ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 30, 2011

16

ಮಡೆಸ್ನಾನದ ಮರ್ಮವೇನು ?

‍ನಿಲುಮೆ ಮೂಲಕ

-ಸಂತೋಷ ಕುಮಾರ್

ಕುಕ್ಕೆ ಸುಬ್ರಮಣ್ಯದಲ್ಲಿ ಜರುಗ ಬೇಕಾಗಿದ್ದ ಮಡೆಸ್ನಾದ ಆಚರಣೆಯನ್ನು ರದ್ದುಗೊಳಿಸಬೇಕೇಂದು ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ದಿಡೀರ್ ಬೆಳವಣಿಗೆ ಎಂಬಂತೆ ನಿಷೇಧದ ಆದೇಶದ ಮರುದಿನವೇ ನಿಷೇಧವನ್ನು ರದ್ದುಪಡಿಸುವ ಆದೇಶವನ್ನೂ ಸಹ ನೀಡಲಾಯಿತು. ಇದನ್ನು ರಾಜಕೀಯ ವ್ಯವಸ್ಥೆಯ ಲೋಪದೋಷ ಅಥವಾ ದೌರ್ಬಲ್ಯ ಹಾಗೂ ಆಚರಣೆಯ ಅಥವಾ ಅದನ್ನು ಆಚರಿಸುವವರ ಸಂಸ್ಕೃತಿಯ ವಿಶಿಷ್ಟತೆ ಎಂಬ ಎರಡೂ ವಿಭಿನ್ನ ಆಯಾಮಗಳಲ್ಲಿ ವಿಶ್ಲೇಷಿಸಬಹುದು. ಇಲ್ಲಿ ಎರಡನೇ ಆಯಾಮದಿಂದ ಈ ಘಟನೆಯನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗುವುದು. ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ ಆಚರಣೆಯನ್ನು ನಿಷೇಧಿಸಬೇಕೆಂಬ ಆದೇಶ ಹೊರಡಿಸುತ್ತಿದ್ದಂತೆ ವಿಶೇಷವಾಗಿ ನಮಗೆ ಆ ಆಚರಣೆಯಲ್ಲಿ ಭಾಗವಹಿಸುವ ಭಕ್ತರು ಹೇಗೆ ಪ್ರತಿಸ್ಪಂದಿಸುತ್ತಾರೆ ಎಂಬ ಕುತೂಹಲವಿತ್ತು.

ಮಡೆಸ್ನಾನದ ಮೇಲೆ ನಿಷೇಧವನ್ನು ಹೇರಲು ಭಕ್ತರುಗಳಿಗಿಂತ ಬೇರೆಯವರು ಒತ್ತಾಯ ಮಾಡಿರುವುದು ಇದನ್ನು ಭಿನ್ನವಾಗಿ ಅರ್ಥೈಸಿಕೊಳ್ಳಲು ಆಸ್ಪದ ಮಾಡಿಕೊಡುತ್ತದೆ. ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ ಆಚರಣೆಯನ್ನು ನಿಷೇಧಿಸಬೇಕೆಂಬ ಆದೇಶ ಬಂದ ಕೂಡಲೆ ದೇವಾಳಯದ ತೇರನ್ನು (ಬ್ರಹ್ಮರಥ) ಸಿಂಗರಿಸುವ ಮಲೆಕುಡಿಯ ಸಮುದಾಯದವರು ತಮ್ಮ ಕಾರ್ಯವನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತನ್ನ ಆದೇಶವನ್ನು ಹಿಂಪಡೆಯಬೇಕಾಯಿತು. ಮಲೆಕುಡಿಯ ಸಮುದಾಯವು ಮಡೆಸ್ನಾನವನ್ನು ನಿಲ್ಲಿಸಿದರೆ ರಥವನ್ನು ತಾವು ಸಿಂಗರಿಸುವುದಿಲ್ಲ ಎಂಬುದಾಗಿ ಹಾಗೂ ನಮ್ಮ ಸಂಪ್ರದಾಯಗಳಲ್ಲಿ ಇತರರು ಮಧ್ಯಪ್ರವೇಶ ಮಾಡುವುದು ಅಥವಾ ಅದನ್ನು ಮುರಿಯುವುದು ತರವಲ್ಲ ಎಂಬುದು ಅವರ ನಿಲುವಾಗಿತ್ತು. ಹೀಗೆ ಹೇಳುವ ಮೂಲಕ ಆಚರಣೆಗಳನ್ನು ನಿಷೇಧಿಸುವ ಅಥವಾ ರದ್ದುಗೊಳಿಸುವ ಹಕ್ಕು ಅದನ್ನು ಆಚರಿಸುವವರಿಗೆ ಇರುತ್ತದೆಯೇ ಹೊರತು ಆಡಳಿತ ನಿರ್ವಹಿಸುವ ಸಂಸ್ಥೆಗಳಿಗಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದಂತಿದೆ. ಎಲ್ಲಿಯವರೆಗೆ ಆಚರಣೆಗಳಲ್ಲಿ ಅವರಿಗೆ ದೋಷಗಳು ಕಂಡುಬರುವುದಿಲ್ಲವೋ ಅಲ್ಲಿಯವರೆಗೆ ಅದನ್ನು ನಿಲ್ಲಿಸಲು ಅವರಿಗೆ ಸಕಾರಣಗಳು ದೊರಕುವುದಿಲ್ಲ. ಈಗಲೂ ಅದನ್ನೇ ಆ ಸಮುದಾಯದವರು ಮಾಡಿದ್ದಾರೆ.

ಹಾಗಾದರೆ ಇಲ್ಲಿ ನಮಗೆ ಒಂದು ಪ್ರಶ್ನೆ ಏಳುತ್ತದೆ ಅದನ್ನು ಕೇಳುವ ಮೂಲಕ ನನ್ನ ಅನಿಸಿಕೆಯನ್ನು ಮುಗಿಸುತ್ತೇನೆ. ಮಡೆಸ್ನಾನದಂತಹ ಆಚರಣೆಯಲ್ಲಿ ದಲಿತ ಸಂಘಟನೆಗಳಿಗೆ ಹಾಗೂ ಆಡಳಿತಾತ್ಮಕ ಸಂಸ್ಥೆಗಳಿಗೆ ಗೋಚರಿಸುವ ಅನ್ಯಾಯ, ಅಕ್ರಮ, ಶೋಷಣೆಗಳು ಅದನ್ನು ಆಚರಿಸುವವರಿಗೆ ಏಕೆ ಕಾಣುವುದಿಲ್ಲ?

* * * * * * *

ಚಿತ್ರಕೃಪೆ : ಅಂತರ್ಜಾಲ

16 ಟಿಪ್ಪಣಿಗಳು Post a comment
 1. Ananda Prasad
  ನವೆಂ 30 2011

  ಇಂದಿನ ವಿಜ್ಞಾನ ಯುಗದಲ್ಲಿ ಮಡೆಸ್ನಾನದಂಥ ಅಸಹ್ಯ ಹಾಗೂ ವಿಕೃತ ಆಚರಣೆಗಳನ್ನು ಮುಂದುವರಿಸಿಕೊಂಡು ಬಂದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಬೆತ್ತಲೆಸೇವೆಯಂಥ ಆಚರಣೆಗಳನ್ನು ಆಚರಿಸುವ ವ್ಯಕ್ತಿಗಳಿಗೆ ಅದು ಅಸಹ್ಯ, ಅನಿಷ್ಟ ಎಂದು ಅನಿಸಿರಲಿಲ್ಲ. ಅದೇ ರೀತಿ ಮಡೆಸ್ನಾನ ಆಚರಿಸುವವರಿಗೂ ಅದು ಅಸಹ್ಯ, ಅನಿಷ್ಟ ಎಂದು ಅನಿಸುವುದಿಲ್ಲ. ಹಾಗೆಂದು ಅಂಥ ವಿಕಾರ ಪದ್ಧತಿಯನ್ನು ನಮ್ಮ ಸಮಾಜದಲ್ಲಿ ಮುಂದುವರಿಸುವುದು ನಾಗರೀಕತೆ, ಮಾನವ ಸಮಾಜದ ಘನತೆಗೆ ಧಕ್ಕೆ ತರುವಂಥ ವಿಷಯವಾದುದರಿಂದ ಇಂಥ ಅನಿಷ್ಟ ಪದ್ಧತಿಗಳನ್ನು ನಿಷೇದಿಸುವುದು ನ್ಯಾಯೋಚಿತ. ದೇವರಿಗೆ ನಡೆದುಕೊಳ್ಳಲು, ಹರಕೆ ಹೇಳಲು ಹಲವು ನಾಗರೀಕ ವಿಧಾನಗಳಿವೆ. ಅಂಥ ವಿಧಾನಗಳನ್ನು ಪ್ರೋತ್ಸಾಹಿಸುವುದು ನಾಗರೀಕ ಸಮಾಜದ ಜವಾಬ್ದಾರಿಯಾಗಿದೆ

  ಉತ್ತರ
 2. Kumar
  ನವೆಂ 30 2011

  Ananda Prasad> ಇಂದಿನ ವಿಜ್ಞಾನ ಯುಗದಲ್ಲಿ

  ಜಾತಿ, ಧರ್ಮ, ದೇವರು, ಆಚರಣೆಗಳು, ಪದ್ಧತಿ, ಸಂಪ್ರದಾಯ, ಇತ್ಯಾದಿ ವಿಷಯಗಳ ಚರ್ಚೆ ಬಂದಾಗಲೆಲ್ಲಾ, ಕೆಲವರು “ಇಂದಿನ ವಿಜ್ಞಾನ ಯುಗದಲ್ಲಿ” ಇದಕ್ಕೆಲ್ಲಾ ಅರ್ಥವಿಲ್ಲ ಎನ್ನುವುದು ಎಲ್ಲರ ಅನುಭವಕ್ಕೂ ಬಂದಿರುವ ಸಂಗತಿ.
  ಇದನ್ನು ನೋಡಿದಾಗ ನನಗೊಂದು ಪ್ರಶ್ನೆ ಏಳುತ್ತಿದೆ.
  ಇಂದಿನ ಯುಗ ವಿಜ್ಞಾನ ಯುಗವಾದರೆ, ಹಿಂದಿನ ಯುಗ ಏನಾಗಿತ್ತು?
  ಎಂದಿನಿಂದ ವಿಜ್ಞಾನ ಯುಗ ಆರಂಭವಾಯಿತು?
  ವಿಜ್ಞಾನ ಯುಗ ಎಂದರೇನು ಮತ್ತು ಈ ವಿಜ್ಞಾನ ಯುಗದಲ್ಲಿ ಮಾತ್ರ ಈ ಆಚರಣೆಗಳು ಏಕೆ ಬೇಕಿಲ್ಲ?
  ವಿಜ್ಞಾನಕ್ಕೂ ಈ ಮೇಲ್ಕಾಣಿಸಿದ ಸಂಗತಿಗಳಿಗೂ ಇರುವ ಸಂಬಂಧವೇನು?

  ಉತ್ತರ
  • Ananda Prasad
   ನವೆಂ 30 2011

   ವಿಜ್ಞಾನ ಯುಗ ಒಂದೆರಡು ಶತಮಾನಗಳ ಹಿಂದೆ ಆರಂಭವಾಯಿತು. ಅದಕ್ಕೂ ಮೊದಲು ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಲು, ಪ್ರಕೃತಿ ನಿಯಮಗಳನ್ನು ಮಾನವನ ಅನುಕೂಲಕ್ಕೆ ಬಳಸಿಕೊಳ್ಳಲು ಸೂಕ್ತವಾದ ವಿಪುಲವಾದ ಸಲಕರಣೆಗಳು ಲಭ್ಯವಿರಲಿಲ್ಲ. ಇಂದು ಪ್ರಕೃತಿಯಲ್ಲಿ ಹೇಗೆ ಜೀವ ಉಗಮವಾಗಿ, ವಿಕಾಸವಾಗಿ ಇಂದಿನ ಮಾನವನ ರೂಪಕ್ಕೆ ಬಂದಿದೆ ಎಂಬುದನ್ನು ಉತ್ತಮವಾಗಿ ವಿವರಿಸುವ ಸ್ಥಿತಿಯಲ್ಲಿ ಮಾನವ ಇದ್ದಾನೆ ಮತ್ತು ಇದಕ್ಕೆ ಸಾಕಷ್ಟು ಬಲವಾದ ಆಧಾರಗಳೂ ಇವೆ. ಹಾಗೆಂದು ಆಚರಣೆಗಳು ಬೇಡ ಎಂದು ಹೇಳಿಲ್ಲ, ಮಾನವನ ಘನತೆಗೆ ಕುಂದು ತರುವ ಕಂದಾಚಾರಗಳು ಅಗತ್ಯವಿಲ್ಲ ಎಂದು ಹೇಳಬಹುದು. ಆಚರಣೆಗಳು ಅವರವರ ನಂಬಿಕೆಗೆ ಬಿಟ್ಟದ್ದು ಅದರೂ ಅನಿಷ್ಟ ಎನಿಸುವ ಆಚರಣೆಗಳನ್ನು ಕೈಬಿಡಲು ಪ್ರಜ್ಞಾವಂತ ಸಮಾಜ ಮುಂದೆ ಬರಬೇಕಾಗುತ್ತದೆ. ಹೀಗಾಗಿಯೇ ಸತಿ ಪದ್ಧತಿ, ಬಾಲ್ಯ ವಿವಾಹ, ಅಸ್ಪೃಶ್ಯತೆ, ಬೆತ್ತಲೆ ಸೇವೆ ಮೊದಲಾದವುಗಳನ್ನು ಪ್ರಜ್ಞಾವಂತ ಸಮಾಜ ಹಾಗೂ ಸರಕಾರಗಳು ನಿಷೇಧಿಸಿವೆ

   ಉತ್ತರ
 3. Kumar
  ನವೆಂ 30 2011

  > ವಿಜ್ಞಾನ ಯುಗ ಒಂದೆರಡು ಶತಮಾನಗಳ ಹಿಂದೆ ಆರಂಭವಾಯಿತು. ಅದಕ್ಕೂ ಮೊದಲು ಪ್ರಕೃತಿಯನ್ನು ಅರ್ಥ
  > ಮಾಡಿಕೊಳ್ಳಲು, ಪ್ರಕೃತಿ ನಿಯಮಗಳನ್ನು ಮಾನವನ
  > ಅನುಕೂಲಕ್ಕೆ ಬಳಸಿಕೊಳ್ಳಲು ಸೂಕ್ತವಾದ ವಿಪುಲವಾದ ಸಲಕರಣೆಗಳು ಲಭ್ಯವಿರಲಿಲ್ಲ

  ಹಾಗಿದ್ದರೆ, ಸಹಸ್ರಾರು ವರ್ಷಗಳಷ್ಟು ಹಿಂದೆಯೇ ಇದ್ದ ಆರ್ಯಭಟ, ವರಾಹಮಿಹಿರ ಇತ್ಯಾದಿಗಳು, ಭೂಮಿಯು ಗುಂಡಗಿದೆ ಎನ್ನುವುದನ್ನೂ, ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೇ ಎನ್ನುವುದನ್ನೂ, ಬ್ರಹ್ಮಾಂಡ ಎನ್ನುವ ತತ್ವದ ಮೂಲಕ ವಿಶ್ವವು ಅಂಡಾಕೃತಿಯಲ್ಲಿದೆ ಎನ್ನುವುದನ್ನೂ ಹೇಗೆ ತಿಳಿದರು?
  ಸಹಸ್ರಾರು ವರ್ಷಗಳಾದರೂ ತುಕ್ಕು ಹಿಡಿಯದ (ಇಂದಿಗೂ ತಯಾರಿಸಲು ಕಷ್ಟ ಸಾಧ್ಯವಾದ) ಕಬ್ಬಿಣದ ಸ್ಥಂಭಗಳನ್ನು ಹೇಗೆ ತಯಾರಿಸಿದರು?
  ಹಂಪೆಯ ಪುರಂದರ ಮಂಟಪದ ಕಲ್ಲಿನ ಕಂಬಗಳು ವಿವಿಧ ವಾದ್ಯಗಳ ಶಬ್ದವನ್ನು ನುಡಿಯುವಂತೆ ಮಾಡಿದವರಿಗೆ ವಿಜ್ಞಾನವೇ ತಿಳಿದಿರಲಿಲ್ಲವೇ?
  ಕೈನಲ್ಲೇ ಗುಣಾಕಾರ-ಭಾಗಾಕಾರಗಳ ಲೆಕ್ಕ ಹಾಕಿ, ವರ್ಷದಲ್ಲಿ ಬರುವ ಎಲ್ಲ ಸೂರ್ಯ/ಚಂದ್ರ ಗ್ರಹಣಗಳನ್ನು ಹೇಳುತ್ತಿದ್ದುದು ವಿಜ್ಞಾನ/ಗಣಿತದ ಆಧಾರದ ಮೇಲೆ ಅಲ್ಲವೇ?
  ಗಣಿತಕ್ಕೆ ೦, ದಶಮಾಂಶ ಪದ್ಧತಿ, ತ್ರಿಕೋಣಮಿತಿ, ಜ್ಯಾಮಿತಿ, ಮುಂತಾದ ಎಲ್ಲಾ ಕ್ಷೇತ್ರಗಳನ್ನೂ ಅಂದೇ ತಿಳಿಸಿದ್ದರಲ್ಲವೇ – ಅದು ಹೇಗೆ ಸಾಧ್ಯವಾಯಿತು?
  ಎತ್ತಿನ ಗಾಡಿಗಳಲ್ಲಿ ಸಾಗಿಸಬಹುದಾದಷ್ಟು ಸಣ್ಣ ಕಬ್ಬಿಣದ ಕುಲುಮೆಗಳನ್ನು ತಯಾರಿಸುತ್ತಿದ್ದವರು ವಿಜ್ಞಾನ ಯುಗದವರಲ್ಲವೆನ್ನುವುದು ಹೇಗೆ?
  ಆಯುವೇದ, ವೃಕ್ಷಾಯುರ್ವೇದ, ಖಗೋಳಶಾಸ್ತ್ರ, ಲೋಹಶಾಸ್ತ್ರ, ವಿಮಾನ ಶಾಸ್ತ್ರ ಇತ್ಯಾದಿಗಳ ಅವಿಷ್ಕಾರವೆಲ್ಲಾ ಸಹಸ್ರಾರು ವರ್ಷದ ಹಿಂದೆಯೇ ಆಗಿತ್ತೆನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಅಂದರೆ, ಅವೆಲ್ಲಾ “ವಿಜ್ಞಾನ ಯುಗ”ಕ್ಕೂ ಹಿಂದಿನವು!!

  > ಅದರೂ ಅನಿಷ್ಟ ಎನಿಸುವ ಆಚರಣೆಗಳನ್ನು ಕೈಬಿಡಲು ಪ್ರಜ್ಞಾವಂತ ಸಮಾಜ ಮುಂದೆ ಬರಬೇಕಾಗುತ್ತದೆ

  ಖಂಡಿತ. ಆದರೆ, ಆ ಆಚರಣೆಗಳು ಅನಿಷ್ಟ ಅಥವಾ ಅರ್ಥಹೀನ ಎಂದು ತಿಳಿಯುವುದು ಹೇಗೆ?
  ವಿಜ್ಞಾನ ಎನ್ನುವುದು ಅನಿಸಿಕೆಗಳ ಮೇಲೆ ನಿರ್ಮಾಣವಾದದ್ದಲ್ಲ.
  ಆ ಆಚರಣೆಗಳಲ್ಲಿ ಅರ್ಥವಿಲ್ಲ ಎಂದು ವೈಜ್ಞಾನಿಕವಾಗಿ ಯಾರು ನಿರೂಪಿಸಿದ್ದಾರೆ?
  ಹಾಗಿಲ್ಲದೆ, ಕೇವಲ ಕೆಲವರಿಗೆ ಅದು ಅರ್ಥವಿಲ್ಲದ್ದು ಎಂದೆನಿಸಿತು ಎಂಬ ಏಕೈಕ ಕಾರಣಕ್ಕೆ ನಿಷೇಧಿಸಬೇಕೆಂದರೆ, ಅದು ವೈಜ್ಞಾನಿಕ ಮನೋಭಾವ ಹೇಗಾದೀತು?

  ಅಕಸ್ಮಾತ್ ಕೆಲವು ಅರ್ಥವಿಲ್ಲದ ಆಚರಣೆಗಳನ್ನು ಆಚರಿಸುತ್ತಿದ್ದಾರೆ ಎಂದಿಟ್ಟುಕೊಳ್ಳಿ.
  ಅದನ್ನು ಆಚರಿಸುವುದರಿಂದ ಯಾರಿಗೂ ತೊಂದರೆಯಾಗದಿರಬಹುದು.
  ಆದರೆ, ನಮಗೆ ಅರ್ಥವಾಗದ ಮತ್ಯಾವುದೋ ಆಚರಣೆಯನ್ನು “ಅರ್ಥವಿಲ್ಲದ್ದು” ಎಂದು ಅರ್ಥೈಸಿ ನಿಷೇಧಿಸಿದರೆ,
  ಅದರಿಂದ ತೊಂದರೆಯಾಗುವುದು ಯಾರಿಗೆ, ಎಂದು ಯೋಚಿಸಿ ನೋಡಿ.

  ಯಾವುದನ್ನಾದರೂ ಅರ್ಥವಿಲ್ಲದ್ದು ಎಂದು ನಿಶ್ಚಯಿಸುವ ಮೊದಲು, ಸಾಕಷ್ಟು ಚಿಂತನೆಗಳು ನಡೆಯಬೇಕು, ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡ
  ನಂತರವಷ್ಟೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನನ್ನ ಅನಿಸಿಕೆ.

  ಉತ್ತರ
  • Ananda Prasad
   ಡಿಸೆ 1 2011

   ನಮ್ಮಲ್ಲಿ ನೂರಾರು ವರ್ಷಗಳ ಹಿಂದೆ ಕೆಲವು ವೈಜ್ಞಾನಿಕ ಅವಿಷ್ಕಾರಗಳು ನಡೆದಿವೆ, ಹಾಗೆಂದು ಅದನ್ನು ವಿಜ್ಞಾನ ಯುಗ ಎನ್ನಲು ಸಾಧ್ಯವಿಲ್ಲ. ಬಹಳ ಹಿಂದೆ ನಮ್ಮಲ್ಲಿ ತುಕ್ಕು ಹಿಡಿಯದ ಕಬ್ಬಿಣ, ಖಗೋಳಶಾಸ್ತ್ರ ಇತ್ಯಾದಿಗಳಲ್ಲಿ ಪರಿಣತಿ ಸಾಧಿಸಿದ್ದರೂ ವ್ಯಾಪಕ ವಿಜ್ಞಾನದ ಅಭಿವೃದ್ಧಿ ಆಗಿರಲಿಲ್ಲ. ಅಲ್ಲದೆ ಬಹಳ ಹಿಂದೆ ವಿಜ್ಞಾನದ ಉದಯವಾಗಿದ್ದರೂ ನಂತರ ಅದು ಯಾಕೋ ಮುಂದುವರೆಯಲಿಲ್ಲ ಎಂದೇ ಕಾಣುತ್ತದೆ. ಬಹುಶ: ವಿಜ್ಞಾನಕ್ಕೆ ಪ್ರೋತ್ಸಾಹ ಸಿಕ್ಕಿರಲಿಲ್ಲ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಪುರೋಹಿತಶಾಹಿ ಚಿಂತನೆಗಳು ಬೆಳೆಯಲು ಬಿಡಲಿಲ್ಲ ಎಂದೇ ಕಾಣುತ್ತದೆ. ನಮ್ಮಲ್ಲಿ ವಿಮಾನ ಶಾಸ್ತ್ರ ಬೆಳವಣಿಗೆ ಆಗಿದ್ದರೆ ನಮ್ಮ ದೇಶವೇ ವಿಮಾನದ ಆವಿಷ್ಕಾರ ಮಾಡಿರಬೇಕಾಗಿತ್ತಲ್ಲವೇ ? ನಮ್ಮ ದೇಶದಲ್ಲಿ ನಿಜವಾಗಿಯೂ ಗಾಳಿಯಲ್ಲಿ ಹಾರುವ ವಿಮಾನಗಳ ನಿರ್ಮಾಣ ಆಗಿರಲಿಲ್ಲ ಬರೀ ಕಥೆಗಳಲ್ಲಿ ವಿಮಾನದ ಉಲ್ಲೇಖ ಬಿಟ್ಟರೆ. ನಮ್ಮಲ್ಲಿ ಇಂದೂ ವಿಜ್ಞಾನಿಗಳು ಉಪಗ್ರಹ ಹಾರಿಸುವ ಮೊದಲು ಅದರ ಪ್ರತಿಕೃತಿಯನ್ನು ದೇವಾಲಯಕ್ಕೆ ಅರ್ಪಿಸುವ ಪರಿಪಾಠ ಇರುವಾಗ ಇಲ್ಲಿ ವೈಜ್ಞಾನಿಕ ಮನೋಭಾವ ಬೆಳೆದೀತು ಹೇಗೆ? ಹೀಗಾಗಿಯೇ ನಮ್ಮ ದೇಶ ಇಂದೂ ವೈಜ್ಞಾನಿಕ ಅವಿಷ್ಕರಗಳಲ್ಲಿ ಬಹಳ ಹಿಂದೆ ಉಳಿದಿದೆ. ಇಂದು ನಾವು ಬಳಸುತ್ತಿರುವ ಬಹಳಷ್ಟು ವೈಜ್ಞಾನಿಕ ಅವಿಷ್ಕಾರಗಳು ಪಾಶ್ಚಾತ್ಯ ಮೂಲದವೇ ಆಗಿವೆ.

   ಅಜ್ಞಾನ ಮೂಲದ ವಿಕೃತ ಆಚರಣೆಗಳನ್ನು ನಾವು ಮುಂದುವರಿಸಿಕೊಂಡು ಹೋಗುವುದು ನಮ್ಮ ಸಂಸ್ಕೃತಿ ಹಾಗೂ ನಾಗರೀಕತೆಗೆ ಕಪ್ಪು ಚುಕ್ಕೆಯಗುತ್ತದೆ. ಹೀಗಾಗಿ ಅಂಥ ಆಚರಣೆಗಳನ್ನು ನಿಷೇಧಿಸುವುದು ಅಗತ್ಯ.

   ಉತ್ತರ
 4. ನವೆಂ 30 2011

  Ananda Prasad :
  ಇಂದಿನ ವಿಜ್ಞಾನ ಯುಗದಲ್ಲಿ ಮಡೆಸ್ನಾನದಂಥ ಅಸಹ್ಯ ಹಾಗೂ ವಿಕೃತ ಆಚರಣೆಗಳನ್ನು ಮುಂದುವರಿಸಿಕೊಂಡು ಬಂದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಬೆತ್ತಲೆಸೇವೆಯಂಥ ಆಚರಣೆಗಳನ್ನು ಆಚರಿಸುವ ವ್ಯಕ್ತಿಗಳಿಗೆ ಅದು ಅಸಹ್ಯ, ಅನಿಷ್ಟ ಎಂದು ಅನಿಸಿರಲಿಲ್ಲ. ಅದೇ ರೀತಿ ಮಡೆಸ್ನಾನ ಆಚರಿಸುವವರಿಗೂ ಅದು ಅಸಹ್ಯ, ಅನಿಷ್ಟ ಎಂದು ಅನಿಸುವುದಿಲ್ಲ. ಹಾಗೆಂದು ಅಂಥ ವಿಕಾರ ಪದ್ಧತಿಯನ್ನು ನಮ್ಮ ಸಮಾಜದಲ್ಲಿ ಮುಂದುವರಿಸುವುದು ನಾಗರೀಕತೆ, ಮಾನವ ಸಮಾಜದ ಘನತೆಗೆ ಧಕ್ಕೆ ತರುವಂಥ ವಿಷಯವಾದುದರಿಂದ ಇಂಥ ಅನಿಷ್ಟ ಪದ್ಧತಿಗಳನ್ನು ನಿಷೇದಿಸುವುದು ನ್ಯಾಯೋಚಿತ. ದೇವರಿಗೆ ನಡೆದುಕೊಳ್ಳಲು, ಹರಕೆ ಹೇಳಲು ಹಲವು ನಾಗರೀಕ ವಿಧಾನಗಳಿವೆ. ಅಂಥ ವಿಧಾನಗಳನ್ನು ಪ್ರೋತ್ಸಾಹಿಸುವುದು ನಾಗರೀಕ ಸಮಾಜದ ಜವಾಬ್ದಾರಿಯಾಗಿದೆ

  ಆನಂದ್ ರವರೆ

  ನಾಗರೀಕ ಸಮಾಜದಲ್ಲಿ ಅದೇಕೆ ಅನಾಗರೀಕ ಪದ್ಧತಿ? ಮತ್ತು ಅದೇಕೆ ವಿಕೃತ ಆಚರಣೆ? ಅದು ವಿಕೃತ ಆಚರಣೆ ಎನ್ನಬೇಕಾದರೆ ಅದಕ್ಕೂ ಮುನ್ನ ಅದು ಶುದ್ಧವಾಗಿದ್ದ ಆಚರಣೆಯಾಗಿತ್ತು ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಹಾಗಾದರೆ ಮಡೆಸ್ನಾನಕ್ಕೆ ಶುದ್ಧ ರೂಪದ ಆಚರಣೆಯೊಂದಿದೆಯೇ?

  ಅದನ್ನು ನಿಲ್ಲಿ, ಖಂಡಿಸಿ, ಅಥವಾ ಇನ್ನೇನನ್ನಾದರೂ ಆದರೆ ಅದಲ್ಲೆಕ್ಕಿಂತ ಮುನ್ನ ಅದೇಕೆ ತಪ್ಪಾದ ಆಚರಣೆ ಎಂಬುದನ್ನು ವಿವರಿಸಿ. ಕೇವಲ ವಿಕೃತ, ವಿರೂಪ ಎಂದರೆ ಆಚರಣೆಯನ್ನು ನಿಲ್ಲಿಸಲು ಸಕಾರಣವಾಗಲಾರದು, ಬದಲಿಗೆ ಆ ಆಚರಣೆಯಲ್ಲಿ ಏನು ದೋಷವಿದೆ ಎಂಬುದನ್ನು ತೋರಿಸಿ. ಬೆತ್ತಲೆ ಸೇವೆಯ ಆಚರಣೆಗೂ ಮಡೆಸ್ನಾನಕ್ಕೂ ಅವುಗಳ ಸ್ವರೂಪಗಳಲ್ಲಿ ಹಲವಾರು ವ್ಯತ್ಯಾಸಗಳಿವೆ. ಅವೆರಡೂ ಒಂದೇ ಎಂಬ ಧೋರಣೇ ಸರಿಯಾದುದಲ್ಲ. ಬೆತ್ತಲೆ ಸೇವೆಯ ಕುರಿತು ಇಲ್ಲಿ ಚರ್ಚೆ ಬೇಡ, ಅದಕ್ಕೆ ಸಮಯ ಬಂದರೆ ಚರ್ಚೆ ಮಾಡುವ. ಆದರೆ ಇಲ್ಲಿ ಮೊದಲು ಅದೇಕೆ ತಪ್ಪಾದ ಆಚರಣೆ, ಮತ್ತು ಮಾನವ ಘನತೆಯನ್ನು ಕುಗ್ಗಿಸುವ ಆಚರಣೆ ಎಂಬುದನ್ನು ತಿಳಿಹೇಳಿ. ಹಾಗೂ ಮಾನವ ಘನತೆ ಎಂದರೇನು ಎಂಬುದನ್ನೂ ಸಹ ಸಾಧ್ಯವಾದರೆ ತಿಳಿಸಿ

  ಸಂತೋಷ್

  ಉತ್ತರ
  • Ananda Prasad
   ಡಿಸೆ 1 2011

   ಮಡೆಸ್ನಾನ ವಿಕೃತ ಆಚರಣೆ ಎಂಬುದರಲ್ಲಿ ಸಂದೇಹವಿಲ್ಲ. ಒಂದು ಆಚರಣೆ ವಿಕೃತ ಆಚರಣೆ ಎನ್ನಲು ಅದು ಮೊದಲು ಶುದ್ಧ ರೂಪದ್ದು ಆಗಿರಬೇಕು ಎಂಬುದು ಸಮಂಜಸವಲ್ಲ. ಇಂಥ ಆಚರಣೆಗಳನ್ನು ನಾಗರೀಕ, ಸುಸಂಸ್ಕೃತ ಮನಸ್ಸಿನ ಯಾರೂ ಸಮರ್ಥಿಸಲು ಸಾಧ್ಯವಿಲ್ಲ ಎನ್ನದೆ ವಿಧಿಯಿಲ್ಲ. ಯಾವುದೇ ವಿದೇಶೀಯರು ಇಂಥ ವಿಕೃತ ಆಚರಣೆಗಳನ್ನು ನೋಡಿದರೆ ನಮ್ಮ ನಮ್ಮ ಸಂಸ್ಕೃತಿ, ನಾಗರೀಕತೆಯ ಬಗ್ಗೆ ಎಂಥ ಕೆಟ್ಟ ಭಾವನೆಯನ್ನು ಇಟ್ಟುಕೊಳ್ಳಬಹುದು ಎಂಬುದನ್ನು ನಾವು ಆಲೋಚಿಸಬೇಕು. ಅಜ್ಞಾನ ಹಾಗೂ ಕಟ್ಟು ಕತೆಗಳಿಂದ ಇಂಥ ವಿಕೃತ ಆಚರಣೆಗಳನ್ನು ಮುಂದುವರಿಸುವುದು ನಾವೆಷ್ಟು ನಾಗರಿಕರು ಮತ್ತು ಸುಸಂಸ್ಕೃತರು ಎಂಬುದನ್ನು ತೋರಿಸುತ್ತದೆ. ಇದು ನಮ್ಮ ರಾಜ್ಯಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ.

   ಉತ್ತರ
 5. ಮಹೇಶ ಪ್ರಸಾದ ನೀರ್ಕಜೆ
  ಡಿಸೆ 1 2011

  ಮಡೆಸ್ನಾನ ಸರಿಯಲ್ಲ ನಿಜ. ಆದರೆ ಅದನ್ನು ಸರಿಯಲ್ಲ ಎನ್ನಲು ವಿಜ್ಞಾನ ಬೇಕಾಗಿಲ್ಲ. ಬೇಕಾಗೂ ಇರಬಾರದು. ಯಾಕೆಂದರೆ ವಿಜ್ಞಾನದಲ್ಲೇ ಎಲ್ಲವೂ ಸರಿಯಿಲ್ಲ. ಅಲ್ಲಿನದನ್ನು ವಿಜ್ಞ್ನಾನ ಮೊದಲು ಸರಿ ಮಾಡಲಿ. ಧಾರ್ಮಿಕ ಮತ್ತು ಸಾಮಾಜಿಕ ತಪ್ಪುಗಳನ್ನು ಧಾರ್ಮಿಕ ಅಥವಾ ಸಾಮಾಜಿಕ ಕಾರಣಗಳ ಹಿನ್ನೆಲೆಯಲ್ಲೇ ವಿಶ್ಲೇಶಿಸಿದರೆ ಸಾಕು ಮತ್ತು ಅದೇ ಹೆಚ್ಚು ಸಮಂಜಸ ಕೂಡ.

  ಉತ್ತರ
 6. Pradeep CS
  ಡಿಸೆ 1 2011

  ಎಂಜಲು ಎಲೆ ಮೇಲೆ ಬಿದ್ದು ಒದ್ದದುವಸ್ಟು ಪಾಪ ನಮ್ಮಾ ಜನ ಮಾಡಿದ್ದಾರೆಯೇ? ಅಂತ ಪಾಪ್ ಅತವ ಎಕ್ಸ್‌ಟ್ರಾ ಪುಣ್ಯ ಬೇಕಿದ್ರೆ ೪ ಜನಕ್ಕೆ ಊಟ ಹಾಕಲಿ ಅಡೌ ಬಿಟ್ಟು ಇದು ಯಾವ ಗೊಡ್ಡು ಸಂಪ್ರದಾಯ ಸ್ವ್ಯಾಮೀ

  ಯಾರೋ ಪಾಪಿ ಯಾವುದೋ ಕಾಲದಲ್ಲಿ ತಂದ ಈ ಅಣಿಸ್ಟ ಪದ್ದತಿಯನ್ನ ಮುಂದುವರಿಸ ಬೇಕೇ

  ಇದನ್ನ ಸಮರ್ಠಿಸಿ ಕೊಳ್ಳೋರು ಬೇರೆಯವರ ಎಂಜಿಲು ಎಲೆ ಯನ್ನು ತೊಳೆದು ನೋಡಿ ಅದರ ಗಬ್ಬು ವಾಸನೆ ಸ್ವೀಕಾರಿ ಪುಣ್ಯತಮರಾಗಿರಿ ಸಂತೋಷ!!

  ಉತ್ತರ
  • ಡಿಸೆ 2 2011

   ಸ್ವಾಮಿ ಪ್ರದೀಪ್ ರವರೆ

   ಇಲ್ಲಿ ಪಾಪ ಮಾಡಿದ ಜನರು ಅದರ ಮೇಲೆ ಹೊರಳಾಡುತ್ತಿಲ್ಲ. ಮತ್ತು ಅವರಿಗೆ ಹೊರಳಾಡುವಂತೆ ಯಾವ ಒತ್ತಾಯವೂ ಇಲ್ಲ.
   ಆಯ್ತು ನಿಮ್ಮ ಸಲಹೆಗೆ ಧನ್ಯವಾದಗಳು ಪುಣ್ಯಾತ್ಮರಾಗಲು ಹೇಳಿದ್ದಕ್ಕೆ ವಂದನೆಗಳು

   ಉತ್ತರ
 7. Rajesh Gobat
  ಡಿಸೆ 3 2011

  ಸ್ವಾಮಿ ಸಂತೋಷರೇ… ಯಾವುದೋ ಅಂಧಾಚರಣೆಯನ್ನು ಕೊಂಡುಕೊಂಡು ನಿಲ್ಲಲು ಪ್ರಯತ್ನಿಸುತ್ತಿರುವಿರಲ್ಲ, ನೀವು ವಿದ್ಯಾವಂತರೇ? ಸುಶಿಕ್ಷಿತರೇ?? ಮಡೆಸ್ನಾನದಂತ ಅನಿಷ್ಟ ಪದ್ದತಿಯನ್ನು ವೈಭವೀಕರಿಸಲು ನಿಂತಿರುವುದು ದುರಂತ ಮತ್ತು ಹತಾಶೆಯ ಮನೋಭಾವವಾಯಿತು.

  ಉತ್ತರ
  • ಡಿಸೆ 3 2011

   ರಾಜೇಶ್

   ನಾನು ವಿದ್ಯಾವಂತನೋ ಅಶಿಕ್ಷಿತನೋ ಅದೆಲ್ಲಾ ಬೇರೆಯದೇ ವಿಚಾರ, ವೈಯುಕ್ತಿಕ ಕುಹುಕ ಬಿಡಿ. ಚರ್ಚೆ ಮಾಡುವುದಾದರೆ ಮಾಡುವ ಇಲ್ಲವಾದರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ ಅದೇನೆಂದರೆ ಮಡೆಸ್ನಾನವನ್ನು ಪ್ರೋತ್ಸಾಹಿಸುವುದಾಗಲೀ ಅಥವಾ ವಿರೋಧಿಸುವುದಾಗಲೀ ನನ್ನ ನಿಲುವಲ್ಲ. ನಾನು ಅದನ್ನು ಪ್ರೋತ್ಸಾಹಿಸುತ್ತಿದ್ದೇನೆ ಎಂದುಕೊಂಡರೆ ಅದು ನಿಮ್ಮ ಅವಸರದ ತೀರ್ಮಾನವಾಗುತ್ತದೆ. ನಾನಿಲ್ಲಿ ಕೇಳಬಯಸುತ್ತಿರುವುದು ಆಚರಿಸುವವರಿಗೆ ಹಾಗೂ ವಿರೋಧಿಸುವವರಿಗೆ ಯಾಕೆ ಕಂದರ ಇದೆ? ಅವರಿಬ್ಬರು ಒಬ್ಬರಿಗೊಬ್ಬರು ಅರ್ಥವಾಗುತ್ತಿಲ್ಲ ಏಕೆ? ಎಂಬುದಷ್ಟೆ ಆಗಿದೆ.

   ಒಂದೊಮ್ಮೆ ಮಡೆಸ್ನಾನವು ಅನೇಕ ತೊಂದರೆಗಳನ್ನುಂಟು ಮಾಡುತ್ತಿದೆ ಎಂದು ಸ್ಪಷ್ಟವಾಗಿ ತೋರಿಸಿದರೆ ಅದನ್ನು ಖಂಡಿಸುವವರಲ್ಲಿ ನಾನೂ ಒಬ್ಬ. ವಾದಿಸಲು ಅಸಮರ್ಥರಾದಗ ಮಾತ್ರವೇ ವೈಯುಕ್ತಿಕ ಕುಹುಕ ಪ್ರಾರಂಭವಾಗುತ್ತದೆ. ದಯವಿಟ್ಟು ಚರ್ಚೆಗೆ ಗಮನಕೊಟ್ಟರೆ ಒಳ್ಳೆಯದು ಎಂಬುದು ನನ್ನ ಅಭಿಮತ.

   ಉತ್ತರ
 8. ಡಿಸೆ 3 2011

  Ananda Prasad> ಹಾಗೆಂದು ಅದನ್ನು ವಿಜ್ಞಾನ ಯುಗ ಎನ್ನಲು ಸಾಧ್ಯವಿಲ್ಲ
  Ananda Prasad> ವ್ಯಾಪಕ ವಿಜ್ಞಾನದ ಅಭಿವೃದ್ಧಿ ಆಗಿರಲಿಲ್ಲ
  ಹೀಗೆಂದು ಹೇಳಲು ನಿಮಗೆ ಇತಿಹಾಸದ ಆಧಾರ ಬೇಕಾಗುತ್ತದೆ. ಅದರಲ್ಲೂ ಭಾರತದ ಪ್ರಾಚೀನ ವಿಜ್ಞಾನದ ಇತಿಹಾಸವನ್ನು ತಿಳಿಯಬೇಕಾಗುತ್ತದೆ.
  ಅದಾವುದೂ ತಿಳಿಯದೇ ನಿಮಗೆ ತಿಳಿದಿದ್ದನ್ನೇ ಇತಿಹಾಸ, ಸತ್ಯವೆಂದು ತಿಳಿದು ನಿಷ್ಕರ್ಷಕ್ಕೆ ಬಂದರೆ, ಸತ್ಯವೆಂದೂ ತಿಳಿಯುವುದೇ ಇಲ್ಲ!

  Ananda Prasad> ಬರೀ ಕಥೆಗಳಲ್ಲಿ ವಿಮಾನದ ಉಲ್ಲೇಖ
  ನೀವು ಕೇವಲ ಕಥೆಗಳನ್ನು ಮಾತ್ರ ಕೇಳಿದ್ದೀರೆಂದು ತಿಳಿಯುತ್ತದೆ.
  ಭರಧ್ವಾಜ ಮುನಿಗಳ “ವಿಮಾನ ಶಾಸ್ತ್ರ” ಎಂಬ ಉದ್ಗ್ರಂಥವನ್ನು ಒಮ್ಮೆ ಓದಿ ನೋಡಿ.
  ಅಂಥಹ ಅದೆಷ್ಟೋ ಪ್ರಾಚೀನ ಗ್ರಂಥಗಳಲ್ಲಿ ವಿಮಾನ ನಿರ್ಮಾಣ, ಹಾರಾಟ, ನಿಲ್ದಾಣ, ಮುಂತಾದ ವಿಷಯಗಳ ಕುರಿತಾಗಿ ಬಹಳ ವಿವರವಾಗಿ ಚರ್ಚಿಸಿದ್ದಾರೆ.
  ಅವಾವುದೂ ಕೇವಲ “ಕಥೆ”ಗಳಲ್ಲ, ಸಂಶೋಧನೆ ಮಾಡಿ ಅರ್ಥಮಾಡಿಕೊಳ್ಳಬೇಕಾದ ಗ್ರಂಥಗಳು.

  Ananda Prasad> ಯಾವುದೇ ವಿದೇಶೀಯರು ಇಂಥ ವಿಕೃತ ಆಚರಣೆಗಳನ್ನು ನೋಡಿದರೆ
  ನಿಮಗೇಕೆ ಇಂತಹ ಕೀಳರಿಮೆ? ವಿದೇಶೀಯರು ಏನಾದರೂ ತಿಳಿದುಕೊಂಡುಬಿಡುತ್ತಾರೆ ಎಂಬ ಕಾರಣಕ್ಕೆ ನಾವು ಸರಿಯಾಗಿರಬೇಕು ಎನ್ನುವುದು ಎಂತಹ ವಾದ!!
  ಒಂದು ವೇಳೆ, ನಮ್ಮ ಸರಕಾರ ವಿದೇಶೀಯರನ್ನು ನಮ್ಮ ದೇಶಕ್ಕೆ ಬರದಂತೆ ನಿರ್ಬಂಧ ಹಾಕಿಬಿಟ್ಟರೆ, ನಿಮ್ಮ ಪ್ರಕಾರ ನಾವು “ಅನಿಷ್ಠ ಪದ್ಧತಿ”ಗಳನ್ನು ಮುಂದುವರೆಸಿಕೊಂಡು ಹೋಗಬಹುದು, ಅಲ್ಲವೇ!?

  ನಾನಿಲ್ಲಿ ಯಾವುದೇ ಪದ್ಧತಿ, ಆಚರಣೆಗಳನ್ನು ಬೆಂಬಲಿಸುತ್ತಿಲ್ಲ.
  ಆದರೆ, ನಿಮ್ಮ ಚಿಂತನೆಯಲ್ಲಿರುವ ವಿಕೃತಿಯನ್ನು ತೋರಿಸಲು ಯತ್ನಿಸುತ್ತಿದ್ದೇನಷ್ಟೇ.

  ಉತ್ತರ
 9. Neetha
  ಡಿಸೆ 3 2011

  If you want to stop this then the best way is to stop it by educating people. There are 100s of such rituals in India, be it Hinduism or Islam or Christianity! Cant go on banning them all. For now these people are not being pushed to do this, right? Then let them do it for whatever they believe it’s worth. Awaken people through education. If a Ph.D. holder wants to it, say, then it’s his prerogative. His education does not seem to stop it from doing it. But then one is pushing him to do it either right? That’s where law stops, and personal choice should be left to exercise. Talibanisation and counter-Talibanisation both are bad. Indians waste lot of time in demanding bans protesting etc. Good opium right? Govt. keeps looting because people have go their priorities wrong! Demand good education for all, universal health care, uniform civil code, let no one’s liberty be blocked.

  ಉತ್ತರ
  • ಮಹೇಶ ಪ್ರಸಾದ ನೀರ್ಕಜೆ
   ಡಿಸೆ 6 2011

   Nice one, Neetha.

   ಉತ್ತರ
  • Kumar
   ಡಿಸೆ 6 2011

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments