ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 3, 2011

48

ಉಡುಪಿಯ ಕೃಷ್ಣ ತಿರುಗಿ ನಿಂತಷ್ಟು ಸುಲಭವಲ್ಲ ’ಮಡೆ ಸ್ನಾನ’ ನಿಲ್ಲುವುದು…!

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

 “ಮಡೆಸ್ನಾನ ಅಥವಾ ಎಂಜೆಲೆಲೆ ಮೇಲೆ ಉರುಳು ಸೇವೆ ಮಾಡುವುದನ್ನು ನಿಷೇಧಿಸುವುದರಿಂದ ಯಾವ ರೀತಿ ಲಾಭವೂ ಇಲ್ಲ ನಷ್ಟವೂ ಇಲ್ಲ. ನಾನು ಈ ವಿಷಯದಲ್ಲಿ ತಟಸ್ಥ ನೀತಿ ಅನುಸರಿಸುತ್ತೇನೆ”  ಹೀಗಂತ ಹೇಳಿರೋದು ಪೇಜಾವರಶ್ರೀಗಳು…!

ಒಂದು ಕಡೆ ದಲಿತ ಕಾಲೋನಿಗಳಲ್ಲಿ ಓಡಾಡಿ ಹಿಂದೂ ಧರ್ಮವನ್ನು ಉದ್ಧರಿಸುವ ಮತ್ತು ಮತಾಂತರವನ್ನ ವಿರೋಧಿಸುವ ಮಾತನಾಡುವ ಶ್ರೀಗಳಿಗೆ ಮಡೆಸ್ನಾನದಿಂದ ಯಾವ ಧರ್ಮಕ್ಕೆ,ಹೇಗೆ ನಷ್ಟವಾಗಬಹುದು ಮತ್ತು ಹಿಂದೂ ಅನ್ನುವ ಧರ್ಮದ ಬಗ್ಗೆ ಮಾಧ್ಯಮಗಳ ಮೂಲಕ ಜಗತ್ತಿಗೆ ಯಾವ ಸಂದೇಶ ತಲುಪಬಹುದು ಅನ್ನುವುದರ ಅರಿವಿರಲಿಕ್ಕಿಲ್ಲವಾ? ಇದ್ದರೆ ಈ ರೀತಿ ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ಹೇಳಿಕೆ ನೀಡುತಿದ್ದರಾ?

’ಮಡೆ ಸ್ನಾನ’ ಅನ್ನುವ So Called ಧಾರ್ಮಿಕ ನಂಬಿಕೆ(!?) ನಡೆದುಕೊಂಡು ಬಂದ ಹಾದಿಗೆ ೪೦೦ ವರ್ಷಗಳ ಇತಿಹಾಸವಿದೆ.ಆದರೆ ತೀರಾ ಇದು ಮಾಧ್ಯಮಗಳಲ್ಲಿ ದೊಡ್ದ ಮಟ್ಟದ ಸುದ್ದಿ ಮಾಡಲಿಕ್ಕಾರಂಭಿಸಿದ್ದು ಬಹುಷಃ ಕಳೆದ ವರ್ಷದಿಂದಲೇ…! ಸದ್ಯ.ಈಗಲಾದರೂ ನಮ್ಮ ದನಿ ಕೇಳಿಬರುತ್ತಿದೆ ಅನ್ನುವ ಸಂತೋಷದ ಜೊತೆ ಜೊತೆಗೆ ಇಂತ ಅನಿಷ್ಟ ಪದ್ಧತಿಗಳಿಗೆ ಬ್ರೇಕ್ ಹಾಕಬೇಕಾದ ಸರ್ಕಾರ ಮತ್ತು ಸರ್ಕಾರದ ಸಚಿವರೇ ’ನೋ ಕಮೆಂಟ್ಸ್’ ಅನ್ನುವುದು ನೋಡಿ ಬೇಸರವೂ ಆಗುತ್ತದೆ.

ಈ ’ಮಡೆ ಸ್ನಾನ’ ಅಂದರೆ ಬ್ರಾಹ್ಮಣರ ತಿಂದ ಎಂಜಲೆಲೆಗಳ ಮೇಲೆ ಹೊರಳಾಡುವುದು…! ಎಂಜಲೆಲೆಗೆ ಅದ್ಭುತ ಶಕ್ತಿಯಿದೆ ಅನ್ನುವುದಾದರೆ ಅದು ಯಾರು ತಿಂದು ಬಿಟ್ಟ ಎಲೆಯಾದರೂ ಆದೀತು ಅಲ್ಲವೇ ಬ್ರಾಹ್ಮಣರೇ ಯಾಕೆ ಬೇಕು ಅನ್ನುವ ವಾದ ಮಾಡುವುದು ಅದೇ ಎಂಜಲೆಲೆಯ ಮೇಲೆ ಹೊರಳಾಡಿದಂತೆಯೇ ಸರಿ.ಹಿಂದೆ ನಮ್ಮಲ್ಲಿದ್ದಂತ ಸತಿ-ಪದ್ದತಿ,ವಿಧವಾ ಕೇಶ ಮುಂಡನ,ಬೆತ್ತಲೆ ಸೇವೆಯಂತೆ ಈ ’ಮಡೆ ಸ್ನಾನ’ವು ಒಂದು ವಿಕೃತಿ ಅಲ್ಲದೆ ಮತ್ತಿನ್ನೇನು?

ಇದುವರೆಗೂ ಸೋಗಲಾಡಿ ಸೆಕ್ಯುಲರ್,ಸುದ್ಧಿಜೀವಿಗಳ ಡಬಲ್ ಸ್ಟಾಂಡರ್ಡ್ ಬಗ್ಗೆ ಮಾತನಾಡುತಿದ್ದ ಮತ್ತು ಮತಾಂತರ ಅನ್ನುವ ಪಿಡುಗಿನ ವಿರುದ್ಧ ದನಿಯೆತ್ತುತ್ತಿದ್ದ ಈ ’ಬಲ ಪಂಥೀಯ’ ಸಂಘಟನೆಗಳಿಗೇನಾಗಿದೆ? ಅದ್ಯಾಕೆ ಅವರು ಸಹ ಇದು ಧಾರ್ಮಿಕ ಪದ್ಧತಿ ಅನ್ನುವ ತೇಪೆ ಹಚ್ಚುತಿದ್ದಾರೆ!? ಎಂದೋ ಕೊನೆಯಾಗಬೇಕಿದ್ದ ವಿಕೃತಿಯಿದು ಅನ್ನುವ ಧೈರ್ಯ ಇಲ್ಲದ ಮೇಲೆ ಸೋಗಲಾಡಿ ಸಿಕ್ಯುಲರ್ಗಳಿಗೂ, ಧರ್ಮದ ಹೆಸರೇಳಿ ನಿಲ್ಲುವ ಬಲಪಂಥೀಯ ಸಂಘಟನೆಗಳಿಗೂ ಅಂತ ವ್ಯತ್ಯಾಸವೇನು ಇರಲಾರದು ಅಲ್ಲವೇ?

ವ್ಯಾಲಂಟೈನ್ಸ್ ಡೇಯನ್ನ ವಿಕೃತಿ ಅನ್ನುವವರಿಗೆ ಇದು ವಿಕೃತಿ ಅನ್ನಿಸುವುದಿಲ್ಲ ಅನ್ನುವುದು ಧೃತರಾಷ್ಟ್ರ ಪ್ರೇಮವಲ್ಲದೇ ಇನ್ನೇನು? ಜನರನ್ನ ’ಮಡೆ ಸ್ನಾನ’ ಮಾಡದಂತೆ ತಡೆಯಲಾಗದವರಿಗೆ ’ಮತಾಂತರ’ದ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೆ?ಈಗಾಗಲೇ ಹಿಂದೂ ಧರ್ಮದ ಜಾತಿ ಪದ್ಧತಿ ಶೋಷಣೆಯ ಹಳೆ ರಾಗವನ್ನೇ ಹಾಡಿ ಹಾಡಿ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವ ಮಿಷನರಿಗಳ ಬಾಯಿಗೆ ಈ ’ಮಡೆ ಸ್ನಾನ’ ಅನ್ನುವುದು ಬ್ರಹ್ಮಾಸ್ತ್ರದಂತೆ ಅನ್ನಿಸುವುದಿಲ್ಲವೇ? ಹಾಗೇ ಈ ವಿಷಯದಲ್ಲಿ ಕೇವಲ ಪೇಜಾವರ ಶ್ರೀಗಳಿಗೆ ಮಾತ್ರ ಯಾಕೆ ಪ್ರಶ್ನೆ ಕೇಳಬೇಕು.ಕರ್ನಾಟಕದ ಮೂಲೆ ಮೂಲೆಯ ಜಾತಿ-ಉಪಜಾತಿಗಳಿಗೆಲ್ಲ ಇರುವ ಸ್ವಾಮೀಜಿಗಳು ಉತ್ತರದಾಯಿಗಳೇ ಅಲ್ಲವೇ? ನೀವುಗಳ್ಯಾಕೆ ದೊಡ್ಡ ಮಟ್ಟದಲ್ಲಿ ಇದರ ವಿರುದ್ಧ ದನಿಯೆತ್ತುತ್ತಿಲ್ಲ?

ಪದ್ದತಿಯ ಹೆಸರಿನಲ್ಲಿ ನಡೆಯುವ ವಿಕೃತಿಗಳಿಗೆ ಸರ್ಕಾರವೇ ಬ್ರೇಕ್ ಹಾಕಬೇಕಿದೆ.ಧಾರ್ಮಿಕ/ಆಧ್ಯಾತ್ಮಿಕ ಕೇಂದ್ರಗಳಾಗಬೇಕಾದ ದೇವಾಲಯಗಳ ಗರ್ಭದಲ್ಲೇ ಅಸ್ಪೃಷ್ಯತೆ ಬೇರು ಬಿಡುವುದು ಯಾವುದೇ ಧರ್ಮಕ್ಕಾದರೂ ಅಪಾಯಕರವೇ…! ಅದಕ್ಕೊಂದು ಪುಟ್ಟ ಉದಾಹರಣೆಯೆಂದರೆ ಈಗಲೂ ಬಹಳಷ್ಟು ದೇವಸ್ಥಾನಗಳಲ್ಲಿ ಬ್ರಾಹ್ಮಣರಿಗೆಂದೇ ಇರುವ ಪ್ರತ್ಯೇಕ ಊಟದ ವ್ಯವಸ್ಥೆ…! ಮನುಷ್ಯರ ಜೊತೆಗೆ ಕೂತು ಊಟ ಮಾಡಲಾಗದವ್ರು ಜೊತೆಗೆ ಬಾಳ್ವೆ ಮಾಡಲಾದೀತೆ? ಇಂತ ಕೆಟ್ಟ ನಡೆಯನ್ನು ಸಂಪ್ರದಾಯದ ಹೆಸರೇಳಿ ಮುಂದುವರೆಸುವವರಿಗೆ ಜಾತಿ ನಿರ್ಮೂಲನೆ ಬಗ್ಗೆ ಮಾತನಾಡಲು ಬಾಯಿಯಾದರು ಎಲ್ಲಿಂದ ಬರುತ್ತದೆ?

ಸಾವಿರ ಕವಲೊಡೆದು ನಿಂತಿರುವ ಹಿಂದೂ ಅನ್ನುವ ಜೀವನ ಪದ್ಧತಿ ಒಂದಾಗಬೇಕು ಅನ್ನುವವರು ’ಹಿಂದೂ’ ಅಂತ ತನ್ನನ್ನು ತಾನು ಕರೆದುಕೊಳ್ಳುವ ಮೊದಲು ’ಮಾನವ’ ಅಂತ ತಿಳಿದುಕೊಳ್ಳಲೇ ಬೇಕು.

ಅಷ್ಟೆಲ್ಲ ಸುಲಭವಾಗಿ ಬದಲಾಗುವ ಮಂದಿ ನಾವಲ್ಲ (ಹಿಂದೂಗಳು) ಬಿಡಿ.ಬದಲಾಗುವುದಿದ್ದರೆ ಉಡುಪಿಯ ಕೃಷ್ಣ ಕನಕದಾಸರೆಡೆಗೆ ತಿರುಗಿ ನಿಂತಾಗಲೇ ನಮ್ಮ ಜಾತಿ ಅನ್ನುವ ಕರ್ಮಕಾಂಡಕ್ಕೆ ಬೆಂಕಿ ಬೀಳಬೇಕಿತ್ತು. ಆದರೆ,ಬಿದ್ದಿರಿವುದು ಬೆಂಕಿಯಲ್ಲ.ಎಂಜಲೆಲೆ…! ಮತ್ತದರ ಮೇಲೆಯೆ ನಾವು-ನಮ್ಮ ಮನೆ,ಮನಸ್ಸು ನಮ್ಮ ಧರ್ಮ ಬಿದ್ದು ಹೊರಳಾಡುತ್ತಿದೆ ಮತ್ತೆ ಧರ್ಮ ರಕ್ಷಕರ ಬಾಯಿಗಳು ಬಿದ್ದು ಹೋಗಿವೆ….!

48 ಟಿಪ್ಪಣಿಗಳು Post a comment
 1. ಡಿಸೆ 3 2011

  ennu madestana antha krishna na kutkolsoke nodbedi

  ಉತ್ತರ
 2. vinay
  ಡಿಸೆ 3 2011

  UDupi krishna matthu madesnanakke holike tharavalla,,, krishna moorthiyannu eega yaradharoo thirugisa ballare???? madesnanavannu nillisaloo bahudhu allave?

  ಉತ್ತರ
  • ಅದನ್ನ ’ದೇವರು ಕೊಟ್ರು ಪೂಜಾರಿ ಕೊಡೊಲ್ಲ’ ಅನ್ನೋ ಪದದ ಅರ್ಥದಲ್ಲಿ ಓದಿಕೊಳ್ಳಿ,ಆಗ ಏನಾದರು ಲಿಂಕ್ ಸಿಗಬಹುದು

   ಉತ್ತರ
 3. ಡಿಸೆ 3 2011

  ಮಡೆಸ್ನಾನವನ್ನು ವಿರೋಧಿಸುವವರು
  ಮದ್ಯಪಾನವನ್ನೂ ವಿರೋಧಿಸಲಿ
  ದಲಿತ ಶೋಷಣೆಯ ವಿರೋಧಿಸುವವರು
  ನೀತಿಗೆಟ್ಟ ಜನನಾಯಕರನ್ನೂ ವಿರೋಧಿಸಲಿ
  ದುರ್ಬಲರ ಪರವಾಗಿ ಮಾತಾಡುವವರು
  ಭ್ರಷ್ಟ ರಾಜಕಾರಣಿಗಳನ್ನು ವಿರೋಧಿಸಲಿ
  ಹಿಂದುಳಿದವರಿಗಾಗಿ ಮಿಡಿಯುವವರು
  ರಾಜ್ಯದ ಲೂಟಿಕೋರರನ್ನು ವಿರೋಧಿಸಲಿ
  ಮೂಢನಂಬಿಕೆಗಳನ್ನು ವಿರೋಧಿಸುವವರು
  ಭಕ್ತಿಯ ಪ್ರದರ್ಶನವನ್ನೂ ವಿರೋಧಿಸಲಿ
  ಪುರೋಹಿತರನ್ನು ವಿರೋಧಿಸುವವರು
  ಮಠ ದೇವಸ್ಥಾನಗಳನ್ನೇ ವಿರೋಧಿಸಲಿ

  ಉತ್ತರ
  • ಪುರೋಹಿತಶಾಹಿ ಅನ್ನುವುದು ಕೇವಲ ಬ್ರಾಹ್ಮಣರಿಗೆ ಆನ್ವಯಿಸುವುದಿಲ್ಲ,ಅದು ಎಲ್ಲ ಧರ್ಮ,ಜಾತಿಯ ’ಮಡಿವಂತ’ರ ಕುರಿತ ಪದ… ಊಲಿದ ವಿರೋಧಗಳು ಸದ್ಯ ಪಕ್ಕಕಿರಲಿ 🙂

   ಉತ್ತರ
  • ಡಿಸೆ 8 2011

   ಸುರೇಶ್,
   ನೀವು ಹೇಳಿರುವುದನ್ನು ನಾನು ಒಪ್ಪುತ್ತೇನೆ.

   ಚಿತ್ರ

   ಉತ್ತರ
 4. ಡಿಸೆ 4 2011

  tumba chennaagide raki

  ಉತ್ತರ
 5. hridayashiva
  ಡಿಸೆ 4 2011

  ಲೇಖನ ಅರ್ಥಪೂರ್ಣವಾಗಿದೆ.ಮನುಷ್ಯ ಮನುಷ್ಯನ ನಡುವೆ ಅಂತರ ಸೃಷ್ಟಿಸುವ ಧರ್ಮ ಧರ್ಮವೇ ಅಲ್ಲ.ಇಂಥದ್ದೊಂದು ಆಚರಣೆ ಇಡೀ ಭಾರತಕ್ಕೇ ಕಪ್ಪುಚುಕ್ಕೆ.ನಿಜ ಹೇಳಬೇಕೆಂದರೆ ವೇದೋಪನಿಷತ್ತು ಓದಿಕೊಂಡಿರುವ ಬ್ರಾಹ್ಮಣರೇ ಇದನ್ನು ವಿರೋಧಿಸಬೇಕು.

  ಉತ್ತರ
 6. ಡಿಸೆ 4 2011

  ಈ ಮೂಢನಂಬಿಕೆಗಳು, ಆಚರಣೆಗಳು ಜೀವಂತವಾಗಿದ್ದರಷ್ಟೇ ಎಲ್ಲಾ ಸಮಜೋದ್ಧಾರಕ ಸಂಘ ಸಂಸ್ಥೆಗಳಿಗೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಧ್ಯ.

  ಎಲ್ಲಾ ಧರ್ಮಗಳಲ್ಲೂ ಇರುವ ಪುರೋಹಿತಶಾಹಿ ವರ್ಗ, ದೇವರು ಮತ್ತು ಭಕ್ತರ ನಡುವಣ ಮಧ್ಯವರ್ತಿಗಳಂತೆ ವರ್ತಿಸುತ್ತಾ ಅಮಾಯಕರನ್ನು ಅಮಾಯಕರನ್ನಾಗಿಸಿಯೇ ಉಳಿಸಿಕೊಂಡು ಶೋಷಿಸುತ್ತಾ ಬಂದಿದೆ. ಮಠಾಧೀಶರಾಗಲೀ, ಫಾದ್ರಿಗಳಾಗಲೀ, ಮೌಲ್ವಿಗಳಾಗಲೀ, ಧರ್ಮಾಧಿಕಾರಿಗಳಾಗಲೀ ಇದಕ್ಕೆ ಹೊರತಾಗಿಲ್ಲ.

  ಅವುಗಳ ಇನೊಂದು ರೂಪವೇ ಈ ಉದ್ಧಾರಕ ಸಂಘಗಳು.

  ಉದ್ಧಾರಕ ಸಂಘಗಳು ನಿಜವಾಗಿ ತಮ್ಮ ಉದ್ದೇಶಿತ ಕಾರ್ಯದಲ್ಲಿ ಪ್ರಯತ್ನಿಸಿ ಸಫಲವಾದವೆಂದಾದರೆ, ಒಂದು ಊರಿನಲ್ಲಿ ಎರಡು ಮೂರು ವರ್ಷಗಳ ನಂತರ ಅವುಗಳಿಗೆ ಏನು ಕೆಲಸ ಉಳಿಯುತ್ತದೆ ಹೇಳಿ.

  ಉತ್ತರ
 7. tumkur s prasd
  ಡಿಸೆ 4 2011

  ನಿಜ ರೀ.

  ಉತ್ತರ
 8. ಮಾಯ್ಸ
  ಡಿಸೆ 5 2011

  ನೀವ್ ಹೇಳೋ ” ಸೋಗಲಾಡಿ ಸೆಕ್ಯುಲರ್,ಸುದ್ಧಿಜೀವಿಗಳ ” ನಾನಂತೂ ಅಲ್ಲ.ನಾನೊಬ್ಬ ’ಬರೀ’ ಸೆಕ್ಕುಲರ‍್ವಾದಿ.:)

  ಆ ಸೆಕ್ಯುಲರ‍್ತನದ ಮೇಲೆ ನಾನು ರಿಲಿಜಿಯನ್ ವಿಷಯದಲ್ಲಿ ಸರಕಾರದ ಯಾವುದೇ ಬಗೆಯ ಮೂಗು ಊರಿಸುವಿಕೆಯನ್ನು ವಿರೋಧಿಸುತ್ತಾನೆ. ಹಾಗೇ ರಿಲಿಜಿಯನ್ಗಳು ಸರಕಾರದ ವಿಷಯದಲ್ಲೂ ಮೂಗು ತೂರಿಸಬಾರದು.

  ಇನ್ನೋ ಈ ದಕ್ಷಿಣ ಕನ್ನಡವೆಂಬ ಪ್ರಜ್ಞಾವಂತ ಹಾಗು ಅತಿ ವಿದ್ಯಾವಂತ ಜಿಲ್ಲೆಯಲ್ಲಿ ’ಮಡೆ ಸ್ನಾನ’ ಎಂಬ ಒಂದು ಧಾರ‍್ಮಿಕ ಆಚರಣೆಯನ್ನು ನಿಲ್ಲಿಸುವವಲ್ಲಿ ಒಂದು ಸರಕಾರೀ ನೀತಿ ಸೆಕ್ಯುಲರ‍್ ದಾರಿಯಲ್ಲಿ ಸರಿಯಲ್ಲ. ಪ್ರತಿಯೊಬ್ಬ ಪ್ರಜೆಯು ತನಗೆ ಇಷ್ಟ ಬಂದ ದರ‍್ಮವನ್ನು ದರ‍್ಮದ ಆಚರಣೆಯನ್ನು ಬೇರೊಬ್ಬರಿಗೆ ಕುತ್ತು ಬಾರದ ಹಾಗೆ ನಡೆಸಿಕೊಂಡು ಹೋಗುವ ಸ್ವತಂತ್ರತನವನ್ನು ಯಾಕೆ ಸರಕಾರ ಕಿತ್ತುಕೊಳ್ಳಬೇಕು?

  ಇನ್ನು ಪೇಜಾವರ ಮಠದ ಶ್ರೀಗಳು ಜನಚುನಾಯಿತರಲ್ಲ, ಒಬ್ಬ ಮತದ ಮುಂದಾಳು. ಅತಃ ಅವರ ಅನಿಸಿಕೆ ಪರ-ವಿರೋಧದ ಬಗ್ಗೆ (ಒಬ್ಬ ಸಾಮಾನ್ಯ ಪ್ರಜೆಯ ಅನಿಸಿಕೆಗಿಂತ) ಹೆಚ್ಚಿನ ಒತ್ತು ಕೊಡುವ ಅಗತ್ಯವಿದ್ದರೆ, ಅದು ನಮ್ಮ ಸಂವಿಧಾನಕ್ಕೆ ವಿರುದ್ಧ. ( ಅದು ಹೇಗೆ ಯಾಕೆ ನೀವೇ ನೋಡಿ)

  ಇಲ್ಲಿ ’ಮಡೆಸ್ನಾನ’ ಬೇಕು ಬೇಡ ಎಂಬುದು ಅದನ್ನು ನಡೆಸುವವರಿಗೆ ಬಿಟ್ಟಿದ್ದು. ಅದರ ಬಗ್ಗೆ ನಾವೆಲ್ಲರು ನಮ್ಮ ಅನಿಸಿಕೆ ಹೇಳಬಹುದೇ ಹೊರತು, ನಮ್ಮ ಸರಕಾರಕ್ಕೆ ಧರ‍್ಮಾಚರಣೆಗಳೊಳಗೆ ತಲೆತೋರಿಸಿ ಸರಿತಪ್ಪುಗಳ ತೀರ‍್ಪುಗಾರತನವನ್ನು ಹೇರಿ ಅದರ ತೋಚಿನಂತೆ ನಮ್ಮ ವೈಯಕ್ತಿಕ-ಜೀವನ ಧಾರ‍್ಮಿಕ ನಂಬಿಕೆಗಳನ್ನು ನಡೆಸಲು ಆಗದು. ಹಾಗೂ ಅದು ಒಂದು ಜನಾಡಳಿತ ಹಾಗು ವೈಯಕ್ತಿಕ ಸೊತಂತ್ರತನದಲ್ಲಿ ನಂಬಿಕೆಯಿಡುವ ದೇಶದ ನಡೆಸುವಿಕೆಗೆ ತಕ್ಕುದ್ದಲ್ಲ.

  ನಿಮ್ಮ ಉದ್ದೇಶ ಹಿಂದುಗಳು ಎಂಬ ಧಾರ‍್ಮಿಕ ಗುಂಪಿನೊಳಗೆ ಬದಲಾವಣೆ ತರುವುದಿದ್ದರೆ, ಅದಕ್ಕೆ ನಮ್ಮ (ನನ್ನ, ನನ್ನಂತಹ ಧರ‍್ಮನಿರಪೇಕ್ಷಕರು ಹಾಗು ಹಿಂದುಗಳಲ್ಲದವರು ) ಸರಕಾರವನ್ನು ಅದರ ಸಮಯ, ಹಣ ಹಾಗ ಬಲವನ್ನು ವ್ಯಯಿಸಿ ಅಸಂವಿಧಾನಿಕ ಕ್ರಿಯೆಗೆ ತೊಡಗಲು ಎಳಸಬೇಡಿ.

  ನಿಮ್ಮ ಹಿಂದೂ ಧರ‍್ಮದ ಉದ್ಧಾರಕ್ಕೆ , ನಿಮ್ಮ ಧರ‍್ಮದ ವಲಯದಲ್ಲೇ ಮಾಡಬೇಕಾದ ತಕ್ಕ ಪರಿವರ‍್ತನೆಗಳನ್ನು, ಹಾಗು ವೈಜ್ನಾನಿಕತೆ ಹಾಗು ವೈಚಾರಿಕತೆಯ ಬೆಳವಣಿಗೆಯ ಬಗ್ಗೆ ನೋಡಿ.

  ನಿಮ್ಮ ಧರ‍್ಮದ ಜಗಳಗಳನ್ನು ಪರಿಹರಿಸಲ್ಲಲ್ಲ ನನ್ನ ದೇಶದ ಸರಕಾರವಿರುವುದು ಅಥವಾ ಅದಕ್ಕೆ ಹೆಚ್ಚಿನಂಶದ ಜನತೆ ತೆರಿಗೆ ತೆರುವುದು.

  ಸರಕಾರಕ್ಕೆ ಮೊದಲು ಮಾಡಲು ಬೇಕಾದಷ್ಟು ಮೂಲಭೂತ ಹಾಗು ಪ್ರಾಥಮಿಕಾವಶ್ಯಕತಾಪೂರೈಕಾಕಾರ‍್ಯಕ್ರಮಗಳಿವೆ.

  ಹಳ್ಳಿಹಳ್ಳಿಗೊಂದು ಮೂಢನಂಬಿಕೆಯ ನಾಡಲ್ಲಿ, ಈ ಈ ಹಳ್ಳಿಹಳ್ಳಿ ಜಾತಿಜಗಳ, ಧರ‍್ಮಜಗಳಗಳನ್ನು ಬಿಡಿಸುತ್ತಾ ಕೂರಲಲ್ಲ ನಮ್ಮ ಚುನಾಯಿತ ಸರಕಾರಗಳಿರುವುದು.

  ಉತ್ತರ
 9. Very sensible Article Rakesh. I agree with you. Anyone doesn’t become great or lesser by birth. We have to earn it. I liked especially wht you have said about leftists and rightists. There is no clarity anywhere and so-called ideologies are evidently half-baked when it comes to practicing them. We are a complex society. We have to work towards untangling and getting done away with our evils. Thanks for your write-up.

  ಉತ್ತರ
  • guru
   ಡಿಸೆ 5 2011

   ಜೊತೆಗೆ ಕನ್ನಡ ಲೇಖನಕ್ಕ ಕನ್ನಡದಲ್ಲೇ ಪ್ರತಿಕ್ರಿಯೆ ಬರೆಯುವದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಸವಿನಯ ಪ್ರಾರ್ಥನೆ.

   ಉತ್ತರ
   • ಗುರು ಅವ್ರೆ,
    ಎಲ್ಲ ಸಂದರ್ಭಗಳಲ್ಲೂ ಕನ್ನಡ ತಂತ್ರಜ್ಞಾನ ಲಭ್ಯವಾಗಿರಲಿಕ್ಕಿಲ್ಲ ಅನ್ನುವ ಸಣ್ಣ ವಿಚಾರ ನಿಮಗೇಕೆ ಅರ್ಥವಾಗಲಿಲ್ಲ? ಓದಿದಾಕ್ಷಣ ಲೇಖನ ಹಿಡಿಸಿತು, ಬರೆಯಬೇಕೆನ್ನಿಸಿತು, ಬರೆದೆ ಅಷ್ಟೇನೆ. ಬಹಳ ವರ್ಷಗಳಿಂದ ಕನ್ನಡದಲ್ಲಿಯೇ ಬರೆದುಕೊಂಡು ಬರುತ್ತಿದ್ದೇನೆ. ಕನ್ನಡದಲ್ಲಿ ಟೈಪು ಮಾಡಿದ ಮಾತ್ರಕ್ಕೆ ಕನ್ನಡಪ್ರೇಮವೆನ್ನುವ ರೀತಿಯ ಯೋಚನೆಗಳೇಕೆ? ಅಕ್ಕರೆ, ಗೌರವ, ಅಭಿಮಾನಗಳನ್ನ ವ್ಯಕ್ತಪಡಿಸಲು ಯಾವ ಭಾಷೆಯಾದರೇನು? ಕನ್ನಡವನ್ನು ಆಂಗ್ಲ ಲಿಪಿಯಲ್ಲಿ ಟೈಪಿಸಿದರೆ ಓದುವಾಗ ಹಿಂಸೆಯೆನಿಸುತ್ತೆ, ಅದಕ್ಕೆ ಆಂಗ್ಲಭಾಷೆಯನ್ನ ಬಳಸಿದ್ದು. ಭಾಷಾಪ್ರೇಮ ಎಲ್ಲರಿಗೂ ಅಗತ್ಯ. ಅದು ದುರಭಿಮಾನದ ಮಟ್ಟಕ್ಕೆ ತಿರುಗಿದರೆ ಆಗುವ ಅನಾಹುತಗಳು ಬೇರೆಯೇ ರೀತಿಯವು. ತಾವು ಆ ದಾರಿಯಲ್ಲಿ ಹೋಗಬಾರದಾಗಿ ಸವಿನಯ ಪ್ರಾರ್ಥನೆ.

    ಉತ್ತರ
 10. Kumar
  ಡಿಸೆ 5 2011

  ಬದಲಾವಣೆ ಎನ್ನುವುದು ಸಮಾಜದ ಒಳಗಿನಿಂದಲೇ ಬರಬೇಕು.
  ಯಾವುದೇ ಆಚರಣೆಗಳನ್ನು ವಿರೋಧಿಸುವುದರಿಂದ ಇಲ್ಲವೇ ನಿಷೇಧಿಸುವುದರಿಂದ ಹೆಚ್ಚೇನೂ ಉಪಯೋಗವಾಗುವುದಿಲ್ಲ.
  ಅಂತಹ ಆಚರಣೆಗಳ ಕಾರಣಗಳನ್ನು ಹುಡುಕಿ, ಅವುಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ, ಮುಂದೆ ಅದೇ ರೀತಿಯ ಹೊಸ ಆಚರಣೆಗಳು ಹುಟ್ಟಿಕೊಳ್ಳುವುದಿಲ್ಲ ಎಂದು ಏನು ಖಾತ್ರಿ!?
  ಮತ್ತು ಇಲ್ಲಿ ನೀವು ಹೇಳುತ್ತಿರುವ ಆಚರಣೆಗೂ ಮತಾಂತರಕ್ಕೂ ಏನು ಸಂಬಂಧವೋ ತಿಳಿಯುತ್ತಿಲ್ಲ.

  ಹಿಂದುಗಳ ಪರವಾಗಿ ಕೆಲಸ ಮಾಡುತ್ತಿರುವವರು, ಈ ರೀತಿಯ ಆಚರಣೆಗಳು ಹೋಗಲೆಂದು ಕೆಲಸ ಮಾಡುತ್ತಿಲ್ಲ ಎಂದು ಹೇಗೆ ಹೇಳುವಿರಿ?
  ಕೆಲಸ ಮಾಡುವವರು ಮಾತನಾಡುವುದಿಲ್ಲ, ಕೆಲಸ ಮಾಡಿ ತೋರಿಸುತ್ತಾರೆ ಎನ್ನುವುದು ತಿಳಿದಿರಲಿ.
  ಅದೇ ರೀತಿ, ಸುಮ್ಮನೆ ಕೂಗಾಡುವವರು, ಎಲ್ಲರ ಗಮನ ಸೆಳೆಯಲು ಘೋಷಣೆ ಕೂಗುವವರು ಯಾವ ಕೆಲಸವನ್ನೂ ಮಾಡಿರುವುದಿಲ್ಲ.
  ಬದಲಾವಣೆ ಎನ್ನುವುದು ನಾವು ಆಗಬೇಕೆಂದ ಕೂಡಲೇ ಆಗುವುದಲ್ಲ.
  ಆ ಆಚರಣೆ ಸಮಾಜದಲ್ಲಿ ಬೇರೂರುವುದಕ್ಕೆ ಎಷ್ಟು ಸಮಯ ಹಿಡಿಯಿತೋ, ಅಷ್ಟೇ ಸಮಯ ಅಥವಾ ಅದಕ್ಕಿಂತ ಹೆಚ್ಚು ಸಮಯ ಅದನ್ನು ಬೇರು ಸಹಿತ ಕೀಳಲು ಹಿಡಿಯುತ್ತದೆ.
  ಸಮಾಜದೊಳಗೆ ಬದಲಾವಣೆ ತರುವುದು ಸುಲಭದ ಕೆಲಸವಲ್ಲ, ತಕ್ಷಣ ಆಗುವ ಕೆಲಸವೂ ಅಲ್ಲ.
  ಅದಕ್ಕೆ ಸಾಕಷ್ಟು ಪರಿಶ್ರಮ, ತಾಳ್ಮೆ ಅಗತ್ಯ – ಅದು ಸಸಿಯ ಬೇರಿಗೆ ನೀರು ಹಾಕುವಂತಹ ಕೆಲಸ.
  ಪ್ರತಿನಿತ್ಯ ಸಸಿ ಎಷ್ಟು ಬೆಳೆದಿದೆ ಎಂದು ಕಾಣುವುದಿಲ್ಲ – ಸಾಕಷ್ಟು ಸಮಯದ ನಂತರವೇ ಅದರ ಬೆಳವಣಿಗೆ ಗೋಚರವಾಗುವುದು ಮತ್ತು ಫಲ ಕೊಡುವುದು!

  ಉತ್ತರ
 11. guru
  ಡಿಸೆ 5 2011

  ಹೀಗೆ ಮತಾಂತರ, ಮಡೆಸ್ನಾನ , ಪೇಜಾವರ ಎಲ್ಲದಕ್ಕೂ ತಳುಕು ಹಾಕಿ ಪುಗಸಟ್ಟೆ ಬರೆಯುವವರಿಗಾಗಿಯೇ ನಿನ್ನೆ ಶ್ರೀಗಳು ಪತ್ರಿಕೆಗಳಲ್ಲಿ ಸ್ಪಷ್ಟೀಕರಣ ಕೊಟ್ಟಿದ್ದಾರೆ ಓದಿಕೊಳ್ಳಿ.

  ಉತ್ತರ
 12. Kumar
  ಡಿಸೆ 5 2011

  ಪ್ರತಿಯೊಂದು ವಿಷಯಕ್ಕೂ ಮಠಾಧೀಶರನ್ನು ಎಳೆದು ತರುವುದು ಮತ್ತು ಅವರು ನೀಡಿದ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಖಂಡಿಸುವುದು…..!
  ಸಮಾಜವಿದ್ದಂತೆ ಮಠಗಳಿರುತ್ತವೆಯೇ ಹೊರತು, ಮಠಗಳಿದ್ದಂತೆ ಸಮಾಜವಿರುವುದಿಲ್ಲ.

  ಉತ್ತರ
 13. ಡಿಸೆ 5 2011

  ವಿಷಯ ಏನೆ ಇರಲಿ ಇ೦ತಹ ಮೂಡ ನ೦ಬಿಕೆಯ ಮತ್ತು ಅನಿಷ್ಟ ಪದ್ದತಿಯನ್ನು ವಿರೋದಿಸುವುದು ನಮ್ಮೆಲರ ಕರ್ತವ್ಯ

  ಉತ್ತರ
  • ಮಾಯ್ಸ
   ಡಿಸೆ 5 2011

   ಪ್ರಶ್ನೆ ..

   ಯಾವ ನಂಬಿಕೆಗಳು ಮೂಢ ? ಯಾವುವು ಅಮೂಢ /ಪ್ರಾಜ್ಞ ? ಎಂದು ನಿರ್ಧರಿಸುವ ಕೆಲಸ ಸರ್ಕಾರದ್ದೋ ಧರ್ಮದ್ದೋ ?
   ಎಲ್ಲ ಧರ್ಮಾಚರಣೆಗಳನ್ನೂ ಮೂಢ ನಂಬಿಕೆ ಎನ್ನಬಹುದು. ನಮ್ಮ ಸರಕಾರ ಯಾಕೆ ಈ ತತ್ವ ಜ್ಞಾನದ ಕೆಲಸಕ್ಕೆ ಕೈ ಹಾಕ ಬೇಕು?

   ಉತ್ತರ
   • Kumar
    ಡಿಸೆ 5 2011

    ಎಲ್ಲ ನಂಬಿಕೆಗಳು ಮೂಢವೇ. ಇಲ್ಲದಿದ್ದರೆ, ಅದು ನಂಬಿಕೆ ಎನ್ನಿಸಿಕೊಳ್ಳಲಾರದು.
    ತಂದೆ ಯಾರೆಂಬುದನ್ನು ತಾಯಿ ತಿಳಿಸುತ್ತಾಳೆ – ಅದನ್ನೇ ಮಕ್ಕಳು ನಂಬುತ್ತಾರೆ.
    ಯಾವ ಮಗ/ಮಗಳು ತಾನೇ ತನ್ನ ತಾಯಿಯ ಮಾತು ಸತ್ಯವೇ ಎಂದು ವೈಜ್ಞಾನಿಕವಾಗಿ ಸಿದ್ಧಪಡಿಸಲು ಯತ್ನಿಸಿದ್ದಾರೆ.
    ವೈಜ್ಞಾನಿಕವಾಗಿ ಸಿದ್ಧಗೊಳ್ಳದೆ, ತಾಯಿಯ ಮಾತನ್ನೇ ನಂಬಿಕೊಳ್ಳುವುದು ಮೂಢವಲ್ಲವೇ?

    ಜಗತ್ತಿನಲ್ಲಿರುವ ಪ್ರತಿಯೊಂದು ನಂಬಿಕೆಯೂ ಹೀಗೆಯೇ.
    ಹೀಗಾಗಿ ಯಾವ ನಂಬಿಕೆಗಳನ್ನೂ ಪ್ರಶ್ನಿಸಲಾಗದು ಮತ್ತು ಪ್ರಶ್ನಿಸಿದರೆ ಅದು ಕೇವಲ ಮನಃಸ್ತಾಪಗಳನ್ನು ಸೃಷ್ಟಿ ಮಾಡುತ್ತದೆ.

    ಯಾರಾದರೂ ತಾನು ಮೂಢನಂಬಿಕೆಗಳನ್ನು ನಂಬುವುದಿಲ್ಲ ಎಂದರೆ, ಮೊದಲಿಗೆ ಆತ ಪ್ರಾರಂಭಿಸಬೇಕಾದ್ದು ತನ್ನ ತಂದೆ ಯಾರೆಂಬ ಪ್ರಶ್ನೆಯಿಂದಲೇ!

    ಉತ್ತರ
    • ಮಾಯ್ಸ
     ಡಿಸೆ 5 2011

     ಒಬ್ಬ ವ್ಯಕ್ತಿಯ ತಂದೆ ಯಾರೆಂದು ತಿಳಿಯಲು ಹಲವು ವೈಜ್ಞಾನಿಕ ವಿಧಾನಗಳಿವೆ. ಅದರಲ್ಲಿ ಜೆನೆಟಿಕ್ ಪರೀಕ್ಷೆಯೂ ಒಂದು.
     http://en.wikipedia.org/wiki/Parental_testing

     ಆದುದರಿಂದ ನಿಮ್ಮ ಮಾತಿನ ಹುರುಳು ಸರಿಯಿದ್ದರು, ಅದಕ್ಕೆ ನೀವು ಒಡ್ಡಿದ ಉಪಮೆ ತಕ್ಕುದಲ್ಲ.

     ನಿಮ್ಮ ಮಾತಿಗೆ ಸಮ್ಮತಿ ಇದೆ.

     ಉತ್ತರ
     • Kumar
      ಡಿಸೆ 5 2011

      ತಂದೆ ಇಲ್ಲವೇ ತಾಯಿ ಯಾರೆಂದು ತಿಳಿಯಲು ಮಾರ್ಗಗಳಿಲ್ಲ ಎಂದು ನಾನು ಹೇಳಿಲ್ಲವಲ್ಲ.
      ಮಾರ್ಗಗಳಿದ್ದರೂ, ಯಾರು ತಾನೇ ತಂದೆ ಯಾರೆಂದು ತಿಳಿಯಲು ಪ್ರಯತ್ನಿಸುತ್ತಾರೆ?
      ತಾಯಿಯ ಮಾತಿನ ಮೇಲಿನ ನಂಬಿಕೆ ಅಷ್ಟು ಬಲವಾಗಿದೆ – ಅದು ಮೂಢನಂಬಿಕೆ ಆಗಿದ್ದರೂ ಸಹ……!
      ಎಲ್ಲಿ ನಂಬಿಕೆ ಇದೆಯೋ, ಅಲ್ಲಿ ಪ್ರಶ್ನೆಗಳಿಲ್ಲ, ಸಂದೇಹಕ್ಕೆ ಆಸ್ಪದವಿಲ್ಲ.
      ಎಲ್ಲಿ ಸಂದೇಹವಿದೆಯೋ ಅಲ್ಲಿ ನಂಬಿಕೆಗೆ ಸ್ಥಳವಿಲ್ಲ!

      ಉದಾಹರಣೆಗಷ್ಟೇ ತಂದೆ-ತಾಯಿಯ ಉದಾಹರಣೆ ತೆಗೆದುಕೊಂಡೆನಷ್ಟೆ.
      ಇನ್ನೂ ಅನೇಕ ಸಂಗತಿಗಳಲ್ಲೂ ನಂಬಿಕೆಯೇ ಪ್ರಧಾನವಾಗಿ ಕೆಲಸ ಮಾಡುತ್ತದೆ.
      ಅಣು-ಪರಮಾಣು-ಪ್ರೋಟಾನ್-ನ್ಯೂಟ್ರಾನ್-ಎಲೆಕ್ಟ್ರಾನ್‌ಗಳನ್ನು ಕಂಡವರಾರು.
      ಅದನ್ನು ಯಾರೋ ಕಂಡುಹಿಡಿದರೆಂದು ನಮ್ಮ ವಿಜ್ಞಾನದ ಪುಸ್ತಕ ತಿಳಿಸುತ್ತದೆ ಮತ್ತು ಅದನ್ನೇ ನಮ್ಮ ಶಾಲಾ ಮಾಸ್ತರರು ತಿಳಿಸಿದ್ದಾರೆ.
      ಆ ಕಂಡುಹಿಡಿದವರನ್ನು ಶಾಲಾ ಮಾಸ್ತರರು ಸಹ ನೋಡಿರಲಿಕ್ಕಿಲ್ಲ.
      ಹೀಗಿದ್ದಾಗ್ಯೂ ಅದನ್ನು ನಾವೆಲ್ಲಾ ನಂಬಿಲ್ಲವೇ?
      ನಾವೇ ಸ್ವತಃ ಪ್ರಯೋಗದಿಂದ ಸಿದ್ಧಮಾಡಿ ನೋಡಿಲ್ಲವಾದ ಕಾರಣ, ಅದು ಸಹ ಮೂಢನಂಬಿಕೆಯೇ ಅಲ್ಲವೇ – ನಮ್ಮ ಶಾಲಾ ಮಾಸ್ತರರ ಮಾತಿನ ಮೇಲೆ ನಂಬಿಕೆ!

      ಉತ್ತರ
      • ಮಾಯ್ಸ
       ಡಿಸೆ 5 2011

       ನೀವು ನೀಡುತ್ತಿರುವಷ್ಟು ತಾತ್ವಿಕ ಜಿಜ್ಞಾಸೆ ‘ಮಡೇ ಸ್ನಾನದ’ ಹಿಂದಿದೆಯೋ ಗೊತ್ತಿಲ್ಲ.
       ನೀವು ಮಾಡುತ್ತಿರುವ ವಾದಸರಣಿಗೆ ಈಗಾಗಲೇ ತಕ್ಕಷ್ಟು ಪ್ರತಿವಾದಗಳು ಪುಸ್ತಕ, ವೀಡಿಯೊ ಇತ್ಯಾದಿ ರೂಪೇನ ಲಭ್ಯವಿದ್ದು, ಆ ವಾದದ ಸಮಂಜಸತನ ನನಗಿಲ್ಲಿ ಕಾಣುತ್ತಿಲ್ಲ.

       ಈ ಲೇಖನಲೇಖಕರು ವ್ಯಕ್ತಪಡಿಸುವ ಹಾಗೆ ಹಿಂದೂ ಧರ್ಮಾಂತರ್ಗತವಾದ ಆಚರಣೆಗಳಲ್ಲೊಂದಾದ ‘ಮಡೇ ಸ್ನಾನ’ದ ಸರಿತಪ್ಪು, ಪ್ರಸ್ತುತಾಪ್ರಸ್ತುತತೆಯ ಬಗ್ಗೆ ಸರಕಾರದ ಹಸ್ತಕ್ಷೇಪವನ್ನು ಸೆಕುಳರ್-ವಾದವನ್ನು ಒಪ್ಪುವವರು ವಿರೋಧಿಸುರು. ಧರ್ಮಾರಚಣೆಗಳಲ್ಲಿ ಶಾಸನದ ಮಧ್ಯ ಪ್ರವೇಶ secular-ದೇಶದ ಸೈದ್ಧಾಂತಿಕ ಬುನಾದಿಗೆ ತಕ್ಕುದಲ್ಲ.

       ಇತಿಶ್ರೀ

       ಉತ್ತರ
       • Kumar
        ಡಿಸೆ 5 2011

        ನನ್ನ ಜಿಜ್ಞಾಸೆ ಕೇವಲ “ನಂಬಿಕೆ” ಎನ್ನುವ ವಿಷಯಕ್ಕಷ್ಟೇ ಸೀಮಿತವಾದದ್ದು.
        ಕೆಲವು ಆಚರಣೆಗಳನ್ನು “ಮೂಢ ನಂಬಿಕೆ” ಎಂದು ಕರೆದು ನಿಷೇಧಿಸುವುದಕ್ಕೋ ಇಲ್ಲವೇ ತಿರಸ್ಕರಿಸುವುದಕ್ಕೋ ಆಹ್ವಾನ ನೀಡಲಾಗುತ್ತದೆ.
        ಇದು ಹಾಸ್ಯಾಸ್ಪದ ಮತ್ತು ತರ್ಕಸಮ್ಮತವಲ್ಲ ಎನ್ನುವುದು ನನ್ನ ಅಭಿಪ್ರಾಯ.
        ರಸ್ತೆಯಲ್ಲಿ ಹೋಗುತ್ತಿರುವ ಆರೋಗ್ಯವಾಗಿರುವ ನಾಯಿಯನ್ನು “ಹುಚ್ಚು ನಾಯಿ” ಎಂದು ಕೂಗಿ ಎಲ್ಲರೂ ಕಲ್ಲುಹೊಡೆದು ಸಾಯಿಸುವಂತಹದ್ದೇ ಹುಚ್ಚುತನ ನನಗಿಲ್ಲಿ ಕಾಣಿಸುತ್ತಿದೆ.
        ಇದರ ಕುರಿತಾಗಿ ಬಹಳಷ್ಟು ಚರ್ಚೆಗಳು ನಡೆದಿರಬಹುದು, ಸಾಹಿತ್ಯಗಳು ಲಭ್ಯವಿರಬಹುದು.
        ಹಾಗಿದ್ದಾಗ್ಯೂ ಅದೇ ರೀತಿಯ ವರ್ತನೆಗಳು ನಡೆಯುತ್ತಿರುವುದು ಕಾಣುತ್ತಿರುವುದರಿಂದ ಅದರ ಕುರಿತಾಗಿ ವಿಶ್ಲೇಷಿಸಿದೆನಷ್ಟೆ.

        ಉತ್ತರ
        • ಮಾಯ್ಸ
         ಡಿಸೆ 5 2011

         ಹಿಂದೂ ಧರ್ಮಾಂತರ್ಗತವಾದ ಆಚರಣೆಗಳಲ್ಲೊಂದಾದ ‘ಮಡೇ ಸ್ನಾನ’ದ ಸರಿತಪ್ಪು, ಪ್ರಸ್ತುತಾಪ್ರಸ್ತುತತೆಯ ಬಗ್ಗೆ ಸರಕಾರದ ಹಸ್ತಕ್ಷೇಪವನ್ನು ಸೆಕುಳರ್-ವಾದವನ್ನು ಒಪ್ಪುವವರು ವಿರೋಧಿಸುರು.

         ಧರ್ಮಾರಚಣೆಗಳಲ್ಲಿ ಶಾಸನದ ಮಧ್ಯ ಪ್ರವೇಶ secular-ದೇಶದ ಸೈದ್ಧಾಂತಿಕ ಬುನಾದಿಗೆ ತಕ್ಕುದಲ್ಲ.

         ಉತ್ತರ
 14. Kumar
  ಡಿಸೆ 5 2011

  ಕೇವಲ ವಿರೋಧಿಸುವುದರಿಂದ ಏನೂ ಉಪಯೋಗವಿಲ್ಲ ಎನ್ನುವುದು ನನ್ನ ಅಭಿಪ್ರಾಯ.

  ಉತ್ತರ
 15. ಡಿಸೆ 5 2011

  ಮಾನ್ಯರೆ,
  ಇಡೀ ಮಡೆಸ್ನಾನದ ಒಟ್ಟು ವಿವಾದವನ್ನು ಪರಿಹರಿಸಲು ಸುಲಭ ಉಪಾಯವೆಂದರೆ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡದೆ ಇರುವುದು ಅಷ್ಟೆ. ಸಾರ್ವಜನಿಕ ಬ್ರಾಹ್ಮಣರಿಗೆ ಬೇರೆ ಊಟ ಅಗತ್ಯವಿಲ್ಲ ಈ ಕಾಲದಲ್ಲಿ. ಅಲ್ಲಿಯ ಪುರೋಹಿತರು ಬೇಕಾದರೆ ಒಳಗೆ ಅವರಷ್ಟಕ್ಕೆ ಊಟ ಮಾಡಲಿ.
  ಅಜಕ್ಕಳ ಗಿರೀಶ

  ಉತ್ತರ
  • rKumar
   ಡಿಸೆ 5 2011

   ಅಜಕ್ಕಳ ಗಿರೀಶ ಅವರೇ,

   ಕನ್ನಡ ಪ್ರಭದಲ್ಲಿ ಒಂದು ವಾರದ ಹಿಂದೆ ಬಂದ ಈ ಸುದ್ದಿಯನ್ನು ನೀವು ಓದಿರಬೇಕು.
   ಅದರ ಕೊಂಡಿ ಇಲ್ಲಿದೆ: http://www.kannadaprabha.com/NewsItems.asp?ID=KPH20111203000225&Title=Headlines&lTitle=%AE%DA%C3%A8%DB%AB%DA+%D1%DA%DF%A6%A7&Topic=0&ndate=12/3/2011&Dist=0

   ಅಂದರೆ, ಮಡೆಸ್ನಾನ ಕೇವಲ “ಬ್ರಾಹ್ಮಣ”ರ ಊಟಕ್ಕೆ ಸಂಬಂಧಿಸಿದ್ದಲ್ಲ.
   ಮನಸ್ಸಿನ ಆಳದಲ್ಲಿರುವ “ನಾನು ಪಾಪದ ಕೆಲಸ ಮಾಡಿರುವೆ” ಎಂಬ ಚುಚ್ಚುವಿಕೆಗೆ ಮತ್ತು ಅದನ್ನು ಪರಿಹರಿಸಿಕೊಳ್ಳಲು ಇದ್ದದ್ದರಲ್ಲೇ ಸುಲಭವಾದ (ಅಸಹ್ಯವಾದರೂ) ದಾರಿ ಮಡೆಸ್ನಾನ.
   ಈ ’ಪಾಪಪ್ರಜ್ಞೆ’ಯನ್ನು ಹೋಗಲಾಡಿಸುವುದು ಹೇಗೆ?
   ಪಾಪಪ್ರಜ್ಞೆಯನ್ನು ಹೋಗಲಾಡಿಸುವ ಆವಶ್ಯಕತೆಯಿದೆಯೇ?
   ಅಥವಾ ಪಾಪಪ್ರಜ್ಞೆಯನ್ನು ತೊಲಗಿಸಲು ಬೇರೆಯ ಮಾರ್ಗೋಪಾಯವನ್ನು ಸೂಚಿಸಬಹುದೇ?

   ಉತ್ತರ
   • ಯಾರು ಊಟ ಮಾಡಿ ಅದರ ಮೇಲೆ ಯಾರು ಬಿದ್ದು ಊರುಳಾಡಿದರು ಅನ್ನುವುದು ಇಲ್ಲಿನ ಪ್ರಶ್ನೆಯಲ್ಲ ನರೇಂದ್ರ.ಇಂತದ್ದನ್ನೆಲ್ಲ ಜಾತಿಯ ಲೆಕ್ಕಾಚಾರವೊಡ್ಡಿ ಚರ್ಚೆಯ ಹಾದಿ ತಪ್ಪಿಸುವುದ್ಯಾಕೆ ಅನ್ನುವುದು? ಹಿಂದೆ ನಮ್ಮಲ್ಲಿದ್ದ ಅನಿಷ್ಟ ಪದ್ಧತಿಗಳಂತೆಯೇ ಇದು ಅಂತ ಒಪ್ಪಿಕೊಳ್ಳಲು ಧೈರ್ಯವನ್ನ ತೋರಿಸಲೇಬೇಕಿದೆ. ಇಲ್ಲದಿದ್ದರೆ ಸಮಾನತೆ-ಸಾಮರಸ್ಯ ಅನ್ನುವುದೆಲ್ಲ ಲೊಳಲೊಟ್ಟೆ ಆದೀತು.

    ಅಜಕ್ಕಳರ ಮಾತಿಗೆ ನನ್ನ ಸಹಮತವಿದೆ.ನನ್ನ ಲೇಖನದಲ್ಲೂ ಅದನ್ನೇ ಹೇಳಿದ್ದೇನೆ.
    “ಮನುಷ್ಯರ ಜೊತೆಗೆ ಕೂತು ಊಟ ಮಾಡಲಾಗದವ್ರು ಜೊತೆಗೆ ಬಾಳ್ವೆ ಮಾಡಲಾದೀತೆ? “

    ಉತ್ತರ
    • ಮಾಯ್ಸ
     ಡಿಸೆ 6 2011

     “ಪದ್ದತಿಯ ಹೆಸರಿನಲ್ಲಿ ನಡೆಯುವ ವಿಕೃತಿಗಳಿಗೆ ಸರ್ಕಾರವೇ ಬ್ರೇಕ್ ಹಾಕಬೇಕಿದೆ.”

     ಲೇಖಕರೇ,

     ಇದು ಹೇಗೆ ಸರಕಾರದ ಹೊಣೆ? ಆ ಜಿಲ್ಲೆಯ ತುಂಬಾ ಇರುವ ಧರ‍್ಮಾಧ್ಯಕ್ಷರು, ಧರ‍್ಮಗುರುಗಳು ತಾನೆ ತಮ್ಮ ಧರ‍್ಮೋದ್ಧಾರ ಮಾಡಬೇಕು?

     ಸರಕಾರವೇನು ’ಮಡೆಸ್ನಾನ’ ನಡೆಸಲೇಬೇಕು ಎಂದು ಕಾನೂನು ಮಾಡಿದೆಯೇ? ಸರಕಾರವೇಕೆ ಧಾರ‍್ಮಿಕ ವಿಷಯಗಳಲ್ಲಿ ಪಕ್ಷವಹಿಸಬೇಕು?

     ಉತ್ತರ
     • Kumar
      ಡಿಸೆ 6 2011

      ರಾಕೇಶ್ ಶೆಟ್ಟಿ> ಇಲ್ಲದಿದ್ದರೆ ಸಮಾನತೆ-ಸಾಮರಸ್ಯ ಅನ್ನುವುದೆಲ್ಲ ಲೊಳಲೊಟ್ಟೆ ಆದೀತು.
      ರಾಕೇಶ್,
      ಮೊದಲನೆಯದಾಗಿ ಇದನ್ನು ಒಂದು ಜಾತಿ ಮತ್ತೊಂದು ಜಾತಿಯ ಮೇಲೆ ಸವಾರಿ ಮಾಡುವುದೆಂದು ಕಾಣುವುದು ತಪ್ಪು.
      ಸುಬ್ರಹ್ಮಣ್ಯದಲ್ಲಿ ಬ್ರಾಹ್ಮಣರ ಎಂಜಲೆಲೆಯ ಮೇಲೆ ಮತ್ತೊಂದು ಜಾತಿಯವರು ಹೊರಳಾಡಿದರೆ, ತುರುವೇಕೆರೆಯ ಬೇಟೆರಾಯಸ್ವಾಮಿ ದೇವಸ್ಥಾನದಲ್ಲಿ,
      ಮತ್ತೊಂದು ಜಾತಿಯವರ ಉಂಡೆಲೆಯ ಮೇಲೆ ಬ್ರಾಹ್ಮಣರೇ ಹೊರಳಾಡುತ್ತಾರೆ.
      ಈ ರೀತಿಯ ಆಚರಣೆ ಹೇಗೆ ಪ್ರಾರಂಭವಾಯಿತೋ ಗೊತ್ತಿಲ್ಲ.
      ಆದರೆ, ಇಲ್ಲಿ ಯಾರ ಒತ್ತಾಯವೂ ಕಾಣುತ್ತಿಲ್ಲ, ಹೊರಳಾಡದಿದ್ದರೆ ಬಹಿಷ್ಕಾರ ಹಾಕುವುದೂ ಕಂಡಿಲ್ಲ, ಮೇಲು-ಕೀಳಿನ ಅಂತರವೂ ಕಾಣುತ್ತಿಲ್ಲ.
      ಹೀಗಿರುವಾಗ, ನಿಮಗೇಕೆ ಇಲ್ಲಿ ಜಾತಿ ಕಂಡಿತೋ ತಿಳಿಯುತ್ತಿಲ್ಲ.

      ಎರಡನೆಯದಾಗಿ, ಈ ರೀತಿಯ ಎಲ್ಲದಕ್ಕೂ ಮಠಮಾನ್ಯಗಳು, ಹಿಂದು ಸಂಘಟನೆಗಳು ಮಾತ್ರ ಉತ್ತರ ಕೊಡುವ ಅಗತ್ಯವೇನಿದೆ?
      ನೀವು ಸಹ ಅದೇ ಹಿಂದು ಸಮಾಜದ ಅಂಗ – ಈ ಮಡೆಸ್ನಾನದಂತಹ ಆಚರಣೆಗಳು ನಿಲ್ಲಲು ನೀವು ಯಾವ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವಿರಿ ಹೇಳಿ?

      ಮೂರನೆಯದಾಗಿ, ’ಮಡೆಸ್ನಾನ’ ಒಂದು ವಿಕೃತಿ ಎಂದು ನೀವು ನಿರ್ಧರಿಸಿಬಿಟ್ಟಿರುವಿರಿ ಮತ್ತು ಎಲ್ಲರೂ ನಿಮ್ಮ ನಿರ್ಧಾರವನ್ನು ಒಪ್ಪಬೇಕೆಂದು ಅಪೇಕ್ಷಿಸುತ್ತಿರುವಿರಿ.
      ಆದರೆ, ಅದು ಏಕೆ ವಿಕೃತಿ ಎನಿಸುತ್ತದೆ, ಅದರಿಂದ ಆಗುತ್ತಿರುವ ಅಪಾಯವೇನು, ಅದನ್ನು ನಿಲ್ಲಿಸುವುದರಿಂದ ಆಗುವ ಲಾಭವೇನು ಎನ್ನುವುದನ್ನು ತಿಳಿಸುವ ಪ್ರಯತ್ನ ಮಾತ್ರ ಎಲ್ಲೂ ನೀವು ಮಾಡಿರುವುದು ಕಾಣುತ್ತಿಲ್ಲ!

      ಮತ್ತು ಈ ಯಾವ ವಿಚಾರದಲ್ಲೂ ಸರಕಾರ ಕೈಹಾಕಬಾರದು – ಸಾಮಾಜಿಕ ಸುಧಾರಣೆಗಳು ಸಮಾಜದಿಂದಲೇ ಆಗಬೇಕು.

      ಉತ್ತರ
     • ರವಿಕುಮಾರ ಜಿ ಬಿ
      ಡಿಸೆ 6 2011

      ಸರಕಾರವೇನು ’ಮಡೆಸ್ನಾನ’ ನಡೆಸಲೇಬೇಕು ಎಂದು ಕಾನೂನು ಮಾಡಿದೆಯೇ? ಸರಕಾರವೇಕೆ ಧಾರ‍್ಮಿಕ ವಿಷಯಗಳಲ್ಲಿ ಪಕ್ಷವಹಿಸಬೇಕು?

      ಸರಿಯಾಗಿದೆ ಹೇಳಿದ್ದು ಮಯ್ಸರವರೆ , ಸರ್ಕಾರ ಜತ್ಯತೀತವಗಿರಬೇಕು ಅಂತ ಬಯಸುತ್ತೇವೆ , ಅದೇ ಸರ್ಕಾರ ಕಡ್ಡಾಯವಾಗಿ ಜಾತಿ ಕೇಳಿದಾಗ ಅದು ಸಂವಿಧಾನ ಬದ್ದ ! ಮತ್ತೆ ಧಾರ್ಮಿಕ ವಿಷಯಗಳಲ್ಲಿ ಜಾತ್ಯತೀತ ಸರ್ಕಾರ ಮೂಗುತೂರಿಸಬೇಕು ಅಂತ ಬಯಸುತ್ತೇವೆ! ಹೋದಲ್ಲಿ ಬಂದಲ್ಲಿ ದಲಿತ ದಲಿತ ಅಂತ ಕರೆದು ದಲಿತರನ್ನ ದಲಿತರೇ ಅವಮಾನ ಮಾಡುತ್ತಾರೆ. ಛೆ !

      ಉತ್ತರ
      • ಮಾಯ್ಸ
       ಡಿಸೆ 6 2011

       Kannada aksharagaLilla mannisi.

       “ಅದೇ ಸರ್ಕಾರ ಕಡ್ಡಾಯವಾಗಿ ಜಾತಿ ಕೇಳಿದಾಗ ಅದು ಸಂವಿಧಾನ ಬದ್ದ ”

       Nodi.. naanu jaati vishavannu illi heLalilla. Dharma ondu nambike.. aadare jaasti ondu buDakaTTu haagu janaanga. Adudarinda dharma haagu jaati-gaLigoo difference ide.

       “ಹೋದಲ್ಲಿ ಬಂದಲ್ಲಿ ದಲಿತ ದಲಿತ ಅಂತ ಕರೆದು ದಲಿತರನ್ನ ದಲಿತರೇ ಅವಮಾನ ಮಾಡುತ್ತಾರೆ.”

       Dalita emba jaatiye illa. Dalita embudu ‘backward’ endu kareyalu Indian language-gaLalli use maaDuva word-u. Dalitada badalu harijana emba baLakeyoo ide. Illi Dalita meesalaati ondu dhaarmika nambike alla. Adondu society-alli equality taralu iruva ondu daari. I daariyannu halavu desha-gaLu baLasive. Aadare adu namma desha-dalli prolong aagide. Adu tappu. Yaavude misalaati indefinite time-na tanaka iTTukoLLalu baruvudilla.

       Dharmika belief-inda consent-inda, sva-prerane-inda ‘Made snaana’ neDuvudu. Alli yaava hakku-chyutiyaagaLi illave illa. Aadare keeLu jaati endu kelavu pangaDagaLa hakkannu forceful aagi kittu-koLLalaagittu.

       Innu neevu pratiyondu jaatigoo Dharmada staana koDuvudaarade hELi. Adondu oLLeya dhaari 🙂

       Dhaarmika nambikegoo class/caste inequality mattu discrimination-gaLLigoo conceptual difference ive.

       Ishte!

       ಉತ್ತರ
       • ರವಿಕುಮಾರ ಜಿ ಬಿ
        ಡಿಸೆ 6 2011

        ಮಾಯ್ಸಣ್ಣ ಹೌದು ಅದನ್ನೇ ನಾನು ಕೂಡ ಹೇಳಿದ್ದು, ಜಾತ್ಯತೀತ ಸರ್ಕಾರ ಜಾತಿ ಕೇಳೋದನ್ನು ಬುದ್ದಿಜೀವಿ(?)ಗಳು ಯಾಕೆ ವಿರೋಧಿಸೋಲ್ಲ? ಕೇವಲ ಯಾರಿಗೂ ಕೇಡು ಮಾಡದ ಹಿಂದೂ(ಕ್ಷಮಿಸಿ ) ಆಚರಣೆಗಳನ್ನ ಮಾತ್ರ ವಿರೋಧಿಸುತ್ತವೆ? ಇದು ಪ್ರಚಾರ ಗಿಟ್ಟಿಸುವ ತಂತ್ರವಲ್ಲವೇ(ಗೀಳಲ್ಲವೇ)? ಬಡವರು ಬೇರೆ ಜಾತಿಗಳಲ್ಲಿ ಇಲ್ಲವೇ? ಧನಿಕರು ದಲಿತರಲ್ಲಿಲ್ಲವೇ? ಹಾಗಾಗಿ ಇಲ್ಲಿ ಜಾತಿ ಪ್ರಶ್ನೆ ಅಲ್ಲ . ಮಡೆ ಸ್ನಾನದಿಂದ ಹಿಂದುಳಿದವರಿಗೆ ಅನ್ಯಾಯ ಅಥವಾ ಅವಮಾನ ಆಗಿದೆಯೇ? ಇನ್ನು ಒಟ್ಟಿಗೆ ಕುಳಿತು ಊಟ ಮಾಡಿ ಅಂತ ಹೇಳುತ್ತಾರೆ ಆದರೆ ಜಾತಿ ಲೆಕ್ಕ ಹಾಕಬೇಡಿ ಅಂತ ಎಲ್ಲೂ ತಪ್ಪಿಯೂ ಹೇಳೋಲ್ಲ ನಮ್ ಜನ ! ಸರ್ಕಾರ ಜಾತಿ ಕೇಳೋದರಿಂದ ಜಾತಿ ಪದ್ದತಿಯನ್ನ (ಮೇಲು ಕೀಳನ್ನ) ಪ್ರೋತ್ಸಾಹಿಸಿದಂತೆಯೇ ಅಲ್ಲವೇ?
        ನಮ್ಮಲ್ಲಿ ಜಾತಿ ಬೇದ ಇದ್ದಿರಲಾರದು ,ಈಗಿನಂತೆ ಆಗಿನ ಕಾಲದಲ್ಲೂ ಇದ್ದಿರಬಹುದಾದ ಬುದ್ದಿಜೀವಿಗಳಂತಹ ಜನರಿಂದಲೇ ಅದು ಸ್ವಪ್ರತಿಷ್ಠೆ ಗಾಗಿ ಹುಟ್ಟಿರಬಹುದಾದ ಎಲ್ಲಾ ಸಾಧ್ಯತೆಗಳೂ ಇದೆ.

        ಉತ್ತರ
        • ರವಿಕುಮಾರ ಜಿ ಬಿ
         ಡಿಸೆ 6 2011

         ಮಡೆಸ್ನಾನ……

         ಧರ್ಮದ ಒಂದು ಆಚರಣೆ
         ದೇವರಿಗೆ ನೀಡುವ ಅರ್ಪಣೆ
         ತನ್ನ ದುರಹಂಕಾರ, ಕೋಪ,ತಾಪ ತ್ಯಜಿಸಿ
         ಎಂಜೆಲೆಲೆ ಮೇಲೆ ಉರುಳಿ
         ತನ್ನ ಮನ ಶುದ್ದ ಮಾಡುವ ಕ್ರಿಯೆ, ಸಮಯೋಪಾಯ
         ಏಕೆ ನಿಮಗೆ ಇದರಲ್ಲಿ ಅಡ್ಡಿ ,ತಕರಾರು, ಆಪತ್ತು ?

         ಇದು ಮಾಡಿದ ತಪ್ಪಿಗೆ ನೊಂದು
         ತನ್ನ ಅಹಂಕಾರವನ್ನು ಕೊಂದು
         ನಿಷ್ಕಪಟ ಮನಸ್ಸಿಂದ ಮಾಡುವ ಪ್ರಾಯಶ್ಚಿತ್ತ
         ಇದು ಜನ ಸಾಮಾನ್ಯರು ಮಾಡುವ ತಪ್ಪಸ್ಸು
         ದೈವ ಭಕ್ತರ ಪಾಪನಿವೇದನೆ
         ಏಕೆ ನಿಮಗೆ ಇದರಿಂದ ವೇಧನೆ ?

         ಇದು ಆರ್ಥಿಕ, ದೈಹಿಕ ಹಾಗೂ ಮಾನಸಿಕ ಸ್ಥಿರತೆಕ್ಕಾಗಿ
         ದೇವರಿಗೆ ಸಲ್ಲಿಸುವ ಒಂದು ಸೇವೆ
         ಇದರಲಿಲ್ಲ ಏನೂ ತೊಂದರೆ ಲುಕ್ಸಾನು
         ಇದನ್ನು ನೀಷೆದಿಸುವದರಿಂದ ನಿಮಗೇನು ಲಾಭ ?
         ಅನೇಕ ಕಾಲದಿಂದ ನಡೆಯುತಿದೆ ಈ ಸಂಪ್ರದಾಯ
         ಅದರಲ್ಲೇನಿದೆ ನಿಮಗೆ ಅಪಾಯ ?
         by ಹರೀಶ್ ಶೆಟ್ಟಿ, ಶಿರ್ವ

         ಉತ್ತರ
        • ಮಾಯ್ಸ
         ಡಿಸೆ 6 2011

         ಅಯ್ಯೋ ರವಿ ..

         ಈ “ಬುದ್ಧಿ ಜೀವಿ ” ಅನ್ನೋರು ವಿರೋಧಿಸಲ್ಲ ಅಂದ್ರೆ , ಅದು ಅವರ ಇಷ್ಟ ಕಣ್ರೀ . ನೀವು ವಿರೋಧಿಸಿ. ಬೇಡ ಅಂತ ಯಾರಾದರೂ ಅಂದ್ರೆ ನಿಮ್ಮ ಹಕ್ಕೂ ಅಂತ ತಾಕೀತು ಮಾಡಿ.

         ನನಗೆ ಈಗಿರುವ ಮೀಸಲಾತಿಯಲ್ಲಿ ಯಾವ ಅನ್ಯಾಯವಾಗಲಿ ಅನಾವಷ್ಯಕತೆಯಾಗಲಿ ಕಾಣ್ತಿಲ್ಲ. ನಿಮಗೆ ಕಂಡ್ರೆ ಕೋರ್ಟಿಗೆ ಹೋಗಿ. ಹ್ಯುಮನ್ ರೈಟ್ಸ್ ಅವರಿಗೆ ದೂರು ಕೊಡಿ.

         ಬುದ್ದಿಜೀವಿಗಳಿಗೂ ಯಾವುದನ್ನು ವಿರೋಧಿಸಬೇಕು ಯಾವುದಕ್ಕೆ ಬೇಡ ಏನು ವಿವೇಕ ಇಲ್ಲ ಅಂತ ನೀವು ಅಂದುಕೊಂಡರೆ ಹೇಗೆ !! ಅವರೂ ನಮ್ಮ ನಿಮ್ಮ ಸಮಾಜದ ಒಂದು ಭಾಗ ಹಾಗು ಮುಖ.

         ನಾನು ಮೇಲ್ಜಾತಿಗೆ ಸೇರಿದವನಾಗಿ ಮೀಸಲಾತಿಯನ್ನು ವಿರೋಧಿಸಲ್ಲ. ನನಗೆ ಅದರ ಹಿಂದೆಯ ಕಾರಣ ಹಾಗು ಕಾರಣೀಯಗಳ ಮನವರಿಕೆ ಇದೆ. ಅಂತೆ ಬೇರೆಯವರಿಗೂ ಇರಬಹುದು.

         ಧರ್ಮದ ತಳಹದಿ ಆಧ್ಯಾತ್ಮವಾದರೆ, ಜಾತಿಯ ತಳಹದಿ ಸಮಾಜ-ವ್ಯವಸ್ಥೆ . ನನಗೆ ನನ್ನ ಧರ್ಮ ಹಾಗು ಆಧ್ಯಾತ್ಮದಲ್ಲಿ ಸರಕಾರದ ಅಂಕೆ ಬೇಡ. ಆದರೆ ನನ್ನ ಸಮಾಜ-ವ್ಯವಸ್ಥೆಯ ಸುಧಾರಣೆಗೆ ಸರಕಾರದ ಪಾತ್ರ ಬೇಕೇ ಬೇಕು.

         ಉತ್ತರ
 16. Balachandra
  ಡಿಸೆ 6 2011

  @Kumar,
  ಕುಮಾರ್ ಅವರೆ, ಸರಿಯಾಗಿ ಹೇಳಿದಿರಿ. ‘ಮಡೆಸ್ನಾನ’ವನ್ನು ವಿರೋಧಿಸುವ ನಿಟ್ಟಿನಲ್ಲಿ ಕೆಲವರು ಒಂದು ಜಾತಿಯ ದೂಷಣೆಯನ್ನು ಪ್ರಾರಂಭಿಸುತ್ತಾರೆ. ಇಲ್ಲಿ ನಾನು ‘ಮಡೆಸ್ನಾನ’ವನ್ನು ಬೆಂಬಲಿಸುತ್ತಿಲ್ಲ. ಆದರೆ ಈ ಆಚರಣೆ ಯನ್ನು ವಿರೋಧಿಸುವ ಹಂತದಲ್ಲಿ ಪೇಜಾವರ ಶ್ರೀಗಳನ್ನಾಗಲೀ ಅಥವಾ ಸರಕಾರವನ್ನಾಗಲೀ ಎಳೆತರುವದು ತರವಲ್ಲ. ‘ಮಡೆಸ್ನಾನ’ ವನ್ನು ಯಾರೂ ಒತ್ತಾಯಪೂರ್ವಕವಾಗಿ ಮಾಡುತ್ತಿಲ್ಲ. ಶ್ರೀಗಳು ಹೇಳಿದಂತೆ ಅದರಿಂದ ನಷ್ಟವೂ ಇಲ್ಲ, ಲಾಭವೂ ಇಲ್ಲ. ವೈಯಕ್ತಿಕವಾಗಿ ನನಗೂ ಅದು ಅಸಹ್ಯ ತರುವಂತಹ ವಿಷಯವೇ. ಹಾಗೆಂದು ಬಲವಂತದಿಂದ ಇನ್ನೊಬ್ಬನ ನಂಬಿಕೆಯನ್ನು ವಿರೋಧಿಸುವ ಹಕ್ಕು ನನಗಿಲ್ಲ, ಅಥವಾ ಯಾರಿಗೂ ಇಲ್ಲ. ಇದಕ್ಕಿಂತ ಹೊರತಾಗಿ ನಾವು ಜನರಲ್ಲಿ ಪ್ರಜ್ಞೆಯನ್ನು ಮೂಡಿಸಬಹುದೇ ಹೊರತು ಸರಕಾರವನ್ನಾಗಲೀ ಅಥವಾ ಮಠಗಳನ್ನಾಗಲೀ ದೂಶಿಸುವದು ತರವಲ್ಲ. ನೀವು ಹೇಳಿದ ಹಾಗೆ ಯಾವ ನಂಬಿಕೆಯೂ ‘ಸರಿ’ ಎಂಬುದಿಲ್ಲ. ಹಾಗೆ ನೋಡಿದರೆ ದೇವರ ಪೂಜೆಯನ್ನೂ ವಿರೋಧಿಸಬೇಕು, ಎಲ್ಲ ಧರ್ಮಗಳ ಎಲ್ಲ ಆಚರಣೆಗಳನ್ನೂ ವಿರೋಧಿಸಬೇಕಾಗುತ್ತದೆ. ಯಾಕೆಂದರೆ ದೇವರ ಮೇಲಿನ ನಂಬಿಕೆಯೂ ‘ಸರಿ’ ಎಂದು ಹೇಳಲಾಗುವದಿಲ್ಲವಲ್ಲ!

  ಉತ್ತರ
 17. ರವಿಕುಮಾರ ಜಿ ಬಿ
  ಡಿಸೆ 6 2011

  ಶೆಟ್ಟಿಯವರೇ ,
  ನಿಮ್ಮ ಸಮಾನತೆಯ ಬಗ್ಗೆಯ ಕಳಕಳಿ ನಾನೂ ಒಪ್ಪುತ್ತೇನೆ, ಆದರೆ ಎಲ್ಲವೂ “ಒಟ್ಟಿಗೆ ಕುಳಿದು ಊಟ ಮಾಡುವುದರಿಂದ ” ಪರಿಹಾರವಗೋದಿಲ್ಲ ~!! ಇಸ್ಟೆಲ್ಲಾ ಮಾತನಾಡುವ ನಾವು ಸರ್ಕಾರ ಕಾನೂನು ಬದ್ದವಾಗಿ ಜಾತಿ ಲೆಕ್ಕ ಕೇಳಿದಾಗ ,ಲೆಕ್ಕ ಹಾಕಿದಾಗ ,ಪ್ರತಿಯೊಂದು ಅರ್ಜಿಯಲ್ಲಿ ಜಾತಿ ಕೇಳಿದಾಗ ನಮಗೆ ಸಮಾನತೆ ನೆನಪಾಗೊದೆ ಇಲ್ಲ ! ಮೊದಲು ಸರ್ಕಾರ ಮಾಡುತ್ತಿರುವ ಈ ಕಾರ್ಯದ ಬಗ್ಗೆ ವಿರೋಧಿಸಿದರೆ ,ಕಾನೂನು ಬದ್ದವಾದ(ಗಿ) ಅಸಮಾನತೆ ಕಡಿಮೆ ಆಗಬಹುದು.
  ಮತ್ತೆ ಮಾಡೆ ಸ್ನಾನದಲ್ಲಿ ಜಾತಿ ಯಾಕೆ ? ಅಲ್ಲಿ ಬ್ರಾಹ್ಮಣರೂ ಹರಕೆ ತೀರಿಸುತ್ತಾರೆ. ಇನ್ನೊಂದು ಬದಿಯಿಂದ ನೋಡಿ ಈಗ ಮಾಡೆ ಸ್ನಾನ ವಿರೋಧಿಸಿ ಸಾದಿಸಿದ್ದೇನು? ಹಿಂದೆ ನೂರಾರು ಜನ ಮಾಡೆ ಸ್ನಾನ ಮಾಡುತ್ತಿದ್ದರು ,ಇಂದು ಸಾವಿರಾರು ಜನ !

  ಅದು ಬಿಟ್ಟು ಅಲ್ಲಿ ಹೋಗಿ ಎದುರು ನಿಂತು ಸಾಮಾಜಿಕ ಜಾಗೃತಿ ಮೂಡಿಸಿದರೆ ಒಳಿತು, ಇಲ್ಲದಿದ್ದರೆ ಪ್ರಚಾರ ಪ್ರಿಯ ಬುದ್ದಿಜೀವಿಗಳು ಸಮಾಜದ ಸ್ವಾಸ್ತ್ಯ ಕೆಡಿಸೋದರಲ್ಲಿ ಸಂಶಯವಿಲ್ಲ !!!
  ಕೊನೆ ಮಾತು “ಎಲ್ಲದರಲ್ಲೂ ದಲಿತ ವಿರೋಧಿತ್ವವನ್ನ ಹುಡುಕಿ ರಾದ್ದಾಂತ ಮಾಡುವುದರಿಂದ ಆಗುವ ಆಗಿರುವ ಒಳಿತೇನು?” ವೃಥಾ ಎರಡು ವರ್ಗಗಳಲ್ಲಿ ದ್ವೇಷ ಹುಟ್ಟಿಸಿದ್ದಷ್ಟೇ ಸಾಧನೆ ಆಗಬಹುದು . ಇದರಿಂದ ಸಮಾಜಕ್ಕೆ ಕೆಡುಕು. ಉದಾಹರಣೆಗೆ ಹಿಂದೆ ಸತಿಸಹಗಮನ ಪದ್ದತಿಯನ್ನ ವಿರೋಧಿಸುವಾಗ ಯಾರೂ ಜಾತಿಯನ್ನ ಎಳೆದು ತರಲಿಲ್ಲ, ಕೇವಲ ಜಾಗೃತಿ ಮೂಡಿಸಿದರು ಅಸ್ಟೇ .ಅದೇ ಕೆಲಸ ಈಗಲೂ ಮಾಡಿದರೆ ಆಯಿತು !!! ಆಗಿನ ಕಾಲದಲ್ಲೇ ಯಶಸ್ವಿ ಆಗಿದೆ ಈಗ ಆಗಲಾರದೆ? (ಈಗ ಕಪಟ ಬುದ್ದಿಜೀವಿಗಳಿವೆ ಆಗ ಇರಲಿಲ್ಲ ಅದು ಬೇರೆ ವಿಷಯ ) ಅಲ್ಲವೇ?

  ಉತ್ತರ
 18. ರವಿಕುಮಾರ ಜಿ ಬಿ
  ಡಿಸೆ 6 2011

  ಮಡೆ ಸ್ನಾನ ಸರಿಯಲ್ಲ ವಾದರೂ ಕೂಡ , ಕುಕ್ಕೆಯಲ್ಲಿ ಈಗ ನಡೆಯುತ್ತಿರುವ ಪರ ಮತ್ತು ವಿರೋಧ ಗಳು ಸ್ವಪ್ರತಿಷ್ಟೆಗೆ ಮತ್ತು ಪ್ರಚಾರಕ್ಕಾಗಿಯೇ ಹೊರತು ಸಮಾಜದಲ್ಲಿ ಸಮಾನತೆ ಅಥವಾ ಸ್ವಾಷ್ಟ್ಯವನ್ನು ಹುಟ್ಟುಹಾಕುವುದಕ್ಕಾಗಿ ಅಂತೂ ಅಲ್ಲವೇ ಅಲ್ಲ . ಇಲ್ಲಿ ಇನ್ನು ರಾಜಕೀಯ ಬಂದರಂತೂ ನಮ್ಮನ್ನು ದೇವರೂ ಕಾಪಾಡಲಾರ. ಅದಕ್ಕೆ ಸುಶಿಕ್ಷಿತರೆನಿಸಿ ಕೊಂಡವರ ಪ್ರೋತ್ದ್\ಸಹ ಬೇರೆ !! ಅಯ್ಯೋ ವಿಧಿಯೇ!!

  ಉತ್ತರ
 19. harish shetty, shirva
  ಡಿಸೆ 6 2011

  ಮಡೆಸ್ನಾನ……

  ಧರ್ಮದ ಒಂದು ಆಚರಣೆ
  ದೇವರಿಗೆ ನೀಡುವ ಅರ್ಪಣೆ
  ತನ್ನ ದುರಹಂಕಾರ, ಕೋಪ,ತಾಪ ತ್ಯಜಿಸಿ
  ಎಂಜೆಲೆಲೆ ಮೇಲೆ ಉರುಳಿ
  ತನ್ನ ಮನ ಶುದ್ದ ಮಾಡುವ ಕ್ರಿಯೆ, ಸಮಯೋಪಾಯ
  ಏಕೆ ನಿಮಗೆ ಇದರಲ್ಲಿ ಅಡ್ಡಿ ,ತಕರಾರು, ಆಪತ್ತು ?

  ಇದು ಮಾಡಿದ ತಪ್ಪಿಗೆ ನೊಂದು
  ತನ್ನ ಅಹಂಕಾರವನ್ನು ಕೊಂದು
  ನಿಷ್ಕಪಟ ಮನಸ್ಸಿಂದ ಮಾಡುವ ಪ್ರಾಯಶ್ಚಿತ್ತ
  ಇದು ಜನ ಸಾಮಾನ್ಯರು ಮಾಡುವ ತಪ್ಪಸ್ಸು
  ದೈವ ಭಕ್ತರ ಪಾಪನಿವೇದನೆ
  ಏಕೆ ನಿಮಗೆ ಇದರಿಂದ ವೇಧನೆ ?

  ಇದು ಆರ್ಥಿಕ, ದೈಹಿಕ ಹಾಗೂ ಮಾನಸಿಕ ಸ್ಥಿರತೆಕ್ಕಾಗಿ
  ದೇವರಿಗೆ ಸಲ್ಲಿಸುವ ಒಂದು ಸೇವೆ
  ಇದರಲಿಲ್ಲ ಏನೂ ತೊಂದರೆ ಲುಕ್ಸಾನು
  ಇದನ್ನು ನೀಷೆದಿಸುವದರಿಂದ ನಿಮಗೇನು ಲಾಭ ?
  ಅನೇಕ ಕಾಲದಿಂದ ನಡೆಯುತಿದೆ ಈ ಸಂಪ್ರದಾಯ
  ಅದರಲ್ಲೇನಿದೆ ನಿಮಗೆ ಅಪಾಯ ?
  by ಹರೀಶ್ ಶೆಟ್ಟಿ, ಶಿರ್ವ

  ಉತ್ತರ
 20. poornesh
  ಡಿಸೆ 8 2011

  neevu made snana da Bagge Helidiri aithu Adare yava devasthanadavaru nimage{ janarigi } Othaya Maddira ,illa alva made snana madodu avara avara nambike bitidu ,Hagadare Prani Bali nisheda madsi oputhini ,Mathathnthara madoduna tadeiri ,೪೦೦ varsha ithihasa iro made snana nillisi andre adu tappaguthe , ithichige agtha iro mathanthara nillisoke yake yaru munde bartha illa, – mathomme helthene Mathanthra- prani bali nilisoke agade iroru darmika padathi nillisoke munde barodu onthara besara da sangathi—- ;

  ಉತ್ತರ
 21. ಲೇಖನವನ್ನು ಮೆಚ್ಚಿದವರಿಗೆ,ಪ್ರಶ್ನೆಗಳನ್ನೆತ್ತಿದವರಿಗೆ ಎಲ್ಲರಿಗೂ ಧನ್ಯವಾದಗಳು.ನಿಮ್ಮ ಪ್ರಶ್ನೆಗಳಿಗೆ ಉತ್ತರವಾಗಿ ’ಮಡೆಸ್ನಾನ ನಿಲ್ಲಬೇಕಾಗಿರುವುದು ಮಾನವೀಯತೆಗಾಗಿ,ಜಾತಿಗಾಗಿಯಲ್ಲ’ ಲೇಖನ ಬರೆದಿದ್ದೇನೆ.

  ಉತ್ತರ
 22. nagraj.harapanahalli
  ಡಿಸೆ 17 2012

  ಮಡೆಸ್ನಾನವನ್ನು ದೇವಸ್ಥಾನದವರೇ ಮನಸ್ಸು ಮಾಡಿದರೆ ನಿಲ್ಲಿಸಬಹುದು. ಕುಕ್ಕೆ ಸುಬ್ರಮಣ್ಯ ದೇವರೇ ಅಲ್ಲಿನವರ ಕಣ್ಣು ತೆರೆಸಬೇಕಸ್ಟೆ . ದೇವರ ಭಯ ದಿಂದಲೇ ಸಂಪ್ರದಾಯಗಳನ್ನ ನಿಲ್ಲಿಸಬೇಕು.

  ಉತ್ತರ
 23. deepu
  ಡಿಸೆ 18 2012

  dayavittu dharmadha hesaralli dabbalike beda…..

  ಉತ್ತರ

ನಿಮ್ಮದೊಂದು ಉತ್ತರ ರಾಕೇಶ್ ಶೆಟ್ಟಿ ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments