ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 9, 2011

ಭಾವುಕರಾಗೋಣ ಬನ್ನಿ!

‍ನಿಲುಮೆ ಮೂಲಕ

-ಸಂತೋಷ್

ಮನುಷ್ಯನ ಜೀವನಕ್ಕೆ ಭಾವನೆಗಳು ಎಷ್ಟು ಮುಖ್ಯ? ಎಂದು ಕೇಳಿದರೆ ನಾನು ಕೋಡುವ ಉತ್ತರ ಖಂಡಿತ ಅವು ಮನುಷ್ಯನ ಜೀವನದ ಅವಿಭಾಜ್ಯ ಅಂಗವೆಂದು.ಭಾವನೆಗಳಿಲ್ಲದ ಮನುಷ್ಯ ಏನನ್ನು ಸಾದಿಸಲಾರ.ನಿಜವಾಗಲು ಭಾವನೆಗಳೇ ಮನುಷ್ಯನ ಜೀವನದ ದಾರಿದೀಪಗಳು.ಇದಕ್ಕೆಲ್ಲ ಅಪವಾದವೆಂಬಂತೆ,ನಮ್ಮಲ್ಲಿ ಹುಟ್ಟುವ ಸೂರ್ಯನನ್ನ,ಅರಳುವ ಗುಲಾಭಿಯನ್ನು,ಸುರಿಯುವ ಮಳೆಯನ್ನು,ಆಕಾಶದಲ್ಲಿ ಮೂಡುವ ಬಣ್ಣ ಬಣ್ಣದ ಚಿತ್ತಾರವನ್ನು,ರಂಗು ರಂಗಾಗಿ ಕಾಣುವ ಕಾಮನ ಬಿಲ್ಲನು ನೋಡಿ ಮುದಗೋಳದ ಕುಂಬಕರ್ಣರು ಇದ್ದಾರೆ!ಇದರ ಬಗ್ಗೆ ಅವರದೆಲ್ಲ ದಿವ್ಯ ನಿರ್ಲಕ್ಷೆ.

ಆದರೇ ಹಾಗೇ ನಿದ್ದೆ ಮಾಡುವ ಅವರು ಭಾವುಕತೆಯ ಸುಂದರ ಅನುಭವವನ್ನು ಕಳೆದುಕೋಳುತಾರೆ ಎಂಬುದೇ ನನ್ನ ಭಾವನೆ.ಕಡೇ ಪಕ್ಷ ಈ ಪ್ರಬಂದವನ್ನು ಓದಿದ ನಂತರವಾದರು ಅಂತ ಕುಂಬಕರ್ಣರು ನಿದ್ದೆಯಿಂದ ಎಚ್ಚೆತ್ತುಕೊಂಡರೆ ಸಂತೋಷ ಇಲ್ಲದಿದ್ದರೆ ನಾವು ನೀವು ಏನು ಮಾಡಕ್ಕೆ ಆಗುತ್ತೆ ಅವರನ್ನು ಅವರ ಪಾಡಿಗೆ ಬಿಡುವುದೇ ಸೂಕ್ತ.

ಭಾವುಕನಾದವನು ಸದ ಹೊಸತ್ತನ್ನೆ ಅನ್ವೇಷಣೆ ಮಾಡುತ್ತ ಇರುತ್ತಾನೆ.ಅವನು ಪ್ರಕೃತಿಯೊಂದಿಗೆ ಒಂದು ರೀತಿಯ ಸಂವಾದವನ್ನು ಸಮಾನತೆಯನ್ನು ಸಾದಿಸುತ್ತಾನೆ.ನಿಮ್ಮ ಕಣ್ಣಿಗೆ ಒಂದು ಸುಂದರ ಹೂವು ಅರಳಿ ನಿಂತಾಗ ಭಾವುಕನಾದವನ್ನು ಅದರ ಅರಳುವಿಕೆಯನ್ನು ನೆನೆದು ನೆನೆದು ಪುಳಕಗೋಳ್ಳುತದತ್ತಾನೆ.ಅದg ಬಣ್ಣಗಳನ್ನು ತನ್ನ ಕೈಯಿಂದ ಒರೆಸಿ ನೋಡುತ್ತಾನೆ. ಅದರ ಸುವಾಸನೆಗಾಗಿ ತನ್ನ,ಮೂಗನ್ನು ಅದರ ಬಳಿ ಕೊಂಡಯ್ಯತ್ತಾನೆ.ಧೀರ್ಘವಾದ ಉಸಿರನ್ನು ಏಳೆದುಕೊಂಡು ಅದರ ಸುವಾಸನೆಯನ್ನು ಆಸ್ವಾದಿಸುತ್ತಾನೆ.ಕೊನೆಗೆ ಆ ಹೂವಿನಿಂದ ಬಿಳ್ಕೋಡುವಾಗ ಆ ಹೂವಿಗೆ ಒಂದು ಹೂ ಮುತ್ತನ್ನು ನೀಡಿದರೇ ಅವನು ಭಾವುಕ ಎನಿಸಿಕೊಳ್ಳುತ್ತಾನೆ.

ನೀವು ಕೆಲವೂಮ್ಮೆ ಅವಸರ ಅವಸರಗಿ ಹೋಗುತ್ತಿರುತ್ತಿರಿ.ಆಗತ್ತಾನೆ ಭಾರಿ ಮಳೆಯೊಂದು ಬಂದು ನಿಂತುರುತ್ತದೆ.ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿದೆ.ಶುಭ್ರವಾದ(ಕೆಲವೊಮ್ಮೆ ಗಲೀಜು ಇರುತ್ತದೆ)ನೀರನ್ನು ನೋಡಿ ನಿವು ನಿಮ್ಮ ವಸ್ತ್ರವನ್ನು ಮೇಲಕ್ಕೆ ಏಳೆದುಕೊಂಡು ಆ ಗುಂಡಿಯನ್ನು ದಾಟಿ ಸಾಗಿ ಬಿಡುತ್ತಿರಿ ಏಂದಾದರೆ ನೀವು ಭಾವುಕರಲ್ಲ ಎಂದರ್ಥ.ಭಾವುಕರು ಏನು ಮಾಡುತ್ತಾರೆ ಗೊತ್ತೆ?ನೀರಿನ ಗುಂಡಿಯನ್ನು ಕಾಣುತ್ತಲೆ ತಮ್ಮ ವಸ್ತ್ರವನ್ನು ತುಸು ಮೇಲಕ್ಕೆ ಏಳೆದುಕೊಂಡು ಆ ನೀರಿನಲ್ಲಿ ಕಾಲು ಹಾಕೇ ಬಿಡುತ್ತಾರೆ.ಜೋತೆಗೆ ಯಾರಾದರು ಇದ್ದರೇ ತೀರ ಅಕಸ್ಮಾತಾಗಿ ಕಾಲು ಹಾಕಿದೇನು ಎಂದು ನಟಿಸುತ್ತ  ಆ ನೀರಿಗೆ ಕಾಲು ಹಾಕಿ ಸಂತೋ ಪಡುತ್ತಾರೆ.ಎಲ್ಲಾದರು ಜೋತೆಗೆ ಸಮಾನ ಮನಸ್ಸಿನ ಗೆಳೆಯರಿದ್ದರಂತು ಮುಗಿಯಿತು.ಅವರ ಮೇಲೆ ಆ ನೀರನ್ನು ಹಾರಿಸುತ್ತ ಅತೀವ ಸಂತೋಷ ಪಡುತ್ತಾರೆ.ಇದು ನಾಗರೀಕ ಸಮಾಜದಲ್ಲಿ ಸಲ್ಲತಕ್ಕ ವಿಷಯ ಅಲ್ಲ.ಆದರೇ ನಮ್ಮ ಭಾವುಕರಿಗೆ ನಾಗರಿಕತ್ತೆಯ ಹಂಗೇಕೆ,ಅವನು ಎಷ್ಟದರು ಭಾವುಕತ್ತಾನೆ,ಅವನು ಮನಸೋ ಇಚ್ಚೆ ಸಂತೋಷ ಪಡುತ್ತಾನೆ.ಅವನಲ್ಲಿ ಇರುವುದು ನಾಗರೀಕತೆಯ ಬೇಲಿ ಅಲ್ಲ ಭಾವುಕತೆ ಅಷ್ಟೆ.

ಇನ್ನು ನೀವು ಕೆಲವೊಮ್ಮೆ ತುಂಬ ನಿಧಾನವಾಗಿ ವಾಕ್ ಹೋಗುತ್ತೀರಿ ಅಂದುಕೋಳ್ಳಿ,ಆ ರೀತಿ ನೀವು ಹೋಗುತ್ತಿರುವಾಗ ತೋಟದ ಒಳಗಿನಿಂದ ಅಥಾವ ರಸ್ತೆಯ ಬದಿಯಿಂದ ಕೋಗಿಲೆಯ ಆ ಹಾಡನ್ನು ಕೇಳಿ ಆನಂದಿಸದಿದ್ದರೇ ಅಥಾವ ಅದಕ್ಕಿಂತ ಹೆಚ್ಚು ನೀವು ಕೋಗಿಲೆಯನ್ನು ಹುಡುಕಿಕೊಂಡು ಹೂರಟು ಬಿಡದಿದ್ದರೇ ನಿಮ್ಮಲ್ಲಿ ಭಾವುಕತ್ತೆ ತುಂಬ ಕಡಿಮೆ ಎಂದುಟ್ಟುಕೋಳ್ಳಬೇಕು.ನನಗೆ ಇಗಲು ನೆನಪಿದೆ ನಾನು ಶಾಲೆಗೆ ಹೋಗುತ್ತಿದ್ದ ಸಂದರ್ಬದಲ್ಲಿ ಒಮ್ಮೆ ಹೀಗೆ ಕೋಗಿಲೆಯೊಂದು ಕೊಗಿತ್ತು ನಾನು ಅದನ್ನು ನೋಡುವ ತವಕದಲ್ಲಿ ಕಾಡಿನೋಳಗೆ ನುಗ್ಗಿದ್ದೆ.ನನಗೆ ಕೋಗಿಲೆ ಕಾಣಲು ಸಿಕ್ಕಿತು ಅದರ ಹಾಡು ಕೇಳಲು ಸಿಕ್ಕಿತ್ತು.ಆದರೇ ಆ ಕಾಡಿನಿಂದ ಹೊರಗೆ ಬರುವಷ್ಷರಲ್ಲಿ ನನ್ನ ಸಮವಸ್ತ್ರ ಬಣ್ಣ ಬಣ್ಣದ ಚಿತ್ತಾರದಿಂದ ಅಸಮವಸ್ತ್ರವಾಗಿದ್ದು ಮಾತ್ರ ಸುಳ್ಳಲ್ಲ.ಹಾಗೆ ನನ್ನ ರಿತಿಯಲ್ಲಿ ಕೋಗಿಲೆಯ ದ್ವನಿಯನ್ನು ಹುಡುಕಿಕೊಂಡು ಹೋಗುವ ಭಾವುಕರು ಇರುವುದು ಸಳ್ಳಲ್ಲ ಎಂಬುದು ನನ್ನ ಭಾವನೆ.

ನೀವು ಹೀಗೆ ಮಕ್ಕಳೊಂದಿಗೆ ಸಮಯ ಕಳೆಯಲು ಆಟವಾಡಿಕೊಂಡಿದಿರಿ ಅಂದುಟ್ಟುಕೊಳೋಣ.ನೀವು ಆಟ ಆಡುವುದಿಲ್ಲ ಆದರೊ ಆ ರೀತಿ ಇಟ್ಟುಕೊಳ್ಳಣ,ಆಗ ಇದ್ದಕಿದ್ದಂತೆ ದೊಡ್ಡ ಸದ್ದನ್ನು ಮಾಡಿಕೊಂಡು ನಿಮ್ಮ ಮನೆಯ ಮೇಲೆ ವಿಮಾನವೊಂದು ಅಥಾವ ಹೆಲಿಕಾಪ್ಟರ್ ಒಂದು ಹೋದಾಗ ನಿಮ್ಮಂದಿಗೆ ಆಟವಾಡಿತ್ತೀದ್ದ ಮಕ್ಕಳೆಲ್ಲ ಹೋ ಎಂದು ಓಡಿ ಬಂದು ಆ ವಿಮಾನವನ್ನು ಇಣಿಕಿ ಇಣಿಕಿ ನೋಡುತ್ತಿದ್ದಗ ನೀವು ಕುತುಹಲಕದರು ಮನೆಯಿಂದ ತಲೆಯನ್ನು ಹೊರಗೆ ಹಾಕಿ ನೋಡದಿದ್ದರೆ ನೀವು ಭಾವುಕರೆಂದು ಕರೆಯಿಸಿಕೊಳ್ಳುವುದ್ದಿಲ್ಲ.ನಿeವಾದ ಭಾವುಕರು ವಿಮಾದ ಸದ್ದು ಆಗುತ್ತಲೆ ಮನೆಯಿಂದ ಹೊರಗೆ ಬಂದು ಬಿಡುತ್ತಾರೆ.ಆ ವಿಮಾನವನ್ನು ಆಗಲವಾಗಿ ಕಣ್ಣು ತೆರೆದು ಪಿಳಿ ಪಿಳಿ ನೋಡುತ್ತ ನಿಂತು ಬಿಡುತ್ತಾರೆ.ಯಾರು ತನ್ನನ್ನು ಗಮನಿಸುತ್ತಿಲ್ಲ ಎಂದಾದರೆ ಹಾರಿ ವಿಮಾನದತ್ತ ಕೈ ಬಿಸುತ್ತಾರೆ.ಇದೇನು ಸಣ್ಣ ಮಕ್ಕಳ ತರ ಅಂತ ನಿಮ್ಮಗೆ ಅನಿಸಬಹುದು.ಆದರೇ ಸಣ್ಣ ಮಕ್ಕಳಲ್ಲಿರುವ ಸ್ವಂದಿಸುವ ಗುಣ,ಸೊಕ್ಷ್ಮ ಸಂವೇದನೆಗಳು ದೊಡ್ಡವರಲ್ಲಿ ಇರುದಿಲ್ಲ.ಅದಕ್ಕಾಗಿ ಮಕ್ಕಳು ಮಗ್ದರಾಗಿ ಕಾಣಿಸಿಕೋಳ್ಳುತ್ತಾರೆ.

ನೀವು ಒಬ್ಬ ಹುಡುಗರಾಗಿದ್ದರೇ ನಿಮ್ಮ ಕಣ್ಣ ಮುಂದೆ ಒಂದು ಸುಂದರವಾದ ಹುಡುಗಿ ಹೋಗುತ್ತಿದ್ದರೆ ನೀವು ಆ ಹುಡುಗಿಯನ್ನು ನೋಡಿ ಅವಲ ಚೆಲವನ್ನು ಮನದಲ್ಲಿ ಮೆಚ್ಚುವರಾಗಿದ್ದರೆ ನಿಮ್ಮಲ್ಲಿ ಸೌಂದರ್ಯ ಪ್ರಜ್ಞೆ,ಭಾವುಕತೆ ಇದೆ ಎಂದು ತಿಳಿಯಬೇಕು.ಹಾಗೆ ನಿವು ಹುಡುಗಿಯಾಗಿದ್ದರೆ ನಿಮ್ಮ ಮುಂದೆ ಸುಂದರವಾದ ಹುಡುಗ ನಿಂತಿದ್ದಾನೆ ಎಂದಾದ್ದರೆ ನಿವು ಅವನನ್ನು ಏರಡು ನಿಮಿಷಗಳ ಕಾಲ ತದೇಕ ದೃಷ್ಟಿಯಿಂದ ನೋಡಿ ಅವನ ಚೆಲವನ್ನು ಮೆಲುಕು ಹಾಕಿಕೊಳ್ಳುತ್ತ ನಾಚಿ ನೀರಾಗುತ್ತೀರಿ ಅಂದರೇ ನಿಮ್ಮಲ್ಲಿ ಹ ಸೌಂದರ್ಯ ಪಜ್ಞೆ ಹಾಗು ಭಾವುಕತೆ ಜೀವಂತವಾಗಿದೆ ಎಂದು ಅರ್ಥ.

ಕೊನೆಯ ಮಾತು

ಕೊನೆಯ ಮಾತು ಎಂದು ನನಗೆ ಬರೆಯಲು ಇಷ್ಟವಿಲ್ಲದಿದ್ದರು ನಿಯಮಗಳನ್ನು ಮೀರಿ ಕ್ರಾಂತಿಕಾರಿ ಆಗಬಾರದಲ್ಲ ಅದ್ದಕ್ಕೆ ಕೊನೆಯ ಮಾತು ಅಂತು ಬರೆಯುತ್ತ ,ಭಾವುಕತೆ ಎಂದರೇ ನಮ್ಮಳಗೆ ಇರುವಂತಹ ಮದುರವಾದ ಭಾವನೆ.ನಮ್ಮಲ್ಲಿರುವ ಸೌಂದರ್ಯ ಪ್ರಜ್ಜೆ,ಸೊಕ್ಷ್ಮ ಸಂವೇದನೆಗಳು,ಇಹವನ್ನು ಮರೆತು ಪ್ರಕೃತಿಯೊಂದಿಗೆ ಅಥಾವ ಸಂಬಂಧ ಪಟ್ಟ ವಸ್ತುವಿನಲ್ಲಿ ತನ್ಮಯರಾಗುವುದೇ ಭಾವುಕತೆ ಎಂದು ಇದಕ್ಕೆ ವ್ಯಾಖ್ಯೆ ಹೇಳಬಹುದು.ನಮ್ಮಲ್ಲಿ ಹಲವರಿಗೆ ಈ ರೀತಿಯ ಮಾತುಗಳೇ ರುಚಿಸುವುದಿಲ್ಲ.ಅವರಿಗೆಲ್ಲ ಇಂತಹ ವಿಷಯಗಳು ತೀರ ಅಲ್ಪ.ಯಾರೋ ಕೆಲಸಕ್ಕೆ ಬಾರದವರು ಈ ರೀತಿ ಮಾಡುವರು ಏಂಬುವುದು ಅವರ ಉದತ್ತ ಆಲೋಚನೆಗಳಲ್ಲಿ ಒಂದು.ಅಂತವರು ಹೊವು ಅರಳುತಿದ್ದರೇ ಅದರಿಂದ ಮುಂದೆ ಸಾಗುವರು.ನೀರಿನ ಹೊಂಡ ಕಂಡರೇ ಹೇಸಿಗೆಗೊಂಡು ದೊರ ಸಾಗುವರು.ಕೋಗಿಲೆಯ ಹಾಡನ್ನು ಪಾಪ್ ಹಾಡುಗಳ ಅಬ್ಬರದ ನಡುವೆ ಮಚ್ಚಿಯಿಡುವರು.ವಿಮಾನ ಹಾರುವಾಗ ಕಿವಿ ಮುಚ್ಚಿ ಮುಂದೆ ನಡೆಯುವರು.ಸುಂದರವಾಗಿರುವುದನ್ನು ಕಂಡಾಗ ಅದಕ್ಕಿಂತಲು ನಾನೇ ಸುಂದರನೆಂದು ಮುಂದೇ ಸಾಗಿಬಿಡುವರು.ಇಂತವರಿಗೆ ನನ್ನ ಈ ಪ್ರಬಂದ ಅರ್ಥ ಆಗುವುದ್ದಿಲ್ಲ.ಅದಕ್ಕಾಗಿಯೇ ಅವರನ್ನು ಪ್ರಬಂದದ ಆರಂಬದಲ್ಲಿ ಕುಂಬಕರ್ಣನೆಂದು ಕರೆದಿರುವುದು.ಆದರೂ ಕೂಡ ಲೇಖಕನಾದ ನನು ನನ್ನ ಕರ್ತವ್ಯವನ್ನು ಮಾಡಲೇ ಬೆಕಲ್ಲ,ಅದಕ್ಕಗಿ ಅಂತಹ ಕುಂಬಕರ್ಣರಿಗೆ ನಿದ್ದೆಇಂದ ಎಚ್ಚತ್ತುಕೊಳ್ಳಿ,ನಿಮ್ಮಲ್ಲಿರುವ ಸುಂದರವಾದ ಬಾವನೆಗಳನ್ನು ಅದಮಿಡದೆ ಅದನ್ನು ಹರಿಯಲು ಬಿಡಿ ಎಂದು ಮಾತ್ರ ಹೇಳಲು ಸಾಧ್ಯ.

ಕಣ್ಣು ಮುಚ್ಚಿಕೋಳ್ಳದಿರಿ
ಅಂದರಾಗುತ್ತಿರಿ,
ಕಣ್ಧರೆದು ನೋಡಿ
ಪ್ರಕೃತಿಯೇ ನಿಮ್ಮದಾಗುವುದು

*******************

ಚಿತ್ರಕೃಪೆ : ನಮನ.ಬ್ಲಾಗ್ ಸ್ಪಾಟ್.ಕಾಂ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments