತಕ್ಕೂ ಹಾಗೂ ಐರೋಪ್ಯ ರಾಷ್ಟ್ರಗಳಿಗೂ ಇದ್ದ ಮುಖ್ಯ ವ್ಯತ್ಯಾಸ ಅಂದರೆ ಇದೇ. ಐರೋಪ್ಯ ರಾಷ್ಟ್ರಗಳು ನಿರ್ದೆಶಿಸಲ್ಪಡುವುದು ರಿಲಿಜನ್ಗಳ ಮೂಲಕ. ರಿಲಿಜನ್ ಇರಬೇಕಾದರೆ ಲೋಕಜ್ಞಾನ ಇರಲೇಬೇಕು. ಆದರೆ ಭಾರತ ಸಂಪ್ರದಾಯಗಳ ಮೂಲಕ ಕಟ್ಟಲ್ಪಟ್ಟಿದ್ದು. ಸಂಪ್ರದಾಯಗಳ ಆಚರಣೆ ಅಂದರೆ ಒಂದು ರೀತಿಯ ಕ್ರಿಯಾಜ್ಞಾನ. ನಮ್ಮ ಒಂದೊಂದು ಸಂಪ್ರದಾಯಗಳೂ ಒಂದಿ ಲ್ಲೊಂದು ರೀತಿಯ ಕ್ರಿಯಾಜ್ಞಾನವನ್ನು ಒದಗಿಸಿ ಕೊಡುತ್ತದೆ. ಹಾಗಾಗಿ ಭಾರತದಲ್ಲಿ ವೈವಿಧ್ಯತೆ ಇದೆ. ಇಲ್ಲಿ ಬದುಕುವವರು ಜೀವನ ಏಕತಾನತೆ ಎಂದು ಭಾವಿಸುವುದಿಲ್ಲ.

ಲೋಕಜ್ಞಾನ ಎಂಬುದು ರಿಲಿಜನ್ನ ಪರಿಭಾಷೆ. ರಿಲಿಜನ್ ಒಂದು ವಿಶಿಷ್ಟವಾದ ಕಲಿಕಾ ವಿಧಾನವನ್ನು ನೀಡುತ್ತದೆ. ಕ್ರಿಯೆಯ ಕುರಿತು ತಿಳಿದುಕೊಳ್ಳುವುದು, ಕ್ರಿಯೆಯ ಕುರಿತು ಸಿದ್ಧಾಂತ ಗಳನ್ನು ಬೆಳೆಸುವುದು, ನಮ್ಮ ಲೋಕಕಲ್ಪನೆಯೊಳಗೆ ಕ್ರಿಯೆ ಗಳನ್ನು ಅರ್ಥಪೂರ್ಣವಾಗಿ ಜೋಡಿಸುವುದು ರಿಲಿಜನ್ ನಿಂದ ಹುಟ್ಟುವ ಕಲಿಕಾ ವಿಧಾನ. ಪಾಶ್ಚಾತ್ಯರು ಇಡೀ ಪ್ರಪಂಚವೇ ಸತ್ಯದೇವ (God)ನ ಉದ್ದೇಶ ಎಂದು ನಂಬಿದವರು. ಹಾಗಾಗಿ ಇಲ್ಲಿನ ಪ್ರತಿಯೊಂದು ಕ್ರಿಯೆ ಯಲ್ಲೂ ಸತ್ಯದೇವನ ಉದ್ದೇಶವಿದೆ. ಅದನ್ನು ತಿಳಿದುಕೊಳ್ಳದೇ ಕ್ರಿಯೆ ಗಳನ್ನು ಮಾಡುವ ಹಾಗಿಲ್ಲ. ಕ್ರಿಯೆಗಳನ್ನು ಸರಿಯಾಗಿ ನಡೆಸಲಿಕ್ಕೆ ಅದರ ಕುರಿತ ಜ್ಞಾನ ಅತ್ಯವಶ್ಯ. ಪ್ರತಿಯೊಂದು ಕ್ರಿಯೆಗೂ ಒಂದು ಉದ್ದೇಶ ಒಂದು ಅರ್ಥ ಇರಬೇಕು. ಆದ್ದರಿಂದ ಕ್ರಿಯೆಗಳ ಹಿಂದೆ ಸರಿಯಾದ ಉದ್ದೇಶ ಗಳನ್ನು ರೂಪಿಸಿಕೊಳ್ಳಲಿಕ್ಕೆ ಲೋಕಜ್ಞಾನ ಅತ್ಯವಶ್ಯಕ ವಾಗಿದೆ. ಪಾಶ್ಚಾತ್ಯ ಸಂಸ್ಕೃತಿ ಇದನ್ನು ನಂಬಿದೆ. ಇಂಥ ಸಂಸ್ಕೃತಿಗಳು ಮತ್ತೊಂದು ಸಂಸ್ಕೃ ತಿಯ ಕ್ರಿಯೆಗಳನ್ನು ಹೀಗೇ ನೋಡು ತ್ತದೆ. ಅಂದರೆ ಇನ್ನೊಂದು ಸಂಸ್ಕೃ ತಿಯ ಕ್ರಿಯೆಯ ಕುರಿತು ಸೈದ್ಧಾಂತಿಕ ಜ್ಞಾನವನ್ನು ಸೃಷ್ಟಿ ಮಾಡಿಕೊಂಡು ಅರ್ಥ ಮಾಡಿ ಕೊಳ್ಳಲು ಪ್ರಯತ್ನಿ ಸುತ್ತದೆ. ಪಾಶ್ಚಾ ತ್ಯರು ಭಾರತೀಯ ಸಂಪ್ರದಾಯಗಳನ್ನು ಅರ್ಥ ಮಾಡಿ ಕೊಳ್ಳಲು ಪ್ರಯತ್ನಿ ಸಿದ್ದು ಹೀಗೆ. ಅವರು ಕಲೆ ಸಾಹಿತ್ಯವನ್ನು ಅನು ಭವಕ್ಕೆ ತಂದುಕೊಳ್ಳುವುದು ಇದೇ ರೀತಿ. ಅವರ ಪ್ರಕಾರ ಕಲೆಯನ್ನು ಆಸ್ವಾದಿಸು ವುದು ಅಂದರೆ ಕಲೆಯಲ್ಲಿ ರುವ ಉದ್ದೇಶ, ಚಿಂತನೆ, ಸಂದೇಶ ಹಾಗೂ ಅದರ ಮಹತ್ವವನ್ನು ಅನುಭವಿಸು ವುದು. ಅವರ ಈ ಲೋಕ ಜ್ಞಾನದ ಕಾರಣದಿಂದಲೇ ಅವರಿಗೆ ಭಾರತೀಯ ಸಂಸ್ಕೃತಿ ಅರ್ಥಹೀನ ಅನಿ ಸಿದ್ದು. ಏಕೆಂದರೆ ಭಾರತೀಯ ಸಂಸ್ಕೃತಿ ಕಟ್ಟಲ್ಪಟ್ಟಿದ್ದು ಕ್ರಿಯಾಜ್ಞಾನದಲ್ಲಿ. ಕ್ರಿಯಾಜ್ಞಾನ ಅಂದರೇನು?

ಕ್ರಿಯಾಜ್ಞಾನ ಅಂದರೆ ಒಂದು ಕೆಲಸವನ್ನು ಮಾಡಬಲ್ಲ ಪರಿಣಿತಿ ಅಥವಾ ಜ್ಞಾನ. ಒಂದು ಕ್ರಿಯೆ ಯನ್ನು ನೋಡಿ ಅನುಕರಿಸಿ ಕಲಿಯುವುದು. ಇಲ್ಲಿ ಮಾಡುವ ಕೆಲಸದ ಉದ್ದೇಶದ ಹಂಗಿಲ್ಲ. ಕ್ರಿಯೆ ಗಳನ್ನು ಏಕೆ ಮಾಡಬೇಕೆಂಬುದರ ಬಗ್ಗೆ ಸಿದ್ಧಾಂತ ಗಳನ್ನು ಕಟ್ಟಿರುವುದಿಲ್ಲ. ಅದರ ಬದಲಾಗಿ ಕ್ರಿಯಾ ಪರಿಣಾಮಗಳ ಕುರಿ ತಾಗಿ ಬೇರೆ ಬೇರೆ ರೀತಿಯ ಸ್ವಾರಸ್ಯಕರ ಕಥೆಗಳನ್ನು ಬೆಳೆಸಲಾ ಗುತ್ತದೆ. ಈ ಹಿಂದೆ ಪ್ರಕಟವಾದ ‘ಸಂಪ್ರ ದಾಯಗಳ ಸುತ್ತ’ ಲೇಖನ ಓದಿದವರಿಗೆ ಇದು ಇನ್ನೂ ಸ್ಪಷ್ಟವಾಗು ತ್ತದೆ. ಸಂಪ್ರದಾಯಗಳ ಕುರಿತು ನಿದರ್ಿಷ್ಟ ಉದ್ದೇಶ, ಸಿದ್ಧಾಂತ, ಅರ್ಥ ಇರುವುದಿಲ್ಲ. ಆದರೂ ಕೂಡ ಒಂದು ಸಂಪ್ರದಾಯ ಆಚರಣೆ ಯಲ್ಲೇ ಅರ್ಥ ಪಡೆ ಯುತ್ತದೆ. ಹಾಗೂ ಈ ಅರ್ಥ ಸಮೂಹದಿಂದ  ಸಮೂಹಕ್ಕೆ ಭಿನ್ನವಾಗಿರಲು ಸಾಧ್ಯ. ಒಟ್ಟಿನಲ್ಲಿ ಅದರಿಂದಾಗುವ ಅನುಭವ ಮಾತ್ರ ನಮಗೆ ಮುಖ್ಯ ವಾಗುತ್ತದೆ.
ಪಾಶ್ಚಾತ್ಯರು ಜಿಜ್ಞಾಸೆಯಿಲ್ಲದ ಕ್ರಿಯೆಗಳು ಅರ್ಥಹಿನ ಹಾಗೂ ಮೌಢ್ಯ ಎಂಬುದಾಗಿ ಪರಿಗಣಿಸಿ ದರು. ಸಿದ್ಧಾಂತಗಳನ್ನು ಬೆಳೆಸುವುದೇ ಜ್ಞಾನ ಎಂಬುದು ಅವರ ನಂಬಿಕೆ. ಅವರ ನಂಬಿಕೆಯಲ್ಲೇ ತೊಂದರೆ ಇದೆ. ಏಕೆಂದರೆ ಕ್ರಿಯೆಯನ್ನು ನಡೆಸು ವುದೇ ಒಂದು ಪ್ರಕಾರದ ಜ್ಞಾನ ಎಂಬುದನ್ನು ಗುರುತಿಸುವಲ್ಲಿ ಅವರು ವಿಫಲರಾಗಿದ್ದಾರೆ. ಪಾಶ್ಚಾತ್ಯರಿಗೆ ಭಾರತೀಯ ಆಚರಣೆಗಳು ಮೌಢ್ಯ ಹಾಗೂ ಅರ್ಥಹೀನ ಅನಿಸಿದ್ದು ಈ ಕಾರಣಕ್ಕಾಗಿ. ಭಾರತೀಯರಿಗೆ ತಾವು ಮಾಡುವ ಆಚರಣೆಗಳ ಕುರಿತು ಕಾರ್ಯ ಕಾರಣ ಸಂಬಂಧಗಳೇ ಗೊತ್ತಿಲ್ಲ. ಹಾಗಾಗಿ ಇದೊಂದು ಹಿಂದುಳಿದ ಅನಾಗರಿಕ ಸಂಸ್ಕೃತಿ ಎಂಬುದಾಗಿ ಕರೆದರು. ಅಷ್ಟೇಅಲ್ಲ, ಇವರ ಪ್ರತಿಯೊಂದು ಕ್ರಿಯೆಗಳಿಗೆ ಸಿದ್ಧಾಂತದ ನೆಲೆಯೊದ ಗಿಸುವುದೇ ಸುಧಾರಣೆ ಎಂಬುದಾಗಿ ಭಾವಿಸಿದರು. ಇದರಿಂದ ಪ್ರಭಾವಿತರಾದ ಭಾರತದಲ್ಲಿನ ಪ್ರಗತಿ ಪರರೂ ಕೂಡ ಇದೇ ತರ್ಕವನ್ನು ಅನುಸರಿಸಿ ವೈಚಾರಿಕತೆಯೇ ಶ್ರೇಷ್ಠ ಮೌಲ್ಯ ಎಂದು ಪ್ರತಿಪಾದಿ ಸುತ್ತ ಬಂದರು. ಈ ನಂಬಿಕೆ ನಮ್ಮ ಸೆಕ್ಯುಲರ್ ಚಿಂತನೆಯಲ್ಲಿ ಗಾಢವಾಗಿ ನೆಲೆಯೂರಿದೆ. ಅದನ್ನು ಬಾಲಗಂಗಾಧರರು ಸಮರ್ಥವಾಗಿ ತೋರಿಸುತ್ತಾರೆ.
ಕ್ರಿಯಾಜ್ಞಾನದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶ ಇರುತ್ತದೆ. ಕಲಿತವ-ಕಲಿಯದವ, ಬಡವ -ಶ್ರೀಮಂತ ಎಂಬ ಭೇದಭಾವ ಇಲ್ಲ. ಹಾಗಾಗಿ ಕ್ರಿಯಾಜ್ಞಾನದಲ್ಲಿದ್ದಷ್ಟು ನೆಮ್ಮದಿ ಲೋಕಜ್ಞಾನದಲ್ಲಿ ಇಲ್ಲ. ಕ್ರಿಯಾಜ್ಞಾನವು ಒಂದು ಸಮುದಾಯವನ್ನು ಕಟ್ಟುತ್ತದೆ ಹಾಗೂ ಅವು ಉಳಿದುಕೊಂಡು ಬರು ವಂತೆ ಮಾಡುತ್ತದೆ. ಪೌರಾತ್ಯ ಸಮಾಜಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ ಈ ಕ್ರಿಯಾ ಜ್ಞಾನದ ಮಹತ್ವವನ್ನು ಅರಿಯಲಿಕ್ಕೆ ಸಾಧ್ಯವಾಗುತ್ತದೆ.
ರಿಲಿಜನ್ ಪ್ರಕಾರ ಈ ಲೋಕದಲ್ಲಿ ಏನೇ ಮಾಡುವುದಾದರೂ ಅದರ ಕುರಿತು ಜ್ಞಾನ ಅಗತ್ಯ. ಈ ಲೋಕದಲ್ಲಿನ ಕ್ರಿಯೆಗಳನ್ನು ಜರುಗಿಸಲು ಸತ್ಯ ದೇವ (ಗಾಡ್)ನ ಉದ್ದೇಶವೇನೆಂದು ತಿಳಿಯುವ ಅಗತ್ಯ ಇದೆ. ಆದ್ದರಿಂದ ಈ ಲೋಕದಲ್ಲಿ ಏನಿದೆ ಯೆಂಬ ತಿಳುವಳಿಕೆಯು ಈ ಲೋಕದಲ್ಲಿ ವ್ಯವಹರಿ ಸಲಿಕ್ಕೆ ಒಂದು ಪೂರ್ವಭಾವಿ ಅವಶ್ಯಕತೆಯಾಗಿದೆ. ಈ ಲೋಕದ ಕುರಿತಾದ ಜ್ಞಾನವು ಸರಿಯಾಗಿದ್ದರೆ ಕ್ರಿಯೆಗಳೂ ಸರಿಯಾಗಿರುತ್ತವೆ. ಅಂದರೆ ಜ್ಞಾನದ ಮಾರ್ಗದರ್ಶನ ಇರುವವರೆಗೆ ಈ ಲೋಕದಲ್ಲಿನ ಎಲ್ಲ ಚಟುವಟಿಕೆಗಳೂ ಸರಿಯಾಗೇ ಇರುತ್ತದೆ. ಅವರ ಪ್ರಕಾರ ಒಂದು ಒಳ್ಳೆಯ ಸಮಾಜ ಕಟ್ಟುವ ಪೂರ್ವದಲ್ಲಿ ಒಳ್ಳೆಯ ಸಮಾಜ ಎಂದರೇನೆಂಬು ದನ್ನು ತಿಳಿದಿರಬೇಕು.
ಇಷ್ಟೆಲ್ಲ ರಗಳೆ ನಮ್ಮ ಸಂಸ್ಕೃತಿಯಲ್ಲಿಲ್ಲ. ನಮ್ಮಲ್ಲಿ ಮಾಡುವ ಕ್ರಿಯೆಯ ಕುರಿತು ಒಳ್ಳೆಯ ಸಂಕಲ್ಪ ಇದ್ದ ರಾಯಿತು. ಅದರ ಬಗ್ಗೆ ಜ್ಞಾನ ಇರಲೇಬೇಕೆಂದೇನೂ ಇಲ್ಲ. ಕ್ರಿಯೆಯನ್ನು ಮಾಡುವ ಜ್ಞಾನ ಇದ್ದರೆ ಸಾಕು. ಅದರ ಉದ್ದೇಶ, ಅರ್ಥ ನಮಗೆ ಬೇಡ. ಈ ಕ್ರಿಯಾಜ್ಞಾನ ಪರಂಪರೆಯಿಂದ, ಅನುಕರಣೆಯಿಂದ ಬರುತ್ತದೆ. ಆದ್ದರಿಂದ ಕ್ರಿಯಾಜ್ಞಾನದಲ್ಲಿ ಮನುಷ್ಯ ಸಂಬಂಧಗಳು ಅತ್ಯವಶ್ಯವಾಗಿರುತ್ತದೆ.
ಸತ್ಯದೇವನು ತನ್ನ ಸಂಕಲ್ಪದ ಕುರಿತಾಗಿ ನೀಡಿರುವ ಸಂದೇಶ ಮೌಖಿಕವಾಗಿರುವುದರಿಂದ  ಅದು ಕೇವಲ ಜ್ಞಾನದ ಮೂಲ ಮಾತ್ರವಲ್ಲ, ಜ್ಞಾನದ ರೂಪವೇ ಆಗಿದೆ ಎಂಬುದು ಪಾಶ್ಚಾತ್ಯರ ನಂಬಿಕೆ. ಆದ್ದರಿಂದ ಎಲ್ಲ ಜ್ಞಾನವನ್ನು ಮಾತಿನ ಮೂಲಕ ಅಥವಾ ಭಾಷೆಯ ಮೂಲಕ ತಿಳಿಸ ಬಹುದು ಎಂಬ ಸರಳ ತೀಮರ್ಾನಕ್ಕೆ ಬರುತ್ತಾರೆ. ಮೌಖಿಕ ಸಂದೇಶ ನಮಗೆ ಪಠ್ಯವಾಗಿ ದೊರಕು ತ್ತದೆ. ಆ ಮೂಲಕ ಜ್ಞಾನ ಮುಂದುವರಿಯುತ್ತಾ ಬರುತ್ತದೆ. ಆದರೆ ಭಾರತೀಯ ಸಂಪ್ರದಾಯಗಳ ಕುರಿತು ಈ ರೀತಿಯ ಜ್ಞಾನದ ಪಠ್ಯವೇ ಇಲ್ಲ.  ಆದರೂ ಸಾವಿರಾರು ವರ್ಷ ಇದು ಹೇಗೆ ನಡೆದುಬಂತು?
ಭಾರತೀಯ ಸಂಸ್ಕೃತಿ ಜ್ಞಾನ ಬೇರೆ, ಅನುಭವ ಬೇರೆ ಎಂದು ನಂಬಿದೆ. ಬೆಂಕಿಯ ಕುರಿತಾದ ಜ್ಞಾನ ಬೇರೆ, ಅದರ ಅನುಭವವೇ ಬೇರೆ. ಬೆಂಕಿಯ ಅನುಭವವನ್ನು ಹೇಗೆ ಲೋಕಜ್ಞಾನದಲ್ಲಿ ವರ್ಣಿಸುತ್ತೀರಿ? ಅದಕ್ಕೆ ಕ್ರಿಯಾಜ್ಞಾನವೇ ಬೇಕು. ಇಂಥ ಅನುಭವದ ಜ್ಞಾನಗಳು ನಮ್ಮಲ್ಲಿ ಹೇರಳವಾಗಿದೆ. ಲೋಕಜ್ಞಾನ ಗುರಿಯನ್ನು ಮುಖ್ಯವಾಗಿಟ್ಟುಕೊಳ್ಳತ್ತದೆ. ಆದರೆ ಕ್ರಿಯಾಜ್ಞಾನ ಮಾರ್ಗದ ಬಗ್ಗೆ ಲಕ್ಷ್ಯದಲ್ಲಿರುತ್ತದೆ. ಕ್ರಿಯಾಜ್ಞಾನದಲ್ಲಿ ಮಾರ್ಗವೇ ಗುರಿಯನ್ನು ನಿರ್ಧರಿಸುತ್ತದೆಯೇ ವಿನಾ ಜ್ಞಾನ ಅಲ್ಲ. ಆದ್ದರಿಂದ ನಮ್ಮಲ್ಲಿನ ಸಮಾಜಗಳ ಸೃಷ್ಟಿಗೆ ಹಾಗೂ ಪುನರುತ್ಪಾದನೆಗೆ ಕ್ರಿಯಾಜ್ಞಾನವೇ ಕಾರಣವಾಗಿದೆ.

ಈ ದೃಷ್ಟಿಯಿಂದ ರಿಲಿಜನ್ನು ಸಮುದಾಯಗಳನ್ನು ವಿಭಾಗಿಸುತ್ತದೆ. ಅದು ಅವುಗಳನ್ನು ಕೂಡಿಸುವುದಿಲ್ಲ. ನಮ್ಮ ವಿಧಿ ಆಚರಣೆಗಳು ಸಂಸ್ಕೃತಿಗಳನ್ನು ದಾಟಬಲ್ಲವಾದ್ದರಿಂದ ಸಮಾಜವನ್ನು ಕೂಡಿಸುತ್ತವೆಯೆಂಬ ಅಭಿಪ್ರಾಯವಿದೆ. (ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿ ಪುಟ 488).

ಕ್ರಿಯಾಜ್ಞಾನದಲ್ಲಿ ಪ್ರಾಯೋಗಿಕ ಕಲಿಕೆಯು ಪ್ರಬಲವಾಗಿರುತ್ತದೆ. ಕ್ರಿಯಾಜ್ಞಾನದ ಕಲಿಕೆಯ ಸಂಯೋಜನೆಯು ಸ್ಥಿರವಾದದ್ದು. ಆಚರಣಾತ್ಮಕ ಅಥವಾ ಕ್ರಿಯಾತ್ಮಕ ಜ್ಞಾನ ಅಂದರೆ ಈ ಜಗತ್ತಿನಲ್ಲಿ ಕ್ರಿಯೆಗಳನ್ನು ಪುನರಾವರ್ತನೆ ಮಾಡುವ ಸಾಮರ್ಥ್ಯವಾಗಿದೆ. ಅಂತಹ ಒಂದು ಸಂಸ್ಕೃತಿಯಲ್ಲ್ಲಿ ಹುಟ್ಟಿದ ಸಾಮಾಜಿಕ ಪರಿಸರವು ಪುನರಾವರ್ತಕವಾಗಿದ್ದು, ಪುನರಾವರ್ತಕವಾದ ವ್ಯವಸ್ಥೆಗಳ ಗುಣಗಳನ್ನು ಪ್ರದರ್ಷಿಸುತ್ತದೆ. ಈ ಸಂಸ್ಕೃತಿ ಬೆಳೆದದ್ದು, ರೂಪಗೊಂಡದ್ದು ಹಾಗೂ ಬೆಳೆಯುತ್ತಿರುವುದು ಹೀಗೆ.

ಪಾಶ್ಚಾತ್ಯ ವಸಾಹತು ಪ್ರಭಾವದಿಂದ ಇಂತಹ ಚಿಕ್ಕ ಚಿಕ್ಕ ಸಂಗತಿಗಳೂ ಕೂಡ ನಮಗೆ  ಗೊಂದಲವುಂಟು ಮಾಡುತ್ತಿವೆ. ಇಂದಿಗೂ ಕೂಡ ನಿಜವಾದ ಜ್ಞಾನದ ಕುರಿತು ನಾವು ಅಜ್ಞಾನದಿಂದಿದ್ದೇವೆ.
ಈಗ ನೀವೇ ನಿರ್ಧರಿಸಿ. ನಿಮಗೆ ಪ್ರಕಾಂಡ ಪಾಂಡಿತ್ಯ ಹೊಂದಿದ ಪ್ರಾಧ್ಯಾಪಕರು ಇಷ್ಟವೋ ಅಥವಾ ಗೊತ್ತಿಲದೆ ಸಮರ್ಥವಾಗಿ ಕೆಲಸ ಮಾಡುವ ಶಂಕರ ಇಷ್ಟವೋ?*

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments